ಚಿತ್ರ

ಚಿತ್ರ ಎಂದರೆ ದೃಶ್ಯ ಗ್ರಹಿಕೆಯನ್ನು ಚಿತ್ರಿಸುವ ಒಂದು ವಸ್ತು, ಉದಾಹರಣೆಗೆ, ಛಾಯಾಚಿತ್ರ ಅಥವಾ ಎರಡು ಆಯಾಮದ ಚಿತ್ರ.

ಇದು ಸಾಮಾನ್ಯವಾಗಿ ಒಂದು ಭೌತಿಕ ವಸ್ತು ಅಥವಾ ಒಬ್ಬ ವ್ಯಕ್ತಿಯಂತಹ ಯಾವುದೋ ವಿಷಯಕ್ಕೆ ಹೋಲುವ ನೋಟವನ್ನು ಹೊಂದಿರುತ್ತದೆ ಮತ್ತು ಹಾಗಾಗಿ ಅದರ ಚಿತ್ರಣವನ್ನು ಒದಗಿಸುತ್ತದೆ.

ಚಿತ್ರ
ಮೊಬೈಲ್ ಫ಼ೋನಿನ ಕ್ಯಾಮರಾದಿಂದ ಚಿತ್ರ ತೆಗೆಯುತ್ತಿರುವುದು.

ಚಿತ್ರಗಳನ್ನು ದ್ಯುತಿ ಸಾಧನಗಳು ಸೆರೆಹಿಡಿಯಬಹುದು – ಉದಾಹರಣೆಗೆ ಕ್ಯಾಮರಾಗಳು, ಕನ್ನಡಿಗಳು, ಮಸೂರಗಳು, ದೂರದರ್ಶಕಗಳು, ಸೂಕ್ಷ್ಮ ದರ್ಶಕಗಳು, ಇತ್ಯಾದಿ, ಮತ್ತು ನೈಸರ್ಗಿಕ ವಸ್ತುಗಳು ಹಾಗೂ ವಿದ್ಯಮಾನಗಳು ಸೆರೆಹಿಡಿಯಬಹುದು, ಉದಾಹರಣೆಗೆ ಕಣ್ಣು ಅಥವಾ ನೀರು.

ವಿಶಾಲ ಅರ್ಥದಲ್ಲಿ 'ಚಿತ್ರ' ಶಬ್ದವನ್ನು ವರ್ಣಚಿತ್ರಕ್ಕೂ ಬಳಸಲಾಗುತ್ತದೆ. ಈ ವಿಶಾಲ ಅರ್ಥದಲ್ಲಿ, ಚಿತ್ರಗಳನ್ನು ಕೈಯಿಂದಲೂ ಬಿಡಿಸಬಹುದು, ಉದಾಹರಣೆಗೆ ರೇಖಾಚಿತ್ರದಿಂದ, ಚಿತ್ರಕಲೆಯಿಂದ, ಕೆತ್ತನೆಯಿಂದ, ಅಥವಾ ಚಿತ್ರಗಳನ್ನು ಮುದ್ರಣ ಅಥವಾ ಗಣಕಯಂತ್ರ ಚಿತ್ರ ನಿರ್ಮಾಣ ತಂತ್ರಜ್ಞಾನದಿಂದ ಸ್ವಯಂಚಾಲಿತವಾಗಿ ಬಿಡಿಸಬಹುದು, ಅಥವಾ ವಿಧಾನಗಳ ಸಂಯೋಜನೆಯಿಂದ ಅಭಿವೃದ್ಧಿಪಡಿಸಬಹುದು, ವಿಶೇಷವಾಗಿ ಹುಸಿ-ಛಾಯಾಚಿತ್ರದಲ್ಲಿ.

ಕ್ಷಣಿಕ ಚಿತ್ರವು ಲಘು ಅವಧಿಯವರೆಗೆ ಮಾತ್ರ ಇರುತ್ತದೆ. ಇದು ಕನ್ನಡಿಯಿಂದ ಒಂದು ವಸ್ತುವಿನ ಪ್ರತಿಬಿಂಬ, ಸೂಜಿತೂತಿನ ಕ್ಯಾಮರಾದ ಪ್ರಕ್ಷೇಪಣೆ, ಅಥವಾ ಕ್ಯಾಥೋಡ್ ರೇ ಟ್ಯೂಬ್ ಮೇಲೆ ಪ್ರದರ್ಶಿತವಾದ ದೃಶ್ಯವಾಗಿರಬಹುದು. ಸ್ಥಿರ ಚಿತ್ರವನ್ನು ಕಾಯಂಪ್ರತಿ ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ಒಂದು ಭೌತಿಕ ವಸ್ತುವಿನ ಮೇಲೆ ಮುದ್ರಿಸಿರಲಾಗಿರುತ್ತದೆ, ಉದಾಹರಣೆಗೆ ಫೋಟೋಗ್ರಫಿ ಅಥವಾ ಇತರ ಯಾವುದೇ ಅಂಕೀಯ ಪ್ರಕ್ರಿಯೆಯಿಂದ ಕಾಗದ ಅಥವಾ ಬಟ್ಟೆ ಮೇಲೆ.

Tags:

ಛಾಯಾಚಿತ್ರ

🔥 Trending searches on Wiki ಕನ್ನಡ:

ಭಾರತ ರತ್ನಶಬ್ದ ಮಾಲಿನ್ಯಯಶವಂತ ಚಿತ್ತಾಲಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವರ್ಗೀಯ ವ್ಯಂಜನಕರ್ನಾಟಕದ ಪ್ರಸಿದ್ಧ ದೇವಾಲಯಗಳುಇತಿಹಾಸತೆಲುಗುದಿನೇಶ್ ಕಾರ್ತಿಕ್ಭಾರತದ ಸಂವಿಧಾನ ರಚನಾ ಸಭೆಚದುರಂಗದ ನಿಯಮಗಳುಶ್ರೀ ರಾಘವೇಂದ್ರ ಸ್ವಾಮಿಗಳುತ. ರಾ. ಸುಬ್ಬರಾಯಎಚ್. ಎಸ್. ರಾಘವೇಂದ್ರ ರಾವ್ಕ್ರೈಸ್ತ ಧರ್ಮಸಿದ್ಧರಾಮಸ್ವರಭಾರತದ ಸರ್ವೋಚ್ಛ ನ್ಯಾಯಾಲಯವ್ಯಂಜನತಾಜ್ ಮಹಲ್ದೆಹಲಿ ಸುಲ್ತಾನರುಕೋವಿಡ್-೧೯ಕನ್ನಡ ಸಾಹಿತ್ಯಗೂಗಲ್ಕನ್ನಡ ರಾಜ್ಯೋತ್ಸವಕ್ಯಾನ್ಸರ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ಅಗಸ್ಟ ಕಾಂಟ್ಸಂವತ್ಸರಗಳುಎ.ಪಿ.ಜೆ.ಅಬ್ದುಲ್ ಕಲಾಂಸಿದ್ದಲಿಂಗಯ್ಯ (ಕವಿ)ರಾಜಕೀಯ ವಿಜ್ಞಾನಬದನೆಕರ್ಮಧಾರಯ ಸಮಾಸವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಏಡ್ಸ್ ರೋಗಕನ್ನಡದ್ವಿರುಕ್ತಿತಂತ್ರಜ್ಞಾನಕನ್ನಡ ರಂಗಭೂಮಿಇಂಡಿಯನ್ ಪ್ರೀಮಿಯರ್ ಲೀಗ್ಅಲಾವುದ್ದೀನ್ ಖಿಲ್ಜಿಶ್ಯೆಕ್ಷಣಿಕ ತಂತ್ರಜ್ಞಾನತುಂಗಾಹುಣಸೆಮೊಹೆಂಜೊ-ದಾರೋಭಾರತೀಯ ಜನತಾ ಪಕ್ಷಕೆ.ಗೋವಿಂದರಾಜುಭೂತಾರಾಧನೆಸ್ವಾಮಿ ವಿವೇಕಾನಂದವಿಕರ್ಣಜಯಮಾಲಾಮುಮ್ಮಡಿ ಕೃಷ್ಣರಾಜ ಒಡೆಯರುಹಿಂದೂ ಮಾಸಗಳುಬಾಲಕೃಷ್ಣಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಪು. ತಿ. ನರಸಿಂಹಾಚಾರ್ಆದಿ ಶಂಕರರು ಮತ್ತು ಅದ್ವೈತನಾಟಕವಿಜಯನಗರ ಸಾಮ್ರಾಜ್ಯಕೃಷ್ಣಹಳೆಗನ್ನಡಕದಂಬ ಮನೆತನರಾಜ್‌ಕುಮಾರ್ಬಿ. ಆರ್. ಅಂಬೇಡ್ಕರ್ದೆಹಲಿಎಚ್.ಎಸ್.ಶಿವಪ್ರಕಾಶ್ದೇವರ ದಾಸಿಮಯ್ಯಮಹಿಳೆ ಮತ್ತು ಭಾರತಗಜ್ಜರಿಉತ್ತರ ಕರ್ನಾಟಕಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಸ್ವಚ್ಛ ಭಾರತ ಅಭಿಯಾನಕ್ರಿಕೆಟ್ಗೌತಮ ಬುದ್ಧನ ಕುಟುಂಬಛಂದಸ್ಸುಪಾಟೀಲ ಪುಟ್ಟಪ್ಪ🡆 More