ಪಿಟೀಲು

ಪಿಟೀಲು ಅಥವಾ ವಯೊಲಿನ್ ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತ ಪದ್ಧತಿಗಳಲ್ಲಿ ಜನಪ್ರಿಯವಾದ ಒಂದು ತಂತಿ-ವಾದ್ಯ.

ಈ ವಾದ್ಯಕ್ಕಿರುವ ಇಂಗ್ಲಿಷಿನ "ಫಿಡ್ಲ್" ಹೆಸರಿನಿಂದ ನಮ್ಮ "ಪಿಟೀಲು" ತಯಾರಾಯಿತು.

ಪಿಟೀಲು

ಪಿಟೀಲುಗಳನ್ನು ೧೬ ನೆಯ ಶತಮಾನದ ಇಟಲಿ ದೇಶದಲ್ಲಿ ಆವಿಷ್ಕರಿಸಲಾಯಿತು ಎಂದು ನಂಬಲಾಗಿದೆ. ಇಂದೂ ಕಾಣಬಹುದಾದ ಅತ್ಯಂತ ಹಳೆಯ ಪಿಟೀಲು ೧೫೬೪ ರಲ್ಲಿ ಇಟಲಿಯ ಆಂಡ್ರಿಯ ಅಮಾತಿ ಅವರಿಂದ ಮಾಡಲ್ಪಟ್ಟಿದ್ದು. ೧೮ ನೆಯ ಶತಮಾನದ ಹೊತ್ತಿಗೆ ಆಧುನಿಕ ವಯೊಲಿನ್ ಗಳ ಆಕಾರ ಮತ್ತು ನುಡಿಸುವ ವಿಧಾನಗಳು ಚಾಲ್ತಿಗೆ ಬಂದವು.

ಮೊದಲಿಗೆ ವಯೊಲಿನ್ ಕೇವಲ ಪಾಶ್ಚಾತ್ಯ ಸಂಗೀತದಲ್ಲಿ ಮಾತ್ರ ಉಪಯೋಗಗೊಳ್ಳುತ್ತಿತ್ತು - ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಗೀತಗಳೆರಡರಲ್ಲೂ ಉಪಯೋಗ ಕಂಡ ವಯೊಲಿನ್ ಸಾಕಷ್ಟು ಬೇಗನೆಯೇ ಭಾರತಕ್ಕೆ ಬಂದಿತು. ಚಾರಿತ್ರಿಕ ದಾಖಲೆಗಳ ಪ್ರಕಾರ, ಮೊದಲಿಗೆ ತಿರುವಾಂಕೂರಿನ ಮಹಾರಾಜ ಸ್ವಾತಿ ತಿರುನಾಳ್ (೧೮೧೩ - ೧೮೪೬) ರ ಆಸ್ಥಾನದಲ್ಲಿ ವಯೊಲಿನ್ ನ ಪ್ರದರ್ಶನ ನಡೆಯಿತು. ಮೊದಮೊದಲು ಹರಿಕಥೆಗೆ ಪಕ್ಕವಾದ್ಯವಾಗಿ ಉಪಯೋಗವಾದ ವಯೊಲಿನ್ ಕ್ರಮೇಣ ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಮುಖ್ಯ ಪಕ್ಕವಾದ್ಯವಾಗಿ ಬೆಳೆಯಿತು. ಕರ್ನಾಟಕ ಸಂಗೀತದ ಆಧುನಿಕ ಕಛೇರಿಗಳಲ್ಲಿ ವಯೊಲಿನ್ ಸರ್ವೇ ಸಾಮಾನ್ಯ.. 

ಪಾಶ್ಚಾತ್ಯ ಶೈಲಿಯ ವಯೊಲಿನ್ ಮತ್ತು ಭಾರತೀಯ ಶೈಲಿಯ ವಯೊಲಿನ್ ಗಳಲ್ಲಿ ಆಕಾರ, ಮಾಡುವಿಕೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ - ಆದರೆ ನುಡಿಸುವ ವಿಧಾನ ಬೇರೆ ಬೇರೆ.

ಪಿಟೀಲಿನ ನಾದವನ್ನೂ, ಮಾಧುರ್ಯವನ್ನೂ ಹೆಚ್ಚಿಸಿ ಭಾರತೀಯ ಸಂಗೀತಕ್ಕೆ ಪಿಟೀಲನ್ನು ಹೊಂದಿಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ. ಶ್ರೀ. ಚೌಡಯ್ಯನವರ ಏಳು ತಂತಿಗಳುಳ್ಳ ಪಿಟೀಲುವಾದ್ಯವನ್ನೂ, ಶ್ರೀ. ಎಲ್. ಶಂಕರ್‌ರ ವಿಸ್ತೃತ "ಡಬಲ್ ವಯೊಲಿನ್"ಅನ್ನೂ ಇಲ್ಲಿ ಹೆಸರಿಸಬಹುದು.

ಭಾರತದ ಇನ್ನೊಂದು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ವಯೊಲಿನ್ ನ ಉಪಯೋಗ ಸ್ವಲ್ಪ ಕಡಿಮೆ - ಆದರೆ ಇತ್ತೀಚೆಗೆ ಶ್ರೀ ಡಾ|| ವಿ. ಜಿ. ಜೋಗ್‌, ಶ್ರೀಮತಿ ಡಾ|| ರಾಜಮ್, ಶ್ರೀಮತಿ ಕಲಾ ರಾಮನಾಥ್ ಮೊದಲಾದ ಸಂಗೀತಗಾರರಿಂದ ಹಿಂದುಸ್ತಾನಿ ಸಂಗೀತ ಕಛೇರಿಗಳಲ್ಲೂ ವಯೊಲಿನ್ ಉಪಯೋಗಗೊಂಡಿದೆ. ಕರ್ನಾಟಕ ಸಂಗೀತದ ಪ್ರಸಿದ್ಧ ವಯೊಲಿನ್-ವಾದಕರಲ್ಲಿ ಶ್ರೀಮಾನ್ ಪಿಟೀಲು ಟಿ. ಚೌಡಯ್ಯ, ಶ್ರೀಮಾನ್‌ ಎಂ. ಎಸ್. ಗೋಪಾಲಕೃಷ್ಣನ್, ಶ್ರೀಮಾನ್‌ ಲಾಲ್‍ಗುಡಿ ಜಯರಾಮನ್, ಮೈಸೂರು ಸಹೋದರರು (ಶ್ರೀಮಾನ್ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್), ಶ್ರೀಮಾನ್ ಕುನ್ನಿಕುಡಿ ವೈದ್ಯನಾಥನ್,ಶ್ರೀಮಾನ್ ಕೋಲಾರದ ಕೊಳ್ಳೆಗಾಲ ಗೊಪಾಲಕೃಷ್ಣ ಮೊದಲಾದವರನ್ನು ಹೆಸರಿಸಬಹುದು.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

🔥 Trending searches on Wiki ಕನ್ನಡ:

ವಿಜಯದಾಸರುಚಂದ್ರಶೇಖರ ಕಂಬಾರನಾಮಪದಯೋನಿಉಡಭಾವನಾ(ನಟಿ-ಭಾವನಾ ರಾಮಣ್ಣ)21ನೇ ಶತಮಾನದ ಕೌಶಲ್ಯಗಳುದಲಿತಟೈಗರ್ ಪ್ರಭಾಕರ್ಕರ್ನಾಟಕ ಸಂಗೀತರಾಮಾಯಣಕ್ಷಯರಸ(ಕಾವ್ಯಮೀಮಾಂಸೆ)ಎಚ್. ತಿಪ್ಪೇರುದ್ರಸ್ವಾಮಿಲೋಪಸಂಧಿಪು. ತಿ. ನರಸಿಂಹಾಚಾರ್ಚದುರಂಗಶ್ರೀ. ನಾರಾಯಣ ಗುರುಬುಡಕಟ್ಟುಛಂದಸ್ಸುದಾಸ ಸಾಹಿತ್ಯಏಡ್ಸ್ ರೋಗಕಾವ್ಯಮೀಮಾಂಸೆಜ್ಞಾನಪೀಠ ಪ್ರಶಸ್ತಿಪಟ್ಟದಕಲ್ಲುಶಿವನ ಸಮುದ್ರ ಜಲಪಾತಪ್ಯಾರಾಸಿಟಮಾಲ್ಸಾಮಾಜಿಕ ತಾಣವೆಂಕಟೇಶ್ವರ ದೇವಸ್ಥಾನಶ್ರುತಿ (ನಟಿ)ಕಾನೂನುನಾಥೂರಾಮ್ ಗೋಡ್ಸೆಎಸ್. ಬಂಗಾರಪ್ಪಹಾನಗಲ್ಪಂಚಾಂಗಹುಬ್ಬಳ್ಳಿಗುರುಕೃಷಿಸಂಶೋಧನೆಭಾರತದ ಭೌಗೋಳಿಕತೆಜೋಗಿ (ಚಲನಚಿತ್ರ)ಭಾರತೀಯ ನದಿಗಳ ಪಟ್ಟಿಪುರಂದರದಾಸವಿಧಾನಸೌಧಮತದಾನ (ಕಾದಂಬರಿ)ಸಿದ್ದಲಿಂಗಯ್ಯ (ಕವಿ)ಒಂದೆಲಗನರೇಂದ್ರ ಮೋದಿಹನುಮಾನ್ ಚಾಲೀಸಕಬ್ಬುವಿವಾಹಭಾರತದಲ್ಲಿನ ಜಾತಿ ಪದ್ದತಿಜಂಟಿ ಪ್ರವೇಶ ಪರೀಕ್ಷೆಕೆ. ಎಸ್. ನಿಸಾರ್ ಅಹಮದ್ದುಂಡು ಮೇಜಿನ ಸಭೆ(ಭಾರತ)ಶಬ್ದಮಣಿದರ್ಪಣಭಾರತದಲ್ಲಿ ಕೃಷಿಅರ್ಥ ವ್ಯತ್ಯಾಸರಾಧಿಕಾ ಕುಮಾರಸ್ವಾಮಿರಾಸಾಯನಿಕ ಗೊಬ್ಬರಬೇಲೂರುಸಾಯಿ ಪಲ್ಲವಿಹದ್ದುಧಾರವಾಡಸಂಸ್ಕಾರಮಾನವ ಹಕ್ಕುಗಳುವಾಣಿವಿಲಾಸಸಾಗರ ಜಲಾಶಯಜನ್ನಜಾಗತಿಕ ತಾಪಮಾನ ಏರಿಕೆಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯೋಗವಾಹತುಂಗಭದ್ರಾ ಅಣೆಕಟ್ಟುಆಂಧ್ರ ಪ್ರದೇಶಸ್ಫಿಂಕ್ಸ್‌ (ಸಿಂಹನಾರಿ)ನಾಗರೀಕತೆಶನಿ (ಗ್ರಹ)ಶಿವಗಂಗೆ ಬೆಟ್ಟ🡆 More