ಪುಸ್ತಕ ಮುಸ್ಸಂಜೆಯ ಕಥಾ ಪ್ರಸಂಗ

ಮುಸ್ಸಂಜೆಯ ಕಥಾ ಪ್ರಸಂಗ ೧೯೭೮ರಲ್ಲಿ ಪ್ರಕಟವಾದ ಲೇಖಕ ಪಿ.ಲಂಕೇಶ್ ಅವರ ಕನ್ನಡ ಕಾದಂಬರಿಯಾಗಿದ್ದು, ೨೦೦೪ರವರೆಗೆ ನಾಲ್ಕು ಮರುಮುದ್ರಣ ಹೊಂದಿದೆ..

ಲೇಖಕರುಪಿ.ಲಂಕೇಶ್
ದೇಶಭಾರತ
ಭಾಷೆಕನ್ನಡ
ಪ್ರಕಟವಾದದ್ದು೧೯೭೮
ಪ್ರಕಾಶಕರುಪತ್ರಿಕೆ ಪ್ರಕಾಶನ
ಪುಟಗಳು೪೦೧

ಕಥಾವಸ್ತು

ಮನುಷ್ಯ ಮನುಷ್ಯರ ನಡುವಿನ ವರ್ತನೆಗಳನ್ನು ಕಥಾ ರೂಪಕ್ಕೆ ತಂದು, ಆ ಕಥೆಗೆ ೫೦-೬೦ರ ದಶಕದ ಆಸುಪಾಸಿನ ಗ್ರಾಮೀಣ ಪರಿಸರವನ್ನು ಹೊದಿಸಿ, ಅಸತ್ಯ, ಅಪ್ರಾಮಾಣಿಕತೆ, ಅನೈತಿಕತೆಗಳನ್ನೆಲ್ಲ ಸಹಜವೆಂಬಂತೆ ಚಿತ್ರಿಸಿ, ಪಾತ್ರಗಳಿಗೆ ಜೀವಂತಿಕೆ ಇರುವುದೇ ಇವುಗಳಿಂದ ಎಂದು ಬಿಂಬಿಸಿ, ಕಥೆಯ ಸಾಗುವ ಗತಿಯನ್ನು ಓದುಗನು ತಪ್ಪಿಸಿಕೊಳ್ಳದಂತೆ ಆಗಾಗ ಲೇಖಕನು ಕಥೆಯೊಳಗೆ ಪ್ರವೇಶಿಸಿ, ಇದು ಹೀಗೆ ಎಂದು ನಿರ್ದೇಶಿಸುತ್ತ ಕಟ್ಟಿಕೊಟ್ಟಿರುವ ಕಾದಂಬರಿ "ಮುಸ್ಸಂಜೆಯ ಕಥಾ ಪ್ರಸಂಗ"

ಈ ಕಥೆ ಕಂಬಳ್ಳಿ ಎಂಬ ಹಳ್ಳಿಯಲ್ಲಿ ನಡೆಯುತ್ತದೆ. ಆಣೆ ಬಡ್ಡಿ ರಂಗವ್ವ, ಅವಳ ಮಗಳು ಸಾವಂತ್ರಿ, ಸಾವಂತ್ರಿಯ ಪ್ರೇಯಸಿ ಬ್ಯಾಡರ ಮಂಜ, ಮೆಷಿನ್ ಭರಮಣ್ಣ, ಅವನ ಹೆಂಡತಿಯರಾದ ಸಾದ್ವಿ ರುದ್ರಿ, ಹರಾಮಿ ರಾಮಿ, ಪೈಲ್ವಾನ್ ಶಿವಾಜಿ, ೧೩-೧೪ ವಯಸ್ಸಿನ ‘ಬಾಲಕ’ ಕರಿಯ, ನೊಂದ ಪ್ರೇಮಿ ಶಿವನಂಜ, ಅವನು ಶಿವಮೊಗ್ಗದಿಂದ ಕರೆತರುವ ಸಾಹಿತ್ಯೋತ್ತಮ ಉಡುಪ, ಅವನ ಅಕ್ಕರೆಯ ಹೆಂಡತಿ ಮಮ್ತಾಜ್, ಮಕ್ಕಳು ಮಾಡಿದ ನೀಚ ಕೆಲಸಗಳಿಂದ ಹುಚ್ಚನೋ,ದಾರ್ಶನಿಕನೋ ಎಂಬ ಜಿಜ್ಞಾಸೆಗೆ ಗುರಿಯಾಗಿರುವ ಶ್ರೇಷ್ಠಿ, ಆಗಾಗ ಬಂದು ಒಳಿತು-ಕೆಡಕುಗಳನ್ನು ಹೇಳುವ ಅವನ ಗೆಳೆಯ ಶಾಸ್ತ್ರಿ, ಎಲ್ಲದರಲ್ಲೂ ಲಾಭ ಮಾಡಿಕೊಳ್ಳುಲು ನೋಡುವ ರಾಚ, ರಾಚನಂತೆ ಇದ್ದರೂ ಜಾಣೆಡ್ಡ ಬೂಸಿ ಬಸ್ಯ, ಕುಳ್ಳನೆಯ ಕಳ್ಳಬುದ್ಧಿಯ ಮೇಷ್ಟ್ರು ಸಣ್ಣೀರಪ್ಪ, ಊರಿನ ಉಸಾಬರಿಯಿಂದ ದೂರವಿರುವ,ಊರವರ ಅವಗಣನೆಗೆ ಒಳಗಾಗಿರುವ ನಂದ್ಯಪ್ಪ ಮತ್ತು ಅವನ ಕುಟುಂಬ, ಕುಟುಂಬಕ್ಕೆ ಹೊರೆಯಾಗಬಾರದೆಂದು ಬದುಕಲು ಹೋಗಿ ಸಾಯುವ ಶಿವಿ, ವಿಚಿತ್ರ ಪ್ರೇಮಿ ಇಕ್ಬಾಲ್ ಮುಂತಾದ ಪಾತ್ರಗಳ ಸುತ್ತ ಈ ಕಾದಂಬರಿಯನ್ನು ರಚಿಸಲಾಗಿದೆ.

ಅನುವಾದ ಹಾಗೂ ರೂಪಾಂತರ

ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿ ಆಧಾರಿತವಾಗಿ ಕವಿತಾ ಲಂಕೇಶ್‌ ಅವರ ನಿರ್ದೇಶನದಲ್ಲಿ "ಅವ್ವ" ಎಂಬ ಕನ್ನಡ ಚಲನಚಿತ್ರವು ೨೦೦೦೮ ಬಿಡುಗೊಡೆಯಾಯಿತು. ಈ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯದ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ‘ಮುಸ್ಸಂಜೆ ಕಥಾ ಪ್ರಸಂಗ’ವನ್ನು ಅದೇ ಹೆಸರಿನಲ್ಲಿ ಬಸವರಾಜ ಸೂಳೇರಿಪಾಳ್ಯರವರು ರಂಗರೂಪಗೊಳಿಸಿದ್ದು, ಕೆಎಸ್‌ಡಿಎಲ್ ಚಂದ್ರುರವರು ತಮ್ಮ ‘ರೂಪಾಂತರ’ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ಈ ನಾಟಕ ೨೦೦೫ರಲ್ಲಿ ಮೊದಲ ಪ್ರದರ್ಶನ ಕಂಡಿತು.

ಉಲ್ಲೇಖಗಳು

Tags:

ಕಾದಂಬರಿಪಿ.ಲಂಕೇಶ್

🔥 Trending searches on Wiki ಕನ್ನಡ:

ಎರೆಹುಳುಸ್ವಾತಂತ್ರ್ಯಪಪ್ಪಾಯಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿತಂತ್ರಜ್ಞಾನಲಿಯೊನೆಲ್‌ ಮೆಸ್ಸಿಮಂಕುತಿಮ್ಮನ ಕಗ್ಗಜವಹರ್ ನವೋದಯ ವಿದ್ಯಾಲಯಹೆರೊಡೋಟಸ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಎಚ್ ನರಸಿಂಹಯ್ಯಆಮ್ಲಚೋಳ ವಂಶನದಿಅಪಕೃತ್ಯಶ್ಯೆಕ್ಷಣಿಕ ತಂತ್ರಜ್ಞಾನಭಾರತೀಯ ಮೂಲಭೂತ ಹಕ್ಕುಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುರಾಸಾಯನಿಕ ಗೊಬ್ಬರದ್ರೌಪದಿಕೆ. ಅಣ್ಣಾಮಲೈರವೀಂದ್ರನಾಥ ಠಾಗೋರ್ಕನ್ನಡಪ್ರಭಭಾರತದಲ್ಲಿ ಪಂಚಾಯತ್ ರಾಜ್ಸಂಸ್ಕೃತಿಛತ್ರಪತಿ ಶಿವಾಜಿಚಂಡಮಾರುತಕರ್ನಾಟಕ ವಿಧಾನ ಪರಿಷತ್ವಿರಾಟ್ ಕೊಹ್ಲಿಶಿಕ್ಷಕಜ್ಯೋತಿಷ ಶಾಸ್ತ್ರಭರತ-ಬಾಹುಬಲಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಭಾರತದಲ್ಲಿ ಮೀಸಲಾತಿಭಾರತದ ರಾಷ್ಟ್ರೀಯ ಚಿಹ್ನೆಏಕೀಕರಣಅಸಹಕಾರ ಚಳುವಳಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಮಲೈ ಮಹದೇಶ್ವರ ಬೆಟ್ಟಬಿಪಾಶಾ ಬಸುಸಮಾಜ ವಿಜ್ಞಾನಹನುಮಂತಜ್ಯೋತಿಬಾ ಫುಲೆರುಮಾಲುರವಿಚಂದ್ರನ್ರಾಗಿಫೇಸ್‌ಬುಕ್‌ಸಿರ್ಸಿಕುಟುಂಬಭಾರತೀಯ ಸ್ಟೇಟ್ ಬ್ಯಾಂಕ್ಮೂಲವ್ಯಾಧಿಹೊಯ್ಸಳಮಣ್ಣುಪುರಂದರದಾಸವಿಶ್ವ ಮಹಿಳೆಯರ ದಿನಖಂಡಕಾವ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ಧರ್ಮಸ್ಥಳದ್ರವ್ಯ ಸ್ಥಿತಿಹನುಮಾನ್ ಚಾಲೀಸಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಪೆರಿಯಾರ್ ರಾಮಸ್ವಾಮಿಕೈಲಾಸನಾಥದ.ರಾ.ಬೇಂದ್ರೆಭಾರತದ ರಾಷ್ಟ್ರಪತಿಹೆಚ್.ಡಿ.ಕುಮಾರಸ್ವಾಮಿಪತ್ರರಂಧ್ರಸಿಂಗಾಪುರಮಡಿಲಗಣಕ ಅಥವಾ ಲ್ಯಾಪ್‌ಟಾಪ್ಶಬ್ದಆರೋಗ್ಯವಿಜಯ ಕರ್ನಾಟಕಚಾಮುಂಡರಾಯಸಂಯುಕ್ತ ಕರ್ನಾಟಕಹಣಕಾಸುಭಾರತದ ರಾಜಕೀಯ ಪಕ್ಷಗಳುಕನ್ನಡ ರಾಜ್ಯೋತ್ಸವ🡆 More