ಮುಕ್ತಾಯಕ್ಕ

ಮುಕ್ತಾಯಕ್ಕ ಅನುಭಾವಿ ಶಿವಶರಣೆ , ಜನ್ಮಸ್ಥಳ- ಲಕ್ಕುಂಡಿ.

ಅಂಕಿತ ನಾಮ - ಅಜಗಣ್ಣ.

ಮುಕ್ತಾಯಕ್ಕನ ಹಿನ್ನೆಲೆ

ಮುಕ್ತಾಯಕ್ಕ ಲಕ್ಕುಂಡಿ ಗ್ರಾಮದವಳು. ಲಕ್ಕುಂಡಿ ಗ್ರಾಮ ಗದಗ ಜಿಲ್ಲೆಯಲ್ಲಿದೆ. ಮುಕ್ತಾಯಕ್ಕ ಅಜಗಣ್ಣನ ಸೋದರಿ. ಇವರಿಬ್ಬರದು ಅನನ್ಯ ಭ್ರಾತೃಪ್ರೇಮ. ಈಕೆಯ ಆಧ್ಯಾತ್ಮದ ಗುರು, ತಂದೆ ಎಲ್ಲವೂ ಅಣ್ಣನೇ ಆಗಿದ್ದನು. ಮುಕ್ತಾಯಕ್ಕನಿಗೆ ೧೦ವರ್ಷದಲ್ಲಿ 'ಮಸಳಿಕಲ್ಲು' ಎಂಬ ಗ್ರಾಮಕ್ಕೆ ಮದುವೆ ಮಾಡಿ ಕೊಡುವರು. ೧೨ನೇ ಶತಮಾನದ ಶಿವಶರಣೆಯರ ಸಮೂಹದ ಆಧ್ಯಾತ್ಮಿಕ ಸಿದ್ದಾಂತದ ವಿಷಯದಲ್ಲಿ, ವಿಶಾಲ ಮನೋಭಾವ, ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯ ಹೆಣ್ಣೆಂದು ಮುಕ್ತಾಯಕ್ಕನನ್ನು ಗುರುತಿಸುತ್ತೇವೆ. ಈಕೆ ಪ್ರಖರ ವೈಚಾರಿಕತೆಯ, ತಾತ್ವಿಕ ಪರಿಜ್ಞಾನದ, ಸೈದ್ಧಾಂತಿಕ ವಿಶ್ಲೇಷಣೆಯ ಉನ್ನತ ತತ್ವಜ್ಞಾನಿ. ಕಾಯದ ಸೀಮೆಯ, ಭಾವದ ಭ್ರಾಂತಿಯ, ಜೀವ ಮಾಯೆಯನ್ನು ಕಳೆದುಕೊಂಡರೂ ದ್ವೇತಾದ್ವೇತದ ಸಾಕಾರ, ನಿರಾಕಾರದ ನಾನು-ನೀನುಎಂಬ ವಿಭಿನ್ನ ತಿಳುವಳಿಕೆಯ ತಿಮಿರದಂಚಿನಲಿ ಸಿಲುಕಿ ತೊಳಲಾಡುವ ಸಾಧಕಿಯಾಗಿ ಮುಕ್ತಾಯಕ್ಕ ನಮಗೆ ಕಾಣಿಸುತ್ತಾಳೆ. ಅವಳು ತನ್ನ ವಚನಗಳಲ್ಲಿ ಅಲ್ಲಮಪ್ರಭು, ಚನ್ನಬಸವಣ್ಣ, ಮರುಳ ಶಂಕರದೇವ ಮುಂತಾದ ಶರಣರ ಕಾರುಣ್ಯದಿಂದ ತಾನು ಪರಿಣಾಮಿಯಾದುದನ್ನು ವಿನಮ್ರತೆಯಿಂದ ಸ್ಮರಿಸಿದ್ದಾಳೆ.

ಮುಕ್ತಾಯಕ್ಕನ ಪ್ರಮುಖ ವಚನಗಳು

ಮುಕ್ತಾಯಕ್ಕನನ್ನು ವಚನಸಾಹಿತ್ಯದ ಧೃವತಾರೆ ಎಂದು ಕರೆಯಲಾಗುತ್ತದೆ. ಅಕ್ಕಮಹಾದೇವಿ ಭಕ್ತಿಮಾರ್ಗ, ತಾರ್ಕಿಕ ಜ್ಞಾನಮಾರ್ಗ ಹೊಂದಿದರೆ, ಮುಕ್ತಾಯಕ್ಕ ವೈಚಾರಿಕತೆಯ ದಿಟ್ಟನಿಲುವಿನ ಜ್ಞಾನಮಾರ್ಗ ಹೊಂದಿದವಳು. ಈಕೆಯ ಸುಮಾರು ೩೭ವಚನಗಳು ಈವರೆಗೆ ನಮಗೆ ಲಭ್ಯವಾಗಿವೆ. ಈಕೆಯ ವಚನಗಳ ಅಂಕಿತ ಅಜಗಣ್ಣ, ಅಜಗಣ್ಣ ತಂದೆ ಎಂಬುದು.

೧.ಅಲರೊಳಡಗಿದ
ಪತಂಗದೊಳಡಗಿದ ಅನಲನಂತೆ
ಶಶಿಯೊಳಡಗಿದ ಷೋಡಶ ಕಳೆಯಂತೆ
ಉಲುಹಳಡಗಿದ ವಾಯುವಿನಂತೆ
ಸಿಡಿಲೊಳಡಗಿದ ಗಾತ್ರದ ತೇಜದಂತೆ
ಇರಬೇಕಯ್ಯ ಯೋಗ ಎನ್ನ
ಅಜಗಣ್ಣ ತಂದೆಯಂತೆ

೨.ಆರು ಇಲ್ಲದವಳೆಂದು
ಆಳಿಗೊಳಲು ಬೇಡ
ಆಳಿಗೊಂಡೆಡೆ ಆನು
ಅಂಜುವವಳಲ್ಲ ಒಲವಿನ
ಒತ್ತೆ ಕಲ್ಲನು ಬೆವರಿಸಬಲ್ಲೆ
ಕಾಣಿರೊ ಅಪ್ಪಿದವರನಪ್ಪಿದಡೆ
ತರಗೆಲೆಯಂತೆ ರಸವನು
ಅರಸಿದಡುಂಟೇ ಅಜಗಣ್ಣ ತಂದೆ

Tags:

🔥 Trending searches on Wiki ಕನ್ನಡ:

ಕಾವೇರಿ ನದಿ ನೀರಿನ ವಿವಾದಮಕ್ಕಳ ಸಾಹಿತ್ಯವಸಾಹತುರಾಜಕೀಯ ವಿಜ್ಞಾನಲಿಪಿಗೋತ್ರ ಮತ್ತು ಪ್ರವರಕ್ರೈಸ್ತ ಧರ್ಮಭಾರತದ ಚುನಾವಣಾ ಆಯೋಗಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಚಂದ್ರಗುಪ್ತ ಮೌರ್ಯಮೂಲವ್ಯಾಧಿಹರಪ್ಪಭೂಮಿಯ ವಾಯುಮಂಡಲನಾಗಮಂಡಲ (ಚಲನಚಿತ್ರ)ಸಂಧಿಎಸ್.ಎಲ್. ಭೈರಪ್ಪಸಿಂಹಚಂದ್ರ೧೭೮೫ಮೈಸೂರು ಅರಮನೆಚುನಾವಣೆಶಿಕ್ಷಕಆದಿ ಶಂಕರರು ಮತ್ತು ಅದ್ವೈತನಿರುದ್ಯೋಗತತ್ತ್ವಶಾಸ್ತ್ರಶಂಕರದೇವಗ್ರಾಮೀಣ ಪ್ರಾದೇಶಿಕ ಬ್ಯಾಂಕ್ದ್ರಾವಿಡ ಭಾಷೆಗಳುರನ್ನಕರ್ನಾಟಕ ಹೈ ಕೋರ್ಟ್ಧರ್ಮಸ್ಥಳವಿನಾಯಕ ದಾಮೋದರ ಸಾವರ್ಕರ್ಗ್ರಾಮ ಪಂಚಾಯತಿಹವಾಮಾನಭಾರತೀಯ ರೈಲ್ವೆಅಗ್ನಿ(ಹಿಂದೂ ದೇವತೆ)ಸಾಮ್ರಾಟ್ ಅಶೋಕಉದ್ಯಮಿಸರ್ವಜ್ಞನವಗ್ರಹಗಳುಅಂತರ್ಜಲಯುವರತ್ನ (ಚಲನಚಿತ್ರ)ಸುಭಾಷ್ ಚಂದ್ರ ಬೋಸ್ರಾಯಲ್ ಚಾಲೆಂಜರ್ಸ್ ಬೆಂಗಳೂರುಲಕ್ಷ್ಮಿತಾಜ್ ಮಹಲ್ಈಸ್ಟರ್ಭಾರತಎನ್ ಆರ್ ನಾರಾಯಣಮೂರ್ತಿಬರವಣಿಗೆಕೊಡಗುಭಾರತದಲ್ಲಿನ ಜಾತಿ ಪದ್ದತಿಸಿಂಧನೂರುಕೃಷಿಸವರ್ಣದೀರ್ಘ ಸಂಧಿವ್ಯಕ್ತಿತ್ವಮೈಗ್ರೇನ್‌ (ಅರೆತಲೆ ನೋವು)ಶ್ರೀ. ನಾರಾಯಣ ಗುರುಪಾಂಡವರುಪಿತ್ತಕೋಶಹನುಮಾನ್ ಚಾಲೀಸಬೇವುನರೇಂದ್ರ ಮೋದಿಭಾರತದ ಸಂಸತ್ತುಬಡತನಕಾರ್ಲ್ ಮಾರ್ಕ್ಸ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಜಿ.ಪಿ.ರಾಜರತ್ನಂಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸ್ತನ್ಯಪಾನವಿಜಯ ಕರ್ನಾಟಕಭಾರತದ ರೂಪಾಯಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕೆಂಪು ಮಣ್ಣುಹನುಮಂತಕುಮಾರವ್ಯಾಸ🡆 More