ಮೀಟು ತರಗತಿ

ಮೀಟು ತರಗತಿಯು ಒಂದು ಅಧ್ಯಾಪನ ಪ್ರಕ್ರೀಯೆ.

ಇದು ಒಂದು ರೀತಿಯ ಮಿಶ್ರಿತ ಶಿಕ್ಷಣ ಕ್ರಮ. ಮೀಟು ತರಗತಿಯಲ್ಲಿ ಸಾಂಪ್ರದಾಯಿಕವಾಗಿ ನಡೆಸುವ ಶೈಕ್ಷಣಿಕ ಶೈಲಿಯನ್ನು ಹಿಮ್ಮೊಗವಾಗಿಸಿ ಅಥವಾ ಮೀಟಿಸಿ ಅಧ್ಯಾಯನ, ಪ್ರತ್ಯೇಕವಾಗಿ ಅಂತರ್ಜಾಲ ಮುಖಾಂತರ, ತರಗತಿಯ ಹೊರಗೆ ನಡೆಸಲಾಗುವುದು. ಸಾಂಪ್ರದಾಯಕವಾಗಿ ಕೊಡುವಂತಃಹ ಮನೆಕೆಲಸವನ್ನು ತರಗತಿಯಲ್ಲೇ ಮಾಡಿ, ಇತರ ಚಟುವಟಿಕೆಗಳನ್ನು ಕೂಡ ಮಾಡುವ ಪ್ರಯೋಗ. ಮೀಟು ತರಗತಿಯಲ್ಲಿ ವಿಧ್ಯಾರ್ಥಿಗಳು ಅಂತರ್ಜಾಲದಲ್ಲಿರುವ ಉಪನ್ಯಾಸಗಳನ್ನು ವೀಕ್ಷಿಸಿ, ಆಂತರ್ಜಾಲಿಕ ಚರ್ಚೆ ನಡೆಸಿ, ಮನೆಗಳಲ್ಲಿ ಸಂಶೋಧನೆ ನಡೆಸಿ, ತರಗತಿಯಲ್ಲಿ ಶಿಕ್ಷಕರ ಸಹಾಯ ಜೊತೆ, ವಿವಿಧ ಪರಿಕಲ್ಪನೆಗಳ ಚರ್ಚೆಗಳಲ್ಲಿ ತೊಡಗಿಸಲ್ಪಡುತ್ತಾರೆ.

ಸಾಂಪ್ರದಾಯಿಕ ಕಲಿಕೆ ವಿರುದ್ಧ ಮೀಟು ತರಗತಿಗಳು

ಸಾಂಪ್ರದಾಯಿಕ ಶೈಕ್ಷಣಿಕ ಶೈಲಿಯಲ್ಲಿ, ಶಿಕ್ಷಕರು ಅಧ್ಯಾಯನದ ಕೇಂದ್ರಬಿಂದುವಾಗಿ, ಶಿಕ್ಷೆಯ ಪರಮ ದಾನಿಗಳಾಗಿದ್ದರು. ಶಿಕ್ಷಕರು ವಿಧ್ಯಾರ್ಥಿಯ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದರು ಹಾಗು ವಿಧ್ಯಾರ್ಥಿಯರು ಶಿಕ್ಷಕರಿಂದ ಸಲಹೆಗಳನ್ನು ಪಡೆಯುತ್ತಿದ್ದರು. ಪ್ರತ್ಯೇಕ ಪಾಠವು ವಿಷಯ ಆಧಾರಿತವಾಗುತ್ತಿತ್ತು. ವಿಧ್ಯಾರ್ಥಿಯ ಪಾತ್ರ ಬಹಳ ಕಡಿಮೆ ಮಾತ್ರದಲ್ಲಿದ್ದು, ಕೆಲವೇ ಚಟುವಟಿಕೆಗಳು ಇರುತ್ತಿತ್ತು. ಇವರು ಶಿಕ್ಷಕರು ಕೊಟ್ಟಂತಹ ಅಭ್ಯಾಸವನ್ನು ಸ್ವತಂತ್ರವಾಗಿ ಅಥವಾ ಚಿಕ್ಕ ಗುಂಪಿನಲ್ಲಿ ಕೆಲಸಮಾಡುತ್ತಿದ್ದರು. ತರಗತಿಯಲ್ಲಿ ಚರ್ಚೆಯು ಶಿಕ್ಷಕರಮೇಲೆ ಕೇಂದ್ರಿತವಾಗಿದ್ದು, ಶಿಕ್ಷಕರು ಅವುಗಳನ್ನು ನಿಯಂತ್ರಣದಲ್ಲಿ ಇಡುತಿದ್ದರು. ಈ ಶೈಲಿಯಲ್ಲಿ ಶಿಕ್ಷಣವು ವಿಧ್ಯಾರ್ಥಿಗಳಿಗೆ ಪುಸ್ತಕಗಳಿಂದ ಓದಿ ಅಥವಾ ತರಗತಿಯಲ್ಲಿ ಕೊಟ್ಟಂತಹ ಅಭ್ಯಾಸಗಳನ್ನು ಮಾಡಿ ಪಡೆಯಲಾಗುತ್ತಿತ್ತು.

ಮೀಟು ತರಗತಿಯಲ್ಲಿ ಶಿಕ್ಷಣವು ವಿಧ್ಯಾರ್ಥಿ-ಕೇಂದ್ರಿತವಾಗಿ, ತರಗತಿಯ ಸಮಯವನ್ನು ವಿಷಯಗಳನ್ನು ಅತೀ ಸೂಕ್ಷ್ಮ ರೀತಿಯಲ್ಲಿ ವಿಚಾರಿಸಿ, ಅರ್ಥಪೂರ್ಣ ಕಲಿಯುವ ಅವಕಾಶವನ್ನು ಕೊಡುವಂತದ್ದು. ಇದರಲ್ಲಿ ಆಂತರ್ಜಾಲ ಆಧರಿತ ಸಂಪನ್ಮೂಲಗಳನ್ನು ತರಗತಿಯ ಹೊರ ಸಮಯದಲ್ಲಿ ಉಪಯೋಗಿಸುತ್ತಾರೆ. ವಿಷಯಗಳನ್ನು ವಿವಿಧ ರೀತಿಯಲ್ಲಿ ಕೊಡಲಾಗುತ್ತದೆ. ಸಾಮಾನ್ಯವಾಗಿ, ಶಿಕ್ಷಕರಿಂದ ಮಾಡಲಾಗಿದ್ದ ವೀಡಿಯೊಗಳನ್ನು ಅಥವಾ ಅನ್ಯ ಸಂಪನ್ಮೂಲಗಳಿಂದ ಅಥವಾ ಆಂತರ್ಜಾಲ ಆಧಾರಿತ ಅನ್ಯ ಮೂಲಗಳಿಂದ, ಸಹಯೋಗದ ಚರ್ಚೆ, ಸಂಶೋಧನೆ, ಗ್ರಂಥಾಲಯಗಳ ಪುಸ್ತಕಗಳನ್ನು ಕೂಡ ಉಪಯೋಗಿಸುತ್ತಾರೆ.

ಮೀಟು ತರಗತಿಯು, ತರಗತಿಯಲ್ಲಿ ಮಾಡಲಾಗುವ ಚಟುವಟಿಕೆಗಳನ್ನು ನೂತನಗೊಳಿಸುತ್ತದೆ. ತರಗತಿ ಚಟುವಟಿಗಳು ಮನೆಕೆಲಸವಿಲ್ಲದೆ, ಎಲ್ಲಾ ವಿಷಯಗಳನ್ನು ಅಲ್ಲೇ ವಿಚಾರಿಸುವ ಪದ್ದತಿಯನ್ನು ಹೊಂದಿರುತ್ತದೆ. ಬೇರೆ ಬೇರೆ ತರಗತಿಗಳು ವಿಧವಿಧದ ಚಟುವಟಿಕೆಗಳನ್ನು ಮಾಡಬಹುದು; ಆದೆರೆ, ಸಾಮಾನ್ಯವಾಗಿ ಗಣಿತ ಆಧರಿತ ಸಮಸ್ಯೆಗಳನ್ನು, ಗಣಿತ ತಂತ್ರಜ್ಞಾನ ಆಧರಿತ, ಪ್ರಯೋಗಾಲಯ ಪ್ರಯೋಗಗಳು, ಮೂಲ ದಾಖಲೆ ವಿಷ್ಲೇಶಣೆ, ಚರ್ಚೆಗಳು, ಭಾಷಣ, ಪರ್ಸ್ಪರ ವಿಮರ್ಶೆ, ಯೋಜನೆ ಆಧಾರಿತ ಕಲಿಕೆ, ಕೌಶಲ್ಯ ಬೆಳವಣಿಗೆ ಮತ್ತು ಪರಿಕಾಲ್ಪಣಿಕ ಅಭ್ಯಾಸಗಳು ಹೊಂದಿರುತ್ತವೆ. ಈ ರೀತಿಯ ಚಟುವಟಿಕೆಗಳು ವಿವಿಧ ಕಲಿಕೆಶೈಲಿಗಳನ್ನು ಅವಕಾಶ ಮಾಡಿಕೊಡುವುದರಿಂದ, ತರಗತಿಯಲ್ಲಿ ಹೆಚ್ಚಿನ ಸಮಯ ಉನ್ನತ ಯೋಚನೆಯಲ್ಲಿ, ಸಮಸ್ಯೆ ಪರಿಹಾರ, ಸಂಯೋಜಿತ ಕಲಿಕೆ, ವಿನ್ಯಾಸ, ಗುಂಪಿನಲ್ಲಿ ಕೆಲಸಮಾಡುವುದು, ಸಂಶೋಧನೆ ಇತರ ರಚನಾತ್ಮಕ ಕಾರ್ಯಗಳಲ್ಲಿ ಉಪಯೋಗಿಸಬಹುದು. ಮೀಟು ತರಗತಿಗಳು ಶಾಲೆಗಳಲ್ಲಿ ಹಾಗು ಕಾಲೇಜುಗಳಲ್ಲಿ ಕಾರ್ಯಗತಗೊಳಿಸಿ, ವಿವಿಧ ಫಲಿತಾಂಶಗಳನ್ನು ನೀಡಿದೆ.

ವಿಧ್ಯಾರ್ಥಿಯರ ಜೊತೆ ಶಿಕ್ಷಕರ ಸಂವಹನ ವೈಯುಕ್ತಿಕವಾಗಿರುತ್ತದೆ ಮಾತ್ರವಲ್ಲದೆ, ಅಧ್ಯಾಯನದಲ್ಲಿ ಎಲ್ಲರು ಭಾಗವಹಿಸುವ ಕಾರಣ, ವಿಧ್ಯಾರ್ಥಿಯು ಜ್ಞಾನ ಸಂಗ್ರಹಿಸುವುದರಲ್ಲಿ ಆಸಕ್ತಿಯಿಂದ, ಕ್ರೀಯಾತ್ಮಕವಾಗಿ ಪಾಲುಗೊಳ್ಳುತ್ತಾರೆ.

ಮೀಟು ಪಾಂಡಿತ್ಯ

ಸಾಂಪ್ರದಾಯಿಕ ತರಗತಿಯಲ್ಲಿ ಒಂದು ವಿಷಯವನ್ನು ಸೀಮಿತ ಸಮಯದಲ್ಲಿ ಮುಗಿಸುವ ಅಭ್ಯಾಸವಿತ್ತು. ಮೀಟು ತರಗತಿಯಲ್ಲಿ ಪ್ರತಿ ವಿಧ್ಯಾರ್ಥಿ ಕಲಿಸುವ ವಿಷಯವನ್ನು ಸರಿಯಾಗಿ ತಿಳಿದ ನಂತರ ತರಗತಿಯನ್ನು ಮುಂದುವರಿಸುವ ಅಭ್ಯಾಸವನ್ನು ಹೊಂದಿರುತ್ತದೆ. ಪಾಂಡಿತ್ಯ ವಿಧ್ಯಾರ್ಥಿಯರು ತೋರ್ಸುವ ಸಾಮರ್ಥ್ಯವನ್ನು ಪ್ರೋತ್ಸಾಹಿಸುತ್ತದೆ. ಅಪೂರ್ಣ ಕೆಲಸವನ್ನು ತಿದ್ದಿಪಡಿಸಿದಾದಮೇಲೆ ಮುಂದಿನ ವಿಷಯವನ್ನು ಪ್ರಾರಂಭಿಸುವುದು. ಮೀಟು ತರಗತಿಗಳು ಬರುವ ಮುಂಚೆ, ಮೀಟು ಪಾಂಡಿತ್ಯವು ಬಹಳ ಕಷ್ಟಕರವಾಗಿತ್ತು. ಪರೀಕ್ಷಿಸುವು ವಿಧಾನ ಅಪ್ರಯೋಗಿಕವಾಗಿತ್ತು.ಮೀಟು ಪಾಂಡಿತ್ಯವುಳ್ಳ ತರಗತಿಯಲ್ಲಿ, ಪ್ರತಿ ವಿದ್ಯಾರ್ಥಿ ಪ್ರತಿ ವಿಷಯವನ್ನು ವೀಕ್ಷಿಸಿ, ಅವುಗಳ ಮೇಲೆ ವಿಷ್ಲೇಶಣೆ ನಡೆಸಿ, ಪಾಂಡಿತ್ಯವನ್ನು ಸ್ವೀಕರಿಸಿ ಮುಂದೆ ಅಭ್ಯಾಸವನ್ನು ನಡೆಸುತ್ತಾರೆ.

ಮಿತಿಗಳು ಹಾಗು ವಿಮರ್ಶೆಗಳು

ಮೀಟು ತರಗತಿಗಳಿಗೆ ಹಲವು ಕುಂದುಕೊರತೆಗಳಿವೆ. ವಿಧ್ಯಾರ್ಥಿಗಳ ದೃಷ್ಟಿಯಲ್ಲಿ, ಈ ಶೈಲಿಯಲ್ಲಿ 'ಡಿಜಿಟಲ್ ವಿಭಜನೆ' ಉಂಟು. ಎಲ್ಲಾ ಕುಟುಂಬಗಳು ಒಂದೆ ತರಹದ ಆರ್ಥಿಕ ಸ್ತಿಥಿವುಳ್ಳವರಲ್ಲ. ಗಣಕಯಂತ್ರಗಳ ಕೊರತೆ ಅಥವಾ ತರಗತಿಯ ಹೊರಗೆ ವೀಡಿಯೊ ವೀಕ್ಷಿಸುವ ಪ್ರಯೋಜನೆವಿರುವುದಿಲ್ಲ. ಈ ವಿಧಾನ ಬಡ ಕುಟುಂಬದ ಸದಸ್ಯರಲ್ಲಿ ಗಣಕಯಂತ್ರ ಹಾಗು ಇತರ ವಿದ್ಯುನ್ಮಾನ ವಸ್ತುಗಳನ್ನು ಕೊಂಡುಕೊಳ್ಳುವ ಒತ್ತಡ ಬೀಳಬಹುದು.

ಮೀಟು ತರಗತಿಗಳು ಸಾಂಪ್ರದಾಯಿಕ ತರಗತಿಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಕೂಡ ಅನುಭವಿಸಬಹುದು. ವಿಧ್ಯಾರ್ಥಿಯರು ಮನೆಗಳಲ್ಲಿ ವಿಡಿಯೊ ಹಾಗು ಪ್ರೋಜೆಕ್ಟ್ ನೋಡಿ, ಕೇಳಿ ಕಲಿಯದೇವಿರಬಹುದು. ರಚನಾತ್ಮಕವಾದ ವಿಧಾನ ಇಲ್ಲಿ ತುಂಬ ಸಹಕಾರಿಯಾಗಬಹುದು. ಶಿಕ್ಷಕರಿಗೂ ಕೂಡ ತೊಂದರೆಗಳು ಉಂಟಾಗಬಹುದು. ಪೂರ್ವಸಿದ್ಧತಿಯ ಕಾಲ ಹೆಚ್ಚಿಸಿ, ಉತ್ತಮ ಗುಣಮಟ್ಟದ ವೀಡಿಯೊಗಳನ್ನು ತಯಾರಿಸಲು ಬಹಳಷ್ಟು ಸಮಯ ನೀಡುವಂತಿದೆ. ಪ್ರತ್ಯೇಕವಾದ ಬಂಡಾವಾಳ ಈ ತರಗತಿಗಳಿಗೋಸ್ಕರವಿರಬೇಕು. ಶಿಕ್ಷಕರಿಗೆ ತರಭೇತಿ ನೀಡಿ, ಗಣಕಯಂತ್ರದ ಮಾಹಿತಿಗಳೆಲ್ಲ ಅತ್ಯಂತ ಅಗತ್ಯವಾದದ್ದು.

ಉಲ್ಲೇಖಗಳು

Tags:

ಮೀಟು ತರಗತಿ ಸಾಂಪ್ರದಾಯಿಕ ಕಲಿಕೆ ವಿರುದ್ಧ ಗಳುಮೀಟು ತರಗತಿ ಮೀಟು ಪಾಂಡಿತ್ಯಮೀಟು ತರಗತಿ ಮಿತಿಗಳು ಹಾಗು ವಿಮರ್ಶೆಗಳುಮೀಟು ತರಗತಿ ಉಲ್ಲೇಖಗಳುಮೀಟು ತರಗತಿ

🔥 Trending searches on Wiki ಕನ್ನಡ:

ವಿಜಯದಾಸರುಶುಭ ಶುಕ್ರವಾರನಯಾಗರ ಜಲಪಾತಗುರುಭಾರತದ ಸಂವಿಧಾನಶಿಕ್ಷಕಮೂಲವ್ಯಾಧಿಫ್ರಾನ್ಸ್ಆಯುರ್ವೇದಕೆ. ಎಸ್. ನಿಸಾರ್ ಅಹಮದ್ಶನಿಅದ್ವೈತತಲಕಾಡುರವೀಂದ್ರನಾಥ ಠಾಗೋರ್ರೂಢಿವಾದಿರಾಜರುಅಭಿ (ಚಲನಚಿತ್ರ)ಕಾರವಾರಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಶಾತವಾಹನರುಜ್ಞಾನಪೀಠ ಪ್ರಶಸ್ತಿಪೊನ್ನಓಂ (ಚಲನಚಿತ್ರ)ಭಾರತದ ರಾಷ್ಟ್ರೀಯ ಚಿಹ್ನೆಶಬ್ದ ಮಾಲಿನ್ಯಮಹೇಂದ್ರ ಸಿಂಗ್ ಧೋನಿಜಾಹೀರಾತುಕಂಪ್ಯೂಟರ್ಭಾರತದಲ್ಲಿನ ಜಾತಿ ಪದ್ದತಿವಿತ್ತೀಯ ನೀತಿಉದ್ಯಮಿಯೋಗಭಾರತದ ನಿರ್ದಿಷ್ಟ ಕಾಲಮಾನತೆರಿಗೆವ್ಯವಹಾರ ಪ್ರಕ್ರಿಯೆ ನಿರ್ವಹಣೆತ್ಯಾಜ್ಯ ನಿರ್ವಹಣೆಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಮೂಢನಂಬಿಕೆಗಳುಬ್ಲಾಗ್ಕರ್ನಾಟಕದ ವಾಸ್ತುಶಿಲ್ಪಶ್ರೀಕೃಷ್ಣದೇವರಾಯಕ್ರೈಸ್ತ ಧರ್ಮಡಬ್ಲಿನ್ರಾಮಾಯಣಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಹಲ್ಮಿಡಿ ಶಾಸನಬೊನೊಜವಾಹರ‌ಲಾಲ್ ನೆಹರುಕೊರೋನಾವೈರಸ್ಜೋಳಸಂಸ್ಕೃತಕೃಷ್ಣದೇವರಾಯವ್ಯಾಪಾರಭಾರತ ಸಂವಿಧಾನದ ಪೀಠಿಕೆನಾ. ಡಿಸೋಜಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಕೇಶಿರಾಜರನ್ನಚಂದ್ರಶೇಖರ ವೆಂಕಟರಾಮನ್ರಣಹದ್ದುದುಂಡು ಮೇಜಿನ ಸಭೆ(ಭಾರತ)ಗದ್ದಕಟ್ಟುಕರ್ತವ್ಯಕೆ.ಜಿ.ಎಫ್ಜೀವವೈವಿಧ್ಯಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕನ್ನಡದಲ್ಲಿ ಕಾದಂಬರಿ ಸಾಹಿತ್ಯಕರ್ನಾಟಕ ಸ್ವಾತಂತ್ರ್ಯ ಚಳವಳಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭೂತಾರಾಧನೆಟೊಮೇಟೊಜನ್ನಮಾವಂಜಿಶ್ರೀಮಲೆನಾಡುಚಿಪ್ಕೊ ಚಳುವಳಿರಾಮ್ ಮೋಹನ್ ರಾಯ್🡆 More