ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌

ಬ್ರೂಸ್‌ ಫ್ರೆಡೆರಿಕ್‌ ಜೋಸೆಫ್ ಸ್ಪ್ರಿಂಗ್‌ಸ್ಟೀನ್‌ (ಆಂಗ್ಲ:Bruce Frederick Joseph Springsteen; ಜನನ: 1949ರ ಸೆಪ್ಟೆಂಬರ್‌‌ 23), ದಿ ಬಾಸ್‌ ಎಂಬ ಅಡ್ಡಹೆಸರು ಅಥವಾ ಉಪನಾಮವನ್ನು ಹೊಂದಿರುವ ಅಮೆರಿಕಾದ ಓರ್ವ ಗಾಯಕ-ಗೀತ ರಚನೆಕಾರನಾಗಿದ್ದಾನೆ.

E ಸ್ಟ್ರೀಟ್‌ ಬ್ಯಾಂಡ್‌ ಎಂಬ ವಾದ್ಯವೃಂದದೊಂದಿಗೆ ಆತ ಗೀತೆಗಳನ್ನು ಧ್ವನಿಮುದ್ರಿಸುತ್ತಾನೆ ಹಾಗೂ ಸಂಗೀತ ಪ್ರವಾಸಗಳನ್ನು ಕೈಗೊಳ್ಳುತ್ತಾನೆ.

Bruce Springsteen
ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌
Bruce Springsteen in concert during 2009
ಹಿನ್ನೆಲೆ ಮಾಹಿತಿ
ಜನ್ಮನಾಮBruce Frederick Joseph Springsteen
ಅಡ್ಡಹೆಸರುThe Boss
ಸಂಗೀತ ಶೈಲಿHeartland rock, folk rock, Americana
ವೃತ್ತಿSinger-songwriter
ವಾದ್ಯಗಳುVocals, guitar, harmonica, piano
ಸಕ್ರಿಯ ವರ್ಷಗಳು1972–present
L‍abelsColumbia
Associated actsE Street Band, Steel Mill, Miami Horns, The Sessions Band
ಅಧೀಕೃತ ಜಾಲತಾಣbrucespringsteen.net
Notable instruments
Fender Telecaster
Fender Esquire
Takamine Guitars
Hohner Marine Band Harmonica

ಪಾಪ್‌ ಸಂಗೀತದ ಕೊಂಡಿಗಳು, ಕಾವ್ಯಾತ್ಮಕ ಸಾಹಿತ್ಯ, ಮತ್ತು ತನ್ನ ಜನ್ಮಸ್ಥಳವಾದ ನ್ಯೂಜರ್ಸಿಯ ಮೇಲೆ ಕೇಂದ್ರೀಕೃತವಾದ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದ ಭಾವುಕತೆಗಳಿಂದ ತುಂಬಿಕೊಂಡಿರುವ ತನ್ನ ಹಾರ್ಟ್‌ಲ್ಯಾಂಡ್‌ ರಾಕ್‌ ಬ್ರಾಂಡ್‌‌ಗೆ ಸಂಬಂಧಿಸಿದಂತೆ ಸ್ಪ್ರಿಂಗ್‌ಸ್ಟೀನ್‌ ವ್ಯಾಪಕವಾಗಿ ಪರಿಚಿತನಾಗಿದ್ದಾನೆ.

ವಾಣಿಜ್ಯದ ಸ್ವರೂಪದಲ್ಲಿ ಸುಲಭಲಭ್ಯವಾಗಿರುವ ರಾಕ್‌‌ ಗೀತಸಂಪುಟಗಳು ಮತ್ತು ಉತ್ಸಾಹಶೂನ್ಯ ಜಾನಪದ-ಉದ್ದೇಶಿತ ಕೃತಿಗಳ ನಡುವಿನ ಪರ್ಯಾಯ ಆಯ್ಕೆಯಾಗುವ ಕಡೆಗೆ ಸ್ಪ್ರಿಂಗ್‌ಸ್ಟೀನ್‌ನ ಧ್ವನಿಮುದ್ರಣಗಳು ಒಲವು ತೋರಿಸಿವೆ. ಸಂಗೀತ ಕಚೇರಿಗಳು ಮತ್ತು ಸುದೀರ್ಘ ಪ್ರದರ್ಶನಗಳಿಂದ ಅವನಿಗೆ ಬಹುಪಾಲು ಸ್ಥಾನಮಾನವು ದೊರಕಿದೆ; ಇದರಲ್ಲಿ ಆತನಿಂದ ಮತ್ತು E ಸ್ಟ್ರೀಟ್‌ ಬ್ಯಾಂಡ್‌ನಿಂದ ಉತ್ಕಟವಾದ ಲಾವಣಿಗಳು, ಪ್ರಚೋದಿಸುವ ಹರ್ಷಗೀತೆಗಳು, ಮತ್ತು ಸಂತೋಷಕೂಟದ ರಾಕ್‌ ಅಂಡ್‌ ರೋಲ್‌ ಹಾಡುಗಳು ಪ್ರಸ್ತುತಪಡಿಸಲ್ಪಡುತ್ತವೆ. ಈ ಗೀತೆಗಳ ಮೂಲಕ ಅವನು ವಿಲಕ್ಷಣವಾಗಿ ಕಾಣುವ ಅಥವಾ ಗಾಢವಾಗಿ ಭಾವಾತ್ಮಕವಾಗಿರುವ ಕಥೆಗಳನ್ನು ವೈವಿಧ್ಯಗೊಳಿಸುತ್ತಾನೆ. 3 ಗಂಟೆಗಳವರೆಗೆ ಸಾಗುವ, ಆವೇಗ ಉಂಟುಮಾಡುವ ಪ್ರತ್ಯಕ್ಷ ಸಂಗೀತ ಪ್ರಸ್ತುತಿಗಳನ್ನು ಉಣಬಡಿಸುವುದಕ್ಕೆ ಅವನು ಹೆಸರುವಾಸಿಯಾಗಿದ್ದಾನೆ. ಆರಂಭಿಕ ದಿನಗಳಲ್ಲಿ ಇದು ಕೆಲವೊಮ್ಮೆ 4 ಅಥವಾ 5 ಗಂಟೆಗಳವರೆಗೂ ಸಾಗುತ್ತಿತ್ತು. ಒಟ್ಟು ಗಳಿಕೆಗಳ ವಿಚಾರದಲ್ಲಿ ಹೇಳುವುದಾದರೆ, ಸ್ಪ್ರಿಂಗ್‌ಸ್ಟೀನ್‌ ಏನಿಲ್ಲವೆಂದರೂ ಸುಮಾರು 1.6 ಶತಕೋಟಿ $ನಷ್ಟು ಹಣಗಳಿಸಿದ್ದಾನೆ; ಇದರಿಂದಾಗಿ ಅವನು ಸಂಗೀತ ಪ್ರಪಂಚದ ಈ ಪ್ರಕಾರದಲ್ಲಿ ಅತ್ಯಂತ ಹೆಚ್ಚಿನ ಗಳಿಕೆಯನ್ನು ಮಾಡಿರುವ ಸಂಗೀತಕುಶಲ ಪ್ರದರ್ಶನಕಾರ ಎಂಬ ಕೀರ್ತಿಗೆ ಪಾತ್ರನಾಗಿದ್ದು, ಈ ವಲಯದಲ್ಲಿನ ಮೊದಲೆರಡು ಸ್ಥಾನಗಳು U2 ಮತ್ತು ದಿ ರೋಲಿಂಗ್‌ ಸ್ಟೋನ್ಸ್‌ಗೆ ದಕ್ಕಿವೆ. ಸಂಗೀತ ಪ್ರಪಂಚದಲ್ಲಿನ 80ರ ದಶಕದ ತಾರೆಗಳ ಪೈಕಿ, ಅಧಿಕವಾಗಿ ಮಾರಾಟವಾಗುವ ಸಂಗೀತಗಾರರ ಕೃತಿಗಳಲ್ಲಿ ಅವನ ಕೃತಿಗಳು ಈಗಲೂ ಒಂದೆನಿಸಿಕೊಂಡಿವೆ. ಅವನ ಅತ್ಯಂತ ಯಶಸ್ವೀ ಸ್ಟುಡಿಯೋ ಗೀತಸಂಪುಟಗಳಾದ, ಬಾರ್ನ್‌ ಟು ರನ್‌ ಮತ್ತು ಬಾರ್ನ್‌ ಇನ್‌ ದಿ U.S.A. ಇವು, ಅಮೆರಿಕಾದಲ್ಲಿನ ದೈನಂದಿನ ಜೀವನದ ಹೋರಾಟಗಳಲ್ಲಿನ ಔನ್ನತ್ಯವನ್ನು ಕಂಡುಕೊಳ್ಳುವುದಕ್ಕೆ ಸಂಬಂಧಿಸಿದ ಅವನ ಅಭಿರುಚಿಯನ್ನು ಪಡಿಮೂಡಿಸುತ್ತವೆ. ಬಾರ್ನ್‌ ಇನ್‌ ದಿ U.S.A. ಗೀತಸಂಪುಟವು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವ್ಯಾಪ್ತಿಯೊಳಗೆ ಅತೀವವಾಗಿ ಗುರುತಿಸಲ್ಪಟ್ಟ 1980ರ ದಶಕದ ಕಲಾವಿದರ ಪೈಕಿ ಒಬ್ಬನೆಂಬ ಕೀರ್ತಿಯನ್ನು ಅವನಿಗೆ ತಂದಿತ್ತಿತು. ಓರ್ವ ಡೆಮೋಕ್ರಾಟ್‌ (ಪ್ರಜಾಪ್ರಭುತ್ವವಾದಿ) ಆಗಿದ್ದುಕೊಂಡು, ಸೆನೆಟ್‌ ಸದಸ್ಯ ಜಾನ್‌ ಕೆರ್ರಿ ಮತ್ತು ಅಧ್ಯಕ್ಷ ಬರಾಕ್‌ ಒಬಾಮಾರವರ ಅಧ್ಯಕ್ಷೀಯ ಪ್ರಚಾರಾಂದೋಲನಗಳಿಗೆ ಸಂಬಂಧಿಸಿದಂತೆ ಅವನು ನೀಡಿದ ಬೆಂಬಲದಿಂದಾಗಿ, ಅಮೆರಿಕಾದ ಆಧುನಿಕ ಉದಾರವಾದದೊಂದಿಗೆ ಸ್ಪ್ರಿಂಗ್‌ಸ್ಟೀನ್‌ ಮತ್ತು ಅವನ ಸಂಗೀತವು ಗುರುತಿಸಲ್ಪಡುವಂತಾಯಿತು. ನ್ಯೂಜರ್ಸಿಯಲ್ಲಿ ಮತ್ತು ಇನ್ನೂ ಅನೇಕ ಸ್ಥಳಗಳಲ್ಲಿನ ಬಗೆಬಗೆಯ ಪರಿಹಾರ ಕಾರ್ಯಗಳು ಮತ್ತು ಮರುನಿರ್ಮಾಣ ಪ್ರಯತ್ನಗಳಿಗೆ ಸಂಬಂಧಿಸಿದಂತೆ ಅವನು ನೀಡುತ್ತಿರುವ ಬೆಂಬಲಗಳಿಂದಾಗಿಯೂ ಅವನು ಗುರುತಿಸಲ್ಪಟ್ಟಿದ್ದಾನೆ. ಅಷ್ಟೇ ಅಲ್ಲ, 2001ರಲ್ಲಿ ಸಂಭವಿಸಿದ ಸೆಪ್ಟೆಂಬರ್‌‌ 11ರ ದಾಳಿಗಳಿಗೆ ತನ್ನ ಪ್ರತಿಕ್ರಿಯೆಯಾಗಿ, ಅದನ್ನು ಪ್ರತಿಬಿಂಬಿಸಲು ಆತ ಹೊರತಂದ ದಿ ರೈಸಿಂಗ್‌ ಎಂಬ ಗೀತಸಂಪುಟದಿಂದಲೂ ಅವನು ಗುರುತಿಸಲ್ಪಟ್ಟಿದ್ದಾನೆ.

ತನ್ನ ಕೃತಿಗಳಿಗೆ ಸಂಬಂಧಿಸಿದಂತೆ ಆತ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದು, ಇಪ್ಪತ್ತು ಗ್ರಾಮಿ ಪ್ರಶಸ್ತಿಗಳು, ಎರಡು ಗೋಲ್ಡನ್‌ ಗ್ಲೋಬ್‌ಗಳು ಮತ್ತು ಒಂದು ಅಕಾಡೆಮಿ ಪ್ರಶಸ್ತಿ ಅವುಗಳಲ್ಲಿ ಸೇರಿವೆ; ಇದು ಇಷ್ಟಕ್ಕೇ ನಿಲ್ಲದೇ, ಜಾಗತಿಕ ಮಟ್ಟದಲ್ಲಿ ಒಂದು ಬಲವಾದ ಅಭಿಮಾನಿ ನೆಲೆಯನ್ನು ಹೊಂದುವಲ್ಲಿನ ತನ್ನ ಪಯಣವನ್ನು ಅವನು ಮುಂದುವರಿಸಿದ್ದಾನೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಆತ 65 ದಶಲಕ್ಷಕ್ಕೂ ಹೆಚ್ಚಿನ ಗೀತಸಂಪುಟಗಳನ್ನು ಮಾರಾಟ ಮಾಡಿದ್ದರೆ, ವಿಶ್ವಾದ್ಯಂತ ಈ ಪ್ರಮಾಣವು 120 ದಶಲಕ್ಷವನ್ನು ಮುಟ್ಟಿದೆ. 2009ರಲ್ಲಿ ಆತ ಕೆನಡಿ ಸೆಂಟರ್‌ ಪುರಸ್ಕಾರಗಳಿಂದ ಪುರಸ್ಕೃತನಾದ ಮತ್ತು ಅದೇ ವರ್ಷದಲ್ಲಿ ಫೋರ್ಬ್ಸ್‌‌ ಪತ್ರಿಕೆಯು ತನ್ನ 'ದಿ ಸೆಲೆಬ್ರಿಟಿ 100' ಎಂಬ ಪಟ್ಟಿಯಲ್ಲಿ ಅವನಿಗೆ 6ನೇ ಸ್ಥಾನವನ್ನು ನೀಡಿತು.

ಜೀವನ ಮತ್ತು ವೃತ್ತಿಜೀವನ

1949–1972: ಆರಂಭಿಕ ವರ್ಷಗಳು

ನ್ಯೂಜರ್ಸಿಯ ಲಾಂಗ್‌ ಬ್ರಾಂಚ್‌ ಎಂಬಲ್ಲಿ ಸ್ಪ್ರಿಂಗ್‌ಸ್ಟೀನ್‌ ಜನಿಸಿದ. ಫ್ರೀಹೋಲ್ಡ್‌ ಬರೋ ಎಂಬಲ್ಲಿ ತನ್ನ ಬಾಲ್ಯ ಮತ್ತು ಪ್ರೌಢಶಾಲೆಯ ವರ್ಷಗಳನ್ನು ಆತ ಕಳೆದ. ಫ್ರೀಹೋಲ್ಡ್‌ ಬರೋದಲ್ಲಿನ ಈಸ್ಟ್‌ ಸ್ಟ್ರೀಟ್‌ ವಾಸಿಸಿದ್ದ ಅವನು ಫ್ರೀಹೋಲ್ಡ್‌ ಬರೋ ಪ್ರೌಢಶಾಲೆಗೆ ಸೇರಿಕೊಂಡ. ಅವನ ತಂದೆಯಾದ ಡೋಗ್ಲಸ್‌ ಫ್ರೆಡೆರಿಕ್‌ ಸ್ಪ್ರಿಂಗ್‌ಸ್ಟೀನ್‌, ಡಚ್‌ ಮತ್ತು ಐರಿಷ್‌ ವಂಶಪರಂಪರೆಗೆ ಸೇರಿದವನಾಗಿದ್ದ; ಅವನು ಕೈಗೊಂಡ ಅನೇಕ ಉದ್ಯೋಗಗಳ ಪೈಕಿ, ಅವನು ಓರ್ವ ಬಸ್‌ ಚಾಲಕನಾಗಿದ್ದುದೂ ಸೇರಿತ್ತು; ಅವನು ಹೊಂದಿದ್ದ ಮನೆತನದ ಹೆಸರು, ಸ್ಟೆಪಿಂಗ್‌ ಸ್ಟೋನ್‌ ಎಂಬುದಕ್ಕಾಗಿರುವ ಡಚ್‌ ಹೆಸರಾಗಿದೆ. ಅವನ ತಾಯಿಯಾದ ಅಡೆಲೆ ಆನ್‌ (ಜನ್ಮನಾಮ ಝೆರಿಲ್ಲಿ), ಓರ್ವ ಕಾನೂನು ಕಾರ್ಯದರ್ಶಿಯಾಗಿದ್ದಳು ಮತ್ತು ಇಟಲಿಯ ವಂಶಪರಂಪರೆಗೆ ಸೇರಿದವಳಾಗಿದ್ದಳು. ಒಟ್ಟಾರೆಯಾಗಿ ಹೇಳುವುದಾದರೆ, ಅವನ ಪರಂಪರೆಯು 50%ನಷ್ಟು ಇಟಲಿಯದ್ದು, 37%ನಷ್ಟು ಐರಿಷ್‌ ಮತ್ತು 13%ನಷ್ಟು ಡಚ್ ಆಗಿತ್ತು‌. ಅವನ ತಾಯಿಕಡೆಯ ಅಜ್ಜನು, ನೇಪಲ್ಸ್‌‌‌ಗೆ ಸಮೀಪವಿರುವ ಒಂದು ನಗರವಾದ ವಿಕೋ ಈಕ್ವೆನ್ಸ್‌ ಎಂಬಲ್ಲಿ ಜನಿಸಿದ. ವರ್ಜೀನಿಯಾ ಮತ್ತು ಪಮೇಲಾ ಎಂಬ ಹೆಸರಿನ ಇಬ್ಬರು ಕಿರಿಯ ಸೋದರಿಯರನ್ನು ಅವನು ಹೊಂದಿದ್ದಾನೆ. ಪಮೇಲಾ ಒಂದು ಸಂಕ್ಷಿಪ್ತ ಅವಧಿಯವರೆಗೆ ಚಲನಚಿತ್ರದ ವೃತ್ತಿಜೀವನದಲ್ಲಿ ತೊಡಗಿಸಿಕೊಂಡಿದ್ದಳು; ಆದರೆ ಪೂರ್ಣಕಾಲಿಕವಾಗಿ ಸ್ಥಿರ ಛಾಯಾಗ್ರಹಣವನ್ನು ಮುಂದುವರಿಸುವ ದೃಷ್ಟಿಯಿಂದ ಅವಳು ನಟನಾವೃತ್ತಿಯನ್ನು ಕೈಬಿಟ್ಟಳು; ಹ್ಯೂಮನ್‌ ಟಚ್‌ ಮತ್ತು ಲಕಿ ಟೌನ್‌ ಗೀತಸಂಪುಟಗಳಿಗೆ ಸಂಬಂಧಿಸಿದಂತೆ ಅವಳು ಛಾಯಾಚಿತ್ರಗಳನ್ನು ತೆಗೆದಳು.

ಓರ್ವ ರೋಮನ್‌ ಕ್ಯಾಥಲಿಕ್‌ ಆಗಿ ಬೆಳೆದ ಸ್ಪ್ರಿಂಗ್‌ಸ್ಟೀನ್‌, ಫ್ರೀಹೋಲ್ಡ್‌ ಬರೋದಲ್ಲಿನ ಸೇಂಟ್‌ ರೋಸ್‌ ಆಫ್‌ ಲಿಮಾ ಕ್ಯಾಥಲಿಕ್‌ ಶಾಲೆಯನ್ನು ಸೇರಿಕೊಂಡ; ಇಲ್ಲಿ ಅವನಿಗೆ ಕ್ರೈಸ್ತ ಸನ್ಯಾಸಿನಿಯರು ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಹೊಂದಾಣಿಕೆ ಕಂಡುಬರಲಿಲ್ಲ. ಆದರೂ ಸಹ, ನಂತರದಲ್ಲಿ ಅವನ ಸಂಗೀತದ ಬಹುಭಾಗವು ಒಂದು ಆಳವಾದ ವಿಶಿಷ್ಟ ಕ್ಯಾಥಲಿಕ್‌ ಲಕ್ಷಣವನ್ನು ಪ್ರತಿಬಿಂಬಿಸುತ್ತದೆ ಮತ್ತು ಅದು ಅನೇಕ ರಾಕ್‌‌-ಪ್ರಭಾವಿತ, ಸಾಂಪ್ರದಾಯಿಕ ಐರಿಷ್‌-ಕ್ಯಾಥಲಿಕ್‌ ಸ್ತುತಿಗೀತೆಗಳನ್ನು ಒಳಗೊಂಡಿದೆ.

ಆತ ಒಂಬತ್ತನೇ ತರಗತಿಯಲ್ಲಿರುವಾಗ, ಸಾರ್ವಜನಿಕ ಫ್ರೀಹೋಲ್ಡ್‌ ರೀಜನಲ್‌ ಪ್ರೌಢಶಾಲೆಗೆ ವರ್ಗಾವಣೆಗೊಂಡನಾದರೂ, ಅಲ್ಲಿಯೂ ಸಹ ಅವನಿಗೆ ಹೊಂದಿಕೊಳ್ಳಲು ಆಗಲಿಲ್ಲ. ಹಳೆಯ ಶಿಕ್ಷಕರು ಹೇಳುವ ಪ್ರಕಾರ, ಅವನೊಬ್ಬ "ಏಕಾಂತಜೀವಿಯಾಗಿದ್ದು, ತನ್ನ ಗಿಟಾರ್ ನುಡಿಸುವುದನ್ನು ಬಿಟ್ಟರೆ ಹೆಚ್ಚಿನದೇನನ್ನೂ ಬಯಸುತ್ತಿರಲಿಲ್ಲ." ಆತ ಪ್ರೌಢಶಾಲಾ ಶಿಕ್ಷಣವನ್ನು ಸಂಪೂರ್ಣಗೊಳಿಸಿದನಾದರೂ, ಅವನಿಗೆಷ್ಟು ಮುಜುಗರವಾಗಿತ್ತೆಂದರೆ ತನ್ನದೇ ಪದವಿ ಸ್ವೀಕಾರ ಸಮಾರಂಭವನ್ನು ಅವನು ತಪ್ಪಿಸಿಕೊಂಡ. ಓಷನ್‌ ಕೌಂಟಿ ಕಾಲೇಜನ್ನು ಸೇರಿಕೊಂಡು ಸಂಕ್ಷಿಪ್ತ ಅವಧಿಗೆ ಅವನು ತರಗತಿಗಳಿಗೆ ಹಾಜರಾದನಾದರೂ, ನಂತರ ಅದನ್ನೂ ಬಿಟ್ಟ.

ದಿ ಎಡ್‌ ಸಲಿವಾನ್‌ ಷೋ ಕಾರ್ಯಕ್ರಮದಲ್ಲಿ ಎಲ್ವಿಸ್‌ ಪ್ರೆಸ್ಲೆಯನ್ನು ನೋಡಿದ ನಂತರ, ತನ್ನ ಏಳನೇ ವಯಸ್ಸಿನಲ್ಲಿ ಸಂಗೀತವನ್ನು ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಳ್ಳಲು ಸ್ಪ್ರಿಂಗ್‌ಸ್ಟೀನ್‌ಗೆ ಪ್ರೇರೇಪಣೆ ಸಿಕ್ಕಿದಂತಾಯಿತು. ತನ್ನ 13ನೇ ವಯಸ್ಸಿನಲ್ಲಿ, 18$ ಹಣವನ್ನು ಪಾವತಿಸಿ ಆತ ತನ್ನ ಮೊದಲ ಗಿಟಾರ್‌ನ್ನು ಖರೀದಿಸಿದ; ನಂತರದಲ್ಲಿ, 16-ವರ್ಷ-ವಯಸ್ಸಿನ ಸ್ಪ್ರಿಂಗ್‌ಸ್ಟೀನ್‌ಗೆ ಒಂದು 60$ ಮುಖಬೆಲೆಯ ಕೆಂಟ್‌ ಗಿಟಾರ್‌‌ ಖರೀದಿಸಲು ಅವನ ತಾಯಿ ಸಾಲವನ್ನು ಮಾಡಿದಳು; ಈ ಘಟನೆಯನ್ನು ಆತ ತನ್ನ "ದಿ ವಿಶ್‌‌" ಎಂಬ ಹಾಡಿನಲ್ಲಿ ನಂತರ ಸ್ಮರಿಸಿಕೊಂಡಿದ್ದಾನೆ.

1965ರಲ್ಲಿ ಟೆಕ್ಸ್‌‌ ಮತ್ತು ಮೇರಿಯನ್‌ ವಿನ್ಯಾರ್ಡ್‌‌ರ ನೆಲೆಗೆ ಆತ ತೆರಳಿದ; ಪಟ್ಟಣದಲ್ಲಿನ ಕಿರಿಯ ವಾದ್ಯವೃಂದಗಳನ್ನು ಅವರು ಪ್ರಾಯೋಜಿಸುತ್ತಿದ್ದರು. ಆತ ಪ್ರಮುಖ ಗಿಟಾರ್‌‌‌ ವಾದಕನಾಗುವಲ್ಲಿ ಮತ್ತು ತರುವಾಯದಲ್ಲಿ ದಿ ಕ್ಯಾಸ್ಟೈಲ್ಸ್‌ನ ಪ್ರಮುಖ ಗಾಯಕನಾಗುವಲ್ಲಿ ಅವರು ಅವನಿಗೆ ನೆರವಾದರು. ಬ್ರಿಕ್‌ ಟೌನ್‌ಷಿಪ್‌‌ನಲ್ಲಿನ ಒಂದು ಸಾರ್ವಜನಿಕ ಧ್ವನಿಮುದ್ರಣ ಸ್ಟುಡಿಯೋದಲ್ಲಿ ಎರಡು ಮೂಲ ಹಾಡುಗಳನ್ನು ದಿ ಕ್ಯಾಸ್ಟೈಲ್ಸ್‌ ಧ್ವನಿಮುದ್ರಿಸಿಕೊಂಡಿತು ಮತ್ತು ಕೆಫೆ ವಾ? ಎಂಬ ತಾಣವೂ ಸೇರಿದಂತೆ ಬಗೆಬಗೆಯ ತಾಣಗಳಲ್ಲಿ ಅವನ್ನು ನುಡಿಸಿತು. ಕೆಫೆ ವಾ? ತಾಣವು ಗ್ರೀನ್‌ವಿಚ್‌ ಹಳ್ಳಿಯಲ್ಲಿತ್ತು. ತಾನು ಇದರಲ್ಲಿ ಮಹಾನ್‌ ಸಾಧನೆಯನ್ನು ಮಾಡುವುದಾಗಿ ಕಿರಿಯ ಸ್ಪ್ರಿಂಗ್‌ಸ್ಟೀನ್‌ ಭರವಸೆ ನೀಡಿದಾಗ ಅದನ್ನು ತಾನು ನಂಬಿದುದಾಗಿ ಮೇರಿಯನ್‌ ವಿನ್ಯಾರ್ಡ್‌ ಹೇಳಿದಳು.

ಸ್ಪ್ರಿಂಗ್‌ಸ್ಟೀನ್‌ಗೆ 19 ವರ್ಷ ವಯಸ್ಸಾಗಿದ್ದಾಗ ಅವನಿಗೆ ಪ್ರವೇಶಕ್ಕಾಗಿ ಕರೆಬಂತು; ಆದರೆ ಅವನು ತನ್ನ ದೇಹದಾರ್ಢ್ಯತೆಯ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಮತ್ತು ವಿಯೆಟ್ನಾಂನಲ್ಲಿ ಸೇವೆ ಸಲ್ಲಿಸಲಿಲ್ಲ. 1984ರಲ್ಲಿ ರೋಲಿಂಗ್‌ ಸ್ಟೋನ್‌ ನಿಯತಕಾಲಿಕದಲ್ಲಿ ಬಂದ ಸಂದರ್ಶನವೊಂದರಲ್ಲಿ ಅವನು ಮಾತನಾಡುತ್ತಾ, "ನನ್ನ ದೇಹದಾರ್ಢ್ಯತೆಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಲೆಂದು ನಾನು ಬಸ್‌ ಹತ್ತಿದಾಗ, ನಾನು ಇದರಲ್ಲಿ ಉತ್ತೀರ್ಣನಾಗುವುದಿಲ್ಲ ಎಂಬ ಒಂದೇ ಆಲೋಚನೆ ನನ್ನಲ್ಲಿ ಬಂದಿತ್ತು" ಎಂಬುದಾಗಿ ಅವನು ಹೇಳಿಕೊಂಡ. ಅವನಿಗೆ 17 ವರ್ಷಗಳಾಗಿದ್ದಾಗ, ಮೋಟಾರ್‌ ಸೈಕಲ್‌‌ ಅಪಘಾತವೊಂದರಲ್ಲಿ ಆದ ಒಂದು ಪೆಟ್ಟಿನಿಂದ ಅವನು ನರಳಿದ್ದ; ಇದರೊಂದಿಗೆ ಪ್ರವೇಶ ಸಂದರ್ಭದಲ್ಲಿನ ಅವನ "ವಿಲಕ್ಷಣವಾದ" ವರ್ತನೆಯೂ ಸೇರಿಕೊಂಡಿತು, ಮತ್ತು ಆತ ಪರೀಕ್ಷೆಗಳನ್ನು ತೆಗೆದುಕೊಳ್ಳದ ಕಾರಣದಿಂದಾಗಿ, ಅವನಿಗೆ ಕೇವಲ ಒಂದು 4F ದರ್ಜೆಯು ದೊರಕಿತು.

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
ನ್ಯೂಜರ್ಸಿಯ ಆಸ್‌ಬರಿ ಪಾರ್ಕ್‌ನಂಥ ನ್ಯೂಜರ್ಸಿ ಬೀಚ್‌ ಪಟ್ಟಣಗಳು ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ನ ಸಂಗೀತದಲ್ಲಿನ ಸಾಧಾರಣ ಜೀವನದ ವಿಷಯಗಳನ್ನು ಪ್ರೇರೇಪಿಸಿವೆ.

1960ರ ದಶಕದ ಅಂತ್ಯದಲ್ಲಿ, ಅರ್ಥ್‌‌ ಎಂದು ಕರೆಯಲ್ಪಡುವ ಒಂದು ಪವರ್‌ ಟ್ರಯೋ ಪ್ರಕಾರದಲ್ಲಿ ಸ್ಪ್ರಿಂಗ್‌ಸ್ಟೀನ್‌ ಸಂಕ್ಷಿಪ್ತವಾಗಿ ಸಂಗೀತ ಪ್ರಸ್ತುತಿಯನ್ನು ನೀಡಿದ; ನ್ಯೂಜರ್ಸಿಯಲ್ಲಿನ ಕ್ಲಬ್ಬುಗಳಲ್ಲಿ ಸಂಗೀತ ನುಡಿಸುವುದು ಇದರಲ್ಲಿ ಸೇರಿತ್ತು. ಈ ಅವಧಿಯಲ್ಲೇ ಸ್ಪ್ರಿಂಗ್‌ಸ್ಟೀನ್‌ "ದಿ ಬಾಸ್‌" ಎಂಬ ಉಪನಾಮ ಅಥವಾ ಅಡ್ಡಹೆಸರನ್ನು ಗಳಿಸಿದ; ವಾದ್ಯವೃಂದದ ರಾತ್ರಿಯ ವೇತನವನ್ನು ಸಂಗ್ರಹಿಸುವ ಹಾಗೂ ಅದನ್ನು ತನ್ನ ವಾದ್ಯವೃಂದದ ಸಹವರ್ತಿಗಳಿಗೆ ವಿತರಿಸುವ ಕೆಲಸವನ್ನು ಕೈಗೆತ್ತಿಕೊಂಡಾಗ, ಅವನು ಕ್ಲಬ್ಬಿನ ಗಿಗ್‌ ಸಂಗೀತಗಳನ್ನು ಅವನು ನುಡಿಸಿದಾಗ ಅವನಿಗೆ ಈ ಉಪನಾಮವು ದೊರಕಿತು. ಬಾಸ್‌ಗಳ ಕುರಿತಾಗಿ ಸ್ಪ್ರಿಂಗ್‌ಸ್ಟೀನ್‌ಗೆ ಇಷ್ಟವಿಲ್ಲದಿದ್ದುದರಿಂದ, ಈ ಉಪನಾಮದ ಬಗ್ಗೆ ಅವನಿಗೆ ಅಷ್ಟೊಂದು ಮೆಚ್ಚುಗೆಯಿರಲಿಲ್ಲ; ಆದರೂ ಸಹ ಒಂದು ಮೌನಸೂಚಿತ ಒಪ್ಪಿಗೆಯನ್ನು ಇದಕ್ಕೆ ಕೊಟ್ಟಂತೆ ತೋರುತ್ತದೆ. ಇತ್ತೀಚಿನ ಅನೇಕ ಸಂಗೀತ ಕಚೇರಿಗಳಲ್ಲಿ, ಬ್ಯಾನರ್‌‌ಗಳು, ಪರವಾನಗಿ ಪಟ್ಟಿಗಳ ಮೇಲೆ ಪ್ರೇಕ್ಷಕರು ಬಗೆಬಗೆಯ ಸಂಕೇತಗಳನ್ನು ಮಾಡಿಕೊಂಡು ಬಂದಿರುವುದು ಮತ್ತು "ಬಾಸ್‌ ಟೈಂ" ಎಂಬುದಾಗಿ ಕೂಗುತ್ತಾ ಹೋಗುವುದು ಕಂಡುಬರುತ್ತದೆ. ಹಿಂದೆ ಅವನಿಗೆ "ಡಾಕ್ಟರ್‌‌" ಎಂಬ ಉಪನಾಮವಿತ್ತು. 1969ರಿಂದ ಮೊದಲ್ಗೊಂಡು 1971ರ ಆರಂಭದವರೆಗೆ, ಸ್ಟೀಲ್‌ ಮಿಲ್‌‌ ಜೊತೆಯಲ್ಲಿ ಸ್ಪ್ರಿಂಗ್‌ಸ್ಟೀನ್‌ ಸಂಗೀತ ಪ್ರಸ್ತುತಿಗಳನ್ನು ನೀಡಿದ; ಡ್ಯಾನಿ ಫೆಡೆರಿಸಿ, ವಿನಿ ಲೋಪೆಜ್‌, ವಿನ್ನೀ ರೋಸ್ಲಿನ್‌ ಹಾಗೂ ನಂತರದಲ್ಲಿ ಸ್ಟೀವ್‌ ವ್ಯಾನ್‌ ಝಾಂಡ್ಟ್‌‌ ಮತ್ತು ರಾಬ್ಬಿನ್‌ ಥಾಂಪ್ಸನ್‌‌ ಮೊದಲಾದವರೂ ಸಹ ಈ ತಂಡದಲ್ಲಿದ್ದರು. ಅಟ್ಲಾಂಟಿಕ್‌-ಮಧ್ಯದ ಕಾಲೇಜ್‌ ಮಂಡಲ ಮಾತ್ರವೇ ಅಲ್ಲದೇ, ಸಂಕ್ಷಿಪ್ತವಾಗಿ ಕ್ಯಾಲಿಫೋರ್ನಿಯಾದಲ್ಲಿಯೂ ಸಹ ಅವರು ಸಂಗೀತ ನುಡಿಸುತ್ತಲೇ ಹೋದರು. 1970ರ ಜನವರಿಯಲ್ಲಿ, ಸ್ಯಾನ್‌ ಫ್ರಾನ್ಸಿಸ್ಕೋ ಎಕ್ಸಾಮಿನರ್‌‌‌ ನ ಚಿರಪರಿಚಿತ ಸಂಗೀತ ವಿಮರ್ಶಕನಾದ ಫಿಲಿಪ್‌ ಎಲ್‌ವುಡ್‌ ಎಂಬಾತ, ಸ್ಟೀಲ್‌ ಮಿಲ್‌‌ ಕುರಿತಾದ ತನ್ನ ಉಜ್ಜ್ವಲವಾದ ನಿರ್ಧಾರಣೆಯಲ್ಲಿ ಸ್ಪ್ರಿಂಗ್‌ಸ್ಟೀನ್‌ ಕುರಿತಾಗಿ ವಿಶ್ವಾಸಾರ್ಹತೆಯನ್ನು ತೋರಿಸಿದ: "ಸಂಪೂರ್ಣವಾಗಿ ಅಪರಿಚಿತವಾಗಿರುವ ಪ್ರತಿಭೆಯೊಂದರಿಂದ ನಾನು ಹಿಂದೆಂದೂ ಇಷ್ಟೊಂದು ಮೂಕವಿಸ್ಮಿತನಾಗಿರಲಿಲ್ಲ" ಎಂಬುದು ಅವನು ನೀಡಿದ ಅಭಿಪ್ರಾಯವಾಗಿತ್ತು. ಎಲ್‌ವುಡ್‌ ತನ್ನ ಹೊಗಳಿಕೆಯನ್ನು ಮುಂದುವರಿಸುತ್ತಾ, ಸಂಗೀತ ತಂಡದವರ "ಒಂದಾಗಿಸುವ ಸುಶ್ರಾವ್ಯತೆ"ಯ ಕುರಿತು ಮೆಚ್ಚುಗೆ ಸೂಚಿಸಿದ ಮತ್ತು ಅದರಲ್ಲೂ ನಿರ್ದಿಷ್ಟವಾಗಿ, "ಓರ್ವ ಅತ್ಯಂತ ಪ್ರಭಾವಶಾಲಿ ಸಂಯೋಜಕ" ಎಂದು ಹೇಳುವ ಮೂಲಕ ಸ್ಪ್ರಿಂಗ್‌ಸ್ಟೀನ್‌ನನ್ನು ಅವನು ಆಯ್ದು ತೆಗೆದ. ಇದೇ ಅವಧಿಯಲ್ಲಿ, ಆಸ್‌ಬರಿ ಪಾರ್ಕ್‌‌‌ನಲ್ಲಿನ ಸಣ್ಣ ಕ್ಲಬ್ಬುಗಳಲ್ಲಿಯೂ ಸಹ ಸ್ಪ್ರಿಂಗ್‌ಸ್ಟೀನ್‌ ನಿಯತವಾಗಿ ಸಂಗೀತ ಪ್ರಸ್ತುತಿಗಳನ್ನು ನೀಡಿದ ಮತ್ತು ಜೆರ್ಸಿ ಷೋರ್‌ ಉದ್ದಕ್ಕೂ ಪ್ರಸ್ತುತಿಗಳನ್ನು ನೀಡುವ ಮೂಲಕ ಒಂದು ಅಭಿಮಾನಿ ಬಳಗವನ್ನು ಶೀಘ್ರವಾಗಿ ಸಂಪಾದಿಸಿದ. ಒಂದು ಅನನ್ಯವಾದ ಮತ್ತು ಅಪ್ಪಟವಾದ, ಸಂಗೀತಾತ್ಮಕ ಮತ್ತು ಭಾವಗೀತಾತ್ಮಕ ಶೈಲಿಯನ್ನು ರೂಪಿಸಿಕೊಳ್ಳಲು ಸ್ಪ್ರಿಂಗ್‌ಸ್ಟೀನ್‌ ಬಯಸಿದ್ದರಿಂದಾಗಿ, ಮುಂದಿನ ಎರಡು ವರ್ಷಗಳಲ್ಲಿ ಇತರ ಪ್ರದರ್ಶನ ತಂಡಗಳೂ ಅನುಸರಿಸಿಕೊಂಡು ಬಂದವು. ಅವುಗಳೆಂದರೆ: ಡಾ. ಜೂಮ್‌ & ದಿ ಸೋನಿಕ್‌ ಬೂಮ್‌ (1971ರ ಆರಂಭಿಕ–ಮಧ್ಯಭಾಗ), ಸನ್‌ಡಾನ್ಸ್‌ ಬ್ಲೂಸ್‌ ಬ್ಯಾಂಡ್‌ (1971ರ ಮಧ್ಯಭಾಗ), ಮತ್ತು ದಿ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಬ್ಯಾಂಡ್‌ (1971ರ ಮಧ್ಯಭಾಗದಿಂದ–1972ರ ಮಧ್ಯಭಾಗದವರೆಗೆ). ಡೇವಿಡ್‌ ಸ್ಯಾನ್ಷಿಯಸ್‌ ಎಂಬ ಪಿಯಾನೋ ವಾದಕನ ಸೇರ್ಪಡೆಯೊಂದಿಗೆ, ಕೆಲಕಾಲದ ನಂತರ E ಸ್ಟ್ರೀಟ್‌ ಬ್ಯಾಂಡ್‌ ಎಂದು ಹೆಸರಾದ ತಂಡವೊಂದರ ಮುಖ್ಯಭಾಗವು ರೂಪುಗೊಂಡಿತು; "ದಿ ಜೂಮೆಟ್ಸ್‌"ನಂಥ ("ಡಾ. ಜೂಮ್‌"ಗೆ ಸಂಬಂಧಿಸಿದ ಹಾಡುಗಾರರಿಗೆ ಪೂರಕವಾಗಿರುತ್ತಿದ್ದ ಮಹಿಳೆಯರ ಒಂದು ಗುಂಪು) ಕಹಳೆ ವಿಭಾಗಗಳು ಹಾಗೂ ರಾಗಮಾಲಿಕೆಯನ್ನು ನುಡಿಸುತ್ತಿದ್ದ ಸೌತ್‌ಸೈಡ್‌ ಜಾನಿ ಲಿಯಾನ್‌ ರೀತಿಯ ಕೆಲವೊಂದು ಸಾಂದರ್ಭಿಕ ತಾತ್ಕಾಲಿಕ ಸೇರ್ಪಡೆಗಳನ್ನೂ ಇದು ಹೊಂದಿತ್ತು. ಈ ಅವಧಿಯಲ್ಲಿ ಪರಿಶೋಧಿಸಲ್ಪಟ್ಟ ಸಂಗೀತಾತ್ಮಕ ಪ್ರಕಾರಗಳಲ್ಲಿ ಬ್ಲೂಸ್‌, R&B, ಜಾಝ್‌, ಚರ್ಚ್‌ ಸಂಗೀತ, ಆರಂಭಿಕ ರಾಕ್‌ 'ಎನ್‌' ರೋಲ್‌, ಮತ್ತು ಸೌಲ್ ಮೊದಲಾದವು ಸೇರಿದ್ದವು. ಅವನ ಭವಿಷ್ಯದ ಧ್ವನಿಮುದ್ರಿಕಾ ಕಂಪನಿಯು ತನ್ನ ಆರಂಭಿಕ ಪ್ರಚಾರ ಜಾಹೀರಾತುಗಳಲ್ಲಿ ವಿವರಿಸಿದಂತೆ, "ಸಂಪೂರ್ಣ ಗೀತಸಂಪುಟಗಳಲ್ಲಿ ಇತರ ಕಲಾವಿದರು ಮಾಡಿದ್ದಕ್ಕಿಂತ ಮಿಗಿಲಾದ ರೀತಿಯಲ್ಲಿ ಕೆಲವೊಂದು ಪ್ರತ್ಯೇಕ ಹಾಡುಗಳಲ್ಲಿ ಹೆಚ್ಚು ಪದಗಳನ್ನು ಬಳಸಿಕೊಂಡು" ಹಾಡು ಬರೆಯುವ ಅವನ ಸಮೃದ್ಧ ಸಾಮರ್ಥ್ಯವು, ಅವನ ಜೀವನದ ಗತಿಯನ್ನು ಬದಲಿಸುವುದಕ್ಕೆ ಕಾರಣವಾಗಲಿದ್ದ ಹಲವರ ಗಮನಕ್ಕೆ ಅವನ ಕುಶಲತೆಯ ಪರಿಚಯವನ್ನು ಮಾಡಿಕೊಡುವಲ್ಲಿ ಸಫಲವಾದವು: ಹೊಸ ವ್ಯವಸ್ಥಾಪಕರಾದ ಮೈಕ್‌ ಆಪ್ಪೆಲ್ ಮತ್ತು ಜಿಮ್‌‌ ಕ್ರೆಟೆಕೋಸ್‌, ಮತ್ತು ಪ್ರಸಿದ್ಧವಾದ ಕೊಲಂಬಿಯಾ ರೆಕಾರ್ಡ್ಸ್‌‌‌‌ನ ಪ್ರತಿಭಾ ಶೋಧಕನಾದ ಜಾನ್‌ ಹ್ಯಾಮಂಡ್‌ ಅಂಥವರಲ್ಲಿ ಸೇರಿದ್ದರು; ಜಾನ್‌ ಹ್ಯಾಮಂಡ್‌ನಂತೂ ಆಪ್ಪೆಲ್‌ನ ಒತ್ತಡದ ಹಿನ್ನೆಲೆಯಲ್ಲಿ 1972ರ ಮೇ ತಿಂಗಳಲ್ಲಿ ಸ್ಪ್ರಿಂಗ್‌ಸ್ಟೀನ್‌ನ ಧ್ವನಿಪರೀಕ್ಷೆಯನ್ನು ಕೈಗೊಂಡ.

ಸ್ಪ್ರಿಂಗ್‌ಸ್ಟೀನ್‌ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದ ನಂತರವೂ, ಅವನ ನ್ಯೂಜರ್ಸಿ ಮೂಲಗಳು ಅವನ ಸಂಗೀತದ ಮೂಲಕ ತೋರಿಸಲ್ಪಟ್ಟವು, ಮತ್ತು ಆತ ತನ್ನ ಪ್ರತ್ಯಕ್ಷ ಪ್ರದರ್ಶನಗಳಲ್ಲಿ "ನ್ಯೂಜರ್ಸಿ ಎಂಬ ಮಹಾನ್‌ ಸಂಸ್ಥಾನ" ಎಂಬುದಾಗಿ ತನ್ನ ಮೂಲವನ್ನು ಅನೇಕವೇಳೆ ಹೊಗಳುತ್ತಿದ್ದ. ಸ್ಥಳೀಯ ಮಟ್ಟದಲ್ಲಿ ತಾನು ಹೊಂದಿದ್ದ ವ್ಯಾಪಕ ಆಕರ್ಷಣೆಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ, ನ್ಯೂಜರ್ಸಿ ಮತ್ತು ಫಿಲಡೆಲ್ಫಿಯಾದ ಪ್ರಮುಖ ತಾಣಗಳಲ್ಲಿ ಆತ ವಾಡಿಕೆಯಂತೆ ತನ್ನ ಅನುಕ್ರಮಿಕ ಸಂಗೀತ ರಾತ್ರಿಗಳನ್ನು ಪ್ರಸ್ತುತಪಡಿಸಿದ. ಅನೇಕ ವರ್ಷಗಳವರೆಗೆ, ದಿ ಸ್ಟೋನ್‌ ಪೋನಿ ಮತ್ತು ಕಡಲತೀರದ ಇತರ ರಾತ್ರಿಕ್ಲಬ್ಬುಗಳಲ್ಲಿ ಆತ ಅನೇಕಬಾರಿ ಅನಿರೀಕ್ಷಿತವಾಗಿ ಗೋಚರಿಸಿಕೊಳ್ಳುತ್ತಿದ್ದ ಮತ್ತು ತನ್ಮೂಲಕ ಜೆರ್ಸಿ ಷೋರ್‌ ಧ್ವನಿಯ ಅಗ್ರಗಣ್ಯ ಪ್ರತಿಪಾದಕನಾಗಿ ಆತ ಹೊರಹೊಮ್ಮಿದ.

1972–1974: ಯಶಸ್ಸಿಗೆ ಸಂಬಂಧಿಸಿದ ಆರಂಭಿಕ ಹೋರಾಟ

ಜಾನ್‌ ಹ್ಯಾಮಂಡ್‌ ನೆರವಿನೊಂದಿಗೆ 1972ರಲ್ಲಿ ಕೊಲಂಬಿಯಾ ರೆಕಾರ್ಡ್ಸ್‌ ಜೊತೆಗಿನ ಧ್ವನಿಮುದ್ರಣ ವ್ಯವಹಾರವೊಂದಕ್ಕೆ ಸ್ಪ್ರಿಂಗ್‌ಸ್ಟೀನ್‌ ಸಹಿಹಾಕಿದ; ಇದಕ್ಕೂ ಒಂದು ದಶಕದಷ್ಟು ಮುಂಚಿತವಾಗಿ ಇದೇ ಕಂಪನಿಯೊಂದಿಗೆ ಬಾಬ್‌ ಡೈಲನ್‌ ಸಹಿಹಾಕುವಲ್ಲಿ ಜಾನ್‌ ಹ್ಯಾಮಂಡ್ ಪ್ರಧಾನಪಾತ್ರವನ್ನು ವಹಿಸಿದ್ದ. ಸ್ಪ್ರಿಂಗ್‌ಸ್ಟೀನ್‌ ತನ್ನೊಂದಿಗೆ ನ್ಯೂಜರ್ಸಿ–ಮೂಲದ ತನ್ನ ಹಲವಾರು ಸಹೋದ್ಯೋಗಿಗಳನ್ನು ಸ್ಟುಡಿಯೋದೊಳಗೆ ಕರೆತಂದ; ಈ ರೀತಿಯಾಗಿ E ಸ್ಟ್ರೀಟ್‌ ಬ್ಯಾಂಡ್‌ ಎಂಬ ವಾದ್ಯವೃಂದವು ರೂಪುಗೊಂಡಿತು (ಆದರೂ ಸಹ ಇನ್ನೂ ಹಲವಾರು ವರ್ಷಗಳವರೆಗೆ ವಾದ್ಯವೃಂದಕ್ಕೆ ಸದರಿ ಹೆಸರನ್ನು ಔಪಚಾರಿಕವಾಗಿ ಇಟ್ಟಿರಲಿಲ್ಲ). ಗ್ರೀಡಿಂಗ್ಸ್‌ ಫ್ರಂ ಆಸ್‌ಬರಿ ಪಾರ್ಕ್‌, N.J. ಎಂಬ ಅವನ ಪ್ರಥಮ ಪರಿಚಯದ ಗೀತಸಂಪುಟವು 1973ರ ಜನವರಿಯಲ್ಲಿ ಬಿಡುಗಡೆಯಾಯಿತು; ಇದರ ಮಾರಾಟವು ನಿಧಾನಗತಿಯಲ್ಲಿದ್ದರೂ ಸಹ, ಅವನನ್ನು ವಿಮರ್ಶಕರ ಓರ್ವ ಅಚ್ಚುಮೆಚ್ಚಿನ ಸಂಗೀತಗಾರನನ್ನಾಗಿ ನೆಲೆಗಾಣಿಸುವಲ್ಲಿ ಅದು ಸಮರ್ಥವಾಯಿತು. "ಬ್ಲೈಂಡೆಡ್‌ ಬೈ ದಿ ಲೈಟ್‌" ಮತ್ತು "ಫಾರ್‌ ಯೂ"ನಂಥ ಧ್ವನಿಪಥಗಳಲ್ಲಿ, ಸ್ಪ್ರಿಂಗ್‌ಸ್ಟೀನ್‌ ನಿದರ್ಶನದ ಮೂಲಕ ರೂಪಿಸಿದ ಭಾವಗೀತಾತ್ಮಕ ಕಾವ್ಯಾತ್ಮಕತೆ ಮತ್ತು ಜಾನಪದ ರಾಕ್‌‌–ಮೂಲದ ಸಂಗೀತವಷ್ಟೇ ಅಲ್ಲದೇ, ಕೊಲಂಬಿಯಾ ಮತ್ತು ಹ್ಯಾಮಂಡ್‌ ಕಂಪನಿಗಳೊಂದಿಗೆ ಅವನು ಸಂಬಂಧದ ಕಾರಣದಿಂದಲೂ ವಿಮರ್ಶಕರು ಸ್ಪ್ರಿಂಗ್‌ಸ್ಟೀನ್‌ನನ್ನು ಆರಂಭದಲ್ಲಿ ಬಾಬ್‌ ಡೈಲನ್‌‌ಗೆ ಹೋಲಿಸಿದರು. 1973ರ ಫೆಬ್ರುವರಿಯಲ್ಲೇ ವೃತ್ತಪತ್ರಿಕೆಗಳ ಮಾರಾಟದ ಅಂಗಡಿಗಳಲ್ಲಿ ಲಭ್ಯವಿದ್ದ, 1973ರ ಮಾರ್ಚ್‌ ತಿಂಗಳ ಕ್ರಾಡ್ಯಾಡಿ ನಿಯತಕಾಲಿಕದಲ್ಲಿ, ಅದರ ಸಂಪಾದಕ ಪೀಟರ್‌ ನೋಬ್ಲರ್‌ ಪ್ರಕಟಿಸಿದ್ದ ಸ್ಪ್ರಿಂಗ್‌ಸ್ಟೀನ್ ಜೊತೆಗಿನ ಮೊದಲ ಸಂದರ್ಶನ/ಕಿರು ವ್ಯಕ್ತಿಚಿತ್ರದಲ್ಲಿ ಅವನ ಕುರಿತು ಬರೆಯುತ್ತಾ, "ಅವನೆಷ್ಟು ತಾಜಾತನ ಮತ್ತು ಕ್ಷಿಪ್ರಗತಿಯಲ್ಲಿ ಹಾಡುತ್ತಾನೆಂದರೆ, 'ಲೈಕ್‌ ಎ ರೋಲಿಂಗ್‌ ಸ್ಟೋನ್‌' ಗೀತೆಯನ್ನು ಕೇಳಿ ನಾನು ಓಲಾಡಿದಾಗಿನಿಂದ ಆ ರೀತಿಯ ಮತ್ತೊಂದು ಗೀತೆಯನ್ನು ನಾನು ಕೇಳಿಲ್ಲ" ಎಂದು ಅಭಿಪ್ರಾಯಪಟ್ಟ. ರಾಕ್‌‌ ಮುದ್ರಣಾಲಯದಲ್ಲಿ ಸ್ಪ್ರಿಂಗ್‌ಸ್ಟೀನ್‌ನನ್ನು ಕ್ರಾಡ್ಯಾಡಿ ನಿಯತಕಾಲಿಕವು ಬೆಳಕಿಗೆ ತಂದಿತು ಮತ್ತು ಅದು ಅವನ ಆರಂಭಿಕ ಸಮರ್ಥಕನಾಗಿತ್ತು. (1976ರ ಜೂನ್‌ನಲ್ಲಿ ನ್ಯೂಯಾರ್ಕ್‌ ನಗರದಲ್ಲಿ ನಡೆದ ಕ್ರಾಡ್ಯಾಡಿ ನಿಯತಕಾಲಿಕದ 10ನೇ ವಾರ್ಷಿಕೋತ್ಸವದ ಸಂತೋಷಕೂಟದಲ್ಲಿ ಒಂದು ಖಾಸಗಿ ಸಂಗೀತ ಪ್ರಸ್ತುತಿಯನ್ನು ನೀಡುವ ಮೂಲಕ, ಸ್ಪ್ರಿಂಗ್‌ಸ್ಟೀನ್‌ ಮತ್ತು E ಸ್ಟ್ರೀಟ್‌ ಬ್ಯಾಂಡ್‌ ಸದಸ್ಯರು ಪತ್ರಿಕೆಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.) 1975ರಲ್ಲಿ ಕ್ರೀಂ ನಿಯತಕಾಲಿಕದಲ್ಲಿ ಲೆಸ್ಟರ್‌ ಬ್ಯಾಂಗ್ಸ್‌‌ ಎಂಬ ಸಂಗೀತ ವಿಮರ್ಶಕನು ಬರೆಯುತ್ತಾ, ಸ್ಪ್ರಿಂಗ್‌ಸ್ಟೀನ್‌ನ ಮೊದಲ ಗೀತಸಂಪುಟವು ಬಿಡುಗಡೆಯಾದಾಗ "... ನಮ್ಮಲ್ಲನೇಕರು ಅದನ್ನು ತಳ್ಳಿಹಾಕಿದ್ದೆವು: ಆತ ಬಾಬ್‌ ಡೈಲನ್‌ ಮತ್ತು ವ್ಯಾನ್‌ ಮಾರಿಸನ್‌ ರೀತಿಯಲ್ಲಿ ಬರೆದಿದ್ದಾನೆ, ವ್ಯಾನ್‌ ಮಾರಿಸನ್‌ ಮತ್ತು ರಾಬೀ ರಾಬರ್ಟ್‌ಸನ್‌ ರೀತಿಯಲ್ಲಿ ಹಾಡಿದ್ದಾನೆ ಮತ್ತು ವ್ಯಾನ್‌ ಮಾರಿಸನ್‌ನ ವಾದ್ಯವೃಂದವು ಧ್ವನಿಸುವ ರೀತಿಯಲ್ಲೇ ಧ್ವನಿಸಿದ ವಾದ್ಯವೃಂದವೊಂದರ ನೇತೃತ್ವವನ್ನು ಅವನು ವಹಿಸಿದ್ದಾನೆ" ಎಂಬುದು ನಮ್ಮ ಅಭಿಪ್ರಾಯವಾಗಿತ್ತು ಎಂದು ತಿಳಿಸಿದ್ದಾನೆ. ಅದರಲ್ಲೂ ವಿಶೇಷವಾಗಿ "ಸ್ಪಿರಿಟ್‌ ಇನ್‌ ದಿ ನೈಟ್‌" ಎಂಬ ಧ್ವನಿಪಥವು ಅವನ ಮೇಲೆ ಮಾರಿಸನ್‌ನ ಪ್ರಭಾವವಿರುವುದನ್ನು ತೋರಿಸಿದರೆ, "ಲಾಸ್ಟ್‌ ಇನ್‌ ದಿ ಫ್ಲಡ್‌" ಧ್ವನಿಪಥವು ವಿಯೆಟ್ನಾಂನ ಪರಿಣತ ಯೋಧರ (ಅಥವಾ ಮಾಜಿಯೋಧರ) ಅನೇಕ ನುಡಿಚಿತ್ರಗಳ ಪೈಕಿ ಮೊದಲಿನದಾಗಿತ್ತು ಹಾಗೂ "ಗ್ರೋಯಿಂಗ್‌ ಅಪ್‌" ಧ್ವನಿಪಥವು ಹರೆಯದ ಮರುಕಳಿಸುವ ವಿಷಯದ ಕುರಿತಾದ ಅವನ ಮೊದಲ ಪ್ರಯತ್ನವಾಗಿತ್ತು ಎಂದು ಲೆಸ್ಟರ್‌ ಬ್ಯಾಂಗ್ಸ್‌ ಅಭಿಪ್ರಾಯಪಡುತ್ತಾನೆ.

1973ರ ಸೆಪ್ಟೆಂಬರ್‌‌ನಲ್ಲಿ ‌‌ದಿ ವೈಲ್ಡ್‌, ದಿ ಇನ್ನೊಸೆಂಟ್‌ & ದಿ E ಸ್ಟ್ರೀಟ್‌ ಷಟ್ಲ್ ಎಂಬ ಅವನ ಎರಡನೇ ಗೀತಸಂಪುಟವು ಬಿಡುಗಡೆಯಾಯಿತು; ಮತ್ತೊಮ್ಮೆ ಇದು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತೇ ವಿನಃ ವ್ಯಾಪಾರೀ ಯಶಸ್ಸು ಪಡೆಯುವಲ್ಲಿ ವಿಫಲಗೊಂಡಿತು. ಸ್ವರೂಪ ಮತ್ತು ವ್ಯಾಪ್ತಿಯಲ್ಲಿ ಸ್ಪ್ರಿಂಗ್‌ಸ್ಟೀನ್‌ನ ಹಾಡುಗಳು ಹೆಚ್ಚು ವೈಭವಯುತವಾಗಿ ಹೊರಹೊಮ್ಮಿದವು; ಕಡಿಮೆ ಜಾನಪದೀಯವಾಗಿರುವ, ಹೆಚ್ಚು R&B ವೈಬ್‌ ಶೈಲಿಯನ್ನು E ಸ್ಟ್ರೀಟ್‌ ಬ್ಯಾಂಡ್‌ ಒದಗಿಸಿದ್ದರಿಂದಾಗಿ ಹಾಗೂ ಹದಿಹರೆಯದಲ್ಲಿನ ಬೀದಿಜೀವನವನ್ನು ಇದರಲ್ಲಿನ ಸಾಹಿತ್ಯವು ಅನೇಕವೇಳೆ ರಂಜನೀಯವಾಗಿಸಿದ್ದರಿಂದಾಗಿ ಸ್ಪ್ರಿಂಗ್‌ಸ್ಟೀನ್‌ನ ಹಾಡುಗಳು ಈ ವೈಭವವನ್ನು ಪಡೆಯಲು ಸಾಧ್ಯವಾಯಿತು. "4ತ್‌ ಆಫ್‌ ಜುಲೈ, ಆಸ್‌ಬರಿ ಪಾರ್ಕ್‌ (ಸ್ಯಾಂಡಿ)" ಮತ್ತು "ಇನ್ಸಿಡೆಂಟ್‌ ಆನ್‌ 57ತ್‌ ಸ್ಟ್ರೀಟ್‌" ಗೀತೆಗಳು ಅಭಿಮಾನಿಗಳ ಅಚ್ಚುಮೆಚ್ಚಿನ ಗೀತೆಗಳಾಗಿ ಹೊರಹೊಮ್ಮಿದವು, ಹಾಗೂ "ರೊಸಾಲಿಟಾ (ಕಮ್‌ ಔಟ್‌ ಟುನೈಟ್‌)" ಎಂಬ ಸುದೀರ್ಘವಾದ, ಪ್ರಚೋದಿಸುವ ಗೀತೆಯು ಸ್ಪ್ರಿಂಗ್‌ಸ್ಟೀನ್‌‌ನ ಸಂಗೀತ ಕಚೇರಿಯ ಅತ್ಯಂತ ಕಡುಪ್ರೇಮದ ಗೀತೆಗಳ ಪೈಕಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡು ಹೋಗುವಲ್ಲಿ ಸಫಲವಾಗಿದೆ.

ಬಾಸ್ಟನ್‌ನ ದಿ ರಿಯಲ್‌ ಪೇಪರ್‌‌ ಪತ್ರಿಕೆಯ 1974ನೇ ಇಸವಿಯ ಮೇ 22ರ ಸಂಚಿಕೆಯಲ್ಲಿ ಜೋನ್‌ ಲ್ಯಾಂಡೌ ಎಂಬ ಸಂಗೀತ ವಿಮರ್ಶಕನು, ಹಾರ್ವರ್ಡ್‌ ಸ್ಕ್ವೇರ್‌ ಥಿಯೇಟರ್‌ನಲ್ಲಿ ನಡೆದ ಒಂದು ಸಂಗೀತ ಪ್ರಸ್ತುತಿಯನ್ನು ನೋಡಿದ ನಂತರ ಹೀಗೆ ಬರೆದ: "ರಾಕ್‌ ಅಂಡ್‌ ರೋಲ್‌ ಸಂಗೀತದ ಭವಿಷ್ಯವನ್ನು ನಾನುಕಂಡೆ; ಅದರ ಹೆಸರು ಬ್ರೂಸ್‌ ಸ್ಪ್ರಿಂಗ್‌ಸ್ಟೀನ್. ಅಷ್ಟೇ ಅಲ್ಲ, ಒಂದು ರಾತ್ರಿ ನನಗೆ ಹರೆಯದ ಅನುಭೂತಿ ಬೇಕೆನಿಸಿದಾಗ, ನಾನು ಮೊಟ್ಟಮೊದಲ ಬಾರಿಗೆ ಸಂಗೀತವನ್ನು ಕೇಳುತ್ತಿರುವೆನೇನೋ ಎಂಬ ಅನುಭೂತಿಯನ್ನು ಅವನು ನನಗೆ ನೀಡಿದ." ಲ್ಯಾಂಡೌ ತರುವಾಯದಲ್ಲಿ ಸ್ಪ್ರಿಂಗ್‌ಸ್ಟೀನ್‌ನ ವ್ಯವಸ್ಥಾಪಕ ಮತ್ತು ನಿರ್ಮಾಪಕನಾಗಿ ಮಾರ್ಪಟ್ಟ, ಹಾಗೂ ಬಾರ್ನ್‌ ಟು ರನ್‌ ಎಂಬ ಬೃಹತ್‌‌ ಹೊಸ ಗೀತಸಂಪುಟವನ್ನು ಮುಗಿಸುವಲ್ಲಿ ಅವನಿಗೆ ನೆರವಾದ. ವ್ಯಾಪಾರೀ ಯಶಸ್ಸನ್ನು ಕಾಣಬಲ್ಲ ಒಂದು ಧ್ವನಿಮುದ್ರಿಕೆಯನ್ನು ರೂಪಿಸುವಲ್ಲಿನ ಹೋರಾಟದ ಒಂದು ಅಂತಿಮ-ಪ್ರಯತ್ನವಾಗಿ ಒಂದು ಅಗಾಧ ಪ್ರಮಾಣದ ಹಣದ ವ್ಯವಸ್ಥೆಯಾದ್ದರಿಂದ, ವಾಲ್‌ ಆಫ್‌ ಸೌಂಡ್‌ ನಿರ್ಮಾಣಕ್ಕೆ ಸಂಬಂಧಿಸಿದ ಒಂದು ಧ್ವನಿಮುದ್ರಣ ಪ್ರಕ್ರಿಯೆಯಲ್ಲಿ ಸಿಕ್ಕಿಕೊಂಡ ಸ್ಪ್ರಿಂಗ್‌ಸ್ಟೀನ್‌ ಅದರಿಂದ ಮುಂದುವರಿಯದಾದ. ಆದರೆ, ಪ್ರಗತಿಶೀಲ ರಾಕ್‌ ರೇಡಿಯೋಗೆ ಮಾಡಲಾದ "ಬಾರ್ನ್‌ ಟು ರನ್‌"ನ ಒಂದು ಬಿಡುಗಡೆಯ ಕಾರಣದಿಂದಾಗಿ, ಗೀತಸಂಪುಟದ ಬಿಡುಗಡೆಯೆಡೆಗಿನ ನಿರೀಕ್ಷೆ ರೂಪುಗೊಂಡಿತು. ಒಟ್ಟಾರೆಯಾಗಿ ಹೇಳುವುದಾದರೆ, ಸದರಿ ಗೀತಸಂಪುಟವು ಧ್ವನಿಮುದ್ರಣಗೊಳ್ಳಲು 14 ತಿಂಗಳುಗಳಿಗಿಂತ ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿತು; "ಬಾರ್ನ್‌ ಟು ರನ್‌" ಗೀತೆಯೊಂದಕ್ಕೇ ಆರು ತಿಂಗಳುಗಳನ್ನು ವ್ಯಯಿಸಬೇಕಾಗಿ ಬಂದಿದ್ದು ಇದಕ್ಕೆ ಕಾರಣವಾಯಿತು. ಸದರಿ ಗೀತಸಂಪುಟಕ್ಕೆ ಸಂಬಂಧಿಸಿದಂತೆ, ಈ ಅವಧಿಯುದ್ದಕ್ಕೂ ಕೋಪ ಮತ್ತು ಆಶಾಭಂಗದೊಂದಿಗೆ ಸ್ಪ್ರಿಂಗ್‌ಸ್ಟೀನ್‌ ಹೆಣಗಾಡಿದ; ಸ್ಟುಡಿಯೋದಲ್ಲಿನ ಇತರರಿಗೆ ವಿವರಿಸಲು ತನಗೆ ಸಾಧ್ಯವಾಗದಂಥ "ತನ್ನ ತಲೆಯಲ್ಲಿನ ಧ್ವನಿಗಳನ್ನು" ತಾನು ಕೇಳಿದುದಾಗಿ ಈ ಸಂದರ್ಭದಲ್ಲಿ ಅವನು ಹೇಳುತ್ತಿದ್ದ. ಈ ಧ್ವನಿಮುದ್ರಣ ಅವಧಿಗಳಲ್ಲೇ "ಮಿಯಾಮಿ" ಸ್ಟೀವ್‌ ವ್ಯಾನ್‌ ಝಾಂಡ್ಟ್‌‌ ಸ್ಟುಡಿಯೋದೊಳಗೆ ಸರಿಯಾದ ಸಮಯಕ್ಕೆ ಎಡತಾಕುತ್ತಿದ್ದ; "ಟೆನ್ತ್‌ ಅವೆನ್ಯೂ ಫ್ರೀಜ್‌-ಔಟ್‌" ಗೀತೆಗೆ (ಇದು ಸದರಿ ಗೀತಸಂಪುಟಕ್ಕೆ ಅವನ ಏಕೈಕ ಬರಹರೂಪದ ಕೊಡುಗೆಯಾಗಿತ್ತು) ಸಂಬಂಧಿಸಿದಂತೆ ಕಹಳೆ ವಿಭಾಗವನ್ನು ವ್ಯವಸ್ಥೆಮಾಡುವಲ್ಲಿ ಸ್ಪ್ರಿಂಗ್‌ಸ್ಟೀನ್‌ಗೆ ನೆರವಾಗಲು ಆತ ಅಲ್ಲಿಗೆ ಬರುತ್ತಿದ್ದ, ಮತ್ತು ಇದು E ಸ್ಟ್ರೀಟ್‌ ಬ್ಯಾಂಡ್‌ಗೆ ಆತ ಅಂತಿಮವಾಗಿ ಸೇರಿಕೊಳ್ಳಲು ಕಾರಣವಾಯಿತು.[ಸೂಕ್ತ ಉಲ್ಲೇಖನ ಬೇಕು] ವ್ಯಾನ್‌ ಝಾಂಡ್ಟ್‌, ಸ್ಪ್ರಿಂಗ್‌ಸ್ಟೀನ್‌ನ ಓರ್ವ ದೀರ್ಘಕಾಲದ ಸ್ನೇಹಿತನಾಗಿದ್ದ; ಅಷ್ಟೇ ಅಲ್ಲ, ಹಿಂದಿನ ಸಂಗೀತಾತ್ಮಕ ಯೋಜನೆಗಳಲ್ಲಿ ಆತ ಓರ್ವ ಸಹಯೋಗಿಯೂ ಆಗಿದ್ದ. ತಾನು ಎಲ್ಲಿಂದ ಬರುತ್ತಿರುವುದು ಎಂಬುದು ಅವನಿಗೆ ಅರಿವಿತ್ತಾದ್ದರಿಂದ, ಸ್ಪ್ರಿಂಗ್‌ಸ್ಟೀನ್‌ ಕೇಳಿಸಿಕೊಳ್ಳುತ್ತಿದ್ದ ಕೆಲವೊಂದು ಧ್ವನಿಗಳನ್ನು ರೂಪಾಂತರಿಸುವುದು ಅವನಿಗೆ ಸಾಧ್ಯವಾಗುತ್ತಿತ್ತು. ಇಷ್ಟಾಗಿಯೂ, ಶಕ್ತಿಗುಂದಿಸುವ ಧ್ವನಿಮುದ್ರಣದ ಅವಧಿಗಳ ಅಂತ್ಯದ ವೇಳೆಗೆ ಸ್ಪ್ರಿಂಗ್‌ಸ್ಟೀನ್‌ಗೆ ತೃಪ್ತಿ ಸಿಕ್ಕಿರಲಿಲ್ಲ; ಸಂಪೂರ್ಣಗೊಳಿಸಲ್ಪಟ್ಟ ಗೀತಸಂಪುಟವನ್ನು ಮೊದಲಬಾರಿಗೆ ಕೇಳಿದ ನಂತರ, ಆತ ಧ್ವನಿಮುದ್ರಿಕೆಯನ್ನು ಗಲ್ಲಿಗೆ ಎಸೆದ. ಅಷ್ಟೇ ಅಲ್ಲ, ಆತ ಅನೇಕ ವೇಳೆ ಸಂಗೀತ ನುಡಿಸಿದ ಸ್ಥಳವಾದ ದಿ ಬಾಟಮ್‌ ಲೈನ್‌‌‌‌ನಲ್ಲಿ ಸದರಿ ಗೀತಸಂಪುಟವನ್ನು ಪ್ರತ್ಯಕ್ಷವಾಗಿ ತುಂಡರಿಸುವುದಾಗಿ ಆತ ಜೋನ್‌ ಲ್ಯಾಂಡೌಗೆ ಹೇಳಿದ.[ಸೂಕ್ತ ಉಲ್ಲೇಖನ ಬೇಕು]

ಈ ಅವಧಿಯಲ್ಲಿ ಅವನೊಂದಿಗೆ ಒಡನಾಡುತ್ತಿದ್ದ ಮಹಿಳೆಯು ನ್ಯೂಯಾರ್ಕ್‌ ನಗರದಲ್ಲಿ ವಾಸಿಸುತ್ತಿದ್ದ ಓರ್ವ ರೂಪದರ್ಶಿಯಾಗಿದ್ದಳು.

1975–1983: ಪ್ರಮುಖ ಪ್ರಗತಿ

1975ರ ಆಗಸ್ಟ್‌‌ 13ರಂದು ನ್ಯೂಯಾರ್ಕ್‌ನ ಬಾಟಮ್‌ ಲೈನ್‌ ಕ್ಲಬ್ಬಿನಲ್ಲಿ ಐದು-ರಾತ್ರಿಯ, 10-ಪ್ರದರ್ಶನದ ಠಿಕಾಣಿಯೊಂದನ್ನು ಸ್ಪ್ರಿಂಗ್‌ಸ್ಟೀನ್‌ ಮತ್ತು E ಸ್ಟ್ರೀಟ್‌ ಬ್ಯಾಂಡ್‌ ಸದಸ್ಯರು ಪ್ರಾರಂಭಿಸಿದರು. ಈ ಠಿಕಾಣಿಯು ಪ್ರಮುಖ ಮಾಧ್ಯಮಗಳ ಗಮನವನ್ನು ಆಕರ್ಷಿಸಿ, WNEW-FM ಮೂಲಕ ನೇರ ಪ್ರಸಾರವಾಯಿತು. ಅಷ್ಟೇ ಅಲ್ಲ, ಸ್ಪ್ರಿಂಗ್‌ಸ್ಟೀನ್‌ ಪ್ರಾಮಾಣಿಕವಾಗಿದ್ದಾನೆ, ಅವನನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಅಂಶವು ಅನೇಕ ಸಂದೇಹವಾದಿಗಳಿಗೆ ಮನವರಿಕೆಯಾಯಿತು. (ದಶಕಗಳ ನಂತರ, ರೋಲಿಂಗ್‌ ಸ್ಟೋನ್‌ ನಿಯತಕಾಲಿಕವು ರಾಕ್‌ ಅಂಡ್‌ ರೋಲ್‌ನ್ನು ಬದಲಾಯಿಸಿದ 50 ಕ್ಷಣಗಳಲ್ಲಿ ಒಂದು ಎಂಬುದಾಗಿ ಸದರಿ ಠಿಕಾಣಿಯನ್ನು ಹೆಸರಿಸಿತು.) 1975ರ ಆಗಸ್ಟ್‌‌ 25ರಂದು ಬಾರ್ನ್‌ ಟು ರನ್‌ ಬಿಡುಗಡೆಯಾಗುವುದರೊಂದಿಗೆ, ಸ್ಪ್ರಿಂಗ್‌ಸ್ಟೀನ್‌ ಅಂತಿಮವಾಗಿ ಯಶಸ್ಸನ್ನು ಕಂಡ. ಸದರಿ ಗೀತಸಂಪುಟವು ಬಿಲ್‌ಬೋರ್ಡ್‌ 200 ಕೋಷ್ಟಕದಲ್ಲಿ 3ನೇ ಸ್ಥಾನಕ್ಕೇರಿತು; ಆ ಸಮಯದಲ್ಲಿ ಜನಪ್ರಿಯ ಯಶಸ್ಸಿನ, ಏಕಗೀತೆಯ ಧ್ವನಿಮುದ್ರಿಕೆಗಳು ಇರಲಿಲ್ಲವಾದ್ದರಿಂದ, "ಬಾರ್ನ್‌ ಟು ರನ್‌" (ಬಿಲ್‌ಬೋರ್ಡ್‌ #23), "ಥಂಡರ್‌ ರೋಡ್‌", "ಟೆನ್ತ್‌ ಅವೆನ್ಯೂ ಫ್ರೀಜ್‌-ಔಟ್‌" (ಬಿಲ್‌ಬೋರ್ಡ್‌ #83), ಮತ್ತು "ಜಂಗಲ್‌ಲ್ಯಾಂಡ್‌" ಇವೆಲ್ಲವೂ ಸಹ ಗೀತಸಂಪುಟ-ಉದ್ದೇಶಿತ ರಾಕ್‌‌‌ ಎಂಬ ವಿಶೇಷಣದೊಂದಿಗೆ ಅಗಾಧ ಪ್ರಮಾಣದಲ್ಲಿ ಬಾನುಲಿ ಪ್ರಸಾರವನ್ನು ಕಂಡವು ಹಾಗೂ ಅನೇಕ ಶಿಷ್ಟ ರಾಕ್‌‌ ಕೇಂದ್ರಗಳಲ್ಲಿ ಚಿರಸ್ಥಾಯಿಯಾಗಿ ಅಚ್ಚುಮೆಚ್ಚಿನ ಗೀತೆಗಳಾಗಿ ಉಳಿದುಕೊಂಡವು. ಹಾಡು ಬರೆಯುವಿಕೆ ಮತ್ತು ಧ್ವನಿಮುದ್ರಣದ ಪ್ರಕ್ರಿಯೆಗಳು ಹಿಂದಿಗಿಂತ ಹೆಚ್ಚು ಶಿಸ್ತುಬದ್ಧವಾದವಾದರೂ, ಒಂದು ಬೃಹತ್‌‌ ಅನುಭೂತಿಯನ್ನು ಅವು ಕಾಯ್ದುಕೊಂಡವು. ತನ್ನ ಸರ್ವತೋದೃಷ್ಟಿಯ ಅಲಂಕಾರಿಕ ನಿರೂಪಣೆ, ಅಸಾಧಾರಣವಾದ ನಿರ್ಮಾಣ ಮತ್ತು ಹುಚ್ಚುಧೈರ್ಯದ ಆಶಾವಾದಿತ್ವದ ಕಾರಣಗಳಿಂದಾಗಿ, ಬಾರ್ನ್‌ ಟು ರನ್‌ ಗೀತಸಂಪುಟವು ಸಾರ್ವಕಾಲಿಕವಾದ ಅತ್ಯುತ್ತಮ ರಾಕ್‌ ಅಂಡ್‌ ರೋಲ್‌ ಗೀತಸಂಪುಟಗಳ ಪೈಕಿ ಒಂದು ಹಾಗೂ ಸ್ಪ್ರಿಂಗ್‌ಸ್ಟೀನ್‌ನ ಅತ್ಯುತ್ತಮ ಕೃತಿ ಎಂಬುದಾಗಿ ಕೆಲವೊಂದು ಅಭಿಮಾನಿಗಳಿಂದ ಪರಿಗಣಿಸಲ್ಪಟ್ಟಿತು. ರಾಕ್‌‌ ಪ್ರೇಕ್ಷಕರಿಗಾಗಿ ಧ್ವನಿಯಾದ ಮತ್ತು ಒಂದು ಬೃಹತ್‌‌ ಭಾಗದ ರಾಕ್‌‌ ಪ್ರೇಕ್ಷಕರ ಧ್ವನಿಯಲ್ಲಿ ಅಭಿವ್ಯಕ್ತಿಸಿದ, ಓರ್ವ ನಿಜವಾದ ಮತ್ತು ಚುರುಕಾದ ರಾಕ್‌ ಅಂಡ್‌ ರೋಲ್‌ ವ್ಯಕ್ತಿತ್ವವಾಗಿ ಅವನನ್ನು ಇದು ನೆಲೆಗೊಳಿಸಿತು. ತನ್ನ ವಿಜಯೋತ್ಸಾಹವನ್ನು ಸಂಪೂರ್ಣಗೊಳಿಸಲೆಂಬಂತೆ, ಅದೇ ವರ್ಷದ ಅಕ್ಟೋಬರ್‌‌ 27ರಂದು, ಒಂದೇ ವಾರದಲ್ಲಿ ಟೈಮ್‌ ಮತ್ತು ನ್ಯೂಸ್‌ವೀಕ್‌ ಈ ಎರಡೂ ನಿಯತಕಾಲಿಕಗಳ ಮುಖಪುಟಗಳ ಮೇಲೂ ಸ್ಪ್ರಿಂಗ್‌ಸ್ಟೀನ್‌ ಕಾಣಿಸಿಕೊಂಡ. ಪ್ರಚಾರದ ಅಲೆಯು ಅದೆಷ್ಟು ಮಹತ್ತರವಾಗಿ ಕೆಲಸ ಮಾಡಿತೆಂದರೆ, ತನ್ನ ಮೊದಲ ಕಡಲಾಚೆಯ ಸಾಹಸದ ಸಂದರ್ಭದಲ್ಲಿ ಅದಕ್ಕೆ ಪ್ರತಿಯಾಗಿಯೇ ಎದ್ದುನಿಂತ ಸ್ಪ್ರಿಂಗ್‌ಸ್ಟೀನ್‌, ಲಂಡನ್‌ನಲ್ಲಿನ ಒಂದು ಸಂಗೀತ ಕಚೇರಿಯ ಹಾಜರಿಗೆ ಮುಂಚಿತವಾಗಿ ಪ್ರಚಾರದ ಭಿತ್ತಿಪತ್ರಗಳನ್ನು ಹರಿದುಹಾಕಿದ.

ತನ್ನ ಹಿಂದಿನ ವ್ಯವಸ್ಥಾಪಕನಾದ ಮೈಕ್‌ ಆಪ್ಪೆಲ್‌‌‌‌ನೊಂದಿಗಿನ ಒಂದು ಕಾನೂನು ಸಮರದಿಂದಾಗಿ, ಸುಮಾರು ಒಂದು ವರ್ಷದವರೆಗೆ ಸ್ಪ್ರಿಂಗ್‌ಸ್ಟೀನ್‌ ಸ್ಟುಡಿಯೋದಿಂದ ಹೊರಗೆ ಉಳಿಯಬೇಕಾಗಿ ಬಂತು; ಈ ಅವಧಿಯಲ್ಲಿ U.S. ಆದ್ಯಂತ ವ್ಯಾಪಕ ಪ್ರವಾಸ ಕೈಗೊಳ್ಳಲು E ಸ್ಟ್ರೀಟ್‌ ಬ್ಯಾಂಡ್‌ನ್ನು ಅವನು ತೊಡಗಿಸಿದ. ಆತ ಆಶಾವಾದದ ಉತ್ಕಟಾಸಕ್ತಿಯೊಂದಿಗೆ ಅನೇಕವೇಳೆ ಪ್ರಸ್ತುತಪಡಿಸುತ್ತಿದ್ದನಾದರೂ, ಅವನಿಂದ ಬರೆಯಲ್ಪಡುತ್ತಿದ್ದ ಮತ್ತು ವೇದಿಕೆಯ ಮೇಲೆ ಅನೇಕವೇಳೆ ಪ್ರಥಮ ಬಾರಿಗೆ ಪರಿಚಯಿಸಲ್ಪಡುತ್ತಿದ್ದ ಹೊಸ ಹಾಡುಗಳು, ಅವನ ಹಿಂದಿನ ಕೆಲಸಕ್ಕೆ ಹೋಲಿಸಿದಾಗ ಒಂದು ಹೆಚ್ಚು ಉತ್ಸಾಹಶೂನ್ಯ ದನಿಯಾಗಿ ಮಾರ್ಪಟ್ಟಿದ್ದವು. 1977ರಲ್ಲಿ ಆಪ್ಪೆಲ್‌ನೊಂದಿಗೆ ಒಂದು ಫೈಸಲಾತಿಯನ್ನು ಮಾಡಿಕೊಂಡ ಸ್ಪ್ರಿಂಗ್‌ಸ್ಟೀನ್‌, ಅಂತಿಮವಾಗಿ ಸ್ಟುಡಿಯೋಗೆ ಹಿಂದಿರುಗಿದ, ಮತ್ತು ತರುವಾಯದ ಅವಧಿಗಳಲ್ಲಿ ಡಾರ್ಕ್‌ನೆಸ್‌ ಆನ್‌ ದಿ ಎಡ್ಜ್‌ ಆಫ್‌ ಟೌನ್‌‌ (1978) ಕೃತಿಯನ್ನು ರೂಪಿಸಿದ. ಸಾಂಗೀತಕವಾಗಿ ಹೇಳುವುದಾದರೆ, ಈ ಗೀತಸಂಪುಟವು ಸ್ಪ್ರಿಂಗ್‌ಸ್ಟೀನ್‌'ನ ವೃತ್ತಿಜೀವನದಲ್ಲಿ ಒಂದು ನಿರ್ಣಾಯಕ ಘಟ್ಟವಾಗಿತ್ತು. ಮೊದಲ ಎರಡು ಗೀತಸಂಪುಟಗಳಲ್ಲಿದ್ದ ಕಚ್ಚಾ, ಸುರಿಮಳೆಯ‌ ಸಾಹಿತ್ಯದ, ಅಳತೆಮೀರಿದ ಪಾತ್ರಗಳ ಮತ್ತು ಸುದೀರ್ಘವಾದ, ಬಹು-ಭಾಗದ ಸಂಗೀತಕುಶಲ ಸಂಯೋಜನೆಗಳು ಇಲ್ಲವಾದವು; ಈಗ ಬಂದ ಹಾಡುಗಳು ಲಘುವಾಗಿದ್ದು ಹೆಚ್ಚು ಜಾಗರೂಕವಾಗಿ ರೂಪಿಸಲ್ಪಟ್ಟಿದ್ದವು. ಅಷ್ಟೇ ಅಲ್ಲ, ಸ್ಪ್ರಿಂಗ್‌ಸ್ಟೀನ್‌ನ ಬೆಳೆಯುತ್ತಿರುವ ಬೌದ್ಧಿಕ ಮತ್ತು ರಾಜಕೀಯ ಅರಿವನ್ನು ಪ್ರತಿಬಿಂಬಿಸಲು ಅವು ಶುರುಮಾಡಿದವು. ಕೆಲವೊಂದು ಅಭಿಮಾನಿಗಳು ಡಾರ್ಕ್‌ನೆಸ್‌ ಕೃತಿಯನ್ನು ಸ್ಪ್ರಿಂಗ್‌ಸ್ಟೀನ್‌ನ ಅತ್ಯುತ್ತಮವಾದ ಮತ್ತು ಅತ್ಯಂತ ಸುಸಂಗತವಾದ ಧ್ವನಿಮುದ್ರಿಕೆ ಎಂದು ಪರಿಗಣಿಸುತ್ತಾರೆ; "ಬ್ಯಾಡ್‌ಲ್ಯಾಂಡ್ಸ್‌" ಮತ್ತು "ದಿ ಪ್ರಾಮಿಸ್ಡ್‌ ಲ್ಯಾಂಡ್‌"ನಂಥ ಧ್ವನಿಪಥಗಳು ಮುಂದಿನ ದಶಕಗಳವರೆಗೆ ಸಂಗೀತ ಕಚೇರಿಯ ಪ್ರಧಾನ ವಿಷಯಗಳಾಗಿ ಮಾರ್ಪಟ್ಟರೆ, "ಪ್ರೂವ್‌ ಇಟ್‌ ಆಲ್‌ ನೈಟ್‌" ಎಂಬ ಧ್ವನಿಪಥವು ಒಂದು ಗಣನೀಯ ಪ್ರಮಾಣದಲ್ಲಿ ಬಾನುಲಿ ಪ್ರಸಾರವನ್ನು ಕಂಡ ರಾಕ್‌ ಗೀತಸಂಪುಟ ಎಂಬ ಕೀರ್ತಿಗೆ ಪಾತ್ರವಾಯಿತು. ಸಾಹಸಮಯಿಯಾಗಿದ್ದ ಮುಂಚಿನ ಸ್ಪ್ರಿಂಗ್‌ಸ್ಟೀನ್‌ನ ಕೃತಿಗೆ ಇತರ ಅಭಿಮಾನಿಗಳು ಆದ್ಯತೆ ನೀಡುತ್ತಾರೆ‌. ಗೀತಸಂಪುಟದ ಪ್ರಚಾರಕ್ಕಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾದ 1978ರಲ್ಲಿನ ಪ್ರವಾಸವು, ಅದರ ಪ್ರದರ್ಶನಗಳ ಗಾಢತೆ ಮತ್ತು ದೀರ್ಘತೆಗಳಿಗೆ ಸಂಬಂಧಿಸಿದಂತೆ ಪ್ರಸಿದ್ಧಿಯನ್ನು ಪಡೆಯಿತು.

1970ರ ದಶಕದ ಅಂತ್ಯದ ವೇಳೆಗೆ, ಸ್ಪ್ರಿಂಗ್‌ಸ್ಟೀನ್‌ ಓರ್ವ ಗೀತ ರಚನೆಕಾರನಾಗಿ ಪಾಪ್‌ ಪ್ರಪಂಚದಲ್ಲಿ ಪ್ರಸಿದ್ಧಿಯನ್ನು ಗಳಿಸಿದ್ದ; ಅವನ ಸಾಹಿತ್ಯದ ಮೂಲದ್ರವ್ಯಗಳು ಇತರ ವಾದ್ಯವೃಂದಗಳಿಗೆ ಜನಪ್ರಿಯ ಯಶಸ್ಸುಗಳನ್ನು ಒದಗಿಸುವಲ್ಲಿ ಶಕ್ತವಾದವು. ಮ್ಯಾನ್‌ಫ್ರೆಡ್‌ ಮನ್‌‌‌ನ ಅರ್ಥ್‌ ಬ್ಯಾಂಡ್‌ U.S.ನ ಪಾಪ್‌ ವಲಯದಲ್ಲಿ ಒಂದು ಅಗ್ರಗಣ್ಯ ಜನಪ್ರಿಯ ಯಶಸ್ಸನ್ನು ದಾಖಲಿಸಿತ್ತು; ಗ್ರೀಟಿಂಗ್ಸ್‌‌‌ ನ ಒಂದು ಅತೀವವಾದ ಮರುವ್ಯವಸ್ಥಿತ ಆವೃತ್ತಿಯಾದ, 1977ರ ಆರಂಭದಲ್ಲಿ ಬಿಡುಗಡೆಯಾದ, "ಬ್ಲೈಂಡೆಡ್‌ ಬೈ ದಿ ಲೈಟ್‌" ಎಂಬುದು ಈ ಜನಪ್ರಿಯ ಯಶಸ್ಸಿಗೆ ಕಾರಣವಾಗಿತ್ತು. ಸ್ಪ್ರಿಂಗ್‌ಸ್ಟೀನ್‌ನ "ಬಿಕಾಸ್‌ ದಿ ನೈಟ್‌" ಎಂಬ ಬಿಡುಗಡೆಯಾಗದ ಒಂದು ಕೃತಿಯನ್ನು (ಇದರ ಸಾಹಿತ್ಯವನ್ನು ಪರಿಷ್ಕರಿಸಿದ್ದು ಸ್ಮಿತ್‌) ನಿರ್ವಹಿಸುವುದರೊಂದಿಗೆ 1978ರಲ್ಲಿ 13ನೇ ಸ್ಥಾನಕ್ಕೆ ಪ್ಯಾಟಿ ಸ್ಮಿತ್ ತಲುಪಿದರೆ, ಸ್ಪ್ರಿಂಗ್‌ಸ್ಟೀನ್‌ನ ಮತ್ತೊಂದು ಬಿಡುಗಡೆಯಾಗದ ಕೃತಿಯಾದ "ಫೈರ್‌‌"ನ್ನು ನಿರ್ವಹಿಸುವುದರೊಂದಿಗೆ 1979ರಲ್ಲಿ ದಿ ಪಾಯಿಂಟರ್‌ ಸಿಸ್ಟರ್ಸ್‌ ಎರಡನೇ ಸ್ಥಾನವನ್ನು ತಲುಪಿದರು.

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
ದಿ ರಿವರ್‌ ಪ್ರವಾಸದಲ್ಲಿನ ಸ್ಪ್ರಿಂಗ್‌ಸ್ಟೀನ್‌ ಕಚೇರಿ. ಡ್ರಾಮ್ಮೆನ್‌ಶಾಲ್ಲೆನ್‌‌, ಡ್ರಾಮ್ಮೆನ್‌, ನಾರ್ವೆ, ಮೇ 5, 1981.

1979ರ ಸೆಪ್ಟೆಂಬರ್‌‌ನಲ್ಲಿ, ಮ್ಯುಸಿಷಿಯನ್ಸ್‌ ಯುನೈಟೆಡ್‌ ಫಾರ್‌ ಸೇಫ್‌ ಎನರ್ಜಿ ಎಂಬ ಪರಮಾಣು ಶಕ್ತಿ ವಿರೋಧಿ ಸಮುದಾಯವನ್ನು ಸ್ಪ್ರಿಂಗ್‌ಸ್ಟೀನ್‌ ಮತ್ತು E ಸ್ಟ್ರೀಟ್‌ ಬ್ಯಾಂಡ್‌ ಸದಸ್ಯರು ಸೇರಿಕೊಂಡರು; ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌‌‌ನಲ್ಲಿ ಎರಡು ರಾತ್ರಿಗಳವರೆಗೆ ನಡೆದ ಈ ಕೂಟದಲ್ಲಿ ಒಂದು ಸಂಕ್ಷೇಪಿತ ವೃಂದದೊಂದಿಗೆ ಪ್ರಸ್ತುತಿ ನೀಡುವುದರೊಂದಿಗೆ, ತನ್ನ ಮುಂಬರಲಿದ್ದ ಗೀತಸಂಪುಟದಿಂದ ಆಯ್ದುಕೊಂಡ ಎರಡು ಹಾಡುಗಳ ಪ್ರಥಮ ಪ್ರದರ್ಶನವನ್ನು ಆತ ನೀಡಿದ. ತರುವಾಯದಲ್ಲಿ ಬಂದ ನೋ ನ್ಯೂಕ್ಸ್‌‌ ಎಂಬ ಪ್ರತ್ಯಕ್ಷ ಧ್ವನಿಮುದ್ರಣದ ಗೀತಸಂಪುಟ ಮತ್ತು ಅದನ್ನನುಸರಿಸಿಕೊಂಡು ಬಂದ ಸಮ್ಮರ್‌‌‌ಳ ನೋ ನ್ಯೂಕ್ಸ್‌‌ ಸಾಕ್ಷ್ಯಚಿತ್ರವು, ಕಟ್ಟುಕಥೆಯಂತೆ ಹೇಳಿದ ಸ್ಪ್ರಿಂಗ್‌ಸ್ಟೀನ್‌ನ ಪ್ರತ್ಯಕ್ಷ ಸಂಗೀತ ಪ್ರಸ್ತುತಿಯ ತುಣುಕನ್ನು ಹಾಗೂ ಮೊದಲ ಅಧಿಕೃತ ಧ್ವನಿಮುದ್ರಣಗಳನ್ನು ಪ್ರತಿನಿಧಿಸಿದವು; ಜೊತೆಗೆ ಇವು ರಾಜಕೀಯದಲ್ಲಿನ ತೊಡಗಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಸ್ಪ್ರಿಂಗ್‌ಸ್ಟೀನ್‌ನ ಮೊದಲ ಪ್ರಾಯೋಗಿಕ ಇಳಿತವನ್ನೂ ಪ್ರತಿನಿಧಿಸಿದವು.

1980ರಲ್ಲಿ ಬಿಡುಗಡೆಯಾದ ದಿ ರಿವರ್‌ ಎಂಬ 20-ಹಾಡುಗಳ ಜೋಡಿ ಗೀತಸಂಪುಟದೊಂದಿಗೆ, ಶ್ರಮಿಕ-ವರ್ಗದ ಜೀವನದ ಮೇಲಿನ ತನ್ನ ವಿಷಯಾಧಾರಿತ ಗಮನದ ಕ್ರೋಡೀಕರಣವನ್ನು ಸ್ಪ್ರಿಂಗ್‌ಸ್ಟೀನ್‌ ಮುಂದುವರಿಸಿದ; ಭೋಗಲಾಲಸೆಯ ಸಂತೋಷಕೂಟದ ರಾಕ್‌‌ ಸಂಗೀತಗಳಿಂದ ಮೊದಲ್ಗೊಂಡು ಭಾವಪರವಶವಾಗಿ ಉತ್ಕಟವಾದ ಲಾವಣಿಗಳವರೆಗಿನ, ಉದ್ದೇಶಪೂರ್ವಕವಾಗಿ ವಿರೋಧಾಭಾಸದಿಂದ ಕೂಡಿದ ಮೂಲದ್ರವ್ಯದ ಒಂದು ವ್ಯಾಪ್ತಿಯನ್ನು ಇದು ಒಳಗೊಂಡಿತ್ತು, ಮತ್ತು ಓರ್ವ ಸಂಗೀತಗಾರನಾಗಿ ಅವನ ಮೊದಲ 'ಟಾಪ್‌ ಟೆನ್‌' ಏಕಗೀತೆಯಾದ "ಹಂಗ್ರಿ ಹಾರ್ಟ್‌"ನ್ನು ಅಂತಿಮವಾಗಿ ಅದು ನೀಡಿತು. ಸ್ಪ್ರಿಂಗ್‌ಸ್ಟೀನ್‌ ಹಿಂದಿನ ಯಾವುದೇ ಕೃತಿಯಲ್ಲಿ ಹೆಚ್ಚೂಕಮ್ಮಿ ತಪ್ಪಿಹೋಗಿದ್ದ, ಒಂದು ಪಾಪ್‌-ರಾಕ್‌‌ ಧ್ವನಿಯೆಡೆಗಿನ ಅವನ ಸಂಗೀತದಲ್ಲಿನ ಒಂದು ಬದಲಾವಣೆಗೆ ಈ ಗೀತಸಂಪುಟವು ಅಂಕಿತಹಾಕಿತು. ಎಂಬತ್ತರ ದಶಕದ ಪಾಪ್‌-ರಾಕ್‌ನ‌ ಕೆಲವೊಂದು ವೈಶಿಷ್ಟ್ಯಪೂರ್ಣ ಚಿಹ್ನೆಗಳ ಶೈಲಿಯ ರೂಪಾಂತರದಲ್ಲಿ ಇದು ಸ್ಪಷ್ಟವಾಗಿದೆ. ಪ್ರತಿಫಲನದ-ತಾರಸ್ವರದ ಡ್ರಮ್‌ಗಳು, ಅತ್ಯಂತ ಮೂಲಭೂತ ಶೈಲಿಯ ತಾಳವಾದ್ಯ/ಗಿಟಾರ್‌ ಹಾಗೂ ಅನೇಕ ಧ್ವನಿಪಥಗಳಲ್ಲಿ ಸ್ಪಷ್ಟವಾಗಿ ಕಂಡಿದ್ದ ಪುನರಾವರ್ತಿತ ಸಾಹಿತ್ಯ ಇವೇ ಆ ವೈಶಿಷ್ಟ್ಯಪೂರ್ಣ ಚಿಹ್ನೆಗಳಾಗಿದ್ದವು. ಇದರ ಶೀರ್ಷಿಕೆ ಗೀತೆಯು ಸ್ಪ್ರಿಂಗ್‌ಸ್ಟೀನ್‌ನ ಬೌದ್ಧಿಕ ದಿಕ್ಕಿನೆಡೆಗೆ ಬೊಟ್ಟುಮಾಡಿ ತೋರಿಸಿದರೆ, ಹೆಚ್ಚಾಗಿ-ಪರಿಚಯವಾಗದ ಒಂದೆರಡು ಧ್ವನಿಪಥಗಳು ಅವನ ಸಂಗೀತಕುಶಲ ದಿಕ್ಕಿನ ಭವಿಷ್ಯವನ್ನು ಸೂಚಿಸಿದವು. ಈ ಗೀತಸಂಪುಟವು ಚೆನ್ನಾಗಿ ಮಾರಾಟಗೊಳ್ಳುವ ಮೂಲಕ, ಬಿಲ್‌ಬೋರ್ಡ್‌ ಪಾಪ್‌ ಗೀತಸಂಪುಟಗಳ ಕೋಷ್ಟಕದಲ್ಲಿ ಅವನ ಮೊದಲ ಅಗ್ರಗಣ್ಯ ಗೀತಸಂಪುಟ ಎನಿಸಿಕೊಂಡಿತು, ಮತ್ತು ಇದನ್ನು ಅನುಸರಿಸಿಕೊಂಡು 1980 ಮತ್ತು 1981ರಲ್ಲಿ ಸುದೀರ್ಘ ಪ್ರವಾಸವೊಂದು ಬಂದಿತು. ಯುರೋಪ್‌‌‌ನಲ್ಲಿನ ಸ್ಪ್ರಿಂಗ್‌ಸ್ಟೀನ್‌ನ ಮೊತ್ತಮೊದಲ ಒಂದು ವಿಸ್ತೃತ ಸಂಗೀತಗಾರಿಕೆಯನ್ನು ಒಳಗೊಂಡಿದ್ದ ಈ ಪ್ರವಾಸವು, U.S.ನಲ್ಲಿರುವ ಪ್ರಮುಖ ನಗರಗಳಲ್ಲಿ ಹಮ್ಮಿಕೊಳ್ಳಲಾದ ಬಹು-ರಾತ್ರಿಯ ಕಾರ್ಯಕ್ಷೇತ್ರದ ಠಿಕಾಣಿಗಳ ಒಂದು ಸರಣಿಯೊಂದಿಗೆ ಅಂತ್ಯಗೊಂಡಿತು.

1982ರಲ್ಲಿ ಬಿಡುಗಡೆಯಾದ ದಿ ರಿವರ್‌ ಕೃತಿಯನ್ನು, ಸಂಪೂರ್ಣವಾಗಿ ವಿದ್ಯುತ್‌ಚಾಲಿತವಲ್ಲದ ತನಿ ಕೃತಿಯಾಗಿರುವ ನೆಬ್ರಾಸ್ಕಾ ಅನುಸರಿಸಿಕೊಂಡು ಬಂದಿತು. ಮಾರ್ಷ್‌ ಜೀವನ ಚರಿತ್ರೆಗಳ ಅನುಸಾರ, ಈ ಸಾಹಿತ್ಯವನ್ನು ಸ್ಪ್ರಿಂಗ್‌ಸ್ಟೀನ್‌ ಬರೆದಾಗ ಅವನು ಒಂದು ದನಿಯಿಳಿದ ಸ್ಥಿತಿಯಲ್ಲಿದ್ದ, ಮತ್ತು ಇದರ ಪರಿಣಾಮವಾಗಿ ಅಮೆರಿಕಾದ ಜೀವನದ ಒಂದು ನಿರ್ದಯ ಚಿತ್ರಣವು ಹೊರಹೊಮ್ಮಿತು. ಇದರ ಶೀರ್ಷಿಕೆ ಧ್ವನಿಪಥವು ಚಾರ್ಲ್ಸ್‌‌ ಸ್ಟಾರ್ಕ್‌ವೆದರ್‌‌‌ನ ಕೊಲೆ ಅತಿರೇಕದ ಕುರಿತದ್ದಾಗಿದೆ. ಮಾರ್ಷ್‌‌ನ ಅನುಸಾರ, E ಸ್ಟ್ರೀಟ್‌ ಬ್ಯಾಂಡ್‌ನೊಂದಿಗೆ ನುಡಿಸಲ್ಪಡಬೇಕಾದ ಹೊಸ ಕೃತಿಗೆ ಸಂಬಂಧಿಸಿದ ಒಂದು ಪ್ರಾಯೋಗಿಕ ಟೇಪ್‌ ಆಗಿ ಸದರಿ ಗೀತಸಂಪುಟವನ್ನು ಪ್ರಾರಂಭಿಸಲಾಯಿತು; ಆದರೆ ಧ್ವನಿಮುದ್ರಣದ ಪ್ರಕ್ರಿಯೆಯ ಅವಧಿಯಲ್ಲಿ, ವಿದ್ಯುತ್‌ಚಾಲಿತವಲ್ಲದ ತನಿ ಗೀತೆಗಳಾಗಿ ಈ ಹಾಡುಗಳು ಉತ್ತಮವಾದ ಫಲಿತಾಂಶವನ್ನು ನೀಡುತ್ತವೆ ಎಂಬುದನ್ನು ಸ್ಪ್ರಿಂಗ್‌ಸ್ಟೀನ್‌ ಮತ್ತು ನಿರ್ಮಾಪಕ ಲ್ಯಾಂಡೌ ಇಬ್ಬರೂ ಅರಿತುಕೊಂಡರು. E ಸ್ಟ್ರೀಟ್‌ ಬ್ಯಾಂಡ್‌ ಜೊತೆಯಲ್ಲಿ ಅವರು ಸ್ಟುಡಿಯೋದಲ್ಲಿ ಬಹಳಷ್ಟು ಸಮಯವನ್ನು ಧ್ವನಿಮುದ್ರಣ ಕಾರ್ಯದಲ್ಲಿ ವಿನಿಯೋಗಿಸಿದ್ದರಿಂದ, ಒಂದು ಸರಳವಾದ, ಕಡಿಮೆ-ತಾಂತ್ರಿಕತೆಯ ನಾಲ್ಕು-ಧ್ವನಿಪಥ ಟೇಪ್‌‌ ಡೆಕ್‌ನಲ್ಲಿ ಸ್ಪ್ರಿಂಗ್‌ಸ್ಟೀನ್‌ನ ನೆಲೆಯಲ್ಲಿ ಮಾಡಲಾದ ಮೂಲ ಧ್ವನಿಮುದ್ರಣವು, ಅವು ಪಡೆಯಲು ಹೊರಟಿದ್ದ ಅತ್ಯುತ್ತಮ ಆವೃತ್ತಿಗಳಾಗಿದ್ದವು ಎಂಬುದು ಅವರ ಅರಿವಿಗೆ ಬಂತು. ಆದಾಗ್ಯೂ, ಸ್ಟುಡಿಯೋದಲ್ಲಿ ಅವರು ಕಳೆದ ಅವಧಿಗಳೆಲ್ಲವೂ ನಿಷ್ಪ್ರಯೋಜಕವೇನೂ ಆಗಿರಲಿಲ್ಲ; ಏಕೆಂದರೆ ನೆಬ್ರಾಸ್ಕಾ ದ ಮೂಲಸಾಹಿತ್ಯದ ಜೊತೆಯಲ್ಲಿ ಸ್ಪ್ರಿಂಗ್‌ಸ್ಟೀನ್‌ ಬರೆದಿದ್ದ ಹಲವಾರು ಹೊಸ ಹಾಡುಗಳನ್ನು ವಾದ್ಯವೃಂದವು ಧ್ವನಿಮುದ್ರಿಸಿಕೊಂಡಿತು. "ಬಾರ್ನ್‌ ಇನ್‌ ದಿ U.S.A." ಮತ್ತು "ಗ್ಲೋರಿ ಡೇಸ್‌"ನಂಥ ಗೀತೆಗಳು ಅವುಗಳಲ್ಲಿ ಸೇರಿದ್ದವು. ಈ ಹೊಸ ಹಾಡುಗಳು ನಂತರದ ಎರಡು ವರ್ಷಗಳವರೆಗೂ ಬಿಡುಗಡೆಯಾಗಲಿಲ್ಲ; ನಂತರ ಅವು ಸ್ಪ್ರಿಂಗ್‌ಸ್ಟೀನ್‌ನ ಮುಂದಿನ ಗೀತಸಂಪುಟದ ಆಧಾರವಾಗಿ ಪರಿಣಮಿಸಿದವು.

ನೆಬ್ರಾಸ್ಕಾ ಕೃತಿಯು ಚೆನ್ನಾಗಿ ಮಾರಾಟಗೊಳ್ಳಲಿಲ್ಲವಾದರೂ, ವಿಮರ್ಶಕರ ವ್ಯಾಪಕವಾದ ಮೆಚ್ಚುಗೆಗೆ ಇದು ಪಾತ್ರವಾಯಿತು (ರೋಲಿಂಗ್‌ ಸ್ಟೋನ್‌ ನಿಯತಕಾಲಿಕದ ವಿಮರ್ಶಕರು ಇದನ್ನು "ವರ್ಷದ ಗೀತಸಂಪುಟ" ಎಂದು ಹೆಸರಿಸಿದ್ದೂ ಇದರಲ್ಲಿ ಸೇರಿತ್ತು) ಮತ್ತು U2ನ ದಿ ಜೋಷುವಾ ಟ್ರೀ ಎಂಬ ಗೀತಸಂಪುಟವನ್ನು ಒಳಗೊಂಡಂತೆ, ಇತರ ಪ್ರಮುಖ ಕಲಾವಿದರಿಂದ ಬಂದ ನಂತರದ ಗಣನೀಯ ಕೃತಿಗಳ ಮೇಲೆ ಇದು ಪ್ರಭಾವವನ್ನು ಬೀರಿತು. ಇಂಡೀ-ರಾಕ್‌‌ ಸಂಗೀತಪ್ರೇಮಿಗಳ ಸಮುದಾಯದಲ್ಲಿ ಒಂದು ಅಚ್ಚುಮೆಚ್ಚಿನ ಪಂಥವಾಗಿ ರೂಪುಗೊಳ್ಳುತ್ತಿದ್ದ, ಕನಿಷ್ಟ ನಿಷ್ಠೆ ಸಾಧನದ ಸಂಗೀತ ಎಂದು ಹೇಳಲ್ಪಟ್ಟ ಸಂಗೀತಾತ್ಮಕ ಪ್ರಕಾರವನ್ನು ಪ್ರೇರೇಪಿಸುವಲ್ಲಿ ಇದು ನೆರವಾಯಿತು. ನೆಬ್ರಾಸ್ಕಾದ ಬಿಡುಗಡೆಗೆ ಸಂಬಂಧಿಸಿದಂತೆ ಸ್ಪ್ರಿಂಗ್‌ಸ್ಟೀನ್‌ ಪ್ರವಾಸವನ್ನು ಕೈಗೊಳ್ಳಲಿಲ್ಲ.

1984–1991: ವ್ಯಾಪಾರೀ ಮತ್ತು ಜನಪ್ರಿಯ ಸಂಗತಿ

ಬಾರ್ನ್‌ ಇನ್‌ ದಿ U.S.A. (1984) ಎಂಬ ತನ್ನ ಗೀತಸಂಪುಟಕ್ಕೆ ಸಂಬಂಧಿಸಿದಂತೆ ಸ್ಪ್ರಿಂಗ್‌ಸ್ಟೀನ್‌ ಪ್ರಾಯಶಃ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದಾನೆ; U.S.ನಲ್ಲಿ ಇದು 15 ದಶಲಕ್ಷ ಪ್ರತಿಗಳಷ್ಟು ಮಾರಾಟವಾಯಿತು ಹಾಗೂ ಇದರ ಏಳು ಏಕಗೀತೆಯ ಗಾಯನಗಳು 'ಟಾಪ್‌ 10' ಕೋಷ್ಟಕದಲ್ಲಿ ಸ್ಥಾನವನ್ನು ಪಡೆಯುವುದರೊಂದಿಗೆ, ಅತ್ಯುತ್ತಮವಾಗಿ-ಮಾರಾಟವಾಗುವ ಸಾರ್ವಕಾಲಿಕ ಗೀತಸಂಪುಟಗಳ ಪೈಕಿ ಇದು ಒಂದೆನಿಸಿಕೊಂಡಿತು. ಇದನ್ನು ಅನುಸರಿಸಿಕೊಂಡು ಅಗಾಧ ಯಶಸ್ಸನ್ನು ಪಡೆದ ಪ್ರಪಂಚ ಪ್ರವಾಸವೂ ಬಂದಿತು. ಇದರ ಶೀರ್ಷಿಕೆ ಧ್ವನಿಪಥವು ವಿಯೆಟ್ನಾಂ ಪರಿಣತ ಯೋಧರ (ಅಥವಾ ಮಾಜಿ ಯೋಧರ) ಚಿಕಿತ್ಸೆಯ ಕುರಿತಾದ ಒಂದು ಕಟು ವ್ಯಾಖ್ಯಾನವಾಗಿತ್ತು; ಈ ಯೋಧರ ಪೈಕಿ ಕೆಲವೊಬ್ಬರು ಸ್ಪ್ರಿಂಗ್‌ಸ್ಟೀನ್‌ನ ಸ್ನೇಹಿತರು ಮತ್ತು ವಾದ್ಯವೃಂದದ ಸಹವರ್ತಿಗಳಾಗಿದ್ದರು. ಕಿರುಪದ್ಯಗಳಲ್ಲಿನ ಸಾಹಿತ್ಯವನ್ನು ಕೇಳಿಸಿಕೊಂಡಾಗ ಅವು ಸಂಪೂರ್ಣವಾಗಿ ಅಸಂದಿಗ್ಧವಾಗಿರುವುದು ಅರಿವಿಗೆ ಬರುತ್ತಿತ್ತು; ಆದರೆ ಹಾಡಿನ ಹರ್ಷಗೀತಾತ್ಮಕ ಸಂಗೀತ ಮತ್ತು ಶೀರ್ಷಿಕೆಯನ್ನು ಅನೇಕರಿಗೆ ಅರಗಿಸಿಕೊಳ್ಳಲಾಗಲಿಲ್ಲ. ರಾಜಕಾರಣಿಗಳಿಂದ ಮೊದಲ್ಗೊಂಡು ಸಾಮಾನ್ಯ ವ್ಯಕ್ತಿಗಳವರೆಗಿನ ಜನರು ಇದರ ಸಾಹಿತ್ಯವನ್ನು ಅರಗಿಸಿಕೊಳ್ಳದ ಅನೇಕರ ವರ್ಗದಲ್ಲಿ ಸೇರಿದ್ದರು. ಆದರೆ ವೃಂದಗಾನದಲ್ಲಿದ್ದ ಸಾಹಿತ್ಯವನ್ನು ಅನೇಕ ವಿಧಗಳಲ್ಲಿ ಓದಲು ಸಾಧ್ಯವಿತ್ತು. ಅತಿರೇಕದ ರಾಷ್ಟ್ರಪ್ರೇಮದ ಗೀತೆಯಾಗಿ ಈ ಹಾಡು ವ್ಯಾಪಕವಾಗಿ ತಪ್ಪಾಗಿ ವ್ಯಾಖ್ಯಾನಿಸಲ್ಪಟ್ಟಿತು, ಮತ್ತು 1984ರ ಅಧ್ಯಕ್ಷೀಯ ಪ್ರಚಾರಾಂದೋಲನಕ್ಕೆ ಸಂಬಂಧಿಸಿದಂತೆ ಪರಿಗಣನಾರ್ಹ ಜಾನಪದ ಅಧ್ಯಯನದ ವಿಷಯವಾಗಿ ಮಾರ್ಪಟ್ಟಿತು. ಕಾರು ಜಾಹೀರಾತೊಂದರಲ್ಲಿ ಈ ಹಾಡನ್ನು ಬಳಸುವುದಕ್ಕಾಗಿ, ಕ್ರಿಸ್ಲರ್‌‌ ಕಾರ್ಪೊರೇಷನ್‌ ವತಿಯಿಂದ ಬಂದ ಹಲವಾರು ದಶಲಕ್ಷ ಡಾಲರುಗಳ ನೀಡಿಕೆಯ ಆಹ್ವಾನವನ್ನು ಕೂಡಾ ಸ್ಪ್ರಿಂಗ್‌ಸ್ಟೀನ್‌ ತಿರಸ್ಕರಿಸಿದ. (ನಂತರದ ವರ್ಷಗಳಲ್ಲಿ, ಆಡಂಬರದ ಮಾತನ್ನು ತೆಗೆದುಹಾಕುವ ದೃಷ್ಟಿಯಿಂದ ಮತ್ತು ಹಾಡಿನ ಮೂಲ ಅರ್ಥವನ್ನು ಹೆಚ್ಚು ವಿಶದವಾಗಿ ಸ್ಪಷ್ಟಗೊಳಿಸುವ ಉದ್ದೇಶದಿಂದ, ಕೇವಲ ವಿದ್ಯುತ್‌ಚಾಲಿತವಲ್ಲದ ಗಿಟಾರ್‌ನ್ನು ಪಕ್ಕವಾದ್ಯವನ್ನಾಗಿ ಇಟ್ಟುಕೊಂಡು ಸ್ಪ್ರಿಂಗ್‌ಸ್ಟೀನ್‌ ಈ ಹಾಡನ್ನು ಪ್ರಸ್ತುತಪಡಿಸಿದ. ನಂತರದ ಬಂದ ಟ್ರಾಕ್ಸ್‌‌ ಎಂಬ ಒಂದು ಗೀತಸಂಪುಟದಲ್ಲೂ ಒಂದು ವಿದ್ಯುತ್‌ಚಾಲಿತವಲ್ಲದ ಆವೃತ್ತಿಯು ಕಾಣಿಸಿಕೊಂಡಿತು.) ಬಾರ್ನ್‌ ಇನ್‌ ದಿ U.S.A. ಗೆ ಸೇರಿದ ಜನಪ್ರಿಯ ಯಶಸ್ಸಿನ ಏಳು ಏಕಗೀತೆಯ ಗಾಯನಗಳ ಪೈಕಿ "ಡಾನ್ಸಿಂಗ್‌ ಇನ್‌ ದಿ ಡಾರ್ಕ್‌" ಅತ್ಯಂತ ದೊಡ್ಡ ಯಶಸ್ಸನ್ನು ದಾಖಲಿಸಿ, ಬಿಲ್‌ಬೋರ್ಡ್‌ ಸಂಗೀತ ಕೋಷ್ಟಕಗಳ ಮೇಲೆ 2ನೇ ಸ್ಥಾನಕ್ಕೇರಿತು. ಈ ಹಾಡಿಗೆ ಸಂಬಂಧಿಸಿದ ಒಂದು ಸಂಗೀತದ ವಿಡಿಯೋದಲ್ಲಿ ಸ್ಪ್ರಿಂಗ್‌ಸ್ಟೀನ್‌ ಜೊತೆಯಲ್ಲಿ ಹರೆಯದ ಕರ್ಟ್ನಿ ಕಾಕ್ಸ್‌ ವೇದಿಕೆಯ ಮೇಲೆ ನರ್ತಿಸುತ್ತಿರುವುದು ಸೇರಿತ್ತು; ಈ ಗೋಚರಿಸುವಿಕೆಯಿಂದಾಗಿ ಆ ನಟಿಯ ವೃತ್ತಿಜೀವನಕ್ಕೆ ಚಾಲನೆ ಸಿಕ್ಕಂತಾಯಿತು. ಡೊನ್ನಾ ಸಮ್ಮರ್‌‌‌ಗಾಗಿ "ಕವರ್‌ ಮಿ" ಎಂಬ ಹಾಡನ್ನು ಸ್ಪ್ರಿಂಗ್‌ಸ್ಟೀನ್‌ ಬರೆದನಾದರೂ, ಹೊಸ ಗೀತಸಂಪುಟಕ್ಕಾಗಿ ಈ ಗೀತೆಯನ್ನು ಕಾದಿರಿಸಿಟ್ಟುಕೊಳ್ಳುವಂತೆ ಅವನ ಧ್ವನಿಮುದ್ರಣ ಕಂಪನಿಯು ಅವನ ಮನವೊಲಿಸಿತು. ಸಮ್ಮರ್‌‌‌ಳ ಕೃತಿಯ ಓರ್ವ ದೊಡ್ಡ ಅಭಿಮಾನಿಯಾದ ಸ್ಪ್ರಿಂಗ್‌ಸ್ಟೀನ್‌, ಅವಳಿಗಾಗಿ "ಪ್ರೊಟೆಕ್ಷನ್‌" ಎಂಬ ಮತ್ತೊಂದು ಬರೆದ. ಗೀತಸಂಪುಟಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಖ್ಯಾತ ಚಲನಚಿತ್ರ ನಿರ್ದೇಶಕರಾದ ಬ್ರಿಯಾನ್‌ ಡಿ ಪಾಮಾ ಮತ್ತು ಜಾನ್‌ ಸೇಯ್ಲ್ಸ್‌ ರೂಪಿಸಿದರು. 1985ರಲ್ಲಿ ಬಂದ "ವೀ ಆರ್‌ ದಿ ವರ್ಲ್ಡ್‌" ಹಾಡು ಮತ್ತು ಗೀತಸಂಪುಟದಲ್ಲಿಯೂ ಸ್ಪ್ರಿಂಗ್‌ಸ್ಟೀನ್‌ ಕಾಣಿಸಿಕೊಂಡ.

'ಬಾರ್ನ್‌ ಇನ್‌ ದಿ U.S.A.' ಪ್ರವಾಸದ ಅವಧಿಯಲ್ಲಿ ನಟಿ ಜೂಲಿಯಾನ್ನೆ ಫಿಲಿಪ್ಸ್‌‌‌ಳನ್ನು ಸ್ಪ್ರಿಂಗ್‌ಸ್ಟೀನ್‌ ಭೇಟಿಯಾದ. 1985ರ ಮೇ ತಿಂಗಳ 13ರಂದು ಓರೆಗಾಂವ್‌ನ ಲೇಕ್‌ ಓಸ್ವೆಗೊ ಎಂಬಲ್ಲಿ ಅವರು ಮದುವೆಯಾದರು; ಮಾಧ್ಯಮಗಳ ಅತೀವವಾದ ಗಮನ ಅವರನ್ನು ಸುತ್ತುವರೆದಿತ್ತು. ಹಿನ್ನೆಲೆಯಲ್ಲಿದ್ದ ವೈರುಧ್ಯಗಳ ಕಾರಣದಿಂದಾಗಿ ಅವರ ಮದುವೆಯು ಸುದೀರ್ಘ-ಅವಧಿಯವರೆಗೆ ನಿಲ್ಲಲಿಲ್ಲ. 1987ರಲ್ಲಿ ಬಂದ ಸ್ಪ್ರಿಂಗ್‌ಸ್ಟೀನ್‌ನ ಟನೆಲ್‌ ಆಫ್‌ ಲವ್‌ ಎಂಬ ಗೀತಸಂಪುಟವು, ಸಂಬಂಧದಲ್ಲಿನ ಅವನ ಕೆಲವೊಂದು ಅಸಂತೋಷದ ಅಂಶಗಳನ್ನು ವಿವರಿಸಿತು. ಅಷ್ಟೇ ಅಲ್ಲ, ಅನೇಕ ಚಿಕಣಿ ಪತ್ರಿಕೆಗಳಿಂದ (ಟ್ಯಾಬ್ಲಾಯ್ಡ್‌‌ಗಳಿಂದ) ವರದಿಮಾಡಲ್ಪಟ್ಟಂತೆ, ತರುವಾಯದ ಟನೆಲ್‌ ಆಫ್‌ ಲವ್‌ ಎಕ್ಸ್‌ಪ್ರೆಸ್‌ ಪ್ರವಾಸದ ಅವಧಿಯಲ್ಲಿ ಪ್ಯಾಟಿ ಸಿಯಾಲ್ಫಾ ಎಂಬ ಹಿನ್ನೆಲೆ ಗಾಯಕಿಯೊಂದಿಗೆ ಸ್ಪ್ರಿಂಗ್‌ಸ್ಟೀನ್‌ ಸಂಗೀತ ಕಾರ್ಯಕ್ರಮವನ್ನು ನೀಡಿದ. ಫಿಲಿಪ್ಸ್‌‌ ಮತ್ತು ಸ್ಪ್ರಿಂಗ್‌ಸ್ಟೀನ್‌ ವಿಚ್ಛೇದನಕ್ಕಾಗಿ 1988ರಲ್ಲಿ ಅರ್ಜಿಸಲ್ಲಿಸಿದರು. 1989ರಲ್ಲಿ ಅವರ ವಿಚ್ಛೇದನವು ಇತ್ಯರ್ಥಗೊಳಿಸಲ್ಪಟ್ಟಿತು.

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
1988ರ ಜುಲೈ 19ರಂದು ಪೂರ್ವ ಬರ್ಲಿನ್‌ನಲ್ಲಿನ ರಾಡ್ರೆನ್‌ಬಾನ್‌ ವೆಯ್ಬೆನ್ಸೀಯಲ್ಲಿನ ಟನೆಲ್‌ ಆಫ್‌ ಲವ್‌ ಎಕ್ಸ್‌ಪ್ರೆಸ್‌ನಲ್ಲಿ ಸ್ಪ್ರಿಂಗ್‌ಸ್ಟೀನ್‌ ಸಂಗೀತ ಕಾರ್ಯಕ್ರಮ ನೀಡುತ್ತಿರುವುದು.

ಜನಪ್ರಿಯ ಸಂಸ್ಕೃತಿಯಲ್ಲಿನ ಮತ್ತು ಆತ ಹಿಂದೆಂದೂ ಮುಟ್ಟಿರದ ಅತ್ಯಂತ ವಿಶಾಲವಾದ ಪ್ರೇಕ್ಷಕ ಸಮುದಾಯದಲ್ಲಿನ ಸ್ಪ್ರಿಂಗ್‌ಸ್ಟೀನ್‌ನ ಗೋಚರತ್ವದ ಉತ್ತುಂಗವನ್ನು ಬಾರ್ನ್‌ ಇನ್‌ ದಿ U.S.A. ಅವಧಿಯು ಪ್ರತಿನಿಧಿಸಿತು (ಏಕಗೀತೆಯ ಹಾಡುಗಳ ಪೈಕಿ ಮೂರರ ಕುರಿತಾದ ಆರ್ಥರ್‌ ಬೇಕರ್‌‌ನ ನೃತ್ಯ ಸಮ್ಮಿಶ್ರಣಗಳ ಬಿಡುಗಡೆಯಿಂದ ಇದಕ್ಕೆ ನೆರವು ಸಿಕ್ಕಿತ್ತು). ಐದು-ಧ್ವನಿಮುದ್ರಿಕೆ ಪೆಟ್ಟಿಗೆಗಳ ಒಂದು ಸಂಚಯವಾದ ಲೈವ್‌/1975–85 (ಮೂರು ಕ್ಯಾಸೆಟ್ಟುಗಳು ಅಥವಾ ಮೂರು CDಗಳ ಸ್ವರೂಪದಲ್ಲೂ ಬಿಡುಗಡೆಯಾಯಿತು), 1986ರ ಅಂತ್ಯದ ವೇಳೆಗೆ ಬಿಡುಗಡೆಯಾಯಿತು ಮತ್ತು U.S.ನ ಗೀತಸಂಪುಟದ ಕೋಷ್ಟಕಗಳ ಮೇಲೆ ಮೊದಲನೇ ಸ್ಥಾನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವಲ್ಲಿನ ಮೊದಲ ಪೆಟ್ಟಿಗೆಯ ಸಂಚಯ ಎಂಬ ಕೀರ್ತಿಗೆ ಇದು ಪಾತ್ರವಾಯಿತು. U.S.ನಲ್ಲಿ ಅಂತಿಮವಾಗಿ 13 ದಶಲಕ್ಷ ಪ್ರತಿಗಳಷ್ಟು ಮಾರಾಟವಾಗುವುದರೊಂದಿಗೆ, ಇದು ಸಾರ್ವಕಾಲಿಕವಾಗಿ ಹೆಚ್ಚಿನ ವ್ಯಾಪಾರೀ ಯಶಸ್ಸನ್ನು ದಾಖಲಿಸಿದ ಪ್ರತ್ಯಕ್ಷ ಧ್ವನಿಮುದ್ರಣದ ಗೀತಸಂಪುಟಗಳ ಪೈಕಿ ಒಂದೆನಿಸಿದೆ. ಆ ಹಂತಕ್ಕೆ ಸ್ಪ್ರಿಂಗ್‌ಸ್ಟೀನ್‌ನ ವೃತ್ತಿಜೀವನವನ್ನು ಲೈವ್‌/1975–85 ಗೀತಸಂಪುಟವು ತಂದುಮುಟ್ಟಿಸಿತು ಮತ್ತು ಅವನ ಅಭಿಮಾನಿಗಳಿಗೆ ಹೆಚ್ಚು ಶಕ್ತಿಯುತವಾಗಿ ಕಾಣುವಂತೆ ಮಾಡಿದ ಅವನ ಕೆಲವೊಂದು ಅಂಶಗಳನ್ನು ಅದು ಪ್ರದರ್ಶಿಸಿತು: ದುಃಖದ ಚರಮಗೀತೆಗಳಿಂದ ಸಂತೋಷಕೂಟ ರಾಕ್‌‌ಗೀತೆಗಳಿಗೆ ಬದಲಾಯಿಸಿ ಮತ್ತೆ ಹಿಂದಿರುಗುವುದು; ಕಲಾವಿದ ಮತ್ತು ಪ್ರೇಕ್ಷಕರ ನಡುವಿನ ಉದ್ದೇಶದ ಸಾಮುದಾಯಿಕ ಪ್ರಜ್ಞೆ; ತನ್ನ ತಂದೆಯೊಂದಿಗೆ ಸ್ಪ್ರಿಂಗ್‌ಸ್ಟೀನ್ ಹೊಂದಿದ್ದ ಕಷ್ಟಕರ ಸಂಬಂಧವನ್ನು ವಿವರಿಸುವ ಅಂಶಗಳೂ ಸೇರಿದಂತೆ ಹಾಡುಗಳಿಗೆ ಮುಂಚಿತವಾಗಿ ಬರುವ, ಸುದೀರ್ಘವಾದ, ಉತ್ಕಟವಾದ ಮಾತಿನ ರೂಪದ ಸಂಗೀತದ ನಿರ್ದಿಷ್ಟಭಾಗಗಳು; ಮತ್ತು "ರೇಸಿಂಗ್‌ ಇನ್‌ ದಿ ಸ್ಟ್ರೀಟ್‌"ಗೆ ಇರುವ ಸುದೀರ್ಘವಾದ ದೀರ್ಘ ಗೀತಭಾಗದಲ್ಲಿ ಕಂಡುಬರುವಂಥ E ಸ್ಟ್ರೀಟ್‌ ಬ್ಯಾಂಡ್‌ನ ವಾದ್ಯಸಂಗೀತದ ಕುಶಲತೆ ಇವೇ ಮೊದಲಾದವು ಸ್ಪ್ರಿಂಗ್‌ಸ್ಟೀನ್‌ನ ಕೆಲವೊಂದು ವಿಶಿಷ್ಟ ಅಂಶಗಳಾಗಿದ್ದವು. ಅದರ ಜನಪ್ರಿಯತೆಯ ಹೊರತಾಗಿಯೂ, ಕೆಲವೊಂದು ಅಭಿಮಾನಿಗಳು ಮತ್ತು ವಿಮರ್ಶಕರು ಗೀತಸಂಪುಟದ ಹಾಡಿನ ಆಯ್ಕೆಯು ಇನ್ನೂ ಉತ್ತಮವಾಗಿರಲು ಸಾಧ್ಯವಿತ್ತು ಎಂದು ಅಭಿಪ್ರಾಯಪಟ್ಟರು. ಸ್ಪ್ರಿಂಗ್‌ಸ್ಟೀನ್‌ ಸಂಗೀತ ಕಚೇರಿಗಳು, ವಾಡಿಕೆಯ ಕಳ್ಳತಯಾರಿಕೆಯ ಧ್ವನಿಮುದ್ರಣ ಹಾಗೂ ಅಭಿಮಾನಿಗಳ ನಡುವಿನ ಮಾರುವಿಕೆಯ ವಾಡಿಕೆಯ ವಿಷಯಗಳಾಗಿ ಪರಿಣಮಿಸಿವೆ.

80ರ ದಶಕದ ಮಧ್ಯಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪ್ರಿಂಗ್‌ಸ್ಟೀನ್‌ನ ಮಹಾನ್‌‌ ತಾರಾಪಟ್ಟವು ಉತ್ತುಂಗಕ್ಕೇರುವ ಹೊತ್ತಿಗೆ, UKನಲ್ಲಿ ಮತ್ತು ಇನ್ನಿತರ ಕಡೆಗಳಲ್ಲಿ ಐದಕ್ಕಿಂತ ಕಡಿಮೆಯಿಲ್ಲದ ಸ್ಪ್ರಿಂಗ್‌ಸ್ಟೀನ್‌ ಅಭಿಮಾನಿಗಳ ಪತ್ರಿಕೆಗಳು ಅದೇ ವೇಳೆಗೆ ಚಲಾವಣೆಯಲ್ಲಿದ್ದವು. ಲಿವರ್‌ಪೂಲ್‌ನಲ್ಲಿ ಹುಟ್ಟಿಕೊಂಡ ಗ್ಯಾರಿ ಡೆಸ್ಮಂಡ್‌ನ 'ಕ್ಯಾಂಡಿ'ಸ್‌ ರೂಮ್‌' ಪತ್ರಿಕೆಯು 1980ರಲ್ಲಿ ಮೊದಲಿಗೆ ಮಾರುಕಟ್ಟೆಗೆ ಬಂದಿತು. ನಂತರ ಶೀಘ್ರವಾಗಿ ಇದನ್ನು ಅನುಸರಿಸಿಕೊಂಡು ಡ್ಯಾನ್‌ ಫ್ರೆಂಚ್‌ನ 'ಪಾಯಿಂಟ್‌ ಬ್ಲಾಂಕ್‌', ಡೇವ್‌ ಪರ್ಸಿವಲ್‌ನ 'ದಿ ಫಿವರ್‌', ಜೆಫ್‌ ಮ್ಯಾಥ್ಯೂಸ್‌ನ 'ರೆಂಡೆಜ್‌ವಸ್‌' ಮತ್ತು ಪಾಲ್‌ ಲಿಂಬ್ರಿಕ್‌ನ 'ಜ್ಯಾಕ್‌ಸನ್‌ ಕೇಜ್‌‌' ಮೊದಲಾದ ಪತ್ರಿಕೆಗಳು ದಾಂಗುಡಿಯಿಟ್ಟವು. USನಲ್ಲಿ, ಸಿಯಾಟ್ಲ್‌ನಲ್ಲಿ ಪ್ರಾರಂಭಗೊಂಡ ಬ್ಯಾಕ್‌ಸ್ಟ್ರೀಟ್ಸ್‌ ಮ್ಯಾಗಝೀನ್‌ ಈಗಲೂ ಸಹ ಒಂದು ಹೊಳಪುಕಾಗದದ ಪ್ರಕಟಣೆಯಾಗಿಯೇ ಮುಂದುವರಿಯುತ್ತಿದ್ದು, ಈಗ ಅದು ಸ್ಪ್ರಿಂಗ್‌ಸ್ಟೀನ್‌ನ ಆಡಳಿತ ನಿರ್ವಹಣೆ ಹಾಗೂ ಅಧಿಕೃತ ವೆಬ್‌ಸೈಟ್‌ನೊಂದಿಗೆ ಸಂಪರ್ಕವನ್ನು ಹೊಂದಿದೆ.

ವ್ಯಾಪಾರೀ ವಲಯದಲ್ಲಿನ ಈ ಉತ್ತುಂಗ ಶಿಖರವನ್ನು ಮುಟ್ಟಿದ ನಂತರ, ಟನೆಲ್‌ ಆಫ್‌ ಲವ್‌ (1987) ಎಂಬ ಹೆಸರಿನ ಒಂದು ಅತೀವವಾದ ಉದ್ವೇಗರಹಿತ ಮತ್ತು ಚಿಂತನಶೀಲ ಕೃತಿಯನ್ನು ಸ್ಪ್ರಿಂಗ್‌ಸ್ಟೀನ್‌ ಬಿಡುಗಡೆಮಾಡಿದ. ಇದು ಕಂಡುಕೊಂಡ, ಕಳೆದುಕೊಂಡ ಮತ್ತು ಅಪವ್ಯಯ ಮಾಡಲ್ಪಟ್ಟ ಪ್ರೀತಿಯ ಅನೇಕ ಮುಖಗಳ ಒಂದು ಪ್ರಬುದ್ಧ ಪ್ರತಿಬಿಂಬವಾಗಿದ್ದು, ಇಂಥವನ್ನು ಕೇವಲ ಆರಿಸಿ ತೆಗೆದು ಸ್ಟ್ರೀಟ್‌ ಬ್ಯಾಂಡ್‌ ಬಳಕೆಮಾಡಿತು.

ಇದು ಜೂಲಿಯಾನ್ನೆ ಫಿಲಿಪ್ಸ್‌ ಜೊತೆಗಿನ ಅವನ ಮದುವೆಯು ಮುರಿದು ಬೀಳಲಿರುವುದನ್ನು ಮುನ್ಸೂಚಕವಾಗಿ ಹೇಳಿತು. ಪ್ರೀತಿಯ ಸವಾಲುಗಳನ್ನು ಪ್ರತಿಬಿಂಬಿಸುತ್ತಾ, ಬ್ರಿಲಿಯಂಟ್‌ ಡಿಸ್‌ಗೈಸ್‌  ಸಂಪುಟದಲ್ಲಿ ಸ್ಪ್ರಿಂಗ್‌ಸ್ಟೀನ್‌ ಈ ರೀತಿ ಹಾಡಿದ:  
I heard somebody call your name, from underneath our willow. I saw something tucked in shame, underneath your pillow. Well I've tried so hard baby, but I just can't see. What a woman like you is doing with me.

ತರುವಾಯದಲ್ಲಿ ಬಂದ ಟನೆಲ್‌ ಆಫ್‌ ಲವ್‌ ಎಕ್ಸ್‌ಪ್ರೆಸ್‌ ಪ್ರವಾಸವು, ವೇದಿಕೆಯ ವಿನ್ಯಾಸಕ್ಕೆ ಮಾಡಲಾದ ಬದಲಾವಣೆಗಳು, ಸಿದ್ಧಪಡಿಸಲಾದ ಪಟ್ಟಿಯಿಂದ ಅಚ್ಚುಮೆಚ್ಚಿನ ಗೀತೆಗಳನ್ನು ಕೈಬಿಟ್ಟಿದ್ದು, ಮತ್ತು ಕಹಳೆವಾದ್ಯ ಆಧರಿತ ವಾದ್ಯಗೋಷ್ಠಿಯ ವ್ಯವಸ್ಥೆಗಳಿಂದಾಗಿ ಅಭಿಮಾನಿಗಳನ್ನು ಬಡಿದೆಬ್ಬಿಸಿತು. 1988ರಲ್ಲಿ ಆದ ಐರೋಪ್ಯ ಪ್ರವಾಸದ ಹಂತದಲ್ಲಿ ಸಿಯಾಲ್ಫಾ ಜೊತೆಗಿನ ಸ್ಪ್ರಿಂಗ್‌ಸ್ಟೀನ್‌ನ ಸಂಬಂಧವು ಬಹಿರಂಗವಾಯಿತು. ನಂತರ 1988ರಲ್ಲಿ ವಿಶ್ವಾದ್ಯಂತ ಕೈಗೊಳ್ಳಲಾದ ಹ್ಯೂಮನ್‌ ರೈಟ್ಸ್‌ ನೌ! ಪ್ರವಾಸದ ಮೂಲಕ ಸ್ಪ್ರಿಂಗ್‌ಸ್ಟೀನ್‌ ಪ್ರಚಾರಗಿಟ್ಟಿಸಿದ. ಇದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌‌‌‌ಗೋಸ್ಕರ ಕೈಗೊಂಡ ಪ್ರವಾಸವಾಗಿತ್ತು. 1989ರ ಶರತ್ಕಾಲದಲ್ಲಿ ಅವನು E ಸ್ಟ್ರೀಟ್‌ ಬ್ಯಾಂಡ್‌ನ್ನು ಕೊನೆಗಾಣಿಸಿದ, ಮತ್ತು ಅವನು ಹಾಗೂ ಸಿಯಾಲ್ಫಾ ಕ್ಯಾಲಿಫೋರ್ನಿಯಾದಲ್ಲಿ ನೆಲೆಯನ್ನು ಕಂಡುಕೊಂಡರು. 1991ರಲ್ಲಿ ಸಿಯಾಲ್ಫಾಳನ್ನು ಸ್ಪ್ರಿಂಗ್‌ಸ್ಟೀನ್‌ ಮದುವೆಯಾದ. ಅವರಿಗೆ ಮೂವರು ಮಕ್ಕಳಿದ್ದಾರೆ: ಇವಾನ್‌ ಜೇಮ್ಸ್‌ (ಜನನ: 1990), ಜೆಸ್ಸಿಕಾ ರೇ (ಜನನ: 1991) ಮತ್ತು ಸ್ಯಾಮ್‌ ರೈಯಾನ್‌ (ಜನನ: 1994).

1992–2001: ಕಲಾತ್ಮಕ ಮತ್ತು ವ್ಯಾಪಾರೀ ಏಳು-ಬೀಳುಗಳು

1992ರಲ್ಲಿ, ಲಾಸ್‌ ಏಂಜಲೀಸ್‌ಗೆ ತೆರಳುವ (ಜೆರ್ಸಿ ಷೋರ್‌ನ ಕಾರ್ಮಿಕರ ಜೀವನದೊಂದಿಗೆ ಗಾಢವಾದ ಸಂಬಂಧವನ್ನು ಹೊಂದಿದ ಓರ್ವರಿಗೆ ಸಂಬಂಧಿಸಿದ ಒಂದು ಆಮೂಲಾಗ್ರ ಚಲನಾ-ಕ್ರಮ) ಮೂಲಕ "ಹಾಲಿವುಡ್‌ಗೆ ಹೋಗುತ್ತಿರುವ" ಅಪವಾದಗಳಿಗೆ ಒಳಗಾದ ನಂತರ ಮತ್ತು ಅವಧಿ ಸಂಗೀತಗಾರರ ಜೊತೆಯಲ್ಲಿ ಕೆಲಸ ಮಾಡಿದ ನಂತರ, ಒಂದೇ ಬಾರಿಗೆ ಎರಡು ಗೀತಸಂಪುಟಗಳನ್ನು ಸ್ಪ್ರಿಂಗ್‌ಸ್ಟೀನ್‌ ಬಿಡುಗಡೆಮಾಡಿದ. ಹ್ಯೂಮನ್‌ ಟಚ್‌ ಮತ್ತು ಲಕಿ ಟೌನ್‌ ಕೃತಿಗಳು, ಅವನ ಹಿಂದಿನ ಬೇರಾವುದೇ ಕೃತಿಗಿಂತ ಇನ್ನೂ ಹೆಚ್ಚು ಆತ್ಮಶೋಧಕ ಲಕ್ಷಣವನ್ನು ಒಳಗೊಂಡಿದ್ದವು ಹಾಗೂ ಒಂದು ಹೊಸದಾಗಿ ಪ್ರಕಟಗೊಂಡ ಆತ್ಮವಿಶ್ವಾಸವನ್ನು ಅವು ಪ್ರದರ್ಶಿಸಿದವು. ಸಂತೋಷದ ಕುರಿತಾದ ಕನಸನ್ನು ಹೊರಹೊಮ್ಮಿಸಿದ ಅವನ ಮೊದಲ ಎರಡು ಗೀತಸಂಪುಟಗಳಿಗೆ, ಮತ್ತು ಅವುಗಳ ಕುರಿತು ಕಳವಳವನ್ನು ಆತ ಬೆಳೆಸಿಕೊಳ್ಳುತ್ತಿರುವುದನ್ನು ಪ್ರದರ್ಶಿಸಿದ ಅವನ ಮುಂದಿನ ನಾಲ್ಕು ಗೀತಸಂಪುಟಗಳಿಗೆ ತದ್ವಿರುದ್ಧವಾಗಿ, ಲಕಿ ಟೌನ್‌ ಗೀತಸಂಪುಟದ ಕೆಲ ಹಂತಗಳಲ್ಲಿ ಸ್ಪ್ರಿಂಗ್‌ಸ್ಟೀನ್‌ ವಾಸ್ತವವಾಗಿ ಸ್ವತಃ ತನಗಾಗಿ ಸಂತೋಷವನ್ನು ಪ್ರತಿಪಾದಿಸುತ್ತಾನೆ.

ವಿದ್ಯುತ್‌ಚಾಲಿತವಲ್ಲದ MTV ಅನ್‌ಪ್ಲಗ್ಡ್‌ ದೂರದರ್ಶನ ಕಾರ್ಯಕ್ರಮದಲ್ಲಿನ ಒಂದು ವಿದ್ಯುಚ್ಚಾಲಿತ ವಾದ್ಯವೃಂದದ ಗೋಚರಿಸುವಿಕೆಯು (ಇನ್‌ ಕನ್ಸರ್ಟ್‌/MTV ಅನ್‌ಪ್ಲಗ್ಡ್‌ ಎಂಬ ಹೆಸರಿನಲ್ಲಿ ಇದು ನಂತರ ಬಿಡುಗಡೆಯಾಯಿತು) ಉತ್ತಮ ಮಟ್ಟದಲ್ಲಿ ಸ್ವೀಕರಿಸಲ್ಪಡಲಿಲ್ಲ ಹಾಗೂ ಅಭಿಮಾನಿಗಳ ಅತೃಪ್ತಿಯನ್ನು ಅದು ಮತ್ತಷ್ಟು ಬಲಗೊಳಿಸಿತು. ಇದನ್ನು ಕೆಲವರ್ಷಗಳ ನಂತರ ಸ್ಪ್ರಿಂಗ್‌ಸ್ಟೀನ್‌ ಅರಿತುಕೊಂಡ ಎಂದು ತೋರುತ್ತದೆ; ಹೀಗಾಗಿಯೇ ರಾಕ್‌ ಅಂಡ್‌ ರೋಲ್‌ ಕೀರ್ತಿಭವನದಲ್ಲಿ ತನ್ನ ಹೆಸರಿನ ಸೇರ್ಪಡೆಯ ಕುರಿತು ಒಪ್ಪಿಗೆ ಸೂಚಿಸುವ ಸಂದರ್ಭದಲ್ಲಿ ಭಾಷಣ ಮಾಡುವಾಗ ತನ್ನ ದಿವಂಗತ ತಂದೆಯ ಕುರಿತಾಗಿ ಹಾಸ್ಯಭರಿತ ಶೈಲಿಯಲ್ಲಿ ಅವನು ಮಾತನಾಡಿದ:

I've gotta thank him because — what would I conceivably have written about without him? I mean, you can imagine that if everything had gone great between us, we would have had disaster. I would have written just happy songs – and I tried it in the early '90s and it didn't work; the public didn't like it.

ಹಲವು ಗ್ರಾಮಿ ಪ್ರಶಸ್ತಿಗಳ ವಿಜೇತನಾದ ಸ್ಪ್ರಿಂಗ್‌ಸ್ಟೀನ್‌, "ಸ್ಟ್ರೀಟ್ಸ್ ಆಫ್‌ ಫಿಲಡೆಲ್ಫಿಯಾ" ಎಂಬ ತನ್ನ ಹಾಡಿಗಾಗಿ 1994ರಲ್ಲಿ ಒಂದು ಅಕಾಡೆಮಿ ಪ್ರಶಸ್ತಿಯನ್ನೂ ಗೆದ್ದುಕೊಂಡ; ಈ ಹಾಡು ಫಿಲಡೆಲ್ಫಿಯಾ ಎಂಬ ಚಲನಚಿತ್ರದ ಧ್ವನಿಪಥದಲ್ಲಿ ಕಾಣಿಸಿಕೊಂಡಿತು. ಸದರಿ ಚಲನಚಿತ್ರದ ಜೊತೆಗೆ, AIDSನಿಂದ ಸಾಯುತ್ತಿರುವ ಓರ್ವ ಸಲಿಂಗಕಾಮಿ ಮನುಷ್ಯನ ಕುರಿತಾಗಿ ಈ ಹಾಡು ಒಳಗೊಂಡಿದ್ದ ಸಹಾನುಭೂತಿಯ ನಿರೂಪಣೆಗಾಗಿ ಅದು ಅನೇಕರ ಶ್ಲಾಘನೆಗೆ ಒಳಗಾಯಿತು.[ಸೂಕ್ತ ಉಲ್ಲೇಖನ ಬೇಕು] ಈ ಹಾಡಿಗೆ ಸಂಬಂಧಿಸಿದ ಸಂಗೀತದ ವಿಡಿಯೋ ಸ್ಪ್ರಿಂಗ್‌ಸ್ಟೀನ್‌ನ ನಿಜವಾದ ಹಾಡುಗಾರಿಕೆಯ ಪ್ರಸ್ತುತಿಯನ್ನು ತೋರಿಸುತ್ತದೆ; ಒಂದು ಪೂರ್ವಧ್ವನಿಮುದ್ರಿತ ವಾದ್ಯಸಂಗೀತದ ಧ್ವನಿಪಥಕ್ಕೆ ಆತ ನೀಡಿದ ಸಂಗೀತದ ಪ್ರಸ್ತುತಿಯನ್ನು ಒಂದು ಅಡಗಿಸಿಟ್ಟ ಧ್ವನಿವರ್ಧಕವನ್ನು ಬಳಸಿಕೊಂಡು ಧ್ವನಿಮುದ್ರಿಸಿದ ಚಿತ್ರಣ ಇದಾಗಿದೆ.[ಸೂಕ್ತ ಉಲ್ಲೇಖನ ಬೇಕು] ಈ ಕೌಶಲವನ್ನು "ಬ್ರಿಲಿಯಂಟ್‌ ಡಿಸ್‌ಗೈಸ್‌" ವಿಡಿಯೋ ಮೇಲೆ ಅಭಿವೃದ್ಧಿಪಡಿಸಲಾಯಿತು.

1995ರಲ್ಲಿ, ತನ್ನ ಮೊದಲ ಗ್ರೇಟೆಸ್ಟ್‌ ಹಿಟ್ಸ್‌ ಗೀತಸಂಪುಟಕ್ಕೆ (ಬ್ಲಡ್‌ ಬ್ರದರ್ಸ್‌‌ ಎಂಬ ಸಾಕ್ಷ್ಯಚಿತ್ರದಲ್ಲಿ ಇದರ ಧ್ವನಿಮುದ್ರಣ ಅವಧಿಯ ಕುರಿತು ದಾಖಲಿಸಲಾಯಿತು) ಸಂಬಂಧಿಸಿದಂತೆ ಕೆಲವೊಂದು ಹೊಸ ಹಾಡುಗಳನ್ನು ಧ್ವನಿಮುದ್ರಿಸುವುದಕ್ಕಾಗಿ E ಸ್ಟ್ರೀಟ್‌ ಬ್ಯಾಂಡ್‌ನ್ನು ತಾತ್ಕಾಲಿಕವಾಗಿ ಮರು-ಸಂಘಟನೆ ಮಾಡಿದ ನಂತರ, ದಿ ಘೋಸ್ಟ್‌ ಆಫ್‌ ಟಾಮ್‌ ಜೋಡ್‌ ಎಂಬ ತನ್ನ ಎರಡನೇ (ಪ್ರಾಯಶಃ) ತನಿ ಗಿಟಾರ್‌‌ ಗೀತಸಂಪುಟವನ್ನು ಅವನು ಬಿಡುಗಡೆಮಾಡಿದ; ಪುಲಿಟ್ಜರ್‌‌ ಪ್ರಶಸ್ತಿ-ವಿಜೇತರಾದ, ಲೇಖಕ ಡೇಲ್‌ ಮಹಾರಿಡ್ಜ್‌‌ ಮತ್ತು ಛಾಯಾಗ್ರಾಹಕ ಮೈಕೇಲ್‌ ವಿಲಿಯಮ್‌ಸನ್‌‌ರಿಂದ ರೂಪಿಸಲ್ಪಟ್ಟ ಜರ್ನಿ ಟು ನೋವೇರ್‌: ದಿ ಸಾಗಾ ಆಫ್‌ ದಿ ನ್ಯೂ ಅಂಡರ್‌ಕ್ಲಾಸ್‌ ಎಂಬ ಪುಸ್ತಕದಿಂದ ಇದು ಪ್ರೇರೇಪಿಸಲ್ಪಟ್ಟಿತ್ತು. ಇದೇ ರೀತಿಯಲ್ಲಿದ್ದ ನೆಬ್ರಾಸ್ಕಾ ದಷ್ಟು ಉತ್ತಮ ರೀತಿಯಲ್ಲಿ ಈ ಗೀತಸಂಪುಟವು ಸಾರ್ವತ್ರಿಕವಾಗಿ ಸ್ವೀಕರಿಸಲ್ಪಡಲಿಲ್ಲ; ಇದರಲ್ಲಿನ ಬಹುಪಾಲು ಹಾಡುಗಳು ಹೊಂದಿದ್ದ ಕನಿಷ್ಟತಮ ಮಾಧುರ್ಯ, ಠೇಂಕಾರದ ಗಾಯನಭಾಗಗಳು, ಮತ್ತು ರಾಜಕೀಯ ಸ್ವರೂಪ ಇವೇ ಮೊದಲಾದವು ಇದಕ್ಕೆ ಕಾರಣವಾಗಿತ್ತು. ಇಷ್ಟಾಗಿಯೂ ಸಹ ಅಮೆರಿಕಾದ ಸಂಸ್ಕೃತಿಯಲ್ಲಿ ಅಪರೂಪವಾಗಿದ್ದ ವಲಸೆಗಾರರು ಮತ್ತು ಇತರರ ಅಭಿವ್ಯಕ್ತಿಗೆ ಈ ಗೀತಸಂಪುಟವು ಧ್ವನಿ ನೀಡಿತು ಎಂಬುದಾಗಿ ಇದನ್ನು ಹೊಗಳಿದರು. ಇದನ್ನು ಅನುಸರಿಸಿಕೊಂಡು ವಿಶ್ವಾದ್ಯಂತ ಕೈಗೊಳ್ಳಲಾದ ಸುದೀರ್ಘವಾದ, ಸಣ್ಣ-ತಾಣಗಳಲ್ಲಿ ನಡೆಯುವ, ತನಿ ಪ್ರಸ್ತುತಿಯ, ವಿದ್ಯುತ್‌ಚಾಲಿತವಲ್ಲದ ಘೋಸ್ಟ್‌ ಆಫ್‌ ಟಾಮ್‌ ಜೋಡ್‌ ಪ್ರವಾಸವು, ತೀವ್ರವಾಗಿ ಮರುರೂಪಿಸಲ್ಪಟ್ಟ ವಿದ್ಯುತ್‌ಚಾಲಿತವಲ್ಲದ ಸ್ವರೂಪದಲ್ಲಿನ ಅವನ ಅನೇಕ ಹಳೆಯ ಹಾಡುಗಳನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿತು; ಆದರೂ, ಸಂಗೀತ ಪ್ರಸ್ತುತಿಗಳು ನಡೆಯುತ್ತಿರುವಾಗ ನಿಶ್ಯಬ್ದದಿಂದಿರುವಂತೆ ಮತ್ತು ಚಪ್ಪಾಳೆ ತಟ್ಟದಂತೆ ಸ್ಪ್ರಿಂಗ್‌ಸ್ಟೀನ್‌ ತನ್ನ ಅಭಿಮಾನಿ ಪ್ರೇಕ್ಷಕರಿಗೆ ಸ್ಪಷ್ಟವಾಗಿ ನೆನಪಿಸಿದ್ದ. [ಸೂಕ್ತ ಉಲ್ಲೇಖನ ಬೇಕು]

ಪ್ರವಾಸದ ನಂತರ, ಸ್ಪ್ರಿಂಗ್‌ಸ್ಟೀನ್‌ ತನ್ನ ಕುಟುಂಬದೊಂದಿಗೆ ನ್ಯೂಜರ್ಸಿಗೆ ಮರಳಿದ. 1998ರಲ್ಲಿ, ಟ್ರಾಕ್ಸ್‌‌ ಎಂಬ ಹೆಸರಿನ, ತಿರಸ್ಕೃತ-ಭಾಗಗಳ ನಾಲ್ಕು-ಧ್ವನಿಮುದ್ರಿಕೆ ತಟ್ಟೆಯ ಒಂದು ಅವ್ಯವಸ್ಥಿತವಾದ ಪೆಟ್ಟಿಗೆಯ ಸಂಚಯವನ್ನು ಸ್ಪ್ರಿಂಗ್‌ಸ್ಟೀನ್‌ ಬಿಡುಗಡೆಮಾಡಿದ. ತರುವಾಯದಲ್ಲಿ, 1990ರ ದಶಕವು ತನಗೆ ಸಂಬಂಧಿಸಿದಂತೆ ಒಂದು "ಕಳೆದುಹೋದ ಅವಧಿಯಾಗಿತ್ತು" ಎಂಬುದನ್ನು ಸ್ಪ್ರಿಂಗ್‌ಸ್ಟೀನ್‌ ಸಮ್ಮತಿಸಿದ: "ಈ ಅವಧಿಯಲ್ಲಿ ನಾನು ಹೆಚ್ಚಿನ ಕೆಲಸವನ್ನೇನೂ ಕೈಗೊಳ್ಳಲಿಲ್ಲ. ನನ್ನ ಅತ್ಯುತ್ತಮ ಕೃತಿಯನ್ನು ನಾನು ಹೊರತರಲಿಲ್ಗ ಎಂದು ಕೆಲವು ಜನರು ಹೇಳುತ್ತಿದ್ದರು" ಎಂಬುದಾಗಿ ಆತ ಈ ಸಂದರ್ಭದಲ್ಲಿ ಹೇಳಿಕೊಂಡ.

1999ರಲ್ಲಿ ಆತ U2 ವತಿಯಿಂದ ರಾಕ್‌ ಅಂಡ್‌ ರೋಲ್‌ ಕೀರ್ತಿಭವನದಲ್ಲಿ ಸ್ಪ್ರಿಂಗ್‌ಸ್ಟೀನ್‌ ಸೇರಿಸಲ್ಪಟ್ಟನಾದರೂ, ಈ ಮೆಚ್ಚಿಕೆ ಅಥವಾ ಮಾನ್ಯತೆಯನ್ನು ಆತ 2005ರಲ್ಲಿ ಹಿಂದಿರುಗಿಸಿದ.

1999ರಲ್ಲಿ, ಸ್ಪ್ರಿಂಗ್‌ಸ್ಟೀನ್‌ ಮತ್ತು E ಸ್ಟ್ರೀಟ್‌ ಬ್ಯಾಂಡ್‌ ಸದಸ್ಯರು ಮತ್ತೊಮ್ಮೆ ಅಧಿಕೃತವಾಗಿ ಒಂದುಗೂಡಿದರು ಮತ್ತು ಒಂದು ವರ್ಷದ ಅವಧಿಯವರೆಗೆ ನಡೆದ, ವ್ಯಾಪಕವಾದ ಪುನರ್ಮಿಲನದ ಪ್ರವಾಸವನ್ನು ಕೈಗೊಂಡರು. ಪ್ರವಾಸದ ಕಾರ್ಯಸೂಚಿಯಲ್ಲಿ ಅಮೆರಿಕಾದಲ್ಲಿನ ಒಂದು ಹಂತವನ್ನು ಚಾಲನೆಗೊಳಿಸುವ ಸಲುವಾಗಿ, ನ್ಯೂಜರ್ಸಿಯ ಪೂರ್ವ ರುದರ್‌ಫೋರ್ಡ್‌ ಎಂಬಲ್ಲಿರುವ ಕಾಂಟಿನೆಂಟಲ್‌ ಏರ್‌ಲೈನ್ಸ್‌‌ ಅರೆನಾದಲ್ಲಿ ಆಯೋಜಿಸಲಾಗಿದ್ದ 15-ಪ್ರದರ್ಶನದ ಓಟದ ಟಿಕೆಟ್ಟುಗಳು ಸಂಪೂರ್ಣವಾಗಿ-ಮಾರಾಟಗೊಂಡಿದ್ದರ ಒಂದು ದಾಖಲೆಯು ಈ ಪ್ರವಾಸದ ಮುಖ್ಯಾಂಶಗಳಲ್ಲಿ ಸೇರಿತ್ತು.

E ಸ್ಟ್ರೀಟ್‌ ಬ್ಯಾಂಡ್‌ ಜೊತೆಗಿನ ಸ್ಪ್ರಿಂಗ್‌ಸ್ಟೀನ್‌ನ ಪುನರ್ಮಿಲನದ ಪ್ರವಾಸವು ಒಂದು ವಿಜಯೋತ್ಸಾಹದ ಹತ್ತು-ರಾತ್ರಿಯ ಸಂಗೀತ ಕಚೇರಿಯೊಂದಿಗೆ ಸಮಾಪ್ತಿಯಾಯಿತು; 2000ರ ಮಧ್ಯಭಾಗದಲ್ಲಿ ನ್ಯೂಯಾರ್ಕ್‌ ನಗರದ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ ಎಂಬಲ್ಲಿ ನಡೆದ ಈ ಕೂಟದ ಟಿಕೆಟ್ಟುಗಳು ಸಂಪೂರ್ಣವಾಗಿ ಮಾರಾಟಗೊಂಡವಷ್ಟೇ ಅಲ್ಲ, ಅಮಡೌ ಡಯಲೊ ಎಂಬಾತನಿಗೆ ಆರಕ್ಷಕರು ಗುಂಡಿಕ್ಕಿದುದರ ಕುರಿತಾದ "ಅಮೆರಿಕನ್‌ ಸ್ಕಿನ್‌ (41 ಷಾಟ್ಸ್‌)" ಎಂಬ ಹೊಸ ಹಾಡಿನ ಕುರಿತಾಗಿ ಹುಟ್ಟಿಕೊಂಡ ವಿವಾದಕ್ಕೂ ಅದು ಕಾರಣವಾಯಿತು. ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ನಡೆದ ಅಂತಿಮ ಪ್ರದರ್ಶನಗಳು ಧ್ವನಿಮುದ್ರಿಸಲ್ಪಟ್ಟವು ಮತ್ತು ಅವು ಒಂದು HBO ಸಂಗೀತ ಕಚೇರಿಯಾಗಿ ಹೊರಹೊಮ್ಮಿದವು; ಇದಕ್ಕೆ ಸಂಬಂಧಪಟ್ಟ DVD ಮತ್ತು ಗೀತಸಂಪುಟಗಳು ...Bruce Springsteen & the E Street Band: Live in New York City ಎಂಬುದಾಗಿ ಬಿಡುಗಡೆಗೊಂಡವು.

2002ರಿಂದ ಇಂದಿನವರೆಗೆ: ಮುಖ್ಯವಾಹಿನಿಯ ಯಶಸ್ಸಿಗೆ ಮರಳಿಕೆ

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
2003ರ ಜುಲೈ ಅವಧಿಯಲ್ಲಿ ಬ್ಯಾನರ್‌‌-ಗುರುತು ಮಾಡಿರುವ, ದಾಖಲಾರ್ಹ-ಸಜ್ಜಿಕೆಯ 10-ರಾತ್ರಿಯ ಠಿಕಾಣಿಯ ದಿ ರೈಸಿಂಗ್‌ ಪ್ರವಾಸದ ಸಂದರ್ಭದಲ್ಲಿ, ಜೈಂಟ್ಸ್‌ ಸ್ಟೇಡಿಯಂನ ನಿಲುಗಡೆ ತಾಣದ ಹೊರಗಿರುವ ದೃಶ್ಯ.

18 ವರ್ಷಗಳ ಅವಧಿಯಲ್ಲಿ, ಸಂಪೂರ್ಣ ವಾದ್ಯವೃಂದದೊಂದಿಗಿನ ತನ್ನ ಮೊದಲ ಸ್ಟುಡಿಯೋ ಪ್ರಯತ್ನವಾದ ದಿ ರೈಸಿಂಗ್‌ ಎಂಬ ಗೀತಸಂಪುಟವನ್ನು ಸ್ಪ್ರಿಂಗ್‌ಸ್ಟೀನ್‌ 2002ರಲ್ಲಿ ಬಿಡುಗಡೆಮಾಡಿದ; ಇದು ಬ್ರೆಂಡಾನ್‌ ಒ'ಬ್ರಿಯೆನ್‌‌‌ನಿಂದ ನಿರ್ಮಿಸಲ್ಪಟ್ಟಿತು. ಪ್ರಾಯಶಃ ಸೆಪ್ಟೆಂಬರ್‌‌ 11ರ ದಾಳಿಗಳ ಒಂದು ಪ್ರತಿಬಿಂಬವಾಗಿದ್ದ ಈ ಗೀತಸಂಪುಟವು, ವಿಮರ್ಶಕರ ವಲಯದಿಂದ ಮೆಚ್ಚುಗೆಯನ್ನೂ ಮತ್ತು ಜನಪ್ರಿಯ ಯಶಸ್ಸನ್ನೂ ಒಟ್ಟಿಗೇ ಗಳಿಸಿತು. (ದಾಳಿಗಳ ಬಲಿಪಶುಗಳಾದವರ ಕುಟುಂಬ ಸದಸ್ಯರೊಂದಿಗೆ ಸ್ಪ್ರಿಂಗ್‌ಸ್ಟೀನ್‌ ನಡೆಸಿದ ದೂರವಾಣಿ ಸಂಭಾಷಣೆಗಳಿಂದ ಇದರ ಅನೇಕ ಹಾಡುಗಳು ಪ್ರಭಾವಿತವಾಗಿದ್ದವು; ಸ್ಪ್ರಿಂಗ್‌ಸ್ಟೀನ್‌ ಸಂಗೀತವು ಹೇಗೆ ಅವರ ಜೀವಗಳಿಗೆ ತಟ್ಟಿದವು ಎಂಬುದನ್ನು ಸದರಿ ಸದಸ್ಯರು ಬಲಿಪಶುಗಳ ಕುರಿತಾಗಿ ಪ್ರಕಟಿಸಿದ್ದ ನಿಧನವಾರ್ತೆಗಳಲ್ಲಿ ಉಲ್ಲೇಖಿಸಿದ್ದರು.) ಶೀರ್ಷಿಕೆಯ ಧ್ವನಿಪಥವು ರೇಡಿಯೋದ ಹಲವಾರು ಸ್ವರೂಪಗಳಲ್ಲಿ ಪ್ರಸಾರಕ್ಕೊಳಗಾಯಿತು, ಮತ್ತು ಸದರಿ ಧ್ವನಿಮುದ್ರಿಕೆಯು 15 ವರ್ಷಗಳಲ್ಲಿ ಹೊಸ ಮೂಲಸಾಹಿತ್ಯವನ್ನು ಒಳಗೊಂಡಿದ್ದ ಹಾಗೂ ಅತ್ಯುತ್ತಮ-ಮಾರಾಟಕಂಡ ಸ್ಪ್ರಿಂಗ್‌ಸ್ಟೀನ್‌ನ ಗೀತಸಂಪುಟ ಎಂಬ ಕೀರ್ತಿಗೆ ಪಾತ್ರವಾಯಿತು. ದಿ ಟುಡೇ ಷೋ ಗೀತಸಂಪುಟಕ್ಕೆ ಸಂಬಂಧಿಸಿದಂತೆ, ಆಸ್‌ಬರಿ ಪಾರ್ಕ್‌ನಲ್ಲಿನ ಒಂದು ಮುಂಜಾನೆಯ ಗೋಚರಿಸುವಿಕೆಯ ಮೂಲಕ 2002ರಲ್ಲಿ ಚಾಲನೆಗೊಳಿಸಲ್ಪಟ್ಟ ದಿ ರೈಸಿಂಗ್‌ ಪ್ರವಾಸವು, U.S. ಮತ್ತು ಯುರೋಪ್‌ಗಳಲ್ಲಿನ ಏಕರಾತ್ರಿಯ ಸಂಗೀತ ಪ್ರಸ್ತುತಿಯ ಠಿಕಾಣಿಯ ಒಂದು ಸರಣಿಯ ಮೂಲಕ ಊರೂರು ಸುತ್ತುತ್ತಾ ಗೀತಸಂಪುಟದ ಪ್ರಚಾರವನ್ನು ಮಾಡುತ್ತಾಹೋಯಿತು; ಮತ್ತು ಬೃಹತ್‌‌-ಪ್ರಮಾಣದ, ಬಹು-ರಾತ್ರಿಗಳ, ಕ್ರೀಡಾಂಗಣಗಳಲ್ಲಿ ನೀಡುವ ಪ್ರದರ್ಶನಗಳಿಗೆ ಸಂಬಂಧಿಸಿದಂತೆ 2003ರಲ್ಲಿ ಹಿಂದಿರುಗಿತು. ಕಟ್ಟಾ ನಿಷ್ಠರಾದ ಅಭಿಮಾನಿಗಳ ಬಳಗವನ್ನು ಸ್ಪ್ರಿಂಗ್‌ಸ್ಟೀನ್‌ ಎಲ್ಲೆಡೆಯೂ (ಮತ್ತು ಅದರಲ್ಲೂ ನಿರ್ದಿಷ್ಟವಾಗಿ ಯುರೋಪ್‌ನಲ್ಲಿ‌‌) ಕಾಯ್ದಕೊಂಡು ಬಂದಿದ್ದನಾದರೂ, ವರ್ಷಗಳಾಗುತ್ತಿದ್ದಂತೆ U.S.ನ ದಕ್ಷಿಣದ ಮತ್ತು ಮಧ್ಯ-ಪಶ್ಚಿಮದ ಕೆಲವೊಂದು ಪ್ರದೇಶಗಳಲ್ಲಿ ಅವನ ಸಾರ್ವತ್ರಿಕ ಜನಪ್ರಿಯತೆಯು ಕುಸಿದಿತ್ತು. ಆದರೆ, ಯುರೋಪ್‌‌‌ ಮತ್ತು U.S. ಕಡಲತೀರಗಳ ಉದ್ದಕ್ಕೂ ಅದು ಇನ್ನೂ ಬಲವಾಗಿ ಉಳಿದುಕೊಂಡಿತ್ತು, ಮತ್ತು ನ್ಯೂಜರ್ಸಿಯಲ್ಲಿನ ಜೈಂಟ್ಸ್‌ ಸ್ಟೇಡಿಯಂನಲ್ಲಿ ಅಭೂತಪೂರ್ವವಾದ 10 ರಾತ್ರಿಗಳ ಅವಧಿಯವರೆಗೆ ಆತ ಸಂಗೀತವನ್ನು ನುಡಿಸಿದ. ಈ ಪ್ರದರ್ಶನದ ಟಿಕೆಟ್ಟುಗಳು ಮಾರಾಟವಾದ ಪರಿಗೆ ಯಾವುದೇ ಸಂಗೀತಕುಶಲ ಪ್ರದರ್ಶನಕಾರನೂ ಹತ್ತಿರ ಬರುವ ಸಾಧ್ಯತೆಯಿರಲಿಲ್ಲ. ಈ ಪ್ರದರ್ಶನಗಳ ಅವಧಿಯಲ್ಲಿ, ಅನೇಕ ಪ್ರದರ್ಶನಗಳಲ್ಲಿ ಹಾಜರಾಗುತ್ತಿದ್ದ ಅಭಿಮಾನಿಗಳಿಗೆ ಮತ್ತು ತುಂಬ ದೂರದ ಊರುಗಳಿಂದ ಅಥವಾ ಬೇರೊಂದು ದೇಶದಿಂದ ಬಂದು ಜಮಾವಣೆಗೊಳ್ಳುತ್ತಿದ್ದ ಸಂಗೀತರಸಿಕರಿಗೆ ಸ್ಪ್ರಿಂಗ್‌ಸ್ಟೀನ್‌ ಕೃತಜ್ಞತೆಯನ್ನು ಸಲ್ಲಿಸಿದ; ದೃಢವಾದ, ಬ್ರೂಸ್‌-ಉದ್ದೇಶಿತ ಆನ್‌ಲೈನ್‌ ಸಮುದಾಯಗಳ ಉದಯವು ಇಂಥ ಪರಿಪಾಠಗಳನ್ನು ಹೆಚ್ಚು ಸಾಮಾನ್ಯವಾಗಿಸಿತ್ತು. ಷಿಯಾ ಸ್ಟೇಡಿಯಂನಲ್ಲಿ ಮೂರು ರಾತ್ರಿಗಳ ಸಂಗೀತ ಕಚೇರಿಯು ನಡೆಯುವುದರೊಂದಿಗೆ ದಿ ರೈಸಿಂಗ್‌ ಪ್ರವಾಸವು ಮುಕ್ತಾಯದ ಘಟ್ಟವನ್ನು ತಲುಪಿತು; "ಅಮೆರಿಕನ್‌ ಸ್ಕಿನ್‌" ಗೀತೆಯ ಕುರಿತಾದ ಒಂದು ನವೀಕೃತ ವಿವಾದ ಹಾಗೂ ಅತಿಥಿ-ಕಲಾವಿದನಾಗಿ ಬಾಬ್‌ ಡೈಲನ್‌ ನೀಡಿದ ಒಂದು ಹಾಜರಿಯು ಇದರ ಮುಖ್ಯಾಂಶಗಳಾಗಿದ್ದವು.

2000ದ ದಶಕದ ಆರಂಭದಲ್ಲಿ, ಆಸ್‌ಬರಿ ಪಾರ್ಕ್‌‌ನ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಸ್ಪ್ರಿಂಗ್‌ಸ್ಟೀನ್‌ ಓರ್ವ ಪ್ರತ್ಯಕ್ಷ ಸಮರ್ಥಕನಾಗಿ ಮಾರ್ಪಟ್ಟ, ಹಾಗೂ ಬಗೆಬಗೆಯ ಸ್ಥಳೀಯ ವ್ಯವಹಾರಗಳು, ಸಂಸ್ಥೆಗಳು, ಮತ್ತು ಉದ್ದೇಶಗಳಿಗಾಗಿ ನೆರವನ್ನು ಒದಗಿಸುವ ದೃಷ್ಟಿಯಿಂದ, ಅಲ್ಲಿ ಚಳಿಗಾಲದ ರಜಾದಿನದ ಸಂಗೀತ ಕಚೇರಿಗಳ ಒಂದು ವಾರ್ಷಿಕ ಸರಣಿಯಲ್ಲಿ ಸಂಗೀತ ಪ್ರಸ್ತುತಿಯನ್ನು ನಿರ್ವಹಿಸಿದ. ಈ ಪ್ರದರ್ಶನಗಳು ಸಂಪೂರ್ಣವಾಗಿ ಕಟ್ಟಾ ಅಭಿಮಾನಿಗಳಿಗೆ ಮೀಸಲಾಗಿದ್ದವು; ಟ್ರಾಕ್ಸ್‌‌ ಗೀತಸಂಪುಟವು ಬರುವವರೆಗೆ ಬಿಡುಗಡೆಯಾಗದ, E ಸ್ಟ್ರೀಟ್‌ ಷಫಲ್‌ ಗೀತಸಂಪುಟದ ತಿರಸ್ಕೃತ ಭಾಗವಾದ "ಥಂಡರ್‌ಕ್ರಾಕ್‌"ನಂಥ ಗೀತೆಗಳನ್ನು ಇವು ಒಳಗೊಂಡಿದ್ದವು. ಅಭಿಮಾನಿಗಳ ಗುಂಪು ನಲಿದಾಡುತ್ತಾ-ಪಾಲ್ಗೊಳ್ಳುವ ಹಾಡು ಇದಾಗಿದ್ದು, ಸ್ಪ್ರಿಂಗ್‌ಸ್ಟೀನ್‌ನ ವಾಡಿಕೆಯ ಅಭಿಮಾನಿಗಳನ್ನು ಅದು ತಬ್ಬಿಬ್ಬಾಗಿಸುವಂತಿತ್ತು. ಆಸ್‌ಬರಿ ಪಾರ್ಕ್‌ನಲ್ಲಿನ ಪ್ರವಾಸಗಳಿಗೆ ಸಂಬಂಧಿಸಿದಂತೆ ಅವನು ಆಗಿಂದಾಗ್ಗೆ ತಾಲೀಮುಗಳನ್ನು ನಡೆಸುತ್ತಾನೆ; ಅವನ ಕಟ್ಟಾ ಅಭಿಮಾನಿಗಳು ಈ ಕುರಿತು ಎಷ್ಟೊಂದು ಉತ್ಸುಕರಾಗಿರುತ್ತಾರೆ ಎಂದರೆ, ಮುಂಬರಲಿರುವ ಪ್ರದರ್ಶನಗಳಲ್ಲಿ ತಾವು ಸಂಗೀತದ ಯಾವುದೆಲ್ಲಾ ತುಣುಕುಗಳನ್ನು ಕೇಳಿಸಿಕೊಳ್ಳಬಹುದು ಎಂಬುದನ್ನು ಮುಂಚಿತವಾಗಿ ಕಂಡುಕೊಳ್ಳಲು ತಾಲೀಮು ನಡೆಯುತ್ತಿರುವ ಕಟ್ಟಡದ ಆಚೆಯಲ್ಲಿ ಜಮಾವಣೆಗೊಳ್ಳುತ್ತಾರೆ. "ಮೈ ಸಿಟಿ ಆಫ್‌ ರೂಯಿನ್ಸ್‌" ಎಂಬ ಹಾಡನ್ನು ಮೂಲತಃ ಆಸ್‌ಬರಿ ಪಾರ್ಕ್ ಕುರಿತು ಬರೆಯಲಾಗಿತ್ತು; ನಗರವನ್ನು ಪುನರುಜ್ಜೀವಗೊಳಿಸುವುದಕ್ಕೆ ಮಾಡಲಾದ ಪ್ರಯತ್ನಗಳ ಗೌರವಾರ್ಥವಾಗಿ ಬರೆಯಲಾದ ಹಾಡು ಇದಾಗಿತ್ತು. ಸೆಪ್ಟೆಂಬರ್‌‌ 11ರ ಘಟನೆಯ ನಂತರದಲ್ಲಿ ನ್ಯೂಯಾರ್ಕ್‌ ನಗರದ ಗೌರವಾರ್ಥವಾಗಿ ಹಮ್ಮಿಕೊಳ್ಳಲಾದ ಒಂದು ಸಹಾಯಾರ್ಥ ಸಂಗೀತ ಕಚೇರಿಗೆ ಸಂಬಂಧಿಸಿದಂತೆ ಒಂದು ಸೂಕ್ತವಾದ ಹಾಡಿಗಾಗಿ ಹುಡುಕುತ್ತಿದ್ದಾಗ, "ಮೈ ಸಿಟಿ ಆಫ್‌ ರೂಯಿನ್ಸ್‌" ಹಾಡನ್ನು ಅವನು ಆಯ್ಕೆಮಾಡಿದ; ಇದು ಒಳಗೊಂಡಿದ್ದ ಸುವಾರ್ತೆಯ ವಿಷಯಗಳು ಮತ್ತು "ಎದ್ದು ನಿಲ್ಲುವಂತೆ!" ಮಾಡುವ ಅದರ ಹೃತ್ಪೂರ್ವಕವಾದ ಪ್ರಚೋದನೆಗಳಿಂದಾಗಿ, ಅದು ಸಂಗೀತ ಕಚೇರಿಯ ಒಂದು ಭಾವಾತ್ಮಕ ಮುಖ್ಯಾಂಶ ಎಂಬುದಾಗಿ ತತ್‌ಕ್ಷಣವೇ ಗುರುತಿಸಲ್ಪಟ್ಟಿತು. 9/11 ಘಟನೆಯ ನಂತರದ ನ್ಯೂಯಾರ್ಕ್‌ನೊಂದಿಗೆ ಈ ಹಾಡು ಗುರುತಿಸಿಕೊಂಡಿತು, ಮತ್ತು ದಿ ರೈಸಿಂಗ್‌ ಗೀತಸಂಪುಟವನ್ನು ಮುಕ್ತಾಯಗೊಳಿಸುವ ಗೀತೆಯಾಗಿ ಹಾಗೂ ತರುವಾಯದ ಪ್ರವಾಸದಲ್ಲಿನ ಒಂದು ಕೋರಿಕೆ ಗೀತೆಯನ್ನಾಗಿ ಇದನ್ನು ಅವನು ಆರಿಸಿದ.

2003ರ ಗ್ರಾಮಿ ಪ್ರಶಸ್ತಿಗಳ ಸಮಾರಂಭದಲ್ಲಿ ದಿ ಕ್ಲಾಶ್‌‌‌‌‌ನ "ಲಂಡನ್‌ ಕಾಲಿಂಗ್‌" ಗೀತೆಯನ್ನು ಸ್ಪ್ರಿಂಗ್‌ಸ್ಟೀನ್‌ ಪ್ರಸ್ತುತಪಡಿಸಿದ; ಇದರಲ್ಲಿ ಎಲ್ವಿಸ್‌ ಕೋಸ್ಟೆಲೊ, ಡೇವ್‌ ಗ್ರೋಹ್ಲ್‌‌, ಮತ್ತು E ಸ್ಟ್ರೀಟ್‌ ಬ್ಯಾಂಡ್‌ ಸದಸ್ಯನಾದ ಸ್ಟೆವನ್‌ ವ್ಯಾನ್‌ ಝಾಂಡ್ಟ್‌ ಮತ್ತು ನೋ ಡೌಟ್‌‌‌‌ನ ಬೇಸ್‌ ವಾದ್ಯಗಾರ, ಟೋನಿ ಕೆನಾಲ್‌ ಅವನಿಗೆ ಜೊತೆ ನೀಡಿದರು. ಜೋ ಸ್ಟ್ರಮ್ಮರ್‌‌ ಗೌರವಾರ್ಥವಾಗಿ ಪ್ರಸ್ತುತಪಡಿಸಿದ ಗೀತೆ ಇದಾಗಿತ್ತು. ದಿ ರಿವರ್‌ ಎಂಬ ಜೋಡಿಸಂಪುಟ ಮತ್ತು ಸ್ಯಾಂಡಿನಿಸ್ಟಾ! ಎಂಬ ತ್ರಿವಳಿ ಸಂಪುಟಗಳು ಬಂದ ಸಮಯದಲ್ಲಿ, ಸ್ಪ್ರಿಂಗ್‌ಸ್ಟೀನ್‌ ಮತ್ತು ಕ್ಲಾಶ್‌ ಈ ಇಬ್ಬರನ್ನೂ ಬಹು-ಗೀತಸಂಪುಟದ-ದ್ವಂದ್ವಯುದ್ಧ ಮಾಡುವ ಪ್ರತಿಸ್ಪರ್ಧಿಗಳೆಂದು ಒಮ್ಮೆ ಪರಿಗಣಿಸಲಾಗಿತ್ತು. 2004ರಲ್ಲಿ, ಸ್ಪ್ರಿಂಗ್‌ಸ್ಟೀನ್‌ ಮತ್ತು E ಸ್ಟ್ರೀಟ್‌ ಬ್ಯಾಂಡ್‌ ಸದಸ್ಯರು "ವೋಟ್‌ ಫಾರ್‌ ಚೇಂಜ್‌" ಪ್ರವಾಸದಲ್ಲಿ ಪಾಲ್ಗೊಂಡರು. ಜಾನ್‌ ಮೆಲೆನ್‌ಕ್ಯಾಂಪ್‌, ಜಾನ್‌ ಫಾಗೆರ್ಟಿ, ಡಿಕ್ಸೀ ಚಿಕ್ಸ್‌, ಪರ್ಲ್‌ ಜ್ಯಾಂ, R.E.M., ಬ್ರೈಟ್‌ ಐಸ್‌, ಡೇವ್‌ ಮ್ಯಾಥ್ಯೂಸ್‌ ಬ್ಯಾಂಡ್‌, ಜಾಕ್‌ಸನ್‌ ಬ್ರೌನೆ, ಮತ್ತು ಇತರ ಸಂಗೀತಗಾರರು ಅವರ ಜೊತೆಯಲ್ಲಿ ಭಾಗವಹಿಸಿದ್ದರು. ಅಮೆರಿಕಾ ಕಮಿಂಗ್‌ ಟುಗೆದರ್‌ ಎಂಬ ಒಂದು ಉದಾರವಾದದ ರಾಜಕೀಯ ಸಂಘಟನಾ ಗುಂಪಿನ ಸಹಾಯಾರ್ಥವಾಗಿ ಮತ್ತು ನೋಂದಾಯಿಸಿ ಮತದಾನವನ್ನು ಮಾಡಲು ಜನರಿಗೆ ಪ್ರೋತ್ಸಾಹಿಸುವುದಕ್ಕಾಗಿ, ಈ ಎಲ್ಲಾ ಸಂಗೀತ ಕಚೇರಿಗಳನ್ನೂ ವೃತ್ತಾಕಾರದ ಪ್ರವಾಸದ ಸ್ಥಿತಿಯಲ್ಲಿ ಆಯೋಜಿಸಬೇಕಾಗಿತ್ತು. ವಾಷಿಂಗ್ಟನ್‌‌, D.C.ಯಲ್ಲಿ ಹಮ್ಮಿಕೊಳ್ಳಲಾದ ಒಂದು ಮುಕ್ತಾಯದ ಸಮಾರಂಭವು ಅನೇಕ ಕಲಾವಿದರನ್ನು ಒಗ್ಗೂಡಿಸಿತು. ಆ ಸಂಸ್ಥಾನದ ಜನಮತಸಂಗ್ರಹವು ತೀರಾ ಆಶ್ಚರ್ಯಕರವೆನ್ನುವಂತೆ ನಿಕಟವಾಗಿದೆ ಎಂದು ಕಂಡುಬಂದಾಗ, ಹಲವಾರು ದಿನಗಳ ನಂತರ, ಇಂಥದೇ ಮತ್ತೊಂದು ಸಂಗೀತ ಕಚೇರಿಯನ್ನು ನ್ಯೂಜರ್ಸಿಯಲ್ಲಿ ಸ್ಪ್ರಿಂಗ್‌ಸ್ಟೀನ್‌ ಆಯೋಜಿಸಿದ. ವಿಯೆಟ್ನಾಂ ಪರಿಣತ ಯೋಧರು (ಅಥವಾ ಮಾಜಿ ಯೋಧರು), ಆಮ್ನೆಸ್ಟಿ ಇಂಟರ್‌ನ್ಯಾಷನಲ್‌, ಮತ್ತು ಕ್ರಿಸ್ಟಿಕ್‌ ಇನ್‌ಸ್ಟಿಟ್ಯೂಟ್‌ ಮೊದಲಾದವುಗಳಿಗೆ ಸಂಬಂಧಿಸಿದಂತೆ, ಪರಮಾಣು ಶಕ್ತಿಯ ವಿರುದ್ಧವಾಗಿ ತಾನು ನಂಬಿದ್ದ ಸದುದ್ದೇಶಗಳಿಗೆ ಸಹಾಯಾರ್ಥದ ಸಂಗೀತ ಕಚೇರಿಗಳನ್ನು ಹಿಂದಿನ ವರ್ಷಗಳಲ್ಲಿ ಸ್ಪ್ರಿಂಗ್‌ಸ್ಟೀನ್‌ ನೀಡುತ್ತಿದ್ದಾಗ, ರಾಜಕೀಯ ಕಾರ್ಯಾಲಯಕ್ಕಾಗಿ ಅಭ್ಯರ್ಥಿಗಳನ್ನು ಬಹಿರಂಗವಾಗಿ ಅನುಮೋದಿಸುವ ಗೊಡವೆಗೆ ಅವನು ಯಾವಾಗಲೂ ಹೋಗಲಿಲ್ಲ (ವಾಸ್ತವವಾಗಿ, 1984ರ ರೇಗನ್‌‌ "ಬಾರ್ನ್‌ ಇನ್‌ ದಿ U.S.A." ಎಂಬ ಪ್ರಚೋದಿತ ಸ್ಥಿತಿಯಲ್ಲಿ ಒಂದು ಅನುಮೋದನೆಯನ್ನು ಸೆಳೆಯಲು ವಾಲ್ಟರ್‌ ಮೊಂಡೇಲ್‌ ಮಾಡಿದ ಪ್ರಯತ್ನಗಳನ್ನು ಅವನು ತಿರಸ್ಕರಿಸಿದ್ದ). ಈ ಹೊಸ ದೃಷ್ಟಿಕೋನವು ನಿರೀಕ್ಷಿತ ಪಕ್ಷ-ಸಮರ್ಥಕ ಮೂಲಗಳಿಂದ ಟೀಕೆಗೆ ಮತ್ತು ಹೊಗಳಿಕೆಗೆ ಒಳಗಾಯಿತು. ಜಾನ್‌ ಕೆರ್ರಿಯ ಅಪಜಯದ ಅಧ್ಯಕ್ಷೀಯ ಪ್ರಚಾರಾಂದೋಲನಕ್ಕೆ ಸಂಬಂಧಿಸಿದಂತೆ ಸ್ಪ್ರಿಂಗ್‌ಸ್ಟೀನ್‌ನ "ನೋ ಸರೆಂಡರ್‌" ಗೀತೆಯು ಪ್ರಚಾರ ವಿಷಯದ ಮುಖ್ಯ ಗೀತೆಯಾಗಿ ಮಾರ್ಪಟ್ಟಿತು; ಚುನಾವಣಾ ಪ್ರಚಾರದ ಕೊನೆಯ ದಿನಗಳಲ್ಲಿ, ಕೆರ್ರಿಯ ಬಹಿರಂಗ ಸಭೆಗಳಲ್ಲಿ ಹಾಡಿನ ವಿದ್ಯುತ್‌ಚಾಲಿತವಲ್ಲದ ಆವೃತ್ತಿಗಳನ್ನು ಹಾಗೂ ತನ್ನ ಕೆಲವೊಂದು ಹಳೆಯ ಹಾಡುಗಳನ್ನು ಅವನು ಪ್ರಸ್ತುತಪಡಿಸಿದ.

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
2005ರ ಜೂನ್‌ 15ರಂದು ಫ್ರಾಂಕ್‌ಫರ್ಟ್‌ನ ಫೆಸ್ಟ್‌ಹ್ಯಾಲೆಯಲ್ಲಿ ನಡೆದ ಏಕ ಡೇವಿಸ್‌ & ಡಸ್ಟ್‌ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿನ ಒಂದು ಅಕೌಸ್ಟಿಕ್‌ ಗಿಟಾರ್‌ ಗೀತೆ.

2005ರ ಏಪ್ರಿಲ್‌ 26ರಂದು ಡೇವಿಸ್‌ & ಡಸ್ಟ್ ಬಿಡುಗಡೆಯಾಯಿತು, ಮತ್ತು ಇದನ್ನು E ಸ್ಟ್ರೀಟ್‌ ಬ್ಯಾಂಡ್‌ ನೆರವಿಲ್ಲದೆಯೇ ಧ್ವನಿಮುದ್ರಿಸಲಾಯಿತು. ಇದು ಮಂದ್ರ-ಸ್ಥಾಯಿಯ, ಬಹುತೇಕವಾಗಿ ವಿದ್ಯುತ್‌ಚಾಲಿತವಲ್ಲದ ಗೀತಸಂಪುಟವಾಗಿದ್ದು, ನೆಬ್ರಾಸ್ಕಾ ಮತ್ತು ದಿ ಘೋಸ್ಟ್‌ ಆಫ್‌ ಟಾಮ್‌ ಜೋಡ್‌ ಗೀತಸಂಪುಟಗಳ ಶೈಲಿಯಲ್ಲಿದೆಯಾದರೂ, ಕೊಂಚವೇ ಹೆಚ್ಚೆನ್ನಬಹುದಾದ ವಾದ್ಯಸಂಗೀತವನ್ನು ಒಳಗೊಂಡಿದೆ. ಇದರ ಕೆಲವೊಂದು ಗೀತೆಗಳ ಸಾಹಿತ್ಯವನ್ನು ಹೆಚ್ಚೂಕಮ್ಮಿ 10 ವರ್ಷಗಳಷ್ಟು ಹಿಂದೆ, ಘೋಸ್ಟ್‌ ಆಫ್‌ ಟಾಮ್‌ ಜೋಡ್‌ ಪ್ರವಾಸದ ಅವಧಿಯಲ್ಲಿ ಅಥವಾ ಅದಾದ ಕೆಲಕಾಲದ ನಂತರ ಬರೆಯಲಾಗಿತ್ತು; ಅವುಗಳ ಪೈಕಿ ಒಂದೆರಡನ್ನು ಆಗಲೇ ಪ್ರಸ್ತುತಪಡಿಸಲಾಗಿತ್ತಾದರೂ, ಅವು ಎಂದಿಗೂ ಬಿಡುಗಡೆಯಾಗಿರಲಿಲ್ಲ. ಇದರ ಶೀರ್ಷಿಕೆ ಧ್ವನಿಪಥವು ಇರಾಕ್‌ ಯುದ್ಧದ ಅವಧಿಯಲ್ಲಿನ ಓರ್ವ ಸಾಧಾರಣ ಯೋಧನ ಭಾವನೆಗಳು ಮತ್ತು ಭಯಗಳಿಗೆ ಸಂಬಂಧಿಸಿದಂತಿದೆ. ‌‌ಸದರಿ ಗೀತಸಂಪುಟವು ಲೈಂಗಿಕವಾಗಿ ಸುಸ್ಪಷ್ಟವಾಗಿರುವ ಕೆಲವೊಂದು ಅಂಶಗಳನ್ನು ಒಳಗೊಂಡಿದೆ ಎಂಬ ಭಾಗಶಃ ಕಾರಣಕ್ಕಾಗಿ ಮಾತ್ರವಲ್ಲದೇ, ಸ್ಪ್ರಿಂಗ್‌ಸ್ಟೀನ್‌ನ ಸಂಸ್ಥಾವಿರೋಧಿ ನೀತಿಗಳ ಕಾರಣದಿಂದಲೂ, ಈ ಗೀತಸಂಪುಟಕ್ಕೆ ಸಂಬಂಧಿಸಿದ ಸಹ-ವ್ಯಾಪಾರಮುದ್ರೆ ರೂಪಿಸುವಿಕೆಯ ಒಂದು ವ್ಯವಹಾರವನ್ನು ಸ್ಟಾರ್‌ಬಕ್ಸ್ ತಿರಸ್ಕರಿಸಿತು. 10 ದೇಶಗಳಲ್ಲಿನ (ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ಆಸ್ಟ್ರಿಯಾ, ಸ್ವಿಜರ್‌ಲೆಂಡ್‌, ಸ್ವೀಡನ್‌, ಡೆನ್ಮಾರ್ಕ್‌, ಇಟಲಿ, ಜರ್ಮನಿ, ನೆದರ್‌ಲೆಂಡ್ಸ್‌, ಯುನೈಟೆಡ್‌ ಕಿಂಗ್‌ಡಂ, ಮತ್ತು ಐರ್ಲೆಂಡ್‌) ಗೀತಸಂಪುಟ ಕೋಷ್ಟಕಗಳಲ್ಲಿ ಈ ಗೀತಸಂಪುಟವು 1ನೇ ಸ್ಥಾನಕ್ಕೆ ಲಗ್ಗೆಹಾಕಿತು. ಗೀತಸಂಪುಟದ ಬಿಡುಗಡೆಯಾಗುತ್ತಿದ್ದಂತೆ, ಅದೇ ವೇಳೆಗೆ ಒಂಟಿ ಡೇವಿಸ್‌ & ಡಸ್ಟ್‌ ಪ್ರವಾಸವನ್ನು ಸ್ಪ್ರಿಂಗ್‌ಸ್ಟೀನ್‌ ಪ್ರಾರಂಭಿಸಿ, ಸಣ್ಣ ಮತ್ತು ದೊಡ್ಡ ತಾಣಗಳೆರಡರಲ್ಲೂ ಸಂಗೀತ ಪ್ರಸ್ತುತಿಯನ್ನು ನೀಡಿದ. ಕೆಲವೊಂದು ಪ್ರದೇಶಗಳಲ್ಲಿ ಸಂಗೀತಪ್ರೇಮಿಗಳ ಹಾಜರಿಯು ನಿರಾಶಾದಾಯಕವಾಗಿತ್ತು, ಮತ್ತು ಹಿಂದಿನ ನಿದರ್ಶನಗಳಿಗೆ ಹೋಲಿಸಿದಾಗ ಪ್ರತಿಯೊಂದು ಕಡೆಯೂ (ಯುರೋಪ್‌ನ್ನು ಹೊರತುಪಡಿಸಿ) ಟಿಕೆಟ್ಟುಗಳನ್ನು ಪಡೆಯುವುದು ತೀರಾ ಸುಲಭವಾಗಿತ್ತು. 1990ರ ದಶಕದ ಮಧ್ಯಭಾಗದಲ್ಲಿ ತಾನು ಕೈಗೊಂಡಿದ್ದ ಒಂಟಿಪ್ರವಾಸಕ್ಕಿಂತ ಭಿನ್ನವಾಗಿ, ಪಿಯಾನೋ, ವಿದ್ಯುಚ್ಚಾಲಿತ ಪಿಯಾನೋ, ಪಂಪ್‌ ಆರ್ಗನ್‌ ವಾದ್ಯ, ಒತ್ತುಸಿತಾರು, ಯುಕುಲೇಲಿ, ಬ್ಯಾಂಜೊ, ವಿದ್ಯುಚ್ಚಾಲಿತ ಗಿಟಾರ್‌‌, ಮತ್ತು ಸ್ಟಾಂಪಿಂಗ್‌ ಬೋರ್ಡ್ ಮೊದಲಾದವನ್ನು ಬಳಸಿಕೊಂಡು ಆತ ಸಂಗೀತ ಕಚೇರಿಯನ್ನು ನೀಡಿದ. ಅಷ್ಟೇ ಅಲ್ಲ, ವಿದ್ಯುತ್‌ಚಾಲಿತವಲ್ಲದ ಗಿಟಾರ್‌‌ ಮತ್ತು ರಾಗಮಾಲಿಕೆಗಳೂ ಸಹ ವಾದ್ಯವೃಂದದಲ್ಲಿ ಸೇರಿಕೊಂಡು, ಒಂಟಿ ಧ್ವನಿಗೆ ಒಂದು ವೈವಿಧ್ಯತೆಯನ್ನು ನೀಡಿದವು. (ನೇಪಥ್ಯದ ಸಿಂಥಸೈಜರ್‌, ಗಿಟಾರ್‌‌, ಮತ್ತು ತಾಳವಾದ್ಯಗಳನ್ನೂ ಸಹ ಕೆಲವೊಂದು ಹಾಡುಗಳಿಗಾಗಿ ಬಳಸಲಾಯಿತು.) "ರೀಸನ್‌ ಟು ಬಿಲಿವ್‌", "ದಿ ಪ್ರಾಮಿಸ್ಡ್‌ ಲ್ಯಾಂಡ್‌", ಮತ್ತು ಸುಸೈಡ್‌‌‌‌ನ "ಡ್ರೀಮ್‌ ಬೇಬಿ ಡ್ರೀಮ್‌" ಗೀತೆಗಳ ಅಲೌಕಿಕ ಸಂಗೀತ ಪ್ರಸ್ತುತಿಗಳು ಕುಲುಕಾಡುತ್ತಿರುವ ಪ್ರೇಕ್ಷಕರನ್ನು ಗಮನ ಹರಿಸುವಂತೆ ಮಾಡಿದರೆ, ಅಪರೂಪದ ಗೀತೆಗಳು, ವಾಡಿಕೆಯ ಸಿದ್ಧ ಪಟ್ಟಿಯ ಬದಲಾವಣೆಗಳು, ಹಾಗೂ ಪಿಯಾನೋ ತಪ್ಪುಗಳು ಕೇಳಿಸುತ್ತಲೇ ಇದ್ದರೂ ಪ್ರಯತ್ನಿಸುತ್ತಲೇ ಇರುವ ಒಂದು ಸಮ್ಮತಿ ಇವು ಅವನ ಬಹುಪಾಲು ನಿಷ್ಠ ಪ್ರೇಕ್ಷಕರನ್ನು ಸಂತೋಷದಲ್ಲಿರಿಸಿದವು.

2005ರ ನವೆಂಬರ್‌ನಲ್ಲಿ, ಒಂದು 24-ಗಂಟೆಗಳ, ವಾರದ ಏಳೂದಿನ ಚಾಲೂ ಇರುವ ರೇಡಿಯೋ ಕೇಂದ್ರವೊಂದನ್ನು ಚಾನೆಲ್‌ 10ನಲ್ಲಿ ಪ್ರಾರಂಭಿಸಿ, ಇದಕ್ಕೆ E ಸ್ಟ್ರೀಟ್‌ ರೇಡಿಯೋ ಎಂದು ಹೆಸರಿಸಿತು.

ಜಾಹೀರಾತು-ಮುಕ್ತ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಸಂಗೀತವನ್ನು ಈ ವಾಹಿನಿಯು ಒಳಗೊಂಡಿತ್ತು; ಅಪರೂಪದ ಧ್ವನಿಪಥಗಳು, ಸಂದರ್ಶನಗಳು, ಮತ್ತು ತಮ್ಮ ವೃತ್ತಿಜೀವನದಾದ್ಯಂತ ಧ್ವನಿಮುದ್ರಿಸಲ್ಪಟ್ಟ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ನ ಮತ್ತು E ಸ್ಟ್ರೀಟ್‌ ಬ್ಯಾಂಡ್‌ನ ದೈನಂದಿನ ಸಂಗೀತ ಕಚೇರಿಗಳು ಇದರಲ್ಲಿ ಸೇರಿದ್ದವು. 
ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
2006ರ ಮೇ 12ರಂದು ಇಟಲಿಯ ಮಿಲಾನ್‌ನಲ್ಲಿನರುವ ಫಿಲಾ ಫೋರಂನಲ್ಲಿನ ತಮ್ಮ ಪ್ರವಾಸ ಕಾರ್ಯಕ್ರಮದಲ್ಲಿ ಸ್ಪ್ರಿಂಗ್‌ಸ್ಟೀನ್‌ ಹಾಗೂ ದಿ ಸೆಷನ್ಸ್‌ ಬ್ಯಾಂಡ್‌ ಸಂಗೀತ ಕಾರ್ಯಕ್ರಮ ಸಾದರಪಡಿಸುತ್ತಿರುವುದು.

2006ರ ಏಪ್ರಿಲ್‌ನಲ್ಲಿ ...We Shall Overcome: The Seeger Sessions ನ್ನು ಸ್ಪ್ರಿಂಗ್‌ಸ್ಟೀನ್‌ ಬಿಡುಗಡೆ ಮಾಡಿದ; ಇದು ಅಮೆರಿಕಾದ ಮೂಲ ಸಂಗೀತದ ಒಂದು ಯೋಜನೆಯಾಗಿದ್ದು, ಪೀಟ್‌ ಸೀಗರ್‌ ಎಂಬಾತನ ಆಮೂಲಾಗ್ರ ಸಂಗೀತಕುಶಲ ಕ್ರಿಯಾವಾದದಿಂದ ಜನಪ್ರಿಯಗೊಳಿಸಲ್ಪಟ್ಟ 15 ಹಾಡುಗಳನ್ನು ಒಂದು ದೊಡ್ಡ ಜಾನಪದ ಧ್ವನಿಯಲ್ಲಿ ನಿರೂಪಿಸುವುದರ ಸುತ್ತ ಗಮನಹರಿಸಿತ್ತು. ಕೇವಲ ಪ್ಯಾಟಿ ಸಿಯಾಲ್ಫಾ, ಸೂಝೀ ಟೈರೆಲ್‌ರನ್ನು ಒಳಗೊಂಡಂತೆ, ಮತ್ತು ಹಿಂದಿನ ಪ್ರಯತ್ನಗಳಿಗೆ ಸೇರಿದ ದಿ ಮಿಯಾಮಿ ಹಾರ್ನ್ಸ್‌‌‌ನ್ನು ಸೇರಿಸಿಕೊಂಡಿದ್ದ ಸಂಗೀತಗಾರರ ಒಂದು ಬೃಹತ್‌‌ ಮೇಳವನ್ನು ಬಳಸಿಕೊಂಡು ಇದನ್ನು ಧ್ವನಿಮುದ್ರಿಸಲಾಯಿತು. ಹಿಂದಿನ ಗೀತಸಂಪುಟಗಳಿಗೆ ತದ್ವಿರುದ್ಧವಾಗಿ, ಕೇವಲ ಮೂರು ಒಂದು-ದಿನದ ಅವಧಿಗಳಲ್ಲಿ ಇದನ್ನು ಧ್ವನಿಮುದ್ರಿಸಲಾಯಿತು, ಮತ್ತು ವಾದ್ಯವೃಂದವು ಧ್ವನಿಪಥಗಳ ಮೂಲಕ ತನ್ನ ಮಾರ್ಗವನ್ನು ಪರಿಶೋಧಿಸುತ್ತಿದ್ದರೆ, ಪ್ರಮುಖ ಬದಲಾವಣೆಗಳ ಕುರಿತಾಗಿ ಸ್ಪ್ರಿಂಗ್‌ಸ್ಟೀನ್‌ ಆಗಿಂದಾಗ್ಗೆ ಪ್ರತ್ಯಕ್ಷ ಸಲಹೆ ನೀಡುತ್ತಿದ್ದುದನ್ನು ಯಾರಾದರೂ ಕೇಳಿಸಿಕೊಳ್ಳಬಹುದಿತ್ತು. ದಿ ಸೀಗರ್‌‌ ಸೆಷನ್ಸ್‌ ಬ್ಯಾಂಡ್‌ ಜೊತೆಗಿನ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಪ್ರವಾಸವು ಅದೇ ತಿಂಗಳು ಶುರುವಾಯಿತು; ದಿ ಸೀಗರ್‌‌ ಸೆಷನ್ಸ್‌ ಬ್ಯಾಂಡ್‌ ಎಂಬ ಅಡ್ಡಹೆಸರನ್ನಿಟ್ಟುಕೊಂಡಿದ್ದ (ಮತ್ತು ನಂತರದಲ್ಲಿ ದಿ ಸೆಷನ್ಸ್‌ ಬ್ಯಾಂಡ್‌ ಎಂಬುದಾಗಿ ಸಂಕ್ಷಿಪ್ತಗೊಳಿಸಿಕೊಂಡ) 18-ಸಂಗೀತಗಾರರ ಒಂದು ಸದೃಢವಾದ ಮೇಳವನ್ನು ತಂಡವು ಒಳಗೊಂಡಿತ್ತು. ಸೀಗರ್‌‌ ಸೆಷನ್ಸ್‌‌‌ ನ ಘಟಕಾಂಶವು ಅತೀವವಾದ ವೈಶಿಷ್ಟ್ಯತೆಯನ್ನು ಹೊಂದಿದ್ದರ ಜೊತೆಗೆ, ಸ್ಪ್ರಿಂಗ್‌ಸ್ಟೀನ್‌ನ (ವಾಡಿಕೆಯಂತೆ ತೀವ್ರವಾಗಿ ಮರುವ್ಯವಸ್ಥಿತಗೊಂಡಿದ್ದ) ಒಂದಷ್ಟು ಹಾಡುಗಳನ್ನೂ ಒಳಗೊಂಡಿತ್ತು. ಯುರೋಪ್‌‌‌ನಲ್ಲಿ ಈ ಪ್ರವಾಸವು ಅತ್ಯಂತ ಜನಪ್ರಿಯವಾಗಿ ಹೊರಹೊಮ್ಮಿತು, ಪ್ರದರ್ಶನದ ಟಿಕೆಟ್ಟುಗಳು ಎಲ್ಲೆಡೆ ಮಾರಾಟಗೊಂಡಿದ್ದರ ಜೊತೆಗೆ ಒಂದಷ್ಟು ಅತ್ಯದ್ಭುತವಾದ ವಿಮರ್ಶಾತ್ಮಕ ಅಭಿಪ್ರಾಯಗಳೂ ಇದಕ್ಕೆ ದೊರೆತವು; ಆದರೆ, U.S.ನಲ್ಲಿ ನೀಡಲಾದ ಹಲವಾರು ಪ್ರದರ್ಶನಗಳು ಸಂಗೀತರಸಿಕರ ಕೊರತೆಯನ್ನು ಎದುರಿಸಬೇಕಾಗಿ ಬಂತು ಎಂಬುದಾಗಿ ವೃತ್ತಪತ್ರಿಕೆಗಳು ವರದಿಮಾಡಿದವು. 2006ರ ಅಂತ್ಯದ ವೇಳೆಗೆ, ಸೀಗರ್‌‌ ಸೆಷನ್ಸ್‌ ಪ್ರವಾಸವು ಯುರೋಪ್‌ನ್ನು ಎರಡು ಬಾರಿ ಸುತ್ತಿಕೊಂಡು ಬಂತು ಮತ್ತು ಕೇವಲ ಒಂದು ಅಲ್ಪಾವಧಿಗೆ ಅಮೆರಿಕಾದ ಪ್ರವಾಸವನ್ನು ಮಾಡಿಕೊಂಡು ಬಂತು. ಐರ್ಲೆಂಡ್‌ನ ಡಬ್ಲಿನ್‌‌‌ನಲ್ಲಿರುವ ದಿ ಪಾಯಿಂಟ್‌ ಥಿಯೇಟರ್‌‌‌ನಲ್ಲಿ, 2006ರ ನವೆಂಬರ್‌ ತಿಂಗಳಲ್ಲಿ ನಡೆದ ಮೂರು ರಾತ್ರಿಗಳ ಸಂಗೀತ ಪ್ರಸ್ತುತಿಗಳಿಂದ ಆಯ್ದ ಗೀತೆಗಳನ್ನು ಒಳಗೊಂಡಿದ್ದ ...Bruce Springsteen with The Sessions Band: Live in Dublin ನ್ನು ಮುಂದಿನ ಜೂನ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
2008ರ ಆಗಸ್ಟ್‌‌ 15ರಂದು ಫ್ಲೋರಿಡಾದ ಜಾಕ್ಸನ್‌ವಿಲ್ಲೆಯ ವೆಟರನ್ಸ್‌ ಮೆಮರಿಯಲ್‌ ಅರೆನಾದಲ್ಲಿ ಮ್ಯಾಜಿಕ್‌ ಪ್ರವಾಸದ ನಿಲುಗಡೆಯಲ್ಲಿ, ತನ್ನ ಹಿಂದಿರುವ ಡ್ರಮ್‌ ವಾದಕ ಮ್ಯಾಕ್ಸ್‌ ವೇನ್‌ಬರ್ಗ್‌ ಜೊತೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಸ್ಪ್ರಿಂಗ್‌ಸ್ಟೀನ್‌.

ಮ್ಯಾಜಿಕ್‌ ಎಂಬ ಶೀರ್ಷಿಕೆಯನ್ನು ಹೊಂದಿದ್ದ ಸ್ಪ್ರಿಂಗ್‌ಸ್ಟೀನ್‌ನ ಮುಂದಿನ ಗೀತಸಂಪುಟವು 2007ರ ಅಕ್ಟೋಬರ್‌‌ 2ರಂದು ಬಿಡುಗಡೆಯಾಯಿತು. E ಸ್ಟ್ರೀಟ್‌ ಬ್ಯಾಂಡ್ ನೆರವಿನೊಂದಿಗೆ ಧ್ವನಿಮುದ್ರಿಸಲಾದ ಈ ಗೀತಸಂಪುಟವು ಸ್ಪ್ರಿಂಗ್‌ಸ್ಟೀನ್‌ನ 10 ಹೊಸ ಹಾಡುಗಳನ್ನು ಒಳಗೊಂಡಿತ್ತು. ಅಷ್ಟೇ ಅಲ್ಲ, ಹಿಂದೊಮ್ಮೆ ದಿ ಸೆಷನ್ಸ್‌ ಬ್ಯಾಂಡ್ ಜೊತೆಯಲ್ಲಿ ಸಾದರಪಡಿಸಲಾಗಿದ್ದ "ಲಾಂಗ್‌ ವಾಕ್‌ ಹೋಮ್‌" ಮತ್ತು ಒಂದು ಅಡಗಿಸಿಡಲಾದ ಧ್ವನಿಪಥ (ಸ್ಪ್ರಿಂಗ್‌ಸ್ಟೀನ್‌ ಸ್ಟುಡಿಯೋದಿಂದ ಹೊರಬಂದ ಬಿಡುಗಡೆಯೊಂದರಲ್ಲಿ ಮೊದಲ ಬಾರಿಗೆ ಸೇರಿಸಲ್ಪಟ್ಟಿದ್ದು), 2007ರ ಜುಲೈ 30ರಂದು ಅಸುನೀಗಿದ ಸ್ಪ್ರಿಂಗ್‌ಸ್ಟೀನ್‌ನ ದೀರ್ಘಕಾಲದ ಸಹಾಯಕನಾದ ಟೆರ್ರಿ ಮ್ಯಾಗವರ್ನ್‌ ಎಂಬಾತನ ಗೌರವಾರ್ಥ ಸೃಷ್ಟಿಸಲಾಗಿದ್ದ "ಟೆರ್ರಿ'ಸ್‌ ಸಾಂಗ್‌‌" ಎಂಬ ಗೀತೆ ಇವಿಷ್ಟನ್ನೂ ಸಹ ಅದು ಒಳಗೊಂಡಿತ್ತು. "ರೇಡಿಯೋ ನೋವೇರ್‌‌" ಎಂಬ ಮೊದಲ ಏಕಗೀತೆಯನ್ನು ಆಗಸ್ಟ್‌‌ 28ರಂದು ಒಂದು ಮುಕ್ತ ಡೌನ್‌ಲೋಡ್‌ಗಾಗಿ ಲಭ್ಯವಾಗಿಸಲಾಯಿತು. ಅಕ್ಟೋಬರ್‌‌ 7ರಂದು ಮ್ಯಾಜಿಕ್‌ ಗೀತಸಂಪುಟವು ಐರ್ಲೆಂಡ್‌ ಮತ್ತು UKಯಲ್ಲಿನ ಸಂಗೀತ ಕೋಷ್ಟಕಗಳಲ್ಲಿ ಮೊದಲ ಸ್ಥಾನಕ್ಕೆ ಪ್ರವೇಶಿಸಿತು. ಗ್ರೇಟೆಸ್ಟ್‌ ಹಿಟ್ಸ್‌ ಗೀತಸಂಪುಟವು ಐರಿಷ್‌ ಕೋಷ್ಟಕಗಳಲ್ಲಿ 57ನೇ ಸ್ಥಾನದಲ್ಲಿ ಮರುಪ್ರವೇಶ ಮಾಡಿದರೆ, ಲೈವ್‌ ಇನ್‌‌ ಡಬ್ಲಿನ್‌ ಗೀತಸಂಪುಟವು ನಾರ್ವೆಯಲ್ಲಿ ಮತ್ತೊಮ್ಮೆ 'ಟಾಪ್‌ 20' ಕೋಷ್ಟಕದ ದಾಖಲೆಯನ್ನು ಹೆಚ್ಚೂಕಮ್ಮಿ ಮುರಿಯಿತು. ಮ್ಯಾಜಿಕ್‌ ಗೀತಸಂಪುಟದ ನಿರೀಕ್ಷೆಯಲ್ಲಿ, ಸಿರಿಯಸ್‌ ಸೆಟಲೈಟ್‌ ರೇಡಿಯೋ ಸಹ 2007ರ ಸೆಪ್ಟೆಂಬರ್‌‌ 27ರಂದು ಚಾನೆಲ್‌ 10ರ ಮೇಲೆ E ಸ್ಟ್ರೀಟ್‌ ರೇಡಿಯೋವನ್ನು ಪುನರಾರಂಭಿಸಿತು. ಹೊಸ ಗೀತಸಂಪುಟಕ್ಕೆ ಸೇರಿದ ಯಾವುದೇ ಹಾಡುಗಳನ್ನು ಪ್ರಸಾರ ಮಾಡದಿರುವಂತೆ, ಮತ್ತು ಸ್ಪ್ರಿಂಗ್‌ಸ್ಟೀನ್‌ನ ಹಳೆಯ ಹಾಡುಗಳನ್ನೇ ಪ್ರಸಾರ ಮಾಡುವಂತೆ ತನ್ನ ಶಿಷ್ಟ ರಾಕ್‌‌ ಕೇಂದ್ರಗಳಿಗೆ ಒಂದು ಆದೇಶವನ್ನು ಕಳಿಸಿಕೊಟ್ಟಿದೆ ಎಂಬುದಾಗಿ ಕ್ಲಿಯರ್‌ ಚಾನೆಲ್‌ ಕಮ್ಯುನಿಕೇಷನ್ಸ್‌ ಎಂಬ ರೇಡಿಯೋ ವಾಣಿಜ್ಯಕೂಟವು ಆಪಾದನೆಗೊಳಗಾಯಿತು. ಆದಾಗ್ಯೂ, ಒಂದು ಸಾಂಸ್ಥಿಕ ಪ್ರಸಾರ-ನಿರೋಧವೊಂದರ ಆಪಾದನೆಗಳನ್ನು ಒಳಗೊಳಗೇ ಕುಗ್ಗಿಸುವ ಮೂಲಕ, ಕ್ಲಿಯರ್‌ ಚಾನೆಲ್‌ನ ಅಡಲ್ಟ್‌ ಆಲ್ಟರ್‌ನೇಟಿವ್‌ (ಅಥವಾ "AAA") ಕೇಂದ್ರವಾದ KBCO, ಸದರಿ ಗೀತಸಂಪುಟಕ್ಕೆ ಸೇರಿದ ಧ್ವನಿಪಥಗಳನ್ನು ಪ್ರಸಾರ ಮಾಡಿತು. ಗೀತಸಂಪುಟದ ಬಿಡುಗಡೆಯಾಗುವುದರೊಂದಿಗೆ, ಸ್ಪ್ರಿಂಗ್‌ಸ್ಟೀನ್‌ ಮತ್ತು E ಸ್ಟ್ರೀಟ್‌ ಬ್ಯಾಂಡ್‌ನ ಮ್ಯಾಜಿಕ್‌ ಪ್ರವಾಸವು ಹಾರ್ಟ್‌ಫೋರ್ಡ್‌ ಸಿವಿಕ್‌ ಸೆಂಟರ್‌‌‌ನಲ್ಲಿ ಶುರುವಾಯಿತು ಹಾಗೂ ಉತ್ತರ ಅಮೆರಿಕಾ ಮತ್ತು ಯುರೋಪ್ ಮೂಲಕ ಪ್ರವಾಸವನ್ನು ನಡೆಸಿಕೊಂಡು ಹೋಯಿತು. NBCಯ ಟುಡೆ ಷೋ ಗೆ ಮುಂಚಿತವಾಗಿ ಅದರ ಪ್ರಾರಂಭದಲ್ಲಿ ಸ್ಪ್ರಿಂಗ್‌ಸ್ಟೀನ್‌ ಮತ್ತು ವಾದ್ಯವೃಂದ ಸದಸ್ಯರು ನೇರಪ್ರಸಾರದಲ್ಲಿ ಸಂಗೀತ ಪ್ರಸ್ತುತಿಯನ್ನು ನೀಡಿದರು. E ಸ್ಟ್ರೀಟ್‌ ಬ್ಯಾಂಡ್‌ನ ದೀರ್ಘಕಾಲದ ಆರ್ಗನ್‌ ವಾದಕನಾದ ಡ್ಯಾನಿ ಫೆಡೆರಿಸಿ ಎಂಬಾತ ಮೆಲನೋಮಾ ಸಮಸ್ಯೆಯ ಕಾರಣದಿಂದಾಗಿ 2007ರ ನವೆಂಬರ್‌ನಲ್ಲಿ ಪ್ರವಾಸದಿಂದ ಮರಳಿದ; ಸದರಿ ಕಾಯಿಲೆಯೊಂದಿಗೆ ಮೂರು-ವರ್ಷ ಹೆಣಗಾಡಿದ ಬಳಿಕ 2008ರ ಏಪ್ರಿಲ್‌ 17ರಂದು ಅವನು ಅಸುನೀಗಿದ.

ಇತ್ತೀಚಿನ ಘಟನೆಗಳು

2008ರ ಏಪ್ರಿಲ್‌ನಲ್ಲಿ, U.S. ಸೆನೆಟ್‌ ಸದಸ್ಯನಾದ ಬರಾಕ್‌ ಒಬಾಮಾನ 2008ರ ಅಧ್ಯಕ್ಷೀಯ ಪ್ರಚಾರಾಂದೋಲನದಲ್ಲಿ, ಅವನಿಗೆ ತನ್ನ ಅನುಮೋದನೆ ಇರುವುದರ ಕುರಿತು ಸ್ಪ್ರಿಂಗ್‌ಸ್ಟೀನ್‌ ಘೋಷಿಸಿದ. ಒಬಾಮಾಗೆ ಸಂಬಂಧಿಸಿದಂತೆ ಓಹಿಯೊದಲ್ಲಿ ನಡೆದ ಒಂದು ಬಹಿರಂಗ ಸಭೆಯಲ್ಲಿ ಚಿತ್ರಿಸಲಾದ ಒಂದು ವಿಡಿಯೋದಲ್ಲಿ, "ಸರ್ಕಾರದಲ್ಲಿನ ಸತ್ಯ, ಪಾರದರ್ಶಕತೆ ಮತ್ತು ಸಮಗ್ರತೆ, ಒಂದು ಉದ್ಯೋಗವನ್ನು ಪಡೆಯುವುದಕ್ಕಾಗಿ, ಒಂದು ಜೀವನ ವೇತನವನ್ನು ಪಡೆಯುವುದಕ್ಕಾಗಿ, ಒಂದು ಸಂಭಾವಿತ ಶಾಲೆಯಲ್ಲಿ ಶಿಕ್ಷಣ ಪಡೆಯುವುದಕ್ಕಾಗಿ, ಮತ್ತು ಕೆಲಸದ ಘನತೆ, ನೆಲೆಯ ಭರವಸೆ ಮತ್ತು ಪವಿತ್ರತೆಯೊಂದಿಗೆ ತುಂಬಿಕೊಂಡಿರುವ ಒಂದು ಜೀವನವನ್ನು ನಡೆಸುವುದಕ್ಕಾಗಿ ಅಮೆರಿಕಾ ಪ್ರತಿಯೊಬ್ಬ ಪ್ರಜೆಯೂ ಹೊಂದಿರುವ ಹಕ್ಕಿನ ಪ್ರಾಮುಖ್ಯತೆಯ ಕುರಿತಾಗಿ ಸ್ಪ್ರಿಂಗ್‌ಸ್ಟೀನ್‌ ಚರ್ಚಿಸಿದ...ಆದರೆ, ಎಂಟು ವರ್ಷಗಳಷ್ಟು ಅವಧಿಯ ಒಂದು ಅವಿಚಾರದ, ಅಜಾಗರೂಕ ಮತ್ತು ನೈತಿಕವಾಗಿ-ಜಾಡುತಪ್ಪಿದ ಆಡಳಿತವು ಇಂದು ಆ ಸ್ವಾತಂತ್ರ್ಯಗಳನ್ನು ಹಾನಿಗೊಳಿಸಿದೆ ಮತ್ತು ಕಸಿದುಕೊಂಡಿದೆ" ಎಂಬುದು ಅವನ ಚರ್ಚೆಯ ಸಾರಾಂಶವಾಗಿತ್ತು.

2008ರ ಜೂನ್‌ 18ರಂದು ವಾಷಿಂಗ್ಟನ್‌‌, D.C.ಯಲ್ಲಿನ ಕೆನಡಿ ಸೆಂಟರ್‌ನಲ್ಲಿ ಟಿಮ್‌ ರಸೆರ್ಟ್‌ ಗೌರವಾರ್ಥವಾಗಿ ಏರ್ಪಡಿಸಲಾಗಿದ್ದ ಕಚೇರಿಯಲ್ಲಿ, ರಸೆರ್ಟ್‌ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದಾದ "ಥಂಡರ್‌ ರೋಡ್‌"ನ್ನು ಸಾದರಪಡಿಸಲು, ಸ್ಪ್ರಿಂಗ್‌ಸ್ಟೀನ್‌ ಯುರೋಪ್‌ನಿಂದ ನೇರಪ್ರಸಾರದಲ್ಲಿ ಕಾಣಿಸಿಕೊಂಡ. "ಸ್ಪ್ರಿಂಗ್‌ಸ್ಟೀನ್‌ನ ಅತಿದೊಡ್ಡ ಅಭಿಮಾನಿಗಳಲ್ಲಿ ಒಬ್ಬನಾಗಿದ್ದ" ರಸೆರ್ಟ್‌ಗೆ ಸದರಿ ಹಾಡನ್ನು ಸ್ಪ್ರಿಂಗ್‌ಸ್ಟೀನ್‌ ಸಮರ್ಪಿಸಿದ.[ಸೂಕ್ತ ಉಲ್ಲೇಖನ ಬೇಕು]

2008ರ ಅಕ್ಟೋಬರ್‌ನಲ್ಲಿ ಒಬಾಮಾಗೆ ಸಂಬಂಧಿಸಿದ ಚುನಾವಣಾ ಪ್ರಚಾರ ಸಭೆಗಳಲ್ಲಿ, ಅವನನ್ನು ಬೆಂಬಲಿಸುವ ಉದ್ದೇಶದಿಂದ ಒಂದಷ್ಟು ವಿದ್ಯುತ್‌ಚಾಲಿತವಲ್ಲದ ಒಂಟಿ ಸಂಗೀತ ಪ್ರಸ್ತುತಿಗಳನ್ನು ಸ್ಪ್ರಿಂಗ್‌ಸ್ಟೀನ್‌ ಮಾಡಿದ; ನವೆಂಬರ್‌ 2ರಂದು ನಡೆದ ಒಂದು ಬಹಿರಂಗ ಸಭೆಯಲ್ಲಿ ಇದು ಮತ್ತಷ್ಟು ವೃದ್ಧಿಗೊಂಡು, ಅಲ್ಲಿ ಆತ ಸಿಯಾಲ್ಫಾ ಜೊತೆಯಲ್ಲಿನ ಒಂದು ಯುಗಳ ಗಾಯನದಲ್ಲಿ "ವರ್ಕಿಂಗ್‌ ಆನ್‌ ಎ ಡ್ರೀಮ್‌" ಗೀತೆಯನ್ನು ಮೊದಲ ಬಾರಿಗೆ ಹಾಡಿದ.

Springsteen at a rally for then-presidential candidate Barack Obama
on November 2, 2008

ನವೆಂಬರ್‌ 4ರಂದು, ಚಿಕಾಗೊದ ಗ್ರಾಂಟ್‌ ಪಾರ್ಕ್‌‌‌‌ನಲ್ಲಿ ಚುನಾಯಿತ-ಅಧ್ಯಕ್ಷನಾಗಿ ಒಬಾಮಾ ಮಾಡಿದ ವಿಜಯ-ಭಾಷಣದ ನಂತರ, ಧ್ವನಿವರ್ಧಕಗಳ ಮೂಲಕ ಹೊರಹೊಮ್ಮಿದ ಮೊದಲ ಹಾಡು "ದಿ ರೈಸಿಂಗ್‌" ಆಗಿತ್ತು.

ಸ್ಪ್ರಿಂಗ್‌ಸ್ಟೀನ್‌ನ ವರ್ಕಿಂಗ್‌ ಆನ್‌ ಎ ಡ್ರೀಮ್‌ ಗೀತಸಂಪುಟವು 2009ರ ಜನವರಿ ಅಂತ್ಯದ ವೇಳೆಗೆ ಬಿಡುಗಡೆಯಾಯಿತು.
2009ರ ಜನವರಿ 18ರಂದು ನಡೆದ ...We Are One: The Obama Inaugural Celebration at the Lincoln Memorialಗೆ ಸಂಬಂಧಿಸಿದಂತೆ ಸ್ಪ್ರಿಂಗ್‌ಸ್ಟೀನ್‌ ಸಂಗೀತಕುಶಲ ಪ್ರಾರಂಭಿಕ ಕಲಾವಿದನಾಗಿದ್ದ; ಈ ಸಂದರ್ಭದಲ್ಲಿ 400,000ಕ್ಕೂ ಹೆಚ್ಚಿನ ಜನ ಸೇರಿದ್ದರು. ಮಹಿಳೆಯರನ್ನಷ್ಟೇ ಒಳಗೊಂಡಿದ್ದ ಒಂದು ವೃಂದಗಾನದೊಂದಿಗೆ ಅವನು "ದಿ ರೈಸಿಂಗ್‌" ಗೀತೆಯನ್ನು ಪ್ರಸ್ತುತಪಡಿಸಿದ. ನಂತರದಲ್ಲಿ ಆತ ಪೀಟ್‌ ಸೀಗರ್‌ ಜೊತೆಯಲ್ಲಿ ವುಡಿ ಗಥ್ರೀಯ "ದಿಸ್‌ ಲ್ಯಾಂಡ್‌ ಈಸ್‌ ಯುವರ್‌ ಲ್ಯಾಂಡ್‌" ಗೀತೆಯನ್ನು ಪ್ರಸ್ತುತಪಡಿಸಿದ.

2009ರ ಜನವರಿ 11ರಂದು, ಅತ್ಯುತ್ತಮ ಗೀತೆಗಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯನ್ನು "ದಿ ರೆಸ್ಲರ್‌‌" ಗೀತೆಗಾಗಿ ಸ್ಪ್ರಿಂಗ್‌ಸ್ಟೀನ್‌ ಗೆದ್ದುಕೊಂಡ; ಇದು ಮಿಕಿ ರೂರ್ಕೆ ಎಂಬಾತನ ಅದೇ ಹೆಸರನ್ನು ಹೊಂದಿದ್ದ ಚಲನಚಿತ್ರದ ಗೀತೆಯಾಗಿತ್ತು.

2009ರ ಫೆಬ್ರುವರಿ 1ರಂದು ಸೂಪರ್‌ ಬೌಲ್‌ XLIIIನಲ್ಲಿನ ಅರ್ಧಾವಧಿಯ ಪ್ರದರ್ಶನದಲ್ಲಿ ಸ್ಪ್ರಿಂಗ್‌ಸ್ಟೀನ್‌ ಸಂಗೀತ ಪ್ರಸ್ತುತಿಯನ್ನು ನೀಡಿದ; ಹಿಂದಿನ ಅನೇಕ ಆಹ್ವಾನಗಳ ನಂತರ ಒಪ್ಪಿಕೊಂಡ ಕಾರ್ಯಕ್ರಮ ಇದಾಗಿತ್ತು. "ಒಂದು ರೀತಿಯಲ್ಲಿ ಇದು, ಸರಿ, ಒಂದು ವೇಳೆ ಇದನ್ನು ನಾವು ಈಗ ಮಾಡದಿದ್ದಲ್ಲಿ, ನಾವು ಯಾತಕ್ಕಾಗಿ ಕಾಯುತ್ತಿದ್ದೇವೆ? ನಾನು ಬದುಕಿರುವಾಗಲೇ ಇದನ್ನು ಮಾಡಬೇಕೆಂದು ಬಯಸುವೆ” ಎಂದು ಈ ಕುರಿತು ಅವನು ನುಡಿದ. ಆಟಕ್ಕೆ ಕೆಲವು ದಿನಗಳು ಮುಂಚಿತವಾಗಿ, ಒಂದು ಅಪರೂಪದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಸ್ಪ್ರಿಂಗ್‌ಸ್ಟೀನ್‌, "ಹನ್ನೆರಡು-ನಿಮಿಷಗಳ ಸಂತೋಷಕೂಟ"ವೊಂದನ್ನು ನೀಡುವ ಕುರಿತು ಅದರಲ್ಲಿ ಭರವಸೆ ನೀಡಿದ. ಇಂಥದೊಂದು ದೊಡ್ಡ ಪ್ರೇಕ್ಷಕ ಸಮೂಹದ ಸಮ್ಮುಖದಲ್ಲಿ ಸಂಗೀತ ಕಚೇರಿಯನ್ನು ನೀಡುವಾಗ ನಿನಗೆ ಧೈರ್ಯಗೆಡುತ್ತದೆಯೇ ಎಂದು ಕೇಳಿದಾಗ, ಲಿಂಕನ್‌ ಮೆಮರಿಯಲ್‌‌ನಲ್ಲಿ ನಡೆದ "ವೀ ಆರ್‌ ಒನ್‌" ಸಂಗೀತ ಕಚೇರಿಯನ್ನು ಸ್ಪ್ರಿಂಗ್‌ಸ್ಟೀನ್‌ ಪ್ರಾಸಂಗಿಕವಾಗಿ ಸೂಚಿಸಿದ: "ಬಹಳ ಸಂಖ್ಯೆಯಲ್ಲಿ ಫುಟ್‌ಬಾಲ್‌ನ ವಿಲಕ್ಷಣವಾದ ಅಭಿಮಾನಿಗಳನ್ನು ಕಾಣಲು ಸಾಧ್ಯವಿದೆ, ಆದರೆ ಸಂಭವನೀಯ ಅಪಾಯದ ಬಗ್ಗೆ ಕಳವಳವನ್ನು ಹೊಂದಿರುವ ವ್ಯಕ್ತಿಯನ್ನು ಲಿಂಕನ್‌ ಭವನದಲ್ಲಿ ನೀವು ಕಾಣಲು ಸಾಧ್ಯವಿಲ್ಲ. ಅದು ಒಂದಷ್ಟು ಒತ್ತಡವನ್ನು ತೆಗೆದುಬಿಡುತ್ತದೆ" ಎಂದು ಅವನು ಈ ಸಂದರ್ಭದಲ್ಲಿ ಉತ್ತರಿಸಿದ. E ಸ್ಟ್ರೀಟ್‌ ಬ್ಯಾಂಡ್‌ ಮತ್ತು ದಿ ಮಿಯಾಮಿ ಹಾರ್ನ್ಸ್ ಜೊತೆಗಿನ ಅವನ 12:45 ಸಜ್ಜಿಕೆಯು, "ಟೆನ್ತ್‌ ಅವೆನ್ಯೂ ಫ್ರೀಜ್‌-ಔಟ್‌", "ಬಾರ್ನ್‌ ಟು ರನ್‌", "ವರ್ಕಿಂಗ್‌ ಆನ್‌ ಎ ಡ್ರೀಮ್‌," ಮತ್ತು "ಗ್ಲೋರಿ ಡೇಸ್‌" ಇವೇ ಮೊದಲಾದವುಗಳ ಸಂಕ್ಷೇಪಿತ ಸಂಗೀತ ಪ್ರಸ್ತುತಿಗಳನ್ನು ಒಳಗೊಂಡಿದ್ದವು; ಕೊನೆಯ ಗೀತೆಯಾದ "ಗ್ಲೋರಿ ಡೇಸ್" ಫುಟ್‌ಬಾಲ್‌ ಕುರಿತಾದ ಉಲ್ಲೇಖಗಳನ್ನು ಒಳಗೊಂಡಿತ್ತು. ಕಾರ್ಯಕ್ರಮದಲ್ಲಿನ ಹಾಜರಿಗಳು ಮತ್ತು ಪ್ರಚಾರದ ಚಟುವಟಿಕೆಗಳ ಕಾರ್ಯಸೂಚಿಯ ಪ್ರಭಾವಕ್ಕೆ ಒಳಗಾಗಿದ್ದ ಸ್ಪ್ರಿಂಗ್‌ಸ್ಟೀನ್‌, "ಇದು ಪ್ರಾಯಶಃ ನನ್ನ ಜೀವನದ ಅತ್ಯಂತ ಬಿಡುವಿಲ್ಲದ ತಿಂಗಳಾಗಿದೆ" ಎಂದು ನುಡಿದ.

2009ರ ಏಪ್ರಿಲ್‌ 1ರಂದು ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋಸ್‌‌‌ನಲ್ಲಿ ವರ್ಕಿಂಗ್‌ ಆನ್‌ ಎ ಡ್ರೀಮ್‌ ಪ್ರವಾಸಕ್ಕೆ ಸ್ಪ್ರಿಂಗ್‌ಸ್ಟೀನ್‌ ಚಾಲನೆ ನೀಡಿದ. ಟಿಕೆಟ್ಟು ವಿತರಿಸುವ ತಾಣ ಮತ್ತು ಪ್ರವಾಸದ ಪಾಲುದಾರ ಸಂಸ್ಥೆಯಾದ ಟಿಕೆಟ್‌ಮಾಸ್ಟರ್‌‌, ತಮ್ಮ ಅಂಗಸಂಸ್ಥೆಯಾದ ಟಿಕೆಟ್ಸ್‌‌ನೌ ಕಡೆಗೆ ಗ್ರಾಹಕರನ್ನು ಪುನರ್ನಿರ್ದೇಶನ ಮಾಡುತ್ತಿರುವುದು ಕಂಡುಬಂದಾಗ, 2009ರ ಫೆಬ್ರುವರಿಯಲ್ಲಿ ಈ ಪ್ರವಾಸವು ವಿವಾದಕ್ಕೆ ಈಡಾಯಿತು; ಮತ್ತೊಂದು ಸ್ಥಳದಲ್ಲಿ ಟಿಕೆಟ್ಟುಗಳು ಮುಖಬೆಲೆಯಲ್ಲಿ ಲಭ್ಯವಿದ್ದರೂ ಸಹ, ಸದರಿ ಟಿಕೆಟ್ಸ್‌‌ನೌ ಅಂಗಸಂಸ್ಥೆಯಲ್ಲಿ ಟಿಕೆಟ್ಟುಗಳು ಏರಿಸಲ್ಪಟ್ಟ ಬೆಲೆಗಳಲ್ಲಿ ಮಾರಲ್ಪಡುತ್ತಿದ್ದವು. "ನಮ್ಮ ಅಭಿಮಾನಿಗಳನ್ನು ಮತ್ತು ನಮ್ಮ ನಂಬಿಕೆಯನ್ನು ಕಂಪನಿ ದುರುಪಯೋಗ ಮಾಡಿಕೊಂಡಿದೆ" ಎಂದು ಹೇಳುವ ಮೂಲಕ ಕಂಪನಿಯನ್ನು ದೂಷಿಸಿದ ಸ್ಪ್ರಿಂಗ್‌ಸ್ಟೀನ್‌ನಿಂದ ಒಂದು ರೋಷಾವೇಷದ ಹೇಳಿಕೆಯು ಬಂದ ನಂತರ, ಟಿಕೆಟ್‌ಮಾಸ್ಟರ್‌‌ ಸಂಸ್ಥೆಯ CEO ಆದ ಇರ್ವಿಂಗ್‌ ಅಜಾಫ್‌ ಎಂಬಾತ ಒಂದು ಕ್ಷಿಪ್ರವಾದ ಕ್ಷಮಾಯಾಚನೆಯ ಹೇಳಿಕೆಯನ್ನು ನೀಡಿದ. ಹೊಸ ಗೀತಸಂಪುಟದಿಂದ ಆಯ್ದುಕೊಂಡ ಕೆಲವೇ ಹಾಡುಗಳನ್ನು ಪ್ರವಾಸದ ಪ್ರದರ್ಶನಗಳಲ್ಲಿ ಸಾದರಪಡಿಸಲಾಯಿತು; ಅದರ ಬದಲಿಗೆ, ಚಾಲ್ತಿಯಲ್ಲಿದ್ದ 2000ರ ದಶಕದ ಅಂತ್ಯಭಾಗದ ಹಿನ್‌ಸರಿತವನ್ನು ಪ್ರತಿಬಿಂಬಿಸುವಂತಿದ್ದ ಸ್ಪ್ರಿಂಗ್‌ಸ್ಟೀನ್‌ನ ಶಿಷ್ಟಗೀತೆಗಳು ಮತ್ತು ಆಯ್ಕೆಗಳನ್ನು ಹಾಡಿನ ಸಿದ್ಧ ಪಟ್ಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳಲಾಯಿತು. ಸಂಗೀತ ಕಚೇರಿಯಲ್ಲಿ ಜಮಾವಣೆಗೊಂಡಿದ್ದ ಪ್ರೇಕ್ಷಕರು ಚಿಹ್ನೆಗಳನ್ನು ಎತ್ತಿಹಿಡಿದುಕೊಂಡು ಕೋರುತ್ತಿದ್ದ ಗೀತೆಗಳ ಅನುಸಾರವಾಗಿ ಸ್ಪ್ರಿಂಗ್‌ಸ್ಟೀನ್‌ ಹಾಡುಗಳನ್ನು ಪ್ರಸ್ತುತಪಡಿಸುತ್ತಿದ್ದುದೂ ಈ ಪ್ರವಾಸದಲ್ಲಿ ಸೇರಿದ್ದು, ಇದು ಮ್ಯಾಜಿಕ್‌ ಪ್ರವಾಸದ ಅಂತಿಮ ಹಂತಗಳಲ್ಲಿ ಕಂಡುಬರುತ್ತಿದ್ದ ಪರಿಪಾಠವೊಂದನ್ನು ನೆನಪಿಸುತ್ತಿತ್ತು; ಅವರು ಕೋರುತ್ತಿದ್ದ ಗೀತೆಗಳು ಸಾಮಾನ್ಯವಾಗಿ, ಸ್ಪ್ರಿಂಗ್‌ಸ್ಟೀನ್‌ನ ಹಿಂದಿನ ಅನುಕ್ರಮಣಿಕೆಯಲ್ಲಿನ ಗ್ಯಾರೇಜ್‌ ರಾಕ್‌‌ ಅಥವಾ ಪಂಕ್‌ ರಾಕ್‌‌ ಶಿಷ್ಟಗೀತೆಗಳು ಅಥವಾ ಹಳೆಯ ಅಥವಾ ಹೆಚ್ಚು ಮರೆಯಾದ ನಮೂದುಗಳಾಗಿರುತ್ತಿದ್ದವು. ಕೆಲವೊಂದು ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಡ್ರಮ್ ವಾದಕ ಮ್ಯಾಕ್ಸ್‌ ವೇನ್‌ಬರ್ಗ್‌ ಬದಲಿಗೆ ಅವನ 18-ವರ್ಷ ವಯಸ್ಸಿನ ಮಗನಾದ ಜೇ ವೇನ್‌ಬರ್ಗ್‌‌ನನ್ನು ನಿಯೋಜಿಸಲಾಗಿತ್ತು; ಈ ಕ್ರಮದಿಂದಾಗಿ, ಪ್ರಥಮ ಪರಿಚಯವನ್ನು ಕಾಣುತ್ತಿದ್ದ ದಿ ಟುನೈಟ್‌ ಷೋ ವಿತ್‌ ಕೊನಾನ್‌ ಒ'ಬ್ರಿಯೆನ್‌ ಗೀತೆಯ ಸಂದರ್ಭದಲ್ಲಿ ಮ್ಯಾಕ್ಸ್‌ ವೇನ್‌ಬರ್ಗ್ ವಾದ್ಯಮೇಳದ ಓರ್ವ ಮುಖಂಡನಾಗಿ ಪಾತ್ರವಹಿಸಲು ಸಾಧ್ಯವಾಯಿತು.

2009ರ ಮೇ ತಿಂಗಳ 3ರಂದು ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌‌‌ನಲ್ಲಿ ನಡೆದ, ಪೀಟ್‌ ಸೀಗರ್‌‌ನ 90ನೇ ಹುಟ್ಟುಹಬ್ಬದ ಒಂದು ಆಚರಣೆಯಾದ ದಿ ಕ್ಲಿಯರ್‌ವಾಟರ್‌ ಕನ್ಸರ್ಟ್‌‌‌‌ನ ಮೈತ್ರಿಕೂಟದಲ್ಲಿ ಸ್ಪ್ರಿಂಗ್‌ಸ್ಟೀನ್‌ ಒಂದು ಭಾಗವಾಗಿದ್ದ.

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
"E! Street! Band!" ಮುಕ್ತಾಯ ಸಮಾರಂಭದಲ್ಲಿ ಬಾಣಬಿರುಸು-ಪಟಾಕಿಗಳು ವೈಭವವನ್ನು ತೋರಿಸುತ್ತಿರುವುದು. ಜೈಂಟ್ಸ್‌ ಸ್ಟೇಡಿಯಂನಲ್ಲಿನ ಅಂತಿಮ ಪ್ರದರ್ಶನಗಳ ಅವಧಿಯಲ್ಲಿ ಕಂಡುಬಂದ ಉತ್ತೇಜನ.

ವರ್ಕಿಂಗ್‌ ಆನ್‌ ಎ ಡ್ರೀಮ್‌ ಪ್ರವಾಸದ ಸಂದರ್ಭದಲ್ಲಿ, ಸ್ಪ್ರಿಂಗ್‌ಸ್ಟೀನ್‌ ಮತ್ತು ವಾದ್ಯವೃಂದದ ಸದಸ್ಯರು ಸಂಗೀತ ಉತ್ಸವಗಳ ಪ್ರಪಂಚದಲ್ಲಿ ತಮ್ಮ ಮೊದಲ ನಿಜವಾದ ಆಕ್ರಮಣಶೀಲ ಪ್ರವೇಶವನ್ನು ಮಾಡಿದರು; ನೆದರ್‌ಲೆಂಡ್ಸ್‌ನಲ್ಲಿನ ಪಿಂಕ್‌ಪಾಪ್‌ ಫೆಸ್ಟಿವಲ್‌, ಮೂರು ಹಾಡುಗಳಿಗಾಗಿ ಫಿಷ್‌ ಜೊತೆಯಲ್ಲಿಯೂ ಸ್ಪ್ರಿಂಗ್‌ಸ್ಟೀನ್‌ ಕಾಣಿಸಿಕೊಂಡ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಬೊನ್ನಾರೂ ಮ್ಯೂಸಿಕ್‌ ಫೆಸ್ಟಿವಲ್‌‌, ಮತ್ತು UKಯಲ್ಲಿನ ಗ್ಲಾಸ್ಟನ್‌ಬರಿ ಫೆಸ್ಟಿವಲ್‌ ಮತ್ತು ಹಾರ್ಡ್‌ ರಾಕ್‌ ಕಾಲಿಂಗ್‌‌ನಂಥ ಉತ್ಸವಗಳಲ್ಲಿನ ಸಂಗೀತರಾತ್ರಿಗಳಲ್ಲಿ ಪಾಲ್ಗೊಂಡು ಅವರು ಪತ್ರಿಕಾ ಪ್ರಚಾರವನ್ನು ಗಿಟ್ಟಿಸಿದರು. ಜುಲೈನಲ್ಲಿ ಫ್ರಾನ್ಸ್‌ನ ಬ್ರಿಟನಿಯಲ್ಲಿ ನಡೆದ ಫೆಸ್ಟಿವಲ್‌ ಡೆಸ್‌ ವಿಯೆಲ್ಲೆಸ್‌ ಚಾರುಯೆಸ್‌‌‌‌ ಎಂಬ ಉತ್ಸವದಲ್ಲಿ ಆತ ಶ್ರೇಷ್ಠ ಕಲಾವಿದನಾಗಿಯೂ ಅವನು ಹೊರಹೊಮ್ಮಿದ; ಇದು ಫ್ರಾನ್ಸ್‌‌ನಲ್ಲಿನ ಅವನ ಏಕೈಕ ಪ್ರವಾಸ ಠಿಕಾಣಿಯಾಗಿತ್ತು. ಅವನ ಮಗ ಎವಾನ್‌, ಗಿಟಾರ್ ನುಡಿಸುವ ಮೂಲಕ ಸದರಿ ಸಂಗೀತ ಕಚೇರಿಯಲ್ಲಿ ಪಾಲ್ಗೊಂಡ.

ತನ್ನ ತವರು ಸಂಸ್ಥಾನದಲ್ಲಿನ ಜೈಂಟ್ಸ್‌ ಸ್ಟೇಡಿಯಂ ಎಂಬಲ್ಲಿ ಐದು ಅಂತಿಮ ಪ್ರದರ್ಶನಗಳ ಒಂದು ವಿಸ್ತರಣೆಯ ಅವಧಿಯಲ್ಲಿ, ಒಂದು ಹೊಚ್ಚಹೊಸ ಹಾಡಿನೊಂದಿಗೆ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಪ್ರದರ್ಶನಗಳನ್ನು ಪ್ರಾರಂಭಿಸಿದ; "ವಯಸ್ಸಾದ ಹೆಂಗಸಿಗೆ" ಸಮರ್ಪಿಸಲಾದ (ಮತ್ತು ಅದರ ದೃಷ್ಟಿಕೋನದಿಂದ ಹೇಳಲಾದ) ಈ ಗೀತೆಗೆ "ರೆಕಿಂಗ್‌ ಬಾಲ್‌" ಎಂದು ಹೆಸರಿಸಲಾಗಿತ್ತು. ಐತಿಹಾಸಿಕ ಕ್ರೀಡಾಂಗಣ, ಮತ್ತು ಅವನ ಜೆರ್ಸಿ ಮೂಲಗಳನ್ನು ಈ ಹಾಡು ಎತ್ತಿಹಿಡಿಯುತ್ತದೆ. U.S. ಪ್ರವಾಸದ ಮೂರನೇ ಹಂತದಲ್ಲಿನ ಠಿಕಾಣಿಯಲ್ಲಷ್ಟೇ ಅಲ್ಲದೇ ಇತರ ಕೆಲವು ಪ್ರದರ್ಶನಗಳಲ್ಲಿ, ಬಾರ್ನ್‌ ಟು ರನ್‌ , ಡಾರ್ಕ್‌ನೆಸ್‌ ಆನ್‌ ದಿ ಎಡ್ಜ್‌ ಆಫ್‌ ಟೌನ್‌‌ , ಅಥವಾ ಬಾರ್ನ್‌ ಇನ್‌ ದಿ U.S.A. ಇವುಗಳ ಸಂಪೂರ್ಣ ಗೀತಸಂಪುಟದ ಪ್ರಸ್ತುತಿಗಳು ಸೇರಿಕೊಂಡಿದ್ದವು.

ಸದರಿ ಪ್ರವಾಸವು E ಸ್ಟ್ರೀಟ್‌ ಬ್ಯಾಂಡ್‌ನ ಕಟ್ಟಕಡೆಯ ಸಂಗೀತ ಪ್ರಸ್ತುತಿಯಾಗಲಿದೆ ಎಂಬ ಊಹನದ ನಡುವೆ, ನಿಗದಿತ ಯೋಜನೆಯಂತೆ ನ್ಯೂಯಾರ್ಕ್‌ನ ಬಫೆಲೊದಲ್ಲಿ 2009ರ ನವೆಂಬರ್‌ನಲ್ಲಿ ಪ್ರವಾಸವು ಅಂತ್ಯಗೊಂಡಿತು, ಆದರೆ ಪ್ರದರ್ಶನದ ಅವಧಿಯಲ್ಲಿ ಸ್ಪ್ರಿಂಗ್‌ಸ್ಟೀನ್‌ ಮಾತನಾಡುತ್ತಾ, "ಒಂದು ಅಲ್ಪ ಅವಧಿಯವರೆಗೆ" ಇದೊಂದು ವಿದಾಯವಾಗಿತ್ತು ಎಂದು ತಿಳಿಸಿದ.

2009ರಲ್ಲಿ, ದಿ ಪೀಪಲ್‌ ಸ್ಪೀಕ್‌ ಎಂಬ ಸುದೀರ್ಘವಾದ, ಚಲನಚಿತ್ರರೂಪದ ಸಾಕ್ಷ್ಯಚಿತ್ರದಲ್ಲಿ ಸ್ಪ್ರಿಂಗ್‌ಸ್ಟೀನ್‌ ತನ್ನ ಸಂಗೀತ ಪ್ರಸ್ತುತಿಯನ್ನು ನೀಡಿದ; ಇತಿಹಾಸಕಾರ ಹೋವರ್ಡ್‌ ಝಿನ್‌‌ನ "ಎ ಪೀಪಲ್‌'ಸ್‌ ಹಿಸ್ಟರಿ ಆಫ್‌ ದಿ ಯುನೈಟೆಡ್‌ ಸ್ಟೇಟ್ಸ್‌” ಕೃತಿಯನ್ನು ಆಧರಿಸಿದ ಈ ಚಿತ್ರವು, ದಿನಂಪ್ರತಿಯ ಅಮೆರಿಕನ್ನರ ಪತ್ರಗಳು, ದಿನಚರಿಗಳು, ಮತ್ತು ಭಾಷಣಗಳ ನಾಟಕೀಯ ಮತ್ತು ಸಂಗೀತಾತ್ಮಕ ಪ್ರಸ್ತುತಿಗಳನ್ನು ಬಳಸಿಕೊಳ್ಳುತ್ತದೆ.

2009ರ ಅಕ್ಟೋಬರ್‌ನಲ್ಲಿ, U2, ಸ್ಟೀವೀ ವಂಡರ್‌ ಮತ್ತು ಅರೆಥಾ ಫ್ರಾಂಕ್ಲಿನ್‌‌ರಂಥ ಕಲಾವಿದರ ಜೊತೆಯಲ್ಲಿ, ರಾಕ್‌ ಅಂಡ್‌ ರೋಲ್‌ ಕೀರ್ತಿಭವನದ 25ನೇ ವಾರ್ಷಿಕೋತ್ಸವದ ಸಹಾಯಾರ್ಥ ಪ್ರಯೋಜನದ ಸಂಗೀತ ಕಚೇರಿಗೆ ಸಂಬಂಧಿಸಿದಂತೆ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ ಸುದ್ದಿಯ ಬಹಳ ಮುಖ್ಯ ವಿಷಯವಾಗಿದ್ದ.

2009ರ ನವೆಂಬರ್‌ 17ರಂದು, ಆಟಿಸಂ ಸ್ಪೀಕ್ಸ್ ಎಂಬ ಅನಾಥಾಶ್ರಮದ ಬೆಂಬಲವಾಗಿ ಕಾರ್ನೆಗಿ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಸಹಾಯಾರ್ಥ ಪ್ರದರ್ಶನದಲ್ಲಿ ಸ್ಪ್ರಿಂಗ್‌ಸ್ಟೀನ್‌ ಕಾಣಿಸಿಕೊಂಡ. ಅಲ್ಲಿ ಆತ "ಇಫ್‌ ಐ ಷುಡ್‌ ಫಾಲ್‌ ಬಿಹೈಂಡ್‌" ಎಂಬ ಹಾಡನ್ನು ಪ್ರಸ್ತುತಪಡಿಸಿದ; ಎಲ್ಲ ಜನರನ್ನೂ ಸ್ವೀಕರಿಸುವ ಮತ್ತು ನೆರವಾಗುವ, ಅದರಲ್ಲೂ ವಿಶೇಷವಾಗಿ ಈ ನಿದರ್ಶನದಲ್ಲಿ ಆಟಿಸಂ ಸಮಸ್ಯೆಯೊಂದಿಗಿರುವ ಜನರನ್ನು ನಮ್ಮವರೆಂದು ಭಾವಿಸುವ ಕುರಿತಾಗಿ ಈ ಹಾಡು ಅಭಿವ್ಯಕ್ತಿಸುತ್ತದೆ.

2009ರ ಡಿಸೆಂಬರ್‌‌ 6ರಂದು, ಕೆನಡಿ ಸೆಂಟರ್‌ ಪುರಸ್ಕಾರಗಳಿಂದ ಪುರಸ್ಕೃತರಾದವರ ಪೈಕಿ ಸ್ಪ್ರಿಂಗ್‌ಸ್ಟೀನ್‌ ಕೂಡಾ ಒಬ್ಬನಾಗಿದ್ದ; ಇದು ಕಲಾಪ್ರಪಂಚಕ್ಕೆ ಸೇರಿದ ಪ್ರಸಿದ್ಧ ವ್ಯಕ್ತಿಗಳು ಅಮೆರಿಕಾದ ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಗೌರವಿಸಲು ನೀಡಲಾಗುವ ಒಂದು ವಾರ್ಷಿಕ ಪ್ರಶಸ್ತಿಯಾಗಿದೆ.. ಕೆನಡಿ ಸೆಂಟರ್‌‌ನಲ್ಲಿನ ಅಧಿಕೃತ ರೂಢಿಪಾಲನಾ ಸಮಾರಂಭಕ್ಕೆ ಮುಂಚಿತವಾಗಿ, ಅಧ್ಯಕ್ಷ ಒಬಾಮಾ ಮತ್ತು ಶ್ರೀಮತಿ ಮಿಷೆಲ್ಲಿ ಒಬಾಮಾರಿಂದ ಆರು ಸಾಂಸ್ಕೃತಿಕ ಮಾದರಿವ್ಯಕ್ತಿಗಳು ಸತ್ಕರಿಸಲ್ಪಟ್ಟರು. ಅಧ್ಯಕ್ಷ ತನ್ನ ಭಾಷಣದ ಸಂದರ್ಭದಲ್ಲಿ ಸ್ಪ್ರಿಂಗ್‌ಸ್ಟೀನ್‌ ಕುರಿತು ಉಲ್ಲೇಖಿಸುತ್ತಾ, ತನ್ನ ಉದಾರ ಹೃದಯದ ಹಾಡುಗಳ ವರ್ಣಫಲಕದಲ್ಲಿ ನಿಯತರಾದ ಅಮೆರಿಕನ್ನರ ಜೀವನವನ್ನು ಆತ ಹೇಗೆ ಸಂಯೋಜಿಸಿದ್ದಾನೆ ಮತ್ತು ವಿಶಿಷ್ಟವಾದ ರಾಕ್‌-ಅಂಡ್‌-ರೋಲ್‌ ಸಂಗೀತ ಕಚೇರಿಗಳಿಗಿಂತ ಅವನ ಸಂಗೀತ ಕಚೇರಿಗಳು ಹೇಗೆ ವಿಭಿನ್ನವಾಗಿವೆ ಎಂಬುದರ ಕುರಿತು, ಉನ್ನತ-ಶಕ್ತಿಯ ಸಂಗೀತ ಕಚೇರಿಗಳಾಗಿರುವುದರ ಜೊತೆಗೆ ಅವು ಹೇಗೆ "ಸಹಭಾಗಿತ್ವಗಳನ್ನು" ಹೊರಹೊಮ್ಮಿಸಿವೆ ಎಂಬುದರ ಕುರಿತು ಆತ ಮಾತನಾಡಿದ. ಅಧ್ಯಕ್ಷ ಒಬಾಮಾ ತನ್ನ ಮಾತುಗಳನ್ನು ಮುಂದುವರಿಸುತ್ತಾ, ""ವೀ ಆರ್‌ ಒನ್‌" ಸಂಗೀತ ಕಚೇರಿಯಂಥ ದಿನಗಳಂದು ಮತ್ತು ಇಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ, ನಾನೀಗ ಅಧ್ಯಕ್ಷನಾಗಿದ್ದರೆ, ಅವನು ದಿ ಬಾಸ್‌ ಆಗಿದ್ದಾನೆ" ಎಂಬ ಷರಾವನ್ನು ನಮೂದಿಸಿ ತನ್ನ ಭಾಷಣಕ್ಕೆ ಅಂತ್ಯಹಾಡಿದ. 2009ರ ಡಿಸೆಂಬರ್‌‌ 6ರಂದು ನಡೆದ ಅಧಿಕೃತ ಪ್ರಶಸ್ತಿಗಳ ಪ್ರದರ್ಶನದ ಅವಧಿಯಲ್ಲಿ, ಜೊನ್‌ ಸ್ಟೀವರ್ಟ್‌, ಬೆನ್‌ ಸ್ಟಿಲ್ಲರ್‌‌, ಎಡ್ಡೀ ವೆಡ್ಡರ್‌‌, ಸ್ಟಿಂಗ್‌‌ ಮತ್ತು ಮೆಲಿಸ್ಸಾ ಎಥರಿಡ್ಜ್‌‌ ಇವರೇ ಮೊದಲಾದ ಹಲವಾರು ಚಿರಪರಿಚಿತ ಗಣ್ಯರಿಂದ ಗೌರವಗಳು ಸಲ್ಲಿಸಲ್ಪಟ್ಟವು.

ತಮಾಷೆಯಿಂದ ಕೂಡಿದ್ದರೂ ಸಹ ಸ್ಪ್ರಿಂಗ್‌ಸ್ಟೀನ್‌ಗೆ ಒಂದು ಹೃದಯಸ್ಪರ್ಶಿಯಾಗಿದ್ದ ಗೌರವಾರ್ಪಣೆಯನ್ನು ನೀಡುವ ಮೂಲಕ ಜೊನ್‌ ಸ್ಟೀವರ್ಟ್‌ ತನ್ನ ಮಾತುಗಳನ್ನು ಪ್ರಾರಂಭಿಸಿದ: "ನಾನೊಬ್ಬ ಸಂಗೀತ ವಿಮರ್ಶಕನಲ್ಲ. ಇತಿಹಾಸಕಾರನಲ್ಲ, ಅಥವಾ ದಫ್ತರ-ರಕ್ಷಕನಂತೂ ಅಲ್ಲವೇ ಅಲ್ಲ. ಅಮೆರಿಕಾದ ಗೀತಸಂಗ್ರಹದ ಮಹಾಪುರುಷರ ಪೈಕಿ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಯಾವ ಸ್ಥಾನದಲ್ಲಿ ನೆಲೆ ಕಂಡುಕೊಂಡಿದ್ದಾನೆ ಎಂಬುದನ್ನು ನಾನು ನಿಮಗೆ ಹೇಳಲಾರೆ. ಅವನ ಕೃತಿಗಳ ಸಂದರ್ಭದ ಮೇಲೆ, ಅಥವಾ ನಮ್ಮ ಮಹಾನ್‌ ರಾಷ್ಟ್ರಗಳ ಜಾನಪದ ಮತ್ತು ಮೌಖಿಕ ಇತಿಹಾಸದ ಸಂಪ್ರದಾಯಗಳಲ್ಲಿರುವ ಅದರ ಮೂಲಗಳ ಮೇಲೆ ನಾನು ಬೆಳಕು ಚೆಲ್ಲಲಾರೆ. ಆದರೆ ನಾನು ನ್ಯೂಜರ್ಸಿಗೆ ಸೇರಿದವ. ಆದ್ದರಿಂದ, ನಾನು ಏನನ್ನು ನಂಬುತ್ತೇನೋ ಅದನ್ನು ಮಾತ್ರ ನಿಮಗೆ ಹೇಳಬಲ್ಲೆ. ಮತ್ತು ನಾನು ನಂಬಿದ ಸಂಗತಿಯೇನೆಂದರೆ, ಬಾಬ್‌ ಡೈಲನ್‌ ಮತ್ತು ಜೇಮ್ಸ್‌ ಬ್ರೌನ್‌ ಒಂದು ಶಿಶುವನ್ನು ಹೊಂದಿದ್ದರು. ಹೌದು! ಮತ್ತು ಅವರು ಈ ಮಗುವನ್ನು ಬಿಟ್ಟುಬಿಟ್ಟರು, ನೀವು ಊಹಿಸಿಕೊಳ್ಳಬಹುದಾದಂತೆ ಆ ಸಮಯದಲ್ಲಿ... ಅಂತರಕುಲದ ಸಂಬಂಧಗಳು, ಅಂದರೆ ಅವೇನಾಗಿದ್ದವೋ ಅದೇ ಆಗಿರುವ ಒಂದೇ ಲಿಂಗಕ್ಕೆ ಸಂಬಂಧಿಸಿದ ಸಂಬಂಧಗಳು...ಈ ಶಿಶುವನ್ನು ಜೆರ್ಸಿ ಸುಂಕದಕಟ್ಟೆಯ ರಸ್ತೆಯ ಮೇಲಿನ 8A ಮತ್ತು 9 ಎಂಬ ನಿರ್ಗಮನದ ಎರಡು ಹೆದ್ದಾರಿಗಳು ಕೂಡುವುದರ ನಡುವಿನ ರಸ್ತೆಯ ಪಾರ್ಶ್ವದಲ್ಲಿ ಬಿಟ್ಟುಬಿಟ್ಟವು... ಆ ಶಿಶು ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಆಗಿತ್ತು" ಎಂದು ಅವನು ನುಡಿದ. ಆತ ತನ್ನ ಮಾತನ್ನು ಮುಂದುವರಿಸುತ್ತಾ, "ನಾನು ನಂಬಿರುವ ಪ್ರಕಾರ ಸ್ಪ್ರಿಂಗ್‌ಸ್ಟೀನ್‌, ಭಾವಗೀತಾತ್ಮಕ ಅಲಂಕಾರಿಕ ಭಾಷೆ, ಸಂಗೀತಕುಶಲ ನೈಪುಣ್ಯ ಮತ್ತು ಸಂಪೂರ್ಣವಾಗಿ ಕಡಿವಾಣವಿಲ್ಲದ, ಪರಿಶುದ್ಧವಾದ ಆನಂದ ಇವೆಲ್ಲದರ ಒಂದು ಅಭೂತಪೂರ್ವವಾದ ಸಂಯೋಜನೆಯಾಗಿದ್ದಾನೆ. ಅಷ್ಟೊಂದು ಅದ್ಭುತವಾಗಿ ಅಥವಾ ಅಷ್ಟೊಂದು ಅನನ್ಯವಾಗಿ ಎಂದೂ ಹೇಳಲ್ಪಡದಿರುವ ಕಥೆಗಳನ್ನು, ತುಂಬಾ ಆಪ್ತವಾಗಿ ಹೇಳುವ ಕಥನಕಲೆ ಅವನಲ್ಲಿ ಸಮೃದ್ಧವಾಗಿದೆ. ಮತ್ತು ಅವನು ಇದನ್ನೀಗ ದ್ವೇಷಿಸುತ್ತಿದ್ದಾನೆ ಎಂದು ನನಗೆ ಗೊತ್ತು. ಅವನೊಬ್ಬ ವಿನೀತ ಮನುಷ್ಯ, ತನ್ನ ಪುಟ್ಟ ಸೂಟನ್ನು ಧರಿಸಿಕೊಂಡು, ಅಲ್ಲಿರುವ ಪುಟ್ಟಪುಟ್ಟ ಬಣ್ಣಬಣ್ಣದ ಡ್ರೀಮ್‌ಕ್ಯಾಚರ್‌‌ಗಳನ್ನು ಅಥವಾ ಅಲ್ಲಿರುವ ಬೇರೇನನ್ನಾದರೂ ಧರಿಸಿಕೊಂಡು, ಆ ಒಂದು ಪುಟ್ಟ ಪೆಟ್ಟಿಗೆಯಲ್ಲಿ ಕುಳಿತುಕೊಂಡಿರುವುದನ್ನು ಅವನೆಂದೂ ಇಷ್ಟಪಡುವುದಿಲ್ಲ. ನಾನು ನಿಲ್ಲಿಸಬಹುದಾದ, ಆದರೂ ನಿಲ್ಲಿಸಲು ಬಯಸದ ತನ್ನ ಗಿಟಾರ್‌ನ್ನು ಹೊಂದಿರಲು ಅವನು ಬಯಸುತ್ತಾನೆ. ಅವನು ಬಾಸ್ ಆಗಿದ್ದಾನೆ... ಆದರೆ ನಾನು ಹಂಬಲಿಸಲು ಶುರುಮಾಡುವವರೆಗೂ, ಒಂದು ಸುದೀರ್ಘ ಕಾಲದವರೆಗೆ ಅವನ ಸಂಗೀತವನ್ನು ಅರ್ಥಮಾಡಿಕೊಂಡಿರಲಿಲ್ಲ. ನಾನು ಮಾಡುತ್ತಿದ್ದ ಕೆಲಸಗಳನ್ನು ಪ್ರಶ್ನಿಸಿಕೊಳ್ಳಲು ಮತ್ತು ನನ್ನದೇ ಆದ ಜೀವನವನ್ನು ಸಾಗಿಸಲು ಪ್ರಾರಂಭಿಸುವವರೆಗೆ ನನಗೆ ಇದು ಗೊತ್ತಿರಲಿಲ್ಲ. ಇದು ಕೇವಲ ವೇದಿಕೆಯ ಮೇಲಿನ ಮತ್ತು ಹವ್ಯಾಸಿ ರಂಗಮಂಚದ ಮೇಲಿನ ಆನಂದದಾಯಕ ಪ್ರದರ್ಶನ ಮಾತ್ರವೇ ಅಲ್ಲ ಎಂಬುದು ಅರ್ಥವಾಗುವ ತನಕ ನನಗಿದು ಅರಿವಾಗಿರಲಿಲ್ಲ. ಇದು ಬದಲಾವಣೆಗೊಳ್ಳಲು ಸಾಧ್ಯವಿರುವ ಜೀವನಗಳ ಕಥೆಗಳ ಕುರಿತಾದುದಾಗಿತ್ತು. ಮತ್ತು ನೀವು ಸಾಧಿಸಲು ವಿಫಲರಾಗಬಹುದಾದ ಏಕೈಕ ಸ್ಥಿತಿಯೆಂದರೆ, ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗುವುದು. ನಮ್ಮ ನೆಲೆಯನ್ನು ಬದಲಾಯಿಸಲು ಪ್ರಯತ್ನ ಮಾಡದಿರುವುದು ಜೀವನದಲ್ಲಿನ ಏಕೈಕ ವಿಷಯ, ಏಕೈಕ ವೈಫಲ್ಯವಾಗಿತ್ತು. ಮತ್ತು ಇದನ್ನು ನಾನು ಆತನಿಗೆ ಹೃದಯಪೂರ್ವಕವಾಗಿ ಹೇಳುತ್ತಿರುವುದೇ ಇದು ನನ್ನಲ್ಲಿ ಪ್ರತಿಧ್ವನಿಸುತ್ತಿರುವುದಕ್ಕೆ ಕಾರಣವಾಗಿದೆ.... ನಾನು ಅಲ್ಲಿರಲಾರೆ ಎಂಬುದು ದೇವರಿಗೂ ಗೊತ್ತು; ಅಷ್ಟೇ ಅಲ್ಲ, ಇದು ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ನ ಕುರಿತಾದ ಸ್ಫೂರ್ತಿದಾಯಕ ಮಾತುಗಳು ಮತ್ತು ಅವನ ಸಂಗೀತದ ಕುರಿತಾದ ಮಾತುಗಳ ಸಂದರ್ಭವಾಗಿರದಿದ್ದರೆ, ಇಲ್ಲಿಯೂ ಸಹ ನಾನು ಇರುತ್ತಿರಲಿಲ್ಲ" ಎಂದು ನುಡಿದ.

ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ-ವಿಜೇತ ಬರಹಗಾರನಾದ ರೋನ್‌ ಕೊವಿಕ್‌ ನಂತರ ವೇದಿಕೆಗೆ ಬಂದ; 1978ರಲ್ಲಿ, ಹಾಲಿವುಡ್‌ನಲ್ಲಿನ ಸನ್‌ಸೆಟ್‌ ಮಾರ್ಕ್ವಿಸ್‌ ಹೊಟೇಲ್‌‌‌ನಲ್ಲಿ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ನನ್ನು ತಾನು ಮೊದಲಬಾರಿಗೆ ಭೇಟಿಮಾಡಿದ್ದು ಹೇಗೆ ಎಂಬುದನ್ನು ಆತ ವಿವರಿಸಿದ. ಒಂದು ಅಕಸ್ಮಾತ್ತಾಗಿ ಎದುರಾದ ಅವಕಾಶವು ಕಲಾವಿದರ ಒಂದು ಕೃತಿಯ ಬದಲಾವಣೆಗೆ ಅವಕಾಶಮಾಡಿಕೊಟ್ಟಿತು; ಬಾರ್ನ್‌ ಆನ್‌ ದಿ ಫೋರ್ತ್‌ ಆಫ್‌ ಜುಲೈ ಕೃತಿಯ ಲೇಖಕ ಮತ್ತು ವಿಯೆಟ್ನಾಂ ಪರಿಣತ ಯೋಧ ಹಾಗೂ ಬಾರ್ನ್‌ ಇನ್‌ ದಿ U.S.A. ಕೃತಿಯ ಸಂಗೀತಗಾರನ ನಡುವೆ ಒಂದು ಸ್ನೇಹವು ಹುಟ್ಟಿಕೊಂಡಿತು. ಸ್ಪ್ರಿಂಗ್‌ಸ್ಟೀನ್‌ನ ಸಂಗೀತಕುಶಲ ಗೌರವಾರ್ಪಣೆಯನ್ನು ಕೋವಿಕ್‌ ಪರಿಚಯಿಸಿದ; ಮ್ಯಾಥೆಸ್‌ ಆಲ್‌-ಸ್ಟಾರ್‌ ವಾದ್ಯವೃಂದವು ಪ್ರಸ್ತುತಪಡಿಸಿದ "ಟೆನ್ತ್‌ ಅವೆನ್ಯೂ ಫ್ರೀಜ್‌-ಔಟ್‌" ಗೀತೆಯೊಂದಿಗೆ ಅದು ಪ್ರಾರಂಭವಾಯಿತು. ಇದಾದ ನಂತರ, ಗ್ರಾಮಿ ಪ್ರಶಸ್ತಿ-ವಿಜೇತ ಸಂಗೀತಗಾರನಾದ ಜಾನ್‌ ಮೆಲೆನ್‌ಕ್ಯಾಂಪ್‌ ಎಂಬಾತ "ಬಾರ್ನ್‌ ಇನ್‌ ದಿ U.S.A." ಗೀತೆಯನ್ನು ಮೆಲುದನಿಯಲ್ಲಿ ಹಾಡಿದ. ಇದಾದ ನಂತರ, ಬಹು-ಗ್ರಾಮಿ ವಿಜೇತರಾದ ಬೆನ್‌ ಹಾರ್ಪರ್‌‌ ಮತ್ತು ಜೆನ್ನಿಫರ್‌ ನೆಟಲ್ಸ್‌ ವತಿಯಿಂದ "ಮೈ ಫಾದರ್‌'ಸ್‌ ಹೌಸ್‌", "ಗ್ಲೋರಿ ಡೇಸ್‌" ಮತ್ತು "ಐಯಾಮ್‌ ಆನ್‌ ಫೈರ್‌‌‌" ಗೀತೆಗಳ ಒಂದು ಮಿಶ್ರಗೀತೆಯನ್ನು ಪ್ರಸ್ತುತಪಡಿಸಲಾಯಿತು; ಇದಕ್ಕೆ ರಾಬ್‌ ಮ್ಯಾಥೆಸ್‌ ವಾದ್ಯವೃಂದದ ಪಕ್ಕವಾದ್ಯದ ವ್ಯವಸ್ಥೆಯಿತ್ತು. ಗ್ರಾಮಿ ಪ್ರಶಸ್ತಿ ಮತ್ತು ಅಕಾಡೆಮಿ ಪ್ರಶಸ್ತಿ-ವಿಜೇತ ಸಂಗೀತಗಾರನಾದ ಮೆಲಿಸ್ಸಾ ಎಥರಿಡ್ಜ್‌‌ ಎಂಬಾತ "ಬಾರ್ನ್‌ ಟು ರನ್‌" ಗೀತೆಯ ಒಂದು ಸಂಗೀತ ಕಚೇರಿ-ಆವೃತ್ತಿಯನ್ನು ಸಾದರಪಡಿಸಿದ; ಇದಾದ ನಂತರ ಗ್ರಾಮಿ ಪ್ರಶಸ್ತಿ ಮತ್ತು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ-ವಿಜೇತ ಗಾಯಕನಾದ ಎಡ್ಡೀ ವೆಡ್ಡರ್‌‌ ಎಂಬಾತನಿಂದ "ಮೈ ಸಿಟಿ ಆಫ್‌ ರೂಯಿನ್ಸ್‌" ಗೀತೆಯ ಒಂದು ಸ್ಫೋಟಕಶೈಲಿಯ ಸಂಗೀತ ಪ್ರಸ್ತುತಿಯು ಹೊರಹೊಮ್ಮಿತು. ಅಂತಿಮವಾಗಿ, ಸಂಗೀತಾತ್ಮಕ ಶಕ್ತಿಕೇಂದ್ರವೆಂದೇ ಹೆಸರಾದ ಮತ್ತು ಸ್ವತಃ ಓರ್ವ ಬಹುಸಂಖ್ಯೆಯ ಗ್ರಾಮಿ, ಗೋಲ್ಡನ್‌ ಗ್ಲೋಬ್‌ ಮತ್ತು ಎಮಿ ಪ್ರಶಸ್ತಿ ವಿಜೇತನಾದ ಸ್ಟಿಂಗ್‌‌, "ದಿ ರೈಸಿಂಗ್‌" ಗೀತೆಯ ಒಂದು ಮರೆಯಲಾಗದ ಸಂಗೀತ ಪ್ರಸ್ತುತಿಯೊಂದಿಗೆ ಆ ರಾತ್ರಿಗೆ ಮುಕ್ತಾಯವನ್ನು ಹಾಡಿದ; ಇದಕ್ಕೆ ದಿ ಜೋಯ್ಸ್‌ ಗ್ಯಾರೆಟ್‌ ಕಾಯ್ರ್‌‌ ಮೇಳವು ಸಂಗೀತದ ಬೆಂಬಲವನ್ನು ನೀಡಿತು ಮತ್ತು ಉಳಿದ ಸಂಗೀತಗಾರರು ಆ ಸಂಜೆಯ ಉತ್ತೇಜನಾತ್ಮಕ ಮುಕ್ತಾಯಕ್ಕೆ ತಮ್ಮ ಕಾಣಿಕೆಯನ್ನು ನೀಡಿದರು. ಗೌರವಾರ್ಪಣೆಯ ಪ್ರದರ್ಶನದ ಉದ್ದಕ್ಕೂ, ಅಧ್ಯಕ್ಷ ಒಬಾಮಾ, ಶ್ರೀಮತಿ ಒಬಾಮಾ ಹಾಗೂ ಇತರ ಪುರಸ್ಕೃತರು, ಶ್ರೀಮಾನ್‌ ಸ್ಪ್ರಿಂಗ್‌ಸ್ಟೀನ್‌ನ ಅತ್ಯುನ್ನತವಾದ ವ್ಯಕ್ತಿತ್ವ ಕಡೆಗೇ ಮೆಚ್ಚುಗೆಯಿಂದ ನೋಡುತ್ತಿದ್ದರು.

2010 ಹೈಟಿ ಭೂಕಂಪದ ಬಲಿಪಶುಗಳಿಗೆ ನೆರವಾಗಲು ಹಣ ಸಂಗ್ರಹಿಸುವ ಉದ್ದೇಶದಿಂದ ಜಾರ್ಜ್‌ ಕ್ಲೂನಿ ಸಂಘಟಿಸಿದ್ದ, ...Hope for Haiti Now: A Global Benefit for Earthquake Relief‎ ಕಾರ್ಯಕ್ರಮದಲ್ಲಿ ಸಂಗೀತ ಪ್ರಸ್ತುತಿಯನ್ನು ನೀಡಲು, 2010ರ ಜನವರಿ 22ರಂದು ಅನೇಕ ಚಿರಪರಿಚಿತ ಕಲಾವಿದರೊಂದಿಗೆ ಸ್ಪ್ರಿಂಗ್‌ಸ್ಟೀನ್‌ ಕೈಜೋಡಿಸಿದ.

ಬಗೆಬಗೆಯ ಸ್ಥಳೀಯ ಆಹಾರ ಬ್ಯಾಂಕ್‌ಗಳೊಂದಿಗೆ, ಅದರಲ್ಲೂ ನಿರ್ದಿಷ್ಟವಾಗಿ ನ್ಯೂಜರ್ಸಿ ಆಹಾರ ಬ್ಯಾಂಕ್‌ನೊಂದಿಗೆ ಸ್ಪ್ರಿಂಗ್‌ಸ್ಟೀನ್‌ ಒಡನಾಟವನ್ನು ಇರಿಸಿಕೊಂಡಿದ್ದ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಂಗೀತ ಕಚೇರಿಗಳ ಅವಧಿಯಲ್ಲಿ, ತನ್ನ ಬೆಂಬಲವನ್ನು ಘೋಷಿಸಲು ಸಾಮಾನ್ಯವಾಗಿ ವಾಡಿಕೆಯನ್ನು ಮುರಿಯುವ ಆತ, ನಂತರದಲ್ಲಿ ಸಂಗೀತ ಕಚೇರಿಯ ಅವಧಿಯಲ್ಲಿನ ಒಟ್ಟು ಸಂಗ್ರಹಣೆಯನ್ನು ತನ್ನದೇ ಸ್ವಂತ ಹಣದೊಂದಿಗೆ ಹೊಂದಿಸುತ್ತಾನೆ. 2009ರ ನವೆಂಬರ್‌ 3ರಂದು, NCಯ ಚಾರ್ಲೊಟ್‌ನಲ್ಲಿ ನಡೆದ ತನ್ನ ಸಂಗೀತ ಕಚೇರಿಯಲ್ಲಿ, ಸ್ಥಳೀಯ ಆಹಾರ ಬ್ಯಾಂಕ್‌ ಒಂದರ ಸಂಗ್ರಹಣಾ ಪ್ರಕ್ರಿಯೆಗೆ ನೆರವಾಗಲು, 10,000$ನಷ್ಟು ಮೊತ್ತದ ಒಂದು ದೇಣಿಗೆಯೊಂದಿಗೆ ಆತ ಶುರುಮಾಡಿ, ನಂತರದಲ್ಲಿ ಮತ್ತೆ ಇದನ್ನು ಹೊಂದಿಸಿದ.

ರೋಲಿಂಗ್‌ ಸ್ಟೋನ್‌ ನಿಯತಕಾಲಿಕವು ಸ್ಪ್ರಿಂಗ್‌ಸ್ಟೀನ್‌ನನ್ನು ದಶಕದ ಎಂಟು ಕಲಾವಿದರ ಪೈಕಿ ಒಬ್ಬ ಎಂದು ಹೆಸರಿಸುವುದರೊಂದಿಗೆ ಮತ್ತು ದಶಕಕ್ಕೆ ಸಂಬಂಧಿಸಿದ ಸಂಗೀತ ಕಚೇರಿಯ ಒಟ್ಟಾರೆ ಗಳಿಕೆಗಳಲ್ಲಿನ ಕಲಾವಿದರ ಪೈಕಿ ಸ್ಪ್ರಿಂಗ್‌ಸ್ಟೀನ್‌ನ ಪ್ರವಾಸಗಳು ಅವನನ್ನು ನಾಲ್ಕನೇ ಸ್ಥಾನದಲ್ಲಿ ಕೂರಿಸುವುದರೊಂದಿಗೆ, 2000ದ ದಶಕವು ಅಂತ್ಯಗೊಂಡಿತು.

ವರ್ಕಿಂಗ್‌ ಆಫ್‌ ಎ ಡ್ರೀಮ್‌ ಪ್ರವಾಸದಿಂದ ಆಯ್ದ ...London Calling: Live in Hyde Park ಎಂಬ ಶೀರ್ಷಿಕೆಯನ್ನು ಹೊಂದಿದ್ದ DVDಯೊಂದನ್ನು 2010ರ ಜೂನ್‌ 22ರಂದು ಅವನು ಬಿಡುಗಡೆಮಾಡಿದ.

ವೈಯಕ್ತಿಕ ಜೀವನ

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
2005ರಲ್ಲಿ ನ್ಯೂಜರ್ಸಿಯ ಆಸ್‌ಬರಿ ಪಾರ್ಕ್‌ನಲ್ಲಿ ಸ್ಪ್ರಿಂಗ್‌ಸ್ಟೀನ್‌.
ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
2008ರ ನವೆಂಬರ್‌ 2ರಂದು ...[142]ರಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ಮೇಲೆ ಒಬಾಮಾ ಕುಟುಂಬವನ್ನು ಅಭಿನಂದಿಸುತ್ತಿರುವ ಸ್ಪ್ರಿಂಗ್‌ಸ್ಟೀನ್‌ ಕುಟುಂಬ.

ತನಗೆ 35 ವರ್ಷ ವಯಸ್ಸಾಗುವವರೆಗೆ ಓರ್ವ ಅವಿವಾಹಿತನಾಗಿದ್ದ ಸ್ಪ್ರಿಂಗ್‌ಸ್ಟೀನ್‌, 25 ವರ್ಷ ವಯಸ್ಸಿನ ಜೂಲಿಯಾನ್ನೆ ಫಿಲಿಪ್ಸ್‌ (ಜನನ: ಮೇ 6, 1960) ಎಂಬಾಕೆಯನ್ನು ಮದುವೆಯಾದ. 1985ರ ಮೇ 13ರಂದು ಓರೆಗಾಂವ್‌ನ ಲೇಕ್‌ ಓಸ್ವೆಗೊನಲ್ಲಿ ಅವರ ವಿವಾಹವು ನಡೆಯಿತು. ಅವಳ ನಟನಾ ವೃತ್ತಿಜೀವನವು ಏಳಿಗೆಯಾಗುವಲ್ಲಿ ಈ ಮದುವೆಯು ನೆರವಾಯಿತಾದರೂ, ಹಿನ್ನೆಲೆಯಲ್ಲಿ ಅವರಿಬ್ಬರೂ ವೈರುಧ್ಯಗಳನ್ನು ಹೊಂದಿದ್ದರು, ಮತ್ತು ಅವನ ನಿರಂತರ ಪ್ರವಾಸವು ಅವರಿಬ್ಬರ ಸಂಬಂಧದ ಮೇಲೆ ಹಾನಿಯನ್ನುಂಟುಮಾಡಿತು. ಪ್ಯಾಟಿ ಸಿಯಾಲ್ಫಾ (ಜನನ: ಜುಲೈ 29, 1953) ಜೊತೆಯಲ್ಲಿ ಬ್ರೂಸ್‌ ಒಂದು ಪ್ರಣಯ ಪ್ರಸಂಗವನ್ನು ಶುರುಮಾಡಿಕೊಂಡಾಗ ಹಾನಿಯ ಅಂತಿಮ ಹೊಡೆತವನ್ನು ಅವರ ಕುಟುಂಬವು ಎದುರಿಸಬೇಕಾಯಿತು; ಈ ಹಿಂದೆ ಪ್ಯಾಟಿ ಸಿಯಾಲ್ಫಾ ತನ್ನ ವಾದ್ಯವೃಂದವನ್ನು ಸೇರಿಕೊಂಡ ನಂತರದ ಕೆಲವೇ ದಿನಗಳಲ್ಲಿ 1984ರಲ್ಲಿ ಬ್ರೂಸ್‌ ಅವಳೊಂದಿಗೆ ಸಂಕ್ಷಿಪ್ತವಾಗಿ ಡೇಟಿಂಗ್‌ ನಡೆಸಿದ್ದ. 1988ರ ವಸಂತಋತುವಿನಲ್ಲಿ ಫಿಲಿಪ್ಸ್‌‌ ಮತ್ತು ಸ್ಪ್ರಿಂಗ್‌ಸ್ಟೀನ್‌ ಬೇರೆಯಾದರು, ಮತ್ತು 1988ರ ಆಗಸ್ಟ್‌‌ 30ರಂದು ಜೂಲಿಯಾನ್ನೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದಳು. 1989ರ ಮಾರ್ಚ್‌ 1ರಂದು ಸ್ಪ್ರಿಂಗ್‌ಸ್ಟೀನ್‌/ಫಿಲಿಪ್ಸ್‌‌ ವಿಚ್ಛೇದನವು ಅಂತಿಮಗೊಳಿಸಲ್ಪಟ್ಟಿತು.

ತನ್ನ ಹೆಂಡತಿಯು 1988ರಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಂತರ, ಸಿಯಾಲ್ಫಾಳೊಂದಿಗೆ ಬ್ರೂಸ್‌ ವಾಸಿಸಲು ಶುರುಮಾಡಿದ. ಮುಂದಾಲೋಚನೆ ಇಲ್ಲದೆಯೇ ಈ ರೀತಿಯಲ್ಲಿ ಸಿಯಾಲ್ಫಾ ಜೊತೆಯಲ್ಲಿ ತನ್ನ ಸಂಬಂಧವನ್ನು ಬೆಳೆಸಿದ ಕಾರಣದಿಂದಾಗಿ, ಸ್ಪ್ರಿಂಗ್‌ಸ್ಟೀನ್‌ ಸಾಕಷ್ಟು ಟೀಕೆಗೆ ಒಳಗಾಗಬೇಕಾಗಿಬಂತು. ದಿ ಅಡ್ವೊಕೇಟ್‌ ಪತ್ರಿಕೆಯೊಂದಿಗೆ 1995ರಲ್ಲಿ ಪಾಲ್ಗೊಂಡ ಸಂದರ್ಶನವೊಂದರಲ್ಲಿ, ಸದರಿ ಜೋಡಿಯು ತರುವಾಯದಲ್ಲಿ ಸ್ವೀಕರಿಸಿದ ನೈತ್ಯಾತ್ಮಕ ಪ್ರಚಾರದ ಕುರಿತು ಸ್ಪ್ರಿಂಗ್‌ಸ್ಟೀನ್‌ ಮಾತನಾಡಿದ. "ಈ ವಿಚಿತ್ರ ಸಮಾಜವು ಜನರು ತಾವು ಯಾರನ್ನು ಪ್ರೀತಿಸಬೇಕು ಮತ್ತು ಯಾರನ್ನು ಪ್ರೀತಿಸಬಾರದು ಎಂಬ ಬಗ್ಗೆ ಅವರಿಗೆ ಹೇಳುವ ಹಕ್ಕನ್ನು ತಾನು ಹೊಂದಿರುವುದಾಗಿ ಭಾವಿಸುತ್ತದೆ. ಆದರೆ ವಾಸ್ತವದ ವಿಷಯವೆಂದರೆ, ನಾನು ಎಷ್ಟು ಸಾಧ್ಯವೋ ಅಷ್ಟು ಮಟ್ಟಿಗೆ ಸಂಪೂರ್ಣ ವಿಷಯವನ್ನು ಮೂಲತಃ ನಿರ್ಲಕ್ಷಿಸಿದ್ದೇನೆ. 'ನನಗೆ ತಿಳಿದಿರುವುದೇನೆಂದರೆ, ಇದು ನಿಜವೆನಿಸುತ್ತದೆ, ಮತ್ತು ಪ್ರಾಯಶಃ ಒಂದು ವಿಧದಲ್ಲಿ ನಾನು ಈ ಸಮಾಜದಲ್ಲಿ ಸಿಕ್ಕಿಕೊಂಡಿರುವೆ ಎನಿಸುತ್ತದೆ, ಆದರೆ ಅದೇ ಜೀವನ' ಎಂದಷ್ಟೇ ನಾನು ಹೇಳಿದೆ" ಎಂದು ಅವನು ಸಂದರ್ಶನದಲ್ಲಿ ಹೇಳಿಕೊಂಡ. 1990ರಲ್ಲಿ, ಸ್ಪ್ರಿಂಗ್‌ಸ್ಟೀನ್‌ ಮತ್ತು ಸಿಯಾಲ್ಫಾ ತಮ್ಮ ಮೊದಲ ಮಗುವಾದ ಇವಾನ್‌ ಜೇಮ್ಸ್‌ ಎಂಬ ಮಗನನ್ನು ಪಡೆದರು. 1991ರ ಜೂನ್‌ 8ರಂದು ಬ್ರೂಸ್‌ ಮತ್ತು ಪ್ಯಾಟಿ ಮದುವೆಯಾದಾಗ, ಅವರು ತಮ್ಮ ಎರಡನೇ ಹೆಣ್ಣು ಮಗುವಾದ ಜೆಸ್ಸಿಕಾ ರೇಯನ್ನು (ಜನನ: ಡಿಸೆಂಬರ್‌‌ 30, 1991) ನಿರೀಕ್ಷಿಸುತ್ತಿದ್ದರು. "ಒಂದು ವಿಚ್ಛೇದನದ ಪ್ರಕ್ರಿಯೆಯ ಮೂಲಕ ನಾನು ಹಾದುಹೋದೆ; ಇದು ನಿಜವಾಗಿಯೂ ಕಷ್ಟಕರ ಹಾಗೂ ಯಾತನಾಮಯವಾಗಿತ್ತು, ಮತ್ತು ಇನ್ನೊಮ್ಮೆ ಮದುವೆಯಾಗುವುದರ ಕುರಿತು ನನಗೆ ತುಂಬಾ ಹೆದರಿಕೆಯಿತ್ತು. ಏಯ್‌, ಅದೊಂದು ಅಷ್ಟು ಮುಖ್ಯ ವಿಷಯವೇ? ಎಂದು ನನ್ನ ಅಂತರಾತ್ಮ ಹೇಳಿತು

ಆದರೆ ಇದು ಮುಖ್ಯ ವಿಷಯವಾಗಿದೆ. ಒಟ್ಟಿಗೆ ಹಾಗೇ ಸುಮ್ಮನೇ ಒಟ್ಟಿಗೆ ವಾಸಿಸುವುದಕ್ಕಿಂತ ಇದು ಅತ್ಯಂತ ವಿಭಿನ್ನವಾಗಿದೆ. ಎಲ್ಲಕ್ಕಿಂತ ಮೊದಲು, ಬಹಿರಂಗವಾಗಿ ಮುಂದಡಿಯಿಡುವುದು ಸಮಾಜದಲ್ಲಿನ ನಿಮ್ಮ ಸ್ಥಾನದ ಒಂದು ಭಾಗವಾಗಿರುತ್ತದೆ, ಮತ್ತು ಒಂದು ವಿಧದಲ್ಲಿ ಇದು ಸಮಾಜವು ನಿಮ್ಮನ್ನು ಸ್ವೀಕರಿಸಿರುವುದರ ಭಾಗವಾಗಿರುತ್ತದೆ; ಅಂದರೆ ನೀವು ನಿಮ್ಮ ಪರವಾನಗಿಯನ್ನು ಪಡೆಯುವದು, ಎಲ್ಲಾ ಸಾಮಾಜಿಕ ಆಚರಣೆಗಳನ್ನು ನೀವು ಮಾಡುವುದು ಇತ್ಯಾದಿ ಇದರಲ್ಲಿ ಸೇರಿರುತ್ತದೆ...ಪ್ಯಾಟಿ ಮತ್ತು ನಾನು ಅರ್ಥಮಾಡಿಕೊಂಡ ಪ್ರಕಾರ ಇದರಲ್ಲಿ ಏನೋ ಅರ್ಥವಿದೆ" ಎಂದು ಆತ ಈ ಸಂದರ್ಭದಲ್ಲಿ ನುಡಿದ. 

ಈ ಜೋಡಿಯ ಅತ್ಯಂತ ಕಿರಿಯ ಮಗುವಾದ ಸ್ಯಾಮ್‌ ರೈಯಾನ್‌, 1994ರ ಜನವರಿ 5ರಂದು ಜನಿಸಿದ. ಈ ಕುಟುಂಬವು ನ್ಯೂಜರ್ಸಿಯ ರಮ್‌ಸನ್ ಎಂಬಲ್ಲಿ ವಾಸಿಸುತ್ತದೆ ಮತ್ತು ಕೋಲ್ಟ್ಸ್‌ ನೆಕ್‌ ಸಮೀಪದಲ್ಲಿ ಒಂದು ಕುದುರೆ ಸಾಕಣೆಕೇಂದ್ರವನ್ನು ಹೊಂದಿದೆ. ಫ್ಲೋರಿಡಾದ ವೆಲಿಂಗ್ಟನ್‌‌‌‌ನಲ್ಲಿ ಎರಡು ಅಕ್ಕಪಕ್ಕದ ಮನೆಗಳನ್ನು, ವೆಸ್ಟ್‌ ಪಾಮ್‌ ಬೀಚ್‌ ಸಮೀಪದಲ್ಲಿ ಒಂದು ಸಮೃದ್ಧವಾದ ಕುದುರೆ ಹಿಂಡನ್ನೂ ಸಹ ಸ್ಪ್ರಿಂಗ್‌ಸ್ಟೀನ್‌ ಹೊಂದಿದ್ದಾನೆ. ಮ್ಯಾಸಚೂಸೆಟ್ಸ್‌‌ನ ನ್ಯೂಟನ್‌‌‌‌ನಲ್ಲಿರುವ ಒಂದು ಹಳ್ಳಿಯಾದ ಚೆಸ್ಟ್‌ನಟ್‌ ಹಿಲ್‌‌‌ನಲ್ಲಿರುವ ಬಾಸ್ಟನ್‌ ಕಾಲೇಜಿನಲ್ಲಿ ಅವನ ಹಿರಿಯ ಮಗನಾದ ಎವಾನ್‌ ಸದ್ಯಕ್ಕೆ ಎರಡನೆಯ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾನೆ. ಅವನ ಮಗಳಾದ ಜೆಸ್ಸಿಕಾ ಸ್ಪ್ರಿಂಗ್‌ಸ್ಟೀನ್‌, ರಾಷ್ಟ್ರೀಯ-ಮಟ್ಟದಲ್ಲಿ ಸ್ಥಾನವನ್ನು ಪಡೆದಿರುವ ಓರ್ವ ಅಶ್ವಾರೋಹಿ ಚಾಂಪಿಯನ್‌‌ ಆಗಿದ್ದಾಳೆ.

2000ನೇ ಇಸವಿಯ ನವೆಂಬರ್‌ನಲ್ಲಿ, ಜೆಫ್‌ ಬರ್ಗರ್‌ ವಿರುದ್ಧ ಸ್ಪ್ರಿಂಗ್‌ಸ್ಟೀನ್‌ ಕಾನೂನು ಕ್ರಮವನ್ನು ಜರುಗಿಸಿದ; ತನ್ನ ಸೆಲೆಬ್ರಿಟಿ 1000 ಎಂಬ ವೆಬ್‌ತಾಣದೆಡೆಗೆ ವೆಬ್‌ ಬಳಕೆದಾರರನ್ನು ಹರಿಸುವ ದುರುದ್ದೇಶದೊಂದಿಗೆ brucespringsteen.com ಎಂಬ ತಾಣದ (ಇದೇ ರೀತಿಯಲ್ಲಿ ಇನ್ನೂ ಹಲವಾರು ಮಂದಿ ಗಣ್ಯರ ಹೆಸರಿನ ಡೊಮೈನ್‌ ಹೆಸರುಗಳೊಂದಿಗೆ) ಹೆಸರನ್ನು ಆತ ನೋಂದಾಯಿಸಿದ್ದಾನೆ ಎಂದು ಆಪಾದಿಸಿ ಈ ಕ್ರಮವನ್ನು ಜರುಗಿಸಲಾಯಿತು. ಕಾನೂನು ಸಂಬಂಧಿ ದೂರು ಒಮ್ಮೆಗೆ ದಾಖಲಿಸಲ್ಪಟ್ಟ ನಂತರ, ಸದರಿ ಡೊಮೈನ್‌ನ್ನು ಒಂದು ಸ್ಪ್ರಿಂಗ್‌ಸ್ಟೀನ್‌ ಜೀವನಚರಿತ್ರೆ ಮತ್ತು ಸಂದೇಶ ಫಲಕದೆಡೆಗೆ ಬರ್ಗರ್‌ ನಿರ್ದೇಶಿಸಿದ. 2001ರ ಫೆಬ್ರುವರಿಯಲ್ಲಿ, ಇದಕ್ಕೆ ಸಂಬಂಧಿಸಿದ ವಿವಾದದಲ್ಲಿ ಬರ್ಗರ್‌ ಎದುರಿಗೆ ಸ್ಪ್ರಿಂಗ್‌ಸ್ಟೀನ್‌ಗೆ ಸೋಲಾಯಿತು. ಒಂದು WIPO ಸಮಿತಿಯು ಬರ್ಗರ್ ಪರವಾಗಿ ತೀರ್ಪು ನೀಡಿತು.

ಮಿಸ್ಸೌರಿಯ ಕನ್ಸಾಸ್‌ ನಗರದಲ್ಲಿ ವರ್ಕಿಂಗ್‌ ಆನ್‌ ಎ ಡ್ರೀಮ್‌ ಪ್ರವಾಸಕ್ಕೆ ಸಂಬಂಧಿಸಿದಂತೆ 2009ರ ಅಕ್ಟೋಬರ್‌‌ 26ರಂದು ನಡೆಯಬೇಕಿದ್ದ ಪ್ರದರ್ಶನವನ್ನು ಅದರ ನಿಗದಿತ ಕಾರ್ಯಸೂಚಿಗಿಂತ ಒಂದು ಗಂಟೆ ಮುಂಚಿತವಾಗಿ ರದ್ದುಗೊಳಿಸಲಾಯಿತು; ಸ್ಪ್ರಿಂಗ್‌ಸ್ಟೀನ್‌ನ ಸೋದರ ಸಂಬಂಧಿ ಹಾಗೂ ಪ್ರವಾಸ ಕಾರ್ಯಕ್ರಮವನ್ನು ನೋಡಿಕೊಳ್ಳುತ್ತಿದ್ದ ಸಹಾಯಕ ವ್ಯವಸ್ಥಾಪಕನಾದ ಲೆನ್ನಿ ಸಲ್ಲಿವನ್‌ ಎಂಬಾತನ ಸಾವು ಇದಕ್ಕೆ ಕಾರಣವಾಗಿತ್ತು.

ಓರ್ವ ಚಿರಪರಿಚಿತ ಜನಪ್ರಿಯ ಸಂಗೀತಗಾರ ಮತ್ತು ಕಲಾವಿದನಿಗೆ ಸಂಬಂಧಿಸಿದಂತೆ ಸ್ಪ್ರಿಂಗ್‌ಸ್ಟೀನ್‌ ಒಂದು ತುಲನಾತ್ಮಕವಾದ ಸದ್ದಿಲ್ಲದ ಮತ್ತು ಖಾಸಗಿ ಜೀವನವನ್ನು ನಡೆಸಿದ್ದ. ಗಣ್ಯವ್ಯಕ್ತಿಗಳನ್ನು ಬೆನ್ನಟ್ಟಿ ಛಾಯಾಚಿತ್ರಗಳನ್ನು ತೆಗೆಯುವ ಛಾಯಾಚಿತ್ರಕಾರರಿಲ್ಲದ ಪರಿಸರದಲ್ಲಿ ತನ್ನ ಕುಟುಂಬವನ್ನು ಸಾಕಬೇಕು ಎಂಬ ಒಂದು ನಿರ್ದಿಷ್ಟ ಉದ್ದೇಶದೊಂದಿಗೆ, 1990ರ ದಶಕದ ಆರಂಭದಲ್ಲಿ ಆತ ಲಾಸ್‌ ಏಂಜಲೀಸ್‌ನಿಂದ ನ್ಯೂಜರ್ಸಿಗೆ ತೆರಳಿದ. ಅರ್ಧಾವಧಿಯ ಪ್ರದರ್ಶನಕ್ಕೆ ಸಂಬಂಧಿಸಿದ ಸೂಪರ್‌ ಬೌಲ್‌ XLIII ಪತ್ರಿಕಾಗೋಷ್ಠಿಯು, ಅವನ ಕೊನೆಯ ಪತ್ರಿಕಾಗೋಷ್ಠಿಯು ನಡೆದ 25 ವರ್ಷಗಳಿಗೂ ಹೆಚ್ಚು ಅವಧಿಯ ನಂತರ ನಡೆಯಿತು. ಆದಾಗ್ಯೂ, ಕೆಲವೊಂದು ರೇಡಿಯೋ ಸಂದರ್ಶನಗಳಲ್ಲಿ, ಅದರಲ್ಲೂ ಗಮನಾರ್ಹವಾಗಿ NPR ಮತ್ತು BBC ಕೇಂದ್ರಗಳಲ್ಲಿ ಅವನ ಹಾಜರಿ ಕಂಡುಬಂದಿತು. ಮ್ಯಾಜಿಕ್‌ ಎಂಬ ತನ್ನ ಗೀತಸಂಪುಟಕ್ಕೆ ಪೂರಕವಾಗಿ ಆತ ತನ್ನ ಪ್ರವಾಸ ಕೈಗೊಳ್ಳುವುದಕ್ಕೆ ಮುಂಚಿತವಾಗಿ, 60 ಮಿನಿಟ್ಸ್‌‌ ವಾಹಿನಿಯು TVಯಲ್ಲಿ ಅವನ ಕೊನೆಯ ಸುದೀರ್ಘವಾದ ಸಂದರ್ಶನವನ್ನು ಬಿತ್ತರಿಸಿತು.

E ಸ್ಟ್ರೀಟ್‌ ಬ್ಯಾಂಡ್‌

1974ರ ಸೆಪ್ಟೆಂಬರ್‌‌ವರೆಗೂ E ಸ್ಟ್ರೀಟ್‌ ಬ್ಯಾಂಡ್‌ ತನ್ನ ಆ ಹೆಸರಿನಿಂದ ಅಧಿಕೃತವಾಗಿ ಪರಿಚಿತವಾಗಿರಲಿಲ್ಲವಾದರೂ, 1972ರ ಅಕ್ಟೋಬರ್‌ ತಿಂಗಳಿನಲ್ಲಿ ಅದು ಪ್ರಾರಂಭಗೊಂಡಿತು ಎಂದು ಪರಿಗಣಿಸಲ್ಪಟ್ಟಿದೆ. 1995ರಲ್ಲಿ ಆದ ಒಂದು ಸಂಕ್ಷಿಪ್ತ ಪುನರ್ಮಿಲನವನ್ನು ಹೊರತುಪಡಿಸಿದರೆ, 1988ರ ಅಂತ್ಯದಿಂದ 1999ರ ಆರಂಭದವರೆಗೆ E ಸ್ಟ್ರೀಟ್‌ ಬ್ಯಾಂಡ್‌ ನಿಷ್ಕ್ರಿಯವಾಗಿತ್ತು.

ಈಗಿನ ಸದಸ್ಯರು

  • ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ – ಪ್ರಮುಖ ಗಾಯನಭಾಗಗಳು, ಗಿಟಾರ್‌‌, ರಾಗಮಾಲಿಕೆ, ಪಿಯಾನೋ
  • ಗ್ಯಾರಿ ಟ್ಯಾಲೆಂಟ್‌ – ಮಂದ್ರ ಗಿಟಾರ್‌‌, ಟ್ಯೂಬ
  • ‌‌ಕ್ಲಾರೆನ್ಸ್‌ "ಬಿಗ್‌ ಮ್ಯಾನ್‌" ಕ್ಲೆಮನ್ಸ್ – ಸ್ಯಾಕ್ಸೋಫೋನ್‌, ತಾಳವಾದ್ಯ, ಪೂರಕವಾದ ಗಾಯನಭಾಗಗಳು
  • ಮ್ಯಾಕ್ಸ್‌ ವೇನ್‌ಬರ್ಗ್‌ – ಡ್ರಮ್‌ಗಳು, ತಾಳವಾದ್ಯ (1974ರ ಸೆಪ್ಟೆಂಬರ್‌ನ‌ಲ್ಲಿ ಸೇರಿಕೊಂಡ)
  • ರಾಯ್‌ ಬಿಟನ್‌ – ಪಿಯಾನೋ, ಕೀಬೋರ್ಡುಗಳು (1974ರ ಸೆಪ್ಟೆಂಬರ್‌‌ನಲ್ಲಿ ಸೇರಿಕೊಂಡ)
  • ಸ್ಟೆವನ್‌ ವ್ಯಾನ್‌ ಝಾಂಡ್ಟ್‌ – ಪ್ರಮುಖ ಗಿಟಾರ್‌‌, ಪೂರಕವಾಗಿರುವ ಗಾಯನಭಾಗಗಳು, ಮ್ಯಾಂಡೊಲಿನ್‌‌ (ಹಿಂದಿನ ವಾದ್ಯವೃಂದಗಳಲ್ಲಿ ನುಡಿಸಿದ ನಂತರ 1975ರ ಜುಲೈನಲ್ಲಿ ಅಧಿಕೃತವಾಗಿ ಸೇರಿಕೊಂಡ; ಒಂಟಿ ಸಂಗೀತದ ಪ್ರಸ್ತುತಿಯನ್ನು ನೀಡಲೆಂದು 1982ರಲ್ಲಿ ತಂಡವನ್ನು ಬಿಟ್ಟನಾದರೂ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ವಾದ್ಯವೃಂದದೊಂದಿಗೆ ಕಾಣಿಸಿಕೊಂಡ, ಮತ್ತು 1995ರ ಆರಂಭದಲ್ಲಿ ಮರುಸೇರ್ಪಡೆಯಾದ; "ಇತರ ವಾದ್ಯವೃಂದದ" ಪ್ರವಾಸದ ಅವಧಿಯಲ್ಲಿ ಹಾಜರಿಯಾದ.
  • ನಿಲ್ಸ್‌ ಲೊಫ್‌ಗ್ರೆನ್ – ಗಿಟಾರ್‌‌, ಪೆಡಲ್‌ ಸ್ಟೀಲ್‌‌ ಗಿಟಾರ್‌‌, ಪೂರಕವಾಗಿರುವ ಗಾಯನಭಾಗಗಳು (1984ರ ಜೂನ್‌ನಲ್ಲಿ ಸ್ಟೀವ್‌ ವ್ಯಾನ್‌ ಝಾಂಡ್ಟ್‌ನ ಸ್ಥಾನವನ್ನು ಅಲಂಕರಿಸಿದ; ವ್ಯಾನ್‌ ಝಾಂಡ್ಟ್‌ ಹಿಂದಿರುಗಿದ ನಂತರ ಗುಂಪಿನಲ್ಲಿ ಉಳಿದುಕೊಂಡ)
  • ಪ್ಯಾಟಿ ಸಿಯಾಲ್ಫಾ – ಪೂರಕವಾದ ಮತ್ತು ಯುಗಳ ಗಾಯನಭಾಗಗಳು, ವಿದ್ಯುತ್‌ಚಾಲಿತವಲ್ಲದ ಗಿಟಾರ್‌‌, ತಾಳವಾದ್ಯ (1984ರ ಜೂನ್‌ನಲ್ಲಿ ಸೇರಿಕೊಂಡಳು; 1991ರಲ್ಲಿ ಸ್ಪ್ರಿಂಗ್‌ಸ್ಟೀನ್‌ನ ಹೆಂಡತಿಯಾದಳು)
  • ಸೂಝೀ ಟೈರೆಲ್‌ – ಪಿಟೀಲು, ವಿದ್ಯುತ್‌ಚಾಲಿತವಲ್ಲದ ಗಿಟಾರ್‌‌, ತಾಳವಾದ್ಯ, ಪೂರಕವಾದ ಗಾಯನಭಾಗಗಳು (2002ರಲ್ಲಿ ಸೇರಿಕೊಂಡಳು, ಅದಕ್ಕೂ ಮುಂಚೆ ಸಾಂದರ್ಭಿಕವಾಗಿ ಕಾಣಿಸಿಕೊಳ್ಳುತ್ತಿದ್ದಳು)
  • ಚಾರ್ಲ್ಸ್‌‌ ಗಿಯಾರ್ಡನೊ – ಆರ್ಗನ್‌‌‌, ಅಕಾರ್ಡಿಯನ್‌‌‌, ಘಂಟಾ ತಾಳವಾದ್ಯ (ಈತ ಮೂಲತಃ ಸೆಷನ್ಸ್‌‌ ಬ್ಯಾಂಡ್‌ನ ಓರ್ವ ಸದಸ್ಯ, ಡ್ಯಾನಿ ಫೆಡೆರಿಸಿ ಎಂಬಾತನಿಗೆ ಅಸ್ವಸ್ಥತೆಯಿದ್ದಾಗ, 2007ರ ಅಂತ್ಯದಲ್ಲಿ ಒಂದು ತಾತ್ಕಾಲಿಕ ಸೇವೆಯ ಆಧಾರದ ಮೇಲೆ E ಸ್ಟ್ರೀಟ್‌ ಬ್ಯಾಂಡ್‌ನ್ನು ಇವನು ಸೇರಿಕೊಂಡ. ಏಪ್ರಿಲ್‌ 2008ರ ಏಪ್ರಿಲ್‌ನಲ್ಲಿ ಫೆಡೆರಿಸಿ ಮರಣಿಸಿದ ನಂತರ E ಸ್ಟ್ರೀಟ್‌ ಬ್ಯಾಂಡ್‌ನಲ್ಲಿ ತನ್ನ ವಾದನಕಾರ್ಯವನ್ನು ಮುಂದುವರಿಸಿದ.)

ಹಿಂದಿನ ಸದಸ್ಯರು

  • ವಿನಿ "ಮ್ಯಾಡ್‌ ಡಾಗ್‌" ಲೋಪೆಜ್‌ – ಡ್ರಮ್‌ಗಳು (1974ರ ಫೆಬ್ರುವರಿಯವರೆಗೆ ಕೆಲಸದಲ್ಲಿ ತೊಡಗಿದ್ದ, ನಂತರ ರಾಜೀನಾಮೆ ನೀಡುವಂತೆ ಅವನಿಗೆ ಕೇಳಲಾಯಿತು).
  • ಡೇವಿಡ್‌ ಸ್ಯಾನ್ಷಿಯಸ್‌ – ಕೀಬೋರ್ಡುಗಳು (1973ರ ಜೂನ್‌ನಿಂದ 1974ರ ಆಗಸ್ಟ್‌‌ವರೆಗೆ)
  • ಅರ್ನೆಸ್ಟ್‌ "ಬೂಮ್‌" ಕಾರ್ಟರ್ – ಡ್ರಮ್‌ಗಳು (1974ರ ಫೆಬ್ರುವರಿಯಿಂದ ಆಗಸ್ಟ್‌‌ವರೆಗೆ)
  • ಸುಕಿ ಲಹಾವ್‌ – ಪಿಟೀಲು, ಪೂರಕವಾಗಿರುವ ಗಾಯನಭಾಗಗಳು (1974ರ ಸೆಪ್ಟೆಂಬರ್‌‌ನಿಂದ 1975ರ ಮಾರ್ಚ್‌ವರೆಗೆ)
  • ಡ್ಯಾನಿ ಫೆಡೆರಿಸಿ – ಆರ್ಗನ್‌‌‌, ಅಕಾರ್ಡಿಯನ್‌‌‌, ಘಂಟಾ ತಾಳವಾದ್ಯ (ಮೆಲನೋಮಾ ಸಮಸ್ಯೆಯಿಂದಾಗಿ 2008ರ ಏಪ್ರಿಲ್‌ 17ರಂದು ಅಸುನೀಗಿದ)
  • ಜೇ ವೇನ್‌ಬರ್ಗ್‌ – ಡ್ರಮ್‌ಗಳು, ತಾಳವಾದ್ಯ (2009 ಪ್ರವಾಸದ ಕೆಲಭಾಗಗಳ ಅವಧಿಯಲ್ಲಿ ತನ್ನ ತಂದೆಯ ಬದಲಿಗೆ ಕೆಲಸ ಮಾಡಿದ)

ಚಲನಚಿತ್ರ

ಚಲನಚಿತ್ರಗಳಲ್ಲಿ ಬಳಸಲಾದ ಸಂಗೀತ

ಸ್ಪ್ರಿಂಗ್‌ಸ್ಟೀನ್‌ನ ಸಂಗೀತವು ಬಹಳ ಕಾಲದಿಂದಲೂ ಚಲನಚಿತ್ರದೊಂದಿಗೆ ಹೆಣೆದುಕೊಂಡು ಬಂದಿದೆ. 1983ರಲ್ಲಿ ಬಂದ ಜಾನ್‌ ಸೇಯ್ಲ್ಸ್‌ ಎಂಬಾತನ ಬೇಬಿ, ಇಟ್ಸ್‌ ಯೂ ಎಂಬ ಚಲನಚಿತ್ರದಲ್ಲಿ ಬಳಸಲ್ಪಡುವ ಮೂಲಕ, ಅವನ ಸಂಗೀತವು ಮೊಟ್ಟಮೊದಲ ಬಾರಿಗೆ ಬೆಳ್ಳಿತೆರೆಯ ನಂಟನ್ನು ಹೊಂದಿತು; ಈ ಚಲನಚಿತ್ರದಲ್ಲಿ ಬಾರ್ನ್‌ ಟು ರನ್‌ ಗೀತಸಂಪುಟಕ್ಕೆ ಸೇರಿದ ಹಲವಾರು ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. ಬಾರ್ನ್‌ ಇನ್‌ ದಿ U.S.A. ಮತ್ತು ಟನೆಲ್‌ ಆಫ್‌ ಲವ್‌ ಗೀತಸಂಪುಟಗಳಿಂದ ಆಯ್ದ ಹಾಡುಗಳಿಗೆ ಸಂಬಂಧಿಸಿದಂತೆ ಸೇಯ್ಲ್ಸ್‌ ವಿಡಿಯೋಗಳನ್ನು ನಿರ್ದೇಶಿಸುವುದರೊಂದಿಗೆ, ಸೇಯ್ಲ್ಸ್‌ ಜೊತೆಯಲ್ಲಿ ಸ್ಪ್ರಿಂಗ್‌ಸ್ಟೀನ್‌ ಸ್ಥಾಪಿಸಿಕೊಂಡ ಸಂಬಂಧವು ನಂತರದ ವರ್ಷಗಳಲ್ಲಿ ಮತ್ತೆ ಬೆಳಕಿಗೆ ಬಂತು. "(ಜಸ್ಟ್‌ ಅರೌಂಡ್‌ ದಿ ಕಾರ್ನರ್‌ ಟು ದಿ) ಲೈಟ್‌ ಆಫ್‌ ಡೇ" ಎಂಬ ಹಾಡನ್ನು ಮೈಕೇಲ್‌ J. ಫಾಕ್ಸ್‌‌/ಜೋವನ್‌ ಜೆಟ್‌‌‌ರ ಆರಂಭಿಕ ಅಭಿವ್ಯಕ್ತಿಯಾದ ಲೈಟ್‌ ಆಫ್‌ ಡೇ ಗಾಗಿ ಬರೆಯಲಾಯಿತು. 1989ರಲ್ಲಿ ಬಂದ, ಬ್ರೂಸ್‌ ವಿಲ್ಲಿಸ್‌ ಮತ್ತು ಎಮಿಲಿ ಲಾಯ್ಡ್‌‌ನಂಥ ತಾರೆಯರು ನಟಿಸಿದ್ದ "ಇನ್‌ ಕಂಟ್ರಿ" ಎಂಬ ಚಲನಚಿತ್ರವು "ಐಯಾಮ್‌ ಆನ್‌ ಫೈರ್‌‌" ಎಂಬ ಗೀತೆಯನ್ನು ಹೊಂದಿತ್ತು, ಹಾಗೂ ಚಿತ್ರದುದ್ದಕ್ಕೂ ಸ್ಪ್ರಿಂಗ್‌ಸ್ಟೀನ್‌ನ ಅನೇಕ ಉಲ್ಲೇಖಗಳನ್ನು ಮಾಡಲಾಗಿತ್ತು. ಜಾನ್‌ ಕುಸ್ಸಾಕ್‌ ಮತ್ತು ಜ್ಯಾಕ್‌ ಬ್ಲ್ಯಾಕ್‌‌ನಂಥ ತಾರೆಯರು ನಟಿಸಿದ್ದ, 2000ರಲ್ಲಿ ಬಂದ "ಹೈ ಫಿಡೆಲಿಟಿ" ಎಂಬ ಚಲನಚಿತ್ರದಲ್ಲಿ, ಒಂದು ಕನಸಿನ ಸನ್ನಿವೇಶದಲ್ಲಿ ಸ್ಪ್ರಿಂಗ್‌ಸ್ಟೀನ್‌ ಪ್ರೀತಿಯ ಕುರಿತಾದ ಸಲಹೆಯನ್ನು ನೀಡುವ ಚಿತ್ರಣವನ್ನು ಸೇರಿಸಿಕೊಳ್ಳಲಾಗಿತ್ತು.

ಅವನ ಮೂಲ ಕೃತಿಯು ಆಗಿಂದಾಗ್ಗೆ ಚಲನಚಿತ್ರಗಳಲ್ಲಿ ಬಳಸಲ್ಪಟ್ಟಿದೆ. ಜೋನಾಥನ್‌ ಡೆಮ್ಮೆ ಎಂಬಾತನ ಫಿಲಡೆಲ್ಫಿಯಾ (1993) ಚಲನಚಿತ್ರಕ್ಕಾಗಿ ಅವನು ಬರೆದ "ಸ್ಟ್ರೀಟ್ಸ್ ಆಫ್‌ ಫಿಲಡೆಲ್ಫಿಯಾ" ಎಂಬ ಹಾಡಿಗಾಗಿ ಸ್ಪ್ರಿಂಗ್‌ಸ್ಟೀನ್‌ಗೆ ಒಂದು ಆಸ್ಕರ್‌ ಪ್ರಶಸ್ತಿಯು ಲಭಿಸಿತು. ಡೆಡ್‌ ಮ್ಯಾನ್‌ ವಾಕಿಂಗ್‌ (1995) ಎಂಬ ಚಲನಚಿತ್ರಕ್ಕಾಗಿ ಅವನು ಬರೆದ "ಡೆಡ್‌ ಮ್ಯಾನ್‌ ವಾಕಿಂಗ್‌'" ಎಂಬ ಹಾಡಿಗೆ ಸಂಬಂಧಿಸಿದಂತೆ, ಎರಡನೆಯ ಆಸ್ಕರ್‌ ಪ್ರಶಸ್ತಿಗಾಗಿ ಅವನು ನಾಮನಿರ್ದೇಶಿತನಾಗಿದ್ದ.

1995ರಲ್ಲಿ ಬಂದ ಸೀನ್‌ ಪೆನ್‌ನ ದಿ ಕ್ರಾಸಿಂಗ್‌ ಗಾರ್ಡ್‌ ಎಂಬ ಚಲನಚಿತ್ರದಲ್ಲಿ ಶೀರ್ಷಿಕೆ ಫಲಕಗಳನ್ನು ತೋರಿಸುವ ಅವಧಿಯಲ್ಲಿ ಅವನ "ಮಿಸ್ಸಿಂಗ್‌" ಎಂಬ ಹಾಡನ್ನು ಬಳಸಿಕೊಳ್ಳಲಾಗಿದೆ. 2003ರಲ್ಲಿ ಇದು "ದಿ ಎಸೆನ್ಷಿಯಲ್‌ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌" ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಯಿತು.

1995ರಲ್ಲಿ ಬಂದ ಗ್ರೇಟೆಸ್ಟ್‌ ಹಿಟ್ಸ್‌ ಗೀತಸಂಪುಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಅವನ "ಸೀಕ್ರೆಟ್‌ ಗಾರ್ಡನ್‌" ಎಂಬ ಹಾಡನ್ನು, 1996ರಲ್ಲಿ ಬಂದ ಕ್ಯಾಮೆರಾನ್‌ ಕ್ರೌ ಎಂಬಾತನ ಜೆರ್ರಿ ಮ್ಯಾಗೈರ್‌ ಚಲನಚಿತ್ರದಲ್ಲಿ ಬಳಸಿಕೊಳ್ಳಲಾಯಿತು.

ಅವನ "ಐಸ್‌ಮ್ಯಾನ್‌" ಎಂಬ ಹಾಡು ಧ್ವನಿಪಥದ ಗೀತಸಂಪುಟದಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ, 2007ರಲ್ಲಿ ಬಂದ ಇನ್‌ ದಿ ಲ್ಯಾಂಡ್‌ ಆಫ್‌ ವುಮೆನ್‌ ಎಂಬ ಚಲನಚಿತ್ರದಲ್ಲಿ ಅದನ್ನು ಬಳಸಿಕೊಳ್ಳಲಾಯಿತು.

2008ರಲ್ಲಿ ಬಂದ ಡಾರೆನ್‌ ಅರೊನೊಫ್ಸ್ಕಿ ಎಂಬಾತನ ದಿ ರೆಸ್ಲರ್‌‌ ಎಂಬ ಚಲನಚಿತ್ರಕ್ಕಾಗಿ ಸ್ಪ್ರಿಂಗ್‌ಸ್ಟೀನ್‌ ಒಂದು ನಾಮಸೂಚಕ ಹಾಡನ್ನೂ ಬರೆದ. ಅತ್ಯುತ್ತಮ ಮೂಲ ಹಾಡಿಗಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯನ್ನು ಈ ಹಾಡಿಗೆ ಪ್ರದಾನಮಾಡಲಾಯಿತು ಮತ್ತು "ಚಲನಚಿತ್ರವೊಂದಕ್ಕೆ ಸೇರಿದ ಅತ್ಯುತ್ತಮ ಗೀತೆ" ಎಂಬ ವಿಭಾಗದಲ್ಲಿ MTV ಚಲನಚಿತ್ರ ಪ್ರಶಸ್ತಿಗಾಗಿ ಈ ಹಾಡನ್ನು ನಾಮನಿರ್ದೇಶನ ಮಾಡಲಾಯಿತು. ಕೇವಲ ಮೂರು ಹಾಡುಗಳನ್ನಷ್ಟೇ ನಾಮನಿರ್ದೇಶನ ಮಾಡುವ ಅಕಾಡೆಮಿಯ ನಿರ್ಧಾರದ ಕಾರಣದಿಂದಾಗಿ, ಒಂದು ನಾಮಕರಣವನ್ನೂ ಗಳಿಸಲು ಈ ಹಾಡು ವಿಫಲಗೊಂಡಿದ್ದರಿಂದ, ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ಈ ಹಾಡಿಗೆ ಮುಖಭಂಗವಾದಂತಾಯಿತು.

ಆಡಂ ಸ್ಯಾಂಡ್ಲರ್‌‌ ನಟಿಸಿದ್ದ ರೇನ್‌ ಓವರ್‌ ಮಿ ಎಂಬ ಚಲನಚಿತ್ರದಲ್ಲಿ "ದಿ ರಿವರ್‌" ಗೀತಸಂಪುಟವನ್ನೂ ಸಹ ಚೆನ್ನಾಗಿ ಉಲ್ಲೇಖಿಸಲಾಗಿತ್ತು. ಅದೇ ಗೀತಸಂಪುಟಕ್ಕೆ ಸೇರಿದ "ಡ್ರೈವ್‌ ಆಲ್‌ ನೈಟ್‌" ಮತ್ತು "ಔಟ್‌ ಇನ್‌ ದಿ ಸ್ಟ್ರೀಟ್ಸ್‌‌" ಎಂಬ ಎರಡು ಹಾಡುಗಳನ್ನು ಹಿನ್ನೆಲೆ ಸಂಗೀತವಾಗಿ ನುಡಿಸಲಾಗಿತ್ತು.

1997ರಲ್ಲಿ ಬಂದ ಕಾಪ್‌ ಲ್ಯಾಂಡ್‌ ಎಂಬ ಚಲನಚಿತ್ರದಲ್ಲಿ, ದಿ ರಿವರ್‌ ಗೀತಸಂಪುಟಕ್ಕೆ ಸೇರಿದ "ಡ್ರೈವ್‌ ಆಲ್‌ ನೈಟ್‌" ಮತ್ತು "ಸ್ಟೋಲನ್‌ ಕಾರ್‌‌" ಎಂಬ ಹಾಡುಗಳನ್ನು ಸಿಲ್ವೆಸ್ಟರ್‌ ಸ್ಟಾಲೋನ್‌‌‌ನ ಪಾತ್ರಧಾರಿಯು ತನ್ನ ತಿರುಗುಜಗಲಿಯ ಮೇಲೆ ಚಾಲಿಸುತ್ತಾನೆ.

"ಹಂಗ್ರಿ ಹಾರ್ಟ್‌" ಎಂಬ ಅವನ ಧ್ವನಿಪಥವನ್ನು "ಎ ಪರ್ಫೆಕ್ಟ್‌ ಸ್ಟಾರ್ಮ್‌," ದಿ ವೆಡಿಂಗ್‌ ಸಿಂಗರ್‌ ಮತ್ತು ರಿಸ್ಕಿ ಬಿಸಿನೆಸ್‌ ಎಂಬ ಚಲನಚಿತ್ರಗಳಲ್ಲಿ ಒಂದು ಹಿನ್ನೆಲೆ ಹಾಡಾಗಿ ಬಳಸಿಕೊಳ್ಳಲಾಯಿತು. ದಿ ರೈಸಿಂಗ್‌ ಎಂಬ ಅವನ ಗೀತಸಂಪುಟದಿಂದ ಆಯ್ದುಕೊಂಡ "ದಿ ಫ್ಯೂಸ್‌" ಎಂಬ ಧ್ವನಿಪಥವನ್ನು 25ತ್‌‌ ಅವರ್‌‌ ಎಂಬ ಸ್ಪೈಕ್‌ ಲೀ ಚಲನಚಿತ್ರದ ಅಂತ್ಯಭಾಗದ ಶೀರ್ಷಿಕೆಫಲಕಗಳನ್ನು ತೋರಿಸುವ ಸಂದರ್ಭದಲ್ಲಿ ಬಳಸಿಕೊಳ್ಳಲಾಯಿತು.

ತೀರಾ ಇತ್ತೀಚೆಗೆ, "ಲಕಿ ಟೌನ್‌" ಎಂಬ ಅವನ ಗೀತಸಂಪುಟದಿಂದ ಆಯ್ದುಕೊಳ್ಳಲಾದ ಅದೇ ಹೆಸರಿನ ಹಾಡನ್ನು, ಎರಿಕ್‌ ಬಾನಾ ಮತ್ತು ಡ್ರ್ಯೂ ಬ್ಯಾರಿಮೋರ್‌‌ ನಟಿಸಿದ ಲಕಿ ಯೂ ಎಂಬ ಚಲನಚಿತ್ರದಲ್ಲಿ, ಅದರ ಆರಂಭದ ಶೀರ್ಷಿಕೆಯ ಧ್ವನಿಪಥದಲ್ಲಿ ಬಳಸಿಕೊಳ್ಳಲಾಯಿತು. 2007ರಲ್ಲಿ ಬಂದ ಇನ್‌ ದಿ ಲ್ಯಾಂಡ್‌ ಆಫ್‌ ವುಮೆನ್‌ ಎಂಬ ಚಲನಚಿತ್ರದಲ್ಲಿ, ಅದರ OSTಯ ಭಾಗವಾಗಿ ಟ್ರಾಕ್ಸ್‌‌ ಎಂಬ ಗೀತಸಂಪುಟದಿಂದ ಆಯ್ದುಕೊಳ್ಳಲಾದ 'ಐಸ್‌ಮ್ಯಾನ್‌' ಎಂಬ ಹಾಡನ್ನು ಬಳಸಿಕೊಳ್ಳಲಾಯಿತು. 2009ರಲ್ಲಿ ಬಂದ ಚಲನಚಿತ್ರ ಸ್ವರೂಪದ ಸಾಕ್ಷ್ಯಚಿತ್ರವಾದ ಫುಡ್‌ ಇಂಕ್‌. ನಲ್ಲಿ ಬ್ರೂಸ್ ಪ್ರಸ್ತುತ ಪಡಿಸಿರುವ ದಿಸ್‌ ಲ್ಯಾಂಡ್‌ ಈಸ್‌ ಯುವರ್‌ ಲ್ಯಾಂಡ್‌ ಎಂಬ ಹಾಡಿನ ಒಂದು ಪ್ರತ್ಯಕ್ಷ ಆವೃತ್ತಿಯನ್ನು ಬಳಸಿಕೊಳ್ಳಲಾಗಿದೆ. ಚಲನಚಿತ್ರದ ಅಂತ್ಯಭಾಗದ ಶೀರ್ಷಿಕೆ ಫಲಕವು ತೋರಿಸಲ್ಪಡುವಾಗ ಈ ಹಾಡು ಬಳಕೆಯಾಗಿದೆ.

ಅವನ "ರೊಸಾಲಿಟಾ (ಕಮ್‌ ಔಟ್‌ ಟುನೈಟ್‌)" ಎಂಬ ಹಾಡನ್ನು 2007ರಲ್ಲಿ ಬಂದ "ದಿ ಹಾರ್ಟ್‌ಬ್ರೇಕ್‌ ಕಿಡ್‌" ಎಂಬ ಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ಸಂಗೀತದಿಂದ ಪ್ರೇರೇಪಿಸಲ್ಪಟ್ಟ ಚಲನಚಿತ್ರಗಳು

ಅನುಕ್ರಮವಾಗಿ, ಚಲನಚಿತ್ರಗಳು ಅವನ ಸಂಗೀತದಿಂದ ಪ್ರೇರೇಪಿಸಲ್ಪಟ್ಟಿವೆ. ಸೀನ್‌ ಪೆನ್‌ ಕಥೆ ಬರೆದು ನಿರ್ದೇಶಿಸಿದ ದಿ ಇಂಡಿಯನ್‌ ರನ್ನರ್‌ ಎಂಬ ಚಲನಚಿತ್ರ ಇದಕ್ಕೊಂದು ಉದಾಹರಣೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ತಾನು "ಹೈವೇ ಪ್ಯಾಟ್ರೋಲ್‌ಮನ್‌" ಎಂಬ ಸ್ಪ್ರಿಂಗ್‌ಸ್ಟೀನ್‌ನ ಹಾಡಿನಿಂದ ಪ್ರೇರಿತನಾಗಿದ್ದಾಗಿ ಪೆನ್‌ ನಿರ್ದಿಷ್ಟವಾಗಿ ಹೇಳಿಕೊಂಡಿದ್ದಾನೆ.

‌ಕೆವಿನ್ ಸ್ಮಿತ್‌ ಎಂಬಾತ ನ್ಯೂಜರ್ಸಿಯ-ಸಂಜಾತನಾದ ಸಹವರ್ತಿ ಸ್ಪ್ರಿಂಗ್‌ಸ್ಟೀನ್‌ನ ಓರ್ವ "ದೊಡ್ಡ ಅಭಿಮಾನಿ"ಯಾಗಿದ್ದಾನೆ; ಸ್ಪ್ರಿಂಗ್‌ಸ್ಟೀನ್‌ನಿಂದಾಗಿ ಪ್ರಖ್ಯಾತಿಯನ್ನು ಪಡೆದ ಟಾಮ್‌ ವೇಟ್ಸ್‌ ಎಂಬ ಹಾಡಿನಿಂದಾಗಿ ಜೆರ್ಸಿ ಗರ್ಲ್‌ ಎಂಬ ತನ್ನ ಚಲನಚಿತ್ರಕ್ಕೆ ಕೆವಿನ್ ಸ್ಮಿತ್‌ ಹೆಸರನ್ನಿಟ್ಟ ಎಂಬುದು ಗಮನಾರ್ಹ ಅಂಶ. ಈ ಹಾಡನ್ನು ಧ್ವನಿಪಥದಲ್ಲಿ ಬಳಸಲಾಯಿತು.

ನಟನೆ

ಹೈ ಫಿಡೆಲಿಟಿ ಎಂಬ ಚಲನಚಿತ್ರದಲ್ಲಿನ ಒಂದು ಚಿಕ್ಕಪಾತ್ರದಲ್ಲಿ ಸ್ಪ್ರಿಂಗ್‌ಸ್ಟೀನ್‌ ತನ್ನ ಮೊದಲ ಬೆಳ್ಳಿ-ತೆರೆಯ ಗೋಚರಿಸುವಿಕೆಯನ್ನು ದಾಖಲಿಸಿದ; ಈ ಚಿತ್ರವು MTV ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ "ಚಲನಚಿತ್ರವೊಂದರಲ್ಲಿನ ಅತ್ಯುತ್ತಮ ಕಿರುಪಾತ್ರ" ಎಂಬ ಮನ್ನಣೆಗೆ ಪಾತ್ರವಾಯಿತು.

ಧ್ವನಿಮುದ್ರಿಕೆ ಪಟ್ಟಿ

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ 1988ರ ಹ್ಯೂಮನ್‌ ರೈಟ್ಸ್‌ ನೌ! ಪ್ರವಾಸದ ಅವಧಿಯಲ್ಲಿ ಐವರಿ ಕೋಸ್ಟ್‌ನಲ್ಲಿನ ಫೆಲಿಕ್ಸ್‌ ಹೌಫೌಟ್‌-ಬೊಯಿಗ್ನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸ್ಪ್ರಿಂಗ್‌ಸ್ಟೀನ್‌.

ಪ್ರಮುಖ ಸ್ಟುಡಿಯೋ ಗೀತಸಂಪುಟಗಳು (ಬಿಡುಗಡೆಯ ಸಮಯದಲ್ಲಿ U.S. ಬಿಲ್‌ಬೋರ್ಡ್‌ 200 ಕೋಷ್ಟಕದಲ್ಲಿ ಅವು ಹೊಂದಿದ್ದ ಸ್ಥಾನಗಳೊಂದಿಗೆ):

  • 1973: ಗ್ರೀಡಿಂಗ್ಸ್‌ ಫ್ರಂ ಆಸ್‌ಬರಿ ಪಾರ್ಕ್‌, N.J. (–)
  • 1973: ದಿ ವೈಲ್ಡ್‌, ದಿ ಇನ್ನೊಸೆಂಟ್‌ & ದಿ E ಸ್ಟ್ರೀಟ್‌ ಷಟ್ಲ್‌‌ (–)
  • 1975: ಬಾರ್ನ್‌ ಟು ರನ್‌ (#3)
  • 1978: ಡಾರ್ಕ್‌ನೆಸ್‌ ಆನ್‌ ದಿ ಎಡ್ಜ್‌ ಆಫ್‌ ಟೌನ್‌‌ (#5)
  • 1980: ದಿ ರಿವರ್‌ (#1)
  • 1982: ನೆಬ್ರಾಸ್ಕಾ (#3)
  • 1984: ಬಾರ್ನ್‌ ಇನ್‌ ದಿ U.S.A. (#1)
  • 1987: ಟನೆಲ್‌ ಆಫ್‌ ಲವ್‌ (#1)
  • 1992: ಹ್ಯೂಮನ್‌ ಟಚ್‌ (#2)
  • 1992: ಲಕಿ ಟೌನ್‌ (#3)
  • 1995: ದಿ ಘೋಸ್ಟ್‌ ಆಫ್‌ ಟಾಮ್‌ ಜೋಡ್‌ (#11)
  • 2002: ದಿ ರೈಸಿಂಗ್‌ (#1)
  • 2005: ಡೇವಿಸ್‌ & ಡಸ್ಟ್‌ (#1)
  • 2006: We Shall Overcome: The Seeger Sessions (#3)
  • 2007: ಮ್ಯಾಜಿಕ್‌ (#1)
  • 2009: ವರ್ಕಿಂಗ್‌ ಆನ್‌ ಎ ಡ್ರೀಮ್‌ (#1)

ಪ್ರಶಸ್ತಿಗಳು ಮತ್ತು ಮಾನ್ಯತೆ

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
2009ರರ ಕೆನಡಿ ಸೆಂಟರ್‌ ಪುರಸ್ಕಾರಗಳನ್ನು ಸ್ವೀಕರಿಸಿದ ಐದು ಮಂದಿಯ ಪೈಕಿ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ (ಬಲದಿಂದ ಎರಡನೆಯವನು) ಸೇರಿದ್ದ.

ಗ್ರಾಮಿ ಪ್ರಶಸ್ತಿಗಳು

    ಸ್ಪ್ರಿಂಗ್‌ಸ್ಟೀನ್‌ 20 ಗ್ರಾಮಿ ಪ್ರಶಸ್ತಿಗಳನ್ನು ಗೆದ್ದಿದ್ದು, ಅವುಗಳ ವಿವರಗಳು ಈ ಕೆಳಗಿನಂತಿವೆ (ಇಲ್ಲಿ ತೋರಿಸಲಾಗಿರುವ ವರ್ಷಗಳು ಯಾವ ವರ್ಷಕ್ಕಾಗಿ ಪ್ರಶಸ್ತಿಯನ್ನು ನೀಡಲಾಯಿತೋ ಅದನ್ನು ಸೂಚಿಸುತ್ತವೆಯೇ ಹೊರತು, ಯಾವ ವರ್ಷದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ಆಯೋಜಿಸಲಾಯಿತೋ ಅದನ್ನಲ್ಲ):
  • ಅತ್ಯುತ್ತಮ ರಾಕ್‌‌ ಗಾಯನದ ಪ್ರಸ್ತುತಿ, ಪುರುಷ, 1984, "ಡಾನ್ಸಿಂಗ್‌ ಇನ್‌ ದಿ ಡಾರ್ಕ್‌"
  • ಅತ್ಯುತ್ತಮ ರಾಕ್‌‌ ಗಾಯನದ ಪ್ರಸ್ತುತಿ, ಪುರುಷ, 1987, "ಟನೆಲ್‌ ಆಫ್‌ ಲವ್‌"
  • ವರ್ಷದ ಹಾಡು, 1994, "ಸ್ಟ್ರೀಟ್ಸ್ ಆಫ್‌ ಫಿಲಡೆಲ್ಫಿಯಾ"
  • ಅತ್ಯುತ್ತಮ ರಾಕ್‌‌ ಹಾಡು, 1994, "ಸ್ಟ್ರೀಟ್ಸ್ ಆಫ್‌ ಫಿಲಡೆಲ್ಫಿಯಾ"
  • ಅತ್ಯುತ್ತಮ ರಾಕ್‌‌ ಗಾಯನದ ಪ್ರಸ್ತುತಿ, ತನಿ, 1994, "ಸ್ಟ್ರೀಟ್ಸ್ ಆಫ್‌ ಫಿಲಡೆಲ್ಫಿಯಾ"
  • ನಿರ್ದಿಷ್ಟವಾಗಿ ಒಂದು ಚಲನಚಿತ್ರ ಅಥವಾ ದೂರದರ್ಶನ ಚಿತ್ರಕ್ಕಾಗಿ ಬರೆಯಲಾದ ಅತ್ಯುತ್ತಮ ಗೀತೆ, 1994, "ಸ್ಟ್ರೀಟ್ಸ್ ಆಫ್‌ ಫಿಲಡೆಲ್ಫಿಯಾ"
  • ಅತ್ಯುತ್ತಮ ಸಮಕಾಲೀನ ಜಾನಪದ ಗೀತಸಂಪುಟ, 1996, ದಿ ಘೋಸ್ಟ್‌ ಆಫ್‌ ಟಾಮ್‌ ಜೋಡ್‌
  • ಅತ್ಯುತ್ತಮ ರಾಕ್‌‌ ಗೀತಸಂಪುಟ, 2002, ದಿ ರೈಸಿಂಗ್‌
  • ಅತ್ಯುತ್ತಮ ರಾಕ್‌‌ ಹಾಡು, 2002, "ದಿ ರೈಸಿಂಗ್‌"
  • ಅತ್ಯುತ್ತಮ ಪುರುಷ ರಾಕ್‌‌ ಗಾಯನದ ಪ್ರಸ್ತುತಿ, 2002, "ದಿ ರೈಸಿಂಗ್‌"
  • ಗಾಯನಭಾಗದೊಂದಿಗೆ ಯುಗಳ ಅಥವಾ ಗುಂಪಿನಿಂದ ಮಾಡಲಾದ ಅತ್ಯುತ್ತಮ ರಾಕ್‌‌ ಸಂಗೀತ ಪ್ರಸ್ತುತಿ, 2003, "ಡಿಸಾರ್ಡರ್‌ ಇನ್‌ ದಿ ಹೌಸ್‌" (ವಾರೆನ್‌ ಜೆವೋನ್‌ ಜೊತೆಯಲ್ಲಿ)
  • ಅತ್ಯುತ್ತಮ ತನಿ ರಾಕ್‌‌ ಗಾಯನದ ಪ್ರಸ್ತುತಿ, 2004, "ಕೋಡ್‌ ಆಫ್‌ ಸೈಲೆನ್ಸ್‌"
  • ಅತ್ಯುತ್ತಮ ತನಿ ರಾಕ್‌‌ ಗಾಯನದ ಪ್ರಸ್ತುತಿ, 2005, "ಡೇವಿಸ್‌ & ಡಸ್ಟ್‌"
  • ಅತ್ಯುತ್ತಮ ಸಾಂಪ್ರದಾಯಿಕ ಜಾನಪದ ಗೀತಸಂಪುಟ, 2006, The Seeger Sessions: We Shall Overcome
  • ಅತ್ಯುತ್ತಮ ಸುದೀರ್ಘ ಸ್ವರೂಪದ ಸಂಗೀತ ವಿಡಿಯೋ, 2006, ವಿಂಗ್ಸ್‌ ಫಾರ್‌ ವೀಲ್ಸ್‌: ದಿ ಮೇಕಿಂಗ್‌ ಆಫ್‌ ಬಾರ್ನ್‌ ಟು ರನ್‌‌
  • ಅತ್ಯುತ್ತಮ ತನಿ ರಾಕ್‌‌ ಗಾಯನದ ಪ್ರಸ್ತುತಿ, 2007, "ರೇಡಿಯೋ ನೋವೇರ್‌‌"
  • ಅತ್ಯುತ್ತಮ ರಾಕ್‌‌ ಹಾಡು, 2007, "ರೇಡಿಯೋ ನೋವೇರ್‌‌"
  • ಅತ್ಯುತ್ತಮ ರಾಕ್‌‌ ವಾದ್ಯಸಂಗೀತದ ಪ್ರಸ್ತುತಿ, 2007, "ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ದಿ ವೆಸ್ಟ್‌"
  • ಅತ್ಯುತ್ತಮ ರಾಕ್‌‌ ಹಾಡು, 2008, "ಗರ್ಲ್ಸ್‌ ಇನ್‌ ದೆರ್‌ ಸಮ್ಮರ್‌ ಕ್ಲೋತ್ಸ್‌"
  • ಅತ್ಯುತ್ತಮ ತನಿ ರಾಕ್‌‌ ಗಾಯನದ ಪ್ರಸ್ತುತಿ, 2009, "ವರ್ಕಿಂಗ್‌ ಆನ್‌ ಎ ಡ್ರೀಮ್‌"

ಈ ಪ್ರಶಸ್ತಿಗಳ ಪೈಕಿ ಕೇವಲ ಒಂದು ಮಾತ್ರ ಮಿಶ್ರ-ಪ್ರಕಾರದ "ಪ್ರಮುಖ" ಪ್ರಸ್ತುತಿಗಳಾಗಿವೆ (ವರ್ಷದ ಹಾಡು, ಧ್ವನಿಮುದ್ರಿಕೆ, ಅಥವಾ ಗೀತಸಂಪುಟ); ಪ್ರಮುಖ ವರ್ಗಗಳಿಗೆ ಸಂಬಂಧಿಸಿದಂತೆ ಅವನು ಹಲವು ಇತರ ಸಂದರ್ಭಗಳಲ್ಲಿ ನಾಮನಿರ್ದೇಶಿತನಾಗಿದ್ದರೂ, ಗೆಲ್ಲಲು ವಿಫಲನಾದ.

ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು

  • 1994ರಲ್ಲಿ "ಸ್ಟ್ರೀಟ್ಸ್ ಆಫ್‌ ಫಿಲಡೆಲ್ಫಿಯಾ"ಗಾಗಿ ದೊರಕಿದ ಅತ್ಯುತ್ತಮ ಮೂಲ ಗೀತೆಗಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ.
  • 2009ರಲ್ಲಿ "ದಿ ರೆಸ್ಲರ್‌‌"ಗಾಗಿ ದೊರಕಿದ ಅತ್ಯುತ್ತಮ ಮೂಲ ಗೀತೆಗಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ.

ಅಕಾಡೆಮಿ ಪ್ರಶಸ್ತಿಗಳು

  • ಫಿಲಡೆಲ್ಫಿಯಾ ಗೀತಸಂಪುಟದಿಂದ ಆಯ್ದುಕೊಂಡ "ಸ್ಟ್ರೀಟ್ಸ್ ಆಫ್‌ ಫಿಲಡೆಲ್ಫಿಯಾ" ಗೀತೆಗಾಗಿ 1993ರಲ್ಲಿ ದೊರೆತ ಅತ್ಯುತ್ತಮ ಮೂಲ ಗೀತೆಗಾಗಿರುವ ಅಕಾಡೆಮಿ ಪ್ರಶಸ್ತಿ.

ಎಮಿ ಪ್ರಶಸ್ತಿಗಳು

  • ...Bruce Springsteen & the E Street Band: Live In New York City ಎಂಬ HBO ವಿಶೇಷ ಪ್ರಸ್ತುತಿಯು 2001ರಲ್ಲಿ ಎರಡು ತಾಂತ್ರಿಕ ಎಮಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಇತರ ಮಾನ್ಯತೆ

1975ರ ಅಕ್ಟೋಬರ್‌‌ 27: 'ನ್ಯೂಸ್‌ವೀಕ್‌' ಮತ್ತು 'ಟೈಮ್‌' ನಿಯತಕಾಲಿಕಗಳ ಮುಖಪುಟಗಳ ಮೇಲೆ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಏಕಕಾಲಿಕವಾಗಿ ಕಾಣಿಸಿಕೊಂಡ.

  • 1997ರಲ್ಲಿ ದೊರಕಿದ ಪೋಲಾರ್‌ ಮ್ಯೂಸಿಕ್‌ ಪ್ರಶಸ್ತಿ.
  • 1999ರಲ್ಲಿ ರಾಕ್‌ ಅಂಡ್‌ ರೋಲ್‌ ಕೀರ್ತಿಭವನದಲ್ಲಿ ಇವನ ಹೆಸರು ಸೇರ್ಪಡೆಗೊಂಡಿತು.
  • 1999ರಲ್ಲಿ ಗೀತ ರಚನೆಕಾರರ ಕೀರ್ತಿಭವನದಲ್ಲಿ ಇವನ ಹೆಸರು ಸೇರ್ಪಡೆಗೊಂಡಿತು.
  • 2007ರಲ್ಲಿ ನ್ಯೂಜರ್ಸಿ ಕೀರ್ತಿಭವನದಲ್ಲಿ ಇವನ ಹೆಸರು ಸೇರ್ಪಡೆಗೊಂಡಿತು.
  • "ಬಾರ್ನ್‌ ಟು ರನ್‌" ಗೀತೆಯನ್ನು ನ್ಯೂಜರ್ಸಿ ಸಂಸ್ಥಾನದ ಶಾಸನಸಭೆಯು "ನ್ಯೂಜರ್ಸಿಯ ಅನಧಿಕೃತ ಯುವ ಹರ್ಷಗೀತೆಯಾಗಿ" ಹೆಸರಿಸಿತು; ಇದು ಸ್ಪ್ರಿಂಗ್‌ಸ್ಟೀನ್‌ಗೆ ಒಂದಷ್ಟು ವ್ಯಂಗ್ಯವಾಗಿ ಕಂಡುಬಂತು. ಏಕೆಂದರೆ ಆಹಾಡು "ನ್ಯೂಜರ್ಸಿಯನ್ನು ಬಿಡುವುದರ ಕುರಿತಾಗಿದೆ" ಎಂಬುದು ಅವನ ಪರಿಗಣನೆಯಾಗಿತ್ತು.
  • ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ I. P. ಗ್ರಿಫಿನ್‌ ಎಂಬಾತನಿಂದ 1999ರ ಸೆಪ್ಟೆಂಬರ್‌ನಲ್ಲಿ ಪತ್ತೆಹಚ್ಚಲ್ಪಟ್ಟ 23990 ಎಂಬ ಕ್ಷುದ್ರಗ್ರಹಕ್ಕೆ, ಅವನ ಗೌರವಾರ್ಥವಾಗಿ ಅವನ ಹೆಸರನ್ನು ಅಧಿಕೃತವಾಗಿ ಇರಿಸಲಾಯಿತು.
  • 2004ರಲ್ಲಿ ರೋಲಿಂಗ್‌ ಸ್ಟೋನ್‌ ನಿಯತಕಾಲಿಕ '​ವು ಪ್ರಕಟಿಸಿದ 100 ಸಾರ್ವಕಾಲಿಕ ಮಹಾನ್‌ ಕಲಾವಿದರ ಪಟ್ಟಿಯಲ್ಲಿ #23ನೇ ಸ್ಥಾನವನ್ನು ಪಡೆದ‌.
  • ಟೈಮ್‌ ನಿಯತಕಾಲಿಕದ 2008ರ ವರ್ಷದ 100 ಅತ್ಯಂತ ಪ್ರಭಾವಿ ಜನರ ಪಟ್ಟಿಯಲ್ಲಿ ಸ್ಥಾನಕಂಡುಕೊಂಡ.
  • 2009ರಲ್ಲಿ "ದಿ ರೆಸ್ಲರ್‌‌"ಗಾಗಿ ಅತ್ಯುತ್ತಮ ಗೀತೆಗಾಗಿರುವ ಕ್ರಿಟಿಕ್‌‌'ಸ್‌ ಚಾಯ್ಸ್‌‌ ಪ್ರಶಸ್ತಿಯನ್ನು ಗೆದ್ದುಕೊಂಡ.
  • ಸೂಪರ್‌ ಬೌಲ್‌ XLIIIನ ಅರ್ಧಾವಧಿ ಪ್ರದರ್ಶನದಲ್ಲಿ ಸಂಗೀತ ಪ್ರಸ್ತುತಿಯನ್ನು ನೀಡಿದ.
  • 2009ರಲ್ಲಿ ಕೆನಡಿ ಸೆಂಟರ್‌ ಪುರಸ್ಕಾರಗಳನ್ನು ಗಳಿಸಿದ.

ಪ್ರಭಾವ

ತನ್ನ ಜನ್ಮಸ್ಥಳವಾದ ನ್ಯೂಜರ್ಸಿಯಲ್ಲಿ ಅವನು ಬೀರಿರುವ ಗಮನಾರ್ಹವಾದ ಪ್ರಭಾವದ ಜೊತೆಗೆ, ತನ್ನ ನಂತರದ ಧ್ವನಿಮುದ್ರಣಗಳ ಹಾಗೂ ಇತರ ಅಸಂಖ್ಯಾತ ಕೃತಿಗಳ ಮೂಲಕ ಹಲವು ತಂಡಗಳ ಮೇಲೆ ಅವನು ಪ್ರಭಾವ ಬೀರಿದ್ದಾನೆ. ಅವೆಂದರೆ: ಬಾನ್‌ ಜೋವಿ, ಆರ್ಕೇಡ್‌ ಫೈರ್‌‌, ಗ್ಯಾಸ್‌ಲೈಟ್‌ ಆಂಥೆಮ್‌, ದಿ ಕಾನ್‌ಸ್ಟಾಂಟೈನ್ಸ್‌, ದಿ ಹೋಲ್ಡ್‌ ಸ್ಟೆಡಿ, ದಿ ನ್ಯಾಷನಲ್‌, ಕಿಂಗ್ಸ್‌ ಆಫ್‌ ಲಿಯಾನ್‌, ದಿ ಕಿಲ್ಲರ್ಸ್‌, U2, ಜಾನಿ ಕ್ಯಾಶ್‌. ಅವನ ಹಾಡುಗಳನ್ನು ಹಲವು ಹನ್ನೊಂದು ಕಲಾವಿದರು ತಮ್ಮ ಸಂಗೀತ ಪ್ರಸ್ತುತಿಗಳಲ್ಲಿ ಬಳಸಿಕೊಂಡಿದ್ದು, ಅವರ ವಿವರಗಳು ಹೀಗಿವೆ: ಮೆಲಿಸ್ಸಾ ಎಥರಿಡ್ಜ್‌‌, ಜಾನಿ ಕ್ಯಾಶ್‌, McFLY, ಟೆಗಾನ್‌ ಅಂಡ್‌ ಸಾರಾ, ಡೇಮಿಯೆನ್‌ ಜುರಾಡೊ, ಐಮೀ ಮಾನ್‌, ಸೋಷಿಯಲ್‌ ಡಿಸ್ಟಾರ್ಷನ್‌, ರೇಜ್‌ ಎಗೇನ್ಸ್ಟ್‌ ದಿ ಮೆಷೀನ್‌, ಬೆನ್‌ ಹಾರ್ಪರ್‌‌, ಎರಿಕ್‌ ಬ್ಯಾಚ್‌ಮನ್‌, ಜೋಶ್‌ ರಿಟ್ಟರ್‌, ಫ್ರಾಂಕ್‌ ಟರ್ನರ್‌‌, ಮತ್ತು ಹ್ಯಾಂಕ್‌ ವಿಲಿಯಮ್ಸ್‌ III; ಇವರ ಜೊತೆಗೆ ಆರ್ಕೇಡ್‌ ಫೈರ್‌‌ ಮತ್ತು ದಿ ನ್ಯಾಷನಲ್‌ ಇವೇ ಮೊದಲಾದ ವಾದ್ಯವೃಂದಗಳೂ ಸೇರಿವೆ.

ಇವನ್ನೂ ನೋಡಿ

  • ಅಧಿಕವಾಗಿ ಮಾರಾಟವಾಗುವ ಸಂಗೀತ ಕಲಾವಿದರ ಪಟ್ಟಿ
  • U.S. ಮುಖ್ಯವಾಹಿನಿಯ ರಾಕ್‌‌ ಕೋಷ್ಟಕದಲ್ಲಿ ಮೊದಲನೇ ಸ್ಥಾನವನ್ನು ತಲುಪಿದ ಕಲಾವಿದರ ಪಟ್ಟಿ

ಆಕರಗಳು

  • ಆಲ್ಟರ್‌ಮನ್‌, ಎರಿಕ್‌. ಇಟ್‌ ಏನ್ಟ್‌‌ ನೋ ಸಿನ್‌ ಟು ಬಿ ಗ್ಲಾಡ್‌ ಯೂ ಆರ್‌ ಅಲೈವ್‌: ದಿ ಪ್ರಾಮಿಸ್‌ ಆಫ್‌ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ . ಲಿಟ್ಲ್‌ ಬ್ರೌನ್‌, 1999. ISBN 0-316-03885-7.
  • ಕೋಲ್ಸ್‌‌, ರಾಬರ್ಟ್‌. ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌'ಸ್‌ ಅಮೆರಿಕಾ: ದಿ ಪೀಪಲ್‌ ಲಿಸನಿಂಗ್‌, ಎ ಪೊಯೆಟ್‌ ಸಿಂಗಿಂಗ್‌‌ . ರ್ಯಾಂಡಮ್‌ ಹೌಸ್‌, 2005. ISBN 0-375-50559-8.
  • ಕ್ರಾಸ್‌, ಚಾರ್ಲ್ಸ್‌‌ R. ಬ್ಯಾಕ್‌ಸ್ಟ್ರೀಟ್ಸ್‌: ಸ್ಪ್ರಿಂಗ್‌ಸ್ಟೀನ್‌ - ದಿ ಮ್ಯಾನ್‌ ಅಂಡ್‌ ಹಿಸ್‌ ಮ್ಯೂಸಿಕ್‌ ಹಾರ್ಮೊನಿ ಬುಕ್ಸ್‌‌, ನ್ಯೂಯಾರ್ಕ್‌ 1989/1992. ISBN 0-517-58929-X. ಸ್ಪ್ರಿಂಗ್‌ಸ್ಟೀನ್‌ನ 15ಕ್ಕೂ ಹೆಚ್ಚಿನ ಸಂದರ್ಶನಗಳು ಹಾಗೂ ಇನ್ನೂ ಬಿಡುಗಡೆಗೊಂಡಿರದ ಗೀತಸಂಯೋಜನೆಗಳನ್ನು ಒಳಗೊಂಡಂತೆ ಅವನ ಎಲ್ಲಾ ಹಾಡುಗಳ ಒಂದು ಪಟ್ಟಿಯನ್ನು ಇದು ಒಳಗೊಂಡಿದೆ. 1965–1990 ಅವಧಿಯ ಎಲ್ಲಾ ಸಂಗೀತ ಕಚೇರಿಗಳ ಸಂಪೂರ್ಣ ಪಟ್ಟೀಕರಣ - ಅವುಗಳಲ್ಲಿ ಬಹುಪಾಲು ಧ್ವನಿಪಥದ ಪಟ್ಟಿಗಳನ್ನು ಹೊಂದಿವೆ. ಹಿಂದೆ ಬಿಡುಗಡೆಯಾಗದ ನೂರಾರು ಉತ್ತಮ ಗುಣಮಟ್ಟದ ವರ್ಣಚಿತ್ರಗಳು.
  • ಕಲ್ಲೆನ್‌, ಜಿಮ್‌‌. ‌ಬಾರ್ನ್‌ ಇನ್‌ ದಿ U.S.A.: ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಅಂಡ್‌ ದಿ ಅಮೆರಿಕನ್‌ ಟ್ರೆಡಿಷನ್ . 1997; ಮಿಡ್ಲ್‌ಟೌನ್‌, CT: ವೆಸ್ಲೆಯನ್‌ ಯೂನಿವರ್ಸಿಟಿ ಪ್ರೆಸ್‌, 2005. 1997ದ ಅಧ್ಯಯನದ ಪುಸ್ತಕದ ಹೊಸ ಆವೃತ್ತಿಯು, ಸ್ಪ್ರಿಂಗ್‌ಸ್ಟೀನ್‌ನ ಕೃತಿಯನ್ನು ಅಮೆರಿಕಾದ ಇತಿಹಾಸ ಮತ್ತು ಸಂಸ್ಕೃತಿಯ ವಿಶಾಲವಾದ ಸಂದರ್ಭದಲ್ಲಿ ಪರಿಗಣಿಸುತ್ತದೆ. ISBN 0-8195-6761-2
  • ಆಪ್ಪೆಲ್‌, ಮೈಕ್‌ ಜೊತೆಯಲ್ಲಿ ಎಲಿಯಟ್‌, ಮಾರ್ಕ್‌. ಡೌನ್‌ ಥಂಡರ್‌ ರೋಡ್‌ . ಸೈಮನ್‌ & ಷುಸ್ಟರ್‌, 1992. ISBN 0-671-86898-5.
  • ‌ಗ್ರಾಫ್, ಗ್ಯಾರಿ. ದಿ ಟೈಸ್‌ ದಟ್‌ ಬೈಂಡ್‌: ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ A ಟು E ಟು Z . ವಿಸಿಬಲ್‌ ಇಂಕ್‌, 2005. ISBN 1-57859-151-1.
  • ಗ್ಯೂಟರ್‌ಮನ್‌, ಜಿಮ್ಮಿ. ರನ್‌ಅವೇ ಅಮೆರಿಕನ್‌ ಡ್ರೀಮ್‌: ಲಿಸನಿಂಗ್‌ ಟು ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ . ಡಾ ಕ್ಯಾಪೊ, 2005. ISBN 0-306-81397-1.
  • ಹಿಲ್‌ಬರ್ನ್‌, ರಾಬರ್ಟ್‌. ಸ್ಪ್ರಿಂಗ್‌ಸ್ಟೀನ್‌ . ರೋಲಿಂಗ್‌ ಸ್ಟೋನ್‌ ಪ್ರೆಸ್‌, 1985. ISBN 0-684-18456-7.
  • ನೋಬ್ಲರ್‌, ಗ್ರೆಗ್‌ ಮಿಚೆಲ್‌ನಿಂದ ದೊರೆತ ವಿಶೇಷ ನೆರವಿನೊಂದಿಗೆ. "ಹೂ ಈಸ್‌ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಅಂಡ್‌ ವೈ ಆರ್‌ ವಿ ಸೇಯಿಂಗ್‌ ಆಲ್‌ ದೀಸ್‌ ವಂಡರ್‌ಫುಲ್‌ ಥಿಂಗ್ಸ್‌ ಎಬೌಟ್‌ ಹಿಮ್‌?", ಕ್ರಾಡ್ಯಾಡಿ , ಮಾರ್ಚ್‌ 1973.
  • ‌ಮಾರ್ಷ್, ಡೇವ್‌. ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌: ಟೂ ಹಾರ್ಟ್ಸ್‌: ದಿ ಡೆಫಿನಿಟಿವ್‌ ಬಯಾಗ್ರಫಿ, 1972–2003 . ರೌಲೆಟ್ಜ್‌‌, 2003. ISBN 0-415-96928-X. (ಬಾರ್ನ್‌ ಟು ರನ್‌ (1981) ಮತ್ತು ಗ್ಲೋರಿ ಡೇಸ್‌ (1987) ಎಂಬ ಎರಡು ಹಿಂದಿನ ಮಾರ್ಷ್‌ ಜೀವನ ಚರಿತ್ರೆಗಳ ಒಟ್ಟುಗೂಡಿಸಲ್ಪಟ್ಟ ಸಂಕಲನ.)
  • ವೋಲ್ಫ್‌‌, ಡೇನಿಯಲ್‌. 4ತ್‌ ಜುಲೈ, ಆಸ್‌ಬರಿ ಪಾರ್ಕ್‌: ಎ ಹಿಸ್ಟರಿ ಆಫ್‌ ದಿ ಪ್ರಾಮಿಸ್ಡ್‌ ಲ್ಯಾಂಡ್‌ . ಬ್ಲೂಮ್ಸ್‌ಬರಿ, 2005. ISBN 1-58234-509-0.

ಹೆಚ್ಚಿನ ಓದಿಗಾಗಿ

  • ಗ್ರೀಟಿಂಗ್ಸ್‌ ಫ್ರಂ E ಸ್ಟ್ರೀಟ್‌: ದಿ ಸ್ಟೋರಿ ಆಫ್‌ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಅಂಡ್‌ ದಿ E ಸ್ಟ್ರೀಟ್‌ ಬ್ಯಾಂಡ್‌ . ಕ್ರಾನಿಕಲ್‌ ಬುಕ್ಸ್‌‌, 2006. ISBN 0-8118-5348-9.
  • ‌‌ಡೇಸ್‌ ಆಫ್‌ ಹೋಪ್‌ ಅಂಡ್‌ ಡ್ರೀಮ್ಸ್‌: ಆನ್‌ ಇಂಟಿಮೇಟ್‌ ಪೋರ್ಟ್ರೇಟ್‌ ಆಫ್ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ . ಬಿಲ್‌ಬೋರ್ಡ್‌ ಬುಕ್ಸ್‌‌, 2003. ISBN 0-8230-8387-X.
  • ರೇಸಿಂಗ್‌ ಇನ್‌ ದಿ ಸ್ಟ್ರೀಟ್‌: ದಿ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ರೀಡರ್ . ಪೆಂಗ್ವಿನ್‌, 2004. ISBN 0-14-200354-9.
  • ರನ್‌ಅವೇ ಅಮೆರಿಕನ್‌ ಡ್ರೀಮ್‌: ಲಿಸನಿಂಗ್‌ ಟು ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ . ಡಾ ಕ್ಯಾಪೊ ಪ್ರೆಸ್‌‌, 2005. ISBN 0-306-81397-1.
  • ದಿ ಟೈಸ್‌ ದಟ್‌ ಬೈಂಡ್‌: ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ A ಟು E ಟು Z . ವಿಸಿಬಲ್‌ ಇಂಕ್‌ ಪ್ರೆಸ್‌, 2005. ISBN 1-57859-157-0.
  • ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌: "ಟಾಕಿಂಗ್‌‌" . ಆಮ್ನಿಬಸ್‌ ಪ್ರೆಸ್‌, 2004. ISBN 1-84449-403-9.
  • ‌‌ಫಾರ್‌ ಯೂ: ಒರಿಜಿನಲ್‌ ಸ್ಟೋರೀಸ್‌ ಅಂಡ್‌ ಫೋಟೋಗ್ರಾಫ್ಸ್‌ ಬೈ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌'ಸ್‌ ಲೆಜೆಂಡರಿ ಫ್ಯಾನ್ಸ್ . LKC ಪ್ರೆಸ್‌, 2007. ISBN 978-0-9784156-0-0.
  • ‌‌ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಆನ್‌ ಟೂರ್: 1968–2005 . -ಇಂದ: ಡೇವ್‌ ಮಾರ್ಷ್‌ ಬ್ಲೂಮ್ಸ್‌ಬರಿ USA, 2006. ISBN 978-1-59691-282-3.
  • ದಿ ಗಾಸ್ಪೆಲ್‌ ಅಕಾರ್ಡಿಂಗ್‌ ಟು ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌: ರಾಕ್‌ ಅಂಡ್‌ ರೆಡೆಂಪ್ಷನ್‌ ಫ್ರಂ ಆಸ್ಬರಿ ಪಾರ್ಕ್‌ ಟು ಮ್ಯಾಜಿಕ್‌ . -ಇಂದ: ಜೆಫ್ರಿ B. ಸೈಮಿನ್‌ಕೈವಿಕ್ಜ್‌. ವೆಸ್ಟ್‌ಮಿನಿಸ್ಟರ್‌ ಜಾನ್‌ ನಾಕ್ಸ್‌ ಪ್ರೆಸ್‌‌, 2008. ISBN 978-0-664-23169-9.
  • ಮ್ಯಾಜಿಕ್‌ ಇನ್‌ ದಿ ನೈಟ್‌: ದಿ ವರ್ಡ್ಸ್‌ ಅಂಡ್‌ ಮ್ಯೂಸಿಕ್‌ ಆಫ್ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ -ಇಂದ: ರಾಬ್‌ ಕಿರ್ಕ್‌ಪ್ಯಾಟ್ರಿಕ್‌‌. ಸೇಂಟ್‌ ಮಾರ್ಟಿನ್‌'ಸ್‌ ಗ್ರಿಫಿನ್‌, 2009. ISBN 0-312-53380-2.
  • ಲ್ಯಾಂಡ್‌ ಆಫ್‌ ಹೋಪ್‌ ಅಂಡ್‌ ಡ್ರೀಮ್ಸ್‌‌ ಸೆಲೆಬ್ರೇಟಿಂಗ್‌ 25 ಇಯರ್ಸ್‌ ಆಫ್‌ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಇನ್‌ ಐರ್ಲೆಂಡ್‌ -ಇಂದ: ಗ್ರೆಗ್‌ ಲೂಯಿಸ್‌ ಮತ್ತು ಮೊಯ್ರಾ ಷಾರ್ಕೆ. ಮ್ಯಾಜಿಕ್‌ ರ್ಯಾಟ್‌ ಬುಕ್ಸ್‌‌. ISBN 978-0-9562722-0-1

ಅಡಿ ಟಿಪ್ಪಣಿಗಳು

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌]]

This article uses material from the Wikipedia ಕನ್ನಡ article ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಜೀವನ ಮತ್ತು ವೃತ್ತಿಜೀವನಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ವೈಯಕ್ತಿಕ ಜೀವನಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ E ಸ್ಟ್ರೀಟ್‌ ಬ್ಯಾಂಡ್‌ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಚಲನಚಿತ್ರಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಧ್ವನಿಮುದ್ರಿಕೆ ಪಟ್ಟಿಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಪ್ರಶಸ್ತಿಗಳು ಮತ್ತು ಮಾನ್ಯತೆಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಪ್ರಭಾವಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಇವನ್ನೂ ನೋಡಿಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಆಕರಗಳುಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಹೆಚ್ಚಿನ ಓದಿಗಾಗಿಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಅಡಿ ಟಿಪ್ಪಣಿಗಳುಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ ಬಾಹ್ಯ ಕೊಂಡಿಗಳುಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌ಆಂಗ್ಲ ಭಾಷೆ

🔥 Trending searches on Wiki ಕನ್ನಡ:

ಎಚ್. ತಿಪ್ಪೇರುದ್ರಸ್ವಾಮಿಕೈಗಾರಿಕೆಗಳುಒಂದೆಲಗಜೋಗಕಾವೇರಿ ನದಿಚಂಪೂಶಂಕರ್ ನಾಗ್ಜ್ವಾಲಾಮುಖಿಕರಗಇಚ್ಛಿತ್ತ ವಿಕಲತೆವೀಳ್ಯದೆಲೆರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಆಯುಷ್ಮಾನ್ ಭಾರತ್ ಯೋಜನೆಮಳೆಗಾಲಶಿರ್ಡಿ ಸಾಯಿ ಬಾಬಾವಾಸ್ತುಶಾಸ್ತ್ರಭಾವಗೀತೆಮತದಾನ (ಕಾದಂಬರಿ)ದಶಾವತಾರಸಂಸ್ಕೃತ ಸಂಧಿದೊಡ್ಡಬಳ್ಳಾಪುರಪು. ತಿ. ನರಸಿಂಹಾಚಾರ್ಬಾಲ್ಯ ವಿವಾಹಕರ್ಬೂಜಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಧರ್ಮಸೀತೆಆರ್ಯಭಟ (ಗಣಿತಜ್ಞ)ಭಾರತದ ಸಂವಿಧಾನದ ಏಳನೇ ಅನುಸೂಚಿಹೊಂಗೆ ಮರಸಾಲುಮರದ ತಿಮ್ಮಕ್ಕಭಾರತ ಬಿಟ್ಟು ತೊಲಗಿ ಚಳುವಳಿಈಸ್ಟ್‌ ಇಂಡಿಯ ಕಂಪನಿವಸುಧೇಂದ್ರಟಿ.ಪಿ.ಕೈಲಾಸಂಸ್ವರಲಿನಕ್ಸ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಬಲಬುದ್ಧಭಾರತದಲ್ಲಿ ಮೀಸಲಾತಿಶ್ರುತಿ (ನಟಿ)ಜವಹರ್ ನವೋದಯ ವಿದ್ಯಾಲಯಕೊರೋನಾವೈರಸ್ ಕಾಯಿಲೆ ೨೦೧೯ಭಾರತದ ಬುಡಕಟ್ಟು ಜನಾಂಗಗಳುರಾಷ್ಟ್ರಕವಿಕನ್ನಡ ವ್ಯಾಕರಣಪ್ರವಾಸೋದ್ಯಮಯೋನಿಚರ್ಚ್ಜಲ ಮಾಲಿನ್ಯಕರ್ನಾಟಕದ ಹಬ್ಬಗಳುಇಮ್ಮಡಿ ಪುಲಿಕೇಶಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನದೆಹಲಿಕನ್ನಡ ಚಂಪು ಸಾಹಿತ್ಯಜಾಹೀರಾತುಭರತನಾಟ್ಯಭಾರತದ ಪ್ರಧಾನ ಮಂತ್ರಿವಿಜಯನಗರಮಕರ ಸಂಕ್ರಾಂತಿಕಂದಹೆಚ್.ಡಿ.ದೇವೇಗೌಡಕರ್ನಾಟಕ ವಿಧಾನ ಪರಿಷತ್ಚಿತ್ರದುರ್ಗ ಕೋಟೆಶಾಸಕಾಂಗತೆರಿಗೆದೇಶಗಳ ವಿಸ್ತೀರ್ಣ ಪಟ್ಟಿಕೊಬ್ಬಿನ ಆಮ್ಲಮೊಘಲ್ ಸಾಮ್ರಾಜ್ಯಪಂಪ ಪ್ರಶಸ್ತಿಸಂಗೀತಸಾವಯವ ಬೇಸಾಯಮಲ್ಲಿಕಾರ್ಜುನ್ ಖರ್ಗೆಅಂತಿಮ ಸಂಸ್ಕಾರಡಿ.ವಿ.ಗುಂಡಪ್ಪರಾಹುಲ್ ಗಾಂಧಿವಿಧಾನ ಸಭೆ🡆 More