ಪರಮಾಣು ಶಕ್ತಿ

ನಿಯಂತ್ರಿತ (ಉದಾ: ಸ್ಪೋಟವಾಗದಂತಹ-ಪರಮಾಣು) ಅಣು ವಿಕಿರಣ ಕ್ರಿಯೆಯಿಂದ ಉತ್ಪಾದಿಸುವ ಶಕ್ತಿಯು ಅಣು ವಿದ್ಯುತ್ ಆಗಿದೆ.

ವಾಣಿಜ್ಯೋದ್ದೇಶದ ಘಟಕಗಳು ಸದ್ಯ ಅಣು ವಿದಳನದಿಂದ ವಿದ್ಯುತ್ ಉತ್ಪಾದಿಸುತ್ತವೆ. ವಿದ್ಯುತ್ ಆಧಾರಿತ ರಿಯಾಕ್ಟರ್ ಗಳು ನೀರನ್ನು ಬಿಸಿ ಮಾಡಿ ಹಬೆಯನ್ನು ಉತ್ಪಾದಿಸುತ್ತವೆ ಇದನ್ನು ವಿದ್ಯುತ್ ಉತ್ಪಾದನೆಗೆ ಉಪಯೋಗಿಸಲಾಗುತ್ತದೆ.

ಪರಮಾಣು ಶಕ್ತಿ
ಇಟಾಕಾ ಅಣು ಶಕ್ತಿ ಸ್ಥಾವರ, ದ್ವಿತೀಯ ಕೂಲೆಂಟ್ ಸಮುದ್ರದಿಂದ ಬದಲಾಯಿಸಿ ಒತ್ತಡದ ಜಲ ರಿಯಾಕ್ಟರ್ ತಂಪುಮಾಡುತ್ತದೆ.
ಪರಮಾಣು ಶಕ್ತಿ
1964ರಲ್ಲಿ ಮೂರು ಅಣು ಶಕ್ತಿ ಹಡಗುಗಳು,(ಮೇಲಿನಿಂದ ಕೆಳಕ್ಕೆ) ಅಣು ಕ್ರುಸರ್ಸ್ ಯುಎಸ್‌ಎಸ್ ಬೇನ್‌ಬ್ರಿಡ್ಜ್ ಮತ್ತು ಯುಎಸ್‌ಎಸ್ ಬೀಚ್ ಜೊತೆಗೆ ಯುಎಸ್‌ಎಸ್ ಎಂಟರ್‌ಪ್ರೈಸಸ್ ಮೊದಲ ಅಣು ಶಕ್ತಿ ಕೊಂಡೊಯ್ದ ವಿಮಾನ. ತಂಡದ ಸದಸ್ಯರು ವಿಮಾನದ ಡೆಕ್ ಮೇಲೆ ಐನ್‌ಸ್ಟೀನ್‌ನ ರಾಶಿಶಕ್ತಿ ಪರಿಣಾಮದ ಫಾರ್ಮುಲಾ E=mc² ಅನ್ನು ಹೇಳುತ್ತಿರುವುದು.

2009ರ ಹೊತ್ತಿಗೆ ಜಗತ್ತಿನ ವಿದ್ಯುತ್ ಶಕ್ತಿಯಲ್ಲಿ ಶೇ. 15 ರಷ್ಟು ಅಣು ವಿದ್ಯುತ್ ನಿಂದ ಬಂದಿದೆ ಅದೂ ಅಲ್ಲದೆ 150 ಕ್ಕೂ ಹೆಚ್ಚು ನೌಕಾಪಡೆಯ ಹಡಗುಗಳನ್ನು ಅಣು ಶಕ್ತಿ ಆಧಾರಿತವಾಗಿ ನಿರ್ಮಿಸಲಾಗಿದೆ.

ಉಪಯೋಗ

ಪರಮಾಣು ಶಕ್ತಿ 
ಐತಿಹಾಸಿಕ ಮತ್ತು ಕಾರ್ಯಗತಗೊಳಿಸಲಾದ ಜಾಗತಿಕ ಶಕ್ತಿಯನ್ನು ಶಕ್ತಿ ಮೂಲಗಳಿಂದ ಉಪಯೋಗಿಸಲಾಗಿದೆ, 1980-2030, ಇಂಟಾರ್ನ್ಯಾಷನಲ್ ಎನರ್ಜಿ ಔಟ್‌ಲುಕ್ 2007,ಇಐಎ.
ಪರಮಾಣು ಶಕ್ತಿ 
1980 ರಿಂದ 2011 ಅಣು ಶಕ್ತಿ ಸಾಮರ್ಥ್ಯ ಮತ್ತು ಪೀಳಿಗೆಯನ್ನು ನೆಲೆಗೊಳಿಸಲಾಗಿದೆ.(ಇಐಎ)
ಪರಮಾಣು ಶಕ್ತಿ 
ಜಾಗತಿಕವಾಗಿ ಅಣು ಶಕ್ತಿಯ ಸ್ಥಿತಿಗತಿ. ಲೆಜೆಂಡ್ ಚಿತ್ರಕಾಗಿ ಕ್ಲಿಕ್ಕಿಸಿ.

ಅಮೆರಿಕ, ಫ್ರಾನ್ಸ್ ಮತ್ತು ಜಪಾನ್ ಒಟ್ಟಿಗೆ ಶೇ. 56.5 ರಷ್ಟು ಅಣುಶಕ್ತಿ ವಿದ್ಯುತ್ ಉತ್ಪಾದನೆಯೊಂದಿಗೆ 2005ರ ಹೊತ್ತಿಗೆ ಅಣುಶಕ್ತಿಯು ಜಗತ್ತಿನ ಶಕ್ತಿ ಸಂಪನ್ನೂಲಕ್ಕೆ ಶೇ. ಶೇ. 6.3 ಮತ್ತು ಶೇ. 15 ರಷ್ಟು ಜಗತ್ತಿನ ವಿದ್ಯುತ್ ಶಕ್ತಿಯ ಉತ್ಪಾದನೆಯಲ್ಲಿ ಶೇ. 15 ರಷ್ಟು ಪೂರೈಕೆ ಮಾಡಿದೆ. 2007 ರಲ್ಲಿ ಜಗತ್ತಿನಲ್ಲಿ 439 ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಐಎಇಎ ವರದಿಯಲ್ಲಿ ಹೇಳಲಾಗಿದೆ.

ಬಳಕೆಯಾಗುತ್ತಿರುವ ವಿದ್ಯುತ್ ಶಕ್ತಿಯ ಪ್ರಮಾಣದಲ್ಲಿ ಶೇ. 19 ರಷ್ಟನ್ನು ವಿದ್ಯುತ್ ಪೂರೈಸುವ ಮೂಲಕ ಅಮೆರಿಕ ಅತಿ ಹೆಚ್ಚು ಅಣುಶಕ್ತಿ ಉತ್ಪಾದಿಸುತ್ತದೆ. ಆದೇ ರೀತಿ 2006 ರ ಪ್ರಕಾರ ಫ್ರಾನ್ಸ್ ಶೇ. 80 ರಷ್ಟು ವಿದ್ಯುತ್ ಅನ್ನು ಅಣು ವಿದ್ಯುತ್ ಘಟಕಗಳಿಂದ ಉತ್ಪಾದಿಸುತ್ತದೆ. ಒಟ್ಟಾರೆ ಯುರೋಪಿಯನ್ ಯುನಿಯನ್ ನಲ್ಲಿ ವಿದ್ಯುತ್ ಪ್ರಮಾಣದ ಪೈಕಿ ಶೇ. 30 ಅಣುಶಕ್ತಿಯಿಂದ ಪೂರೈಸಲ್ಪಡುತ್ತದೆ. ಯುರೋಪಿಯನ್ ಯೂನಿಯನ್ ದೇಶಗಳು ಮತ್ತು ಆಸ್ಟ್ರಿಯಾ, ಎಸ್ಟೋನಿಯಾ ಮತ್ತು ಐರ್ಲೆಂಡ್ ಸಕ್ರಿಯವಾಗಿರುವ ಅಣು ವಿದ್ಯುತ್ ಕೇಂದ್ರಗಳನ್ನು ಹೊಂದಿಲ್ಲದ ಕಾರಣ ಇವುಗಳ ನಡುವೆ ಅಣುಶಕ್ತಿ ನೀತಿಯ ನಡುವೆ ವ್ಯತ್ಯಾಸವಿದೆ. ಹೋಲಿಕೆಯಲ್ಲಿ ಸದ್ಯ ಬಳಕೆಯಲ್ಲಿರುವ 16 ಘಟಕಗಳೊಂದಿಗೆ ಫ್ರಾನ್ಸ್ ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಘಟಕಗಳನ್ನು ಹೊಂದಿಲ್ಲ

2013ರ ಹೊತ್ತಿಗೆ ಅಮೆರಿಕದಲ್ಲಿ ಕಲ್ಲಿದ್ದಲು ಮತ್ತು ಅನಿಲ ವಿದ್ಯುತ್ ಉದ್ಯಮವು 85 ಮಿಲಿಯನ್ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿದೆ. ಅಣುಶಕ್ತಿ ವಿದ್ಯುತ್ ಉತ್ಪಾದಕರ ಮೌಲ್ಯವು ೧೮ ಮಿಲಿಯನ್ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿದೆ.

ಹಲವಾರು ಮಿಲಿಟರಿ ಮತ್ತು ಕೆಲವು ನಾಗರಿಕ (ಐಸ್ ಬ್ರೇಕರ್ ನಂತಹ ಕೆಲವು) ಅಣು ವಿದ್ಯುಚ್ಛಕ್ತಿ ಆಧಾರಿತ ತಂತ್ರಜ್ಞಾನವನ್ನು ಉಪಯೋಗಿಸುತ್ತಿವೆ. ಅಣು ವಿದ್ಯುಚ್ಛಕ್ತಿಯು ಒಂದು ತಂತ್ರಜ್ಞಾನವಾಗಿದೆ. ರಷ್ಯಾದ RORSAT ಮತ್ತು ಅಮೇರಿಕದ SNAP ಸರಣಿಯ ಕೆಲವೇ ಅಂತರಿಕ್ಷ ನೌಕೆಗಳಲ್ಲಿ ಪೂರ್ಣ ಪ್ರಮಾಣದ ಅಣು ವಿದ್ಯುತ್ ಉತ್ಪಾದನಾ ಘಟಕಗಳನ್ನು ಉಪಯೋಗಿಸಲಾಗಿದೆ.

ಸುರಕ್ಷಿತ ಘಟಕಗಳು, ಅಣು ವಿದಳನದ ಉಪಯೋಗದಂತಹ ಕನಿಷ್ಠ ಸುರಕ್ಷತೆಯಲ್ಲಿ ಸುಧಾರಣೆ ಮಾಡುವುದಕ್ಕೆ ಮತ್ತು ಇದಲ್ಲದೇ, ಇದಲ್ಲದೆ ಪ್ರಕ್ರಿಯೆಯಲ್ಲಿನ ಬಿಸಿ, ಹೈಡ್ರೋಜನ್ ಉತ್ಪಾದನೆಯನ್ನು (ಹೈಡ್ರೋಜನ್ ಅರ್ಥವ್ಯವಸ್ಥೆಗೆ ಬೆಂಬಲವಾಗಿ)ಉಪಯೋಗಿಸುವುದಕ್ಕೆ, ಸಮುದ್ರದ ನೀರನ್ನು ಲವಣ ಮುಕ್ತಗೊಳಿಸಿ ಬಿಸಿ ಮಾಡುವಿಕೆ ವ್ಯವಸ್ಥೆಯಲ್ಲಿ ಉಪಯೋಗಿಸುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳು ಮುಂದುವರಿದಿವೆ.

ಪರಮಾಣು ಸಮ್ಮಿಳನ

ವಿದಳನಕ್ಕೆ ಹೋಲಿಸಿದಲ್ಲಿ ಅಣು ಸಮ್ಮಿಳನ ಸುರಕ್ಷಿತ ಮತ್ತು ಕಡಿಮೆ ವಿಕಿರಣ ತ್ಯಾಜ್ಯವನ್ನು ಉತ್ಪಾದಿಸುತ್ತವೆ. ತಾಂತ್ರಿಕವಾಗಿ ಸಾಕಷ್ಟು ಕಷ್ಟಕರವಾಗಿದ್ದರೂ ಮತ್ತು ಅಳತೆಗೆ ಅನುಗುಣವಾಗಿ ಇನ್ನೂ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉಪಯೋಗಿಸುವ ರೀತಿಯಲ್ಲಿ ಇವುಗಳನ್ನು ನಿರ್ಮಿಸಬೇಕಿದ್ದರೂ ಈ ವಿಕಿರಣಗಳು ದೀರ್ಘಕಾಲ ಬಾಳ್ವಿಕೆ ಬರುವ ಸಾಮರ್ಥ್ಯ ಹೊಂದಿರುವ ಹಾಗೆ ಗೋಚರಿಸುತ್ತವೆ. 1950 ರಿಂದ ಸಮ್ಮಿಳನ ವಿದ್ಯುತ್ ಶಕ್ತಿಯು ಸಾಕಷ್ಟು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತನಿಖೆಯಲ್ಲಿದೆ.

ಅಂತರಿಕ್ಷದಲ್ಲಿ ಉಪಯೋಗ

ಅಂತರಿಕ್ಷದ ಚಾಲನಾ ಶಕ್ತಿಯಾಗಿ ಅಳವಡಿಕೆಗಳಿಗಾಗಿ ಸಮ್ಮಿಳನ ಮತ್ತು ವಿದಳನ ಪ್ರಕ್ರಿಯೆಗಳು ಸಾಕಷ್ಟು ಭರವಸೆಯನ್ನು ಕಡಿಮೆ ವಿಕಿರಣ ಘನ ಮತ್ತು ವೇಗದ ಕಾರ್ಯಾಚರಣೆಗಳಿಗೆ ವಿದಳನ ಮತ್ತು ಸಮ್ಮಿಳನ ಪ್ರಕ್ರಿಯೆ ಸಾಕಷ್ಟು ಭರವಸೆ ಇರುವ ಹಾಗೆ ಗೋಚರಿಸುತ್ತಿವೆ. ಅಣು ವಿಕಿರಣದಲ್ಲಿನ ಅತಿ ಹೆಚ್ಚು ಶಕ್ತಿಯ ಸಾಂದ್ರತೆ ಮತ್ತು ಕೆಲ ಸದ್ಯದ ತಲೆಮಾರಿನ ರಾಕೆಟ್ ಗಳಿಗೆ ಶಕ್ತಿಯನ್ನು ನೀಡುತ್ತಿರುವ ರಾಸಾಯನಿಕ ವಿಕಿರಣಗಳಿಗಿಂತ ಆಯಸ್ಕಾಂತೀಯ ೭ ಕ್ರಮಗಳಿಂದಾಗಿ (10,000,000 ಪಟ್ಟು) ಶಕ್ತಿಯನ್ನು ನೀಡುತ್ತದೆ.

ಅಂತರಿಕ್ಷದ ಶಕ್ತಿ ಸಂಪನ್ಮೂಲದ ಕಾರ್ಯಕ್ರಮಗಳಿಗೆ ಮತ್ತು ಪ್ರಾಯೋಗಿಕಗಳಿಗೆ ನಶಿಸುತ್ತಿರುವ ವಿಕಿರಣಗಳನ್ನು ಸಾಪೇಕ್ಷವಾಗಿ ಉಪಯೋಗಿಸಲಾಗುತ್ತಿದೆ.

ಇತಿಹಾಸ

ಮೂಲಗಳು

1919ರಲ್ಲಿ ಅಣು ವಿಭಜನೆಯಿಂದ ಅರ್ನೆಸ್ಟ್ ಫೋರ್ಡ್ ಅವರನ್ನು ಅಣು ಭೌತಶಾಸ್ತ್ರ[8] ಅಣು ಭೌತಶಾಸ್ತ್ರದ ಪಿತಾಮಹ ಎಂದು ಗೌರವಿಸಲಾಯಿತು. ನೈಸರ್ಗಿಕವಾಗಿ ದೊರೆಯುವ ವಿಕಿರಣ ವಸ್ತುಗಳು ಇರುವ ಅಲ್ಫಾ ಕಣಗಳೊಂದಿಗೆ ನೈಟ್ರೋಜನ್ ಸೇರಿಸಿ ಅವರ ತಂಡವು ಇಂಗ್ಲೆಂಡಿನಲ್ಲಿ ಸ್ಫೋಟ ನಡೆಸಿತು ಮತ್ತು ಅಲ್ಪಾ ಕಣಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೋನ್ ಗಳಿಂದ ಶಕ್ತಿ ಬಿಡುಗಡೆಯಾಗುವುದನ್ನು ಗಮನಿಸಿತು. 1932ರಲ್ಲಿ ರುಥರ್ ಫೋರ್ಡ್ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದ ಅವನ ಇಬ್ಬರು ವಿದ್ಯಾರ್ಥಿಗಳಾದ ಜಾನ್ ಕಾಕ್ ಕ್ರಾಫ್ಟ್ ಮತ್ತು ಎರ್ನೆಸ್ಟ್ ವಾಲ್ಟನ್ ಅಣು ಕೋಶವನ್ನು ಸಂಪೂರ್ಣವಾಗಿ ಕೃತಕವಾಗಿ ವಿಭಜಿಸುವುದಕ್ಕೆ ಪ್ರಯತ್ನಿಸಿದರು. ಪ್ರೊಟೊನ್ ಮತ್ತು ಪಾರ್ಟಿಕಲ್ ಅಕ್ಸಿಲೇಟರ್ ಬಳಸಿ ಲಿಥಿಯಂ ಮೇಲೆ ಸ್ಫೋಟಿಸಿ ಇದರ ಮೂಲಕ ಎರಡು ಹಿಲಿಯಂ ಅಣುಕೋಶಗಳನ್ನು ಉತ್ಪಾದಿಸಿದರು.

1932ರಲ್ಲಿ ಜೇಮ್ಸ್ ಚಾಡ್ ವಿಕ್ ನ್ಯೂಟ್ರೋನ್ ಸಂಶೋಧಿಸಿದ ನಂತರ, ರೋಮ್ ನಲ್ಲಿ 1934ರಲ್ಲಿ ಅಣು ಸಮ್ಮಿಳನವನ್ನು ಪ್ರಾಯೋಗಿಕವಾಗಿ ಎನ್ರಿಕೋ ಫೆರ್ನಿ ಅವರ ತಂಡವು ನ್ಯೂಟ್ರೊನ್ ನೆರವಿನೊಂದಿಗೆ ಯುರೇನಿಯಂ ಸ್ಫೋಟಿಸಿದ ನಂತರ ಸಾಧಿಸಲಾಯಿತು. 1938ರಲ್ಲಿ ಜರ್ಮನಿಯ ರಾಸಾಯನಿಕ ತಜ್ಞ ಒಟ್ಟೊ ಹಾನ್ ಮತ್ತು ಫ್ರಿಟ್ಸ್ ಸ್ಟ್ರಾಸ್ ಮಾನ್ ಅವರು ಆಸ್ಟ್ರೀಯಾದ ಭೌತವಿಜ್ಞಾನಿ ಲಿಸೇ ಮೈಟಿನಿರ್ ಮತ್ತು ಮೈಟಿನಿರ್ ಸಂಬಂದಿ,ಒಟ್ಟೊ ರಾಬರ್ಟ್ ಪ್ಱೀಶ್ಚ್, ನ್ಯೂಟ್ರೊನ್ ಸ್ಫೋಟಿತ ಯುರೇನಿಯಂನೊಂದಿಗೆ ಪ್ರಯೋಗ ನಡೆಸಿದರು. ಸಾಪೆಕ್ಷವಾಗಿ ಚಿಕ್ಕದಾಗಿರುವ ನ್ಯೂಟ್ರೊನ್ ಭಾರಿ ಜಡವಾಗಿರುವ ಯರೇನಿಯಂ ಅಣುವಿನ ಕೋಶವನ್ನು ಅಂದಾಜು ಎರಡು ತುಂಡುಗಳನ್ನಾಗಿ ವಿಭಜಿಸುತ್ತದೆ ಎಂದು ಅವರು ತೀರ್ಮಾನಿಸಿದ್ದರು ಅದು ಅವರಿಗೆ ಆಶ್ಚರ್ಯಕರ ಫಲಿತಾಂಶ ದೊರಕಿಸಿಕೊಟ್ಟಿತು. ಸಮ್ಮಿಳನ ಪ್ರತಿಕ್ರಿಯೆಯು ಹೆಚ್ಚುವರಿ ನ್ಯೂಟ್ರಾನ್ ಗಳನ್ನು ಬಿಡುಗಡೆ ಮಾಡಿದಲ್ಲಿ, ಸ್ವಂತ ಬಾಳಿಕೆ ಬರುವ ಅಣುಕೋಶದ ಪ್ರತಿಕ್ರಿಯೆ ಕೊಂಡಿಯ ಫಲಿತಾಂಶ ದೊರೆಯಬಹುದು ಎಂದು ಲಿಯೋ ಜಿಲಾರ್ಡ್ ಸೇರಿದಂತೆ ಹಲವಾರು ವಿಜ್ಞಾನಿಗಳು ಭಾವಿಸಿದ್ದರು. (ಅಮೆರಿಕ, ಯುನೈಟೆಡ್ ಕಿಂಗಡಮ್, ಫ್ರಾನ್ಸ್, ಜರ್ಮನಿ ಮತ್ತು ಸೋವಿಯತ್ ಯುನಿಯನ್) ದೇಶಗಳ ವಿಜ್ಞಾನಿಗಳು ಸೇರಿದಂತೆ ಹಲವಾರು ವಿಜ್ಞಾನಿಗಳಿಗೆ ಅಣು ಸಮ್ಮಿಳನದ ಸಂಶೋಧನೆಗೆ ಸರ್ಕಾರದ ಬೆಂಬಲ ಬೇಕು ಎಂದು ಅವರ ಸರ್ಕಾರಕ್ಕೆ ಮನವಿ ಸಲ್ಲಿಸುವುದಕ್ಕೆ ಪ್ರೇರಣೆ ನೀಡಿತು.

ಫೆರ್ನಿ ಮತ್ತು ಜಿಲಾರ್ಡ್ ಅಮೆರಿಕಕ್ಕೆ ವಲಸೆ ಬಂದ ಪರಿಣಾಮವಾಗಿ ಮೊದಲ ಬಾರಿಗೆ ಮಾನವ ನಿರ್ಮಿತ ಅಣು ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರ ಚಿಕಾಗೊ ಪೈಲ್-1ರ ಸ್ಥಾಪನೆಗೆ ಕಾರಣವಾಯಿತು. ಅದನ್ನು ಸಾಂದರ್ಭಿಕವಾಗಿ ಡಿಸೆಂಬರ್ ೨, 1042ರಲ್ಲಿ ಸಾಧಿಸಲಾಯಿತು. ಈ ಕಾಮಗಾರಿಯು ಮ್ಯಾನ ಹಾಟನ್ ಯೋಜನೆಯ ಭಾಗವಾಯಿತು. ಅದು (ಈ ಮೊದಲು ವಾಷಿಂಗ್ಟನ್ ನ ಹ್ಯಾನ್ ಪೋರ್ಡ್ ಪಟ್ಟಣವಾಗಿದ್ದ ಹ್ಯಾನ್ ಫೋರ್ಡ್ ನಲ್ಲಿ ಬೃಹತ್ತಾದ ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಅಣುಬಾಂಬುಗಳ ತಯಾರಿಕೆ ಉಪಯೋಗವಾಗುವ ಪ್ಲೋಟೋನಿಯಂ ಸಂಸ್ಕರಣೆಗೆ ಸ್ಥಾಪಿಸಲಾಯಿತು. ಅವುಗಳನ್ನೇ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಪ್ರಯೋಗಿಸಲಾಯಿತು. ಇದೇ ವೇಳೆ ಯುರೇನಿಯಂ ಶಕ್ತಿವರ್ಧಕ ಪ್ರಯತ್ನವನ್ನು ಕೈಗೊಳ್ಳಲಾಯಿತು.

2ನೇ ಜಾಗತಿಕ ಯುದ್ಧದ ನಂತರ ಅಣುಶಕ್ತಿ ಸಂಶೋಧನೆಯು ಅಣುಬಾಂಬು ಮತ್ತು ತಂತ್ರಜ್ಞಾನದ ವೇಗವಾಗಿ ಹರಡಬಹುದು ಎಂದು ಆತಂಕ ವ್ಯಕ್ತವಾಯಿತು.[vague] ಇದರ ಜೊತೆಗೆ ಹಲವಾರು ವಿಜ್ಞಾನಿಗಳು ಅಭಿವೃದ್ಧಿ ಪಡಿಸಬೇಕಾದರೆ ಕ್ರಮಿಸಬೇಕಾದ ದಾರಿ ಇನ್ನೂ ಬಹಳ ಇದೆ ಎಂದು ಭಾವಿಸಿದ ಪರಿಣಾಮವಾಗಿ ಸರ್ಕಾರವು ಅಣುಶಕ್ತಿಯ ಸಂಶೋಧನೆಯನ್ನು ಬಿಗಿ ನಿಯಂತ್ರಣದಲ್ಲಿರಿಸಿತು ಮತ್ತು ವರ್ಗೀಕರಣಗೊಳಿಸಿತು.[who?] ಇದಕ್ಕಿಂತ ಮೇಲಾಗಿ ಹೆಚ್ಚಿನ ಅಣುಶಕ್ತಿ ಸಂಶೋಧನಾ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಮಿಲಿಟರಿ ಕೇಂದ್ರಿಕೃತವಾಗಿದ್ದವು.[which?] ಅಮೆರಿಕದ ವೈಜ್ಞಾನಿಕ ಸಮುದಾಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಣು ಸಾಮಗ್ರಿಗಳ ಮೇಲಿನ ನಿಯಂತ್ರಣ[when?] ಮತ್ತು ಮಾಹಿತಿ ವರ್ಗಾವಣೆಗ ಅಂತಾರಾಷ್ಟ್ರೀಯ ಸಹಕಾರ ಬೇಕು [who?]ಎಂಬ ಬೇಡಿಕೆಯನ್ನು ಅಮೆರಿಕ ಸರ್ಕಾರ ನಿರಾಕರಿಸಿದ ನಂತರ ತಕ್ಷಣ ಅಯುಧ ಮತ್ತು ಅಭಿವೃದ್ಧಿಯ ಪೈಪೋಟಿ ಜಗತ್ತಿನಲ್ಲಿ ಪ್ರಾರಂಭವಾಯಿತು.[ಸೂಕ್ತ ಉಲ್ಲೇಖನ ಬೇಕು] ಜಾಗತಿಕ ಅಣುಶಕ್ತಿ ಪಾಲುದಾರಿಕೆಯೊಂದಿಗೆ 2006ರ ಹೊತ್ತಿಗೆ ಎಲ್ಲವೂ ಸರಿಯಾಯಿತು.[ಸೂಕ್ತ ಉಲ್ಲೇಖನ ಬೇಕು]

ಅರ್ಕೊ ಇದಾಹೋದ ಹತ್ತಿರವಿರುವ ಇಬಿಆರ್-೧ ಪ್ರಾಯೋಗಿಕ ಸ್ಟೇಷನ್ ದಲ್ಲಿ ಪ್ರಥಮ ಬಾರಿ ಅಣುಶಕ್ತಿ ಕೇಂದ್ರದಿಂದ ವಿದ್ಯುತ್ ಉತ್ಪಾದಿಸಲಾಯಿತು. ಪ್ರಾರಂಭಿಕ ಹಂತದಲ್ಲಿ ೧೦೦ ಕಿಲೋ ವ್ಯಾಟ್ ಉತ್ಪಾದಿಸಿತು. (1955ರಲ್ಲಿ ಪ್ರಥಮ ಬಾರಿ ಭಾಗಶಃ ಕರಗುವಿಕೆಗೆ ಕೂಡ ಅರ್ಕೋ ಅಣುಶಕ್ತಿ ಕೇಂದ್ರ ಸಾಕ್ಷಿಯಾಯಿತು.) 1952ರಲ್ಲಿ (ಪ್ರೆಸಿಡೆಂಟ್ಸ್ ಮಟಿರಿಯಲ್ ಪಾಲೇ ಕಮಿಷನ್ )ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರಿಗೆ ಪಾಲೆ ಕಮಿಷನ್ ಸಲ್ಲಿಸಿದ ವರದಿಯಲ್ಲಿ ಅಣು ಶಕ್ತಿಯ ಕುರಿತು ನಿರಾಶಾದಾಯಕ ವರದಿ ಸಲ್ಲಿಸಲಾಗಿತ್ತು, ಮತ್ತು ಸಂಪೂರ್ಣವಾಗಿ ಸೌರಶಕ್ತಿ ಕ್ಷೇತ್ರದಲ್ಲಿ ಆಕ್ರಮಣಕಾರಿ ಸಂಶೋಧನೆ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಡಿಸೆಂಬರ್ 1953ರಲ್ಲಿ ಅಧ್ಯಕ್ಷ ಡ್ವೈಟ್ ಐಶೇನ್ ಹೋವರ್ ಅವರ ಭಾಷಣದಲ್ಲಿ "ಶಾಂತಿಗಾಗಿ ಪರಮಾಣುಗಳು" ವಿಷಯಕ್ಕೆ ಆದ್ಯತೆ ನೀಡಿ ಪ್ರಯೋಜನಕಾರಿಯಾಗಬಲ್ಲ ಪರಮಾಣು ತಂತ್ರಜ್ಞಾನ ಬೆಳೆಸುವುದು ಮತ್ತು ಅಣುಶಕ್ತಿಯ ಬಳಕೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ನೀಡುವುದಕ್ಕೆ ಅಮೆರಿಕ ಸರ್ಕಾರ ಕಾರ್ಯಕ್ರಮ ರೂಪಿಸಿತು.

ಆರಂಭಿಕ ವರ್ಷಗಳು

ಚಿತ್ರ:Calderhall.jpeg
ಯುನೈಟೆಡ್ ಕಿಂಗ್‌ಡಮ್ ನಲ್ಲಿರುವ ಕಾಲ್ಡರ್ ಹಾಲ್ ಅಣು ಶಕ್ತಿ ಸ್ಥಾವರವು ವಿದ್ಯುತ್ಚಕ್ತಿಯನ್ನು ವಾಣಿಜ್ಜಿಕರಣಕ್ಕೆ ಬೇಕಾಗುವ ಪ್ರಮಾಣ ಉತ್ಪಾದಿಸಿದ ಜಗತ್ತಿನ ಮೊದಲ ಅಣು ಶಕ್ತಿ ಸ್ಥಾವರ.
ಪರಮಾಣು ಶಕ್ತಿ 
ಯುಎಸ್‌ಎನ ಪೆನ್ಸಿಲ್ವೆನಿಯಾದ ಶಿಪ್ಪಿಂಗ್‌ಪೋರ್ಟ್‌ನಲ್ಲಿರುವ ಶಿಪ್ಪಿಂಗ್‌ಪೋರ್ಟ್ ಅಣು ಸ್ಥಾವರ,ಮೊದಲ ವಾಣಿಜ್ಯ ರಿಯಾಕ್ಟರ್,ಇದು 1957ರಲ್ಲಿ ಆರಂಭವಾಯಿತು.

ಜೂನ್ 27, 1954ರಲ್ಲಿ ಯುಎಸ್ಎಸ್ಆರ್ ನ ಒಬ್ನಿಸ್ಕ್ ಅಣು ಶಕ್ತಿ ಉತ್ಪಾದನಾ ಕೇಂದ್ರವು ಪವರ್ ಗ್ರಿಡ್ ಗೆ ವಿದ್ಯುತ್ ಉತ್ಪಾದಿಸಿದ ಮೊದಲ ಅಣುಶಕ್ತಿ ಘಟಕವಾಯಿತು. ಮತ್ತು 5 ಮೆಗಾವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಿತು.

ನಂತರ 1954ರಲ್ಲಿ ಅಂದಿನ ಅಮೆರಿಕದ ಅಣುಶಕ್ತಿ ಆಯೋಗದ (U.S.AEC) ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗ ಮತ್ತು ಅಮೆರಿಕದ ಅಣುಶಕ್ತಿ ಇಲಾಖೆಯ ಅಧ್ಯಕ್ಷ ಲೆವಿಸ್ ಸ್ಟ್ರಾಸ್ ಅವರು ಭವಿಷ್ಯದಲ್ಲಿ ವಿದ್ಯುತ್ ಕಡಿಮೆ ಬೆಲೆಯದ್ದಾಗಿರುತ್ತದೆ ಎಂದು ಹೇಳಿದರು. ಸ್ಟ್ರಾಸ್ ಅವರು ಹೈಡ್ರೋಜನ್ ವಿದಳನದ ಉಲ್ಲೇಖಿಸಿ ಹೇಳಿದ್ದರು. ಅದನ್ನು ಆ ಸಮಯದಲ್ಲಿ ಶೇರವೂಡ್ ಯೋಜನೆಯ ಭಾಗವಾಗಿ ಗೌಪ್ಯವಾಗಿ ಅಭಿವೃದ್ಧಿ ಪಡಿಸಲಾಗುತ್ತಿತ್ತು. ಆದರೆ ಸ್ಟ್ರಾಸ್ ಅವರ ಹೇಳಿಕೆಯನ್ನು ಪರಮಾಣು ಸಮ್ಮಿಳನದಿಂದ ಕಡಿಮೆ ದರದಲ್ಲಿ ದೊರೆಯುವ ಭರವಸೆ ಎಂದು ಅರ್ಥೈಸಲಾಯಿತು. ಪರಮಾಣು ಸಮ್ಮಿಳನಕ್ಕೆ ಸಂಬಂಧಿಸಿದಂತೆ ಕೆಲವೇ ತಿಂಗಳುಗಳ ಮೊದಲೇ ಯುಎಸ್ ಎಇಸಿ ಯುಎಸ್ ಕಾಂಗ್ರೆಸ್ ಗೆ ಸಲ್ಲಿಸಿದ ಅತ್ಯಂತ ಸಾಂಪ್ರದಾಯಿಕವಾದ ಪ್ರಮಾಣಪತ್ರದಲ್ಲಿ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಹೇಳಿತು. ಅದೇ ರೀತಿ ಸಾಂಪ್ರದಾಯಿಕ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಕುರಿತು ಇದೇ ಮಾತನ್ನು ಹೇಳಲಾಯಿತು ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರಗಳು "ಕಡಿಮೆ ದರ"ದಲ್ಲಿ ಪೂರೈಸದಿದ್ದರೆ ಗುರುತರವಾದ ನಿರಾಶೆಯ ಬೆಳವಣಿಗೆ ಕಾಣಬಹುದಾಗಿದೆ.

ತಂತ್ರಜ್ಞಾನವನ್ನು ಸಂಶೋಧಿಸುವುದಕ್ಕೆ 1955ರಲ್ಲಿ ಮೊಟ್ಟ ಮೊದಲ ಬಾರಿಗೆ ಸಂಯುಕ್ತ ರಾಷ್ಟ್ರ ಸಂಘದ ಮೊದಲನೇ ಜಿನಿವಾ ಸಮ್ಮೇಳನ ಮತ್ತು ನಂತರ ಜಗತ್ತಿನಲ್ಲಿ ದೊಡ್ಡದಾದ ಎಂಜಿನಿಯರ್ ಗಳ ಮತ್ತು ವಿಜ್ಞಾನಿಗಳ ಸಮ್ಮೇಳನ ನಡೆಯಿತು. 1957ರಲ್ಲಿ ಯುರೋಪಿಯನ್ ಎಕನಾಮಿಕ್ ಕಮ್ಯೂನಿಟಿ (ನಂತರ ಇದನ್ನು ಯುರೋಪಿಯನ್ ಯುನಿಯನ್ ಎಂದು ಬದಲಾಯಿಸಲಾಯಿಸಲಾಯಿತು)ಯೊಂದಿಗೆ EUROTOM ಪ್ರಾರಂಭಿಸಲಾಯಿತು. ಇದೇ ವರ್ಷ (IAEA) ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ ಅಸ್ಚಿತ್ವಕ್ಕೆ ಬಂದಿತು.

1956ರಲ್ಲಿ ಜಗತ್ತಿನ ಮೊಟ್ಟ ಮೊದಲ ಬಾರಿಗೆ ವಾಣಿಜ್ಯೋದ್ದೇಶದ ಪರಮಾಣು ಶಕ್ತಿ ವಿದ್ಯುತ್ ಉತ್ಪಾದನಾ ಕೇಂದ್ರವು ಇಂಗ್ಲೆಂಡಿನ ಸೆಲ್ಲಾಫೀಲ್ಡ್ ನಲ್ಲಿರುವ ಕಾಲ್ಡರ್ ಹಾಲ್ ನಲ್ಲಿ ಪ್ರಾರಂಭವಾಯಿತು.ಪ್ರಾರಂಭದಲ್ಲಿ 50 ಮೆಗಾ ವ್ಯಾಟ್ ಇತ್ತು (ನಂತರ 200 ಮೆಗಾವ್ಯಾಟ್) ಡಿಸೆಂಬರ್ 1957ರಲ್ಲಿ ಅಮೆರಿಕದ ಪೆನ್ಸಿಲ್ವೆನಿಯಾದ ಶಿಪ್ಪಿಂಗ್ ಪೋರ್ಟ್ ನಲ್ಲಿ ಪ್ರಥಮ ಬಾರಿಗೆ ವಾಣಿಜ್ಯೋದ್ದೇಶದ ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು.

ಅಮೆರಿಕದ ನೌಕಾದಳ ಸಂಘಟನೆಯು ಮೊದಲ ಬಾರಿಗೆ ಅಣುಶಕ್ತಿಯನ್ನು ಸಬ್ ಮರೀನ್ ಮತ್ತು ವಿಮಾನ ವಾಹಕ ನೌಕೆಗಳ ಚಾಲನೆಗೆ ಮೊದಲ ಬಾರಿಗೆ ಅಭಿವೃದ್ಧಿಪಡಿಸಿತು. ಅಣು ಸುರಕ್ಷತೆಗೆ ಸಂಬಂದಿಸಿದಂತೆ ಅದು ಯಾವುದೇ ದೋಷವಿಲ್ಲದಂತಹ ದಾಖಲೆಯನ್ನು ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು] ಅಣುಶಕ್ತಿ ಆಧಾರಿತ ಚಾಲನೆ ಮತ್ತು ಶಿಪ್ಪಿಂಗ್ ಪೋರ್ಟ್ ರಿಯಾಕ್ಟರ್ (ಅಲ್ವಿನ್ ರಾಡ್ಕೋವಸ್ಕಿ ಅಮೆರಿಕದ ನೌಕಾದಳದ ಅಣುಶಕ್ತಿ ಆಧಾರಿತ ಕಾರ್ಯಕ್ರಮಕ್ಕೆ ಮುಖ್ಯ ವಿಜ್ಞಾನಿಯಾಗಿದ್ದರು ಮತ್ತು ನಂತರ ಇದಕ್ಕೆ ಸೇರ್ಪಡೆಯಾದರು)ಬಹುಶಃ ಹಿಂದಿನ ಚಾಲಕ ಶಕ್ತಿಯಾಗಿದ್ದ ಅಡ್ಮಿರಲ್ ಹೈಮಾನ್ ಜಿ. ರಿಕೋವರ್ ಅವರ ಕಟ್ಟು ನಿಟ್ಟಿನ ಬೇಡಿಕೆಗಳಿಂದಾಗಿ ಇದು ಸಾಧ್ಯವಾಗಿರಬಹುದು. ಸಾರ್ವಜನಿಕವಾಗಿ ಗುರುತಿಸಬಲ್ಲದಂತಹ ಘಟನೆಗಳು ಇಲ್ಲದೆ ಸೋವಿಯತ್ ನೌಕಾದಳ [ಸೂಕ್ತ ಉಲ್ಲೇಖನ ಬೇಕು][dubious ]ಸೇರಿದಂತೆ ಇತರ ಯಾವುದೇ ದೇಶಗಳು ಅಮೆರಿಕ ನಿರ್ವಹಿಸುತ್ತಿರುವಷ್ಟು ಪರಮಾಣು ಶಕ್ತಿ ಕೇಂದ್ರಗಳನ್ನು ಹೊಂದಿಲ್ಲ. ಅಣುಶಕ್ತಿ ಆಧಾರಿತ ಮೊದಲ ಸಬ್ ಮರೀನ್ ಯುಎಸ್ಎಸ್ ನಾಯಿಟಿಲಿಸ್ (ಎಸ್ಎಸ್ಎನ್-571) ಅನ್ನು ಡಿಸೆಂಬರ್ 1954ರಲ್ಲಿ ಸಮುದ್ರಕ್ಕೆ ಬಿಡಲಾಯಿತು. ಅಮೆರಿಕದ ಎರಡು ಸಬ್ ಮರೀನ್ ಗಳಾದ ಯುಎಸ್ಎಸ್ ಸ್ಕಾರ್ಪಿಯಾನ್ ಮತ್ತು ಯುಎಸ್ಎಸ್ ಥ್ರೇಷರ್ ಸಮುದ್ರದಲ್ಲಿ ಕಾಣೆಯಾದವು. ಈ ನೌಕೆಗಳು ಕಳಪೆ ಕಾರ್ಯನಿರ್ವಹಣೆಯ ಕಾರಣದಿಂದಾಗಿ ಕಳೆದುಹೊಗಿವೆ ವಿನಃ ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರಗಳ ಕಾರಣದಿಂದಾಗಿ ಅಲ್ಲ.[ಸೂಕ್ತ ಉಲ್ಲೇಖನ ಬೇಕು] ಆ ಸ್ಥಳಗಳನ್ನು ಗಮನಿಸಲಾಗಿದ್ದು, ಮತ್ತು ಆ ರಿಯಾಕ್ಟರ್ ಗಳಿಂದ ವಿಕಿರಣ ಹೋರಸೂಸುತ್ತಿಲ್ಲ ಎನ್ನುವುದು ತಿಳಿದು ಬಂದಿದೆ.

1954ರಿಂದ ಪ್ರಾರಂಭದಲ್ಲಿ ಅಮೆರಿಕದ ಸಶಸ್ತ್ರ ಸೇನಾ ಪಡೆಯು ಕೂಡ ಅಣುಶಕ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಎಪ್ ಟಿ ಬೆಲ್ವೊರ್ ನಲ್ಲಿರುವ ಎಸ್ಎಂ-1 ನ್ಯೂಕ್ಲಿಯರ್ ಪವರ್ ಪ್ಲಾಂಟ್ ಅಮೆರಿಕದ ವಾಣಿಜ್ಯೋದ್ದೇಶದ ಪವರ ಗ್ರಿಡ್ ಗೆ ಏಪ್ರಿಲ್ 1957ರಲ್ಲಿ ಶಿಪ್ಪಿಂಗ್ ಪೋರ್ಟ್ ಗೆ ಮುನ್ನ (VEPCO) ವಿದ್ಯುತ್ ಶಕ್ತಿ ಪೂರೈಸಿದ ಮೊದಲ ಅಣು ವಿದ್ಯುತ್ ಉತ್ಪಾದನಾ ಕೇಂದ್ರವಾಗಿದೆ.

ಮ್ಯಾನ್ ಹಾಟನ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ್ದಕ್ಕೆ ವಿಳಂಬವಾಗಿ ಆದರೂ ಎನ್ರಿಕೊ ಫೆರ್ಮಿ ಮತ್ತು ಲಿಯೋ ಜಿಲಾರ್ಡ್ ಅವರಿಗೆ ಪಾಲು ನೀಡಲಾಯಿತು.ಯು.ಎಸ್ ಪೇಟೆಂಟ್ ೨೭,೦೮,೬೫೬

ಅಭಿವೃದ್ಧಿ

ಪರಮಾಣು ಶಕ್ತಿ 
ಅಣು ಶಕ್ತಿ ಉಪಯೋಗದ ಇತಿಹಾಸ(ಮೇಲೆ) ಮತ್ತು ಸಕ್ರಿಯವಾದ ಅಣು ಶಕ್ತಿ ಸ್ಥಾವರಗಳ ಸಂಖ್ಯೆ (ಕೆಳಗೆ)

1960ರಲ್ಲಿ ಪ್ರಾರಂಭಿಕವಾಗಿ ಅಳವಡಿಸಲಾದ ಪರಮಾಣು ಸಾಮರ್ಥ್ಯ ಸಾಪೆಕ್ಷವಾಗಿ ಕ್ಷಿಪ್ರ ವೇಗದಲ್ಲಿ 1970ರ ಹೊತ್ತಿಗೆ 100 ಗಿಗಾ ವ್ಯಾಟ್ ಮತ್ತು 1980ರ ಹೊತ್ತಿಗೆ 300 ಗಿಗಾ ವ್ಯಾಟ್ ಗೆ ವೃದ್ದಿಸಿತು. 1980 ರ ನಂತರ ಜಗತ್ತಿನಾದ್ಯಂತ ನಿದಾನವಾಗಿ ಬೆಳವಣಿಗೆ ಸಾಧಿಸಿ 2005ರ ಹೊತ್ತಿಗೆ ೩೬೬ ಗಿಗಾ ವ್ಯಾಟ್ ತಲುಪಿತು. 1970 ಮತ್ತು 1990ರ ನಡುವೆ 50 ಗಿಗಾ ವ್ಯಾಟ್ ಸಾಮರ್ಥ್ಯಕ್ಕಿಂತಲೂ ಹೆಚ್ಚು ನಿರ್ಮಾಣದ ಹಂತದಲ್ಲಿದ್ದವು (70ರ ದಶಕದ ಅಂತ್ಯದಲ್ಲಿ ಮತ್ತು 80ರ ದಶಕದ ಪ್ರಾರಂಭದಲ್ಲಿನ 150 ಗಿಗಾ ವ್ಯಾಟ್ ಗಿಂತಲೂ ಹೆಚ್ಚ್ಚು ಮುಟ್ಟುವುದು ಆಗಿತ್ತು. ಇದಕ್ಕೆ ತಕ್ಕಂತೆ ಜನವರಿ 1970ರ ಹೊತ್ತಿಗೆ ಎರಡು ಮೂರಾಂಶದಷ್ಟು ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಆದೇಶಿಸಲಾಯಿತು. 1975 ಮತ್ತು 1980ರ ಅವಧಿಯಲ್ಲಿ ಅಮೆರಿಕದಲ್ಲಿ ಒಟ್ಟು ೬೩ ಅಣು ವಿದ್ಯುತ್ ಉತ್ಪಾದನಾ ಘಟಕಗಳನ್ನು ರದ್ದು ಮಾಡಲಾಯಿತು.

ಪರಮಾಣು ಶಕ್ತಿ 
ವಾಷಿಂಗ್ಟನ್ ಪಬ್ಲಿಕ್ ಪವರ್ ಸಿಸ್ಟಮ್‌ನ ಮೂರು ಮತ್ತು ನಾಲ್ಕನೇಯ ಅಣು ಶಕ್ತಿ ಸ್ಥಾವರ ಯಾವಾಗಲೂ ಮುಗಿಯಲಿಲ್ಲ.

1970 ಮತ್ತು 1980ರ ಅವಧಿಯಲ್ಲಿ ಎರುತ್ತಿರುವ ಆರ್ಥಿಕ ವೆಚ್ಚ (ಪ್ರೇಷರ್ ಗ್ರೂಪ್ ಗಳ ಪ್ರತಿಭಟನೆ ಮೇಲ್ಮನವಿ ಮತ್ತು ಬದಲಾದ ನಿಯಂತ್ರಣ ನಿಯಮಗಳ ಕಾರಣದಿಂದಾಗಿ ನಿರ್ಮಾಣ ಕಾಮಗಾರಿಯ ವಿಸ್ತರಣೆಯ ಕಾರಣ) ಮತ್ತು ಇಳಿಮುಖವಾದ ಇಂಧನ ಬೆಲೆಗಳ ಕಾರಣ ಆ ಸಮಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳು ಕಡಿಮೆ ಆಕರ್ಷಣೆಗೆ ಒಳಗಾಗಿದ್ದವು. 1980ರಲ್ಲಿ (ಅಮೆರಿಕ) ಮ್ತತು 1990ರಲ್ಲಿ (ಯುರೋಪ್) ಒಂದೇ ಪ್ರಮಾಣದ ಬೆಳವಣಿಗೆ ಮತ್ತು ವಿದ್ಯುತ್ ನ ಜಾಗತಿಕರಣ ಕೂಡ ಇನ್ನೂ ಹೆಚ್ಚಿನ ಸಾಮರ್ಥ್ಯ ಬೆಳೆಸುವುದನ್ನು ಅನಾಕರ್ಷಣೆಯಾಗುವಂತೆ ಮಾಡಿತು.

1973ರಲ್ಲಿನ ತೈಲ ಬಿಕ್ಕಟ್ಟು ದೇಶಗಳ ಮೇಲೆ ಗುರುತರವಾದ ಪರಿಣಾಮ ಬೀರಿತು. ಅದರಲ್ಲೂ ಜಪಾನ್ ಮತ್ತು ಫ್ರಾನ್ಸ್ ವಿದ್ಯುತ್ ಉತ್ಪಾದನೆಗೆ ತೈಲದ ಮೇಲೆ ಅತಿಯಾಗಿ ಅವಲಂಬಿತವಾಗಿದ್ದವು. (ಶೇ.39ರಷ್ಟು ಮತ್ತು ಶೇ. 73ರಷ್ಟು ಕ್ರಮವಾಗಿ)ಇದು ಅಣುಶಕ್ತಿಯಲ್ಲಿ ಬಂಡವಾಳ ಹೂಡುವುದಕ್ಕೆ ಕಾರಣವಾಯಿತು. ಇಂದು ಆ ದೇಶಗಳಲ್ಲಿ ಅಣುಶಕ್ತಿಯು ಶೇ. 80 ಮತ್ತು ಶೇ.30ರಷ್ಟು ವಿದ್ಯುತ್ ಆನ್ನು ಪೂರೈಸುತ್ತಿದೆ.

20ನೇ ಶತಮಾನದ ಅಂತ್ಯದ ಅವಧಿಯಲ್ಲಿ ಅಣುಶಕ್ತಿಯ ವಿರುದ್ಧ ಸಾಮಾನ್ಯವಾದ ಚಳವಳಿ ಅಣು ಅಪಘಾತ ಸಾಧ್ಯತೆಯ ಹೆದರಿಕೆ ಮತ್ತು ಅಪಘಾತಗಳ ಇತಿಹಾಸ, ಸಾರ್ವಜನಿಕರಲ್ಲಿ ವಿಕಿರಣದ ಇತಿಹಾಸ ಮತ್ತು ವಿಕಿರಣದ ಭಯ ಮತ್ತು ಅಣು ತಂತ್ರಜ್ಞಾನದ ಪಸರಿಸುವಿಕೆ ಮತ್ತು ಪರಮಾಣು ತ್ಯಾಜ್ಯದ ಉತ್ಪಾದನೆ, ಸಾಗಾಣಿಕೆ ಮ್ತತು ಅಂತಿಮವಾಗಿ ಸಂಗ್ರಹ ಯೋಜನೆಯ ಕೊರತೆಯ ಆಧಾರದ ಮೇಲೆ ಪ್ರಾರಂಭವಾಯಿತು. ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಆಗುವ ಅಪಾಯವನ್ನು ಗಮನಿಸಲಾಯಿತು ಮತ್ತು 1979ರಲ್ಲಿ ಥ್ರೀ ಮಿಲೆ ದ್ವೀಪದಲ್ಲಿ ಮತ್ತು 1986ರಲ್ಲಿ ಚೇರ್ನೋಬಿಲ್ ಅಪಘಾತದ ಕಾರಣ ಹೊಸ ಘಟಕಗಳ ಸ್ಥಾಪನೆಯನ್ನು ಹಲವಾರು ದೇಶಗಳಲ್ಲಿ ಸ್ಥಗಿತಗೊಳಿಸುವಲ್ಲಿ ಪಾತ್ರ ವಹಿಸಿದವು. ಆದಾಗ್ಯೂ ಸಾರ್ವಜನಿಕ ನೀತಿ ಸಂಘಟನೆ ಬ್ರೂಕಿಂಗ್ಸ್ ಇನ್ಸಿಟ್ಟಿಟ್ಯೂಷನ್ ಅಮೆರಿಕದಲ್ಲಿ ವಿದ್ಯುತ್ ಶಕ್ತಿಗೆ ಕಡಿಮೆ ಬೇಡಿಕೆ ಇದ್ದ ಕಾರಣ ಹೊಸ ಅಣುಶಕ್ತಿ ಘಟಕಗಳ ಸ್ಥಾಪನೆಗೆ ಮತ್ತು ನಿಯಂತ್ರಣ ಸಮಸ್ಯೆಗಳು ಮತ್ತು ನಿರ್ಮಾಣ ಕಾಮಗಾರಿಯಲ್ಲಿನ ವಿಳಂಬದ ಕಾರಣ ಆದೇಶ ನೀಡಲಿಲ್ಲ ಎಂದು ಸೂಚಿಸಿತು.

ಮೀಲೆ ದ್ವೀಪದ ಅಪಘಾತಕ್ಕಿಂತ ಚೆರ್ನೋಬಿಲ್ ಅಪಘಾತ ಹೆಚ್ಚು ಗಂಭೀರವಾದ ಅವಘಡವಾಗಿದ್ದರೂ ಪಾಶ್ಚಿಮಾತ್ಯದ ರಿಯಾಕ್ಟರ್ ಗಳಲ್ಲಿ ನಿಯಮಾವಳಿಗಳಲ್ಲಿ ಹೆಚ್ಚಳವಾಗಲಿಲ್ಲ. ಎಕೆಂಜರೆ ಆರ್ ಬಿಎಂಕೆ ವಿನ್ಯಾಸದಲ್ಲಿರುವ ಸಮಸ್ಯಾತ್ಮಕ ರಿಯಾಕ್ಟರ್ ಗಳು ಸೋವಿಯತ್ ನಲ್ಲಿ ಮಾತ್ರ ಬಳಕೆಯಲ್ಲಿದ್ದವು. ಉದಾಹರಣೆಗೆ ಕಡಿಮೆ ಪ್ರಮಾಣದಲ್ಲಿ ರೋಬಸ್ಟ್ ಕಲ್ಮಷ ಕಟ್ಟಡಗಳು. ಇಂದಿಗೂ ಈ ಹಲವಾರು ರಿಯಾಕ್ಟರುಗಳು ಉಪಯೋಗದಲ್ಲಿವೆ. ಆದರೆ. ಎರಡು ರಿಯಾಕ್ಟರಗಳಲ್ಲಿ ಕೂಡ ಬದಲಾವಣೆ ಮಾಡಲಾಯಿತು.(ಕಡಿಮೆ ವೃದ್ಧಿತ ಯುರೇನಿಯಂ ಬಳಕೆ) ಮತ್ತು ಅದೇ ರೀತಿಯ ಅಪಘಾತ ಸಂಭವಿಸುವುದನ್ನು ಕಡಿಮೆ ಮಾಡುವ ಸಾಧ್ಯತೆಗೆ ನಿಯಂತ್ರಣ ವ್ಯವಸ್ಥೆಯನ್ನು (ಸುರಕ್ಷಾ ವ್ಯವಸ್ಥೆ ನಿಷ್ಟ್ರಿಯಗೊಳ್ಳುವುದನ್ನು ತಡೆಯುವಿಕೆ)ಬದಲಾಯಿಸಲಾಯಿತು.

ಸುರಕ್ಷಾ ಜಾಗೃತಿ ಮತ್ತು ಪರಮಾಣು ಕೇಂದ್ರಗಳ ನಿರ್ವಹಣೆಗೆ ವೃತ್ತಿಪರರನ್ನು ಅಭಿವೃದ್ದಿಗೊಳಿಸುವುದಕ್ಕೆ ಅಂತಾರಾಷ್ಟ್ರೀಯ ಸಂಘಟನೆಯನ್ನು ಹುಟ್ಟುಹಾಕಲಾಯಿತು. ಡಬ್ಲ್ಯೂಎಎನ್ಓ ವರ್ಲ್ಡ್ ಅಸೋಸಿಯೇಷನ್ ಆಫ್ ನ್ಯೂಕ್ಲಿಯರ್ ಆಪರೇಟರ್ಸ್

ಐರ್ಲೆಂಡ್ ಮತ್ತು ಪೋಲಂಡ್ ಗಳಲ್ಲಿ ವಿರೋಧ ವ್ಯಕ್ತವಾದ ಕಾರಣ ಅಲ್ಲಿ ಅಣುಶಕ್ತಿ ಕಾರ್ಯಕ್ರಮಗಳಿಗೆ ತಡೆಹಾಕಲಾಯಿತು. (ಚೆರ್ನೋಬಿಲ್ ನಿಂದ ಪ್ರಭಾವಿತಗೊಂಡು)ಆಸ್ಟ್ರೀಯಾ (1978 ), ಸ್ವೀಡನ್ (1980)ಮತ್ತು ಇಟಲಿ (1987 )ರಲ್ಲಿ ಅಣುಶಕ್ತಿಯನ್ನು ತೆಗೆದು ಹಾಕುವಂತೆ ಒತ್ತಾಯಿಸಿ ರೆಫರಂಡಮ್ ನಲ್ಲಿ ಮತ ಚಲಾವಣೆಯಾಯಿತು. ಜುಲೈ 2009ರಲ್ಲಿ ಇಟಲಿಯ ಸಂಸತ್ತು ಈ ಮೊದಲಿನ ರೆಫರಂಡಮ್ ನ ಫಲಿತಾಂಶವನ್ನು ರದ್ದುಗೊಳಿಸಿ ತಕ್ಷಣ ಇಟಲಿಯ ಅಣುಶಕ್ತಿ ಕಾರ್ಯಕ್ರಮ ಪ್ರಾರಂಭಿಸುವುದಕ್ಕೆ ಅನುಮತಿಸಿತು.

ಉದ್ಯಮದ ಭವಿಷ್ಯ

ಪರಮಾಣು ಶಕ್ತಿ 
ಸ್ಯಾನ್ ಲೂಯಿಸ್ ಒಬಿಸ್ಪೋ ದೇಶ ಡಿಯಾಬ್ಲೊ ಕ್ಯಾನಿಯೊನ್ ಶಕ್ತಿ ಸ್ಥಾವರ,ಕ್ಯಾಲಿಫೋರ್ನಿಯಾ.ಯುಎಸ್‌ಎ

2007ರ ಪ್ರಕಾರ ಫೆಬ್ರವರಿ 7 , 1996 ಕಾರ್ಯಾರಂಭ ಮಾಡಿದ ವ್ಯಾಟ್ಸ್ ಬಾರ್-1 ಅಮೆರಿಕದ ಕೊನೆಯ ವಾಣಿಜ್ಯೋದ್ದೇಶದ ಅಣು ಶಕ್ತಿ ಉತ್ಪಾದನೆಯ ಕೇಂದ್ರವಾಗಿದೆ. ಇದನ್ನೇ ಹಲವಾರು ಬಾರಿ ಅಣುಶಕ್ತಿಯನ್ನು ಹೊರ ಹಾಕುವುದಕ್ಕೆ ಜಗತ್ತಿನಾದ್ಯಂತ ನಡೆಯುತ್ತಿರುವ ಚಳವಳಿ ಯಶಸ್ವಿಯಾಗಿದೆ ಎಂದು ಸಾಕ್ಷಿಕರಿಸಲಾಗುತ್ತದೆ. ಆದರೆ ಅಮೆರಿಕ ಮತ್ತು ಯುರೋಪಿನಾದ್ಯಂತ ಅಣುಶಕ್ತಿ ಚಕ್ರದ ಅಣುಶಕ್ತಿ ಇಂಧನದ ಸಂಶೋಧನೆಗೆ ಬಂಡವಾಳ ಹೂಡುವಿಕೆ ಮುಂದುವರಿಯುತ್ತಿದೆ.ಮತ್ತು ಕೆಲವು ಅಣುಶಕ್ತಿ ಉದ್ಯಮದ ಪರಿಣತರು ವಿದ್ಯುತ್ ಕೊರತೆ, ನಷ್ಟವಾಗುವ ಇಂಧನ ಬೆಲೆ ಏರಿಕೆ, ಜಾಗತಿಕ ತಾಪಮಾನ ಮತ್ತು ನಷ್ಟವಾಗುವ ಇಂಧನದ ಬಳಕೆಯಿಂದಾಗಿ ಹೊರಬರುವ ಘನ ಲೋಹದ ತ್ಯಾಜ್ಯದ ಉಪಯೋಗ, ಸುರಕ್ಷಿತ ಘಟಕಗಳಂತಹ ಹೊಸ ತಂತ್ರಜ್ಞಾನ ಮತ್ತು ರಾಷ್ಟ್ರೀಯ ಶಕ್ತಿ ಸುರಕ್ಷೆ ಯು ಪರಮಾಣು ಶಕ್ತಿ ಘಟಕಗಳ ಹೊಸ ಬೇಡಿಕೆಯನ್ನು ಸೃಷ್ಟಿಸಬಹುದು.

ವರ್ಲ್ಡ್ ನ್ಯೂಕ್ಲಿಯರ್ ಅಸೋಸಿಯೇಷನ್ ಪ್ರಕಾರ, 1980ರ ಅವಧಿಯಲ್ಲಿ ಜಗತ್ತಿನಾದ್ಯಂತ ಪ್ರತಿ 17ದಿನಕ್ಕೆ ಒಂದು ನ್ಯೂಕ್ಲಿಯರ್ ರಿಯಾಕ್ಚರ್ ಪ್ರಾರಂಭವಾಗುತ್ತಿತ್ತು ಎಂದು ಹೇಳಲಾಗಿದೆ. ಮತ್ತು 2015ರ ಹೊತ್ತಿಗೆ ಈ ಪ್ರಮಾಣವು 5ದಿನಕ್ಕೆ ಒಂದಕ್ಕೆ ಎರಿಕೆಯಾಗಬಹುದು.

ಪರಮಾಣು ಶಕ್ತಿ 
ಬ್ರುನ್ಸ್‌ವಿಕ್ ಅಣು ಶಕ್ತಿ ಸ್ಥಾವರದ ವಿಸರ್ಜಿಸುವ ಕಾಲುವೆ

ಪಾಕಿಸ್ತಾನ, ಭಾರತ, ಜಪಾನ್ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ಅಣುಶಕ್ತಿಯ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಉಳಿದಿವೆ. ಎಲ್ಲವೂಗಳು ಸಕ್ರಿಯವಾಗಿ ವೇಗವಾಗಿರುವ ಮತ್ತು ಥರ್ಮಲ್ ತಂತ್ರಜ್ಞಾನವನ್ನು ಎರಡನ್ನೂ ಅಭಿವೃದ್ಧಿಪಡಿಸುತ್ತಿವೆ. ಉತ್ತರ ಕೋರಿಯಾ ಮತ್ತು ಅಮೆರಿಕ ಥರ್ಮಲ್ ತಂತ್ರಜ್ಞಾನವನ್ನು ಮಾತ್ರ ಅಭಿವೃದ್ದಿ ಪಡಿಸುತ್ತಿವೆ. ಮತ್ತು ದಕ್ಷಿಣ ಆಫ್ರಿಕ ಮತ್ತು ಚೀನಾ, ಪೆಬ್ಬೆಲ್ ಮಾಡ್ಯೂಲರ್ ರಿಯಾಕ್ಟರ್ ( ಪಿಬಿಎಂಆರ್) ಮಾದರಿಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಹಲವಾರು ಯುರೋಪಿಯನ್ ಸದಸ್ಯರು ರಾಷ್ಟ್ರಗಳು ಸಕ್ರಿಯವಾಗಿ ಅಣುಶಕ್ತಿ ಕಾರ್ಯಕ್ರಮವನ್ನು ಪಡೆಯಲು ಯತ್ನಿಸಿವೆ. ಇದೇ ಸಂದರ್ಭದಲ್ಲಿ ಕೆಲ ಸದಸ್ಯ ರಾಷ್ಟ್ರಗಳು ಅಣುಶಕ್ತಿಯನ್ನು ನಿಷೇಧವನ್ನು ಮುಂದುವರಿಸಿವೆ. ಜಪಾನ್ ಸಕ್ರಿಯವಾಗಿ ಅಣುಶಕ್ತಿ ನಿರ್ಮಾಣ ಕಾರ್ಯಕ್ರಮವನ್ನು 2005ರಲ್ಲಿ ಹೊಸ ಘಟಕಗಳನ್ನು ಸ್ಥಾಪಿಸುವ ಮೂಲಕ ಹೊಂದಿದೆ. 2004ರಲ್ಲಿ ಮೂರು ಕಾನ್ಸರಾರ್ಟಿಯಾಗಳಿಗೆ ಅಮೆರಿಕ, ಅಮೆರಿಕದ ಅಣುಶಕ್ತಿ ಇಲಾಖೆ, ನ್ಯೂಕ್ಲಿಯರ್ ಪವರ್ ಪ್ರೊಗ್ರಾಮ್ 2010ರ ಅಡಿ ಪ್ರತಿಕ್ರಿಯಿಸಿ ಸರಿದೂಗಿಸುವ ಅನುದಾನ ನೀಡಲಾಯಿತು. ಮತ್ತು ಎನರ್ಜಿ ಪಾಲಿಸಿ 2005ರ ಮಸೂದೆ ಅಡಿ ಆರು ಹೊಸ ರಿಯಾಕ್ಟರ್ ಗಳ ಸ್ಥಾಪನೆಗೆ ಸಾಲದ ಗ್ಯಾರಂಟಿ ಪಡೆದಿದೆ. ಮತ್ತು ಜನರೇಷನ್ IV ವೇರಿ ಹೈ ಟೆಂಪರೆಚರ್ ರಿಯಾಕ್ಟರ್ ಪರಿಕಲ್ಪನೆ ಅಡಿ ವಿದ್ಯುತ್ ಮತ್ತು ಹೈಡ್ರೋಜನ್ ಎರಡನ್ನೂ ಉತ್ಪಾದಿಸುವುದಕ್ಕೆ ಇಂಧನ ಇಲಾಖೆಯನ್ನು ಅಧಿಕೃತಗೊಳಿಸಲಾಗಿದೆ. 21ನೇ ಶತಮಾನದ ಪ್ರಾರಂಭದ ಅವಧಿಯಲ್ಲಿ ಅಣು ವಿದ್ಯುತ್ ಶಕ್ತಿಗೆ ವಿಶೇಷವಾಗಿ ಭಾರತ ಮತ್ತು ಚೀನಾದಲ್ಲಿ ಹೆಚ್ಚಿನ ಆಸಕ್ತಿಯನ್ನು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಗೆ ಪೂರೈಸುವುದಕ್ಕೆ ಆಸಕ್ತಿ ತೋರಲಾಗಿತ್ತು. ಎರಡೂ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಗಳನ್ನು ಅಭಿವೃದ್ದಿ ಪಡಿಸುತ್ತಿವೆ. (ಇಂಧನ ಅಭಿವೃದ್ದಿಯನ್ನೂ ನೋಡಿ) ಯುನೈಟೆಡ್ ಕಿಂಗಡಮ್ ನ ಇಂಧನ ನೀತಿಯಲ್ಲಿ ಭವಿಷ್ಯತ್ತಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಕಾಣಬಹುದು ಎಂದು ಗುರುತಿಸಲಾಗಿದೆ. ಅದನ್ನು ಹೊಸ ಅಣು ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಥವ ಚಾಲ್ತಿಯಲ್ಲಿರುವ ಘಟಕಗಳನ್ನು ಅವುಗಳ ಜೀವಿತಾವಧಿ ನಂತರವೂ ನಿರ್ವಹಿಸುವ ಮೂಲಕ ಭರ್ತಿ ಮಾಡಿಕೊಳ್ಳಬಹುದಾಗಿದೆ

ಅಣುಶಕ್ತಿ ಉತ್ಪಾದನಾ ಕೇಂದ್ರಗಳ ಉತ್ಪಾದನೆಯಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುವ ಸಾಧ್ಯತೆ ಇದ್ದು,ಎಕೆಂದರೆ, ಜಗತ್ತಿನಾದ್ಯಂತ ಕೆಲವೇ ಕಂಪನಿಗಳು ಸಿಂಗಲ್ ಪೀಸ್ ರಿಯಾಕ್ಟರ್ ಪ್ರೇಷರ್ ಉಪಕರಣವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳು ರಿಯಾಕ್ಟರ್ ಗಳ ವಿನ್ಯಾಸದಲ್ಲಿ ಅತ್ಯಗತ್ಯವಾಗಿವೆ. ಈ ಉಪಕರಣಗಳ ವಾಸ್ತವಿಕ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯನ್ನು ಒಂದು ವರ್ಷ ಮೊದಲೇ ಉಪಯೋಗಿಸುವವರು ಸಲ್ಲಿಸುತ್ತಿದ್ದಾರೆ. ಇತರ ಉತ್ಪಾದಕರು ತಾವೇ ಉಪಕರಣವನ್ನು ತಯಾರಿಸುವ ಆಯ್ಕೆ ಸೇರಿದಂತೆ ವಿವಿಧ ರೀತಿಯ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಥವ ಇತರ ಪರ್ಯಾಯ ವಿಧಾನಗಳ ಮೂಲಕ ಇದೇ ರೀತಿಯ ವಸ್ತು ತಯಾರಿಸುವುದಕ್ಕೆ ಮಾರ್ಗವನ್ನು ಕಂಡು ಹಿಡಿಯುಲೇತ್ನಿಸುತ್ತಿದ್ದಾರೆ. ಇತರ ಪರಿಹಾರಗಳು ಎಂದರೆ ಕೆನಡಾದ ಮುಂದುವರಿದ CANDU ರಿಯಾಕ್ಟರ್ ಅಥವ ಸೋಡಿಯಂ ಕೂಲ್ಡ್ ಫಾಸ್ಟ್ ರಿಯಾಕ್ಚರ್ ಮಾದರಿಯಂತೆ ಸಿಂಗಲ್ ಪೀಸ್ ಫೋರ್ಜಡ್ ಪ್ರೇಷರ್ ಉಪಕರಣದ ವಿನ್ಯಾಸವಿಲ್ಲದೇ ತಯಾರಿಸುವುದು ಆಗಿದೆ.

ಪರಮಾಣು ಶಕ್ತಿ 
ಅಮೆರಿಕಾದಲ್ಲಿ ಪ್ರಸ್ತುತ ವಿದ್ಯುಚ್ಛಕ್ತಿ ಉತ್ಪಾದಿಸುವ ರಿಯಾಕ್ಟರುಗಳು ಅರವತ್ತು ವರ್ಷಗಳ ಲೈಸೆನ್ಸ್ ಮುಗಿದ ನಂತರ ನಿಂತುಹೋಗುತ್ತವೆಯಾದ್ದರಿಂದ ಅವುಗಳನ್ನು ಕಲ್ಲಿದ್ದಲು ಅಥವಾ ನೈಸರ್ಗಿಕ ಅನಿಲಗಳು ಈಗಿನ ನ್ಯೂಕ್ಲಿಯರ್ ವಿದ್ಯುಚ್ಛಕ್ತಿಯ ಬದಲಾಗಿ ಕಾರ್ಯ ನಿರ್ವಹಿಸಿದರೆ ಹೆಚ್ಚಾಗುವ CO2 ಉತ್ಸರ್ಜನೆಯನ್ನು ಈ ಗ್ರಾಫ್ ವಿವರಿಸುತ್ತದೆ.ಟಿಪ್ಪಣಿ: ಅಮೆರಿಕಾದ ಎಲ್ಲಾ 104 ಅಣು ಶಕ್ತಿ ಸ್ಥಾವರಗಳ ಪರವಾನಗಿಯು 60 ವರ್ಷಗಳಿಗೆ ವಿಸ್ತರಿಸುವುದನ್ನು ಈ ಗ್ರಾಫ್ ಊಹಿಸುತ್ತದೆ.

ಚೀನಾ 100ಕ್ಕಿಂತಲೂ ಹೆಚ್ಚು ಘಟಕಗಳನ್ನು ಸ್ಥಾಪಿಸುವುದಕ್ಕೆ ಯೋಜಿಸಿದೆ. ಇದೇ ಸಂದರ್ಭದಲ್ಲಿ ಅಮೆರಿಕ ತನ್ನ ಅರ್ಧಕ್ಕಿಂತಲೂ ಹೆಚ್ಚು ರಿಯಾಕ್ಚರ್ ಗಳ ಪರವಾನಗಿಯನ್ನು 60 ವರ್ಷಗಳವರೆಗೆ ವಿಸ್ತರಿಸಿದೆ ಮತ್ತು 30ಕ್ಕೂ ಹೆಚ್ಚು ಹೊಸ ಘಟಕಗಳ ನಿರ್ಮಾಣ ಪರಿಶೀಲನೆಯಲ್ಲಿದೆ. ಇದಲ್ಲದೇ ಯುಎಸ್ ಎನ್ಆರ್ ಸಿ ಮತ್ತು ಯುಎಸ್ ಇಂಧನ ಇಲಾಖೆಯು ಮೃದು ನೀರಿನ ರಿಯಾಕ್ಟರ್ ಗಳ ಸುಸ್ಥಿರತೆಗೆ ಸಂಶೋಧನೆಗೆ ಕೈಗೊಂಡಿದ್ದು, ಇದು 60ಕ್ಕೂ ಹೆಚ್ಚು ವರ್ಷ ಕಾಲ ರಿಯಾಕ್ಟರ್ ಗಳ ಪರವಾನಗಿಯನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡುತ್ತದೆ ಎಂದು ಆಶಿಸಲಾಗಿದೆ. ಹೆಚ್ಚುವರಿ 20 ವರ್ಷ ನೀಡಿದಲ್ಲಿ ಸುರಕ್ಷಿತವಾಗಿ ನಿರ್ವಹಿಸಬಹುದಾಗಿದೆ. ನಷ್ಟದ ರೂಪದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೊರಸೂಸದ ನಿವೃತ್ತಗೊಳ್ಳಲಿರುವ ರಿಯಾಕ್ಟರ್ ಗಳು ಅಮೆರಿಕದ ಇಂಧನ ಸುರಕ್ಷತೆ, ಗ್ರೀನ್ ಹೌಸ್ ಹೊರಸೂಸುವಿಕೆ ಮತ್ತು ವಿದ್ಯುತ್ ಶಕ್ತಿಯ ಬೇಡಿಕೆ ಮತ್ತು ಅಸಮತೋಲನ ಉಂಟು ಮಾಡುವ ಮೂಲಕ ಅಮೆರಿಕಕ್ಕೆ ಅತಿದೊಡ್ಡ ಸವಾಲಾಗಿ ಪರಿಣಮಿಸಬಹುದು. 2030ರ ಹೊತ್ತಿಗೆ ಅಣು ವಿದ್ಯುತ್ ಶಕ್ತಿಯ ಸಾಮರ್ಥ್ಯ ದ್ವಿಗುಣಗೊಳ್ಳಬಹುದು. ಆದರೂ ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಅಣುಶಕ್ತಿಯ ಪಾಲು ಎರಿಕೆಯಾಗುವುದಕ್ಕೆ ಸಾಕಾಗುವುದಿಲ್ಲ ಎಂದು ಎಂದು ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ ಅಂದಾಜಿಸಿದೆ.

ನ್ಯೂಕ್ಲಿಯರ್ ರಿಯಾಕ್ಟರ್ ತಂತ್ರಜ್ಞಾನ

ಪರಮಾಣು ಶಕ್ತಿ 
ಕೆಟೆನೊಮ್ ಅಣುಶಕ್ತಿ ಸ್ಥಾವರ.

ಸಾಂಪ್ರದಾಯಿಕ ಉಷ್ಣ ವಿದ್ಯುತ್ ಸ್ಥಾವರಗಳು ಇಂಧನ ದಹನದ ನಂತರ ಬಿಡುಗಡೆಯಾಗುವ ಶಕ್ತಿಯನ್ನು ಉಷ್ಣ ಶಕ್ತಿಯನ್ನಾಗಿ ಪರಿವರ್ತಿಸುತ್ತವೆಯೋ ಅದೇ ರೀತಿಯ ಅಣು ವಿದ್ಯುತ್ ಉತ್ಪಾದನಾ ಘಟಕಗಳು ಪರಮಾಣುವಿನ ನ್ಯೂಕ್ಲಿಯಸ್ ನಿಂದ ಬಿಡುಗಡೆಯಾದ ಶಕ್ತಿಯನ್ನು ಅಣು ಸಮ್ಮಿಳನದ ಮೂಲಕ ಪರಿವರ್ತಿಸುತ್ತವೆ.

ಸಾಪೇಕ್ಷವಾಗಿ ದೊಡ್ಡ ಸಮ್ಮಿಳನದ ಪರಮಾಣು ನ್ಯೂಕ್ಲಿಯಸ್ ಗಳಾದ (ಸಾಮಾನ್ಯವಾಗಿ ಯುರೇನಿಯಂ-235 ಅಥವ ಪ್ಲುಟೋನಿಯಂ-239) ನ್ಯೂಟ್ರಾನ್ ಅನ್ನು ಸೆಳೆದುಕೊಂಡ ನಂತರ ಪರಮಾಣುಗಳ ಸಮ್ಮಿಳನದಲ್ಲಿ ಅದು ಫಲಿತಗೊಳ್ಳುತ್ತದೆ. ಸಮ್ಮಿಳನ ಪರಮಾಣುಗಳನ್ನು ಎರಡು ಅಥವ ಅದಕ್ಕಿಂತ ಹೆಚ್ಚಿನ ನ್ಯೂಕ್ಲಿಗಳನ್ನಾಗಿ ಕೈನೆಟಿಕ್ ಶಕ್ತಿಯೊಂದಿಗೆ ವಿಭಜಿಸುತ್ತದೆ. (ಸಮ್ಮಿಳನದ ಉತ್ಪನ್ನ ಎಂದೂ ಕರೆಯಲಾಗುತ್ತದೆ) ಮತ್ತು ಗಾಮಾ ವಿಕಿರಣ ಮತ್ತು ಮುಕ್ತ ನ್ಯೂಟ್ರಾನ್ ಗಳನ್ನು ಬಿಡುಗಡೆ ಮಾಡುತ್ತದೆ. ಈ ನ್ಯೂಟ್ರಾನ್ ಗಳ ಕೆಲವು ಭಾಗವು ಇತರ ಸಮ್ಮಿಳನ ಅಣುಗಳು ಸೆಳೆದುಕೊಳ್ಳುತ್ತವೆ ಮತ್ತು ಮತ್ತಷ್ಟು ಸಮ್ಮಿಳನ ನಿರ್ಮಿಸುತ್ತವೆ. ಅದು ಮತ್ತಷ್ಟು ನ್ಯೂಟ್ರಾನ್ ಗಳನ್ನು ಬಿಡುಗಡೆ ಮಾಡುತ್ತದೆ. ಹೀಗೆ ಅದು ಮುಂದುವರಿಯುತ್ತದೆ.

ಈ ನ್ಯೂಕ್ಲಿಯರ್ ಗಳ ಸರಣಿ ಪ್ರತಿಕ್ರಿಯೆಯನ್ನು ನ್ಯೂಟ್ರಾನ್ ವಿಷ ಮತ್ತು ನ್ಯೂಟ್ರಾನ್ ಮಾಡರೇಟರ್ ಗಳಿಂದ ಮತ್ತಷ್ಟು ಸಮ್ಮಿಳನಕ್ಕೆ ಹೊಗುವ ಕೆಲ ನ್ಯೂಟ್ರಾನ್ ಗಳನ್ನು ಬದಲಿಸುವ ಮೂಲಕ ನಿಯಂತ್ರಿಸಬಹುದಾಗಿದೆ. ಸಾಮಾನ್ಯವಾಗಿ ನ್ಯೂಕ್ಲಿಯರ್ ರಿಯಾಕ್ಟರ್ ಗಳಲ್ಲಿ ಸಮ್ಮಿಳನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಕ್ಕೆ ಸ್ವಯಂ ಚಾಲಿತ ಮತ್ತು ಮಾನವ ಚಾಲಿತ ವ್ಯವಸ್ಥೆಗಳು ಇದ್ದು, ಅಸುರಕ್ಷಿತ ಪರಿಸ್ಥಿತಿಗಳು ಪತ್ತೆಯಾದಲ್ಲಿ ಕೆಳಗಿಳಿಸಬಹುದಾಗಿದೆ.

ಶೈತ್ಯಿಕರಣಗೊಳಿಸುವಿಕೆ ವ್ಯವಸ್ಥೆಯು ರಿಯಾಕ್ಟರ್ ನ ಕೇಂದ್ರ ಭಾಗದಿಂದ ಉಷ್ಣವನ್ನು ಹೊರತೆಗೆದು ಘಟಕದ ಇನ್ನೊಂದು ಪ್ರದೇಶಕ್ಕೆ ಸಾಗಿಸುತ್ತದೆ. ಅಲ್ಲಿ ಉಷ್ಣ ಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಅಥವ ಇನ್ನಿತರ ಪ್ರಯೋಜನಕಾರಿ ಕೆಲಸಗಳಿಗೆ ಉಪಯೋಗಿಸಬಹುದು. ಅದೇ ರೀತಿ ಬಿಸಿಯಾಗಿರುವ ಕೂಲಂಟ್ ಅನ್ನು ಬಾಯಲರ್ ನ ಉಷ್ಣದ ಮೂಲವಾಗಿ ಉಪಯೋಗಿಸಲಾಗುತ್ತದೆ, ಮತ್ತು ಆ ಬಾಯಲರ್ ನಿಂದ ಒತ್ತಡಕ್ಕೆ ಒಳಗಾದ ಹಬೆಯು ಒಂದು ಅಥವ ಅದಕ್ಕಿಂತ ಹೆಚ್ಚಿನ ಹಬೆ ಟರ್ಬೈನ್ ಗಳಿಗೆ ಶಕ್ತಿಯನ್ನು ಎಲೆಕ್ಟ್ರಿಕ್ ಜನರೇಟರ್ ಗಳಿಗೆ ಪೂರೈಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ.

ವಿವಿಧ ಮಾದರಿಯ ರಿಯಾಕ್ಟರ್ ವಿನ್ಯಾಸಗಳು ಇದ್ದು, ಭಿನ್ನ ನಿಯಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡು ವಿವಿಧ ರೀತಿಯ ಇಂಧನ ಮತ್ತು ಕೂಲಂಟ್ ಗಳನ್ನು ಉಪಯೋಗಿಸುತ್ತವೆ. ಇದರಲ್ಲಿನ ಕೆಲ ವಿನ್ಯಾಸಗಳು ವಿಶೇಷ ಅಗತ್ಯಗಳನ್ನು ಪೂರೈಸುವುದಕ್ಕೆ ಮಾಡಲಾಗಿದೆ. ಉದಾಹರಣೆಗೆ ನ್ಯೂಕ್ಲಿಯರ್ ಸಬ್ ಮರೀನ್ ಮತ್ತು ಬೃಹತ್ ಯುದ್ಧ ನೌಕೆಗಳು ಸಾಮಾನ್ಯವಾಗಿ ಉನ್ನತ ಮಟ್ಟದಲ್ಲಿ ಅಭಿವೃದ್ಧಿಗೊಳಿಸಿದ ಯುರೇನಿಯಂ ಅನ್ನು ಇಂಧನವಾಗಿ ಉಪಯೋಗಿಸುತ್ತವೆ. ಈ ತೆರನಾದ ಇಂಧನ ಆಯ್ಕೆಯು ರಿಯಾಕ್ಟರ್ ನ ಶಕ್ತಿ ಸಾಂದ್ರತೆಯನ್ನು ವೃದ್ಧಿಸುತ್ತದೆ ಮತ್ತು ಭರ್ತಿ ಮಾಡಲಾಗಿರುವ ನ್ಯೂಕ್ಲಿಯರ್ ಇಂಧನದ ಉಪಯೋಗದ ಜೀವಿತಾವಧಿಯನ್ನು ವಿಸ್ತರಿಸುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿಯಾಗಿದ್ದು, ಮತ್ತು ಇತರ ನ್ಯೂಕ್ಲಿಯರ್ ಇಂಧನಗಳಿಗೆ ಹೋಲಿಸಿದಲ್ಲಿ ಅತಿ ಹೆಚ್ಚು ಪರಮಾಣು ಪ್ರಸರಣವನ್ನು ಹೊಂದಿದೆ.

ಅಣು ವಿದ್ಯುತ್ ಉತ್ಪಾದನೆಯ ಹಲವಾರು ಹೊಸ ವಿನ್ಯಾಸಗಳನ್ನು ಸಾಮೂಹಿಕವಾಗಿ ನಾಲ್ಕನೇ ತಲೆಮಾರಿನ ರಿಯಾಕ್ಚರ್ ಗಳು ಎಂದು ಕರೆಯಲಾಗುತ್ತಿದ್ದು, ಅವುಗಳು ಸಕ್ರಿಯ ಸಂಶೋಧನೆಗೆ ಒಳಪಡಲಿವೆ. ಭವಿಷ್ಯತ್ತಿನಲ್ಲಿ ವಿದ್ಯುತ್ ಉತ್ಪಾದನೆಗೆ ಬಳಕೆಯಾಗಬಹುದಾಗಿದೆ. ಅಣು ವಿದ್ಯುತ್ ಉತ್ಪಾದನೆಯ ಹಲವಾರು ಹೊಸ ವಿನ್ಯಾಸಗಳನ್ನು ಸಾಮೂಹಿಕವಾಗಿ ನಾಲ್ಕನೇ ತಲೆಮಾರಿನ ರಿಯಾಕ್ಚರ್ ಗಳು ಎಂದು ಕರೆಯಲಾಗುತ್ತಿದ್ದು, ಅವುಗಳು ಸಕ್ರಿಯ ಸಂಶೋಧನೆಗೆ ಒಳಪಡಲಿವೆ. ಭವಿಷ್ಯತ್ತಿನಲ್ಲಿ ವಿದ್ಯುತ್ ಉತ್ಪಾದನೆಗೆ ಬಳಕೆಯಾಗಬಹುದಾಗಿದೆ. ವಿಶೇಷತೆಯನ್ನು ಹೊಂದಿರುವ ಹಲವಾರು ಈ ವಿನ್ಯಾಸಗಳನ್ನು ಸಮ್ಮಿಳನ ರಿಯಾಕ್ಟರ್ ಗಳ ಕ್ಲೀನರ್, ಸುರಕ್ಷಿತ ಮತ್ತು/ ಅಣ್ವಸ್ತ್ರಗಳಿಗೆ ಪ್ರಸರಣದ ಕಡಿಮೆ ಅಪಾಯ ಹೊಂದಿರುವಂತೆ ಇವುಗಳನ್ನು ತಯಾರಿಸುವುದಕ್ಕೆ ಪ್ರಯತ್ನಿಸಲಾಗಿದೆ. (ESBWR ನಂತಹ) ನಿರಾಶಾದಾಯಕ ಸುರಕ್ಷಿತ ಘಟಕಗಳನ್ನು ನಿರ್ಮಿಸುವುದಕ್ಕೆ ಲಭ್ಯವಿರುತ್ತವೆ. ಇತರ ಪ್ರಕಾರದ ಸಾಕಷ್ಟು ವಿನ್ಯಾಸಗಳು ವಿಶ್ವಾಸಾರ್ಹವಾಗಿರುವುಂತಹಗಳನ್ನು ಪಡೆಯುವುದಕ್ಕೆ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. ಪ್ರಯೋಜನಕಾರಿಯಾಗಬಲ್ಲಂತಹ ವಿದಳನ ಮಾದರಿಯ ರಿಯಾಕ್ಟರುಗಳು ಭವಿಷ್ಯತ್ತಿನಲ್ಲಿ ಸಮ್ಮಿಳನ ರಿಯಾಕ್ಟರ್ ಗಳೊಂದಿಗೆ ಸಂಬಂಧವಿರುವಂತಹ ಹಲವಾರು ಅಪಾಯಗಳನ್ನು ಕಡಿಮೆಗೊಳಿಸುತ್ತದೆ ಅಥವಾ ನಾಶಗೊಳಿಸುತ್ತದೆ.

ಜೀವನ ಚಕ್ರ

ಪರಮಾಣು ಶಕ್ತಿ 
ಯುರೇನಿಯಂ ಗಣಿ ,ಅಭಿವೃದ್ಧಿಪಡಿದಾಗಿನಿಂದ,ಮತ್ತು ಅಣು ಇಂಧನಕ್ಕೆ ತಯಾರು ಮಾಡಿದಾಗಿನಿಂದ ಅಣು ಇಂಧನ ಆವರ್ತ ಆರಂಭವಾಯಿತು,(1)ಇದನ್ನು ಅಣು ಶಕ್ತಿ ಸ್ಥಾವರಕ್ಕೆ ಒದಗಿಸಲಾಯಿತು.ಶಕ್ತಿ ಸ್ಥಾವರಗಳಲ್ಲಿ ಉಪಯೋಗಿಸಿದ ನಂತರ,ಖಾಲಿಯಾದ ಇಂಧನವನ್ನು ಪುನರ್‌ಸಂಸ್ಕರಣ ಸ್ಥಾವರಕ್ಕೆ,(2)ಅಥವಾ ಕೊನೆಯದಾಗಿ ಉಗ್ರಾಣಕ್ಕೆ (3) ಭೂವಿಜ್ಞಾನಕ್ಕೆ ತಕ್ಕಂತೆ ವ್ಯವಸ್ಥೆ ಗೊಳಿಸಲಾಗುವುದು.95% ರಷ್ಟೂ ಖಾಲಿಯಾದ ಇಂಧನವು ಶಕ್ತಿ ಸ್ಥಾವರಕ್ಕೆ ಪುನರ್‌ಸಂಸ್ಕರಣ ಉಪಯೋಗಕ್ಕೆ ಹಿದಿರುಗಬಹುದು (4).

ನ್ಯೂಕ್ಲಿಯರ್ ರಿಯಾಕ್ಟರುಗಳು ಮಾತ್ರ ಅಣುಶಕ್ತಿಯ ಜೀವನಚಕ್ರದ ಭಾಗವಾಗಿರುತ್ತದೆ. ಈ ಪ್ರಕ್ರಿಯೆ ಗಣಿಗಾರಿಕೆಯಿಂದ ಪ್ರಾರಂಭವಾಗುತ್ತದೆ. (ಯುರೇಯನಿಂ ಗಣಿಗಾರಿಕೆ ನೋಡಿ) ಯುರೇನಿಯಂ ಗಣಿಗಳು ಭೂಗರ್ಭದಲ್ಲಿರುತ್ತವೆ, ಮುಕ್ತವಾಗಿರುತ್ತವೆ. ಅಥವ ಇನ್ನೊಂದು ಗಣಿಯ ಹತ್ತಿರವಿರಬಹುದಾಗಿದೆ. ಯಾವುದೇ ಪ್ರಕರಣಗಳಲ್ಲಿ ಹೊರತೆಗೆಯಲಾದ ಯುರೇನಿಯಂ ಅನ್ನು ಸಾಮಾನ್ಯವಾಗಿ ಗಟ್ಟಿಮುಟ್ಟಾದ ಮತ್ತು ಸರಿಹೊಂದುವ ಮಾದರಿಯಂತಹ ಹಳದಿ ಕೇಕ್ ನ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಮತ್ತು ಸಾರಿಗೆ ಸೌಲಭ್ಯದ ಪ್ರಕ್ರಿಯೆಗೆ ಸಾಗಿಸಲಾಗುತ್ತದೆ. ಇಲ್ಲಿ ಹಳದಿ ಕೇಕ್ ಅನ್ನು ಯರೇನಿಯಂ ಹೆಕ್ಸಾಫ್ಲೋರೈಡ್ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಅದನ್ನು ಪುನಃ ವಿವಿಧ ತಂತ್ರಗಳನ್ನು ಉಪಯೋಗಿಸಿ ವೃದ್ಧಿಗೊಳಿಸಲಾಗುತ್ತದೆ. ಶೇ. 0.7 U-235 ಅನ್ನು ಒಳಗೊಂಡಿರುವ ವರ್ಧಿತ ಯುರೇನಿಯಂ ಅನ್ನು ಈ ಹಂತದಲ್ಲಿ ಸರಿಯಾದ ಮಾದರಿಯ ಮತ್ತು ರಚನೆಯನ್ನು ಒಳಗೊಂಡಿರುವ ರಾಡ್ ಗಳನ್ನಾಗಿ ಆಯಾ ರಿಯಾಕ್ಟರ್ ಗಳಿಗೆ ಅನುಗುಣವಾಗಿ ರೂಪಿಸಲಾಗುತ್ತದೆ ಇಂಧನ ರಾಡ್ ರಾಡ್ ಗಳು ಸಾಮಾನ್ಯವಾಗಿ 3 ನಿರ್ವಹಣಾ ಚಕ್ರಗಳನ್ನು ರಿಯಾಕ್ಟರ್ ನ ಒಳಗೆ ಪೂರೈಸುತ್ತದೆ (ಸಾಮಾನ್ಯವಾಗಿ ಇಂದಿನ 6 ವರ್ಷಗಳು). ಸಾಮಾನ್ಯವಾಗಿ ಆ ಸಮಯಕ್ಕೆ ಅವುಗಳಲ್ಲಿನ ಶೇ.3ರಷ್ಟು ಯುರೇನಿಯಂ ಸಮ್ಮಿಳನಕ್ಕೆ ಒಳಪಟ್ಟಿರುತ್ತದೆ. ನಂತರ ಅವುಗಳನ್ನು ವೆಚ್ಚವಾದ ಇಂಧನ ಪೂಲ್ ಗಳಿಗೆ ಕಳುಹಿಸಲಾಗುತ್ತದೆ ಅಲ್ಲಿ ಅಲ್ಪಾವಧಿ ಬಾಳ್ವಿಕೆ ಬರುವ ಸಮ್ಮಿಳನದಿಂದ ಉತ್ಪಾದಿತವಾಗಿರುವ ಐಸೋಟೇಪ್ ಗಳು ಕೊಳೆಯುವಂತೆ ಮಾಡಬಹುದಾಗಿದೆ. ಶೈತ್ಯೀಕರಣ ಮಡುವಿನಲ್ಲಿ ಅಂದಾಜು 5 ವರ್ಷಗಳು ಕಳೆದ ನಂತರ ವೆಚ್ಚವಾಗಿರು ಇಂಧನವು ವಿಕಿರಣವಾಗಿ ಮತ್ತು ಉಷ್ಣತೆಯಾಗಿ ನಿರ್ವಹಿಸುವುದಕ್ಕೆ ಸಮರ್ಥವಿರುವಂತೆ ಆಗುತ್ತದೆ. ಮತ್ತು ಇದನ್ನು ಶುಷ್ಕ ಸಂಗ್ರಹಕ್ಕೆ ಇಲ್ಲವೇ ಪುನರ್ ಸಂಸ್ಕರಣಕ್ಕೆ ಕಳುಹಿಸಬಹುದಾಗಿದೆ.

ಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳು

ಭೂಮಿಯ ಒಳಪದರುಗಳಲ್ಲಿ ಯುರೇನಿಯಂ ಇರುವುದು ಸಾಮಾನ್ಯ ಸಂಗತಿ. ಟಿನ್ ಅಥವ ಜರ್ಮನಿಯಂನಂತೆಯೇ ಯುರೇನಿಯಂ ಕೂಡ ಭೂಮಿಯ ಒಳಪದರುಗಳಲ್ಲಿ ಇರುವುದು ಸಾಮಾನ್ಯ ಸಂಗತಿಯಾಗಿದ್ದು, ಮತ್ತು ಸಾಮಾನ್ಯ ಬೆಳ್ಳಿಗಿಂತ 35 ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಬಹುತೇಕ ಶಿಲೆಗಳು, ದೂಳು ಮತ್ತು ಸಮುದ್ರಗಳಲ್ಲಿ ಯುರೇನಿಯಂ ಇರುತ್ತದೆ. ವಾಸ್ತವಿಕತೆ ಎಂದರೆ, ಯುರೇನಿಯಂ ಸಾಕಷ್ಟು ವಿಸ್ತಾರವಾಗಿ ಹರಡಿಕೊಂಡಿರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಹೆಚ್ಚಾಗಿ ಸಂಗ್ರಹವಿರುವ ಸ್ಥಳಗಳಲ್ಲಿ ಮಾತ್ರ ಆರ್ಥಿಕವಾಗಿ ಸರಿದೂಗಿಸುವಂತಿದ್ದರೆ ಯುರೇನಿಯಂ ಗಣಿಗಾರಿಕೆ ನಡೆಸಲಾಗುತ್ತದೆ. ಆದರೂ ಇಂದಿಗೂ ಅಳತೆ ಮಾಡಲ್ಪಟ್ಟ ಜಗತ್ತಿನ ಯುರೇನಿಯಂ ಸಂಪನ್ಮೂಲಕ್ಕೆ ಹೋಲಿಸಿದಲ್ಲಿ ಪ್ರತಿ ಕಿಲೋ ಗ್ರಾಂ ಯುರೇನಿಯಂಗೆ 130 ಅಮೆರಿಕನ್ ಡಾಲರ್ ವೆಚ್ಚಮಾಡಿದಲ್ಲಿ ಆರ್ಥಿಕವಾಗಿ ಅದನ್ನು ಮರಳಿ ಪಡೆಯಬಹುದಾಗಿದ್ದು ಅದು, ಇಂದಿನ ಬಳಕೆ ಪ್ರಮಾಣದನ್ವಯ ಈ ಶತಮಾನಕ್ಕೆ ಸಾಕಾಗಬಹುದು. ಬಹುತೇಕ ಇತರ ಲೋಹಗಳಿಗಿಂತ ಉನ್ನತ ಮಟ್ಟದ ಪ್ರಮಾಣಬದ್ದತೆಯನ್ನು ಇದು ಪ್ರತಿನಿಧಿಸುತ್ತದೆ. ಇತರ ಘನ ಲೋಹಗಳ ಸಾದೃಶಿಕತೆಯ ಆಧಾರದಲ್ಲಿ ಪ್ರಸ್ತುತ ಮಟ್ಟದಿಂದ ಬೆಲೆಗಳನ್ನು ದ್ವಿಗುಣಗೊಳಿಸುವಿಕೆ ಪ್ರಮಾಣಿತ ಸಂಪನ್ಮೂಲಗಳ ಏರಿಕೆಯನ್ನು ಕಾಲ ಕಳೆದಂತೆ ಪ್ರಸ್ತುತ ಮಟ್ಟದಿಂದ ಹತ್ತು ಪಟ್ಟು ಎರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅಣುಶಕ್ತಿಯ ವಿದ್ಯುತ್ ವೆಚ್ಚನ ಬಹುತೇಕ ಭಾಗವು ಆ ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಇರುತ್ತದೆ. ಆದ್ದರಿಂದ ವಿದ್ಯುತ್ ಉತ್ಪಾದನೆಗೆ ತಗುಲುವ ವೆಚ್ಚದಲ್ಲಿ ಒಟ್ಟಾರೆ ಇಂಧನದ ಕೊಡುಗೆಯು ಅತ್ಯಂತ ಕಡಿಮೆಯಾಗಿದೆ. ಕಡಿಮೆಯಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಏರಿಳಿತವಾಗುವುದು ಕೂಡ ಅಂತಿಮ ಬೆಲೆಯ ಮೇಲೆ ಅತ್ಯಂತ ಕಡಿಮೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಯುರೇನಿಂಯನ ಮಾರುಕಟ್ಟೆ ಬೆಲೆಯನ್ನು ದ್ವಿಗುಣಗೊಳಿಸಿದಲ್ಲಿ ಮೃದು ನೀರಿನ ಇಂಧನ ವೆಚ್ಚವನ್ನು ಶೇ. 26ರಷ್ಟು ಮತ್ತು ವಿದ್ಯುತ್ ವೆಚ್ಚವನ್ನು ಶೇ. 7ರಷ್ಟು ಹೆಚ್ಚಿಸಬಹುದು. ಅದೇ ರೀತಿ ನೈಸರ್ಗಿಕ ಅನಿಲದ ಬೆಲೆ ದ್ವಿಗುಣವಾದಲ್ಲಿ ಆ ಮೂಲದಿಂದ ಉತ್ಪಾದಿತವಾಗುವ ವಿದ್ಯುತ್ ಬೆಲೆಯನ್ನು ಶೇ.70ರಷ್ಟು ಹೆಚ್ಚಿಸಬಹುದು. ಅತಿಯಾದ ಬೆಲೆಯಲ್ಲಿ ಕೂಡ ಗ್ರಾನೈಟ್ ಮತ್ತು ಸಮುದ್ರದಾಳದ ಮೂಲಗಳಿಂದ ಉತ್ಖನನ ಮಾಡಿದರೂ ಅದು ಆರ್ಥಿಕವಾಗಿ ಭಾರವಿಲ್ಲದ್ದಾಗಿರುತ್ತದೆ.

ಸದ್ಯದ ಮೃದು ನೀರಿನ ರಿಯಾಕ್ಟರಗಳು ಅಣು ಇಂಧನದ ಉಪಯೋಗವನ್ನು ಅಸಮರ್ಪಕವಾಗಿ ಮಾಡುತ್ತಿವೆ. ಯುರೇನಿಯಂ-235 ಐಸೋಟೇಪ್ ನ ಸಮ್ಮಿಳನವು ಅತ್ಯಂತ ವಿರಳವಾಗಿದೆ. ನ್ಯೂಕ್ಲಿಯರ್ ಪುನರ್ ಸಂಸ್ಕರಣೆಯು ಈ ತ್ಯಾಜ್ಯವನ್ನು ಮರಳಿ ಉಪಯೋಗಿಸುವಂತೆ ಮಾಡಬಲ್ಲುದಾಗಿದೆ ಮತ್ತು ರಿಯಾಕ್ಟರುಗಳ ದಕ್ಷ ವಿನ್ಯಾಸವು ಲಭ್ಯವಿರುವ ಸಂಪನ್ಮೂಲಗಳ ಅತ್ಯ್ತುತ್ತಮ ಉಪಯೋಗಕ್ಕೆ ಅವಕಾಶ ಕಲ್ಪಿಸುತ್ತದೆ.

ತಳಿ ಬೆಳೆಸುವಿಕೆ

ಯುರೇನಿಯಂ -235 ( ಎಲ್ಲ ನೈಸರ್ಗಿಕ ಯುರೇನಿಂಯನ ಶೇ.7 ) ಉಪಯೋಗಿಸುವ ಮೃದು ನೀರಿನ ರಿಯಾಕ್ಟರುಗಳಿಗೆ ವಿರೋಧಿಸಿದಂತೆ ಫಾಸ್ಟ್ ಬ್ರೀಡರ್ ರಿಯಾಕ್ಟರುಗಳು ಯುರೇನಿಯಂ-238ನ್ನು (ಎಲ್ಲ ನೈಸರ್ಗಿಕ ಯುರೇನಿಯಂನ ಶೇ. 99.3ನ)ಉಪಯೋಗಿಸುತ್ತವೆ. ಈ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬೇಕಾಗುವ ಯುರೇನಿಯಂ-238 ಅಂದಾಜು 5 ಬಿಲಿಯನ್ ಸಾವಿರ ವರ್ಷಗಳಿಗೆ ಆಗುವಷ್ಟು ಲಭ್ಯವಿದೆ ಎಂದು ಅಂದಾಜಿಸಲಾಗಿದೆ.

ಬ್ರೀಡರ್ ತಂತ್ರಜ್ಞಾನವನ್ನು ಹಲವಾರು ರಿಯಾಕ್ಟರುಗಳಲ್ಲಿ ಉಪಯೋಗಿಸಲಾಗುತ್ತದೆ.ಆದರೆ, ಸುರಕ್ಷಿತವಾಗಿ ಯುರೇನಿಯಂ ಪುನರ್ ಸಂಸ್ಕರಣೆಗೆ ಭಾರಿ ಪ್ರಮಾಣದಲ್ಲಿ ವೆಚ್ಚವಾಗುತ್ತದೆ. ಆರ್ಥಿಕವಾಗಿ ಸಮರ್ಥಿಸಿಕೊಳ್ಳಲೇಬೇಕಾದ ಯುರೇನಿಯಂ ಬೆಲೆ ಪ್ರತಿ ಕಿಲೋ ಗ್ರಾಂಗೆ 200 ಅಮೆರಿಕನ್ ಡಾಲರ್ ಆಗುತ್ತದೆ. ಡಿಸೆಂಬರ್ 2005ರ ಪ್ರಕಾರ, ರಷಿಯಾದ ಬೆಲೊಯಾರ್ಸ್ಕ್ ನ ಬಿಎನ್-600 ಬ್ರೀಡರ್ ರಿಯಾಕ್ಟರ್ ಮಾತ್ರ ವಿದ್ಯುತ್ ಉತ್ಪಾದಿಸುತ್ತಿದೆ ಬಿಎನ್-600 ವಿದ್ಯುತ್ ಉತ್ಪಾದನೆ ಪ್ರಮಾಣವು 600 ಮೇಗಾವ್ಯಾಟ್ ಇದೆ. ರಷಿಯಾ ಇನ್ನೊಂದು ಬಿಎನ್-800 ರಿಯಾಕ್ಟರ್ ಅನ್ನು ಬೆಲೊಯಾರ್ಸ್ಕ್ ನಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಹಾಗಯೇ ಜಪಾನ್ ನ ಮೋಂಜು ರಿಯಾಕ್ಚರ್ ಪುನರ್ ಪ್ರಾರಂಭಿಸುವುದಕ್ಕೆ ಯೋಜಿಸಲಾಗಿದೆ.(1995ರಿಂದ ಮುಚ್ಚಲ್ಪಟ್ಟಿದ್ದ) ಭಾರತ ಮತ್ತು ಚೀನಾಗಳು ಎರಡೂ ಬ್ರೀಡರ್ ರಿಯಾಕ್ಟರ್ ಗಳನ್ನು ಸ್ಧಾಪಿಸುವುದಕ್ಕೆ ಉದ್ದೇಶಿಸಿವೆ.

ಇನ್ನೊಂದು ಪರ್ಯಾಯ ಬಳಕೆ ಎಂದರೆ, ಥೋರಿಯಂ ಇಂಧನ ಚಕ್ರದಲ್ಲಿ ಸಮ್ಮಿಳನ ಇಂಧನವಾಗಿ ಥೋರಿಯಂನ ತಳಿಯಿಂದ ಯುರೇನಿಯಂ-233 ಆಗಿದೆ. ಭೂಮಿಯ ಒಳಪದರುಗಳಲ್ಲಿ ಯುರೇನಿಂಯನಷ್ಟೆ ಸಾಮಾನ್ಯವಾಗಿ 3.5 ಪಟ್ಟು ಇದ್ದು ಮತ್ತು ವೈವಿಧ್ಯಮಯವಾದ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ಇದು ಒಟ್ಟಾರೆ ಪ್ರಾಯೋಗಿಕ ಸಮ್ಮೀಳನಕ್ಕೆ ಶೇ. 450 ರಷ್ಟು ಆಧಾರವನ್ನು ವಿಸ್ತರಿಸಲಿದೆ. ಪ್ಲುಟೋನಿಯಂನೊಳಗೆ U-238 ಬ್ರೀಡಿಂಗ್ ನಂತೆ ಅಲ್ಲದೇ ಇದಕ್ಕೆ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅಗತ್ಯವಿಲ್ಲ. ಇದನ್ನು ಹೆಚ್ಚು ಸಾಂಪ್ರದಾಯಿಕ ಘಟಕಗಳಲ್ಲಿ ತೃಪ್ತಿಕರವಾಗಿ ನಿರ್ವಹಿಸಬಹುದಾಗಿದೆ. ಭಾರತ ಈ ತಂತ್ರಜ್ಞಾನದತ್ತ ಗಮನಹರಿಸಿದ್ದು, ಎಕೆಂದರೆ ಇದು ಹೇರಳವಾದ ಥೋರಿಯಂ ಸಂಗ್ರಹವನ್ನು ಹೊಂದಿದ್ದು. ಕಡಿಮೆ ಯುರೇನಿಯಂ ಪ್ರಮಾಣ ಕಡಿಮೆ ಇದೆ

ಶಕ್ತಿಯ ಆಕರ

ಸಾಮಾನ್ಯವಾಗಿ ವಿದಳನ ಶಕ್ತಿಯು ಡ್ಯೂಯೇಟರಿಯಂ ಅಥವ ಟ್ರಟಿಯಂ, ಹೈಡ್ರೋಜನ್ ನ ಎರಡೂ ಐಸೋಟೇಪ್ ಗಳನ್ನು ಇಂಧನವಾಗಿ ಮತ್ತು ಸದ್ಯದ ವಿನ್ಯಾಸಗಳಲ್ಲಿ ಕೂಡ ಲಿಥಿಯಂ ಮತ್ತು ಬೋರೋನ್ ಅನ್ನು ಉಪಯೋಗಿಸುವುದಕ್ಕೆ ಅನುಮೋದಿಸುತ್ತದೆ. ಇಂದಿನ ಜಾಗತಿಕ ಉತ್ಪಾದನೆ ವಿದಳನ ಶಕ್ತಿಗೆ ಸಮವಾಗಿ ಇದೆ ಮತ್ತು ಭವಿಷ್ಯತ್ತಿನಲ್ಲಿ ಇದು ಹೆಚ್ಚಳವಾಗುವುದಿಲ್ಲ ಎಂದು ಭಾವಿಸಿದಲ್ಲಿ, ತಿಳಿದಿರುವ ಪ್ರಕಾರ ಇರುವ ಲಿಥಿಯಂ ಸಂಗ್ರಹ 3000 ವರ್ಷಗಳವರೆಗೆ ಸಾಲುತ್ತದೆ. ಸಮುದ್ರದ ನೀರಿನಿಂದ ಪಡೆಯಲಿರುವ ಲಿಥಿಯಂ 60 ಮಿಲಿಯನ್ ವರ್ಷಗಳಿಗೆ ಆಗುವಷ್ಟು ಇದೆ. ಮತ್ತು ಸಮುದ್ರದ ನೀರಿನಿಂದ ಬರುವ ಡ್ಯೂಯೆಟೆರಿಯಂ ಅನ್ನು ಸಂಕೀರ್ಣ ವಿದಳನ ಪ್ರಕ್ರಿಯೆ ಉಪಯೋಗಿಸಿದಲ್ಲಿ 150 ಬಿಲಿಯನ್ ವರ್ಷಗಳಿಗೆ ಆಗುವಷ್ಟು ಇದೆ. ದಾಗ್ಯೂ ಈ ಪ್ರಕ್ರಿಯೆ ಇನ್ನೂ ಕಾರ್ಯರೂಪದಲ್ಲಿ ಬರಬೇಕಿದೆ. ಹಲವಾರು ಪರಿಣತರು ಮತ್ತು ನಾಗರಿಕರು ವಿದಳನ ಶಕ್ತಿಯು ಉತ್ಪಾದಿತ ತ್ಯಾಜ್ಯಗಳಿಂದ ಬರುವ ವಿಕಿರಣದ ಅಲ್ಪಾಯುಷ್ಯ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಹೊರಸೂಸುವಿಕೆ ಮತ್ತು ಭವಿಷ್ಯತ್ತಿನಲ್ಲಿ ವಿದ್ಯುತ್ ಉತ್ಪಾದಿಸುವ ಕಾರಣದಿಂದಾಗಿ ಭರವಸೆಯ ಶಕ್ತಿಯ ಮೂಲ ಎಂದು ಭಾವಿಸಲಾಗಿದೆ.

ಘನ ತ್ಯಾಜ್ಯ

ಅಣು ವಿದ್ಯುತ್ ಉತ್ಪಾದನಾ ಘಟಕಗಳಿಂದ ಬರುವ ಪ್ರಮುಖ ತ್ಯಾಜ್ಯ ಎಂದರೆ ವೆಚ್ಚವಾಗಿರುವ ಅಣು ಇಂಧನ. ಮುಖ್ಯವಾಗಿ ಇದು ಪರಿವರ್ತಿತವಾಗದ ಯುರೇನಿಯಂ ಸೇರಿದಂತೆ ಟ್ರಾನ್ಸುರಾನಿಕ್ ಅಕ್ಟಿನೈಡ್ಸ್ (ಬಹುತೇಕ ಪ್ಲುಟೋನಿಯಂ ಮತ್ತು ಕ್ಯೂರಿಯಂ) ಇದಲ್ಲದೆ, ಅಂದಾಜು ಶೇ. 3ರಷ್ಟು ನ್ಯೂಕ್ಲಿಯರ್ ರಿಯಾಕ್ಟರ್ ಗಳಿಂದ ಉತ್ಪನ್ನವಾಗುವ ಸಮ್ಮಿಳನ ಉತ್ಪನ್ನಗಳು ಅಕ್ಟಿನೈಡ್ಸ್ (ಯುರೇನಿಯಂ, ಪ್ಲುಟೋನಿಯಂ ಮತ್ತು ಕ್ಯೂರಿಯಂ ಸಾಕಷ್ಟು ಪ್ರಮಾಣದಲ್ಲಿ ದೀರ್ಘಾವಧಿಯ ವಿಕಿರಣಕ್ಕೆ ಜವಾಬ್ದಾರಿಯಾಗಿರುತ್ತವೆ. ಅದೇ ಸಮ್ಮಿಳನ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಅಲ್ಪಾವಧಿಯ ವಿಕಿರಣಕ್ಕೆ ಕಾರಣವಾಗಿರುತ್ತವೆ

ಉನ್ನತ ಮಟ್ಟದಲ್ಲಿನ ವಿಕಿರಣ ತ್ಯಾಜ್ಯ

ನ್ಯೂಕ್ಲಿಯರ್ ರಿಯಾಕ್ಟರ್ ನಲ್ಲಿ ನ್ಯೂಕ್ಲಿಯರ್ ಇಂಧನದ ರಾಡ್ ಅಂದಾಜು ಶೇ. 5ರಷ್ಟು ಪ್ರತಿಕ್ರಿಯಿಸಿದಲ್ಲಿ ರಾಡ್ ಅನ್ನು ಇಂಧನ ರೂಪದಲ್ಲಿ ಉಪಯೋಗಿಸುವುದು ಸಾಧ್ಯವಿಲ್ಲ. (ಸಮ್ಮಿಳನ ಉತ್ಪನ್ನಗಳ ನಿರ್ಮಾಣದ ರೀತಿಯ ಕಾರಣ) ಕಾರಣ) ಇಂದು ವಿಜ್ಞಾನಿಗಳು ಈ ರಾಡ್ ಗಳನ್ನು ಹೇಗೆ ಪುನರ್ ನವೀಕರಿಸುವ ಮೂಲಕ ತ್ಯಾಜ್ಯ ಕಡಿಮೆಗೊಳಿಸುವುದು ಮತ್ತು ಉಳಿದಿರುವ ಆಕ್ಟಿನೈಡ್ಸ್ ನ್ನು ಇಂಧನವಾಗಿ ಹೇಗೆ ಉಪಯೋಗಿಸುವುದು ಎಂದು ಪ್ರಯೋಗ ನಡೆಸಿದ್ದಾರೆ.(ಹಲವಾರು ದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪುನರ್ ಸಂಸ್ಕರಣೆ ನಡೆಸಲಾಗುತ್ತಿದೆ.)

1000 ಮೆಗಾ ವ್ಯಾಟ್ ನ್ಯೂಕ್ಲಿಯರ್ ರಿಯಾಕ್ಚರ್ ಪ್ರತಿವರ್ಷ ಅಂದಾಜು 20 ಘನ ಮೀಟರ್ (ಅಂದಾಜು 27 ಟನ್) ವೆಚ್ಚವಾದ ಇಂಧನವನ್ನು ಉತ್ಪಾದಿಸುತ್ತದೆ. (ಅದರೆ 3 ಘನ ಮೀಟರ್ ಪರಿವರ್ತಿತ ಪ್ರಮಾಣವನ್ನು ಮಾತ್ರ ಪುನರ್ ಸಂಸ್ಕರಣೆಗೆ ಒಳಪಡಿಸಬಹುದಾಗಿದೆ.) ಅಮೆರಿಕದಲ್ಲಿನ ಎಲ್ಲ ವಾಣಿಜ್ಯೋದ್ದೇಶದ ಅಣುಶಕ್ತಿ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸಿರುವ ವೆಚ್ಚವಾದ ಇಂಧನದಿಂದ ಒಂದು ಫುಟ್ಬಾಲ್ ಮೈದಾನ ತುಂಬ ಒಂದು ಮೀಟರ್ ಎತ್ತರದ ಪ್ರಮಾಣದಲ್ಲಿ ಹರಡುತ್ತದೆ.

ಪ್ರಾರಂಭದಲ್ಲಿ ವೆಚ್ಚವಾದ ಇಂಧನವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಸೂಸುವ ಕಾರಣ ಅತಿ ಎಚ್ಚರಿಕೆಯಿಂದ ಮತ್ತು ದೂರದೃಷ್ಟಿಗೆ ಅನುಗುಣವಾಗಿ ನಿರ್ವಹಿಸಬೇಕಾಗುತ್ತದೆ. ನಂತರದ ಸಾವಿರ ವರ್ಷಗಳ ನಂತರ ಕಡಿಮೆ ವಿಕಿರಣ ಸೂಸುತ್ತದೆ. . ಕಾರ್ಯಾಚರಣೆಯಿಂದ ತೆಗೆದ ತಕ್ಷಣ ಇದ್ದ ವೆಚ್ಚವಾದ ಇಂಧನದ ವಿಕಿರಣ ಹೊರಸೂಸುವಿಕೆ 40 ವರ್ಷಗಳ ನಂತರ ಶೇ. 99.9 ರಷ್ಟು ಕಡಿಮೆಯಾಗಿರುತ್ತದೆ. ಆದಾಗ್ಯೂ ಕೂಡ ಆ ಸಮಯದಲ್ಲಿ ಕೂಡ ವಿಕಿರಣತೆಯು ಅಪಾಯಕಾರಿಯಾಗಿರುತ್ತದೆ. 10,000 ವರ್ಷಗಳ ನಂತರ ವಿಕಿರಣೆತೆಯು ನಾಶವಾಗಿ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಯಾವುದೇ ರೀತಿಯ ಧಕ್ಕೆ ತರುವುದಿಲ್ಲ ಎಂದು ಅಮೆರಿಕದ ಪರಿಸರ ಸಂರಕ್ಷಣೆ ಪ್ರಾಧಿಕಾರ ಹೇಳುತ್ತದೆ.[ಸೂಕ್ತ ಉಲ್ಲೇಖನ ಬೇಕು]

ವೆಚ್ಚವಾದ ಇಂಧನದ ರಾಡ್ ಗಳನ್ನು ಮೊದಲು ತೆಗೆದ ನಂತರ ಸಾಮಾನ್ಯವಾಗಿ ಘಟಕದಲ್ಲಿರುವ ಮುಚ್ಚಲ್ಪಟ್ಟ ನೀರಿನ ಕೊಳಾಯಿಗಳಲ್ಲಿ (ವೆಚ್ಚವಾದ ಇಂಧನ ಪೂಲ್) ಸಂಗ್ರಹಿಸಲಾಗುತ್ತದೆ. ಈ ನೀರು ನಾಶವಾಗುತ್ತಿರುವ ಸಮ್ಮೀಳನ ಉತ್ಪನ್ನಗಳಿಗೆ ತಂಪನ್ನು ಮತ್ತು ನಿರಂತರವಾಗಿ ಹೊರಸೂಸುವ ವಿಕಿರಣವನ್ನು ತಡೆಯುವ ಕಾರ್ಯವನ್ನು ನಿರ್ವಹಿಸುತ್ತವೆ. ಕೆಲವು ಸಮಯದ ನಂತರ (ಸಾಮಾನ್ಯವಾಗಿ ಅಮೆರಿಕದ ಘಟಕಗಳಲ್ಲಿ 5 ವರ್ಷ) ಕಡಿಮೆ ವಿಕಿರಣವನ್ನು ಹೊಂದಿರುವ ಇಂಧನವನ್ನು ಸಂಗ್ರಹಾಗಾರ ಅಥವ ಕಾಸ್ಕ್ ಸ್ಟೋರೆಜ್ ಗೆ ವರ್ಗಾಯಿಸಲಾಗುತ್ತದೆ.ಅಲ್ಲಿ ಇಂಧನವನ್ನು ಸ್ಟೀಲ್ ಮತ್ತು ಕಾಂಕ್ರಿಟ್ ಕಂಟೈನರ್ ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಸದ್ಯ ಅಮೆರಿಕದಲ್ಲಿ ತ್ಯಾಜ್ಯವನ್ನು ವಿದ್ಯುತ್ ಉತ್ಪಾದಿಸುವ ಸ್ಥಳದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದೇ ವೇಳೆ ಸುಸ್ಥಿರವಾದ ಮತ್ತು ಶಾಶ್ವತವಾದ ವಿಲೇವಾರಿ ಕುರಿತು ಚರ್ಚಿಸಲಾಗುತ್ತಿದೆ.

2007ರ ಪ್ರಕಾರ ಅಮೆರಿಕ 50,000 ಮೆಟ್ರಿಕ ಟನ್ ವೆಚ್ಚವಾದ ಇಂಧನವನ್ನು ಅದರ ನ್ಯೂಕ್ಲಿಯರ್ ರಿಯಾಕ್ಟರ್ ಗಳಿಂದ ಸಂಗ್ರಹಿಸಿದೆ. ಭೂತಳದಲ್ಲಿ ಶಾಶ್ವತ ಸಂಗ್ರಹಾಗಾರವನ್ನು ಅಮೆರಿಕದ ಯುಕ್ಕಾ ಬೆಟ್ಟದ ನ್ಯೂಕ್ಲಿಯರ್ ರಿಪಾಸಿಟರಿಯಲ್ಲಿ ಮಾಡುವುದಕ್ಕೆ ಉದ್ದೇಶಿಸಲಾಗಿದೆ. ಆದರೆ ಆ ಯೋಜನೆಯನ್ನು ಪರಿಣಾಮಕಾರಿಯಾಗಿ ರದ್ದುಪಡಿಸಲಾಗಿದೆ. ಅಮೆರಿಕದ ಉನ್ನತ ಮಟ್ಟದ ತ್ಯಾಜ್ಯದ ಶಾಶ್ವತ ವಿಲೇವಾರಿಯು ಇಂದಿಗೂ ಪರಿಹರಿಸಲಾಗದ ರಾಜಕೀಯ ಸಮಸ್ಯೆಯಾಗಿದೆ.

ಹಲವಾರು ಮಾರ್ಗಗಳಲ್ಲಿ ಉನ್ನತ ಮಟ್ಟದ ತ್ಯಾಜ್ಯವನ್ನು ಕಡಿಮೆಗೊಳಿಸಬಹುದಾಗಿದೆ. ವಿಶೇಷವಾಗಿಪರಮಾಣು ಪುನರ್ ಸಂಸ್ಕರಣ ಅದು ಅಲ್ಲದೇ. ಒಂದು ವೇಳೆ ಅಕ್ಟಿನೈಡ್ ಗಳನ್ನು ತೆಗೆದು ಹಾಕಿದಲ್ಲಿ ಉಳಿದ ತ್ಯಾಜ್ಯದಲ್ಲಿ ಕೂಡ 300 ವರ್ಷಗಳ ಕಾಲ ವಿಕಿರಣವಿರುತ್ತದೆ. ಒಂದು ವೇಳೆ ಆ‍ಯ್‌ಕ್ಟಿನೈಡ್‌ ಗಳನ್ನು ಹಾಗಯೇ ಉಳಿಸಿದಲ್ಲಿ ಸಾವಿರ ವರ್ಷಗಳ ಕಾಲ ಇರಬಲ್ಲದು.[ಸೂಕ್ತ ಉಲ್ಲೇಖನ ಬೇಕು] ಎಲ್ಲಾ ಆ‍ಯ್‌ಕ್ಟಿನೈಡ್‌ಗಳ ಬೇರ್ಪಡಿಸುವಿಕೆ, ಮತ್ತು ಕೆಲವು ಹೆಚ್ಚು ಕಾಲ-ಉಳಿದ ಆ‍ಯ್‌ಕ್ಟಿನೈಡ್‌ಗಳು ಅಲ್ಲದವುಗಳನ್ನು ಸಹಾ ಮಾರ್ಪಡಿಸುವಿಕೆ ಮೂಲಕ ನಾಶಗೊಳಿಸಲು ಫಾಸ್ಟ್ ಬ್ರೀಡರ್ ರಿಯಾಕ್ಟರುಗಳ ಬಳಕೆ ಮಾಡಿದರೂ, ತ್ಯಾಜ್ಯವನ್ನು ಕೆಲವು ನೂರು ವರ್ಷಗಳವರೆಗೆ ಪರಿಸರದಿಂದ ದೂರವಿರಿಸಲೇ ಬೇಕಾಗುತ್ತದೆಯಾದ್ದರಿಂದ ಅದನ್ನು ದೀರ್ಘಕಾಲದ ಸಮಸ್ಯೆ ಎಂದು ವಿಭಾಗ ಮಾಡಲಾಗುತ್ತದೆ. ಸಬ್‌ಕ್ರಿಟಿಕಲ್ ರಿಯಾಕ್ಟರುಗಳು ಅಥವಾ ಸಮ್ಮಿಳನ ರಿಯಾಕ್ಟರುಗಳುಗಳು ಸಹಾ ತ್ಯಾಜ್ಯ ಸಂಗ್ರಹದ ಸಮಯವನ್ನು ಕಡಿಮೆಗೊಳಿಸುತ್ತವೆ. ಒಂದು ವಾದವೆಂದರೆ[who?], ಅಣು ತ್ಯಾಜ್ಯಕ್ಕೆ ಅತ್ಯಂತ ಉತ್ತಮವಾದ ಪರಿಹಾರವೆಂದರೆ ಅವುಗಳನ್ನು ಭೂಮಿಯ ಮೇಲ್ಮೈಯಲ್ಲಿಯೇ ತಾತ್ಕಾಲಿಕವಾಗಿ ಸಂಗ್ರಹಿಸುವುದು. ಏಕೆಂದರೆ ತಂತ್ರಜ್ಞಾನ ವೇಗದಲ್ಲಿ ಬೆಳೆಯುತ್ತಿರುವುದರಿಂದ ಅವುಗಳಿಗೆ ಪರಿಹಾರ ದೊರೆಯಬಹುದಾಗಿದೆ. ಕೆಲವರ ಪ್ರಕಾರ ಈಗಿನ ತ್ಯಾಜ್ಯವು ಭವಿಷ್ಯದಲ್ಲಿ ಮೌಲಿಕವಾದ ಬಳಕೆಯ ಮೂಲವಾಗಬಹುದು[ಸೂಕ್ತ ಉಲ್ಲೇಖನ ಬೇಕು].

2007ರಲ್ಲಿ ಪ್ರಸಾರವಾದ 60 ನಿಮಿಷಗಳ ಕಥೆಯೊಂದರ ಪ್ರಕಾರ, ಅಣು ವಿದ್ಯುತ್ ಶಕ್ತಿಯು ಯಾವುದೇ ಔದ್ಯಮಿಕ ದೇಶಗಳಿಗಿಂತ ಸ್ವಚ್ಛವಾದ ವಾತಾವರಣ ಮತ್ತು ಎಲ್ಲ ಯುರೋಪ್ ಗೆ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಅನ್ನು ಫ್ರಾನ್ಸ್ ನೀಡುತ್ತದೆ. ಹೆಚ್ಚು ಶಕ್ತಿಯನ್ನು ಉತ್ಪಾದಿಸುವುದಕ್ಕೆ ಮತ್ತು ಘನವನ್ನು ಕಡಿಮೆ ಮಾಡುವುದಕ್ಕೆ ಫ್ರಾನ್ಸ್ ತನ್ನ ಅಣು ತ್ಯಾಜ್ಯವನ್ನು ಪುನರ್ ಸಂಸ್ಕರಣಗೊಳಿಸುತ್ತದೆ. ಆದರೆ ಲೇಖನವು ಇಂದು ನಾವು ತ್ಯಾಜ್ಯ ಸಂಗ್ರಹಿತ ಕಂಟೈನರ್ ಗಳನ್ನು ವಿಜ್ಞಾನಿಗಳಿಗೆ ಹೇಗೆ ವಿಷವನ್ನು ಕಡಿಮೆಗೊಳಿಸುವುದು ಮತ್ತು ನಾಶಗೊಳಿಸುವುದಕ್ಕೆ ಗೊತ್ತಿಲ್ಲದ ಕಾರಣ ಸಂಗ್ರಹಿಸುತ್ತಿದ್ದೇವೆ. ಆದರೆ.ಬಹುಶಃ 100 ವರ್ಷಗಳ ನಂತರ ವಿಜ್ಞಾನಿಗಳು ಇದನ್ನು ಮಾಡಬಹುದು. ಅಣು ತ್ಯಾಜ್ಯವು ಇಂದಿಗೂ ಬಹಶಷ್ಟು ಕಠಿಣವಾದ ರಾಜಕೀಯ ಸಮಸ್ಯೆಯಾಗಿದ್ದು. ಇಲ್ಲಿಯವರೆಗೆ ಯಾವುದೇ ದೇಶ ಅದನ್ನು ಪರಿಹರಿಸಿಲ್ಲ. ಅಣು ಉದ್ಯಮದ ಪರಿಹಾರವಾಗದ ಸಮಸ್ಯೆ ಎಂದು ಇದನ್ನು ಹೇಳಬಹುದಾಗಿದೆ. ಒಂದು ವೇಳೆ ಫ್ರಾನ್ಸ್ ಇದನ್ನು ಪರಿಹರಿಸಲು ಸಾಧ್ಯವಾಗದಿದ್ದಲ್ಲಿ, ಹಾಗಿದ್ದರೆ ನಮ್ಮ ಅಣು ಕಾರ್ಯಕ್ರಮವನ್ನು ಹೇಗೆ ಮುಂದುವರಿಸಬಹುದು ಎನ್ನುವ ಕಾಣುತ್ತಿಲ್ಲ ಎನ್ನುತ್ತಾರೆ ಮಂಡಿಲ್. ಇದಲ್ಲದೆ, ಯುನಿಯನ್ ಆಫ್ ಕಾನ್ಸರ್ನಡ್ ಸೈಂಟಿಸ್ಟ್ ನಂತಹ ಸಂಘಟನೆಗಳು ಪುನರ ಸಂಸ್ಕರಣೆಯನ್ನು ಟೀಕಿಸುತ್ತವೆ.

ಕೆಳಮಟ್ಟದ ವಿಕಿರಣ ತ್ಯಾಜ್ಯ

ಅಣುಶಕ್ತಿ ಉದ್ಯಮ ಕೂಡ ಬೃಹತ್ ಪ್ರಮಾಣದಲ್ಲಿ ಕೆಳಮಟ್ಟದಲ್ಲಿ ಬಟ್ಟೆಗಳು, ಕೈ ಉಪಕರಣಗಳು, ನೀರು ಶುದ್ಧೀಕರಣದ ರೇಸಿನ್ ಗಳು ಮತ್ತು ರಿಯಾಕ್ಟರ್ ನಿರ್ಮಿಸಲು ಉಪಯೋಗಿಸಿದ ಸಾಮಗ್ರಿಗಳನ್ನು ಒಳಗೊಂಡಿರುವ ವಿಕಿರಣ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಅಮೆರಿಕದಲ್ಲಿ ನ್ಯೂಕ್ಲಿಯರ್ ರೆಗ್ಯೂಲೇಟರಿ ಕಮಿಷನ್ ಪದೇ ಪದೇ ಕೇಳಮಟ್ಟದ ಸಾಮಗ್ರಿಗಳನ್ನು ಸಾಮಾನ್ಯ ತ್ಯಾಜ್ಯದ ರೂಪದಲ್ಲಿ ಪರಿಗಣಿಸಿ, ಭೂಮಿಯಲ್ಲಿ ಹೂಳುವುದಕ್ಕೆ, ಗ್ರಾಹಕರ ಸಾಮಗ್ರಿ ಇತ್ಯಾದಿಗಳಲ್ಲಿ ಉಪಯೋಗಿಸುವುದಕ್ಕೆ ಪ್ರಯತ್ನಿಸಿದೆ. ಬಹುತೇಕ ಹೆಚ್ಚಿನ ಕೆಳಮಟ್ಟದ ತ್ಯಾಜ್ಯವು ಅತ್ಯಂತ ಕಡಿಮೆ ಪ್ರಮಾಣದ ವಿಕಿರಣವನ್ನು ಹೊರಸೂಸುತ್ತದೆ ಮತ್ತು ಅದರ ಇತಿಹಾಸದ ಕಾರಣ ಅದನ್ನು ಕೇವಲ ವಿಕಿರಣ ತ್ಯಾಜ್ಯ ಎಂದು ಗುರುತಿಸಲಾಗುತ್ತದೆ.

ಔದ್ಯಮಿಕ ವಿಷಯುಕ್ತ ತ್ಯಾಜ್ಯದೊಂದಿಗೆ ವಿಕಿರಣ ತ್ಯಾಜ್ಯದ ಹೋಲಿಕೆ

ಅಣುಶಕ್ತಿಯನ್ನು ಹೊಂದಿರುವ ರಾಷ್ಟ್ರಗಳ ಒಟ್ಟು ಔದ್ಯಮಿಕ ವಿಷಯುಕ್ತ ತ್ಯಾಜ್ಯದಲ್ಲಿ ಶೇ. 1ರಷ್ಟನ್ನು ಮಾತ್ರ ವಿಕಿರಣ ತ್ಯಾಜ್ಯ ಒಳಗೊಂಡಿದ್ದು, ಅದರಲ್ಲಿ ಅಪಾಯಕಾರಿಯಾಗಿರುವ ಬಹಳಷ್ಟು ಅನಿರ್ಧಿಷ್ಟವಾಗಿ ಹಾಗೆಯೇ ಉಳಿದುಕೊಂಡಿದೆ. ಒಟ್ಟಾರೆ, ಅಣುಶಕ್ತಿ ಉದ್ಯಮವು ನಾಶವಾಗುವ ಇಂಧನ ಮೂಲ ಆಧಾರಿತ ಘಟಕಗಳು ಉತ್ಪಾದಿಸುವ ತ್ಯಾಜ್ಯದ ಪ್ರಮಾಣಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುತ್ತದೆ. ವಿಶೇಷವಾಗಿ ಕಲ್ಲಿದ್ದಲು ಸುಡುವ ಘಟಕಗಳು ಬೃಹತ್ ಪ್ರಮಾಣದಲ್ಲಿ ವಿಷ ಮತ್ತು ಕಡಿಮೆ ಪ್ರಮಾಣದಲ್ಲಿ ವಿಕಿರಣ ಬೂದಿಯನ್ನು ನೈಸರ್ಗಿಕ ಲೋಹಗಳ ಸಂಗ್ರಹ ಮತ್ತು ಕಲ್ಲಿದ್ದಲಿನಲ್ಲಿರುವ ಸಣ್ಣ ಪ್ರಮಾಣದ ವಿಕಿರಣ ಉತ್ಪಾದಿಸುತ್ತವೆ ಎಂದು ಗುರುತಿಸಲಾಗಿದೆ. ಓಕ್ ರಿಡ್ಜ್ ನ್ಯಾಷನಲ್ ಲ್ಯಾಬರೋಟರಿ ಇತ್ತೀಚೆಗೆ ನಡೆಸಿದ ಸಂಶೋಧನೆ ವರದಿಯು ವಾಸ್ತವಿಕವಾಗಿ ಕಲ್ಲಿದ್ದಲು ಶಕ್ತಿಯು ನ್ಯೂಕ್ಲಿಯರ್ ಶಕ್ತಿ ಕಾರ್ಯಾಚರಣೆಗಿಂತ ಹೆಚ್ಚಿನ ಪರಿಣಾಮಕಾರಿ ಪ್ರಮಾಣ ಪ್ರಮಾಣದಲ್ಲಿ ವಿಕಿರಣವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತಿದೆ ಎಂದು ಹೇಳುತ್ತದೆ ಮತ್ತು ಆದರ್ಶವಾದ ನ್ಯೂಕ್ಲಿಯರ್ ಘಟಕಗಳ ಕಾರ್ಯಾಚರಣೆಗೆ ಹೋಲಿಸಿದಲ್ಲಿ ಜನರ ಮೇಲೆ ಕಲ್ಲಿದ್ದಲು ಘಟಕ ನೂರು ಪಟ್ಟು ಪರಿಣಾಮ ಬೀರುತ್ತದೆ. ಹಾಗಿದ್ದರೂ ಕೂಡ ಕಲ್ಲಿದ್ದಲು ಬೂದಿಯು ಅಣು ತ್ಯಾಜ್ಯಕ್ಕೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ವಿಕಿರಣವನ್ನು ಹೊಂದಿದೆ. ಆದರೆ ಬೂದಿಯನ್ನು ನೇರವಾಗಿ ಪರಿಸರಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಅದೇ ವಿಕಿರಣ ಸೂಸುವ ರಿಯಾಕ್ಟರ್ ನ ಉಪಕರಣಗಳಾದ ಇಂಧನ ರಾಡ್ ಗಳು ಮತ್ತು ಸ್ಥಳದಲ್ಲಿ ಯಾವುದೇ ರಿಯಾಕ್ಚರ್ ತ್ಯಾಜ್ಯಗಳಿಂದ ಪರಿಸರವನ್ನು ಸಂರಕ್ಷಿಸುವುದಕ್ಕೆ ಅಣು ವಿದ್ಯುತ್ ಘಟಕಗಳಲ್ಲಿ ಸುರಕ್ಷಾ ಕವಚವನ್ನು ಉಪಯೋಗಿಸಲಾಗುತ್ತದೆ.

ಪುನರ್ ಸಂಸ್ಕರಣ

ಪುನರ್ ಸಂಸ್ಕರಣವು ವೆಚ್ಚವಾದ ಇಂಧನದಿಂದ ಉಳಿದಿರುವ ಶೇ. 95ರಷ್ಟು ಯುರೇನಿಯಂ ಮತ್ತು ಪ್ಲುಟೋನಿಯಂಗಳನ್ನು ಹೊಸದಾಗಿ ಮಿಶ್ರಿತ ಆಕ್ಸೈಡ್ ಇಂಧನಗಳಲ್ಲಿ ಸೇರಿಸುವ ಮೂಲಕ ಮರಳಿಪಡೆಯುವ ಸಾಮರ್ಥ್ಯ ಹೊಂದಿದೆ. ಇದು ಇಂಧನಗಳಲ್ಲಿ ಉಳಿದಿರುವ ತ್ಯಾಜ್ಯದಲ್ಲಿನ ವಿಕಿರಣವನ್ನು ಸುದೀರ್ಘಾವಧಿಯವರೆಗೆ ಕಡಿಮೆಗೊಳಿಸುತ್ತದೆ. ಎಕೆಂದರೆ ಇದು ಇದು ಹೆಚ್ಚಿನ ಮಟ್ಟಿಗೆ ಅಲ್ಪಾವಧಿ ಬಾಳಿಕೆ ಬರುವ ಸಮ್ಮಿಳನದ ಉತ್ಪನ್ನವಾಗಿದ್ದು ಮತ್ತು ಇದು ಶೇ. 90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ. ಸದ್ಯ ಬ್ರಿಟನ್, ಫ್ರಾನ್ಸ್ ಮತ್ತು (ರಷಿಯಾ)ಗಳಲ್ಲಿ ಬೃಹತ್ ಪ್ರಮಾಣದಲ್ಲಿ ನಾಗರಿಕ ಅಣು ವಿದ್ಯುತ್ ಉತ್ಪಾದನ ಘಟಕಗಳಲ್ಲಿ ಪುನರ್ ಸಂಸ್ಕರಣೆ ಕೈಗೊಳ್ಳಲಾಗುತ್ತಿದೆ. ಸದ್ಯವೇ ಚೀನಾದಲ್ಲಿ ಮತ್ತು ಬಹುಶಃ ಭಾರತ ಮತ್ತು ಜಪಾನ್ ನಲ್ಲಿ ಕೂಡ ವಿಸ್ತರಣೆಯಾಗುತ್ತಿದೆ. ವಾಣಿಜ್ಯೋದ್ದೇಶಕ್ಕೆ ಇನ್ನೂ ಬ್ರೀಡರ್ ರಿಯಾಕ್ಟರುಗಳು ಲಭ್ಯವಿಲ್ಲದ ಕಾರಣ ಪುನರ್ ಸಂಸ್ಕರಣೆಯ ಪೂರ್ಣ ಸಾಮರ್ಥ್ಯವನ್ನು ಗಳಿಸಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಫ್ರಾನ್ಸ್ ಅನ್ನು ಅತ್ಯಂತ ಯಶಸ್ವಿ ಪುನರ್ ಸಂಸ್ಕರಣೆ ಮಾಡುವ ರಾಷ್ಟ್ರ ಎಂದು ವರ್ಗಿಕರಿಸಲಾಗಿದ್ದು, ಆದರೆ ಅದು ಕೂಡ ಶೇ. 28ರಷ್ಟನ್ನು (ಪ್ರಮಾಣದ ಆಧಾರದ ಮೇಲೆ) ಪುನರ್ ಸಂಸ್ಕರಣೆ ಮಾಡುತ್ತದೆ. ಫ್ರಾನ್ಸ್ ನ ಒಳಗೆ ಶೇ. 7 ಮತ್ತು ರಷಿಯಾದಲ್ಲಿ ಶೇ. 21 ರಷ್ಟನ್ನು ಉಪಯೋಗಿಸಲಾಗುತ್ತಿದೆ.

ಇತರ ದೇಶಗಳಂತೆ ಅಲ್ಲದೆ, ಅಣು ಪ್ರಸರಣ ನಿಷೇಧದ ನೀತಿಗೆ ಅನುಗುಣವಾಗಿ ಅಮೆರಿಕ, ನಾಗರಿಕ ಪುನರ್ ಸಂಸ್ಕರಣವನ್ನು 1976ರಿಂದ 1986ರವರೆಗೆ ಸ್ಥಗಿತಗೊಳಿಸಿತ್ತು. ಎಕೆಂದರೆ ಪುನರ್ ಸಂಸ್ಕರಿತ ಪ್ಲುಟೋನಿಯಂ ಅನ್ನು ಅಣ್ವಸ್ತ್ರಗಳಿಗೆ ಉಪಯೋಗಿಸಬಹುದಾಗಿತ್ತು. ಆದರೆ ಈಗ ಅಮೆರಿಕದಲ್ಲಿ ಪುನರ್ ಸಂಸ್ಕರಣಕ್ಕೆ ಅನುಮತಿಸಲಾಗಿದೆ. ಆದರೂ ಕೂಡ ಅಮೆರಿಕದಲ್ಲಿ ವೆಚ್ಚವಾದ ಎಲ್ಲ ಇಂಧನವನ್ನು ಇಂದಿಗೂ ಕೂಡ ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ.

ಫೆಬ್ರವರಿ 2006ರಲ್ಲಿ ಅಮೆರಿಕದಲ್ಲಿ ನೂತನವಾದ ಜಾಗತಿಕ ಅಣುಶಕ್ತಿ ಪಾಲುದಾರಿಕೆಯನ್ನು ಪ್ರಕಟಿಸಲಾಯಿತು. ಇದು,ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನವನ್ನು ಅಣುಶಕ್ತಿ ಪ್ರಸರಣವನ್ನು ದೂರ ಮಾಡಿ ಇಂಧನ ಪುನರ ಸಂಸ್ಕರಣೆಗೆ ಪ್ರಯತ್ನಿಸುವಂತೆ ಮಾಡಿತು. ಇದರೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅಣು ವಿದ್ಯುತ್ ದೊರೆಯುವಂತೆ ಮಾಡುವುದು ಆಗಿತ್ತು.

ಕರಗಿದ ಯುರೇನಿಯಂ

ಯುರೇನಿಯಂ ಸಂವರ್ಧನಗೊಳಿಸುವಿಕೆಯು ಹಲವಾರು ಟನ್ ಗಳಲ್ಲಿ ಕರಗಿದ ಯುರೇನಿಯಂ (DU) ಅನ್ನು ಉತ್ಪಾದಿಸುತ್ತದೆ.ಅದು U-238 ಮತ್ತು ಅಣು ಸಮ್ಮಿಳನಕ್ಕೆ ಸುಲಭವಾಗಿ ಒಳಗಾಗಬಹುದಾದ U-235 ಅನ್ನು ಒಳಗೊಂಡಿರುತ್ತದೆ. U-238 ಒಂದು ಕಠಿಣವಾಗಿದ್ದು ಲೋಹವಾಗಿದ್ದು, ಸೀಸಕ್ಕಿಂತ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ಕಾರಣ ಅದನ್ನು ವಿಮಾನ ಉತ್ಪಾದನೆಯಲ್ಲಿ, ವಿಕಿರಣ ತಡೆಗೆ ಮತ್ತು ಶಸ್ತ್ರಾಸ್ತ್ರಗಳಿಗೆ ಉಪಯೋಗಿಸಲಾಗುತ್ತಿದೆ. ತೀಕ್ಷ್ಣವಾಗಿ ಕತ್ತರಿಸುವ ಸಾಮರ್ಥ್ಯ ಹೊಂದಿರುವ ಕಾರಣ DU ಪೆನೆಟ್ರೆಟರ್ (ಬುಲೆಟ್ಸ್ ಅಥವ APFSDS ಟಿಪ್ಸ್)ಗಳಂತಹ ಯುದ್ಧ ಸಾಮಗ್ರಿಗಳ ಉತ್ಪಾದನೆಯಲ್ಲಿ ಕೂಡ ಕರಗಿದ ಯುರೇನಿಯಂ ಪ್ರಯೋಜನಕಾರಿಯಾಗಿದೆ.

ಟ್ಯಾಂಕ್ ಸಿಬ್ಬಂದಿ ಮತ್ತು ಬುಲೆಟ್ ಗಳು, ಬಾಂಬ್ ಗಳು, ಕ್ಷಿಪಣಿಯ ಯುದ್ಧ ತಲೆಗಳನ್ನು ರಕ್ಷಿಸುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿರುವ ಪ್ರದೇಶಗಳಲ್ಲಿನ ನಾಗರಿಕರು ಅತಿಯಾಗಿ U-238 ಸಾಮಗ್ರಿಗೆ ತೆರೆದಿಕೊಂಡಿರುವ ಗುಂಪು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬಹುದು ಎಂಬ ಕಳವಳವಿದೆ. ಜನವರಿ, 2003ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಿಸಿದ ವರದಿಯಲ್ಲಿ DU ಸ್ಫೋಟಕದಿಂದ ಕಲುಷಿತಗೊಳ್ಳುವಿಕೆ ಪ್ರಭಾವ ಬೀರುವ ಸ್ಥಳದಿಂದ ಕೆಲವೇ ಹತ್ತಾರು ಮೀಟರ್ ವರಗೆ ಇದ್ದು, ಸ್ಥಳೀಯ ಪರಿಸರದ ಮೇಲೆ ಅದರ ಪ್ರಭಾವ ಅತ್ಯಂತ ಕಡಿಮೆ ಇದೆ. ವರದಿಯಲ್ಲಿ DU ಸೇರಲ್ಪಟ್ಟಿರುವ ವ್ಯಕ್ತಿಯ ದೇಹದಿಂದ 24 ಗಂಟೆ ಅವಧಿಯಲ್ಲಿ ಶೇ. 70ರಷ್ಟು ವಿಕಿರಣ ಕಡಿಮೆಯಾಗುತ್ತದೆ ಮತ್ತು ಕೆಲವೇ ದಿನಗಳಲ್ಲಿ ಶೇ. 90ರಷ್ಟು ನಾಶವಾಗಿರುತ್ತದೆ ಎಂದು ಹೇಳಿದೆ.

ಆರ್ಥಿಕತೆ

ಅಣು ವಿದ್ಯುತ್ ಉತ್ಪಾದನಾ ಘಟಕಗಳ ಆರ್ಥಿಕತೆಯು ಪ್ರಾಥಮಿಕವಾಗಿ ಘಟಕ ನಿರ್ಮಿಸುವುದಕ್ಕೆ ಅಗತ್ಯವಾಗಿರುವ ಹೆಚ್ಚಿನ ಪ್ರಮಾಣದ ಬಂಡವಾಳದಿಂದ ಪ್ರಭಾವಿತವಾಗಿವೆ. 2009ರಲ್ಲಿ ಅಮೆರಿಕದಲ್ಲಿ ಹೊಸ ಘಟಕವನ್ನು ಸ್ಥಾಪಿಸುವುದಕ್ಕೆ ಅಂದಾಜು 6ರಿಂದ 10 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ ಸಾಮಾನ್ಯವಾಗಿ ಇವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮಟ್ಟಿಗೆ ನಿರ್ವಹಿಸಬೇಕಾಗುತ್ತದೆ ಅಥವ ಹೆಚ್ಚುವರಿ ಘಟಕಗಳಲ್ಲಿ ಸದ್ಯದ ರಿಯಾಕ್ಟರ್ ಸ್ಥಳದಲ್ಲಿ ನಿರ್ಮಿಸಬೇಕಾಗುತ್ತದೆ. 2008ರಲ್ಲಿ ಹೊಸ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣ ವೆಚ್ಚವು ಇತರ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣ ವೆಚ್ಚಕ್ಕಿಂತ ವೇಗವಾಗಿ ಅಭಿವೃದ್ಧಿ ಹೊಂದಿತು.. 2003ರ ಎಂಐಟಿಗಾಗಿ ಸೇರಿದ ಪ್ರತಿಷ್ಠಿತ ನಿಯೋಗವೊಂದರ ಅಧ್ಯಯನವು ಈ ಕೆಳಗಿನ ಅಂಶಗಳನ್ನು ಕಂಡು ಹಿಡಿಯಿತು.

In deregulated markets, nuclear power is not now cost competitive with coal and natural gas. However, plausible reductions by industry in capital cost, operation and maintenance costs, and construction time could reduce the gap. Carbon emission credits, if enacted by government, can give nuclear power a cost advantage.

— The Future of Nuclear Power

ಎಂಐಟಿ ಅಧ್ಯಯನವು ನ್ಯೂಕ್ಲಿಯರ್ ರಿಯಾಕ್ಟರ್ ಗಳ ಜೀವಿತಾವಧಿಯನ್ನು 40 ವರ್ಷಗಳು ಎನ್ನುವ ಆಧಾರದ ಮೇಲೆ ಕೈಗೊಂಡಿತು. ಹಲವಾರು ಘಟಕಗಳು ಈ ಅವಧಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುವಂತೆ ವಿಸ್ತರಿಸಲಾಗಿದೆ. ಮತ್ತು 60 ವರ್ಷಗಳವರೆಗೆ ಈ ಘಟಕಗಳ ಜೀವಿತಾವಧಿಯನ್ನು ವಿಸ್ತರಿಸುವುದರಿಂದ ನಾಟಕೀಯವಾಗಿ ಒಟ್ಟಾರೆ ವೆಚ್ಚ ಕಡಿಮೆಗೊಳಿಸುತ್ತದೆ ಎಂದು ಅಧ್ಯಯನ ತೋರಿಸಿಕೊಟ್ಟಿತು.

ಅಣು ವಿದ್ಯುತ್ ಶಕ್ತಿಯ ಚರ್ಚೆಯ ಸಂದರ್ಭದಲ್ಲಿ ಇತರ ಶಕ್ತಿ ಸಂಪನ್ಮೂಲಗಳ ತುಲನಾತ್ಮಕ ಆರ್ಥಿಕತೆಯನ್ನು ಕೂಡ ಮುಖ್ಯ ಲೇಖನದಲ್ಲಿ ಚರ್ಚಿಸಲಾಗಿದೆ.

ಅಣು ವಿದ್ಯುತ್ ಶಕ್ತಿ ಘಟಕಗಳ ಸ್ಥಿತಿಸ್ಥಾಪಕತ್ವ

ಕೆಲವು ಬಾರಿ ಅವುಗಳ ಉತ್ಪಾದನೆಯಲ್ಲಿ ನ್ಯೂಕ್ಲಿಯರ್ ಕೇಂದ್ರಗಳು ಇತರ ಮಾದರಿಯ ಶಕ್ತಿಗೆ ಹೋಲಿಸಿದಲ್ಲಿ ಮತ್ತು ಬೇಡಿಕೆಯನ್ನು ಪೂರೈಸುವಲ್ಲಿ ಸ್ಥಿತಿಸ್ಥಾಪಕತ್ವ ಹೊಂದಿಲ್ಲ ಎಂದು ವಾದಿಸಲಾಗುತ್ತದೆ. ಇದು ಕೆಲ ರಿಯಾಕ್ಚರ್ ಗಳಿಗೆ ಹೋಲಿಸಿದಲ್ಲಿ ನಿಜವಾಗಿದ್ದು, ಇದು ಕೆಲ ಆದುನಿಕ ವಿನ್ಯಾಸಗಳಿಗೆ ಬಹಳಷ್ಟು ದೀರ್ಘ ಕಾಲ ನಿಜವಲ್ಲ.

ಕೆಳಗಿನ ಮಾದರಿಯಂತೆ ಫ್ರಾನ್ಸ್ ನಲ್ಲಿ ಬೃಹತ್ ಪ್ರಮಾಣದಲ್ಲಿ ನ್ಯೂಕ್ಲಿಯರ್ ಘಟಕಗಳನ್ನು ಲೋಡ್ ಮಾಡುವುದಕ್ಕೆ ನಿರಂತರವಾಗಿ ಉಪಯೋಗಿಸಲಾಗುತ್ತಿದೆ.

ಸಾಮಾನ್ಯವಾಗಿ ಕುದಿಯುವ ನೀರಿನ ರಿಯಾಕ್ಟರಗಳು ಲೋಡ್ ಮಾಡುವುದಕ್ಕೆ ಕೆಳಗಿನ ಸಾಮರ್ಥ್ಯವನ್ನು ಹೊಂದಿದ್ದು. ನೀರಿನ ಪುನರ್ ಹರಿಯುವಿಕೆಯನ್ನು ವೈವಿಧ್ಯಗೊಳಿಸುವುದರಿಂದ ಜಾರಿಗೊಳಿಸಲಾಗುತ್ತಿದೆ.

ಸುರಕ್ಷತೆ

ಅಣು ವಿದ್ಯುತ್ ಉತ್ಪಾದನಾ ಘಟಕಗಳ ಪರಿಸರದ ಮೇಲಿನ ಪ್ರಭಾವ

ಗ್ರೀನ್ ಹೌಸ್ ಹೊರಸೂಸುವಿಕೆಯ ಜೀವನ ಚಕ್ರದ ತುಲನೆ

ಬಹುತೇಕ ಕಾರ್ಬನ್ ಡೈ ಆಕ್ಸೈಡ್ ನ ಹೊರಸೂಸುವಿಕೆಯ ಜೀವನ ಚಕ್ರದ ತುಲನಾತ್ಮಕ ವಿಮರ್ಶೆಯು (LCA) ಅಣುಶಕ್ತಿಯಯನ್ನು ನವಿಕರಿಸಬಹುದಾದ ಶಕ್ತಿಯ ಮೂಲಗಳಿಗೆ ತುಲನೆ ಮಾಡುತ್ತದೆ.

ಅಣುಶಕ್ತಿಯ ಕುರಿತ ಚರ್ಚೆ

ಅಣುಶಕ್ತಿಯ ಚರ್ಚೆಯೂ ವಿವಾದಾತ್ಮಕವಾಗಿದ್ದು, ಅದು ನಾಗರಿಕ ಉದ್ದೇಶಗಳಿಗಾಗಿ ಅಣು ಇಂಧನದಿಂದ ರಿಯಾಕ್ಟರ್ ಗಳಿಂದ ವಿದ್ಯುತ್ ಉತ್ಪಾದಿಸುವಿಕೆ ಮತ್ತು ಅಣು ಸಮ್ಮಿಳನ ರಿಯಾಕ್ಟರ್ ಉಪಯೋಗಿಸುವಿಕೆಯಂತಹ ವಿಚಾರಗಳಿಂದ ಸುತ್ತುವರಿದಿದೆ. 1970 ಮತ್ತು 1980ರ ಅವಧಿಯಲ್ಲಿ ನ್ಯೂಕ್ಲಿಯರ್ ಶಕ್ತಿಯ ಉಪಯೋಗದ ಕುರಿತ ಚರ್ಚೆ ತುತ್ತ ತುದಿಗೆರಿತ್ತು. ಕೆಲವು ದೇಶಗಳಲ್ಲಿ ತಾಂತ್ರಿಕತೆಯ ವಿವಾದದ ಇತಿಹಾಸದಲ್ಲಿ ಎಂದು ಕಂಡು ಕೇಳರಿಯದ ರೀತಿಯಲ್ಲಿ ಅತ್ಯಂತ ಸಂಕೀರ್ಣ ರೂಪದಲ್ಲಿ ಮುಟ್ಟಿತು.

ಅಣುಶಕ್ತಿಯ ಪ್ರತಿಪಾದಕರು ಅಣು ವಿದ್ಯುತ್ ಶಕ್ತಿಯು ಸುಸ್ಥಿರ ಶಕ್ತಿಯ ಮೂಲವಾಗಿದ್ದು ಅದು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸುತ್ತದೆ ವಿದೇಶದ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಶಕ್ತಿಯ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಅಣು ವಿದ್ಯುತ್ ಶಕ್ತಿ ಉತ್ಪಾದನೆ ಪ್ರಕ್ರಿಯೆಯು ಇತರ ನಾಶವಾಗಬಹುದಾದ ಪರ್ಯಾಯ ಇಂಧನಗಳಿಗೆ ಹೋಲಿಸಿದಲ್ಲಿ ಯಾವುದೇ ರೀತಿಯ ಹಸಿರು ಮನೆ, ಮಂಜು ಕವಿಯುವಿಕೆಯಂತಹ ಸಾಂಪ್ರದಾಯಿಕ ವಾಯು ಮಾಲಿನ್ಯ, ಉಂಟು ಮಾಡುವುದಿಲ್ಲ ಎಂದು ಪ್ರತಿಪಾದಕರು ವಾದಿಸುತ್ತಾರೆ. ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಕ್ತಿ ಸ್ವಾತಂತ್ರ್ಯವನ್ನು ಗಳಿಸುವುದಕ್ಕೆ ಅಣುಶಕ್ತಿಯೊಂದೇ ಸೂಕ್ತವಾದ ಮಾರ್ಗ ಎಂದು ಪ್ರತಿಪಾದಕರು ಹೇಳುತ್ತಾರೆ. ತ್ಯಾಜ್ಯ ಸಂಗ್ರಹಣೆ ಕೂಡ ಕಡಿಮೆ ಇದ್ದು ಮತ್ತದನ್ನು ಹೊಸ ರಿಯಾಕ್ಚರ್ ಗಳಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಸುವುದರಿಂದ ಮತ್ತಷ್ಟು ಕಡಿಮೆಗೊಳಿಸಬಹುದು ಎನ್ನುವುದು ಅಣುಶಕ್ತಿ ಪ್ರತಿಪಾದಕರ ಅನಿಸಿಕೆ. ಪ್ರಮುಖ ವಿದ್ಯುತ್ ಘಟಕಗಳಿಗೆ ಹೋಲಿಸಿದಲ್ಲಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಕಾರ್ಯನಿರ್ವಹಣೆ ಸುರಕ್ಷೆಯು ಅತ್ತ್ಯುನ್ನತ ಮಟ್ಟದ್ದಾಗಿದೆ.

ಅಣು ವಿದ್ಯುತ್ ಶಕ್ತಿ ಉತ್ಪಾದನಾ ಘಟಕಗಳು ಜನರು ಮತ್ತು ಪರಿಸರಕ್ಕೆ ಹಲವಾರು ಅಪಾಯವನ್ನು ಒಡ್ಡುತ್ತದೆ ಎನ್ನುವದು ವಿರೋಧಿಗಳ ಅಭಿಪ್ರಾಯ. ಈ ಸಮಸ್ಯೆಗಳಲ್ಲಿ ಸಂಸ್ಕರಣೆಯ ಸಮಸ್ಯೆ, ಅಣು ತ್ಯಾಜ್ಯದ ಸಂಗ್ರಹ ಮತ್ತು ಸಾರಿಗೆ, ಅಣ್ವಸ್ತ್ರಗಳ ಪ್ರಸರಣ ಮತ್ತು ಭಯೋತ್ಪಾದನೆ ಮತ್ತು ಯುರೇನಿಯಂ ಗಣಿಗಾರಿಕೆಯಿಂದ ಆರೋಗ್ಯ ಮತ್ತು ಪರಿಸರಕ್ಕೆ ಆಗುವ ಹಾನಿಗಳು ಸೇರಿವೆ. ರಿಯಾಕ್ಟರ್ ಗಳು ಅತ್ಯಂತ ಸಂಕೀರ್ಣವಾದ ಯಂತ್ರಗಳನ್ನು ಹೊಂದಿದ್ದು, ಇಲ್ಲಿ ಹಲವಾರು ಸಂಗತಿಗಳು ಮತ್ತು ತಪ್ಪು ಎಸಗಬಹುದಾಗಿದೆ ಮತ್ತು ಅದರಿಂದಾಗಿ ಗಂಭೀರವಾದ ಅಣು ಅವಘಡ ಸಂಭವಿಸಬಹುದು ಎನ್ನುವುದೂ ಕೂಡ ಅನಿಸಿಕೆಯಾಗಿದೆ. ಅಣು ಸಮ್ಮಿಳನವನ್ನು ಶಕ್ತಿಯ ಮೂಲವಾಗಿ ಬಳಸುವ ಅಪಾಯವನ್ನು ನೂತನ ತಂತ್ರಜ್ಞಾನದ ಸಂಶೋಧನೆಯಿಂದ ತಡೆಯಬಹುದು ಎನ್ನುವುದನ್ನು ಟೀಕಾಕಾರರು ನಂಬುವುದಿಲ್ಲ. ಅಣು ವಿದ್ಯುತ್ ಶಕ್ತಿ ಉತ್ಪಾದನೆ ಕೊಂಡಿಯಿದಯುರೇನಿಯಂ ಗಣಿಗಾರಿಕೆಯಿಂದ ಹಿಡಿದು ಅಣು ವಿಸರ್ಜನೆ ಕೊಂಡಿವರೆಗಿನ ಎಲ್ಲ ಶಕ್ತಿ ಉತ್ಪಾದನಾ ಹಂತಗಳ ಪ್ರಕ್ರಿಯೆಗಳನ್ನು ಗಣನೆಗೆ ತೆಗೆದುಕೊಂಡಲ್ಲಿ ಅಣು ವಿದ್ಯುತ್ ಶಕ್ತಿ ಉತ್ಪಾದನೆ ಕೂಡ ಕಡಿಮೆ ಪ್ರಮಾಣದ ವಿದ್ಯುತ್ ಕಾರ್ಬನ್ ಹೊರಸೂಸುವಿಕೆಯ ಮೂಲವಲ್ಲ ಎಂದು ಆವರು ವಾದಿಸುತ್ತಾರೆ.

ಆರ್ಥಿಕತೆ ಮತ್ತು ಸುರಕ್ಷತೆಯ ಎರಡೂ ಬದಿಗಳನ್ನು ಚರ್ಚೆಯಲ್ಲಿ ಉಪಯೋಗಿಸಲಾಗಿದೆ.

ಅಪಾಯ, ಅಪಾರ ವೆಚ್ಚ

ಜರ್ಮನಿ, ಆಸ್ಟ್ರಿಯಾ, ಬೆಲ್ಜಿಯಂ, ಇಟಲಿ ಮತ್ತು ಸ್ವೀಡನ್ ಇನ್ನು 15 ವರ್ಷಗಳಲ್ಲಿ ತಮ್ಮ ಎಲ್ಲ ರಿಯಾಕ್ಟರುಗಳನ್ನೂ ಬಂದ್ ಮಾಡಲು ನಿರ್ಧರಿಸಿವೆ. ಅವುಗಳ ಸಮಾಧಿಗೆ ನಿರ್ಮಾಣ ವೆಚ್ಚಕ್ಕಿಂತ ಜಾಸ್ತಿ ಹಣ ಬೇಕಾಗುತ್ತದೆಂದು ಐರೋಪ್ಯ ಸಂಘ ಲೆಕ್ಕಾಚಾರ ಹಾಕಿ ಹೇಳಿದೆ. ಕಳೆದ ಮೇ 21ರಂದು ಸ್ವಿತ್ಸರ್ಲೆಂಡ್‌ನಲ್ಲಿ ನಡೆಸಿದ ರಾಷ್ಟ್ರವ್ಯಾಪಿ ಜನಮತ ಸಂಗ್ರಹದಲ್ಲಿ ಪರಮಾಣು ಯುಗಕ್ಕೆ ಅಂತ್ಯ ಹಾಡಬೇಕೆಂಬ ತೀರ್ಮಾನ ಪ್ರಕಟವಾಗಿದೆ. ಅದಕ್ಕೆ ಮೂರು ದಿನ ಮೊದಲು ನಮ್ಮ ಭಾರತ ಸರ್ಕಾರ ಇನ್ನೂ 10 ಹೊಸ ರಿಯಾಕ್ಟರುಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ.

ಅಪಾಯ, ಅಪಾರ ವೆಚ್ಚ, ಅಸಂಖ್ಯ ತಾಂತ್ರಿಕ ತೊಡಕುಗಳು ಮತ್ತು ನಿಧಾನ ಗತಿಯ ನಿರ್ಮಾಣ ಇವೆಲ್ಲವೂ ಸುಧಾರಿತ ದೇಶಗಳನ್ನೇ ಹೈರಾಣುಗೊಳಿಸಿವೆ. ನಮ್ಮಲ್ಲೂ ಅವೆಲ್ಲ ಸಮಸ್ಯೆಗಳಿವೆ; ಜೊತೆಗೆ ಇನ್ನಷ್ಟು ವಿಶೇಷ ಸವಾಲುಗಳಿವೆ. ಭಾರತದಲ್ಲಿ ಯುರೇನಿಯಂ ಸಾಕಷ್ಟಿಲ್ಲ. ಥೋರಿಯಂ ಹೇರಳ ಇದೆಯಾದರೂ ಅದಿನ್ನೂ ನಮ್ಮ ಕೈಗೆ ಹತ್ತಿಲ್ಲ. ದಾಳಿಗೆ ಸಜ್ಜಾಗಿರುವ ವೈರಿಗಳು ಆಚೀಚೆ ಇದ್ದಾರೆ. ಯುದ್ಧಕ್ಕಾಗಿ ಹೂಂಕರಿಸುವವರ ಸಂಖ್ಯೆಯೂ ನಮ್ಮಲ್ಲಿ ಹೆಚ್ಚುತ್ತಿದೆ. ಅವರಲ್ಲಿ ಕಿಚ್ಚೆಬ್ಬಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಮಾಧ್ಯಮಗಳೂ ಹಪಹಪಿಸುತ್ತಿವೆ.

ಬಾಂಬ್‌ದಾಳಿ, ನೈಸರ್ಗಿಕ ವಿಕೋಪ ಅಥವಾ ತಾಂತ್ರಿಕ ವೈಫಲ್ಯದಿಂದ ನಮ್ಮ ರಿಯಾಕ್ಟರು ಸಿಡಿದರೆ ಸುತ್ತಲಿನ ಜನ ವಸತಿಯನ್ನು ತೆರವು ಮಾಡಲು ಬೇಕಾದ ತುರ್ತು ಸೌಕರ್ಯಗಳೂ ಅಷ್ಟಕ್ಕಷ್ಟೆ. ಅಂಬುಲೆನ್ಸ್ ಹಾಗಿರಲಿ, ತಳ್ಳುಗಾಡಿಗೂ ಗತಿಯಿಲ್ಲದ ಸರ್ಕಾರಿ ಆಸ್ಪತ್ರೆಗಳ ಕತೆ ನಮಗೆ ಗೊತ್ತಿದೆ. ಸ್ಥಾವರಗಳ ಸುತ್ತಲ ಸುರಕ್ಷತೆಗೆ ಬೇಕಿದ್ದ ಎಲ್ಲ ಸೌಕರ್ಯಗಳೂ ಇರುವಂಥ ದೇಶಗಳೇ ಪರಮಾಣು ಸಹವಾಸದಿಂದ ಕಂಗೆಟ್ಟು ಬದಲೀ ತಂತ್ರಜ್ಞಾನದತ್ತ ಹೊರಳುತ್ತಿವೆ.ನಾಗೇಶ್ ಹೆಗಡೆ;ರೋಬಾಟ್ ಆಳ್ವಿಕೆಯಲ್ಲಿ ನಾಳೆಗಳ ಸಮಾಧಿ;15 Jun, 2017 Archived 2017-06-14 ವೇಬ್ಯಾಕ್ ಮೆಷಿನ್ ನಲ್ಲಿ.

ಕೊಂಡಿ

ಇವನ್ನೂ ಗಮನಿಸಿ

  • ಅಣುಶಕ್ತಿ-ವಿರುದ್ಧ ಆಂದೋಲನ
  • ವಿಕಿರಣದ ಹಿನ್ನೆಲೆ
  • ಚೆರ್ನೋಬಿಲ್ ದುರಂತ
  • ಮೃದುತ್ವ ಮತ್ತು ಭಿದುರತೆ
  • ವಿದ್ಯುಚ್ಛಕ್ತಿ ಪೀಳಿಗೆ
  • ಇಂಧನ ಅಭಿವೃದ್ದಿ
  • ಪರಿಸರದ ಮೇಲೆ ಅಣಶಕ್ತಿಯ ಪ್ರಭಾವ
  • ಜರ್ಮನ್ ಅಣು ಇಂಧನ ಯೋಜನೆ
  • ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ
  • ಲೈಟ್ ವಾಟರ್ ರಿಯಾಕ್ಟರ್ ಸಸ್ಟೆನೆಬಿಲಿಟಿ ಪ್ರೋಗ್ರಾಮ್
  • ಲೈನರ್-ನಂ-ತ್ರೆಶ್‌ಹೊಲ್ಡ್ ಮಾಡೆಲ್
  • ನಾಗರಿಕ ಪರಮಾಣು ಅಪಘಾತಗಳ ಪಟ್ಟಿ
  • ಅಣು ಕ್ರಿಯಾಕಾರಿಗಳ ಪಟ್ಟಿ
  • ಅಣು ದುರಂತರಗಳು ಮತ್ತು ವಿಕಿರಣಶೀಲ ಘಟನೆಗಳ ಪಟ್ಟಿ
  • ಲಾಸ್ ಆಫ್ ಕೂಲಂಟ್ ಆಕ್ಸಿಡೆಂಟ್
  • ಅಣು ಮಾಲಿನ್ಯ
  • ಅಣು ಚರ್ಚೆ (ಅಸ್ಪಷ್ಟತೆಯ ನಿವಾರಣೆ)
  • ಪರಮಾಣು ವಿದಳನ
  • ಅಣು ವಿದಳನ ಉತ್ಪನ್ನ
  • ಅಣು ಇಂಧನ ಬ್ಯಾಂಕ್ ("ಅಂತರಾಷ್ಟ್ರೀಯ ಇಂಧನ ಬ್ಯಾಂಕ್")
  • ಅಣು ಇಂಧನ ಆವರ್ತ
  • ಪರಮಾಣು ಸಮ್ಮಿಳನ
  • ನ್ಯೂಕ್ಲಿಯರ್ ಲಯಾಬಿಲಿಟೀಸ್ ಫಂಡ್
  • ನ್ಯೂಕ್ಲಿಯರ್ ಮೆಜರ್ಮೆಂಟ್ಸ್ ಕಾರ್ಪೊರೇಶನ್
  • ಅಣು ಆಶಾವಾದಿ
  • ಅಣು ಚಿಕಿತ್ಸೆ
  • ಅಮೆರಿಕಾದಲ್ಲಿ ಅಣು ಶಕ್ತಿ
  • ಅಣು ಶಕ್ತಿ ಸ್ಥಾವರದ ತುರ್ತು ಪರಿಸ್ಥಿತಿ ಪ್ರತಿಕ್ರಿಯೆ ತಂಡ
  • ಅಣು ಭಯೋತ್ಪಾದನೆ
  • ನಿಷ್ಕ್ರಿಯ ಅಣು ಸುರಕ್ಷೆ
  • ಪಿಕನ್ಸ್ ಪ್ಲಾನ್ (ವಿಮರ್ಶೆ)
  • ನೊಮ್ ಯೋಜನೆ
  • ವಿವಿಧ ಮೂಲಗಳಿಂದ ವಿದ್ಯುತ್ಚಕ್ತಿ ಉತ್ಪಾದಿಸಲು ತಗಲುವ ವೆಚ್ಚದ ಹೋಲಿಕೆ
  • ಖಾಲಿಯಾದ ಅಣು ಇಂಧನ ಹಡದು ಪೀಪಾಯಿ
  • ತೋಶಿಬಾ 4S
  • ಯುರೇನಿಯಂ ಬರಿದಾಗುವಿಕೆ
  • ವೇಸ್ಟ್ ಇಸೋಲೇಶನ್ ಪೈಲಟ್ ಪ್ಲಾಂಟ್
  • ವಿಶ್ವದ ಶಕ್ತಿ ಮೂಲಗಳು ಮತ್ತು ಉಪಭೋಗ

ಅಡಿಟಿಪ್ಪಣಿಗಳು

ಆಕರಗಳು

ಹೆಚ್ಚಿನ ಮಾಹಿತಿಗಾಗಿ

ಬಾಹ್ಯ ಕೊಂಡಿಗಳು

ಅಣು ಇಂಧನ ಸುದ್ದಿಗಳ ಜಾಲಬಂಧಗಳು

ಎದುರಾಳಿ

ಬೆಂಬಲವಾಗಿ

Tags:

ಪರಮಾಣು ಶಕ್ತಿ ಉಪಯೋಗಪರಮಾಣು ಶಕ್ತಿ ಇತಿಹಾಸಪರಮಾಣು ಶಕ್ತಿ ಉದ್ಯಮದ ಭವಿಷ್ಯಪರಮಾಣು ಶಕ್ತಿ ನ್ಯೂಕ್ಲಿಯರ್ ರಿಯಾಕ್ಟರ್ ತಂತ್ರಜ್ಞಾನಪರಮಾಣು ಶಕ್ತಿ ಜೀವನ ಚಕ್ರಪರಮಾಣು ಶಕ್ತಿ ಆರ್ಥಿಕತೆಪರಮಾಣು ಶಕ್ತಿ ಸುರಕ್ಷತೆಪರಮಾಣು ಶಕ್ತಿ ಅಣು ವಿದ್ಯುತ್ ಉತ್ಪಾದನಾ ಘಟಕಗಳ ಪರಿಸರದ ಮೇಲಿನ ಪ್ರಭಾವಪರಮಾಣು ಶಕ್ತಿ ಅಣುಶಕ್ತಿಯ ಕುರಿತ ಚರ್ಚೆಪರಮಾಣು ಶಕ್ತಿ ಅಪಾಯ, ಅಪಾರ ವೆಚ್ಚಪರಮಾಣು ಶಕ್ತಿ ಕೊಂಡಿಪರಮಾಣು ಶಕ್ತಿ ಇವನ್ನೂ ಗಮನಿಸಿಪರಮಾಣು ಶಕ್ತಿ ಅಡಿಟಿಪ್ಪಣಿಗಳುಪರಮಾಣು ಶಕ್ತಿ ಆಕರಗಳುಪರಮಾಣು ಶಕ್ತಿ ಹೆಚ್ಚಿನ ಮಾಹಿತಿಗಾಗಿಪರಮಾಣು ಶಕ್ತಿ ಬಾಹ್ಯ ಕೊಂಡಿಗಳುಪರಮಾಣು ಶಕ್ತಿಪರಮಾಣುವಿದ್ಯುತ್

🔥 Trending searches on Wiki ಕನ್ನಡ:

ಓಂ (ಚಲನಚಿತ್ರ)ವಾಲಿಬಾಲ್ರಗಳೆಡಿ.ಕೆ ಶಿವಕುಮಾರ್ಅನುರಾಗ ಅರಳಿತು (ಚಲನಚಿತ್ರ)ಕಬ್ಬುಪೌರತ್ವಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವಿರೂಪಾಕ್ಷ ದೇವಾಲಯನಗರಮಧ್ವಾಚಾರ್ಯಬಾರ್ಲಿಶಾಂತಲಾ ದೇವಿಬಯಲಾಟಇಂಡಿಯನ್ ಪ್ರೀಮಿಯರ್ ಲೀಗ್ರವೀಂದ್ರನಾಥ ಠಾಗೋರ್ಮೋಕ್ಷಗುಂಡಂ ವಿಶ್ವೇಶ್ವರಯ್ಯಅಲ್ಲಮ ಪ್ರಭುಹಾವಿನ ಹೆಡೆಹಂಪೆಭಗವದ್ಗೀತೆಅವತಾರಕರ್ನಾಟಕದ ತಾಲೂಕುಗಳುಭಾರತದ ರಾಜಕೀಯ ಪಕ್ಷಗಳುಮಹಾಕವಿ ರನ್ನನ ಗದಾಯುದ್ಧಋತುದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಜಾತಿರಾಷ್ಟ್ರಕೂಟರಸ(ಕಾವ್ಯಮೀಮಾಂಸೆ)ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಮತದಾನಭಾರತದಲ್ಲಿ ಬಡತನರೋಸ್‌ಮರಿಗೂಗಲ್ಭಾರತೀಯ ಅಂಚೆ ಸೇವೆಸಮುದ್ರಗುಪ್ತದಯಾನಂದ ಸರಸ್ವತಿಗಾದೆ ಮಾತುಜೈನ ಧರ್ಮರಾಶಿಪಂಚತಂತ್ರಹೆಚ್.ಡಿ.ದೇವೇಗೌಡಶಬ್ದ ಮಾಲಿನ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿದೇವಸ್ಥಾನಶ್ರವಣಬೆಳಗೊಳಪಂಪ ಪ್ರಶಸ್ತಿಕೆ.ಎಲ್.ರಾಹುಲ್ಎಸ್.ಎಲ್. ಭೈರಪ್ಪಉಪೇಂದ್ರ (ಚಲನಚಿತ್ರ)ಶಿವಮೊಗ್ಗಬ್ಲಾಗ್ಕರ್ನಾಟಕ ಲೋಕಸೇವಾ ಆಯೋಗಕನ್ನಡ ಸಾಹಿತ್ಯ ಪರಿಷತ್ತುಸುದೀಪ್ವಿಜಯ ಕರ್ನಾಟಕಮೈಸೂರು ಅರಮನೆರಾಮದೇವನೂರು ಮಹಾದೇವಚಾಮರಾಜನಗರಗುರುರಾಜ ಕರಜಗಿಊಟವಿಧಾನಸೌಧಗುರು (ಗ್ರಹ)ಅತ್ತಿಮಬ್ಬೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತೀಯ ಸ್ಟೇಟ್ ಬ್ಯಾಂಕ್ಝಾನ್ಸಿ ರಾಣಿ ಲಕ್ಷ್ಮೀಬಾಯಿಕ್ರೈಸ್ತ ಧರ್ಮಬೆಂಕಿಕನ್ನಡ ಚಳುವಳಿಗಳುಮಾನವನಲ್ಲಿ ನಿರ್ನಾಳ ಗ್ರಂಥಿಗಳುಬಿ.ಎಸ್. ಯಡಿಯೂರಪ್ಪಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ🡆 More