ಬ್ರಸೆಲ್ಸ್

ಬ್ರಸೆಲ್ಸ್ (ಫ್ರೆಂಚ್:Bruxelles, ಡಚ್:Brussel), ಅಧಿಕೃತವಾಗಿ ಬ್ರಸೆಲ್ಸ್ ರಾಜಧಾನಿ-ಪ್ರದೇಶ, ಬೆಲ್ಜಿಯಂ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ ಪ್ರದೇಶವಾಗಿದೆ.

ಯುರೋಪಿಯನ್ ಒಕ್ಕೂಟದ ಅನೇಕ ಪ್ರಮುಖ ರಾಜಕೀಯ ಸಂಸ್ಥೆಗಳು ಈ ನಗರದಲ್ಲಿರುವ ಕಾರಣ ಇದನ್ನು ಯುರೋಪಿಯನ್ ಒಕ್ಕೂಟದ ರಾಜಧಾನಿ ಎಂದೂ ಕರೆಯಲಾಗುತ್ತದೆ. ಎರಡನೆಯ ಮಹಾಯುದ್ಧದ ನಂತರ ಇದು ಅಂತರ್ರಾಷ್ಟ್ರೀಯ ರಾಜಕೀಯದ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಯುರೋಪಿಯನ್ ಒಕ್ಕೂಟದ ಸಂಸ್ಥೆಗಳಲ್ಲದೆ ನೇಟೊವಿನ ಮುಖ್ಯ ಕಾರ್ಯಲಯ ಕೂಡ ಇಲ್ಲಿ ಸ್ಥಿತವಾಗಿದೆ.

ಬ್ರಸೆಲ್ಸ್
Bruxelles (ಫ್ರೆಂಚ್)
Brussel (ಡಚ್)
ಬ್ರಸೆಲ್ಸ್ ರಾಜಧಾನಿ ಪ್ರದೇಶ
ಹಳೆಯ ನಗರದ ನೋಟ
ಹಳೆಯ ನಗರದ ನೋಟ
Flag of ಬ್ರಸೆಲ್ಸ್
Nickname(s): 
ಯುರೋಪ್‌ನ ರಾಜಧಾನಿ, ತಮಾಷೆ ನಗರ
Location of ಬ್ರಸೆಲ್ಸ್
ದೇಶBelgium ಬೆಲ್ಜಿಯಂ
ಸ್ಥಾಪನೆ೫೮೦
ಪ್ರತಿಷ್ಠಾಪನೆ೯೭೯
ಸರ್ಕಾರ
 • ಮಂತ್ರಿ-ರಾಷ್ಟ್ರಪತಿಚಾರ್ಲ್ಸ್ ಪಿಖ್
 • ರಾಜ್ಯಪಾಲವೆರಾನಿಕ್ ಪೌಲಸ್ ಡಿ ಚಾತೆಲೆತ್
 • ಸಂಸತ್ತಿನ ರಾಷ್ಟ್ರಪತಿಎರಿಕ್ ತೊಮಸ್
Area
 • ಪ್ರದೇಶ೧೬೧.೪ km (೬೨.೨ sq mi)
Elevation
೧೩ m (೪೩ ft)
Population
 (ನವೆಂಬರ್ ೧ ೨೦೦೮)
 • ಪ್ರದೇಶ೧೦,೮೦,೭೯೦
 • ಸಾಂದ್ರತೆ೬,೬೯೭/km (೧೬,೮೫೭/sq mi)
 • Metro
೨೬,೭೬,೭೦೧
ಸಮಯ ವಲಯಯುಟಿಸಿ+1 (CET)
 • Summer (DST)ಯುಟಿಸಿ+2 (CEST)
ISO 3166
BE-BRU
ಜಾಲತಾಣwww.brussels.irisnet.be

ಇದು ಬ್ರಬಾಂಟ್ ಪ್ರಾಂತ್ಯದ ಮತ್ತು ಬ್ರಸೆಲ್ಸಿನ ಆಡಳಿತ ಕೇಂದ್ರನಗರ. ಜನಸಂಖ್ಯೆ 1,008,715 (1980). ಪೂರ್ವಕಾಲದ ಮತ್ತು ಇತ್ತೀಚಿನ ಆಧುನಿಕ ಸುಂದರ ಕಟ್ಟಡಗಳಿಂದಲೂ ವಿಶಾಲ ಬೀದಿಗಳಿಂದಲೂ ಕಲೆ, ಸಾಹಿತ್ಯ, ಶಿಕ್ಷಣ ಮತ್ತು ವ್ಯಾಪಾರ ವಾಣಿಜ್ಯಗಳಿಂದಲೂ ಪ್ರಸಿದ್ಧವಾಗಿದೆ. ಈ ಸುಂದರ ನಗರವನ್ನು ಪುಟ್ಟ ಪ್ಯಾರಿಸ್ ಎಂದು ಕರೆಯುವುದುಂಟು.

ಬ್ರಸೆಲ್ಸ್ ನಗರವನ್ನು ಮೇಲಣ ಮತ್ತು ಕೆಳಗಿನ ನಗರಗಳೆಂದು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಮೇಲಣನಗರದಲ್ಲಿ ದೊರೆಯ ಅರಮನೆ, ಸರಕಾರಿ ಕಛೇರಿಗಳು, ಉದ್ಯಾನವನಗಳು ಮತ್ತು ವಿಶಾಲ ಬೀದಿಗಳು ಇವೆ. ಕೆಳನಗರ ಹಳೆಯ ಊರು. ಈ ವಿಭಾಗ ವ್ಯಾಪಾರ ಕೇಂದ್ರ ಇದರಲ್ಲಿ ಮಾರುಕಟ್ಟೆ ಚೌಕಗಳು, 1200ರಷ್ಟು ಹಿಂದೆ ಕಟ್ಟಿದ ಕಟ್ಟಡ ಇತ್ಯಾದಿಗಳಿವೆ.

ಪ್ರಪಂಚ ಖ್ಯಾತವಾದ ಲೇಸ್, ಹತ್ತಿ ಮತ್ತು ಉಣ್ಣೆಯ ಪದಾರ್ಥಗಳು, ಕಾಗದ, ಲೋಹದಸಾಮಾನುಗಳು, ಮಾದಕಪಾನೀಯಗಳು, ಬಟ್ಟೆ, ಸಕ್ಕರೆ ಶುದ್ಧೀಕರಣ ಯಂತ್ರಗಳು ತಯಾರಾಗುತ್ತವೆ. ಫಾಂಡ್ರಿ ರಾಸಾಯನಿಕಗಳು, ಔಷಧಿ ಚರ್ಮ ವಸ್ತುಗಳು ತಯಾರಿಕೆ ಮೊದಲಾದ ಉದ್ಯಮಗಳೂ ಉಂಟು. ವಿಜ್ಞಾನ, ಕಲೆ, ಸಂಗೀತ ಕಾಲೇಜುಗಳು ಇವೆ. ರೈಲುಮಾರ್ಗಗಳು, ಕಾಲುವೆಗಳು ಸಾರಿಗೆಯ ಮೂಲಗಳು. ಬೆಲ್ಜಿಯಮ್ಮಿನ ಎಲ್ಲ ಕಡೆಗೆ ಉತ್ತಮ ಸಂಪರ್ಕ ಉಂಟು.

ಇತಿಹಾಸ

ಸುಮಾರು 5ನೆಯ ಶತಮಾನದ ಮಧ್ಯದಲ್ಲಿ ಬ್ರಸೆಲ್ಸ್ ನಗರ ಸ್ಥಾಪಿತವಾಯಿತು. ಅನಂತರ ಅಸ್ಟ್ರಿಯದ ನೆದರ್ಲೆಂಡಿನ ರಾಜಧಾನಿಯಾಗಿ (1477) ಯೂರೊಪಿನ ಉಚ್ಛ್ರಾಯ ನಗರವೆಂದು ಖ್ಯಾತಿ ಪಡೆಯಿತು. 1794ರಲ್ಲಿ ಫ್ರೆಂಚರ ವಶವಾಗಿ 1814ರ ತನಕ ಅವರ ಅಧೀನದಲ್ಲಿತ್ತು. ಈ ನಗರದಿಂದ 19 ಕಿಮೀ ದೂರದಲ್ಲಿ ಪ್ರಸಿದ್ಧ ವಾಟರ್ಲೂ ಕದನ ನಡೆಯಿತು (1815). ನೆದರ್ಲೆಂಡ್ಸಿನ ಭಾಗವಾಗಿ 1830ರ ತನಕ ಇತ್ತು. ಇದೇ ವರ್ಷದಲ್ಲಿ ಬೆಲ್ಜಿಯಮ್ ರಾಜ್ಯ ರೂಪುಗೊಂಡಾಗ ಬ್ರಸೆಲ್ಸ್ ಅದರ ರಾಜಧಾನಿಯಾಯಿತು. ಎರಡು ಮಹಾಯುದ್ಧಗಳ ಸಮಯದಲ್ಲೂ ಜರ್ಮನರು ಬೆಲ್ಜಿಯಮ್ಮಿನಲ್ಲಿ ಬೀಡು ಬಿಟ್ಟಿದ್ದರು. ಹೀಗಾಗಿ ಬೆಲ್ಜಿಯಮ್ ಅನುಸರಿಸುತ್ತಿದ್ದ ತಟಸ್ಥ ನೀತಿ ಮೂಲೆಗುಂಪಾಗಬೇಕಾಯಿತು. 1944ರಲ್ಲಿ ನಾಟ್ಸೀಗಳ ಹಿಡಿತದಿಂದ ಮುಕ್ತವಾಯಿತು.

ಉಲ್ಲೇಖಗಳು

ಬ್ರಸೆಲ್ಸ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಎರಡನೆಯ ಮಹಾಯುದ್ಧಡಚ್ ಭಾಷೆನೇಟೊಫ್ರೆಂಚ್ ಭಾಷೆಬೆಲ್ಜಿಯಂಯುರೋಪಿಯನ್ ಒಕ್ಕೂಟರಾಜಧಾನಿ

🔥 Trending searches on Wiki ಕನ್ನಡ:

ರೋಸ್‌ಮರಿರಾಮ ಮಂದಿರ, ಅಯೋಧ್ಯೆಬಿಳಿಗಿರಿರಂಗನ ಬೆಟ್ಟಮಂಡಲ ಹಾವುಭಾರತದ ತ್ರಿವರ್ಣ ಧ್ವಜಕರ್ನಾಟಕದ ತಾಲೂಕುಗಳುಕಲಬುರಗಿಸಹಕಾರಿ ಸಂಘಗಳುಜಾನಪದಮಹಮದ್ ಬಿನ್ ತುಘಲಕ್ಬಿ. ಆರ್. ಅಂಬೇಡ್ಕರ್ಎಚ್ ೧.ಎನ್ ೧. ಜ್ವರಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಅವತಾರಭಾರತದಲ್ಲಿ ಮೀಸಲಾತಿಕರ್ನಾಟಕ ಹೈ ಕೋರ್ಟ್ಕೊಪ್ಪಳಹಲಸುಜಯಂತ ಕಾಯ್ಕಿಣಿಬಾಲ್ಯಬೆಟ್ಟದಾವರೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಸರಸ್ವತಿ ಪ್ರಭಾ ಕೊಂಕಣಿ ಮಾಸಿಕದೇವರಾಜ್‌ಆಯುರ್ವೇದಕಲಿಯುಗಅನುಭವ ಮಂಟಪಹರಿಹರ (ಕವಿ)ಗುರು (ಗ್ರಹ)ನಿರ್ವಹಣೆ ಪರಿಚಯಲಕ್ಷ್ಮಿಕೆ. ಅಣ್ಣಾಮಲೈಕನ್ನಡ ಸಾಹಿತ್ಯ ಪ್ರಕಾರಗಳುಭಾಮಿನೀ ಷಟ್ಪದಿಪಶ್ಚಿಮ ಘಟ್ಟಗಳುಭಾರತದ ಮಾನವ ಹಕ್ಕುಗಳುಅಕ್ಕಮಹಾದೇವಿರಾಜಧಾನಿಗಳ ಪಟ್ಟಿಸಂವಿಧಾನಕರ್ನಾಟಕದ ಮುಖ್ಯಮಂತ್ರಿಗಳುಗೋವಿನ ಹಾಡುಶಾತವಾಹನರುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಸಿ ಎನ್ ಮಂಜುನಾಥ್ಸಿಂಧನೂರುಚೆನ್ನಕೇಶವ ದೇವಾಲಯ, ಬೇಲೂರುಕನ್ನಡ ಕಾಗುಣಿತಭಾರತೀಯ ಸಂಸ್ಕೃತಿಹಳೆಗನ್ನಡಪಂಚ ವಾರ್ಷಿಕ ಯೋಜನೆಗಳುಹೈದರಾಲಿಮತದಾನ (ಕಾದಂಬರಿ)ಭಾರತೀಯ ಜನತಾ ಪಕ್ಷಬೆಳಗಾವಿಇನ್ಸ್ಟಾಗ್ರಾಮ್ಪಟ್ಟದಕಲ್ಲುಮಿಥುನರಾಶಿ (ಕನ್ನಡ ಧಾರಾವಾಹಿ)ಮತದಾನ ಯಂತ್ರಮಾಹಿತಿ ತಂತ್ರಜ್ಞಾನನಗರೀಕರಣಬೇವುಗಂಗ (ರಾಜಮನೆತನ)ಭಾರತೀಯ ರಿಸರ್ವ್ ಬ್ಯಾಂಕ್ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಭಾರತದಲ್ಲಿನ ಚುನಾವಣೆಗಳುಶ್ರೀ ರಾಘವೇಂದ್ರ ಸ್ವಾಮಿಗಳುಮಲ್ಲಿಕಾರ್ಜುನ್ ಖರ್ಗೆಮಹಾಭಾರತಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾರತೀಯ ಅಂಚೆ ಸೇವೆಯುಗಾದಿಮುದ್ದಣಮನುಸ್ಮೃತಿಕರ್ಮಧಾರಯ ಸಮಾಸಲೋಪಸಂಧಿಮಂಡ್ಯ🡆 More