ಪದಾತಿ ಪಡೆ

ಪದಾತಿ ಪಡೆ ಕಾಲ್ನಡಿಗೆಯಲ್ಲಿ ಮಿಲಿಟರಿ ಕದನದಲ್ಲಿ ಭಾಗವಹಿಸುವ ಸೇನೆಯ ಸಾಮಾನ್ಯ ವಿಭಾಗ.

ನಿಕಟ ವ್ಯಾಪ್ತಿಯ ಕದನದಲ್ಲಿ ಶತ್ರುಗಳೊಂದಿಗೆ ಕಾದಾಡುವ ಸೈನಿಕರಾಗಿ, ಪದಾತಿಪಡೆ ಘಟಕಗಳು ಯುದ್ಧ ಚಟುವಟಿಕೆಗಳನ್ನು ಅತಿ ಹೆಚ್ಚು ಸಹಿಸಿಕೊಳ್ಳುತ್ತವೆ ಮತ್ತು ಸಾಮಾನ್ಯವಾಗಿ ಸೇನಾ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಸಂಖ್ಯೆಯ ಗಾಯಾಳುಗಳನ್ನು ಅನುಭವಿಸುತ್ತದೆ. ಐತಿಹಾಸಿಕವಾಗಿ, ಯುದ್ಧ ಪಡೆಗಳ ಅತ್ಯಂತ ಹಳೆಯ ವಿಭಾಗವಾಗಿ, ಪದಾತಿ ಪಡೆಯು ಒಂದು ಆಧುನಿಕ ಸೇನೆಯ ಈಟಿಯ ಮೊನೆಯಿದ್ದಂತೆ, ಮತ್ತು ನಿರಂತರವಾಗಿ ತರಬೇತಿ ಪಡೆಯುತ್ತದೆ ಮತ್ತು ಈ ತರಬೇತಿಯು ಸಾಮಾನ್ಯವಾಗಿ ಯುದ್ಧ ಪಡೆಗಳ ಇತರ ಯಾವುದೇ ವಿಭಾಗದ ತರಬೇತಿಗಿಂತ ಹೆಚ್ಚು ದೈಹಿಕವಾಗಿ ಬೇಡಿಕೆಯ ಮತ್ತು ಮಾನಸಿಕವಾಗಿ ಒತ್ತಡದ್ದಾಗಿರುತ್ತದೆ. ಅಮೇರಿಕಾದ ಪದಾತಿಪಡೆ ವಿಭಾಗ, ಕೆನಡಾದ ಪದಾತಿ ದಳ, ಬ್ರಿಟಿಷ್ ಸೇನೆಯ ಪದಾತಿಪಡೆ, ಆಸ್ಟ್ರೇಲಿಯಾದ ಪದಾತಿ ದಳ, ಕೆಲವು ಪದಾತಿ ಪಡೆಗಳ ಸಾಮಾನ್ಯ ಪ್ರಾತಿನಿಧ್ಯಗಳು.

ಪದಾತಿ ಪಡೆ
ಮೊದಲನೇ ವಿಶ್ವಯುದ್ಧದಲ್ಲಿ ರಾಯಲ್ ಐರಿಷ್ ರೈಫ಼ಲ್ಸ್ ಪದಾತಿ ಪಡೆ.

ಪದಾತಿ ಪಡೆಯು ಮಿಲಿಟರಿ ವಾಹನಗಳಿಗೆ ದುರ್ಗಮವಾದ ಭೂಪ್ರದೇಶವನ್ನು ಪ್ರವೇಶಿಸಬಲ್ಲದು ಮತ್ತು ಅಲ್ಲಿ ಕುಶಲವಾಗಿ ಚಲಿಸಬಲ್ಲದು ಮತ್ತು ಹೆಚ್ಚು ನಿರಂತರ ವಿನಾಶಕಾರಿ ಸಾಮರ್ಥ್ಯದ ಸಿಬ್ಬಂದಿ ಒದಗಿತ ವೈಯಕ್ತಿಕ ಶಸ್ತ್ರಗಳನ್ನು ಬಳಸಬಲ್ಲದು. ಯುದ್ಧದಲ್ಲಿ ತೊಡಗಿಸಿಕೊಳ್ಳಲು ಆಧುನಿಕ ಪದಾತಿಗಳ ಸಾರಿಗೆ ಮತ್ತು ವಿತರಣಾ ತಂತ್ರಗಳು ಕವಾಯತು, ಯಾಂತ್ರೀಕೃತ ಸಾರಿಗೆ, ಧುಮುಕುಕೊಡೆಯಿಂದ ವಾಯವೀಯ ಇಳಿಕೆ ಅಥವಾ ಹೆಲಿಕಾಪ್ಟರ್‍ನಿಂದ ವಾಯು ದಾಳಿ ಮತ್ತು ಸಮುದ್ರದಿಂದ ಭೂಜಲ ಇಳಿಯುವಿಕೆಯನ್ನು ಒಳಗೊಂಡಿವೆ.

ಸಶಸ್ತ್ರ ಪಡೆಯ ವಿಭಾಗವಾಗಿ, ಯುದ್ಧದಲ್ಲಿ ಪದಾತಿ ಪಡೆಯ ಪಾತ್ರ ನಿಕಟ ವ್ಯಾಪ್ತಿಯಲ್ಲಿ ಶತ್ರುವಿನೊಂದಿಗೆ ತೊಡಗಿಕೊಳ್ಳುವುದು, ಅವರೊಡನೆ ಹೋರಾಡುವುದು ಮತ್ತು ಅವರನ್ನು ಕೊಲ್ಲುವುದು—ಉದ್ದಿಷ್ಟಕಾರ್ಯಕ್ಕೆ ಬೇಕಾದಂತೆ ಗುಂಡುಶಸ್ತ್ರ (ರೈಫ಼ಲ್, ಪಿಸ್ತೂಲು, ಮಷೀನ್ ಗನ್), ಅಂಚುಳ್ಳ ಆಯುಧ (ಚೂರಿ, ಕೋವಿ ಈಟಿ), ಅಥವಾ ಬರೀ ಕೈಗಳನ್ನು ಬಳಸಿ.

ಪದಾತಿ ಪಡೆಯು ಕಾಳಗದಲ್ಲಿ ಸಂಘಟಿತ ರಚನೆಗಳ ಬಳಕೆಯ ಮೇಲೆ ಅವಲಂಬಿಸುತ್ತದೆ. ಇವು ಕಾಲಕ್ರಮೇಣ ವಿಕಸನಗೊಂಡಿವೆ, ಆದರೆ ಪರಿಣಾಮಕಾರಿ ಪದಾತಿ ಪಡೆ ಅಭಿವೃದ್ಧಿ ಮತ್ತು ನಿಯೋಜನೆಯ ಪ್ರಮುಖ ಅಂಶವಾಗಿ ಉಳಿದಿವೆ. ೧೯ನೇ ಶತಮಾನದ ಕೊನೆಯವರೆಗೆ, ಪದಾತಿ ಘಟಕಗಳು ಬಹುತೇಕ ಭಾಗ ಶತ್ರುವಿನ ಸಂಪರ್ಕ ಆಗುವವರೆಗೆ ನಿಕಟ ರಚನೆಗಳಲ್ಲಿ ಬಳಸಲ್ಪಡುತ್ತಿದ್ದವು. ಇದು ದಂಡನಾಯಕರಿಗೆ ಘಟಕದ ಹಿಡಿತ ಉಳಿಸಿಕೊಳ್ಳಲು ಅನುಮತಿಸುತ್ತಿತ್ತು, ವಿಶೇಷವಾಗಿ ಕುಶಲ ಚಲನೆಯಲ್ಲಿ, ಜೊತೆಗೆ ಅಧಿಕಾರಿಗಳಿಗೆ ದರ್ಜೆಗಳ ನಡುವೆ ಶಿಸ್ತು ಕಾಪಾಡಲು ಅನುಮತಿಸುತ್ತಿತ್ತು.

Tags:

🔥 Trending searches on Wiki ಕನ್ನಡ:

ಭೋವಿಜಪಾನ್ಭಾರತದ ಸಂವಿಧಾನದ ೩೭೦ನೇ ವಿಧಿಬ್ರಹ್ಮಹಾವಿನ ಹೆಡೆಕರ್ನಾಟಕದ ನದಿಗಳುಗುಪ್ತ ಸಾಮ್ರಾಜ್ಯಚೆನ್ನಕೇಶವ ದೇವಾಲಯ, ಬೇಲೂರುತಾಳಗುಂದ ಶಾಸನವಿಜಯ ಕರ್ನಾಟಕತತ್ಪುರುಷ ಸಮಾಸಜೀವನಬೀಚಿಪಂಜೆ ಮಂಗೇಶರಾಯ್ಹೈದರಾಲಿಸಹಕಾರಿ ಸಂಘಗಳುತುಳಸಿಕರ್ನಾಟಕದ ತಾಲೂಕುಗಳುತುಮಕೂರುಡಿ.ಕೆ ಶಿವಕುಮಾರ್ಪಂಚ ವಾರ್ಷಿಕ ಯೋಜನೆಗಳುಸೀಮೆ ಹುಣಸೆಕ್ರಿಯಾಪದಭಾರತದ ರಾಷ್ಟ್ರಪತಿಗಳ ಪಟ್ಟಿಸುಭಾಷ್ ಚಂದ್ರ ಬೋಸ್ವೃದ್ಧಿ ಸಂಧಿಕನ್ನಡ ಸಾಹಿತ್ಯ ಪ್ರಕಾರಗಳುಬಿ.ಜಯಶ್ರೀಚಾಮರಾಜನಗರಇಂಡೋನೇಷ್ಯಾಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಪ್ರಾಥಮಿಕ ಶಿಕ್ಷಣಭಾರತದಲ್ಲಿ ಮೀಸಲಾತಿಅಳತೆ, ತೂಕ, ಎಣಿಕೆಹಸ್ತ ಮೈಥುನಕರ್ನಾಟಕದಲ್ಲಿ ಪಂಚಾಯತ್ ರಾಜ್ಜಾಗತಿಕ ತಾಪಮಾನಭಾರತೀಯ ಧರ್ಮಗಳುಹಕ್ಕ-ಬುಕ್ಕಸಂಸ್ಕೃತಕಪ್ಪೆ ಅರಭಟ್ಟಹರಿಹರ (ಕವಿ)ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕೊಡಗುಭಾರತದ ಸಂವಿಧಾನಮಾನವನಲ್ಲಿ ನಿರ್ನಾಳ ಗ್ರಂಥಿಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಯಕೃತ್ತುಬಾಹುಬಲಿದ್ವಂದ್ವ ಸಮಾಸಸಂಪ್ರದಾಯಪೊನ್ನಜ್ಞಾನಪೀಠ ಪ್ರಶಸ್ತಿಬೆಂಕಿಸೀತಾ ರಾಮವೀರೇಂದ್ರ ಪಾಟೀಲ್ಕುತುಬ್ ಮಿನಾರ್ಭಾರತದ ಸಂವಿಧಾನ ರಚನಾ ಸಭೆಭಾರತದ ಭೌಗೋಳಿಕತೆಶಿವರಾಜ್‍ಕುಮಾರ್ (ನಟ)ಇಮ್ಮಡಿ ಪುಲಕೇಶಿವ್ಯಾಪಾರಕೊಡವರುಕಾಲಾಯ ತಸ್ಮೈ ನಮಃ (ಚಲನಚಿತ್ರ)ವಾಟ್ಸ್ ಆಪ್ ಮೆಸ್ಸೆಂಜರ್ಪುರಂದರದಾಸಪಂಚತಂತ್ರಅಷ್ಟ ಮಠಗಳುರಾಘವಾಂಕಶಿಶುಪಾಲಅರಿಸ್ಟಾಟಲ್‌ಸಂಭೋಗಮೌರ್ಯ ಸಾಮ್ರಾಜ್ಯಕನ್ನಡಪ್ರಭಹಯಗ್ರೀವಬ್ಲಾಗ್ಬಿ. ಆರ್. ಅಂಬೇಡ್ಕರ್🡆 More