ದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ

ದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ(ಜೈಂಟ್ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್(GMRT))ವು ಭಾರತದ ಖೋಡಾಡ್‌ನಲ್ಲಿನ ನಾರಾಯಣಗಾಂವ್ ಬಳಿಯ, ಪುಣೆಯ ಹತ್ತಿರದಲ್ಲಿರುವ ಜುನ್ನಾರ್ ಪ್ರದೇಶದಲ್ಲಿ ನಿರ್ಮಿತವಾಗಿದೆ.

ಇದು ೪೫ ಮೀಟರ್ ವ್ಯಾಸದ ಮೂವತ್ತು ಸಂಪೂರ್ಣ ಸ್ಟೀರಬಲ್ ಪ್ಯಾರಾಬೋಲಿಕ್ ರೇಡಿಯೋ ಟೆಲಿಸ್ಕೋಪ್‌ಗಳ ಒಂದು ಶ್ರೇಣಿಯಾಗಿದ್ದು, ಮೀಟರ್ ತರಂಗಾಂತರದಲ್ಲಿ ವೀಕ್ಷಿಸುತ್ತದೆ. ಇದನ್ನು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಒಂದು ಭಾಗವಾದ ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಆಸ್ಟ್ರೋಫಿಸಿಕ್ಸ್ (NCRA) ನಿರ್ವಹಿಸುತ್ತದೆ. ಇದನ್ನು ದಿವಂಗತ ಪ್ರೊ. ಗೋವಿಂದ್ ಸ್ವರೂಪ್ ಅವರ ಮಾರ್ಗದರ್ಶನದಲ್ಲಿ೧೯೮೪ ರಿಂದ ೧೯೬೬ರ ಅವಧಿಯಲ್ಲಿ ಕಲ್ಪಿಸಲಾಯಿತು . ಇದು ೨೫ಕಿ.ಮೀ.(೧೬ಮೀ) ಬೇಸ್‌ಲೈನ್‌ಗಳನ್ನು ಹೊಂದಿರುವ ವ್ಯತಿಕರಣಮಾಪಕದ ರಚನೆಯಾಗಿದೆ. ಇದನ್ನು ಇತ್ತೀಚೆಗೆ ಹೊಸ ರಿಸೀವರ್‌ಗಳೊಂದಿಗೆ ಏಳಿಗೆ(ಅಪ್‌ಗ್ರೇಡ್) ಮಾಡಲಾಗಿದೆ. ನಂತರ ಇದನ್ನು ಅಪ್‌ಗ್ರೇಡ್ ಜೈಂಟ್ ಮೆಟ್ರೆವೇವ್ ರೇಡಿಯೋ ಟೆಲಿಸ್ಕೋಪ್ (uGMRT) ಎಂದೂ ಕರೆಯಲಾಗುತ್ತದೆ.

ದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ
ದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ

ಸ್ಥಳ

ಜಿ.ಎಮ್.ಆರ್.ಟಿ(GMRT) ವೀಕ್ಷಣಾಲಯವು ಪುಣೆಯ ಉತ್ತರಕ್ಕೆ ಖೋಡಾಡ್‌ನಲ್ಲಿ ಸುಮಾರು ೮೦ಕಿ.ಮೀಟರ್‌ನಲ್ಲಿ ನೆಲೆಗೊಂಡಿದೆ ಹಾಗೂ ಸಮೀಪದಲ್ಲಿರುವ ನಾರಾಯಣಗಾಂವ್ ಪಟ್ಟಣವು ದೂರದರ್ಶಕ ತಾಣದಿಂದ ೯ ಕಿ.ಮೀ. ದೂರದಲ್ಲಿದೆ. ಜೊತೆಗೆ ಎನ್‌ಸಿಆರ್‌ಎ(NCRA) ಕಚೇರಿಯು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಆವರಣದಲ್ಲಿದೆ.

ವಿಜ್ಞಾನ ಮತ್ತು ವೀಕ್ಷಣೆಗಳು

ದೂರದರ್ಶಕವು ಅದರ ಅಭಿವೃದ್ಧಿಯ ಸಮಯದಲ್ಲಿ ಒಂದು ಗುರಿಯಾಗಿದ್ದು, ಬ್ರಹ್ಮಾಂಡದಲ್ಲಿ ನಕ್ಷತ್ರಪುಂಜದ ರಚನೆಯ ಯುಗವನ್ನು ನಿರ್ಧರಿಸಲು ಆದಿಸ್ವರೂಪದ ತಟಸ್ಥ ಹೈಡ್ರೋಜನ್ ಮೋಡಗಳಿಂದ ಹೆಚ್ಚು ಕೆಂಪುಬಣ್ಣದ ೨೧-ಸೆಂ.ಮೀ. ರೇಡಿಯೇಶನ್ ವಿಕಿರಣವನ್ನು ಹುಡುಕುವುದು.

ಪ್ರಪಂಚದಾದ್ಯಂತದ ಖಗೋಳಶಾಸ್ತ್ರಜ್ಞರು ನಿಯಮಿತವಾಗಿ ಈ ದೂರದರ್ಶಕವನ್ನು HII ಪ್ರದೇಶಗಳು, ಗೆಲಕ್ಸಿಗಳು, ಪಲ್ಸರ್‌ಗಳು, ಸೂಪರ್ನೋವಾಗಳು ಮತ್ತು ಸೂರ್ಯ ಮತ್ತು ಸೌರ ಮಾರುತಗಳಂತಹ ವಿವಿಧ ಖಗೋಳ ವಸ್ತುಗಳನ್ನು ವೀಕ್ಷಿಸಲು ಬಳಸುತ್ತಾರೆ.

ಆಗಸ್ಟ್ ೨೦೧೮ ರಲ್ಲಿ, ೧೨ ಬಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿರುವ ಅತ್ಯಂತ ದೂರದ ನಕ್ಷತ್ರಪುಂಜವನ್ನು ದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ(GMRT) ಕಂಡುಹಿಡಿದಿದೆ.

ಫೆಬ್ರವರಿ ೨೦೨೦ ರಲ್ಲಿ, ಬ್ರಹ್ಮಾಂಡದ ಇತಿಹಾಸದಲ್ಲಿ ಅತಿದೊಡ್ಡ ಸ್ಫೋಟವಾದ ಒಫಿಯುಚಸ್ ಸೂಪರ್‌ಕ್ಲಸ್ಟರ್ ಸ್ಫೋಟದ ವೀಕ್ಷಣೆಗೆ ಇದು ಸಹಾಯ ಮಾಡಿತು.

ಚಟುವಟಿಕೆಗಳು

ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನದಂದು ವೀಕ್ಷಣಾಲಯವು ಸುತ್ತಮುತ್ತಲಿನ ಪ್ರದೇಶದ ಶಾಲೆಗಳು ಮತ್ತು ಕಾಲೇಜುಗಳ ಸಾರ್ವಜನಿಕರನ್ನು ಮತ್ತು ವಿದ್ಯಾರ್ಥಿಗಳನ್ನು ಅಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳು ಮತ್ತು ಖಗೋಳಶಾಸ್ತ್ರಜ್ಞರಿಂದ ರೇಡಿಯೊ ಖಗೋಳಶಾಸ್ತ್ರ, ರಿಸೀವರ್ ತಂತ್ರಜ್ಞಾನ ಮತ್ತು ಖಗೋಳಶಾಸ್ತ್ರದ ವಿವರಣೆಗಳನ್ನು ಕೇಳಲು ಸೈಟ್‌ಗೆ ಭೇಟಿ ನೀಡಲು ಆಹ್ವಾನಿಸುತ್ತದೆ. ಹತ್ತಿರದ ಶಾಲೆಗಳು/ಕಾಲೇಜುಗಳು ತಮ್ಮ ವೈಯಕ್ತಿಕ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶನದಲ್ಲಿ ಇರಿಸಲು ಆಹ್ವಾನಿಸಲಾಗಿದೆ ಮತ್ತು ಪ್ರತಿ ಹಂತದಲ್ಲೂ (ಪ್ರಾಥಮಿಕ, ಮಾಧ್ಯಮಿಕ ಶಾಲೆ ಮತ್ತು ಜೂನಿಯರ್ ಕಾಲೇಜು) ಅತ್ಯುತ್ತಮವಾದದನ್ನು ನೀಡಲಾಗುತ್ತದೆ.

ಬೆಳಿಗ್ಗೆ (೧೧೦೦ ಗಂಟೆಗಳು - ೧೩೦೦ ಗಂಟೆಗಳು) ಮತ್ತು ಸಂಜೆ (೧೫೦೦ ಗಂಟೆಗಳಿಂದ ೧೭೦೦ ಗಂಟೆಗಳು) ಈ ಎರಡು ಅವಧಿಗಳಲ್ಲಿ ಮಾತ್ರ ಶುಕ್ರವಾರದಂದು ಸಂದರ್ಶಕರನ್ನು ಜಿ.ಎಮ್.ಆರ್.ಟಿ(GMRT) ಗೆ ಅನುಮತಿಸಲಾಗುತ್ತದೆ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ ಸ್ಥಳದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ ವಿಜ್ಞಾನ ಮತ್ತು ವೀಕ್ಷಣೆಗಳುದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ ಚಟುವಟಿಕೆಗಳುದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ ಉಲ್ಲೇಖಗಳುದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ ಬಾಹ್ಯ ಕೊಂಡಿಗಳುದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕತರಂಗಭಾರತಮುಂಬಯಿ

🔥 Trending searches on Wiki ಕನ್ನಡ:

ಗಣೇಶ್ (ನಟ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಯೋನಿಸಂಭೋಗಜನಪದ ಕ್ರೀಡೆಗಳುಜಲ ಚಕ್ರಭಾರತದಲ್ಲಿನ ಶಿಕ್ಷಣಮೈಸೂರು ಅರಮನೆಹಳೇಬೀಡುಮಣ್ಣುಹರ್ಡೇಕರ ಮಂಜಪ್ಪಕನ್ನಡಕಣ್ಣುಉಪ್ಪಿನ ಸತ್ಯಾಗ್ರಹಸೂರ್ಯ (ದೇವ)ದಾಸ ಸಾಹಿತ್ಯವಿಷ್ಣುಶರ್ಮಪ್ರಗತಿಶೀಲ ಸಾಹಿತ್ಯಕನ್ನಡ ಪತ್ರಿಕೆಗಳುಸಂಶೋಧನೆತಿಂಥಿಣಿ ಮೌನೇಶ್ವರಕರ್ನಾಟಕದ ಸಂಸ್ಕೃತಿಶ್ರೀ ರಾಘವೇಂದ್ರ ಸ್ವಾಮಿಗಳುಕೃಷ್ಣವಿಧಾನ ಪರಿಷತ್ತುಪೌರತ್ವಕೃತಕ ಬುದ್ಧಿಮತ್ತೆಪುರಾತತ್ತ್ವ ಶಾಸ್ತ್ರಶ್ರವಣ ಕುಮಾರಬುದ್ಧಭಾರತದಲ್ಲಿ ಪರಮಾಣು ವಿದ್ಯುತ್ಭಾರತ ಸಂವಿಧಾನದ ಪೀಠಿಕೆಕಪ್ಪೆ ಅರಭಟ್ಟರಾಮ್ ಮೋಹನ್ ರಾಯ್ಪ್ರವಾಸೋದ್ಯಮವ್ಯಂಜನಕೇಶಿರಾಜಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದೇವತಾರ್ಚನ ವಿಧಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ವ್ಯವಹಾರಭಾರತದ ಸಂಸತ್ತುತತ್ಸಮ-ತದ್ಭವಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅಮೇರಿಕದ ಫುಟ್‌ಬಾಲ್ಕುರುಬಗೋವಅಂಗವಿಕಲತೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಏಡ್ಸ್ ರೋಗರೋಸ್‌ಮರಿಸಮಾಜವಾದರಚಿತಾ ರಾಮ್ಮುಖ್ಯ ಪುಟಸುಧಾ ಮೂರ್ತಿಉಡುಪಿ ಜಿಲ್ಲೆಕಾಗೆವಿವಾಹಋಗ್ವೇದಕೊಪ್ಪಳಭಾಷೆಎಚ್ ನರಸಿಂಹಯ್ಯಐಹೊಳೆಬೆಳವಡಿ ಮಲ್ಲಮ್ಮಕೇಂದ್ರ ಸಾಹಿತ್ಯ ಅಕಾಡೆಮಿಬೆಸಗರಹಳ್ಳಿ ರಾಮಣ್ಣರಾಜ್‌ಕುಮಾರ್ಗಿರೀಶ್ ಕಾರ್ನಾಡ್ಬಿ.ಜಯಶ್ರೀದೇವರ/ಜೇಡರ ದಾಸಿಮಯ್ಯಜವಾಹರ‌ಲಾಲ್ ನೆಹರುಭಾರತದ ತ್ರಿವರ್ಣ ಧ್ವಜಬ್ಯಾಸ್ಕೆಟ್‌ಬಾಲ್‌ಭೋವಿಶಬ್ದಶ್ರವಣಬೆಳಗೊಳಗಾದೆತಾಜ್ ಮಹಲ್🡆 More