ಚಲನಚಿತ್ರ ತಾನ್ಹಾಜಿ

 

ತಾನ್ಹಾಜಿ
ಚಲನಚಿತ್ರ ತಾನ್ಹಾಜಿ
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಓಂ ರೌತ್
ನಿರ್ಮಾಪಕ
  • ಅಜಯ್ ದೇವ್‍ಗನ್
  • ಭೂಷಣ್ ಕುಮಾರ್
  • ಕ್ರಿಶನ್ ಕುಮಾರ್
ಲೇಖಕ
  • ಪ್ರಕಾಶ್ ಕಪಾಡಿಯಾ
  • ಓಂ ರೌತ್
ಸಂಭಾಷಣೆಸಂಜಯ್ ಮಿಶ್ರಾ
ಪಾತ್ರವರ್ಗ
  • ಅಜಯ್ ದೇವ್‍ಗನ್
  • ಸೈಫ಼್ ಅಲಿ ಖಾನ್
  • ಕಾಜೋಲ್
  • ನೇಹಾ ಶರ್ಮಾ
  • ಶರದ್ ಕೇಳ್ಕರ್
ಸಂಗೀತ
  • ಹಾಡುಗಳು:
    ಅಜಯ್-ಅತುಲ್
    ಸಚೇತ್-ಪರಂಪರಾ
    ಮೇಹುಲ್ ವ್ಯಾಸ್
  • ಹಿನ್ನೆಲೆ ಸಂಗೀತ:
    ಸಂದೀಪ್ ಶಿರೋಡ್ಕರ್
ಛಾಯಾಗ್ರಹಣಕೀಕೊ ನಾಕಾಹಾರಾ
ಸಂಕಲನಧರ್ಮೇಂದ್ರ ಶರ್ಮಾ
ಸ್ಟುಡಿಯೋ
  • ಟಿ-ಸೀರೀಸ್ ಫ಼ಿಲ್ಮ್ಸ್
  • ಅಜಯ್ ದೇವ್‍ಗನ್ ಫ಼ಿಲ್ಮ್ಸ್
ವಿತರಕರುಎಎ ಫ಼ಿಲ್ಮ್ಸ್
ಬಿಡುಗಡೆಯಾಗಿದ್ದು
  • 10 ಜನವರಿ 2020 (2020-01-10) (India)
ಅವಧಿ135 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಂಡವಾಳ₹೧.೨೫ ಶತಕೋಟಿ
ಬಾಕ್ಸ್ ಆಫೀಸ್₹೩.೬೮ ಶತಕೋಟಿ

ತಾನ್ಹಾಜಿ: ದಿ ಅನ್ಸಂಗ್ ವಾರಿಯರ್ 2020ರ ಒಂದು ಹಿಂದಿ ಐತಿಹಾಸಿಕ ಸಾಹಸಪ್ರಧಾನ ಚಲನಚಿತ್ರ. ಓಂ ರೌತ್ ಇದರ ಸಹ-ಬರಹಗಾರರು ಮತ್ತು ನಿರ್ದೇಶಕರಾಗಿದ್ದಾರೆ. ಈ ಚಲನಚಿತ್ರವನ್ನು ಟಿ-ಸೀರೀಸ್ ಹಾಗೂ ಅಜಯ್ ದೇವ್‍ಗನ್ ಎಫ್‍ಫ಼ಿಲ್ಮ್ಸ್ ಅಡಿಯಲ್ಲಿ ಭೂಷಣ್ ಕುಮಾರ್, ಕ್ರಿಶನ್ ಕುಮಾರ್ ಮತ್ತು ಅಜಯ್ ದೇವಗನ್ ನಿರ್ಮಾಣ ಮಾಡಿದ್ದಾರೆ. ಜನಪ್ರಿಯ ಬೇಡಿಕೆಯ ನಂತರ ಈ ಚಲನಚಿತ್ರವನ್ನು ಮರಾಠಿ ಭಾಷೆಯಲ್ಲಿ ಡಬ್ ಮಾಡಲಾಗಿದೆ. ಮರಾಠಾ ಯೋಧ ತಾನಾಜಿ ಮಾಲುಸಾರೆ ಅವರ ಜೀವನವನ್ನು ಚಿತ್ರಿಸುವ ಈ ಚಲನಚಿತ್ರದಲ್ಲಿ ಅಜಯ್ ದೇವಗನ್, ಸೈಫ್ ಅಲಿ ಖಾನ್ ಮತ್ತು ಕಾಜೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಶರದ್ ಕೇಳ್ಕರ್ ಮತ್ತು ಲ್ಯೂಕ್ ಕೆನ್ನಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 17 ನೇ ಶತಮಾನದಲ್ಲಿ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರವು ಮೊಘಲ್ ಚಕ್ರವರ್ತಿ ಔರಂಗಜೇಬನಿಗೆ ಕೋಂಢಾಣಾ ಕೋಟೆಯು ವರ್ಗಾವಣೆಯಾದ ಮತ್ತು ಅದರ ನಿಯಂತ್ರಣವನ್ನು ತನ್ನ ವಿಶ್ವಾಸಾರ್ಹ ರಜಪೂತ ಕಾವಲುಗಾರ ಉದಯಭಾನ್ ಸಿಂಗ್ ರಾಥೋಡ್‌ಗೆ ವರ್ಗಾಯಿಸಿದ ನಂತರ ಅದನ್ನು ಪುನಃ ವಶಪಡಿಸಿಕೊಳ್ಳಲು ತಾನಾಜಿಯ ಪ್ರಯತ್ನಗಳ ಮೇಲೆ ಕೇಂದ್ರೀಕರಿಸುತ್ತದೆ.

ಈ ಚಲನಚಿತ್ರವನ್ನು 20 ಜುಲೈ 2017 ರಂದು ಪ್ರಾರಂಭಿಸಲಾಯಿತು. ಇದರ ಮೂಲಕ ರೌತ್ ಬಾಲಿವುಡ್‌ನಲ್ಲಿ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು. ಪ್ರಧಾನ ಛಾಯಾಗ್ರಹಣವು 25 ಸೆಪ್ಟೆಂಬರ್ 2018 ರಂದು ಪ್ರಾರಂಭವಾಯಿತು. ಮತ್ತು ಮೇ 2019 ರೊಳಗೆ ಪೂರ್ಣಗೊಂಡಿತು. ಚಿತ್ರೀಕರಣವು ಹೆಚ್ಚಾಗಿ ಮುಂಬೈನ ಫಿಲ್ಮ್ ಸಿಟಿಯಾದ್ಯಂತ ನಡೆಯಿತು ಮತ್ತು ಕೆಲವು ದೃಶ್ಯಗಳನ್ನು ಪುಣೆಯಲ್ಲಿ ಚಿತ್ರೀಕರಿಸಲಾಯಿತು. ಛಾಯಾಗ್ರಹಣ ಮತ್ತು ಸಂಕಲನವನ್ನು ಕೀಕೋ ನಕಹಾರಾ ಮತ್ತು ಧರ್ಮೇಂದ್ರ ಶರ್ಮಾ ನಿರ್ವಹಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ಸಂದೀಪ್ ಶಿರೋಡ್ಕರ್ ಸಂಯೋಜಿಸಿದ್ದಾರೆ; ಧ್ವನಿವಾಹನ ಸಂಪುಟವನ್ನು ಅಜಯ್-ಅತುಲ್, ಸಚೇತ್-ಪರಂಪರಾ ಮತ್ತು ಮೆಹುಲ್ ವ್ಯಾಸ್ ಸಂಯೋಜಿಸಿದ್ದಾರೆ ಮತ್ತು ಟಿ-ಸೀರೀಸ್ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.

ತಾನ್ಹಾಜಿ ಚಿತ್ರವನ್ನು 10 ಜನವರಿ 2020 ರಂದು ಬಿಡುಗಡೆ ಮಾಡಲಾಯಿತು. ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ವಿಮರ್ಶಕರು ದೇವಗನ್ ಹಾಗೂ ಸೈಫ್ ಅಲಿ ಖಾನ್‍ರ ಅಭಿನಯ, ದೃಶ್ಯ ಪರಿಣಾಮಗಳು, ಛಾಯಾಗ್ರಹಣ, ಸಾಹಸ ದೃಶ್ಯಗಳು, ಕಲಾ ನಿರ್ದೇಶನ, ಸಂಗೀತ, ಹಿನ್ನೆಲೆ ಸಂಗೀತ ಮತ್ತು ಸಂಕಲನವನ್ನು ಮೆಚ್ಚಿದರು. ಚಿತ್ರವು ವಿಶ್ವಾದ್ಯಂತ ₹ 3.67 ಬಿಲಿಯನ್‍ನಷ್ಟು ಗಳಿಸಿತು ಮತ್ತು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಎಂದು ಘೋಷಿತವಾಯಿತು.

ಕಥಾವಸ್ತು

1647 ರಲ್ಲಿ, ತಾನ್ಹಾಜಿಯ ತಂದೆ ಕಾಳೋಜಿ ಮಾಲುಸರೆ ಅವನಿಗೆ ಕತ್ತಿವರಸೆಯಲ್ಲಿ ತರಬೇತಿ ನೀಡುತ್ತಾನೆ. ನಂತರ ಉಮ್ರತ್‌ನಲ್ಲಿ ಮೊಘಲ್ ಲೂಟಿಗೆ ಬಲಿಯಾಗುತ್ತಾನೆ. 17 ವರ್ಷಗಳ ನಂತರ 1664 ರಲ್ಲಿ, ಈಗ ವಯಸ್ಕನಾಗಿರುವ ತಾನ್ಹಾಜಿ (ಅಜಯ್ ದೇವಗನ್) ತನ್ನ ಕಿರಿಯ ಸಹೋದರ ಸೂರ್ಯಾಜಿಯೊಂದಿಗೆ, ಒಳನುಗ್ಗುವ ಮೊಘಲ್ ಅಶ್ವಸೈನ್ಯದ ಮೇಲೆ ದಾಳಿ ಮಾಡಲು ಛತ್ರಪತಿ ಶಿವಾಜಿ ಮಹಾರಾಜರ (ಶರದ್ ಕೇಳ್ಕರ್) ಮರಾಠಾ ಸೈನ್ಯಕ್ಕೆ ಆದೇಶಿಸುತ್ತಾನೆ.

1665 ರಲ್ಲಿ, ಮೊಘಲ್ ಚಕ್ರವರ್ತಿ ಔರಂಗಜೇಬ್‍ನು (ಲ್ಯೂಕ್ ಕೆನಿ) ಡೆಕ್ಕನ್‌ನಲ್ಲಿ ಶಿವಾಜಿಯ ಕ್ಷಿಪ್ರ ಚಕ್ರಾಧಿಪತ್ಯದ ವಿಸ್ತರಣೆಯನ್ನು ತಡೆಯುವ ಸಲುವಾಗಿ ಶಿವಾಜಿಯನ್ನು ಸೆರೆಹಿಡಿಯಲು ತನ್ನ ದಂಡಾಧಿಪತಿಗಳಲ್ಲಿ ಒಬ್ಬನಾದ ಅಂಬರ್‌ನ ರಾಜ ಜೈ ಸಿಂಗ್‍ನನ್ನು ಕಳುಹಿಸುತ್ತಾನೆ. ಹೀಗೆ ಅವನು ಶಿವಾಜಿಯನ್ನು, ಅವನ ನಿಯಂತ್ರಣದಲ್ಲಿರುವ ಅವನ 23 ಕೋಟೆಗಳನ್ನು (ಪುರಂದರ ಕದನ) ವಶಪಡಿಸಿಕೊಳ್ಳುತ್ತಾನೆ. ನಂತರ, ಮೊಘಲ್ ದಂಡಾಧಿಪತಿ ಬೇಷಕ್ ಖಾನ್ ಯುದ್ಧಾನುಕೂಲದ ಕೋಂಢಾಣಾ ಕೋಟೆಯನ್ನು (ಈಗ ಸಿಂಹಗಢ್ ಕೋಟೆ ಎಂದು ಕರೆಯಲ್ಪಡುತ್ತದೆ) ತ್ವರಿತವಾಗಿ ಬಿಟ್ಟುಹೋಗುವಂತೆ ಆದೇಶಿಸುತ್ತಾನೆ ಮತ್ತು ಶಿವಾಜಿಯ ತಾಯಿ ಜೀಜಾಬಾಯಿಯನ್ನು (ಪದ್ಮಾವತಿ ರಾವ್) ಅವಮಾನಿಸುತ್ತಾನೆ. ಮರಾಠರು ಆ ಕೋಟೆಯನ್ನು ಪುನಃ ವಶಪಡಿಸಿಕೊಳ್ಳುವವರೆಗೆ ತಾನು ಬರಿಗಾಲಿನಲ್ಲಿ ಉಳಿಯುವುದಾಗಿ ಅವಳು ಪ್ರತಿಜ್ಞೆ ಮಾಡುತ್ತಾಳೆ. ತಾನ್ಹಾಜಿಗೂ ಒಪ್ಪಂದದ ಬಗ್ಗೆ ತಿಳಿಸಲಾಗುತ್ತದೆ. ಐದು ವರ್ಷಗಳ ನಂತರ, ಶಿವಾಜಿ ರಾಜನ ಗೂಢಚಾರರು ಅವನಿಗೆ ಕೋಂಢಾಣಾ ಕೋಟೆಯನ್ನು ತನ್ನ ರಜಪೂತ ಸೇನಾಪತಿ ಉದಯಭಾನ್ ರಾಥೋಡ್‌ಗೆ (ಸೈಫ್ ಅಲಿ ಖಾನ್) ಹಂಚುವ ಔರಂಗಜೇಬ‍ನ ಯೋಜನೆ ಬಗ್ಗೆ ಮತ್ತು ಅದನ್ನು ಔರಂಗ್‍ಜ಼ೇಬ್‍ನ ದಕ್ಷಿಣದ ಸಾಮ್ರಾಜ್ಯಶಾಹಿ ವಿಸ್ತರಣೆಗೆ ಆಧಾರವಾಗಿ ಬಳಸುವ ಯೋಜನೆಯ ಬಗ್ಗೆ ತಿಳಿಸುತ್ತಾನೆ. ರಾಜೇ ಕೋಂಢಾಣಾವನ್ನು ಮರಳಿ ವಶಪಡಿಸಿಕೊಳ್ಳಲು ಯೋಜಿಸುತ್ತಾನೆ. ತಾನ್ಹಾಜಿ ಸಮರ್ಥ ಸೇನಾಪತಿಯಾಗಿದ್ದರೂ, ಅವನ ಮಗ ರಾಯಾಬಾನ ಮುಂಬರುವ ವಿವಾಹದ ಕಾರಣದಿಂದ ಅವನನ್ನು ನೇಮಿಸಲು ಸಾಧ್ಯವಿಲ್ಲವೆಂದು ಮನಗಂಡು ತಾನೇ ದಂಡಯಾತ್ರೆಯನ್ನು ಮುನ್ನಡೆಸಬೇಕೆಂದು ರಾಜೇ ಪರಿಗಣಿಸುತ್ತಾನೆ. ಏತನ್ಮಧ್ಯೆ, ತಾನ್ಹಾಜಿ ತನ್ನ ಕುಟುಂಬದೊಂದಿಗೆ ಹೋಳಿ ಆಚರಿಸುತ್ತಾನೆ. ಮರಾಠರು ತಮ್ಮ ಯುದ್ಧದ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ ಮತ್ತು ಶಿವಾಜಿಯು ದಂಡಯಾತ್ರೆಯ ಬಗ್ಗೆ ತಾನ್ಹಾಜಿಗೆ ತಿಳಿಯಬಾರದೆಂದು ತನ್ನ ಸೇನಾಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಾನೆ. ರಾಯಬಾನ ಮದುವೆಗೆ ಶಿವಾಜಿಯನ್ನು ಆಹ್ವಾನಿಸಲು ತಾನ್ಹಾಜಿ ರಾಜ್‍ಗಢ್‍ಗೆ ಬರುತ್ತಾನೆ. ಶಿವಾಜಿ ರಾಜೆಯ ಸಿಂಹಾಸನವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ ಮರಾಠಾ ಸೇನಾಪತಿ ಚಂದ್ರಾಜಿ ಪಿಸಳ್ ತನ್ನ ಸೋದರಳಿಯ ಚುಲ್ಟ್ಯಾನ ಶಿಫಾರಸಿನ ಮೇರೆಗೆ ತಾನ್ಹಾಜಿಗೆ ಆ ರಹಸ್ಯ ಯೋಜನೆಯನ್ನು ಬಹಿರಂಗಪಡಿಸುತ್ತಾನೆ. ತಾನ್ಹಾಜಿಯು ಶಿವಾಜಿ ಮತ್ತು ಜೀಜಾಬಾಯಿಯವರಿಗೆ ದಂಡಯಾತ್ರೆಯ ನೇತೃತ್ವ ವಹಿಸಲು ಅನುಮತಿ ನೀಡುವಂತೆ ಮನವೊಲಿಸುತ್ತಾನೆ ಮತ್ತು ರಾಯಾಬಾನ ವಿವಾಹವನ್ನು ಮುಂದೂಡುತ್ತಾನೆ.

ಬೇರೆಡೆ, ಉದಯಭಾನ್ ಬುರ್ಹಾನ್‌ಪುರವನ್ನು ತಲುಪುತ್ತಾನೆ. ಮರಾಠರು ಅವನ ಮಾರ್ಗದ ಸಾಧ್ಯತೆಗಳನ್ನು ಚರ್ಚಿಸುತ್ತಾರೆ. ತಾನ್ಹಾಜಿ ದಾಳಿಯ ಯೋಜನೆಯನ್ನು ರೂಪಿಸುತ್ತಾನೆ ಆದರೆ ಈ ಯೋಜನೆಯ ಬಗ್ಗೆ ಉದಯಭಾನ್‌ಗೆ ಎಚ್ಚರಿಕೆ ನೀಡಲು ಪಿಸಳ್ ಚುಲ್ಟ್ಯಾನನ್ನು ಕಳುಹಿಸುತ್ತಾನೆ. ತಾನ್ಹಾಜಿಯ ಉದ್ದಿಷ್ಟಕಾರ್ಯವನ್ನು ಹಾಳುಮಾಡಲು ಮತ್ತು ಅವನನ್ನು ಕೊಲ್ಲಲು ಪಿಸಳ್ ಯೋಜಿಸಿ ಇದರಿಂದ ಶಿವಾಜಿ ರಾಜೆ ತನ್ನನ್ನು ಈ ಕಾರ್ಯದ ಉಸ್ತುವಾರಿಯಾಗಿ ನೇಮಿಸಬಹುದೆಂದು ಆಶಿಸುತ್ತಾನೆ. ಶಿವಾಜಿ ರಾಜೆಯನ್ನು ಕೆಳಗಿಳಿಸಿ ಉದಯಭಾನ್ ಜೊತೆ ಕೈ ಜೋಡಿಸುವಷ್ಟು ಪ್ರಭಾವಿಯಾಗಲು ಪಿಸಳ್ ಉದ್ದೇಶಿಸುತ್ತಾನೆ. ಉದಯಭಾನ್ ತನ್ನ ರಜಪೂತ ಸೇನಾಪತಿ ಜಗತ್ ಸಿಂಗ್‍ನ (ವಿಪುಲ್ ಗುಪ್ತಾ) ಸಹೋದರಿ ಕಮಲಾ ದೇವಿಯನ್ನೂ (ನೇಹಾ ಶರ್ಮಾ) ದಾರಿಯಲ್ಲಿ ಕರೆತರುತ್ತಿರುತ್ತಾನೆ. ಚುಲ್ಟ್ಯಾ ತಾನ್ಹಾಜಿಯ ದಾಳಿಯ ಯೋಜನೆಯ ಬಗ್ಗೆ ಉದಯಭಾನ್‌ಗೆ ತಿಳಿಸುತ್ತಾನೆ ಮತ್ತು ಮೊಘಲ್ ಉಡುಗೆಯಲ್ಲಿರುವ ಮರಾಠಾ ಸೈನಿಕರ ಮೇಲೆ ದಾಳಿ ಮಾಡುವಂತೆ ತಾನ್ಹಾಜಿಯನ್ನು ಮೋಸಗೊಳಿಸುತ್ತಾನೆ. ಬೇರೆಡೆ, ಉದಯಭಾನ್ ಕೋಂಢಾಣಾವನ್ನು ತಲುಪುತ್ತಾನೆ ಮತ್ತು ರಾಜ್‌ಗಢ್‍ಗೆ ಬೃಹತ್ ಫಿರಂಗಿಯನ್ನು ಗುರಿಯಿಟ್ಟು ಶಿವಾಜಿಯ ಸುರಕ್ಷತೆಗೆ ಬೆದರಿಕೆ ಹಾಕುತ್ತಾನೆ. ಹತಾಶಗೊಂಡ ತಾನ್ಹಾಜಿ ಒಬ್ಬನೇ ಕೊಂಡಾಣಾವನ್ನು ತಲುಪಿ ರಹಸ್ಯ ಕಳ್ಳ ಪ್ರವೇಶದ್ವಾರದ ಬಗ್ಗೆ ತಿಳಿದುಕೊಳ್ಳುತ್ತಾನೆ. ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಕ್ಕಾಗಿ ಉದಯಭಾನ್ ಒಬ್ಬ ಸಿಬ್ಬಂದಿಯನ್ನು ಕೊಲ್ಲುತ್ತಾನೆ. ತಾನ್ಹಾಜಿಯು ಅವನ ಮೃತ ಅವಶೇಷಗಳನ್ನು ಮರಳಿ ಪಡೆಯುತ್ತಾನೆ ಮತ್ತು ಉದಯಭಾನ್‌ಗೆ ದ್ರೋಹ ಮಾಡುವಂತೆ ಗ್ರಾಮಸ್ಥರನ್ನು ಪ್ರೇರೇಪಿಸುತ್ತಾನೆ. ಕೋಂಡಾಣಾದಲ್ಲಿ ಶಿವರಾತ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವನಿಗೆ ಶಿಫಾರಸು ಮಾಡಲಾಗುತ್ತದೆ. ಅಲ್ಲಿ ಅವನು ದ್ರೋಹಕ್ಕಾಗಿ ಚುಲ್ಟ್ಯಾನನ್ನು ಕೊಲ್ಲುತ್ತಾನೆ. ತಾನ್ಹಾಜಿಯನ್ನು ಉದಯಭಾನ್‌ ಸೆರೆಮನೆಯಲ್ಲಿಟ್ಟು ಚಿತ್ರಹಿಂಸೆ ನೀಡುತ್ತಾನೆ. ಜಗತ್ ಸಿಂಗ್ ತಾನ್ಹಾಜಿಯನ್ನು ರಹಸ್ಯವಾಗಿ ಬಿಡುಗಡೆ ಮಾಡುತ್ತಾನೆ, ಮತ್ತು ಉದಯಭಾನ್ ತನ್ನ ಸಹೋದರಿಯನ್ನು ಮದುವೆಯಾಗುವ ಯೋಜನೆಯನ್ನು ಬಹಿರಂಗಪಡಿಸುತ್ತಾನೆ. ಅವರನ್ನು ಉದಯಭಾನ್‌ನ ಹಿಡಿತದಿಂದ ಬಿಡುಗಡೆ ಮಾಡುವುದಾಗಿ ತಾನ್ಹಾಜಿ ಭರವಸೆ ನೀಡುತ್ತಾನೆ. ತಾನ್ಹಾಜಿ ಕಳ್ಳದ್ವಾರದಿಂದ ತಪ್ಪಿಸಿಕೊಂಡು ಉಮ್ರತ್‌ಗೆ ಹಿಂದಿರುಗುತ್ತಾನೆ. ಅಲ್ಲಿ ಮುಂಬರುವ ಯುದ್ಧದ ಬಗ್ಗೆ ತನ್ನ ಜನರಿಗೆ ತಿಳಿಸುತ್ತಾನೆ. ತಾನ್ಹಾಜಿಯ ಪತ್ನಿ ಸಾವಿತ್ರಿ ಬಾಯಿ (ಕಾಜೋಲ್) ತನ್ನ ಗಂಡನ ಜೀವನ ಮತ್ತು ಮಗನ ಮದುವೆಯ ಬಗ್ಗೆ ಚಿಂತಿಸುತ್ತಾಳೆ. ತಾನ್ಹಾಜಿ ಸಾವಿತ್ರಿ ಬಾಯಿಗೆ ಎಲ್ಲವೂ ಸರಿಯಾಗುತ್ತದೆ ಎಂದು ಮನವರಿಕೆ ಮಾಡುತ್ತಾನೆ. ಅವನು ಹಿಂತಿರುಗಿದಾಗ ತನ್ನಿಂದ ಏನು ಬಯಸುತ್ತಾನೆಂದು ಕೇಳುವ ಮೂಲಕ ಅವಳು ಉತ್ತರಿಸುತ್ತಾಳೆ. ತಾನ್ಹಾಜಿ ಸಾವಿತ್ರಿ ಬಾಯಿಗೆ ತನಗಾಗಿ ಕಾಯುತ್ತಿರುವಾಗ ವಧುವಿನ ಉಡುಪನ್ನು ಧರಿಸಬೇಕೆಂದು ಭಾಷೆ ಮಾಡಿಸಿಕೊಳ್ಳುತ್ತಾನೆ.

ತಾನ್ಹಾಜಿಯ ಪಲಾಯನಕ್ಕೆ ಕಾರಣರಾದ ಕಾವಲುಗಾರರನ್ನು ಉದಯಭಾನ್ ಗಲ್ಲಿಗೇರಿಸುತ್ತಾನೆ ಮತ್ತು ಜಗತ್ ಸಿಂಗ್ ತನ್ನ ಸಹೋದರಿಯನ್ನು ಅಷ್ಟಮಿಯ ಮುನ್ನಾದಿನದಂದು ಉದಯಭಾನ್‌ನೊಂದಿಗೆ ಮದುವೆ ಮಾಡಲು ಒಪ್ಪುತ್ತಾನೆ. ಹೀಗೆ ತಾನ್ಹಾಜಿ ಬರುವವರೆಗೂ ಮದುವೆಯ ತಯಾರಿಯನ್ನು ನಟಿಸುವಂತೆ ಅವಳ ಮನವೊಲಿಸುತ್ತಾನೆ. ತಾನ್ಹಾಜಿ ಈಗ 4 ಫೆಬ್ರವರಿ 1670 ರಂದು ಅಷ್ಟಮಿ ರಾತ್ರಿಯಂದು ಕೋಂಢಾಣಾ ಮೇಲೆ ನೇರವಾಗಿ ದಾಳಿ ಮಾಡಲು ಯೋಜಿಸುತ್ತಾನೆ. ಅವನು ವಿವಿಧ ಪ್ರವೇಶದ್ವಾರಗಳ ಮೂಲಕ ಕೋಟೆಯನ್ನು ಅಳೆಯುತ್ತಾನೆ ಮತ್ತು ಮೊಘಲ್ ಸೈನ್ಯದ ಮೇಲೆ ದಾಳಿ ಮಾಡುತ್ತಾನೆ. ಗೊಂದಲದಲ್ಲಿ ಜಗತ್ ಮತ್ತು ಕಮಲಾ ದೇವಿ ತಪ್ಪಿಸಿಕೊಳ್ಳುತ್ತಾರೆ. ಉದಯಭಾನ್‌ನನ್ನು ಕೊಲ್ಲುವ ಮೊದಲು ಕೋಂಢಾಣಾವನ್ನು ವಶಪಡಿಸಿಕೊಂಡರೂ, ಉದಯಭಾನ್‌ಗೆ ಸೂಚನೆ ಸಿಕ್ಕು ತಾನ್ಹಾಜಿಯು ನಂತರದ ಯುದ್ಧದಲ್ಲಿ ಸಾಯುತ್ತಾನೆ. ಶಿವಾಜಿಯ ಸೈನ್ಯವು ಕೋಂಢಾಣಾವನ್ನು ವಶಪಡಿಸಿಕೊಳ್ಳುತ್ತದೆ ಆದರೆ ಅವನು ತಾನ್ಹಾಜಿಯ ಸಾವಿನಿಂದ ಕಣ್ಣೀರು ಸುರಿಸುತ್ತಾನೆ; "ಗಡ್ ಆಲಾ ಪನ್ ಸಿನ್ಹ್ ಗೇಲಾ" (ಕೋಟೆಯನ್ನು ವಶಪಡಿಸಿಕೊಳ್ಳಲಾಗಿದೆ ಆದರೆ ನಾವು ಸಿಂಹವನ್ನು ಕಳೆದುಕೊಂಡಿದ್ದೇವೆ) ಎಂದು ಹೇಳುತ್ತಾನೆ. ನಂತರ, ಅವನು ವೈಯಕ್ತಿಕವಾಗಿ ರಾಯಾಬಾನ ಮದುವೆಯನ್ನು ನೋಡಿಕೊಳ್ಳುತ್ತಾನೆ. ಸಾವಿತ್ರಿ ಬಾಯಿ ತಾನ್ಹಾಜಿಗೆ ನೀಡಿದ ತನ್ನ ವಾಗ್ದಾನವನ್ನು ಪೂರೈಸುತ್ತಾಳೆ ಮತ್ತು ಅವನು ಹಿಂದಿರುಗಲು ಕಾಯುತ್ತಿರುವಾಗ ಮುಚ್ಚಿದ ಬಾಗಿಲುಗಳ ಹಿಂದೆ ತನ್ನನ್ನು ತಾನು ವಧುವಿನಂತೆ ಅಲಂಕರಿಸುತ್ತಾಳೆ ಮತ್ತು ಔರಂಗಜೇಬನ ದಕ್ಷಿಣ ಭಾರತವನ್ನು ಮರಾಠರಿಂದ ಗೆಲ್ಲುವ ಕನಸು 18 ವರ್ಷಗಳವರೆಗೆ ಅವನು ತಾನೇ ಬಂದು ಅದನ್ನು ಮರಳಿ ಪಡೆಯುವವರೆಗೂ ಈಡೇರುವುದಿಲ್ಲ.

ಪಾತ್ರವರ್ಗ

  • ಸುಬೇದಾರ್ ತಾನಾಜಿ ಮಾಲುಸರೆ ಪಾತ್ರದಲ್ಲಿ ಅಜಯ್ ದೇವ್‍ಗನ್
  • ಉದಯ್‍ಭಾನ್ ಸಿಂಗ್ ರಾಥೋರ್ ಪಾತ್ರದಲ್ಲಿ ಸೈಫ಼್ ಅಲಿ ಖಾನ್
  • ಸಾವಿತ್ರಿ ಬಾಯಿ ಮಾಲುಸರೆ ಪಾತ್ರದಲ್ಲಿ ಕಾಜೋಲ್
  • ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಶರದ್ ಕೇಳ್ಕರ್
  • ಕಮ್ಲಾ ದೇವಿ ಪಾತ್ರದಲ್ಲಿ ನೇಹಾ ಶರ್ಮಾ
  • ಔರ್ಂಗ್‍ಜ಼ೇಬ್ ಪಾತ್ರದಲ್ಲಿ ಲ್ಯೂಕ್ ಕೆನಿ
  • ಜಗತ್ ಸಿಂಗ್ ಪಾತ್ರದಲ್ಲಿ ವಿಪುಲ್ ಗುಪ್ತಾ
  • ರಾಜ್‍ಮಾತಾ ಜೀಜಾಬಾಯಿ ಪಾತ್ರದಲ್ಲಿ ಪದ್ಮಾವತಿ ರಾವ್
  • ಸೋಯರಾಬಾಯಿ ಪಾತ್ರದಲ್ಲಿ ಏಲಾಕ್ಷಿ ಗುಪ್ತಾ
  • ನಿರೂಪಕನಾಗಿ ಸಂಜಯ್ ಮಿಶ್ರಾ
  • ಶೇಲಾರ್ ಮಾಮಾ ಪಾತ್ರದಲ್ಲಿ ಶಶಾಂಕ್ ಶೇಂಡೆ
  • ಸೂರ್ಯಾಜಿ ಮಾಲುಸರೆ ಪಾತ್ರದಲ್ಲಿ ದೇವ್‍ದತ್ತ ನಾಗೆ
  • ಚಂದ್ರಾಜಿ ಪಿಸಳ್ ಪಾತ್ರದಲ್ಲಿ ಅಜಿಂಕ್ಯ ದೇವ್
  • ಮಿರ್ಜ಼ಾ ರಾಜೆ ಜೈ ಸಿಂಗ್ ಪಾತ್ರದಲ್ಲಿ ಯೂರಿ ಸೂರಿ
  • ಕಾಳೋಜಿ ಮಾಲುಸರೆಯಾಗಿ ಜಗನ್ನಾಥ್ ನಿವನ್‍ಗುಣೆ
  • ಪಾರ್ವತಿ ಬಾಯಿ ಮಾಲುಸರೆ ಪಾತ್ರದಲ್ಲಿ ತ್ರಿಷಾ ಪಾಟಿಲ್
  • ಗೋಂಡ್ಯಾ ಪಾತ್ರದಲ್ಲಿ ಹಾರ್ದಿಕ್ ಸಂಗಾನಿ
  • ಬೇಷಕ್ ಖಾನ್ ಪಾತ್ರದಲ್ಲಿ ನಿಸ್ಸಾರ್ ಖಾನ್
  • ಘೇರ್‌ಸರ್‌ನಾಯಕ್ ಪಾತ್ರದಲ್ಲಿ ಪ್ರಸನ್ನ ಕೇತ್ಕರ್
  • ಚುಳ್ಟಿಯಾ ಪಾತ್ರದಲ್ಲಿ ಕೈಲಾಶ್ ವಾಘ್‍ಮರೆ
  • ಬಾಲ ತಾನಾಜಿಯಾಗಿ ಹರ್ಷ್ ಶರ್ಮಾ
  • ಬಾಲ ಸೂರ್ಯಾಜಿಯಾಗಿ ರಣವ್ ಶರ್ಮ
  • ರಾಯಾಬಾ ಮಾಲುಸರೆ ಪಾತ್ರದಲ್ಲಿ ಆರುಷ್ ನಂದ್
  • ಶ್ರೂಭಾವು ಪಾತ್ರದಲ್ಲಿ ಧೈರ್ಯಶೀಲ್ ಘೋಲಾಪ್
  • ತಾತ್ಯಾ ಪಾತ್ರದಲ್ಲಿ ನೀಲೇಶ್ ಲಾಲ್ವಾನಿ
  • ಗೋಂಡಿಯಾ ನಾಯಕನಾಗಿ ಪ್ರಮೋದ್ ಮೋರೆ
  • ಸೂರ್ಯಾಜಿಯ ಪತ್ನಿಯಾಗಿ ಭಾಗ್ಯಶ್ರಿ ನ್ಹಾಲ್ವೆ
  • ರಾಯಾಬಾನ ಮಾವನಾಗಿ ದೇವೇಂದ್ರ ಗಾಯಿಕ್‍ವಾಡ್
  • ರಾಜಾ ಸಂಗ್ರಾಮ್ ಸಿಂಗ್ ಪಾತ್ರದಲ್ಲಿ ರಾಜೇಶ್ ಆಹಿರ್
  • ಪಂತ್ ಪಾತ್ರದಲ್ಲಿ ಅಂಗದ್ ಮ್ಹಾಸ್ಕರ್
  • ಉದಯ್‍ಭಾನ್‍ನ ತಾಯಿಯಾಗಿ ನಿಖತ್ ಖಾನ್
  • ನಫ಼ೀಸಾ ಪಾತ್ರದಲ್ಲಿ ಅಂತಿಮಾ ಶರ್ಮಾ
  • ತ್ರಿಂಬಕ್ ರಾವ್ ಪಾತ್ರದಲ್ಲಿ ನಿರಂಜನ್ ಜಾಧವ್
  • ಪ್ರತಾಪ್ ರಾವ್ ಪಾತ್ರದಲ್ಲಿ ಶಿವ್‍ರಾಜ್ ವಾಲ್ವೇಕರ್
  • ಖೈಬರ್ ಖಾನ್ ಪಾತ್ರದಲ್ಲಿ ರಾಜ್‍ವೀರ್ ಅಂಕುರ್ ಸಿಂಗ್
  • ರಾಜಾ ಕಾಕಾ ಪಾತ್ರದಲ್ಲಿ ರಾಮ್‍ಚಂದ್ರನ್ ಸಿಂಗ್
  • ರಾಯಾಬಾನ ಹೆಂಡತಿಯಾಗಿ ಮೈರಾ ದಾಂಡೇಕರ್
  • ಮುನಾವರ್ ಖಾನ್ ಪಾತ್ರದಲ್ಲಿ ತೂಫ಼ಾಲಿ ಖಾನ್
  • ನೂರ್ ಖಾನ್ ಬೇಗ್ ಪಾತ್ರದಲ್ಲಿ ಮೃದುಲ್ ಕುಮಾರ್
  • ಗುಜರ್ ಪಾತ್ರದಲ್ಲಿ ಸಂದೀಪ್ ಜೂವಟ್‍ಕರ್
  • ರಾಜ್‍ಪುತ್ ವಕೀಲ್ ಪಾತ್ರದಲ್ಲಿ ಅಜಯ್ ಕುಮಾರ್ ನೇಯ್ನ್
  • ದಿವ್ಯಾ ಮಾಲುಸರೆ ಪಾತ್ರದಲ್ಲಿ ನಿತೇಶ್ ಕಲ್ಬಂದೆ
  • ಮುಘಲ್ ಸೈನಿಕನಾಗಿ ತಾರೀಕ್ ಅಹ್ಮದ್ ಖಾನ್

ತಯಾರಿಕೆ

ಬೆಳವಣಿಗೆ

ಅಜಯ್ ದೇವ್‍ಗನ್, ಮರಾಠ ಯೋಧ ತಾನಾಜಿ ಮಾಲುಸರೆ ಅವರ ಜೀವನವನ್ನು ಆಧರಿಸಿ ಓಂ ರಾವುತ್ ಅವರೊಂದಿಗೆ ಐತಿಹಾಸಿಕ ಯುಗ ಪ್ರಚೋದಕ ಚಲನಚಿತ್ರವನ್ನು ತಯಾರಿಸಲು ನಿರ್ಧರಿಸಿದರು. ಇದನ್ನು ಅಧಿಕೃತವಾಗಿ ತಾನಾಜಿ: ದಿ ಅನ್‌ಸಂಗ್ ವಾರಿಯರ್ ಎಂದು ಹೆಸರಿಸಲಾಯಿತು. ತಾನಾಜಿಯ ಮೊದಲ ನೋಟವನ್ನು 20 ಜುಲೈ 2017 ರಂದು ಬಿಡುಗಡೆ ಮಾಡಲಾಯಿತು. ಪೂರ್ವ-ನಿರ್ಮಾಣ ಕಾರ್ಯವು ಮರುದಿನ ಪ್ರಾರಂಭವಾಯಿತು.

ಚಲನಚಿತ್ರ ತಯಾರಕರು ಚಲನಚಿತ್ರವನ್ನು 3ಡಿ ಶೈಲಿಯಲ್ಲಿ ಬಿಡುಗಡೆ ಮಾಡಲು ಯೋಜಿಸಿದರು, ಹೀಗಾಗಿ ಚಿತ್ರದ ಚಿತ್ರೀಕರಣವನ್ನು ಸೆಪ್ಟೆಂಬರ್‌ ೨೦೧೮ಕ್ಕೆ ಮುಂದೂಡಲಾಯಿತು. 2 ಆಗಸ್ಟ್ 2018 ರಂದು, ಟೀ-ಸೀರೀಸ್‍ನ ಭೂಷಣ್ ಕುಮಾರ್, ಅಜಯ್ ದೇವಗನ್ ಅವರ ನಿರ್ಮಾಣ ಕಂಪನಿಯ ಸಹಯೋಗದೊಂದಿಗೆ ಯೋಜನೆಯನ್ನು ಕೈಗೆತ್ತಿಕೊಂಡರು ಮತ್ತು ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದರು. ಮಾರ್ಚ್ 2019 ರಲ್ಲಿ, ಚಿತ್ರದ ಶೀರ್ಷಿಕೆ ತಾನಾಜಿ: ದಿ ಅನ್‌ಸಂಗ್ ವಾರಿಯರ್ ಅನ್ನು ತಾನ್ಹಾಜಿ ಎಂದು ಬದಲಾಯಿಸಲಾಯಿತು, ಸಂಖ್ಯಾಭವಿಷ್ಯದ ಕಾರಣಗಳಿಂದಾಗಿ.

ಪಾತ್ರಹಂಚಿಕೆ

ಅಕ್ಟೋಬರ್ 2018 ರಲ್ಲಿ, ಕಾಜೋಲ್ ಚಿತ್ರದಲ್ಲಿ ತಾನಾಜಿಯ ಹೆಂಡತಿಯ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ವರದಿಯಾಯಿತು. ಜನವರಿ 2019 ರಲ್ಲಿ, ಸೈಫ್ ಅಲಿ ಖಾನ್ ಅವರು ಚಿತ್ರದ ಪ್ರಮುಖ ಪ್ರತಿನಾಯಕರಲ್ಲಿ ಒಬ್ಬರಾದ ಉದಯಭಾನ್ ಸಿಂಗ್ ರಾಥೋಡ್ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ವರದಿಯಾಯಿತು. ತಮ್ಮ ಪಾತ್ರಕ್ಕಾಗಿ, ಖಾನ್ ಪಾತ್ರದ ಭಾಗವಾಗಿ ಕತ್ತಿವರಸೆ ಮತ್ತು ಕುದುರೆ ಸವಾರಿಗೆ ತಯಾರಾಗಬೇಕಾಗಿತ್ತು.

ಚಿತ್ರೀಕರಣ

ಪ್ರಧಾನ ಛಾಯಾಗ್ರಹಣವು 25 ಸೆಪ್ಟೆಂಬರ್ 2018 ರಂದು ಪ್ರಾರಂಭವಾಯಿತು.ಚಿತ್ರದ ಮೊದಲ ವೇಳಾಪಟ್ಟಿ ಅಕ್ಟೋಬರ್ 2018 ರಲ್ಲಿ ಪ್ರಾರಂಭವಾಯಿತು. ಕಾಜೋಲ್ ತಮ್ಮ ಭಾಗಗಳನ್ನು ಮುಂಬೈನಲ್ಲಿ ಚಿತ್ರೀಕರಿಸಿಕೊಂಡರು.

ತಾನ್ಹಾಜಿಯನ್ನು ಮುಖ್ಯವಾಗಿ ಮುಂಬೈನ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ದೃಶ್ಯ ಪರಿಣಾಮಗಳು ಪ್ರಮುಖ ಪಾತ್ರ ವಹಿಸಿವೆ. ಸಂಧನ್ ಕಣಿವೆಯ ಸೆಟ್ಟನ್ನು ಮಾಡುವುದು ದೊಡ್ಡ ಸವಾಲಾಗಿತ್ತು. ಸಂಧನ್ ಕಣಿವೆಯಂತೆ ಕಾಣಲು ತಯಾರಕರು 300 ಅಡಿ ಉದ್ದದ ದೊಡ್ಡ ಸೆಟ್ಟನ್ನು ರಚಿಸಬೇಕಾಗಿತ್ತು.ನಿರ್ಮಾಣ ವಿನ್ಯಾಸಕರು ಹೋಗಿ ಕಣಿವೆಯಲ್ಲಿರುವ ಕಲ್ಲುಗಳು ಮತ್ತು ಬಂಡೆಗಳ ಅಚ್ಚುಗಳನ್ನು ತೆಗೆದುಕೊಂಡು ಗೋಡೆಯನ್ನು ನಿರ್ಮಿಸಿದರು.

ಚಿತ್ರದ ತಂಡವು ಅಂಧೇರಿಯ ಚಿತ್ರಕೂಟ ಮೈದಾನದಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದೆ. ಚಿತ್ರದ ಕೆಲವು ಭಾಗಗಳನ್ನು ಪುಣೆಯಲ್ಲೂ ಚಿತ್ರೀಕರಿಸಲಾಯಿತು. ಜನವರಿ 2019 ರಲ್ಲಿ, ತಂಡವು ಹಾಡಿನ ಚಿತ್ರೀಕರಣವನ್ನು ಅದ್ದೂರಿ ಪ್ರಮಾಣದಲ್ಲಿ ಪ್ರಾರಂಭಿಸಿತು. ಹಾಡು ಎಷ್ಟು ವಿಸ್ತಾರವಾಗಿತ್ತೆಂದರೆ ಇದರ ಚಿತ್ರೀಕರಣದ ವೇಳಾಪಟ್ಟಿಯು ಒಂದು ವಾರದವರೆಗೆ ಇತ್ತು ಮತ್ತು ಆ ಯುಗವನ್ನು ಪ್ರತಿನಿಧಿಸುವ ಕೆಲವು ಅದ್ಭುತವಾದ ದಿಯಾ ಮತ್ತು ರಂಗೋಲಿ ಸೆಟಪ್ ಅನ್ನು ಹೊಂದಿರುತ್ತದೆ. ಚಿತ್ರದ ಹಿನ್ನೆಲೆಯಿರುವ ಅವಧಿಯನ್ನು ಗಮನದಲ್ಲಿಟ್ಟುಕೊಂಡು, ಕಾಜೋಲ್ ಹಾಡಿನಲ್ಲಿ ಸಾಂಪ್ರದಾಯಿಕ ಮಹಾರಾಷ್ಟ್ರದ ಉಡುಪನ್ನು ಧರಿಸಿದ್ದರು.

ಪ್ರಧಾನ ಛಾಯಾಗ್ರಹಣವು ಮೇ 2019 ರಲ್ಲಿ ಮುಕ್ತಾಯವಾಯಿತು.

ಧ್ವನಿವಾಹಿನಿ

ಚಿತ್ರದ ಧ್ವನಿವಾಹಿನಿ ಸಂಪುಟವನ್ನು ಅಜಯ್-ಅತುಲ್, ಸಚೇತ್-ಪರಂಪರಾ ಮತ್ತು ಮೇಹುಲ್ ವ್ಯಾಸ್ ಸಂಯೋಜಿಸಿದರು. ಸ್ವಾನಂದ್ ಕಿರ್ಕಿರೆ ಮತ್ತು ಅನಿಲ್ ವರ್ಮಾ ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತವನ್ನು ಸಂದೀಪ್ ಶಿರೋಡ್ಕರ್ ಸಂಯೋಜಿಸಿದ್ದಾರೆ. ಈ ಧ್ವನಿಸಂಪುಟದಲ್ಲಿ ನಾಲ್ಕು ಹಾಡುಗಳಿವೆ. ಹಾಡುಗಳನ್ನು ಮೇಹುಲ್ ವ್ಯಾಸ್, ಆದರ್ಶ್ ಶಿಂಧೆ, ಸುಖ್ವಿಂದರ್ ಸಿಂಗ್, ಶ್ರೇಯಾ ಘೋಷಾಲ್, ಸಚೇತ್ ಟಂಡನ್, ಪರಂಪರಾ ಠಾಕೂರ್, ಗಣೇಶ್ ಚಂದನ್‍ಶಿವೆ ಮತ್ತು ಹರ್ಷ್‌ದೀಪ್ ಕೌರ್ ಹಾಡಿದ್ದಾರೆ. ಇದನ್ನು 20 ಡಿಸೆಂಬರ್ 2019 ರಂದು ಟಿ-ಸೀರೀಸ್ ಬಿಡುಗಡೆ ಮಾಡಿತು.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯसंगीतकारಗಾಯಕ(ರು)ಸಮಯ
1."ಶಂಕರಾ ರೇ ಶಂಕರಾ"ಅನಿಲ್ ವರ್ಮಾಮೇಹುಲ್ ವ್ಯಾಸ್ಮೇಹುಲ್ ವ್ಯಾಸ್3:31
2."ಮಾಯ್ ಭವಾನಿ"ಸ್ವಾನಂದ್ ಕಿರ್ಕಿರೆಅಜಯ್-ಅತುಲ್ಸುಖ್‍ವಿಂದರ್ ಸಿಂಗ್, ಶ್ರೇಯಾ ಘೋಶಾಲ್4:18
3."ಘಮಂಡ್ ಕರ್"ಅನಿಲ್ ವರ್ಮಾಸಚೇತ್-ಪರಂಪರಾಸಚೇತ್ ಟಂಡನ್, ಪರಂಪರಾ ಠಾಕುರ್4:42
4."ತಿನಕ್ ತಿನಕ್"ಅನಿಲ್ ವರ್ಮಾಸಚೇತ್-ಪರಂಪರಾಹರ್ಷ್‌ದೀಪ್ ಕೌರ್3:54
ಒಟ್ಟು ಸಮಯ:16:25

ಮಾರಾಟಗಾರಿಕೆ ಮತ್ತು ಬಿಡುಗಡೆ

ಆರಂಭದಲ್ಲಿ ಈ ಚಿತ್ರವನ್ನು ದೀಪಾವಳಿಯ ನಂತರ 29 ನವೆಂಬರ್ 2019 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬಿಡುಗಡೆಯನ್ನು ದೊಡ್ಡ ಪ್ರಮಾಣದಲ್ಲಿ ವಿಎಫ್ಎಕ್ಸ್ ಕೆಲಸಗಳ ಅಗತ್ಯಕ್ಕಾಗಿ ಮುಂದೂಡಲಾಯಿತು. 28 ಮಾರ್ಚ್ 2019 ರಂದು, ತಯಾರಕರು ಬಿಡುಗಡೆ ದಿನಾಂಕವನ್ನು ೧೦ ಜನವರಿ 2020 ಎಂದು ಪುನಃ ನಿಗದಿಪಡಿಸಿದರು.

ಚಿತ್ರದ ಬಿಡುಗಡೆಯ ಮೊದಲು, ನವೆಂಬರ್ 2019 ರಲ್ಲಿ ಬಿಡುಗಡೆಯಾದ ಟ್ರೇಲರ್‌ನ ಕೆಲವು ದೃಶ್ಯಗಳ ಬಗ್ಗೆ ಸಂಭಾಜಿ ಬ್ರಿಗೇಡ್ ಆಕ್ಷೇಪಿಸಿತು. ಚಿತ್ರವು ಉದ್ದೇಶಪೂರ್ವಕವಾಗಿ ಶಿವಾಜಿ ಮಹಾರಾಜರ ಜಾತ್ಯತೀತ ಕಲ್ಪನೆಯನ್ನು ಅಳಿಸಲು ಪ್ರಯತ್ನಿಸಿದೆ ಎಂದು ಸಂಸ್ಥೆ ಆರೋಪಿಸಿತು. ಸಾವಿತ್ರಿಬಾಯಿ ಮಾಲುಸರೆ ಪಾತ್ರದಲ್ಲಿ ನಟಿಸಿರುವ ಕಾಜೋಲ್ ಅವರ ಸಂಭಾಷಣೆಗೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ, ಎನ್‍ಸಿಪಿ ಪಕ್ಷದ ನಾಯಕ ಜಿತೇಂದ್ರ ಅಹ್ವಾದ್, ಚಿತ್ರದ ಟ್ರೇಲರ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವಂತೆ ಚಿತ್ರದ ನಿರ್ಮಾಪಕರಿಗೆ ಬೆದರಿಕೆ ಹಾಕಿದರು. ಚಲನಚಿತ್ರ ನಿರ್ದೇಶಕ ಓಂ ರಾವುತ್ ಅವರು ಇತಿಹಾಸವನ್ನು ತಪ್ಪಾಗಿ ಮತ್ತು ಅನೈತಿಕವಾಗಿ ಚಿತ್ರಿಸಿದ್ದಾರೆ ಮತ್ತು ಮರಾಠ ಯೋಧ ತಾನಾಜಿ ಮಾಲುಸರೆಯನ್ನು ತಪ್ಪಾಗಿ ತೋರಿಸಿದ್ದಾರೆ ಎಂದು ಆರೋಪಿಸಿದರು. ಅಖಿಲ ಭಾರತೀಯ ಕ್ಷತ್ರಿಯ ಕೋಲಿ ರಜಪೂತ ಸಂಘವು ನಿರ್ದೇಶಕ ರಾವುತ್ ಅವರು ಚಲನಚಿತ್ರದಲ್ಲಿ ಮಹಾನ್ ಯೋಧ ತಾನಾಜಿ ಮಾಲುಸರೆ ಅವರ ನಿಜವಾದ ವಂಶಾವಳಿಯನ್ನು ಮರೆಮಾಚಿದ್ದಾರೆ ಎಂದು ಸಾಧಿಸಿ 13 ಡಿಸೆಂಬರ್ 2019 ರಂದು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಜನವರಿ 2020 ರಲ್ಲಿ, ಸೆನ್ಸಾರ್ ಮಂಡಳಿಯು ವಿವಾದಾತ್ಮಕ ಉಲ್ಲೇಖಗಳನ್ನು ಅಳಿಸಿತು ಮತ್ತು ವಿವಾದಗಳನ್ನು ತಪ್ಪಿಸಲು ಆರಂಭದಲ್ಲಿ ಅನೇಕ ಹಕ್ಕು ನಿರಾಕರಣೆಗಳನ್ನು ಹಾಕುವಂತೆ ಖಚಿತಪಡಿಸಿತು.

ಉತ್ತರ ಪ್ರದೇಶ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತವಾಗಿ ಘೋಷಿಸಲಾಯಿತು.

ತಾನ್ಹಾಜಿಯ ವಿಶ್ವ ದೂರದರ್ಶನದ ಪ್ರೀಮಿಯರ್ 26 ಜುಲೈ 2020 ರಂದು ಸ್ಟಾರ್ ಪ್ಲಸ್‌ನಲ್ಲಿ ನಡೆಯಿತು ಮತ್ತು ಅದರ ಮೊದಲ ಪ್ರಸಾರದಲ್ಲಿ 1.2 ಕೋಟಿ ಪ್ರಭಾವಗಳನ್ನು ದಾಖಲಿಸಿತು. ಚಿತ್ರವು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ 6 ಮಾರ್ಚ್ 2020 ರಂದು ಬಿಡುಗಡೆಯಾಯಿತು.

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ

ಬಾಕ್ಸ್ ಆಫೀಸ್

ಈ ಚಲನಚಿತ್ರವು ಭಾರತದಲ್ಲಿ ₹329.81 ಕೋಟಿಯಷ್ಟು, ಮತ್ತು ವಿದೇಶದಲ್ಲಿ ₹34.85 ಕೋಟಿಯಷ್ಟು ಗಳಿಸಿ ವಿಶ್ವದಾದ್ಯಂತ ₹367.65 ಕೋಟಿಯಷ್ಟು ಗಳಿಸಿ 2020 ರ ಅತಿ ಹೆಚ್ಚು ಗಳಿಕೆಯ ಬಾಲಿವುಡ್ ಚಲನಚಿತ್ರವೆನಿಸಿಕೊಂಡಿತು.

ವಿಮರ್ಶಾತ್ಮಕ ಪ್ರತಿಕ್ರಿಯೆ

ವಿಮರ್ಶಾ ಸಂಗ್ರಾಹಕ ಜಾಲತಾಣ ರಾಟನ್ ಟೊಮೇಟೋಸ್‍ನಲ್ಲಿ, 11 ವಿಮರ್ಶೆಗಳ ಆಧಾರದ ಮೇಲೆ ಸರಾಸರಿ 6/10 ಸ್ಕೋರ್‌ನೊಂದಿಗೆ ತಾನ್ಹಾಜಿ 73% ಅನುಮೋದನಾ ಅಂಕವನ್ನು ಹೊಂದಿದೆ.

ಪ್ರಶಸ್ತಿಗಳು

ಫಿಲ್ಮ್‌ಫೇರ್ ಪ್ರಶಸ್ತಿಗಳು - ೨೭ ಮಾರ್ಚ್ ೨೦೨೧

  • ಅತ್ಯುತ್ತಮ ನಿರ್ದೇಶಕ - ಓಂ ರೌತ್ - ಗೆಲುವು
  • ಅತ್ಯುತ್ತಮ ಪೋಷಕ ನಟ - ಸೈಫ಼್ ಅಲಿ ಖಾನ್ - ಗೆಲುವು
  • ಅತ್ಯುತ್ತಮ ಸಾಹಸ - ರಮಜ಼ಾನ್ ಬುಲುತ್, ಆರ್ ಪಿ ಯಾದವ್ - ಗೆಲುವು
  • ಅತ್ಯುತ್ತಮ ವಿಶೇಷ ಪರಿಣಾಮಗಳು - ಪ್ರಸಾದ್ ಸುತರ್ - ಗೆಲುವು
  • ಅತ್ಯುತ್ತಮ ಚಲನಚಿತ್ರ - ಅಜಯ್ ದೇವ್‍ಗನ್ ಎಫ್‍ಫ಼ಿಲ್ಮ್ಸ್, ಟಿ-ಸೀರೀಸ್ - ನಾಮನಿರ್ದೇಶಿತ
  • ಅತ್ಯುತ್ತಮ ನಟ - ಅಜಯ್ ದೇವ್‍ಗನ್ - ನಾಮನಿರ್ದೇಶಿತ
  • ಅತ್ಯುತ್ತಮ ಚಿತ್ರಕಥೆ - ಪ್ರಕಾಶ್ ಕಪಾಡಿಯಾ, ಓಂ ರೌತ್ - ನಾಮನಿರ್ದೇಶಿತ
  • ಅತ್ಯುತ್ತಮ ಸಂಭಾಷಣೆ - ಪ್ರಕಾಶ್ ಕಪಾಡಿಯಾ - ನಾಮನಿರ್ದೇಶಿತ
  • ಅತ್ಯುತ್ತಮ ಛಾಯಾಗ್ರಹಣ - ಕೀಕೊ ನಾಕಹಾರಾ - ನಾಮನಿರ್ದೇಶಿತ
  • ಅತ್ಯುತ್ತಮ ನಿರ್ಮಾಣ ವಿನ್ಯಾಸ - ಶ್ರೀರಾಂ ಕಣ್ಣನ್ ಐಯ್ಯಂಗಾರ್, ಸುಜೀತ್ ಸಾವಂತ್ - ನಾಮನಿರ್ದೇಶಿತ
  • ಅತ್ಯುತ್ತಮ ವಸ್ತ್ರ ವಿನ್ಯಾಸ - ನಚಿಕೇತ್ ಬರ್ವೆ, ಮಹೇಶ್ ಶೇರಿಯಾ - ನಾಮನಿರ್ದೇಶಿತ
  • ಅತ್ಯುತ್ತಮ ನೃತ್ಯ ನಿರ್ದೇಶನ - ಗಣೇಶ್ ಆಚಾರ್ಯ ("ಶಂಕರಾ ರೇ ಶಂಕರಾ") - ನಾಮನಿರ್ದೇಶಿತ
  • ಅತ್ಯುತ್ತಮ ಹಿನ್ನೆಲೆ ಸಂಗೀತ - ಸಂದೀಪ್ ಶಿರೋಡ್ಕರ್ - ನಾಮನಿರ್ದೇಶಿತ

ಸಾಮಾಜಿಕ ಪ್ರಭಾವ

ತಾನ್ಹಾಜಿ ವರ್ಷದ ಅತಿ ಹೆಚ್ಚು ರೇಟಿಂಗ್ ಪಡೆದ ಚಲನಚಿತ್ರವಾಯಿತು. ಈ ಚಿತ್ರವನ್ನು 78 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶಿಸಲು ಅತ್ಯುತ್ತಮ ವಿದೇಶಿ ಚಲನಚಿತ್ರಗಳಲ್ಲಿ ಒಂದಾಗಿ ಆಯ್ಕೆಮಾಡಲಾಯಿತು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಚಲನಚಿತ್ರ ತಾನ್ಹಾಜಿ ಕಥಾವಸ್ತುಚಲನಚಿತ್ರ ತಾನ್ಹಾಜಿ ಪಾತ್ರವರ್ಗಚಲನಚಿತ್ರ ತಾನ್ಹಾಜಿ ತಯಾರಿಕೆಚಲನಚಿತ್ರ ತಾನ್ಹಾಜಿ ಧ್ವನಿವಾಹಿನಿಚಲನಚಿತ್ರ ತಾನ್ಹಾಜಿ ಮಾರಾಟಗಾರಿಕೆ ಮತ್ತು ಬಿಡುಗಡೆಚಲನಚಿತ್ರ ತಾನ್ಹಾಜಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಚಲನಚಿತ್ರ ತಾನ್ಹಾಜಿ ಪ್ರಶಸ್ತಿಗಳುಚಲನಚಿತ್ರ ತಾನ್ಹಾಜಿ ಉಲ್ಲೇಖಗಳುಚಲನಚಿತ್ರ ತಾನ್ಹಾಜಿ ಹೊರಗಿನ ಕೊಂಡಿಗಳುಚಲನಚಿತ್ರ ತಾನ್ಹಾಜಿ

🔥 Trending searches on Wiki ಕನ್ನಡ:

ಭಾರತದ ರೂಪಾಯಿಎಚ್.ಎಸ್.ಶಿವಪ್ರಕಾಶ್ಏಡ್ಸ್ ರೋಗಮಳೆರಾಷ್ಟ್ರೀಯ ಸೇವಾ ಯೋಜನೆಕರ್ನಾಟಕದ ಜಿಲ್ಲೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ಮೋಳಿಗೆ ಮಾರಯ್ಯಲಸಿಕೆಕೇಂದ್ರಾಡಳಿತ ಪ್ರದೇಶಗಳುಭಗವದ್ಗೀತೆರಾಜ್ಯಸಭೆಕರ್ನಾಟಕದ ತಾಲೂಕುಗಳುಶೈಕ್ಷಣಿಕ ಸಂಶೋಧನೆಭಾರತದ ಆರ್ಥಿಕ ವ್ಯವಸ್ಥೆಭಾರತಹನುಮ ಜಯಂತಿರಾಜಧಾನಿಗಳ ಪಟ್ಟಿಭಾರತೀಯ ಸಂಸ್ಕೃತಿಚಂಡಮಾರುತತೆನಾಲಿ ರಾಮ (ಟಿವಿ ಸರಣಿ)ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುರತ್ನಾಕರ ವರ್ಣಿಸೀತಾ ರಾಮಶಾಂತರಸ ಹೆಂಬೆರಳುಮಲೈ ಮಹದೇಶ್ವರ ಬೆಟ್ಟಕಪ್ಪೆ ಅರಭಟ್ಟತ್ರಿವೇಣಿನಿರುದ್ಯೋಗಹೈದರಾಲಿಹೊನ್ನಾವರಸ್ಯಾಮ್ ಪಿತ್ರೋಡಾಹೆಚ್.ಡಿ.ಕುಮಾರಸ್ವಾಮಿಅಶೋಕನ ಶಾಸನಗಳುಸಂಧಿಮಂತ್ರಾಲಯಭಾರತದ ನದಿಗಳುಎಸ್.ಎಲ್. ಭೈರಪ್ಪದೇವರ/ಜೇಡರ ದಾಸಿಮಯ್ಯಜೀವವೈವಿಧ್ಯದೇವರ ದಾಸಿಮಯ್ಯಕನ್ನಡತಿ (ಧಾರಾವಾಹಿ)ಕಾಮಸೂತ್ರಸವರ್ಣದೀರ್ಘ ಸಂಧಿಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಎ.ಎನ್.ಮೂರ್ತಿರಾವ್ನಾಗಸ್ವರಶಿಕ್ಷಣಇಮ್ಮಡಿ ಪುಲಕೇಶಿಶ್ರೀವಿಜಯಬಾಹುಬಲಿಕನ್ನಡ ಛಂದಸ್ಸುಹೆಚ್.ಡಿ.ದೇವೇಗೌಡಕನ್ನಡಪ್ರಭಅಯೋಧ್ಯೆಭಗತ್ ಸಿಂಗ್ವ್ಯವಸಾಯವಿಷ್ಣುಸರಾಸರಿಜಾನಪದನುಗ್ಗೆಕಾಯಿಪೌರತ್ವಶಾಲೆಮಲ್ಲಿಕಾರ್ಜುನ್ ಖರ್ಗೆಶಿವಮೊಗ್ಗಹಳೆಗನ್ನಡಕರಗಕೃಷ್ಣರಾಜಸಾಗರಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಸೌರಮಂಡಲಭಾರತದ ಸಂವಿಧಾನ ರಚನಾ ಸಭೆಕುಮಾರವ್ಯಾಸಬಿ. ಶ್ರೀರಾಮುಲುಸುಗ್ಗಿ ಕುಣಿತಗ್ರಹಕುಂಡಲಿ🡆 More