ಣಮೊಕರ ಮಂತ್ರ

ಣಮೋಂಕಾರ ಮಂತ್ರ' (णमोकार मंत्र) ಜೈನ ಧರ್ಮದ ಪ್ರಾಥಮಿಕ ಮಂತ್ರ, ಇದನ್ನು ದಿನದ ಯಾವುದೇ ವೇಳೆ ಜಪಿಸಬಹುದು.

ಈ ಮಂತ್ರವನ್ನು ಜೈನರು ತಮ್ಮ ಧ್ಯಾನದ ಪ್ರಾರಂಭದಲ್ಲಿ ಜಪಿಸುತ್ತಾರೆ. ಈ ಮಂತ್ರವನ್ನು ಜಪಿಸುವಾಗ ಭಕ್ತರು ಗೌರವದಿಂದ ಅರಿಹಂತರಿಗೆ, ಸಿದ್ಧರಿಗೆ, ಆಚಾರ್ಯರಿಗೆ, ಉಪಾಧ್ಯಾಯರಿಗೆ ಹಾಗು ಎಲ್ಲ ಗುರು ಮುನಿಗಳಿಗೆ ವಂದಿಸುತ್ತಾರೆ. ಅರಿಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು ಹಾಗು ಎಲ್ಲ ಗುರು ಮುನಿಗಳು ಈ ಐವರನ್ನು ಪಂಚ ಪರಮೇಷ್ಠಿಗಳೆಂದು ಕರೆಯಲಾಗುತ್ತದೆ. ಈ ಮಂತ್ರ ಪಠಣದಿಂದ ಕೇವಲ ಒಂದು ವ್ಯಕ್ತಿಯ ಪೂಜೆ ಅಲ್ಲದೆ ಎಲ್ಲ ಸತ್ಪುರುಷರ ಸದ್ಗುಣವನ್ನು ಪೂಜಿಸುವಂತಾಗುತ್ತದೆ. ಣಮೊಕರ ಮಂತ್ರದಲ್ಲಿ ತೀರ್ಥಂಕರನಾಗಲಿ ಅಥವಾ ಸಿದ್ಧರನ್ನಾಗಲೀ ಹೆಸರಿನಿಂದ ಜಪಿಸಲಾಗುವುದಿಲ್ಲ. ಜಪಿಸುವವೇಳೆ ಭಕ್ತರು ಸದ್ಗುಣಗಳನ್ನು ನೆನೆಯುತ್ತಾ ಅವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮಂತ್ರದಲ್ಲಿ ಜೈನರು ಸತ್ಪುರುಷರನ್ನು ನಮಸ್ಕರಿಸುವರು. ಆದ್ದರಿಂದ ಇದನ್ನು ನಮಸ್ಕಾರ ಮಂತ್ರವೆಂದು ಕರೆಯಲಾಗುತ್ತದೆ.

ಣಮೊಕರ ಮಂತ್ರ
ಣಮೋಂಕಾರ ಮಂತ್ರ

ಇತಿಹಾಸ

ಣಮೊಕರ ಮಂತ್ರ 
ಉದಯಗಿರಿ ಬೆಟ್ಟದ ಹಾಥಿಗುಂಫ ಶಾಸನದಲ್ಲಿ ರಾಜಾ ಖಾರವೇಲ್ಲ ಕೆತ್ತಿಸಿದ ಬರಹ

ಉದಯಗಿರಿ ಬೆಟ್ಟಗಳಲ್ಲಿ ರಾಜ ಖಾರವೇಲಾ ಬರೆದ ಹಾಥಿಗುಂಫಾ ಶಾಸನ 162 ಬಿಸಿಇ ಶಾಸನ, ಹತಿಗುಂಫಾ ಶಾಸನವು ಣಮೋಂಕಾರ ಮಂತ್ರದಿಂದ ಪ್ರಾರಂಭವಾಗುತ್ತದೆ. ಇದನ್ನು ಜೈನ ರಾಜ ಖಾರವೇಲಾ ಕೆತ್ತಿಸಿದ್ದು ಎನ್ನಲಾಗಿದೆ. [5] [6]

ಣಮೊಕರ ಮಂತ್ರ ವನ್ನು, ನವಕಾರ ಮಂತ್ರ ಅಥವಾ ನಮಸ್ಕಾರ ಮಂತ್ರ ಎಂದು ಕೂಡ ಹೇಳಲಾಗುತ್ತದೆ. ಈ ಮಂತ್ರದಲ್ಲಿ ಒಟ್ಟು ೩೫ ಅಕ್ಷರಗಳಿವೆ.

    ಣಮೋ ಅರಿಹಂತಾನಂ
    ಣಮೋ ಸಿದ್ದಾನಾಂ
    ಣಮೋ ಅಯರಿಯನಾಂ
    ಣಮೋ ಉವಜ್ಝಾಯನಾಂ
    ಣಮೋ ಲೋಎ ಸವ್ವ ಸಾಹುನಾಂ
ನಾನು ಅರಿಹಂತರಿಗೆ ನಮಸ್ಕರಿಸುತ್ತೇನೆ.
ಣಮೋ ಸಿದ್ದಾನಾಂ ನಾನು ಸಿದ್ಧರಿಗೆ ನಮಸ್ಕರಿಸುತ್ತೇನೆ.
ಣಮೋ ಅಯರಿಯನಾಂ ನಾನು ಆಚಾರ್ಯರಿಗೆ ನಮಸ್ಕರಿಸುತ್ತೇನೆ .
ಣಮೋ ಉವಜ್ಝಾಯನಾಂ ನಾನು ಉಪಾಧ್ಯಾಯರಿಗೆ ನಮಸ್ಕರಿಸುತ್ತೇನೆ.
ಣಮೋ ಲೋಎ ಸವ್ವ ಸಹುನಾಂ ನಾನು ಎಲ್ಲ ಸಾಧುಗಳಿಗೆ ನಮಸ್ಕರಿಸುತ್ತೇನೆ.


ಧ್ಯಾನ

ಪ್ರಮುಖ ಜೈನ ಗ್ರಂಥವಾದ "ದ್ರವ್ಯಸಂಗ್ರಹ"ದ ಪ್ರಕಾರ:

"ಪಂಚ ಪರಮೇಷ್ಠಿಗಳ ಶ್ರೇಷ್ಠವಾದ ಗುಣಗಳನ್ನು ಸ್ತುತಿಸುವ ಈ ಣಮೋಂಕಾರ ಮಂತ್ರದ ಮೂವತ್ತೈದು, ಹದಿನಾರು, ಆರು, ಐದು, ನಾಲ್ಕು, ಎರಡು ಮತ್ತು ಒಂದು ಅಕ್ಷರವನ್ನು ಧ್ಯಾನ ಮಾಡಬೇಕು ಅಥವಾ ಪಠಿಸಬೇಕು. ಹಾಗೆಯೇ ತಮ್ಮ ಗುರುಗಳಿಂದ ಬೋಧಿಸಲ್ಪಟ್ಟಂತೆ ಬೆರೆ ಮಂತ್ರಗಳನ್ನು ಕೂಡ ಪಠಿಸಬೇಕು."


References

Tags:

ತೀರ್ಥಂಕರಮಂತ್ರ

🔥 Trending searches on Wiki ಕನ್ನಡ:

ಹೆಚ್.ಡಿ.ಕುಮಾರಸ್ವಾಮಿದೇವತಾರ್ಚನ ವಿಧಿಚಂದ್ರಶೇಖರ ಕಂಬಾರತತ್ಸಮ-ತದ್ಭವಮಹಾಕವಿ ರನ್ನನ ಗದಾಯುದ್ಧಶಬರಿಮನರಂಜನೆಸಾರ್ವಜನಿಕ ಆಡಳಿತರಾಮ ಮಂದಿರ, ಅಯೋಧ್ಯೆಭಾರತದ ಚುನಾವಣಾ ಆಯೋಗಜನಪದ ಕರಕುಶಲ ಕಲೆಗಳುನಿಯತಕಾಲಿಕಗೋಲ ಗುಮ್ಮಟಕವಿರಾಜಮಾರ್ಗಕೊರೋನಾವೈರಸ್ತತ್ಪುರುಷ ಸಮಾಸಪಾಕಿಸ್ತಾನಮುರುಡೇಶ್ವರಭಾರತೀಯ ಭೂಸೇನೆಚಾಲುಕ್ಯಹೆಣ್ಣು ಬ್ರೂಣ ಹತ್ಯೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಆಮ್ಲ ಮಳೆಯೋನಿಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಪಂಡಿತದಾಳಸಂಸ್ಕಾರರಕ್ತಪ್ರಗತಿಶೀಲ ಸಾಹಿತ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತದ ಭೌಗೋಳಿಕತೆಎಲೆಕ್ಟ್ರಾನಿಕ್ ಮತದಾನಓಂ ನಮಃ ಶಿವಾಯಕಮ್ಯೂನಿಸಮ್ಹಲಸುಕರ್ನಾಟಕದ ಜಲಪಾತಗಳುನೇಮಿಚಂದ್ರ (ಲೇಖಕಿ)ವೃತ್ತಪತ್ರಿಕೆಶಿವಮೊಗ್ಗನಿರುದ್ಯೋಗಯೇಸು ಕ್ರಿಸ್ತಕಾವೇರಿ ನದಿಜಶ್ತ್ವ ಸಂಧಿಮ್ಯಾಕ್ಸ್ ವೆಬರ್ಕುರಿಕನ್ನಡದಲ್ಲಿ ಕಾದಂಬರಿ ಸಾಹಿತ್ಯದೀಪಾವಳಿಟೊಮೇಟೊವೈದೇಹಿಸಂವತ್ಸರಗಳುನಂಜನಗೂಡುಜಯಚಾಮರಾಜ ಒಡೆಯರ್ಭಗತ್ ಸಿಂಗ್ಪಪ್ಪಾಯಿಕಾಲ್ಪನಿಕ ಕಥೆಚನ್ನವೀರ ಕಣವಿಶಬ್ದ ಮಾಲಿನ್ಯಪಾಲಕ್ಸೀತೆಹಣಕಾಸುಅಮೃತಬಳ್ಳಿಮೈಸೂರುಸೆಲರಿಭಗವದ್ಗೀತೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಂಧಿರವಿಚಂದ್ರನ್ರಾಷ್ಟ್ರಕೂಟಸುಭಾಷ್ ಚಂದ್ರ ಬೋಸ್ರಾಯಲ್ ಚಾಲೆಂಜರ್ಸ್ ಬೆಂಗಳೂರುಅಂತಿಮ ಸಂಸ್ಕಾರರಾಮಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಹನುಮಾನ್ ಚಾಲೀಸವಿಜಯದಾಸರುದಾಸ ಸಾಹಿತ್ಯ🡆 More