ಡಿವಿಡಿವಿ ಮರ

ಡಿವಿಡಿವಿ ಮರ- ಲೆಗ್ಯೂಮಿನೋಸೀ ಕುಟುಂಬದ ಸೀಸಾಲ್‍ಪಿನೇಸೀ ಉಪಕುಟುಂಬಕ್ಕೆ ಸೇರಿದ ಒಂದು ವೃಕ್ಷ.

ಸೀಮೆ ಅಲ್ಡೆಕಾಯಿ ಪರ್ಯಾಯನಾಮ. ಸೀಸಾಲ್‍ಪಿನಿಯ ಕೋರಿಯೇರಿಯ ಇದರ ವೈಜ್ಞಾನಿಕ ಹೆಸರು.

ಡಿವಿಡಿವಿ ಮರ

ಇದು ಅಮೆರಿಕ ಮತ್ತು ಆಸ್ಟ್ರೇಲಿಯಗಳ ಮೂಲನಿವಾಸಿ. ಮೆಕ್ಸಿಕೊ, ವೆನಿಜ್ವೇಲ, ಉತ್ತರ ಬ್ರಜಿಲ್, ಜಮೇಕ ಮತ್ತು ಭಾರತಗಳಲ್ಲೂ ಬೆಳೆಯುತ್ತದೆ. ಇದು ಚಿಕ್ಕ ಗಾತ್ರದ ಮರ: ಇದರ ಎತ್ತರ ಸುಮಾರು 8 ಮೀ. ಅನೇಕ ರಂಬೆಗಳಿಂದ ಕೂಡಿದ್ದು ಛತ್ರಿಯಾಕಾರದಲ್ಲಿ ಹರಡಿಕೊಂಡು ಬೆಳೆಯುತ್ತದೆ. ಎಲೆಗಳು ಸಂಯುಕ್ತ ಮಾದರಿಯವು ; ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಇದು ವರ್ಷದಲ್ಲಿ ಎರಡು ಸಲ ಅಂದರೆ ಜನವರಿ-ಫೆಬ್ರುವರಿ ಮತ್ತು ಜೂನ್-ಜುಲೈನಲ್ಲಿ ಹೂ ಬಿಡುತ್ತದೆ. ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣಕ್ಕಿದ್ದು ಸುವಾಸನಾಯುಕ್ತವಾಗಿವೆ. ಕಾಯಿಗಳು 5-7 ಸೆಂ.ಮೀ. ಉದ್ದ ಹಾಗೂ 2 ಸೆಂ.ಮೀ. ಅಗಲ ಇವೆ. ಚಪ್ಪಟೆಯಾಗಿ ಒಳಬಾಗಿ ಕೊಂಡಿರುವುದು ಇವುಗಳ ವಿಶೇಷ ಲಕ್ಷಣ. ಕಾಯಿಗಳಲ್ಲಿ ಗ್ಯಾಲೊಟ್ಯಾನಿನ್ ಮತ್ತು ಎಲ್ಯಾಜಿಟ್ಯಾನಿನ್ ಎಂಬ ವಸ್ತುಗಳಿವೆ. ಡಿವಿಡಿವಿ ಮರ ಎರೆ ಮತ್ತು ಮರಳು ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಬೀಜಗಳ ಮೂಲಕ ವೃದ್ಧಿಸಬಹುದು. ಬೀಜ ನೆಟ್ಟ 5-6 ವರ್ಷಗಳಲ್ಲಿ ಇದು ಫಲ ಬಿಡಲು ಪ್ರಾರಂಭಿಸಿದರೂ ತನ್ನ ಪೂರ್ಣ ಮತ್ತು ಒಳ್ಳೆಯ ಫಸಲನ್ನು ತನ್ನ 20ನೆಯ ವರ್ಷದಿಂದ ಕೊಡುವುದು. ಸರಿಯಾಗಿ ಬಲಿತ ಮರದಿಂದ 150 ಕೆ.ಜಿ. ಯಷ್ಟು ಕಾಯಿ ಸಿಕ್ಕುತ್ತದೆ.

ಉಪಯೋಗಗಳು

ಡಿವಿಡಿವಿ ಮರದ ಟ್ಯಾನಿನ್ನನ್ನು ಚರ್ಮಹದಗಾರಿಕೆಯಲ್ಲಿ ಬಳಸಲಾಗುತ್ತದೆ. ಅಲ್ಲದೆ ಬಟ್ಟೆ ಕೈಗಾರಿಕೆಯಲ್ಲಿ ಬಣ್ಣಗಚ್ಚಾಗಿ ಇದನ್ನು ಉಪಯೋಗಿಸುವುದಿದೆ. ಕಾಯಿಗಳ ಕಷಾಯವನ್ನು ಮೊಳೆರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕಾಯಿಗಳಿಂದ ವಿಶಿಷ್ಟ ರೀತಿಯ ಕಪ್ಪುಶಾಯಿಯನ್ನೂ ತಯಾರಿಸುವುದುಂಟು.

ಡಿವಿಡಿವಿ ಮರ 
With developed canopy
ಡಿವಿಡಿವಿ ಮರ 
Leaves and pod
ಡಿವಿಡಿವಿ ಮರ 
Plants


ಡಿವಿಡಿವಿ ಮರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ವಿಜಯನಗರ ಜಿಲ್ಲೆಜಾನಪದಗೂಗಲ್ಬಸವೇಶ್ವರಉತ್ತಮ ಪ್ರಜಾಕೀಯ ಪಕ್ಷಕನ್ನಡ ಚಿತ್ರರಂಗಭಾರತೀಯ ಸಂಸ್ಕೃತಿಭೂತಾರಾಧನೆಇಚ್ಛಿತ್ತ ವಿಕಲತೆಭಾರತದ ವಿಜ್ಞಾನಿಗಳುವರ್ಗೀಯ ವ್ಯಂಜನಸಿಹಿ ಕಹಿ ಚಂದ್ರುಆಭರಣಗಳುಭಾರತದ ನದಿಗಳುಕ್ಯಾನ್ಸರ್ಪೋಲಿಸ್ಡಿ.ಎಸ್.ಕರ್ಕಿಸಂಗೀತಶಿಕ್ಷಣಟೈಗರ್ ಪ್ರಭಾಕರ್ಶಿರ್ಡಿ ಸಾಯಿ ಬಾಬಾಷಟ್ಪದಿಶೃಂಗೇರಿಸಮುಚ್ಚಯ ಪದಗಳುಕಾರ್ಯಾಂಗಗರ್ಭಕಂಠದ ಕ್ಯಾನ್ಸರ್‌1935ರ ಭಾರತ ಸರ್ಕಾರ ಕಾಯಿದೆಸಾಮಾಜಿಕ ಸಮಸ್ಯೆಗಳುವಾಲ್ಮೀಕಿಕೇಂದ್ರಾಡಳಿತ ಪ್ರದೇಶಗಳುಆಂಧ್ರ ಪ್ರದೇಶಕೈಲಾಸನಾಥಆದೇಶ ಸಂಧಿನೊಬೆಲ್ ಪ್ರಶಸ್ತಿಗಂಗ (ರಾಜಮನೆತನ)ದರ್ಶನ್ ತೂಗುದೀಪ್ಬಿಳಿ ಎಕ್ಕರನ್ನಲಕ್ಷ್ಮಿವಚನ ಸಾಹಿತ್ಯಶಿವಗಂಗೆ ಬೆಟ್ಟಇತಿಹಾಸಮಾನವ ಸಂಪನ್ಮೂಲಗಳುಸ್ಫಿಂಕ್ಸ್‌ (ಸಿಂಹನಾರಿ)ಸುಭಾಷ್ ಚಂದ್ರ ಬೋಸ್ಶ್ರೀಕೃಷ್ಣದೇವರಾಯವಿಜಯಪುರ ಜಿಲ್ಲೆಚೋಮನ ದುಡಿಮಂಡ್ಯರವಿ ಡಿ. ಚನ್ನಣ್ಣನವರ್ದಶಾವತಾರದುಂಡು ಮೇಜಿನ ಸಭೆ(ಭಾರತ)ಸಾಹಿತ್ಯಚಿನ್ನಜಲ ಮಾಲಿನ್ಯಮಧ್ವಾಚಾರ್ಯಕದಂಬ ರಾಜವಂಶದುರ್ಯೋಧನತೀ. ನಂ. ಶ್ರೀಕಂಠಯ್ಯತತ್ಸಮ-ತದ್ಭವಸಮಾಜ ವಿಜ್ಞಾನಹದಿಹರೆಯಭಾರತದ ಸ್ವಾತಂತ್ರ್ಯ ಚಳುವಳಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕನ್ನಡ ಸಾಹಿತ್ಯ ಪರಿಷತ್ತು21ನೇ ಶತಮಾನದ ಕೌಶಲ್ಯಗಳುಅಲ್ಲಮ ಪ್ರಭುಸಾರಜನಕಜವಹರ್ ನವೋದಯ ವಿದ್ಯಾಲಯಟಿ.ಪಿ.ಕೈಲಾಸಂಸಾಲುಮರದ ತಿಮ್ಮಕ್ಕಹೃದಯಕೆ ವಿ ನಾರಾಯಣಸ್ವಾಮಿ ರಮಾನಂದ ತೀರ್ಥಗೋಡಂಬಿಭಾರತೀಯ ಭೂಸೇನೆ🡆 More