ಜಿಮ್‌ ಕ್ಯಾರ್ರಿ

ಜೇಮ್ಸ್ ಯುಜೀನ್ ಜಿಮ್ ಕ್ಯಾರಿ (ಜನನ ಜನವರಿ 17, 1962) ಒಬ್ಬ ಕೆನೆಡಿಯನ್ ನಟ ಮತ್ತು ಸ್ಟ್ಯಾಂಡ್-ಅಪ್ ಕಮಿಡಿಯನ್.

ಕ್ಯಾರಿ ಪ್ರಖ್ಯಾತನಾಗಿರುವುದು ಸ್ಕೆಚ್ ಕಾಮಿಡಿ ಶೋ ’ಇನ್ ಲಿವಿಂಗ್ ಕಲರ್ ’ನ ವೈವಿಧ್ಯಮಯ ಪಾತ್ರಗಳು,’ಬ್ರೂಸ್ ಆಲ್ ಮೈಟೀ ’ ಚಲನಚಿತ್ರದಲ್ಲಿAce Ventura: Pet Detective ಶೀರ್ಷಿಕಾ ಪಾತ್ರವಾದAce Ventura: When Nature Calls ಟಿವಿ ವರದಿಗಾರ ಬ್ರೂಸ್ ನೋಲನ್ ಪಾತ್ರ ಮತ್ತು ’ಲಯರ್ ಲಯರ್ ’ ಚಲನಚಿತ್ರದ ನಾಯಕ ವಕೀಲ ಫ್ಲೆಚರ್ ರೀಡ್‌ನ ಪಾತ್ರಗಳಿಂದಾಗಿ. ಇದಲ್ಲದೆ ’ದ ಟ್ರೂಮನ್ ಶೋ ’, ’ಮ್ಯಾನ್ ಆನ್ ದ ಮೂನ್ ’ ಮತ್ತು ’ಎಟರ್ನಲ್ ಸನ್‌ಶೈನ್ ಆಫ್ ದ ಸ್ಪಾಟ್‌ಲೆಸ್ ಮೈಂಡ್ ’ ಚಲನಚಿತ್ರಗಳ ನಾಟಕೀಯ ಪಾತ್ರಗಳ ನಿರ್ವಹಣೆಯಿಂದಾಗಿ ಕ್ಯಾರಿ ವಿಮರ್ಶಾತ್ಮಕ ಯಶಸ್ಸನ್ನೂ ಗಳಿಸಿದ್ದಾನೆ. ಮೂರು ದಶಕಗಳ ಆತನ ಇಲ್ಲಿಯವರೆಗಿನ ವೃತ್ತಿಜೀವನವು ಹಾಲಿವುಡ್‌ನ ಗಲ್ಲಾಪೆಟ್ಟಿಗೆ ಸೂರೆಮಾಡಿದ ದ ಮಾಸ್ಕ್ , ಡಂಬ್ ಎಂಡ್ ಡಂಬರ್ , ಹವ್ ದ ಗ್ರಿಂಚ್ ಸ್ಟೋಲ್ ಕ್ರಿಸ್‌ಮಸ್ , ಲೆಮೊನಿ ಸ್ನಿಕೆಟ್ಸ್ ಎ ಸಿರೀಸ್ ಆಫ್ ಅನ್‌ಫಾರ್ಚುನೇಟ್ ಈವೆಂಟ್ಸ್ ಮತ್ತು ಫನ್ ವಿದ್ ಡಿಕ್ ಎಂಡ್ ಜೇನ್ ಚಲನಚಿತ್ರಗಳ ಪಾತ್ರಗಳನ್ನೂ ಒಳಗೊಂಡಿದೆ.

ಜಿಮ್‌ ಕ್ಯಾರ್ರಿ
ಜಿಮ್‌ ಕ್ಯಾರ್ರಿ
at the premiere of Horton Hears a Who!, 2008
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
James Eugene Carrey
(1962-01-17) ೧೭ ಜನವರಿ ೧೯೬೨ (ವಯಸ್ಸು ೬೨)
Newmarket, Ontario, ಕೆನಡಾ
ವೃತ್ತಿ Actor/Comedian
ವರ್ಷಗಳು ಸಕ್ರಿಯ 1979 – present
ಪತಿ/ಪತ್ನಿ Melissa Womer
(1987-1995) (divorced)
Lauren Holly
(1996-1997) (divorced)
ಜಿಮ್‌ ಕ್ಯಾರ್ರಿ

ತನ್ನ ಮೂರು ದಶಕಗಳ ವೃತ್ತಿಜೀವನದ ಅವಧಿಯಲ್ಲಿ ಆತನ ಹೆಸರನ್ನು ಹಲವಾರು ಪ್ರಶಸ್ತಿಗಳಿಗೆ ಸೂಚಿಸಲಾಗಿದೆ.’ಎಟರ್ನಲ್ ಸನ್‌ಶೈನ್ ಆಫ್ ದ ಸ್ಪಾಟ್‌ಲೆಸ್ ಮೈಂಡ್ ’ ಚಲನಚಿತ್ರಕ್ಕಾಗಿ ನಟನೊಬ್ಬನಿಗೆ ಪ್ರಮುಖ ಪಾತ್ರನಿರ್ವಹಣೆ ಮಾಡಿದ್ದಕ್ಕಾಗಿ ನೀಡಲಾಗುವ BAFTA ಪ್ರಶಸ್ತಿಗಾಗಿ ನಾಮಸೂಚನೆ ಆಗಿರುವುದೇ ಅಲ್ಲದೆ ದ ಟ್ರೂಮನ್ ಶೋ ಹಾಗೂ ಮ್ಯಾನ್ ಆನ್ ದ ಮೂನ್ ಚಲನಚಿತ್ರದ ಅಭಿನಯಕ್ಕಾಗಿ ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಈತ ಗಳಿಸಿದ್ದಾನೆ. ಈತ ಕೆನಡಾದ ವಾಕ್ ಆಫ್ ಫೇಮ್ ನ ತಾರೆಯೂ ಆಗಿದ್ದಾನೆ.

ಬಾಲ್ಯ

ನ್ಯೂಮಾರ್ಕೆಟ್, ಓಂಟೇರಿಯೋನಲ್ಲಿ ಕ್ಯಾರಿಯ ಜನನವಾಯಿತು. ತಾಯಿ ಕ್ಯಾಥ್ಲೀನ್ (ನೀ ಒರಾಮ್) ಒಬ್ಬ ಗೃಹಿಣಿ ಮತ್ತು ತಂದೆ ಪರ್ಸಿ ಕ್ಯಾರಿ, ಒಬ್ಬ ಅಕೌಂಟೆಂಟ್ ಮತ್ತು ಸಂಗೀತಗಾರ. ಅತನಿಗೆ ಜಾನ್, ಪೆಟ್ರೀಶಿಯಾ ಮತ್ತು ರೀಟಾ ಅಂಬ ಹೆಸರಿನ ಮೂವರು ಹಿರಿಯ ಅಣ್ಣ, ಅಕ್ಕಂದಿರಿದ್ದಾರೆ. ಕ್ಯಾಥೊಲಿಕ್ ಧರ್ಮವನ್ನು ಅನುಸರಿಸುತ್ತಿದ್ದ ಆತನ ಕುಟುಂಬಕ್ಕೆ ಫ್ರೆಂಚ್ ಕೆನೆಡಿಯನ್ ಹಿನ್ನೆಲೆಯೂ ಇತ್ತು(ಅವರ ನೈಜ ಉಪನಾಮ Carré ಎಂದಾಗಿತ್ತು). ಸ್ಕಾರ್‌ಬೊರೋ, ಓಂಟೇರಿಯೋಗೆ ಕ್ಯಾರಿಯ ಕುಟುಂಬ ವಲಸೆಹೋದ ನಂತರ, ಕ್ಯಾರಿ ಸುಮಾರು 14 ವಯಸ್ಸಿನವನಿದ್ದಾಗ ನಾರ್ಥ್ ಯಾರ್ಕ್‌ನ ಬೆಸೆಡ್ ಟ್ರಿನಿಟಿ ಕ್ಯಾಥೊಲಿಕ್ ಸ್ಕೂಲ್‌ಗೆ ಸೇರಿ ಮುಂದಿನ ಎರಡು ವರುಷಗಳನ್ನು ಅಲ್ಲ್ಲಿಕಳೆದನು. ಅದಾದ ನಂತರ ಒಂದು ವರುಷ Agincourt Collegiate Instituteನಲ್ಲಿ ಅಭ್ಯಸಿಸಿ ತನ್ನ ಬಾಕಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು Northview Heights Secondary Schoolನಲ್ಲಿದ್ದುಕೊಂಡು ಮುಗಿಸಿದನು (ಆತ ಹತ್ತನೇ ಗ್ರೇಡಿನಲ್ಲಿ ಸುಮಾರು ಮೂರು ವರ್ಷ ಇದ್ದನು).

ಎಂಟು ವರುಷಗಳ ಕಾಲ ಬರ್ಲಿಂಗ್ಟನ್, ಓಂಟೇರಿಯೋದಲ್ಲಿ ವಾಸವಾಗಿದ್ದು Aldershot High Schoolನಲ್ಲಿ ಅಧ್ಯಯನ ಮಾಡುತ್ತಿದ್ದ ಕ್ಯಾರಿ ಒಮ್ಮೆ 80ರ ದಶಕದ ಹೊಸ ಅಲೆಯ ಸಂಗೀತತಂಡವಾಗಿದ್ದ ಸ್ಪೂನ್ಸ್‌ನ ಗಾನಗೋಷ್ಠಿಯ ಆರಂಭ ಮಾಡಿದ್ದನು. ಹ್ಯಾಮಿಲ್ಟನ್ ಸ್ಪೆಕ್ಟೇಟರ್‌‌ ನ ಸಂದರ್ಶನವೊಂದರಲ್ಲಿ (ಫೆಬ್ರುವರಿ 2007) ಕ್ಯಾರಿ, "ಅಕಸ್ಮಾತ್ ನನ್ನ ಶೋಬಿಸಿನೆಸ್‌ನ ವೃತ್ತಿಯಲ್ಲಿ ಯಶಸ್ಸು ದಕ್ಕದೇಹೋಗಿದ್ದರೆ ನಾನು ಇವತ್ತು ಹ್ಯಾಮಿಲ್ಟನ್, ಓಂಟೇರಿಯೋನ ಡೊಫಾಸ್ಕೋ ಸ್ಟೀಲ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿರುತ್ತಿದ್ದೆ" ಎಂದು ಹೇಳಿದ. ಹ್ಯಾಮಿಲ್ಟನ್ನಿನೆಡೆಗೆ ಹಾದುಬರುವ ಬರ್ಲಿಂಗ್ಟನ್ ಬೇ ಮತ್ತು ಅದರುದ್ದಕ್ಕೂ ಕಾಣಬರುವ ಸ್ತೀಲ್ ಮಿಲ್ಲುಗಳನ್ನು ನೋಡಿದಾಗಲೆಲ್ಲ ಆತ "ಅದು ಅತ್ಯುತ್ತಮ ಕೆಲಸಗಳಿರುವ ಜಾಗ" ಅಂದುಕೊಳ್ಳುತ್ತಿದ್ದನು. ಈ ಹೊತ್ತಿಗಾಗಲೇ ಆತನಿಗೆ ರಿಚ್ಮಂಡ್ ಹಿಲ್, ಓಂಟೇರಿಯೋನ ವೈಜ್ಞಾನಿಕ ಪರೀಕ್ಷಣಾ ಕೇಂದ್ರವೊಂದರಲ್ಲಿ ಕೆಲಸ ಮಾಡಿದ ಅನುಭವ ಇದ್ದಿತು.

ಬದುಕು

ಕಾಮಿಡಿ

1979ರಲ್ಲಿ ಲಿಯಾಟ್ರಿಸ್ ಸ್ಪೆವಾಕ್‌ನ ನಿರ್ವಹಣೆಯಡಿಯಲ್ಲಿ ಟೊರೋಂಟೋನ ಯಕ್ ಯಕ್ಸ್ ಎಂಬ ಜಾಗದಲ್ಲಿ ಸ್ತ್ಯಾಂಡ್-ಅಪ್ ಕಾಮಿಡಿ ಮಾಡಲು ಪ್ರಾರಂಭಿಸಿದ ಕ್ಯಾರಿ, 1981ರ ಫೆಬ್ರುವರಿಯ ಹೊತ್ತಿಗೆ ತನ್ನ 19ನೇ ಹುಟ್ಟುಹಬ್ಬದ ಬಳಿಕ ಜನಪ್ರಿಯನಾಗತೊಡಗಿ ಸುದ್ದಿಗೆ ಗ್ರಾಸವಾದನು. ಟೊರೋಂಟೋ ಸ್ತಾರ್‌ ನ ಒಬ್ಬ ವಿಮರ್ಶಕ ಕ್ಯಾರಿಯನ್ನು ಮೆಚ್ಚಿ ಹೊಗಳುತ್ತಾ "ಒಬ್ಬ ಅಪ್ಪಟ ತಾರೆ ಜೀವತಾಳತೊಡಗಿದ್ದಾನೆ" ಎಂದು ಬರೆದ. 1980ರ ಆರಂಭದಲ್ಲಿ ಲಾಸ್ ಏಂಜೆಲ್ಸ್‌ಗೆ ವಲಸೆಹೋಗಿ ದ ಕಾಮಿಡಿ ಸ್ಟೋರ್‌ನಲ್ಲಿ ಕೆಲಸ ಮಾಡತೊಡಗಿದ ಕ್ಯಾರಿಯನ್ನು ಕಾಮಿಡಿಯನ್ ರಾಡ್ನಿ ಡೇಂಜರ್‌ಫೀಲ್ಡ್ ಗಮನಿಸಿ ತನ್ನ ಪ್ರವಾಸೀ ಪ್ರದರ್ಶನಗಳಲ್ಲಿ ಆರಂಭಿಕ ಕಾಮಿಡಿ ನಡೆಸಲು ಆತನನ್ನು ನಿಯಮಿಸಿಕೊಂಡನು.

ನಂತರ ಚಲನಚಿತ್ರ ಮತ್ತು ದೂರದರ್ಶನಗಳೆಡೆ ತನ್ನ ಗಮನ ಹರಿಸಿದ ಕ್ಯಾರಿ 1980-81ರ ಅವಧಿಯ NBCಯ ಟಿವಿಶೋ Saturday Night Live ನಲ್ಲಿ ಅಭಿನಯಿಸಲು ಆಡಿಶನ್ ನೀಡಿದನು. ಕ್ಯಾರಿಯನ್ನು ಈ ಹುದ್ದೆಗಾಗಿ ಆಯ್ಕೆಮಾಡಲಿಲ್ಲ (ಮುಂದೆ 1996ರಲ್ಲಿ ಆತ ಈ ಶೋವನ್ನು ನಡೆಸಿಕೊಟ್ಟ). ಜೊಯೆಲ್ ಶೂಮೇಕರ್ ಈತನನ್ನು ಡಿ.ಸಿ.ಕ್ಯಾಬ್ ನಲ್ಲಿ ಅಭಿನಯಿಸಲು ಆಡಿಶನ್ ಮಾಡಿಸಿದರೂ, ಏನೂ ಪ್ರಯೋಜನವಾಗಲಿಲ್ಲ. ಆತನಿಗೆ ಸಿಕ್ಕ ಮೊದಲ ಮುಖ್ಯ ಪಾತ್ರವೆಂದರೆ ಏಪ್ರಿಲ್ 12,1984ರಿಂದ ಜುಲೈ 11,1984ರವರೆಗೆ NBCಯಲ್ಲ್ಲಿ ಕೆಲಕಾಲ ಪ್ರಸಾರವಾದ ಮಕ್ಕಳ ಕಾರ್ಟೂನುಗಳನ್ನು ತಯಾರಿಸುವವರ ಬಗೆಗಿನ ದ ಡಕ್ ಫ್ಯಾಕ್ಟರಿ ಯ ಯುವ ಅನಿಮೇಶನ್ ಪ್ರೊಡ್ಯೂಸರ್ ಸ್ಕಿಪ್ ಟಾರ್ಕೆಂಟನ್‌ನದು.

ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಕ್ಯಾರಿಗೆ ಮತ್ತು ಆತನ ಜತೆ 1989ರ ಕಾಮಿಡಿ ಅರ್ತ್ ಗರ್ಲ್ಸ್ ಆರ್ ಈಸಿ ಯಲ್ಲಿ ಭೂಮ್ಯಾತೀತ ಜೀವಿಯ ಪಾತ್ರ ವಹಿಸಿದ್ದ ಕಾಮಿಡಿಯನ್ ಡೇಮನ್ ವಾಯನ್ಸ್‌ನ ನಡುವೆ ಸ್ನೇಹ ಬೆಳೆಯಿತು. ವಾಯನ್ಸ್ ಸಹೋದರರಲ್ಲೊಬ್ಬನಾದ ಕೀನನ್ Foxಗಾಗಿ ಇನ್ ಲಿವಿಂಗ್ ಕಲರ್ ಎಂಬ ಸ್ಕೆಚ್ ಕಾಮಿಡಿ ಶೋವನ್ನು ನಡೆಸಲು ಆರಂಭಿಸಿದಾಗ ಕ್ಯಾರಿಯನ್ನು ಅದರ ನಟವರ್ಗಕ್ಕೆ ಸಾರಿಸಿಕೊಳ್ಳಲಾಯಿತು. ಈ ಶೋನಲ್ಲಿ ಆತ ಸದಾ ನೋವು, ಅಪಘಾತಗಳಿಗಿಡಾಗುವ ಮ್ಯಾಸೋಶಿಸ್ಟಿಕ್ ಫೈರ್ ಮಾರ್ಶಲ್ ಬಿಲ್, ಗಂಡಸಿನಂತಿರುವ ಮಹಿಳಾ ಬಾಡಿ ಬಿಲ್ಡರ್ ವೆರಾ ಡಿ ಮಿಲೋ ಮತ್ತು LAPDಯ ಸಾರ್ಜೆಂಟ್ ಸ್ಟೇಸೀ ಕೂನ್ ಮೊದಲಾದ ವಿಚಿತ್ರ ಪಾತ್ರಗಳನ್ನು ನಿಭಾಯಿಸಿದ.

ಚಿತ್ರ

ಕ್ಯಾರಿಯ ಚಲನಚಿತ್ರ ವೃತ್ತಿಜೀವನವು ರಬ್ಬರ್‌ಫೇಸ್‌ ಎಂಬ ಚಲನಚಿತ್ರದ(1983) ಮೂಲಕ ಆರಂಭವಾಯಿತು. ಈ ಚಲನಚಿತ್ರ ಬಿಡುಗಡೆಯಾದಾಗ ಅದರ ಹೆಸರು ಇದ್ದದ್ದು ಇಂಟ್ರೊಡ್ಯೂಸಿಂಗ್.. ಜಾನೆಟ್ . ಅದೇ ವರ್ಷ ಆತ ಗಳಿಸಿದ ಡೇಮಿಯನ್ ಲೀಯ ಕೆನೆಡಿಯನ್ ಸ್ಕೀಯಿಂಗ್ ಕಾಮಿಡಿಯಾದ ಕಾಪರ್ ಮೌಂಟನ್‌ ನ ಪ್ರಮುಖ ಪಾತ್ರವು ಸ್ಯಾಮೀ ಡೇವಿಸ್ ಜೂನಿಯರ್‌ನ ನಕಲು ಮಾಡುವುದನ್ನೂ ಒಳಗೊಂಡಿತ್ತು. ಆದರೆ ಈ ಚಲನಚಿತ್ರದ ಅವಧಿ ಒಂದು ಗಂಟೆಗೂ ಕಡಿಮೆಯಿದ್ದುದರಿಂದ ಮತ್ತು ಇದರಲ್ಲಿ ರೀಟಾ ಕೂಲಿಜ್ ಹಾಗೂ ರಾಂಪಿನ್ ರಾನೀ ಹಾಕಿನ್ಸ್ರ ಸಂಗೀತಾಭಿನಯವೇ ಜಾಸ್ತಿಯಿದ್ದುದರಿಂದ ಇದನ್ನು ಸಂಪೂರ್ಣವಾಗಿ ಒಂದು ಚಲನಚಿತ್ರವೆಂದು ಭಾವಿಸಲಾಗಲಿಲ್ಲ. ಎರಡು ವರ್ಷಗಳ ನಂತರ 1985ರಲ್ಲಿ ಕ್ಯಾರಿ ಒನ್ಸ್ ಬಿಟನ್ ಎಂಬ ಡಾರ್ಕ್ ಕಾಮಿಡಿ ಚಲನಚಿತ್ರದಲ್ಲಿ ಲಾರೆನ್ ಹಟನ್ ವಹಿಸಿರುವ 400 ವಯಸ್ಸಿನ ಹೆಣ್ಣುಪಿಶಾಚಿಯೊಂದರ ಪ್ರೇಮಕ್ಕೆ ಗುರಿಯಾಗಿರುವ ಮಾರ್ಕ್ ಕೆಂಡೆಲ್ ಎಂಬ ಕೌಮಾರ್ಯ ದಾಟಿರದ ಹದಿಹರೆಯದ ಹುಡುಗನ ಪಾತ್ರವು ಆತನ ಮೊದಲ ಪ್ರಮುಖ ತಾರಾಗಣದ ಪಾತ್ರ. ಪೆಗ್ಗೀ ಸ್ಯೂ ಗಾಟ್ ಮ್ಯಾರೀಡ್ (1986), ಅರ್ತ್ ಗರ್ಲ್ಸ್ ಆರ್ ಈಸಿ (1988) ಮತ್ತು ದ ಡೆಡ್ ಪೂಲ್ (1988) ಮೊದಲಾದ ಚಲನಚಿತ್ರಗಳಲ್ಲಿ ಪೋಷಕಪಾತ್ರಗಳನ್ನು ವಹಿಸುತ್ತಾ ಹೋದ ಕ್ಯಾರಿ ಇನ್ ಲಿವಿಂಗ್ ಕಲರ್ ಮುಗಿಯುವ ಕೆಲ ತಿಂಗಳುಗಳ ಮುನ್ನ 1994ರಲ್ಲಿ ಕಾಮಿಡಿAce Ventura: Pet Detective, ಬಿಡುಗಡೆಯಾಗುವವರೆಗೂ ನಿಜವಾದ ತಾರಾವರ್ಚಸ್ಸಿನ ರುಚಿಯನ್ನುಂಡಿರಲಿಲ್ಲ.

ಏಸ್ ವೆಂಚುರಾ ವನ್ನು ವಿಮರ್ಶಕರು ತಿರಸ್ಕರಿಸಿದರು ಮತ್ತು ಕ್ಯಾರಿಯ ಹೆಸರನ್ನು ಅತಿ ಕೆಟ್ಟ ನೂತನ ತಾರೆಯ ಪದವಿಗಾಗಿ 1995ರ ಗೋಲ್ಡನ್ ರಾಸ್ಪ್‌ಬೆರಿ ಪ್ರಶಸ್ತಿಯ ನಾಮಸೂಚನೆ ಮಾಡಲಾಯಿತು. ಆದರೆ ವಿಮರ್ಶಕರು ತೆಗಳಿದ ಕಾರಣದಿಂದಲೇ ಈ ಚಲಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ವೆಂಚುರಾದ ಪಾತ್ರ ಅತ್ಯಂತ ಜನಪ್ರಿಯವಾದುದಲ್ಲದೆ ಈ ಚಲನಚಿತ್ರವು ಕ್ಯಾರಿಗೆ ಸುಪರ್‌ಸ್ಟಾರ್ ಆಗಿ ಮಾಡಿತು. ಅದೇ ವರ್ಷ ಬಿಡುಗಡೆಯಾದ ಕ್ಯಾರಿಯ ನಟನೆಯಿದ್ದ ದ ಮಾಸ್ಕ್ ಮತ್ತು ಡಂಬ್ ಎಂಡ್ ಡಂಬರ್‌ ಗಳಂತೆಯೇ ಈ ಚಲನಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಅತಿ ದೊಡ್ಡ ಯಶಸ್ಸು ಗಳಿಸಿತು 1995ರಲ್ಲಿ ಬ್ಯಾಟ್‌ಮ್ಯಾನ್ ಫಾರೆವರ್‌ ನಲ್ಲಿ ರಿಡ್ಲರ್‌ನ ಪಾತ್ರದಲ್ಲಿ ನಟಿಸಿದ ಕ್ಯಾರಿ ಏಸ್ ವೆಂಚುರಾ ಆಗಿAce Ventura: When Nature Calls. ತನ್ನ ಪಾತ್ರವನ್ನು ಪುನಹ ನಿರ್ವಹಿಸಿದನು. ಈ ಎರಡೂ ಚಲನಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಗಳಿಸಿ ಕ್ಯಾರಿಗೆ ಮಿಲಿಯಗಟ್ಟಲೆ ಡಾಲರ್ ಸಂಭಾವನೆ ದೊರಕುವಂತಾಯಿತು.

ಕ್ಯಾರಿಯ ಮುಂದಿನ ಚಲನಚಿತ್ರವಾದ ದ ಕೇಬಲ್ ಗಯ್‌ ಗೆ (ನಿರ್ದೇಶನ: ಬೆನ್ ಸ್ಟಿಲ್ಲರ್) ದೊರಕಿದ 20 ಮಿಲಿಯನ್ ಡಾಲರ್ ಸಂಭಾವನೆ ಒಬ್ಬ ಹಾಸ್ಯನಟನಿಗೆ ದೊರಕಿದ ಅತ್ಯುಚ್ಚ ಮೊತ್ತವಾಗಿತ್ತು. ಈ ಚಲನಚಿತ್ರವು ಗಲ್ಲಾಪೆಟ್ಟಿಗೆ ಮತ್ತು ವಿಮರ್ಶಕರ ಬಳಿ ಯಶಸ್ಸು ಕಾಣದೇ ಹೋದರೂ ಕ್ಯಾರಿ ಕೂಡಲೇ ತಿಳಿಹಾಸ್ಯದ ಚಲನಚಿತ್ರವಾದ ಲಯರ್ ಲಯರ್‌ ನಿಂದ ಯಶಸ್ಸು ಗಳಿಸುವುದರ ಮೂಲಕ ತನ್ನ ಎಂದಿನ ಹಾಸ್ಯನಟನಾ ಶೈಲಿಗೆ ಮರಳಿದ.

ಹೆಚ್ಚು ಗಂಭೀರ ಪಾತ್ರಗಳತ್ತ ಗಮನ ಹರಿಸುತ್ತ ತನ್ನ ಸಂಭಾವನೆಯನ್ನು ಕಡಿಮೆಗೊಳಿಸಿದ ಕ್ಯಾರಿಯ ಬದಲಾದ ವೇಗವು ಆತನನ್ನು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ 1998ರ ಕಲ್ಪನಾ ವೈಜ್ಞಾನಿಕ ಡ್ರ್ಯಾಮಡಿ ಚಲನಚಿತ್ರ ದ ಟ್ರೂಮನ್ ಶೋ ನ ನಟನೆಯ ಮೂಲಕ ಅಕ್ಯಾಡೆಮಿ ಅವಾರ್ಡ್‌ಗಳ ನಾಮಸೂಚನೆಯತ್ತ ಒಯ್ದಿತು. ಚಲನಚಿತ್ರವು ಮೂರು ಇತರೆ ವಿಭಾಗಗಳಿಗೆ ನಾಮಸೂಚಿತಗೊಂಡರೂ ವ್ಯಕ್ತಿಗತವಾಗಿ ಕ್ಯಾರಿಯ ಹೆಸರು ಸೂಚಿತವಾಗಲಿಲ್ಲ. ಇದರಿಂದಾಗಿ ಆಸ್ಕರ್‌ ಸಮಾರಂಭದ ಪ್ರಸಾರದ ಸಮಯದಲ್ಲಿ ಭಾಗವಹಿಸಿದ ಕ್ಯಾರಿ "ಇಲ್ಲಿ ನಾಮಸೂಚಿತಗೊಳ್ಳುವುದೇ ಗೌರವದ ವಿಷಯ..ಓಹ್ ಇಲ್ಲ," ಎಂದು ತಮಾಷೆಮಾಡಿದ. ಆದರೆ ಈ ಚಲನಚಿತ್ರಕ್ಕಾಗಿ ಕ್ಯಾರಿಗೆ ಬೆಸ್ಟ್ ಆಕ್ಟರ್ ಇನ್ ಎ ಡ್ರಾಮಾ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಅತ್ಯುತ್ತಮ ಪುರುಷ ನಟನೆ ವಿಭಾಗದಲ್ಲಿ ಎಮ್‌ಟಿವಿ ಮೂವೀ ಪ್ರಶಸ್ತಿಗಳು ಲಭಿಸಿದವು. ಅದೇ ವರುಷ ಗ್ಯಾರಿ ಶ್ಯಾಂಡ್ಲಿಂಗ್‌ನ ದ ಲ್ಯಾರಿ ಸ್ಯಾಂಡರ್ಸ್ ಶೋ ನ ಕೊಟ್ಟಕೊನೆಯ ಭಾಗದಲ್ಲಿ ತನ್ನದೇ ಕಾಲ್ಪನಿಕ ಪಾತ್ರ ವಹಿಸಿದಂತೆ ಕಾಣಿಸಿಕೊಂಡ ಕ್ಯಾರಿಯ ಪಾತ್ರವು ಬೇಕೆಂದೇ ಶ್ಯಾಂಡ್ಲಿಂಗನ ಪಾತ್ರದ ಮೇಲೆ ಆವಾಹನೆಯಾಗುವಂತೆ ತೋರಿಸಲಾಯಿತು.

1999ರಲ್ಲಿ ಕ್ಯಾರಿಗೆ ಮ್ಯಾನ್ ಆನ್ ದ ಮೂನ್ ಚಲನಚಿತ್ರದ ಹಾಸ್ಯನಟ ಆಂಡಿ ಕಾಫ್‌ಮನ್‌ನ ಪಾತ್ರ ದಕ್ಕಿತು. ವಿಮರ್ಶಕರ ಮೆಚ್ಚುಗೆ ಗಳಿಸಿದರೂ ಕ್ಯಾರಿಯ ಹೆಸರು ಅಕ್ಯಾಡೆಮಿ ಪ್ರಶಸ್ತಿಗೆ ನಾಮಸೂಚಿತವಾಗಲಿಲ್ಲ. ಆದರೆ ಆತ ಸತತವಾಗಿ ಎರಡನೇ ವರ್ಷ ಅತ್ಯುತ್ತಮ ನಟ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದನು.

2000ದ ಹೊತ್ತಿಗೆ ತನ್ನನ್ನು ಡಂಬ್ ಎಂಡ್ ಡಂಬರ್‌ ನಲ್ಲಿ ನಿರ್ದೇಶಿಸಿದ ಫ್ಯಾರೆಲ್ಲಿ ಸಹೋದರರುಗಳೊಂದಿಗೆ ಪುನಹ ಸೇರಿದ ಕ್ಯಾರಿ, ಅವರ ಹಾಸ್ಯಪ್ರಧಾನ ಚಲನಚಿತ್ರ ಮಿ ಮೈಸೆಲ್ಫ್ ಎಂಡ್ ಐರೀನ್‌ ನಲ್ಲಿ ರೆನೀ ಜೆಲ್ವೆಗರ್‌ಳನ್ನು ಪ್ರೇಮಿಸುವ ಹಲವಾರು ವ್ಯಕ್ತಿತ್ವಗಳನ್ನುಳ್ಳ ಸ್ತೇಟ್ ಟ್ರೂಪರನೊಬ್ಬನ ಈ ಚಲನಚಿತ್ರವು ಬಿಡುಗಡೆಯಾದ ವಾರ 24 ಮಿಲಿಯನ್ ಡಾಲರುಗಳನ್ನು ಮತ್ತು ತನ್ನ ಎಲ್ಲಾ ಪ್ರಾದೇಶಿಕ ಪ್ರದರ್ಶನಗಳನ್ನು ಮುಗಿಸುವ ವೇಳೆಗೆ 90 ಮಿಲಿಯನ್ ಡಾಲರುಗಳನ್ನು ಗಳಿಸಿತು.

2003ರಲ್ಲಿ ಟಾಮ್ ಶಾಡ್ಯಾಕ್‌ನೊಂದಿಗೆ ಮತ್ತೆ ಕೆಲಸ ಮಾಡಿದ ಕ್ಯಾರಿ ಗಲ್ಲಾಪೆಟ್ಟಿಗೆ ಯಶಸ್ಸುಗಳಿಸಿದ ಹಾಸ್ಯಚಲನಚಿತ್ರ ಬ್ರೂಸ್ ಆಲ್ಮೈಟಿ ಯಲ್ಲಿ ನಟಿಸಿದ. U.S.ನಲ್ಲಿ 242 ಮಿಯನ್ ಡಾಲರ್ ಮತ್ತು ಜಾಗತಿಕವಾಗಿ 484 ಮಿಲಿಯನ್ ಡಾಲರುಗಳನ್ನು ಗಳಿಸಿದ ಈ ಚಲನಚಿತ್ರವು ಅತಿ ಹೆಚ್ಚು ಹಣ ಗಳಿಸಿದ ಎರಡನೇ ಲೈವ್ ಆಕ್ಷನ್ ಹಾಸ್ಯಪ್ರಧಾನ ಚಲನಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1}2004ರ ಕ್ಯಾರಿಯ ಎಟರ್ನಲ್ ಸನ್‌ಶೈನ್ ಆಫ್ ದ ಸ್ಪಾಟ್‌ಲೆಸ್ ಮೈಂಡ್‌ ನ ನಟನೆಯನ್ನು ಬಹಳ ಮೆಚ್ಚಿಕೊಂಡ ವಿಮರ್ಶಕರು ಆತನಿಗೆ ಈ ಬಾರಿ ಖಂಡಿತವಾಗಿ ಆಸ್ಕರ್ ನಾಮಸೂಚನೆ ದೊರಕುವುದೆಂದು ಭವಿಷ್ಯ ನುಡಿದರು. ಚಲನಚಿತ್ರವು ಅತ್ಯುತ್ತಮ ಒರಿಜಿನಲ್ ಸ್ಕ್ರೀನ್‌ಪ್ಲೇಗಾಗಿ ಆಸ್ಕರ್ ಪ್ರಶಸ್ತಿ ಗಳಿಸಿತು ಮತ್ತು ಆತನ ಜತೆ ನಟಿಸಿದ ಕೇಟ್ ವಿನ್ಸ್‌ಲೆಟ್‌ಳ ನಟನೆಗಾಗಿ ಆಕೆ ನಾಮಸೂಚಿತಗೊಂಡಳು. (ಕ್ಯಾರಿಯ ನಟನೆಗಾಗಿ ಆತನನ್ನು ಆರನೇ ಬಾರಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಸೂಚಿಸಲಾಯಿತು).

2004ರಲ್ಲಿ ಆತ ಲೆಮೊನಿ ಸ್ನಿಕೆಟ್ಸ್ ಎ ಸೀರೀಸ್ ಆಫ್ ಆನ್‌ಫಾರ್ಚುನೇಟ್ ಈವೆಂಟ್ಸ್ ಎಂಬ ಹೆಸರಿನ ಅದೇ ಹೆಸರಿನ ಮಕ್ಕಳ ಕಾದಂಬರಿ ಆಧಾರಿತ ಚಲನಚಿತ್ರದಲ್ಲಿ ಖಳನಾಯಕ ಕೌಂಟ್ ಓಲಾಫ್‌ನ ಪಾತ್ರದಲ್ಲಿ ನಟಿಸಿದ. 2005ರಲ್ಲಿ ಫನ್ ವಿದ್ ಡಿಕ್ ಎಂಡ್ ಜೇನ್‌ ನ ರೀಮೇಕ್‌ನಲ್ಲಿ ತನ್ನ ಕೆಲಸ ಕಳೆದುಕೊಂಡ ಮೇಲೆ ಬ್ಯಾಂಕ್ ದರೋಡೆ ಮಾಡುವ ಡಿಕ್‌ನ ಪಾತ್ರದಲ್ಲಿ ಕ್ಯಾರಿ ನಟಿಸಿದ.

2007ರಲ್ಲಿ ಬ್ಯಾಟ್‌ಮ್ಯಾನ್ ಫಾರೆವರ್‌ ನ ನಿರ್ದೇಶಕ ಜೊಯೆಲ್ ಶೂಮೇಕರ್‌ನ ಜತೆ ಮತ್ತೆ ಕೆಲಸ ಮಾಡಿದ ಕ್ಯಾರಿ ವರ್ಜೀನಿಯಾ ಮ್ಯಾಡ್ಸೆನ್ ಮತ್ತು ಡ್ಯಾನಿ ಹಸ್ಟನ್‌ರ ಜತೆ ಮನೋವೈಜ್ಞಾನಿಕ ಥ್ರಿಲ್ಲರ್ ಚಲನಚಿತ್ರ ದ ನಂಬರ್ 23 ಯಲ್ಲಿ ನಟಿಸಿದ. ಈ ಚಲನಚಿತ್ರದಲ್ಲಿ 23 ಎಂಬ ಸಂಖ್ಯೆಯ ಬಗ್ಗೆ ಭ್ರಾಂತನಾಗಿರುವ ಮನುಷ್ಯನೊಬ್ಬ ಬರೆದ ಪುಸ್ತಕವನ್ನು ಓದಿದ ಮೇಲೆ ಅದೇ ಸಂಖ್ಯೆಯ ಬಗ್ಗೆ ಭ್ರಾಂತಿ ಹೊಂದುವ ವ್ಯಕ್ತಿಯ ಪಾತ್ರವನ್ನು ಕ್ಯಾರಿ ನಿರ್ವಹಿಸಿದ್ದಾನೆ.

ಕ್ಯಾರಿಯ ಪ್ರಕಾರ ಮತ್ತೆ ಮತ್ತೆ ಒಂದೇ ಪಾತ್ರದಲ್ಲಿ ನಟಿಸುವುದು ಹೊಸ ಪಾತ್ರವೊಂದನ್ನು ನಿಭಾಯಿಸುವುದಕ್ಕಿಂತ ಕಡಿಮೆ ಸಂತಸ ನೀಡುತ್ತದೆ. ಏಸ್ ವೆಂಚುರಾದಲ್ಲಿ ಮಾತ್ರ ಆತ ತನ್ನ ಪಾತ್ರದಲ್ಲಿ ಒಂದಕ್ಕಿಂತ ಹೆಚ್ಚು ಸಾರಿ ನಟಿಸಿರುವುದು ಕಾಣಬರುತ್ತದೆ. (ಬ್ರೂಸ್ ಆಲ್ಮೈಟಿ , ಡಂಬ್ ಎಂಡ್ ಡಂಬರ್ ಹಾಗೂ ದ ಮಾಸ್ಕ್‌ ಗಳ ಮುಂದುವರೆದ ಭಾಗಗಳು ಕ್ಯಾರಿಯನ್ನೊಳಗೊಂಡಿಲ್ಲ.)

ಇಪ್ಪತ್ತು ವರ್ಷಗಳ ವೃತ್ತಿಜೀವನದಲ್ಲಿ ಯಾವುದೇ ಅಕ್ಯಾಡೆಮಿ ಅವಾರ್ಡ್ ನಾಮಿನೇಶನ್ನುಗಳನ್ನು ಹೊಂದದಿದ್ದರೂ ಜ್ಯಾಕ್ ನಿಕಲ್ಸನ್ (ತನ್ನ ವೃತ್ತಿಜೀವನದ ಮೊದಲ ಇಪ್ಪತ್ತು ವರ್ಷಗಳಲ್ಲಿ ಐದು ನಾಮಿನೇಶನ್ ಪಡೆದ ನಟ)ಕ್ಯಾರಿಯನ್ನು ಮುಂದಿನ ಜನಾಂಗದ "ಜ್ಯಾಕ್ ನಿಕಲ್ಸನ್" ಎಂದು ಹೆಸರಿಸಿದ್ದಾನೆ.

ವೈಯುಕ್ತಿಕ ಜೀವನ

ಎರಡು ಬಾರಿ ವಿವಾಹಿತನಾಗಿರುವ ಕ್ಯಾರಿ ಮೊದಲಬಾರಿ ಮಾಜೀ ನಟಿ ಮತ್ತು ಕಾಮಿಡಿ ಸ್ಟೋರ್‌ನ ವೇಟ್ರೆಸ್ ಮೆಲಿಸ್ಸಾ ವೋಮರ್‌ಳನ್ನು ಮದುವೆಯಾಗಿ ಆಕೆಯಿಂದ ಜೇನ್ ಎರಿನ್ ಕ್ಯಾರಿ ಎಂಬ ಮಗಳನ್ನು ಪಡೆದನು (ಹುಟ್ಟು: ಸೆಪ್ಟೆಂಬರ್ 6, 1987 ಲಾಸ್ ಏಂಜೆಲ್ಸ್ ಕೌಂಟಿಯಲ್ಲಿ). ಮಾರ್ಚ್ 28, 1987 ರಂದು ಅವರ ಮದುವೆಯಾಯಿತು ಮತ್ತು 1995ರ ಅಂತ್ಯದ ವೇಳೆಗೆ ಅವರ ಡೈವೋರ್ಸ್ ಕಾನೂನುಪ್ರಕಾರ ನಡೆಯಿತು. 1994ರಲ್ಲಿ ವೋಮರಳಿಂದ ದೂರವಾದ ನಂತರ, ಕ್ಯಾರಿ ಡಂಬ್ ಎಂಡ್ ಡಂಬರ್‌ ನ ಸಹನಟಿ ಲಾರೆನ್ ಹಾಲಿಯನ್ನು ಡೇಟ್ ಮಾಡಲಾರಂಭಿಸಿದ. ಸೆಪ್ಟೆಂಬರ್ 23, 1996 ರಂದು ಇವರ ವಿವಾಹವಾಯಿತು; ಈ ಮದುವೆ ಒಂದು ವರ್ಷದಷ್ಟೂ ನಡೆಯಲಿಲ್ಲ. ಇದರ ನಂತರ ಕ್ಯಾರಿ ಮಿ, ಮೈಸೆಲ್ಫ್ ಎಂಡ್ ಐರೀನ್‌ ನ ಸೆಟ್ಟಿನಲ್ಲಿ ಭೇಟಿಯಾದ ನಟಿ ರೆನೀ ಜೆಲ್ವೆಗರ್‌ಳನ್ನು ಡೇಟ್ ಮಾಡಿದನಾದರೂ ಈ ಸಂಬಂಧವು ಡಿಸೆಂಬರ್ 2000ದ ಹೊತ್ತಿಗೆ ಮುರಿದುಬಿದ್ದ ನಿಶ್ಚಿತಾರ್ಥದೊಂದಿಗೆ ಕೊನೆಗೊಂಡಿತು. 2004ರಲ್ಲಿ ಕ್ಯಾರಿ ತನ್ನ ಮಸಾಜ್ ಥೆರಪಿಸ್ಟ್ ಆಗಿದ್ದ ಟಿಫಾನಿ ಓ. ಸಿಲ್ವರ್‌ಳನ್ನು ಡೇಟ್ ಮಾಡುತ್ತಿದ್ದ.[ಸೂಕ್ತ ಉಲ್ಲೇಖನ ಬೇಕು]

Playboy Magazine ನ 2006ರ ಮೇ ಸಂಚಿಕೆಯಲ್ಲಿ ಆತ ಮಾಡೆಲ್ ಅನೈನ್ ಬಿಂಗ್‌ಳನ್ನು ಡೇಟ್ ಮಾಡಿರುವನೆಂದು ವರದಿ ಮಾಡಲಾಯಿತು. 2005ರ ಡಿಸೆಂಬರಿನಲ್ಲಿ ಕ್ಯಾರಿ ನಟಿ/ಮಾಡೆಲ್ ಜೆನ್ನೀ ಮಕ್‌ಕಾರ್ಥಿಯನ್ನು ಡೇಟ್ ಮಾಡತೊಡಗಿದ}. ಅಂದಿನಿಂದ ಈ ಜೋಡಿ ಅವರ ನಿಶ್ಚಿತಾರ್ಥವಾಗಿದೆಯೆಂಬ ವದಂತಿಗಳನ್ನಿ ಅಲ್ಲಗಳೆಯುತ್ತ ಬಂದಿದೆ. 2006ರ ಜೂನ್‌ವರೆಗೂ ಅವರು ತಮ್ಮ ಸಂಬಂಧವನ್ನು ಬಹಿರಂಗಗೊಳಿಸಲಿಲ್ಲ. ಏಪ್ರಿಲ್ 2, 2008ರ The Ellen DeGeneres Show ನಲ್ಲಿ ಆಕೆ ತಾವಿಬ್ಬರೂ ಈ ಗ ಒಟ್ಟಿಗೇ ಇದ್ದೇವೆಂದೂ, ಮದುವೆಯಾಗುವ ಯೋಜನೆಗಳಿಲ್ಲವೆಂದೂ, ಅದಕ್ಕಾಗಿ ತಮಗೆ ಒಂದು "ಕಾಗದದ ಚೂರಿನ" ಅವಶ್ಯಕತೆ ಇಲ್ಲವೆಂದೂ ಘೋಷಿಸಿದಳು.

ಕ್ಯಾರಿಯ 22ರ ಹರೆಯದ ಮಗಳು ಜೇನ್ ಈಗ ಗರ್ಭಿಣಿ. ಆಕೆಯ ಮಗುವಿನ ತಂದೆಯಾಗಿರುವ ಬ್ಲಡಿ ಮನಿ ಬ್ಯಾಂಡಿನಲ್ಲಿ ನೈಟ್ರೋ ಎಂಬ ಹೆಸರಿನಲ್ಲಿ ಪರ್ಫಾರ್ಮ್ ಮಾಡುವ ರಾಕರ್ ಅಲೆಕ್ಸ್ ಸಾಂತಾನಾ ಆಕೆಯ ಫಿಯಾನ್ಸಿ ಕೂಡಾ.

ಕ್ಯಾರಿಯ ಹಲ್ಲೊಂದರ ತುಣುಕು ಇಲ್ಲ; ತನ್ನ ಡಂಬ್ ಎಂಡ್ ಡಂಬರ್ ನ ಪಾತ್ರಕ್ಕಾಗಿ ಆತ ತನ್ನ ಹಲ್ಲಿನ ಕ್ಯಾಪನ್ನು ತೆಗೆದುಹಾಕಿದ.

1990ರ ಮೊದಲವರೆಗೂ ಆತ ತನ್ನ ಕುಟುಂಬದೊಂದಿಗೆ ಪ್ರೆಸ್‌ಬೈಟೀರಿಯನ್ ಚರ್ಚ್ ಒಂದಕ್ಕೆ ಭೇಟಿ ನೀಡುತ್ತಿದ್ದ. ಏಸ್ ವೆಂಚುರಾ ದಲ್ಲಿ ಕಾಣಿಸಿಕೊಳ್ಳುವ ಡೆತ್ ಮೆಟಲ್ ಬ್ಯಾಂಡ್ ಕ್ಯಾನಿಬಾಲ್ ಕಾರ್ಪ್ಸ್ ನ ಅಭಿಮಾನಿಯಾದ ಆತನು, ಈ ಚಲನಚಿತ್ರದಲ್ಲಿ ತನ್ನ ಮೆಚ್ಚಿನ ಬ್ಯಾಂಡ್ ಅನ್ನು ತೋರಿಸಬೇಕೆಂಡು ಮನವಿ ಮಾಡಿದ್ದ. ಅಕ್ಟೋಬರ್ 7, 2004ರಲ್ಲಿ ಯು.ಎಸ್. ನ ಪೌರತ್ವ ಪಡೆದ ಕ್ಯಾರಿ ಯು. ಎಸ್. ಮತ್ತು ಕೆನಡಾದ ದ್ವಿಪೌರತ್ವ ಹೊಂದಿದ್ದಾನೆ. ಟೊರಾಂಟೋನ Canada's Walk of Fame ನಲ್ಲಿ 1998ರಿಂದಲೂ ಆತನ ಹೆಸರಿನ ನಕ್ಷತ್ರವಿದೆ.

ಮಾನಸಿಕ ಖಿನ್ನತೆಯ ಜತೆಗೆ ತನ್ನ ಮುಖಾಮುಖಿಯನ್ನು 2004 ರ ನವೆಂಬರಿನಲ್ಲಿ 60 Minutes ಜತೆಗಿನ ಸಂದರ್ಶನದಲ್ಲಿ ಕ್ಯಾರಿ ಬಹಿರಂಗಪಡಿಸಿದ. ಇಂಟರ್ನೆಟ್ ವೀಡಿಯೋಗಳ ಮತ್ತು ಮಾಧ್ಯಮದ ಮುಖಾಂತರ ಕ್ಯಾರಿ ಬರ್ಮಾದ ರಾಜಕೀಯ ದಬ್ಬಾಳಿಕೆ, ಅದರಲ್ಲೂ ಆತ ’ಹೀರೋ’ ಎಂದು ಪರಿಗಣಿಸುವ ನೋಬೆಲ್ ಪ್ರಶಸ್ತಿ ವಿಜೇತ ನಾಯಕಿ ಆಂಗ್ ಸಾನ್ ಸೂ ಕಿ ಯ ಮೇಲಾಗುತ್ತಿರುವ ದಬ್ಬಾಳಿಕೆಯೇ ಮೊದಲಾದ ಹಲವಾರು ವಿಷಯಗಳ ಬಗ್ಗೆ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದಾನೆ.

ಜೆನಿಫರ್ ಮಕ್‌ಕಾರ್ಥಿಯ ಜತೆಗೆ ಕ್ಯಾರಿ Generation Rescue ಫೌಂಡೇಶನ್ನಿನ ಪ್ರಮುಖ ವಕ್ತಾರನೂ ಪ್ರಚಾರಕನೂ ಆಗಿದ್ದಾನೆ.

ಚಲನಚಿತ್ರಗಳ ಪಟ್ಟಿ

ಗಮನಾರ್ಹ ಪಾತ್ರಗಳು

  • ಏಸ್ ವೆಂಚುರಾ
  • ದ ಮಾಸ್ಕ್
  • ರಿಡ್ಲರ್
  • ಆಂಡಿ ಕಾಫ್‌ಮನ್ (ಟೋನಿ ಕ್ಲಿಫ್ಟನ್)
  • ದ ಗ್ರಿಂಚ್
  • ಕೌಂಟ್ ಓಲಾಫ್
  • ಹಾರ್ಟನ್ ದ ಎಲಿಫೆಂಟ್
  • ಎಬೆನೆಜರ್ ಸ್ಕ್ರೂಜ್
  • ಸ್ಟೀವನ್ ಜೇ ರಸೆಲ್
  • ಕರ್ಲಿ ಹವರ್ಡ್

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಗೋಲ್ಡನ್ ಗ್ಲೋಬ್ ಪ್ರಶಸ್ತಿ‌

  • 1995 - ಬೆಸ್ಟ್ ಪರ್ಫಾರ್ಮೆನ್ಸ್ ಬಯ್ ಆನ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್ - ಮ್ಯೂಸಿಕಲ್ ಆರ್ ಕಾಮಿಡಿ, ' ದ ಮಾಸ್ಕ್ (ಸೂಚಿತ)
  • 1998 - ಬೆಸ್ಟ್ ಪರ್ಫಾರ್ಮೆನ್ಸ್ ಬಯ್ ಆನ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್ - ಮ್ಯೂಸಿಕಲ್ ಆರ್ ಕಾಮಿಡಿ, ಲಯರ್ ಲಯರ್ (ಸೂಚಿತ)
  • 1999 - ಬೆಸ್ಟ್ ಪರ್ಫಾರ್ಮೆನ್ಸ್ ಬಯ್ ಆನ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್ - ಡ್ರಾಮಾ, ದ ಟ್ರೂಮನ್ ಶೋ (ಲಭಿಸಿತು)
  • 2000 - ಬೆಸ್ಟ್ ಪರ್ಫಾರ್ಮೆನ್ಸ್ ಬಯ್ ಆನ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್ - ಮ್ಯೂಸಿಕಲ್ ಆರ್ ಕಾಮಿಡಿ, ಮ್ಯಾನ್ ಆನ್ ದ ಮೂನ್ (ಲಭಿಸಿತು)
  • 2001 - ಬೆಸ್ಟ್ ಪರ್ಫಾರ್ಮೆನ್ಸ್ ಬಯ್ ಆನ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್ - ಮ್ಯೂಸಿಕಲ್ ಆರ್ ಕಾಮಿಡಿ, ಹೌ ದ ಗ್ರಿಂಚ್ ಸ್ಟೋಲ್ ಕ್ರಿಸ್ಮಸ್ (ಸೂಚಿತ)
  • 2005 - ಬೆಸ್ಟ್ ಪರ್ಫಾರ್ಮೆನ್ಸ್ ಬಯ್ ಆನ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್ - ಮ್ಯೂಸಿಕಲ್ ಆರ್ ಕಾಮಿಡಿ, ಎಟರ್ನಲ್ ಸನ್‌ಶೈನ್ ಆಫ್ ದ ಸ್ಪಾಟ್‌ಲೆಸ್ ಮೈಂಡ್ (ಸೂಚಿತ)

ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿಗಳು

  • 2000 - ಔಟ್‌ಸ್ಟಾಂಡಿಂಗ್ ಪರ್ಫಾರ್ಮೆನ್ಸ್ ಬೈ ಎ ಮೇಲ್ ಆಕ್ಟರ್ ಇನ್ ಎ ಲೀಡಿಂಗ್ ರೋಲ್, ಮ್ಯಾನ್ ಆನ್ ದ ಮೂನ್ (ಸೂಚಿತ)

BAFTA ಪ್ರಶಸ್ತಿಗಳು

  • 2005 - ಬೆಸ್ಟ್ ಪರ್ಫಾರ್ಮೆನ್ಸ್ ಬಯ್ ಆನ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್, ಎಟರ್ನಲ್ ಸನ್‌ಶೈನ್ ಆಫ್ ದ ಸ್ಪಾಟ್‌ಲೆಸ್ ಮೈಂಡ್ (ಸೂಚಿತ)

ಸ್ಯಾಟೆಲೈಟ್‌ ಪ್ರಶಸ್ತಿ‌ಗಳು

  • 2000 - ಬೆಸ್ಟ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್, ಕಾಮಿಡಿ ಆರ್ ಮ್ಯೂಸಿಕಲ್, ಮ್ಯಾನ್ ಆನ್ ದ ಮೂನ್ (ಸೂಚಿತ))
  • 2005 - ಬೆಸ್ಟ್ ಆಕ್ಟರ್ ಇನ್ ಎ ಮೋಶನ್ ಪಿಕ್ಚರ್, ಕಾಮಿಡಿ ಆರ್ ಮ್ಯೂಸಿಕಲ್, ಎಟರ್ನಲ್ ಸನ್‌ಶೈನ್ ಆಫ್ ದ ಸ್ಪಾಟ್‌ಲೆಸ್ ಮೈಂಡ್ (ಸೂಚಿತ)

ಪೀಪಲ್ಸ್‌ ಚಾಯಿಸ್‌ ಪ್ರಶಸ್ತಿಗಳು

  • 2001 - ಫೇವರಿಟ್ ಮೋಶನ್ ಪಿಕ್ಚರ್ ಸ್ಟಾರ್ ಇನ್ ಎ ಕಾಮಿಡಿ (ಲಭಿಸಿತು)
  • 2005 - ಫೇವರಿಟ್ ಫನ್ನೀ ಮೇಲ್ ಸ್ಟಾರ್ (ಲಭಿಸಿತು)
  • 2009 - ಫೇವರಿಟ್ ಫನ್ನೀ ಮೇಲ್ ಸ್ಟಾರ್ (ಸೂಚಿತ)

MTV ಮೂವೀ ಪ್ರಶಸ್ತಿಗಳು

  • 1994 - ಬೆಸ್ಟ್ ಕಾಮಿಡಿಕ್ ಪರ್ಫಾರ್ಮೆನ್ಸ್ (Ace Ventura: Pet Detective ) (ಸೂಚಿತ)
  • 1995 - ಬೆಸ್ಟ್ ಆನ್-ಸ್ಕ್ರೀನ್ ಡ್ಯುವೋ (ಡಂಬ್ ಎಂಡ್ ಡಂಬರ್ ) (ಸೂಚಿತ))
  • 1995 - ಬೆಸ್ಟ್ ಡಾನ್ಸ್ ಸೀಕ್ವೆನ್ಸ್ (ದ ಮಾಸ್ಕ್ ) (ಸೂಚಿತ)
  • 1995 - ಬೆಸ್ಟ್ ಕಾಮಿಡಿಕ್ ಪರ್ಫಾರ್ಮೆನ್ಸ್ (ದ ಮಾಸ್ಕ್ ) (ಸೂಚಿತ)
  • 1995 - ಬೆಸ್ಟ್ ಕಿಸ್ ಲಾರೆನ್ ಹಾಲಿ ಜತೆಗೆ (ಡಂಬ್ ಎಂಡ್ ಡಂಬರ್ ) (ಲಭಿಸಿತು)
  • 1995 - ಬೆಸ್ಟ್ ಕಾಮಿಡಿಕ್ ಪರ್ಫಾರ್ಮೆನ್ಸ್ (ಡಂಬ್ ಎಂಡ್ ಡಂಬರ್ ) (ಲಭಿಸಿತು)
  • 1996 - ಬೆಸ್ಟ್ ವಿಲನ್ (ಬ್ಯಾಟ್‌ಮ್ಯಾನ್ ಫಾರೆವರ್ ) (ಸೂಚಿತ)
  • 1996 - ಬೆಸ್ಟ್ ಕಿಸ್ ಸೋಫೀ ಒಕೋನಿಡೋ (Ace Ventura: When Nature Calls ) ಜತೆಗೆ (ಸೂಚಿತ)
  • 1996 - ಬೆಸ್ಟ್ ಕಾಮಿಡಿಕ್ ಪರ್ಫಾರ್ಮೆನ್ಸ್ (ಏಸ್ ವೆಂಚುರಾ: ವೆನ್ ನೇಚರ್ ಕಾಲ್ಸ್ ) (ಲಭಿಸಿತು)
  • 1996 - ಬೆಸ್ಟ್ ಮೇಲ್ ಪರ್ಫಾರ್ಮೆನ್ಸ್ (ಏಸ್ ವೆಂಚುರಾ: ವೆನ್ ನೇಚರ್ ಕಾಲ್ಸ್ ) (ಸೂಚಿತ)
  • 1996 - ಬೆಸ್ಟ್ ಪರ್ಫಾರ್ಮೆನ್ಸ್
  • 1997 - ಬೆಸ್ಟ್ ಫೈಟ್ ಮ್ಯಾಥ್ಯೂ ಬ್ರಾಡರಿಕ್ ಜತೆಗೆ (ದ ಕೇಬಲ್ ಗಯ್ ) (ಸೂಚಿತ)
  • 1997 - ಬೆಸ್ಟ್ ವಿಲನ್ (ದ ಕೇಬಲ್ ಗಯ್ ) (ಲಭಿಸಿತು)
  • 1997 - ಬೆಸ್ಟ್ ಕಾಮಿಡಿಕ್ ಪರ್ಫಾರ್ಮೆನ್ಸ್ ({0ದ ಕೇಬಲ್ ಗಯ್{/0}) (ಲಭಿಸಿತು)
  • 1998 - ಬೆಸ್ಟ್ ಕಾಮಿಡಿಕ್ ಪರ್ಫಾರ್ಮೆನ್ಸ್ (ಲಯರ್ ಲಯರ್ ) (ಲಭಿಸಿತು)
  • 1999 - ಬೆಸ್ಟ್ ಮೇಲ್ ಪರ್ಫಾರ್ಮೆನ್ಸ್ (ದ ಟ್ರೂಮನ್ ಶೋ ) (ಲಭಿಸಿತು)
  • 1999 - ಬೆಸ್ಟ್ ಪರ್ಫಾರ್ಮೆನ್ಸ್
  • 2000 - ಬೆಸ್ಟ್ ಮೇಲ್ ಪರ್ಫಾರ್ಮೆನ್ಸ್ (ಮ್ಯಾನ್ ಆನ್ ದ ಮೂನ್ ) (ಸೂಚಿತ)
  • 2001 - ಬೆಸ್ಟ್ ಕಾಮಿಡಿಕ್ ಪರ್ಫಾರ್ಮೆನ್ಸ್ (ಮಿ, ಮೈಸೆಲ್ಫ್ ಎಂಡ್ ಐರೀನ್ ) (ಸೂಚಿತ)
  • 2001 - ಬೆಸ್ಟ್ ವಿಲನ್ (ಹವ್ ದ ಗ್ರಿಂಚ್ ಸ್ಟೋಲ್ ಕ್ರಿಸ್ಮಸ್ ) (ಲಭಿಸಿತು)
  • 2004 - ಬೆಸ್ಟ್ ಕಿಸ್ ಜೆನಿಫರ್ ಆನಿಸ್ಟನ್ ಜತೆಗೆ (ಬ್ರೂಸ್ ಆಲ್ಮೈಟಿ ) (ಸೂಚಿತ)
  • 2004 - ಬೆಸ್ಟ್ ಕಮಿಡಿಕ್ ಪರ್ಫಾರ್ಮೆನ್ಸ್ (ಬ್ರೂಸ್ ಆಲ್ಮೈಟಿ ) (ಸೂಚಿತ)
  • 2005 - ಬೆಸ್ಟ್ ವಿಲನ್ (ಲೆಮೊನಿ ಸ್ನಿಕೆಟ್ಸ್ ಎ ಸೀರಿಸ್ ಆಫ್ ಅನ್‌ಫಾರ್ಚುನೇಟ್ ಈವೆಂಟ್ಸ್ ) (ಸೂಚಿತ)
  • 2006 - MTV ಜನರೇಶನ್ ಅವಾರ್ಡ್
  • 2009 - ಬೆಸ್ಟ್ ಕಾಮಿಡಿಕ್ ಪರ್ಫಾರ್ಮೆನ್ಸ್ (ಯೆಸ್ ಮ್ಯಾನ್ ) (ಲಭಿಸಿತು)

ಕಿಡ್ಸ್ ಚಾಯ್ಸ್ ಪ್ರಶಸ್ತಿಗಳು

  • 1995 - ಫೇವರಿಟ್ ಮೂವೀ ಆಕ್ಟರ್ (Ace Ventura: Pet Detective ) (ಲಭಿಸಿತು)
  • 1996 - ಫೇವರಿಟ್ ಮೂವಿ ಆಕ್ಟರ್ (Ace Ventura: When Nature Calls ) (ಲಭಿಸಿತು)
  • 1997 - ಫೇವರಿಟ್ ಮೂವೀ ಆಕ್ಟರ್ (ದ ಕೇಬಲ್ ಗಯ್ ) (ಲಭಿಸಿತು)
  • 1998 - ಫೇವರಿಟ್ ಮೂವಿ ಆಕ್ಟರ್ (ಲಯರ್ ಲಯರ್ ) (ಸೂಚಿತ)
  • 1999 - ಫೇವರಿಟ್ ಮೂವಿ ಆಕ್ಟರ್ (ದ ಟ್ರೂಮನ್ ಶೋ ) (ಸೂಚಿತ)
  • 2001 - ಫೇವರಿಟ್ ಮೂವಿ ಆಕ್ಟರ್ (ಹವ್ ದ ಗ್ರಿಂಚ್ ಸ್ಟೋಲ್ ಕ್ರಿಸ್ಮಸ್ ) (ಲಭಿಸಿತು)
  • 2004 - ಫೇವರಿಟ್ ಮೂವಿ ಆಕ್ಟರ್ (ಬ್ರೂಸ್ ಆಲ್ಮೈಟಿ ) (ಲಭಿಸಿತು)
  • 2005 - ಫೇವರಿಟ್ ಮೂವಿ ಆಕ್ಟರ್ (ಲೆಮೊನಿ ಸ್ನಿಕೆಟ್ಸ್ ಎ ಸೀರೀಸ್ ಆಫ್ ಅನ್‌ಫಾರ್ಚುನೇಟ್ ಈವೆಂಟ್ಸ್ ) (ಸೂಚಿತ)
  • 2009 - ಫೇವರಿಟ್ ಮೂವಿ ಆಕ್ಟರ್ (ಯೆಸ್ ಮ್ಯಾನ್ ) (ಸೂಚಿತ)
  • 2009 - ಫೇವರಿಟ್ ವಾಯ್ಸ್ ಇನ್ ಆನ್ ಅನಿಮೇಟೆಡ್ ಮೂವೀ (ಹಾರ್ಟನ್ ಹಿಯರ್ಸ್ ಅ ಹೂ ) (ಸೂಚಿತ)

ಟೀನ್‌ ಚಾಯಿಸ್‌ ಪ್ರಶಸ್ತಿಗಳು

  • 2000 - ವೈಪೌಟ್ ಸೀನ್ ಆಫ್ ದ ಸಮರ್ (ಮಿ, ಮೈಸೆಲ್ಫ್ ಎಂಡ್ ಐರೀನ್ ) (ಲಭಿಸಿತು)
  • 2001 - ಚಾಯ್ಸ್ ಹಿಸ್ಸೀ ಫಿಟ್ (ಹವ್ ದ ಗ್ರಿಂಚ್ ಸ್ಟೋಲ್ ಕ್ರಿಸ್ಮಸ್ )
  • 2003 - ಚಾಯ್ಸ್ ಕಮೀಡಿಯನ್ (ಲಭಿಸಿತು)
  • 2003 - ಚಾಯ್ಸ್ ಮೂವೀ ಆಕ್ಟರ್ (ಬ್ರೂಸ್ ಆಲ್‌ಮೈಟಿ ) (ಲಭಿಸಿತು)
  • 2003 - ಚಾಯ್ಸ್ ಮೂವಿ ಕೆಮಿಸ್ಟ್ರಿ ವಿದ್ ಮೋರ್ಗನ್ ಫ್ರೀಮನ್ (ಬ್ರೂಸ್ ಆಲ್‌ಮೈಟಿ ) (ಸೂಚಿತ)
  • 2004 - ಚಾಯ್ಸ್ ಕಮೀಡಿಯನ್ (ಸೂಚಿತ)
  • 2005 - ಚಾಯ್ಸ್ ಮೂವೀ ಬ್ಯಾಡ್ ಗಯ್ (ಲೆಮೊನಿ ಸ್ನಿಕೆಟ್ಸ್ ಎ ಸೀರೀಸ್ ಆಫ್ ಅನ್‌ಫಾರ್ಚುನೇಟ್ ಈವೆಂಟ್ಸ್ ) (ಸೂಚಿತ)
  • 2005 - ಚಾಯ್ಸ್ ಕಮಿಡಿಯನ್ (ಸೂಚಿತ)
  • 2005 - ಚಾಯ್ಸ್ ಮೂವಿ ಆಕ್ಟರ್- ಆಕ್ಷನ್/ಅಡ್ವೆಂಚರ್/ಥ್ರಿಲ್ಲರ್ (ಲೆಮೊನಿ ಸ್ನಿಕೆಟ್ಸ್ ಎ ಸೀರೀಸ್ ಆಫ್ ಅನ್‌ಫಾರ್ಚುನೇಟ್ ಈವೆಂಟ್ಸ್ ) (ಸೂಚಿತ)
  • 2005 - ಚಾಯ್ಸ್ ಮೂವೀ ಲಯರ್ (ಲೆಮೊನಿ ಸ್ನಿಕೆಟ್ಸ್ ಎ ಸೀರೀಸ್ ಆಫ್ ಅನ್‌ಫಾರ್ಚುನೇಟ್ ಈವೆಂಟ್ಸ್ ) (ಸೂಚಿತ)
  • 2006 - ಚಾಯ್ಸ್ ಮೂವಿ ಆಕ್ಟರ್-ಕಾಮಿಡಿ (ಫನ್ ವಿದ್ ಡಿಕ್ ಎಂಡ್ ಜೇನ್ ) (ಸೂಚಿತ)
  • 2009 - ಚಾಯ್ಸ್ ಮೂವಿ ಆಕ್ಟರ್-ಕಾಮಿಡಿ (ಯೆಸ್ ಮ್ಯಾನ್ ) (ಸೂಚಿತ)
  • 2009 - ಚಾಯ್ಸ್ ಮೂವಿ ರಾಕ್‌ಸ್ಟಾರ್ ಮೊಮೆಂಟ್ (ಯೆಸ್ ಮ್ಯಾನ್ ) (ಸೂಚಿತ)

ಉಲ್ಲೇಖಗಳು

ಬಾಹ್ಯ ಲಿಂಕ್‌ಗಳು

ಜಿಮ್‌ ಕ್ಯಾರ್ರಿ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಜಿಮ್‌ ಕ್ಯಾರ್ರಿ]]
  1. REDIRECT Template:GoldenGlobeBestActorMotionPictureDrama 1981–2000
  2. REDIRECT Template:GoldenGlobeBestActorMotionPictureMusicalComedy 1981–2000

Tags:

ಜಿಮ್‌ ಕ್ಯಾರ್ರಿ ಬಾಲ್ಯಜಿಮ್‌ ಕ್ಯಾರ್ರಿ ಬದುಕುಜಿಮ್‌ ಕ್ಯಾರ್ರಿ ವೈಯುಕ್ತಿಕ ಜೀವನಜಿಮ್‌ ಕ್ಯಾರ್ರಿ ಚಲನಚಿತ್ರಗಳ ಪಟ್ಟಿಜಿಮ್‌ ಕ್ಯಾರ್ರಿ ಗಮನಾರ್ಹ ಪಾತ್ರಗಳುಜಿಮ್‌ ಕ್ಯಾರ್ರಿ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಜಿಮ್‌ ಕ್ಯಾರ್ರಿ ಉಲ್ಲೇಖಗಳುಜಿಮ್‌ ಕ್ಯಾರ್ರಿ ಬಾಹ್ಯ ಲಿಂಕ್‌ಗಳುಜಿಮ್‌ ಕ್ಯಾರ್ರಿನಟ

🔥 Trending searches on Wiki ಕನ್ನಡ:

ಎನ್ ಆರ್ ನಾರಾಯಣಮೂರ್ತಿತತ್ಪುರುಷ ಸಮಾಸಪುರಾಣಗಳುಎ.ಪಿ.ಜೆ.ಅಬ್ದುಲ್ ಕಲಾಂಪಾಲುದಾರಿಕೆ ಸಂಸ್ಥೆಗಳುಅಬೂ ಬಕರ್ಜಾತ್ರೆಶ್ರೀ ರಾಮಾಯಣ ದರ್ಶನಂಎಚ್.ಎಸ್.ವೆಂಕಟೇಶಮೂರ್ತಿಬುಧಪ್ರಲೋಭನೆನೇಮಿಚಂದ್ರ (ಲೇಖಕಿ)ಪ್ರಜಾಪ್ರಭುತ್ವಕ್ರೈಸ್ತ ಧರ್ಮಉದ್ಯಮಿಪತ್ರಪಿ.ಲಂಕೇಶ್ಸಂಗೊಳ್ಳಿ ರಾಯಣ್ಣವ್ಯವಸಾಯದಾಳಿಂಬೆಸಂಸ್ಕಾರನೀನಾದೆ ನಾ (ಕನ್ನಡ ಧಾರಾವಾಹಿ)ಭಾರತದ ರಾಷ್ಟ್ರಪತಿಶಿವರಾಮ ಕಾರಂತಭೂತಾರಾಧನೆಕಾಲಾಯ ತಸ್ಮೈ ನಮಃ (ಚಲನಚಿತ್ರ)ರಸ(ಕಾವ್ಯಮೀಮಾಂಸೆ)ವಿರಾಮ ಚಿಹ್ನೆಸಮುಚ್ಚಯ ಪದಗಳುಜೈಮಿನಿ ಭಾರತಪುತ್ತೂರುಹೋಳಿಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಕನ್ನಡ ಕಾಗುಣಿತವಿವರಣೆರಾಜ್‌ಕುಮಾರ್ಬುಟ್ಟಿಡಿ.ಆರ್. ನಾಗರಾಜ್ಮೊಘಲ್ ಸಾಮ್ರಾಜ್ಯಆರ್ಯ ಸಮಾಜಕೈವಾರ ತಾತಯ್ಯ ಯೋಗಿನಾರೇಯಣರುಬಿಲ್ಹಣನಿರ್ಮಲಾ ಸೀತಾರಾಮನ್ಬಹರೇನ್ಅಣ್ಣಯ್ಯ (ಚಲನಚಿತ್ರ)ಭಾರತದ ರಾಷ್ಟ್ರೀಯ ಉದ್ಯಾನಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಂವತ್ಸರಗಳುಮಳೆಗಾಲಗುಣ ಸಂಧಿಸಿಮ್ಯುಲೇಶನ್‌ (=ಅನುಕರಣೆ)ವಡ್ಡಾರಾಧನೆಭಾರತೀಯ ಸ್ಟೇಟ್ ಬ್ಯಾಂಕ್ಚಂದ್ರಶೇಖರ ಕಂಬಾರಜೈಮಿನಿ ಭಾರತದಲ್ಲಿ ನವರಸಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪರೋಸ್‌ಮರಿಸವದತ್ತಿಅಲಾವುದ್ದೀನ್ ಖಿಲ್ಜಿಕಿಸ್ (ಚಲನಚಿತ್ರ)ಶಿಶುನಾಳ ಶರೀಫರುಕ್ಷಯಧರ್ಮಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಆಯುರ್ವೇದಸಂಶೋಧನೆಪಾಟಲಿಪುತ್ರಕನ್ನಡ ವ್ಯಾಕರಣಸಾಮಾಜಿಕ ಸಮಸ್ಯೆಗಳುಎರಡನೇ ಎಲಿಜಬೆಥ್ಉಪನಿಷತ್ಟ್ಯಾಕ್ಸಾನಮಿಸರ್ಕಾರೇತರ ಸಂಸ್ಥೆಕೆ. ಅಣ್ಣಾಮಲೈಅಡೋಲ್ಫ್ ಹಿಟ್ಲರ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು🡆 More