ಮಯನ್ಮಾರ್ ( ಅಧಿಕೃತವಾಗಿ ಮಯನ್ಮಾರ್ ಒಕ್ಕೂಟ -- ಉಚ್ಛಾರ:-Myanmar:(myan-mar/ Listeni/miɑːnˈmɑr/ mee-ahn-mar, /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation:ಮೀಯಾನ್ಮಾರ್ )೧,officially the Republic of the Union of Myanmar and also known as Burma) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ.
೧೯೪೮ರ ಜನವರಿ ೪ ರಂದು ಯುನೈಟೆಡ್ ಕಿಂಗ್ಡಂ ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು.೧[೧]
ಮಯನ್ಮಾರ್ ಒಕ್ಕೂಟ | |
---|---|
Flag | |
Anthem: ಕಬಾ ಮಾ ಕ್ಯೆಯ್ | |
Capital | ನೇಪ್ಯಿಡಾವ್ |
Largest city | ಯಾಂಗೊನ್ (ರಂಗೂನ್) |
Official languages | ಬರ್ಮೀಸ್ ಭಾಷೆ |
Demonym(s) | Burmese |
Government | ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿ |
• ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿಯ ಅಧ್ಯಕ್ಷ | ಥಾನ್ ಶ್ವೆ |
• ಪ್ರಧಾನಿ | ಥೀನ್ ಸೀನ್ |
ಸ್ಥಾಪನೆ | |
• ಯು.ಕೆ. ಯಿಂದ ಸ್ವಾತಂತ್ರ್ಯ | ಜನವರಿ 4 1948 |
• Water (%) | 3.06 |
Population | |
• 2005-2006 estimate | 55,400,000 (24ನೆಯದು) |
• 1983 census | 33,234,000 |
GDP (PPP) | 2005 estimate |
• Total | $93.77 ಬಿಲಿಯನ್ (59ನೆಯದು) |
• Per capita | $1,691 (150ನೆಯದು) |
HDI (2007) | 0.583 Error: Invalid HDI value · 132ನೆಯದು |
Currency | ಕ್ಯಾಟ್ (mmK) |
Time zone | UTC+6:30 (MMT) |
Calling code | 95 |
ISO 3166 code | MM |
Internet TLD | .mm |
ಮಯನ್ಮಾರ್ನ ಉತ್ತರದಲ್ಲಿ ಚೀನಾ, ಪೂರ್ವದಲ್ಲಿ ಲಾಓಸ್, ಆಗ್ನೇಯಕ್ಕೆ ಥೈಲೆಂಡ್, ಪಶ್ಚಿಮದಲ್ಲಿ ಬಾಂಗ್ಲಾದೇಶ, ವಾಯವ್ಯದಲ್ಲಿ ಭಾರತ ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ ಬಂಗಾಳ ಕೊಲ್ಲಿಯ ತೀರಪ್ರದೇಶವಾಗಿದೆ. ಮ್ಯಾನ್ಮಾರ್ ನ ಒಟ್ಟು ಪರಿಧಿಯ (ರಾಜ್ಯದ ಗಡಿ)1/3 (ಮೂರನೇ ಒಂದು ಒಂದು)1,930 ಕಿಲೋಮೀಟರ್ (1,200 ಮೈಲಿಗಳು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಉದ್ದಕ್ಕೂ ನಿರಂತರ ಕರಾವಳಿಯಾಗಿದೆ.. ದೇಶದ 2014 ರ ಜನಗಣತಿಯ ರೆಕಾರ್ಡ್ ಪ್ರಕಾರ 51 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಅದು ನಿರೀಕ್ಷಿಸಿದ ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆಯಾಗಿದೆ. [೨] ಮ್ಯಾನ್ಮಾರ್ ದೇಶ ಗಾತ್ರದಲ್ಲಿ 676.578 ಚದರ ಕಿಲೋಮೀಟರ್ (261,227 ಚದರ ಮೈಲಿ) ಹೊಂದಿದೆ. ಇದರ ರಾಜಧಾನಿ ನಾಯ್`ಪಿಯದಾವ್`(Naypyidaw ) ಮತ್ತು ಅದರ ಅತ್ಯಂತ ದೊಡ್ಡ ನಗರ ಯಾಂಗೊನ್ (ರಂಗೂನ್) ಆಗಿದೆ.೩
ಮ್ಯಾನ್ಮಾರ್ ಪ್ರಾಚೀನ ನಾಗರೀಕತೆಯ ಮೇಲಿನ ಬರ್ಮಾದಲ್ಲಿ ಟಿಬೆಟೊ-ಬರ್ಮನ್ ಮಾತನಾಡುವ ಪ್ಯೂ(ಠಿಥಿu) ನಗರ ರಾಜ್ಯಗಳು ಮತ್ತು ಕೆಳಗಿನ ಬರ್ಮಾದಲ್ಲಿ ಮೋನ್(ಸೋಮ?) ರಾಜ್ಯಗಳನ್ನು ಒಳಗೊಂಡಿತ್ತು. ೪
9 ನೇ ಶತಮಾನದಲ್ಲಿ, ಬಾಮರ (the Bamar people ) ಜನರು, ಮೇಲಿನ ಇರವಾಡಿ ಕಣಿವೆಯನ್ನು ಪ್ರವೇಶಿಸಿ 1050s ರ ಕಾಲದಲ್ಲಿ ಅದೈವಿಕ/ನಿರೀಶ್ವರರ ರಾಜ್ಯ (ಪಾಗನ್) ಸ್ಥಾಪನೆ ಮಾಡಿದರು. ಈ ಕೆಳಗಿನ ರಾಜ್ಯದಲ್ಲಿ ಬರ್ಮೀ ಭಾಷೆ,, ಸಂಸ್ಕೃತಿ ಮತ್ತು ಥೇರವಾದದ ಬುದ್ಧನ ಬೌದ್ಧಿಕ ಧರ್ಮವು ನಿಧಾನವಾಗಿ ದೇಶದಲ್ಲಿ ಪ್ರಾಬಲ್ಯ ಪಡೆಯಿತು. ಉತ್ತರದ
ಅದಯವಿಕ ರಾಜ್ಯ ಮಂಗೋಲಿಯನ್ನರ ಆಕ್ರಮಣಗಳ ಕಾರಣ ಕುಸಿಯಿತು ಮತ್ತು ಪರಸ್ಪರ ಕಾದಾಟದಿಂದ ಕಾದಾಡುತ್ತಿದ್ದ ಹಲವಾರು ರಾಜ್ಯಗಳು ಹೊರಹೊಮ್ಮಿದವು. 16 ನೇ ಶತಮಾನದಲ್ಲಿ, ತಾಂಗೋ (ಖಿಚಿuಟಿgoo) ರಾಜವಂಶದದಿಂದ ಒಗ್ಗೂಡಿದಾಗ, ದೇಶ ಸ್ವಲ್ಪ ಕಾಲದವರೆಗೆ ಆಗ್ನೇಯ ಏಷ್ಯಾ ಇತಿಹಾಸದಲ್ಲಿ ದೊಡ್ಡ ರಾಜ್ಯವಾಗಿತ್ತು.೫ 19 ನೇ ಶತಮಾನದ ಆರಂಭದಲ್ಲಿ ಕೋನ್ ಬಾಂಗ್ ವಂಶದವರ ಆಳ್ವಿಕೆಯಲ್ಲಿ ಮಣಿಪುರ ಮತ್ತು ಅಸ್ಸಾಂ ,ಹಾಗೂ ಆಧುನಿಕ ಮ್ಯಾನ್ಮಾರ್ ಒಳಗೊಂಡ ಪ್ರದೇಶವನ್ನು ಆಳಿದರು ಮತ್ತು ಸಂಕ್ಷಿಪ್ತವಾಗಿ ಹಾಗೂ. 19 ನೇ ಶತಮಾನದಲ್ಲಿ ಬ್ರಿಟಿಷರು ಮೂರು ಆಂಗ್ಲರು ಮತ್ತು ಬರ್ಮನ್ನರ ಯುದ್ಧದ ನಂತರ ಮ್ಯಾನ್ಮಾರ್`ನ್ನು ವಶಪಡಿಸಿಕೊಂಡರು. ಆ ದೇಶ ಬ್ರಿಟಿಷ್ ವಸಾಹತು ನೆಲೆಯಾಯಿತು. ಅದು 1948 ರಲ್ಲಿ ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. 1962, ರಲ್ಲಿ ಮಿಲಿಟರಿ ಸರ್ವಾಧಿಕಾರದÁಡಳಿತಕ್ಕೆ ಒಳಪಟ್ಟಿತು. 2011 ರಲ್ಲಿ ಮಿಲಿಟರಿ ಸರ್ವಾಧಿಕಾರ ಔಪಚಾರಿಕವಾಗಿ ಕೊನೆಗೊಂಡಿತು ಔಪಚಾರಿಕವಾಗಿ ಮ್ಯಾನ್ಮಾರ್ ಮಿಲಿಟರಿ ಸರ್ವಾಧಿಕಾರದಿಂದ ಕೊನೆಗೊಂಡರೂ, ಪ್ರಜಾಪ್ರಭುತ್ವ ರಾಷ್ಟ್ರ.ವಾದರೂ ಪಕ್ಷದ ನಾಯಕರು ಹೆಚ್ಚಾಗಿ ಮಾಜಿ ಮಿಲಿಟರಿ ಅಧಿಕಾರಿಗಳೇ ಆಗಿದ್ದಾರೆ. .
ವಿಶ್ವಸಂಸ್ಥೆಯ ಮತ್ತು ಅನೇಕ ಇತರ ಸಂಸ್ಥೆಗಳ ಒತ್ಡಡ ದಿಂದ 2010 ರ ಸಾರ್ವತ್ರಿಕ ಚುನಾವಣೆಯ ನಡೆದು 2011 ರಲ್ಲಿ, ಮಿಲಿಟರಿ ರಾಜ್ಯವು ಅಧಿಕೃತವಾಗಿ ಕೊನೆಗೊಂಡು ನಾಗರಿಕ ಸರ್ಕಾರದ ಸ್ಥಾಪಿಸಲಾಯಿತು.ಆದರೂ ಮಾಜಿ ಸೇನಾ ನಾಯಕರು ಇನ್ನೂ ದೇಶದ ಆಡಳಿತದಲ್ಲಿ ಅಗಾಧ ಶಕ್ತಿ ನಿಯಂತ್ರಣ ಹೊಂದಿದ್ದಾರೆ. ಆದರೆ, ಬರ್ಮಾ ಮಿಲಿಟರಿಯು ಸರ್ಕಾರದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಬೇಕಾಯಿತು. ಕಡೆಗೆ ಆಂಗ್ ಸಾನ್ ಸೂ ಕಿ ಮತ್ತು ರಾಜಕೀಯ ಕೈದಿಗಳ ಬಿಡುಗಡೆಯಾಯಿತು. ಜೊತೆಗೆ, ದೇಶದ ಮಾನವ ಹಕ್ಕುಗಳ ದಾಖಲೆ ಉತ್ತಮಗೊಂಡಿತು. ಮತ್ತು ವಿದೇಶಿ ವ್ಯವಹಾರವು ಸುಧಾರಿಸಿತು., ಇದರಿಂದ ವಾಣಿಜ್ಯ ಹಾಗು ಇತರ ಆರ್ಥಿಕ ನಿರ್ಬಂಧಗಳು ಸರಳಗೊಳ್ಳಲು ಕಾರಣವಾಗಿದೆ. ೬ ೭ ಅದಾಗ್ಯೂ, ಮುಸ್ಲಿಂ ಅಲ್ಪಸಂಖ್ಯಾತ ರೊಹಿಂಗ್ಯಾರ ಮತ್ತು ಬೌದ್ಧರ ನಡುವೆ ಧಾರ್ಮಿಕ ಘರ್ಷಣೆಗಳ ಸಮಸ್ಯೆ ಇದೆ. ಸರ್ಕಾರದ ಪ್ರತಿಕ್ರಿಯೆ ಮತ್ತು ವರ್ತನೆ ಕಳಪೆಯದು ಎಂದು ಮಾಧ್ಯಮಗಳು ನಿರಂತರ ವಿಮರ್ಶೆ ಮಾಡುತ್ತವೆ. ೮.೯.೧೦.೧೧.೧೨.
ಮ್ಯಾನ್ಮಾರ್ ಹಸಿರು ಕಲ್ಲು-ಪಚ್ಚೆ (ಜೇಡ್) ಮತ್ತು ರತ್ನಗಳು, ತೈಲ, ನೈಸರ್ಗಿಕ ಅನಿಲ ಮತ್ತು ಇತರ ಖನಿಜ ನಿಕ್ಷೇಪಗಳಲ್ಲಿ ಶ್ರೀಮಂತವಾಗಿದೆ. ಒಂದು ದೇಶ. 2013 ರಲ್ಲಿ, (ಸಾಮಾನ್ಯ) ಅದರ ಉಆP ಅಮೇರಿಕಾದ ಡಾ ಲೆಖ್ಖದಲ್ಲಿ $ 56.7 ಶತಕೋಟಿ ಇದ್ದಿತು. ಅದು ಅಮೇರಿಕಾದ GDP-(PPP) ಯಂತೆ $ 221.5 ಬಿಲಿಯನ್. [೧೩]. ಅದರ ಆರ್ಥಿಕ ನೀತಿ ನಿಯಂತ್ರಿತವಾಗಿರುವುದರಿಂದ ಮ್ಯಾನ್ಮಾರ್ ನ ಆದಾಯ ಅಂತರವು ವಿಶ್ವದಲ್ಲೇ ದೊಡ್ಡ ದಾಗಿದೆ. ಅದರ ಆರ್ಥಿಕ ನೀತಿ ಸರ್ಕಾರದಲ್ಲರುವ ಮಾಜಿ ಸೇನಾ ಬೆಂಬಲಿಗರು ನಿಯಂತ್ರಿತವಾಗಿದ್ದು, ಅದಕ್ಕೆ ಕಾರಣವಾಗಿದೆ. 2013 ರ , ಮಾನವ ಅಭಿವೃದ್ಧಿ ಸೂಚ್ಯಂಕ (ಹೆಚ್ಡಿಐ) ಪ್ರಕಾರ, ಮ್ಯಾನ್ಮಾರ್ 187 ರಾಷ್ಟ್ರಗಳ ಪೈಕಿ 150 ಸ್ಥಾನ ದಲ್ಲಿದ್ದು, ಮಾನವ ಅಭಿವೃದ್ಧಿಯು ಕಡಿಮೆ ಮಟ್ಟ ಹೊಂದಿತ್ತು. [೧೩.೧೪.೧೫]
ಮಯನ್ಮಾರ್` ಏಳು ರಾಜ್ಯಗಳ ಮತ್ತು ಏಳು ಪ್ರದೇಶಗಳ (ಮುಂಚೆ ಎಂಬ ವಿಭಾಗಗಳ ಒಕ್ಕೂಟ. ಒಟ್ಟು 14 ಭಾಗಗಳಾಗಿ ವಿಭಜಿಸಲಾಗಿದೆ. [19] ಪ್ರದೇಶಗಳು ಪ್ರಧಾನವಾಗಿ ಬಾಮರ್, (ಮುಖ್ಯವಾಗಿ ಪ್ರಬಲಅಲ್ಪಸಂಖ್ಯಾತ ಜನಾಂಗೀಯ ಗುಂಪು ವಾಸಿಸುವ ಸಂಸ್ಥಾನ, ಮೂಲಭೂತವಾಗಿ, ನಿರ್ದಿಷ್ಟ ಜನಾಂಗೀಯ ಅಲ್ಪಸಂಖ್ಯಾತರಿಗೆ ಎಂದು ಮೀಸಲಾದ ವಲಯಗಳಾಗಿವೆ. ಆಡಳಿತ ವಿಭಾಗಗಳು ಪುನಃ ಪಟ್ಟಣಗಳು , ವಾರ್ಡ್ಗಳು ಮತ್ತು ಗ್ರಾಮಗಳಾಗಿ ಉಪವಿಭಾಗಿಸಲ್ಪಟ್ಟಿವೆ. ಅಲ್ಲದೆ ಜಿಲ್ಲೆಗಳಾಗಿಯೂ ಉಪವಿಭಾಗಿಸಲ್ಪಟ್ಟಿವೆ.
ನಂ | ರಾಜ್ಯ / ವಲಯ | ಜಿಲ್ಲೆಗಳು | ಉಪನಗರಗಳು | ನಗರ/ಪಟ್ಟಣಗಳು | ವಾರ್`ಡ್ | ಹಳ್ಳಿ-ಗುಂಪುಗಳು | ಹಳ್ಳಿಗಳು |
---|---|---|---|---|---|---|---|
1 | ಕಚಿನ್ ರಾಜ್ಯ | 4 | 18 | 20 | 116 | 606 | 2630 |
2 | ಕಯಾಹ್ ರಾಜ್ಯ | 2 | 7 | 7 | 29 | 79 | 624 |
3 | ಕಯಿನ್ ರಾಜ್ಯ | 3 | 7 | 10 | 46 | 376 | 2092 |
4 | ಚಿನ್ ರಾಜ್ಯ | 2 | 9 | 9 | 29 | 475 | 1355 |
5 | ಸಗಾಯಿನ್ಗ್ ಪ್ರದೇಶ | 8 | 37 | 37 | 171 | 1769 | 6095 |
6 | ತನಿತರಾಯೀ ಪ್ರದೇಶ | 3 | 10 | 10 | 63 | 265 | 1255 |
7 | ಬಾಗೋಪ್ರದೇಶ | 4 | 28 | 33 | 246 | 1424 | 6498 |
8 | ರಾಖಿನೆ ರಾಜ್ಯ | 5 | 25 | 26 | 160 | 1543 | 4774 |
9 | ಮಂಡಾಲೆ ಪ್ರದೇಶದಲ್ಲಿನ | 7 | 31 | 29 | 259 | 1611 | 5472 |
10 | ಸೋಮ ರಾಜ್ಯ | 2 | 10 | 11 | 69 | 381 | 1199 |
11 | ರಾಖಿನೆ ರಾಜ್ಯ | 4 | 17 | 17 | 120 | 1041 | 3871 |
12 | ಯಾಂಗೊನ್ ಪ್ರದೇಶ | 4 | 45 | 20 | 685 | 634 | 2119 |
13 | ಶಾನ್ ರಾಜ್ಯ | 11 | 54 | 54 | 336 | 1626 | 15513 |
14 | ಇಯಾವೇಡಿ | 6 | 26 | 29 | 219 | 1912 | 11651 |
* | ಒಟ್ಟು | 63 | 324 | 312 | 2548 | 13742 | 65148 |
(ಇಂ.ವಿಕಿಯಿಂದ)
This article uses material from the Wikipedia ಕನ್ನಡ article ಮಯನ್ಮಾರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.