ಗುಲ್ಮಹರ್

ಗುಲ್ಮಹರ್ (May flower)ಒಂದು ಅಲಂಕಾರಿಕ ಸಸ್ಯವಾಗಿ ಕರ್ನಾಟಕದಲ್ಲಿ ಪರಿಚಿತ.ಮಡಗಾಸ್ಕರ್ಇದರ ತೌರು.ಮಡಗಾಸ್ಕರಿನ ಮೂಲವಾಸಿಯಾದ ಈ ಮರ ಭಾರತಕ್ಕೆ ಸು.

ಗುಲ್ ಮೊಹರ್
ಗುಲ್ಮಹರ್
Illustration from Curtis's Botanical Magazine
Conservation status
ಗುಲ್ಮಹರ್
Vulnerable (IUCN 2.3)
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯಗಳು
ವರ್ಗ:
ಮ್ಯಾಗ್ನೋಲಿಪ್ಸಿಡ
ಗಣ:
ಫಾಬಲ್ಸ್
ಕುಟುಂಬ:
ಫಬಾಸಿಯೆ
ಉಪಕುಟುಂಬ:
Caesalpinioideae
ಪಂಗಡ:
Caesalpinieae
ಕುಲ:
ಡೆಲೋನಿಕ್ಸ್
ಪ್ರಜಾತಿ:
D. regia
Binomial name
ಡೆಲೊನಿಕ್ಸ್ ರೆಜಿಯ(Delonix regia)
(Boj. ex Hook.) Raf.

100-125 ವರ್ಷಗಳ ಹಿಂದೆ ಬಂತೆಂದು ಹೇಳಲಾಗಿದೆ.ಹೆಚ್ಚು ಕಡಿಮೆ ಪ್ರಪಂಚದಲ್ಲಿ ಉಷ್ಣವಲಯವಾತಾವರಣ ಇರುವೆಡೆಯಲ್ಲೆಲ್ಲಾ ಬೆಳೆಯುತ್ತದೆ.

ಗುಲ್ಮಹರ್
ಹೂ,ಎಲೆ ಹಾಗೂ ಕೋಡುಕೊಲ್ಕತ್ತ, ಪಶ್ಚಿಮ ಬಂಗಾಳ, India.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಫಬಿಯೇಸೆ ಕುಟುಂಬಕ್ಕೆ ಸೇರಿದ್ದು,ಡೆಲೊನಿಕ್ಸ್ ರೆಜಿಯ(Delonix regia)ಎಂದು ಸಸ್ಯಶಾಸ್ತ್ರೀಯ ಹೆಸರು.ಇದನ್ನು Royal poinciana ಎಂದೂ ಕರೆಯುತ್ತಾರೆ.ಕನ್ನಡದಲ್ಲಿ ಕತ್ತಿಕಾಯಿ ಮರ, ಕೆನ್ನಕೇಸರಿ ಎಂದೂ ಹೆಸರಿದೆ.ಹಿಂದಿ ಭಾಷೆಯಲ್ಲಿ ಗುಲ್ಮೊಹರ್ ಎನ್ನಲಾಗುವ ಇದಕ್ಕೆ ಸ್ಥಳೀಯವಾಗಿ ಸೀಮೆಸಂಕೇಶ್ವರ, ಕೆಂಪುತುರಾಯಿ, ದೊಡ್ಡ ರತ್ನಗಂಧಿ ಇತ್ಯಾದಿ ಹೆಸರುಗಳೂ ಇವೆ

ಸಸ್ಯದ ಗುಣಲಕ್ಷಣಗಳು

ಇದು ಅಗಲವಾದ,ಹರಡಿದ ತೆಳು ಹಂದರದ ಮರ.ಉಜ್ವಲ ಕಡುಕೆಂಪಿನ ಹೂವುಗಳು ಭಾರತದಲ್ಲಿ ಮೇ ತಿಂಗಳಿನಲ್ಲಿ ಬಿಡುತ್ತವೆ.ಕಾಯಿಗಳಿರುವ ಕೋಡು(Seed pod) ಕತ್ತಿಯಾಕಾರವಿರುತ್ತವೆ.ಈ ಜಾತಿಯ ಮರಗಳಲ್ಲೇ ಒಂದೇ ಬಾರಿಗೆ ಹೂ ಬಿಡುತ್ತವೆ.

ಗುಲ್ಮಹರ್ 
ಕೋಡುಕೊಲ್ಕತ್ತ, ಪಶ್ಚಿಮ ಬಂಗಾಳ, India.

ಇದು ಸು. 15 ರಿಂದ 18 ಮೀ ಎತ್ತರ ಬೆಳೆಯುತ್ತದೆ. ಫಲವತ್ತಾದ ನೆಲ ಮತ್ತು ನೀರಿನ ಸೌಲಭ್ಯವಿದ್ದರೆ ಇನ್ನೂ ಎತ್ತರ ಬೆಳೆಯುವುದುಂಟು. ಮರದ ಆಕಾರ ಛತ್ರಿಯಂತೆ, ತೊಗಟೆ ಒರಟಾಗಿ ಅಲ್ಲಲ್ಲಿ ಗಂಟುಗಳಿಂದ ಕೂಡಿದೆ. ಬಣ್ಣ ಮಾಸಲು ಕಂದು. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ. ಅವು ಸಂಯುಕ್ತ ಮಾದರಿಯವು. ಒಂದೊಂದರಲ್ಲೂ ಒಂದು ಮುಖ್ಯ ಮಧ್ಯಶಾಖೆಯೂ ಅದರಿಂದ ಹೊರಟ ಹಲವಾರು ಕಿರುಶಾಖೆಗಳೂ ಇವೆ. ಪ್ರತಿಯೊಂದು ಕಿರುಶಾಖೆಯಲ್ಲಿ 15-20 ಜೋಡಿ ಪರ್ಣಿಕೆಗಳಿವೆ. ಹೂಗಳು ರೇಸಿಮ್ ಮಾದರಿಯ ಹೂಗೊಂಚಲುಗಳಲ್ಲಿ ಜೋಡಣೆಗೊಂಡಿವೆ. ಹೂಬಿಡುವ ಕಾಲ ಏಪ್ರಿಲ್-ಮೇ ತಿಂಗಳುಗಳು. ಹೂಬಿಡುವ ಮುನ್ನ ಎಲೆಗಳೆಲ್ಲ ಉದುರಿಹೋಗುತ್ತವೆ. ಹೂಗಳು ಸಾಕಷ್ಟು ದೊಡ್ಡವೂ ಕಿತ್ತಳೆಮಿಶ್ರಿತ ಕೆಂಪುಬಣ್ಣದಿಂದ ಹಿಡಿದು ಕಗ್ಗೆಂಪು ಬಣ್ಣದವೂ ಆಗಿ ಬಹು ಸುಂದರವಾಗಿವೆ. ಪುಷ್ಪಪತ್ರಗಳು ಐದು. ಅವುಗಳ ಹೊರಭಾಗ ಹಸಿರು, ಒಳಭಾಗ ಕೆಂಪು. ದಳಗಳು ಐದು. ಅವುಗಳಲ್ಲಿ ನಾಲ್ಕು ಒಂದೇ ಬಗೆಯವಾಗಿದ್ದು ಕೆಂಪುಬಣ್ಣದವಾಗಿವೆ. ಉಳಿದುದು ಕೊಂಚ ದೊಡ್ಡದೂ ಬಿಳಿ ಅಥವಾ ಹಳದಿ ಬಣ್ಣದ್ದೂ ಆಗಿದ್ದು ಅದರ ಮೇಲೆಲ್ಲ ಕೆಂಪು ಮಚ್ಚೆಗಳಿವೆ. ಎಲ್ಲ ದಳಗಳ ಅಂಚೂ ಕೊಂಚ ಮಡಿಸಿದಂತಿದೆ. ಕೇಸರಗಳು 10, ಬಿಡಿ ಬಿಡಿಯಾಗಿವೆ. ಅವುಗಳ ಬಣ್ಣವೂ ಕೆಂಪು. ಅಂಡಾಶಯ ಉಚ್ಚಸ್ಥಾನದ್ದು. ಒಂದೇ ಕಾರ್ಪೆಲನ್ನು ಹೊಂದಿದೆ. ಅದರೊಳಗೆ ಹಲವಾರು ಅಂಡಕಗಳಿವೆ. ಫಲ ಪಾಡ್ ಮಾದರಿಯದು. ಸು. 6096 ಮೀ ಉದ್ದವಾಗಿದ್ದು ಕತ್ತಿಯಂತಿರುತ್ತದೆ. ಬಹಳ ದಿನ ಮರದ ಮೇಲೆ ಕಾಯಿಗಳು ನೇತಾಡುತ್ತಿರುವುದನ್ನು ನೋಡಬಹುದು.

ಉಪಯೋಗಗಳು

ಈ ಮರ ಅಗಲ ಹಂದರ ಹೊಂದಿದ್ದು ಹೂ ಬಿಟ್ಟಾಗ ಅಂದವಾಗಿ ಕಾಣುವುದರಿಂದ ಸಾಲು ಮರಗಳಾಗಿ,ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಹಾಗೂ ನೆರಳಿಗಾಗಿ ಬೆಳೆಸಲ್ಪಡುವುದು. ಕತ್ತಿಕಾಯಿ ಮರವನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿಯೂ ನೆರಳಿನ ಮರವಾಗಿ ರಸ್ತೆಯ ಬದಿಗಳಲ್ಲೂ ಬೆಳೆಸುತ್ತಾರೆ.

ಸಸ್ಯಾಭಿವೃದ್ಧಿ

ಸಾಮಾನ್ಯವಾಗಿ ಇದನ್ನು ಬೀಜಗಳಿಂದ ವೃದ್ಧಿಮಾಡುತ್ತಾರೆ. ತುಂಡುಗಳಿಂದಲೂ ಬೆಳೆಸಬಹುದು.

ಉಪಯೋಗಗಳು

ಹೆಚ್ಚಾಗಿ ಅಲಂಕಾರ ಸಸ್ಯವೆಂದು ಹೆಸರಾಗಿರುವ ಇದರ ಕಾಯಿ ಮತ್ತು ಮರವನ್ನು ಸೌದೆಗಾಗಿ ಉಪಯೋಗಿಸುವುದೂ ಉಂಟು.

ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ಗುಲ್ಮಹರ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಗುಲ್ಮಹರ್ ಸಸ್ಯಶಾಸ್ತ್ರೀಯ ವರ್ಗೀಕರಣಗುಲ್ಮಹರ್ ಸಸ್ಯದ ಗುಣಲಕ್ಷಣಗಳುಗುಲ್ಮಹರ್ ಉಪಯೋಗಗಳುಗುಲ್ಮಹರ್ ಸಸ್ಯಾಭಿವೃದ್ಧಿಗುಲ್ಮಹರ್ ಉಪಯೋಗಗಳುಗುಲ್ಮಹರ್ ಆಧಾರ ಗ್ರಂಥಗಳುಗುಲ್ಮಹರ್ಕರ್ನಾಟಕಮಡಗಾಸ್ಕರ್

🔥 Trending searches on Wiki ಕನ್ನಡ:

ದೇವತಾರ್ಚನ ವಿಧಿರಾಜ್‌ಕುಮಾರ್ಭಾರತದ ರೂಪಾಯಿಗಾಂಧಿ- ಇರ್ವಿನ್ ಒಪ್ಪಂದಡಾ ಬ್ರೋಚಾಲುಕ್ಯಮೈಸೂರು ದಸರಾಅಷ್ಟ ಮಠಗಳುಚಿತ್ರದುರ್ಗ ಜಿಲ್ಲೆಪಿ.ಲಂಕೇಶ್ಯು.ಆರ್.ಅನಂತಮೂರ್ತಿಜೀವವೈವಿಧ್ಯಶ್ಚುತ್ವ ಸಂಧಿಕನ್ನಡ ಸಾಹಿತ್ಯ ಸಮ್ಮೇಳನಜಯಂತ ಕಾಯ್ಕಿಣಿಮಿಲಾನ್ಮುದ್ದಣಕನ್ನಡ ರಂಗಭೂಮಿನಾಮಪದಪಟ್ಟದಕಲ್ಲುವ್ಯಾಪಾರ ಸಂಸ್ಥೆಕಲ್ಲಂಗಡಿಶಾಂತಲಾ ದೇವಿರಾಷ್ಟ್ರಕವಿಮಾಸ್ತಿ ವೆಂಕಟೇಶ ಅಯ್ಯಂಗಾರ್ರಾಷ್ಟ್ರೀಯತೆಭಾರತೀಯ ರೈಲ್ವೆಮಾಧ್ಯಮಜವಾಹರ‌ಲಾಲ್ ನೆಹರುಗ್ರಾಮ ಪಂಚಾಯತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆರಾಜಕುಮಾರ (ಚಲನಚಿತ್ರ)ರೈತವಾರಿ ಪದ್ಧತಿಎಲೆಕ್ಟ್ರಾನಿಕ್ ಮತದಾನಹಿಂದೂ ಮಾಸಗಳುಜನಪದ ಕಲೆಗಳುಬಂಡಾಯ ಸಾಹಿತ್ಯಬೆಂಗಳೂರುಶಬ್ದ ಮಾಲಿನ್ಯಖ್ಯಾತ ಕರ್ನಾಟಕ ವೃತ್ತಕರ್ನಾಟಕ ಲೋಕಸೇವಾ ಆಯೋಗಕೊರೋನಾವೈರಸ್ನಾರುಮಾರೀಚಕಂಸಾಳೆಸಮುಚ್ಚಯ ಪದಗಳು೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಜಾತ್ರೆವಿದ್ಯಾರಣ್ಯಗೂಬೆಗೊರೂರು ರಾಮಸ್ವಾಮಿ ಅಯ್ಯಂಗಾರ್ಭೀಮಸೇನಪಂಚಾಂಗಕರ್ನಾಟಕದ ಮುಖ್ಯಮಂತ್ರಿಗಳುಇಸ್ಲಾಂ ಧರ್ಮಸಾಲುಮರದ ತಿಮ್ಮಕ್ಕರಾಷ್ಟ್ರೀಯ ಶಿಕ್ಷಣ ನೀತಿಕಪ್ಪೆ ಅರಭಟ್ಟಮಾನಸಿಕ ಆರೋಗ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕೈಗಾರಿಕೆಗಳುಹನುಮಾನ್ ಚಾಲೀಸಪಾಂಡವರುಕನ್ನಡಪ್ರಭವಿಷ್ಣುವರ್ಧನ್ (ನಟ)ದಯಾನಂದ ಸರಸ್ವತಿಮಹಾತ್ಮ ಗಾಂಧಿಜಯಪ್ರಕಾಶ ನಾರಾಯಣಭಾರತ ಸಂವಿಧಾನದ ಪೀಠಿಕೆಸಾಮ್ರಾಟ್ ಅಶೋಕಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವಚನಕಾರರ ಅಂಕಿತ ನಾಮಗಳುಕರ್ನಾಟಕದ ಮಹಾನಗರಪಾಲಿಕೆಗಳುಸಂದರ್ಶನಸೀತೆ🡆 More