ಗೀಸರ್

ಸರಿ ಸುಮಾರು ನಿಯತಾಂತರಗಳಲ್ಲಿ ಬಿಸಿನೀರಿನ ಒಂದು ರಾಶಿಯನ್ನೋ ಉಗಿಯ ಮೊತ್ತವನ್ನೋ ವಾಯು ಮಂಡಲಕ್ಕೆ ಚಿಮ್ಮಿಸುವ ನೈಸರ್ಗಿಕ ಚಿಲುಮೆ ಇಲ್ಲವೇ ಒರತೆ.

ಇದೊಂದು ವಿಶಿಷ್ಟ ರೀತಿಯ ಊಟೆ. ಗೀಸóರಿನಿಂದ ಚಿಮ್ಮಿದ ನೀರು ಕೆಲವು ಮೀಟರುಗಳಿಂದ ಹಲವು ನೂರು ಮೀಟರುಗಳಷ್ಟು ಎತ್ತರಕ್ಕೂ ರಟ್ಟುವುದುಂಟು. ಆ ವೇಳೆಗೆ ಉಗಿ ಇನ್ನಷ್ಟು ಎತ್ತರ ಏರಬಹುದು. ಗೀಸರ್ ಪದ ಐಸ್ಲೆಂಡಿನವರ ಭಾಷೆಯದು; ಇದರ ಅರ್ಥ ಚಿಮ್ಮುಗ ಎಂದು.

ಗೀಸರ್

ಎಲ್ಲೆಲ್ಲಿ

ಗೀಸರುಗಳು ಪ್ರಪಂಚದ ಅಪೂರ್ವ ವಿದ್ಯಮಾನಗಳಲ್ಲಿ ಒಂದು. ಅಮೆರಿಕದ ಸಂಯುಕ್ತ ಸಂಸ್ಥಾನಗಳ ವ್ಯೋಮಿಂಗಿನ ಎಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್, ನ್ಯೂಜಿಲೆಂಡ್, ಐಸ್ಲೆಂಡ್, ಅಲಾಸ್ಕ, ಚಿಲಿ, ಟಿಬೆಟ್, ಜಪಾನ್ ಮತ್ತು ಇಂಡೊನೇಷ್ಯಗಳಲ್ಲಿ ಗೀಸರುಗಳನ್ನು ಕಾಣಬಹುದು. ಇವುಗಳ ಪೈಕಿ ಯೆಲ್ಲೋಸ್ಟೋನ್ ಪಾರ್ಕ್ ಸುಪ್ರಸಿದ್ಧವಾದದ್ದು. ಅಲ್ಲಿ 100ಕ್ಕೂ ಮಿಕ್ಕಿದ ಪಟುಗೀಸರುಗಳೂ 3,000ಕ್ಕೂ ಮಿಕ್ಕಿದ ಚಿಮ್ಮದ ಬಿಸಿನೀರಿನ ಒರತೆಗಳೂ ಇವೆ. ಇವುಗಳ ಪೈಕಿ ಓಲ್ಡ್ ಫೇತ್ಫುಲ್ ಎಂಬ ಹೆಸರಿನ ಗೀಸರ್ ಪ್ರಸಿದ್ಧವಾದದ್ದು. ಸುಮಾರಾಗಿ ಗಂಟೆಗೊಂದು ಸಲ ಇದು ನೆಗೆಯುತ್ತದೆ. ಐದು ಮಿನಿಟುಗಳ ವರೆಗೆ ಚಿಮ್ಮುತ್ತಿದ್ದು ಮತ್ತೆ ಶಾಂತವಾಗುತ್ತದೆ. ಇದರಿಂದ ರಟ್ಟುವ ಕುದಿನೀರು ಸುಮಾರು 45.5 ಮೀ.ಗಳಷ್ಟು ಎತ್ತರ ಏರುವುದು; ಅದರೊಂದಿಗೆ ಸಾಕಷ್ಟು ಉಗಿಯೂ ಹೊರ ಹೊಮ್ಮುವುದು. ಅದೇ ಪಾರ್ಕಿನಲ್ಲಿರುವ ಕ್ಯಾಸಲ್ ಎನ್ನುವ ಇನ್ನೊಂದು ಗೀಸóರಿನಿಂದ ಹಾರುವ ನೀರು 79 ಮೀ.ಗಳನ್ನು ಮೀರಿದ ಎತ್ತರ ತಲಪುವುದುಂಟು.

ಗೀಸರ್ 

ಕಾರಣ

ಗೀಸರುಗಳ ಉದ್ಭೇದಕ ಪ್ರವೃತ್ತಿಯ ಕಾರಣ ನೆಲದಡಿಯಲ್ಲೇ ಅನತಿ ಆಳದಲ್ಲಿರುವ ಬಲುಕಾವಿನ ಕಲ್ಲುಗಳ ರಾಶಿ ಎಂದು ಊಹಿಸಲಾಗಿದೆ. ಜ್ವಾಲಾಮುಖಿಪಟುತ್ವ ತೀರ ಈಚೆಗಿದ್ದ ಪ್ರದೇಶಗಳಿಗೆ ಮಾತ್ರ ಗೀಸರುಗಳ ವಿತರಣೆ ಸೀಮಿತವಾಗಿರುವುದು ಮೇಲಿನ ಊಹೆಗೆ ಸಮರ್ಥನೆ ನೀಡುವುದು. ಗೀಸರಿನ ಕತ್ತು ಸಾಮಾನ್ಯವಾಗಿ ಅನಿಯತಾಕಾರದ ಒಂದು ನಾಳ. ಆಸುಪಾಸಿನ ಕಲ್ಲುಗಳಿಂದ ಒಸರಿದ ನೀರು ಅದರಲ್ಲಿ ಆಂಶಿಕವಾಗಿ ತುಂಬಿಕೊಂಡಿರುತ್ತದೆ. ಅಲ್ಲಿಂದ ಸಾಕಷ್ಟು ಆಳದಲ್ಲಿರುವ ನೀರು ತಳದ ಸುಡುಗಲ್ಲಿನ ಪ್ರಭಾವದಿಂದ ಕುದಿಬಿಂದುವಿನಲ್ಲಿರುತ್ತದೆ. ಒಸರು ನೀರು ಈ ವಲಯದಲ್ಲಿ ಒಟ್ಟಾದಂತೆ ನೀರಿನ ಗಾತ್ರ ಮತ್ತು ಒತ್ತಡ ಉಷ್ಣತೆಯೊಂದಿಗೆ ಏರುತ್ತವೆ. ಒಂದಷ್ಟು ಅಂಶ ಉಗಿಯಾಗಿ ರಭಸದಿಂದ ಮೇಲೇರಲು ತೊಡಗುತ್ತದೆ. ಅದರೊಂದಿಗೆ ನೀರು ಮೇಲಕ್ಕೆ ಚಿಮ್ಮುತ್ತದೆ. ಈ ಉಗಿಮಿಶ್ರಿತ ಬಿಸಿನೀರು ಗೀಸರಿನ ಕತ್ತಿನಲ್ಲಿದ್ದ ನೀರನ್ನು ಬಾಯಿಯೆಡೆಗೆ ತಳ್ಳುತ್ತ ದಾರಿಮಾಡಿಕೊಂಡು ಮಹಾ ವೇಗದಿಂದ ಆಕಾಶಕ್ಕೆ ನೆಗೆಯುತ್ತದೆ. ಇದೇ ಗೀಸರ್.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕುರುಬಗ್ರಂಥ ಸಂಪಾದನೆಮತದಾನವಿನಾಯಕ ಕೃಷ್ಣ ಗೋಕಾಕಕಬೀರ್ಚಂದನಾ ಅನಂತಕೃಷ್ಣಆದೇಶ ಸಂಧಿಚಾಲುಕ್ಯಚಂದ್ರರಾಜ್‌ಕುಮಾರ್ನರೇಂದ್ರ ಮೋದಿಬ್ಯಾಡ್ಮಿಂಟನ್‌ಭಾರತದ ರಾಜಕೀಯ ಪಕ್ಷಗಳುಮಹೇಂದ್ರ ಸಿಂಗ್ ಧೋನಿಮೀನಾ (ನಟಿ)ಕ್ಯಾನ್ಸರ್ವಿತ್ತೀಯ ನೀತಿವಿಕ್ರಮಾರ್ಜುನ ವಿಜಯಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಸ್ವಾತಂತ್ರ್ಯಲಾರ್ಡ್ ಕಾರ್ನ್‍ವಾಲಿಸ್ರಾಷ್ಟ್ರಕವಿಜಲಶುದ್ಧೀಕರಣಚಿತ್ರದುರ್ಗಹುರುಳಿ1935ರ ಭಾರತ ಸರ್ಕಾರ ಕಾಯಿದೆಡಾ ಬ್ರೋಸಿದ್ದಲಿಂಗಯ್ಯ (ಕವಿ)ಪಾಲುದಾರಿಕೆ ಸಂಸ್ಥೆಗಳುಚೋಮನ ದುಡಿಮುಖ್ಯ ಪುಟಕರ್ನಾಟಕದ ಮುಖ್ಯಮಂತ್ರಿಗಳುಜೋಗಿ (ಚಲನಚಿತ್ರ)ಕನ್ನಡ ರಾಜ್ಯೋತ್ಸವಧೂಮಕೇತುನೀರುವಿಷಮಶೀತ ಜ್ವರಸಹಕಾರಿ ಸಂಘಗಳುಜಾಗತಿಕ ತಾಪಮಾನ ಏರಿಕೆಹಂಪೆರಮ್ಯಾಭಾರತದ ನದಿಗಳುಭರತ-ಬಾಹುಬಲಿಪ್ರಜಾಪ್ರಭುತ್ವಕುಕ್ಕೆ ಸುಬ್ರಹ್ಮಣ್ಯ ದೇವಾಲಯಕನ್ನಡ ಕಾವ್ಯಹಸ್ತಪ್ರತಿಭಾರತೀಯ ಪ್ರಾಚೀನ ಲಿಪಿಶಾಸ್ತ್ರದಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳುಒಂದನೆಯ ಮಹಾಯುದ್ಧಕನ್ನಡ ಸಂಧಿವಿಜ್ಞಾನಜ್ಞಾನಪೀಠ ಪ್ರಶಸ್ತಿನಾಗಮಂಡಲ (ಚಲನಚಿತ್ರ)ಸರ್ವಜ್ಞಏಕೀಕರಣಉಡುಪಿ ಜಿಲ್ಲೆಪೆರಿಯಾರ್ ರಾಮಸ್ವಾಮಿಚಂದ್ರಶೇಖರ ಕಂಬಾರಮೈಸೂರು ಸಂಸ್ಥಾನದ ದಿವಾನರುಗಳುರಾಧಿಕಾ ಪಂಡಿತ್ಕರ್ನಾಟಕ ವಿಧಾನ ಪರಿಷತ್೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಮುದ್ದಣರನ್ನಮಾನವ ಹಕ್ಕುಗಳುಕನ್ನಡ ಛಂದಸ್ಸುಜೋಡು ನುಡಿಗಟ್ಟುಕಲ್ಯಾಣಿಗ್ರಾಮಗಳುಧೀರೂಭಾಯಿ ಅಂಬಾನಿನಾಲ್ವಡಿ ಕೃಷ್ಣರಾಜ ಒಡೆಯರುವಚನ ಸಾಹಿತ್ಯಮುಂಬಯಿ ವಿಶ್ವವಿದ್ಯಾಲಯಆಹಾರ ಸಂರಕ್ಷಣೆವಾದಿರಾಜರುಗಾದೆಕರ್ನಾಟಕದ ನದಿಗಳುಆಯ್ದಕ್ಕಿ ಲಕ್ಕಮ್ಮಅರವಿಂದ ಘೋಷ್🡆 More