ಕ್ಯೋಟೋ ಶಿಷ್ಟಾಚಾರ

ಕ್ಯೋಟೋ ಶಿಷ್ಟಾಚಾರವು, ಯುನೈಟೆಡ್‌ ನೇಷನ್ಸ್‌ ಫ್ರೇಮ್ವರ್ಕ್‌ ಕನ್ವೆನ್ಷನ್‌ ಆನ್ ಕ್ಲೈಮೇಟ್ ಚೇಂಜ್‌ನ (ಹವಾಮಾನ ಬದಲಾವಣೆ ಕುರಿತ ವಿಶ್ವ ಸಂಸ್ಥೆಯ ಕಾರ್ಯವಿಧಾನದ ಚೌಕಟ್ಟೊಳಗಿನ ನಿಯಮಗಳ ಮಹಾಸಭೆ) (UNFCCC ಅಥವಾ FCCC) ಒಂದು ಶಿಷ್ಟಾಚಾರವಾಗಿದೆ.

ಕ್ಯೋಟೋ ಶಿಷ್ಟಾಚಾರ
2009ರ ಜೂನ್‌ವರೆಗೆ ಕ್ಯೋಟೋ ಶಿಷ್ಟಾಚಾರದಲ್ಲಿ ಭಾಗವಹಿಸುವಿಕೆ, ಕಡುಹಸಿರು ಬಣ್ಣವು ಒಪ್ಪಂದಕ್ಕೆ ಸಹಿಹಾಕಿದ ಮತ್ತು ಅನುಮೋದಿಸಿದ ದೇಶಗಳ, ಬೂದು ಬಣ್ಣವು ಇದುವರೆಗೆ ನಿರ್ಧರಿಸದ ಬಗ್ಗೆ ಮತ್ತು ಕೆಂಪು ಬಣ್ಣವು ಅನುಮೋದಿಸುವ ಇಚ್ಛೆ ಇರದ ದೇಶಗಳ ಬಗ್ಗೆ ಸೂಚಿಸುತ್ತದೆ.

ಹವಾಮಾನ ಬದಲಾವಣೆ ಕುರಿತ ನಿಯಮಗಳ ಮಹಾಸಭೆ

ಜಾಗತಿಕ ತಾಪಮಾನದ ಏರಿಕೆಯನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ. UNFCCC ಎಂಬುದು ಅಂತಾರಾಷ್ಟ್ರೀಯ ಪರಿಸರೀಯ ಒಪ್ಪಂದವಾಗಿದೆ. 'ಹವಾಮಾನ ದಲ್ಲಿರುವ ಹಸಿರುಮನೆ ಅನಿಲದ ಸಾಂದ್ರತೆಯನ್ನು ನಿರ್ದಿಷ್ಟ ಮಟ್ಟದಲ್ಲಿ ಸ್ಥಿರಗೊಳಿಸಿ, ಹವಾಗುಣ ವ್ಯವಸ್ಥೆಗೆ ಸಂಭವಿಸುವ ಅಪಾಯಕಾರಿ ಮಾನವಜನ್ಯ ಅಡಚಣೆಗಳನ್ನು ತಡೆಗಟ್ಟುವುದು' ಇದರ ಉದ್ದೇಶವಾಗಿದೆ. ಈ ಶಿಷ್ಟಾಚಾರವನ್ನು ಆರಂಭದಲ್ಲಿ 11 ಡಿಸೆಂಬರ್‌ 1997ರಲ್ಲಿ ಜಪಾನ್‌ನ ಕ್ಯೋಟೋ ನಗರದಲ್ಲಿ ಅಳವಡಿಸಿ ಅನುಷ್ಟಾನಗೊಳಿಸಲಾಯಿತು. ಇದರ ನಿಯಮಾವಳಿಗಳು 16 ಫೆಬ್ರವರಿ 2005ರ‌‌‌‌‌‌‌ಲ್ಲಿ ಜಾರಿಗೆ ಬಂದವು. ನವೆಂಬರ್‌ 2009ರಲ್ಲಿ, 187 ದೇಶಗಳು ಈ ಶಿಷ್ಟಾಚಾರಕ್ಕೆ ಸಹಿ ಹಾಕಿ ಅನುಮೋದನೆಗೆ ಸಮ್ಮತಿಸಿದ್ದವು. ಶಿಷ್ಟಾಚಾರದಡಿ, 'ಅನೆಕ್ಸ್‌ I ಕಂಟ್ರೀಸ್‌' ಎನ್ನಲಾದ, ಕೈಗಾರಿಕೀಕರಣಕ್ಕೊಳಗಾದ 37 ರಾಷ್ಟ್ರಗಳು, ಇಂಗಾಲದ ಡಯಾಕ್ಸೈಡ್‌, ಮೀಥೇನ್‌, ನೈಟ್ರಸ್‌ ಆಕ್ಸೈಡ್‌, ಸಲ್ಫರ್‌ ಹೆಕ್ಸಾಫ್ಲುವೊರೈಡ್‌ ಎಂಬ ನಾಲ್ಕು ಹಸಿರುಮನೆ ಅನಿಲಗಳು, ಹಾಗೂ, ಅವು ಹೊರಡಿಸುವ ಹೈಡ್ರೊಫ್ಲುವೊರೊಕಾರ್ಬನ್‌ಗಳು ಮತ್ತು ಪರ್ಫ್ಲುವೊರೊಕಾರ್ಬನ್‌‌ಗಳು ಎಂಬ ಎರಡು ಅನಿಲ ಸಮ್ಮಿಶ್ರಣಗಳ ಪ್ರಮಾಣ ಕಡಿಮೆಗೊಳಿಸಲು ಒಪ್ಪಿಕೊಂಡಿವೆ. ಇದರ ಜೊತೆಗೆ ಎಲ್ಲಾ ಸದಸ್ಯ ದೇಶಗಳು ಸಾರ್ವತ್ರಿಕವಾಗಿ ತಮ್ಮ ಬದ್ದತೆ ತೋರಿವೆ. ತಮ್ಮ ಒಟ್ಟು ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು 1990 ಮಟ್ಟಕ್ಕಿಂತ ಕಡಿಮೆಗೊಳಿಸಲು ಅನೆಕ್ಸ್‌ I ದೇಶಗಳು ಒಪ್ಪಿಕೊಂಡಿವೆ. ಹೊರಸೂಸುವಿಕೆಯ ಮಿತಿಗಳಲ್ಲಿ ಅಂತಾರಾಷ್ಟ್ರೀಯ ವಾಯುಯಾನ ಮತ್ತು ಹಡಗು ಸಾರಿಗೆಯಿಂದಾಗುವುದನ್ನು ಒಳಗೊಂಡಿರುವುದಿಲ್ಲ. ಆದರೆ ಅವು ಕೈಗಾರಿಕಾ ಅನಿಲಗಳು ಹಾಗೂ ಕ್ಲೊರೊಫ್ಲುವೊರೊಕಾರ್ಬನ್‌‌‌‌‌ಗಳನ್ನು (CFCಗಳು) ಒಳಗೊಂಡಿರುತ್ತವೆ. 1987ರಲ್ಲಿ ರೂಪಿಸಲಾದ 'ಒಜೋನ್‌ ಪದರು ದುರ್ಬಲಗೊಳಿಸುವ ಅನಿಲಗಳ ಕುರಿತು ಮಾಂಟ್ರಿಯಲ್ ಶಿಷ್ಟಾಚಾರ'ದಡಿ ಕೈಗಾರಿಕಾ ಅನಿಲಗಳು ಮತ್ತು ಕ್ಲೊರೊಫ್ಲುವೊರೊಕಾರ್ಬನ್‌‌‌‌‌ಗಳು (CFCಗಳು) ಒಳಪಡುತ್ತವೆ.IPCC ಎರಡನೆಯ ಮೌಲ್ಯಮಾಪನ ವರದಿಗಾಗಿ ಸಿದ್ದಪಡಿಸಿದ ಜಾಗತಿಕ ತಾಪಮಾನ ಏರಿಕೆ ಸಂಭಾವ್ಯತೆಯ ಮೌಲ್ಯಗಳನ್ನು ಅಂಗೀಕರಿಸಲಾಗಿತ್ತು. 1990ರಲ್ಲಿ ರೂಪಿಸಿದ ನಿಯಮಗಳಡಿ, ಗಂಭೀರಪ್ರಮಾಣದ ಹೊರಸೂಸುವಿಕೆಯ ಮಟ್ಟಗಳನ್ನು UNFCCC ಸದಸ್ಯರ ಮಹಾಸಭೆಯಲ್ಲಿ ಚರ್ಚಿಸಿ ಅನುಮೋದಿಸಲಾಯಿತು. (ನಿರ್ಣಯ 2/CP.3)[೨] ಒಟ್ಟಾರೆ ಮೂಲಗಳ ಪರಿಗಣಿಸುವಾಗ, ಹಲವು ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಆದ್ಯತೆಯಂತೆ CO2ವನ್ನು ಪ್ರಯೋಜನಕಾರಿಯಾಗಿ ಪರಿವರ್ತಿಸಲು ಈ ದತ್ತಾಂಶದ ಮೂಲ ಅಂಕಿಅಂಶಗಳನ್ನು ಬಳಸಲಾಗುತ್ತದೆ.ಈ ಶಿಷ್ಟಾಚಾರದ ನಿಯಮಾವಳಿಯು ಹಲವಾರು ಹೊಂದಾಣಿಕೆ ಕ್ರಮಗಳಿಗೆ ಅವಕಾಶ ನೀಡುತ್ತದೆ. ಇದರಲ್ಲಿ ಹೊರಸೂಸುವಿಕೆಯ ಆಗುಹೋಗುಗಳು , ಕ್ಲೀನ್‌ ಡೆವೆಲಪ್ಮೆಂಟ್‌ ಮೆಕ್ಯಾನಿಸಮ್‌ (ಪರಿಷ್ಕೃತ ಅಭಿವೃದ್ಧಿ ವಿಧಾನಕ್ರಮ) (CDM) ಮತ್ತು ವ್ಯವಸ್ಥೆಗಳ ಜಂಟಿ ಅನುಷ್ಟಾನವೂ ಸಹ ಸೇರಿವೆ. GHG ಹೊರಸೂಸುವಿಕೆ ಇಳಿತಗಳ ಕ್ರೆಡಿಟ್‌ಗಳನ್ನು ಇನ್ನೆಲ್ಲಿಂದಲೋ ತಂದು, ಹಣಕಾಸಿನ ವಿನಿಮಯ, ಅನೆಕ್ಸ್‌-I-ಕ್ಕೆ ಸೇರದ ದೇಶಗಳಲ್ಲಿನ ಹೊರಸೂಸುವಿಕೆ ಕಡಿಮೆಗೊಳಿಸುವ ಯೋಜನೆಗಳನ್ನು ಇತರೆ ಅನೆಕ್ಸ್‌‌-I ದೇಶಗಳಿಂದ ಪಡೆದುಕೊಳ್ಳಲು ಸಹ ಅವಕಾಶವಿದೆ. ಇದರಿಂದಾಗಿ GHG ಹೊರಸೂಸುವಿಕೆ ಮಿತಿ ಅನುಸರಿಸಲು ಅನುಕೂಲವಾಗುತ್ತದೆ.ಕ್ಯೋಟೋ ಶಿಷ್ಟಾಚಾರದಡಿ, ಪ್ರತಿಯೊಂದು ಅನೆಕ್ಸ್‌ I ರ ದೇಶಗಳ ಮೂಲಗಳು ಮತ್ತು ತ್ಯಾಜ್ಯ ಗುಂಡಿಗಳಿಂದ ಉತ್ಪತ್ತಿಯಾದ ಮಾನವಜನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಗಳ ಕುರಿತು ವಾರ್ಷಿಕ ವರದಿ ಸಿದ್ದಪಡಿಸಲು ತಿಳಿಸಲಾಗಿದೆ. ತಮ್ಮ ಹಸಿರುಮನೆ ಅನಿಲಗಳ ಪರಿಮಾಣನ್ನು ಒಟ್ಟು ಲೆಕ್ಕಮಾಡಿ ನಿರ್ವಹಿಸಲು, ಈ ದೇಶಗಳು ಒಬ್ಬ ಜವಾಬ್ದಾರಿ ವ್ಯಕ್ತಿಯನ್ನು (ನಿರ್ದಿಷ್ಟ ರಾಷ್ಟ್ರೀಯ ಪ್ರಾಧಿಕಾರ) ನೇಮಿಸುತ್ತವೆ. ಜಪಾನ್‌, ಕೆನಡಾ, ಇಟಲಿ, ನೆದರ್ಲೆಂಡ್ಸ್‌, ಜರ್ಮನಿ, ಫ್ರಾನ್ಸ್‌, ಸ್ಪೇನ್‌ ಮತ್ತು ಇತರೆ, ಹಲವು ದೇಶಗಳು, ಸರ್ಕಾರದ ಇಂಗಾಲ ನಿಧಿಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿವೆ. ಅನೆಕ್ಸ್‌-I-ಆಗಿರದ ದೇಶಗಳಿಂದ ಕಾರ್ಬನ್‌ ಕ್ರೆಡಿಟ್‌ ಖರೀದಿಸುವ ಬಹುಪಕ್ಷೀಯ ಇಂಗಾಲ ನಿಧಿಗಳನ್ನು ಬೆಂಬಲಿಸುವುದರಲ್ಲಿ ಸಕ್ರಿಯವಾಗಿವೆ. ಅವು ತಮ್ಮ ಪ್ರಮುಖ ಬಹು-ಉಪಯೋಗಿ ಇಂಧನ ಶಕ್ತಿ, ತೈಲ, ಅನಿಲ ಮತ್ತು ರಾಸಾಯನಿಕ ಸಮ್ಮಿಶ್ರಣಗಳೊಂದಿಗೆ ಪ್ರಯೋಗ ನಡೆಸಿ ಆದಷ್ಟು ಅಗ್ಗದ ಬೆಲೆಯಲ್ಲಿ ಹಸಿರುಮನೆ ಅನಿಲ ಪ್ರಮಾಣಗಳ ಉಪಯುಕ್ತತೆಗೆ ಯತ್ನಿಸುತ್ತಿವೆ. [ಸೂಕ್ತ ಉಲ್ಲೇಖನ ಬೇಕು](ಕ್ರೆಡಿಟ್ಸ್ ಕಾರ್ಬನ್ ಅಂದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಥರದಲ್ಲಿನ ಹಸಿರು ಮನೆಯ ಅನಿಲಗಳ ಶೇಖರಣೆಗಳನ್ನು ನಿಯಂತ್ರಿಸಿ ದುಷ್ಪರಿಣಾಗಳನ್ನು (GHGs)ಶಮನಗೊಳಿಸುವ ಪ್ರಮುಖ ಘಟಕದ ಅಂಶಗಳಾಗಿವೆ) ವಸ್ತುಶಃ ಎಲ್ಲಾ ಅನೆಕ್ಸ್‌-I-ಗೆ ಸೇರದ ದೇಶಗಳು ಸಹ, ಕ್ಯೋಟೋ ನಿಯಮಗಳ ಅನುಷ್ಟಾನ ನೋಡಿಕೊಳ್ಳಲು ತಮ್ಮದೇ ಆದ ನಿರ್ದಿಷ್ಟ ರಾಷ್ಟ್ರೀಯ ಜಾರಿ ನಿರ್ದೇಶನಾಲಯದ ಪ್ರಾಧಿಕಾರ ಸ್ಥಾಪಿಸಿವೆ. ಇದರಲ್ಲೂ ವಿಶೇಷವಾಗಿ, CDM ಪ್ರಕ್ರಿಯೆಗಳು - ಇದು CDM ಕಾರ್ಯಕಾರಿ ಮಂಡಳಿಯು ಪ್ರಮಾಣೀಕರಿಸಲು ಯಾವ GHG ಯೋಜನೆ ಅಳವಡಿಕೆಗೆ ಇಚ್ಚಿಸುವವು ಎಂಬುದನ್ನು ನಿರ್ಣಯಿಸುತ್ತದೆ. ಜಾಗತಿಕ ತಾಪಮಾನ

ಹಿನ್ನೆಲೆ

ಸದ್ಯ ಹವಾಮಾನದ ಬಗೆಗಿನ ಅಂತಾರಾಷ್ಟ್ರೀಯ ವೈಜ್ಞಾನಿಕ ಅಭಿಪ್ರಾಯವೇನೆಂದರೆ, ಮಾನವ ಚಟುವಟಿಕೆಗಳು 20ನೆಯ ಶತಮಾನದ ಮಧ್ಯದಿಂದ ಗಮನಾರ್ಹ ಪ್ರಮಾಣದಲ್ಲಿ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿವೆ. ಮಾನವ-ಪ್ರೇರಿತ ಹೊರಸೂಸುವಿಕೆಗಳಿಂದ ಸತತ ಏರಿಕೆ ಕಾಣುತ್ತಿರುವ ಹಸಿರುಮನೆ ಅನಿಲ ಸಾಂದ್ರತೆಗಳು ಹವಾಮಾನದಲ್ಲಿ ಅಪಾಯಕಾರಿ ಬದಲಾವಣೆಗಳಿಗೆ ಕಾರಣವಾಗಬಹುದು.ಹವಾಮಾನ ಬದಲಾವಣೆ ಕುರಿತು ಆಂತರಿಕ ಸರ್ಕಾರಿ ಸಮಿತಿ (IPCC)ಯ ಭವಿಷ್ಯವಾಣಿಯಂತೆ, ಜಾಗತಿಕ ಮಟ್ಟದಲ್ಲಿ ಉಷ್ಣಾಂಶದಲ್ಲಿ ಸರಾಸರಿ ಏರಿಕೆಯು 1.4°C (2.5°F) ರಿಂದ 5.8 °C (10.4°F) ಆಗಬಹುದು. (1990ರಿಂದ 2100 ವರೆಗೆ).

ಊರ್ಜಿತಗೊಳಿಸುವ ಪ್ರಕ್ರಿಯೆ

ಕಳೆದ 11 ಡಿಸೆಂಬರ್‌ 1997ರಂದು ಜಪಾನ್‌ನ ಕ್ಯೋಟೋ ನಗರದಲ್ಲಿ COP 3 ಈ ಶಿಷ್ಟಾಚಾರವನ್ನು ಅನುಮೋದಿಸಿತು.

UNFCCC ಗುಂಪಿನ ಸದಸ್ಯರು ಅನುಮೋದಿಸಲು ಅದನ್ನು 16 ಮಾರ್ಚ್‌ 1998ರಂದು ಮುಕ್ತಗೊಳಿಸಲಾಯಿತು.

Countries which are parties to UNFCCC
ಹೋಲಿ ಸೀ (ಕ್ಯೋಟೋ ಒಪ್ಪಂದ ಅನುಮೋದಿಸಿಲ್ಲ)
ಇರಾಕ್‌
ಸೊಮಾಲಿಯಾ (ಕ್ಯೋಟೋ ಒಪ್ಪಂದಕ್ಕೆ ಅನುಮೋದನೆ ನೀಡಿಲ್ಲ)

ಈ ಶಿಷ್ಟಾಚಾರದ 25ನೆಯ ಅನುಚ್ಛೇದದ ಪ್ರಕಾರ, 'ಈ ಶಿಷ್ಟಾಚಾರವು, ಮಹಾಸಭೆಗೆ ಕನಿಷ್ಠಪಕ್ಷ 55 ಸದಸ್ಯರು ಅನುಮೋದನೆಯನ್ನು ಬಯಸುತ್ತದೆ. 1990ರಲ್ಲಿ ಇಂಗಾಲ ಡಯಾಕ್ಸೈಡ್‌ನ ಒಟ್ಟಾರೆ ಹೊರಸೂಸುವಿಕೆಯಲ್ಲಿ 55%ರಷ್ಟಕ್ಕೆ ಹೊಣೆಯಾಗಿರುವ ಅನೆಕ್ಸ್‌ I ಸದಸ್ಯರು ತಮ್ಮ ಅನುಮೋದನೆ, ಸ್ವೀಕೃತಿ, ಮಂಜೂರಾತಿಯ ಮುದ್ರೆಗಳನ್ನು ಹಾಕಿದ 90 ದಿನಗಳ ನಂತರ ಈ ನಿಯಮಾವಳಿ ಜಾರಿಗೆ ಬರುವುದು.'EU ಮತ್ತು ಅದರ ಸದಸ್ಯ ರಾಷ್ಟ್ರಗಳು ಈ ಶಿಷ್ಟಾಚಾರವನ್ನು ಮೇ 2002ರಲ್ಲಿ ಅನುಮೋದಿಸಿದವು. ಎರಡು ಷರತ್ತುಗಳ ಪೈಕಿ, '55 ಸದಸ್ಯರು' ನಿಯಮದೊಂದಿಗೆ ಹೊಂದಾಣಿಕೆಯಾದದ್ದು 23 ಮೇ 2002ರಂದು. ಐಸ್‌ಲೆಂಡ್‌ ಈ ಶಿಷ್ಟಾಚಾರವನ್ನು ಅನುಮೋದಿಸಿತು. 18 ನವೆಂಬರ್‌ 2004ರಂದು ರಷ್ಯಾ ಈ ಶಿಷ್ಟಾಚಾರವನ್ನು ಅನುಮೋದಿಸುವುದರೊಂದಿಗೆ '55%' ವಿಧಿಸಿದ್ದ ಷರತ್ತನ್ನು ಪೂರೈಸಿತು. 90 ದಿನಗಳ ಅವಧಿಯ ನಂತರ, ಶಿಷ್ಟಾಚಾರವು 16 ಫೆಬ್ರವರಿ 2005ರಂದು ಜಾರಿಗೆ ಬಂದಿತು.ನವೆಂಬರ್‌ 2009ರಲ್ಲಿ, 186 ದೇಶಗಳು ಮತ್ತು ಒಂದು ವಲಯವಾರು ಆರ್ಥಿಕ ಸಂಘಟನೆ (EC) ಈ ಶಿಷ್ಟಾಚಾರವನ್ನು ಅನುಮೋದಿಸಿವೆ. ಹಾಗಾಗಿ, 1990ರಲ್ಲಿ ಅನೆಕ್ಸ್‌ I ಸದಸ್ಯ ದೇಶಗಳದ್ದು ಸೇರಿ ಹೊರಸೂಸುವಿಕೆಯು 63.9%ರಷ್ಟಾಗಿತ್ತು. ಶಿಷ್ಟಾಚಾರಕ್ಕೆ ಅನುಮೋದನೆ ನೀಡದ ಏಕೈಕ ದೇಶವೆಂದರೆ ಅಮೆರಿಕಾ ಸಂಯುಕ್ತ ಸಂಸ್ಥಾನ. ಇದು UNFCCCಗೆ ಸದಸ್ಯವಾಗಿದ್ದು, 1990ರಲ್ಲಿ ಅನೆಕ್ಸ್‌ I ದೇಶಗಳ ಹೊರಸೂಸುವಿಕೆ ಮಟ್ಟದಲ್ಲಿ 36.1%ರಷ್ಟು ಹೊರಸೂಸುವಿಕೆಗೆ ಕಾರಣವಾಗಿತ್ತು. ಕೇವಲ UNFCCC ಸದಸ್ಯರು ಮಾತ್ರ ಈ ಶಿಷ್ಟಾಚಾರಕ್ಕೆ ಸಹಿ ಹಾಕಿ ಅನುಮೋದನೆ ನೀಡಬಲ್ಲರು. (ಆರ್ಟಿಕಲ್‌ 24). 12 ತಿಂಗಳುಗಳ ಮುನ್ಸೂಚನೆ ನೀಡಿ ಸದಸ್ಯರು ಶಿಷ್ಟಾಚಾರದಿಂದ ಹೊರಬರಬಹುದು. (ಆರ್ಟಿಕಲ್‌ 27) ವಿಧಿ 352

ಉದ್ದೇಶಗಳು

ಕ್ಯೋಟೋ ಶಿಷ್ಟಾಚಾರ 
ಕ್ಯೋಟೋ ಒಡಂಬಡಿಕೆಯು ಹಸಿರುಮನೆ ಅನಿಲಗಳ ಜಾಗತಿಕ ಮಟ್ಟದ ಹೊರಸೂಸುವಿಕೆಗಳನ್ನು ಕಡಿತಗೊಳಿಸಲು ಉದ್ದೇಶಿಸಿದೆ.

'ಹವಾಮಾನದಲ್ಲಿ ಹಸಿರುಮನೆ ಅನಿಲ ಸಾಂದ್ರತೆಯನ್ನು ಸ್ಥಿರಗೊಳಿಸಿ, ವ್ಯವಸ್ಥೆಗೆ ಮಾನವಜನ್ಯ ಅಡಚಣೆಯನ್ನು ತಪ್ಪಿಸುವಂತೆ ಅದನ್ನು ಪುನರ್ನಿರ್ಮಿಸುವುದು' ಕ್ಯೋಟೋ ಶಿಷ್ಟಾಚಾರದ ಉದ್ದೇಶವಾಗಿದೆ. ಭಾಗವಹಿಸುವ ಎಲ್ಲಾ ರಾಷ್ಟ್ರಗಳೂ ಸಹ ಜಾಗತಿಕ ಉಷ್ಣಾಂಶ ಏರಿಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗಳ ಸಮಸ್ಯೆಗಳನ್ನು ಪರಿಹರಿಸಲು ವಚನಬದ್ಧವಾಗಿರಬೇಕು. ನಿಯಮರೀತ್ಯಾ ನಿಗದಿಗೊಳಿಸುವಂತಹ ಅಂತಾರಾಷ್ಟ್ರೀಯ ಒಪ್ಪಂದದ ಜಾರಿ ಮತ್ತು ಸ್ಥಾಪನೆ ಕ್ಯೋಟೋ ಹವಾಮಾನ ಪರಿವರ್ತನಾ ಮಹಾಸಭೆಯ ಉದ್ದೇಶವಾಗಿತ್ತು. ಬರುವ 2012ರಲ್ಲಿ, ಹೊರಸೂಸುವಿಕೆಯನ್ನು 1990ರಲ್ಲಿದ್ದ ಮಟ್ಟಕ್ಕಿಂತಲೂ ಸರಾಸರಿ 5.2%ರಷ್ಟು ಕಡಿಮೆ ಮಾಡುವುದು ಎಂದು ಒಪ್ಪಿಕೊಳ್ಳಲಾಗಿತ್ತು. ಪ್ರತಿಯಾಗಿ, ಸಾಮಾನ್ಯವಾಗಿ ಎಲ್ಲರೂ ಅಂದುಕೊಂಡಂತೆ, ಈ ಶಿಷ್ಟಾಚಾರವು 2012ರಲ್ಲಿ ಅಂತ್ಯಗೊಳ್ಳುವುದಿಲ್ಲ. ಬರುವ 2012ರಲ್ಲಿ, ಮೊದಲ ಬದ್ಧತಾ ಅವಧಿ (2008-2012)ರಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಗಳ ಕಡಿವಾಣ ಹಾಕುವ ಕುರಿತು ಅನೆಕ್ಸ್‌ I ದೇಶಗಳು ತಮ್ಮ ಬದ್ದತೆಯನ್ನು ಪೂರೈಸಿರಬೇಕು. UNFCCC ವಿಧಿ 4.2(d) ಸೂಚಿಸಿರುವಂತೆ UNFCCCಗೆ ಹೊಂದುಕೊಳ್ಳುವಂತೆ ಅಗತ್ಯಗಳನ್ನು ಬದಲಿಸಲಾಗುವುದು. ಕ್ಯೋಟೋ ಶಿಷ್ಟಾಚಾರವು ಇದರತ್ತ ಮೊದಲ ಹೆಜ್ಜೆಯಾಗಿದೆ.

ಕ್ಯೋಟೋ ಶಿಷ್ಟಾಚಾರದ ಐದು ಪ್ರಮುಖ ಪರಿಕಲ್ಪನೆಗಳು ಹೀಗಿವೆ: [ಸೂಕ್ತ ಉಲ್ಲೇಖನ ಬೇಕು]

  • ಎಲ್ಲಾ ಸದಸ್ಯ ದೇಶಗಳಿಗೆ ಸಾಮಾನ್ಯ ಬದ್ಧತೆಗಳ ಜೊತೆಗೆ, ಮುಖ್ಯವಾಗಿ, ಅನೆಕ್ಸ್‌ I ದೇಶಗಳಿಗಾಗಿ ಕಾನೂನುರೀತ್ಯಾ ಕಡ್ಡಾಯವಾಗುವ ಹಸಿರುಮನೆ ಅನಿಲಗಳನ್ನು ಕಡಿಮೆಗೊಳಿಸುವ ಬದ್ಧತೆಗಳು;
  • ಶಿಷ್ಟಾಚಾರದ ಉದ್ದೇಶಗಳ ಈಡೇರಿಸಲು ನಿಯಮಗಳ ಜಾರಿಗೊಳಿಸುವಿಕೆ, ಹಸಿರುಮನೆ ಅನಿಲಗಳನ್ನು ಕಡಿಮೆಗೊಳಿಸುವ ಸೂತ್ರ-ನೀತಿ-ಕ್ರಮಗಳು; ಭೂಸ್ವಾಧೀನತೆ ಮತ್ತು ಜೈವಿಕ ಸ್ವಾಧೀನತೆ ಮೂಲಕ ಅನಿಲಗಳ ಹೀರಿಕೊಳ್ಳುವಿಕೆಯ ಸಾಮರ್ಥ್ಯ ಹೆಚ್ಚಿಸುವುದು. ಇದರ ನಿಮಿತ್ತ ಜಂಟಿಯಾಗಿ ಅನುಷ್ಟಾನಗೊಳಿಸುವಿಕೆ, ಸ್ಪಷ್ಟ ಅಭಿವೃದ್ಧಿ ನೀತಿ ಮತ್ತು ಹೊರಸೂಸುವಿಕೆಯ ಪರಿಮಾಣ; ಹಸಿರು ಅನಿಲ ಹೊರಸೂಸುವಿಕೆ ಕಡಿಮೆಗೊಳಿಸಿದವರಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸುವುದು;
  • ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಸಾಧನಗಳನ್ನು ಪೂರೈಸುವ ನಿಧಿ ಸ್ಥಾಪನೆ ಮೂಲಕ ಅಭಿವೃದ್ಧಿಶೀಲ ದೇಶಗಳ ಮೇಲೆ ಪ್ರಭಾವ;
  • ಶಿಷ್ಟಾಚಾರದ ಸಮಗ್ರತೆಯನ್ನು ಖಾತರಿಪಡಿಸಲು ಲೆಕ್ಕಪರಿಶೋಧನೆ, ವರದಿ ಸಲ್ಲಿಸುವಿಕೆ ಮತ್ತು ಪರಿಶೀಲನೆ;
  • ಶಿಷ್ಟಾಚಾರಕ್ಕೆ ಬದ್ಧತೆಯನ್ನು ಜಾರಿಗೊಳಿಸಲು ಒಂದು ಅನುಸರಣಾ ಸಮಿತಿಯ ರಚನೆಯ ಮೂಲಕ ಅನುಷ್ಟಾನ.

2012 ಹೊರಸೂಸುವಿಕೆ ತಡೆಗಟ್ಟುವ ಗುರಿ ಮತ್ತು ಸುಲಭವಾಗಿ 'ಹೊಂದಿಕೊಳ್ಳಬಲ್ಲ ವಿಧಾನಗಳು'

ಅಂದರೆ 40 ಅನೆಕ್ಸ್‌ I ರ ದೇಶಗಳಲ್ಲಿ 39 ದೇಶಗಳು ಈ ಶಿಷ್ಟಾಚಾರ ನಿಯಮಗಳನ್ನು ಅನುಮೋದಿಸಿವೆ. ಶಿಷ್ಟಾಚಾರದ ಅನೆಕ್ಸ್‌ Bಯಲ್ಲಿರುವ ನಿಯಮಗಳಿಗೆ ಹೊಂದುಕೊಳ್ಳುವಂತೆ, 34 ದೇಶಗಳು ಹಸಿರುಮನೆ ಅನಿಲಗಳ (GHG) ಹೊರಸೂಸುವಿಕೆಗೆ 1990ರ ಮಟ್ಟದವರೆಗೆ ಕಡಿವಾಣ ಹಾಕಲು ಬದ್ಧವಾಗಿವೆ. ನಾಲ್ಕು ಹಸಿರುಮನೆ ಅನಿಲಗಳಾದ ಇಂಗಾಲದ ಡಯಾಕ್ಸೈಡ್‌, ಮಿಥೇನ್‌, ನೈಟ್ರಸ್‌ ಆಕ್ಸೈಡ್‌, ಸಲ್ಫರ್‌ ಹೆಕ್ಸಾಫ್ಲುವೊರೈಡ್‌, ಹಾಗೂ ಅನಿಲಗಳ ಎರಡು ಗುಂಪುಗಳಾದ ಹೈಡ್ರೊಫ್ಲುವೊರೊಕಾರ್ಬನ್‌ಗಳು ಮತ್ತು ಪರ್‌ಫ್ಲುವೊರೊಕಾರ್ಬನ್‌ಗಳಿಗೆ ಈ ಉದ್ದೇಶಿತ ಗುರಿ ಅನ್ವಯಿಸುತ್ತದೆ.ಹೊರಸೂಸುವಿಕೆಗಳಲ್ಲಿನ ಕಡಿತದ ಪ್ರಮಾಣಗಳನ್ನು ನಿರ್ಣಯಿಸಲು ಈ ಆರೂ GHGಗಳು CO2 ತತ್ಸಮಾನಗಳಿಗೆ ಪರಿವರ್ತಿತವಾಗುತ್ತವೆ. ಒಜೋನ್‌ ಪದರ ದುರ್ಬಲಗೊಳಿಸುವ ಅನಿಲಗಳ ಕುರಿತು ಮಾಂಟ್ರಿಯಲ್‌ ಶಿಷ್ಟಾಚಾರದಡಿ (1987) ಅನ್ವಯವಾಗುವ ಕೈಗಾರಿಕಾ ಅನಿಲಗಳು, ಕ್ಲೊರೊಫ್ಲುವೊರೊಕಾರ್ಬನ್‌ಗಳು (CFCಗಳು) ಜೊತೆಗೇ ಈ ಕಡಿತಗೊಳಿಸುವ ಪ್ರಮಾಣದ ಗುರಿಗಳು ಸೇರುತ್ತವೆ.ಈ ಶಿಷ್ಟಾಚಾರದಡಿ ಆನೆಕ್ಸ್‌ I ದೇಶಗಳು ರಾಷ್ಟ್ರೀಯ ಅಥವಾ ಜಂಟಿಯಾಗಿ ಹೊರಸೂಸುವಿಕೆ ಕಡಿಮೆ ಮಾಡುವ ಕ್ರಮಗಳಿಗೆ ಬದ್ಧವಾಗಿವೆ. (ವಿಧ್ಯುಕ್ತವಾಗಿ ಇವನ್ನು ಪರಿಮಾಣಿತ ಹೊರಸೂಸುವಿಕೆಯ ಸೀಮಿತಗೊಳಿಸುವಿಕೆ ಮತ್ತು ಕಡಿವಾಣ ಧ್ಯೇಯಗಳು - ವಿಧಿ 4.1). ಇದರಲ್ಲಿ ಯುರೋಪ್‌ ಒಕ್ಕೂಟ ಮತ್ತು ಇತರರಿಗೆ, ಹೊರಸೂಸುವಿಕೆಗಳಲ್ಲಿ ಜಂಟಿಯಾಗಿ 8%ರಷ್ಟು ಕಡಿವಾಣ, ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ 7%ರಷ್ಟು ಕಡಿವಾಣ. (ಇದು ಆ ದೇಶಕ್ಕೆ ಕಡ್ಡಾಯವಲ್ಲ, ಏಕೆಂದರೆ US ಈ ಶಿಷ್ಟಾಚಾರಕ್ಕೆ ಸಹಿ ಹಾಕಿಲ್ಲ), ಜಪಾನ್‌ಗಾಗಿ 6% ಮತ್ತು ರಷ್ಯಾಗಾಗಿ 0% ಎಂದು ನಿಗದಿಗೊಳಿಸಲಾಗಿದೆ. ಆಸ್ಟ್ರೇಲಿಯಾಗಾಗಿ 8%ರಷ್ಟು ಹೊರಸೂಸುವಿಕೆ ಮತ್ತು ಐಸ್‌ಲೆಂಡ್‌ಗಾಗಿ 10%ರಷ್ಟು ಹೊರಸೂಸುವಿಕೆಗಳಿಗೆ ಈ ಒಪ್ಪಂದ ಅವಕಾಶ ನೀಡುತ್ತದೆ. ಅಂತಾರಾಷ್ಟ್ರೀಯ ವಾಯುಯಾನ ಮತ್ತು ಹಡಗು ಸಾರಿಗೆಗಳಿಂದ ಉಂಟಾಗುವ ಹೊರಸೂಸುವಿಕೆಗಳು ಇಂತಹ ಮಿತಿಗಳನ್ನು ಒಳಗೊಳ್ಳುವುದಿಲ್ಲ.

Annex I countries under the Kyoto Protocol, their 2012 commitments (% of 1990) and 1990 emission levels (% of all Annex I countries)

{ | |- | style="width:25%; vertical-align:top;" | ಆಸ್ಟ್ರೇಲಿಯಾ – 108% (1990 ಹೊರಸೂಸುವಿಕೆಗಳ ಮಟ್ಟದಲ್ಲಿ 2.1%ರಷ್ಟು)
ಆಸ್ಟ್ರಿಯಾ – 92% (0.4%)
ಬೆಲಾರೂಸ್‌ – 95% (ಇತರೆ ಪಕ್ಷಗಳ)
ಬೆಲ್ಜಿಯಮ್‌ – 92% (0.8%)
ಬಲ್ಗೇರಿಯ – 92% (0.6%)
ಕೆನಡಾ – 94% (3.33%)
ಕ್ರೊಯೆಷಿಯಾ – 95% ()
ಜೆಕ್‌ ಗಣರಾಜ್ಯ – 92% (1.24%)
ಡೆನ್ಮಾರ್ಕ್‌ – 92% (0.4%)
ಎಸ್ಟೊನಿಯಾ – 92% (0.28%)
| style="width:25%; vertical-align:top;" | ಫಿನ್ಲೆಂಡ್‌ – 92% (0.4%)
ಫ್ರಾನ್ಸ್‌ – 92% (2.7%)
ಜರ್ಮನಿ – 92% (7.4%)
ಗ್ರೀಸ್‌ – 92% (0.6%)
ಹಂಗೆರಿ – 94% (0.52%)
ಐಸ್‌ಲೆಂಡ್‌ – 110% (0.02%)
ಐರ್ಲೆಂಡ್‌ – 92% (0.2%)
ಇಟಲಿ – 92% (3.1%)
ಜಪಾನ್‌ – 94% (8.55%)
ಲಾಟ್ವಿಯಾ – 92% (0.17%)
| style="width:25%; vertical-align:top;" | ಲಿಕ್ಟೆನ್‌ಷ್ಟೀನ್‌ – (0.0015%) 92%
ಲಿಥುಯೇನಿಯಾ – 92% ()
ಲಕ್ಸೆಂಬೊರ್ಗ್‌ – 92% (0.1%)
ಮೊನ್ಯಾಕೊ – 92% (0.0015%)
ನೆದರ್ಲೆಂಡ್ಸ್‌ – 92% (1.2%)
ನ್ಯೂಜಿಲೆಂಡ್‌ – 100% (0.19%)
ನಾರ್ವೇ – 99% (0.26%)
ಪೋಲೆಂಡ್‌ – 94% (3.02%)
ಪೋರ್ಚುಗಲ್‌ – 92% (0.3%)
ರೊಮಾನಿಯಾ – 92% (1.24%)
| style="width:25%; vertical-align:top;" | ರಷ್ಯನ್‌ ಫೆಡರೇಷನ್‌ – 100% (17.4%)
ಸ್ಲೊವಾಕಿಯಾ – 92% (0.42%)
ಸ್ಲೊವೆನಿಯಾ – 92% ()
ಸ್ಪೇನ್‌ – 92% (1.9%)
ಸ್ವೀಡೆನ್‌ – 92% (0.4%)
ಸ್ವಿಟ್ಜರ್ಲೆಂಡ್‌ – 92% (0.32%)
ತುರ್ಕಿ
ಉಕ್ರೇನ್‌ – 100% ()
ಯುನೈಟೆಡ್‌ ಕಿಂಗ್‌ಡಮ್‌‌ – 92% (4.3%)
ಅಮೆರಿಕಾ ಸಂಯುಕ್ತ ಸಂಸ್ಥಾನ – 93% (36.1%) (ಒಪ್ಪಂದಕ್ಕೆ ಭಾಗಿಯಾಗಿಲ್ಲ) |}

ತಮ್ಮ ಪರಿಧಿಯೊಳಗೆ ಕಾರ್ಯನಿರ್ವಹಿಸುವ ಪ್ರಮುಖ ಕೈಗಾರಿಕಾ ಉದ್ದಿಮೆಗಳಿಗೆ ಕಡಿತಗೊಂಡ ವಾರ್ಷಿಕ ರಿಯಾಯತಿ ನೀಡುವುದರ ಮೂಲಕ, ಅನೆಕ್ಸ್‌ I ದೇಶಗಳು ತಮ್ಮ (ಹೊರಸೂಸುವಿಕೆಯ ಕಡಿತದ) ಗುರಿ ಸಾಧಿಸಬಹುದು. ಅಥವಾ, UNFCCC ಸದಸ್ಯರು ಒಪ್ಪಿಕೊಂಡಿರುವ ಒಂದು ವಿಧಾನದ ಮೂಲಕ ಮಿತಿಮೀರಿದ ಹೊರಸೂಸುವಿಕೆಯನ್ನು ಹೊರಹಾಕಲು ಈ ಕೈಗಾರಿಕೆಗಳಿಗೆ ಅವಕಾಶ ನೀಡುವುದು. (ಉದಾಹರಣೆಗೆ, ಮಿತಿಮೀರಿ ಹೊರಸೂಸುವಿಕೆಗೆ ಕ್ರೆಡಿಟ್‌ ಹೊರಸೂಸುವಿಕೆ ಭತ್ಯೆಗಳನ್ನು ಇತರೆ ಕೈಗಾರಿಕಾ ಉದ್ದಿಮೆಗಳಿಂದ ಕೊಳ್ಳುವುದರ ಮೂಲಕ).ಈ ರೀತಿ 39 ಅನೆಕ್ಸ್‌ I ದೇಶಗಳಲ್ಲಿ 38 ದೇಶಗಳು ತಮ್ಮ ಹೊರಸೂಸುವಿಕೆಗಳನ್ನು ನಿಯಂತ್ರಿಸಲು ಒಪ್ಪಿಕೊಂಡಿವೆ. EU ಸೇರ್ಪಡೆಯಾಗಬಯಸುವ ಇನ್ನೂ ಎರಡು ದೇಶಗಳು ಈ ರೀತಿ ಹೊರಸೂಸುವಿಕೆಗಳನ್ನು ನಿಯಂತ್ರಿಸಬೇಕಾದ ಷರತ್ತುಗಳನ್ನು ಪಾಲಿಸಬೇಕಿವೆ. ಇನ್ನೊಂದು ದೇಶ ಬೆಲರೂಸ್‌ ಅನೆಕ್ಸ್‌ I ದೇಶಗಳ ಗುಂಪಿಗೆ ಸೇರಲು ಇಚ್ಚಿಸುತ್ತಿದೆ.ಈ ಶಿಷ್ಟಾಚಾರವು ಹಲವು ಹೊಂದಿಕೊಳ್ಳಬಹುದಾದ ವಿಧಾನಗಳಿಗೆ ಅವಕಾಶ ನೀಡುತ್ತದೆ. ಇವು ತಮ್ಮ GHG ಹೊರಸೂಸುವಿಕೆ ನಿಯಮಗಳನ್ನು ಅನುಸರಿಸಲು ಅನೆಕ್ಸ್‌ I ದೇಶಗಳಿಗೆ ನೆರವಾಗುತ್ತವೆ. GHG ಹೊರಸೂಸುವಿಕೆಯ ಕಡಿವಾಣ ಕ್ರೆಡಿಟ್‌ಗಳನ್ನು ಪಡೆಯುವುದ ರ ಮೂಲಕ ನೆರವಾಗುತ್ತದೆ. ಅನ್ಯ ಅನೆಕ್ಸ್‌ I ದೇಶಗಳಲ್ಲಿ ಅಥವಾ ಅನೆಕ್ಸ್‌ I ಅಲ್ಲದ ದೇಶಗಳಲ್ಲಿ ಹೊರಸೂಸುವಿಕೆಗಳನ್ನು ಕಡಿತಗೊಳಿಸುವ ಯೋಜನೆಗಳಿಗೆ ಧನಸಹಾಯ ನೀಡುವ ಅನೆಕ್ಸ್‌ I ದೇಶಗಳು ಈ ಕ್ರೆಡಿಟ್‌ಗಳನ್ನು ಪಡೆಯುತ್ತವೆ; ಅಥವಾ, ಅಧಿಕ ಸಂಖ್ಯೆಯಲ್ಲಿ ಕ್ರೆಡಿಟ್‌ ಹೊಂದಿರುವ ಅನೆಕ್ಸ್‌ I ದೇಶಗಳಿಂದ ಕ್ರೆಡಿಟ್‌ಗಳನ್ನು ಪಡೆದುಕೊಳ್ಳಬಹುದು. ಹೊರಸೂಸುವಿಕೆ ವಹಿವಾಟು, ಕ್ಲೀನ್‌ ಡೆವೆಲಪ್ಮೆಂಟ್‌ ಮೆಕ್ಯಾನಿಸಮ್‌ (CDM) ಮತ್ತು ಜಾಯಿಂಟ್‌ ಇಂಪ್ಲಿಮೆಂಟೇಷನ್‌‌ (ಜಂಟಿ ಅನುಷ್ಟಾನ) ಕ್ಕೆ ಹೊಂದಿಕೊಳ್ಳುವ ವಿಧಾನಗಳಾಗಿವೆ.ಪ್ರಾಯೋಗಿಕವಾಗಿ, ಇದರ ಅರ್ಥ, ಅನೆಕ್ಸ್‌ I-ಅಲ್ಲದ ದೇಶಗಳು ಯಾವುದೇ GHG-ಹೊರಸೂಸುವಿಕೆ ನಿರ್ಬಂಧಗಳಿಗೆ ಒಳಪಟ್ಟಿರುವುದಿಲ್ಲ, ಆದರೆ, ಅವುಗಳು ಇಂಗಾಲ ಕ್ರೆಡಿಟ್‌ಗಳನ್ನು ಪಡೆಯಲು GHG ಹೊರಸೂಸುವಿಕೆಯ ಕಡಿವಾಣ ಯೋಜನೆಗಳಿಗೆ ಹಣಕಾಸಿನ ಉತ್ತೇಜನಗಳನ್ನು ಹೊಂದಿರುತ್ತವೆ. ನಂತರ, ಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಇವನ್ನು ಅನೆಕ್ಸ್‌ I ದೇಶಗಳಿಗೆ ಮಾರಲಾಗುತ್ತದೆ. ಇನ್ನೂ ಹೆಚ್ಚಿಗೆ, ದಕ್ಷ, GHG-ಹೊರಸೂಸುವ ಕೈಗಾರಿಕೆಗಳು ಮತ್ತು ಉನ್ನತ ಪರಿಸರೀಯ ಪ್ರಮಾಣಕಗಳನ್ನು ಹೊಂದಿರುವ ಅನೆಕ್ಸ್‌ I ದೇಶಗಳು, ದೇಶೀಯವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಕಡಿತಗೊಳಿಸುವ ಬದಲಿಗೆ, ವಿಶ್ವ ಮಾರುಕಟ್ಟೆಯಲ್ಲಿ ಇಂಗಾಲ ಕ್ರೆಡಿಟ್‌ಗಳನ್ನು ಕೊಂಡುಕೊಳ್ಳಲು, ಇಂತಹ ಕ್ರಮಗಳು ಅವಕಾಶ ಮಾಡುತ್ತವೆ. ಸಾಮಾನ್ಯವಾಗಿ ಅನೆಕ್ಸ್‌ I ದೇಶಗಳು ಅಗ್ಗಬೆಲೆಯಲ್ಲಿ ಇಂಗಾಲ ಕ್ರೆಡಿಟ್‌ಗಳನ್ನು ಪಡೆಯಲು ಇಚ್ಛಿಸುತ್ತವೆ. ಅನೆಕ್ಸ್‌ I ಅಲ್ಲದ ದೇಶಗಳು ತಮ್ಮ ದೇಶೀಯ ಹಸಿರುಮನೆ ಅನಿಲ ಕಡಿತಗೊಳಿಸುವ ಯೋಜನೆಗಳಿಂದ ಉತ್ಪಾದನೆಯಾದ ಇಂಗಾಲ ಕ್ರೆಡಿಟ್‌ಗಳ ಬೆಲೆಯನ್ನು ಗರಿಷ್ಠಗೊಳಿಸಲು ಇಚ್ಛಿಸುತ್ತವೆ.

ಒಪ್ಪಂದದ ವಿವರಗಳು

ಯುನೈಟೆಡ್‌ ನೇಷನ್ಸ್‌ ಎನ್ವಿರಾನ್ಮೆಂಟ್‌ ಪ್ರೊಗ್ರಾಮ್‌ (ವಿಶ್ವಸಂಸ್ಥೆ ಪರಿಸರ ಯೋಜನೆ) ಪತ್ರಿಕಾ ಪ್ರಕಟನೆ ಪ್ರಕಾರ:

'ಹತ್ತು ದಿನಗಳ ಕಾಲ ನಡೆದ ಕಟ್ಟುನಿಟ್ಟಿನ ಮಾತುಕತೆಗಳ ನಂತರ, 160 ದೇಶಗಳಿಂದ ಸಚಿವರು ಮತ್ತು ಇತರೆ ಉನ್ನತ ಪದಾಧಿಕಾರಿಗಳು ಅಂದು ಬೆಳಗ್ಗೆ ಕಾನೂನು ಬದ್ಧತೆಯ ಒಂದು ಶಿಷ್ಟಾಚಾರದ ಬಗ್ಗೆ ಒಪ್ಪಂದಕ್ಕೆ ಬಂದಿದ್ದಾರೆ. ಇದರಡಿ, ಎಲ್ಲಾ ಕೈಗಾರಿಕೀಕರಣ ರಾಷ್ಟ್ರಗಳು ತಮ್ಮ ಒಟ್ಟಾರೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು 5.2%ರಷ್ಟು ಕಡಿತಗೊಳಿಸಲಿವೆ.

ಈ ಒಪ್ಪಂದವು, ಆರು ಹಸಿರುಮನೆ ಅನಿಲಗಳ ಗುಂಪಿನಿಂದ ಒಟ್ಟಾರೆ ಹೊರಸೂಸುವಿಕೆಗಳನ್ನು 2008-12ರೊಳಗೆ ಕಡಿಮೆಗೊಳಿಸಲು ಉದ್ದೇಶಿಸುತ್ತದೆ. ಇದನ್ನು ಈ ಐದು ವರ್ಷಗಳ ಕಾಲ ಸರಾಸರಿ ರೂಪದಲ್ಲಿ ಪರಿಗಣಿಸಲಾಗುತ್ತದೆ. ಮೂರು ಪ್ರಮುಖ ಅನಿಲಗಳಾದ ಇಂಗಾಲ ಡಯಾಕ್ಸೈಡ್‌ (CO2), ಮಿಥೇನ್‌ (CH4) ಮತ್ತು ನೈಟ್ರಸ್‌ ಆಕ್ಸೈಡ್‌ (N2O) ಕಡಿವಾಣಗಳನ್ನು 1990ರ ಮಟ್ಟಗಳ ಆಧಾರದ ಮೇಲೆ ಅಳತೆ ಮಾಡಲಾಗುವುದು. ದೀರ್ಘಕಾಲದಿಂದಲೂ ಬಳಕೆಯಲ್ಲಿರುವ ಕೈಗಾರಿಕಾ ಅನಿಲಗಳಾದ ಹೈಡ್ರೊಫ್ಲೋರೊಕಾರ್ಬನ್‌ಗಳು (HFCಗಳು), ಪರ್ಫ್ಲುವೊರೊಕಾರ್ಬನ್‌ಗಳು (PFCಗಳು) ಮತ್ತು ಸಲ್ಫರ್‌ ಹೆಕ್ಸಾಫ್ಲುವೊರೈಡ್‌ (SF6) - 1990 ಅಥವಾ 1995ರ ಕಾಲಾವಧಿಯ ಪರಿಮಾಣದ ನಿಯಮಗಳನ್ನು ಆಧಾರವಾಗಿರಿಸಿಕೊಂಡು ಈ ಅನಿಲಗಳ ಸೂಸುವಿಕೆಯ ಮಟ್ಟವನ್ನು ಅಳೆಯಬಹುದು.'ರಾಷ್ಟ್ರೀಯ ಮಿತಿಗೊಳಿಸುವಿಕೆಯ ನಿಯಮಗಳಡಿ, ಯುರೋಪಿಯನ್‌ ಒಕ್ಕೂಟ ಮತ್ತು ಇತರೆ ದೇಶಗಳಿಗಾಗಿ 8%ರಷ್ಟು ಕಡಿವಾಣ, USಗಾಗಿ 7%, ಜಪಾನ್‌ಗಾಗಿ 6%, ರಷ್ಯಾಗಾಗಿ 0% ಮತ್ತು ಅನುಮತಿಯ ಮೇರೆಗೆ ಆಸ್ಟ್ರೇಲಿಯಾಗಾಗಿ 8% ಮತ್ತು ಐಸ್‌ಲೆಂಡ್‌ಗಾಗಿ 10% ಕಡಿವಾಣದ ಪ್ರಮಾಣಗಳನ್ನು ನಿರ್ದಿಷ್ಟಗೊಳಿಸಲಾಗಿದೆ.

ಕಳೆದ 1992ರಲ್ಲಿ ರಿಯೊ ಡಿ ಜನೇರೊದಲ್ಲಿ ನಡೆದಅರ್ತ್‌ ಸಮ್ಮಿಟ್‌ (ಭೂಮಿ ಶೃಂಗಸಭೆ)ಯಲ್ಲಿ ಯುನೈಟೆಡ್‌ ನೇಷನ್ಸ್‌ ಫ್ರೇಮ್ವರ್ಕ್‌ ಕನ್ವೆನ್ಷನ್‌ ಆನ್‌ ಕ್ಲೈಮೇಟ್‌ ಚೇಂಜ್‌ (UNFCCC) ಆಯ್ದುಕೊಂಡ ನಿಲುವು ಯಾವುದೇ ಮಿತಿಯನ್ನಾಗಲಿ ಜಾರಿಗೊಳಿಸುವ ವಿಧಾನವನ್ನಾಗಲೀ ಸ್ಪಷ್ಟಪಡಿಸಿರಲಿಲ್ಲ. ಈ ಒಪ್ಪಂದವು ರಿಯೊ ನಿರ್ಣಯಕ್ಕೆ ಪೂರಕವಾಗಿದೆ. UNFCCCಗೆ ಸೇರಿದ ಎಲ್ಲಾ ಸದಸ್ಯ ದೇಶಗಳೂ ಕ್ಯೋಟೋ ಶಿಷ್ಟಾಚಾರಕ್ಕೆ ಸಹಿ ಹಾಕಬಹುದು, ಅಥವಾ ಅನುಮೋದಿಸಬಹುದು. UNFCCC ಸದಸ್ಯತ್ವ ಹೊಂದಿರದ ದೇಶಗಳು ಕ್ಯೋಟೋ ಶಿಷ್ಟಾಚಾರವನ್ನು ಅನುಮೋದಿಸಲಾಗದು. ಜಪಾನ್‌ ದೇಶದ ಕ್ಯೋಟೋ ನಗರದಲ್ಲಿ 1997ರಲ್ಲಿ ನಡೆದ UNFCCC ಸದಸ್ಯರ ಸಮ್ಮೇಳನದಲ್ಲಿ (COP 3) ಕ್ಯೋಟೋ ಶಿಷ್ಟಾಚಾರ ನಿಯಮವನ್ನು ಆಯ್ದುಕೊಳ್ಳಲಾಗಿತ್ತು. UNFCCCಗೆ ಅನೆಕ್ಸ್‌ I ವಿಭಾಗದಲ್ಲಿ ಸೂಚಿಸಿದ ನಿಯಮಾವಳಿಗಳಲ್ಲಿ ಹಲವು ಅಭಿವೃದ್ಧಿ ಹೊಂದಿದ ದೇಶಗಳಿಗೂ ಅನ್ವಯಿಸುತ್ತವೆ. ರಾಷ್ಟ್ರೀಯ ಹೊರಸೂಸುವಿಕೆಯ ತಡೆಗಟ್ಟುವ ಗುರಿಗಳು ಅಂತಾರಾಷ್ಟ್ರೀಯ ವಾಯುಯಾನ ಮತ್ತು ಹಡಗು ಸಾರಿಗೆಯನ್ನು ಹೊರತುಪಡಿಸುತ್ತವೆ.

ಸಾಮಾನ್ಯ ಆದರೆ ವ್ಯತ್ಯಾಸ ಹೊಂದುವ ಹೊಣೆಗಾರಿಕೆಗಳು

UNFCCC 'ಸಾಮಾನ್ಯ ಆದರೆ ವ್ಯತ್ಯಾಸ ಹೊಂದುವ ಹೊಣೆಗಾರಿಕೆಗಳ' ತತ್ವವನ್ನು ಆಯ್ದುಕೊಳ್ಳುತ್ತದೆ. ಸದಸ್ಯ ದೇಶಗಳು ಕೆಳಕಂಡ ಅಂಶಗಳನ್ನು ಒಪ್ಪಿಕೊಂಡಿವೆ:

  1. ಹಸಿರುಮನೆ ಅನಿಲಗಳ ಐತಿಹಾಸಿಕ ಮತ್ತು ಸದ್ಯದ ಜಾಗತಿಕ ಹೊರಸೂಸುವಿಕೆಯಲ್ಲಿ ಬಹುಪಾಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳದ್ದೇ ಆಗಿದೆ.
  2. ಇದಕ್ಕೆ ಹೋಲಿಸಿದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಲಾ ಹೊರಸೂಸುವಿಕೆಯ ಪ್ರಮಾಣ ಇನ್ನೂ ಕಡಿಮೆಯಿದೆ;
  3. ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಬರುವ ಜಾಗತಿಕ ಮಟ್ಟದ ಹೊರಸೂಸುವಿಕೆಯ ಪಾಲು, ಸಾಮಾಜಿಕ ಮತ್ತು ಅಭಿವೃದ್ಧಿಯ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚಾಗುತ್ತದೆ.

ಕ್ಯೋಟೋ ಶಿಷ್ಟಾಚಾರದ ಸಾಂಖ್ಯಿಕ ನಿರ್ಬಂಧಗಳಲ್ಲಿ ಚೀನಾ, ಭಾರತ ಮತ್ತು ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಳ್ಳಲಾಗಲಿಲ್ಲ, ಏಕೆಂದರೆ, ಒಪ್ಪಂದಕ್ಕೆ ಮುಂಚಿನ ಕೈಗಾರಿಕಾ ಯುಗದಲ್ಲಿ ಈ ದೇಶಗಳು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಮುಖ್ಯ ಕೊಡುಗೆದಾರರಾಗಿರಲಿಲ್ಲ. ಅಂದಿನಿಂದ, ಚೀನಾ ಅತಿ ಹೆಚ್ಚು ಹಸಿರುಮನೆ ಅನಿಲ ಹೊರಸೂಸುವ ದೇಶವಾಗಿ ಹೊರಹೊಮ್ಮಿದೆ. ಆದರೆ, ಕ್ಯೋಟೋದ ನಿಯಮಗಳಡಿ (ಬದ್ದತೆ)ಹೊಣೆಗಾರಿಕೆಯಿಲ್ಲದೆಯೂ , ಅಭಿವೃದ್ಧಿಶೀಲ ದೇಶಗಳೂ ಸಹ, ಹೊರಸೂಸುವಿಕೆಗೆ ಕಡಿವಾಣ ಹಾಕಲು ಎಲ್ಲಾ ದೇಶಗಳ ಸಾಮಾನ್ಯ ಹೊಣೆಗಾರಿಕೆಯನ್ನು ಹಂಚಿಕೊಳ್ಳಲು ಬದ್ಧವಾಗಿರುತ್ತವೆ.ಈ ಶಿಷ್ಟಾಚಾರವು, ಅಳವಡಿಕೆಯ ವಿಧಾನಕ್ಕೆ 'ಬದ್ಧತೆಗಳೊಂದಿಗೆ ಅನುಸರಣೆ ಹಾಗೂ ಅದನ್ನು ಮಾಡದಿದ್ದಲ್ಲಿ ದಂಡ ವಿಧಿಸುವ' ವ್ಯಾಖ್ಯಾನ ನೀಡುತ್ತದೆ.

ಹಣಕಾಸಿನ ಬದ್ಧತೆಗಳು

'ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ-ಸಂಬಂಧಿತ ಅಧ್ಯಯನ ಮತ್ತು ಯೋಜನೆಗಳಿಗೆ ಶತಕೋಟಿ ಡಾಲರ್‌ಗಳಷ್ಟು ಹಣ ವೆಚ್ಚ ಮಾಡಿ, ಇತರೆ ದೇಶಗಳಿಗೆ ತಂತ್ರಜ್ಞಾನ ನೀಡಬೇಕಾಗಿದೆ' ಎಂಬ ತತ್ವವನ್ನು ಈ ಶಿಷ್ಟಾಚಾರ ಪುನರುಚ್ಚರಿಸುತ್ತದೆ. UNFCCCನಲ್ಲಿ ಈ ತತ್ವವನ್ನು ಮೂಲತಃ ಒಪ್ಪಿಕೊಳ್ಳಲಾಗಿತ್ತು.

ಹೊರಸೂಸುವಿಕೆಯ ವ್ಯಾಪಾರ-ವಹಿವಾಟು

ಕ್ಯೋಟೋ ಶಿಷ್ಟಾಚಾರದಲ್ಲಿ ಸೀಮಿತಗೊಳಿಸುವಿಕೆ ಮತ್ತು ವಹಿವಾಟು ವ್ಯವಸ್ಥೆಯುಂಟು. ಇದರಂತೆ ಅನೆಕ್ಸ್‌ I ದೇಶಗಳ ಹೊರಸೂಸುವಿಕೆಗಳ ಮೇಲೆ ರಾಷ್ಟ್ರೀಯ ನಿರ್ಬಂಧಗಳನ್ನು ಜಾರಿಗೊಳಿಸುತ್ತದೆ. ಸರಾಸರಿಯಾಗಿ, ಈ ಸೀಮಿತಗೊಳಿಸುವಿಕೆಯಂತೆ, 2008-2012ರ ಅವಧಿಯಲ್ಲಿ ದೇಶಗಳು ತಮ್ಮ ಹೊರಸೂಸುವಿಕೆಗಳನ್ನು 1990 ಆಧಾರ ವರ್ಷದ ಮಟ್ಟಕ್ಕಿಂತಲೂ 5.2%ರಷ್ಟು ಕೆಳಗಿಳಿಸಿಕೊಳ್ಳುವ ಅಗತ್ಯವಿದೆ. ಈ ಸೀಮಿತಗೊಳಿಸುವಿಕೆಯು ರಾಷ್ಟ್ರೀಯ ಮಟ್ಟದ ಬದ್ಧತೆಯಾಗಿದ್ದರೂ, ಪ್ರಾಯೋಗಿಕವಾಗಿ, ಹಲವು ದೇಶಗಳು ತಮ್ಮ ಹೊರಸೂಸುವಿಕೆ ಕಡಿವಾಣದ ನಿಯಮಗಳ ಅನುಷ್ಟಾನವನ್ನು ಪ್ರತಿಯೊಂದು ಕೈಗಾರಿಕಾ ಉದ್ದಿಮೆಗಳಿಗೆ (ಉದಾಹರಣೆಗೆ, ಇಂಧನ ತಯಾರಿಕಾ ಉದ್ದಿಮೆ ಅಥವಾ ಕಾಗದ ತಯಾರಿಕೆಯ ಘಟಕ) ವಹಿಸಿಕೊಡುತ್ತದೆ. 'ಸೀಮಿತಗೊಳಿಸುವಿಕೆ ಮತ್ತು ವ್ಯವಹಾರ ವ್ಯವಸ್ಥೆಯ ಒಂದು ಉದಾಹರಣೆಯು EU ETS ಆಗಿದೆ. ಕಾಲಾನಂತರದಲ್ಲಿ ಇತರೆ ಯೋಜನೆಗಳೂ ಸಹ ರೂಪುಗೊಳ್ಳಲಿವೆ.'ಹೊರಸೂಸುವಿಕೆಗಳು ತಮ್ಮ ನಿಗದಿತ ಅಂಶಕ್ಕಿಂತಲೂ (ಅವರ ನಿಗದಿತ ಏಕಮಾನಗಳು (AAUಗಳು)) ಮೀರಿಹೋಗುತ್ತದೆ' ಎಂದು ನಿರೀಕ್ಷಿಸುವ ಉದ್ದಿಮೆಗಳೇ ಅಂತಿಮವಾಗಿ ಕ್ರೆಡಿಟ್‌ಗಳನ್ನು ಕೊಳ್ಳುವವು. ಈ ಉದ್ದಿಮೆಗಳು ವಿಶೇಷವಾಗಿ, ಹೆಚ್ಚುವರಿ ರಿಯಾಯತಿಗಳನ್ನು ಹೊಂದಿರುವ ಇನ್ನೊಂದು ಮೂಲದಿಂದ, ದಳ್ಳಾಳಿಯಿಂದ, JI/CDM ಅಭಿವೃದ್ಧಿಗೊಳಿಸಿ, ಅಥವಾ ವಿನಿಮಯದ ಮೇಲೆ ಕ್ರೆಡಿಟ್‌ಗಳನ್ನು ಖರೀದಿಸುತ್ತವೆ. ಕೈಗಾರಿಕಾ ಕ್ಷೇತ್ರಕ್ಕೆ ಕ್ಯೋಟೋ ಶಿಷ್ಟಾಚಾರದ ಹೊಣೆಗಾರಿಕೆಗಳೊಂದಿಗೆ ಹೊಂದಿಕೊಳ್ಳುವ ಹೊಣೆಗಾರಿಕೆ ನೀಡಿಲ್ಲದ ಕೆಲವು ರಾಷ್ಟ್ರೀಯ ಸರ್ಕಾರಗಳು, ಮುಖ್ಯವಾಗಿ JI/CDM ಅಭಿವೃದ್ಧಿಗೊಳಿಸುವವರಿಂದ ತಮ್ಮದೇ ಖಾತೆಗೆ ಕ್ರೆಡಿಟ್‌ಗಳನ್ನು ಕೊಳ್ಳುತ್ತವೆ. ರಾಷ್ಟ್ರೀಯ ನಿಧಿ ಅಥವಾ ನಿಯೋಗದ ಮೂಲಕ ನೇರವಾಗಿ ಇಂತಹ ಒಪ್ಪಂದಗಳನ್ನು ಕೆಲವೊಮ್ಮೆ ಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ, ಡಚ್‌ ಸರ್ಕಾರದ ERUPT ಯೋಜನೆ, ಅಥವಾ ವಿಶ್ವ ಬ್ಯಾಂಕ್‌ನ ಪ್ರೊಟೊಟೈಪ್ ಕಾರ್ಬನ್‌ ಫಂಡ್‌ (PCF)ನಂತಹ ಸಾಮೂಹಿಕ ನಿಧಿ. ಉದಾಹರಣೆಗೆ, PCF ಆರು ಸರ್ಕಾರ ಮತ್ತು 17 ಪ್ರಮುಖ ಉಪಭೋಗದ ವಸ್ತು ಉತ್ಪಾದನೆಯ ಹಾಗು ಇಂಧನ ಉದ್ದಿಮೆಗಳನ್ನು ಒಳಗೊಂಡಿರುತ್ತವೆ. ಇದರ ಪರವಾಗಿ PCF ಕ್ರೆಡಿಟ್‌ಗಳನ್ನು ಕೊಳ್ಳುತ್ತವೆ.ಭತ್ಯೆಗಳು ಮತ್ತು ಇಂಗಾಲ ಕ್ರೆಡಿಟ್‌ಗಳು ಸ್ಪಷ್ಟ ಬೆಲೆ ಹೊಂದಿರುವ, ವಹಿವಾಟಿನ ಸಾಧನಗಳಾಗಿರುವ ಕಾರಣ, ಹಣಕಾಸಿನ ಹೂಡಿಕೆದಾರರು ಅವುಗಳನ್ನು ತಕ್ಷಣ ಸ್ಪಾಟ್‌ ಮಾರ್ಕೆಟ್‌ನಲ್ಲಿ ಸಟ್ಟಾ ವ್ಯಾಪಾರದ ಉದ್ದೇಶಗಳಿಗಾಗಿ ಅಥವಾ ಭವಿಷ್ಯದ ಗುತ್ತಿಗೆಗಳಿಗಾಗಿ ಕೊಳ್ಳಬಹುದು. ಈ ದ್ವೀತಿಯ ಮಾರುಕಟ್ಟೆಯಲ್ಲಿ ಉನ್ನತ ಪ್ರಮಾಣದ ವ್ಯವಹಾರವು ಮೌಲ್ಯದ ಲೆಕ್ಕಾಚಾರ ಮತ್ತು ಆಸ್ತಿಗಳ ಮರು ಮಾರಾಟಕ್ಕೆ ನೆರವಾಗುತ್ತವೆ. ಈ ರೀತಿಯಲ್ಲಿ ವೆಚ್ಚಗಳನ್ನು ಕಡಿಮೆ ಮಟ್ಟದಲ್ಲಿರಿಸಿಕೊಂಡು CO2ನಲ್ಲಿ ಸ್ಪಷ್ಟ ಸಂಕೇತವನ್ನು ಸಿದ್ಧಪಡಿಸಲಾಗುತ್ತದೆ. ಇದರಿಂದಾಗಿ ಉದ್ದಿಮೆಗಳು ತಮ್ಮ ಹೂಡಿಕೆಗಳನ್ನು ಸರಿಯಾಗಿ ಯೋಜಿಸಲು ನೆರವಾಗುತ್ತದೆ. 2007ರಲ್ಲಿ ಮಾರುಕಟ್ಟೆಯು ಸುಮಾರು $60 ಶತಕೋಟಿ ಮೊತ್ತದಲ್ಲಿದ್ದು, ಬ್ಯಾಂಕ್‌ಗಳು, ದಳ್ಳಾಳಿಗಳು, ನಿಧಿಗಳು, ವಹಿವಾಟುದಾರರು ಮತ್ತು ಖಾಸಗಿ ಮಧ್ಯವರ್ತಿಗಳು ಭಾಗವಹಿಸುವ ಈ ಮಾರುಕಟ್ಟೆಯು ಗಮನಾರ್ಹವಾಗಿ ಬೆಳೆದಿದೆ. ಉದಾಹರಣೆಗೆ, ಎಮಿಷನ್ಸ್‌ ಟ್ರೇಡಿಂಗ್‌ PLC, 2005ರಲ್ಲಿ ಲಂಡನ್‌ನ ಲಂಡನ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ AIM ಮಾರುಕಟ್ಟೆಯಲ್ಲಿ ಆರಂಭಿಸಲಾಗಿತ್ತು. ಹೊರಸೂಸುವಿಕೆಗಳ ತಡೆಯ ಯೋಜನೆಗಳಲ್ಲಿ ಹೂಡುವುದು ಇದರ ವಿಶಿಷ್ಟ ಧ್ಯೇಯವಾಗಿತ್ತು.ಕ್ಯೋಟೋ ಜಾಗತಿಕ ಇಂಗಾಲ ಮಾರುಕಟ್ಟೆಗಾಗಿ ಚೌಕಟ್ಟು ಮತ್ತು ನಿಯಮಾವಳಿಗಳನ್ನು ಸೃಷ್ಟಿಸಿದರೂ, ಪ್ರಾಯೋಗಿಕವಾಗಿ ಇಂದು ಹಲವು ವಿಭಿನ್ನ ಯೋಜನೆಗಳು ಅಥವಾ ಮಾರುಕಟ್ಟೆಗಳಿವೆ. ಅವುಗಳ ನಡುವೆ ವಿಭಿನ್ನ ಪ್ರಮಾಣಗಳ ಸಂಪರ್ಕ ಕೊಂಡಿಗಳಿವೆ.ಕ್ಯೋಟೋ ಒಪ್ಪಂದವು ಹಲವು ಅನೆಕ್ಸ್‌ I ದೇಶಗಳು ಒಟ್ಟಿಗೆ ಸೇರಿ 'ಮಾರುಕಟ್ಟೆಯೊಳಗೊಂದು ಮಾರುಕಟ್ಟೆ' ವ್ಯವಸ್ಥೆ ಸ್ಥಾಪಿಸಲು ಅನುಮತಿ ನೀಡುತ್ತದೆ. ತನ್ನನ್ನೂ ಇಂತಹ ಗುಂಪು ಎಂದು ಪರಿಗಣಿಸಲು EU ಇಚ್ಛಿಸಿ, EU ಹೊರಸೂಸುವಿಕೆಗಳ ವಹಿವಾಟು ಯೋಜನೆ (ETS)ಯನ್ನು ರಚಿಸಿತು. EU ETS EAUಗಳನ್ನು ಬಳಸುತ್ತದೆ; (EU ಅಲೊಯೆನ್ಸ್‌ ಯುನಿಟ್ಸ್‌). ಇವುಗಳಲ್ಲಿ ಪ್ರತಿಯೊಂದೂ ಕ್ಯೋಟೋ AAUಗೆ ಸರಿಸಮಾನವಾಗಿದೆ. ಈ ಯೋಜನೆಯು 1 ಜನವರಿ 2005ರಿಂದ ಜಾರಿಯಾಯಿತು. ಆದರೂ, ಇದರ ಮುಂಚಿನ ಮಾರುಕಟ್ಟೆಯು 2003ರಿಂದಲೂ ಚಾಲ್ತಿಯಲ್ಲಿದೆ.UK ತನ್ನದೇ ಆದ 'ಮಾಡಿ-ಕಲಿ' ಸ್ವಯಂಪ್ರೇರಣಾ ಯೋಜನೆಯಾದ UK ETSನ್ನು ಸ್ಥಾಪಿಸಿತು. ಇದು 2002ರಿಂದ 2006 ತನಕ ಚಾಲ್ತಿಯಲ್ಲಿತ್ತು. ಈ ಮಾರುಕಟ್ಟೆಯು EU ಯೋಜನೆಯೊಂದಿಗೆ ಚಾಲ್ತಿಯಲ್ಲಿತ್ತು. UK ಯೋಜನೆಯಲ್ಲಿ ಭಾಗವಹಿಸುವವರು EU ETSನ ಮೊದಲ ಹಂತದಿಂದ ನಿರ್ಗಮಿಸಲು ಅರ್ಜಿ ಸಲ್ಲಿಸಬಹುದು. ಇದು 2007ರುದ್ದಕ್ಕೂ ಚಾಲ್ತಿಯಲ್ಲಿರುವುದು. [ಸೂಕ್ತ ಉಲ್ಲೇಖನ ಬೇಕು]ಕ್ಲೀನ್‌ ಡೆವೆಲಪ್ಮೆಂಟ್‌ ಮೆಕ್ಯಾನಿಸಂ (CDM) ಮತ್ತು ಜಾಯಿಂಟ್‌ ಇಂಪ್ಲಿಮೆಂಟೇಷನ್‌ (JI) - ಇವೆರಡೂ ಕ್ಯೋಟೋ ಕ್ರೆಡಿಟ್‌ಗಳ ಮೂಲಗಳಾಗಿವೆ. ಅನೆಕ್ಸ್‌ I ಗುಂಪಿಗೆ ಸೇರಿರದ ದೇಶಗಳಲ್ಲಿ ಹೊರಸೂಸುವಿಕೆ ಕಡಿವಾಣದ ಯೋಜನೆಗಳನ್ನು ರೂಪಿಸುವುದರ ಮೂಲಕ CDM ಹೊಸ ಕಾರ್ಬನ್‌ ಕ್ರೆಡಿಟ್‌ಗಳ ಸೃಷ್ಟಿಗೆ ಅವಕಾಶ ನೀಡುತ್ತದೆ. ಇನ್ನೊಂದೆಡೆ, JI ಅನೆಕ್ಸ್‌ I ದೇಶಗಳೊಳಗೆ, ಚಾಲ್ತಿಯಲ್ಲಿರುವ ಕ್ರೆಡಿಟ್‌ಗಳಿಂದ ಯೋಜನೆಗೆ ವಿಶಿಷ್ಟವಾದ ಕ್ರೆಡಿಟ್‌ಗಳು ಪರಿವರ್ತನೆಗೆ ಅವಕಾಶ ನೀಡುತ್ತವೆ. CDM ಯೋಜನೆಗಳು ಪ್ರಮಾಣಿತ ಹೊರಸೂಸುವಿಕೆಗಳ ಕಡಿವಾಣಗಳನ್ನು (CERಗಳು) ಉತ್ಪಾದಿಸುತ್ತವೆ. JI ಯೋಜನೆಗಳು ಹೊರಸೂಸುವಿಕೆ ಕಡಿವಾಣಗಳ ಏಕಮಾನಗಳನ್ನು(ಪ್ರಮಾಣಗಳನ್ನು) (ERUಗಳು) ಉತ್ಪಾದಿಸುತ್ತವೆ. ಇವೆರಡರಲ್ಲಿ ಪ್ರತಿಯೊಂದೂ ಸಹ ತಲಾ ಒಂದು AAUಗೆ ಸರಿಸಮಾನಾಗಿರುತ್ತವೆ. EU ETS ನಿಯಮಗಳೊಂದಿಗೆ ಹೊಂದಿಕೊಳ್ಳುವುದಕ್ಕೆ ಕ್ಯೋಟೋ CERಗಳನ್ನೂ ಸಹ ಸ್ವೀಕರಿಸಲಾಗುತ್ತದೆ. ಇದೇ ರೀತಿ, ERUಗಳೂ ಸಹ 2008ರಿಂದ ETS ಗಳೊಂದಿಗೆ ಹೊಂದಿಕೊಳ್ಳುವುದಕ್ಕೆ ಸಜ್ಜುಗೊಳಿಸಲಾಗುವುದು. (ಆದರೂ, 2008ರಿಂದ ಆರಂಭಗೊಂಡು, ಪ್ರತಿ ದೇಶವೂ, ತಾನು ಅನುಸರಣೆಗಾಗಿ ಅವಕಾಶ ನೀಡಲಿರುವ CER/JIಗಳ ಸಂಖ್ಯೆ ಮತ್ತು ಮೂಲಗಳನ್ನು ಸೀಮಿತಗೊಳಿಸಲು ಇಚ್ಛಿಸಬಹುದು). ಭತ್ಯೆಗಳ ರೂಪದಲ್ಲಿ ವಿನಿಮಯ ಅಥವಾ ವ್ಯವಹಾರಕ್ಕಿಂತ ಹೆಚ್ಚಾಗಿ, CERಗಳು/ERUಗಳನ್ನು ಯೋಜನೆಗಳ ಜಾರಿ ಮತ್ತು ಅಭಿವೃದ್ಧಿ ನಿಧಿಗಳ ಅಥವಾ ವಿಭಿನ್ನ ಮೂಲಗಳಿಂದ ಕೊಂಡುಕೊಳ್ಳಲಾಗುತ್ತವೆ. ಕ್ಯೋಟೋ ಶಿಷ್ಟಾಚಾರದ ರಚನೆಯು, UNFCCCಯಿಂದ ನೋಂದಾಯಿಸುವ ಮತ್ತು ಪ್ರಮಾಣೀಕರಿಸುವ ದೀರ್ಘಾವಧಿಯ ಪ್ರಕ್ರಿಯೆಗೆ ಒಳಪಡುತ್ತದೆ. ಈ ಯೋಜನೆಗಳು ಸಹ ರೂಪುಗೊಳ್ಳಲು ಹಲವು ವರ್ಷಗಳ ಬೇಕಾಗಿರುವುದರಿಂದ, ಈ ಹಂತದಲ್ಲಿ ಮಾರುಕಟ್ಟೆಯು ಬಹುಮಟ್ಟಿಗೆ ಒಂದು ಮುಂದುವರೆದ ಮಾರುಕಟ್ಟೆಯಾಗಿದೆ. ಇಲ್ಲಿ EUA ಕರೆನ್ಸಿಗೆ ಸಮನಾದ ವಿನಿಮಯ ಹಣವನ್ನು ರಿಯಾಯತಿ ದರದಲ್ಲಿ ಖರೀದಿ ಮಾಡಲಾಗುತ್ತದೆ. (ಕೆಲವೊಮ್ಮೆ ಮುಂಗಡ ಹಣ ಪಾವತಿ ಮಾಡಲಾಗಿದ್ದರೂ ಸಹ), ಹಾಗೂ ಇವುಗಳು ಪ್ರಮಾಣೀಕರಣ ಮತ್ತು ಬಟವಾಡೆಗಳಿಗೆ ಒಳಪಡುತ್ತವೆ. IETA ಪ್ರಕಾರ, 2004ರಲ್ಲಿ ವ್ಯವಹಾರವಾದ CDM/JI ಕ್ರೆಡಿಟ್‌ಗಳ ಮಾರುಕಟ್ಟೆ ಬೆಲೆಯು EUR 245 ದಶಲಕ್ಷ ಆಗಿತ್ತು. 2005ರಲ್ಲಿ EUR 620 ದಶಲಕ್ಷ ಮೌಲ್ಯದ ಕ್ರೆಡಿಟ್‌ಗಳ ವಹಿವಾಟಾಗಿತ್ತು. ಕ್ಯೋಟೋ ಶಿಷ್ಟಾಚಾರ ನಿಯಮ ಅನ್ವಯಿಸದ ಇಂಗಾಲದ ಮಾರುಕಟ್ಟೆಗಳು ಚಾಲ್ತಿಯಲ್ಲಿವೆ, ಅಥವಾ ಯೋಜನಾ ಹಂತದಲ್ಲಿವೆ. ಇವು ಪ್ರಮುಖವಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುವ ಸಾಧ್ಯತೆಯಿದೆ. ನ್ಯೂ ಸೌತ್‌ ವೇಲ್ಸ್‌ ಹಸಿರುಮನೆ ಅನಿಲ ಕಡಿತದ ಯೋಜನೆ, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದ ದೇಶಗಳಲ್ಲಿರುವ ಪ್ರಾದೇಶಿಕ ಹಸಿರುಮನೆ ಅನಿಲ ಯೋಜನೆ ಮತ್ತು ವೆಸ್ಟರ್ನ್‌ ಕ್ಲೈಮೇಟ್‌ ಇನಿಷಿಯೆಟಿವ್‌, ಶಿಕಾಗೊ ಕ್ಲೈಮೇಟ್‌ ಎಕ್ಸ್‌ಚೇಂಜ್‌ ಮತ್ತು ಹೊರಸೂಸುವಿಕೆಗಳನ್ನು ಕಡಿಮೆಗೊಳಿಸಲು ಕ್ಯಾಲಿಫೊರ್ನಿಯಾ ರಾಜ್ಯದ ಇತ್ತೀಚೆಗಿನ ಯತ್ನ.ಈ ಯತ್ನಗಳನ್ನು ಒಟ್ಟಿಗೆ ಪರಿಗಣಿಸಿದಾಗ, ಒಂದು ಕಾರ್ಬನ್‌ ಮಾರುಕಟ್ಟೆಯ ಬದಲಿಗೆ, ಭಾಗಶಃ ಸಂಪರ್ಕ ಕೊಂಡಿಗಳನ್ನು ಹೊಂದಿರುವ ಮಾರುಕಟ್ಟೆಗಳನ್ನು ರಚಿಸಬಹುದಾಗಿದೆ. CO2 ಹೊರಸೂಸುವಿಕೆಗಳ ಕಡಿವಾಣ ಪ್ರತಿನಿಧಿಸುವ ಕಾರ್ಬನ್‌ ಕ್ರೆಡಿಟ್‌ಗಳ ಮೇಲೆ ಕೇಂದ್ರೀಕೃತ ಮಾರುಕಟ್ಟೆ ವಿಧಾನಗಳನ್ನು ಆಯ್ದುಕೊಳ್ಳುವುದು ಸಾಮಾನ್ಯ ಧ್ಯೇಯವಾಗಿದೆ. ಈ ಯತ್ನಗಳಲ್ಲಿ ಕೆಲವು ಅವುಗಳ ಕ್ರೆಡಿಟ್‌ಗಳನ್ನು ಪ್ರಮಾಣಿಕರಿಸಲು ಒಂದೇ ರೀತಿಯ ಯತ್ನ ಮಾಡುತ್ತಿರುವುದು, ಒಂದು ಮಾರುಕಟ್ಟೆಯಲ್ಲಿರುವ ಕಾರ್ಬನ್‌ ಕ್ರೆಡಿಟ್‌ಗಳು ದೀರ್ಘಾವಧಿಯಲ್ಲಿ ಇತರೆ ಯೋಜನೆಗಳಲ್ಲಿ ವಹಿವಾಟಾಗಬಹುದು. ಸದ್ಯಕ್ಕೆ CDM/JI ಮತ್ತು EU ETS ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿರುವುದಕ್ಕಿಂತಲೂ, ಈ ಯೋಜನೆಯು ಸದ್ಯದ ಕಾರ್ಬನ್‌ ಮಾರುಕಟ್ಟೆಯನ್ನು ಇನ್ನಷ್ಟು ವಿಶಾಲವಾಗಿಸಬಹುದು. ಆದರೂ, ಇದಕ್ಕೆ ಖಚಿತವಾದ ಷರತ್ತುಗಳೇನೆಂದರೆ, ದಂಡವಿಧಿಸುವುದು ಅವುಗಳನ್ನು ಸೂಕ್ತ ಮಟ್ಟಗಳಿಗೆ ಸರಿಹೊಂದಿಸುವುದು, ಏಕೆಂದರೆ ಇವು ಪ್ರತಿಯೊಂದು ಮಾರುಕಟ್ಟೆಗೂ ಪ್ರಭಾವೀ ಏರಿಕೆಯ ಮಿತಿಯನ್ನು ನಿಗದಿಪಡಿಸುತ್ತವೆ.

ಪರಿಷ್ಕರಣೆಗಳು

ಈ ಶಿಷ್ಟಾಚಾರವು ಹಲವು ವಿಚಾರಗಳನ್ನು ಆನಂತರ ನಡೆಯುವ ಸದಸ್ಯರ ಆರನೆಯ ಸಮ್ಮೇಳನದಲ್ಲಿ (COP) ನಿರ್ಣಯಿಸಲು ಹಾಗೆಯೇ ಉಳಿಯಬಿಟ್ಟಿತು. ಕಳೆದ 2000ರ ಅಪರಾರ್ಧದಲ್ಲಿ ದಿ ಹೇಗ್‌ನಲ್ಲಿ ನಡೆದ ಸಭೆಯಲ್ಲಿ COP6 ಈ ವಿಚಾರಗಳನ್ನು ಬಗೆಹರಿಸಲು ಯತ್ನಿಸಿತು. ಆದರೆ, ಒಂದೆಡೆ ಯುರೋಪ್‌ ಒಕ್ಕೂಟವು ಕಠಿಣ ಒಪ್ಪಂದಕ್ಕೆ ಒತ್ತಾಯ ಮಾಡಿದರೆ, ಇನ್ನೊಂದೆಡೆ ಅಮೆರಿಕಾ ಸಂಯುಕ್ತ ಸಂಸ್ಥಾನ, ಕೆನಡಾ, ಜಪಾನ್‌ ಮತ್ತು ಆಸ್ಟ್ರೇಲಿಯಾ ಉದಾರ ಒಪ್ಪಂದಕ್ಕಾಗಿ ಒತ್ತಾಯ ಮಾಡುತ್ತಿದ್ದ ಕಾರಣ, ಯಾವುದೇ ಅಂತಿಮ ನಿರ್ಣಯಕ್ಕೆ ಬರಲಾಗಲಿಲ್ಲ.ಕಳೆದ 2001ರಲ್ಲಿ, ಹಿಂದಿನ ಸಭೆಯ ಮುಂದುವರಿಕೆಯು (COP6bis) ಜರ್ಮನಿಯ ಬಾನ್‌ನಲ್ಲಿ ನಡೆದು ಇಲ್ಲಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಕೆಲವು ರಿಯಾಯತಿಗಳ ನಂತರ, ಯುರೋಪ್‌ ಒಕ್ಕೂಟ ದ ನೇತೃತ್ವದಲ್ಲಿ ಶಿಷ್ಟಾಚಾರದ ಸಮರ್ಥಕ ದೇಶಗಳು, ಇಂಗಾಲ ಡಯಾಕ್ಸೈಡ್‌ ತೊಟ್ಟಿಗಳ ಬಳಕೆಗೆ ಅವಕಾಶ ನೀಡುವುದರ ಮೂಲಕ, ಜಪಾನ್‌ ಮತ್ತು ರಷ್ಯಾ ದೇಶಗಳನ್ನು ತಮ್ಮ ಜೊತೆಗೆ ಸೇರಿಸಿಕೊಳ್ಳಲು ಸಫಲವಾದವು.COP7 ಸಭೆಯು 29 ಅಕ್ಟೋಬರ್‌ 2001ರಿಂದ 9 ನವೆಂಬರ್‌ 2001ರ ತನಕ ಮೊರೊಕೊ ದೇಶದ ಮರಾಕೆಷ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಶಿಷ್ಟಾಚಾರದ ವಿವರಗಳಿಗೆ ಅಂತಿಮ ರೂಪರೇಷೆಗಳನ್ನು ಸಿದ್ಧಪಡಿಸಲಾಯಿತು.UNFCCC ಸದಸ್ಯರ ಹನ್ನೊಂದನೆಯ ಮಹಾಸಭೆಯೊಂದಿಗೆ (COP11) ಕ್ಯೋಟೋ ಶಿಷ್ಟಾಚಾರಕ್ಕೆ (MOP1) ಸದಸ್ಯರ ಮೊದಲ ಸಭೆಯು 28 ನವೆಂಬರ್‌ 2005ರಿಂದ 9 ಡಿಸೆಂಬರ್‌ 2005ರ ತನಕ ಮಾಂಟ್ರಿಯಾಲ್‌ನಲ್ಲಿ ನಡೆಯಿತು. ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆಯ ಮಹಾಸಭೆ ನಿರ್ಧಾರ ಗಮನಿಸಿ.3 ಡಿಸೆಂಬರ್‌ 2007ರಂದು ಇಂಡೊನೆಷ್ಯಾದ ಬಾಲಿಯಲ್ಲಿ ನಡೆದ COP13 ಸಭೆಯ ಮೊದಲ ದಿನ ಆಸ್ಟ್ರೇಲಿಯಾ ಶಿಷ್ಟಾಚಾರವನ್ನು ಅನುಮೋದಿಸಿತು. ಸಹಿ ಹಾಕಿದ ಸದಸ್ಯ ದೇಶಗಳ ಪೈಕಿ 36 ಅಭಿವೃದ್ಧಿ ಹೊಂದಿದ C.G. ದೇಶಗಳು (ಯುರೋಪಿಯನ್‌ ಒಕ್ಕೂಟದ ಅಂಶವಾದ EU ಸಹಿತ) ಐಸ್‌ಲೆಂಡ್‌ಗಾಗಿ ಹೊರಸೂಸುವಿಕೆಯಲ್ಲಿನ 10%ರಷ್ಟು ಪ್ರಮಾಣದ ಹೆಚ್ಚಳಕ್ಕಾಗಿ ಒಪ್ಪಿಗೆ ಸೂಚಿಸಿದವು. ಆದರೆ, ಯುರೋಪಿಯನ್‌ ಒಕ್ಕೂಟದ ಸದಸ್ಯ ದೇಶಗಳು ತಮ್ಮದೇ ಆದ ಬದ್ಧತೆಯಿರುವುದರಿಂದ, ಕಡಿಮ ಅಭಿವೃದ್ಧಿ ಹೊಂದಿದ EU ದೇಶಗಳಿಗಾಗಿ ಇನ್ನಷ್ಟು ಏರಿಕೆಯ (27%ರಷ್ಟರ ತನಕ) ಅವಕಾಶವಿದೆ. (ಕ್ಯೋಟೋ ಶಿಷ್ಟಾಚಾರ#1990ರಿಂದಲೂ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ ಹೆಚ್ಚಳವನ್ನು ದಾಖಲಿಸಿದೆ. ). ಕಡಿವಾಣದ ಸೀಮಿತತೆಗಳು 2013ರಲ್ಲಿ ಅಂತ್ಯಗೊಳ್ಳುತ್ತವೆ.

ನಿರ್ಬಂಧನೆಗಳ ಜಾರಿಗೊಳಿಸುವಿಕೆ

ಯಾವುದೇ ಅನೆಕ್ಸ್‌ I ದೇಶವು ತನ್ನ ಹೊರಸೂಸುವಿಕೆಯ ಮಿತಿಗಳ ನಿಯಮದ ಚೌಕಟ್ಟನ್ನು ಪಾಲಿಸದಿದ್ದರೆ ಜಾರಿ ನಿರ್ದೇಶನಾಲಯ ಇಲಾಖೆ ನಿರ್ಣಯಿಸಿದಲ್ಲಿ, ಆ ದೇಶವು 30%ರಷ್ಟು ಅಧಿಕ ನಷ್ಟ ತುಂಬಿಕೊಡಬೇಕಾಗುವುದು. ಇನ್ನೂ ಹೆಚ್ಚಿಗೆ, ಹೊರಸೂಸುವಿಕೆ ವ್ಯವಹಾರದಡಿ ಆ ದೇಶವು ಯಾವುದೇ ವರ್ಗಾವಣೆ ಮಾಡುವುದರ ಮೇಲೆ ನಿರ್ಬಂಧ ಹೇರಲಾಗುವುದು.

ಸರ್ಕಾರಗಳ ಸದ್ಯದ ಪ್ರತಿಪಾದನೆಗಳು

ಕ್ಯೋಟೋ ಶಿಷ್ಟಾಚಾರ 
ಸುಮಾರು 1800–2000 AD ಅವಧಿಯಲ್ಲಿ ಜಾಗತಿಕವಾಗಿ ಪ್ರದೇಶವಾರು ಇಂಗಾಲ ಹೊರಸೂಸುವಿಕೆಗಳು.

ಆಸ್ಟ್ರೇಲಿಯಾ

ನವೆಂಬರ್‌ 2007ರಲ್ಲಿ ಚುನಾವಣೆಗಳು ನಡೆದ ನಂತರ ಆಡಳಿತ ಸರ್ಕಾರ ಬದಲಾಗಿ, ಪ್ರಧಾನ ಮಂತ್ರಿ ಕೆವಿನ್‌ ರೂಡ್‌ 3 ಡಿಸೆಂಬರ್‌ 2007ರಂದು ಅಧಿಕಾರ ವಹಿಸಿಕೊಂಡ ಕೂಡಲೆ, UN ಫ್ರೇಮ್ವರ್ಕ್‌ ಕನ್ವೆನ್ಷನ್‌ ಆನ್‌ ಕ್ಲೈಮೇಟ್‌ ಚೇಂಜ್‌ ಸಭೆಗೆ ಮುಂಚೆ ಶಿಷ್ಟಾಚಾರಕ್ಕೆ ಅನುಮೋದನೆಯ ಸಹಿ ಹಾಕಿದರು. ಇದು ಮಾರ್ಚ್‌ 2008ರಂದು ಜಾರಿಗೆ ಬಂದಿತು. ಅವರು ವಿರೋಧಪಕ್ಷದಲ್ಲಿದ್ದಾಗ, ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಕಡಿಮೆಗೊಳಿಸುವುದರಿಂದ ಉಂಟಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ವರದಿ ಸಲ್ಲಿಸುವಂತೆ ರಾಸ್‌ ಗರ್ನಾಟ್‌ರಿಗೆ ತಿಳಿಸಿದರು. ಕಳೆದ 30 ಸೆಪ್ಟೆಂಬರ್‌ 2008ರಂದು ವರದಿಯನ್ನು ಆಸ್ಟ್ರೇಲಿಯಾ ಸರ್ಕಾರಕ್ಕೆ ಸಲ್ಲಿಸಲಾಯಿತು. ಕೆವಿನ್‌ ರೂಡ್‌ ನೇತೃತ್ವದ ಸರ್ಕಾರದ ನೀತಿಯು ಹಿಂದಿನ ಆಸ್ಟ್ರೇಲಿಯನ್‌ ಸರ್ಕಾರದ ನೀತಿಗಿಂತಲೂ ಭಿನ್ನವಾಗಿದೆ. ಹಿಂದಿನ ಸರ್ಕಾರ ಈ ಒಪ್ಪಂದವನ್ನು ಅನುಮೋದಿಸಿರಲಿಲ್ಲ, ಏಕೆಂದರೆ ಈ ಶಿಷ್ಟಾಚಾರವನ್ನು ಅನುಸರಿಸುವುದು ದುಬಾರಿಯಾಗುವುದು ಎಂದು ಅದು ನಂಬಿತ್ತು. ಭಾರೀ ಜನಸಂಖ್ಯೆ ಹಾಗೂ ವಿಸ್ತೃತ ಆರ್ಥಿಕತೆ ಹೊಂದಿರುವ ಭಾರತ, ಚೀನಾದಂತಹ ದೇಶಗಳು ಯಾವುದೇ ಬದ್ಧತೆಗೆ ಒಳಗಾಗವು ಎಂದೂ ನಂಬಿತ್ತು. ಇನ್ನೂ ಹೆಚ್ಚಿಗೆ, ಆಸ್ಟ್ರೇಲಿಯಾ ಹೊರಸೂಸುವಿಕೆಗಳನ್ನು ಕಡಿಮೆಗೊಳಿಸಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆಯೆಂದೂ, ಮೂರು ವರ್ಷಗಳಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಕಡಿಮೆಗೊಳಿಸಲು $300 ದಶಲಕ್ಷ ಹಣಕಾಸನ್ನು ತೆಗೆದಿಡಲು ನಿರ್ಧರಿಸಿದೆ ಎಂದೂ ಹೇಳಿಕೊಳ್ಳಲಾಗಿತ್ತು. [ಸೂಕ್ತ ಉಲ್ಲೇಖನ ಬೇಕು]ಸುಮಾರು 2008ರಿಂದ 2012ರ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿನ ಹಸಿರುಮನೆ ಅನಿಲ ಹೊರಸೂಸುವಿಕೆಗಳು, 1990ರ ಮಟ್ಟಕ್ಕಿಂತಲೂ 9%ರಷ್ಟು ಹೆಚ್ಚು ಎಂದು ಅಂದಾಜು ಮಾಡಲಾಗಿತ್ತು. ಇದರಲ್ಲಿ ಜಮೀನಿನ ಬಳಕೆ, ಜಮೀನು ಬಳಕೆಯಲ್ಲಿ ಬದಲಾವಣೆ ಮತ್ತು ವನ್ಯಸಂಪತ್ತಿನ ಪ್ರಭಾವಗಳೂ ಸೇರಿದ್ದವು (LULUCF). ಕ್ಯೋಟೋ ಶಿಷ್ಟಾಚಾರವು ನಿಗದಿಪಡಿಸಿದ 8%ರ ಮಿತಿಗಿಂತಲೂ ಸ್ವಲ್ಪ ಹೆಚ್ಚಿದೆ. 2007ರಲ್ಲಿ UNFCCC ವರದಿ ಪ್ರಕಾರ, ಆಸ್ಟ್ರೇಲಿಯಾದಲ್ಲಿ 2004ರಲ್ಲಿನ ಹಸಿರುಮನೆ ಅನಿಲ ಹೊರಸೂಸುವಿಕೆಗಳು LULUCF ತಿದ್ದುಪಡಿಯಿಲ್ಲದೆಯೇ 1990ರ ಮಟ್ಟಕ್ಕಿಂತಲೂ 25.6%ರಷ್ಟು ಹೆಚ್ಚಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಹಿಂದಿನ ಆಸ್ಟ್ರೇಲಿಯನ್‌ ಸರ್ಕಾರ 28 ಜುಲೈ 2005ರಂದು ASEAN ವಲಯ ವೇದಿಕೆಯಲ್ಲಿ ಏಷ್ಯಾ ಪ್ಯಾಸಿಫಿಕ್‌ ಪಾರ್ಟ್ನರ್ಷಿಪ್‌ ಆನ್‌ ಕ್ಲೀನ್‌ ಡೆವೆಲಪ್ಮೆಂಟ್‌ ಆಂಡ್‌ ಕ್ಲೈಮೇಟ್‌ ಒಪ್ಪಂದಕ್ಕೆ ಸಹಿ ಹಾಕಲು ಸಮ್ಮತಿಸಿದವು.ಇನ್ನೂ ಹೆಚ್ಚಿಗೆ, ನ್ಯೂ ಸೌತ್‌ ವೇಲ್ಸ್‌ ರಾಜ್ಯವು (NSW) NSW ಹಸಿರುಮನೆ ಅನಿಲ ಕಡಿಮೆಗೊಳಿಸುವ ಯೋಜನೆಯನ್ನು ಆರಂಭಿಸಿತು. ಹಸಿರುಮನೆ ಅನಿಲ ಹೊರಸೂಸುವಿಕೆಗಳ ವ್ಯವಹಾರದ ಕಡ್ಡಾಯ ಯೋಜನೆ 1 ಜನವರಿ 2003ರಂದು ಆರಂಭಗೊಂಡು, NSW ರಾಜ್ಯ ಸರ್ಕಾರದಿಂದಲೇ ಪ್ರಾಯೋಗಿಕತೆ ಮೇರೆಗೆ ಚಾಲ್ತಿಯಲ್ಲಿದೆ. ಗಮನಾರ್ಹವಾಗಿ, ಪ್ರಮಾಣಿತ ಪೂರೈಕೆದಾರರು ರಾಜ್ಯದಲ್ಲಿರುವ ವಾಸಿಸುವ ಮನೆಮನೆಗಳಿಂದ ಇಂಗಾಲದ ಹೊರಸೂಸುವಿಕೆಗಳ ಆಗುಹೋಗುಗಳ ಬಗ್ಗೆ ತಿಳಿಯಲು ಈ ಯೋಜನೆ ಅವಕಾಶ ನೀಡುತ್ತದೆ. ಹಿಂದಿನ ಪ್ರಧಾನ ಮಂತ್ರಿಯು ಹವಾಮಾನ ವೈಪರೀತ್ಯ ಸಮಸ್ಯೆಗೆ ಹೊರಸೂಸುವಿಕೆಗಳ ವಹಿವಾಟನ್ನು ಒಂದು ನಂಬಲಾರ್ಹ ಪರಿಹಾರವಾಗಿ ಕಾಣಲು ನಿರಾಕರಿಸಿದರೂ ಸಹ, 2006ರಲ್ಲಿ ಈ ಯೋಜನೆ ಜಾರಿಯಲ್ಲಿತ್ತು. NSW ರಾಜ್ಯದ ನೀತಿಯನ್ನು ಅನುಸರಿಸಿ, ಆಸ್ಟ್ರೇಲಿಯಾದ ರಾಜ್ಯ ಮತ್ತು ಪ್ರಾಂತೀಯ ಸರ್ಕಾರಗಳು, ನ್ಯಾಷನಲ್‌ ಎಮಿಷನ್ಸ್‌ ಟ್ರೇಡಿಂಗ್‌ ಸ್ಕೀಮ್‌ (ರಾಷ್ಟ್ರೀಯ ಹೊರಸೂಸುವಿಕೆಗಳ ವಹಿವಾಟು ಯೋಜನೆ) (NETS) ಎಂಬುದನ್ನು ಆರಂಭಿಸಿದವು. (ವೆಸ್ಟರ್ನ್‌ ಆಸ್ಟ್ರೇಲಿಯಾ ಹೊರತುಪಡಿಸಿ ಉಳಿದೆಲ್ಲ ರಾಜ್ಯ-ಪ್ರಾಂತ್ಯಗಳಲ್ಲಿ ಲೇಬರ್‌ ಪಾರ್ಟಿ ಅಧಿಕಾರದಲ್ಲಿದೆ). ಆಯಾ ವಲಯಗಳಲ್ಲಿನ ನೀತಿ ಸಮತೋಲನ ಕಾಯ್ದುಕೊಳ್ಳಲು, ಆಸ್ಟ್ರೇಲಿಯಾದಲ್ಲಿಯೇ ಆಂತರಿಕವಾಗಿ ಇಂಗಾಲ ವಹಿವಾಟು ಯೋಜನೆ ಸ್ಥಾಪಿಸುವುದು NETSನ ಉದ್ದೇಶವಾಗಿದೆ. ಆಸ್ಟ್ರೇಲಿಯಾದ ಸಂವಿಧಾನವು ನೀರು ಹೊರತುಪಡಿಸಿ ಇನ್ಯಾವುದೇ ಪರಿಸರೀಯ ವಿಚಾರಗಳಿಗೆ ವಿಶಿಷ್ಟವಾಗಿ ಉಲ್ಲೇಖಿಸದ ಕಾರಣ, ಹೊಣೆಗಾರಿಕೆಯ ಹಂಚುವಿಕೆಯನ್ನು ರಾಜಕೀಯ ಮಟ್ಟದಲ್ಲಿ ಬಗೆಹರಿಸಬೇಕಾಗುವುದು. ಜಾನ್‌ ಹೊವಾರ್ಡ್‌ ಆಡಳಿತಾವಧಿಯ ಅಪರಾರ್ಧದಲ್ಲಿ (1996–2007) ಲೇಬರ್‌ ಪಾರ್ಟಿ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು NETS (ಎ)ಸ್ಥಾಪಿಸಲು ಕ್ರಮ ಕೈಗೊಂಡವು. ಇದರ ಉದ್ದೇಶ ಕೆಲವೇ ಅಗತ್ಯ ಒಕ್ಕೂಟದ ವಿಧಾಯಕಗಳಿರುವೆಡೆ ಕ್ರಮ ಕೈಗೊಳ್ಳುವಿಕೆ; ಹಾಗೂ (ಬಿ) ಮುಂದೆ ಆಡಳಿತ ವಹಿಸಿಕೊಳ್ಳುವ ಲೇಬರ್‌ ಪಾರ್ಟಿ ಸರ್ಕಾರವು ಕ್ಯೋಟೋ ಶಿಷ್ಟಾಚಾರದ ಅನುಮೋದನೆಯನ್ನು ಸುಗಮಗೊಳಿಸುವಿಕೆ.ಗ್ರೀನ್‌ಪೀಸ್‌ ಕ್ಯೋಟೋ ಶಿಷ್ಟಾಚಾರದ ವಿಧಿ 3.7ನ್ನು ಆಸ್ಟ್ರೇಲಿಯಾ ಕ್ಲಾಜ್ ‌ ಎಂದು ಟೀಕಿಸಿದೆ, ಏಕೆಂದರೆ ಈ ವಿಧಿಯ ಆಸ್ಟ್ರೇಲಿಯಾ ಪಕ್ಷಪಾತಿವಾಗಿದ್ದು, ಕೇವಲ ಆ ದೇಶವನ್ನು ಪ್ರಮುಖ ಲಾಭದಾರನನ್ನಾಗಿಸುತ್ತದೆ. ಸುಮಾರು 1990ರಲ್ಲಿ ಅರಣ್ಯ ನಾಶಗೊಳಿಸುವುದನ್ನು ತಡೆಯಲು ಅತಿಹೆಚ್ಚು ಕಡಿವಾಣ ದರದ ಮಟ್ಟವನ್ನು ಹೊಂದಿದ್ದ ಅನೆಕ್ಸ್‌ I ದೇಶಗಳು ಆ ವರ್ಷದಲ್ಲಿನ ಮಟ್ಟವನ್ನು ಆಧಾರವಾಗಿಸಿಕೊಳ್ಳಲು ಈ ನಿಯಮ ಅವಕಾಶ ನೀಡುತ್ತದೆ. ಕಳೆದ ದಶಕ 1990ರಲ್ಲಿ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಕಡಿವಾಣದ ಕಾರಣ, ಆಸ್ಟ್ರೇಲಿಯಾದ ಆಧಾರರೇಖೆಯು ಇತರೆ ದೇಶಗಳಿಗಿಂತಲೂ ಅಧಿಕವಾಗಿತ್ತು, ಎಂದು ಗ್ರೀನ್‌ಪೀಸ್‌ ವಾದಿಸಿದೆ. ಮೇ 2009ರಲ್ಲಿ ಕೆವಿನ್‌ ರೂಡ್‌ ಕೊಂಚ ವಿಳಂಬದೊಂದಿಗೆ ಇಂಗಾಲ ಮಾಲಿನ್ಯ ಕಡಿವಾಣ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ತಂದರು:

  • ಈ ಯೋಜನೆಯು ಮೂಲತಃ ಆರಂಭದ ದಿನಾಂಕದಿಂದ ಒಂದು ವರ್ಷ ತಡವಾಗಿ, ಅಂದರೆ 2011/2012ರಲ್ಲಿ ಆರಂಭಗೊಳ್ಳುವುದು. (1 ಜುಲೈ 2010ರಂದು ಆರಂಭಗೊಳ್ಳಲು ನಿಗದಿಯಾಗಿತ್ತು);
  • ಒಂದು ವರ್ಷದ ಕಾಲ, 2011/2012ರಲ್ಲಿ ಪ್ರತಿ ಪರವಾನಗಿಗೆ AU$10ರಷ್ಟು ನಿರ್ದಿಷ್ಟ ಬೆಲೆ ನಿಗದಿ ಮಾಡಲಾಗುವುದು. (ಮುಂಚೆ, $40ರಷ್ಟು ಬೆಲೆಯ ಮಿತಿಗಿಂತಲೂ ಕೆಳಗಿತ್ತು);
  • ಮೊದಲ ವರ್ಷದಲ್ಲಿ, ಸರ್ಕಾರದಿಂದ ಅನಿಯಮಿತ ಮೊತ್ತದಲ್ಲಿ ಪರವಾನಗಿಗಳು ಲಭ್ಯವಾಗುವವು. (ಮುಂಚೆ, ಅಂದಾಜು 300 ದಶಲಕ್ಷ ಟನ್‌ಗಳಷ್ಟು CO2 ಅನಿಲವನ್ನು ಹರಾಜು ಮಾಡಲಾಗುತಿತ್ತು);
  • ಪರವಾನಗಿಯನ್ನು ಹರಾಜು ಮಾಡುವ ಬದಲು ಇನ್ನೂ ಹೆಚ್ಚಿನ ಶೇಖಡಾವಾರಿನಲ್ಲಿ ನೀಡಲಾಗುವುದು. (ಮುಂಚೆ, 60%ರಿಂದ 90%ರಷ್ಟು ಪರವಾನಗಿಗಳನ್ನು ನೀಡಲಾಗುತಿತ್ತು);
  • ಪರಿಹಾರ ನೀಡಿಕೆಯನ್ನು 2010/2011ರಲ್ಲಿ ರದ್ದುಗೊಳಿಸಲಾಗದಿದ್ದರೆ 2011/2012ರಲ್ಲಿ ಕಡಿಮೆಗೊಳಿಸಲಾಗುವುದು;
  • ಪರವಾನಗಿಗಳನ್ನು ಕೊಂಡು ಅಥವಾ ಅವುಗಳನ್ನು ಆಸ್ಟ್ರೇಲಿಯನ್‌ ಕಾರ್ಬನ್‌ ಟ್ರಸ್ಟ್‌ಗೆ ವಹಿಸಿಬಿಡುವುದರ ಮೂಲಕ ವಾಸದ ಮನೆಗಳು ತಮ್ಮ ಇಂಗಾಲದ ಪ್ರಮಾಣಗಳನ್ನು ಕಡಿಮೆಗೊಳಿಸಬಹುದು. (ಮುಂಚೆ, ಇಂತಹ ಯಾವುದೇ ಯೋಜನೆಯನ್ನು ಒಳಗೊಂಡಿರಲಿಲ್ಲ);
  • ಅಂತಾರಾಷ್ಷ್ರೀಯ ಒಪ್ಪಂದಕ್ಕೆ ಸರಿಹೊಂದುವ ಮೇರೆಗೆ, 2000ರ ಮಟ್ಟಕ್ಕಿಂತ 2020ರೊಳಗೆ 25%ರಷ್ಟು ಇಳಿಕೆಗೆ ಆಸ್ಟ್ರೇಲಿಯಾ ಬದ್ಧವಾಗುವುದು. (ಮುಂಚೆ 15%ರಷ್ಟು ಕಡಿವಾಣವಿರಬೇಕಿತ್ತು);
  • ಅಂತಾರಾಷ್ಟ್ರೀಯ ಪ್ರಮಾಣವನ್ನು ಸರ್ಕಾರವು ಕೊಳ್ಳುವುದರ ಮೂಲಕ, 25%ರ ಕಡಿವಾಣದ ಪೈಕಿ 5%ರಷ್ಟು ನಿಯಂತ್ರಣ ಸಾಧಿಸಬಹುದು. (ಮುಂಚೆ ಇಂತಹ ಯಾವುದೇ ಯೋಜನೆಯನ್ನು ಒಳಗೊಂಡಿರಲಿಲ್ಲ).

ಕೆನಡಾ

ಕಳೆದ 17 ಡಿಸೆಂಬರ್‌ 2002ರಂದು, ಕೆನಡಾ ಈ ಒಪ್ಪಂದಕ್ಕೆ ಅನುಮೋದನೆ ನೀಡಿತು. ಇದು ಫೆಬ್ರವರಿ 2005ರಲ್ಲಿ ಜಾರಿಗೆ ಬಂದಿತು. 2008-2012ರ ಬದ್ಧತಾ ಅವಧಿಯಲ್ಲಿ ಕೆನಡಾ ತನ್ನ ಹೊರಸೂಸುವಿಕೆಗಳನ್ನು 1990ರ ಮಟ್ಟಕ್ಕಿಂತಲೂ 6%ರಷ್ಟು ಕಡಿಮೆಗೊಳಿಸಬೇಕಾಯಿತು. ಆ ಸಮಯದಲ್ಲಿ, ಹಲವು ಸಮೀಕ್ಷೆಗಳಲ್ಲಿ ಕ್ಯೋಟೋ ಶಿಷ್ಟಾಚಾರಕ್ಕೆ ಸುಮಾರು 70%ರಷ್ಟು ಸಮರ್ಥನೆ ವ್ಯಕ್ತವಾಗಿತ್ತು. ಸಾರ್ವಜನಿಕ ಸಮರ್ಥನೆ ಪ್ರಬಲವಾಗಿದ್ದರೂ ಸಹ, ಇದಕ್ಕೆ ಸ್ವಲ್ಪ ವಿರೋಧವೂ ಇತ್ತು; ಅದರಲ್ಲೂ ವಿಶೇಷವಾಗಿ, ಆಡಳಿತ ಕನ್ಸರ್ವೆಟಿವ್‌ ಪಾರ್ಟಿಯ ಮೂಲ ಕೆನಡಿಯನ್‌ ಅಲಯನ್ಸ್‌ನಿಂದ ವಿರೋಧ ವ್ಯಕ್ತವಾಯಿತು. ಇದಲ್ಲದೆ ಕೆಲವು ಉದ್ಯಮಿಗಳ ಗುಂಪುಗಳು, ಇಂಧನದ ಉದ್ದಿಮೆಗಳು U.S.ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಬಳಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದವು, ವಿಶೇಷವಾಗಿ, U.S. ಉದ್ದಿಮೆಗಳು ಕ್ಯೋಟೋ ಶಿಷ್ಟಾಚಾರದಿಂದ ಪ್ರಭಾವಕ್ಕೊಳಗಾಗದ ಕಾರಣ, ಕೆನಡಿಯನ್‌ ಉದ್ದಿಮೆಗಳಿಗೆ ಪ್ರತಿಕೂಲವಾಗುತ್ತದೆಂಬ ಆತಂಕವಿತ್ತು. 2005ರಲ್ಲಿ ಕೆನಡಾದ ಪ್ರಮುಖ ತೈಲ ಮತ್ತು ಅನಿಲ ತಯಾರಕ ಆಲ್ಬರ್ಟಾ ಮತ್ತು ಸಂಯುಕ್ತ ಸರ್ಕಾರದ ನಡುವೆ ವಾಗ್ವಾದ ನಡೆದಿತ್ತು. 2003ರಲ್ಲಿ, ಅದು ಹವಾಮಾನ ಬದಲಾವಣಾ ಯೋಜನೆಗಳಿಗೆ $3.7 ಶತಕೋಟಿ ನಿಧಿ ಖರ್ಚು ಯೋಜನೆ ಅಥವಾ ಮುಡಿಪಾಗಿಟ್ಟಿದೆ, ಎಂದು ಒಕ್ಕೂಟ ಸರ್ಕಾರ ಹೇಳಿಕೊಂಡಿತು. ಕಳೆದ 2004ರಲ್ಲಿ, CO2 ಹೊರಸೂಸುವಿಕೆಗಳು 1990ರ ಮಟ್ಟಕ್ಕಿಂತಲೂ 27%ರಷ್ಟು ಹೆಚ್ಚಾಗಿದ್ದವು. ಇದೇ ಅವಧಿಯಲ್ಲಿ U.S.ನಲ್ಲಿ ಸಂಭವಿಸಿದ ಹೊರಸೂಸುವಿಕೆಗಳ 16%ರ ಹೆಚ್ಚಳಕ್ಕೆ ಹೋಲಿಸಿದರೆ ಇದು ಪ್ರತಿಕೂಲ ಸ್ಥಿತಿಯಲ್ಲಿರುವಂತೆ ಕಂಡುಬರುವುದು. 2006ರಲ್ಲಿ ಹೊರಸೂಸುವಿಕೆಗಳು 1990ರ ಮಟ್ಟಕ್ಕಿಂತಲೂ 21.7% ಕ್ಕೆ ಇಳಿಕೆಯಾಗಿದ್ದವು. ಜನವರಿ 2006ರಲ್ಲಿ, ಸ್ಟೀಫೆನ್‌ ಹಾರ್ಪರ್‌ ನಾಯಕತ್ವದಲ್ಲಿ ಕನ್ಸರ್ವೇಟಿವ್‌ ಅಲ್ಪಮತದ ಸರ್ಕಾರ ಚುನಾಯಿತವಾಯಿತು. ಸ್ಟೀಫೆನ್‌ ಹಾರ್ಪರ್‌ ಮುಂಚೆ ಕ್ಯೋಟೋ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ್ದರು, ಅದರಲ್ಲೂ ವಿಶೇಷವಾಗಿ ಅಂತಾರಾಷ್ಟ್ರೀಯ ಹೊರಸೂಸುವಿಕೆ ವಹಿವಾಟಿಗೆ ವಿರೋಧ ವ್ಯಕ್ತಪಡಿಸಿದ್ದರು. ಪರಿಸರ ಮಂತ್ರಿಯಾಗಿ ಸ್ಟೆಫೇನ್‌ ಡಿಯಾನ್‌ರ ಸ್ಥಾನದಲ್ಲಿ ಬಂದ ರೊನಾ ಆಂಬ್ರೂಸ್‌, ಕೆಲವು ತರಹದ ಹೊರಸೂಸುವಿಕೆಗಳ ವಹಿವಾಟುಗಳಲ್ಲಿ ಆಸಕ್ತಿ ತೋರಿಸಿ ಅನುಮೋದಿಸಿದ್ದಾರೆ. 'ಕ್ಯೋಟೋ ಒಪ್ಪಂದದಡಿ ಕೆನಡಾಕ್ಕೆ ತನ್ನ ಗುರಿ ಸಾಧಿಸುವ ಯಾವುದೇ ಅವಕಾಶಗಳಿಲ್ಲ, ಆದರೆ, U.S. ಪ್ರಾಯೋಜಿಸಿದ ಏಷ್ಯಾ-ಪ್ಯಾಸಿಫಿಕ್‌ ಪಾರ್ಟ್ನರ್ಷಿಪ್‌ ಆನ್‌ ಕ್ಲೀನ್‌ ಡೆವೆಲಪ್ಮೆಂಟ್‌ ಅಂಡ್‌ ಕ್ಲೈಮೇಟ್‌ ಸಭೆಯಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದೆ' ಎಂದು ರೊನಾ ಆಂಬ್ರೂಸ್‌ 25 ಏಪ್ರಿಲ್‌ 2006ರಂದು ಹೇಳಿಕೆ ನೀಡಿದರು. ಈ ಏಷ್ಯಾ-ಪ್ಯಾಸಿಫಿಕ್‌ ಸಹಭಾಗಿತ್ವದತ್ತ ನಾವು ಕಳೆದ ಕೆಲವು ತಿಂಗಳಿಂದಲೂ ಎದುರು ನೋಡುತ್ತಿರುವೆವು, ಏಕೆಂದರೆ, ನಮ್ಮ ಸರ್ಕಾರ ನಡೆಯಬೇಕಾದ ದಿಶೆಯೊಂದಿಗೇ ಅದರ ಪ್ರಮುಖ ತತ್ವಗಳು ಹೊಂದಿಕೊಳ್ಳುತ್ತಿವೆ' ಎಂದು ರೊನಾ ಆಂಬ್ರೂಸ್‌ ವರದಿಗಾರರಿಗೆ ತಿಳಿಸಿದರು. ಕ್ಯೋಟೋ ಪ್ರಮಾಣಗಳೊಂದಿಗೆ ಹೊಂದಿಕೊಳ್ಳುವ ಯತ್ನಗಳಿಗೆ ಸಹಾಯಧನದಲ್ಲಿ ಕಡಿವಾಣ ಹಾಗೂ ಹಾರ್ಪರ್‌ ಸರ್ಕಾರ ಇದರ ಸ್ಥಾನದಲ್ಲಿ ಹೊಸ ಯೋಜನೆ ರೂಪಿಸುತ್ತಿರುವುದರ ಬಗ್ಗೆ 2 ಮೇ 2006ರಂದು ವರದಿಯಾಯಿತು. ನವೆಂಬರ್‌ 2006ರಲ್ಲಿ ನಡೆದ UN ಹವಾಮಾನ ಬದಲಾವಣೆ ಕುರಿತು ಸಮ್ಮೇಳನದಲ್ಲಿ ಸಹ-ಅಧ್ಯಕ್ಷತೆ ವಹಿಸಿದ್ದ ಕೆನಡಾ ಸರ್ಕಾರದ ನಿಲುವು ಪರಿಸರ ಸಂಘಟನೆಗಳು ಮತ್ತು ಇತರೆ ಸರ್ಕಾರಗಳಿಂದ ವ್ಯಾಪಕ ಟೀಕೆಗಳಿಗೆ ಒಳಗಾದವು. 4 ಜನವರಿ 2007ರಂದು, ರೊನಾ ಆಂಬ್ರೂಸ್‌ ಪರಿಸರ ಸಚಿವಾಲಯದಿಂದ ಅಂತರ-ಸರ್ಕಾರಿ ವ್ಯವಹಾರಗಳ ಸಚಿವರಾದರು. ಪರಿಸರ ಖಾತೆಯನ್ನು ಜಾನ್ ಬೇಯ್ರ್ಡ್‌ರಿಗೆ ನೀಡಲಾಯಿತು. ಇವರು ಖಜಾನೆ(ಬೊಕ್ಕಸ) ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದರು.ಕೈಗಾರಿಕೆಗಳಿಗೆ ಹೊರಸೂಸುವಿಕೆಗಳ ತಡೆಗಟ್ಟುವ ಗುರಿಗಳನ್ನು ನಿಗದಿಪಡಿಸುವುದಕ್ಕಾಗಿ ಒಕ್ಕೂಟದ ಸಂಯುಕ್ತ ಸರ್ಕಾರ ಶಾಸನ ಹೊರಡಿಸಿತ್ತು. ಆದರೆ ಅದು 2012ರ ತನಕ ಜಾರಿಗೊಳ್ಳುವುದಿಲ್ಲ. ಕ್ಯೋಟೋದ 1990 ರ ಪ್ರಮಾಣಿತ ಅವಧಿಗೆ ಬದಲಾಗಿ, ಇದರ ಮೂಲ ಅವಧಿ ಈಗ 2006 ಆಗಲಿದೆ. ಶಾಸನದಲ್ಲಿ ಬದಲಾವಣೆ ತರಲು ಸರ್ಕಾರ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ.ಕ್ಯೋಟೊ ಶಿಷ್ಟಾಚಾರದಡಿ ಕೆನಡಾ ತನ್ನ ಜಾಗತಿಕ ಹವಾಮಾನ ಬದಲಾವಣೆ ಬದ್ಧತೆಗಳಿಗೆ ಅನುಗುಣವಾಗಿ ಸರ್ಕಾರದ ಮೇಲೆ ಒತ್ತಾಯಿಸಲು ಲಿಬರಲ್‌ ಪಕ್ಷದ ಪಾಬ್ಲೊ ರಾಡ್ರಿಗ್ಜ್‌ ಒಂದು ಖಾಸಗಿ ಸದಸ್ಯರ ಮಸೂದೆಯನ್ನು ಪ್ರಸ್ತಾಪಿಸಿದರು. ಲಿಬರಲ್‌ಗಳ ಬೆಂಬಲದೊಂದಿಗೆ, ನ್ಯೂ ಡೆಮೊಕ್ರಟಿಕ್‌ ಪಾರ್ಟಿ ಮತ್ತು ಬ್ಲಾಕ್‌ ಕ್ಯೂಯೆಬೆಕೊಯ್‌ ಮತ್ತು ಸರ್ಕಾರದ ಅಲ್ಪಮತ ಸ್ಥಿತಿಯ ಕಾರಣ, ಮಸೂದೆಯನ್ನು ಹೌಸ್‌ ಆಫ್‌ ಕಾಮನ್ಸ್‌ನಲ್ಲಿ 14 ಫೆಬ್ರವರಿ 2007ರಂದು 161-113 ಮತಗಳಿಂದ ಅಂಗೀಕರಿಸಲಾಯಿತು. ಸೆನೇಟ್‌ ಮಸೂದೆ ಅಂಗೀಕರಿಸಿದ ನಂತರ 22 ಜೂನ್‌ 2007ರಂದು ರಾಯಲ್‌ ಅಸೆಂಟ್‌ ನ ಸಮ್ಮತಿ ಪಡೆಯಿತು. ಆದರೂ, ಆರ್ಥಿಕ ಕಾರಣಗಳನ್ನು ನೀಡಿದ ಸರ್ಕಾರ, 60 ದಿನಗಳೊಳಗೆ ವಿಸ್ತೃತ ಯೋಜನೆ ತಯಾರಿಸುವಂತೆ ಒತ್ತಾಯಿಸುವ ಈ ಮಸೂದೆಯನ್ನು ನಿರ್ಲಕ್ಷ್ಯಿಸಿತು. ಕ್ಯೋಟೋ ಶಿಷ್ಟಾಚಾರದಡಿ ಹಸಿರುಮನೆ ಅನಿಲ ಹೊರಸೂಸುವಿಕೆಗಳ ಕಡಿತಗೊಳಿಸುವ ಕ್ರಮದೊಂದಿಗೆ ಹೊಂದಿಕೊಳ್ಳದ ಒಕ್ಕೂಟ ಸರ್ಕಾರದ ವಿರುದ್ಧ ಫ್ರೆಂಡ್ಸ್‌ ಆಫ್‌ ದಿ ಅರ್ತ್‌ ಸಂಘಟನೆಯು ಮೇ 2007ರಲ್ಲಿ ಮೊಕದ್ದಮೆ ಹೂಡಿತು. ಕೆನಡಾ ದೇಶದ ಮೇಲಿರುವ ಅಂತಾರಾಷ್ಟ್ರೀಯ ಒಪ್ಪಂದ ಉಲ್ಲಂಘಿಸುವ ವಾಯುಮಾಲಿನ್ಯ ತಡೆಗಟ್ಟುವ ಬಗ್ಗೆ ಕೆನಡಿಯನ್‌ ಪರಿಸರೀಯ ರಕ್ಷಣಾ ಕಾಯಿದೆಯ ಒಂದು ವಿಧಿಯು ಈ ನಿರ್ಬಂಧಕ್ಕೆ ಆಧಾರವಾಗಿತ್ತು. ಒಪ್ಪಂದಕ್ಕೆ ಕೆನಡಾದ ನಿರ್ಬಂಧವು 2008ರಲ್ಲಿ ಆರಂಭವಾಯಿತು.ಸಂಯುಕ್ತ ನೀತಿ ಏನೇ ಇರಲಿ, ಕ್ಯುಯೆಬೆಕ್‌, ಆಂಟಾರಿಯೊ, ಬ್ರಿಟಿಷ್‌ ಕೊಲಂಬಿಯಾ ಮತ್ತು ಮ್ಯಾನಿಟೊಬಾ ಸೇರಿದಂತೆ ಕೆಲವು ಪ್ರಾಂತ್ಯಗಳು, ವೆಸ್ಟರ್ನ್‌ ಕ್ಲೈಮೇಟ್‌ ಇನಿಷ್ಯೇಟಿವ್‌ನ ಅಂಗವಾಗಿ ಹೊರಸೂಸುವಿಕೆಗಳನ್ನು ಕಡಿಮೆ ಮಾಡಲು ನೀತಿನಿಯಮಗಳನ್ನು ಅನುಸರಿಸುತ್ತಿವೆ. ಆಲ್ಬರ್ಟಾ ಕಾರ್ಬನ್‌ ಆಫ್ಸೆಟ್‌ ಪ್ರೊಗ್ರಾಮ್‌ನ್ನು 2003ರಿಂದಲೂ ಜಾರಿಗೊಳಿಸಿದೆ .ಹವಾಮಾನ ಬದಲಾವಣೆಯ ಅಪಾಯವನ್ನು ಸೂಕ್ಷ್ಮವಾಗಿ ಪರಿಗಣಿಸಲಾಗಿದೆ. ಮುಂದಿನ ಪೀಳಿಗೆಗಳ ಸುರಕ್ಷತೆ ಮತ್ತು ಆರೋಗ್ಯ ಕಾಪಾಡಲು ಎಲ್ಲಾ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ಕೆನಡಾದ ರಾಜಕಾರಣಿಗಳ ಮೇಲೆ ಒತ್ತಡ ಹೇರಲು ಕೆನಡಾದಲ್ಲಿನ ಪರಿಸರವಾದಿ ಸಂಘಟನೆಗಳು ಒಟ್ಟಾಗಿ ಸಹಕರಿಸುತ್ತಿವೆ. ಭಾಗವಹಿಸುವ ಸಂಘಟನೆಗಳು ಕ್ಯೋಟೋಪ್ಲಸ್‌ ಎಂಬ ಮನವಿ ಸಿದ್ದಪಡಿಸಿವೆ. ಇದಕ್ಕೆ ಅನುಮೋದಿಸುವವರು ಕೆಳಕಂಡ ಸಂಹಿತೆಗಳಿಗೆ ಬದ್ಧರಾಗುತ್ತಾರೆ:
• ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು 1990ರ ಮಟ್ಟದಿಂದ 2020ರಷ್ಟರೊಳಗೆ ಕನಿಷ್ಟ ಪಕ್ಷ 25%ರಷ್ಟು ಕಡಿಮೆ ಮಾಡಲು ರಾಷ್ಟ್ರೀಯ ಉದ್ದೇಶದ ಜಾರಿಗಾಗಿ ಪ್ರಾಧಿಕಾರ ರಚನೆ;
• ಈ ಗುರಿ ತಲುಪಲು ಪರಿಣಾಮಕಾರಿ ರಾಷ್ಟ್ರೀಯ ಯೋಜನೆ ಜಾರಿಗೊಳಿಸಿ, ಇಂಗಾಲವನ್ನು ಸೀಮಿತ ಮಟ್ಟಗಳಲ್ಲಿ ಬಳಸಿ, ಆರ್ಥಿಕತೆ ನಿರ್ಮಾಣ ಮಾಡುವುದರಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ನೆರವು ನೀಡುವುದು; ಹಾಗೂ
• ಡಿಸೆಂಬರ್‌ 2009ರಲ್ಲಿ ಕೋಪೆನ್‌ಹ್ಯಾಗನ್‌ನಲ್ಲಿ ನಡೆಯಲಿರುವ ಯುನೈಟೆಡ್‌ ನೇಷನ್ಸ್ ಕ್ಲೈಮೇಟ್‌ ಚೇಂಜ್‌ ಕಾನ್ಫೆರೆನ್ಸ್‌ನಲ್ಲಿ ಕ್ಯೋಟೋ ಶಿಷ್ಟಾಚಾರದ ಎರಡನೆಯ ಸದೃಢ ಹೆಜ್ಜೆಯನ್ನು ಅಯ್ದುಕೊಳ್ಳುವುದು.ಕ್ಯೋಟೋಪ್ಲಸ್‌ಕೂಡಾ ಒಂದು ಹವಾಮಾನ ಬದಲಾವಣೆಗೆ ಸರಕಾರಗಳ ತ್ವರಿತ ಕಾರ್ಯಾಚರಣೆಗಾಗಿ ಹುಟ್ಟಿಕೊಂಡ ರಾಷ್ಟ್ರೀಯ, ಪಕ್ಷಾವಲಂಬಿಯಲ್ಲದ, ಕೋರಿಕೆಯ ಮೇರೆಗೆ ಕ್ರಮಗಳನ್ನು ಗಮನಿಸುವ ಸಂಘಟನೆಯಾಗಿದೆ. ಕ್ಲೈಮೆಟ್ ಆಕ್ಷನ್‌ ನೆಟ್ವರ್ಕ್‌ ಕೆನಡಾ, ಸಿಯರಾ ಕ್ಲಬ್‌ ಕೆನಡಾ, ಸಿಯರಾ ಯುತ್ ಕೋಯಲಿಷನ್‌, ಆಕ್ಸ್‌‍ಫಾಮ್‌ ಕೆನಡಾ, ಕೆನಡಿಯನ್ ಯುತ್‌ ಕ್ಲೈಮೆಟ್‌ ಕೋಯಲಿಷನ್‌, ಗ್ರೀನ್‌ಪೀಸ್‌ ಕೆನಡಾ, KAIROS: ಕೆನಡಿಯನ್‌ ಎಕ್ಯುಮೆನಿಕಲ್‌ ಜಸ್ಟಿಸ್‌ ಇನಿಶಿಯೆಟೀವ್ಸ್‌ ಅಂಡ್‌ ಡೇವಿಡ್‌ ಸುಜುಕಿ ಫೌಂಡೇಶನ್‌ ಸೇರಿದಂತೆ ಸುಮಾರು ಐವತ್ತು ಪಾಲುದಾರ ಸಂಸ್ಥೆಗಳಿವೆ.

ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ

ಕಳೆದ 2008 ಆಗಸ್ಟ್‌ 27ನಲ್ಲಿ ಸೆಂಟರ್‌ ಫಾರ್‌ ಗ್ಲೋಬಲ್‌ ಡೆವಲಪ್‌ಮೆಂಟ್‌ನ ವರದಿ ಪ್ರಕಾರ ಚೀನಾದ ಇಂಧನ ಶಕ್ತಿ ಉತ್ಪಾದನೆಯಿಂದಾಗಿ CO2 ಅತಿ ಹೆಚ್ಚು ಮಾಲಿನ್ಯ ಹೊರಸೂಸುವ ದೇಶವಾಗಿದೆ. ಮೊದಲು ಈ ಸ್ಥಾನವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಆಕ್ರಮಿಸಿತ್ತು. ಪ್ರತಿ ವ್ಯಕ್ತಿಯ ಆಧಾರದ ಮೇಲೆ ಪರಿಗಣಿಸಿದರೆ ಶಕ್ತಿ ಉತ್ಪಾದನಾ ವಲಯದಲ್ಲಿ U.S. ಹೊರಸೂಸುವಿಕೆ ಪ್ರಮಾಣವು ಚೀನಾಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.ವಿದ್ಯುತ್ ಶಕ್ತಿ ಉತ್ಪಾದನಾ ವಲಯದಲ್ಲಿ ಹತ್ತು ಅತಿ ಹೆಚ್ಚು ಹೊಗೆ ಹೊರಸೂಸುವ ದೇಶಗಳೆಂದರೆ ಚೀನಾ, ಅಮೆರಿಕಾ ಸಂಯುಕ್ತ ಸಂಸ್ಥಾನ, ಭಾರತ, ರಷ್ಯಾ, ಜರ್ಮನಿ, ಜಪಾನ್‌, ಯುನೈಟೆಡ್‌ ಕಿಂಗ್‌ಡಮ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಮತ್ತು ದಕ್ಷಿಣ ಕೊರಿಯಾ. ಒಂದು ವೇಳೆ ಯುರೋಪಿಯನ್‌ ಒಕ್ಕೂಟದ 27 ಸದಸ್ಯ ದೇಶಗಳನ್ನು ಒಂದು ದೇಶವಾಗಿ ಪರಿಗಣಿಸಿದರೆ, ಚೀನಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ನಂತರದ ಮೂರನೇ ಸ್ಥಾನದಲ್ಲಿ E.U. ಮೂರನೇ ಅತಿ ದೊಡ್ಡ CO2 ಮಾಲಿನ್ಯಗಳ ಹೊರಸೂಸುವ ಸ್ಥಾನವಾಗುವುದು. ಪ್ರತಿ ವ್ಯಕ್ತಿಯ ಆಧಾರದ ಮೇಲೆ ಶಕ್ತಿ ಉತ್ಪಾದನಾ ವಲಯದಿಂದ ಹೊರಸೂಸುವಿಕೆಯಲ್ಲಿ E.U. ಮೊದಲನೇ ಸ್ಥಾನದಲ್ಲಿದ್ದು, U.S. ನಂತರದ ಸ್ಥಾನದಲ್ಲಿರುವುದು. U.S.ನಲ್ಲಿ ವಿದ್ಯುತ್ ಉತ್ಪಾದನೆಯಿಂದಾಗಿ ವರ್ಷಕ್ಕೆ ತಲಾ 9.5 ಟನ್‌ನಷ್ಟು CO2 ಉತ್ಪಾದನೆಯಾಗುವುದು. ಇದರ ಪ್ರಮಾಣವು ಚೀನಾದಲ್ಲಿ 2.4 ಟನ್‌ನಷ್ಟು, ಭಾರತದಲ್ಲಿ 0.6 ಮತ್ತು ಬ್ರೆಜಿಲ್‌ನಲ್ಲಿ 0.1ನಷ್ಟಿದೆ. E.U.ನಲ್ಲಿ ವಿದ್ಯುತ್‌ ಮತ್ತು ಶಾಖ ಉತ್ಪಾದನೆಯಿಂದಾಗಿ ಸರಾಸರಿ ಪ್ರತಿ ವ್ಯಕ್ತಿ ಹೊರಸೂಸುವಿಕೆ ಪ್ರಮಾಣವು ಪ್ರತಿ ವರ್ಷಕ್ಕೆ 3.3 ಟನ್‌ಗಳಷ್ಟಿದೆ. ಆಸ್ಟ್ರೇಲಿಯಾದಲ್ಲಿ ಮಾತ್ರ ಇದರ ಪ್ರಮಾಣ ಪ್ರತಿ ವರ್ಷಕ್ಕೆ 10 ಟನ್‌‌ಗಳಿಗಿಂತ ಜಾಸ್ತಿಯಿದೆ. ಇದು U.Sಗಿಂತ ಹೆಚ್ಚು ಇಂಧನ ಶಕ್ತಿ ಉತ್ಪಾದನೆಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದ ಮಾಲಿನ್ಯ ಹೊರಸೂಸುತ್ತದೆ.ಇಸವಿ 2008 ಮಾರ್ಚ್‌ 27ರಂದು ಕೆನಡಾದ ಅರ್ಥಶಾಸ್ತ್ರಜ್ಞರಾದ ಜೆಫ್‌ ರುಬಿನ್‌ ಮತ್ತು ಬೆಂಜಮಿನ್‌ ಟಾಲ್‌ರವರು U.S. ಎನರ್ಜಿ ಇನ್‌ಫಾರ್ಮೆಷನ್‌ ಎಡ್ಮಿನಿಸ್ಟ್ರೇಷನ್‌ ಸೇರಿದಂತೆ ವಿವಿಧ ಮೂಲಗಳ ಮಾಹಿತಿ ಒಳಗೊಂಡಿರುವ ದಿ ಕಾರ್ಬನ್‌ ಟ್ಯಾರಿಫ್‌ ಎನ್ನುವ ವರದಿ ಪ್ರಕಟಿಸಿದರು. ಈ ವರದಿಯಲ್ಲಿ ರುಬಿನ್‌ ಮತ್ತು ಟಾಲ್‌ರು ಈ ಕೆಳಗಿನ ಅಂಶಗಳ ಆಧಾರದ ಮೇಲೆ ಇಂಗಾಲದ ಮೇಲಿನ ಸುಂಕದ ಪ್ರಸ್ತಾಪ ಮಾಡಿದ್ದಾರೆ:

  • ಈ ದಶಕದ ಪ್ರಾರಂಭದಿಂದ ಚೀನಾದ GHG ಹೊರಸೂಸುವಿಕೆಗಳ ಪ್ರಮಾಣವು 120%ರಷ್ಟು ಹೆಚ್ಚಾಗಿದ್ದು, ಅದೇ ಅವಧಿಯಲ್ಲಿ U.S. GHG ಹೊರಸೂಸುವಿಕೆ ಪ್ರಮಾಣವು 16%ರಷ್ಟು ಹೆಚ್ಚಾಗಿದೆ;
  • ಚೀನಾ ಅಮೆರಿಕಾವನ್ನು ಮೀರಿ ಅತಿ ಹೆಚ್ಚು GHG ಹೊರಸೂಸುವ ದೇಶವಾಗಿದೆ. ಅಲ್ಲದೇ ಜಾಗತಿಕ GHG ಹೊರಸೂಸುವಿಕೆಯ ಐದರಲ್ಲಿನ ಒಂದು ಭಾಗದಷ್ಟು ಇದು ಹೊರಬಿಡುವುದು;
  • ಚೀನಾವು OECD ದೇಶಗಳಿಗಿಂತ ಹೆಚ್ಚಿನ GHG ಅನ್ನು ಹೊಂದಿರುವ ಇಂಧನ ಮೂಲವಾದ ಕಲ್ಲಿದ್ದಲು ಉತ್ಪನ್ನದ ಸ್ಥಾವರಗಳನ್ನು ಒಳಗೊಂಡಿದೆ. ಇಂದಿನಿಂದ ಅಂದಾಜು ಮಾಡಿದರೆ 2012ವರೆಗಿನ ಅವಧಿಯಲ್ಲಿ ಚೀನಾದ ಕಲ್ಲಿದ್ದಲು ಆಧಾರಿತ ಹೊರಸೂಸುವಿಕೆಗಳ ಏರಿಕೆಯು, ಅಮೆರಿಕಾದ ಪೂರ್ಣಪ್ರಮಾಣದ ಕಲ್ಲಿದ್ದಲು ಆಧಾರಿತ ಇಂಧನ ಮೂಲಗಳ ಉತ್ಪಾದನಾ ಘಟಕಗಳ ಹೊರಸೂಸುವಿಕೆಯ ಮಟ್ಟಕ್ಕಿಂತ ಹೆಚ್ಚಾಗುವುದು.ಜೂನ್‌ 2007ರಲ್ಲಿ, ಚೀನಾವು 62-ಪುಟಗಳ ಹವಾಮಾನ ಬದಲಾವಣೆ ವೈಪರಿತ್ಯಗಳ ಪರಿಹಾರಕ್ಕೆ ಯೋಜನೆಯೊಂದನ್ನು ಪ್ರಕಟಿಸಿತು. ಅಲ್ಲದೇ ತನ್ನ ಇಂಧನ ನೀತಿಯಲ್ಲಿ ಹವಾಮಾನ ಬದಲಾವಣೆಯನ್ನು ಪ್ರಮುಖ ವಿಷಯವಾಗಿಸುವ ಭರವಸೆ ನೀಡಿತು. ಅಭಿವೃದ್ಧಿ ಹೊಂದಿದ ದೇಶಗಳು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಬದಲು “ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿವೆ”. ಅವು UNFCCCಗೆ ಒಪ್ಪಿ, ಅದಕ್ಕೆ ಸಹಿ ಹಾಕುವುದರಿಂದ, ಅವುಗಳು "ಸಾಮಾನ್ಯ ತತ್ವಗಳೊಂದಿಗೆ, ವಿವಿಧ ಜವಾಬ್ದಾರಿಗಳನ್ನು" ಹೊಂದಿವೆ. ಚೀನಾದ ಇಂಧನ ನೀತಿ ಸರಿಯಿಲ್ಲವೆಂದು ಟೀಕೆಗಳಿಗೆ ಗುರಿಯಾಗಿದೆ. ವಿವಿಧ ದೇಶಗಳಿಗೆ ಹೋಲಿಸುವಾಗ, ಈ ಟೀಕೆ ಸಮಂಜಸವೆನಿಸಲಾರದು. ಏಕೆಂದರೆ ಚೀನಾ ಜಗತ್ತಿನ ಐದನೇ ಒಂದರಷ್ಟು ಜನಸಂಖ್ಯೆ ಹೊಂದಿದ್ದರೂ ಅದರ ತಲಾ ಹೊರಸೂಸುವಿಕೆಯು ಕೈಗಾರಿಕೀಕರಣ ಜಗತ್ತಿನಲ್ಲಿನ ದೇಶಗಳಿಗೆ ಹೋಲಿಸಿದಾಗ ಪ್ರಮಾಣ ಕಡಿಮೆಯಾಗಿದೆ. E.U ಗೆ U.S., ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಜಪಾನ್‌, ಮತ್ತು ದಕ್ಷಿಣ ಕೊರಿಯಾಗಳಲ್ಲಿನ ಜನಸಂಖ್ಯೆ ಸೇರಿಸಿದರೂ ಸಹ, ಚೀನಾ ಜನಸಂಖ್ಯೆಯು ಅದನ್ನು ಮೀರಿ ಕೆಲವು ದಶಲಕ್ಷದಷ್ಟು ಹೆಚ್ಚಾಗುವುದು. ವಾರ್ಷಿಕ ಹೊರಸೂಸುವಿಕೆಗಳ ಹೋಲಿಕೆಯು ಅಭಿವೃದ್ಧಿ ಹೊಂದಿದ ದೇಶಗಳ ಒಟ್ಟು ಹೊರಸೂಸುವಿಕೆಯನ್ನು ನಿರ್ಲಕ್ಷಿಸುವುದು. ಇಂಗಾಲ ಸೋರಿಕೆಯ ಅಧ್ಯಯನವು ಚೀನಾದ ಹೊರಸೂಸುವಿಕೆಯಲ್ಲಿ ಕಾಲು ಭಾಗ ಮಾತ್ರ ಅಭಿವೃದ್ಧಿ ಹೊಂದಿದ ದೇಶಗಳಿಗೆ ರಪ್ತುಮಾಡುವ ಸರಕುಗಳ ಉತ್ಪಾದನೆಯಿಂದ ಉಂಟಾಗುವುದು ಎಂದು ಹೇಳಲಾಗಿದೆ.

ಯೂರೋಪಿಯನ್‌‌ ಒಕ್ಕೂಟ

ಕಳೆದ 31 ಮೇ 2002ರಲ್ಲಿ, UNಗೆ ಯುರೋಪಿಯನ್‌ ಒಕ್ಕೂಟದ ಹದಿನೈದು ಸದಸ್ಯ ರಾಷ್ಟ್ರಗಳು ಮಲಿನ ಹೊಗೆಯ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಊರ್ಜಿತಗೊಳಿಸುವಿಕೆಯ ವರದಿ ಸಲ್ಲಿಸಿದವು. EUನಿಂದ 22%ರಷ್ಟು ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಾಗುತ್ತದೆ. ಅದು 1990ನಿಂದ ಸರಾಸರಿ 8% ಹೊರಸೂಸುವಿಕೆ ಮಟ್ಟಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿತು. ಡೆನ್ಮಾರ್ಕ್‌ ತನ್ನ ಹೊರಸೂಸುವಿಕೆಯನ್ನು 21%ರಷ್ಟು ಕಡಿಮೆಗೊಳಿಸಿದೆ. 10 ಜನವರಿ 2007ರಲ್ಲಿ, ಯುರೋಪಿಯನ್‌ ಕಮಿಷನ್‌ 2020ರ ಹೊತ್ತಿಗೆ GHG ಹೊರಸೂಸುವಿಕೆಯನ್ನು ಏಕಪಕ್ಷೀಯವಾಗಿ 20% ಇಳಿಕೆ ಮಾಡುವುದನ್ನು ಒಳಗೊಂಡಿರುವ ಯುರೋಪಿಯನ್‌ ಒಕ್ಕೂಟ ಇಂಧನ ನೀತಿಗಾಗಿ ಯೋಜನೆಗಳನ್ನು ಪ್ರಕಟಿಸಿತು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂಜರಿಯುತ್ತಿರುವ ದೇಶಗಳ ಬೆಂಬಲ ಪಡೆಯುವುದಕ್ಕಾಗಿ, EU ಕ್ಯೋಟೋ ಶಿಷ್ಟಾಚಾರದ ಪ್ರಮುಖ ಖಾಯಂ ಬೆಂಬಲಿಗನಾಗಿತ್ತು.ಡಿಸೆಂಬರ್‌ 2002ನಲ್ಲಿ ಇಂತಹ ದೇಶಗಳನ್ನು ಸಂದರ್ಶಿಸುವ ಪ್ರಯತ್ನದಲ್ಲಿ, EU ಹೊರಸೂಸುವಿಕೆಗಳ ವಹಿವಾಟು ವ್ಯವಸ್ಥೆಯನ್ನು ರಚಿಸಿತು. ಕೋಟಾಗಳು(ಇಳಿಕೆ ಪ್ರಮಾಣದ ನಿಗದಿ) ಈ ಆರು ಪ್ರಮುಖ ಉದ್ಯಮಗಳನ್ನು ಪರಿಚಯಿಸಿವೆ: ಇಂಧನ, ಉಕ್ಕು, ಸಿಮೆಂಟ್‌, ಗಾಜು, ಇಟ್ಟಿಗೆ ಮತ್ತು ಕಾಗದ/ಕಾರ್ಡ್‌ಬೋರ್ಡ್‌. ನಿಯಮಗಳ ಪ್ರಕಾರ ಸದಸ್ಯ ರಾಷ್ಟ್ರಗಳು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ವಿಫಲವಾದರೆ ದಂಡ ವಿಧಿಸಲಾಗುವುದು. 2005ರಲ್ಲಿ ಪ್ರತಿ ಟನ್‍‌‌ ಇಂಗಾಲದ ಡೈ ಆಕ್ಸೈಡ್‌ €40ನಷ್ಟಿದ್ದ ದಂಡದ ಪ್ರಮಾಣವು, 2008ರಲ್ಲಿ ಪ್ರತಿ ಟನ್‌ಗೆ €100ನಷ್ಟಾಗಿತ್ತು. ಪ್ರಸ್ತುತ EU ಅಂದಾಜುಗಳ ಪ್ರಕಾರ 2008ರ ಹೊತ್ತಿಗೆ, EUಯ ಹೊರಸೂಸುವಿಕೆ ಮಟ್ಟವು 1990ನಲ್ಲಿದ್ದ ಮಟ್ಟಕ್ಕಿಂತ 4.7%ರಷ್ಟು ಕಡಿಮೆಯಾಗುವುದು.ಕಳೆದ 1990 ಮತ್ತು 2004ರ ನಡುವಿನ ಅವಧಿಯಲ್ಲಿ EUಯ ಸಾರಿಗೆ CO2 ಹೊರಸೂಸುವಿಕೆಯ ಪ್ರಮಾಣವು 32%ರಷ್ಟು ಹೆಚ್ಚಾಗಿದೆ. 1990ರ CO2 ಹೊರಸೂಸುವಿಕೆಯಲ್ಲಿ ಸಾರಿಗೆ ವಲಯದ ಪಾಲು 21%ರಷ್ಟಿತ್ತು. ಆದರೆ 2004ರ ಹೊತ್ತಿಗೆ ಅದು 28%ಕ್ಕೆ ಏರಿತು.EUಯು ಯಾವುದೇ ವಿವಾದವಿಲ್ಲದೆ ಶಿಷ್ಟಾಚಾರವನ್ನು ಜಾರಿಗೊಳಿಸಿತು. ಆದರೆ, ಸುಮಾರು 8%ರಷ್ಟು ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಬದಲು, ಇತರ ಅಭಿವೃದ್ಧಿ ಹೊಂದಿದ ದೇಶಗಳು ಶಿಷ್ಟಾಚಾರವನ್ನು ಕಾರ್ಯರೂಪಕ್ಕೆ ತರುವವರೆಗೆ, ಎಲ್ಲಾ EU ಸದಸ್ಯ ದೇಶಗಳು 15%ರಷ್ಟು ಹೊರಸೂಸುವಿಕೆಯನ್ನು ಕಡಿತಗೊಳಿಸಬೇಕು. ಸಂಪೂರ್ಣ EUಯ 15%ರಷ್ಟು ಗುರಿ ತಲುಪಲು ಹಿಂದಿನ ಪೂರ್ವ ಜರ್ಮನಿಯಲ್ಲಿ ಭಾರಿ ಇಳಿಕೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎನ್ನುವ ಟೀಕೆಯಿದೆ. ಹಾಗೆಯೇ, ಈಗ EUಯ ಸದಸ್ಯ ದೇಶಗಳಾಗಿರುವ ಹಿಂದಿನ ವಾರ್ಸಾವ್‌‌ ಪ್ಯಾಕ್ಟ್‌ ದೇಶಗಳ ಹೊರಸೂಸುವಿಕೆ ಮಟ್ಟಗಳು ತಮ್ಮ ಆರ್ಥಿಕ ಪುನರ್ರಚನೆಯಿಂದ ಈಗಾಗಲೇ ಇಳಿಕೆಕಂಡಿದೆ. ಅಂದರೆ ಆ ಪ್ರದೇಶದ 1990 ವರ್ಷದ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡರೆ, ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಯುರೋಪಿಯನ್‌ ದೇಶಗಳಲ್ಲಿ ಹೆಚ್ಚಾಗಿದೆ. ಅಲ್ಲಿಯ ಅರ್ಥವ್ಯವಸ್ಥೆಗಳು U.Sನ ಸಂಭಾವ್ಯ ಸ್ಪರ್ಧಿಗಳಾಗಿವೆ.EU (ಯುರೋಪಿಯನ್‌ ಕಮ್ಯುನಿಟಿಯಂತೆ) ಮತ್ತು ಅದರ ಸದಸ್ಯ ರಾಷ್ಟ್ರಗಳು ಕ್ಯೋಟೋ ಒಪ್ಪಂದಕ್ಕೆ ಸಹಿ ಹಾಕಿವೆ.
ಗ್ರೀಸ್‌ನಲ್ಲಿ ಭೂಮಿ ದಿನಾಚರಣೆಯಂದು (22 ಎಪ್ರಿಲ್‌ 2008) ಹೊರಸೂಸುವಿಕೆಯ ಮೇಲ್ವಿಚಾರಣೆ ಮತ್ತು ಅದರ ವರದಿ ನೀಡಲು ಸರಿಯಾದ ಕಾರ್ಯವಿಧಾನ ರಚಿಸಲು ವಿಫಲವಾದ್ದರಿಂದ ಅದನ್ನು ಕ್ಯೋಟೋ ಶಿಷ್ಟಾಚಾರದಿಂದ ಹೊರಗಿಡಲಾಗಿದೆ. ವರದಿ ಮಾಡಲು ಯಾವುದೇ ದತ್ತಾಂಶವಿಲ್ಲದ ಕಾರಣ ಕನಿಷ್ಠ ಜವಾಬ್ದಾರಿ ಮತ್ತು ತಪ್ಪುತಪ್ಪಾದ ವರದಿ ದೊರೆಯುವ ಸಾಧ್ಯತೆಯಿದೆ.ಏಳು ತಿಂಗಳ ಅಮಾನತಿನ ನಂತರ (ನವೆಂಬರ್‌ 15ರಂದು) ಕ್ಯೋಟೋ ಶಿಷ್ಟಾಚಾರದ ಹೊರಸೂಸುವಿಕೆ ವಹಿವಾಟಿನ ವ್ಯವಸ್ಥೆಗೆ ಗ್ರೀಸ್‌ನ್ನು ಮತ್ತೆ ಸೇರಿಸಲು ಸಂಯುಕ್ತ ರಾಷ್ಟ್ರ ಸಂಘ ನಿರ್ಧರಿಸಿತು.

ಜರ್ಮನಿ

ಸುಮಾರು 1990 ಮತ್ತು 2008ರ ನಡುವಿನ ಅವಧಿಯಲ್ಲಿ ಜರ್ಮನಿ ಅನಿಲ ಹೊರಸೂಸುವಿಕೆಯನ್ನು 22.4%ರಷ್ಟು ಕಡಿಮೆಮಾಡಿತು. 28 ಜೂನ್‌ 2006ರಂದು E.U. ಆಂತರಿಕ ಹೊರಸೂಸುವಿಕೆ ವ್ಯಾಪಾರ ವ್ಯವಸ್ಥೆಯಡಿ ತನ್ನ ಕಲ್ಲಿದ್ದಲು ಉದ್ಯಮ ಹೊರತುಪಡಿಸುವುದಾಗಿ ಜರ್ಮನ್‌ ಸರಕಾರ ಪ್ರಕಟಿಸಿತು. ಬರ್ಲಿನ್‌ನಲ್ಲಿರುವ ಜರ್ಮನ್‌ ಇನ್‌ಸ್ಟಿಟ್ಯುಟ್‌ ಫಾರ್‌ ಇಕನಾಮಿಕ್‌ ರಿಸರ್ಚ್‌ನ ಇಂಧನ ವಿಷಯದ ಪ್ರಾಧ್ಯಾಪಕರಾಗಿರುವ ಕ್ಲೌಡಿಯಾ ಕೆಂಫರ್ಟ್‌ರು ಹೀಗೆ ಹೇಳುವರು: "ಸ್ವಚ್ಛ ಪರಿಸರ ಮತ್ತು ಕ್ಯೋಟೋ ಶಿಷ್ಟಾಚಾರದ ಬೆಂಬಲಕ್ಕಾಗಿ, ಸಂಸತ್ತಿನ ಈ ನಿರ್ಣಯ ತುಂಬಾ ಅಸಮಾಧಾನಕರವಾಗಿದೆ. ಈ ನಿರ್ಣಯಲ್ಲಿ ಹಿಂದೆ ಇಂಧನ ಲಾಬಿಗಳು ಪ್ರಮಖ ಪಾತ್ರ ವಹಿಸಿದೆ." ಆದರೂ, ಜರ್ಮನಿ ಸ್ವಯಂ ಪ್ರೇರಣೆಯಿಂದ 1990ರಲ್ಲಿದ್ದ CO2 ಹೊರಸೂಸುವಿಕೆ ಪ್ರಮಾಣಕಿಂತ 21%ರಷ್ಟು ಕಡಿಮೆಯಾಗಿದೆ. ಆದರೆ ಹೊರಸೂಸುವಿಕೆಯು ಆವಾಗಾಗಲೇ 19%ರಷ್ಟು ಕಡಿಮೆಯಾಗಿತ್ತು. E.Uಯ 75% ಇಳಿಕೆಯಲ್ಲಿ ಜರ್ಮನಿಯು 8% ಕಡಿಮೆಗೊಳಿಸುವ ಭರವಸೆ ನೀಡಿದೆ.

ಯುನೈಟೆಡ್ ಕಿಂಗ್‍ಡಮ್

ಯುನೈಟೆಡ್‌ ಕಿಂಗ್‌ಡಮ್‌ನ ಇಂಧನ ನೀತಿ, ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಇಳಿಕೆಗಾಗಿ ಗುರಿಗಳನ್ನು ಸಂಪೂರ್ಣವಾಗಿ ಅನುಮೋದಿಸಿತು. ಅಲ್ಲದೇ ಇಳಿಕೆ ಪ್ರಮಾಣದ ಆಧಾರದಲ್ಲಿ ರಾಷ್ಟ್ರೀಯ ಹೊರಸೂಸುವಿಕೆಯಲ್ಲಿ ಸೂಕ್ತ ಪ್ರಮಾಣದ ಇಳಿಕೆ ಕಂಡುಬಂದಿತು. U.K. ಕ್ಯೋಟೋ ಶಿಷ್ಟಾಚಾರ ಒಪ್ಪಂದಕ್ಕೆ ಸಹಿ ಹಾಕಿದೆ.ರಾಜಕೀಯ ಪಕ್ಷಗಳ ಮೇಲೆ ಪರಿಸರವಾದಿ ಸಂಘಟನೆಗಳ ಹಲವಾರು ವರ್ಷಗಳ ಬೇಡಿಕೆಯ ನಂತರ, 13 ಮಾರ್ಚ್‌ 2007ನಲ್ಲಿ ಹವಾಮಾನ ಬದಲಾವಣೆ ಮಸೂದೆಯನ್ನು ರಚಿಸಲಾಯಿತು. ಇಂಧನ ಶ್ವೇತ ಪತ್ರ 2003ರಲ್ಲಿ ತಿಳಿಸಿರುವಂತೆ, ಮಸೂದೆಯು 1990ರ ಕಾರ್ಬನ್‌ ಹೊರಸೂಸುವಿಕೆ ಮಟ್ಟದಿಂದ 2050ರ ಹೊತ್ತಿಗೆ 60%ರಷ್ಟು ಕಡಿಮೆ ಮಾಡುವ ಗುರಿ ಇರಿಸಿಕೊಂಡಿದೆ. ಈ ನಡುವೆ ಮಧ್ಯಾವಧಿ ಗುರಿಯಾಗಿ 2020ರ ಹೊತ್ತಿಗೆ 26% ಮತ್ತು 32%ರ ನಡುವಿನ ಪ್ರಮಾಣದಲ್ಲಿ ಕಡಿಮೆ ಮಾಡಲು ಉದ್ದೇಶಿಸಿದೆ. ಕಳೆದ 26 ನವೆಂಬರ್‌ 2008ನಲ್ಲಿ, ಹವಾಮಾನ ಬದಲಾವಣೆ ಕಾಯಿದೆಯು 1990ರ ಪ್ರಮಾಣದ ಆಧಾರದ ಮೇಲೆ ಹೊರಸೂಸುವಿಕೆಯನ್ನು 80%ರಷ್ಟು ಕಡಿಮೆ ಮಾಡಲು ಉದ್ದೇಶಿಸಿದೆ. U.K.ಯು ದೀರ್ಘ ಮತ್ತು ಸೂಕ್ತ ಪ್ರಮಾಣದ ಇಂಗಾಲ ಇಳಿಕೆಯ ಗುರಿ ಹೊಂದಿರುವ ಮೊದಲ ದೇಶವಾಗಿದೆ.ಪ್ರಸ್ತುತ U.K.ಯು ಹಸಿರುಮನೆ ಅನಿಲಗಳ ಪ್ರಮಾಣದ ವಿಷಯದಲ್ಲಿ ಕ್ಯೋಟೋದ ಮಿತಿಗಳನ್ನು ಭರಿಸುವ ಪ್ರಯತ್ನದಲ್ಲಿದೆ. ಕಳೆದ 2007 ಮತ್ತು 2008ರಿಂದ 2012ರವರೆಗೆ CO₂ ಹೊರಸೂಸುವಿಕೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು, ಈ ಸರಕಾರ ಹೊಂದಿದೆ ಎಂದು ಭಾವಿಸಲಾಗಿದೆ. ಆದರೂ U.K.ಯ ಒಟ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣ ಇಳಿಕೆಯಾಗಿದ್ದು, 1997ರಲ್ಲಿ ಲೇಬರ್‌ ಪಕ್ಷ ಅಧಿಕಾರಕ್ಕೆ ಬಂದ ನಂತರ ವಾರ್ಷಿಕ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆಯಲ್ಲಿ 2%ದಷ್ಟು ಏರಿಕೆ ಕಾಣುತ್ತಿದೆ. ಇದರಿಂದಾಗಿ, ಹವಾಮಾನ ಬದಲಾವಣೆ ಮಸೂದೆಯನ್ನು ಸರಿಪಡಿಸಿದ ನಂತರ ತೆಗೆದುಕೊಂಡ ತ್ವರಿತ ಮತ್ತು ತೀಕ್ಷ್ಣ ಕ್ರಮಗಳಿಂದಾಗಿ, 2010 ಹೊತ್ತಿಗೆ U.K ಸರಕಾರ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆಯನ್ನು 1990ರ ಮಟ್ಟಕ್ಕಿಂತ 20%ರಷ್ಟು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿರುವಂತೆ ಕಾಣುತ್ತಿದೆ.

ಫ್ರಾನ್ಸ್‌‌

ಕಳೆದ 2004ರಲ್ಲಿ ಫ್ರಾನ್ಸ್‌ ತನ್ನ ಕೊನೆಯ ಕಲ್ಲಿದ್ದಲು ಗಣಿಯನ್ನು ಮುಚ್ಚಿತು. ಸದ್ಯ 80%ರಷ್ಟು ವಿದ್ಯುತ್ತನ್ನು ಅಣು ಶಕ್ತಿಯಿಂದ ಪಡೆಯಲಾಗುತ್ತದೆ. ಹಾಗಾಗಿ ಆ ದೇಶವೀಗ ಕಡಿಮೆ CO2 ಹೊರಸೂಸುವಿಕೆಗಳನ್ನು ಹೊಂದಿದೆ.

ನಾರ್ವೆ

ಕಳೆದ 1990 ಮತ್ತು 2007ರ ಅವಧಿಯಲ್ಲಿ, ನಾರ್ವೆಯ ಹಸಿರುಮನೆ ಅನಿಲ ಹೊರಸೂಸುವಿಕೆಯು 12%ರಷ್ಟು ಹೆಚ್ಚಾಗಿದೆ. ನಾರ್ವೆ ತನ್ನ ದೇಶದೊಳಗಿನ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಲ್ಲದೆ, ಚೀನಾದಲ್ಲಿ ಮತ್ತೆ ಕಾಡುಗಳನ್ನು ಬೆಳೆಸುವುದಕ್ಕಾಗಿ ಹಣಕಾಸಿನ ಸೌಲಭ್ಯ ಒದಗಿಸುವುದು. ಇದು ಕ್ಯೋಟೋ ಶಿಷ್ಟಾಚಾರದ ನಿಬಂಧನೆಗಳಿಗೆ ಪೂರಕವಾದ ಯೋಜನೆಗಳನ್ನು ಹೊಂದಿದೆ.

ಭಾರತ

ಕಳೆದ 2002ರ ಆಗಸ್ಟ್‌ನಲ್ಲಿ ಭಾರತ ಶಿಷ್ಟಾಚಾರಕ್ಕೆ ಸಹಿ ಹಾಕಿ, ಪ್ರಮಾಣಿಸಲ್ಪಟ್ಟಿತು. ಭಾರತವನ್ನು ಒಪ್ಪಂದದ ಚೌಕಟ್ಟಿನಿಂದ ಹೊರತುಪಡಿಸಿದ್ದರಿಂದ, ತಂತ್ರಜ್ಞಾನದ ವರ್ಗಾವಣೆ ಮತ್ತು ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದಂತೆ ಶಿಷ್ಟಾಚಾರದಿಂದ ಲಾಭವಾಗುವುದು ಎಂದು ನಿರೀಕ್ಷಿಸಲಾಗಿದೆ. G8 ಸಭೆಯಲ್ಲಿ 2005ರ ಜೂನ್‌ನಲ್ಲಿ ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹೊರಸೂಸುವಿಕೆ ಪ್ರಮಾಣ ತೀರಾ ಕಡಿಮೆಯಾಗಿದೆ ಎಂದು ತಿಳಿಸಿದರು. ಭಾರತ ಸಾಮಾನ್ಯ ಮತ್ತು ವಿವಿಧ ಬದ್ದತೆಗಳ ಜವಾಬ್ದಾರಿ ಯ ತತ್ವ ಅನುಸರಿಸಿ, ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ದೀರ್ಘಾವಧಿವರೆಗಿನ ಹೊರಸೂಸುವಿಕೆ ನಿಯಂತ್ರಿಸುವ ಜವಾಬ್ದಾರಿ ನಿಭಾಯಿಸುತ್ತಿದೆ. ಆದರೂ, ಚೀನಾದೊಂದಿಗೆ ಭಾರತ ಸಹ ತನ್ನ ತೀವ್ರಗತಿಯ ಕೈಗಾರೀಕರಣ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ, ಮುಂಬರುವ ದಶಕಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನಿಲಗಳನ್ನು ಹೊರಸೂಸುವ ಸಾಧ್ಯತೆ ಇದೆ ಎಂದು U.S. ಮತ್ತು ಇತರ ಪಾಶ್ಚಿಮಾತ್ಯ ದೇಶಗಳ ಹೇಳಿವೆ.

ಪಾಕಿಸ್ತಾನ

ಪರಿಸರ ಖಾತೆ ಸಚಿವ ಮಲಿಕ್ ಮಿನ್ ಅಸ್ಲಾಮ್‌ರವರ ಮಾತನ್ನು ಪ್ರಥಮ ಬಾರಿಗೆ ಯಾರು ಕೇಳಿಲ್ಲವಾದರೂ, ಅವರು ಶಿಷ್ಟಾಚಾರನಿಯಮಗಳನ್ನು ಇನ್ನಷ್ಟು ಸರಿಪಡಿಸುವಂತೆ ಶೌಕತ್‌ ಅಜಿಜ್‌ರ ಸಚಿವ ಸಂಪುಟಕ್ಕೆ ಸತತ ವಿನಂತಿಸುತ್ತಿದ್ದರು. ಕಳೆದ 2001ರಲ್ಲಿ ಅಂತಾರಾಷ್ಟ್ರೀಯ ಕಾರಣಗಳಿಂದಾಗಿ, ನೀತಿ ರಚನೆ ಪ್ರಾರಂಭಿಸುವ ನಿರ್ಣಯ ಕೈಗೊಳ್ಳಲಾಯಿತು. ಅದನ್ನು 2004ರಲ್ಲಿ ಅರ್ಜೆಂಟೈನಾದಲ್ಲಿ ಪ್ರಕಟಿಸಿ, 2005ರಲ್ಲಿ ಅಂಗೀಕರಿಸಲಾಯಿತು. ಜನವರಿ 11ರ 2005ರಲ್ಲಿ ಪಾಕಿಸ್ತಾನವು ಕ್ಯೋಟೋ ಶಿಷ್ಟಾಚಾರಕ್ಕೆ ಒಗ್ಗಿಕೊಳ್ಳುವ ಕುರಿತಂತೆ ಮನವಿ ಪತ್ರ ಸಲ್ಲಿಸಿತು. ಪರಿಸರ ಇಲಾಖೆಯು ನಿರ್ಧಿಷ್ಟ ರಾಷ್ಟ್ರೀಯ ಪ್ರಾಧಿಕಾರದಂತೆ (DNA) ಕೆಲಸ ಮಾಡಲು ಕಾರ್ಯಸೂಚಿಗಳನ್ನು ನಿಗದಿಪಡಿಸಲಾಯಿತು. ಕಳೆದ 2006 ಫೆಬ್ರವರಿಯಲ್ಲಿ ರಾಷ್ಟ್ರೀಯ CDM ಕಾರ್ಯಾಚರಣೆ ವಿಧಾನವು ಅಂಗೀಕರಿಸಲ್ಪಟ್ಟಿದೆ. ಅಲ್ಲದೇ 27 ಎಪ್ರಿಲ್‌ 2006ನಲ್ಲಿ DNAಯಿಂದ ಅಂಗೀಕೃತ ಮೊದಲ CDM ಯೋಜನೆಯೂ ಇದಾಗಿದೆ. ಇದು ನೈಟ್ರಿಕ್‌ ಆಮ್ಲ ಉತ್ಪಾದನೆಯಿಂದಾಗುವ ದೊಡ್ಡ ಪ್ರಮಾಣದ N2Oವನ್ನು ಕಡಿಮೆ ಮಾಡಿತು. (ಹೂಡಿಕೆದಾರರು: ಜಪಾನ್‌ನ ಮಿತ್ಸಿಬಿಶಿ). ವಾರ್ಷಿಕ 1 ದಶಲಕ್ಷ CER ಎಂದು ಅಂದಾಜಿಸಲಾಗಿದೆ. ಕೊನೆಗೆ, 2006 ನವೆಂಬರ್‌ನಲ್ಲಿ ಯುನೈಟೆಡ್‌ ನೇಷನ್ಸ್‌ ಫ್ರೇಮ್ವರ್ಕ್‌ ಕನ್ವೆನ್ಷನ್‌ ಆನ್‌ ಕ್ಲೈಮೇಟ್‌ ಚೇಂಜ್‌ನೊಂದಿಗೆ (UNFCCC) ನೋಂದಣಿಯಾದ ಮೊದಲ CDM ಯೋಜನೆಯಾಗಿದೆ.ಪಾಕಿಸ್ತಾನ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಿಗೆ ಸಂಬಂಧಿಸಿದ ಯೋಜನೆಗಳ ಮೂಲಕ ಪಳೆಯುಳಿಕೆಯ ಇಂಧನದ ಮೇಲಿನ ಅವಲಂಬನೆ ಕಡಿಮೆಯಾಗಲು ಈ ಶಿಷ್ಟಾಚಾರ ನಿಯಮ ಸಹಾಯ ಮಾಡುವುದೆಂದು ನಿರೀಕ್ಷಿಸಲಾಗಿದೆ. ಪಾಕಿಸ್ತಾನ ಹೆಚ್ಚು ಮಾಲಿನ್ಯಕಾರಿಯಲ್ಲದಿದ್ದರೂ, ಹೊರಸೂಸುವಿಕೆಗೆ ಬಲಿಯಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ದಾಖಲರ್ಹ ವಿಲಕ್ಷಣ ಚಳಿ ಮತ್ತು ಬಿಸಿ, ಋತುಮಾನ ಮೀರಿದ ಪ್ರವಾಹಗಳು, ನೆರೆಗಳಿಂದಾಗಿ 'ವಿಚಿತ್ರ ಹವಾಮಾನ'ಅನುಭವಿಸಬೇಕಾಯಿತು.

ರಷ್ಯಾ

ಕಳೆದ 4 ನವೆಂಬರ್‌ 2004ರಲ್ಲಿ ವ್ಲಾದಿಮಿರ್‌ ಪುಟಿನ್‌ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದರು. 18 ನವೆಂಬರ್‌ 2004ನಲ್ಲಿ ಒಪ್ಪಂದದ ಊರ್ಜಿತಗೊಳಿಸುವಿಕೆಯನ್ನು ಸಂಯುಕ್ತ ರಾಷ್ಟ್ರ ಸಂಸ್ಥೆಗೆ ರಷ್ಯಾ ಅಧಿಕೃತವಾಗಿ ತಿಳಿಸಿತು. ಅಂತಾರಾಷ್ಟ್ರೀಯ ಸಮುದಾಯ ರಷ್ಯಾ ಒಪ್ಪಂದ ಊರ್ಜಿತಗೊಳಿಸಿದ ನಂತರ, ಅದರ ಪಕ್ರಿಯೆಯನ್ನು ಹತ್ತಿರದಿಂದ ಗಮನಿಸುತ್ತಿತ್ತು. ರಷ್ಯಾ ಒಪ್ಪಂದದ 90 ದಿನಗಳ ಬಳಿಕ ಪರಸ್ಪರ ಸಮ್ಮತಿ ದೊರೆಯಿತು. (16 ಫೆಬ್ರವರಿ 2005).ಕಳೆದ 2004ರ ಸೆಪ್ಟೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ , WTOಗೆ ಸೇರಲು EUಯ ಬೆಂಬಲಕ್ಕಾಗಿ, ರಷ್ಯನ್‌ ಅಕಾಡಮಿ ಆಫ್‌ ಸೈಯನ್ಸ್‌, ಕೈಗಾರಿಕೆ ಮತ್ತು ಇಂಧನ ಇಲಾಖೆ ಮತ್ತು ಅಧ್ಯಕ್ಷರ ಆರ್ಥಿಕ ಸಲಹೆಗಾರ ಅಂಡ್ರೆ ಇಲ್ಲರಿಯೊನೊವ್‌ನ ಅಭಿಪ್ರಾಯ ವಿರೋಧಿಸಿ, ಶಿಷ್ಟಾಚಾರದ ಪರವಾಗಿ ನಿರ್ಣಯ ತೆಗೆದುಕೊಂಡರು. ಇದರ ನಂತರ ನಿರೀಕ್ಷಿಸಿದಂತೆ ಸಂಸತ್ತಿನ ಕೆಳಮನೆ (22 ಅಕ್ಟೋಬರ್‌ 2004) ಮತ್ತು ಮೇಲ್ಮನೆಯಲ್ಲಿನ ಅನುಮೋದನೆಗೆ ಯಾವುದೇ ತೊಂದರೆಗಳು ಎದುರಾಗಲಿಲ್ಲ.ಕ್ಯೋಟೋ ಶಿಷ್ಟಾಚಾರವು ತಮ್ಮ 1990ರ ಆಧಾರದ ಮಟ್ಟಗಳಿಂದ ಹೊರಸೂಸುವಿಕೆಯ ಏರಿಕೆ ಅಥವಾ ಇಳಿಕೆಯ ಮಿತಿಯನ್ನು ನಿರ್ಧರಿಸುವುದು. 1990ರಲ್ಲಿ ಹಿಂದಿನ ಸೋವಿಯತ್‌ ಒಕ್ಕೂಟದ ಹೆಚ್ಚಿನ ದೇಶಗಳ ಹಸಿರುಮನೆ ಅನಿಲ ಹೊರಸೂಸುವಿಕೆಯಿಂದಾಗಿ ಅವುಗಳ ಅರ್ಥವ್ಯವಸ್ಥೆ ಕುಸಿತಕಂಡಿದ್ದವು. ಇದರಿಂದಾಗಿ, ಕ್ಯೋಟೋಯಡಿ ರಷ್ಯಾವು ತನ್ನ ಬದ್ಧತೆಯನ್ನು ಪೂರೈಸಲು ಯಾವುದೇ ಸಮಸ್ಯೆ ಇರುವುದಿಲ್ಲ. ಏಕೆಂದರೆ ಅದರ ಪ್ರಸ್ತುತ ಹೊರಸೂಸುವಿಕೆ ಮಟ್ಟಗಳು ಅದಕ್ಕೆ ಹಾಕಿದ ಮಿತಿಗಿಂತ ಕಡಿಮೆಯಿದೆ.ರಷ್ಯಾ ತನ್ನ ಬಳಸದ AAUಗಳನ್ನು ಮಾರುವುದರ ಮೂಲಕ ಲಾಭ ಗಳಿಸುವುದೇ ಎನ್ನುವುದರ ಕುರಿತು ವೈಜ್ಞಾನಿಕ ಚರ್ಚೆ ನಡೆಯುತ್ತಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನ

ಅಮೆರಿಕಾ ಸಂಯುಕ್ತ ಸಂಸ್ಥಾನವು (U.S.) ಕ್ಯೋಟೋ ಶಿಷ್ಟಾಚಾರಕ್ಕೆ ಸಹಿ ಮಾಡಿದ್ದರೂ ಸಹ, ಶಿಷ್ಟಾಚಾರದಿಂದ ಅನುಮೋದಿಸಲ್ಪಟ್ಟಿಲ್ಲ ಅಥವಾ ಹಿಂದೆಗೆದುಕೊಳ್ಳಲಿಲ್ಲ. ಅಮೆರಿಕಾ ಸಂಯುಕ್ತ ಸಂಸ್ಥಾನವು ಕ್ಯೋಟೋ ಶಿಷ್ಟಾಚಾರವನ್ನು ಊರ್ಜಿತಗೊಳಿಸದೆ, ಬದ್ಧತೆಯಿಲ್ಲದೆ ಸಾಂಕೇತಿಕವಾಗಿ ಒಪ್ಪಂದಕ್ಕೆ ಸಹಿ ಹಾಕಿತು. 2007ರ ಅಮೆರಿಕಾದ ಹವಾಮಾನ ಭದ್ರತಾ ಕಾಯಿದೆ U.S.ನ "ಕ್ಯಾಪ್‌ ಆಂಡ್‌ ಟ್ರೇಡ್‌ ಮಸೂದೆ"ಗೆ ಇದು ಸ್ವಲ್ಪ ಹೋಲುತ್ತಿದ್ದು, ಕ್ಯೋಟೋ ಗುಣಮಟ್ಟ ಮತ್ತು ಉದ್ದೇಶಗಳೊಂದಿಗೆ U.S. ಅನ್ನು ಸೇರಿಸಿಕೊಳ್ಳಲು ಸೂಚಿಸಲಾಯಿತು. ಜುಲೈ 25 1997ರಲ್ಲಿ ಕ್ಯೋಟೋ ಶಿಷ್ಟಾಚಾರವು ಅಂತಿಮರೂಪ ಪಡೆದುಕೊಳ್ಳುವ ಮೊದಲು (ಸಂಪೂರ್ಣ ಮಾತುಕತೆ ಆಗಿದ್ದರೂ ಸಹ, ಅಂತಿಮ ಕರಡು ಪ್ರತಿ ಬೆಳಕುಕಂಡಿತು) U.S. ಸೆನೆಟ್‌ನ 95–0 ಮತಗಳ ಒಮ್ಮತದಿಂದ ಬಿರ್ಡ್‌-ಹಗೆಲ್‌ ನಿರ್ಣಯವು (S. Res. 98) ಅಂಗೀಕಾರಗೊಂಡಿತು. ಅದರಂತೆ ಅಮೆರಿಕಾ ಸಂಯುಕ್ತ ಸಂಸ್ಥಾನ ಅಭಿವೃದ್ಧಿಶೀಲ ದೇಶಗಳು ಮತ್ತು ಕೈಗಾರಿಕಾ ದೇಶಗಳಿಗೆ ಬದ್ಧತೆಯ ಗುರಿಗಳು ಮತ್ತು ವೇಳಾಪಟ್ಟಿ ಹೊಂದಿರದ ಅಥವಾ "ಅಮೆರಿಕಾ ಸಂಯುಕ್ತ ಸಂಸ್ಥಾನದ ಅರ್ಥವ್ಯವಸ್ಥೆಗೆ ಗಂಭೀರ ಹಾನಿಯನ್ನುಂಟು ಮಾಡುವ" ಯಾವುದೇ ಶಿಷ್ಟಾಚಾರಕ್ಕೆ ಸಹಿ ಹಾಕಬಾರದು. ಕಳೆದ 12 ನವೆಂಬರ್‌ 1998ರಲ್ಲಿ ಉಪಾಧ್ಯಕ್ಷ ಅಲ್‌ ಗೋರ್‌ ಸಾಂಕೇತಿಕವಾಗಿ ಶಿಷ್ಟಾಚಾರಕ್ಕೆ ಸಹಿ ಹಾಕಿದರು. ಅಭಿವೃದ್ಧಿಶೀಲ ರಾಷ್ಟ್ರಗಳು ಶಿಷ್ಟಾಚಾರದಲ್ಲಿ ಭಾಗವಹಿಸುವವರೆಗೆ, ಅದು ಸೆನೆಟ್‌ನಡಿ ಕಾರ್ಯನಿರ್ವಹಿಸುವುದು ಎನ್ನುವುದನ್ನು ಗೋರ್‌ ಮತ್ತು ನೆನೆಟರ್‌ ಜೊಸೆಫ್‌ ಲೀಬರ್‌ಮ್ಯಾನ್‌ ಸೂಚಿಸಿದರು. ಕ್ಲಿಂಟನ್ ಆಳ್ವಿಕೆಯಲ್ಲಿ ಶಿಷ್ಟಾಚಾರ ಊರ್ಜಿತಗೊಳಿಸುವುದಕ್ಕಾಗಿ, ಅದನ್ನು ಸೆನೆಟ್‌ಗೆ ಕಳುಹಿಸಲಿಲ್ಲ.ಕಳೆದ 1998ರ ಜುಲೈನಲ್ಲಿ ಕ್ಲಿಂಟನ್‌ ಆಡಳಿತವು ಆರ್ಥಿಕ ಸಲಹೆಗಾರರ ಒಕ್ಕೂಟ ರಚಿಸಿದ ಆರ್ಥಿಕ ವಿಶ್ಲೇಷಣೆಯೊಂದನ್ನು ಬಿಡುಗಡೆ ಮಾಡಿತು. ಅದು ಹೊರಸೂಸುವಿಕೆಗಳನ್ನು ಅನೆಕ್ಸ್‌ B/ಅನೆಕ್ಸ್‌ I ದೇಶಗಳ ಮಧ್ಯೆ ವಿನಿಮಯಮಾಡಿಕೊಳ್ಳುವುದಕ್ಕೆ ಸಮ್ಮತಿಸುತ್ತದೆ. ಅಲ್ಲದೇ ಇತ್ತೀಚಿನ ವ್ಯವಹಾರೀಯ ಹೊರಸೂಸುವಿಕೆಗಳ ದರಗಳಿಗೆ 2012ರವರೆಗೆ ಅವಕಾಶ ಕೊಡುವ "ಕ್ಲೀನ್‌ ಡೆವಲಪ್‌ಮೆಂಟ್‌ ಮೆಕ್ಯಾನಿಸಮ್‌"ನಲ್ಲಿ ಪ್ರಮುಖ ಅಭಿವೃದ್ಧಿಶೀಲ ದೇಶಗಳೂ ಭಾಗವಹಿಸುತ್ತವೆ. ಕ್ಯೋಟೋ ಶಿಷ್ಟಾಚಾರವನ್ನು ಕಾರ್ಯಾರೂಪಕ್ಕೆ ತರುವಲ್ಲಿನ ಖರ್ಚುಗಳನ್ನು ಅನೇಕ ಅಂದಾಜುಗಳಿಗಿಂತ 60%ನಷ್ಟು ಕಡಿಮೆಮಾಡಬಹುದು ಎಂದು ನಿರ್ಧರಿಸಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಎನರ್ಜಿ ಇನ್‌ಫಾರ್ಮೇಷನ್‌ ಎಡ್ಮಿನಿಸ್ಟ್ರೇಶನ್‌ಗೆ (EIA) ಹೋಲಿಸಿದಾಗ ಕ್ಯೋಟೋ ಶಿಷ್ಟಾಚಾರದಂತೆ ಇಂಗಾಲದ ಪ್ರಮಾಣ ಕಡಿತಗೊಳಿಸುವ ಗುರಿ ಸಾಧಿಸಲು ತಗಲುವ ಅಂದಾಜು ವೆಚ್ಚವು 2010ರ ಹೊತ್ತಿಗೆ 1.0% ಮತ್ತು 4.2% ನಡುವೆ GDP ನಷ್ಟವಾಗುವುದು, ಅಲ್ಲದೇ 2020ರ ಹೊತ್ತಿಗೆ 0.5% ಮತ್ತು 2.0%ರಷ್ಟು ಇಳಿಕೆಯಾಗಬಹುದು. ಇದರಲ್ಲಿ ಕೆಲವು ಅಂದಾಜುಗಳನ್ನು 1998ರಲ್ಲಿ ಕೈಗೊಂಡ ಕಾರ್ಯಗಳಿಂದ ತರ್ಕಿಸಲಾಗಿದೆ. ಕೆಲಸ ಪ್ರಾರಂಭವಾಗುವುದು ತಡವಾಗುವುದರಿಂದ ಅಂದಾಜು ಹೆಚ್ಚಾಗಬಹುದು. ಅಧ್ಯಕ್ಷ ಜಾರ್ಜ್‌ W. ಬುಷ್‌ ಚೀನಾಕ್ಕೆ (ಈಗ ವಿಶ್ವದ ಅತಿ ದೊಡ್ಡ ಇಂಗಾಲದ ಡೈಆಕ್ಸೈಡ್‌ ಅನ್ನು ಹೊರಸೂಸುವ, ಹಾಗೆಯೇ ಕಡಿಮೆ ತಲಾ ಹೊರಸೂಸುವಿಕೆ ಯನ್ನು ಹೊಂದಿರುವ) ನೀಡಿದ ವಿನಾಯಿತಿಯ ಆಧಾರದ ಮೇಲೆ ಸೆನೆಟ್‌ ಊರ್ಜಿತಗೊಳಿಸುವಿಕೆಗೆ ಒಮ್ಮತ ತೋರಲಿಲ್ಲ. ಬುಷ್‌ ಅಮೆರಿಕಾದ ಅರ್ಥವ್ಯವಸ್ಥೆಯ ಮೇಲೆ ಒಪ್ಪಂದವು ಪರಿಣಾಮ ಬೀರಬಹುದೆಂದು ಭಾವಿಸಿ, ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದರು. ಅವರು ವೈಜ್ಞಾನಿಕ ಸಾಕ್ಷಿಗಳ ಮೂಲಕ ಒಪ್ಪಂದದಲ್ಲಿರುವ ಅನಿಶ್ಚಿತತೆಗಳನ್ನು ಒತ್ತಿ ಹೇಳಿದರು. ಅದಲ್ಲದೆ, U.S. ಒಪ್ಪಂದದ ಗಡಿ ವಿನಾಯಿತಿ ಕುರಿತು ಹೆಚ್ಚಿನ ಗಮನ ನೀಡಿದೆ. ಉದಾಹರಣೆಗೆ, ಅನೆಕ್ಸ್‌ I ದೇಶಗಳು ಮತ್ತು ಇತರ ದೇಶಗಳನ್ನು ವಿಂಗಡಿಸುವುದನ್ನು U.S. ಬೆಂಬಲಿಸುವುದಿಲ್ಲ. ಜೂನ್‌ 2002ರಲ್ಲಿ, ಎನ್ವೈರನ್ಮೆಂಟಲ್‌ ಪ್ರೊಟೆಕ್ಷನ್‌ ಎಜೆನ್ಸಿಯು "ಕ್ಲೈಮೆಟ್ ಆಕ್ಷನ್ ರಿಪೋರ್ಟ್ ‌2002" ಅನ್ನು ಬಿಡುಗಡೆ ಮಾಡಿತು. ಈ ವರದಿ ಶಿಷ್ಟಾಚಾರವನ್ನು ಬೆಂಬಲಿಸುವುದಾಗಿ ಕೆಲವು ವಿಮರ್ಶಕರು ಹೇಳಿದ್ದಾರೆ, ಆದರೆ ಇದು ಶಿಷ್ಟಾಚಾರದ ಬಗ್ಗೆ ಏನನ್ನೂ ತಿಳಿಸುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು] ಜೂನ್‌ 2005ರಲ್ಲಿ G8 ಸಭೆಯಲ್ಲಿ ಆಡಳಿತ ಅಧಿಕಾರಿಗಳು, "ಕೈಗಾರಿಕಾ ದೇಶಗಳ ಪ್ರಾಯೋಗಿಕ ಬದ್ಧತೆಗಳು ಅವುಗಳ ಅರ್ಥ ವ್ಯವಸ್ಥೆಗೆ ಹಾನಿಯೊಡ್ಡದೆ, ಶಿಷ್ಟಚಾರ ಪಾಲಿಸುವುದು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಅಧಿಕಾರಗಳ ಪ್ರಕಾರ, 2012ರ ಹೊತ್ತಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನವು ತನ್ನ ಇಂಗಾಲದ ತೀವ್ರತೆಯನ್ನು 18%ರಷ್ಟು ಇಳಿಸಲು ಪಣತೊಟ್ಟಿದೆ. ಕ್ಲೀನ್‌ ಡೆವಲಪ್‌ಮೆಂಟ್‌ ಆಂಡ್‌ ಕ್ಲೈಮೆಟ್‌ನಲ್ಲಿ ಏಷ್ಯಾ ಪ್ಯಾಸಿಫಿಕ್‌ ಪಾರ್ಟ್ನರ್ಷಿಪ್‌ ಆನ್‌ ಕ್ಲೀನ್‌ ಡೆವೆಲಪ್ಮೆಂಟ್‌ ಆಂಡ್‌ ಕ್ಲೈಮೇಟ್‌ ಪಾರ್ಟನರ್‌‍ಶಿಫ್‌ನೊಂದಿಗೆ ಈ ದೇಶಗಳು ಪ್ರತ್ಯೇಕವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ತಮ್ಮ ಉದ್ದೇಶಗಳನ್ನು ಅನುಮತಿಸುವ ಒಪ್ಪಂದ ಮಾಡಿಕೊಂಡಿದೆ. ಆದರೆ ಅವುಗಳನ್ನು ಕಾರ್ಯಗತಗೊಳಿಸಲು ಯಾವುದೇ ಕಾರ್ಯವಿಧಾನಗಳಿಲ್ಲ. ಹೆಚ್ಚು ಹೊಂದಿಕೊಳ್ಳುವ ಗುಣ ಇರುವುದರಿಂದ ಕ್ಯೋಟೋ ಶಿಷ್ಟಾಚಾರದಂತೆ ಈ ಒಪ್ಪಂದಕ್ಕೆ ಅದರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. U.Sನಲ್ಲಿ ಆಡಳಿತ ಪಕ್ಷವು ಇದಕ್ಕೆ ಸಮರೂಪದಲ್ಲಿ ಒಪ್ಪಿಗೆ ಸೂಚಿಸಲಿಲ್ಲ. ಉದಾಹರಣೆಗೆ, ಪೌಲ್‌ ಕ್ರಗ್ಮಾನ್‌, ಇಂಗಾಲದ ತೀವ್ರತೆಯನ್ನು 18%ರಷ್ಟು ಇಳಿಸುವ ಗುರಿಯು ಒಟ್ಟು ಹೊರಸೂಸುವಿಕೆಯನ್ನು ಹೆಚ್ಚಿಸುವುದು ಎಂದು ತಿಳಿಸಿದರು. ಮಾನವನ ಚಟುವಟಿಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದಾದ ಹವಾಮಾನ ಬದಲಾವಣೆಗೆ ಶ್ವೇತ ಭವನವನ್ನು ಸಂಬಂಧಿಸಿದ ವರದಿಗಳಲ್ಲಿ ಟೀಕಿಸಲಾಗಿದೆ. ಅಲ್ಲದೇ ಶ್ವೇತ ಭವನದ ಅಧಿಕಾರಿ, ಹಿಂದಿನ ಇಂಧನ ಕೈಗಾರಿಕೆಯ ವಕೀಲ ಮತ್ತು ಈಗಿನ ಎಕ್ಸಾನ್‌ ಮೊಬೈಲ್‌ ಅಧಿಕಾರಿಯಾಗಿರುವ ಫಿಲಿಪ್‌ ಕೂನಿ, ವಿಜ್ಞಾನಿಗಳು ಈಗಾಗಲೇ ಅನುಮೋದಿಸಿದ ಹವಾಮಾನ ಸಂಶೋಧನೆಯನ್ನು ದುರ್ಬಲಗೊಳಿಸಿದರು. ಆದಾಗ್ಯೂ ಶ್ವೇತ ಭವನದ ಅಧಿಕಾರಿಗಳು ಇದನ್ನು ತಳ್ಳಿಹಾಕಿದರು. ಇಂಧನ ಮತ್ತು ಅನಿಲ ಕೈಗಾರಿಕೆಗಳಿಗೆ ನಿಕಟ ಸಂಬಂಧ ಹೊಂದಿದ್ದ ಬುಷ್‌ರ ಅಧಿಕಾರಿಗಳು ಟೀಕೆಗೆ ಗುರಿಯಾದರು. ಜೂನ್‌ 2005ರಲ್ಲಿ, ಕ್ಯೋಟೋನಲ್ಲಿ U.S.ನ ನಿಲುವು ಸೇರಿದಂತೆ ಹವಾಮಾನ ಬದಲಾವಣೆ ನೀತಿಯನ್ನು ನಿರ್ಧರಿಸಲು ಸಹಾಯ ಮಾಡುವಲ್ಲಿ ಕಂಪನಿಯ "ಸಕ್ರಿಯ ಭಾಗವಹಿಸುವಿಕೆ"ಗಾಗಿ ಎಕ್ಸಾನ್‌ ಕಾರ್ಯನಿರ್ವಾಹಕರಿಗೆ ಆಡಳಿತ ಯೋಜನೆಗಳನ್ನು ರಾಜ್ಯ ಇಲಾಖೆ ಹೊರಡಿಸಿದ ಪತ್ರದಲ್ಲಿ ತಿಳಿಸಲಾಗಿದೆ. ವ್ಯಾಪಾರ ಲಾಬಿ ಸಮೂಹವಾದ ಗ್ಲೋಬಲ್‌ ಕ್ಲೈಮೆಟ್‌ ಕೋಯಲಿಷನ್‌ನಿಂದ ದೊರೆತ ಮಾಹಿತಿ ಕೂಡಾ ಪ್ರಭಾವ ಬೀರುವ ಅಂಶವಾಗಿದೆ. ಕಳೆದ 2002ರಲ್ಲಿ ಶಿಷ್ಟಾಚಾರದ ನಿಯಮಾವಳಿ ಪರಿಶೀಲಿಸಿದ ಕಾಂಗ್ರೆಸ್ಸಿನ ಸಂಶೋಧಕರು, UNFCCCಗೆ ಸಹಿಹಾಕುವುದು ಶಿಷ್ಟಾಚಾರದ ಉದ್ದೇಶ ಮತ್ತು ಕಾರಣವನ್ನು ಒಳಗೊಳಗೆ ಹಾಳುಮಾಡುವುದನ್ನು ತಡೆಯಲು ನಿರ್ಬಂಧ ಹೇರುತ್ತದೆ. ಅಲ್ಲದೇ ಬಹುಶಃ ರಾಷ್ಟ್ರಾಧ್ಯಕ್ಷ ಒಬ್ಬರೇ ಶಿಷ್ಟಾಚಾರವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲದರಿಂದ ಕಾಂಗ್ರೆಸ್ ಅದರ ಮೊದಲ ಹೆಜ್ಜೆಯಾಗಿ ಸೂಕ್ತ ಕಾನೂನುಗಳನ್ನು ರಚಿಸಬಹುದು ಎಂದು ಸಲಹೆ ನೀಡಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮ ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರವೃತ್ತಿಯನ್ನು ಬದಲಾಯಿಸಬಹುದಾದ ಈ ಶಿಷ್ಟಾಚಾರದ ಬಗ್ಗೆ ಇದುವರೆಗೆ ಸೆನೆಟ್‌ನೊಂದಿಗೆ ಯಾವುದೇ ಕ್ರಮ ಕೈಗಳೊಳ್ಳಲಿಲ್ಲ. ಒಬಾಮ 2009ರ ಎಪ್ರಿಲ್‌ನಲ್ಲಿ ಟರ್ಕಿಯಲ್ಲಿದ್ದಾಗ ಹೀಗೆ ಹೇಳಿದ್ದಾರೆ - "ಕ್ಯೋಟೋ ಶಿಷ್ಟಾಚಾರವು ಕೊನೆಗೊಳ್ಳಲಿರುವುದರಿಂದ, ಇದಕ್ಕೆ ಸಹಿಹಾಕುವುದರಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಯಾವುದೇ ಪ್ರಯೋಜನವಿಲ್ಲ". ಆ ಸಂದರ್ಭದಲ್ಲಿ ನಾಲ್ಕು-ವರ್ಷದ ಬದ್ಧತೆಯ ಅವಧಿಯ ಎರಡು ವರ್ಷ ಮತ್ತು ಹನ್ನೊಂದು ತಿಂಗಳುಗಳು ಕಳೆದಿದ್ದವು.

ರಾಜ್ಯ ಮತ್ತು ಪ್ರಾದೇಶಿಕ ಸರಕಾರಗಳು

ಫ್ರೇಮ್ವರ್ಕ್‌ ಕನ್ವೆನ್ಷನ್‌ ಆನ್‌ ಕ್ಲೈಮೇಟ್‌ ಚೇಂಜ್‌ UNನಲ್ಲಿನ ದೇಶಗಳ ಮಧ್ಯೆ ಸಮಾಲೋಚನೆ ಮಾಡಿದ ಒಂದು ಒಪ್ಪಂದವಾಗಿದೆ. ಆದ್ದರಿಂದ ಈ ಶಿಷ್ಟಾಚಾರದೊಳಗೆ ಪ್ರತ್ಯೇಕವಾಗಿ ರಾಜ್ಯಗಳು ಈ ಒಪ್ಪಂದಕ್ಕೆ ಸ್ವತಂತ್ರವಾಗಿ ಪಾಲ್ಗೊಳ್ಳಲು ಅವಕಾಶವಿಲ್ಲ.ಆದರೂ ಅನೇಕ ಪ್ರತ್ಯೇಕ ಆರಂಭಿಕ ಪ್ರಯತ್ನಗಳು ರಾಜ್ಯ ಅಥವಾ ನಗರದ ಮಟ್ಟದಲ್ಲಿ ಆರಂಭಿಸಿದವು.ಎಂಟು ಈಶಾನ್ಯ U.S. ರಾಜ್ಯಗಳು ರೀಜನಲ್ ಗ್ರೀನ್‌ಹೌಸ್ ಗ್ಯಾಸ್ ಇನಿಶಿಯೇಟಿವ್ (RGGI)ಅನ್ನು ರಚಿಸಿದವು. ಇದು ಅವುಗಳ ಸ್ವಯಂ ಸ್ವತಂತ್ರವಾಗಿ-ಅಭಿವೃದ್ಧಿಗೊಳಿಸಿ ಕಾರ್ಯವಿಧಾನಗಳನ್ನು ಬಳಸಿಕೊಂಡು ಮಾಡಿದ ರಾಜ್ಯ ಮಟ್ಟದ ಹೊರಸೂಸುವಿಕೆಗಳ ಸೀಮಿತಗೊಳಿಸುವಿಕೆ ಮತ್ತು ವ್ಯಾಪಾರದ ಯೋಜನೆಯಾಗಿದೆ. ಅವುಗಳ ಮೊದಲ ಅನುಮೋದನೆಗಳು 2008ರ ನವೆಂಬರ್‌‌ನಲ್ಲಿ ಹರಾಜುಗೊಂಡವು.

  • ಪಾಲ್ಗೊಳ್ಳುವ ರಾಜ್ಯಗಳು : ಮೈನೆ, ನ್ಯೂಹ್ಯಾಂಪ್‌ಶೈರೆ, ವರ್ಮೋಂಟ್, ಕನೆಕ್ಟಿಕಟ್, ನ್ಯೂಯೂರ್ಕ್, ನ್ಯೂಜೆರ್ಸಿ, ದೆಲಾವರೆ, ಮಸ್ಸಾಚುಸೆಟ್ಸ್ ಮತ್ತು ಮೇರಿಲ್ಯಾಂಡ್ (ಈ ರಾಜ್ಯಗಳು ಒಟ್ಟು US ಜನಸಂಖ್ಯೆಯ 20%ನಷ್ಟಿರುವ ಅಂದರೆ 46 ದಶಲಕ್ಷ ಜನಸಂಖ್ಯೆ ಹೊಂದಿದೆ).
  • ಆಸಕ್ತ ವೀಕ್ಷಕ ರಾಜ್ಯಗಳು ಮತ್ತು ಪ್ರದೇಶಗಳು : ಪೆನ್ಸಿಲ್ವೇನಿಯ, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ, ರೋಡೆ ಐಲ್ಯಾಂಡ್.

ಕಳೆದ 2006ರ ಸೆಪ್ಟೆಂಬರ್ 27ರಲ್ಲಿ ಕ್ಯಾಲಿಫೋರ್ನಿಯಾ ಗವರ್ನರ್ ಅರ್ನೋಲ್ಡ್ ಸ್ಕ್ವಾರ್ಜೆನೆಗ್ಗರ್, ಗ್ಲೋಬಲ್ ವಾರ್ಮಿಂಗ್ ಸೊಲ್ಯೂಶನ್ಸ್ ಆಕ್ಟ್ ಎಂದೂ ಕರೆಯುವ ಮಸೂದೆ AB 32 ಕಾನೂನಿಗೆ ಸಹಿಹಾಕಿದರು.ಆ ಮ‌ೂಲಕ ಪ್ರಪಂಚದಲ್ಲೇ 12ನೇ ಅತಿದೊಡ್ಡ ಸ್ಥಾನದಲ್ಲಿರುವ ರಾಜ್ಯಗಳ ಹಸಿರುಮನೆ-ಅನಿಲ ಹೊರಸೂಸುವಿಕೆಗಳನ್ನು 2020ರೊಳಗೆ 25%ನಷ್ಟು ಕಡಿಮೆ ಮಾಡುವ ವೇಳಾಪಟ್ಟಿಯೊಂದನ್ನು ಸಿದ್ದಪಡಿಸಿದನು. ಈ ಕಾನೂನು ಕ್ಯಾಲಿಫೋರ್ನಿಯಾವನ್ನು ಪರಿಣಾಮಕಾರಿಯಾಗಿ ಕ್ಯೋಟೋ ಪರಿಮಿತಿಗಳ ಅಡಿಯಲ್ಲಿ ಇಡುತ್ತದೆ. ಆದರೆ ಇದು 2008–2012 ಕ್ಯೋಟೋ ಬದ್ಧತೆಯ ಅವಧಿಯ ನಂತರ ಸಾಧ್ಯವಾಗುತ್ತದೆ. ಗುರಿ ಮತ್ತು ಉದ್ದೇಶಗಳು ಬೇರೆ ಬೇರೆಯಾಗಿದ್ದರೂ ಕ್ಯಾಲಿಫೋರ್ನಿಯಾ ವ್ಯವಸ್ಥೆಯ ಹೆಚ್ಚಿನ ಲಕ್ಷಣಗಳು ಕ್ಯೋಟೋ ಕಾರ್ಯವಿಧಾನದಂತೆಯೇ ಇವೆ. ಪಾಶ್ಚಿಮಾತ್ಯ ಹವಾಮಾನ ಪ್ರವರ್ತನ ಶಕ್ತಿಯ ದೇಶಗಳು ಕೆಲವು ಅಥವಾ ಎಲ್ಲಾ ಕ್ಯಾಲಿಫೋರ್ನಿಯಾದ ಮಾದರಿಗಳೊಂದಿಗೆ ಹೊಂದಿಕೊಳ್ಳುವ ನಿರೀಕ್ಷೆ ಇದೆ. ಕಳೆದ 2009ರ ಜೂನ್‌ 14ರ ಸಂದರ್ಭದಲ್ಲಿ 50 ರಾಜ್ಯಗಳಲ್ಲಿನ 944 U.S. ನಗರಗಳು, ಸೇರಿದ್ದವು.ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಪ್ಯುಯೆರ್ಟೊ ರಿಕೊ, ಸೀಟಲ್‌ನ ಮೇಯರ್ ಗ್ರೆಗ್ ನಿಕಲ್ಸ್ ಶಿಷ್ಟಾಚಾರವನ್ನು ಒಪ್ಪಿ ಬೆಂಬಲಿಸಿದ ನಗರಗಳನ್ನು ಆಯ್ಕೆ ಮಾಡುವ ಪ್ರಯತ್ನವನ್ನು ರಾಷ್ಟ್ರದಾದ್ಯಂತ ಆರಂಭಿಸಿದರು. ನಂತರ ಕ್ಯೋಟೋ ಬೆಂಬಲಿಸುವ ಸುಮಾರು 80 ದಶಲಕ್ಷ ಅಮೇರಿಕನ್ನರನ್ನು ಈ ಆಂದೋಲನ ಹೊಂದಿತ್ತು. 1990ರಿಂದ ಈಚೆಗೆ 8 ಪ್ರತಿಶತ ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಕಡಿಮೆ ಮಾಡುವ ಮ‌ೂಲಕ 2005ರಲ್ಲಿ ಸೀಟಲ್ ಅದರ ಗುರಿ ಸಾಧಿಸಿದೆ, ಎಂದು 2007ರ ಅಕ್ಟೋಬರ್‌ 29ರಲ್ಲಿ ವರದಿಯಾಗಿದೆ.

  • ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳುವ ನಗರಗಳು : ಆಲ್ಬನಿ; ಆಲ್ಬುಕ್ವೆರ್ಕೆ; ಅಲೆಕ್ಸಾಂಡ್ರಿಯ; ಆನ್ ಆರ್ಬರ್; ಆರ್ಲಿಂಗ್ಟನ್; ಅಟ್ಲಾಂಟ; ಆಸ್ಟಿನ್; ಬಾಲ್ಟಿಮೋರ್; ಬರ್ಕೆಲೆ; ಬೋಸ್ಟನ್; ಚಾರ್ಲೆಸ್ಟನ್;ಚಟ್ಟಾನೂಗ; ಚಿಕಾಗೊ; ಕ್ಲೆವೆಲ್ಯಾಂಡ್; ದಲ್ಲಾಸ್; ದೆನ್ವೆರ್; ದೆಸ್ ಮೋಯ್ನೆಸ್; ಎರಿ; ಫಯೆಟ್ಟೆವಿಲ್ಲೆ; ಹಾರ್ಟ್‌ಫೋರ್ಡ್; ಹೊನೊಲುಲು; ಇಂಡಿಯಾನಪೋಲಿಸ್; ಜೆರ್ಸಿ ಸಿಟಿ; ಲ್ಯಾಂಸಿಂಗ್; ಲಾಸ್ ವೆಗಾಸ್; ಲೆಕ್ಸಿಂಗ್ಟನ್; ಲಿಂಕೋಲ್ನ್; ಲಿಟಲ್ ರಾಕ್; ಲಾಸ್ ಏಂಜಲೀಸ್; ಲುಯೀಸ್‌ವಿಲ್ಲೆ; ಮ್ಯಾಡಿಸನ್; ಮಿಯಾಮಿ; ಮಿಲ್ವಾಕಿ; ಮಿನ್ನಿಯಾಪೋಲಿಸ್; ನ್ಯಾಶ್ವಿಲ್ಲೆ; ನ್ಯೂಓರ್ಲೀನ್ಸ್; ನ್ಯೂಯಾರ್ಕ್; ಓಕ್‌ಲ್ಯಾಂಡ್; ಒಮಾಹ; ಪಸದೇನ; ಫಿಲಡೆಲ್ಫಿಯಾ; ಫೋಯನಿಕ್ಸ್; ಪಿಟ್ಸ್‌ಬರ್ಗ್; ಪೋರ್ಟ್‌ಲ್ಯಾಂಡ್; ಪ್ರೋವಿಡೆನ್ಸ್; ರಿಚ್ಮಂಡ್; ಸ್ಯಾಕ್ರೊಮೆಂಟೊ; ಸಾಲ್ಟ್ ಲೇಕ್ ಸಿಟಿ; ಸ್ಯಾನ್ ಆಂಟೋನಿಯೊ; ಸ್ಯಾನ್ ಫ್ರಾನ್ಸಿಸ್ಕೊ; ಸ್ಯಾನ್ ಜೋಸೆ; ಸ್ಯಾಂಟ ಆನ; ಸ್ಯಾಂಟ ಫೆ; ಸೀಟಲ್; ಸೇಂಟ್ ಲೂಯಿಸ್; ಟಕೋಮ; ತಲ್ಲಾಹಸ್ಸೀ; ಟಂಪ; ಟೊಪೇಕ; ತುಲ್ಸ; ವರ್ಜಿನಿಯಾ ಬೀಚ್; ವಾಷಿಂಗ್ಟನ್, D.C.; ವೆಸ್ಟ್ ಪಾಲ್ಮ್ ಬೀಚ್; ವಿಲ್ಮಿಂಗ್ಟನ್; ವಿಲ್ಮಿಂಗ್ಟನ್.
  • ನಗರ ಮತ್ತು ಮೇಯರ್‌ಗಳ ಸಂಪೂರ್ಣ ಪಟ್ಟಿ ಇದೆ.

ಬೆಂಬಲ

ಕ್ಯೋಟೋ ಶಿಷ್ಟಾಚಾರ ಸಮರ್ಥಿಸುವವರು ಇಂಗಾಲದ ಡೈಆಕ್ಸೈಡ್ ಭೂಮಿಯ ವಾತಾವರಣದ ಬಿಸಿ ಏರಿಕೆಗೆ ಕಾರಣವಾಗುವುದರಿಂದ ಈ ಹೊರಸೂಸುವಿಕೆಗಳನ್ನು ಕಡಿಮೆ ಮಾಡುವುದು ಬಹು ಮುಖ್ಯವಾದುದೆಂದು ಹೇಳುತ್ತಾರೆ. ಇದು ಗುಣಲಕ್ಷಣ ವಿಶ್ಲೇಷಣೆಯಿಂದ ಬೆಂಬಲಿಸಲ್ಪಟ್ಟಿದೆ.ಕ್ಯೋಟೋ ಸಮರ್ಥಿಸುವವರಲ್ಲಿ ಹೆಚ್ಚು ಪ್ರಮುಖರೆಂದರೆ - ಯುರೋಪಿಯನ್ ಯ‌ೂನಿಯನ್ ಮತ್ತು ಅನೇಕ ಪರಿಸರವಾದಿ ಸಂಘಟನೆಗಳು. ವಿಶ್ವಸಂಸ್ಥೆ ಮತ್ತು ಕೆಲವು ವೈಯಕ್ತಿಕ ರಾಷ್ಟ್ರಗಳ ವೈಜ್ಞಾನಿಕ ಸಲಹಾ ಘಟಕಗಳೂ (G8 ರಾಷ್ಟ್ರೀಯ ವಿಜ್ಞಾನ ಅಕಾಡೆಮಿಗಳನ್ನೂ ಒಳಗೊಂಡಂತೆ) ಸಹ ಕ್ಯೋಟೋ ಶಿಷ್ಟಾಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.ಮಾಂಟ್ರಿಯಲ್‌ನಲ್ಲಿ ನಡೆಯುವ ಪಕ್ಷಗಳ ಸಭೆಯೊಂದಿಗೆ ಪರಸ್ಪರ ಹೊಂದಾಣಿಕೆಯಾಗುವಂತೆ, 2005ರ ಡಿಸೆಂಬರ್ 3ರಲ್ಲಿ ಒಂದು ದಿನದ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಯೋಜಿಸಿದ ಬಹಿರಂಗ ಸಭೆಯು ವರ್ಲ್ಡ್ ಸೋಷಿಯಲ್ ಫೋರಮ್ ನ ಅಸೆಂಬ್ಲಿ ಆಫ್ ಮ‌ೂವ್ಮೆಂಟ್ಸ್‌ನಿಂದ ಅನುಮೋದಿಸಲ್ಪಟ್ಟಿತು.ಕೆನಾಡದ ಪ್ರಮುಖ ನಿಗಮಗಳ ಸಮೂಹವು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಜರೂರು ಕ್ರಮಕ್ಕೆ ಕರೆನೀಡಿತು. ಅದಲ್ಲದೇ ಕ್ಯೋಟೋ ಶಿಷ್ಟಾಚಾರವು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಮಾತ್ರ ಎಂದು ಸೂಚಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕ್ಯೋಟೋ ನೌ! ಎಂಬ ವಿದ್ಯಾರ್ಥಿಗಳ ಗುಂಪೊಂದು ಇದೆ. ಇದು ಕ್ಯೋಟೋ ಶಿಷ್ಟಾಚಾರ ನಿಯಮಾವಳಿಗಳ ಗುರಿಯಂತೆ ಹೊರಸೂಸುವಿಕೆಗಳನ್ನು ಕಡಿಮೆ ಮಾಡುವುದನ್ನು ಬೆಂಬಲಿಸಲು ವಿದ್ಯಾರ್ಥಿಗಳ ಆಸಕ್ತಿಯನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿದೆ.

ಟೀಕೆಗಳು

ಹಸಿರುಮನೆ ಹೊರಸೂಸುವಿಕೆಗಳನ್ನು ನಿಯಂತ್ರಣ ಮಾಡುವಲ್ಲಿ ಶಿಷ್ಟಾಚಾರವು ಹೆಚ್ಚು ದೂರ ಸಾಗುವುದಿಲ್ಲ, ಎಂದು ಕೆಲವರು ಟೀಕಿಸಿದ್ದಾರೆ. (ನಿಯು, ಕುಕ್ ಐಲ್ಯಾಂಡ್ ಮತ್ತು ನೌರು ಮೊದಲಾದವರು ಶಿಷ್ಟಾಚಾರಕ್ಕೆ ಸಹಿಹಾಕುವಾಗ ಈ ಪರಿಣಾಮದ ಬಗ್ಗೆ ಟಿಪ್ಪಣಿಗಳನ್ನು ಸೇರಿಸಿದ್ದಾರೆ). ಕೆಲವು ಪರಿಸರ ಅರ್ಥಶಾಸ್ತ್ರಜ್ಞರು ಕ್ಯೋಟೋ ಶಿಷ್ಟಾಚಾರವನ್ನು ಟೀಕಿಸುತ್ತಾರೆ. ಕ್ಯೋಟೋ ಶಿಷ್ಟಾಚಾರದ ಪ್ರಯೋಜನಗಳಿಗಿಂತ ಖರ್ಚುಗಳೇ ಹೆಚ್ಚಾಗಿವೆ; ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಕ್ಯೋಟೋ ನಿಗದಿಪಡಿಸುವ ಪ್ರಮಾಣಕಗಳು ತುಂಬಾ ಆಶಾದಾಯಕವಾಗಿವೆ, ಎಂದೂ ನಂಬುತ್ತಾರೆ. ಇದು ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ನಿಯಂತ್ರಿಸುವಲ್ಲಿ ಅತಿ ಕಡಿಮೆ ಕಾರ್ಯನಿರ್ವಹಿಸುವ, ನ್ಯಾಯಸಮ್ಮತವಲ್ಲದ ಮತ್ತು ಪರಿಣಾಮಕಾರಿಯಲ್ಲದ ಒಪ್ಪಂದ ಎಂದು ಕೆಲವರು ದೂಷಿಸುತ್ತಾರೆ. ಗ್ವಿನ್ ಪ್ರಿನ್ಸ್ ಮತ್ತು ಸ್ಟೀವ್ ರೇನರ್ ಮೊದಲಾದ ಕೆಲವು ಅರ್ಥಶಾಸ್ತ್ರಜ್ಞರು, ಕ್ಯೋಟೋ ಶಿಷ್ಟಾಚಾರ ಸೂಚಿಸಿದ ಮಾರ್ಗಕ್ಕಿಂತ ಸಂಪೂರ್ಣವಾಗಿ ಬೇರೆಯೇ ಆದ ರೀತಿಯ ದಾರಿಯನ್ನು ಅನುಸರಿಸುವ ಅವಶ್ಯಕತೆ ಇದೆ ಎಂದು ಯೋಚಿಸುತ್ತಾರೆ.

ಹವಾಮಾನ ವಿಜ್ಞಾನಿ ಜೇಮ್ಸ್ E. ಹ್ಯಾನ್ಸೆನ್ ರ ಇತ್ತೀಚಿನ ಪುಸ್ತಕದಲ್ಲಿ (ಸ್ಟಾರ್ಮ್ಸ್ ಆಫ್ ಮೈ ಗ್ರ್ಯಾಂಡ್‌ಚಿಲ್ಡ್ರನ್ ) ಮತ್ತು ಅಧ್ಯಕ್ಷ ಒಬಾಮನಿಗೆ ಬರೆದ ಪತ್ರದಲ್ಲಿ, ವ್ಯರ್ಥ “ಸೀಮಿತಗೊಳಿಸುವಿಕೆ ಮತ್ತು ವ್ಯವಹಾರ ಮಾಡುವಿಕೆ” ವ್ಯವಸ್ಥೆಯನ್ನು ಉತ್ತೇಜಿಸುವುದಕ್ಕಾಗಿ ಕ್ಯೋಟೋ ಶಿಷ್ಟಾಚಾರನಿಯಮಾವಳಿಯನ್ನು ಖಂಡಿಸಿದನು.

"ಅವರು ಅಲ್ಲಿ ತಮ್ಮ ಸ್ವೇಚ್ಛಾತೃಪ್ತಿಗಳನ್ನು ಹರಾಜು ಮಾಡುತ್ತಿದ್ದಾರೆ"..."ಅಭಿವೃದ್ಧಿಹೊಂದಿದ ದೇಶಗಳು ಮ‌ೂಲತಃ ವ್ಯಾಪಾರವನ್ನು ಸಾಮಾನ್ಯ ರೀತಿಯಲ್ಲಿ ಮುಂದುವರಿಸಲು ಬಯಸುತ್ತಾರೆ. ಅದಕ್ಕಾಗಿ ಅಲ್ಪ ಪ್ರಮಾಣದ ಹಣವನ್ನು ಅಭಿವೃದ್ಧಿಶೀಲ ದೇಶಗಳಿಗೆ ನೀಡುವ ಮೂಲಕ ತಮಗೆ ಇಷ್ಟವಾದುದನ್ನು ಪಡೆದುಕೊಳ್ಳುತ್ತಾರೆ. ಅವರು ಅದನ್ನು ಪರಿಹಾರ ಮತ್ತು ಹೊಂದಾಣಿಕೆ ನಿಧಿ ರೂಪದಲ್ಲಿ ಮಾಡುತ್ತಾರೆ"

"ಉದಾಹರಣೆಗಾಗಿ, ಷರಿಣಾಮರಹಿತ ಕ್ಯೋಟೋ ಶಿಷ್ಟಾಚಾರ. ಜಪಾನ್‌ನಂತಹ ಹೆಚ್ಚು ಜವಾಬ್ದಾರಿ ತೆಗೆದುಕೊಂಡ ದೇಶಗಳಲ್ಲಿಯೂ, ಅವುಗಳ ನಿಜವಾದ ಹೊರಸೂಸುವಿಕೆ, ಪಳೆಯುಳಿಕೆ ಇಂಧನ ಬಳಕೆ ಅಧಿಕವಾಗಿದೆ.ಅವುಗಳ CO2 ಹೊರಸೂಸುವಿಕೆ ಕಡಿಮೆಯಾಗಬೇಕೆಂದು ಷರತ್ತು ವಿಧಿಸಿದ್ದರೂ ನಿಜವಾಗಿ ಅದರ ಪ್ರಮಾಣ ಹೆಚ್ಚಾಗಿರುವುದನ್ನು ಕಾಣಬಹುದು. ಏಕೆಂದರೆ ಅವರ ಕಲ್ಲಿದ್ದಲು ಬಳಕೆ ಹೆಚ್ಚಾಯಿತು. ಅಲ್ಲದೇ ತಮ್ಮ ಉದ್ದೇಶ ಸಾಧನೆಗಾಗಿ ಸರಿದೂಗಿಸುವ ಪ್ರತಿಯೋಜನೆಗಳನ್ನು ರೂಪಿಸಿದರು. ಸರಿದೂಗಿಸುವ ಪ್ರತಿಯೋಜನೆಗಳು ಪರಿಣಾಮಕಾರಿಯಾಗಿ ನೆರವಾಗುವುದಿಲ್ಲ. ಹೊರಸೂಸುವಿಕೆ ಕಡಿಮೆ ಮಾಡುವ ಗುರಿಗಳನ್ನು ನಿರ್ದಿಷ್ಟಪಡಿಸಲು ಮತ್ತು ಆನಂತರ ಆ ಪ್ರಮಾಣವನ್ನು ಪೂರ್ಣಗೊಳಿಸಲು ಸಹಕರಿಸಬೇಕಾಗುತ್ತದೆ. ಇದಕ್ಕಾಗಿ ಪ್ರತಿಯೋಜನೆಗಳಿಗೆ ಅನುವು ಮಾಡಿಕೊಡಲು ಕೋಪೆನ್‌ಹ್ಯಾಗನ್ ಬಳಸುವ ಮಾರ್ಗ ನಿಜಹೇಳಬೇಕೆಂದರೆ ಒಂದು ಕೃತ್ರಿಮತೆ ಎಂದು ಹೇಳಬಹುದು. ಅಲ್ಲದೇ ಅದನ್ನು ಬಹಿರಂಗ ಮಾಡಬೇಕು. ಇಲ್ಲದಿದ್ದರೆ ಕ್ಯೋಟೋ ಶಿಷ್ಟಾಚಾರದಲ್ಲಿ ಆದಂತೆ 10 ವರ್ಷಗಳ ನಂತರ ನಾವು, ಅಯ್ಯೋ ಅದು ನಿಜವಾಗಿಯೂ ಹೆಚ್ಚಿನದನ್ನೇನನ್ನೂ ಮಾಡಿಲ್ಲ ಎಂಬುದನ್ನು ಅರಿಯುತ್ತೇವೆ." ನಾಗರಿಕರ ಕಾರ್ಬನ್ ಫೂಟ್‌ಪ್ರಿಂಟ್‌ನೊಂದಿಗೆ ವಿಲೋಮಾನುಪಾತದಲ್ಲಿರುವ[improper synthesis?] ದೇಶಗಳ ಮೇಲೆ ವಿಧಿಸುವ ಕಾರ್ಬನ್ ಟ್ಯಾಕ್ಸ್ಅನ್ನು ಒಂದು ಪರ್ಯಾಯವಾಗಿ ಹ್ಯಾನ್ಸೆನ್ ಮೂಲಕ ಸೂಚಿಸಲಾಗಿದೆ. ವರ್ಷ 1990ಅನ್ನು ಆಧಾರ ವರ್ಷವೆಂದು ಬಳಸುವ ಬಗ್ಗೆ [ಸೂಕ್ತ ಉಲ್ಲೇಖನ ಬೇಕು] ಹಾಗೂ ಪ್ರತಿ ಕ್ಯಾಪಿಟಾ ಹೊರಸೂಸುವಿಕೆಗಳನ್ನು ಆಧಾರವಾಗಿ ಬಳಸುವುದರ ಬಗ್ಗೆ ವಿವಾದವಿದೆ. ಇಂಧನವಲಯದಲ್ಲಿ ಉತ್ತಮ ಪ್ರಗತಿ ಕಂಡಿದ್ದ ದೇಶಗಳು 1990ರಲ್ಲಿ ಬೇರೆಬೇರೆ ಸಾಧನೆ-ಗುರಿಗಳನ್ನು ಹೊಂದಿದ್ದವು. ಉದಾಹರಣೆಗೆ, ಹಿಂದಿನ ಸೋವಿಯತ್‌‌‌ ಒಕ್ಕೂಟ ಮತ್ತು ಪೌರಾತ್ಯ ಯುರೋಪಿಯನ್ ದೇಶಗಳಿಗೆ 1990ರಲ್ಲಿ ಅವುಗಳ ಕಮ್ಯೂನಿಸ್ಟ್ ಆಡಳಿತದ ಪತನದ ಮೊದಲು ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯವಿರಲಿಲ್ಲ. ಅಲ್ಲದೇ ಆ ಸಂದರ್ಭದಲ್ಲಿ ಅವುಗಳ ಇಂಧನ ಸಾಮರ್ಥ್ಯವೂ ತೃಪ್ತಿಕರವಾಗಿರಲಿಲ್ಲ. ಮತ್ತೊಂದೆಡೆ, ನೈಸರ್ಗಿಕ ಅನಿಲಗಳ ಅತಿದೊಡ್ಡ ಆಮದುದಾರ ಜಪಾನ್‌ 1973ರ ತೈಲ ಬಿಕ್ಕಟ್ಟಿನ ನಂತರ ಉಂಟಾದ ಆಘಾತದಿಂದ ಚೇತರಿಸಿಕೊಳ್ಳಬೇಕಿತ್ತು. ಆದಾಗ್ಯೂ 1990ರಲ್ಲಿ ಅದರ ಹೊರಸೂಸುವಿಕೆಯ ಮಟ್ಟ ಹೆಚ್ಚು ಅಭಿವೃದ್ದಿಹೊಂದಿದ ದೇಶಗಳಿಗಿಂತ ಸುರಕ್ಷಿತವಾಗಿತ್ತು. ಆದರೂ, ಅಂತಹ ಪ್ರಯತ್ನಗಳನ್ನು ರದ್ದುಗೊಳಿಸಲಾಯಿತು. ಅಲ್ಲದೇ ಹಿಂದಿನ ಸೋವಿಯತ್‌ ಒಕ್ಕೂಟದ ನಿಷ್ಕ್ರಿಯತೆಯ ಬಗ್ಗೆ ಗಮನ ಹರಿಸಲಾಯಿತು. ಹೊರಸೂಸುವಿಕೆಯ ವಹಿವಾಟಿನಿಂದ ಹೆಚ್ಚಿನ ಆದಾಯ ಗಳಿಸಬಹುದು, ಎಂಬುದನ್ನು ಕಂಡುಕೊಳ್ಳಲಾಯಿತು. ಮುಂಬರುವ ಕ್ಯೋಟೋ-ಮಾದರಿಯ ಒಪ್ಪಂದಗಳಲ್ಲಿ ಪ್ರತಿ ಕ್ಯಾಪಿಟ ಹೊರಸೂಸುವಿಕೆಯನ್ನು ಆಧಾರವಾಗಿ ಬಳಸುವುದರಿಂದ, ಇದು ದೇಶಗಳ ನಡುವಿನ ನಿಷ್ಕ್ರಿಯತೆ ಮತ್ತು ಜವಾಬ್ದಾರಿಗಳನ್ನು ಗಮನಕ್ಕೆ ತರುತ್ತದೆ. ಅಭಿವೃದ್ದಿಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳ ಮಧ್ಯೆ ಇರುವ ಅಸಮಾನತೆ ಕಡಿಮೆ ಮಾಡಬಹುದು ಎಂಬ ಬಗ್ಗೆಯೂ ಒಂದು ವಾದವಿದೆ.

ಲಾಭ-ನಷ್ಟ ವಿಶ್ಲೇಷಣೆ

ಅರ್ಥಶಾಸ್ತ್ರಜ್ಞರು ಲಾಭ-ನಷ್ಟ ವಿಶ್ಲೇಷಣೆಯ ಮ‌ೂಲಕ ಕ್ಯೋಟೋ ಶಿಷ್ಟಾಚಾರದ ಒಟ್ಟು ನಿವ್ವಳ ಲಾಭವನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದಾರೆ. ಆರ್ಥಿಕ ವ್ಯತ್ಯಾಸಗಳಲ್ಲಿ ಹೆಚ್ಚು ಏರುಪೇರುಗಳಿರುವದರಿಂದ ಇವುಗಳ ಬಗ್ಗೆ ಭಿನ್ನಾಭಿಪ್ರಾಯವಿದೆ. ಕ್ಯೋಟೋ ಶಿಷ್ಟಾಚಾರ ಪಾಲಿಸುವುದು ಅದನ್ನು ಅನುಸರಿಸದೇ ಇರುವುದಕ್ಕಿಂತ ಹೆಚ್ಚು ದುಬಾರಿಯಾಗಿದೆ. ಕ್ಯೋಟೋ ಶಿಷ್ಟಾಚಾರ ಅಳವಡಿಕೆಯು, ಜಾಗತಿಕ ತಾಪಮಾನ ಏರಿಕೆ ಕಡಿಮೆ ಮಾಡುವಲ್ಲಿ ಸಫಲವಾಗುತ್ತದೆ.ಇದಕ್ಕಾಗಿ ಖರ್ಚನ್ನು ಮಿತಿಮೀರಿಸುವಷ್ಟು ಕನಿಷ್ಠ ಅನುಕೂಲಗಳನ್ನು ಈ ಅಳವಡಿಕೆ ಹೊಂದಿದೆ ಎಂದು ಕೆಲವು ಅಂದಾಜುಗಳು ಸೂಚಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು] ದಿ ಲಿಯೊ ಮತ್ತು ಇತರರು ಮಾಡಿದ ಅಧ್ಯಯನವೊಂದು "ಇಂಧನ ನಿರ್ವಹಣಾ ಸಾಮರ್ಥ್ಯ ಕಂಡು ಹಿಡಿಯಲು ಉತ್ಪನ್ನದ ಬೆಲೆಗಳೊಂದಿಗೆ ಸ್ಥಳೀಯ ದರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.ಇದರೊಂದಿಗೆ ಕ್ಯೋಟೋ ಶಿಷ್ಟಾಚಾರದ ಅಳವಡಿಕೆಯ ಒಟ್ಟು ಖರ್ಚುನ್ನು ಕಡಿಮೆ ಮಾಡಬಹುದು " ಎಂದು ಕಂಡುಹಿಡಿದಿದೆ.ಇತ್ತೀಚಿನ ಕೋಪೆನ್‌ಹ್ಯಾಗನ್ ಒಮ್ಮತ ಯೋಜನೆ ಹಾಗು, ಕ್ಯೋಟೋ ಶಿಷ್ಟಾಚಾರ ಪಾಲನೆಯು ಜಾಗತಿಕ ತಾಪ ಏರಿಕೆ ಕಡಿಮೆ ಮಾಡಬಹುದು; ಆದರೆ ಇದು ಒಟ್ಟಾರೆ ನೋಡಿದರೆ ಅತ್ಯಲ್ಪ ಅನುಕೂಲ ಹೊಂದಿದೆ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಹಸಿರುಮನೆ ಅನಿಲದ ಮೇಲಿನ ಕಡಿವಾಣಗಳು ಪರಿಣಾಮ ಬೀರದಿದ್ದರೂ, ಅವು ಭವಿಷ್ಯದಲ್ಲಿ ಹೆಚ್ಚು ಪ್ರಭಾವಿ ಕಡಿವಾಣಗಳಿಗೆ ರಾಜಕೀಯ ಆದ್ಯತೆ ನೀಡುತ್ತವೆ, ಎಂದು ಕ್ಯೋಟೋ ಶಿಷ್ಟಾಚಾರದ ಪ್ರತಿಪಾದಕರು ವಾದಿಸುತ್ತಾರೆ. ಅವು ಮುಂಜಾಗೃತೆಯ ನಿಯಮಕ್ಕೆ ಅನುಸಾರವಾಗಿ ನಡೆದುಕೊಳ್ಳುವಂತೆ ಸಲಹೆ ಮಾಡುತ್ತವೆ. ಇಂಗಾಲ ಹೊರಸೂಸುವಿಕೆಯ ಬಗೆಗಿನ ಹೆಚ್ಚುವರಿ ನಿರ್ಬಂಧಗಳು ಗಮನಾರ್ಹವಾಗಿ ಖರ್ಚನ್ನು ಹೆಚ್ಚಿಸುತ್ತವೆ. ಅಲ್ಲದೇ ಅಂತಹ ಸಮರ್ಥನೆಯನ್ನು ವಿವಾದಾಸ್ಪದವಾಗಿಸಿ ವಿಮರ್ಶಕರು ಟೀಕಿಸುತ್ತಾರೆ. ಯಾವುದೇ ರಾಜಕೀಯ, ಸಾಮಾಜಿಕ, ಆರ್ಥಿಕ ಅಥವಾ ಪರಿಸರ ಪರಿಣಾಮಕ್ಕೆ ಅನ್ವಯಿಸಬಹುದಾದ ಮುಂಜಾಗೃತಾ ನಿಮಯಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಬಡತನ ಮತ್ತು ಪರಿಸರದ ವಿಷಯಗಳಲ್ಲಿ ಪ್ರತಿಕೂಲ, ವಿನಾಶಕಾರಿ ಪರಿಣಾಮ ಬೀರಬಹುದಾದ್ದರಿಂದ ಇದು ಮುಂಜಾಗೃತಾ ವಿವಾದವನ್ನು ಅಪ್ರಸ್ತುತಗೊಳಿಸುತ್ತದೆ. ಸ್ಟರ್ನ್ ರಿವ್ಯೂ (ಹವಾಮಾನ ಬದಲಾವಣೆಯ ಆರ್ಥಿಕ ಪರಿಣಾಮಗಳ ಬಗ್ಗೆ UK ಸರಕಾರ ಜವಾಬ್ದಾರಿ ವಹಿಸಿ ಮಾಡಿದ ವರದಿ), ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮಿತಗೊಳಿಸಲು ಜಾಗತಿಕ GDPಯ ಒಂದು ಪ್ರತಿಶತವನ್ನು ವಿನಿಯೋಗಿಸಬೇಕಾಗುತ್ತದೆ. ಅಲ್ಲದೇ ಹಾಗೆ ಮಾಡುವಾಗ ವಿಫಲವಾದರೆ ಜಾಗತಿಕ GDPಯ ಇಪ್ಪತ್ತು ಪ್ರತಿಶತದಷ್ಟು ಖರ್ಚಾಗುವ ಅಪಾಯ ಇರುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ.

ರಿಯಾಯಿತಿ ದರಗಳು

ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಇರುವ ವಿವಿಧ ನಿಮಯಗಳ "ಸಂಪೂರ್ಣ" ಲಾಭ ಮತ್ತು ಅನುಕೂಲಗಳ ಮಾಪನ ಮಾಡುವಲ್ಲಿರುವ ಒಂದು ಸಮಸ್ಯೆಯೆಂದರೆ ಇದಕ್ಕಾಗಿ ಸರಿಯಾದ ರಿಯಾಯಿತಿ ದರವನ್ನು ನಿಗದಿ ಮಾಡುವುದು. ಇದರ ಅನುಕೂಲಗಳು ಕ್ಯೋಟೋ ಹೆಸರಿನಡಿಯ ನಿಯಮಾವಳಿಗಳಲ್ಲಿ ದೀರ್ಘಕಾಲದ ವ್ಯಾಪ್ತಿಯಲ್ಲಿ ಸೇರಿಕೊಳ್ಳುತ್ತವೆ. ರಿಯಾಯಿತಿ ದರದಲ್ಲಿನ ಸಣ್ಣ ಬದಲಾವಣೆಯ‌ೂ ಸಹ ಅಧ್ಯಯನಗಳಲ್ಲಿನ ಒಟ್ಟು ಅನುಕೂಲಗಳ ಮಧ್ಯೆ ಅತಿದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಆದರೂ ಈ ತೊಂದರೆ ಸಾಮಾನ್ಯವಾಗಿ ದೀರ್ಘಕಾಲದ ವ್ಯಾಪ್ತಿಯಡಿ ಬರುವ ಪರ್ಯಾಯ ನಿಯಮಗಳ "ತುಲನಾತ್ಮಕ" ಹೋಲಿಕೆಗೆ ಅನ್ವಯಿಸುವುದಿಲ್ಲ. ಇದಕ್ಕೆ ಕಾರಣವೆಂದರೆ ಕಾಲದ ವ್ಯಾಪ್ತಿಯಲ್ಲಿ ಖರ್ಚು ಮತ್ತು ಲಾಭದಲ್ಲಿ ಗಮನಾರ್ಹ ವ್ಯತ್ಯಾಸಗಳಿಲ್ಲದಿದ್ದರೆ ರಿಯಾಯಿತಿ ದರಗಳಲ್ಲಿನ ಬದಲಾವಣೆಗಳು ವಿವಿಧ ನಿಯಮಗಳ ನಿವ್ವಳ ಖರ್ಚು/ಲಾಭವನ್ನು ಸಮಾನವಾಗಿ ಹೊಂದಿಸಲು ಹೆಚ್ಚು ಒಲವು ತೋರುತ್ತವೆ.ಶಾಡೊವ್ ಪ್ರೈಸ್ ಆಫ್ ಕ್ಯಾಪಿಟಲ್‌ನಂತಹ ಸಾಂಪ್ರದಾಯಿಕ ರಿಯಾಯಿತಿ ದರದ ಮಾರಾಟ ವಿಧಾನ ಬಳಸಿ, ಕ್ಯೋಟೋದ ನಿವ್ವಳ ಲಾಭಗಳು ಧನಾತ್ಮಕವಾಗಿರುವ ಸಂದರ್ಭ ತಲುಪುವುದು ಬಲುಕಷ್ಟ.

ಕಳೆದ 1990ರಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ ಬದಲಾವಣೆ

ವಿಶ್ವಸಂಸ್ಥೆ ಸೂಚಿಸಿದಂತೆ ಕ್ಲೈಮೇಟ್ ಚೇಂಜ್ ಕನ್ವೆನ್ಷನ್‌ನ ಭಾಗವಾಗಿರುವ ದೇಶಗಳ 1990ರಿಂದ 2007ರವರೆಗಿನ ಹಸಿರುಮನೆ ಅನಿಲ ಹೊರಸೂಸುವಿಕೆಗಳ ಪಟ್ಟಿ ಈ ಕೆಳಗಿನಂತಿದೆ.

ದೇಶ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ
ಬದಲಾವಣೆ (1990–2007)
LULUCFಅನ್ನು ಹೊರತುಪಡಿಸಿ
ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ
ಬದಲಾವಣೆ (1990–2007)
LULUCFಅನ್ನು ಒಳಗೊಂಡು
ಒಪ್ಪಂದದ ನಿರ್ಬಂಧ 2008–2012
ಡೆನ್ಮಾರ್ಕ್‌ -3.3% -5.6% −20% −11%
ಜರ್ಮನಿ -21.3% -20.8% −21% −8%
ಕೆನಡಾ +26.2% +46.7% ಲಭ್ಯವಿಲ್ಲ −6%
ಆಸ್ಟ್ರೇಲಿಯಾ +30.0% +82.0% ಲಭ್ಯವಿಲ್ಲ +8%
ಸ್ಪೇನ್‌ +53.5% +55.3% +15% −8%
ನಾರ್ವೆ +10.8% -22.0% ಲಭ್ಯವಿಲ್ಲ +1%
ನ್ಯೂಜಿಲೆಂಡ್‌ +22.1% +18.3% ಲಭ್ಯವಿಲ್ಲ 0%
ಫ್ರಾನ್ಸ್‌‌ -5.3% -11.8% 0% −8%
ಗ್ರೀಸ್‌ +24.9% +25.2% +25% −8%
ಐರ್ಲೆಂಡ್ +25.0% +22.6% +13% −8%
ಜಪಾನ್‌ +8.2% +8.2% ಲಭ್ಯವಿಲ್ಲ −6%
ಯುನೈಟೆಡ್ ಕಿಂಗ್ಡಮ್ -17.3% -17.8% −12.5% −8%
ಪೋರ್ಚುಗಲ್‌ +38.1% +30.8% +27% −8%
EU -4.3% -5.6% ಲಭ್ಯವಿಲ್ಲ −8%

2008ರಲ್ಲಿ ಅತಿಹೆಚ್ಚು ಎಂದು ಅಂದಾಜಿಸಿದ ಹೊರಸೂಸುವಿಕೆಗಳು ಮತ್ತು ಇತರ ಪ್ರಸ್ತುತ ಮಾಹಿತಿಯನ್ನೊಳಗೊಂಡ 20 ದೇಶಗಳ 1992ರಿಂದ 2008ರವರೆಗಿನ CO2 ಹೊರಸೂಸುವಿಕೆಗಳಲ್ಲಿನ ಬದಲಾವಣೆಗಳ ಕೋಷ್ಟಕ ಈ ಕೆಳಗಿನಂತಿದೆ.ಕೆಳಗಿನ ಕೋಷ್ಟಕವು ರಚಿಸಿದ 2008ರ ಹೊರಸೂಸುವಿಕೆಗಳ ಸಂಖ್ಯೆಗಳು ನಿಜವಾಗಿ ಪ್ರಕಟವಾದ ಹೊರಸೂಸುವಿಕೆ ಸಂಖ್ಯೆಗಳಲ್ಲ, ಬದಲಿಗೆ ಅವು ಬಹಿರ್ಗಣನೆ ವಿಧಾನಗಳನ್ನು ಬಳಸಿಕೊಂಡು CDIAC ಮಾಡಿದ ಪ್ರಾಸ್ತಾವಿಕ ಅಂದಾಜುಗಳಾಗಿವೆ. ಪ್ರತಿ-ಕ್ಯಾಪಿಟ (ತಲಾ ಆದಾಯ)ಲೆಕ್ಕಾಚಾರಕ್ಕೆ ಬಳಸಿದ ಮಾಹಿತಿಯನ್ನು US ಸೆನ್ಸಸ್ ಬ್ಯೂರೋದ ಅಂತಾರಾಷ್ಟ್ರೀಯ ಡಾಟ (ಮೂಲ ಅಂಕಿಅಂಶ ಮಾಹಿತಿ)ಬೇಸ್ (IDB) ನಿಂದ ಪಡೆಯಲಾಗಿದೆ.

ದೇಶ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ
ಬದಲಾವಣೆ (1992–2008)
2008 ಪ್ರತಿ-ಕ್ಯಾಪಿಟ CO2 ಹೊರಸೂಸುವಿಕೆಗಳು
(ಪ್ರತಿ ವ್ಯಕ್ತಿಗೆ ಮೆಟ್ರಿಕ್‌ ಟನ್‌ಗಳು)
ವಿಶ್ವದಾದ್ಯಂತದ
CO2 ಹೊರಸೂಸುವಿಕೆಗಳ ಪಾಲು
ಚೀನಾ +166.5% 5.3 22.2%
USA +16.8% 18.6 17.8%
ಭಾರತ 124.1% 1.5 5.5%
ರಷ್ಯಾ −23.1% 11.3 5.0%
ಜಪಾನ್‌ 8.5% 10.3 4.1%
ಜರ್ಮನಿ −17.0% 9.4 2.4%
ಕೆನಡಾ 20.5% 17.0 1.8%
UK -6.8% 8.9 1.7%
ದಕ್ಷಿಣ ಕೊರಿಯಾ 81.8% 10.8 1.6%
ಇರಾನ್‌ 98.5% 7.5 1.5%
ಇಟಲಿ 5.6% 7.9 1.4%
ಮೆಕ್ಸಿಕೊ 13.5% 4.1 1.4%
ದಕ್ಷಿಣ ಆಫ್ರಿಕಾ 36.0% 9.1 1.4%
ಸೌದಿ ಅರೇಬಿಯಾ 52.6% 15.5 1.4%
ಬ್ರೆಜಿಲ್‌ 84.1% 2.1 1.3%
ಫ್ರಾನ್ಸ್‌‌ −4.4% 5.9 1.2%
ಇಂಡೊನೇಷಿಯ 78.9% 1.5 1.1%
ಆಸ್ಟ್ರೇಲಿಯಾ 18.8% 16.8 1.1%
ಸ್ಪೇನ್‌ 42.6% 8.5 1.1%
ಪೋಲೆಂಡ್‌ −2.8% 8.6 1.0%
ಉಳಿದ ದೇಶಗಳು 45.1% 3.0 23.7%
ವಿಶ್ವದ ಒಟ್ಟು ಹೊರಸೂಸುವಿಕೆ 41.7% 4.7 100.0%

2004ರ ಒಟ್ಟು ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು 1990ರ ಮಟ್ಟದೊಂದಿಗೆ ಹೋಲಿಸಿದಾಗ, U.S. ಹೊರಸೂಸುವಿಕೆಯು ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಅನಿಯತವಾಗಿ ಏರಿಳಿತವಾದರೂ ಒಟ್ಟಾರೆಯಾಗಿ ಏರಿಕೆಯಾಗುವುದರೊಂದಿಗೆ 15.8%ನಷ್ಟು ಹೆಚ್ಚಿತ್ತು. ಅದೇ ಸಂದರ್ಭದಲ್ಲಿ 23 (EU-23) ದೇಶಗಳ EU ಸಮ‌ೂಹವು ಅವುಗಳ ಹೊರಸೂಸುವಿಕೆಗಳನ್ನು 5%ನಷ್ಟು ಕಡಿಮೆ ಮಾಡಿಕೊಂಡವು. ದೇಶಗಳ EU-15 ಸಮ‌ೂಹವು (EU-23ರ ಅತಿದೊಡ್ಡ ಉಪವಿಭಾಗ) ಅದರ ಹೊರಸೂಸುವಿಕೆಗಳನ್ನು 1990ರಿಂದ 2004ರ ಮಧ್ಯೆ 0.8%ನಷ್ಟು ಕಡಿಮೆ ಮಾಡಿತು, ಈ ಹೊರಸೂಸುವಿಕೆಯು 1999ರಿಂದ 2004ರವರೆಗೆ 2.5%ನಷ್ಟು ಏರಿಕೆಯಾಗಿತ್ತು. ಯುರೋಪಿಯನ್‌ ಒಕ್ಕೂಟದ ಕೆಲವು ದೇಶಗಳ ಏರುವಿಕೆ ಪ್ರಮಾಣವು ದೇಶಗಳ ಕಾರ್ಯಾಚರಣೆ ಸಮ‌ೂಹದ ಭಾಗವಾಗಿರುವುದರೊಂದಿಗೆ ಇನ್ನೂ ಒಪ್ಪಂದದ ಮಿತಿಯಲ್ಲೇ ಇವೆ. (ಮೇಲಿನ ಪಟ್ಟಿಯಲ್ಲಿರುವ ಅಂಶಗಳನ್ನು ಗಮನಿಸಿ).ಇತ್ತೀಚಿನ 2010ರೊಳಗೆ ಕ್ಯೋಟೋ ಹೊರಸೂಸುವಿಕೆ ಬದ್ಧತೆಯ ಕರ್ತವ್ಯ ಪೂರ್ಣಗೊಳಿಸುವುದಕ್ಕಾಗಿ ಅಭಿವೃದ್ಧಿಯಲ್ಲಿರುವವುಗಳಲ್ಲಿ 2006ರ ಕೊನೆಯವರೆಗೆ ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಸ್ವೀಡನ್ ಮಾತ್ರ EU ದೇಶಗಳಾಗಿದ್ದವು. ಕ್ಯೋಟೋಗೆ ಸಹಿಹಾಕಿದ 37 ದೇಶಗಳು ಒಂದು ಗುಂಪಾಗಿ 2012ರೊಳಗೆ 5%ನಷ್ಟು ಹಸಿರುಮನೆ ಅನಿಲ ಇಳಿಕೆಯಾಗುವ ಗುರಿಯನ್ನು ತಲುಪಬಹುದು. ಅಲ್ಲದೇ ಹಸಿರುಮನೆ ಅನಿಲ ಕಡಿಮೆ ಮಾಡುವಲ್ಲಿನ ಹೆಚ್ಚಿನ ಯಶಸ್ಸು, 1990ರಲ್ಲಿ ಕಮ್ಯೂನಿಸಂ ಸರಕಾರದ ಪತನದ ನಂತರ, ಪೌರಾತ್ಯ ಯುರೋಪ್ ದೇಶಗಳ ಹೊರಸೂಸುವಿಕೆಗಳ ಬಗ್ಗೆ ಬಲವಾದ ನಿರಾಕರಣೆಮಾಡುವುದರಿಂದ ಸಾಧ್ಯವಾಯಿತು ಎಂದು UN ಅಂಕಿಅಂಶಗಳು ಸೂಚಿಸುತ್ತವೆ.

2007 EIA ಹೊರಸೂಸುವಿಕೆಗಳ ಮಾಹಿತಿ

2008ರಲ್ಲಿ CDIACಯು ಬಹಿರ್ಗಣನೆ ಮಾಡಿದ ಅಂದಾಜಿನ ಬದಲಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಡಿಪಾರ್ಟ್ಮೆಂಟ್ ಆಫ್ ಎನರ್ಜಿ(DOE)ಯ ಎನರ್ಜಿ ಇನ್ಫಾರ್ಮೇಶನ್ ಅಡ್ಮಿನಿಸ್ಟ್ರೇಶನ್ (EIA) ಪ್ರಕಟಗೊಳಿಸಿದ ಕೆಳಗಿನ ಕೋಷ್ಟಕವು 2007ರ ಹೊರಸೂಸುವಿಕೆ ಮಾಹಿತಿಯನ್ನು (ಇಂಧನಗಳ ಬಳಕೆಯಿಂದ ಬಿಡುಗಡೆಯಾದ CO2 ಹೊರಸೂಸುವಿಕೆಗಳು) ಆಧರಿಸಿದೆ. ಈ ಕೋಷ್ಟಕವನ್ನು ತಯಾರು ಮಾಡುವಾಗ ಈ ಕೆಳಗಿನ ಮಾಹಿತಿಗಳನ್ನು ಬಳಸಿಕೊಳ್ಳಲಾಗಿದೆ:,,,.

ದೇಶ ಹಸಿರುಮನೆ ಅನಿಲದ
ಹೊರಸೂಸುವಿಕೆಯಲ್ಲಿನ ಬದಲಾವಣೆ (1992–2007)
2007 ಪ್ರತಿ-ಕ್ಯಾಪಿಟ CO2 ಹೊರಸೂಸುವಿಕೆಗಳು
(ಪ್ರತಿ ವ್ಯಕ್ತಿಗೆ ಮೆಟ್ರಿಕ್‌ ಟನ್‌ಗಳು)
2007ರ ವಿಶ್ವದಾದ್ಯಂತ
CO2 ಹೊರಸೂಸುವಿಕೆಯಲ್ಲಿನ ಪಾಲು
ವಿಶ್ವದ ಒಟ್ಟು 39.22% 4.52 100.0%
ಚೀನಾ 154.42% 4.75 21.01%
USA 18.09% 19.94 20.08%
ರಷ್ಯಾ −17.41% 11.83 5.59%
ಭಾರತ 110.99% 1.25 4.68%
ಜಪಾನ್‌ 17.13% 9.91 4.22%
ಜರ್ಮನಿ −7.09% 10.13 2.79%
ಕೆನಡಾ 21.62% 17.91 1.97%
UK -2.62% 9.28 1.89%
ದಕ್ಷಿಣ ಕೊರಿಯಾ 75.34% 10.69 1.72%
ಇರಾನ್‌ 108.83%% 7.5 1.64%
ಇಟಲಿ 10.9% 7.92 1.54%
ಆಸ್ಟ್ರೇಲಿಯಾ 67.8% 21.99 1.53%
ಮೆಕ್ಸಿಕೊ 44.48% 4.17 1.51%
ದಕ್ಷಿಣ ಆಫ್ರಿಕಾ 40.11% 9.35 1.51%
ಸೌದಿ ಅರೇಬಿಯಾ 84.29% 15.73 1.45%
ಫ್ರಾನ್ಸ್‌‌ 5.84% 6.36 1.35%
ಬ್ರೆಜಿಲ್‌ 67.22% 2.05 1.33%
ಸ್ಪೇನ್‌ 50.8% 9.47 1.28%
ಉಕ್ರೇನ್ −33.8% 7.65 1.18%
ಇಂಡೋನೇಷಿಯಾ 76.38% 1.36 1.06%
ತೈವಾನ್‌ 133.01% 13.47 1.03%
ಪೋಲೆಂಡ್‌ −8.71% 7.83 1.01%
ಟರ್ಕಿ 99.86% 3.71 0.93%
ನೆದರ್ಲೆಂಡ್ಸ್‌ 22.69% 15.78 0.87%
ಥೈಲೆಂಡ್ 145.82% 3.81 0.83%
ಕಜಾಕ್‌ಸ್ತಾನ್ −18.26%% 14.16 0.72%
ವೆನಿಜುವೆಲಾ 53.65% 6.6 0.57%
UAE 67.49% 38.46 0.57%
ಅರ್ಜೆಂಟೀನಾ 50.91% 4.14 0.55%
ಈಜಿಪ್ಟ್ 70.34% 2.11 0.53%
ಮಲೇಷಿಯಾ 116.3% 6.35 0.53%
ಸಿಂಗಾಪುರ 126.35% 33.86 0.52%
ಬೆಲ್ಜಿಯಂ 15.59% 13.87 0.48%
ಪಾಕಿಸ್ತಾನ 97.02% 0.82 0.46%
ಉಜ್ಬೆಕಿಸ್ತಾನ 27.52% 4.52 0.41%
ಗ್ರೀಸ್‌ 35.02% 10.07 0.36%
ನೈಜೀರಿಯಾ 9.97% 0.72 0.35%
ರೊಮೇನಿಯ −20.83% 4.63 0.34%
ಅಲ್ಜೀರಿಯ 22.99% 3.03 0.34%
ಉಳಿದ ದೇಶಗಳು 31.29% 1.68 9.24%

ಉತ್ತರಾಧಿಕಾರಿ

ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್‌, ರಷ್ಯಾ, ಯುನೈಟೆಡ್‌ ಕಿಂಗ್‌ಡಮ್‌, ಅಮೆರಿಕಾ ಸಂಯುಕ್ತ ಸಂಸ್ಥಾನ, ಬ್ರೆಜಿಲ್‌, ಚೀನಾ, ಭಾರತ, ಮೆಕ್ಸಿಕೊ ಮತ್ತು ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳನ್ನೊಳಗೊಂಡ 2007ರ ಫೆಬ್ರವರಿ 16ರಲ್ಲಿ ಒಪ್ಪಿದ ಕಾನೂನಿಗೊಳಪಡದ 'ವಾಷಿಂಗ್ಟನ್ ಡಿಕ್ಲರೇಶನ್', ಕ್ಯೋಟೋ ಶಿಷ್ಟಾಚಾರದ ಯಶಸ್ಸಿನ ರೂಪುರೇಷೆಯ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದೆ. ಅವು ಕೈಗಾರೀಕರಣಗೊಂಡ ದೇಶಗಳು ಮತ್ತು ಅಭಿವೃದ್ಧಿಶೀಲ ದೇಶಗಳೆರಡಕ್ಕೂ ಅನ್ವಯಿಸುವ, ಜಾಗತಿಕ ಮಟ್ಟದಲ್ಲಿ ಮಿತಿ ಹೇರುವಿಕೆ-ಮತ್ತು-ವಹಿವಾಟು ವ್ಯವಸ್ಥೆಯನ್ನು ರೂಪಿಸುತ್ತವೆ. ಅಲ್ಲದೇ ಇದು 2009ರೊಳಗೆ ಸೂಕ್ತ ರೀತಿಯಲ್ಲಿ ರೂಪುಗೊಳ್ಳುವ ನಿರೀಕ್ಷೆ ಇದೆ. ಕಳೆದ 2007ರ ಜೂನ್‌ 7ರಲ್ಲಿ 33ನೇ G8 ಸಮಿತಿಯ ಮುಖಂಡರು G8 ದೇಶಗಳು '2050ರೊಳಗೆ ಜಾಗತಿಕ CO2 ಹೊರಸೂಸುವಿಕೆಗಳನ್ನು ಕನಿಷ್ಠ ಅರ್ಧದಷ್ಟಾದರೂ ಕಡಿಮೆ ಮಾಡುವ ಗುರಿ ಹೊಂದಬೇಕು' ಎಂಬ ಒಪ್ಪಂದಕ್ಕೆ ಬಂದರು. ಇದನ್ನು ಸಾಧಿಸಲು ಅನುಕೂಲವಾಗಿಸುವ ವಿವರಗಳು; ಯುನೈಟೆಡ್ ನೇಷನ್ಸ್ ಫ್ರೇಮ್ವರ್ಕ್‌ ಕನ್ವೆನ್ಷನ್‌ ಆನ್‌ ಕ್ಲೈಮೇಟ್‌ ಚೇಂಜ್‌‌ನೊಳಗಿನ ಚೌಕಟ್ಟಿನೊಳಗೆ ಇರುತ್ತದೆ .ಪರಿಸರ ಖಾತೆ ಸಚಿವರುಗಳಿಂದ ,ಬೆಳಕಿಗೆ ಬರುತ್ತಿರುವ ಪ್ರಮುಖ ಆರ್ಥಿಕಸ್ಥಿತಿಯನ್ನೂ ಒಳಗೊಂಡ ಕಾರ್ಯಚಟುವಟಿಕೆಯಲ್ಲಿ ಸಮಾಲೋಚಿಸಲ್ಪಡುತ್ತವೆ. ಯುನೈಟೆಡ್ ನೇಷನ್ಸ್ ಫ್ರೇಮ್ವರ್ಕ್‌ ಕನ್ವೆನ್ಷನ್‌ ಆನ್‌ ಕ್ಲೈಮೇಟ್‌ ಚೇಂಜ್‌ (UNFCCC)ನ ಆಶ್ರಯದಲ್ಲಿ ನಡೆದ ಹವಾಮಾನ ಬದಲಾವಣೆ ಮಾತುಕತೆಗಳ (ವಿಯೆನ್ನ ಕ್ಲೈಮೇಟ್‌ ಚೇಂಜ್‌ ಟಾಕ್ಸ್ 2007) ಒಂದು ಸುತ್ತು 2007ರ ಆಗಸ್ಟ್‌ 31ರಲ್ಲಿ, ಹವಾಮಾನ ಬದಲಾವಣೆಗೆ ಪರಿಣಾಮಕಾರಿ ಅಂತಾರಾಷ್ಟ್ರೀಯ ಪ್ರತಿಕ್ರಿಯೆಗಾಗಿ ಪ್ರಮುಖ ಅಂಶಗಳ ಮೇಲಿನ ಒಪ್ಪಂದದೊಂದಿಗೆ ಮುಕ್ತಾಯಗೊಂಡಿತು. ವಿಶ್ವಸಂಸ್ಥೆ ವರದಿ ಮಾಡಿದ ಮಾತುಕತೆಗಳ ಪ್ರಮುಖ ಲಕ್ಷಣಗಳಲ್ಲಿ, ಇಂಧನ ಸಾಮರ್ಥ್ಯವು ಹೊರಸೂಸುವಿಕೆಗಳಲ್ಲಿನ ಪ್ರಮಾಣವನ್ನು ಕಡಿಮೆ ಖರ್ಚಿನಲ್ಲಿ ಹೇಗೆ ಪರಿಣಾಮಕಾರಿ ನಿಯಂತ್ರಣ ಮಾಡುತ್ತದೆ,ಎಂಬುದನ್ನು ತೋರಿಸಿಕೊಟ್ಟಿದೆ.ಕಳೆದ 2007ರ ಡಿಸೆಂಬರ್ 3ರಲ್ಲಿ ಬಾಲಿಯ ನುಸ ದುವಾದಲ್ಲಿ ಆರಂಭವಾದ ಪ್ರಮುಖ ಅಂತಾರಾಷ್ಟ್ರೀಯ ಸಭೆಗೆ ವೇದಿಕೆ ಒದಗಿಸುವುದು ಈ ಮಾತುಕತೆಗಳ ಉದ್ದೇಶವಾಗಿತ್ತು.ಪೋಲೆಂಡ್‌‌ನ ಪೋಜ್ನಾನ್‌ನಲ್ಲಿ ಈ ಅಧಿವೇಶನವನ್ನು 2008ರಲ್ಲಿ ನಡೆಸಲಾಯಿತು. ಅರಣ್ಯನಾಶ ಮತ್ತು ಅರಣ್ಯ ಪ್ರದೇಶದ ಅವನತಿಯಿಂದ ಉಂಟಾಗುವ ಹೊರಸೂಸುವಿಕೆಗಳನ್ನು ಕಡಿಮೆಮಾಡುವುದು; (REDD) ಎಂದೂ ಕರೆಯುವ, ಅರಣ್ಯನಾಶ ತಪ್ಪಿಸುವ ಕ್ರಮಗಳನ್ನು ಭವಿಷ್ಯದ ಕ್ಯೋಟೋ ಶಿಷ್ಟಾಚಾರದಲ್ಲಿ ಕೈಗೊಳ್ಳುವ ಬಗೆಗಿನ ಚರ್ಚೆ ಈ ಸಭೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು. ಕಳೆದ 2009ರ ಡಿಸೆಂಬರ್‌ನಲ್ಲಿ ಕೋಪೆನ್‌ಹ್ಯಾಗನ್‌ನಲ್ಲಿನ UN ಸಭೆಯ ಬಗೆಗಿನ ಪೂರ್ವನಿಯೋಜಿತ ಮಾತುಕತೆಗಳು ಪ್ರಸಕ್ತದಲ್ಲಿ ವೇಗ ಪಡೆದುಕೊಂಡು ಮುಂದಾಲೋಚನೆಗೆ ಮುಂದಾಗಿವೆ.[226]

ಏಷ್ಯಾ ಪ್ಯಾಸಿಫಿಕ್‌ ಪಾರ್ಟ್ನರ್ಷಿಪ್‌ ಆನ್‌ ಕ್ಲೀನ್‌ ಡೆವೆಲಪ್ಮೆಂಟ್‌ ಆಂಡ್‌ ಕ್ಲೈಮಟ್‌ .(ಪರಿಶುದ್ಧ ಅಭಿವೃದ್ಧಿ ಮತ್ತು ಹವಾಮಾನದ ಮೇಲಿನ ಏಷಿಯಾ ಪ್ಯಾಸಿಫಿಕ್ ದೇಶಗಳ ಪಾಲುದಾರಿಕೆ)

ಏಷ್ಯಾ ಪ್ಯಾಸಿಫಿಕ್‌ ಪಾರ್ಟ್ನರ್ಷಿಪ್‌ ಆನ್‌ ಕ್ಲೀನ್‌ ಡೆವೆಲಪ್ಮೆಂಟ್‌ ಆಂಡ್‌ ಕ್ಲೈಮೇಟ್‌ ನ ಏಳು ಏಷ್ಯಾ-ಪ್ಯಾಸಿಫಿಕ್‌ ದೇಶಗಳು ಮಾಡಿಕೊಂಡ ಒಂದು ಒಪ್ಪಂದ: ಆಸ್ಟ್ರೇಲಿಯಾ, ಕೆನಡಾ, ಚೀನಾ, ಭಾರತ, ಜಪಾನ್‌, ದಕ್ಷಿಣ ಕೊರಿಯಾ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನ. ಈ ಏಳು ದೇಶಗಳು ಪ್ರಪಂಚದ ಅರ್ಧಕ್ಕಿಂತಲೂ ಹೆಚ್ಚು ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆಗೆ ಜವಾಬ್ದಾರವಾಗಿವೆ.ಈ ಸಹಭಾಗಿತ್ವವು 2006ರ ಜನವರಿಯಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಆರಂಭವಾಯಿತು. ಒಪ್ಪಂದದ ಸದಸ್ಯ [ಸೂಕ್ತ ಉಲ್ಲೇಖನ ಬೇಕು]ರಿಂದ ಸದಸ್ಯ ಒಕ್ಕೂಟ ರಾಷ್ಟ್ರಗಳು ಶುದ್ಧ ಇಂಧನ ನಿರ್ಮಾಣದ ಸಾಮರ್ಥ್ಯ ಮತ್ತು ಮಾರುಕಟ್ಟೆ ರಚನೆಯ ಉದ್ದೇಶವನ್ನು ಹೊಂದಿರುವ ಸುಮಾರು 100 ಯೋಜನೆಗಳನ್ನು ಪ್ರಾರಂಭಿಸಿದವು, ಎಂದು ಈ ಒಕ್ಕೂಟ ಸೂಚಿಸುತ್ತದೆ. ಈ ಚಟುವಟಿಕೆಗಳನ್ನು ಗಟ್ಟಿ ತಳಪಾಯದೊಂದಿಗೆ ನಿರ್ಮಿಸುವ ನಿಟ್ಟಿನಲ್ಲಿ, ಶುದ್ಧ ಇಂಧನ ಮತ್ತು ಪರಿಸರ ತಂತ್ರಜ್ಞಾನ ಮತ್ತು ಸೇವೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಾಚರಣೆಗೆ ತರಲು ದೀರ್ಘಕಾಲಿಕ ಯೋಜನೆಗಳನ್ನು ರೂಪಿಸಲಾಯಿತು. ಈ ಒಪ್ಪಂದವು ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ವೈಯಕ್ತಿಕವಾಗಿ ಕಡಿಮೆ ಮಾಡಲು ಆಯಾ ದೇಶಗಳಿಗೆ ಸೂಚಿಸುತ್ತದೆ.ಯಾವುದೇ ಅನುಷ್ಟಾನದ ವಿಧಾನಗಳಿಲ್ಲದೇ ಈ ಗುರಿ ತಲುಪುವಂತೆ ಮಾಡಿದೆ.ಈ ಒಪ್ಪಂದದ ಅನುಮೋದಕರು, ಇದು ಸುಲಭ ಹೊಂದಾಣಿಕೆಯ ಯೋಜನೆಯಾಗಿದ್ದು "ಕ್ಯೋಟೋ ಶಿಷ್ಟಾಚಾರಕ್ಕೆ ಪೂರಕ"ವಾಗಿದೆ ಎಂದು ಹೇಳಿದ್ದಾರೆ. ಯಾವುದೇ ಸೂಕ್ತ ಅನುಷ್ಟಾನದ ಸೂತ್ರಗಳಿಲ್ಲದೇ ಒಪ್ಪಂದವು ಪರಿಣಾಮಕಾರಿಯಾಗಿರುವುದಿಲ್ಲ. ಇದು ಪ್ರಸ್ತುತ ಕ್ಯೋಟೋ ಶಿಷ್ಟಾಚಾರದ ಬದಲಿಗೆ ನಿಯೋಜಿಸಿದ ಶಿಷ್ಟಾಚಾರದ ಮಾತುಕತೆಗಳನ್ನು ಕೂಡಾ (2005ರ ಡಿಸೆಂಬರ್‌ನಲ್ಲಿ ಮಾಂಟ್ರಿಯಲ್‌ನಲ್ಲಿ ಆರಂಭವಾದ ಮಾತುಕತೆಗಳು) ಹಾಳುಮಾಡುತ್ತದೆ; ಎಂದು ವಿಮರ್ಶಕರು ತಿಳಿಸಿದ್ದಾರೆ. U.S. ಸೆನೆಟರ್ ಜಾನ್ ಮ್ಯಾಕ್‌ಕೈನ್ಅವರು ಈ ಸಹಭಾಗಿತ್ವವು "ಸಾರ್ವಜನಿಕ ಸಂಪರ್ಕ-ಸಂಬಂಧಗಳ ಕೆಲಸ" ಎಂದು ಹೇಳಿದರೆ, ಅರ್ಥಶಾಸ್ತ್ರಜ್ಞರು ಸಹಭಾಗಿತ್ವವು "ಅಮೇರಿಕಾ ಮತ್ತು ಆಸ್ಟ್ರೇಲಿಯಾಕ್ಕೆ ಕ್ಯೋಟೋ ಅನುಮೋದಿಸುವುದನ್ನು ನಿರಾಕರಿಸಲು ಪೇಟೆಂಟ್ ಮರೆಮಾಚುವ ಸಾಧನವಾಗಿದೆ" ಎಂದು ವಿವರಿಸಿದ್ದಾರೆ.

ಇವನ್ನೂ ಗಮನಿಸಿ

ಹವಾಮಾನ ಬದಲಾವಣೆ ಮೇಲೆ ಕೈಗೊಂಡ ಕ್ರಮಗಳು.

  • ವಾತಾವರಣ ಬದಲಾವಣೆಯ ಬಗ್ಗೆ ವ್ಯಕ್ತಿಗತ ಹಾಗೂ ರಾಜಕೀಯ ಕ್ರಮ.
  • ವಾತಾವರಣ ಬದಲಾವಣೆಗಳಿಗೆ ವ್ಯವಹಾರಿಕ ಕ್ರಮ.

Agreements ಒಪ್ಪಂದಗಳು

  • ಏಷ್ಯಾ ಪ್ಯಾಸಿಫಿಕ್‌ ಪಾರ್ಟ್ನರ್ಷಿಪ್‌ ಆನ್‌ ಕ್ಲೀನ್‌ ಡೆವೆಲಪ್ಮೆಂಟ್‌ ಆಂಡ್‌ ಕ್ಲೈಮೇಟ್‌./
  • ಪರಿಸರೀಯ ಒಪ್ಪಂದ
  • G8+5
  • ಮಾಂಟ್ರಿಯಲ್‌ ಶಿಷ್ಟಾಚಾರ
  • ಸೂಪರ್‌ಫಂಡ್‌

ವ್ಯವಹಾರ

  • ಇಂಗಾಲದ ಸಾಲ
  • ಇಂಗಾಲ ಹೊರಸೂಸುವಿಕೆ ವ್ಯವಹಾರ
  • ಇಂಗಾಲದ ಹಣಕಾಸು
  • ಹೊರಸೂಸುವಿಕೆ ವ್ಯಾಪಾರ
  • ಪರಿಸರ ಸುಂಕದ ದರ
  • ಕಡಿಮೆ-ಇಂಗಾಲದ ಆರ್ಥಿಕತೆ

ವಿವಾದಗಳು

  • ಹವಾಮಾನ ಬದಲಾವಣೆಯ ನಿರಾಕರಣೆ
  • ಜಾಗತಿಕ ತಾಪ ಏರಿಕೆ ಷಡ್ಯಂತ್ರ ಪ್ರಮೇಯ
  • ಜಾಗತಿಕ ತಾಪಮಾನ ಏರಿಕೆ ವಿವಾದ
  • ವಿಜ್ಞಾನದ ರಾಜಕೀಕರಣ
  • ಟ್ರ್ಯಾಜಡಿ ಆಫ್‌ ದಿ ಕಾಮನ್ಸ್‌

ಹೊರಸೂಸುವಿಕೆಗಳು

  • ಇಂಗಾಲದ ಡಯಾಕ್ಸೈಡ್‌ನ ಸಮಾನ ಪ್ರಮಾಣ
  • ಇಂಗಾಲ ಡಯಾಕ್ಸೈಡ್‌ ಹೊರಸೂಸುವಿಕೆಗಳ ಪ್ರಕಾರ ದೇಶಗಳ ಪಟ್ಟಿ
  • ಇಂಗಾಲದ ಡಯಾಕ್ಸೈಡ್‌ನ ತಲಾ ಹೊರಸೂಸುವಿಕೆಗೆ ಅನುಸಾರವಾಗಿ ರಾಷ್ಟ್ರಗಳ ಪಟ್ಟಿ
  • GDP ಮತ್ತು ಇಂಗಾಲ ಡಯಾಕ್ಸೈಡ್‌ ಹೊರಸೂಸುವಿಕೆಗಳ ಅನುಪಾತದ ಪ್ರಕಾರ ದೇಶಗಳ ಪಟ್ಟಿ

ಪ್ರಾಥಮಿಕ ಯತ್ನಗಳು

  • ಸಿಟಿಜೆನ್ಸ್ ಫಾರ್‌ ಎ ಸೌಂಡ್‌ ಎಕಾನಮಿ
  • ಆರಂಭಿಕ ಹವಾಮಾನ ಬಲಾವಣೆಯ ಪಟ್ಟಿ
  • ಒರೆಗಾನ್‌ ಕೋರಿಕೆ
  • ಟ್ರಾನ್ಸ್‌-ಮೆಡಿಟರೆನಿಯನ್‌ ರೆನ್ಯೂಯೆಬಲ್‌ ಇನರ್ಜಿ ಕೊಆಪರೆಷನ್‌
  • ವೆಸ್ಟರ್ನ್‌ ರೀಜನಲ್‌ ಕ್ಲೈಮೇಟ್‌ ಆಕ್ಷನ್‌ ಇನಿಷಿಯೆಟಿವ್‌

ಆಕರಗಳು


This article uses material from the Wikipedia ಕನ್ನಡ article ಕ್ಯೋಟೋ ಶಿಷ್ಟಾಚಾರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಕ್ಯೋಟೋ ಶಿಷ್ಟಾಚಾರ ಹವಾಮಾನ ಬದಲಾವಣೆ ಕುರಿತ ನಿಯಮಗಳ ಮಹಾಸಭೆಕ್ಯೋಟೋ ಶಿಷ್ಟಾಚಾರ ಹಿನ್ನೆಲೆಕ್ಯೋಟೋ ಶಿಷ್ಟಾಚಾರ ಊರ್ಜಿತಗೊಳಿಸುವ ಪ್ರಕ್ರಿಯೆಕ್ಯೋಟೋ ಶಿಷ್ಟಾಚಾರ ಉದ್ದೇಶಗಳುಕ್ಯೋಟೋ ಶಿಷ್ಟಾಚಾರ 2012 ಹೊರಸೂಸುವಿಕೆ ತಡೆಗಟ್ಟುವ ಗುರಿ ಮತ್ತು ಸುಲಭವಾಗಿ ಹೊಂದಿಕೊಳ್ಳಬಲ್ಲ ವಿಧಾನಗಳುಕ್ಯೋಟೋ ಶಿಷ್ಟಾಚಾರ ಒಪ್ಪಂದದ ವಿವರಗಳುಕ್ಯೋಟೋ ಶಿಷ್ಟಾಚಾರ ಸರ್ಕಾರಗಳ ಸದ್ಯದ ಪ್ರತಿಪಾದನೆಗಳುಕ್ಯೋಟೋ ಶಿಷ್ಟಾಚಾರ ಬೆಂಬಲಕ್ಯೋಟೋ ಶಿಷ್ಟಾಚಾರ ಟೀಕೆಗಳುಕ್ಯೋಟೋ ಶಿಷ್ಟಾಚಾರ ಲಾಭ-ನಷ್ಟ ವಿಶ್ಲೇಷಣೆಕ್ಯೋಟೋ ಶಿಷ್ಟಾಚಾರ ಕಳೆದ 1990ರಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ ಬದಲಾವಣೆಕ್ಯೋಟೋ ಶಿಷ್ಟಾಚಾರ ಉತ್ತರಾಧಿಕಾರಿಕ್ಯೋಟೋ ಶಿಷ್ಟಾಚಾರ ಏಷ್ಯಾ ಪ್ಯಾಸಿಫಿಕ್‌ ಪಾರ್ಟ್ನರ್ಷಿಪ್‌ ಆನ್‌ ಕ್ಲೀನ್‌ ಡೆವೆಲಪ್ಮೆಂಟ್‌ ಆಂಡ್‌ ಕ್ಲೈಮಟ್‌ .(ಪರಿಶುದ್ಧ ಅಭಿವೃದ್ಧಿ ಮತ್ತು ಹವಾಮಾನದ ಮೇಲಿನ ಏಷಿಯಾ ಪ್ಯಾಸಿಫಿಕ್ ದೇಶಗಳ ಪಾಲುದಾರಿಕೆ)ಕ್ಯೋಟೋ ಶಿಷ್ಟಾಚಾರ ಇವನ್ನೂ ಗಮನಿಸಿಕ್ಯೋಟೋ ಶಿಷ್ಟಾಚಾರ ಆಕರಗಳುಕ್ಯೋಟೋ ಶಿಷ್ಟಾಚಾರ ಹೆಚ್ಚಿನ ಓದಿಗಾಗಿಕ್ಯೋಟೋ ಶಿಷ್ಟಾಚಾರ ಹೊರಗಿನ ಕೊಂಡಿಗಳುಕ್ಯೋಟೋ ಶಿಷ್ಟಾಚಾರಇಟಲಿಒಪ್ಪಂದಕೆನಡಾಜಪಾನ್‌ಜರ್ಮನಿಜಾಗತಿಕ ತಾಪಮಾನಫ್ರಾನ್ಸ್‌ವಿಕಿಪೀಡಿಯ:Citation neededಶಿಷ್ಟಾಚಾರಸ್ಪೇನ್‌ಹವಾಮಾನ

🔥 Trending searches on Wiki ಕನ್ನಡ:

ಸತ್ಯ (ಕನ್ನಡ ಧಾರಾವಾಹಿ)ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಶನಿ (ಗ್ರಹ)ಅರ್ಜುನವಿಚ್ಛೇದನಕನ್ನಡ ಅಕ್ಷರಮಾಲೆಅಂಬರೀಶ್ ನಟನೆಯ ಚಲನಚಿತ್ರಗಳುಭಾರತದ ರೂಪಾಯಿಸವದತ್ತಿಕೊಡಗಿನ ಗೌರಮ್ಮಕರ್ನಾಟಕದ ಮುಖ್ಯಮಂತ್ರಿಗಳುಬಾಗಿಲುಚಿಕ್ಕಮಗಳೂರುಈಡನ್ ಗಾರ್ಡನ್ಸ್ನಂಜನಗೂಡುತತ್ತ್ವಶಾಸ್ತ್ರವೀರಗಾಸೆಅರಿಸ್ಟಾಟಲ್‌ಸೆಲರಿತೆಂಗಿನಕಾಯಿ ಮರಹನುಮಂತಕರ್ನಾಟಕ ವಿಧಾನ ಪರಿಷತ್ಗೋತ್ರ ಮತ್ತು ಪ್ರವರಮೂಳೆಕನ್ನಡ ಜಾನಪದಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಮನರಂಜನೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಶನಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಚೋಮನ ದುಡಿ (ಸಿನೆಮಾ)ಕನ್ನಡ ಸಾಹಿತ್ಯ ಪ್ರಕಾರಗಳುಭೂಮಿಗೋವಿನ ಹಾಡುಗೋಕರ್ಣಗಣೇಶ್ (ನಟ)ವಾಲ್ಮೀಕಿಕೆ ವಿ ನಾರಾಯಣಪಿ.ಲಂಕೇಶ್ಕನ್ನಡ ಗುಣಿತಾಕ್ಷರಗಳುರಾಘವಾಂಕಚನ್ನಬಸವೇಶ್ವರಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಬಿಳಿಗಿರಿರಂಗನ ಬೆಟ್ಟಸಿದ್ದರಾಮಯ್ಯಪತ್ರಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಸಮುದ್ರಗುಪ್ತಕಬಡ್ಡಿಸಣ್ಣ ಕೊಕ್ಕರೆವೆಂಕಟೇಶ್ವರಭಾರತ ರತ್ನತಿಂಥಿಣಿ ಮೌನೇಶ್ವರಕಮಲದಹೂಮತದಾನಕಲ್ಯಾಣ ಕರ್ನಾಟಕಕನ್ನಡ ಸಾಹಿತ್ಯಭಾರತೀಯ ಕಾವ್ಯ ಮೀಮಾಂಸೆಹಿಂದೂ ಮಾಸಗಳುಶಿಶುನಾಳ ಶರೀಫರುಹಯಗ್ರೀವದಿವ್ಯಾಂಕಾ ತ್ರಿಪಾಠಿಎಚ್.ಎಸ್.ಶಿವಪ್ರಕಾಶ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ನೈಸರ್ಗಿಕ ಸಂಪನ್ಮೂಲನಿಯತಕಾಲಿಕಭಾರತದಲ್ಲಿನ ಶಿಕ್ಷಣತಾಳೀಕೋಟೆಯ ಯುದ್ಧಮಲಬದ್ಧತೆಸುಗ್ಗಿ ಕುಣಿತಮೂಕಜ್ಜಿಯ ಕನಸುಗಳು (ಕಾದಂಬರಿ)ಸಜ್ಜೆಕರ್ನಾಟಕದ ಏಕೀಕರಣಮಲ್ಲಿಗೆಪಿತ್ತಕೋಶರಾಷ್ಟ್ರೀಯ ಮತದಾರರ ದಿನಕರ್ನಾಟಕ ಜನಪದ ನೃತ್ಯಬಳ್ಳಾರಿ🡆 More