ಕನಕಾಂಬರ

Justicia infundibuliformis L.

Crossandra infundibuliformis
ಕನಕಾಂಬರ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Lamiales
ಕುಟುಂಬ:
Acanthaceae
ಕುಲ:
Crossandra
ಪ್ರಜಾತಿ:
C. infundibuliformis
Binomial name
Crossandra infundibuliformis
(L.) Nees
Synonyms

ಕನಕಾಂಬರ (ಕ್ರಾಸ್ಯಾಂಡ್ರಾ ಇನ್‍ಫ಼ಂಡಿಬ್ಯೂಲಿಫ಼ಾರ್ಮಿಸ್) ದಕ್ಷಿಣ ಭಾರತ ಹಾಗೂ ಶ್ರೀಲಂಕಾಗೆ ಸ್ಥಳೀಯವಾದ, ಅಕ್ಯಾಂಥೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ. ಭಾರತದ ಮೂಲ ನಿವಾಸಿಗಳಾದ ಇವು ಏಷ್ಯದ ಇತರ ಭಾಗಗಳಲ್ಲೂ ಮಡಗಾಸ್ಕರ್ ದ್ವೀಪಗಳಲ್ಲೂ ಆಫ್ರಿಕದಲ್ಲೂ ಕಂಡುಬರುತ್ತವೆ. ಇದು ಸಾಮಾನ್ಯವಾಗಿ ದಕ್ಷಿಣ ಭಾರತದ ಮಲೆನಾಡು ಭಾಗದಲ್ಲಿ ಕಂಡುಬರುತ್ತದೆ.

ವೈಜ್ಞಾನಿಕ ಹೆಸರು

ಅಕ್ಯಾನ್ತೇಸೀ ಕುಟುಂಬಕ್ಕೆ ಸೇರಿದ ಕ್ರಾಸ್ಯಾಂಡ್ರ ಎಂಬುದು ವೈಜ್ಞಾನಿಕ ನಾಮ.ಈ ಜಾತಿಯಲ್ಲಿ ಸು. 40 ಪ್ರಭೇಧಗಳಿವೆ.ಇವುಗಳಲ್ಲಿ ಕ್ರಾ.ಅನ್ಡುಲಿಫೋಲಿಯ, ಕ್ರಾ.ಆಕ್ಸಿಲ್ಯಾರಿಸ್, ಕ್ರಾ.ನಿಲೋಟಿಕ ಮತ್ತು ಕ್ರಾ. ಇನ್ಫಂಡಿಬ್ಯೂಲಿಫ್ರ್ಮಿಸ್ ಎಂಬ ಪ್ರಭೇದಗಳು ಮುಖ್ಯವಾದುವು.

ಸಸ್ಯ ಲಕ್ಷಣಗಳು

ಸುಮಾರು ೧ ಮಿ. ಎತ್ತರಕ್ಕೆ ಬೆಳೆಯುವ, ಹೊಳಪುಳ್ಳ, ಅಲೆಅಲೆಯುಳ್ಳ ಅಂಚಿನ ಎಲೆಗಳು ಮತ್ತು ವರ್ಷಾದ್ಯಂತ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದಾದ ಪಂಖಾಕಾರದ ಹೂವುಗಳನ್ನು ಹೊಂದಿರುವ ಒಂದು ನೆಟ್ಟಗಿನ ನಿತ್ಯಹರಿದ್ವರ್ಣ ಉಪಪೊದೆಸಸ್ಯ. ಹೂವುಗಳು ಅಸಾಮಾನ್ಯ ಆಕಾರದ್ದಾಗಿರುತ್ತವೆ ಮತ್ತು ೩ ರಿಂದ ೫ ಅಸಮ ದಳಗಳನ್ನು ಹೊಂದಿರುತ್ತವೆ. ಕನಕಾಂಬರದ ಕಾಂಡ ಎಳೆಯದಾಗಿದ್ದಾಗ ಹಸಿರು ಬಣ್ಣದ್ದೂ ಬಲಿದಾಗ ಕಂದು ಬಣ್ಣದ್ದೂ ಆಗಿದೆ. ಅದರ ಮೇಲ್ಮೈನುಣುಪು. ಗಿಣ್ಣುಗಳು ಉಬ್ಬಿಕೊಂಡಿವೆ. ಕಾಂಡದಮೇಲೆ ಅಭಿಮುಖವಾಗಿ ಜೋಡಿಸಿರುವ ಸರಳ ಎಲೆಗಳಿವೆ. ಅವುಗಳ ಉದ್ದ ಸು. 6", ಅಗಲ ಸು. 2",ಆಕಾರ ಈಟಿಯಂತೆ, ಅಂಚು ಅಲೆಯಂತೆ, ತುದಿ ಮೊನಚು. ಎಲೆಗಳಿಗೆ ವೃಂತಪರ್ಣಗಳಿಲ್ಲ. ಹೂಗಳು ಕದಿರು ಗೊಂಚಲಿನಲ್ಲಿ (ಸ್ಪೈಕ್) ಜೋಡಣೆಗೊಂಡಿವೆ. ಬಹಳ ಸುಂದರವಾದ ಅವುಗಳಲ್ಲಿ ಕೇಸರಿ, ಕಿತ್ತಳೆ ಮಿಶ್ರಿತ ಹಳದಿ, ನಸುನೀಲಿ ಹಾಗೂ ಅಚ್ಚಹಳದಿ ವರ್ಣವೈವಿಧ್ಯವಿದೆ. ಕೇಸರಿ ಬಣ್ಣದವಕ್ಕೆ ಒಳ್ಳೆಯ ಬೇಡಿಕೆ ಇದೆ. ಹೂಗಳಿಗೆ ಬ್ರ್ಯಾಕ್ಟು ಮತ್ತು ಬ್ರ್ಯಾಕ್ಟಿಯೋಲುಗಳಿವೆ. ದ್ವಿಲಿಂಗಿಗಳಾದ ಅವು ಉಭಯ ಪಾಶರ್ವ್‌ ಸಮಾಂಗತೆಯುಳ್ಳವು. ಪುಷ್ಪಪಾತ್ರೆಯಲ್ಲಿ ಬುಡಭಾಗದಲ್ಲಿ ಕೂಡಿಕೊಂಡಿವೆ. ಕೇಸರಗಳು ನಾಲ್ಕು, ಹೂದಳಗಳಿಗೆ ಅಂಟಿಕೊಂಡಿವೆ. ಎರಡು ಕೇಸರಗಳು ಉಳಿದೆರಡಕ್ಕಿಂತ ಹೆಚ್ಚು ಉದ್ದವಾಗಿವೆ. ಪರಾಗಕೋಶಗಳಲ್ಲಿ ಒಂದೇ ಕೋಣೆಯಿದೆ. ಅಂಡಾಶಯ ಉಚ್ಛಸ್ಥಾನದ್ದು. ಎರಡು ಕಾರ್ಪೆಲುಗಳಿಂದ ಕೂಡಿದೆ. ಇವೆರಡೂ ಸಂಯುಕ್ತವಾಗಿದ್ದು ಎರಡಕ್ಕೂ ಸೇರಿಕೊಂಡಂತೆ ಎರಡು ಕೋಣೆಗಳಿವೆ. ಅಂಡಕಗಳ ಸಂಖ್ಯೆ 4. ಫಲ ಆಯತಾಕಾರದ ಚೂಪು ತುದಿಯ ಕ್ಯಾಪ್ಸ್ಯುಲ್. ಬೀಜಗಳು ಚಪ್ಪಟೆಯಾಗಿದೆ. ಅವು ಕಾಯಿಯಿಂದ ಹೊರಸಿಡಿಯಲು ಅನುಕೂಲವಾಗುವಂತೆ ಅವುಗಳ ಬುಡದಲ್ಲಿ ಕೊಕ್ಕೆ ಆಕಾರದ ರಚನೆಗಳಿವೆ (ರೆಟಿನ್ಯಾಕ್ಯುಲ).

ಕನಕಾಂಬರ 

ಉಪಯೋಗಗಳು

ಕನಕಾಂಬರವನ್ನು ತೋಟಗಳಲ್ಲಿ ಮತ್ತು ದೇವಸ್ಥಾನದ ಆವರಣಗಳಲ್ಲಿ ಅಲಂಕಾರಕ್ಕೂ ಹೂವಿಗಾಗಿಯೂ ಬೆಳೆಸುತ್ತಾರೆ. ಈಚೆಗೆ ಇದನ್ನು ಮನೆಮನೆಗಳಲ್ಲೂ ಬೆಳೆಸುತ್ತಿದ್ದಾರೆ. ಸಾಮಾನ್ಯವಾಗಿ ಬೀಜದಿಂದ ಮತ್ತು ನೇರವಾಗಿ ಸಸಿಗಳನ್ನು ನಾಟಿ ಮಾಡುವುದರ ಮೂಲಕ ವೃದ್ಧಿ ಮಾಡುತ್ತಾರೆ.

ಉಲ್ಲೇಖಗಳು

ಕನಕಾಂಬರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನಕಾಂಬರ

Tags:

ಕನಕಾಂಬರ ವೈಜ್ಞಾನಿಕ ಹೆಸರುಕನಕಾಂಬರ ಸಸ್ಯ ಲಕ್ಷಣಗಳುಕನಕಾಂಬರ ಉಪಯೋಗಗಳುಕನಕಾಂಬರ ಉಲ್ಲೇಖಗಳುಕನಕಾಂಬರ

🔥 Trending searches on Wiki ಕನ್ನಡ:

ಬಳ್ಳಾರಿಹೊಂಗೆ ಮರಮಾಸನಿರಂಜನಎಲೆಕ್ಟ್ರಾನಿಕ್ ಮತದಾನಜನತಾ ದಳ (ಜಾತ್ಯಾತೀತ)ಚಾಮರಾಜನಗರಒಡೆಯರ್ಸಾರ್ವಜನಿಕ ಹಣಕಾಸುಸುಮಲತಾಆಲದ ಮರಮೌರ್ಯ ಸಾಮ್ರಾಜ್ಯಕಿತ್ತಳೆಎಚ್ ಎಸ್ ಶಿವಪ್ರಕಾಶ್ಮಲ್ಲಿಗೆತ್ಯಾಜ್ಯ ನಿರ್ವಹಣೆಕಬ್ಬುಸಹಕಾರಿ ಸಂಘಗಳುವೃದ್ಧಿ ಸಂಧಿಬರವಣಿಗೆಸರಸ್ವತಿ ವೀಣೆಬೃಂದಾವನ (ಕನ್ನಡ ಧಾರಾವಾಹಿ)ಸಂವಿಧಾನಪತ್ರಆಸ್ಪತ್ರೆಕರ್ಬೂಜಚಂದ್ರಗುಪ್ತ ಮೌರ್ಯಅಶ್ವತ್ಥಮರರಾಷ್ತ್ರೀಯ ಐಕ್ಯತೆಹಿಂದೂ ಧರ್ಮಸಿದ್ಧರಾಮಕಮಲವಿಷ್ಣುವರ್ಧನ್ (ನಟ)ಅಳಲೆ ಕಾಯಿದೂರದರ್ಶನಯೋಗಶ್ಯೆಕ್ಷಣಿಕ ತಂತ್ರಜ್ಞಾನಮಧುಮೇಹಮಂತ್ರಾಲಯಮಹಾವೀರಕನ್ನಡ ಕಾಗುಣಿತಶಾತವಾಹನರುಕರ್ನಾಟಕದ ಮುಖ್ಯಮಂತ್ರಿಗಳುಮಾನ್ವಿತಾ ಕಾಮತ್ಬಾರ್ಲಿಕ್ರಿಕೆಟ್ಡಿ.ವಿ.ಗುಂಡಪ್ಪಗೂಬೆಮುಟ್ಟುಮಹಾಕವಿ ರನ್ನನ ಗದಾಯುದ್ಧಹೆಚ್.ಡಿ.ದೇವೇಗೌಡಶಿಕ್ಷಣ ಮಾಧ್ಯಮವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕೊಡಗಿನ ಗೌರಮ್ಮಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕನ್ನಡ ವ್ಯಾಕರಣಚಕ್ರವ್ಯೂಹದೇವನೂರು ಮಹಾದೇವಶಾಸನಗಳುದಾವಣಗೆರೆಕೃತಕ ಬುದ್ಧಿಮತ್ತೆಪಂಡಿತಅಂಬರೀಶ್ ನಟನೆಯ ಚಲನಚಿತ್ರಗಳುಸೆಸ್ (ಮೇಲ್ತೆರಿಗೆ)ಜೀವವೈವಿಧ್ಯಭಾರತೀಯ ಸಂಸ್ಕೃತಿಟಿಪ್ಪು ಸುಲ್ತಾನ್ಭಾಮಿನೀ ಷಟ್ಪದಿಕಾಳಿದಾಸಸಂಗ್ಯಾ ಬಾಳ್ಯಪ್ರಗತಿಶೀಲ ಸಾಹಿತ್ಯಬಸವ ಜಯಂತಿಸನ್ನತಿಧನಂಜಯ್ (ನಟ)ಪು. ತಿ. ನರಸಿಂಹಾಚಾರ್🡆 More