ಆದಾಯ

ಆದಾಯ ಎಂದರೆ ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಒಂದು ಘಟಕ ಅಥವಾ ವ್ಯಕ್ತಿಯು ಗಳಿಸುವ ಬಳಕೆ ಮತ್ತು ಉಳಿತಾಯದ ಅವಕಾಶ.

ಇದನ್ನು ಸಾಮಾನ್ಯವಾಗಿ ವಿತ್ತೀಯ ಪರಿಭಾಷೆಯಲ್ಲಿ ವ್ಯಕ್ತಪಡಿಸಲಾಗುತ್ತದೆ. ಆದರೆ, ಮನೆಗಳು ಮತ್ತು ವ್ಯಕ್ತಿಗಳ ವಿಷಯದಲ್ಲಿ, ಆದಾಯ ಎಂದರೆ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಎಲ್ಲ ವೇತನಗಳು, ಸಂಬಳಗಳು, ಲಾಭಗಳು, ಬಡ್ಡಿ ಪಾವತಿಗಳು, ಬಾಡಿಗೆಗಳು ಮತ್ತು ಪಡೆದ ಗಳಿಕೆಗಳ ಇತರ ರೂಪಗಳ ಮೊತ್ತ. ಸಾರ್ವಜನಿಕ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ, ಈ ಪದವು ವಿತ್ತೀಯ ಮತ್ತು ವಿತ್ತೀಯವಲ್ಲದ ಉಪಯೋಗ ಸಾಮರ್ಥ್ಯದ ಶೇಖರಣೆಯನ್ನು ಸೂಚಿಸಬಹುದು. ವಿತ್ತೀಯ ಉಪಯೋಗ ಸಾಮರ್ಥ್ಯವನ್ನು ಒಟ್ಟು ಆದಾಯದ ಪ್ರತಿನಿಧಿಯಾಗಿ ಬಳಸಲಾಗುತ್ತದೆ.

ಬಹುತೇಕ ಪ್ರತಿ ದೇಶದಲ್ಲಿ ತಲಾವಾರು ಆದಾಯವು ಸ್ಥಿರವಾಗಿ ಹೆಚ್ಚಾಗುತ್ತಿದೆ. ಜನರು ಅಧಿಕ ಆದಾಯವನ್ನು ಹೊಂದಿರುವುದಕ್ಕೆ ಅನೇಕ ಅಂಶಗಳು ಕೊಡುಗೆ ನೀಡುತ್ತವೆ ಉದಾಹರಣೆಗೆ ಶಿಕ್ಷಣ, ಜಾಗತೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯ ಹಾಗೂ ಶಾಂತಿಯಂತಹ ಅನುಕೂಲಕರ ರಾಜಕೀಯ ಪರಿಸ್ಥಿತಿಗಳು. ಆದಾಯದಲ್ಲಿ ಹೆಚ್ಚಳವು ಜನರು ಕಡಿಮೆ ಗಂಟೆಗಳು ಕೆಲಸಮಾಡಲು ಆಯ್ದುಕೊಳ್ಳಲು ಕಾರಣವಾಗುವ ಸಾಧ್ಯತೆಯೂ ಇರುತ್ತದೆ. ಅಭಿವೃದ್ಧಿಹೊಂದಿದ ದೇಶಗಳು ಅಧಿಕ ಆದಾಯಗಳನ್ನು ಹೊಂದಿರುತ್ತವೆ ಮತ್ತು ಅಭಿವೃದ್ಧಿಶೀಲ ದೇಶಗಳು ಕಡಿಮೆ ಆದಾಯಗಳನ್ನು ಹೊಂದಿರುವ ಸಾಧ್ಯತೆ ಇರುತ್ತದೆ.

ಆದಾಯ ಅಸಮಾನತೆಯು ಅಸಮಾನ ರೀತಿಯಲ್ಲಿ ಆದಾಯವು ಹಂಚಿಕೆಯಾಗಿರುವ ಮಟ್ಟವನ್ನು ಸೂಚಿಸುತ್ತದೆ. ಇದನ್ನು ಲೊರೆಂಜ಼್ ವಕ್ರರೇಖೆ ಮತ್ತು ಜಿನಿ ಗುಣಾಂಕ ಸೇರಿದಂತೆ ವಿವಿಧ ವಿಧಾನಗಳಿಂದ ಅಳೆಯಬಹುದು. ಸ್ವಲ್ಪ ಪ್ರಮಾಣದ ಅಸಮಾನತೆಯು ಅಗತ್ಯ ಮತ್ತು ಅಪೇಕ್ಷಣೀಯ, ಆದರೆ ಅತ್ಯಧಿಕ ಅಸಮಾನತೆಯು ದಕ್ಷತೆಯ ಸಮಸ್ಯೆಗಳು ಮತ್ತು ಸಾಮಾಜಿಕ ಅನ್ಯಾಯವನ್ನು ಉಂಟುಮಾಡುತ್ತದೆ ಎಂದು ಅರ್ಥಶಾಸ್ತ್ರಜ್ಞರು ಒಪ್ಪುತ್ತಾರೆ. ನಿವ್ವಳ ರಾಷ್ಟ್ರೀಯ ಆದಾಯದಂತಹ ಅಂಕಿಅಂಶಗಳಿಂದ ಅಳೆಯಲಾದ ರಾಷ್ಟ್ರೀಯ ಆದಾಯವು ಅರ್ಥವ್ಯವಸ್ಥೆಯಲ್ಲಿನ ಜನರು, ಸಂಸ್ಥೆಗಳು ಮತ್ತು ಸರ್ಕಾರದ ಒಟ್ಟು ಆದಾಯವನ್ನು ಅಳೆಯುತ್ತದೆ.

ಇತಿಹಾಸದಾದ್ಯಂತ, ಅನೇಕರು ನೈತಿಕತೆ ಮತ್ತು ಸಮಾಜದ ಮೇಲೆ ಆದಾಯದ ಪ್ರಭಾವದ ಬಗ್ಗೆ ಬರೆದಿದ್ದಾರೆ. ವೈಯಕ್ತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿನ ನಿರಂತರ ಆದಾಯದ ಬೆಳವಣಿಗೆಯಲ್ಲಿ ವ್ಯಕ್ತವಾದ ವಸ್ತುದ್ರವ್ಯದ ಪ್ರಗತಿ ಮತ್ತು ಸಮೃದ್ಧಿಯು ಯಾವುದೇ ಬಗೆಯ ನೈತಿಕತೆಯನ್ನು ಜೀವಂತವಾಗಿರಿಸುವುದಕ್ಕೆ ಅನಿವಾರ್ಯ ಅಡಿಪಾಯವನ್ನು ಒದಗಿಸುತ್ತದೆ ಎಂದು ಕೆಲವು ವಿದ್ವಾಂಸರು ತೀರ್ಮಾನಕ್ಕೆ ಬಂದಿದ್ದಾರೆ. ಈ ವಾದವನ್ನು ಆ್ಯಡಮ್ ಸ್ಮಿತ್ ಸ್ಪಷ್ಟವಾಗಿ ನೀಡಿದನು.

ಉಲ್ಲೇಖಗಳು

Tags:

ಅರ್ಥಶಾಸ್ತ್ರಬಡ್ಡಿವೇತನಸಂಬಳ

🔥 Trending searches on Wiki ಕನ್ನಡ:

ಭಾರತದ ಮಾನವ ಹಕ್ಕುಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಮಲೇರಿಯಾಜಶ್ತ್ವ ಸಂಧಿವಿಶ್ವದ ಅದ್ಭುತಗಳುವಿಜ್ಞಾನವಾಲಿಬಾಲ್ಕರ್ನಾಟಕ ಲೋಕಸೇವಾ ಆಯೋಗಒಡೆಯರ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಭಾರತೀಯ ಅಂಚೆ ಸೇವೆಜ್ವರಬಾಬು ಜಗಜೀವನ ರಾಮ್ಪುಟ್ಟರಾಜ ಗವಾಯಿಹಾಸನಅಧಿಕ ವರ್ಷಚಿತ್ರದುರ್ಗಮಾನವ ಹಕ್ಕುಗಳುನೀರಾವರಿನಾಮಪದಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭರತನಾಟ್ಯಎ.ಪಿ.ಜೆ.ಅಬ್ದುಲ್ ಕಲಾಂಆರತಿಮೂಲಧಾತುಕನ್ನಡ ವ್ಯಾಕರಣಬಸವೇಶ್ವರಚೋಮನ ದುಡಿವೀರಗಾಸೆಕರ್ನಾಟಕಹರಪ್ಪಚಿಲ್ಲರೆ ವ್ಯಾಪಾರಸವರ್ಣದೀರ್ಘ ಸಂಧಿಕೆ.ಎಲ್.ರಾಹುಲ್ರನ್ನಗ್ರಾಮ ಪಂಚಾಯತಿತತ್ತ್ವಶಾಸ್ತ್ರಗುಡಿಸಲು ಕೈಗಾರಿಕೆಗಳುಬೆಳ್ಳುಳ್ಳಿದಯಾನಂದ ಸರಸ್ವತಿಜಯಪ್ರಕಾಶ್ ಹೆಗ್ಡೆಸರಾಸರಿಇನ್ಸ್ಟಾಗ್ರಾಮ್ಟಿಪ್ಪು ಸುಲ್ತಾನ್ವರದಕ್ಷಿಣೆಹಕ್ಕ-ಬುಕ್ಕಮೈಸೂರುಸುಮಲತಾಹತ್ತಿಅರಿಸ್ಟಾಟಲ್‌ರತನ್ ನಾವಲ್ ಟಾಟಾಶಾತವಾಹನರುವ್ಯಾಸರಾಯರುವಿಕ್ರಮಾರ್ಜುನ ವಿಜಯತೀ. ನಂ. ಶ್ರೀಕಂಠಯ್ಯವಿಷ್ಣುವರ್ಧನ್ (ನಟ)ಗೋಕಾಕ್ ಚಳುವಳಿಭಾರತದ ನದಿಗಳುಖಗೋಳಶಾಸ್ತ್ರಕನ್ನಡ ರಂಗಭೂಮಿಕುಮಾರವ್ಯಾಸಪೆರಿಯಾರ್ ರಾಮಸ್ವಾಮಿಪಂಜೆ ಮಂಗೇಶರಾಯ್೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಬೇಲೂರುದ್ವಿಗು ಸಮಾಸವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಮೊದಲನೆಯ ಕೆಂಪೇಗೌಡಚಂಡಮಾರುತದಿವ್ಯಾಂಕಾ ತ್ರಿಪಾಠಿಬೆಂಕಿಸವದತ್ತಿಶ್ರೀನಿವಾಸ ರಾಮಾನುಜನ್ವಚನಕಾರರ ಅಂಕಿತ ನಾಮಗಳುಬಾಹುಬಲಿಭಾರತದ ಇತಿಹಾಸಜಾನಪದ🡆 More