ಅಜ್ಞೇಯತಾವಾದ

ಅಜ್ಞೇಯತಾವಾದ ಒಂದು ರೀತಿಯ ಸಂದೇಹವಾದ.

ನಮ್ಮ ಆಲೋಚನಾಶಕ್ತಿ ಇಂದ್ರಿಯಾನುಭವಕ್ಕಿಂತ ಮುಂದೆ ಹೋಗಲಾರದು, ಆಧ್ಯಾತ್ಮಿಕ ವಿಷಯಗಳನ್ನು, ಅದರಲ್ಲೂ ದೇವರ ಅಸ್ತಿತ್ವ ವಿಚಾರವನ್ನು ಸಕಾರಣವಾಗಿ ಸಿದ್ಧಿಸುವುದಕ್ಕಾಗುವುದಿಲ್ಲ ಎಂಬುದು ಈ ವಾದದ ಸಾರಾಂಶ.

ಸಿದ್ಧಾಂತಗಳು

ಅಜ್ಞೇಯತಾವಾದ (ಅಗ್ನಾಸ್ಟಿಸಿಸಮ್) ಆಸ್ತಿಕ್ಯವನ್ನು ಒಪ್ಪದಿದ್ದರೂ ನಾಸ್ತಿಕ್ಯವನ್ನು ಪ್ರತಿಪಾದಿಸುವುದಿಲ್ಲ. ಅದು ನಮಗೆ ತಿಳಿದ ಅಥವಾ ತಿಳಿಯುವಂಥ ವಿಷಯವಲ್ಲ. ಅಲ್ಲದೆ ನಮಗೆ ಈಗ ತಿಳಿದಿಲ್ಲ ಎಂದು ಮಾತ್ರ ಹೇಳುವುದಲ್ಲ, ನಮಗೆ ಎಂದೂ ತಿಳಿಯಲು ಶಕ್ಯವಲ್ಲದ್ದು-ಎಂಬುದೇ ಈ ವಾದದ ತಿರುಳು. ಸಾಧಾರಣವಾಗಿ, ವಿಜ್ಞಾನ ಪರಿಣಿತರು ಈ ವಾದವನ್ನು ಮುಂದಿಡುತ್ತಾರೆ. ಅವರವರ ವಿಜ್ಞಾನದ ಪರಿಮಿತಿಯ ದೃಷ್ಟಿಯಿಂದ ಈಶ್ವರನ ಅಸ್ತಿತ್ವದಂಥ ವಿಷಯವನ್ನು ಕುರಿತು ವಿಜ್ಞಾನವೇನನ್ನೂ ಹೇಳಲಾರದೆಂದು ಇವರ ಅಭಿಮತ.

ಪ್ರತಿಪಾದಕರು

ಅಜ್ಞೇಯತಾವಾದ 
Thomas Henry Huxley
ಅಜ್ಞೇಯತಾವಾದ 
Proportion of atheists and agnostics around the world

ಅಗ್ನಾಸ್ಟಿಸಿಸಮ್ ಅನ್ನುವ ಶಬ್ದವನ್ನು ಮೊದಲು ಸೃಷ್ಟಿಸಿದವನು ಪ್ರಸಿದ್ಧ ಆಂಗ್ಲ ವೈಜ್ಞಾನಿಕ ಟಿ. ಎಚ್. ಹಕ್ಸ್ಲೆ ಎನ್ನುವವನು. ಹೊಸದಾದರೂ ಈ ಭಾವ ಬಹಳ ಹಳೆಯದು ಎನ್ನುವುದರಲ್ಲಿ ಸಂಶಯವಿಲ್ಲ. ಪಾಶ್ಚಾತ್ಯ ತತ್ತಗಳಲ್ಲಿ ಪಾರಮಾರ್ಥಿಕ ತತ್ತ್ವಗಳು ನಮ್ಮ ಪ್ರತ್ಯಕ್ಷ ಅನುಮಾನ ಪ್ರಮಾಣಗಳಿಗೆ ಗೋಚರವಾಗುವುದಿಲ್ಲವೆಂದೂ ಕೇವಲ ತರ್ಕದಿಂದ, ಯುಕ್ತಿಯಿಂದ, ಆತ್ಮ, ಪರಮಾತ್ಮ, ಮೋಕ್ಷ ಇವುಗಳ ಸ್ವರೂಪವನ್ನು ನಿರ್ಣಯಿಸಲು ಸಾಧ್ಯವಿಲ್ಲವೆಂದೂ ವಾದ ಹೂಡಿದವ ಇಮ್ಯನ್ಯುಯಲ್ ಕ್ಯಾಂಟ್ ಎಂಬ ಜರ್ಮನಿಯ ತತ್ತ್ವಶಾಸ್ತ್ರಜ್ಞ. ಹರ್ಬಟ್ ಸ್ಪೆನ್ಸರ್, ಅಗಸ್ಟ ಕಾಂಟ್ ಮೊದಲಾದವರು ಈ ವಾದವನ್ನು ಪುಷ್ಪವಾದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ವೇದಾಂತದಲ್ಲಿಯೂ ಈ ವಾದದ ಛಾಯೆ ಇಲ್ಲದಿಲ್ಲ.

ಬಾಹ್ಯ ಸಂಪರ್ಕಗಳು

ಅಜ್ಞೇಯತಾವಾದ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಕೆ. ಎಸ್. ನರಸಿಂಹಸ್ವಾಮಿಅತ್ತಿಮಬ್ಬೆಯೋಗರಗಳೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುತತ್ಸಮ-ತದ್ಭವಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಹಲ್ಮಿಡಿಹಲಸುಸುಧಾ ಮೂರ್ತಿಮೊದಲನೆಯ ಕೆಂಪೇಗೌಡಗೂಬೆಭಾರತದ ನದಿಗಳುಸೀತಾ ರಾಮಸ್ಕೌಟ್ಸ್ ಮತ್ತು ಗೈಡ್ಸ್ಎಂ. ಕೆ. ಇಂದಿರಸಾರ್ವಜನಿಕ ಆಡಳಿತಭಾರತದ ರಾಷ್ಟ್ರಪತಿಗಳ ಪಟ್ಟಿಚುನಾವಣೆದೇವರ ದಾಸಿಮಯ್ಯವಿರಾಟಮಂತ್ರಾಲಯಹಾಸನ ಜಿಲ್ಲೆವಿಷ್ಣುರಾಷ್ಟ್ರೀಯ ಸೇವಾ ಯೋಜನೆಕನ್ನಡದಲ್ಲಿ ಗಾದೆಗಳುಬ್ಯಾಡ್ಮಿಂಟನ್‌ಕೃಷಿಮೊದಲನೇ ಅಮೋಘವರ್ಷಸಮಾಸಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ನಾಟಕದ ಜಾನಪದ ಕಲೆಗಳುಮಾಸಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಸ್ಕೌಟ್ ಚಳುವಳಿಕದಂಬ ರಾಜವಂಶಚನ್ನಬಸವೇಶ್ವರಕಾಳಿದಾಸಸಂಯುಕ್ತ ರಾಷ್ಟ್ರ ಸಂಸ್ಥೆಪಟ್ಟದಕಲ್ಲುಭಾಮಿನೀ ಷಟ್ಪದಿಶ್ಯೆಕ್ಷಣಿಕ ತಂತ್ರಜ್ಞಾನಸುಮಲತಾಸಂವತ್ಸರಗಳುಕವಿಸಮುದ್ರಗುಪ್ತಬ್ಯಾಂಕ್ಜಾತ್ರೆವೆಬ್‌ಸೈಟ್‌ ಸೇವೆಯ ಬಳಕೆಯುರೋಪ್ಜಿ.ಎಸ್.ಶಿವರುದ್ರಪ್ಪಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆರಾಘವಾಂಕಕೈವಾರ ತಾತಯ್ಯ ಯೋಗಿನಾರೇಯಣರುಅಂತರಜಾಲಭಾರತದ ಪಂಚಾಯತ್ ರಾಜ್ ವ್ಯವಸ್ಥೆಸೀತೆಕಾವೇರಿ ನದಿಹನುಮಾನ್ ಚಾಲೀಸಮಹಮದ್ ಬಿನ್ ತುಘಲಕ್ಹಳೆಗನ್ನಡಹನುಮಂತಕರ್ನಾಟಕ ಲೋಕಾಯುಕ್ತತುಂಗಭದ್ರ ನದಿಹೊಯ್ಸಳೇಶ್ವರ ದೇವಸ್ಥಾನಸತ್ಯ (ಕನ್ನಡ ಧಾರಾವಾಹಿ)ಸೂಫಿಪಂಥಕನ್ನಡ ರಾಜ್ಯೋತ್ಸವಶಿವಭಾರತದಲ್ಲಿ ಬಡತನಅಷ್ಟ ಮಠಗಳುಚಿತ್ರದುರ್ಗ ಜಿಲ್ಲೆವಿಶ್ವದ ಅದ್ಭುತಗಳುನೀರಿನ ಸಂರಕ್ಷಣೆಹಲ್ಮಿಡಿ ಶಾಸನಸ್ವಾಮಿ ವಿವೇಕಾನಂದಶಿವರಾಮ ಕಾರಂತದಾಳಿಂಬೆರಾಮ್ ಮೋಹನ್ ರಾಯ್🡆 More