ಅಜ್ಞಾತ ನಾಮಕತ್ವ

ಅಜ್ಞಾತ ನಾಮಕತ್ವ ಅಂದರೆ ಹೆಸರಿಲ್ಲದಿರುವುದು ಅಥವಾ ಅನಾಮಧೇಯತೆ.

ಆಡುಮಾತಿನಲ್ಲಿ, ಅನಾಮಧೇಯ ಪದವನ್ನು ಕರ್ತೃ ವ್ಯಕ್ತಿಯ ಹೆಸರು ಅಜ್ಞಾತವಾಗಿರುವ ಪರಿಸ್ಥಿತಿಗಳನ್ನು ವಿವರಿಸಲು ಬಳಸಲಾಗುತ್ತದೆ. ಅನಾಮಧೇಯತೆ, ತಾಂತ್ರಿಕವಾಗಿ ಸರಿಯಿದ್ದರೂ, ಅಜ್ಞಾತ ನಾಮಕತ್ವದ ಸಂದರ್ಭಗಳಲ್ಲಿ ಹೆಚ್ಚು ಕೇಂದ್ರೀಯವಾಗಿ ಈಡಿನಲ್ಲಿರುವುದನ್ನು ಗ್ರಹಿಸುವುದಿಲ್ಲ ಎಂದು ಕೆಲವು ಬರಹಗಾರರು ವಾದಿಸಿದ್ದಾರೆ. ಇಲ್ಲಿ ಪ್ರಧಾನ ಉದ್ದೇಶವೆಂದರೆ ಒಬ್ಬ ವ್ಯಕ್ತಿ ಗುರುತಿಸಲಾಗದಂತಿರುವುದು, ಅಗಮ್ಯವಾಗಿರುವುದು, ಅಥವಾ ಹಿಂಬಾಲಿಸಲಾಗದಿರುವುದು. ಅಜ್ಞಾತ ನಾಮಕತ್ವವನ್ನು ಒಂದು ತಂತ್ರವಾಗಿ, ಅಥವಾ ಗೌಪ್ಯತೆ, ಅಥವಾ ಸ್ವಾತಂತ್ರ್ಯದಂತಹ ಇತರ ನಿರ್ದಿಷ್ಟ ಮೌಲ್ಯಗಳನ್ನು ಸಾಧಿಸುವ ಒಂದು ರೀತಿಯಾಗಿ ಕಾಣಲಾಗುತ್ತದೆ.

ಮುಕ್ತ ಚುನಾವಣೆಗಳಲ್ಲಿನ ಮತವು ಅಜ್ಞಾತ ನಾಮಕತ್ವಕ್ಕೆ ಒಂದು ಪ್ರಧಾನ ಉದಾಹರಣೆಯಾಗಿದೆ ಏಕೆಂದರೆ ಅದು ಸಂರಕ್ಷಿತವಷ್ಟೇ ಅಲ್ಲ, ಕಾನೂನಿನಿಂದ ಜಾರಿಮಾಡಲ್ಪಟ್ಟಿರುವುದು ಕೂಡ. ಅನೇಕ ಇತರ ಸಂದರ್ಭಗಳಲ್ಲಿ (ಉದಾ. ಅಪರಿಚಿತರ ನಡುವಿನ ಸಂಭಾಷಣೆ, ಅಂಗಡಿಯಲ್ಲಿ ಯಾವುದಾದರೂ ಉತ್ಪನ್ನ ಅಥವಾ ಸೇವೆಯ ಖರೀದಿ), ಅಜ್ಞಾತ ನಾಮಕತ್ವವನ್ನು ಸಾಂಪ್ರದಾಯಿಕವಾಗಿ ಸಹಜ ಎಂದು ಸ್ವೀಕರಿಸಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಗುರುತನ್ನು ನೀಡದಿರಲು ಆಯ್ಕೆಮಾಡಬಹುದಾದ ವಿವಿಧ ಸಂದರ್ಭಗಳೂ ಇವೆ. ದಾನಿಗಳು ಗುರುತಿಸಿಕೊಳ್ಳದಿರಲು ಬಯಸಿದಾಗ ದಾನದ ಕ್ರಿಯೆಗಳನ್ನು ಅನಾಮಧೇಯವಾಗಿ ಮಾಡಲಾಗಿದೆ. ಬೆದರಿಕೆ ಅನುಭವಿಸುವ ವ್ಯಕ್ತಿಯು ಆ ಬೆದರಿಕೆಯನ್ನು ಅಜ್ಞಾತ ನಾಮಕತ್ವದ ಮೂಲಕ ತಗ್ಗಿಸಲು ಪ್ರಯತ್ನಿಸಬಹುದು. ಅಪರಾಧದ ಸಾಕ್ಷಿಯು, ಉದಾಹರಣೆಗೆ, ಅನಾಮಧೇಯವಾಗಿ ಅಪರಾಧ ನೇರ ಸಂಪರ್ಕ ಕೇಂದ್ರಕ್ಕೆ ಕರೆಮಾಡಿ, ಪ್ರತೀಕಾರ ತಪ್ಪಿಸಲು ಪ್ರಯತ್ನಿಸಬಹುದು. ಅಪರಾಧಿಗಳು ಒಂದು ಅಪರಾಧದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಮುಚ್ಚಿಡಲು ಅನಾಮಧೇಯವಾಗಿ ಮುಂದುವರಿಯಬಹುದು. ಅಜ್ಞಾತ ನಾಮಕತ್ವವು ಅನುದ್ದೇಶಪೂರ್ವಕವಾಗಿಯೂ ಸೃಷ್ಟಿಯಾಗಬಹುದು, ಕಾಲದ ಸರಿಯುವಿಕೆ ಅಥವಾ ವಿನಾಶಕಾರಿ ಘಟನೆಯ ಕಾರಣದಿಂದ ಗುರುತಿಸುವ ಮಾಹಿತಿಯ ನಷ್ಟದ ಮೂಲಕ.

ನಿರ್ದಿಷ್ಟ ಸಂದರ್ಭಗಳಲ್ಲಿ, ಅನಾಮಧೇಯವಾಗಿರುವುದು ಕಾನೂನುಬಾಹಿರವಾಗಿರಬಹುದು. ಅಮೇರಿಕದಲ್ಲಿ, ೨೪ ರಾಜ್ಯಗಳು ಕಾನೂನು ಜಾರಿ ಅಧಿಕಾರಿ ಕೋರಿದಾಗ ತಡೆಯಲ್ಪಟ್ಟ ವ್ಯಕ್ತಿಗಳು ತಮ್ಮ ಗುರುತನ್ನು ಹೇಳುವ ಅಗತ್ಯವಿರುವ ನಿಲ್ಲಿಸಿ ಗುರುತಿಸು ಕಾಯಿದೆಗಳನ್ನು ಹೊಂದಿವೆ. ಜರ್ಮನಿಯಲ್ಲಿ, ಜನರು ತಮ್ಮ ಮನೆಗಳ ಬಾಗಿಲಿನ ಮೇಲೆ ತಮ್ಮ ಹೆಸರುಗಳನ್ನು ತೋರಿಸಬೇಕು.

"ಅನಾಮಧೇಯ ಸಂದೇಶ" ಪದ ಸಾಮಾನ್ಯವಾಗಿ ಅದರ ರವಾನೆಗಾರನನ್ನು ಬಹಿರಂಗಗೊಳಿಸದ ಸಂದೇಶವನ್ನು ಸೂಚಿಸುತ್ತದೆ. ಅನೇಕ ದೇಶಗಳಲ್ಲಿ, ಅನಾಮಧೇಯ ಪತ್ರಗಳು ಕಾನೂನಿನಿಂದ ರಕ್ಷಿಸಲ್ಪಟ್ಟಿವೆ ಮತ್ತು ಅವನ್ನು ನಿಯಮಾನುಕ್ರಮವಾದ ಪತ್ರಗಳಾಗಿ ತಲುಪಿಸಬೇಕು.

ಉಲ್ಲೇಖಗಳು

Tags:

ಹೆಸರು

🔥 Trending searches on Wiki ಕನ್ನಡ:

ಕನ್ಯಾಕುಮಾರಿಮುದ್ದಣಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಗೋತ್ರ ಮತ್ತು ಪ್ರವರಕನ್ನಡ ರಂಗಭೂಮಿಚಂದ್ರಶೇಖರ ಕಂಬಾರಲಕ್ನೋಆವಕಾಡೊಗೌತಮ ಬುದ್ಧಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ದೇವರ/ಜೇಡರ ದಾಸಿಮಯ್ಯಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಪ್ರಜಾವಾಣಿಭಾರತದ ಸಂವಿಧಾನಸರ್ವೆಪಲ್ಲಿ ರಾಧಾಕೃಷ್ಣನ್ಪಂಜೆ ಮಂಗೇಶರಾಯ್ಶ್ರೀ ರಾಘವೇಂದ್ರ ಸ್ವಾಮಿಗಳುತಿಪಟೂರುವಾರ್ಧಕ ಷಟ್ಪದಿವಿಶ್ವ ಪರಿಸರ ದಿನಭಾರತದ ಮುಖ್ಯ ನ್ಯಾಯಾಧೀಶರುಬುದ್ಧಇಂಡಿ ವಿಧಾನಸಭಾ ಕ್ಷೇತ್ರಚಂದ್ರಶೂದ್ರ ತಪಸ್ವಿಕ್ರೈಸ್ತ ಧರ್ಮಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಪತ್ರಕಲೆಧರ್ಮಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಆಲೂರು ವೆಂಕಟರಾಯರುಜನ್ನಕುರುಬಶಿವನ ಸಮುದ್ರ ಜಲಪಾತಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಕನ್ನಡ ವಿಶ್ವವಿದ್ಯಾಲಯನುಡಿಗಟ್ಟುನಾಗವರ್ಮ-೧ಗಣರಾಜ್ಯೋತ್ಸವ (ಭಾರತ)ಭಾರತದ ರಾಷ್ಟ್ರಗೀತೆಕಿವಿಮೊಬೈಲ್ ಅಪ್ಲಿಕೇಶನ್ಶಾಸಕಾಂಗಭಾಮಿನೀ ಷಟ್ಪದಿಕರ್ನಾಟಕ ಪೊಲೀಸ್ಅನುಪಮಾ ನಿರಂಜನಪರಿಪೂರ್ಣ ಪೈಪೋಟಿಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ಸಂಸ್ಕೃತಿಪುರಂದರದಾಸಪರಮಾಣುಇಮ್ಮಡಿ ಪುಲಿಕೇಶಿಸಂಪತ್ತಿನ ಸೋರಿಕೆಯ ಸಿದ್ಧಾಂತಜಾಗತಿಕ ತಾಪಮಾನ ಏರಿಕೆಕೇಂದ್ರ ಸಾಹಿತ್ಯ ಅಕಾಡೆಮಿಮುಟ್ಟುಚೀನಾದ ಇತಿಹಾಸಬ್ಯಾಬಿಲೋನ್ಕಳಿಂಗ ಯುದ್ದ ಕ್ರಿ.ಪೂ.261ಬಾಲ್ಯ ವಿವಾಹಪ್ರಾಣಾಯಾಮವಿಶ್ವ ಮಹಿಳೆಯರ ದಿನಒಲಂಪಿಕ್ ಕ್ರೀಡಾಕೂಟಗೌತಮಿಪುತ್ರ ಶಾತಕರ್ಣಿಪೌರತ್ವಪಿತ್ತಕೋಶಭೋವಿಹೊಸಗನ್ನಡಶ್ರೀಶೈಲಅಗ್ನಿ(ಹಿಂದೂ ದೇವತೆ)ಪರಿಸರ ವ್ಯವಸ್ಥೆಶಿವಕುಮಾರ ಸ್ವಾಮಿರಮ್ಯಾಶಿಕ್ಷಕಚಾಣಕ್ಯಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕೃಷ್ಣರಾಜಸಾಗರರಾಶಿ🡆 More