ಅಂತಾರಾಷ್ಟ್ರೀಯ ಸಂಬಂಧಗಳು

ಅಂತಾರಾಷ್ಟ್ರೀಯ ಸಂಬಂಧಗಳುಆಧುನಿಕ ಯುಗದ ವಿಶ್ವವ್ಯಾಪಾರಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಬಹು ಪ್ರಮುಖವಾದ ಸ್ಥಾನವನ್ನು ಹೊಂದಿವೆ.

ಅಂತಾರಾಷ್ಟ್ರೀಯ ಸಂಬಂಧಗಳು ಈಗ ಒಂದು ವಿಶೇಷ ಅಧ್ಯಯನವಾಗಿ ಪರಿಗಣಿಸಲ್ಪಟ್ಟಿವೆ. ಅವು ಇತರ ಸಮಾಜಶಾಸ್ತ್ರಗಳಂತೆ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾನವನ ಮತ್ತು ರಾಷ್ಟ್ರಗಳ ನಡೆವಳಿಕೆಗೆ ಸಂಬಂಧಪಟ್ಟಿವೆ. ಕೆಲವು ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಶಾಖೆಯನ್ನು ರಾಜಕೀಯಶಾಸ್ತ್ರದ ಒಂದು ಮುಖ್ಯವಾದ ಭಾಗವೆಂದು ಪರಿಗಣಿಸಲಾಗಿದೆ.

  • ಈಗಿನ ಕಾಲದಲ್ಲಿ ಯಾವ ರಾಷ್ಟ್ರವೇ ಆಗಲಿ, ಬೇರೆ ರಾಷ್ಟ್ರಗಳೊಡನೆ ಸಂಬಂಧ ಬೆಳೆಸದೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ. ಅಂದರೆ, ಆಧುನಿಕ ರಾಷ್ಟ್ರಗಳು ಪ್ರತ್ಯೇಕವಾಗಿ ಜೀವಿಸಲಾರವು. ಅವು ಯಾವಾಗಲೂ ಪ್ರಪಂಚದ ಇತರ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಿಯೇ ಜೀವಿಸಬೇಕು. ಆದುದರಿಂದ ಪ್ರತಿ ರಾಷ್ಟ್ರವೂ ಬೇರೆ ರಾಷ್ಟ್ರಗಳೊಂದಿಗೆ ಸರಿಯಾದ ಸಂಬಂಧವನ್ನು ಇಟ್ಟುಕೊಳ್ಳಲೇಬೇಕು. ಇಂಥ ಸಂದರ್ಭ ಅಂತಾರಾಷ್ಟ್ರೀಯ ಸಂಬಂಧಕ್ಕೆ ಎಡೆಮಾಡಿಕೊಟ್ಟಿದೆ.
  • ಆದುದರಿಂದ ಇಂದಿನ ರಾಜಕೀಯ ಜೀವನದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಬಹು ಪ್ರಮುಖವಾಗಿವೆ. ಈಗ ಪ್ರತಿಯೊಬ್ಬ ಮಾನವನೂ ಇತರ ಮಾನವರ ಜೊತೆಯಲ್ಲಿ ಸಂಬಂಧವನ್ನು ಬೆಳೆಸದೆ ಜೀವಿಸುವುದು ಎಷ್ಟು ಕಷ್ಟವೋ ಅದೇ ರೀತಿ ಒಂದು ರಾಷ್ಟ್ರವೂ ಬೇರೆ ರಾಷ್ಟ್ರಗಳೊಡನೆ ಸಂಬಂಧ ಬೆಳೆಸದೆ ಜೀವಿಸುವುದೂ ಕಷ್ಟ. ಈಗ ಅನೇಕ ಕಾರಣಗಳಿಂದ ಪ್ರಪಂಚದ ಯಾವುÀದೋ ಒಂದು ಭಾಗದಲ್ಲಿ ಆಗುವ ಘಟನೆಗಳು, ಎಲ್ಲ ರಾಷ್ಟ್ರಗಳ ಜನಜೀವನ ಮತ್ತು ರಾಷ್ಟ್ರನೀತಿಗಳ ಮೇಲೆ ಪರಿಣಾಮ ಬೀರುತ್ತವೆ.
  • ಈ ಸಂದರ್ಭ ಆಧುನಿಕ ಸಾರಿಗೆ ಮತ್ತು ಸಂಪರ್ಕ ಸಾಧನಗಳಿಂದಿರಬಹುದು ಅಥವಾ ಆಧುನಿಕ ರಾಷ್ಟ್ರಗಳ ಪರಸ್ಪರ ಅವಲಂಬನದಿಂದಿರಬಹುದು. ಈಗ ಭೌಗೋಳಿಕವಾಗಿ ಒಂದು ಪ್ರಪಂಚವಿದ್ದರೂ ರಾಜಕೀಯ, ಆರ್ಥಿಕ ಮತ್ತು ತಾತ್ತ್ವಿಕ ದೃಷ್ಟಿಯಿಂದ ಅದು ಬೇರೆಬೇರೆ ಪ್ರಪಂಚಗಳಾಗಿ ವಿಂಗಡವಾಗಿದೆ. ಇಂಥ ಪ್ರಪಂಚದಲ್ಲಿ ಪ್ರತಿಯೊಂದು ರಾಷ್ಟ್ರವೂ ಬೇರೆ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಲೇಬೇಕು. ಈ ಸಂಬಂಧಗಳನ್ನು ಅಂತಾರಾಷ್ಟ್ರೀಯ ಸಂಬಂಧಗಳೆಂದು ಕರೆಯುತ್ತಾರೆ.
ಅಂತಾರಾಷ್ಟ್ರೀಯ ಸಂಬಂಧಗಳು
The Palace of Nations. In 2012 alone, the Palace of Nations hosted more than 10 000 intergovernmental meetings. Geneva (Switzerland) is the city that hosts the highest number of international organisations in the world.
ಅಂತಾರಾಷ್ಟ್ರೀಯ ಸಂಬಂಧಗಳು
The field of international relations dates from the time of the Greek historian Thucydides.

ವಿದೇಶಾಂಗ ನೀತಿ

  • ಅಂತಾರಾಷ್ಟ್ರೀಯ ಸಂಬಂಧ ಒಂದು ಶಾಖೆಯೋಪಾದಿಯಲ್ಲಿ ಬೆಳೆಯುತ್ತಿದೆ. ಅದನ್ನು ಕೆಲವು ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಶಾಖೆಯೆಂದು ಕರೆಯುತ್ತಾರೆ. ಕೆಲವು ಸಾರಿ ಇದು ಒಂದು ದೇಶದ ವಿದೇಶಾಂಗ ನೀತಿಗೆ (ಫಾರಿನ್ ಪಾಲಿಸಿ) ಸಂಬಂಧಪಟ್ಟಿರುತ್ತದೆ. ಪ್ರಪಂಚದ ವ್ಯವಹಾರಗಳೂ ಇದರಲ್ಲಿ ಸೇರುತ್ತವೆ. ಇದು ಪ್ರಪಂಚದ ಜನಜೀವನ, ಚಟುವಟಿಕೆ ಮತ್ತು ಅಭಿಪ್ರಾಯಗಳಿಗೆ ಸಂಬಂಧಿಸಿರುವುದಲ್ಲದೆ ರಾಷ್ಟ್ರಗಳ ವ್ಯವಹಾರಗಳಿಗೆ ಕೂಡ ಸಂಬಂಧಿಸಿರುತ್ತದೆ.
  • ಈ ಸಂಬಂಧಗಳು ಸರ್ಕಾರದ ಕಟ್ಟಳೆಗಳು ಮತ್ತು ಕರಾರುಗಳಿಂದ ಗೊತ್ತುಮಾಡಲ್ಪಟ್ಟಿರುತ್ತವೆ. ಅಂತಾರಾಷ್ಟ್ರೀಯ ರಾಜಕೀಯವೂ ಇದರ ವ್ಯಾಪ್ತಿಯಲ್ಲಿ ಬರುತ್ತದೆ. ಆಗ ಒಂದು ದೇಶದ ರಾಜಕೀಯ ಚಟುವಟಿಕೆಗಳು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸೇರುತ್ತವೆ. ಇದರಲ್ಲಿ ಒಂದು ದೇಶದ ವಿದೇಶಾಂಗ ನೀತಿ ಯಾವ ರೀತಿ ಬೇರೆ ದೇಶಗಳ ನೀತಿಗಳನ್ನು ಪ್ರಚೋದಿಸುತ್ತವೆ ಎನ್ನುವುದನ್ನು ಕಾಣಬಹುದು ಈ ಶಾಖೆಯ ಮೇಲೆ ಪ್ರಪಂಚದ ರಾಷ್ಟ್ರಗಳ ಭೌಗೋಳಿಕ ಅಂಶ, ಜನಸಂಖ್ಯೆ, ಸರ್ಕಾರದ ಸ್ವರೂಪ, ರಾಷ್ಟ್ರೀಯ ಮುಂದಾಳುತನ ಮತ್ತು ತತ್ತ್ವಗಳು ಪ್ರಭಾವ ಬೀರುತ್ತವೆ.
  • ಅಂತಾರಾಷ್ಟ್ರೀಯ ಸಂಬಂಧಗಳ ಶಾಖೆಯ ವಿಷಯವಾಗಿ ಕೆಲವು ಭಿನ್ನಾಭಿಪ್ರಾಯ ಗಳಿವೆ. ಅದರ ಪ್ರಕಾರ ಕೆಲವು ಸಾರಿ ಇದು ಒಂದು ಸ್ವತಂತ್ರ ವಿಚಾರವಾಗಿ ಪರಿಗಣಿಸ ಲ್ಪಡುವುದಿಲ್ಲ. ಅನೇಕ ವಿಚಾರಗಳನ್ನು ಇದರಲ್ಲಿ ಸೇರಿಸಲಾಗುತ್ತದೆ. ಆಗ ಇದರಲ್ಲಿ ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ಚರಿತ್ರೆ, ಭೂಗೋಳ ಮತ್ತು ನ್ಯಾಯಶಾಸ್ತ್ರ ಸೇರುತ್ತವೆ. ಆ ಸಂದರ್ಭಗಳಲ್ಲಿ ಇದು ಶಕ್ತಿರಾಜಕೀಯದ (ಪವರ್ ಪಾಲಿಟಿಕ್ಸ) ಪ್ರಭಾವಕ್ಕೊಳಪಡುತ್ತದೆ. ಅದರ ಸ್ವಭಾವ ಕಾಲಕ್ಕನುಗುಣವಾಗಿ ಬದಲಾವಣೆ ಹೊಂದುತ್ತ ಹೋಗುತ್ತದೆ.
  • ಮತ್ತೆ ಕೆಲವು ಸಂದರ್ಭಗಳಲ್ಲಿ ಈ ಶಾಖೆ ಒಂದು ಸ್ವತಂತ್ರ ವಿಷಯವಾಗಿ ಪರಿಗಣಿಸಲ್ಪಡುತ್ತದೆ. ಆಗ ಇದು ತನ್ನದೇ ಆದ ಸ್ವರೂಪ ಮತ್ತು ವ್ಯಾಪ್ತಿಯನ್ನು ಹೊಂದಿರುತ್ತದೆ. ಇದು ಪ್ರಪಂಚ ಸಮಾಜಕ್ಕೆ ಸಂಬಂಧಪಟ್ಟಿದ್ದಾಗಿ ಇದರ ವ್ಯಾಪ್ತಿಯಲ್ಲಿ ಪ್ರಪಂಚದ ರಾಷ್ಟ್ರಗಳು, ಜನರು, ಸರ್ಕಾರ ಗಳು, ಒಕ್ಕೂಟಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಸೇರುತ್ತವೆ. ಇದು ದೇಶಗಳ ವಿದೇಶಾಂಗ ನೀತಿಗೂ ಸಂಬಂಧಪಟ್ಟಿರುತ್ತದೆ. ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ತಿಳಿದುಕೊಳ್ಳಲು ಇದು ಬಹು ಸಹಾಯಕಾರಿ.
  • ಅಲ್ಲದೆ ಇದು ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನೂ ಸೂಚಿಸುತ್ತದೆ. ಯಾವುದೋ ಗೊತ್ತಾದ ಸಂದರ್ಭಗಳಲ್ಲಿ ಮಾನವನೂ ರಾಷ್ಟ್ರಗಳೂ ಹೇಗೆ ಕೆಲಸ ಮಾಡಬಹುದೆಂದು ತಿಳಿವಳಿಕೆ ಕೊಡುತ್ತದೆ. ಮಾನವ ಮತ್ತು ರಾಷ್ಟ್ರಗಳು ಪ್ರಪಂಚದಲ್ಲಿ ಯಾವ ಪರಿಸ್ಥಿತಿಗೆ ಪ್ರೋತ್ಸಾಹ ಕೊಡಬೇಕು ಮತ್ತು ಯಾವ ಪರಿಸ್ಥಿತಿಗಳನ್ನು ತಡೆಗಟ್ಟಬೇಕೆನ್ನುವುದನ್ನು ತಿಳಿಸುತ್ತದೆ.
  • ಇದು ಅಂತಾರಾಷ್ಟ್ರೀಯ ಸೌಹಾರ್ದ ಮತ್ತು ಸಾಮರಸ್ಯಗಳನ್ನು ಸ್ಥಾಪಿಸುವ ಮಾರ್ಗಗಳನ್ನು ತಿಳಿಸುತ್ತದೆ; ಅಲ್ಲದೆ ಅಂತಾರಾಷ್ಟ್ರೀಯ ಪರಿಸ್ಥಿತಿ ಮತ್ತು ನ್ಯೂನತೆಗಳನ್ನು ತಿಳಿಸಿ ಅವಕ್ಕೆ ಪರಿಹಾರೋಪಾಯಗಳನ್ನೂ ಸೂಚಿಸುತ್ತದೆ. ಒಟ್ಟಿನಲ್ಲಿ ಇದು ವಿಶ್ವ ಸಮಾಜದ ಅರಿವನ್ನು ಮಾನವನಿಗೆ ಉಂಟುಮಾಡಿಕೊಡುತ್ತದೆ.

ಆಧುನಿಕ ಕಾಲದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು

  • ಅಂತಾರಾಷ್ಟ್ರೀಯ ಸಂಬಂಧಗಳು ಬಹು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಪ್ರಾಚೀನ ಕಾಲದಲ್ಲಿ ಕೆಲವು ರಾಷ್ಟ್ರಗಳು ತಮ್ಮ ಸಂಪರ್ಕವನ್ನು ಬೇರೆ ರಾಷ್ಟ್ರಗಳೊಡನೆ ಬೆಳೆಸಿಕೊಂಡಿದ್ದುವು. ಆದರೆ ಆಗ ಇವಕ್ಕೆ ಅಷ್ಟು ಪ್ರಾಮುಖ್ಯವಿಲ್ಲದಿದ್ದರೂ ಆಧುನಿಕ ಕಾಲದಲ್ಲಿ ಪ್ರತಿ ಯೊಂದು ರಾಷ್ಟ್ರವೂ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಗಮನ ಕೊಡಲೇಬೇಕಾಗಿದೆ. 20ನೆಯ ಶತಮಾನದಲ್ಲಿ ಯಾವ ರಾಷ್ಟ್ರವೂ ಇವುಗಳನ್ನು ಕಡೆಗಣಿಸುವ ಹಾಗಿಲ್ಲ.
  • ಏಕೆಂದರೆ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು ರಾಷ್ಟ್ರದ ಅಳಿವು ಉಳಿವು ಅದರ ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ನಿಂತಿದೆ. ಇದೇ ಸಂದರ್ಭವೇ ಇದರ ಬೆಳೆವಣಿಗೆಗೆ ವಿಶೇಷ ಪ್ರೋತ್ಸಾಹ ಕೊಟ್ಟಿದೆ. ನಾನಾ ಕಾರಣಗಳಿಂದ ಅಂತಾರಾಷ್ಟ್ರೀಯ ಸಂಬಂಧಗಳು ಈಗಿನ ಕಾಲದಲ್ಲಿ ಪ್ರಾಮುಖ್ಯ ಪಡೆದಿವೆ. ಇದು ಪ್ರಪಂಚದ ಸನ್ನಿವೇಶವನ್ನು ತಿಳಿಯಲು ಅವಕಾಶವನ್ನುಂಟುಮಾಡುತ್ತದೆ. ಯುದ್ಧದಿಂದ ಆಗುವ ಪರಿಣಾಮಗಳನ್ನು ತಿಳಿಸಿ, ಅವಕ್ಕೆ ಪರಿಹಾರೋಪಾಯಗಳನ್ನು ಸೂಚಿಸುತ್ತದೆ.
  • ಅಂತಾರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದದ ವೈಶಿಷ್ಟ್ಯವನ್ನು ತಿಳಿಸಿ ಅದನ್ನು ಕಾಪಾಡಿಕೊಂಡು ಹೋಗುವ ಮಾರ್ಗಗಳನ್ನು ಸೂಚಿಸುತ್ತದೆ; ಪ್ರಪಂಚದಲ್ಲಿ ಒದಗಬಹುದಾದ ಯುದ್ಧಗಳನ್ನು ತಡೆಗಟ್ಟಿ, ಅದರಿಂದ ಮಾನವ ಜನಾಂಗದ ಏಳಿಗೆಗೆ ಶ್ರಮಿಸುತ್ತಿದೆ. ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಹಾಗೂ ಪ್ರಜಾಸತ್ತೆಯ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಇದು ಪ್ರೋತ್ಸಾಹಿಸುತ್ತದೆ.
  • ಇದರ ಜೊತೆಗೆ ಅಂತಾರಾಷ್ಟ್ರೀಯ ವ್ಯವಹಾರ ನಿರ್ವಹಣೆಗೆ ಅವಕಾಶ ಮಾಡಿಕೊಡುತ್ತದೆ. ಪ್ರಪಂಚದ ಪ್ರತಿಯೊಬ್ಬ ನಾಗರಿಕನ ಮತ್ತು ಪ್ರತಿ ರಾಷ್ಟ್ರದ ಮೇಲೆ ಇದರ ಪ್ರಭಾವ ಬಿದ್ದಿರುವುದರಿಂದ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಇಂದಿನ ಪ್ರಪಂಚದಲ್ಲಿ ಹೆಚ್ಚಿನ ಪ್ರಾಧಾನ್ಯ ಸಿಕ್ಕಿದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಅಂತಾರಾಷ್ಟ್ರೀಯ ಸಂಬಂಧಗಳು ವಿದೇಶಾಂಗ ನೀತಿಅಂತಾರಾಷ್ಟ್ರೀಯ ಸಂಬಂಧಗಳು ಆಧುನಿಕ ಕಾಲದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಉಲ್ಲೇಖಗಳುಅಂತಾರಾಷ್ಟ್ರೀಯ ಸಂಬಂಧಗಳು ಬಾಹ್ಯ ಸಂಪರ್ಕಗಳುಅಂತಾರಾಷ್ಟ್ರೀಯ ಸಂಬಂಧಗಳುಸಮಾಜಶಾಸ್ತ್ರ

🔥 Trending searches on Wiki ಕನ್ನಡ:

ವಿಮೆತ್ಯಾಜ್ಯ ನಿರ್ವಹಣೆವಾಣಿಜ್ಯ(ವ್ಯಾಪಾರ)ಜ್ಞಾನಪೀಠ ಪ್ರಶಸ್ತಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಚೌರಿ ಚೌರಾ ಘಟನೆಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಚಾಣಕ್ಯಭಾರತದ ಸ್ವಾತಂತ್ರ್ಯ ಚಳುವಳಿಏಕಲವ್ಯಮಾದರ ಚೆನ್ನಯ್ಯವೃತ್ತೀಯ ಚಲನೆವಡ್ಡಾರಾಧನೆಮಂತ್ರಾಲಯಯಣ್ ಸಂಧಿಕೆ. ಎಸ್. ನರಸಿಂಹಸ್ವಾಮಿಕೀರ್ತನೆಬಳ್ಳಿಗಾವೆಆದಿ ಶಂಕರಮೈಸೂರುಸಂಪತ್ತಿನ ಸೋರಿಕೆಯ ಸಿದ್ಧಾಂತಶಬ್ದಗಣೇಶಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯವಿಕ್ರಮಾರ್ಜುನ ವಿಜಯಮೊದಲನೆಯ ಕೆಂಪೇಗೌಡಮಳೆಸಂಶೋಧನೆಪಿತ್ತಕೋಶಆವಕಾಡೊಏಷ್ಯಾ ಖಂಡಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತರಾಗಿಕನ್ನಡ ಗುಣಿತಾಕ್ಷರಗಳುಕವಿಗಳ ಕಾವ್ಯನಾಮಪಾಟೀಲ ಪುಟ್ಟಪ್ಪಶಾಸನಗಳುಅಶೋಕನ ಶಾಸನಗಳುಗರ್ಭಧಾರಣೆಮಂಗಳ (ಗ್ರಹ)ವಾಯು ಮಾಲಿನ್ಯಕರ್ನಾಟಕ ಪೊಲೀಸ್ತೋಟಶಂಕರ್ ನಾಗ್ಶಿವರಾಮ ಕಾರಂತಕನ್ನಡದಲ್ಲಿ ಅಂಕಣ ಸಾಹಿತ್ಯಗ್ರಹಕಲ್ಯಾಣಿಬೆಂಗಳೂರಿನ ಇತಿಹಾಸವಿಷ್ಣುವರ್ಧನ್ (ನಟ)ಬ್ಯಾಸ್ಕೆಟ್‌ಬಾಲ್‌ವಿಭಕ್ತಿ ಪ್ರತ್ಯಯಗಳುಭಾರತೀಯ ರೈಲ್ವೆಕೃಷ್ಣರಾಜಸಾಗರನಾಗರಹಾವು (ಚಲನಚಿತ್ರ ೧೯೭೨)ಜೀವನಶ್ರೀ ಸಿದ್ದೇಶ್ವರ ಸ್ವಾಮಿಜಿಗಳುದರ್ಶನ್ ತೂಗುದೀಪ್ದ್ವಿರುಕ್ತಿಪರಶುರಾಮಜ್ಯೋತಿಬಾ ಫುಲೆದ್ರಾವಿಡ ಭಾಷೆಗಳುಕಾರ್ಖಾನೆ ವ್ಯವಸ್ಥೆಮಾರ್ಕ್ಸ್‌ವಾದಹಿಂದೂ ಧರ್ಮಕೆರೆಗೆ ಹಾರ ಕಥನಗೀತೆಸಂಜು ವೆಡ್ಸ್ ಗೀತಾ (ಚಲನಚಿತ್ರ)ಫ್ರಾನ್ಸ್ಧಾರವಾಡಹುಯಿಲಗೋಳ ನಾರಾಯಣರಾಯಕನ್ನಡದಲ್ಲಿ ವಚನ ಸಾಹಿತ್ಯಸಂಭೋಗಕ್ರೈಸ್ತ ಧರ್ಮಸಂಧಿಭಾರತದಲ್ಲಿ ಪಂಚಾಯತ್ ರಾಜ್ಪತ್ರಿಕೋದ್ಯಮಭಾರತೀಯ ಸಂಸ್ಕೃತಿಪಂಪ ಪ್ರಶಸ್ತಿ🡆 More