ಸೈಂಟ್ ಮೇರೀಸ್ ದ್ವೀಪ

ಸೈಂಟ್ ಮೇರೀಸ್ ದ್ವೀಪ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದ್ವೀಪ.

ಸೈಂಟ್ ಮೇರೀಸ್ ದ್ವೀಪವನ್ನು ಕೊಕೊನಟ್ ಐಸ್‍ಲ್ಯಾಂಡ್ ಎಂದು ಇನ್ನೊಂದು ಹೆಸರಿನಲ್ಲಿ ಕರೆಯುತ್ತಾರೆ. ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ಬಹಳ ಹೆಸರುವಾಸಿ ಯಾಗಿದೆ. ಕರ್ನಾಟಕ ರಾಜ್ಯದ ಕೇವಲ ೪ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೈಂಟ್ ಮೇರೀಸ್ ದ್ವೀಪವೂ ಒಂದು ಹಾಗು ದೇಶದ ೨೬ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ.

ಸೈಂಟ್ ಮೇರೀಸ್ ದ್ವೀಪ
ಸೈಂಟ್ ಮೇರೀಸ್ ದ್ವೀಪ.
ದ್ವೀಪ
Four Islands -Coconut Island, the North Island, the Daryabahadurgarh Island and the South Island

ಇತಿಹಾಸ

ಇದರ ಮೊದಲ ಹೆಸರು ತೋನ್ಸೆ ಪಾರ್ ಇತಿಹಾಸದ ಪ್ರಕಾರ ೧೪೯೭ರಲ್ಲಿ ಪೋರ್ಚುಗೀಸ್‌ ಶೋಧಕ ವಾಸ್ಕೋ ಡ ಗಾಮ , ಯುರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದ್ವೀಪದಲ್ಲಿ ಇಳಿದನೆಂದು ಹಾಗು ಅಲ್ಲಿ ಶಿಲುಬೆಯೊಂದನ್ನು ನೆಟ್ಟು "El Padron de Santa Maria" ಅಂದರೆ "ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ" ಎಂದು ಹೆಸರಿಟ್ಟ ಎಂದೂ ಹಾಗಾಗಿ ಈ ದ್ವೀಪ ಸೈಂಟ್ ಮೇರೀಸ್ ಎಂಬ ಹೆಸರನ್ನು ಪಡೆಯಿತು ಎಂದು ಹೇಳಲಾಗುತ್ತದೆ.

ಭೂವಿಜ್ಞಾನ ಹಾಗು ಸ್ಥಳವಿವರಣೆ

ಸೈಂಟ್ ಮೇರೀಸ್ ದ್ವೀಪವು ೪ ದ್ವೀಪಗಳ ಸಮೂಹದಿಂದಾಗಿದೆ. ೪ ದ್ವೀಪಗಳಲ್ಲಿನ ಒಂದಾದ ಉತ್ತರದ ದ್ವೀಪ ಬಸಾಲ್ಟ್-ರಯೋಡೇಸೈಟು ವರ್ಗದ ಶಿಲೆ (ಬಸಾಲ್ಟಿಕ್-ರಿಯೋಡಾಸಿಟಿಕ್ ಬಂಡೆಗಳು) ಗಳಿಂದ ರಚನೆಯಾಗಿದ್ದು ಷಡ್ಭುಜ ಆಕೃತಿಯ ಶಿಲೆಗಳ ಸಮೂಹವಾಗಿದೆ. ಈ ಬಗೆಯ ಸುಂದರ ಷಡ್ಭುಜ ಆಕೃತಿಯ ಶಿಲಾರಚನೆಗಳು ದೇಶದಲ್ಲಿ ಇವು ಏಕಮಾತ್ರ ಎನ್ನಲಾಗಿದೆ. ದ್ವೀಪದ ವಿಸ್ತಾರವು ಸುಮಾರು ೫೦೦ ಮೀ (೧,೬೪೦.೪ ಅಡಿ). ಉದ್ದವಾಗಿದ್ದು ಅಗಲವು ೧೦೦ ಮೀ ಇದೆ. ದ್ವೀಪದ ತುಂಬೆಲ್ಲಾ ತೆಂಗಿನ ಮರಗಳು ಇವೆ. ದ್ವೀಪದಲ್ಲಿ ಮನುಷ್ಯ ನೆಲೆ ಇಲ್ಲ. ಉತ್ತರ-ದಕ್ಷಿಣ ದಿಕ್ಕಿನಲ್ಲಿ ಚಾಚಿಕೊಂಡಿರುವ ದ್ವೀಪಸಮೂಹವು ೪ ದೊಡ್ದ ದ್ವೀಪಗಳಿಂದ ಕೂಡಿದೆ. ಈ ೪ ದೊಡ್ದ ದ್ವೀಪಗಳೆಂದರೆ

  1. ನಾರಿಕೇಳ(ಕೊಕೊನೆಟ್) ದ್ವೀಪ
  2. ಉತ್ತರ ದ್ವೀಪ
  3. ದರಿಯಾ ಬಹದ್ದೂರ್ ದ್ವೀಪ
  4. ದಕ್ಷಿಣ ದ್ವೀಪ

ದ್ವೀಪದ ಛಾಯಾಚಿತ್ರಗಳು

ಉಲ್ಲೇಖ

Tags:

ಸೈಂಟ್ ಮೇರೀಸ್ ದ್ವೀಪ ಇತಿಹಾಸಸೈಂಟ್ ಮೇರೀಸ್ ದ್ವೀಪ ಭೂವಿಜ್ಞಾನ ಹಾಗು ಸ್ಥಳವಿವರಣೆಸೈಂಟ್ ಮೇರೀಸ್ ದ್ವೀಪ ದ್ವೀಪದ ಛಾಯಾಚಿತ್ರಗಳುಸೈಂಟ್ ಮೇರೀಸ್ ದ್ವೀಪ ಉಲ್ಲೇಖಸೈಂಟ್ ಮೇರೀಸ್ ದ್ವೀಪಉಡುಪಿಕರ್ನಾಟಕದ್ವೀಪಮಲ್ಪೆ

🔥 Trending searches on Wiki ಕನ್ನಡ:

ಭೂತಾರಾಧನೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಅಷ್ಟ ಮಠಗಳುಜವಾಹರ‌ಲಾಲ್ ನೆಹರುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತದ ಸ್ವಾತಂತ್ರ್ಯ ದಿನಾಚರಣೆಮಾವುಹೆಚ್.ಡಿ.ದೇವೇಗೌಡಕಲ್ಯಾಣಿಮಲೇರಿಯಾಭಾಮಿನೀ ಷಟ್ಪದಿಭಾರತದ ಮಾನವ ಹಕ್ಕುಗಳುಕಾಳಿದಾಸವಡ್ಡಾರಾಧನೆದೇವರ ದಾಸಿಮಯ್ಯತುಂಗಭದ್ರ ನದಿಉಚ್ಛಾರಣೆಮೈಸೂರು ಮಲ್ಲಿಗೆಹಣಕಾಸುಮಂಕುತಿಮ್ಮನ ಕಗ್ಗಕೃಷಿರಂಗಭೂಮಿಋತುಗೋಕಾಕ್ ಚಳುವಳಿಅನುರಾಧಾ ಧಾರೇಶ್ವರಬಾರ್ಲಿಸೂರ್ಯ ಗ್ರಹಣಕೃಷ್ಣಶಿಶುಪಾಲವ್ಯವಸಾಯಕೃಷ್ಣರಾಜಸಾಗರಕನ್ನಡ ಛಂದಸ್ಸುಭೀಮಸೇನಅಂತಿಮ ಸಂಸ್ಕಾರಶಬರಿಮಾಸತುಮಕೂರುಕರ್ಮಶಿವಅಶ್ವತ್ಥಮರಸ್ಕೌಟ್ಸ್ ಮತ್ತು ಗೈಡ್ಸ್ಹತ್ತಿಮಾಸ್ಕೋಶಿವರಾಜ್‍ಕುಮಾರ್ (ನಟ)ಸಂಸ್ಕಾರಕಲಿಯುಗಕಲಬುರಗಿಮೈಸೂರು ದಸರಾಬಳ್ಳಾರಿಅಳಿಲುಮಣ್ಣುಪುಟ್ಟರಾಜ ಗವಾಯಿಗಿರೀಶ್ ಕಾರ್ನಾಡ್ಸುಭಾಷ್ ಚಂದ್ರ ಬೋಸ್ಮಾದರ ಚೆನ್ನಯ್ಯಬಡತನಎಕರೆವರ್ಗೀಯ ವ್ಯಂಜನಮೋಕ್ಷಗುಂಡಂ ವಿಶ್ವೇಶ್ವರಯ್ಯರಾಷ್ಟ್ರಕವಿಭಾರತದ ರಾಷ್ಟ್ರಪತಿಗಳ ಪಟ್ಟಿವಚನಕಾರರ ಅಂಕಿತ ನಾಮಗಳುಅರಿಸ್ಟಾಟಲ್‌ಕರ್ನಾಟಕ ಐತಿಹಾಸಿಕ ಸ್ಥಳಗಳುಚಿಲ್ಲರೆ ವ್ಯಾಪಾರಮಿಥುನರಾಶಿ (ಕನ್ನಡ ಧಾರಾವಾಹಿ)ಪೆಟ್ರೋಮ್ಯಾಕ್ಸ್ (ಚಲನಚಿತ್ರ)ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮಾನ್ವಿತಾ ಕಾಮತ್ಸಾಮಾಜಿಕ ಸಮಸ್ಯೆಗಳುಗಾಳಿ/ವಾಯುಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಶಬ್ದಮಣಿದರ್ಪಣಭಾರತದ ಸಂವಿಧಾನದ ೩೭೦ನೇ ವಿಧಿಭಾರತೀಯ ಮೂಲಭೂತ ಹಕ್ಕುಗಳುಭಾರತೀಯ ರೈಲ್ವೆಕನ್ನಡ ಸಾಹಿತ್ಯ ಪ್ರಕಾರಗಳುದ್ವಂದ್ವ ಸಮಾಸ🡆 More