Sushmitha.s Poojari/ಮಮತಾ ಪೂಜಾರಿ

ಮಮತಾ ಪೂಜಾರಿ (ಜನನ ೧೯೮೬) ಒಬ್ಬ ಭಾರತೀಯ ವೃತ್ತಿಪರ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ.

Sushmitha.s Poojari/ಮಮತಾ ಪೂಜಾರಿ
2010ರಲ್ಲಿ ಪೂಜಾರಿ

ಅವರು ಭಾರತೀಯ ಮಹಿಳಾ ಕಬಡ್ಡಿ ತಂಡದ ಮಾಜಿ ನಾಯಕಿ ಮತ್ತು ಕರ್ನಾಟಕ ಸರ್ಕಾರದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೧೪ ಸೆಪ್ಟೆಂಬರ್ ೨ ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಬಡ್ಡಿಯಲ್ಲಿ ಆಕೆಯ ಸಾಧನೆಗಳನ್ನು ಗುರುತಿಸಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಆರಂಭಿಕ ಜೀವನ

ಮಮತಾ ಪೂಜಾರಿಯವರು ೧೯೮೬ ರಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ರೈತ ಬೋಜ ಪೂಜಾರಿ ಮತ್ತು ಕಿಟ್ಟಿ ಪೂಜಾರಿ ದಂಪತಿಗೆ ಜನಿಸಿದರು. ಆಕೆಯ ಮಾತೃಭಾಷೆ ತುಳು . ಅವರು ಪ್ರಸ್ತುತ ಭಾರತೀಯ ರೈಲ್ವೆಯ ದಕ್ಷಿಣದ ಮಧ್ಯ ರೈಲ್ವೆ ವಲಯದ ಉದ್ಯೋಗಿಯಾಗಿದ್ದಾರೆ. ಮಮತಾ ಹೆರ್ಮುಂಡೆ ಮತ್ತು ಅಜೆಕಾರ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು ಮತ್ತು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪದವಿ ಪಡೆದರು.

ವೃತ್ತಿ

ತನ್ನ ಶಾಲಾ ದಿನಗಳಲ್ಲಿ ವಾಲಿಬಾಲ್, ಶಾರ್ಟ್‌ಪುಟ್ ಮತ್ತು ಕಬಡ್ಡಿಯಂತಹ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಳು. ತಿರುನೆಲ್ವೇಲಿಯಲ್ಲಿ ನಡೆದ ಅಂತರಾಷ್ಟ್ರೀಯ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದಾಗ ಆಕೆಯ ಪ್ರಶಸ್ತಿಗಳ ಬೇಟೆ ಪ್ರಾರಂಭವಾಯಿತು. ಅವಳು ಚಿನ್ನದ ಪದಕವನ್ನು ಗೆದ್ದಳು. ಹಿಂಗಾಟ್ ಮತ್ತು ದಾದರ್‌ನಲ್ಲಿ ನಡೆದ ಮುಕ್ತ ಕಬಡ್ಡಿ ಪಂದ್ಯಾವಳಿಗಳಲ್ಲಿ ಪದಕ ಗೆದ್ದಿದ್ದಾಳೆ. ೨೦೦೬ ರಲ್ಲಿ ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತ ಕಬಡ್ಡಿ ತಂಡದಲ್ಲಿ ಮಮತಾ ಕೂಡ ಭಾಗವಾಗಿದ್ದರು.

ಪದಕಗಳ ಪಟ್ಟಿ

ಅಂತಾರಾಷ್ಟ್ರೀಯ

೧. ದಕ್ಷಿಣ ಕೊರಿಯಾದಲ್ಲಿ ನಡೆದ ೧೭ನೇ ಏಷ್ಯನ್ ಗೇಮ್ಸ್ ೨೦೧೪ ರಲ್ಲಿ ಚಿನ್ನ.

೨. ಥಾಯ್ಲೆಂಡ್‌ನಲ್ಲಿ ನಡೆದ ೪ನೇ ಏಷ್ಯನ್ ೨೦೧೪ ಬೀಚ್ ಗೇಮ್ಸ್‌ನಲ್ಲಿ ಕ್ಯಾಪ್ಟನ್ ಆಗಿ ಚಿನ್ನ.

೩. ಚೀನಾದಲ್ಲಿ ನಡೆದ ೧೬ನೇ ಏಷ್ಯನ್ ಗೇಮ್ಸ್ ೨೦೧೦ ರಲ್ಲಿ ಚಿನ್ನ.

೪. ಪಾಟ್ನಾದಲ್ಲಿ ನಡೆದ ಮೊದಲ ವಿಶ್ವಕಪ್‌ನಲ್ಲಿ ನಾಯಕನಾಗಿ ಚಿನ್ನ.

೫. ದಕ್ಷಿಣ ಕೊರಿಯಾದಲ್ಲಿ ನಡೆದ ೪ನೇ ಏಷ್ಯನ್ ಒಳಾಂಗಣ ಮತ್ತು ಸಮರ ಆಟಗಳು ೨೦೧೩ ರಲ್ಲಿ ಚಿನ್ನ.

೬. ಇಂಡೋನೇಷ್ಯಾದಲ್ಲಿ ನಡೆದ ೧ ನೇ ಏಷ್ಯನ್ ಬೀಚ್ ಗೇಮ್ಸ್ ೨೦೦೮ ರಲ್ಲಿ ಕ್ಯಾಪ್ಟನ್ ಆಗಿ ಚಿನ್ನ.

೭. ಓಮನ್‌ನಲ್ಲಿ ನಡೆದ ೨೦೧೦ ರ ಏಷ್ಯನ್ ಬೀಚ್ ಗೇಮ್ಸ್‌ನಲ್ಲಿ ಕ್ಯಾಪ್ಟನ್ ಆಗಿ ಚಿನ್ನ.

೮. ಚೀನಾದಲ್ಲಿ ನಡೆದ ೩ನೇ ಏಷ್ಯನ್ ಬೀಚ್ ಗೇಮ್ಸ್‌ನಲ್ಲಿ ಕ್ಯಾಪ್ಟನ್ ಆಗಿ ಚಿನ್ನ.

೯. ಇರಾನ್‌ನಲ್ಲಿ ನಡೆದ ೨೦೦೭ ರ ಏಷ್ಯನ್ ಕಬ್ಬಡಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ.

೧೦. ಮಧುರೈನಲ್ಲಿ ನಡೆದ ೩ನೇ ಏಷ್ಯನ್ ಕಬ್ಬಡಿ ಚಾಂಪಿಯನ್‌ಶಿಪ್ ೨೦೦೮ ರಲ್ಲಿ ಚಿನ್ನ.

೧೧. ಶ್ರೀಲಂಕಾದಲ್ಲಿ ನಡೆದ ೧೦ನೇ ಎಸ್.ಎ.ಎ.ಎಫ್ ಗೇಮ್ಸ್ ೨೦೦೬ ರಲ್ಲಿ ಚಿನ್ನ.

ರಾಷ್ರ್ಟೀಯ

೧. ೬೨ನೇ ಹಿರಿಯ ರಾಷ್ಟ್ರೀಯ ತಿರ್ಚಿಂಗೋಡ್ ತಮಿಳುನಾಡು ೨೦೧೫ ರಲ್ಲಿ ಅತ್ಯುತ್ತಮ ಆಟಗಾರಳಾಗಿ ಚಿನ್ನ.

೨. ಚಿನ್ನ ೬೧ನೇ ಹಿರಿಯ ರಾಷ್ಟ್ರೀಯ ಪಾಟ್ನಾ ಬಿಹಾರ ೨೦೧೪.

೩. ಚಿನ್ನ ೬೦ನೇ ಹಿರಿಯ ರಾಷ್ಟ್ರೀಯ ಮಂಡ್ಯ ಕರ್ನಾಟಕ ೨೦೧೩.

೪. ಚಿನ್ನ ಮತ್ತು ಅತ್ಯುತ್ತಮ ಆಲ್ ರೌಂಡರ್ ೫೯ ನೇ ಹಿರಿಯ ರಾಷ್ಟ್ರೀಯ ಮುಂಬೈ ಮಹಾರಾಷ್ಟ್ರ ೨೦೧೨.

೫. ೫೮ನೇ ಹಿರಿಯ ರಾಷ್ಟ್ರೀಯ ಬೈಂದೂರು ಕರ್ನಾಟಕ ೨೦೧೧ ರಲ್ಲಿ ನಾಯಕ ಮತ್ತು ಅತ್ಯುತ್ತಮ ಆಲ್ ರೌಂಡರ್ ಆಗಿ ಚಿನ್ನ.

೬. ಚಿನ್ನ ೫೭ನೇ ಹಿರಿಯ ರಾಷ್ಟ್ರೀಯ ಮುಂಬೈ ಮಹಾರಾಷ್ಟ್ರ ೨೦೧೦

೭. ಚಿನ್ನ ಮತ್ತು ಅತ್ಯುತ್ತಮ ಆಲ್ ರೌಂಡರ್ ೫೬ ನೇ ಹಿರಿಯ ರಾಷ್ಟ್ರೀಯ ನವದೆಹಲಿ ದೆಹಲಿ ೨೦೦೮.

೮. ಚಿನ್ನ ೫೫ನೇ ಹಿರಿಯ ರಾಷ್ಟ್ರೀಯ ಅಮರಾವತಿ ಮಹಾರಾಷ್ಟ್ರ ೨೦೦೭.

೯. ಚಿನ್ನ ೫೪ನೇ ಹಿರಿಯ ರಾಷ್ಟ್ರೀಯ ಚಿತ್ತೂರ್ ಆಂಧ್ರಪ್ರದೇಶ ೨೦೦೭.

೧೦. ಭಾಗವಹಿಸುವಿಕೆ ಮತ್ತು ಅತ್ಯುತ್ತಮ ಆಟಗಾರ ೫೩ ನೇ ಹಿರಿಯ ರಾಷ್ಟ್ರೀಯ ಉಪ್ಪಲ್ ಆಂಧ್ರ ಪ್ರದೇಶ ೨೦೦೭.

೧೧. ಭಾಗವಹಿಸುವಿಕೆ ೫೨ ನೇ ಹಿರಿಯ ರಾಷ್ಟ್ರೀಯ ಕುರುಕ್ಷೇತ್ರ ಹರಿಯಾಣ ೨೦೦೪.

ಆಕೆಯ ಇತರ ಸಾಧನೆಗಳಲ್ಲಿ ಪದಕಗಳು ಸೇರಿವೆ, ಅವುಗಳೆಂದರೆ:

  • ಬಾಲಿಯಲ್ಲಿ ನಡೆದ ಏಷ್ಯನ್ ಬೀಚ್ ಕ್ರೀಡಾ ಕಬಡ್ಡಿ ಪಂದ್ಯ.
  • ಇರಾನ್‌ನ ಟೆಹ್ರಾನ್‌ನಲ್ಲಿ ನಡೆದ ಎರಡನೇ ಏಷ್ಯನ್ ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್.
  • ಚೆನ್ನೈನಲ್ಲಿ ನಡೆದ ಮೂರನೇ ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್.
  • ಚೀನಾದ ಗುವಾಂಗ್‌ಝೌನಲ್ಲಿ ೨೦೧೦ ರ ಏಷ್ಯನ್ ಕ್ರೀಡಾಕೂಟದಲ್ಲಿ ಕಬಡ್ಡಿ.
  • ೨೦೧೩ ರ ಏಷ್ಯನ್ ಇಂಡೋರ್ ಮತ್ತು ಮಾರ್ಷಲ್ ಆರ್ಟ್ಸ್ ಗೇಮ್ಸ್‌ನಲ್ಲಿ ಒಳಾಂಗಣ ಕಬಡ್ಡಿ .

ಭಾರತೀಯ ಮಹಿಳಾ ಕಬಡ್ಡಿ ತಂಡದ ನಾಯಕಿಯಾಗಿ, ಅವರು 2012 ರ ಉದ್ಘಾಟನಾ ವಿಶ್ವಕಪ್‌ನ ಫೈನಲ್‌ನಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಉಲ್ಲೇಖಗಳು

Tags:

Sushmitha.s Poojari/ಮಮತಾ ಪೂಜಾರಿ ಆರಂಭಿಕ ಜೀವನSushmitha.s Poojari/ಮಮತಾ ಪೂಜಾರಿ ವೃತ್ತಿSushmitha.s Poojari/ಮಮತಾ ಪೂಜಾರಿ ಪದಕಗಳ ಪಟ್ಟಿSushmitha.s Poojari/ಮಮತಾ ಪೂಜಾರಿ ಉಲ್ಲೇಖಗಳುSushmitha.s Poojari/ಮಮತಾ ಪೂಜಾರಿಅರ್ಜುನ ಪ್ರಶಸ್ತಿಕಬಡ್ಡಿಕರ್ನಾಟಕ ಸರ್ಕಾರಪ್ರಣಬ್ ಮುಖೆರ್ಜೀರಾಜ್ಯೋತ್ಸವ ಪ್ರಶಸ್ತಿ

🔥 Trending searches on Wiki ಕನ್ನಡ:

ನಿರ್ವಹಣೆ ಪರಿಚಯಭಾರತೀಯ ಮೂಲಭೂತ ಹಕ್ಕುಗಳುಹನುಮಾನ್ ಚಾಲೀಸವಾಯು ಮಾಲಿನ್ಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಚೆನ್ನಕೇಶವ ದೇವಾಲಯ, ಬೇಲೂರುಟಿಪ್ಪು ಸುಲ್ತಾನ್ಸಮಾಸಇಚ್ಛಿತ್ತ ವಿಕಲತೆಪರಮಾತ್ಮ(ಚಲನಚಿತ್ರ)ಹುಬ್ಬಳ್ಳಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಹದ್ದುಅಲಂಕಾರಕನ್ನಡ ಛಂದಸ್ಸುಕೇದಾರನಾಥನರೇಂದ್ರ ಮೋದಿಕೇಂದ್ರ ಪಟ್ಟಿಸುಭಾಷ್ ಚಂದ್ರ ಬೋಸ್ಭಾರತದ ಬಂದರುಗಳುಯಶ್(ನಟ)ಅಮೆರಿಕಬಸವರಾಜ ಬೊಮ್ಮಾಯಿಗೋವಿಂದ ಪೈಬಿ.ಎಸ್. ಯಡಿಯೂರಪ್ಪಭಾರತದ ವಿಜ್ಞಾನಿಗಳುಜೆಕ್ ಗಣರಾಜ್ಯಜವಹರ್ ನವೋದಯ ವಿದ್ಯಾಲಯರಾಜ್‌ಕುಮಾರ್ಭೂತಾರಾಧನೆಶೃಂಗೇರಿತುಂಬೆಗಿಡಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಪ್ರಜಾವಾಣಿಅರ್ಥ ವ್ಯತ್ಯಾಸಕಬ್ಬುಭಾರತೀಯ ಶಾಸ್ತ್ರೀಯ ನೃತ್ಯಅಹಲ್ಯೆರೋಹಿತ್ ಶರ್ಮಾಗದಗಶಿಕ್ಷಣಮತದಾನ (ಕಾದಂಬರಿ)ಯೋಗಿ ಆದಿತ್ಯನಾಥ್‌ಈಡನ್ ಗಾರ್ಡನ್ಸ್ಕನ್ನಡ ಸಾಹಿತ್ಯ ಪರಿಷತ್ತುಗುಡಿಸಲು ಕೈಗಾರಿಕೆಗಳುವಿಜಯನಗರ ಸಾಮ್ರಾಜ್ಯರೈತವಾರಿ ಪದ್ಧತಿಪ್ಲೇಟೊಮದ್ಯದ ಗೀಳುದಿಕ್ಸೂಚಿಚಿತ್ರದುರ್ಗಪಂಚ ವಾರ್ಷಿಕ ಯೋಜನೆಗಳುಭಾರತದ ತ್ರಿವರ್ಣ ಧ್ವಜಕರ್ನಾಟಕ ವಿಧಾನಸಭೆ ಚುನಾವಣೆ, 2013ಗೋಪಾಲಕೃಷ್ಣ ಅಡಿಗವಿಧಾನ ಸಭೆರುಮಾಲುಸಂಕ್ಷಿಪ್ತ ಪೂಜಾಕ್ರಮಸೂರ್ಯ (ದೇವ)ವೇದಪಶ್ಚಿಮ ಘಟ್ಟಗಳುಮಾವುಮಾನವ ಹಕ್ಕುಗಳುಭಾರತದ ಉಪ ರಾಷ್ಟ್ರಪತಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕೇಂದ್ರಾಡಳಿತ ಪ್ರದೇಶಗಳುವೈದಿಕ ಯುಗಹೊಯ್ಸಳೇಶ್ವರ ದೇವಸ್ಥಾನಚಾಣಕ್ಯಮಾಟ - ಮಂತ್ರಶಿಕ್ಷೆಜಯಮಾಲಾವಿ. ಕೃ. ಗೋಕಾಕಸರ್ವೆಪಲ್ಲಿ ರಾಧಾಕೃಷ್ಣನ್ನೀತಿ ಆಯೋಗಕನ್ನಡ ರಾಜ್ಯೋತ್ಸವ🡆 More