ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿಸಾರ್ವಜನಿಕ
ಪ್ರಾರಂಭವಾದದ್ದು೧೯೬೬
ಮೊದಲ ಪ್ರಶಸ್ತಿ೧೯೬೬
ಕಡೆಯ ಪ್ರಶಸ್ತಿ೨೦೨೦
ಪ್ರಶಸ್ತಿ ನೀಡುವವರುSeal of Karnataka.svg
ಕರ್ನಾಟಕ ಸರ್ಕಾರ
ಧನ ಪುರಸ್ಕಾರ₹ ೧,೦೦,೦೦೦
ವಿವರವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ
ಹಿಂದಿನ ಹೆಸರು(ಗಳು)ಮೈಸೂರು ರಾಜ್ಯ ಪ್ರಶಸ್ತಿ
(೧೯೬೬–೧೯೭೨)
ಪ್ರಶಸ್ತಿಯ ಶ್ರೇಣಿ
ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]

ಇತಿಹಾಸ

ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:

ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.

ಆದರೆ, ೨೦೦೭ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ್ ಥಾಕೂರ್ ಪ್ರದಾನ ಮಾಡಿದ್ದರು.

ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ[೨]. ೧೯೮೫ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು ೨೦೦೮ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.

ದಶಕವಾರು ಪ್ರಶಸ್ತಿಗಳ ಪಟ್ಟಿ

ನೋಡಿ

ಉಲ್ಲೇಖಗಳು

  1. "1,000 applications received". Online webpage of The Hindu. The Hindu. Retrieved 2007-07-08.
  2. "Rajyotsava Award turns 50". The Hindu. 30 October 2017. Retrieved 3 November 2017.

🔥 Top trends keywords ಕನ್ನಡ Wiki:

ರಣ್ವೀರ್ ಸಿಂಗ್ಅರುಂಧತಿ ನಾಗ್ಎಂ. ಎಸ್. ಸತ್ಯುಕುವೆಂಪುಮುಖ್ಯ ಪುಟವಿಶೇಷ:Searchದ.ರಾ.ಬೇಂದ್ರೆಭೀಷ್ಮಬಾಬು ಜಗಜೀವನ ರಾಮ್ದೇವದತ್ ಪಡಿಕ್ಕಲ್ಬಸವೇಶ್ವರಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಮಹಾತ್ಮ ಗಾಂಧಿಕರ್ನಾಟಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಎ.ಪಿ.ಜೆ.ಅಬ್ದುಲ್ ಕಲಾಂಚಂದ್ರಶೇಖರ ಕಂಬಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಬಿ. ಆರ್. ಅಂಬೇಡ್ಕರ್ಗಿರೀಶ್ ಕಾರ್ನಾಡ್ಕನ್ನಡ ಸಾಹಿತ್ಯಯು.ಆರ್.ಅನಂತಮೂರ್ತಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗೌತಮ ಬುದ್ಧಬುದ್ಧಶ್ಯಾಮ್ ಪ್ರಸಾದ್ ಮುಖರ್ಜಿರಾವಣಭಾರತದ ರಾಷ್ಟ್ರಪತಿಗಳ ಪಟ್ಟಿಪಂಪರಾಮಾಯಣಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕೈಗಾರಿಕೆಗಳುಭಾರತದ ಸಂವಿಧಾನಅಕ್ಕಮಹಾದೇವಿಪುರಂದರದಾಸಪೂರ್ಣಚಂದ್ರ ತೇಜಸ್ವಿಸ್ವಾಮಿ ವಿವೇಕಾನಂದಕನ್ನಡಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜ್ಞಾನಪೀಠ ಪ್ರಶಸ್ತಿಹೊಯ್ಸಳಕನ್ನಡ ಅಕ್ಷರಮಾಲೆರಾಜ್ಯಸಭೆಜಾನಪದಶಿಕ್ಷಣರಾಮಭಾರತರನ್ನಮೊದಲನೆಯ ಕೆಂಪೇಗೌಡಕನ್ನಡ ಗುಣಿತಾಕ್ಷರಗಳುಆಸ್ಪತ್ರೆಕನ್ನಡ ಸಂಧಿಮೂಲಧಾತುಇಂಗಾಲದ ಡೈಆಕ್ಸೈಡ್ಹಂಪೆಕರ್ನಾಟಕದಲ್ಲಿ ವನ್ಯಜೀವಿಧಾಮಗಳುವಚನಕಾರರ ಅಂಕಿತ ನಾಮಗಳುಜಾಗತೀಕರಣಕನ್ನಡ ಕವಿಗಳುಮೈಸೂರುಕನಕದಾಸರುಜಾಕಿರ್ ಹುಸೇನ್ಕರ್ನಾಟಕದ ಇತಿಹಾಸಕನ್ನಡ ಸಾಹಿತ್ಯ ಸಮ್ಮೇಳನಸರ್ವೆಪಲ್ಲಿ ರಾಧಾಕೃಷ್ಣನ್ಕೃಷ್ಣದೇವರಾಯತಂಬಾಕು ಸೇವನೆ(ಧೂಮಪಾನ)21ನೇ ಶತಮಾನದ ಕೌಶಲ್ಯಗಳುಕನ್ನಡ ರಂಗಭೂಮಿಕಂಪ್ಯೂಟರ್ಸಿದ್ದಲಿಂಗಯ್ಯ (ಕವಿ)ಕರ್ನಾಟಕದ ಮುಖ್ಯಮಂತ್ರಿಗಳುಭಗತ್ ಸಿಂಗ್ಸಾಲುಮರದ ತಿಮ್ಮಕ್ಕಶಂಕರನಾಗ್ಮಹಾಭಾರತಮೈಸೂರು ಅರಮನೆ🡆 More