ಕ್ರೀಡೆಯ ಮೂಲಕ ನಾವೆಲ್ಲರೂ ಒಂದಾಗೋಣ'- ಎಂಬ ಆದರ್ಶದೊಂದಿಗೆ, ಏಷ್ಯಾದ ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತು ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಲು ಏಷ್ಯನ್ ಕ್ರೀಡಾಕೂಟ ವೇದಿಕೆಯಾಗಲಿ ಎಂದು,ಮಾರ್ಚ್ ನಾಲ್ಕು 1951.
XVII Asian Games | |||
---|---|---|---|
ಚಿತ್ರ:Incheon 2014 Asian Games logo.svg | |||
Host city | Incheon, South Korea | ||
Motto | Diversity Shines Here (Korean: 평화의 숨결, 아시아의 미래) | ||
Nations participating | 45 | ||
Athletes participating | 9,501 (5,823 men, 3,678 women) | ||
Events | 439 in 36 sports | ||
Opening ceremony | September 19 | ||
Closing ceremony | October 4 | ||
Officially opened by | President Park Geun-hye | ||
Athlete's Oath | Oh Jin-hyek Nam Hyun-hee | ||
Torch Lighter | Lee Young-ae | ||
Main venue | Incheon Asiad Main Stadium | ||
Website | Official website | ||
|
ದೆಹಲಿಯಲ್ಲಿ ನಡೆದ ಚೊಚ್ಚಲ ಏಷ್ಯನ್ ಕ್ರೀಡಾಕೂಟ ಆರಂಬವಾಯಿತು. ಅದರ ಉದ್ಘಾಟನಾ ಸಮಾರಂಭ ದಲ್ಲಿ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಮೇಲಿನ ಆದರ್ಶದ ಗುರಿಯನ್ನು ಹೊಂದಿದ ಹೇಳಿಕೆಯ ಸ್ಫೂರ್ತಿಯ ಮಾತುಗಳು.
ಹೀಗೆ ನಮ್ಮ ರಾಷ್ಟ್ರದ ರಾಜಧಾನಿಯಿಂದ ಆರಂಭವಾದ ಏಷ್ಯನ್ ಕೂಟದ ಪಯಣ ಈಗ ದಕ್ಷಿಣ ಕೊರಿಯದ ಇಂಚೆನ್ ವರೆಗೆ ಬಂದು ತಲುಪಿದೆ. ಮೊದಲ ಸಲ 11 ರಾಷ್ಟ್ರಗಳಷ್ಟೇ ಪಾಲ್ಗೊಂಡಿದ್ದ ಕೂಟದಲ್ಲಿ ಈಗ 45 ದೇಶಗಳ ಸ್ಪರ್ಧಿಗಳು ಕಣಕ್ಕಿಳಿದಿದ್ದಾರೆ. ಅಥ್ಲೀಟ್ಗಳ ಸಂಖ್ಯೆಯೂ ಹೆಚ್ಚಾಗಿದೆ. ಎರಡು ಸಲ (1951 ಮತ್ತು 1982ರಲ್ಲಿ) ಭಾರತದಲ್ಲಿ ಈ ಕೂಟ ನಡೆದಾಗ ಆತಿಥೇಯಭಾರತೀಯರು 50ಕ್ಕಿಂತಲೂ ಹೆಚ್ಚು ಪದಕ ಜಯಿಸಿದ್ದರು. ಆದರೆ, ವಿದೇಶಿ ನೆಲದಲ್ಲಿ ಪದಕ ಗಳಿಕೆಯಲ್ಲಿ ‘ಅರ್ಧಶತಕ’ ಬಾರಿಸಿದ್ದು 2010ರಲ್ಲಿ. ಚೀನಾದ ಗುವಾಂಗ್ ಜೌನಲ್ಲಿ ನಡೆದ ಕೂಟದಲ್ಲಿ ಭಾರತ ಒಟ್ಟು 65 ಪದಕಗಳನ್ನು ಜಯಿಸಿತ್ತು. ಇದುವರೆಗಿನ ಒಟ್ಟಾರೆ ಕೂಟಗಳಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆದ್ದಿದ್ದು ಅಥ್ಲೆಟಿಕ್ಸ್ನಲ್ಲಿ. ಆದ್ದರಿಂದ ಈ 2014 ರ ಸ್ಪರ್ಧೆಯಲ್ಲಿಯೇ ನಿರೀಕ್ಷೆ ಹೆಚ್ಚಿದೆ.
1982ರಲ್ಲಿ ಕೊನೆಯ ಸಲ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಏಷ್ಯನ್ ಕೂಟ ಜರುಗಿತ್ತು. ಕೊರಿಯ ಮೂರನೇ ಬಾರಿ ಕೂಟ ಸಂಘಟಿಸಿದೆ. 1986ರಲ್ಲಿ ಸೋಲ್ನಲ್ಲಿ ಮತ್ತು 2002ರಲ್ಲಿ ಬೂಸಾನ್ನಲ್ಲಿ ನಡೆದಿತ್ತು.
ದಕ್ಷಿಣ ಕೊರಿಯಾದ ಇಂಚಿಯಾನ್ ನಗರದ ಆತಿಥ್ಯದಲ್ಲಿ 19-9-2014 ಶುಕ್ರವಾರದಿಂದ ಅ.4ರವರೆಗೆ ನಡೆಯಲಿರುವ ಕೂಟದಲ್ಲಿ ಭಾರತ ಕಳೆದ ಬಾರಿಗಿಂತಲು ಅತ್ಯುತ್ತಮ ಪ್ರದರ್ಶನ ತೋರುವ ಇರಾದೆ ಹೊಂದಿದೆ. ಉದ್ಘಾಟನಾ ದಿನ ಸೇರಿದಂತೆ ಒಟ್ಟು 16 ದಿನಗಳು ಕ್ರೀಡಾ ಕೂಟ ಜರುಗಲಿದೆ.
", -ಸಾಪ್ತಾಹಿಕ ಪುರವಣಿ-ಕ್ರೀಡೆ/ಕೆ. ಓಂಕಾರ ಮೂರ್ತಿ [೩] 29/09/2014/ಪ್ರಜಾವಾಣಿ)
40 ಈ ಬಾರಿ 45 ರಾಷ್ಟ್ರಗಳ ಸುಮಾರು 9 ಸಾವಿರ ಸ್ಪರ್ಧಿಗಳು 36 ಕ್ರೀಡೆಗಳ 439 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಿದ್ದಾರೆ. ಭಾರತ 8 ಕ್ರೀಡೆಗಳನ್ನು ಹೊರತುಪಡಿಸಿ 28 ಕ್ರೀಡೆಗಳಲ್ಲಿ ಕರ್ನಾಟಕದ 20 ಕ್ರೀಡಾಪಟುಗಳು ಒಳಗೊಂಡಂತೆ 515 ಸ್ಪರ್ಧಿಗಳು ಪದಕಕ್ಕಾಗಿ ಇಂಚಿಯಾನ್ ಏಷ್ಯಾಡ್ ಮುಖ್ಯ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಿದ್ದಾರೆ. ಇದೇ ವೇಳೆ 45 ರಾಷ್ಟ್ರಗಳ 10,000 ಅಥ್ಲೀಟ್ಗಳನ್ನು ಒಳಗೊಂಡ ಇಂಚಿಯಾನ್ ಏಷ್ಯನ್ ಗೇಮ್ಸ್ನ ವಿಷಯ ಸೂಚಿ 'ಒನ್ ಏಷ್ಯಾ' ಹಾಡನ್ನು ಪ್ರದರ್ಶಿಸಲಾಗುತ್ತದೆ. ಕಿಮ್ ಸಿಯಾಂಗ್ ಜೂ ಹಾಗೂ ಕೆಬಿಎಸ್ ಎಮ್ಸೀ ಯುನ್ ಸೂ ಯೆಯಾಂಗ್ ಉದ್ಘಾಟನಾ ಸಮಾರಂಭ ಹಾಗೂ ಅ.4 ರಂದು ನಡೆಯಲಿರುವ ಸಮಾರೋಪ ಸಮಾರಂಭದ ನಿರೂಪಣೆ ನಡೆಸಿಕೊಟ್ಟಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಭಾರತದಿಂದ ಈ ಬಾರಿ 679 ಕ್ರೀಡಾ ಪ್ರತಿನಿಧಿಗಳು ತೆರಳಲಿದ್ದು ಈ ಪೈಕಿ 516 ಅಥ್ಲೀಟ್ ಗಳು 163 ಕೋಚ್ ಗಳು ಹಾಗೂ ಸಹಾಯಕ ಸಿಬ್ಬಂದಿ ಇದ್ದಾರೆ. ಭಾರತ ಈ ಬಾರಿ 28 ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ. ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಸುಮಾರು 45 ದೇಶಗಳು 39 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ. ಒಟ್ಟು 439 (gold medals) ಚಿನ್ನದ ಪದಕಗಳು ಇವೆ.
ಕ್ರೀಡಾಕೂಟದ ಪ್ರಮುಖ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ
,ಭಾರತದ ಸ್ಕ್ವಾಷ್ ಸ್ಪರ್ಧಿಗಳು ಮಿರಮಿರನೆ ಮಿಂಚಿದರು. ಛಲದ ಆಟ ತೋರಿ ಪದಕಗಳನ್ನು ‘ಬೇಟೆ’ಯಾಡಿದ್ದಾರೆ. ಏಷ್ಯಾ ದಲ್ಲಿ ಹೊಸ ಸ್ಕ್ವಾಷ್ ಶಕ್ತಿಯಾಗಿ ಹೊರಹೊಮ್ಮುವ ಎಲ್ಲ ಸೂಚನೆಗಳನ್ನು ನೀಡಲು ಭಾರತಕ್ಕೆ ಸಾಧ್ಯವಾಗಿದೆ. ಈ ಬಾರಿಯ ಕೂಟದಲ್ಲಿ ಸ್ಕ್ವಾಷ್ನ ನಾಲ್ಕೂ ಸ್ಪರ್ಧೆಗಳಲ್ಲಿ ಪದಕ ಜಯಿಸುವಲ್ಲಿ ಭಾರತ ಯಶ ಕಂಡಿದೆ. ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ತಲಾ ಎರಡು ಪದಕಗಳು ಬಂದಿವೆ. ಏಷ್ಯನ್ ಕ್ರೀಡಾ ಕೂಟದ ಇತಿಹಾಸದಲ್ಲಿ ಭಾರತದ ಸ್ಕ್ವಾಷ್ ಸ್ಪರ್ಧಿಗಳು ತೋರಿದ ಅತ್ಯುತ್ತಮ ಪ್ರದರ್ಶನವಿದು. ಈ ಸಾಧನೆ ದೇಶದ ಸ್ಕ್ವಾಷ್ ಕ್ರೀಡೆಯಲ್ಲಿ ಹೊಸ ಭರವಸೆಗೆ ಕಾರಣವಾಗಿದೆ. 1998ರ ಬ್ಯಾಂಕಾಕ್ ಕೂಟದಲ್ಲಿ ಮೊದಲ ಬಾರಿ ಸ್ಕ್ವಾಷ್ಗೆ ಅವಕಾಶ ಲಭಿಸಿತ್ತು. ಆ ಬಳಿಕ 2010ರ ವರೆಗೆ ಭಾರತ ಒಟ್ಟು ನಾಲ್ಕು ಪದಕಗಳನ್ನು (ಎಲ್ಲವೂ ಕಂಚು) ಜಯಿಸಿದೆ. ಇದೀಗ ಒಂದೇ ಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದುಕೊಂಡದ್ದು ಅಮೋಘ ಸಾಧನೆಯೇ ಸರಿ.
ದಕ್ಷಿಣ ಕೊರಿಯಾದ ಇಂಚಿಯಾನ್ನಲ್ಲಿ ನಡೆಯುತ್ತಿರುವ 17 ಏಷ್ಯನ್ ಗೇಮ್ಸ್ 2014, ಕ್ರೀಡಾಕೂಟದಲ್ಲಿ ಮೇರಿ ಕೋಮ್ ಕಜಕಿಸ್ತಾನದ ಜೈನಾ ಶೆಕರ್ಬೆಕೋವಾ ವಿರುದ್ಧ 2-0 ಅಂತರದಲ್ಲಿ ಗೆದ್ದು ಇತಿಹಾಸ ಬರೆದರು. ಐದು ಬಾರಿ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಇಬ್ಬರು ಎರಡಗೈ ಬಾಕ್ಸರ್ಗಳ ಹೋರಾಟದಲ್ಲಿ ಮೊದಲೆರಡು ಸುತ್ತು ಹಿನ್ನಡೆ ಕಂಡಿದ್ದರು. ಆದರೆ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಪ್ರಭುತ್ವ ಸಾಧಿಸಿದ ಭಾರತದ ಬಾಕ್ಸರ್ ಐತಿಹಾಸಿಕ ಸ್ವರ್ಣ ಪದಕ ಗೆದ್ದರು. ಮೇರಿಯ ಸಾಧನೆಯಿಂದಾಗಿ ಭಾರತ 12ನೇ ದಿನದಂತ್ಯಕ್ಕೆ 7 ಚಿನ್ನ, 9 ಬೆಳ್ಳಿ, 34 ಕಂಚಿನೊಂದಿಗೆ ಒಟ್ಟು 50 ಪದಕ ಗೆದ್ದು ಪಟ್ಟಿಯಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದೆ
ಪೂವಮ್ಮಗೆ ಎರಡನೇ ಪದಕ
ಭಾರತದ ಮಹಿಳಾ ಕಬಡ್ಡಿ ತಂಡವು ಇರಾನ್ ಎದುರು 31-21 ಅಂಕಗಳಿಂದ ಗೆದ್ದು ಚಿನ್ನ ಗೆದ್ದರೆ, ಇರಾನ್ ಪುರುಷರೆದುರು ಭಾರತೀಯ ಪುರುಷರೂ 27-25 ಅಂತರದಿಂದ ಶುಕ್ರವಾರ ರೋಮಾಂಚಕ ವಿಜಯ ಸಾಧಿಸಿ ಸ್ವರ್ಣ ಪದಕ ಗೆದ್ದರು.
ದಿನಾಂಕ | ಸ್ಥಾನ | ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು ಪದಕ |
---|---|---|---|---|---|---|
3-10-2014 | 8 | ಇಂಡಿಯಾ | 11 | 9 | 37 | 57 |
ಕ್ರೀಡೆ | ಚಿನ್ನ | , ಬೆಳ್ಳಿ | ಕಂಚು | ಒಟ್ಟು |
---|---|---|---|---|
ಅತ್ಲೆಟಿಕ್ಸ್ | 2 | 4 | 7 | 13 |
ಕಬಡ್ಡಿ. | 2 | 0 | 0 | 2 |
ಸ್ಕ್ವಾಶ್/ Squash | 1 | 2 | 1 | 4 |
ಪಿಸ್ತೂಲು ಗುರಿ/ ಶೂಟಿಂಗ್ | 1 | 1 | 7 | 9 |
ಟೆನ್ನಿಸ್ | 1 | 1 | 3 | 5 |
ಕುಸ್ತಿ | 1 | 1 | 3 | 5 |
ಬಿಲ್ಲುಗಾರಿಕೆ | 1 | 1 | 2 | 4 |
ಬಾಕ್ಷಿಂಗ್, | 1 | 0 | 4 | 5 |
ಹಾಕಿ | 1 | 0 | 1 | 2 |
ರೊಯಿಂಗ್(ದೋಣಿ) | 0 | 0 | 3 | 3 |
ವೂಶು /Wushu | 0 | 0 | 2 | 2 |
ಬ್ಯಾಡಮಿಂಟನ್ | 0 | 0 | 1 | 1 |
Sailing/ ಸೈಲಿಂಗ್ (ದೋಣಿ) | 0 | 0 | 1 | 1 |
ಈಜು | 0 | 0 | 1 | 1 |
ಒಟ್ಟು ,/ Total | 11 | 10 | 36 | 57 |
ಕರ್ನಾಟಕದ ಎಂ.ಆರ್. ಪೂವಮ್ಮ, ಪ್ರಿಯಾಂಕಾ ಪನ್ವಾರ್, ಟಿಂಟು ಲೂಕಾ ಮತ್ತು ಮನ್ದೀಪ್ ಕೌರ್ ಅವರನ್ನೊಳಗೊಂಡ ಭಾರತ ಮಹಿಳಾ ರಿಲೇ ತಂಡ 4X400ಮೀ. ಸ್ಪರ್ಧೆಯಲ್ಲಿ ಎಂ.ಆರ್ ಪೂವಮ್ಮ, ರಿಲೇ ತಂಡದಲ್ಲಿ ಕೊನೆಯ ಲ್ಯಾಪ್ನಲ್ಲಿ ಓಡಿ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.
ಹಿಂದಿನ 16 ಕ್ರೀಡಾಕೂಟಗಳ & 2014ರ 17ನೇ ಕ್ರೀಡಾಕೂಟದ ವಿವರ | ||||||||||||||
---|---|---|---|---|---|---|---|---|---|---|---|---|---|---|
ವರ್ಷ.. | ಆತಿಥ್ಯ ನಗರ | ದೇಶ | ಭಾಗವಹಿಸಿದ ದೇಶಗಳು,ಸಂಖ್ಯೆ | !ಅಥ್ಲೀಟ್‘ಗಳು- | ಕ್ರೀಡೆ | |||||||||
1951 | ನವದೆಹಲಿ | ಭಾರತ | 11 | 489 | 6 | |||||||||
1954. | ಮನಾಲಿ | ಫಿಲಿಫೇನ್ಸ್ | 19 | 970 | 8 | |||||||||
1958. | ಟೋಕಿಯೋ | ಜಪಾನ್ | 16 | 1820 | 13 | |||||||||
1962. | ಜಕಾರ್ತಾ | ಇಂಡೋನೇಷ್ಯಾ | 12 | 1460 | 13 | |||||||||
1966. | ಬ್ಯಾಂಕಾಕ್ | ಥಾಯ್‘ಲೆಂಡ್ | 16 | 1945 | 14 | |||||||||
1970 | ಬ್ಯಾಂಕಾಕ್ | ಥಾಯ್‘ಲೆಂಡ್ | 16 | 2400 | 13 | |||||||||
1974. | ಟೆಹರಾನ್ | ಇರಾನ್ | 13 | 3010 | 16 | |||||||||
1978. | ಬ್ಯಾಂಕಾಕ್ | ಥಾಯ್‘ಲೆಂಡ್ | 19 | 3842 | 19 | |||||||||
1982 | ನವದೆಹಲಿ | ಭಾರತ | 33 | 3411 | 21 | |||||||||
1986.. | ಸೋಲ್ | ದಕ್ಷಣ ಕೊರಿಯಾ | 27 | 4839 | 25 | |||||||||
1990. | ಬೀಜಿಂಗ್ | ಚೈನಾ | 36 | 6122 | 29 | |||||||||
1994 | ಹೊರೋಷಿಮಾ | ಜಪಾನ್ | 42 | 6828 | 34 | |||||||||
1998 | ಬ್ಯಾಂಕಾಕ್ | ಥಾಯ್‘ಲೆಂಡ್ | 41 | 6554 | 36 | |||||||||
2002... | ಬೂಸಾನ್ | ದಕ್ಷಣ ಕೊರಿಯಾ | 44 | 7711 | 38 | |||||||||
2006. | ದೋಹಾ | ಕತಾರ್ | 45 | 9520 | 39 | |||||||||
2010. | ಗುವಾಂಗ ಜೌ | ಚೀನಾ | 45 | 9704 | 42 | |||||||||
2014. | ಇಂಚಿಯಾನ್ | ದಕ್ಷಿಣ ಕೊರಿಯಾ | 45 | 9501 | 36 |
. 16 ಏಷ್ಯನ್‘ ಕ್ರೀಡಾಕೂಟಗಳಲ್ಲಿ ಒಟ್ಟು ಹೆಚ್ಚು ಪದಕಗಳಮ್ಮು ಪಡೆದ 10 ದೇಶಗಳು . | ||||||||||||||
---|---|---|---|---|---|---|---|---|---|---|---|---|---|---|
ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು | ||||||||||
1. ಚೀನಾ | 1191 | 792 | 570 | 2553 | ||||||||||
2. ಜಪಾನ್ | 910 | 904 | .836 | 2650 | ||||||||||
3.ದಕ್ಷಿಣ ಕೊರಿಯಾ | 617 | 535 | 677 | 1829 | ||||||||||
.4.ಇರಾನ್ | 128 | 143 | 157. | 438 | ||||||||||
5.ಭಾರತ. | 128 | 168 | 249. | 545 | ||||||||||
6.ಕಜಕಸ್ಥಾನ | 112 | 118. | 167 | 397 | ||||||||||
7. ಥಾಯ್‘ಲೆಂಡ್ | 109. | 152 | 205 | 466 | ||||||||||
.8. ಉತ್ತರ ಕೊರಿಯಾ | 87. | 121 | 152 | 360 | ||||||||||
.9 ಚೀನಾ ತೈಫೆ. | 72 | 107 | 222 | 401 | ||||||||||
.10. ಫಿಲಿಫೈನ್ಸ್‘ | 62 | 109 | 204 | 375 |
,- | ಏಷಿಯಾಡ್2014ರಲ್ಲಿ | ಬಂಗಾರ (ಚಿನ್ನ) . | ವಿಜೇತರು . | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
1. | ಜಿತು ರಾಯ್ | ಶೂಟಿಂಗ್ | ಪುರುಷರ 50 ಮೀ. ಪಿಸ್ತೂಲು | 20 /9 |
2. | ರಜತ್` ಚೌಹಾನ್, | ಬಿಲ್ಲುಗಾರಿಕೆ | ಪುರುಷರ ಸಂಯುಕ್ತ-ವಿಭಾಗ | 27/ 9 |
2. | ಸಂದೀಪ್`ಕುಮಾರ್' | ಬಿಲ್ಲುಗಾರಿಕೆ | ಪುರುಷರ ಸಂಯುಕ್ತ-ವಿಭಾಗ | 27/ 9 |
2. | ಅಭಿಷೇಕ್`ವರ್ಮಾ | ಬಿಲ್ಲುಗಾರಿಕೆ | ಪುರುಷರ ಸಂಯುಕ್ತ-ವಿಭಾಗ | 27/ 9 |
3. | ಸೌ ರವ ಘೋಷಾಲ್, | ಸ್ಕ್ವಾಸ್ | ಪುರುಷರ ವಿಭಾಗ | 27 /9 |
3. | ಮಹೇಶ್ ಮಂಗಾವೋಂಕರ್` | , ಸ್ಕ್ವಾಸ್ | ಪುರುಷರ ವಿಭಾಗ | 27 /9 |
3. | ಹರೀಂದರ್`ಪಾಲ್,, | ಸ್ಕ್ವಾಸ್ | ಪುರುಷರ ವಿಭಾಗ | 27 /9 |
3. | ಕುಶ್` ಕುಮಾರ್ | ಸ್ಕ್ವಾಸ್ | ಪುರುಷರ ವಿಭಾಗ | 27 /9 |
4 | ಯೋಗೇಶ್ವರ ದತ್ತ್ | ಕುಸ್ತಿ | 65,ಕೆ.ಜಿ. ಪುರುಷರು- ಪ್ರೀಸ್ಟೈಲ್ | 28 /9 |
5. | ಸೀಮಾಪೂನಿಯಾ | ಅತ್ಲೆಟಿಕ್ಸ್` (ಆಟೋಟ) | ಮಹಿಳೆ,ಡಿಸ್ಕ್ ಎಸೆತ | 29 /9 |
6 | ಸಾನಿಯಾಮಿರ್ಜಾ , ಸಾಕೇತ್`ಮೈನೇನಿ | ಟೆನ್ನಿಸ್` , | ಮಿಶ್ರ ಜೋಡಿ(ಇಬ್ಬರು) | 29/9. |
7 | ಮೇರಿಕೋಮ್` , | ಬಾಕ್ಷಿಂಗ್` | ಮಹಿಳೆ.51ಕೆ.ಜಿ.ವಿಭಾಗ | 1/10 |
8 | ಪುರುಷರ ಹಾಕಿ ತಂಡ | ಬಯಲು ಹಾಕಿ | ಪುರುಷರು | 2/10 |
9 | ಪ್ರಿಯಾಂಕಾ ಪವಾರ್ | ಅತ್ಲೆಟಿಕ್ಸ್/ಆಟೋಟ | ಮಹಿಳೆ-ರಿಲೇ 4x 400 | 2/10 |
9 | ಟಿಂಟು ಲೂಕಾ ; | ಅತ್ಲೆಟಿಕ್ಸ್/ಆಟೋಟ | ಮಹಿಳೆ-ರಿಲೇ 4x 400 | 2/10 |
9 | ಮನದೀಪ್ ಕೌರ್ ; | ಅತ್ಲೆಟಿಕ್ಸ್/ಆಟೋಟ | ಮಹಿಳೆ-ರಿಲೇ 4x 400 | 2/10 |
9 | ಎಂ.ಆರ್.ಪೂವಮ್ಮ | ಅತ್ಲೆಟಿಕ್ಸ್/ಆಟೋಟ | ಮಹಿಳೆ-ರಿಲೇ 4x 400 | 2/10 |
10 | ಮಹಿಳೆ-ಕಬಡ್ಡಿ ತಂಡ/ಟೀಮು | ಕಬಡ್ಡಿ | ಮಹಿಳೆ- | 3/10 |
11 | ಪುರುಷ- ಕಬಡ್ಡಿ ತಂಡ/ಟೀಮು | ಕಬಡ್ಡಿ | ಪುರುಷರು | 3/10 |
,- | ಏಷಿಯಾಡ್2014ರಲ್ಲಿ | ಬೆಳ್ಳಿ (ಬೆಳ್ಳಿ) | ವಿಜೇತರು. | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
1 | ಸೌವರವ್ ಘೋಶಾಲ್ | ಸ್ಕ್ವಾಷ್ | ಪುರುಷರ ಏಕವ್ಯಕ್ತಿ | 23?9 |
2 | ಪೆಂಬಾ ತಮಾಂಗ್, ವಿಜಯ್ ಕುಮಾರ್' ಗುರುಪ್ರೀತ್ ಸಿಂಗ್. | ಶೂಟಿಂಗ್ | ಪುರುಷರ 25 ಮೀ. ಕೇಂದ್ರ ಗುರಿ ಪಿಸ್ತೂಲ್ ಟೀಮು | 26/9 |
3 | ದೀಪಿಕಾ ಪಳ್ಳೀಕಾಲ್, ಜೋಶ್ನಾ ಚಿನ್ನಪ್ಪ , ಅನಕಾ ಅಲಂಕಮೊಣಿ | ಸ್ಕ್ವಾಶ್, | ಮಹಿಳೆ-ಟೀಮು | 27/9 |
4 | ಅಭಿಷೇಕ್ ವರ್ಮಾ | ಬಿಲ್ಲುಗಾರಿಕೆ | ಪುರುಷರ ವೈಯುಕ್ತಿಕ-ಸುತ್ತು | 27/9 |
5 | ಕುಶ್ಬೀರ್ ಕೌರ್ | ಅತ್ಲೆಟಿಕ್ಸ್ | ಮಹಿಳೆಯರ 20ಮೀ. ನಡಿಗೆ | 28/9 |
6 | ಮಂಜು ಬಾಲಾ | ಅತ್ಲೆಟಿಕ್ಸ್ | ಮಹಿಳೆ-ಹ್ಯಾಮರ್ ಎಸೆತ | 28/9 |
7 | ಸನಮ್ ಸಿಂಗ್ , ಸಾಕೇತ ಮೈನೇನಿ. | ಟೆನ್ನಿಸ್ , | ಪುರುಷರ ಜೋಡಿ | 29/9 |
8 | ಬಜರಂಗ್ ಕುಮಾರ್ | ಕುಸ್ತಿ , | ಪುರುಷರ ಫ್ರೀಸ್ಟೈಲ್-61ಕೆ.ಜಿ | 29/9 |
9 | ವಿಕಾಸ್ ಗೌಡ | ಅತ್ಲೆಟಿಕ್ಸ್ | ಪುರುಷರ ದಿಸ್ಕಸ್ ಎಸೆತ | 30/9 |
10 | ತಿಂಟು ಲೂಕಾ. | ಅತ್ಲೆಟಿಕ್ | . ಮಹಿಳೆ-800 ಮೀ | 1/10 |
ಬೆಳ್ಳಿ ಕಂಚು ಬಂಗಾರ
ಕ್ರಮ | ಏಷಿಯಾಡ್ 2014ರಲ್ಲಿ→ | ಕಂಚು→ | ವಿಜೇತರು: | ದಿನಾಂಕ↓ |
---|---|---|---|---|
ಸಂಖ್ಯೆ | ಹೆಸರು | ಆಟ , | ಆಟದ ವಿಧ | 2014 |
1 | ಸ್ವೇತಾ ಚೌಧರಿ | ಶೂಟಿಂಗ್ | ಮಹಿಳೆ 10ಮೀ . ಏರ್-ಪಿಸ್ತೂಲ್ | 20 /9 |
2 | ಜಿತುರಾಯ್ , ಸಮರೇಶ್ ಜಂಗ್, ಪ್ರಕಾಶ್ ನಂಜಪ್ಪ | ಶೂಟಿಂಗ್, | ಪುರುಷರ 10ಮೀ. ಏರ್-ಪಿಸ್ತೂಲ್ ಟೀಮು | 21 /9 |
3 | ಸೈನಾ ನೆಹವಾಲ್ , ಪಿ.ವಿ.ಸಿಂಧು, ಪಿ.ಸಿ.ತುಲಸಿ, ಪ್ರಜ್ಞಾ ಗಾದ್ರೆ | ಬ್ಯಾದ್ಮಿಂಟನ್ | ಮಹಿಳೆ ಟೀಮು. | 21/9 |
4 | ರಾಹಿ ಸಮೋಬಾತ್, ಅನೀಷಾ ಸಯ್ಯದ್, ಹೀನಾ ಸಿಧು | ಶೂಟಿಂಗ್, | ಮಹಿಳೆ 25ಮೀ. ಪಿಸ್ತೂಲ್ ಟೀಮು. | 22/9 |
5 | ದೀಪಿಕಾ ಪಳ್ಳಿಕಾಲ್ | ಸ್ಕ್ವಾಷ್ | ಮಹಿಳೆ- ಏಕ ವ್ಯಕ್ತಿ | 22 /9 |
6 | ಅಭಿನವ್ ಬಿಂದ್ರಾ , ರವಿ ಕುಮಾರ್ , ಸಂಜೀನ್ ರಾಜಪೂತ್ | ಶೂಟಿಂಗ್ | ಪುರುಷ-10 ಮೀ. ಏರ್ರೈಫಲ್` ಟೀಮು | 23 /9 |
7 | ಅಭಿನವ್ ಬಿಂದ್ರಾ | ಶೂಟಿಂಗ್ | ಪುರುಷ-10 ಮೀ. ಏರ್ರೈಫಲ್ | 23 /9 |
8 | ಸನ್ನಾತೋಯೀ ದೇವೀ ಯೂಮ್ ನಾಮ್ | ವೂಶು | ಸಾಂಡಾ52,ಕೆ.ಜಿ.ಮಹಿಳೆ- | 23 /9 |
9 | ನರೇದರ್ಗ್ರೇವಾಲ್ | ವೂಶು | ಪುರುಷ- ಸಾಂಡಾ 60,ಕೆ.ಜಿ. | 23 /9 |
10 | ದುಷ್ಯಂತ ಚೌಹಾನ್, | ದೋಣಿ/Rowing | ಪುರುಷ-ಕಡಿಮೆ ತೂಕದ ಏಕ ವ್ಯಕ್ತಿ ಎರಡು ಹುಟ್ಟಿನ ದೋಣಿ (sculls) | 24 /9 |
11 | ಸಾವಮ್`ಸಿಂಗ್ | ರೊವಿಂಗ್ | ಪುರುಷ ಏಕ ವ್ಯಕ್ತಿ -sculls | 25 /9 |
,- | ಏಷಿಯಾಡ್2014ರಲ್ಲಿ | (ಕಂಚು) | ವಿಜೇತರು. | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
12 | 1.ಕಪಿಲ್ ಶರ್ಮಾ 2.ರಣಜಿತ್ ಸಿಂಗ್, 3.ಬೈರಾಂಗಲಾಲ್ ಟkfkರ್ , 4. ರಾಬಿನ್ ಪನಚಿತನ್ನತು . 5.ಉಲಹಾನನ್ , 6.ಸಾವನ್ ಕುಮಾರ್,ಕಾಲ್ ಕಾಲ್, 7.ಮೊಹಮದ್ ಅಜಾದ್ , 8.ಮನೀಂದರ್ ಸಿಂಗ್ 9.ದಾವಿಂದರ್ ಸಿಂಗ್ , 10.ಮಹಮದ್,ಅಹಮದ್ | ರೊವಿಂಗ್ | ಪುರುಷ ಎಂಟು ಜನರ ಸ್ಪರ್ದೆ (coxed ) | 25 /9 |
13 | 1.ಶಾಗುನ್ ಚೌದರಿ, 2.ಶ್ರೇಯಸೀ ಸಿಂಗ್, 3.ವರ್ಷಾ ವಾಮನ್ | ಶೂಟಿಂಗ್ | ಮಹಿಳೆ-ಇಬ್ಬರಟ್ರ್ಯಾಪ್ ಟೀಮು | 25/9 |
14 | ಸಂದೀಪ್ ಸೆಜ್ವಾಲ್ | ಈಜು | 50 ಮೀ ಎದೆ ಈಜು/ breaststroke | 26 /9 |
15 | 1.ತ್ರಿಶಾ ದೇಬ್, 2.ಪೂರ್ವಶಾ ಶಿಂದೆ , 3..ಜ್ಯೋತಿ ಸುರೇಖಾ ವೆನ್ನಮ್; | ಬಿಲ್ಲುಗಾರಿಕೆ | ಮಹಿಳೆ ಟೀಮು ಸಂಯುಕ್ತ | 27/9 |
16 | ಚೈನ್ ಸಿಂಗ್, ,. | ಶೂಟಿಂಗ್ | ಪುರುಷರೈಫಲ್, 50ಮೀ ಮೂರು ಸ್ಥಳದಿಂದ; | 27/9 |
.. | ಏಷಿಯಾಡ್2014ರಲ್ಲಿ | (ಕಂಚು) | ವಿಜೇತರು. | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
17 | ತ್ರಿಶಾ ದೇಬ್ | ಬಿಲ್ಲುಗಾರಿಕೆ | ಮಹಿಳೆ ವೈಯುಕ್ತಿಕ ಸಂಯುಕ್ತ /compound | 27 /9 |
18 | ವಿನೇಶ್ ಫೋಗತ್, | ಕುಸ್ತಿ , | ಮಹಿಳೆ ಫ್ರೀ ಸ್ಟೈಲ್-48ಕೆಜಿ | 27/9 |
19 | ಗೀತಿಕಾ ಜಕ್ಕರ್ | ಕುಸ್ತಿ , | ಮಹಿಳೆ ಫ್ರೀ ಸ್ಟೈಲ್-63ಕೆಜಿ | 27 /9 |
20 | ಲಲಿತಾ ಬಾಬರ್ | ಅತ್ಲೆಟಿಕ್ಸ್ | ಮಹಿಳೆ-3000ಮೀ ಅಟ್ಟಿಸವ ಓಟ steeplechase | 27/9 |
21 | ಯೂಕಿ ಬಾಂಬ್ರಿ ಪುರುಷ- | ಟೆನ್ನಿಸ್ , | ಪುರುಷ -ಏಕ ವ್ಯಕ್ತಿ | 28 /9 |
22 | 1.ಯೂಕಿ ಬಾಂಬ್ರಿ 2.ದಿವಿ ಶರಣ್ | ಟೆನ್ನಿಸ್ , | ಪುರುಷ-ಜೋಡಿ | 28/9 |
23 | 1.ಸಾನಿಯಾ ಮಿgರ್ಜಾ 2.ಪ್ರರ್ಥನಾ ತೊಂಬರೆ | ಟೆನ್ನಿಸ್ , | ಮಹಿಳೆ- ಜೋಡಿ | 28 /9 |
24 | ಎಂ.ಆರ್.ಪೂವಮ್ಮ . | ಅತ್ಲೆಟಿಕ್ಸ್ | ಮಹಿಳೆ- 400ಮೀ | 28/9 |
25 | ರಾಜೀವ ಅರೋಕಿಯ | ಅತ್ಲೆಟಿಕ್ಸ್ | ಪುರುಷ 400ಮೀ | 28/9 |
26 | ಒ.ಪಿ.ಜೈಷಾ , | ಅತ್ಲೆಟಿಕ್ಸ್ | ಮಹಿಳೆ 1200ಮೀ | 29/9 |
27 | ನರಸಿಂಗ್ ಪಂಚಮ್ ಸಿಂಗ್ ಯಾದವ್ | ಕುಸ್ತಿ | ಪುರುಷರ ಫ್ರೀಸ್ಟೈಲ್-74ಕೆ.ಜಿ | 29 /9 |
28 | ನವೀನ್ ಕೋಮರ್, Kumar | ಅತ್ಲೆಟಿಕ್ಸ್ | ಪುರಷ 3000 ಮೀ. ತಡೆ/ನೀರು ಓಟ, | 29/9 |
29 | ಲಯಿಶ್ ರಾಮ್ ಸರಿತಾದೇವಿ | ಬಾಕ್ಷಿಂಗ್(ಮುಷ್ಟಿಯುದ್ಧ) | ಮಹಿಳೆ -60ಕೆಜಿ | 30/9 |
30 | ಪೂಜಾರಾಣಿ , | ಬಾಕ್ಷಿಂಗ್(ಮುಷ್ಟಿಯುದ್ಧ | ಮಹಿಳೆ -75ಕೆಜಿ | 30/9 |
.. | ಏಷಿಯಾಡ್2014ರಲ್ಲಿ | (ಕಂಚು) | ವಿಜೇತರು. | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
31 | 1.ವರ್ಷ ಗೌತಮ್ 2.ಐಶ್ವರ್ಯ 3.ನೆಡುಂಚಜಿಯನ್ | ದೋಣಿ | ಮಹಿಳೆ-ಇಬ್ಬರ ಹುಟ್ಟು ದೋಣಿ | 30/9 |
32 | ಮಹಿಳೆ ಹಾಕಿ ಟೀಮು | ಬಯಲು ಹಾಕಿ, | ಮಹಿಳೆ | 1 /10 |
33 | ಅನ್ನು ರಾಣಿ | ಅತ್ಲೆಟಿಕ್ಸ್ | ಮಹಿಳೆ ಜಾವೆಲಿನ್ ಎಸೆತ | 1/10 |
34 | ಸತೀಶ್ ಕುಮಾರ್ | ಬಾಕ್ಸಿಂಗ್ | ಪುರಷ +91 ಕೆ.ಜಿ. | 2/10 |
35 | ವಿಕಾಸ್ ಕೃಷ್ಣ ಯಾದವ್ | ಬಾಕ್ಸಿಂಗ್ | ಪುರಷ 75 ಕೆಜಿ | 2/10 |
36 | ಇಂದ್ರಜೀತ್ ಸಿಂಗ್ | ಅತ್ಲೆಟಿಕ್ಸ್ | , ಪುರುಷ ಗುಂಡು ಎಸೆತ | 2/10 |
ಪದಕ | ಬಂಗಾರ~11 | ಬೆಳ್ಳಿ~10 | ಕಂಚು~36 | ಒಟ್ಟು, 57 |
ವಿಜಯ ಕರ್ನಾಟಕ-[೪]
This article uses material from the Wikipedia ಕನ್ನಡ article ೨೦೧೪ ಏಷ್ಯನ್ ಕ್ರೀಡಾಕೂಟ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.