ಮಮತಾ ಪೂಜಾರಿ

ಸನ್,೨೦೧೨ ರ, ಪಾಟ್ಣದ 'ಕನ್ ಕರ್ ಬಾಗ್' ಉಪನಗರದ, 'ಪಾಟ್ಲಿಪುರ ಸ್ಪೋರ್ಟ್ಸ್ ಕಾಂಪ್ಲೆಕ್ಸ್' ನಲ್ಲಿ, ಮಾರ್ಚ್, ೪, ರವಿವಾರ, ಜರುಗಿದ 'ವಿಶ್ವಕಪ್ ಕಬಡ್ಡಿ ಟೂರ್ನಮೆಂಟ್' ನಲ್ಲಿ ಮೊಟ್ಟಮೊದಲ ಬಾರಿ ಜಯಗಳಿಸಿದ 'ಭಾರತದ ಕಬ್ಬಡಿ ತಂಡದ ಮಹಿಳ ಉದ್ಘಾಟನಾ ತಂಡದ ಫೈನಲ್ಸ್ ನ, ನಾಯಕಿ', 'ಮಮತಾ ಪೂಜಾರಿ,' ಕರ್ನಾಟಕದವರು.

ಪಂದ್ಯದ ಮೊದಲನೆಯ ಸುತ್ತಿನಲ್ಲಿ ೧೯-೧೧ ಗೋಲ್ ಗಳ ಅಂತರದಲ್ಲಿ ಮುಂದಿದ್ದ ಭಾರತದ ತಂಡ, ತನ್ನ ಮುನ್ನಡೆಯನ್ನು ಬಿಟ್ಟುಕೊಡದೆ, ಕೊನೆಯವರೆಗೂ ಕಾಯ್ದಿಟ್ಟುಕೊಂಡು ವಿಜಯವನ್ನು ಸಾಧಿಸಿತು. ಈ ಪಂದ್ಯವನ್ನು ಆಯೋಜಿಸಿದವರು,'ಬಿಹಾರ ರಾಜ್ಯ ಸರ್ಕಾರ'ದವರು. ಭಾರತದ ತಂಡ ಇರಾನ್ ತಂಡವನ್ನು ೨೫-೧೯ ಗೋಲ್ ಗಳ ಅಂತರದಿಂದ ಸೋಲಿಸಿ 'ಚಾಂಪಿಯನ್ ಶಿಪ್' ಗಳಿಸಿತು. 'ಚಿನ್ನದ ಪದಕ' ಹಾಗೂ 'ಚಾಂಪಿಯನ್ ಶಿಪ್ ಟ್ರೋಫಿ'ಯನ್ನು ಬಿಹಾರದ ಉಪ ಮುಖ್ಯ ಮಂತ್ರಿ, ಶ್ರೀ. ಸುಶೀಲ್ ಕುಮಾರ್ ವಿಜಯಿ ತಂಡಕ್ಕೆ ಪ್ರದಾನಮಾಡಿದರು. ಮೊದಲು ಆಡಿದ ಗ್ರೂಪ್ ಹಂತದಲ್ಲೂ ಭಾರತದ ತಂಡ,'ಹ್ಯಾಟ್ರಿಕ್'ಗೆಲುವಿನಿಂದ 'ಕ್ವಾರ್ಟರ್ ಫನಲ್ಸ್' ತಲುಪಿ, 'ಸೆಮಿ ಫೈನಲ್' ನಲ್ಲಿ 'ಇಂಡೋನೇಷಿಯವನ್ನು ಬಗ್ಗುಬಡಿದು 'ಫೈನಲ್' ತಲುಪಿದ್ದರು. 'ಮಮತಾ ಪೂಜಾರಿಯವರ ಕ್ರೀಡಾ-ಜೀವನ'ದಲ್ಲಿ ಈ 'ಚಾಂಪಿಯನ್ ಶಿಪ್ ೭ ನೆಯದು'. ಅವರು 'ಸಿಕಂದರಾಬಾದ್' ನಲ್ಲಿ 'ಸೌತ್ ಸೆಂಟ್ರೆಲ್ ರೈಲ್ವೆಯ ಉದ್ಯೋಗಿ'ಯಾಗಿ ದುಡಿಯುತ್ತಿದ್ದಾರೆ.

ಮಮತಾ ಪೂಜಾರಿ
'ಭಾರತದ ಮಹಿಳಾ ಕಬ್ಬಡಿ ತಂಡದ ಕಪ್ತಾನ್, ಮಮತಾ ಪೂಜಾರಿ'

ಒಟ್ಟು ೧೬ ತಂಡಗಳು ಪ್ರತಿನಿಧಿಸಿದ್ದವು

'ನೇಪಾಳ','ಅಮೆರಿಕ ಸಂಯುಕ್ತ ಸಂಸ್ಥಾನ','ಕೆನಡ','ಮೆಕ್ಸಿಕೊ', 'ಮಲೇಶಿಯಾ','ಚೈನದ ಟೈಪೆಯಿ','ದ.ಕೊರಿಯಾ','ಜಪಾನ್','ಇರಾನ್','ಟುರ್ಕ್ಮೆನಿಸ್ಥಾನ್', 'ಬಂಗ್ಲಾದೇಶ್','ಇಂಡೊನೇಶಿಯ','ಥೈಲ್ಯಾಂಡ್','ಶ್ರೀ ಲಂಕಾ','ಭಾರತ'.

ಪರಿವಾರ, ಬಾಲ್ಯ

'ಮಮತಾ ಪೂಜಾರಿ'ಯವರು ಕಾರ್ಕಳ ಸಮೀಪದ ಹೆರ್ಮುಂಡೆ ಗ್ರಾಮದವರು. ಪೂಜಾರಿಯವರು ತಮ್ಮ ಬಾಲ್ಯದ ದಿನಗಳಲ್ಲಿ ಬಹಳ ಆರ್ಥಿಕವಾಗಿ ತೊಂದರೆಯನ್ನು ಅನುಭವಿಸಿದರು. ಶಾಲೆಗೆ ಸುಮಾರು ೨.೫ ಕೀ.ಮೀ. ನಡೆಯಬೇಕಾಗಿತ್ತು. ಆದರೆ ಅದಮ್ಯ ಆಸಕ್ತಿ, ಮತ್ತು ಪರಿಶ್ರಮಗಳು ಆಕೆಯ ಪಾಠಪ್ರವಚನಗಳಲ್ಲೂ ಕಾಣಿಸುತ್ತಿತ್ತು. ಆದಿನಗಳಲ್ಲಿ ಊರಿನ ಜನ 'ಕಬಡ್ಡಿಯ ಆಟ'ದ ಬಗ್ಗೆ ಹೆಚ್ಚು ಒಲವು ತೋರಿಸುತ್ತಿರಲಿಲ್ಲ. ಇವು ಮಮತಾರನ್ನು ವಿಚಲಿತಗೊಳಿಸಲಿಲ್ಲ. ಸನ್ ೨೦೧೦ ರಲ್ಲಿ ಚೀನಾದೇಶದ 'ಗುವಾಂಗ್ ಜೌ' ನಲ್ಲಿ ಜರುಗಿದ ಏಶ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಮೆಡಲ್ ಗೆದ್ದ ಭಾರತದ ತಂಡವನ್ನು ಪ್ರತಿನಿಧಿಸಿದ್ದರು. 'ಮಮತಾರವರಿಗೆ, ಬಾಲ್ಯದಿಂದಲೂ ಕ್ರೀಡೆಗಳಲ್ಲಿ ಆಸಕ್ತೆ. ಒಂದನೆ ತರಗತಿಯಲ್ಲಿ ಓದುತ್ತಿದ್ದಾಗ ಹಲವು ಬಹುಮಾನಗಳನ್ನು ಗೆದ್ದಿದ್ದಳು. ಕಬಡ್ಡಿ ಆಕೆಗೆ ಬಹು ಮುದಕೊಟ್ಟ ಆಟವಾಗಿತ್ತು. ರಮೇಶ್ ಸುವರ್ಣರೆಂಬ ಕೋಚ್ ಈಕೆಯ ಪ್ರತಿಭೆಯನ್ನು ಗುರುತಿಸಿ ಪ್ರವರ್ಧಮಾನಕ್ಕೆ ಬರಲು ಸಹಾಯಮಾಡಿದರು. ತಂದೆ ಭೋಜ ಪುಜಾರಿ ತಾಯಿ ಕಿಟ್ಟಿ ಪುಜಾರಿ. ಅಣ್ಣ ವಿಶ್ವನಾಥ ಪುಜಾರಿ ತಂಗಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿದರು. ಆಕೆಯ ತಂಗಿ, ಮಧುರಾ ಪೂಜಾರಿ. ಮಮತಾ ವಾಸಿಸುತ್ತಿರುವ ಹಳ್ಳಿಗೆ ವಿದ್ಯುತ್ ಸೌಲಭ್ಯ ದೊರೆತದ್ದು, ಕೇವಲ ೨೦೦೮ ರ ಆಸುಪಾಸಿನಲ್ಲಿ. ಅಣ್ಣ, 'ವಿಶ್ವನಾಥ ಪೂಜಾರಿ' ನೌಕರಿಗೆ ಸೇರಿದಮೇಲೆ ಮೊದಲ ಪಗಾರದಲ್ಲಿ ಒಂದು 'ಟೆಲಿವಿಶನ್' ತರಲು ಸಾಧ್ಯವಾಯಿತು. ಮಮತಾಳ ಆಟಗಳನ್ನು ಟೆಲಿವಿಶನ್ ನಲ್ಲಿ ವಿಕ್ಷಿಸುವಾಗ ಖುಷಿದೊರೆಯುವುದೆಂದು ತಾಯಿಯವರ ಅಭಿಮತ.

ಭಾರತದ ಮಹಿಳಾ ಕಬಡ್ಡಿ ತಂಡದ ನಾಯಕಿ

ಮಮತಾ ಪೂಜಾರಿ 
'ತಂದೆ,ತಾಯಿ,ಅಣ್ಣ,ಹಾಗೂ ತಂಗಿಯ ಜೊತೆ'

ಮಮತಾ 'ಮಹಿಳಾ ಕಬಡ್ಡಿ ತಂಡದ ನಾಯಕಿ'ಯಾಗಿ ಆಯ್ಕೆಯಾದ ಮೇಲೆ ಪ್ರಬುದ್ಧ ಆಟವನ್ನು ಆಡುತ್ತಿದ್ದಾಳೆ. ತನ್ನ ಸಹ ಟೂರ್ನಿಮೆಂಟ್ ಆಟಗಾರ್ತಿಯರಿಗೆ 'ವಿಶ್ವಕಪ್' ನಲ್ಲಿ ಹೆಚ್ಛು ಅವಕಾಶಗಳನ್ನು ಕಲ್ಪಿಸಲು ಸಹಕರಿಸಿದ್ದಾಳೆ. 'ಸೆಮಿ ಫನಲ್ಸ್' ಮತ್ತು 'ಫೈನಲ್ಸ್ ಆಟಗಳು' ನಿಜಕ್ಕೂ ಸವಾಲಾಗಿದ್ದವು. ಅವುಗಳನ್ನೂ ಗೆಲ್ಲುವಲ್ಲಿ 'ಕ್ಯಾಪ್ಟನ್ ಪಾತ್ರ' ಶ್ಲಾಘನೀಯವಾಗಿತ್ತು. ಮನೆಯಿಂದ ಹೊರಗೆ ಇರಬೇಕಾದ ಪ್ರಸಂಗಗಳು ಹಲವುಬಾರಿ. ಕೆಲವೊಮ್ಮೆ ತಿಂಗಳುಗಟ್ಟಲೆ ಮನೆಯ ಪರಿಸರದಿಂದ ಹೊರಗೆ ಇರಬೇಕಾದ ಪ್ರಸಂಗ ಬರುತ್ತಿತ್ತು. 'ಪೂರ್ವ ತಯಾರಿ ಶಿಬಿರ'ಕ್ಕೆ ಭೂಪಾಲ್ ನಗರಕ್ಕೆ ಹೋದವಳು, ಮನೆಗೆ ಬರಲು ಒಂದು ತಿಂಗಳುಸಮಯ ಹಿಡಿಯಿತು. 'ಅಗಾಧ ಪ್ರತಿಭಾಶಾಲಿ' ಎನ್ನುವುದು ಮನೆಯವರಿಗೆ ತಿಳಿದಿತ್ತು. ಪರಿವಾರದ ಸಹಕಾರ ಸದಾ ಮಮತಾರವರನ್ನು ಕಬಡ್ಡಿ ಕ್ಷೇತ್ರದಲ್ಲಿ ಬೆಳೆದು ಸಾಧನೆಯನ್ನು ಮಾಡಲು ಸಹಾಯವಾಯಿತು.

17ನೇ ಏಷ್ಯನ್‌ ಕ್ರೀಡಾಕೂಟ 2014 ರಲ್ಲಿ ಕರ್ನಾಟಕ

  • ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿ ತೇಜಸ್ವಿನಿ ಬಾಯಿ ನಾಯಕಿ. ರೈಲ್ವೆಯಲ್ಲಿ ಉದ್ಯೋಗಿ­ಯಾಗಿರುವ ಕರ್ನಾಟಕದ ಮಮತಾ ಪೂಜಾರಿ, ಕೆಎಸ್‌ಪಿಯಲ್ಲಿರುವ ಸುಷ್ಮಿತಾ ಪವಾರ್ ಮತ್ತು ಜಯಂತಿ ಅವರು ತಂಡದಲ್ಲಿದ್ದರು.17ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭ್ಯವಾಗಿದ್ದು, ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಇರಾನ್ ತಂಡಗಳನ್ನು ಸೋಲಿಸಿ ಎರಡೂ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿವೆ.(ಟಿ.ಒ.ಐ./ವಿಜಯ ಕರ್ನಾಕ/ ಪ್ರಜಾವಾಣಿ- ಸುದ್ದಿ ೩-೧೦-೨೦೧೪)

ಬಾಹ್ಯ ಸಂಪರ್ಕ

ಕಬಡ್ಡಿ

Tags:

ಮಮತಾ ಪೂಜಾರಿ ಒಟ್ಟು ೧೬ ತಂಡಗಳು ಪ್ರತಿನಿಧಿಸಿದ್ದವುಮಮತಾ ಪೂಜಾರಿ ಪರಿವಾರ, ಬಾಲ್ಯಮಮತಾ ಪೂಜಾರಿ ಭಾರತದ ಮಹಿಳಾ ಕಬಡ್ಡಿ ತಂಡದ ನಾಯಕಿಮಮತಾ ಪೂಜಾರಿ 17ನೇ ಏಷ್ಯನ್‌ ಕ್ರೀಡಾಕೂಟ 2014 ರಲ್ಲಿ ಕರ್ನಾಟಕಮಮತಾ ಪೂಜಾರಿ ಬಾಹ್ಯ ಸಂಪರ್ಕಮಮತಾ ಪೂಜಾರಿ

🔥 Trending searches on Wiki ಕನ್ನಡ:

ಅಭಯ ಸಿಂಹವ್ಯಕ್ತಿತ್ವಮಂಡಲ ಹಾವುಕೈವಾರ ತಾತಯ್ಯ ಯೋಗಿನಾರೇಯಣರುಅಲಂಕಾರಭಾರತದ ಮಾನವ ಹಕ್ಕುಗಳುಆಸಕ್ತಿಗಳುಭಾರತ ಬಿಟ್ಟು ತೊಲಗಿ ಚಳುವಳಿಕಾವ್ಯಮೀಮಾಂಸೆಕುಮಾರವ್ಯಾಸಹಣಕುರಿವಲ್ಲಭ್‌ಭಾಯಿ ಪಟೇಲ್ಆಗಮ ಸಂಧಿಪ್ರಜಾಪ್ರಭುತ್ವಪುಸ್ತಕಬೇಸಿಗೆವಿಜಯದಾಸರುಪ್ರೀತಿಹೊಂಗೆ ಮರ1935ರ ಭಾರತ ಸರ್ಕಾರ ಕಾಯಿದೆಧರ್ಮಸ್ಥಳಭಾರತದ ಸ್ವಾತಂತ್ರ್ಯ ದಿನಾಚರಣೆಬ್ಯಾಂಕ್ ಖಾತೆಗಳುಪ್ರಾಚೀನ ಈಜಿಪ್ಟ್‌ಜೇನು ಹುಳುಅತೀಶ ದೀಪಂಕರರಂಗಭೂಮಿಜಿ.ಪಿ.ರಾಜರತ್ನಂಅರಿಸ್ಟಾಟಲ್‌ವೇಳಾಪಟ್ಟಿಸೂಳೆಕೆರೆ (ಶಾಂತಿ ಸಾಗರ)ವಸಾಹತು ಭಾರತಹೊಯ್ಸಳ ವಾಸ್ತುಶಿಲ್ಪಬಾಲ ಗಂಗಾಧರ ತಿಲಕಅಲ್ಲಮ ಪ್ರಭುಪ್ಲಾಸಿ ಕದನಚನ್ನವೀರ ಕಣವಿನಾಡ ಗೀತೆಮಾಸ್ತಿ ವೆಂಕಟೇಶ ಅಯ್ಯಂಗಾರ್ಮಾನಸಿಕ ಆರೋಗ್ಯಶಾಲೆಶೃಂಗೇರಿವಿನಾಯಕ ಕೃಷ್ಣ ಗೋಕಾಕಜಿ.ಎಸ್.ಶಿವರುದ್ರಪ್ಪಬಾಲಕಾರ್ಮಿಕಇರ್ಫಾನ್ ಪಠಾಣ್ಎರಡನೇ ಮಹಾಯುದ್ಧ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಆಸ್ಪತ್ರೆಸಂವತ್ಸರಗಳುನವೆಂಬರ್ ೧೪ದಯಾನಂದ ಸರಸ್ವತಿಕರ್ನಾಟಕದ ನದಿಗಳುಶಬ್ದಮಣಿದರ್ಪಣಕರ್ನಾಟಕ ಐತಿಹಾಸಿಕ ಸ್ಥಳಗಳುರತ್ನತ್ರಯರುಗುಬ್ಬಚ್ಚಿಗೂಗಲ್ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಗುರುರಾಜ ಕರಜಗಿಕಾರ್ಲ್ ಮಾರ್ಕ್ಸ್ಹಸ್ತ ಮೈಥುನಗೋವಿನ ಹಾಡುಕೇಂದ್ರಾಡಳಿತ ಪ್ರದೇಶಗಳುಭಾರತದಲ್ಲಿನ ಶಿಕ್ಷಣಮಹಾಭಾರತಪರ್ಯಾಯ ದ್ವೀಪವಿಕ್ರಮಾದಿತ್ಯ ೬ಪ್ಯಾರಾಸಿಟಮಾಲ್ಬರಗೂರು ರಾಮಚಂದ್ರಪ್ಪಭಾರತದಲ್ಲಿ ಬಡತನಮಂಗಳಮುಖಿಕಾಶ್ಮೀರದ ಬಿಕ್ಕಟ್ಟುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಭೀಮಸೇನ ಜೋಷಿಅಸಹಕಾರ ಚಳುವಳಿಪಟ್ಟದಕಲ್ಲು🡆 More