ಫೀಫಾ

ಸಾಮಾನ್ಯವಾಗಿ ಫೀಫಾ (ಎಲ್ಲೆಡೆ ಟೆಂಪ್ಲೇಟು:3/) ಎಂದು ಕರೆಯಲ್ಪಡುವ, ಫ್ರೆಂಚ್ ಭಾಷೆಯಲ್ಲಿ ದಿ ಫೆಡರೇಷನ್ ಇಂಟರ್ನ್ಯಾಷನಲೆ ಡಿ ಫುಟ್ ಬಾಲ್ ಅಸೋಸಿಯೇಶನ್ (ಇಂಗ್ಲೀಷ್: ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಫುಟ್ ಬಾಲ್ ಅಸೋಸಿಯೇಶನ್, ಕನ್ನಡ:ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ) ಫುಟ್ ಬಾಲ್ ಸಂಸ್ಥೆಯ ಆಡಳಿತ ನಡೆಸುತ್ತಿರುವ ಅಂತರಾಷ್ಟ್ರೀಯ ಸಂಘಟನೆಯಾಗಿದೆ.

ಅದರ ಕೇಂದ್ರ ಕಾರ್ಯಸ್ಥಾನ ಸ್ವಿಡ್ಜರ್ಲ್ಯಾಂಡಿನ ಜ್ಯೂರಿಚ್ ನಲ್ಲಿದೆ ಹಾಗೂ ಅದರ ಪ್ರಚಲಿತ ಅಧ್ಯಕ್ಷರು ಸೆಪ್ ಬ್ಲಾಟರ್. ಫೀಫಾ ಫುಟ್ ಬಾಲ್ ನ ಪ್ರಮುಖ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಗೆ, ವಿಶೇಷವಾಗಿ 1930 ರಿಂದ ನಡೆಸಲ್ಪಡುತ್ತಿರುವ, ಫೀಫಾ ವಿಶ್ವ ಕಪ್ ಅನ್ನುಸಂಘಟಿಸುವುದು ಮತ್ತು ಪ್ರದರ್ಶನಕ್ಕೆ ಜವಾಬ್ದಾರವಾಗಿದೆ. ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿಗಿಂತ ಮೂರು ಹೆಚ್ಚು ಮತ್ತು ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಗಿಂತ ಐದು ಕಡಿಮೆ ಯಂತೆ, ಫೀಫಾ 208 ಸದಸ್ಯ ಸಂಸ್ಥೆಗಳನ್ನು ಹೊಂದಿದೆ.

Fédération Internationale de Football Association
ಫೀಫಾ
ಧ್ಯೇಯವಾಕ್ಯFor the Game. For the World. (ಆಟಕ್ಕಾಗಿ. ವಿಶ್ವಕ್ಕಾಗಿ)
ಸ್ಥಾಪನೆ21 ಮೇ 1904
ಶೈಲಿFederation of national associations
ಪ್ರಧಾನ ಕಚೇರಿಜ್ಯೂರಿಚ್, ಸ್ವಿಟ್ಜರ್ಲ್ಯಾಂಡ್
Membership
208 national associations
ಅಧಿಕೃತ ಭಾಷೆ
ಆಂಗ್ಲ, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್,
President
ಸೆಪ್ ಬ್ಲಾಟರ್
ಅಧಿಕೃತ ಜಾಲತಾಣwww.fifa.com

ಇತಿಹಾಸ

ಅಂತರಾಷ್ಟ್ರೀಯ ಗೊತ್ತುಪಡಿಸಿದ ಪಂದ್ಯಗಳ ಹೆಚ್ಚುತ್ತಿರುವ ಜನಪ್ರಿಯತೆಯ ಕಾರಣ 20 ನೇ ಶತಮಾನದ ಪ್ರಾರಂಭದಲ್ಲಿ ಕ್ರೀಡೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಒಂದು ಏಕೈಕ ಸಂಸ್ಥೆಯ ಅವಶ್ಯಕತೆಯು ಸಹಜವಾಗಿಯೇ ಕಂಡುಬಂದಿತು. ಫೀಫಾ 21 ನೇ ಮೇ 1904 ರಲ್ಲಿ ಪ್ಯಾರಿಸ್ ನಲ್ಲಿ ಪ್ರಾರಂಭಿಸಲ್ಪಟ್ಟಿತು; ಫ್ರೆಂಚ್ ಮಾತನಾಡುವ ದೇಶಗಳ ಹೊರಗೂ ಸಹ ಫ್ರೆಂಚ್ ಹೆಸರು ಮತ್ತು ಅಕ್ಷರಗಳಿಂದಾದ ಶಬ್ದವು ಹಾಗೆಯೇ ಉಳಿದಿದೆ. ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್, ದಿ ನೆದರ್ಲ್ಯಾಂಡ್ಸ್, ಸ್ಪೇನ್, ಸ್ವೀಡನ್ ಮತ್ತು ಸ್ವಿಡ್ಜರ್ಲ್ಯಾಂಡ್ ಗಳು ಸಂಸ್ಥಾಪಕ ಸದಸ್ಯರು. ಹಾಗೂ, ಅದೇ ದಿನವೇ, ಜರ್ಮನ್ ಸಂಸ್ಥೆಯು ಒಂದು ತಂತಿವಾರ್ತೆಯ ಮುಖಾಂತರ ತಾನೂ ಸದಸ್ಯನಾಗಿ ಸೇರಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿತು. ರಾಬರ್ಟ್ ಗ್ಯೌರಿನ್ ಅದರ ಮೊದಲ ಅಧ್ಯಕ್ಷರು. ಈಗ ಒಂದು ಸದಸ್ಯ ಸಂಸ್ಥೆಯಾಗಿರುವ ಇಂಗ್ಲೆಂಡ್ ನ ಡೇನಿಯಲ್ ಬುರ್ಲೆ ವೂಲ್ ಫಾಲ್ ರವರು 1906 ರಲ್ಲಿ ಗ್ಯೌರಿನ್ ಬದಲಿಗೆ ಬಂದರು. ಫೀಫಾದ ಸಂಸ್ಥಾಪನೆಯ ತತ್ವಗಳಿಗೆ ವಿರುದ್ಧವಾಗಿ, ವೃತ್ತಿಪರ ಫುಟ್ ಬಾಲ್ ಆಟಗಾರರ ಹಾಜರಿ ಇದ್ದಾಗ್ಯೂ, ಲಂಡನ್ನಿನ 1908 ರ ಒಲಂಪಿಕ್ಸ್ ನಲ್ಲಿ ನಡೆಸಲಾದ ಫುಟ್ ಬಾಲ್ ಕ್ರೀಡೆಗಳು ಬಹಳ ಯಶಸ್ವಿಯಾಯಿತು. 1908 ರಲ್ಲಿ ದಕ್ಷಿಣ ಆಫ್ರಿಕಾ, 1912 ರಲ್ಲಿ ಅರ್ಜೆಂಟಿನಾ ಹಾಗೂ ಚಿಲಿ, ಮತ್ತು 1913 ರಲ್ಲಿ ಕೆನಡ ಹಾಗೂ ಸಂಯುಕ್ತ ಸಂಸ್ಥಾನಗಳ ಅರ್ಜಿಗಳ ಜೊತೆ ಫೀಫಾದ ಸದಸ್ಯತ್ವವು ಯುರೋಪಿನಾಚೆಗೂ ವಿಸ್ತರಿಸಲ್ಪಟ್ಟಿತು. ಮೊದಲನೆ ಮಹಾಯುದ್ಧ ಕಾಲದಲ್ಲಿ, ಅನೇಕ ಆಟಗಾರರನ್ನು ಯುದ್ಧಕ್ಕೆ ಕಳುಹಿಸಿದ ಕಾರಣ ಮತ್ತು ಅಂತರಾಷ್ಟ್ರೀಯ ನಿಶ್ಚಯಗೊಳಿಸಿದ ಪಂದ್ಯಗಳಿಗೆ ಪ್ರಯಾಣದ ಸಾಧ್ಯತೆಗಳು ತೀವ್ರವಾಗಿ ನಿಯಂತ್ರಿಸಲ್ಪಟ್ಟಿದ್ದರಿಂದ, ಕೆಲವೇ ಅಂತರಾಷ್ಟ್ರೀಯವಾಗಿ ಗೊತ್ತುಪಡಿಸಿದ ಕ್ರೀಡಾಸ್ಪರ್ಧೆಗಳಿದ್ದವು, ಹಾಗೂ ಸಂಸ್ಥೆಯ ಉಳಿಯುವಿಕೆಯೇ ಅನುಮಾನದಲ್ಲಿತ್ತು. ಯುದ್ಧಾ ನಂತರ, ವೂಲ್ ಫಾಲ್ ರ ಮರಣವನ್ನು ಅನುಸರಿಸಿ, ಡಚ್ ನವರಾದ ಕಾರ್ಲ್ ಹಿರ್ಷ್ ಮನ್ ರಿಂದ ಸಂಸ್ಥೆಯು ನಡೆಸಲ್ಪಡುತ್ತಿತ್ತು. ಆದರೆ ಹೋಮ್ ನೇಷನ್ಸ್(ಇಂಗ್ಲೆಂಡಿನ) ನ ಹಿಂತೆಗೆತದ ಕಾರಣ, ಅದು ನಾಶವಾಗುವುದರಿಂದ ಉಳಿಯಿತು, ಅವರು ತಮ್ಮ ಇತ್ತೀಚಿನ ಮಹಾಯುದ್ಧದ ಶತೃಗಳ ಜೊತೆ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಷ್ಟವಿಲ್ಲವೆಂಬುದನ್ನು ಎತ್ತಿ ಹೇಳಿತು. ಹೋಮ್ ನೇಷನ್ಸ್ ನವರು ನಂತರ ತಮ್ಮ ಸದಸ್ಯತ್ವವನ್ನು ಪುನರಾರಂಭಿಸಿದರು. ಫೀಫಾದ ವಸ್ತು ಸಂಗ್ರಹವನ್ನು ಇಂಗ್ಲೆಂಡಿನಲ್ಲಿನ ನ್ಯಾಷನಲ್ ಫುಟ್ ಬಾಲ್ ಮ್ಯೂಸಿಯಂ ನಲ್ಲಿ ಇಡಲಾಗಿದೆ.

ರಚನೆ

ಫೀಫಾ 
ಆರು ಖಂಡಾಂತರ ಕೂಟಗಳೊಂದಿಗೆ ವಿಶ್ವದ ಭೂಪಟ

ಫೀಫಾ ಸ್ವಿಡ್ಜರ್ಲ್ಯಾಂಡಿನ ಕಾನೂನುಗಳ ಪ್ರಕಾರ ಸ್ಥಾಪಿಸಲ್ಪಟ್ಟ ಒಂದು ಸಂಸ್ಥೆಯಾಗಿದೆ. ಅದರ ಕೇಂದ್ರ ಕಾರ್ಯಸ್ಥಳವು ಜ್ಯೂರಿಚ್ ನಲ್ಲಿದೆ. ಪ್ರತಿ ನೊಂದಾಯಿಸಲ್ಪಟ್ಟ ಸದಸ್ಯ ಸಂಸ್ಥೆಗಳಿಂದ ಪ್ರತಿನಿಧಿಗಳ ರಚನೆಯ ಒಂದು ಸಭೆ, ಫೀಫಾ ಕಾಂಗ್ರೆಸ್ ಫೀಫದ ಪ್ರಧಾನ ಅಂಗವಾಗಿದೆ. ಕಾಂಗ್ರೆಸ್ ಸಾಮಾನ್ಯ ಸಭೆಗಳಲ್ಲಿ ಪ್ರತಿ ವರುಷವೂ ಒಂದು ಬಾರಿ ಸೇರುತ್ತದೆ, ಹಾಗೂ ಹೆಚ್ಚುವರಿಯಾಗಿ ವಿಶೇಷ ಸಭೆಗಳು 1998 ರಿಂದ ಮರುಷಕ್ಕೊಂಮ್ಮೆ ನಡೆಸಲ್ಪಡುತ್ತಿವೆ. ಕೇವಲ ಕಾಂಗ್ರೆಸ್ ಮಾತ್ರ ಫೀಫದ ಕಾಯಿದೆಗಳಿಗೆ ಬದಲಾವಣೆ ತರಬಹುದು. ಕಾಂಗ್ರೆಸ್ ಫೀಫಾದ ಅಧ್ಯಕ್ಷರು, ಅದರ ಪ್ರಧಾನ ಕಾರ್ಯದರ್ಶಿ ಹಾಗೂ ಫೀಫಾದ ಕಾರ್ಯನಿರ್ವಾಹಕ ಸಮಿತಿಯ ಇತರೆ ಸದಸ್ಯರನ್ನು ಚುನಾಯಿಸುತ್ತದೆ. ಅದರ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಫೀಫಾದ ಮುಖ್ಯ ಕಚೇರಿಯ ಮೇಲ್ವಿಚಾರಕರು, ಮತ್ತು ಸುಮಾರು 280 ಸದಸ್ಯರ ಸಿಬ್ಬಂದಿಯ ಜೊತೆ ಪ್ರಧಾನ ಸಚಿವಾಲಯದಿಂದ ಕಾರ್ಯರೂಪಕ್ಕೆ ತರಲ್ಪಟ್ಟ, ಅದರ ದಿನನಿತ್ಯದ ಆಡಳಿತಗಳಿಗೆ ಜವಾಬ್ದಾರಿವಹಿಸುತ್ತಾರೆ. ಅಧ್ಯಕ್ಷರಿಂದ ಸಭಾಪತಿ ಸ್ಥಾನ ವಹಿಸಲ್ಪಟ್ಟ ಫೀಫಾದ ಕಾರ್ಯನಿರ್ವಾಹಕ ಸಮಿತಿಯು, ಕಾಂಗ್ರೆಸ್ ವಿರಾಮ ಕಾಲದಲ್ಲಿ ಸಂಸ್ಥೆಯ ಮುಖ್ಯ ತೀರ್ಮಾನ ಕೈಗೊಳ್ಳುವ ಅಂಗವಾಗಿದೆ. ಕಾರ್ಯನಿರ್ವಾಹಕ ಸಮಿತಿಯ ಅಧಿಕಾರದ ಕೈಕೆಳಗೆ ಅಥವಾ ಸ್ಥಿರವಾದ ಸಮಿತಿಯಂತೆ ಕಾಂಗ್ರೆಸ್ ನಿಂದ ರಚಿಸಲ್ಪಟ್ಟ ಅನೇಕ ಇತರೆ ಭಾಗಗಳನ್ನು ಸಹ ಫೀಫಾದ ವಿಶ್ವವ್ಯಾಪಿ ಸಂಸ್ಥೆಯ ರಚನೆಯು ಹೊಂದಿದೆ. ಆ ಅಂಗ ಸಂಸ್ಥೆಗಳಲ್ಲಿ ಫೈನಾನ್ಸ್ ಕಮಿಟಿ, ದಿ ಡಿಸೆಪ್ಲಿನರಿ ಕಮಿಟಿ, ರೆಫರಿಗಳ ಕಮಿಟಿ ಮುಂತಾದುವುಗಳಿವೆ. ತನ್ನ ವಿಶ್ವವ್ಯಾಪಿ ಸಂಸ್ಥೆಗಳೂ ಅಲ್ಲದೆ (ಅಧ್ಯಕ್ಷೀಯ, ಕಾರ್ಯನಿರ್ವಾಹಕ ಸಮಿತಿ, ಕಾಂಗ್ರೆಸ್ ಮುಂತಾದುವು) ವಿವಿಧ ಖಂಡಗಳು ಹಾಗೂ ಜಗತ್ತಿನ ಪ್ರದೇಶಗಳಲ್ಲಿ ಪಂದ್ಯದ ಮೇಲ್ವಿಚಾರಣೆ ನೋಡಿಕೊಳ್ಳುವ ಫೀಫಾದಿಂದ ಗುರುತಿಸಲ್ಪಟ್ಟಿರುವ ಆರು ವಿವಿಧ ಖಂಡ ಕೂಟಗಳಿವೆ. ರಾಷ್ಟ್ರೀಯ ಸಂಸ್ಥೆಗಳು ಫೀಫಾದ ಸದಸ್ಯರಾಗಿರುತ್ತಾರೆ, ಹಾಗೂ ವಿವಿಧ ಖಂಡಗಳ ಕೂಟಗಳು ಅಲ್ಲ. ವಿವಿಧ ಖಂಡಗಳ ಕೂಟಗಳಿಗೆ ಫೀಫಾದ ಕಾನೂನಿನ ಅಡಿ ಸೇರಿಸಿಕೊಳ್ಳಲಾಗಿದೆ. ಫೀಫಾದ ಸ್ಪರ್ಧೆಗಳ ಪ್ರವೇಶಕ್ಕಾಗಿ ಯೋಗ್ಯತೆ ಪಡೆಯಲು ಅವರ ತಂಡಗಳು ಅವರ ರಾಷ್ಟ್ರವು ಭೌಗೋಳಿಕವಾಗಿ ಶಾಶ್ವತ ನಿವಾಸಿಯಾಗಿರುವ ಖಂಡ ಕೂಟ ಹಾಗೂ ಫೀಫಾ ಎರಡಕ್ಕೂ ರಾಷ್ಟ್ರೀಯ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿರಲೇ ಬೇಕು (ಕೆಳಗೆ ಪಟ್ಟಿ ಮಾಡಿರುವ ಕೆಲವು ಭೌಗೋಳಿಕ ಅಪವಾದಗಳ ಸಹಿತ):

       ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿನ AFC – ಏಷಿಯನ್ ಫುಟ್ ಬಾಲ್ ಕಾನ್ಫಿಡರೇಶನ್
        ಆಫ್ರಿಕಾದಲ್ಲಿನ CAF – ಕಾನ್ಫಿಡರೇಶನ್ ಆಫ್ರಿಕೇಯಿನ್ ಡಿ ಫುಟ್ ಬಾಲ್
         ಉತ್ತರ ಅಮೇರಿಕಾ ಮತ್ತು ಮಧ್ಯ ಅಮೇರಿಕಾ ದಲ್ಲಿನ CONCACAF – ಕಾನ್ಫಿಡರೇಶನ್ ಆಫ್ ನಾರ್ಥ್, ಸೆಂಟ್ರಲ್ ಅಮೇರಿಕನ್ ಮತ್ತು ಕೆರೆಬಿಯನ್ ಅಸೋಸಿಯೇಷನ್ ಫುಟ್ ಬಾಲ್
          ದಕ್ಷಿಣ ಅಮೇರಿಕಾದ CONMEBOL - ಕಾನ್ಫಿಡರೇಶನ್ ಸುಡಾಮೇರಿಕಾನ ಡಿ ಫುಟ್ ಬಾಲ್
           ಓಶೀಯಾನ ದಲ್ಲಿನ OFC – ಓಶೀಯಾನ ಫುಟ್ ಬಾಲ್ ಕಾನ್ಫಿಡರೇಶನ್
            ಯುರೋಪಿನಲ್ಲಿನ UEFA – ಯೂನಿಯನ್ ಆಫ್ ಯುರೋಪಿಯನ್ ಫುಟ್ ಬಾಲ್ ಅಸೋಸಿಯೇಶನ್

ಯುರೋಪ್ ಮತ್ತು ಏಷ್ಯಾ ಮಧ್ಯೆ ಪರಂಪರೆಯ ಗಡಿಯಲ್ಲೇ ಕುಳಿತಿರುವ ರಾಷ್ಟ್ರಗಳು ತಮ್ಮ ಆಯ್ಕೆಯ ಖಂಡದ ಕೂಟವನ್ನು ಸಾಮಾನ್ಯವಾಗಿ ಹೊಂದಿದ್ದಾರೆ. ಪರಿಣಾಮವಾಗಿ, ತಮ್ಮ ಭೂಭಾಗವು ಏಷ್ಯಾದಲ್ಲೇ ದೊಡ್ಡ ಪ್ರಮಾಣದಲ್ಲಿದ್ದಾಗ್ಯೂ, ರಷ್ಯಾ, ಟರ್ಕಿ, ಸೈಪ್ರೆಸ್, ಅರ್ಮೇನಿಯಾ, ಅಝರ್ ಬೈಜಾನ್ ಮತ್ತು ಜಾರ್ಜಿಯಾ ಒಳಗೊಂಡಂತಹ ಅನೇಕ ಅಂತರ ಖಂಡದ ದೇಶಗಳು UEFA ಯ ಭಾಗವಾಗಿರಲು ಆಯ್ಕೆ ಮಾಡಿಕೊಂಡಿವೆ. ತನ್ನ ಫುಟ್ ಬಾಲ್ ತಂಡಗಳನ್ನು ಅನೇಕ AFC ದೇಶಗಳಿಂದ ದಶಕಗಳ ಕಾಲ ಬಹಿಷ್ಕರಿಸಲ್ಪಟ್ಟಿದ್ದು, ಸಂಪೂರ್ಣವಾಗಿ ಏಷ್ಯಾದೊಳಗೆ ಇದ್ದರೂ ಸಹ ಇಸ್ರೇಲ್, 1994 ರಲ್ಲಿ UEFA ಗೆ ಸೇರಿತು. 2002 ರಲ್ಲಿ ಕಜಾಖಸ್ತಾನ್ AFC ಯಿಂದ UEFA ಗೆ ಸೇರಿತು. 2006 ರ ಜನವರಿಯಲ್ಲಿ ಅಸ್ಟ್ರೇಲಿಯಾ OFC ಯಿಂದ AFC ಗೆ ತೀರ ಇತ್ತೀಚೆಗೆ ಬದಲಾಯಿಸಿಕೊಂಡಿತು. ದಕ್ಷಿಣ ಅಮೇರಿಕಾ ದೇಶಗಳಾಗಿದ್ದಾಗ್ಯೂ ಗಯಾನ ಹಾಗೂ ಸುರೀನಾಮ್ ಯಾವಾಗಲೂ CONCACAF ನ ಸದಸ್ಯರಾಗಿದ್ದಾರೆ ಒಟ್ಟಾಗಿ, 129 ಮಹಿಳಾ ರಾಷ್ಟ್ರೀಯ ತಂಡಗಳಲ್ಲದೆ, 208 ರಾಷ್ಟ್ರೀಯ ಸಂಸ್ಥೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪುರುಷರ ರಾಷ್ಟ್ರೀಯ ತಂಡಗಳನ್ನು ಫೀಫಾ ಅಂಗೀಕರಿಸುತ್ತದೆ; ರಾಷ್ಟ್ರೀಯ ಫುಟ್ ಬಾಲ್ ತಂಡಗಳ ಯಾದಿ ಮತ್ತು ಅವುಗಳ ಪರಸ್ಪರ ದೇಶದ ಸಂಕೇತಗಳನ್ನು ನೋಡಿರಿ. ವಿಸ್ಮಯಕರವಾಗಿ, ಇಂಗ್ಲೆಂಡಿನಲ್ಲಿರುವ ನಾಲ್ಕು ಹೋಮ್ ನೇಶನ್ಸ್ ಅಲ್ಲದೇ, ಪ್ಯಾಲೆಸ್ಟೈನ್ ನಂತಹ ರಾಜಕೀಯವಾಗಿ ವಿವಾದವುಳ್ಳ ಪ್ರದೇಶಗಳಂತಹ ಅನೇಕ ಪರಮಾಧಿಕಾರವಿಲ್ಲದ ಅಸ್ತಿತ್ವಗಳನ್ನು ಭಿನ್ನ ದೇಶಗಳೆಂದು ಫೀಫಾ ಮಾನ್ಯ ಮಾಡಿರುವ ಕಾರಣ, ಯುನೈಟೆಡ್ ನೇಶನ್ಸ್ ಗಿಂತ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಫೀಫಾ ಹೊಂದಿದೆ. ಫೀಫಾದ ವಿಶ್ವ ಶ್ರೇಯಾಂಕಗಳು ಪ್ರತಿ ತಿಂಗಳೂ ಅಪ್ ಡೇಟ್ ಮಾಡಲ್ಪಡುತ್ತವೆ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳು, ಯೋಗ್ಯತಾ ಪಂದ್ಯಗಳು ಹಾಗೂ ಗೆಳೆತನದ ಪಂದ್ಯಗಳಲ್ಲಿ ಅವರ ಸಾಧನೆಗಳ ಆಧಾರದ ಮೇಲೆ ಪ್ರತಿ ತಂಡಕ್ಕೂ ಶ್ರೇಣಿಯನ್ನು ಕೊಡಲಾಗುತ್ತದೆ. ಒಂದು ವರ್ಷಕ್ಕೆ ನಾಲ್ಕು ಬಾರಿ ಅಪ್ ಡೇಟ್ ಮಾಡಲ್ಪಡುವ, ಮಹಿಳಾ ಫುಟ್ ಬಾಲ್ ಗೂ ಸಹ ವಿಶ್ವ ಶ್ರೇಯಾಂಕಗಳನ್ನು ಕೊಡಲಾಗುತ್ತದೆ.

ಮಾನ್ಯತೆಗಳು ಮತ್ತು ಪ್ರಶಸ್ತಿಗಳು

ತಂಡ ಹಾಗೂ ಅಂತರಾಷ್ಟ್ರೀಯ ಫುಟ್ ಬಾಲ್ ನ ಸಾಧನೆಗಳನ್ನು ಸಹ ಮಾನ್ಯ ಮಾಡುವಂತಹ ಅದರ ವಾರ್ಷಿಕ ಪ್ರಶಸ್ತಿಗಳ ಸಮಾರಂಭದ ಭಾಗವಾಗಿ ಉನ್ನತ ಮಟ್ಟದ ವರ್ಷದ ಪುರುಷರ ಹಾಗೂ ಮಹಿಳಾ ಆಟಗಾರರಿಗೆ ಫೀಫಾ ವರ್ಷದ ವಿಶ್ವ ಆಟಗಾರನೆಂಬ ಪ್ರಶಸ್ತಿಯನ್ನು ಪ್ರತಿ ವರ್ಷವೂ ಫೀಫಾ ಕೊಡುತ್ತದೆ. 1994 ರಲ್ಲಿ ಫೀಫಾ ಫೀಫಾ ವರ್ಲ್ಡ ಕಪ್ ಆಲ್-ಟೈಮ್ ಟೀಮ್ ಅನ್ನು ಪ್ರಕಟಿಸಿತು. 2002 ರಲ್ಲಿ, ಒಂದು ಮತದಾನದಲ್ಲಿ ಅಭಿಮಾನಿಗಳಿಂದ ಆಯ್ಕೆ ಮಾಡಲ್ಪಟ್ಟ ಎಲ್ಲಾ ಕಾಲದ ಸರ್ವ ಪ್ರತಿಭಾಶಾಲಿ ಒಂದು ತಂಡವನ್ನು, ಫೀಫಾ ಡ್ರೀಮ್ ಟೀಮ್ ಅನ್ನು ಫೀಫಾ ಘೋಷಿಸಿತು. 2004 ರಲ್ಲಿ ತನ್ನ ಶತಮಾನೋತ್ಸವದ ಆಚರಣೆಗಳ ಒಂದು ಭಾಗವಾಗಿ ಫ್ರಾನ್ಸ್ ಮತ್ತು ಬ್ರೆಜಿಲ್ ನಡುವೆ ಒಂದು ಶತಮಾನದ ಪಂದ್ಯವನ್ನು ಫೀಫಾ ವ್ಯವಸ್ಥೆ ಮಾಡಿತು.

ಪ್ರಶಾಸನ ಮತ್ತು ಪಂದ್ಯದ ವಿಕಾಸ

ಕ್ರೀಡೆಯ ಕಾಯ್ದೆಗಳು

ಲಾಸ್ ಆಫ್ ದಿ ಗೇಮ್ ಎಂದು ಅಧಿಕಾರಯುತವಾಗಿ ಕರೆಯಲ್ಪಡುವ ಫುಟ್ ಬಾಲ್ ಅನ್ನು ಆಳುವ ಕಾಯ್ದೆಗಳು, ಕೇವಲ ಫೀಫಾದ್ದೊಂದೆ ಜವಾಬ್ದಾರಿಯಲ್ಲ; ಅವು ಇಂಟರ್ನ್ಯಾಷನಲ್ ಫುಟ್ ಬಾಲ್ ಅಸೋಸಿಯೇಷನ್ ಬೋರ್ಡ್ (IFAB) ಎಂದು ಕರೆಯಲಾಗುವ ಒಂದು ಸಂಸ್ಥೆಯಿಂದ ನೋಡಿಕೊಳ್ಳಲ್ಪಡುತ್ತವೆ. ಫೀಫಾ ಈ ಸಮಿತಿಯಲ್ಲಿ ತನ್ನ ಸದಸ್ಯರನ್ನು ಹೊಂದಿದೆ (ನಾಲ್ಕು ಪ್ರತಿನಿಧಿಗಳು); ಉಳಿದ ನಾಲ್ವರನ್ನು ಯುನೈಟೆಡ್ ಕಿಂಗ್ಡಂಮ್ ನ ಫುಟ್ ಬಾಲ್ ಸಂಘಗಳು ಒದಗಿಸುತ್ತವೆ: ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್, ಹಾಗೂ ನಾರ್ದರನ್ ಐರ್ಲೆಂಡ್, ಇವರು 1882 ರಲ್ಲಿ IFAB ಯನ್ನು ಜಂಟಿಯಾಗಿ ಸ್ಥಾಪಿಸಿದರು ಹಾಗೂ ಪಂದ್ಯದ ಇತಿಹಾಸ ಮತ್ತು ರಚನೆಗಾಗಿ ಮಾನ್ಯ ಮಾಡಲ್ಪಟ್ಟಿವೆ. ಎಂಟರಲ್ಲಿ ಕಡೇ ಪಕ್ಷ ಆರು ಪ್ರತಿನಿಧಿಗಳಾದರೂ ಪಂದ್ಯದ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲು ಬದಲಾವಣೆಗಳನ್ನು ಒಪ್ಪಲೇ ಬೇಕು.

ರಾಷ್ಟ್ರೀಯ ಸಂಸ್ಥೆಗಳ ಶಿಸ್ತು

ವಿಶ್ವದಾದ್ಯಂತ ಪಂದ್ಯದ ಪ್ರಗತಿ ಹಾಗೂ ಕ್ರೀಡೆಯನ್ನು ಕ್ರಮಬದ್ಧವಾಗಿ ನಡೆಸಲು ಫೀಫಾ ಮೇಲಿಂದ ಮೇಲೆ ಸಕ್ರೀಯವಾದ ಪಾತ್ರಗಳನ್ನು ವಹಿಸುತ್ತದೆ. ಸಂಬಂಧಿಸಿದ ಸದಸ್ಯ ಸಂಘಗಳು ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದಾಗ ಇಲ್ಲವೇ ಒಂದು ಸರ್ಕಾರವು ಫೀಫಾದ ಸಂಬಂಧಪಟ್ಟ ಸದಸ್ಯ ಸಂಸ್ಥೆಗಳ ಕಾರ್ಯ ನಡೆಸುವಲ್ಲಿ ಹಸ್ತಕ್ಷೇಪ ಮಾಡಿದಾಗ ಸಂಬಂಧ ಪಟ್ಟಂತಹ ಸದಸ್ಯರು ಹಾಗೂ ತಂಡಗಳನ್ನು ಅಂತರಾಷ್ಟ್ರೀಯ ಸ್ಪರ್ಧೆಗಳಿಂದ ವಜಾ ಮಾಡುವುದು ಅದರ ಅನುಮೋದನೆಗಳಲ್ಲೊಂದು. ಒಬ್ಬ ಆಟಗಾರನು ಗರಿಷ್ಠವಾಗಿ ಮೂರು ಕ್ಲಬ್ ಗಳಿಗೆ ದಾಖಲಿಸಲ್ಪಡಬಹುದೆಂದೂ ಮತ್ತು ಒಂದು ವರ್ಷದಲ್ಲಿ, ಜುಲೈ 1 ರಿಂದ ಜೂನ್ 30 ರ ವರಗೆ, ಅಧಿಕಾರದ ಪಂದ್ಯಗಳಲ್ಲಿ ಗರಿಷ್ಠವಾಗಿ ಎರಡರಲ್ಲಿ ಬಾಗವಹಿಸಬಹುದೆನ್ನುವ, ವಿಶೇಷವಾಗಿ ಆ ದಿನಾಂಕದ ಗಡಿಯನ್ನು ದಾಟುವ ಋತುಮಾನದಂತಹ ದೇಶಗಳಲ್ಲಿ, ಹಿಂದಿನ ಎರಡು ಐರ್ಲೆಂಡ್ ಅಂತರಾಷ್ಟ್ರೀಯ ಪಂದ್ಯಗಳಸಂಗತಿಯಂತೆ, 2007 ರ ಒಂದು ನಿರ್ಣಯವು ವಿವಾದಕ್ಕೆ ಕಾರಣವಾಯಿತು. ಈ ವಿವಾದದ ನೇರ ಪರಿಣಾಮವಾಗಿ, ಋತುಮಾನಗಳನ್ನು ದಾಟಿದ ಹಂತಗಳ ಜೊತೆ ಒಕ್ಕೂಟಗಳ ನಡುವೆ ವರ್ಗಾವಣೆಗಳನ್ನು ಹೊಂದಿಸಲು ಮುಂದಿನ ವರ್ಷ ಫೀಫಾ ಈ ತೀರ್ಮಾನವನ್ನು ಮಾರ್ಪಡಿಸಿತು.

ಫೀಫಾ ಸ್ತುತಿ ಗೀತೆ

ಫೀಫಾ 
2014ರ ಫೀಫಾ ಫುಟ್ಬಾಲ್ ಪಂದ್ಯಕ್ಕೆ ಬ್ರೆಝಿಲ್`ನ ಸಾವೊ ಪೌಲೊದಲ್ಲಿ ಆರಂಭಿಕ ಫೀಫಾ ಸ್ತುತಿ ಗೀತೆ ಹಾಡಿ,ದಿ.12-6-2014 ಗುರುವಾರ ಪಂದ್ಯವನ್ನು ಆರಂಭಿದ ಜೆನ್ನಿಫರ್ ಲೊಪೆಜ್

UEFA ಚಾಂಪಿಯನ್ಸ್ ಲೀಗ್ ನಂತೆ, 1994 ರ ಫೀಫಾ ವಿಶ್ವ ಕಪ್ ನಿಂದೀಚೆಗೆ, ಫೀಫಾವು ಜರ್ಮನ್ ಗೀತಕಾರ ಫ್ರಾನ್ಜ್ ಲ್ಯಾಂಬರ್ಟ್ ರಿಂದ ರಚಿಸಲ್ಪಟ್ಟ ಒಂದು ಸ್ತುತಿ ಗೀತೆಯನ್ನು ಅಳವಡಿಸಿಕೊಂಡಿದೆ. ಅಂತರಾಷ್ಟ್ರೀಯ ಸ್ನೇಹ ಪಂದ್ಯಗಳು, ಫೀಫಾ ವಿಶ್ವ ಕಪ್, ಫೀಫಾ ಮಹಿಳೆಯರ ವಿಶ್ವ ಕಪ್, ಫೀಫಾ U-20 ವಿಶ್ವ ಕಪ್, ಫೀಫಾ U-17 ವಿಶ್ವ ಕಪ್, ಫೀಫಾ U-20 ಮಹಿಳಾ ವಿಶ್ವ ಕಪ್, ಫೀಫಾ U-17 ಮಹಿಳಾ ವಿಶ್ವ ಕಪ್, ಫೀಫಾ ಫುಟ್ ಸಾಲ್ ವಿಶ್ವ ಕಪ್, ಫೀಫಾ ಬೀಚ್ ಸಾಕರ್ ವಿಶ್ವ ಕಪ್, ಮತ್ತು ಫೀಫಾ ಕ್ಲಬ್ ವಿಶ್ವ ಕಪ್ ನಂತಹ ಫೀಫಾ ಅನುಮತಿಸಿದ ಅಧಿಕಾರದ ಕ್ರೀಡಾ ಸ್ಪರ್ಧೆಗಳು ಮತ್ತು ಫೀಫಾ ಪಂದ್ಯಗಳ ಪ್ರಾರಂಭದಲ್ಲಿ ಫೀಫಾ ಸ್ತುತಿ ಗೀತೆಯನ್ನು ನುಡಿಸುತ್ತಾರೆ. ಬ್ರೆಝಿಲ್`ನ ಸಾವೊ ಪೌಲೊದಲ್ಲಿ

ದಿ.12-6-2014ಉದ್ಘಾಟನಾ ಸಮಾರಂಭವನ್ನು ನೋಡಿದಾಗ ನೆನಪಿನಲ್ಲಿ ಉಳಿಯುವುದು ಬ್ರಿಜಿಲ್‌ನ ಜಾನಪದ ನೃತ್ಯಗಳು,, ಮತ್ತು ಕ್ಲೌಡಿಯಾ ಲೆಟ್ಟೆ ಹಾಗೂ ಜೆನ್ನಿಫೆರ್ ಲೊಪೆಜ್ ಹಾಗೂ ಪಿಟ್ ಬುಲ್ ಹಾಡಿದ ವೀ ಆರ್ ಒನ್, (ನಾವೆಲ್ಲರೂ ಒಂದೇ) ಎಂಬ ಹಾಡು ಮಾತ್ರಾ ಎಂಬ ಅಭಿಪ್ರಾಯವಿದೆ.(ವಿಜಯ ಕರ್ನಾಟಕ ವರದಿ-15-6-2014)[ಚಿತ್ರದ ಮೇಲೆ ಕ್ಲಿಕ್ಕಿಸಿ-ದೊಡ್ಡ ಚಿತ್ರ ನೋಡಬಹುದು.]

ಟೀಕೆಗಳು

ಆರ್ಥಿಕ ಅಕ್ರಮಗಳ ಆಪಾದನೆಗಳು

ಮೇ 2006 ರಲ್ಲಿ ಬ್ರಿಟಿಷ್ ತನಿಖಾ ವರದಿಗಾರ ಆಂಡ್ರೂ ಜೆನ್ನಿಂಗ್ಸ್ ರ ಪುಸ್ತಕ ಫೌಲ್! ಫೀಫಾದ ಮಾರುಕಟ್ಟೆ ಮಾಡುವ ಪಾಲುದಾರ ISL ನ ಕುಸಿಯುವಿಕೆಯನ್ನು ಅನುಸರಿಸಿ ಅಂತರಾಷ್ಟ್ರೀಯ ಗುತ್ತಿಗೆಗಾಗಿ ಹಣದ ಹಗರಣವನ್ನು ವಿವರಿಸುವ ಒಂದು ಆಪಾದನೆಯಿಂದ ಫುಟ್ ಬಾಲ್ ಪ್ರಪಂಚದೊಳಗೆ, ದಿ ಸೀಕ್ರಟ್ ವರ್ಲ್ಡ್ ಆಫ್ ಫೀಫಾ: ಬ್ರೈಬ್ಸ್, ವೋಟ್ ರಿಗ್ಗಿಂಗ್ ಮತ್ತು ಟಿಕೆಟ್ ಸ್ಕಾಂಡಲ್ಸ್ (ಹಾರ್ಪರ್ ಕಾಲಿನ್ಸ್) ವಿವಾದವನ್ನು ಸೃಷ್ಟಿಸಿತು, ಹಾಗೂ ಹೇಗೆ ಕೆಲವು ಫುಟ್ ಬಾಲ್ ಅಧಿಕಾರಿಗಳು ತಾವು ಪಡೆದ ಲಂಚದ ಹಣವನ್ನು ಗುಟ್ಟಾಗಿ ಹಿಂದಿರುಗಿಸಲು ಒತ್ತಾಯಿಸಲ್ಪಟ್ಟರೆಂಬುದನ್ನು ಬಹಿರಂಗ ಪಡಿಸಿತು. ಫೀಫಾದ ಸೆಪ್ ಬ್ಲಾಟರ್ ರ ಮುಂದುವರಿದ ಹಿಡಿತದ ಜಗಳದಲ್ಲಿ ಮತದ ಮೋಸವು ಸಂಭವಿಸಿದೆಯೆಂಬುದನ್ನು ಸಹ ಆ ಪುಸ್ತಕವು ಆಪಾದಿಸಿದೆ. ಫೌಲ್ ನ ಬಿಡುಗಡೆಯ ಕೆಲವೇ ಸಮಯದ ನಂತರ ಜೆನ್ನಿಂಗ್ಸ್ ರಿಂದ ಒಂದು ಬಿಬಿಸಿ ದೂರದರ್ಶನದ ಪ್ರಸಾರದಲ್ಲಿ ಜಾಹೀರು ಮಾಡಲ್ಪಟ್ಟ ಮತ್ತು ಬಿಬಿಸಿ ವಾರ್ತಾ ಕಾರ್ಯಕ್ರಮಕ್ಕಾಗಿ ಬಿಬಿಸಿ ನಿರ್ಮಾಪಕ ರೋಜರ್ ಕೊರ್ಕ್ ರ ಪನೋರಮಾ ಪ್ರಸಾರವಾಯಿತು. ಜೂನ್ 11, 2006 ರ, ಒಂದು ಘಂಟೆಯ ಕಾರ್ಯಕ್ರಮದ ಪ್ರಸಾರದಲ್ಲಿ, ಫುಟ್ ಬಾಲ್ ಅಧಿಕಾರಿಗಳಿಂದ ಒಂದು ಮಿಲಿಯನ್ ಪೌಂಡ್ ಗಳಿಗಿಂತಲೂ ಹೆಚ್ಚಿನ ಬೆಲೆಯ ಲಂಚದ ಹಣವನ್ನು ಹಿಂದಿರುಗಿಸಲು ಒಂದು ಗುಟ್ಟಾದ ವ್ಯಾಪಾರದಲ್ಲಿ ಅವರ ಪಾತ್ರಕ್ಕಾಗಿ ಸ್ವಿಸ್ ಪೋಲೀಸರಿಂದ ಸೆಪ್ ಬ್ಲಾಟರ್ ತನಿಖೆ ಮಾಡಲ್ಪಟ್ಟಿದ್ದಾರೆಂದು ಜೆನ್ನಿಂಗ್ಸ್ ಹಾಗೂ ಪನೋರಮಾ ತಂಡವು ಒಪ್ಪುತ್ತದೆ. ಪನೋರಮಾ ಪ್ರಸಾರದಲ್ಲಿ ಕೊಡಲ್ಪಟ್ಟ ಎಲ್ಲಾ ಸಾಕ್ಷ್ಯಗಳು ಒಂದು ವೇಷ ಮರೆಸಿಕೊಂಡ ಧ್ವನಿ, ಬಾಹ್ಯ ಚಹರೆ, ಅಥವಾ ಎರಡೂ, ಒಂದನ್ನು ಉಳಿಸಿ, ಮುಖಾಂತರ ಒದಗಿಸಲ್ಪಟ್ಟವು; ಸಂಯುಕ್ತ ಸಂಸ್ಥಾನದಲ್ಲಿನ ಟೊವ್ ಸನ್ ವಿಶ್ವವಿದ್ಯಾಲಯದ ಹಿಂದಿನ ಒಬ್ಬ ಉಪನ್ಯಾಸಕಾರರಾದ, ಮೆಲ್ ಬ್ರೆನ್ನಾನ್ (ಮತ್ತು CONCACAF ಗೆ 2001-2003 ರವರೆಗೆ ವಿಶೇಷ ಯೋಜನೆಗಳ ಮುಖ್ಯಸ್ಥರು, ಇ-ಫೀಫಾ ಯೋಜನೆ ಮತ್ತು ಒಂದು ಫೀಫಾ ವಿಶ್ವ ಕಪ್ ನ ಪ್ರತಿನಿಧಿ), CONCACAF ಮತ್ತು ಫೀಫಾ ಮುಖಂಡತ್ವದಿಂದ ಅನಾಚಾರ, ಅಕ್ರಮ, ಭ್ರಷ್ಟಾಚಾರ, ಮತ್ತು ದುರಾಸೆಯ ಸಾಕಷ್ಟು ಗಣನೀಯ ಆಪಾದನೆಗಳ ಸಹಿತ ಸಾರ್ವಜನಿಕೆವಾಗಿ ಹೇಳಿದ ಉನ್ನತ ಮಟ್ಟದ ಫುಟ್ ಬಾಲ್ ಆಡಳಿತದ ಒಳಗಿನ ವ್ಯಕ್ತಿಯಾದರು. ಪನೋರಮಾದ ಪ್ರದರ್ಶನದ ಅವಧಿಯಲ್ಲಿ, ಬ್ರೆನ್ನಾನ್-ವಿಶ್ವ ಫುಟ್ ಬಾಲ್ ಪ್ರಶಾಸನದ ಇತಿಹಾಸದಲ್ಲಿ ಅತ್ಯುನ್ನತ ಮಟ್ಟದ ಆಫ್ರಿಕನ್-ಅಮೇರಿಕನ್-ಜೆನ್ನಿಂಗ್ಸ್ ಮತ್ತು ಅನೇಕ ಇತರರು CONCACAF ನಲ್ಲಿ ಹಣದ ಅನುಚಿತ ಹಂಚುವಿಕೆಗಳ ಆಪಾದನೆಗಳನ್ನು ಬಹಿರಂಗ ಪಡಿಸಿದರು, ಹಾಗೂ ಫೀಫಾದಲ್ಲಿಯೂ ತದ್ರೂಪು ವರ್ತನೆಗಳು ಮತ್ತು ತೋರಿಕೆಯ CONCACAF ನಡುವೆ ಸಂಬಂಧಗಳ ಗಮನ ಸೆಳೆಯಿತು. ಬ್ರೆನ್ನಾನ್ ರ ಪುಸ್ತಕ, ದಿ ಅಪ್ರೆಂಟೈಸ್: ಟ್ರಾಜಿಕಾಮಿಕ್ ಟೈಮ್ಸ್ ಅಮಾಂಗ್ ದಿ ಮೆನ್ ರನ್ನಿಂಗ್-ಆಂಡ್ ರೂಯ್ನಿಂಗ್-ವರ್ಲ್ಡ್ ಫುಟ್ ಬಾಲ್ 2010 ರಲ್ಲಿ ಬಿಡುಗಡೆಯಾಗುವುದು.

ವಿಡಿಯೊ ಮರುಪ್ರಸಾರ

ಆನಂತರದ ಶಿಸ್ತಿನ ಅಂಗೀಕಾರಗಳಿಗೆ ಅದು ಅನುಮತಿಸಿದ್ದಾಗ್ಯೂ, ಫೀಫಾ ಪಂದ್ಯಗಳ ಕಾಲದಲ್ಲಿ ವಿಡಿಯೊ ಸಾಕ್ಷಿಗಳನ್ನು ಒಪ್ಪುವುದಿಲ್ಲ. 1970 ರ ಇಂಟರ್ನ್ಯಾಷನಲ್ ಫುಟ್ ಬಾಲ್ ಅಸೋಸಿಯೇಶನ್ ಬೋರ್ಡ್ನ ಸಭೆಯಲ್ಲಿ "ಆಟದ ತೀರ್ಪುಗಾರರ ಯಾವುದೇ ತೀರ್ಮಾನದ ಮೇಲೆ ಪ್ರಭಾವ ಬೀರುವಂತೆ ಬೆಳಕು ಚೆಲ್ಲುವ ಅಥವಾ ಬೆಳಕು ಚೆಲ್ಲ ಬಹುದಾದ ನಿಧಾನ ಚಲನೆಯ ಮರುಪ್ರಸಾರದಿಂದ ದೂರ ಉಳಿಯುವಂತೆ ದೂರದರ್ಶನ ಅಧಿಕಾರಿಗಳನ್ನು ಪ್ರಾರ್ಥಿಸಲು ಒಪ್ಪಿಕೊಂಡರು". 2008 ರಲ್ಲಿ, ಫೀಫಾದ ಅಧ್ಯಕ್ಷ ಸೆಪ್ ಬ್ಲಾಟರ್ ಹೇಳಿದರು: "ಅದು ಹೇಗಿದೆಯೊ ಹಾಗೆಯೇ ಇರಲಿ ಮತ್ತು ನಾವು ತಪ್ಪುಗಳ ಸಹಿತ (ಫುಟ್ ಬಾಲ್ ಅನ್ನು) ಬಿಟ್ಟು ಬಿಡೋಣ, ದೂರದರ್ಶನದ ಕಂಪನಿಗಳು [ನಿರ್ಣಾಯಕನು] ಸರಿಯೇ ಅಥವಾ ತಪ್ಪೇ ಎಂದು ತಿಳಿಸುವ ಅಧಿಕಾರವನ್ನು ಹೊಂದಿರುತ್ತಾರೆ, ಆದರೂ ಪಂದ್ಯದ ನಿರ್ಣಾಯಕನೇ ತೀರ್ಮಾನಗಳನ್ನು ಕೈಗೊಳ್ಳುವವನು - ಆತ ಒಬ್ಬ ಮನುಷ್ಯ, ಒಂದು ಯಂತ್ರವಲ್ಲ." ಅಂತಹ ದೊಡ್ಡ ಮೈದಾನದಲ್ಲಿ 22 ಆಟಗಾರರ ಚಟುವಟಿಕೆಗಳ ಜಾಡಿನ ತೊಡಕುಗಳು ಬಂದಾಗ ತರ್ತು ಮರುಪ್ರಸಾರದ ಅವಶ್ಯಕತೆಯಿದೆ ಎಂದು ಹೇಳಲ್ಪಟ್ಟಿದೆ, ಮತ್ತು ಪಂದ್ಯದ ದಿಕ್ಕನ್ನು ಬದಲಿಸುವಂತಹ ಬೇರೆಯವುಗಳಿಗಿಂತ ಅಂತಹ ಘಟನೆಗಳು ಹೆಚ್ಚು ಸಂಭಾವ್ಯವಾದ್ದರಿಂದ, ಚೆಂಡು ಗೋಲ್ ನ ರೇಖೆಯನ್ನು ದಾಟಿದೆಯೆ ಹೇಗೆ ಹಾಗೂ ಬುಕ್ ಮಾಡುವ ಅಥವಾ ರೆಡ್ ಕಾರ್ಡ್ ಗಳಿಗೆ ದಾರಿಮಾಡಿಕೊಡುವಂತಹ ತಪ್ಪುಗಳು, ಪೆನಾಲ್ಟಿ ಪ್ರಸಂಗಗಳಲ್ಲಿ ತಕ್ಷಣದ ಮರುಪ್ರಸಾರವನ್ನು ಉಪಯೋಗಿಸ ಬಹುದೆಂದು ಸೂಚಿಸಲ್ಪಟ್ಟಿದೆ.ರಗ್ಬಿ ಯೂನಿಯನ್, ಕ್ರಿಕೆಟ್, ಅಮೇರಿಕನ್ ಫುಟ್ ಬಾಲ್, ಕೆನೇಡಿಯನ್ ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್, ಟೆನ್ನಿಸ್, ಮತ್ತು ಐಸ್ ಹಾಕಿ ಯನ್ನು ಒಳಗೊಂಡಂತಹ, ಇತರೆ ಕ್ರೀಡೆಗಳಲ್ಲಿ ತುರ್ತು ಮರುಪ್ರಸಾರವು ಈಗಾಗಲೇ ಉಪಯೋಗದಲ್ಲಿದೆ ಎಂದು ವಿಮರ್ಶಕರೂ ಸಹ ಸ್ಪಷ್ಟ ಪಡಿಸುತ್ತಾರೆ. ವಿಡಿಯೊ ಮರುಪ್ರಸಾರದ ಒಬ್ಬ ಪ್ರಮುಖ ಪ್ರತಿಪಾದಕ, ಪೋರ್ಚುಗಲ್ ನ ತರಬೇತುದಾರ ಕಾರ್ಲೋಸ್ ಕ್ವೈರೋಜ್"ಪಂದ್ಯದ ವಿಶ್ವಾಸಾರ್ಹತೆ" ಪೇಚಿನಲ್ಲಿದೆ ಎಂದು ಹೇಳುತ್ತಾ ಬರೆದಿದ್ದಾರೆ.

ಫೀಫಾ ವಿನ್ಯಾಸ ಮಾಡಿದ ಕ್ರೀಡಾ ಸ್ಪರ್ಧೆಗಳು

ಪುರುಷರ ಕ್ರೀಡಾ ಸ್ಪರ್ಧೆಗಳು

 • ಫೀಫಾ ವಿಶ್ವ ಕಪ್
 • ಫೀಫಾ U-20 ವಿಶ್ವ ಕಪ್
 • ಫೀಫಾ U-17 ವಿಶ್ವ ಕಪ್
 • ಫೀಫಾ ಕಾನ್ಫಿಡರೇಶನ್ಸ್ ಕಪ್
 • ಫೀಫಾ ಕ್ಲಬ್ ವಿಶ್ವ ಕಪ್
 • ಫೀಫಾ ಫುಟ್ ಸಾಲ್ ವಿಶ್ವ ಕಪ್
 • ಫೀಫಾ ಬೀಚ್ ಸಾಕರ್ ವಿಶ್ವ ಕಪ್
 • ಬ್ಲೂ ಸ್ಟಾರ್ಸ್ / ಫೀಫಾ ಯೂತ್ ಕಪ್
 • ಫೀಫಾ ವಿಶ್ವ ಕಪ್ ವಿಜೇತರ ಪಟ್ಟಿ

[೧]

ಮಹಿಳೆಯರ ಕ್ರೀಡಾ ಸ್ಪರ್ಧೆಗಳು

 • ಫೀಫಾ ಮಹಿಳೆಯರ ವಿಶ್ವ ಕಪ್
 • ಫೀಫಾ ಮಹಿಳೆಯರ ಕ್ಲಬ್ ವಿಶ್ವ ಕಪ್
 • ಫೀಫಾ U-20 ಮಹಿಳೆಯರ ವಿಶ್ವ ಕಪ್
 • ಫೀಫಾ U-17 ಮಹಿಳೆಯರ ವಿಶ್ವ ಕಪ್

ಪ್ರಾಯೋಜಕರು

ಈ ಕೆಳಗಿನವರು ಫೀಫಾದ ಪ್ರಾಯೋಜಕರು ("ಫೀಫಾ ಪಾಲುದಾರರೆಂದು" ಹೆಸರಿಸಲ್ಪಟ್ಟಿದ್ದಾರೆ):

ಫೀಫಾ 2014 ರ 20ನೇ ವಿಶ್ವ ಫುಟ್'ಬಾಲ್ ಪಂದ್ಯಾವಳಿ

ಫೀಫಾ 
ವಿಜಯಿಗಳಿಗೆ ನೀಡಲಾಗುವ ಫಿಫಾ ಅಧ್ಯಕ್ಷರ ಕಪ್;ವಿಜೇತರಿಗೆ ನೀಡುವ, ೧೮ ಕ್ಯಾರೆಟ್`ನ ೩೬ ಅಂಗುಲ ಎತ್ತರದ,೬೦೭೫ ಗ್ರಾಂ,ತೂಕದ ಟ್ರೋಫಿ.
 • ಹಿಂದಿನ, ಫೀಫಾ ವಿಶ್ವ ಕಪ್ ಫುಟ್ ಬಾಲ್‘ಪಂದ್ಯ ೧೧ಜುಲೈ ೨೦೧೦// 11 ಜುಲೈ 2010 ರಂದು ಸೌತ ಆಫ್ರಿಕ ದ ಜೋಹಾನ್ಸ ಬರ್ಗನಲ್ಲಿ ನಡೆದಿತ್ತು. ಅದರಲ್ಲಿ ಸ್ಪೈನ್‘ ನೆದರ್‘ಲ್ಯಾಂಡನ್ನು ೧-೦/1-0 ಗೋಲಿನಿಂದ ಸೋಲಿಸಿ ವಿಶ್ವಛಾಂಪಿಯನ್ನಾಗಿ ಹೊರಹೊಮ್ಮಿತ್ತು.ಈ ಬಾರಿ ವಿಶ್ವಛಾಂಪಿಯನ್ನಾಗಿ ಯಾವ ಟೀಮು ಫಲಕ ಗಳಿಸಬಹುದೆಂದು / ಹೊರಹೊಮ್ಮುವುದೆಂದು ಫುಟ್`ಬಾಲ್` ಪ್ರೇಮಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.(ಚರ್ಚೆಪುಟ:ಫೀಫಾಇತಿಹಾಸ.

ವಿಶ್ವಕಪ್ ಫುಟ್ಬಾಲ್-ಹಿಂದಿನ ವಿಜೇತ ವೀರರು.

ಫೀಫಾ 2014 ರ 20ನೇ ವಿಶ್ವ ಫುಟ್'ಬಾಲ್ ಪಂದ್ಯ ಮತ್ತು ವೆಚ್ಚ

♣.♣.♣.♣ಮುಕ್ತ ಸೆಕ್ಸ್♣.♣.♣..ಈ ದೇಶದಲ್ಲಿ ೧೮ /18 ವರ್ಷದ ಮೇಲೆ ಮುಕ್ತ ಸೆಕ್ಸ್ (ಲೈಂಗಿಕ ಕೇಳಿಗೆ) ಗೆ ಅವಕಾಶವಿದೆ. ಹಾಗಾಗಿ ಅದೇ ಒಂದು ದೊಡ್ಡ ಉದ್ಯಮವಾಗಿದೆ ಟೀಮುಗಳ ಮುಖ್ಯಸ್ಥರು ತಮ್ಮ ಟೀಮುಗಳನ್ನು ಹದ್ದುಬಸ್ತಿನಲ್ಲಿಡಲು ಹೆಣಗುತ್ತಾರೆ.ಬ್ರೆಜಿಲ್ ಈ ಸಂದರ್ಭದಲ್ಲಿ ೬/6 ಕೋಟಿಗೂಹೆಚ್ಚು ಕಾಂಡೋಮುಗಳನ್ನು ಅಮದು ಮಾಡಿಕೊಂಡಿದೆಯಂತೆ ; ಆ ದೇಶದವರಲ್ಲದೆ ಬೇರೆ ದೇಶಗಳಂದಲೂ ಲೈಂಂಗಿಕ ಕಾರ್ಯಕರ್ತರೆಯರು ಅಲ್ಲಿ ಧಾಳಿ ಇಡುತ್ತಾರೆ. ಹಣದ ಹೊಳೆ ಹರಿಯುತ್ತದೆ. ಹಣ ಸಂಪಾದನೆ ಮತ್ತು ಮೋಜು ಒಟ್ಟಿಗೆ ನೆಡೆಯುವುದು.! -

.

 • ಈ ೨೦೧೪ / 2014 ರ ವಿಶ್ವ ಕಪ್ ಫುಟ್` ಬಾಲ್ ಆಟ ಜೂನ್ ೧೨ /12 ರಿಂದ ಜುಲೈ ೧೪ /14 ರ ವರೆಗೆ ನೆಡೆಯುವು ದು. ಎಂಟು ವಿಂಗಡನೆಯಲ್ಲಿರುವ ೩೨ ತಂಡಗಳು ಈ ಆಟದಲ್ಲಿ ಭಾಗವಹಿಸುವುವು. ಒಟು ೬೪ / 64 ಪಂದ್ಯಗಳುನಡೆಯುತ್ತವೆ. ಈ ವಿಶ್ವ ಪಂದ್ಯಾವಳಿ ಆಯೋಜಿಸಲು ಸುಮಾರು ೮೫,೨೧೧ /85,211 ಕೋಟಿ ಖರ್ಚಾಗ ಬಹುದೆಂಬ ಅಂದಾಜಿದೆ. ಅದು ನಿರೀಕ್ಷಸಿರುವ ಆದಾಯ ಸುಮಾರು ೮೨೦೦೦ /82,000 ಕೋಟಿರೂಪಾಯಿ. ಗೆದ್ದ ತಂಡಕ್ಕೆ ೨೦೫ /205 ಕೋಟಿ ರೂ.ಬಹಮಾನ ;ಎರಡನೆಯದಕ್ಕೆ ೧೪೮ /148 ಕೋಟಿ ಆಯೋಜಕರಾದ ಫೀಫಾ (ಅಂತರರಾಷ್ಟ್ರೀಯ ಫಟ್ ಬಾಲ ಒಕ್ಕೂಟಕ್ಕೆ ೨೩೦೦೦ /2300 ಕೋಟಿರೂ ಆದಾಯ. ಹಳೆಯ ಸ್ಟೇಡಿಯಂ ದುರಸ್ತಿಗೆ ಸುಮಾರು ೩೪೦ /340 ಕೋಟಿ ಡಾಲರ್ ಖರ್ಚು; ನಗರ ನವೀಕರಣಕ್ಕೆ ೩೪೦ /340 ಕೋಟಿ ಡಾಲರ್ ಖರ್ಚು; ಭದ್ರತಗೆ ಸುಮಾರು ೮೦ /80 ಕೋಟಿಡಾಲರ ವೆಚ್ಚ. ಬ್ರೆಜಿಲ್ ಅಷ್ಟೊಂದು ಶ್ರೀಮಂತ ರಾಷ್ತ್ರವಲ್ಲ. ಭಾರತದಲ್ಲಿ ಕಾಮನ್ಡೆಲ್ತ್ ಕೂಟಕ್ಕೆ ವಿರೋಧ ಬಂದತೆಯೇ ಅಲ್ಲೂ ಇದನ್ನು ಪ್ರತಿಭಟಿಸುವ ಎನ್.ಜಿ.ಒ. ಸಂಘಟನೆಗಳಿವೆ. ಆದರೆ ಬ್ರೆಜಿಲ್ ಜನರಿಗೆ ಫುಟ್‘ಬಾಲ್ ಪ್ರೇಮ ದೊಡ್ಡದು. ಬ್ರೆಜಿಲ್ ದೇಶ ಬಾರತಕ್ಕಿಂತ ಎರಡೂವರೆ ಪಟ್ಟು ದೊಡ್ಡದು. ಕೇವಲ ೧೪ /14 ನೇ ಶತಮಾನದಿಂದ ಉಪಯೋಗಿಸುತ್ತಿರವ ದೇಶದ ಪ್ರಾಕೃತಿಕ ಸಂಪನ್ಮೂಲವೂ ದೊಡ್ಡದು -ಹೇರಳವಾಗಿದೆ. ಅಲ್ಲದೆ ಜನಸಂಖ್ಯೆ ಕೇವಲ ೨೦.೧ / 20.1 ಕೋಟಿ (2013 estimate)(ಇಂಗ್ಲಿಷ್ ವಿಕಿ)

ಆರಂಭ ಫೀಫಾ 2014

 • 12-6-2014 ಗುರುವಾರ
 1. ೧೯೩೦ ರಲ್ಲಿ ಆರಂಭವಾದ ಫೀಫಾ 2014 ರ 20ನೇ ವಿಶ್ವ ಫುಟ್'ಬಾಲ್ ಪಂದ್ಯಗಳು ಬ್ರೆಝಿಲ್ ನಲ್ಲಿ 12-6-2014 ಗುರುವಾರ ರಾತ್ರಿಯಿಂದ ಸಾವೊ ಪೌಲೊದಲ್ಲಿ ಪಂದ್ಯಗಳು ಆರಂಭವಾದವು.20ನೇ ವಿಶ್ವ ಫುಟ್'ಬಾಲ್ ಪಂದ್ಯ ಫ್ರಸಿದ್ಧ ಹಾಲಿವುಡ್ ನಟಿ-ಸಂಗೀತಜ್ಞೆ ಜನ್ನಿಫರ್ ಲೊಪೆಜ್ ಳ ಹಾಡಿನಿಂದ ಆರಂಭವಾಯಿತು : ಅವಳು ಹಾಡಿದ ವೈಖರಿಯ ಚಿತ್ರ ಮೇಲೆ ಫೀಫಾಸ್ತುತಿ ಗೀತೆ ಪ್ಯಾರಾ(ಶಿರೋಲೇಖ)ದಲ್ಲಿ ಕೊಟ್ಟಿದೆ
ಭವಿಷ್ಯದಲ್ಲಿ ಒಂದು ವಿಶ್ವಕಪ್ ಪಂದ್ಯವನ್ನಾದರೂ ಅಂಗಣದಲ್ಲಿ ಕುಳಿತು ನೋಡಬೇಕೆಂದು ಹಂಬಲಿಸುವ ಫುಟ್ಬಾಲ್ ಅಭಿಮಾನಿಗಳು ಈ ಜಗತ್ತಿನಲ್ಲಿ ಅದೆಷ್ಟೋ ಸಂಖ್ಯೆಯಲ್ಲಿದ್ದಿರಬಹುದು, ಆದರೆ ಸತತ 8 ವಿಶ್ವಕಪ್ ಪಂದ್ಯಗಳನ್ನು ಜಗತ್ತಿನ ವಿವಿಧ ಕ್ರೀಡಾಂಗಣಗಳಲ್ಲಿ ನೋಡಿ ಆನಂದಿಸಿರುವ ಕೋಲ್ಕೊತಾದ ವೃದ್ಧ ದಂಪತಿ ಈಗ 9ನೇ ವಿಶ್ವಕಪ್‌ಗಾಗಿ ಬ್ರೆಜಿಲ್‌ಗೆ ಪ್ರಯಾಣಿಸಿದ್ದಾರೆ. ಬರುವ ಅತ್ಯಲ್ಪ ಪೆನ್ಶನ್ ನಲ್ಲಿ ಹಣ ಉಳಿಸಿ ವಿಶ್ವ ಕಪ್ ನೋಡುವುದು ಅವರ ಜೀವನದ ಬಯಕೆ
 • ಕೋಲ್ಕೊತಾದ ಖ್ಯಾತ ಫುಟ್ಬಾಲ್ ಜೋಡಿ 81 ವರ್ಷದ ಪನ್ನಲಾಲ್ ಚಟರ್ಜಿ ಹಾಗೂ ಅವರ ಪತ್ನಿ ಚೈತಾಲಿ 1982ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ನೋಡಿದಾಗಿನಿಂದ ಇದುವರೆಗೂ ಎಲ್ಲ ವಿಶ್ವಕಪ್ ನೋಡಿ ಆನಂದಿಸಿದ್ದಾರೆ.( -ವಿಜಯಕರ್ನಾಟಕ`13-6-2014 )
 • ಆರಂಭಿಕ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ 3-1 ಅಂತರದಲ್ಲಿ ಬ್ರೆಜಿಲ್‌ ಗೆಲುವು ಸಾಧಿಸಿದೆ
   ಪಂದ್ಯ ಶುರುವಾದಾಗ ಕಿಕ್ಕಿರಿದು ಸೇರಿದ್ದ 61,600 ಫುಟ್ಬಾಲ್‌ ಅಭಿಮಾನಿಗಳ ಸಮಕ್ಷಮದಲ್ಲಿ ಬ್ರೆಜಿಲ್‌ ಹಾಗೂ ಕ್ರೊವೇಶಿಯಾದ ಆಟಗಾರರು ಭಾರಿ ಉಲ್ಲಾಸದಿಂದಲೇ ಕಣಕ್ಕಿಳಿದರು. ವಿಶ್ವಕಪ್‌ನಲ್ಲಿ ನೇಯ್ಮರ್‌ ದಾಖಲಿಸಿದ ಎರಡು ಗೋಲುಗಳು ಆತಿಥೇಯ ತಂಡಕ್ಕೆ ಶುಭಾರಂಭ ನೀಡಿದೆ. ಗುರುವಾರ ನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ 3-1 ಅಂತರದಲ್ಲಿ ಬ್ರೆಜಿಲ್‌ ಗೆಲುವು ಸಾಧಿಸಿದೆ. ಪಂದ್ಯ ಆರಂಭವಾಗಿ 11ನೇ ನಿಮಿಷದಲ್ಲಿ. ಬ್ರೆಜಿಲ್‌ ತಂಡದ ಮರ್ಸೆಲೊ ದಾಖಲಿಸಿದ ಮಾಡಿದ ಸಣ್ಣ ತಪ್ಪಿನಿಂದಾಗಿ ಸ್ವಯಂಗೋಲು ದಾಖಲಾಯಿತು. 22 ವರ್ಷ ವಯಸ್ಸಿನ ಬ್ರೆಜಿಲ್‌ ತಂಡದ ನೇಯ್ಮರ್‌ 29ನೇ ನಿಮಿಷದಲ್ಲಿ ಅದ್ಭುತವಾದ ಗೋಲು ಬಾರಿಸಿ ತಂಡದ ಸ್ಕೋರ್‌ 1-1ಕ್ಕೆ ತಂದು ನಿಲ್ಲಿಸಿದರು . ಅದಾದ ಬಳಿಕ 71ನೇ ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದಿತ್ತರು ನೇಯ್ಮರ್‌. ಅದಾದ ಬಳಿಕ 90ನೇ ನಿಮಿಷದಲ್ಲಿ ಮೂರನೇ ಗೋಲು ಬಾರಿಸಿದ ಬ್ರೆಜಿಲ್‌ ತಂಡದ ಆಸ್ಕರ್‌, ಗೆಲುವಿನ ಅಂತರವನ್ನು ಹಿಗ್ಗಿಸಿ : 3-1 ಅಂತರದಲ್ಲಿ ಬ್ರೆಜಿಲ್‌ ಗೆ ಗೆಲುವು ತಂದಿತ್ತರು .(ರಾಯಿಟರ್ಸ್ ಸುದ್ದಿ -ವಿಜಯಕರ್ನಾಟಕ`13-6-2014)

ದಿನಾಂಕ :13-6-2014 ರ ವಿಶ್ವ ಫುಟ್'ಬಾಲ್ ಪಂದ್ಯ


2 ನೇ ದಿನ

ಫೀಫಾ 
ದಿ.12-6-2014ರ ವಿಶ್ವ ಫುಟ್ ಬಾಲ್ ಪಂದ್ಯದ ಕ್ರೀಡಾಂಗಣ-ಸಾವೋ ಪೋಲೋ.
   ಸಾಲ್ವಡಾರ್‌/ನಟಾಲ್(ಬ್ರೆಜಿಲ್),13-6-2014 ಶುಕ್ರವಾರ-ವಿಶ್ವ ಫುಟ್'ಬಾಲ್ ಪಂದ್ಯ
 • 2--ಫುಟ್ಬಾಲ್‌ ವಿಶ್ವಕಪ್‌ ಪಂದ್ಯಾವಳಿಯ ಎರಡನೇ ದಿನ ನೆದರ್ಲೆಂಡ್‌, ಹಾಲಿ ಚಾಂಪಿಯನ್‌ ಸ್ಪೇನ್‌ಗೆ ಆಘಾತಕಾರಿ ಸೋಲು ಉಣ್ಣಿಸಿದೆ.

ಇನ್ನೊಂದೆಡೆ ನಡೆದ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕಾ ಖಂಡದ ಪ್ರಮುಖ ತಂಡ ಕ್ಯಾಮರೂನ್‌ ವಿರುದ್ಧ ಮೆಕ್ಸಿಕೋ ಗೆದ್ದು ನಗೆ ಬೀರಿದೆ.

 • 2010ರಲ್ಲಿ ಕೇವಲ ಒಂದು ಗೋಲಿನಿಂದ ಫರಾಭವಗೊಂಡಿದ್ದ ನೆದರ್ಲೆಂಡ್‌ ಈ ಬಾರಿ 5-1 ಅಂತರದಿಂದ ಗೆದ್ದಿದೆ, ಸ್ಪೇನ್‌ ಈ ಬಾರಿ ಕೂಡ ಏಕೈಕ ಗೋಲು ಗಳಿಸಿದೆ. (.12-6-2014ರ ವಿಶ್ವ ಫುಟ್ ಬಾಲ್ ಪಂದ್ಯದ ಕ್ರೀಡಾಂಗಣ-ಸಾವೋ ಪೋಲೋ.ಚಿತ್ರ ಬಲದಲ್ಲಿ->)
 • ಡಿಯಾಗೋ ಕೋಸ್ಟಾ ಮೂಲಕ ಸಿಕ್ಕ ಪೆನಾಲ್ಟಿಯನ್ನು, ಕ್ಸಾವಿ ಅಲಾನ್ಸೊ ಗೋಲಾಗಿಸಿ (27ನೇ ನಿಮಿಷ) ಸ್ಪೇನ್‌ಗೆ ಮುನ್ನಡೆ ಕೊಟ್ಟರು.ಆದರೆ ನೆದರ್ಲೆಂಡ್‌ನ ರಾಬಿ, ರಾಬೆನ್ ಎಂಬ ಆಟಗಾರರರು ಎದುರಾಳಿಗಳನ್ನು ಕಂಗೆಡಿಸಿದರು. ನೆದರ್ಲೆಂಡ್‌ನ ರಾಬಿನ್ ವಾನ್ ಪರ್ಸಿ 44ನೇ ನಿಮಿಷದಲ್ಲಿ ತಮ್ಮ ತಂಡದ ಪರ ಗೋಲಿನ ಸುರಿಮಳೆಗೆ ಚಾಲನೆ ನೀಡಿದರು. ರಾಬಿನ್ ವ್ಯಾನ್ ಪರ್ಸಿ(44,ಮತ್ತು 72 ನೇ ನಿಮಿಷ) ಎರಡು, ವ್ರಿಜ್(65 ನೇ ನಿಮಿಷ), ರಾಬೆನ್(53,80ನೇ ನಿಮಿಷ) ಕೂಡ ಎದುರಾಳಿಗಳ ಕಂಗೆಡಿಸಿದರು. ನೆದರ್ಲೆಂಡ್‌ ><ಸ್ಪೇನ್‌ ವಿರುದ್ಧ 5-1 ಅಂತರದಿಂದ ಗೆದ್ದಿತು.
ಪಟ್ಟ ಗಳಿಸಿರುವ ತಂಡಗಳು :- ಬ್ರೆಜಿಲ್ -೫/5 ಬಾರಿ ; ಇಟಲಿ -೪/4 ಬಾರಿ; ಜರ್ಮನಿ - ೩/3 ಬಾರಿ;ಅರ್ಜೆಂಟೈನಾ -೨/2 ; ಉರುಗ್ವೆ -೨/2 ಬಾರಿ; ಇಂಗ್ಲೆಂಡ್, ಸ್ಪೈನ್ , ಫ್ರಾನ್ಸ್ ೧/1 ಬಾರಿ. ೨೦೧೦ /2010 ರಲ್ಲಿ ಸ್ಪೈನ್ ಛಾಂಪಿಯರ್ನ ಆಗಿತ್ತು. ಹಾಲೆಂಡ್ ರನ್ನರ್ ಅಪ್ -

", (ಆಧಾರ:ಮೇಲಿನ ಎಲ್ಲಾ ವಿಷಯಕ್ಕೆ- ಪತ್ರಿಕಾವರದಿಗಳು;ಗೂಗಲ್/ಸುಧಾ ೧೯/೬/೨೦೧೪

   ಚಿಲಿಗೆ ಗೆಲುವು:
 • ಆಸ್ಟೇಲಿಯಾವನ್ನು 3-1 ಅಂತರದಿಂದ ಸೋಲಿಸಿದ ಚಿಲಿ, ಮುಂದಿನ 12ನೇ ನಿಮಿಷದಲ್ಲೇ ಆಸ್ಟೇಲಿಯನ್ನರ ಗೋಲು ಪೆಟ್ಟಿಗೆಗೆ ಲಗ್ಗೆ ಹಾಕಿದ ಅಲೆಕ್ಸಿ ಸ್ಯಾನೆಜ್‌, ಮೊದಲ ಗೋಲು ದಾಖಲಿಸಿ ಚಿಲಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಅದಾದ ಬೆನ್ನಿಗೇ ಜಾರ್ಜ್‌ ವಾಲ್ಡಿಯಾ (14ನೇ ನಿಮಿಷ) ಇನ್ನೊಂದು ಗೋಲು ಚಚ್ಚಿ 2-0 ಮುನ್ನಡೆ ದಾಖಲಿಸಿದರು. ಆದರೆ ತೀವ್ರ ಪ್ರತಿರೋಧ ತೋರಿದ ಆಸೀಸ್‌ ಪಡೆಗೆ 35ನೇ ನಿಮಿಷದಲ್ಲಿ ಟಿಮ್‌ ಕಾಹಿಲ್‌ ಒಂದು ಗೋಲುಗಳಿಸಿದರು. ಬಳಿಕ ಆಸೀಸ್‌ ತೀವ್ರ ಪ್ರತಿರೋಧ ತೋರಿದರೂ ಗೋಲು ಗಳಿಸಲಾಗಲಿಲ್ಲ. ಆದರೆ ಪಂದ್ಯ ಮುಕ್ತಾಯದ ಹಂತಕ್ಕೆ ಬಂದಾಗ ಜೀನ್‌ ಬಾಸೆಜೊರ್‌ ಚಿಲಿಗೆ ಇನ್ನೊಂದು ಗೋಲು ಗಳಿಸಿ ಕೊಟ್ಟು ಗೆಲುವಿನ ಅಂತರವನ್ನು 3-1ಕ್ಕೆ ತಂದು ನಿಲ್ಲಿಸಿದರು.
 • ಮೆಕ್ಸಿಕೊ ><ಕೆಮರೋನ್ ವಿರುದ್ಧ 1--0 ಜಯ ಪಡೆದಿದೆ
  A. ಗುಂಪು = ಬ್ರಜಿಲ್ ಗೋಲು-- 3 ; ಅಂಕ -1; - ಮೆಕ್ಸಿಕೋ ಗೋಲು- 1;ಅಂಕ -1
  B. ಗುಂಪು = ನೆದರ್ ಲೆಂಡ್ ಗೋಲು-- 3; ಅಂಕ -1; ಚಿಲಿ -ಗೋಲು -3;ಅಂಕ -1
 • (ಆಧಾರ; ರಾಯಿಟರ್ಸ್; ಟೈಮ್ಸ್ ಆಫ್ ಇಂಡಿಯಾ -ವಿಜಯಕರ್ನಾಟಕ ೧೪-೬-೨೦೧೪)
 • Bulleted list item

ದಿ.14-6-2014 ಶನಿವಾರ


ನಗ್ನ (ಬೆತ್ತಲೆ) ಫುಟ್ಬಾಲ್ ಕ್ಲಬ್ ಟೀಮ್
 • ಬ್ರೆಜಿಲ್ ದೇಶದ ಇವೇಂಜಲಿಕ್ ಪಂಥಕ್ಕೆ ಸೇರಿದ ವೇಶ್ಯಯರು ತಮನ್ನು ಅಗೌರವದಿಂದ ನೋಡುವುದನ್ನು ಪ್ರತಿಭಟಿಸಿ ಜನರಲ್ಲಿ ತಮ್ಮ ಬಗ್ಗೆ ಗೌರವ ತೋರಬೇಕೆಂದು ತಮ್ಮ ಹಕ್ಕುಗಳಿಗಾಗಿ, ಒಂದು ಫಟ್ ಬಾಲ್ ಟೀಮನ್ನು ಆರಂಭಿಸಿ ಬೆಲೋಹೊರಿಜಾಂಟೆ ನಗರದ ರಸ್ತೆಯಲ್ಲಿ ದಿ.೧೪ರ ಶನಿವಾರ ಫುಟ್ಬಾಲ್ ಆಟವಾಡಿದರು. ಅವರು ತಮ್ಮ ಟೀಮಿಗೆ ನಗ್ನ (ಬೆತ್ತಲೆ) ಫುಟ್ಬಾಲ್ ಕ್ಲಬ್ ಎಂದು ಹೆಸರಿಟ್ಟುಕೊಂಡಿದ್ದಾರೆ . ಆದರೆ ಅವರು ಬ್ರೆಜಿಲ್ ನ ಸಾಂಪ್ರದಾಯಿಕ ಫುಟ್ ಬಾಲ್ ಆಟದ ಉಡುಪು ಹಾಕಿಕೊಂಡೇ ಕೊಲಂಬಿಯ ಗ್ರೀಸ್ ಆಟ ಮುಗಿದ ನಂತರ ನಡು ರಸ್ತೆಯಲ್ಲಿ ಫುಟ್ಬಾಲ ಪಂದ್ಯ ಒಂದನ್ನು ಆಡಿದರು
source=(ಟೈಮ್ಸ್ ಆಫ್ ಇಂಡಿಯಾ-ವಿಜಯ ಕರ್ನಾಟಕ-ವರದಿ)
   ಆಡುತ್ತಿರುವ ಟೀಮುಗಳು-ಪ್ರತ್ಯೇಕ ಗಂಪುಗಳಲ್ಲಿ :
  ಗುಂಪು-->
  ಎ-ಬ್ರೆಜಿಲ್ ;ಮೆಕ್ಷಿಕೋ ;ಕಮೆರೋನ್ ;ಕ್ರೋಷಿಯಾ.
  ಬಿ-ನೆದರ್‘ಲೆಂಡ್ಸ್ ;ಚಿಲಿ;ಆಸ್ಟೇಲಿಯಾ;ಸ್ಪೈನ್
  ಸಿ-ಕೊಲಂಬಿಯಾ ; ಕೋಟ್‌ ಡಿ ಅವೈರ್; ಜಪಾನ್;ಗ್ರೀಸ್
  ಡಿ-ಕೋಸ್ಟರಿಕಾ ; ಇಟಲಿ ; ಇಂಗ್ಲೆಡ್;ಉರುಗ್ವೇ.
  ಇ- ಪ್ರಾನ್ಸ್ ; ಸ್ವಿಟಜರ್‘ಲೆಂಡ್ ; ಈಕ್ವೆಡಾರ್.
  ಎಪ್-ಅರ್ಜೆಂಟೈನಾ ; ಇರಾನ್;ನೈಜೀರಿಯಾ; ಬೋಸ್ನಿಯಾ-ಹರ‍್ಸೆಗೋವಿನಾ,
  ಜಿ-ಜೆರ್ಮನಿ ; ಪೋರ್ಚುಗಲ್; ಘಾನಾ; ಅಮೆರಿಕಾಸಂಯುಕ್ತ ಸಂಸ್ಥಾನ
  ಎಚ್-ಬೆಲ್ಜಿಯಮ್ ; ಆಲ್‘ಜೀರಿಯಾ; ರಷ್ಯಾ; ಕೊರಿಯಾ ರಿಪಬ್ಲಿಕ್,
  ಆಡಿದ ತಂಡಗಳು
  ಬ್ರೆಜಿಲ್ (BRA) --3<>ಕ್ರೋಸಿಯಾ(CRO)--1 ಮೆಕ್ಸಿಕ(MEX)-1<>ಕೆಮೊರೊನ್)(CMR) -0 ;;ಸ್ಪೈನ್(ESP)-1<>NED5;;ಚಿಲಿ(CHI)-3<>ಆಸ್ಟ್ತೇಲಿಯಾ(AUS)-1;;ಕೊಲಂಬಿಯಾ(COL);;ಉರುಗ್ವೇ(URU)-1<>ಕೋಸ್ಟರಿಕಾ(CRC)-3;;ಇಂಗ್ಲೆಂಡ್(ENG)-1<>ಇಟಲಿ(ITA)-2;;ಕೋಟ್‌ಡಿವೈರ್(CIV=Côte d'Ivoire) -2<>ಜಪಾನ್(JPN)-1;;
   ಮೂರನೇ ದಿನ

೧,ಕ್ಯುಯಬ(: ಸಾಂಘಿಕ ಹೋರಾಟ ಪ್ರದರ್ಶಿಸಿದ ಚಿಲಿ ತಂಡ ಗ್ರೂಪ್ 'ಬಿ' ವಿಭಾಗದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3-1 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರು ಹೀನಾಯ ಸೋಲನುಭವಿಸಿದ ಹಾಲಿ ಚಾಂಪಿಯನ್ಸ್ ಸ್ಪೇನ್ ತಂಡದ ಮುಂದಿನ ಹಾದಿಯನ್ನು ದುರ್ಗಮವನ್ನಾಗಿಸಿದೆ..

ದಿ.15/ 16-6-2014 ಭಾನುವಾರ/ಸೋಮವಾರ


 • ದಿ.೧೫-೬-೨೦೧೪ ರಲ್ಲಿ ಫ್ರಾನ್ಸ್ ಹೊಂಡುರಾಸನ್ನು ೩-೦ ಗೋಲಿನಿಂದ ಸೋಲಿಸಿದೆ.

ಸ್ವಿಟಜರ್‘ಲೆಂಡ್ ಈಕ್ವೆಡಾರನ್ನು ೨-೧ಗೋಲುಗಳಿಂದ ಪರಾಭವ ಗೊಳಿಸಿದೆ, ಅರ್ಜೆಂಟೈನಾ ಬೋಸ್ನಿಯಾ ಹರ್ಸಿಗೋವಿಯಾವನ್ನು ೨-೧ ಗೋಲಿನಿಂದ ಗೆದ್ದಿದೆ

 • ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಏಕಾಂಗಿಯಾಗಿ ಮುನ್ನುಗ್ಗಿ ಗಳಿಸಿದಂಥ ಆಕರ್ಷಕ ಗೋಲ್ ನೆರವಿನಿಂದ, ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡ ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ ಚೊಚ್ಚಲ ಬೋಸ್ನಿಯಾ ಹರ್ಜೆಗೊವಿನಾ ತಂಡವನ್ನು 2-1 ಅಂತರದಲ್ಲಿ ಮಣಿಸಿದೆ. ಅದು ಬ್ರೆಜಿಲ್ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ.
 • ಗೋಲ್ ವಿವರ

ಅರ್ಜೆಂಟೀನಾ - ಬೋಸ್ನಿಯಾ ಹರ್ಜೆಗೊವಿನಾ;-2 - 1 ಲಿಯೋನೆಲ್ ಮೆಸ್ಸಿ - ವೆಡಾದ್ ಇಬಿಸೆವಿಕ್ 85ನೇ ನಿ.65ನೇ ನಿ.

 • ರಿಯೊ ಡಿ ಜನೈರೊ: ಸಮಬಲದ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಹೆಚ್ಚಿವರಿ ಅವಧಿಯಲ್ಲಿ ಗೋಲ್ ಗಳಿಸಿದ ಸ್ವಿಡ್ಜರ್ಲೆಂಡ್ ತಂಡ 'ಇ' ಗುಂಪಿನ ಪಂದ್ಯದಲ್ಲಿ ಈಕ್ವೆಡಾರ್ ಎದುರು 2-1 ಅಂತರದ ರೋಚಕ ಜಯಗಳಿತು.ಸ್ಟ್ರೈಕರ್ ಹ್ಯಾರಿಸ್ ಸೇಫರೋವಿಕ್ 90+3ನೇ ನಿಮಿಷದಲ್ಲಿ ಚೆಂಡನ್ನು ಗೋಲ್ ಪೆಟ್ಟಿಗೆ ಮುಟ್ಟಿಸಿ ಗೆಲುವಿನ ರೂವಾರಿ ಎನಿಸಿದರು.
 • ಗೋಲ್ ವೀರರು
 • ಕೋಸ್ಟಾ ರಿಕಾ 3

(ಜೊಯೆಲ್ ಕ್ಯಾಂಪ್‌ಬೆಲ್ 54, ಆಸ್ಕರ್ ಡುಯಾರ್ಟೆ 57, ಮಾರ್ಕೊ ಉರೆನಾ 84ನೇ ನಿಮಿಷ)

 • ಉರುಗ್ವೆ 1

(ಎಡಿಸನ್ ಕವಾನಿ 24ನೇ ನಿಮಿಷ)

 • ಸಾರಾಂಶ
 • ದಿ.೧೫-೬-೨೦೧೪// 15-6-2014 ರಲ್ಲಿ
 • ಫ್ರಾನ್ಸ್ ಹೊಂಡುರಾಸನ್ನು ೩-೦ /3-0ಗೋಲಿನಿಂದ ಸೋಲಿಸಿದೆ.
 • ಸ್ವಿಟಜರ್‘ಲೆಂಡ್ <>ಈಕ್ವೆಡಾರನ್ನು ೨-೧//2-1 ,ಗೋಲುಗಳಿಂ ಪರಾಭವ ಗೊಳಿಸಿದೆ,
 • ಅರ್ಜೆಂಟೈನಾ<> ಬೋಸ್ನಿಯಾ ಹರ್ಸಿಗೋವಿಯಾವನ್ನು ೨-೧ /2-1 ,ಗೋಲಿನಿಂದ ಗೆದ್ದಿದೆ
 • ೧೬-೬-೨೦೧೪//16-6-2014
 • ಜೆರ್ಮನಿ <>ಪೋರ್ಚುಗಲ್೪-೦//4-0
 • ಇರಾನ್ <>ನ್ಶೆಜೀರಿಯಾ ೦-೦//0-0
 • ೧೫-೬-೨೦೧೪//15-6-2014
 • ಐವರಿಕೋಸ್ಟ್<>ಜಪಾನ್ ೨-೧//2-1

ದಿ.17-6-2014ಮಂಗಳವಾರ


   ಏಳನೇ ದಿನ
 • ಘಾನಾ -೧ <>ಯು ಎಸ್`ಎ-೨ ;;ಬೆಲ್ಜಿಯಮ್ -೨ <>ಆಲ್ಜೀರಿಯಾ -೧ ;;ಬ್ರೆಜಿಲ್ -೦ <> ಮೆಕ್ಸಿಕೊ-೦
 • ನತಾಲ್: ತೊಂಬತ್ತು ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಮಿಂಚಿದ ಅಮೆರಿಕ 'ಜಿ' ಗುಂಪಿನ ಪಂದ್ಯದಲ್ಲಿ ಘಾನಾ ವಿರುದ್ಧ 2-1 ಅಂತರದ ರೋಚಕ ಜಯ ತನ್ನದಾಗಿಸಿಕೊಂಡಿತು.ಕಳೆದ ವಿಶ್ವಕಪ್‌ನಲ್ಲಿ ಘಾನಾ ತಂಡ ಅಮೆರಿಕವನ್ನು ಟೂರ್ನಿಯಿಂದ ಹೊರ ದಬ್ಬುವಲ್ಲಿ ಯಶಸ್ವಿಯಾಗಿತ್ತು.
 • ಕ್ಲಿಂಟ್ ಡೆಪ್ಸಿ ಆ್ಯಂಡ್ರೆ ಅಯೇವ್ 82ನೇ ನಿ.29ನೇ ಸೆಕೆಂಡ್
 • ಜಾನ್ ಬ್ರೂಕ್ಸ್,86ನೇ ನಿ.(ವಿಜಯ ಕರ್ನಾಟಕ/17-6)

೧೮-೬-೨೦೧೪ ಬುಧವಾರ


   ಎಂಟನೇ ದಿನ
 • ಆಸ್ಟೇಲಿಯಾ (Australia) 0-0 ನೆದರ್ ಲ್ಯಾಂಡ್ಸ್ (Netherlands)
 • ಬೆಲೊ ಹಾರಿಜಾಂಟೆ: ವಿಶ್ವಕಪ್ ಟೂರ್ನಿಗೆ 12 ವರ್ಷಗಳ ನಂತರ ಅರ್ಹತೆ ಪಡೆದಿರುವ ಬೆಲ್ಜಿಯಂ ತಂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ 'ಎಚ್' ಗುಂಪಿನ ಪಂದ್ಯದಲ್ಲಿ ಆಲ್ಜೀರಿಯಾ ವಿರುದ್ಧ 2-1 ಅಂತರದ ಜಯ ಧಾಖಲಿಸಿ ಶುಭಾರಂಭ ಮಾಡಿದೆ.
 • ಕ್ಯುಯಬ: ಅನುಭವಿ ಅಲೆಕ್ಸಾಂಡರ್ ಕೆರ್ಜಾಖೊವ್ ಬದಲೀ ಆಟಗಾರನಾಗಿ ಕಣಕ್ಕಿಳಿದ ಮೂರೇ ನಿಮಿಷದಲ್ಲಿ ಗೋಲ್ ಗಳಿಸುವುದರೊಂದಿಗೆ 'ಎಚ್' ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-1 ಅಂತರದ ಸಮಬಲ ತಂದುಕೊಡುವ ಮೂಲಕ ಸೋಲಿನ ಆಘಾತ ತಪ್ಪಿಸಿದರು.
 • ಫೊರ್ಟಾಲೆಜಾ:ಇದುವರೆಗೂ ಎಲ್ಲಿಯೂ ಸುದ್ದಿ ಮಾಡದೆ, ಡ್ರಗ್ ಸೇವನೆ ಮಾಡಿದ್ದಕ್ಕಾಗಿ ಕೆಲ ವರ್ಷಗಳ ಹಿಂದೆ ಅಮಾನತುಗೊಂಡಿದ್ದ ಮೆಕ್ಸಿಕೊದ ಗೋಲ್‌ಕೀಪರ್ ಗುಲೆರ್ಮೊ ಒಚಾವೊ 90 ನಿಮಿಷಗಳಲ್ಲೇ ಜಗತ್ತಿನ ಗಮನ ಸೆಳೆದರು,ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಏಳು ಗೋಲುಗಳನ್ನು ತಡೆಯುವ ಮೂಲಕ ಇತ್ತೀಚಿನ ವಿಶ್ವಕಪ್‌ನಲ್ಲಿ ಯಾವುದೇ ಗೋಲ್‌ಕೀಪರ್ ಮಾಡದ ಸಾಧನೆಯನ್ನು ಮಾಡಿದ ಒಚಾವೊ ಫುಟ್ಬಾಲ್ ಜಗತ್ತಿನ ಹೊಸ ಹೀರೋ ಎನಿಸಿದರು. ಇದರೊಂದಿಗೆ ಮೆಕ್ಸಿಕೊ ಹಾಗೂ ಬ್ರೆಜಿಲ್ ನಡುವಿನ ಎ ಗುಂಪಿನ ಎರಡನೇ ಪಂದ್ಯ ಗೋಲಿಲ್ಲದೆ ಡ್ರಾದಲ್ಲಿ ಅಂತ್ಯಗೊಂಡಿತು.
 • ಬೆಲ್ಜಿಯಮ್ -೨<> ಆಲ್ಜೀರಿಯಾ -೧ (2- 1)ಬೆಲೊ ಹಾರಿಜಾಂಟೆ: ವಿಶ್ವಕಪ್ ಟೂರ್ನಿಗೆ 12 ವರ್ಷಗಳ ನಂತರ ಅರ್ಹತೆ ಪಡೆದಿರುವ ಬೆಲ್ಜಿಯಂ ತಂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ 'ಎಚ್' ಗುಂಪಿನ ಪಂದ್ಯದಲ್ಲಿ ಆಲ್ಜೀರಿಯಾ ವಿರುದ್ಧ 2-1 ಅಂತರದ ಜಯ ಧಾಖಲಿಸಿ ಶುಭಾರಂಭ ಮಾಡಿದೆ.
 • ಪಡೆದ ಅಂಕಗಳು ಮತ್ತು ಗೆದ್ದ ಆಟಗಳು
 • ಗುಂಪು || ದೇಶ || ಗಳಿಸಿದ ಅಂಕ || ಗೆಲವು
 • ಎ-ಬ್ರೆಜಿಲ್ 4-2;ಮೆಕ್ಷಿಕೋ 4-2;ಕಮೆರೋನ್ 0-2 ;ಕ್ರೋಷಿಯಾ 3-2.
 • ಬಿ-ನೆದರ್‘ಲೆಂಡ್ಸ್ 6- 2;ಚಿಲಿ6-2;ಆಸ್ಟೇಲಿಯಾ0-2;ಸ್ಪೈನ್ 0-2
 • ಸಿ-ಕೊಲಂಬಿಯಾ 3-1 ; ಕೋಟ್‌ ಡಿ ಅವೈರ್ 3-1; ಜಪಾನ್ 0--1;ಗ್ರೀಸ್ 0-1
 • ಡಿ-ಕೋಸ್ಟರಿಕಾ 3-4; ಇಟಲಿ 3-1 ; ಇಂಗ್ಲೆಡ್ 0-1;ಉರುಗ್ವೇ 0-1.
 • ಇ- ಪ್ರಾನ್ಸ್ 0-1 ; ಸ್ವಿಟಜರ್‘ಲೆಂಡ್ 2-1 ; ಈಕ್ವೆಡಾರ್. 0-1-1 ;B Honduras 1-0
 • ಎಪ್-ಅರ್ಜೆಂಟೈನಾ 3-1 ; ಇರಾನ್ 1-1;ನೈಜೀರಿಯಾ 1-1; ಬೋಸ್ನಿಯಾ-ಹರ‍್ಸೆಗೋವಿನಾ, 0-1
 • ಜಿ-ಜೆರ್ಮನಿ 3-1 ; ಪೋರ್ಚುಗಲ್ 3-1; ಘಾನಾ 1-1; ಅಮೆರಿಕಾಸಂಯುಕ್ತ ಸಂಸ್ಥಾನ 0-1
 • ಎಚ್-ಬೆಲ್ಜಿಯಮ್ 3-1 ; ಕೊರಿಯಾ ರಿಪಬ್ಲಿಕ್ 1 - o-ರಷ್ಯಾ 1-1;, ಆಲ್‘ಜೀರಿಯಾ 0-1;

19-6-2014 ಗುರುವಾರ

ಆಟಗಾರರ ಕೋಚ್‌ಗಳ ಕಾಮಸೂತ್ರ:

ಫುಟ್ಬಾಲ್ ಆಟಗಾರರ ಬದುಕಿನಲ್ಲಿ ಲೈಂಗಿಕ ಕ್ರಿಯೆ ಪ್ರಮುಖವಾದುದು. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ ಅನೇಕ ತಂಡಗಳ ಕೋಚ್ ಆಟದ ಮೇಲೆ ಪರಿಣಾಮ ಬೀರಬಹುದೆಂದ ಉದ್ದೇಶದಿಂದ ತಮ್ಮ ತಂಡದ ಆಟಗಾರರು ಲೆಂಗಿಕ ಆಸಕ್ತಿಯ ಕಡೆಗೆ ಹೆಚ್ಚಿನ ಆಸಕ್ತಿ ವಹಿಸದಂತೆ ನೋಡಿಕೊಂಡಿದ್ದಾರೆ. ಕೋಸ್ಟರಿಕಾ ತಂಡದ ಆಟಗಾರರು ಎರಡನೇ ಸುತ್ತು ತಲುಪಿದ ನಂತರವೇ ಲೈಂಗಿಕತೆಯಲ್ಲಿ ತೊಡಗಿಕೊಳ್ಳಬಹುದು. ಬ್ರೆಜಿಲ್ ತಂಡದ ಆಟಗಾರರಿಗೆ ಈ ವಿಚಾರದಲ್ಲಿ ಮುಕ್ತ ಸ್ವಾತಂತ್ರ್ಯ. ನೈಜೀರಿಯಾ ಆಟಗಾರರು ಕೇವಲ ಹೆಂಡತಿಯೊಂದಿಗೆ ಮಾತ್ರ ಈ ಕೆಲಸದಲ್ಲಿ ತೊಡಗಬಹುದು. ಬಹಳಷ್ಟು ಆಟಗಾರರ ಪತ್ನಿಯರು ಸಾಮಾನ್ಯರಲ್ಲ ; ದೇವಲೋಕದ ಅಪ್ಸರೆಯರನ್ನು ಮೀರಿಸಿದ ಸುಂದರಿಯರು,ಬಡನಡುವಿನ ಸಿಂಹಕಟಿಯವರಾದರೂ, ಆರಡಿಯ ಗಟ್ಟಿಮುಟ್ಟಾದ ಲಲನೆಯರು. ರಷ್ಯಾ, ಮೆಕ್ಸಿಕೊ, ಬೋಸ್ನಿಯಾ ಚಿಲಿ ತಂಡಕ್ಕೆ ರೆಡ್ ಸಿಗ್ನಲ್,

--

", TOI &ವಿಜಯ ಕರ್ನಾಟಕ -೨೦-೬-೨೦೧೪)

 • ಸೌರೆಜ್‌ (85ನೇ ನಿಮಿಷ) ಇನ್ನೊಂದು ಗೋಲು ಸಿಡಿಸಿ ಇಂಗ್ಲೆಂಡ್‌ ವಿರುದ್ಧ ,ಉರುಗ್ವೆಗೆ 2-1ರ ಮುನ್ನಡೆ ದೊರಕಿಸಿದರು. ಇಂಗ್ಲೆಂಡ್‌ ಸತತ ಎರಡನೇ ಸೋಲು ಕಾಣುವ ಮೂಲಕ ಕೂಟದಿಂದಲೇ ನಿರ್ಗಮಿಸುವಂತಾಯಿತು.
 • ಜಪಾನ್‌ ಮತ್ತು ಗ್ರೀಸ್‌ (೦-೦)ನಡುವೆ ಪೈಪೋಟಿಯಿಂದ ಕೂಡಿದ್ದ ಪಂದ್ಯ ಗೋಲುರಹಿತವಾಗಿ ಡ್ರಾ ಆಯಿತು
 • ಬಾರಿ ಪ್ರಶಸ್ತಿ ಗೆಲುವಿನ ಫೇವರಿಟ್ ಎನಿಸಿರುವ ನೆದರ್ಲೆಂಡ್ಸ್ ತಂಡ 3-2 ಅಂತರದಲ್ಲಿ ಅಪಾಯಕಾರಿ ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ದಾಖಲಿಸಿ ಹದಿನಾರರ ಘಟ್ಟದಲ್ಲಿನ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
 • ಎಎಫ್‌ಪಿ: ಸ್ಟ್ರೈಕರ್ ಮಾರಿಯೋ ಮ್ಯಾಂಡ್ಜೂಕಿಕ್ ಗಳಿಸಿದ ಆಕರ್ಷಕ ಎರಡು ಗೋಲ್‌ನಿಂದ ಪ್ರಾಬಲ್ಯ ಮೆರೆದ ಕ್ರೊವೇಶಿಯಾ 4-0 ಅಂತರದಲ್ಲಿ ಕ್ಯಾಮರೂನ್ ತಂಡವನ್ನು ಬಗ್ಗು ಬಡಿದು ಪ್ರಶಸ್ತಿಯ ರೇಸ್‌ನಿಂದ ಹೊರ ನಡೆಯುವಂತೆ ಮಾಡಿದೆ.
 • ಗೋಲ್ ವಿವರ:ಕ್ರೊವೇಶಿಯಾ- ಕ್ಯಾಮರೂನ್=4 - 0;ಇವಿಕಾ ಒಲಿಕ್-11ನೇ ನಿ.;-ಇವಾನ್ ಪ್ರೆಸಿಕ್-48ನೇ ನಿ.;

ಮಾರಿಯೋ ಮ್ಯಾಂಡ್ಜೂಕಿಕ್ -61, 73ನೇ ನಿ.'ಎ' ಗುಂಪಿನ ಪಂದ್ಯದಲ್ಲಿ ಕೆಮರೂನ್ ವಿರುದ್ಧ 4-0 ಗೋಲಿನಿಂದ ಜಯ ಗಳಿಸಿದ ಕ್ರೊವೇಶಿಯಾ 16ನೇ ಹಂತ ತಲಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ

 • ರಿಯೊ ಡಿ ಜನೈರೊ: ಫಿಫಾ ರ‌್ಯಾಂಕಿಂಗ್‌ನಲ್ಲಿ ನಂ. 1 ಸ್ಥಾನ, ಜಗತ್ತಿನ ಶ್ರೇಷ್ಠ ಮಟ್ಟದ ಆಟಗಾರರಿಂದ ಕೂಡಿರುವ ತಂಡ, ಫಿಫಾ ಟ್ರೋಫಿಯನ್ನು ಹೊಂದಿರುವ ವಿಶ್ವ ಚಾಂಪಿಯನ್ ಹಾಗೂ ಟಿಕಿ ಟಕಾ ತಂತ್ರವನ್ನು ಬಳಸಿ ಆಡುವ ತಂಡವೆನಿಸಿರುವ ಸ್ಪೇನ್ ದುರ್ಬಲ ಚಿಲಿ ವಿರುದ್ಧ 0-2 ಗೋಲಿನಿಂದ ಹೀನಾಯವಾಗಿ ಸೋತು ವಿಶ್ವಕಪ್‌ನಿಂದ ನಿರ್ಗಮಿಸಿದೆ.
 • ಆಸ್ಟ್ರೇಲಿಯಾ ತಂಡ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿ 2-3 ಗೋಲುಗಳಿಂದ ಸೋಲುಂಡಿದೆ, *ಕೆಮರೂನ್ ತಂಡ ಕ್ರೊವೇಶಿಯಾ ವಿರುದ್ಧ 0-4 ಗೋಲುಗಳಿಂದ ಪರಾಂಭವಗೊಂಡಿತು.
 • ಪೊರ್ಟೊ ಅಲೆಗ್ರೆಯಲ್ಲಿ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ ನೆದಲೆ ಂರ್ಡ್ಸ್ ತಂಡ ಆಸ್ಟ್ರೇಲಿಯಾ ವಿರುದ್ಧ 3-2 ಗೋಲುಗಳಿಂದ ಜಯ ಗಳಿಸಿ ಫ್ರೀ ಕ್ವಾರ್ಟಫೈನಲ್ ಪ್ರವೇಶಿಸಿತು

20-6-2014ಶುಕ್ರವಾರ

 • ಎರಡು ಗೋಲುಗಳ ನೆರವಿನಿಂದ ಉರುಗ್ವೆ ತಂಡ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ

ಗಳಿಸಿದೆ.

 • ಜಪಾನ್-ಗ್ರೀಸ್ ಡ್ರಾ
 • ಕೊಲಂಬಿಯಾ 2-1 ಗೋಲುಗಳಿಂದ ಗೆದ್ದು 24 ವರ್ಷಗಳ ನಂತರ ಮೊದಲ ಬಾರಿಗೆ ವಿಶ್ವಕಪ್ 16ನೇ ಸುತ್ತು ತಲುಪಿದೆ.:
 • ಗ್ರೂಪ್ 'ಎಫ್';ಅರ್ಜೆಂಟೀನಾ / ಇರಾನ್ಸ;ಸಮಯ: ರಾತ್ರಿ 9:30;ಸ್ಥಳ: ಬೆಲೊ ಹಾರಿಜಾಂಟೆ.

ದಿ.21-6-2014 ಶನಿವಾರ

 • ಸಾಲ್ವಡಾರ್: ಚಾಂಪಿಯನ್ ತಂಡದಂತೆ ಭರ್ಜರಿ ಪ್ರದರ್ಶನ ನೀಡುತ್ತಿರುವ ಫ್ರಾನ್ಸ್ 'ಇ' ಗುಂಪಿನ ಪಂದ್ಯದಲ್ಲಿ ಸ್ವಿಜರ್ಲೆಂಡ್ ವಿರುದ್ಧ 5-2 ಅಂತರದ ಪ್ರಾಬಲ್ಯ ಮೆರೆದು 16ರ ಘಟಕ್ಕೆ ಕಾಲಿರಿಸಿದೆ.
 • ಕ್ಯುರಿಟಿಬಾ: ಎನ್ನರ್ ವೆಲೆನ್ಸಿಯಾ ಗಳಿಸಿದ ಆಕರ್ಷಕ ಎರಡು ಗೋಲ್ ನೆರವಿನಿಂದ ಮಿಂಚಿದ ಇಕ್ವೆಡಾರ್ 2-1 ಅಂತರದಲ್ಲಿ ಹೊಂಡುರಾಸ್ ತಂಡವನ್ನು ಮಣಿಸಿ 'ಇ' ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ.
 • ಕೊಸ್ಟಾರಿಕಾ - ಇಟಲಿ-1 - 0;ಬ್ರಯಾನ್ ರುಯ್ಜ್ - 44ನೇ ನಿ.
 • ಜೆರ್ಮನಿ ೨-೨ ಘಾನಾ(2-2)ಡ್ರಾ

ದಿ.22-6=2014 ಭಾನುವಾರ

 • ಜೆರ್ಮನಿ ೨-೨ ಘಾನಾ(2-2)ಡ್ರಾ
 • ಸಮಯ: ಮಧ್ಯ ರಾತ್ರಿ 1: 30;ಸ್ಥಳ: ಬ್ರೆಸಿಲಿಯಾ;ಬ್ರೆಜಿಲ್-ಕೆಮರೂನ್ ಮುಖಾಮುಖಿ

ಒಟ್ಟು ಪಂದ್ಯಗಳು;4

 • ಬ್ರೆಜಿಲ್‌ಗೆ ಜಯ 3;ಕೆಮರೂನ್‌ಗೆ ಜಯ 1;ಒಟ್ಟು ಗೋಲುಗಳು 8 ; ಬ್ರೆಜಿಲ್ 7-;ಕೆಮರೂನ್ 1;
 • ಸಮಯ: ರಾತ್ರಿ 1:30;ಸ್ಥಳ: ರೆಸಿಫೆ
 • ಮುಖಾಮುಖಿ;ಒಟ್ಟು ಪಂದ್ಯಗಳು :3;ಕ್ರೊವೇಶಿಯಾಕ್ಕೆ ಜಯ 2-ಮೆಕ್ಸಿಕೊ ವಿಜಯ 1;ಒಟ್ಟು ಗೋಲುಗಳು-7
 • ಕ್ರೊವೇಶಿಯಾ 5-ಮೆಕ್ಸಿಕೊ 2 ;

ದಿನದ ಇತರ ಪಂದ್ಯಗಳು;ಬಿ ಗುಂಪು;ಆಸ್ಟ್ರೇಲಿಯಾ / ಸ್ಪೇನ್;

 • ಫೊರ್ಟಾಲೆಜಾ: ಗ್ರೂಪ್ 'ಜಿ';ಜರ್ಮನಿ ;ಬದಲಿ ಆಟಗಾರನಾಗಿ ಅಂಗಣಕ್ಕಿಳಿದ ಮಿರೊಸ್ಲಾವ್ ಕ್ಲೋಸ್ ದಾಖಲಿಸಿದ ಗೋಲಿನ ನಡುವೆಯೂ ಉತ್ತಮ ಆಟ ಪ್ರದರ್ಶಿಸಿ ಘಾನಾ ಬಲಿಷ್ಠ ಜರ್ಮನಿ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
 • ನತಾಲ್ನೈ :*ಗ್ರೂಪ್ 'ಎಫ್';ನೈಜೀರಿಯಾ 4 ಅಂಕಗಳೊಂದಿಗೆ ಎಫ್ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇರಾನ್ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿದೆ.
 • ಬ್ರೆಜಿಲ್ ಹಾಗೂ ಘಾನಾ ನಡುವಿನ ಪಂದ್ಯ 2-2 ಗೋಲುಗಳಿಂದ ಡ್ರಾ.
 • ರೆಸಿಫೆ: ಇಟಲಿ ವಿರುದ್ಧ ಕೋಸ್ಟಾರಿಕಾ ಏಕೈಕ ಗೋಲಿನಿಂದ ಜಯ ಗಳಿಸಿ 24 ವರ್ಷಗಳ ನಂತರ ವಿಶ್ವಕಪ್ ಪ್ರಿಕ್ವಾರ್ಟರ್ ಫೈನಲ್ ತಲಪುವುದರೊಂದಿಗೆ ನಾಕೌಟ್ ಹಂತದ ಆಸೆ ಹೊಂದಿದ್ದ ಇಂಗ್ಲೆಂಡ್ ತಂಡದ ಕನಸು ನುಚ್ಚು ನೂರಾಯಿತು.
 • ಸಾಲ್ವಡಾರ್: ಸ್ವಿಜರ್ಲೆಂಡ್ಸ್ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಫ್ರಾನ್ಸ್ 'ಇ' ಗುಂಪಿನಿಂದ ನಾಕೌಟ್ ಹಂತ ತಲುಪಿದೆ.

ದಿ.23-6-2014 ಸೋಮವಾರ

ಫೀಫಾ 
ಜೆರ್ಮನಿಯ ಮಿರುಸ್ಲೋವ್ ಕ್ಲೋಸೆ ಗೋಲುಕಡೆ ಒದ್ದಿರುವ ಚೆಂಡಿಗೆ ಹೆಚ್ಚಿನ‘ಒದೆ ಕೊಡಲು ಮಾಡಿರುವ ಕಸರತ್ತು; ಗೂಗಲ್ ಪ್ರಕಟಿಸಿದ ಫ್ರೀ ಚಿತ್ರ; ೨೩-೬-೨೦೧೪ ರ (ರಾತ್ರಿ-ಇಂಡಿಯಾ) ಜೆರ್ಮನಿ-ಘಾನಾ ಆಟದಲ್ಲಿ ;.(ದೊಡ್ಡ ಚಿತ್ರಕ್ಕೆ-ಚಿತ್ರದ ಮೇಲೆ ಕ್ಲಿಕ್`ಮಾಡಿ)
 • ಫೊರ್ಟಾಲೆಜಾ: ಜರ್ಮನಿẌಘಾನಾ 2-2 ; ಮಿರೊಸ್ಲಾವ್ ಕ್ಲೋಸ್ ದಾಖಲಿಸಿದ ಗೋಲಿನ ನಡುವೆಯೂ ಉತ್ತಮ ಆಟ ಪ್ರದರ್ಶಿಸಿ ಘಾನಾ ಬಲಿಷ್ಠ ಜರ್ಮನಿ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
 • ಕ್ಯುಯೆಬಾ-ಇರಾನ್ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿದ ಅರ್ಜೆಂಟೀನಾ 6 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.
 • ನೈಜೀರಿಯಾ-1 Ẍ ಬೋಸ್ನಿಯಾ-ಹರ್ಜಗೊವಿನಾ-0
 • •ಬಿ-ನೆದರ್‘ಲೆಂಡ್ಸ್ 3 Ẍ ಆಸ್ಟೇಲಿಯಾ-2 ;ಉರುಗ್ವೇ Ẍ2-1 ಇಂಗ್ಲೆಡ್

೨೩-೬-೨೦೧೪ ರ ರಾತ್ರಿ ಜೆರ್ಮನಿ -ಘಾನಾ ಆಟದ ವೈಖರಿ—ಆಧಾರ:ಗೂಗಲ್`[೨] .

ದಿ.24-6-2014-ಮಂಗಳವಾರ

 • ಮಂಗಳವಾರ ರಾತ್ರಿಯ ನಂತರದ ಸ್ಕೋರು'
 • ಗುಂಪು-ದೇಶ- ಗಳಿಸಿದ ಅಂಕ.
 • ಎ-ಬ್ರೆಜಿಲ್ -7 ;ಮೆಕ್ಷಿಕೋ -7;ಕಮೆರೋನ್-3 ;ಕ್ರೋಷಿಯಾ.-0
 • ಬಿ-ನೆದರ್‘ಲೆಂಡ್ಸ್-9 ;ಚಿಲಿ-6;;ಸ್ಪೈನ್—3; ಆಸ್ಟೇಲಿಯಾ-0
 • ಸಿ-ಕೊಲಂಬಿಯಾ -6; ಕೋಟ್‌ ಡಿ ಅವೈರ್-3; ಜಪಾನ್-1;ಗ್ರೀಸ್-1
 • ಡಿ-ಕೋಸ್ಟರಿಕಾ -6; ಇಟಲಿ-3 ;;ಉರುಗ್ವೇ.-3; ಇಂಗ್ಲೆಡ್-0
 • ಇ- ಪ್ರಾನ್ಸ್-6 ; ಸ್ವಿಟಜರ್‘ಲೆಂಡ್- ; ಈಕ್ವೆಡಾರ್-3. HON-0
 • ಎಪ್-ಅರ್ಜೆಂಟೈನಾ-6 ; ನೈಜೀರಿಯಾ-4;ಇರಾನ್-1; ಬೋಸ್ನಿಯಾ-ಹರ‍್ಸೆಗೋವಿನಾ-0,
 • ಜಿ-ಜೆರ್ಮನಿ-4 ;; ಅಮೆರಿಕಾಸಂಯುಕ್ತ ಸಂಸ್ಥಾನ-4;ಘಾನಾ-1; ;ಪೋರ್ಚುಗಲ್-1
 • ಎಚ್-ಬೆಲ್ಜಿಯಮ್-6 ; ಆಲ್‘ಜೀರಿಯಾ--3; ರಷ್ಯಾ-1; ಕೊರಿಯಾ ರಿಪಬ್ಲಿಕ್-1,

(*ಆಧಾರ :ಟೈಮ್ಸ್`ಆಫ್` ಇಂಡಿಯಾ.)

೨೩-೬-೨೦೧೪:ಆಸ್ಟೇಲಿಯಾ-೦ Ẍ*ಸ್ಪೈನ್ -3:;ನೆದರ್‘ಲೆಂಡ್ಸ್-೨/2 Ẍಚಿಲಿ-೧;ಕೊರಿಯಾ-೨/2,Ẍಆಲ್ಜೀರಿಯಾ- ೪

 • ಅಮೆರಿಕಾಸಂಯುಕ್ತ ಸಂಸ್ಥಾನ- 2 ><ಸ್ಪೈನ್`-2;

೨೪-೬-೨೦೧೪ ಬುಧವಾರ

 • ರೆಸಿಫೆ;ಕ್ರೊಶಿಯಾ 1 X ಮೆಕ್ಸಿಕೊ 3 ;ಇಟಲಿ -೦Ẍ ಉರುಗ್ವೆ - 1;;ಕೊಸ್ಟ-೦Ẍ ಇಂಗ್ಲೆ೦ಡು-೦
 • ಕೆಮರೂನ್`-೧/ 1 Ẍ ಬ್ರೆಜಿಲ್`-೪-/4:
 • ಜಪಾನ್ -೧/ Ẍ 1 ಕೊಲಂಬಿಯಾ -4;; ಗ್ರೀಸ್`2 Ẍಕೊಟೆದಿವೇರ್` 1
 • ದಿ.25-6-2014 ಗುರುವಾರ
 • ಅರ್ಜೆಂಟೈನಾ 3-Ẍ-ನೈಜೀರಿಯಾ 2;;ಬೋಸ್ನಿಯಾ 3- Ẍ-ಇರಾನ್-1;
 • ಸ್ವಿಟಜರ್‘ಲೆಂಡ್ -3 -Ẍ-ಹೊಂಡುರಾಸ್` -0;;- ಪ್ರಾನ್ಸ್ 0-Ẍ- ಈಕ್ವೆಡಾರ್. 0-
  (೨೬-೬-2೦೧೪ ಸಿ-ಕೊಲಂಬಿಯಾ-9;ಎಪ್-ಅರ್ಜೆಂಟೈನಾ-9;ಬಿ-ನೆದರ್‘ಲೆಂಡ್ಸ್-9 ಈ ಮೂರೂರಾಜ್ಯಗಳು ೯ ಅಂಕಗಳೊಂದಿಗೆ ಮುಂದಿವೆ.
  ೨೭-೬-೨೦೧೪/-27-6-2014 ಶುಕ್ರವಾರ

ಜೆರ್ಮನಿ- 1<> ಅಮೆರಿಕಾಸಂಯುಕ್ತ ಸಂಸ್ಥಾನ-೦;;ಇಂಗ್ಲೆಂಡ್ -Ẍ- ಕೊಸ್ಟಾರಿಕಾ =0 - 0

 • ಆಲ್‘ಜೀರಿಯಾ--೧; ರಷ್ಯಾ-1
 • ಘಾನಾ-1; ;ಪೋರ್ಚುಗಲ್-2 ;;ಎಚ್-ಬೆಲ್ಜಿಯಮ್-1 ಕೊರಿಯಾ ರಿಪಬ್ಲಿಕ್-0,
 • ಗ್ರೀಸ್ 2-1 ಅಂತರದಲ್ಲಿ ಐವರಿ ಕೋಸ್ಟ್ ತಂಡವನ್ನು ಮಣಿಸಿ ನಾಕ್‌ಔಟ್ ಹಂತಕ್ಕೆ ಲಗ್ಗೆಯಿಟ್ಟಿತು.
   28-6-2014 ಶನಿವಾರ
 • ೨೭-೬-೨೦೧೪ ರಾತ್ರಿಯ ಆಟದ ನಂತರದ ಹೆಚ್ಚಿನ ಸ್ಕೋರು :
 • ಎ-ಬ್ರೆಜಿಲ್ -7 ;;ಮೆಕ್ಷಿಕೋ-7 ;; ಬಿ-ನೆದರ್‘ಲೆಂಡ್ಸ್—9 ;;ಸಿ-ಕೊಲಂಬಿಯಾ -6;;ಡಿ-ಕೋಸ್ಟರಿಕಾ -7;;
 • ಇ- ಪ್ರಾನ್ಸ್-7 ;;ಎಪ್-ಅರ್ಜೆಂಟೈನಾ-9 ;;ಜಿ-ಜೆರ್ಮನಿ-7;;ಎಚ್-ಬೆಲ್ಜಿಯಮ್-9;;
   30-6-2014 ;;29-6-2014

ಮೆಕ್ಷಿಕೋ -1-; ಬಿ-ನೆದರ್‘ಲೆಂಡ್ಸ್-1 ;; ;ಕ್ರೋಷಿಯಾ.-1<> ಗ್ರೀಸ್-1;; ; ನೈಜೀರಿಯಾ-0<> ಪ್ರಾನ್ಸ್-2 ಜೆರ್ಮನಿ-2 <> ಆಲ್‘ಜೀರಿಯಾ--1

  7 ರಾತ್ರಿ / 8-7-2014
  ಬಿ-ನೆದರ್‘ಲೆಂಡ್ಸ್-4 <> ಕ್ರೋಷಿಯಾ-3;;ಬೆಲ್ಜಿ - ೨/2<> ಯುಎಸ್ ಎ -1;;ಫ್ರಾನ್ಸ್ ೦<>ಜೆರ್ಮನಿ -1
 • ಬ್ರಜಿಲ್- 2 - ಕೊಲಂಬಿಯ 1 ; ಅfಜೆಂಟೈನ 1<> ಬೆಲ್ಜಿಯಮ್ 0
  8 ರ ರಾತ್ರಿ / 9-7-2014
  ಬ್ರಜಿಲ್ -೧/1 <>ಜೆರ್ಮನಿ- ೭/7; ಕ್ವಾರ್ಟರ್ ಫೈನಲ್ ನಲ್ಲಿ ಸೋಲು-ಜೆರ್ಮನಿ ಸೆಮಿ ಗೆ

Neymar, returned to Teresopolis following their World Cup quarter-final victory over Colombia.

  ಸ್ಟಾರ್‌ ಆಟಗಾರ ಬೆನ್ನಿನ ಪಕ್ಕೆಲಬು ಬಿರುಕಿನಿಂದ ನರಳಿತ್ತಿರುವ ನೇಮರ್‌ ಹಾಗೂ ನಾಯಕ ಥಿಯಾಗೋ ಸಿಲ್ವಾ ಅನುಪಸ್ಥಿತಿ ಬ್ರೆಜಿಲ್‌ ತಂಡಕ್ಕೆ ಭಾರಿ ದುಬಾರಿಯಾಯಿತು.

ಘಾಯಾಳು ನೇಮರ್ ಮನೆಗೆ

  ಬ್ರಜಿಲ್ ಗೆಲವು-2<> 1 ಕೊಲಂಬಿಯ ಸೆಮಿ ಆಸೆ ?? ಉಳಿಸಿದೆಯೇ
  ನೆದರ್ ಲ್ಯಾಂಡ್ -1 <> ೦-ಕೊಸ್ಟರಿಕಾ ನೆದರ್ ಸೆಮಿ ಗೆ
   9 ರ ರಾತ್ರಿ / 10-7-2014
 • ಅರ್ಜೆಂಟೈನ-4<> -2 ಹಾಲೆಂಡ್ (ನೆದರ್ ಲ್ಯಾಂಡ್) ಅರ್ಜೆಂಟೈನ ಫೈನಲ್ ಗೆ

ಮೂರನೇ ಸ್ಥಾನಕ್ಕೆ ಬ್ರಜಿಲ್` ೦ <> 3 ನೆದರ್ ಲ್ಯಾಂಡ್

  ಕೊನೆಗೆ-ಜರ್ಮನಿ χಅರ್ಜೆಂಟೈನ ಫೈನಲ್`ಗೆ ಭಾರತದ ೧೩/13-7-2014 ರ ರಾತ್ರಿ.

ಫೈನಲ್-ಅಂತಿಮ ಪಂದ್ಯ

ಬಹುಮಾನದ ಮೊತ್ತ -: ಚಾಂಪಿಯನ್` ತಂಡಕ್ಕೆ ರೂ.210ಕೋಟಿ: $3.5 ಕೋಟಿ  : ::ರನ್ನರ್ ಅಪ್ ತಂಡಕ್ಕೆ-ರೂ.150 ಕೋಟಿ:: $2.5ಕೋಟಿ "

ವರದಿ:ಪ್ರಜಾವಾಣಿ ೧೩-೭-೨೦೧೪

 • ದಿನಾಂಕ. 13-7-2014 ರಾತ್ರಿ.ಜರ್ಮನಿ χχ ಅರ್ಜೆಂಟೈನಾ; ಒಟ್ಟು ಮುಖಾಮುಖಿ ಪಂದ್ಯಗಳು 20,ಜರ್ಮನಿಯ ಜಯ-6,ಅರ್ಜೆಂಟೈನಾ ಜಯ-9,ಡ್ರಾ- 5.
 • ಅರ್ಜೆಂಟೈನಾ ೨೪ ವರ್ಷಗಳ ನಂತರ ಫೈನಲ್ ತಲುಪಿದೆ.
 • ಜರ್ಮನಿ 2002 ರಲ್ಲಿ ಫೈನಲ್ ತಲುಪಿತ್ತು.
 • ಮುಖಾಮುಖಿ
 • 1986 :ಅರ್ಜೆಂಟೈನಾ χ ಜರ್ಮನಿ= 3 - 2
 • 1990 :ಜರ್ಮನಿ χ ಅರ್ಜೆಂಟೈನಾ= 1 - 0
 • ಪಂದ್ಯ ಆರಂಭ :ಭಾರತ ಮಧ್ಯರಾತ್ರಿ ಭಾನುವಾರ:13-7-2014:12.30/1.30
ಫೀಫಾ 
ಬದಲಿ ಆಟಗಾರ ಗೋಟ್ಜೆ (ಬಿದ್ದಿರುವವನು)ಹೆಚ್ಚಿನ ಸಮಯದ 113ನೇ ನಿಮಿಷದಲ್ಲಿ ಗೋಲ್` ಕೀಪರನನ್ನು ತಪ್ಪಿಸಿ ಗೋಲು ಕಡೆಗೆ ಚೆಂಡನ್ನು ಒದೆದು ಜರ್ಮನಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ವರಸೆ.
 • ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 1-0 ಗೋಲಿನಿಂದ ಜಯ,
 • 24 ವರ್ಷಗಳ ನಂತರ ಪ್ರಶಸ್ತಿ
 • ರಿಯೊ ಡಿ ಜನೈರೊದಲ್ಲಿ ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು 1-0 ಗೋಲಿನಿಂದ ಸೋಲಿಸಿದ ಜರ್ಮನಿ 24 ವರ್ಷಗಳ ನಂತರ ಜರ್ಮನಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತಲ್ಲದೆ, ದಕ್ಷಿಣ ಅಮೆರಿಕ ಖಂಡದಲ್ಲಿ ಪ್ರಶಸ್ತಿ ಗೆದ್ದ ಮೊದಲ ಐರೋಪ್ಯ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದರೊಂದಿಗೆ 20ನೇ ವಿಶ್ವಕಪ್ ಮ್ಯಾನ್‌ಷಾಫ್ಟ್ ಪಾಲಾಯಿತು.
  ಬದಲಿ ಆಟಗಾರ ಗೋಟ್ಜೆ 113ನೇ ನಿಮಿಷದಲ್ಲಿ ಗಳಿಸಿದ ಗೋಲು ಜರ್ಮನಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿತು.
 • ಜರ್ಮನಿ ಗೆದ್ದಿರುವ ನಾಲ್ಕು ವಿಶ್ವಕಪ್ ಫೈನಲ್ 1954 ಹಂಗೇರಿ ವಿರುದ್ಧ 3-2 ಗೋಲಿನಿಂದ ಜಯ 1974 ನೆದರ್ಲೆಂಡ್ಸ್ ವಿರುದ್ಧ 2-1 ಗೋಲಿನಿಂದ ಜಯ 1990 ಅರ್ಜೆಂಟೀನಾ ವಿರುದ್ಧ 1-0 ಗೋಲಿನಿಂದ ಜಯ. ;2014 ಅರ್ಜೆಂಟೀನಾ ವಿರುದ್ಧ 1-0 ಗೋಲಿನಿಂದ ಜಯ
  ವೈಯಕ್ತಿಕ ಪ್ರಶಸ್ತಿ ಗೋಲ್ಡನ್ ಬಾಲ್` ಗೋಲ್ಡನ್ ಗ್ಲೌವ್
  ಲಿಯೊನೆಲ್ ಮೆಸ್ಸಿ (ಅರ್ಜೆಂಟೀನಾ) ಗೋಲ್ಡನ್ ಬೂಟ್: ಜೇಮ್ಸ್ ರಾಡ್ರಿಗಸ್ (ಕೊಲಂಬಿಯಾ 6 ಗೋಲು) ಗೋಲ್ಡನ್ ಗ್ಲೌವ್, ಮ್ಯಾನುಯೆಲ್ ನ್ಯುಯೆರ್ (ಜರ್ಮನಿ)(Germany's goalkeeper Manuel Neuer, recipient of the Golden Glove trophy,)

ಅಂತಿಮ ಹಂತ ತಲುಪಿದ ಟೀಮುಗಳ ಸ್ಕೋರ್`

  ಈ ಕೊನೆಯ ದಿನದ ಆಟವನ್ನು ಕ್ರೀಡಾಂಗಣದಲ್ಲಿ 79000 ಜನ ನೋಡಿದರು ಅಲ್ಲದೆ 29000 ರಕ್ಷಣಾ ಸಿಬ್ಬಂದಿಯ ಪಡೆಯೇ ಇತ್ತು
Pos. ಟೀಮು ಗುಂಪು ಆಟ ಗೆಲವು ಡ್ರಾ ಸೋಲು ಪಾಯಿಂಟು GF/ತಪ್ಪು GA/ರಿಯಾಯತಿ GD /ನಿಕ್ಕಿ
1 ಜರ್ಮನಿ G 7 6 1 0 19 18 4 +14
2 ಅರ್ಜೆಂಟೈನ F 7 5 1 1 16 8 4 +4
3 ನೆದರ್ ಲ್ಯಾಂಡ್ B 7 5 2 0 17 15 4 +11
4 ಬ್ರಜಿಲ್ A 7 3 2 2 11 11 14 -3

("ಇಂಗ್ಲಿಷ್` ವಿಕಿ ಫೀಫಾ' ಯಿಂದ)ನೋಡಿ-> [೩]

ಜಾಗತಿಕ ಫುಟ್ಬಾಲ್ ಮೇಳಕ್ಕೆ ಭವ್ಯ ತೆರೆ

ಫೀಫಾ 
ಶಕೀರಾ ಫೀಫಾ ಮುಕ್ತಾಯ ಸಮಾರಂಭಕ್ಕೆ ಹಾಡುತ್ತಿರವುದು.(ಕನ್ನಡ ಪ್ರಭ)-ದೊಡ್ಡ ಚಿತ್ರಕ್ಕೆ ಫೋಟೋದ ಮೇಲೆ ಕ್ಲಿಕ್`ಮಾಡಿ

ಜಾಗತಿಕ ಫುಟ್ಬಾಲ್ ಮೇಳಕ್ಕೆ ಭವ್ಯ ತೆರೆ ಬಿದ್ದಿದೆ. ಬ್ರೆಜಿಲ್‌ನ ರಿಯೋ ಡಿ ಜನೈರೋದ ಮಾರಕಾನ ಕ್ರೀಡಾಂಗಣದಲ್ಲಿ ಭಾನುವಾರ 2014ರ ವಿಶ್ವಕಪ್ ಫುಟ್ಬಾಲ್ ಉತ್ಸವಕ್ಕೆ ವಿವರ್ಣಮಯ ಸಮಾರಂಭದ ಮೂಲಕ ತೆರೆ ಎಳೆಯಲಾಯಿತು. ಕೊಲಂಬಿಯಾದ ಖ್ಯಾತ ಪಾಪ್ ಗಾಯಕಿ ಶಕೀರಾ, ಬ್ರೆಜಿಲ್‌ನ ಗಾಯಕರಾದ ಐವೆಟೆ ಸ್ಯಾಂಗಾಲೊ, ಕರ್ಲಿನ್‌ಹೋಸ್ ಬ್ರೌನ್ ಮೆಕ್ಸಿಕೊದ ಗಿಟಾರು ವಾದಕ ಸಾಂಟಾನ, ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯವಾಗಿ ಶಕೀರಾ ಅವರು ವಿಶ್ವಕಪ್‌ನ ಲಾ...ಲಾ...ಲಾ... ಗೀತೆ ಹಾಡುವ ಮೂಲಕ ಕ್ರೀಡಾಂಗಣದಲ್ಲಿ ತುಂಬಿ ತುಳುಕುತ್ತಿದ್ದ ಅಭಿಮಾನಿಗಳನ್ನು ಸಂಗೀತ ಸಾಗರದಲ್ಲಿ ತೇಲಿಸಿದರು. ಉಳಿದಂತೆ, ಬ್ರೆಜಿಲ್‌ನ ಸಾಂಪ್ರದಾಯಿಕ ನೃತ್ಯ 'ಸಾಂಬಾ ಡ್ಯಾನ್ಸ್‌' ಹಾಗೂ ಅಲ್ಲಿನ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳು ಅನಾವರಣಗೊಂಡವು. ಅಸಂಖ್ಯಾತ ಕಲಾವಿದರು ವಿವಿಧ ಬಗೆಯ ಕಲಾ ಪ್ರದರ್ಶನ ನೀಡುವ ಮೂಲಕ ಹೊಸ ಮೆರಗು ತಂದರು.ವಿಧ ಬಗೆಯ ಕಲಾ ಪ್ರದರ್ಶನ ನೀಡುವ ಮೂಲಕ ಹೊಸ ಮೆರಗು ತಂದರು$.

ಗೆದ್ದ ಟೀಮಿಗೆ ಜರ್ಮನಿಯಲ್ಲಿ ಅದ್ದೂರಿ ಸ್ವಾಗತ

ಫೀಫಾ 
ವಿಶ್ವಕಪ್`ಗೆದ್ದ ಜರ್ಮನ್`ಆಟಗಾರರಿಗೆ ಅದ್ದೂರಿ ಸ್ವಾಗತ ಕೋರಲು ಸ್ವದೇಶದಲ್ಲಿ ಸೇರಿದ ಮಿಲಿಯಗಟ್ಟಲೆ ಜನ

ವಿಶ್ವ ಕಪ್ ಗೆದ್ದ ಜರ್ಮನ್` ಟೀಮಿಗೆ ಜರ್ಮನಿಯಲ್ಲಿ ಭಾರೀ ಸ್ವಾಗತ ಕೋರಲಾಯಿತು.(14-7-2014) ಮಿಲಿಯಗಟ್ಟಲೆ ಜನ ಸೇರಿದ್ದರು.

ಇವನ್ನೂ ನೋಡಿರಿ

ಉಲ್ಲೇಖಗಳು

ಹೆಚ್ಚಿನ ಓದಿಗಾಗಿ

 • ಪೌಲ್ ಡರ್ಬಿ, ಆಫ್ರಿಕ ಫುಟ್ ಬಾಲ್ ಮತ್ತು ಫೀಫಾ: ಪಾಲಿಟಿಕ್ಸ್, ಕಲೋನಿಯಲಿಸಮ್ ಮತ್ತು ರೆಸಿಸ್ಟೆಂನ್ಸ್ (ಜಾಗತಿಕ ಸಮಾಜದಲ್ಲಿ ಕ್ರೀಡೆ), ಫ್ರಾಂಕ್ ಕಾಸ್ ಪ್ರಕಾಶಕರು 2002, ISBN 0-7146-8029-X
 • ಜಾನ್ ಸುಗ್ದೆನ್, ಫೀಫಾ ಮತ್ತು ದಿ ಕಂಟೆಸ್ಟ್ ಫಾರ್ ದಿ ವರ್ಲ್ಡ್ ಫುಟ್ ಬಾಲ್ , ಪೊಲೈಟಿ ಪ್ರೆಸ್ 1998, ISBN 0-7456-1661-5
 • ಜಿಮ್ ಟ್ರೆಕರ್, ಚಾರ್ಲ್ಸ್ ಮೈಯರ್ಸ್, ಜೆ. ಬ್ರೆಟ್ ವೈಟ್ ಸೆಲ್, ಸಂಪಾದಕರು, ವುಮೆನ್ಸ್ ಸಾಕರ್: ದಿ ಗೇಮ್ ಮತ್ತು ಫೀಫಾ ವರ್ಲ್ಡ್ ಕಪ್, ಯೂನಿವರ್ಸ್ 2000, ಪರಿಷ್ಕರಿಸಿದ ಆವೃತ್ತಿ ISBN 0-7893-0527-5

ಬಾಹ್ಯ ಕೊಂಡಿಗಳು

47°22′53″N 8°34′28″E / 47.38139°N 8.57444°E / 47.38139; 8.57444

Tags:

ಫೀಫಾ ಇತಿಹಾಸಫೀಫಾ ರಚನೆಫೀಫಾ ಮಾನ್ಯತೆಗಳು ಮತ್ತು ಪ್ರಶಸ್ತಿಗಳುಫೀಫಾ ಪ್ರಶಾಸನ ಮತ್ತು ಪಂದ್ಯದ ವಿಕಾಸಫೀಫಾ ಸ್ತುತಿ ಗೀತೆಫೀಫಾ ಟೀಕೆಗಳುಫೀಫಾ ವಿನ್ಯಾಸ ಮಾಡಿದ ಕ್ರೀಡಾ ಸ್ಪರ್ಧೆಗಳುಫೀಫಾ ಪ್ರಾಯೋಜಕರುಫೀಫಾ 2014 ರ 20ನೇ ವಿಶ್ವ ಫುಟ್ಬಾಲ್ ಪಂದ್ಯಾವಳಿಫೀಫಾ 2014 ರ 20ನೇ ವಿಶ್ವ ಫುಟ್ಬಾಲ್ ಪಂದ್ಯ ಮತ್ತು ವೆಚ್ಚಫೀಫಾ ಆರಂಭ 2014ಫೀಫಾ 19-6-2014 ಗುರುವಾರಫೀಫಾ 20-6-2014ಶುಕ್ರವಾರಫೀಫಾ ದಿ.21-6-2014 ಶನಿವಾರಫೀಫಾ ದಿ.22-6=2014 ಭಾನುವಾರಫೀಫಾ ದಿ.23-6-2014 ಸೋಮವಾರಫೀಫಾ ದಿ.24-6-2014-ಮಂಗಳವಾರಫೀಫಾ ೨೪-೬-೨೦೧೪ ಬುಧವಾರಫೀಫಾ ಫೈನಲ್-ಅಂತಿಮ ಪಂದ್ಯಫೀಫಾ ಅಂತಿಮ ಹಂತ ತಲುಪಿದ ಟೀಮುಗಳ ಸ್ಕೋರ್`ಫೀಫಾ ಜಾಗತಿಕ ಫುಟ್ಬಾಲ್ ಮೇಳಕ್ಕೆ ಭವ್ಯ ತೆರೆಫೀಫಾ ಗೆದ್ದ ಟೀಮಿಗೆ ಜರ್ಮನಿಯಲ್ಲಿ ಅದ್ದೂರಿ ಸ್ವಾಗತಫೀಫಾ ಇವನ್ನೂ ನೋಡಿರಿಫೀಫಾ ಉಲ್ಲೇಖಗಳುಫೀಫಾ ಹೆಚ್ಚಿನ ಓದಿಗಾಗಿಫೀಫಾ ಬಾಹ್ಯ ಕೊಂಡಿಗಳುಫೀಫಾಆಡಳಿತಇಂಗ್ಲೀಷ್

🔥 Trending searches on Wiki ಕನ್ನಡ:

ಭಾರತೀಯ ಸಂವಿಧಾನದ ತಿದ್ದುಪಡಿಸಿಂಧೂತಟದ ನಾಗರೀಕತೆಬಿ. ಆರ್. ಅಂಬೇಡ್ಕರ್ಕೃಷ್ಣರಾಜನಗರಸಬಿಹಾ ಭೂಮಿಗೌಡಗಣರಾಜ್ಯೋತ್ಸವ (ಭಾರತ)ಕರ್ನಾಟಕ ಲೋಕಸೇವಾ ಆಯೋಗಲಕ್ಷ್ಮಿಮಾಹಿತಿ ತಂತ್ರಜ್ಞಾನರೈತಸೀತಾ ರಾಮದಲಿತಕಲಬುರಗಿಹಾಕಿಆರ್ಯರುನ್ಯಾಯ ವಿಜ್ಞಾನಕನ್ನಡ ಕಾವ್ಯಜಿ.ಎಸ್.ಶಿವರುದ್ರಪ್ಪಭಾರತದ ರಾಷ್ಟ್ರಪತಿಬೇಲೂರುಹಾವುಭಾರತದ ರಾಷ್ಟ್ರಗೀತೆಕನ್ನಡ ಸಾಹಿತ್ಯಹಿಂದೂ ಧರ್ಮಜಾಗತಿಕ ತಾಪಮಾನ ಏರಿಕೆವಿ. ಕೃ. ಗೋಕಾಕಕೃಷ್ಣದೇವರಾಯದಸರಾಭಾರತದ ಸಂವಿಧಾನ ರಚನಾ ಸಭೆರಮ್ಯಾಖೇಡಾ ಸತ್ಯಾಗ್ರಹಕನಕಗಿರಿ ಜೈನ ಕ್ಷೇತ್ರಹರಪ್ಪರೇಡಿಯೋಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಕೂಡಲ ಸಂಗಮಕಲ್ಯಾಣಿಪಶ್ಚಿಮ ಘಟ್ಟಗಳುಸಾಂಖ್ಯಸಾರಾ ಅಬೂಬಕ್ಕರ್ಜಲ ಮಾಲಿನ್ಯಫುಟ್ ಬಾಲ್ಜ್ಯೋತಿಬಾ ಫುಲೆತಾಲ್ಲೂಕುಸಂಖ್ಯೆಧರ್ಮಸ್ಥಳವಿಕಿಮೀಡಿಯ ಕಾಮನ್ಸ್ಕರ್ನಾಟಕ ಪತ್ರಿಕೋದ್ಯಮ ಇತಿಹಾಸಇಮ್ಮಡಿ ಪುಲಕೇಶಿಸುಧಾ ಮೂರ್ತಿಕಲಿಯುಗಶ್ರೀಶೈಲವೈದೇಹಿವಾದಿರಾಜರುಕರ್ನಾಟಕ ವಿಧಾನ ಪರಿಷತ್ಅವರ್ಗೀಯ ವ್ಯಂಜನಗಾಂಧಿ ಜಯಂತಿಜಾತ್ಯತೀತತೆನಾಡ ಗೀತೆಕರ್ನಾಟಕ ವಿಧಾನ ಸಭೆಸೂಫಿಪಂಥಮಳೆಗಾಲತೋಟಗಾರಿಕೆಕೆ.ಎಂ.ಕಾರಿಯಪ್ಪನಾಯಕ (ಜಾತಿ) ವಾಲ್ಮೀಕಿಬಾಬು ಜಗಜೀವನ ರಾಮ್ಜವಾಹರ‌ಲಾಲ್ ನೆಹರುಚಿಕ್ಕಮಗಳೂರುಮಾಟ - ಮಂತ್ರಬಿಸುಬಿ.ಜಯಶ್ರೀಜ್ಯೋತಿಷ ಶಾಸ್ತ್ರದ ನಕ್ಷತ್ರಗಳುತಿಂಥಿಣಿ ಮೌನೇಶ್ವರಭಾರತದ ನದಿಗಳುಕರ್ನಾಟಕದ ಶಾಸನಗಳುದೇವನೂರು ಮಹಾದೇವ🡆 More