ಮ್ಯಾಮತ್: ಸಸ್ತನಿಗಳ ಅಳಿವಿನಂಚಿನಲ್ಲಿರುವ ಕುಲ

ಮ್ಯಾಮತ್ಗಳು ಆನೆಗಳ ವರ್ಗವಾದ ಪ್ರೊಬೊಸಿಡೆಗೆ ಸೇರುವ ಅಳಿದು ಹೋಗಿರುವ ಒಂದು ಕುಲದ ಪ್ರಾಣಿಗಳು.

ಮ್ಯಾಮತ್
Temporal range: ಮುಂಚಿನ ಪ್ಲಿಯೊಸೀನ್ - ಹೊಲೊಸೀನ್
ಮ್ಯಾಮತ್: ವ್ಯಾಪ್ತಿ, ನಡವಳಿಕೆ, ಅಂಗರಚನೆ
ಕೊಲಂಬಿಯದ ಮ್ಯಾಮತ್
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಪ್ರೋಬೋಸಿಡೀ
ಕುಟುಂಬ:
ಎಲಿಫೆಂಟಿಡೇ
ಕುಲ:
ಮ್ಯಾಮೂತಸ್

Brookes, ೧೮೨೮

ಅತ್ಯಂತ ಉದ್ದವಾದ ಮತ್ತು ಬಾಗಿದ ದಂತಗಳನ್ನು ಇವು ಹೊಂದಿದ್ದವು. ಪ್ಲಿಯೊಸೀನ್ ಯುಗದಿಂದ - ಅಂದರೆ ಸುಮಾರು ೪.೮ ಮಿಲಿಯನ್ ವರ್ಷಗಳ ಹಿಂದಿನಿಂದ ಸುಮಾರು ೪,೫೦೦ ವರ್ಷದ ಹಿಂದಿನವರೆಗೂ ಇವು ಜೀವಿಸಿದ್ದವು. ಮ್ಯಾಮತ್ ಎಂಬ ಹೆಸರು ರಷ್ಯನ್ ಭಾಷೆಯ мамонт ಮಾಮೊಂತ್ ಇಂದ ಬಂದಿದೆ.

ಇದರ ವೈಜ್ಞಾನಿಕ ನಾಮ ಮ್ಯಾಮೂತಸ್. ಇದರಲ್ಲಿ ಹಲವಾರು ಬಗೆಗಳಿದ್ದು ಎಲ್ಲವೂ ಪರಿಚಿತವಾಗಿರುವುದು ಪಳೆಯುಳಿಕೆಯ ರೂಪದಲ್ಲಿ ಮಾತ್ರ. ಆದಿಯುಗದ ಮಾನವನಿಗೂ ಇವುಗಳ ಪರಿಚಯವಿತ್ತು. ಅವರ ಬಿಡಾರಗಳಲ್ಲಿ ಅಂದರೆ ಗುಹೆಗಳ ಗೋಡೆಗಳ ಮೇಲೆ ವಿವಿಧ ಚಿತ್ರಗಳ ಜೊತೆ ಈ ಬಗೆಯ ಆನೆ ಹಿಂಡನ್ನು ಕಾಣಬಹುದು. ಪ್ರಾಯಶಃ ಆದಿಮಾನವರೂ ಈ ಆನೆಗಳೂ ಹಿಮಪ್ರಳಯಕ್ಕೆ ಸಿಕ್ಕಿ ಹಿಮಗತವಾಗಿ ಅಸುನೀಗಿರಬೇಕು. ಆದ್ದರಿಂದಲೇ ಇಂದಿಗೂ ಹಿಮತುಂಬಿದ ಕಂದರಗಳಲ್ಲಿ ಮತ್ತು ಹಿಮದ ಭಾರಿ ಬಂಡೆಗಳ ಅಡಿಯಲ್ಲಿ ಬೃಹತ್ ಆನೆಗಳ ಅವಶೇಷಗಳು ದೊರೆಯುತ್ತಿವೆ. ಸುಮಾರು  ಮೂವತ್ತು ಸಾವಿರ ವರ್ಷಗಳು ಹಿಮದಲ್ಲಿ ಹುದುಗಿದ್ದ ಆನೆ ಶವಗಳು ಇಂದಿಗೂ ಹಿಮಪ್ರದೇಶದಲ್ಲಿ ಸಂಚರಿಸುವ ನಾಯಿಗಳಿಗೆ ಆಹಾರವಾಗಿ ಬಳಕೆಯಾದ ನಿದರ್ಶನಗಳುಂಟು. ಇವುಗಳ ಪಳೆಯುಳಿಕೆಗಳು ಮೊದಲು ದೊರೆತದ್ದು ಸೈಬೀರಿಯದಲ್ಲಿ.

ವ್ಯಾಪ್ತಿ

ಉತ್ತರ ಧ್ರುವದ ಸುತ್ತಲೂ ಆರ್ಕ್ಟಿಕ್ ಸಾಗರದ ಅಂಚಿನಿಂದ ಹಿಡಿದು ಯುರೋಪಿನ ದಕ್ಷಿಣದಲ್ಲಿ ಸ್ಪೇನ್, ಇಟಲಿ ದೇಶಗಳಲ್ಲೂ, ರಷ್ಯದಲ್ಲೂ, ಉತ್ತರ ಅಮೆರಿಕದ ಉತ್ತರ ಕ್ಯಾರೋಲೀನ ಮತ್ತು ಕ್ಯಾಲಿಫೋರ್ನಿಯಗಳವರೆಗೂ ಇವುಗಳ ಸಂತತಿ ಪ್ರಸರಿಸಿದ್ದಿರಬೇಕೆಂದು ವಿಜ್ಞಾನಿಗಳು ಅನೇಕ ಆಧಾರಗಳ ಮೇಲೆ ಅಭಿಪ್ರಾಯಪಟ್ಟಿದ್ದಾರೆ.

ನಡವಳಿಕೆ

ಬೃಹತ್ ಆನೆ ಎಂಬ ಹೆಸರನ್ನು ಪಡೆದಿದ್ದರೂ ಇವು ಇಂದಿನ ಆನೆಯ ಗಾತ್ರವನ್ನು ತಳೆದಿದ್ದವು. ಪ್ರಾಯಶಃ ದೊಡ್ಡ ಹಿಂಡಿನಲ್ಲಿ ಜೀವಿಸಿದ್ದಿರಬೇಕು. ಇಂದಿನ ಆನೆಗಳಿಗಿಂತ ಇವು ಬಹಳ ವಿಭಿನ್ನ. ಕಾರಣ ಮೈಮೇಲೆ ಜೂಲಿನಂಥ ನೀಳವಾದ ಕೆಂಪುಮಿಶ್ರಿತ ಕಂದು ಕೂದಲು. ಅಲ್ಲದೆ ಚರ್ಮದಡಿ ಸುಮಾರು ಎಂಟು ಸೆಂಮೀ ದಪ್ಪದ ಕೊಂಬು, ಮೈಮೇಲಿನ ದಟ್ಟ ಕೂದಲು ಮತ್ತು ಚರ್ಮದಡಿ ಅಧಿಕ ಕೊಬ್ಬು ಇದ್ದಿದ್ದರಿಂದ ಕಟುಚಳಿಯನ್ನು ತಡೆದುಕೊಳ್ಳಲು ಸಮರ್ಥವಾಗಿದ್ದವು.

ಅಂಗರಚನೆ

ಮ್ಯಾಮತ್‌ಗಳ ವಿವಿಧ ಅಂಗರಚನೆಗಳಲ್ಲಿ (ಬಾಹ್ಯ ಮತ್ತು ಒಳರಚನೆ) ವೈವಿಧ್ಯವುಂಟು. ತಲೆ ದೊಡ್ಡದಾಗಿ ಮತ್ತು ಉದ್ದವಾಗಿ ಕೋನಾಕೃತಿಯದಾಗಿತ್ತು. ಈ ತಲೆಗೆ ಹೊಂದಿಕೊಂಡಂತೆ ಕಿರಿದಾದ ಕಿವಿಯ ಹಾಲೆಗಳು, ಪುಟ್ಟ ಬಾಲ, ಬೆನ್ನಿನ ಮೇಲೆ ಕೊಬ್ಬಿನ ಡುಬ್ಬ, ಎರಡು ಜೊತ ಕೋರೆಹಲ್ಲು ಮತ್ತು ಬಾಯಲ್ಲಿ ಭಾರಿ ಗಾತ್ರದ ಹಲ್ಲುಗಳು ಮುಂತಾದವು. ಶರೀರದ ಒಳಭಾಗವೂ ತುಲನಾತ್ಮಕ ದೃಷ್ಟಿಯಿಂದ ವೈವಿಧ್ಯಮಯವಾಗಿತ್ತು. ಈ ಭಾರಿ ಗಾತ್ರದ ಶರೀರಕ್ಕೆ ಪುಟ್ಟದಾದ ಕಿವಿಯ ಹಾಲೆಗಳು ಮತ್ತು ಕಿರಿದಾದ ಬಾಲ, ಹೆಚ್ಚಿನ ಪ್ರಮಾಣದಲ್ಲಿ ಮೃದುವಾದ ರಚನೆ ಹಿಮಕ್ಕೆ ತಾಕದಿರಲೆಂಬ ದೃಷ್ಟಿಯಿಂದ ಈ ಮಾರ್ಪಾಟು ಇರಬಹುದು. ಬೆನ್ನಿನ ಡುಬ್ಬ ಮತ್ತು ಚರ್ಮದಡಿಯ ಕೊಬ್ಬು ಹೊರವಾತಾವರಣದ ಕೊರೆವ ಚಳಿ ದೇಹದೊಳಕ್ಕೆ ತೂರದಂತೆಯೂ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಕಾರಿಯಾಗಿದ್ದವು. ಡುಬ್ಬ ಇರುವ ಮ್ಯಾಮತ್ ಪಳೆಯುಳಿಕೆ ದೊರೆತಿಲ್ಲ.

ಆದರೆ ಆದಿಮಾನವ ರಚಿಸಿದ ಚಿತ್ರದಲ್ಲಿ ಈ ಭಾಗ ಎದ್ದು ಕಾಣುವುದರಿಂದ ಅವುಗಳಲ್ಲಿ ಈ ಭಾಗ ಇದ್ದಿರಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಅಥವಾ ಜೀವಂತ ಆನೆಗಳಲ್ಲಿದ್ದ ಈ ರಚನೆ ಅವು ಸತ್ತ ಮೇಲೆ ಸಾವಿರಾರು ವರ್ಷಗಳ ಹಿಮದ ಒತ್ತಡಕ್ಕೆ ಬಲಿಯಾಗಿ ರೂಪವ್ಯತ್ಯಾಸಗೊಂಡಿರಲೂಬಹುದು.

ಮ್ಯಾಮತ್ ಆನೆಗಳ ಕೋರೆಗಳು ಬಹಳ ವಿಚಿತ್ರವಾದುವು. ಏಕಕಾಲದಲ್ಲಿ ಎರಡು ಜೊತೆ ಕೋರೆಗಳು (ಅವುಗಳಲ್ಲಿ ಒಂದು ಜೊತೆ 3-4 ಮೀ ಉದ್ದದ ಭಾರಿ ಗಾತ್ರದವು) ಇವು ಮಿತಿಮೀರಿ ಬೆಳೆದು ನೆಲವನ್ನು ತಗುಲಿ ಅನಂತರ ಸುರುಳಿ ಸುತ್ತಿ ದವಡೆಹಲ್ಲುಗಳು ಭಾರಿ ದಪ್ಪ ಆಗಿದ್ದು ಒಂದಕ್ಕೊಂದು ಹೆಣೆದುಕೊಂಡ ಸ್ಥಿತಿಯನ್ನು ಕಾಣಬಹುದು. ದವಡೆಹಲ್ಲುಗಳು ಭಾರಿ ದಪ್ಪ ಆಗಿದ್ದು ಹಿಮಭರಿತ ಗುಡ್ಡಪ್ರದೇಶದಲ್ಲಿ ಬೆಳೆಯುವ ಒರಟಾದ ಸಸ್ಯಗಳನ್ನು ಅಗಿಯಲು ಸಹಾಯಕವಾಗಿದ್ದಿರಬೇಕು. ಇಂದಿನ ದಂತಗಳು ಸಿಗುವ ಪ್ರಮಾಣದ ಮತ್ತು ವಿಲೇವಾರಿಯಾಗಿರುವ ದಂತದ ತೂಕ ಮುಂತಾದವುಗಳನ್ನು ಮನಗಂಡರೆ ಕೆಲವರ ಪ್ರಕಾರ ಅಂದು ಈ ಆನೆಗಳ ಸಂಖ್ಯೆ 40,000ಕ್ಕೂ ಹೆಚ್ಚಿರಬಹುದೆಂದು ಶಂಕಿಸಲಾಗಿದೆ. ಕೆಲವರ ಪ್ರಕಾರ ಇವುಗಳ ವಿನಾಶಕ್ಕೆ ಕಾರಣ ಬೇಟೆ ಅಥವಾ ಹಿಮಪ್ರಳಯ.

ಉಲ್ಲೇಖಗಳು

ಹೆಚ್ಚಿನ ಓದಿಗೆ

ಮ್ಯಾಮತ್: ವ್ಯಾಪ್ತಿ, ನಡವಳಿಕೆ, ಅಂಗರಚನೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮ್ಯಾಮತ್: ವ್ಯಾಪ್ತಿ, ನಡವಳಿಕೆ, ಅಂಗರಚನೆ 
Mammuthus
ಮ್ಯಾಮತ್: ವ್ಯಾಪ್ತಿ, ನಡವಳಿಕೆ, ಅಂಗರಚನೆ 
Mammuthus

Tags:

ಮ್ಯಾಮತ್ ವ್ಯಾಪ್ತಿಮ್ಯಾಮತ್ ನಡವಳಿಕೆಮ್ಯಾಮತ್ ಅಂಗರಚನೆಮ್ಯಾಮತ್ ಉಲ್ಲೇಖಗಳುಮ್ಯಾಮತ್ ಹೆಚ್ಚಿನ ಓದಿಗೆಮ್ಯಾಮತ್ಆನೆಮಿಲಿಯನ್ರಷ್ಯನ್ ಭಾಷೆ

🔥 Trending searches on Wiki ಕನ್ನಡ:

ಶ್ಚುತ್ವ ಸಂಧಿಎಸ್.ಎಲ್. ಭೈರಪ್ಪಲೋಪಸಂಧಿಸಮಾಜ ವಿಜ್ಞಾನಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಇಂಡೋನೇಷ್ಯಾಸರ್ವಜ್ಞಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮಾಸಯೇಸು ಕ್ರಿಸ್ತಕರ್ನಾಟಕ ಲೋಕಸಭಾ ಚುನಾವಣೆ, 2019ಹುಬ್ಬಳ್ಳಿಚಿಂತಾಮಣಿಮಾನವ ಸಂಪನ್ಮೂಲ ನಿರ್ವಹಣೆರಾಜಕುಮಾರ (ಚಲನಚಿತ್ರ)ಕಿತ್ತೂರು ಚೆನ್ನಮ್ಮನುಗ್ಗೆಕಾಯಿಗರ್ಭಧಾರಣೆಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆರಾಶಿಮುಹಮ್ಮದ್ಮಳೆಭಾರತದ ರಾಷ್ಟ್ರಗೀತೆಕರ್ನಾಟಕದಲ್ಲಿ ಪಂಚಾಯತ್ ರಾಜ್ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೃಷಿವಿದ್ಯಾರಣ್ಯಅಡೋಲ್ಫ್ ಹಿಟ್ಲರ್ಅಯೋಧ್ಯೆದರ್ಶನ್ ತೂಗುದೀಪ್ಸ್ವಚ್ಛ ಭಾರತ ಅಭಿಯಾನನದಿಹೈದರಾಬಾದ್‌, ತೆಲಂಗಾಣಪಂಜುರ್ಲಿಹೈದರಾಲಿಹಾರೆಜಿಡ್ಡು ಕೃಷ್ಣಮೂರ್ತಿತತ್ಪುರುಷ ಸಮಾಸರಾಜ್ಯಸಭೆಭಾರತದಲ್ಲಿ ಬಡತನಜಪಾನ್ಜೈನ ಧರ್ಮಸಂಖ್ಯೆಚಾಣಕ್ಯರೈತವಾರಿ ಪದ್ಧತಿಸಮುದ್ರಗುಪ್ತಗುಪ್ತ ಸಾಮ್ರಾಜ್ಯಶಿಶುಪಾಲಕನ್ನಡ ರಂಗಭೂಮಿಕರ್ನಾಟಕದ ತಾಲೂಕುಗಳುಅರ್ಜುನವೇದವ್ಯಾಸಪ್ರಜಾವಾಣಿಆಗಮ ಸಂಧಿಭಾರತದಲ್ಲಿ ಪಂಚಾಯತ್ ರಾಜ್ಸರ್ವೆಪಲ್ಲಿ ರಾಧಾಕೃಷ್ಣನ್ಜನ್ನನವೋದಯಕನಕದಾಸರುಅಶ್ವತ್ಥಮರತಂತ್ರಜ್ಞಾನರಾಮ್ ಮೋಹನ್ ರಾಯ್ಚಿತ್ರದುರ್ಗ ಜಿಲ್ಲೆಏಕರೂಪ ನಾಗರಿಕ ನೀತಿಸಂಹಿತೆಭಾರತದ ಸ್ವಾತಂತ್ರ್ಯ ಚಳುವಳಿಭಾಷೆಕನ್ನಡದಲ್ಲಿ ವಚನ ಸಾಹಿತ್ಯನ್ಯೂಟನ್‍ನ ಚಲನೆಯ ನಿಯಮಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿರಕ್ತದೊತ್ತಡರಗಳೆಅತ್ತಿಮಬ್ಬೆಖಗೋಳಶಾಸ್ತ್ರಚದುರಂಗ (ಆಟ)ಭಕ್ತಿ ಚಳುವಳಿದಿಕ್ಕು🡆 More