ಮಂಗಳೂರು ಹಂಚು

ಮಂಗಳೂರು ಹಂಚುಗಳು' ಕರ್ನಾಟಕದ ಮಂಗಳೂರಿನಲ್ಲಿ ತಯಾರಿಕೆಯಾಗುವ ಹಂಚಿನ ಒಂದು ವಿಧ.

ಈ ಹಂಚುಗಳನ್ನು ಜರ್ಮನ್ ಮಿಷನರಿಗಳು ೧೮೬೫ರಲ್ಲಿ ಮೊದಲಿಗೆ ಪರಿಚಯಿಸಿದರು. ಮಂಗಳೂರು ಹಂಚುಗಳು ಸ್ಪ್ಯಾನಿಶ್ ಮತ್ತು ಇಟಾಲಿಯನ್ ವಾಸ್ತುಶೈಲಿಯ ಭಾಗವಾಗಿದೆ.

ಮಂಗಳೂರು ಹಂಚು
ಮಂಗಳೂರು ಹಂಚು

ವ್ಯುತ್ಪತ್ತಿ

ಈ ಹಂಚುಗಳು ಭಾರತದ ಪಶ್ಚಿಮ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರಕ್ಕೆ ಸೇರಿದವು. ಆದ್ದರಿಂದ ಅವುಗಳನ್ನು ಟೈಲ್ ಫ್ಯಾಕ್ಟರಿ ತಯಾರಕರು ಮಂಗಳೂರು ಹಂಚುಗಳೆಂದು ಹೆಸರಿಸಿದರು.

ಇತಿಹಾಸ

೧೮೬೫ರಲ್ಲಿ ಬಾಸೆಲ್ ಮಿಷನ್ ಸಂಸ್ಥೆಯ ಜರ್ಮನ್ ಮಿಷನರಿ ಪ್ಲೆಬ್ಸ್ಟ್ ಮೊದಲ ಟೈಲ್ ಕಾರ್ಖಾನೆಯನ್ನು ಸ್ಥಾಪಿಸಿದರು. ಸ್ಥಳೀಯವಾಗಿ ಬಾಸೆಲ್ ಮಿಷನ್ ಟೈಲ್ ಫ್ಯಾಕ್ಟರಿ ಎಂದು ಉಲ್ಲೇಖಿಸಲಾಗುತ್ತದೆ. ಇದು ಭಾರತದ ಮೊದಲ ಟೈಲ್ ಫ್ಯಾಕ್ಟರಿಯಾಗಿದೆ. ಇದು ಮಂಗಳೂರಿನ ಮೋರ್ಗಾನ್ಸ್ ಗೇಟ್ ಬಳಿಯ ನೇತ್ರಾವತಿ ನದಿಯ ದಡದಲ್ಲಿದೆ. ಇದಕ್ಕೆ ಈಗ "ಕಾಮನ್ವೆಲ್ತ್ ಟ್ರಸ್ಟ್ ಲಿಮಿಟೆಡ್" ಎಂಬ ಹೆಸರಿದೆ. ಉಳ್ಳಾಲ ಸೇತುವೆಯಿಂದ ೧೦೦ಮೀ(೦.೧೦ ಕಿಮೀ) ದೂರದಲ್ಲಿದೆ. ಈ ಹಂಚುಗಳು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿನ ಸರ್ಕಾರಿ ಕಟ್ಟಡಗಳಿಗೆ ಶಿಫಾರಸು ಮಾಡುತ್ತಿದ್ದ ಏಕೈಕ ಹಂಚುಗಳು. ವಿಶ್ವ ಪಾರಂಪರಿಕ ತಾಣವಾದ ಛತ್ರಪತಿ ಶಿವಾಜಿ ಟರ್ಮಿನಸ್ ಮಂಗಳೂರು ಹಂಚುಗಳನ್ನು ಹೊಂದಿದೆ. ಆಲ್ಬುಕರ್ಕ್ ಟೈಲ್ ಫ್ಯಾಕ್ಟರಿ ಪ್ರಾರಂಭವಾದ ನಂತರ ಮಂಗಳೂರಿಗರು ಮಂಗಳೂರು ಹಂಚುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡರು. ಈ ಕಾರ್ಖಾನೆಯಲ್ಲಿ ಉತ್ಪಾದಿಸಿದ ಹಂಚುಗಳಿಗೆ ಭಾರತೀಯ ಉಪಖಂಡ ಮತ್ತು ಪೂರ್ವ ಆಫ್ರಿಕಾದಾದ್ಯಂತ ಹೆಚ್ಚಿನ ಬೇಡಿಕೆಯಿತ್ತು. ೧೯೦೦ರ ದಶಕದಲ್ಲಿ ಮಂಗಳೂರಿನಲ್ಲಿ ಸುಮಾರು ೨೫ಟೈಲ್ ಕಾರ್ಖಾನೆ ಆರಂಭಗೊಂಡವು. ೧೯೯೪ರರಲ್ಲಿ ೭೫ ಟೈಲ್ ಕಾರ್ಖಾನೆಗಳು ಮಂಗಳೂರಿನಲ್ಲಿದ್ದವು. ಈ ಹಂಚುಗಳ ಜೊತೆಗೆ ಕಾರ್ಖಾನೆಗಳು ಸುತ್ತುಗಳು, ಸುಣ್ಣಕಲ್ಲು ಮತ್ತು ಇಟ್ಟಿಗೆಗಳಂತಹ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದರು.

ಮಂಗಳೂರಿನ ಪ್ರಮುಖ ಟೈಲ್ ಕಾರ್ಖಾನೆಗಳು:

  1. ಬಾಸೆಲ್ ಮಿಷನ್ ಟೈಲ್ಸ್ (೧೮೬೫) ೧೯೧೪ ನಂತರ ಕಾಮನ್ವೆಲ್ತ್ ಟ್ರಸ್ಟ್ ಲಿಮಿಟೆಡ್
  2. ಆಲ್ಬುಕರ್ಕ್ ಮತ್ತು ಸನ್ಸ್ (೧೮೬೮)
  3. ಅಲ್ವಾರೆಸ್ ಟೈಲ್ ಫ್ಯಾಕ್ಟರಿ (೧೮೭೮)
  4. ಹ್ಯಾಮರ್ ಟೈಲ್ಸ್ (೧೮೮೯)
  5. ಹಮಿದ್ಯಾ ಟೈಲ್ (೧೯೦೫)
  6. ಕಿಂಗ್ ಜಾರ್ಜ್ ಟೈಲ್ಸ್ (೧೯೦೫)
  7. ಜೆ.ಹೆಚ್ ಮೊರ್ಗಾನ್ ಆಂಡ್ ಸನ್ಸ್
  8. ರೀಗೊ ಆಂಡ್ ಸನ್ಸ್
  9. ಬಿಕೆ ಟೈಲ್ಸ್

ತಯಾರಿಸುವ ವಿಧಾನ

ಮಣ್ಣನ್ನು ಸಂಗ್ರಹಿಸಿದ ಬಳಿಕ ಒಂದು ಅಚ್ಚು ಇರಿಸಲಾಗುತ್ತದೆ ಮತ್ತು ಅದನ್ನು ನಿಖರವಾಗದ ಮಾಪನಕ್ಕೆ ಕತ್ತರಿಸಲಾಗುತ್ತದೆ. ಆಕಾರ ಹೊಂದಿರುವ ಮಣ್ಣಿನ ಭಾಗವನ್ನು ಕಾರ್ಖಾನೆಯ ಲೋಗೋ ಇರುವ ಮತ್ತೊಂದು ಯಂತ್ರದ ಮೇಲೆ ಇರಿಸಲಾಗುತ್ತದೆ. ಕೊನೆಗೆ ಆ ಯಂತ್ರವು ಅದನ್ನು ಟೈಲ್ ಆಗಿ ಆಕಾರಗೊಳಿಸುತ್ತದೆ.

ಗುಣಮಟ್ಟ ಮತ್ತು ಉಪಯೋಗ

ಬೇಸಿಗೆಯಲ್ಲಿ ಈ ಹಂಚಗಳು ತಂಪಾಗಿರುತ್ತವೆ. ಇವುಗಳನ್ನು ಅಡುಗೆಕೋಣೆಗಳ ಛಾವಣಿಗೆ (ಹೊಗೆಯಿಂದ ತಪ್ಪಿಸಿಕೊಳ್ಳಲು) ಮತ್ತು ಸ್ನಾನಗೃಹಗಳಿಗೆ ಬಳಸುತ್ತಾರೆ. ಈ ಮಣ್ಣಿನ ಹಂಚುಗಳನ್ನು ತೀವ್ರ ಶಾಖದ ಅಡಿಯಲ್ಲಿ ಜೋಡಿಸಲಾಗಿರುವುದರಿಂದ, ಬೆಂಕಿಯ ಹಾನಿಯ ನಿಯಂತ್ರಣವನ್ನು ಬಮಾಡುತ್ತದೆ. ಜೇಡಿಮಣ್ಣಿನ ಹಂಚುಗಳು ಸಾಮಾನ್ಯವಾಗಿ ಬಿಳಿ, ಹಳದಿ, ಕಿತ್ತಳೆ ಅಥವಾ ಕಂದು ಬಣ್ಣದಲ್ಲಿರುತ್ತವೆ. ಈ ಹಂಚುಗಳನ್ನು ಆದ್ಯತೆಗೆ ತಕ್ಕಂತೆ ಶೈಲಿ ಹಾಗೂ ಬಣ್ಣಗಳಲ್ಲಿ ಬದಲಾಯಿಸಬಹುದು.ಮಣ್ಣಿನ ಹಂಚುಗಳು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಹಂಚುಗಳಲ್ಲಿರುವ ಇತರ ವಸ್ತುಗಳನ್ನು ಕೈಯಿಂದ ತೆಗೆದುಹಾಕಲಾಗುತ್ತದೆ. ಇದನ್ನು ಒಂದು ಗೂಡಿನಲ್ಲಿ ಜೇಡಿಮಣ್ಣಿನ ಹಂಚಿನ ಸಾಂದ್ರತೆ ಸಮಯ ಮತ್ತು ತಾಪಮಾನಕ್ಕೆ ಸರಿಯಾಗಿ ಬಿಸಿ ಮಾಡಲಾಗುತ್ತದೆ. .

ಉಲ್ಲೇಖಗಳು

Tags:

ಮಂಗಳೂರು ಹಂಚು ವ್ಯುತ್ಪತ್ತಿಮಂಗಳೂರು ಹಂಚು ಇತಿಹಾಸಮಂಗಳೂರು ಹಂಚು ತಯಾರಿಸುವ ವಿಧಾನಮಂಗಳೂರು ಹಂಚು ಗುಣಮಟ್ಟ ಮತ್ತು ಉಪಯೋಗಮಂಗಳೂರು ಹಂಚು ಉಲ್ಲೇಖಗಳುಮಂಗಳೂರು ಹಂಚುಇಟಾಲಿಯನ್ಕರ್ನಾಟಕಜರ್ಮನ್ಸ್ಪ್ಯಾನಿಷ್ ಭಾಷೆ

🔥 Trending searches on Wiki ಕನ್ನಡ:

ಕರ್ನಾಟಕ ಸ್ವಾತಂತ್ರ್ಯ ಚಳವಳಿಶಾಲೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಯುರೋಪ್ಮಡಿವಾಳ ಮಾಚಿದೇವಧಾರವಾಡಸಂಸ್ಕಾರಜನಪದ ಕಲೆಗಳುರಾಮಾಯಣರೈತವಾರಿ ಪದ್ಧತಿಕಲಬುರಗಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮಂಗಳೂರುಜಯಂತ ಕಾಯ್ಕಿಣಿಈಸೂರುವಾಟ್ಸ್ ಆಪ್ ಮೆಸ್ಸೆಂಜರ್ಕಲ್ಯಾಣಿಯೋನಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬಾಲ್ಯ ವಿವಾಹಸ್ವರಹಣ್ಣುದ್ವಿಗು ಸಮಾಸಒನಕೆ ಓಬವ್ವಊಟವ್ಯಾಪಾರ ಸಂಸ್ಥೆಸಿದ್ದಲಿಂಗಯ್ಯ (ಕವಿ)ಸಿದ್ದಪ್ಪ ಕಂಬಳಿಅಂಟುರುಡ್ ಸೆಟ್ ಸಂಸ್ಥೆಕನ್ನಡದಲ್ಲಿ ವಚನ ಸಾಹಿತ್ಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಹಾಗಲಕಾಯಿದಕ್ಷಿಣ ಕನ್ನಡವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಸರ್ವಜ್ಞಫುಟ್ ಬಾಲ್ಕಲ್ಲಂಗಡಿದಶಾವತಾರ1935ರ ಭಾರತ ಸರ್ಕಾರ ಕಾಯಿದೆಋಗ್ವೇದವಿಜಯಪುರದುಶ್ಯಲಾಅಮೇರಿಕ ಸಂಯುಕ್ತ ಸಂಸ್ಥಾನಬಂಜಾರನರೇಂದ್ರ ಮೋದಿಸಮುದ್ರಗುಪ್ತಮುದ್ದಣಶ್ರೀವಿಜಯಭಾರತದ ಸರ್ವೋಚ್ಛ ನ್ಯಾಯಾಲಯಮೋಕ್ಷಗುಂಡಂ ವಿಶ್ವೇಶ್ವರಯ್ಯಕ್ರೀಡೆಗಳುಬಡತನಹಾರೆವಿರಾಮ ಚಿಹ್ನೆಅಕ್ಕಮಹಾದೇವಿಕುಟುಂಬಮಾನ್ವಿತಾ ಕಾಮತ್ಮಾಸ್ಕೋಮೂಢನಂಬಿಕೆಗಳುಗಂಡಬೇರುಂಡಅರಬ್ಬೀ ಸಾಹಿತ್ಯರಸ(ಕಾವ್ಯಮೀಮಾಂಸೆ)ಇನ್ಸ್ಟಾಗ್ರಾಮ್ಭಾರತದ ಪ್ರಧಾನ ಮಂತ್ರಿನವರತ್ನಗಳುಪಠ್ಯಪುಸ್ತಕವಿನಾಯಕ ಕೃಷ್ಣ ಗೋಕಾಕಸನ್ನಿ ಲಿಯೋನ್ಸಂಭೋಗಪಾಂಡವರುಬೆಂಗಳೂರುರೇಡಿಯೋನೀನಾದೆ ನಾ (ಕನ್ನಡ ಧಾರಾವಾಹಿ)ಪರಿಸರ ವ್ಯವಸ್ಥೆ🡆 More