ಪವಿತ್ರ ಲೋಕೇಶ್: ನಟಿ

ಪವಿತ್ರ ಲೋಕೇಶ್ (ಜನನ ಸಿ.

೧೯೭೯) ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ಅವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು. ಅವರು ತನ್ನ ೧೬ ನೇ ವಯಸ್ಸಿನಲ್ಲಿ ಚೊಚ್ಚಲ ಪ್ರದರ್ಶನವನ್ನು ಮಾಡಿದರು ಮತ್ತು ನಂತರ ೧೫೦ ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರ ನಾಯಿ ನೆರಳು(೨೦೦೬) ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಯಿತು. ಆಕೆಯ ಸಹೋದರ ಆದಿ ಲೋಕೇಶ್ ಮತ್ತು ಪತಿ ಸುಚೇಂದ್ರ ಪ್ರಸಾದ್ ನಟರು.

ಪವಿತ್ರ ಲೊಕೇಶ
Bornc. ೧೯೭೯ (ವಯಸ್ಸು 44–45)
ಮೈಸೂರು, ಕರ್ಣಾಟಕ, ಭಾರತ ದೇಶ
Nationalityಭಾರತೀಯ
Occupationನಟಿ
Years active೧೯೯೪–ಪ್ರಸ್ತುತ
Spouseಸುಚೇಂದ್ರ ಪ್ರಸಾದ (ವಿವಾಹ 2007)
Children2

ಆರಂಭಿಕ ಜೀವನ

ಪವಿತ್ರ ಮೈಸೂರಿನಲ್ಲಿ ಜನಿಸಿದರು. ಆಕೆಯ ತಂದೆ ಲೋಕೇಶ್ ಒಬ್ಬ ನಟ ಮತ್ತು ಅವರ ತಾಯಿ ಶಿಕ್ಷಕರಾಗಿದ್ದರು. ಅವರಿಗೆ ಕಿರಿಯ ಸಹೋದರ, ಆದಿ. ಪವಿತ್ರಾ ೯ ನೇ ತರಗತಿಯಲ್ಲಿದ್ದಾಗ ಲೋಕೇಶ್ ನಿಧನರಾದರು. ತನ್ನ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಶೇ. ೮೦ ರಷ್ಟು ಅಂಕಗಳನ್ನು ಪಡೆದುಕೊಂಡ ನಂತರ ಅವರು ಭಾರತೀಯ ನಾಗರಿಕ ಸೇವೆಯನ್ನು ಸೇರಲು ಬಯಸಿದರು. ಆದಾಗ್ಯೂ, ತನ್ನ ತಂದೆಯ ಮರಣದ ನಂತರ, ಆಕೆ ತನ್ನ ತಾಯಿಗೆ ಸಹಾಯ ಮಾಡಲು ನಿರ್ಧರಿಸಿದರು. ಆಕೆಯೇ ಹೇಳಿದಂತೆ ಅವರ ತಾಯಿ "ಕುಟುಂಬದ ಜವಾಬ್ದಾರಿಗಳಿಂದಾಗಿ ಅತಿಯಾಗಿ ಹೊರೆಹೊತ್ತವರು" ಆಗಿದ್ದರು. ಆರಂಭದಲ್ಲಿ ತನ್ನ ತಂದೆಯ ಹಾದಿಯನ್ನೇ ವೃತ್ತಿಜೀವನದಲ್ಲಿ ಅನುಸರಿಸಲು ಇಷ್ಟವಿರಲಿಲ್ಲ. ಅವರು ಏಸ್‌ ಬಿ ಬಿ ಅರ್ ಮಹಾಜನ ಪ್ರಥಮ ದರ್ಜೆ ಕಾಲೇಜ್, ಮೈಸೂರುನಿಂದ ವಾಣಿಜ್ಯ ವಿಷಯದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ಗಾಗಿ ಕಾಣಿಸಿಕೊಂಡರು. ತನ್ನ ಮೊದಲ ಪ್ರಯತ್ನದಲ್ಲಿ ಪರೀಕ್ಷೆಯನ್ನು ಪೂರ್ಣಗೊಳಿಸಲು ವಿಫಲವಾದ ನಂತರ, ಅವರು ಬೆಂಗಳೂರಿಗೆ ತೆರಳುವ ಮೊದಲು ಅಭಿನಯಿಸಿದರು.

ವೃತ್ತಿಜೀವನ

ಚಲನಚಿತ್ರಗಳು

ನಟ ಅಂಬರೀಶರ ಸಲಹೆಯ ಮೇರೆಗೆ ಪವಿತ್ರ ಅವರು ೧೯೯೪ ರಲ್ಲಿ ನಟಿಸಿದರು. ಮಿಸ್ಟರ್ ಅಭಿಷೇಕ್ ಚಿತ್ರದಲ್ಲಿ ಆಕೆ ಮೊದಲ ಬಾರಿಗೆ ಅಭಿನಯಿಸಿದರು. ನಂತರದಲ್ಲಿ ಮುಖ್ಯ ಪಾತ್ರವನ್ನು ವಹಿಸಿದರು. ಅದೇ ವರ್ಷ, ಅವರು 'ಬಂಗಾರದ ಕಳಶ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಲನಚಿತ್ರಗಳಿಂದ ಅವರು ವಿಶೇಷವಾದ ಯಶಸ್ಸನ್ನು ಗಳಿಸಲಿಲ್ಲ. ಪವಿತ್ರ ಅವರು ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಮಾನವ ಸಂಪನ್ಮೂಲ ಸಲಹಾ ಕಂಪೆನಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಟಿ.ಎಸ್.ನಾಗಾಭರಣ ಅವರು ೧೯೯೬ ರಲ್ಲಿ ಬಿಡುಗಡೆಯಾದ ಅವರ ಜನುಮದ ಜೋಡಿ ಚಿತ್ರದಲ್ಲಿ ಅಭಿನಯಿಸಿದರು. ದಿ ಹಿಂದೂ ಪತ್ರಿಕೆಯಲ್ಲಿ ೨೦೦೬ ರ ಸಂದರ್ಶನವೊಂದರಲ್ಲಿ ಈ ಹಂತದ ಬಗ್ಗೆ ಮಾತನಾಡುತ್ತಾ ಅವರು, "ನಾನು ಎಂದಿಗೂ ಆರಾಮದಾಯಕವಾಗಿಲ್ಲ. ನಾನು ಏಕಾಂಗಿಯೆಂದು ಭಾವಿಸಿದ್ದೇನೆ. ಆದರೆ ನಾಗಾಭರಣರವರು ಒತ್ತಾಯಿಸಿದಾಗ ನಾನು ಒಂದು ನಿರ್ಣಯ ತೆಗೆದುಕೊಳ್ಳಲೇಬೇಕಾಯಿತು. ಪೂರ್ವಸಿದ್ಧತೆಗಳಿಲ್ಲದಿದ್ದರೂ ನಾನು ಚಲನಚಿತ್ರಗಳನ್ನು ನನ್ನ ವೃತ್ತಿಜೀವನವನ್ನಾಗಿ ಸ್ವಿಕರಿಸಲು ನಿರ್ಧರಿಸಿದೆ. ಹೀಗೆ ನಿರ್ಧಾರಕ್ಕೆ ಧುಮುಕುವ ಏಕೈಕ ಕಾರಣವೆಂದರೆ ನನ್ನ ಪರಿಸ್ಥಿತಿ. ಗಾಡ್ಫಾದರ್ ಅಥವಾ ಮಾರ್ಗದರ್ಶಿ ಇಲ್ಲದೆ ಹೀಗೆಯೇ ಮುಂದುವರೆಯುವುದು ಕಠಿಣವಾಗಿದೆ.ಆದ್ದರಿಂದ ನಾನು ಸಿಕ್ಕ ಪ್ರತಿ ಚಿತ್ರದಲ್ಲಿಯೂ ಅಭಿನಯಿಸುತ್ತೇನೆ." ಎಂದು ಹೇಳಿದ್ದರು. ಅವರ ಎತ್ತರದ ಕಾರಣ ಚಿತ್ರೋದ್ಯಮದಲ್ಲಿ ಪ್ರಮುಖ ಪಾತ್ರಗಳನ್ನು ನೀಡಲಾಗುತ್ತಿಲ್ಲ. ಅವರು ಪೋಷಕ ಪಾತ್ರಗಳನ್ನು ನಿರ್ವಹಿಸುವುದನ್ನು ಮುಂದುವರಿಸಿದರು. ಉಲ್ಟಾ ಪಲ್ಟಾ (೧೯೯೭) ಎಂಬ ಹಾಸ್ಯಚಿತ್ರದಲ್ಲಿ, ಅವರು ರಕ್ತಪಿಶಾಚಿಯಾಗಿ ಅಭಿನಯಿಸಿದ್ದರು.

ಎಸ್. ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರ ನಾಯಿ ನೆರಳು ಚಿತ್ರದಲ್ಲಿ ಅಭಿನಯಕ್ಕಾಗಿ ಪವಿತ್ರ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ದೂರದರ್ಶನದಲ್ಲಿ ಪ್ರಸಾರವಾದ ಗುಪ್ತಗಾಮಿನಿ ಧಾರಾವಾಹಿಯಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ಕಾಸರವಳ್ಳಿ ಅವರು ವಿಧವೆಯಾದ ವೆಂಕಟಲಕ್ಷ್ಮಿ, ಸೊಸೆ ಮತ್ತು ಇತರ ಎರಡು ಪಾತ್ರಗಳ ತಾಯಿಯಾಗಿ ನಟಿಸಲು ಅವಕಾಶವನ್ನು ನೀಡಿದರು. ಈ ಚಿತ್ರವು ಒಂದೇ ಛಾವಣಿಯಡಿಯಲ್ಲಿ ವಾಸಿಸುವ ಈ ಮೂರು ಪಾತ್ರಗಳ ಸುತ್ತಲೂ ಸುತ್ತುತ್ತದೆ ಮತ್ತು ಸಂಘರ್ಷ-ಹಿಡಿದ ಸಮಾಜದಲ್ಲಿ ಪೀಳಿಗೆಯ ಅಂತರವನ್ನು ಬಹಿರಂಗಪಡಿಸುವ ದೃಷ್ಟಿಕೋನಗಳನ್ನು ತೋರಿಸುತ್ತದೆ. ಸಂಪ್ರದಾಯ ಮತ್ತು ಬಯಕೆಗಳ ನಡುವೆ ಸೆಳೆಯಲಾದ ಮಹಿಳೆಯ ಪಾತ್ರದಲ್ಲಿ ಅವರು ಮಾಡಿದ ಅಭಿನಯಕ್ಕೆ ಅವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ದೂರದರ್ಶನ

ನಾಗಭರಣರವರ ದೂರದರ್ಶನ ಧಾರಾವಾಹಿ "ಜೀವನ್ಮುಖಿ" ಯಲ್ಲಿ, ಅವರು ಮಧ್ಯವಯಸ್ಕ ವಿಧವೆಯಾಗಿ ನಟಿಸಿದ್ದಾರೆ. ಅದು ಉತ್ತಮವಾದ ಪಾತ್ರವಾಗಿತ್ತು. 2000 ನೇ ದಶಕದ ಆರಂಭದಲ್ಲಿ ಪ್ರಸಾರವಾದ ಧಾರಾವಾಹಿ ಗುಪ್ತಗಾಮಿನಿಯಲ್ಲಿನ ಪಾತ್ರದಿಂದಲೂ ಅವರು ಮನ್ನಣೆಯನ್ನು ಪಡೆದರು. "ಅವರು ಮಾನವೀಯ ಭಾವನೆಗಳ ಜಾಲದಲ್ಲಿ ಸೆಳೆಯಲ್ಪಟ್ಟ ಪತ್ನಿ, ತಾಯಿ ಮತ್ತು ಸಹೋದರಿ." ಆ ಸಮಯದಲ್ಲಿ, ಅವರು ಗೆಳತಿ, ನೀತಿಚಕ್ರ, ಧರಿತ್ರಿ, ಪುನರ್ಜನ್ಮ ಮತ್ತು ಈಶ್ವರಿ ಮುಂತಾದ ಇತರ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.

ಚಲನಚಿತ್ರಗಳ ಪಟ್ಟಿ

ಕನ್ನಡ

  • ಮಿಸ್ಟರ್ ಅಭಿಷೇಕ್ (೧೯೯೫)
  • ಬಂಗಾರದ ಕಳಶ (೧೯೯೫)
  • ಜನುಮದ ಜೋಡಿ (೧೯೯೬)
  • ಉಲ್ಟಾಪಲ್ಟಾ (೧೯೯೭)
  • ತವರಿನ ತೇರು (೧೯೯೭)
  • ಮಾವನ ಮಗಳು (೧೯೯೭)
  • ಕುರುಬನ ರಾಣಿ (೧೯೯೮)
  • ಜಗತ್ ಕಿಲಾಡಿ (೧೯೯೮)
  • ಹಬ್ಬ (೧೯೯೯)
  • ಯಜಮಾನ (೨೦೦೦)
  • ಅಮ್ಮ (೨೦೦೧)
  • ಹುಚ್ಚ (೨೦೦೧)
  • ಮುಸ್ಸಂಜೆ (೨೦೦೧)
  • ನಮ್ಮ ಸಂಸಾರ ಆನಂದ ಸಾಗರ (೨೦೦೧)
  • ಶಿವಪ್ಪ ನಾಯಕ (೨೦೦೧)
  • ನಾನು ನಾನೆ (೨೦೦೨)
  • ಮೇಕಪ್ (೨೦೦೨)
  • ಬಾರ್ಡರ್ (೨೦೦೩)
  • ರಾಜಾ ನರಸಿಂಹ (೨೦೦೩)
  • ಒಂದಾಗೋಣ ಬಾ (೨೦೦೩)
  • ಬಾಲ ಶಿವ (೨೦೦೩)
  • ರೀ ಸ್ವಲ್ಪ ಬರ್ತೀರಾ (೨೦೦೩)
  • ನಮ್ಮ ಪ್ರೀತಿಯ ರಾಮು (೨೦೦೩)
  • ಎಕ್ಸ್ಕ್ಯೂಸ್ ಮಿ (೨೦೦೩)
  • ವಿಜಯಸಿಂಹ (೨೦೦೩)
  • ಸ್ವಾತಿ ಮುತ್ತು (೨೦೦೩)
  • ಮಲ್ಲ (೨೦೦೪)
  • ಮೊಂಡ (೨೦೦೪)
  • ನಿಜ (೨೦೦೪)
  • ಲವ್ (೨೦೦೪)
  • ರಾಕ್ಷಸ (೨೦೦೫)
  • ಆಕಾಶ್ (೨೦೦೫)
  • ಗೌರಮ್ಮ (೨೦೦೫)
  • ಶುಭಂ (೨೦೦೬)
  • ಪಾಂಡವರು (೨೦೦೬)
  • ಸ್ಟುಡೆಂಟ್ (೨೦೦೬)
  • ಈ ರಾಜೀವ್ ಗಾಂಧಿ ಅಲ್ಲ (೨೦೦೭)
  • ನಾಯಿ ನೆರಳು (೨೦೦೭)
  • ಈ ಪ್ರೀತಿ ಒಂಥರಾ (೨೦೦೭)
  • ಮಸ್ತಿ (೨೦೦೭)
  • ಮನಸುಗಳ ಮಾತು ಮಧುರ (೨೦೦೮)
  • ಸತ್ಯ ಇನ್ ಲವ್ (೨೦೦೮)
  • ಮಿ. ಗರಗಸ (೨೦೦೮)
  • ಮೊಗ್ಗಿನ ಜಡೆ (೨೦೦೮)
  • ಮಂಡಕ್ಕಿ (೨೦೦೮)
  • ಸವಾರಿ (೨೦೦೯)
  • ಹ್ಯಾಟ್ರಿಕ್ ಹೊಡಿ ಮಗ (೨೦೦೯) ದುರ್ಗಿಯಾಗಿ
  • ಅನಿಶ್ಚಿತ (೨೦೧೦)
  • ಹೋ (೨೦೧೦)
  • ಹೋಳಿ (೨೦೧೦)
  • ಕನಸೆಂಬ ಕುದುರೆಯನೇರಿ (೨೦೧೦)
  • ಕಾಲ್ಗೆಜ್ಜೆ (೨೦೧೧)
  • ಹೋರಿ (೨೦೧೧)
  • ದುಡ್ಡೇ ದೊಡ್ಡಪ್ಪ (೨೦೧೧)
  • ಆಟ (೨೦೧೧)
  • ಬೇಟೆ (೨೦೧೧)
  • ಪ್ರಾರ್ಥನೆ (೨೦೧೨) ಶಾಂತಿಯಾಗಿ
  • ಗಾಂಧಿ ಸ್ಮೈಲ್ಸ್ (೨೦೧೨)
  • ಬರ್ಫಿ (೨೦೧೩)
  • ಸ್ನೇಹ ಯಾತ್ರೆ (೨೦೧೩)
  • ಘರ್ಷಣೆ (೨೦೧೪)
  • ರೋಸ್ (೨೦೧೪)
  • ಬಹಾದ್ದೂರ್ (೨೦೧೪)
  • ನೀನಾದೆ ನಾ (೨೦೧೪)
  • ಚಿರಾಯು (೨೦೧೪)
  • ಎಂದೆಂದಿಗೂ (೨೦೧೫)
  • ಲೊಡ್ಡೆ (೨೦೧೫)
  • ಡವ್ (೨೦೧೫)
  • ಗಂಗಾ (೨೦೧೫) ಗಂಗಾಳ ತಂಗಿಯಾಗಿ
  • ನಾನು ಮತ್ತು ವರಲಕ್ಷ್ಮಿ (೨೦೧೬)
  • ಅಪೂರ್ವ (೨೦೧೬)
  • ಪೊಗರು (೨೦೨೧) ತಾಯಿಯಾಗಿ

ತೆಲಗು

  • ದೊಂಗೊದು (೨೦೦೩)
  • ಆಲಯಮ್ (೨೦೦೮)
  • ಪ್ರಸ್ಥಾನಂ (೨೦೧೦) ಮಿತ್ರಾಳ ತಾಯಿಯಾಗಿ
  • ಬಾವ (೨೦೧೦) ವೀರಬಾಹುವಿನ ತಾಯಿಯಾಗಿ
  • ಆರೆಂಜ್ (೨೦೧೦) ಜಾನುವಿನ ತಾಯಿಯಾಗಿ
  • ಶಕ್ತಿ (೨೦೧೧) ಐಶ್ವರ್ಯಾಳ ತಾಯಿಯಾಗಿ
  • ರೇಸ್ ಗುರ್ರಂ (೨೦೧೪) ರಾಮ್ ಮತ್ತು ಲಕ್ಕಿಯರ ತಾಯಿಯಾಗಿ
  • ಕರೆಂಟ್ ದೀಗ (೨೦೧೪) ಪಾರ್ವತಿಯಾಗಿ
  • ಲಕ್ಷ್ಮಿ ರಾವೆ ಮಾ ಇಂತಿಕಿ (೨೦೧೪)
  • ಪಟಾಸ್ (೨೦೧೫) ಕಲ್ಯಾಣ್ ತಾಯಿಯಾಗಿ
  • ಮಳ್ಳಿ ಮಳ್ಳಿ ಇದಿ ರಾಣಿ ರೋಜು (೨೦೧೫) ಪಾರ್ವತಿಯಾಗಿ
  • ಟೆಂಪರ್ (೨೦೧೫) ಲಕ್ಷ್ಮಿಯ ತಾಯಿಯಾಗಿ
  • ತುಂಗಭದ್ರ (೨೦೧೫) ಗೌರಿಯ ತಾಯಿಯಾಗಿ
  • ಯೆವಡೆ ಸುಬ್ರಮಣ್ಯಮ್ (೨೦೧೫) ಋಷಿಯ ತಾಯಿಯಾಗಿ
  • ಸನ್ ಆಫ್ ಸತ್ಯಮೂರ್ತಿ (೨೦೧೫) ವೀರಜ್ ಆನಂದನ ತಾಯಿಯಾಗಿ
  • ಬೆಂಗಾಲ್ ಟೈಗರ್ (೨೦೧೫)
  • ಪಂಡಗಾ ಚೇಸ್ಕೋ (೨೦೧೫) ಕಾರ್ತಿಕನ ತಾಯಿಯಾಗಿ
  • ಬ್ರೂಸ್ ಲೀ ದ ಫೈಟರ್ (೨೦೧೫) ಕಾರ್ತಿಕನ ತಾಯಿಯಾಗಿ
  • ಲೋಫರ್ (೨೦೧೫) ಮೌನಿಯ ತಾಯಿಯಾಗಿ
  • ಕೃಷ್ಣಾಷ್ಟಮಿ (೨೦೧೬)
  • ಡಿಕ್ಟೇಟರ್ (೨೦೧೬) ರಾಜಕುಮಾರನ ಹೆಂಡತಿಯಾಗಿ
  • ಸ್ಪೀಡುನ್ನೊಂಡು (೨೦೧೬)
  • ಕತಮರಯುದು (೨೦೧೭)
  • ಜೈ ಲವ ಕುಶ (೨೦೧೭)
  • ಎಂಸಿಎ (ಮಿಡ್ಲ್ ಕ್ಲಾಸ್ ಅಬ್ಬಾಯಿ) (೨೦೧೭)
  • ಅಜ್ಞಾತವಾಸಿ (೨೦೧೮) ಸುಕುಮಾರಿಯ ತಾಯಿಯಾಗಿ
  • ಜಯಸಿಂಹ (೨೦೧೮)

ಕಿರುತೆರೆ

  • ಜೀವನ್ಮುಖಿ
  • ಗುಪ್ತಗಾಮಿನಿ
  • ಗೆಳತಿ
  • ನೀತಿಚಕ್ರ
  • ಧರಿತ್ರಿ
  • ಪುನರ್ಜನ್ಮ
  • ಈಶ್ವರಿ (೨೦೦೪)
  • ಸ್ವಾಭಿಮಾನ
  • ಒಲವೆ ನಮ್ಮ ಬದುಕು (೨೦೦೭)
  • ಪುನಗ್ಗ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

  • ೨೦೦೫–೦೬: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಉತ್ತಮ ನಟಿ - "ನಾಯಿ ನೆರಳು"
    ಫಿಲ್ಮ್ ಫೇರ್ ಪ್ರಶಸ್ತಿ ದಕ್ಷಿಣ
  • ೬೩ನೇ ಫಿಲ್ಮ್ ಫೇರ್ ಪ್ರಶಸ್ತಿ ದಕ್ಷಿಣ - ೨೦೧೫: ನಾಮನಿರ್ದೇಶನ, ಉತ್ತಮ ಪೋಷಕ ನಟಿ - ತೆಲಗು - "ಮಳ್ಳಿ ಮಳ್ಳಿ ಇದಿ ರಾಣಿ ರೋಜು"
    ದಕ್ಷಿಣ ಭಾರತೀಯ ಅಂತಾರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ
  • ೫ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ-೨೦೧೫: ನಾಮನಿರ್ದೇಶನ, ಪೋಷಕ ಪಾತ್ರದಲ್ಲಿ ಉತ್ತಮ ನಟಿ (ತೆಲಗು) - "ಮಳ್ಳಿ ಮಳ್ಳಿ ಇದಿ ರಾಣಿ ರೋಜು"

ಉಲ್ಲೇಖಗಳು

Tags:

ಪವಿತ್ರ ಲೋಕೇಶ್ ಆರಂಭಿಕ ಜೀವನಪವಿತ್ರ ಲೋಕೇಶ್ ವೃತ್ತಿಜೀವನಪವಿತ್ರ ಲೋಕೇಶ್ ಚಲನಚಿತ್ರಗಳ ಪಟ್ಟಿಪವಿತ್ರ ಲೋಕೇಶ್ ಕಿರುತೆರೆಪವಿತ್ರ ಲೋಕೇಶ್ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಪವಿತ್ರ ಲೋಕೇಶ್ ಉಲ್ಲೇಖಗಳುಪವಿತ್ರ ಲೋಕೇಶ್ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿನಾಯಿ ನೆರಳು

🔥 Trending searches on Wiki ಕನ್ನಡ:

ತಲಕಾಡುಸಂಧಿದ್ಯುತಿಸಂಶ್ಲೇಷಣೆಕನ್ನಡ ಗಣಕ ಪರಿಷತ್ತುಉಡುಪಿ ಜಿಲ್ಲೆರಾಷ್ಟ್ರಕವಿವರ್ಗೀಯ ವ್ಯಂಜನರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುವಿಜಯ ಕರ್ನಾಟಕಯಜಮಾನ (ಚಲನಚಿತ್ರ)ಮಾರುತಿ ಸುಜುಕಿಕುಬೇರಕರ್ನಾಟಕ ವಿಧಾನ ಪರಿಷತ್ಹದಿಬದೆಯ ಧರ್ಮಕರ್ನಾಟಕದ ಶಾಸನಗಳುದಲಿತಸಮರ ಕಲೆಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಭಾರತದಲ್ಲಿ ಕೃಷಿಕರ್ನಾಟಕದ ಜಿಲ್ಲೆಗಳುಕೈಗಾರಿಕೆಗಳುಡಿಸ್ಲೆಕ್ಸಿಯಾಏಡ್ಸ್ ರೋಗಎಸ್.ಎಲ್. ಭೈರಪ್ಪಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಇತಿಹಾಸಗುಪ್ತ ಸಾಮ್ರಾಜ್ಯಚಾಮರಾಜನಗರಕರ್ನಾಟಕದ ವಾಸ್ತುಶಿಲ್ಪಸಂಭೋಗಕನ್ನಡ ಸಾಹಿತ್ಯ ಪರಿಷತ್ತುಬಾದಾಮಿಚಾಮುಂಡರಾಯಹಣವಿಮರ್ಶೆನಯಸೇನಕ್ಯಾರಿಕೇಚರುಗಳು, ಕಾರ್ಟೂನುಗಳುರಾಷ್ಟ್ರೀಯ ಉತ್ಪನ್ನಜೈಪುರಜಾನಪದಗೋಕಾಕ್ ಚಳುವಳಿಬಸವೇಶ್ವರಜನಪದ ಕಲೆಗಳುನಾಯಿಹರಪ್ಪಕರ್ನಾಟಕದ ಹಬ್ಬಗಳುಗೋಲ ಗುಮ್ಮಟರಾಷ್ಟ್ರೀಯ ಸೇವಾ ಯೋಜನೆನೇಮಿಚಂದ್ರ (ಲೇಖಕಿ)ಕಲಬುರಗಿಲೋಕಸಭೆಜನ್ನಮಗಧಎಚ್ ೧.ಎನ್ ೧. ಜ್ವರಡಿ.ವಿ.ಗುಂಡಪ್ಪಆರ್ಯಭಟ (ಗಣಿತಜ್ಞ)ಪಂಡಿತಾ ರಮಾಬಾಯಿವಾಯು ಮಾಲಿನ್ಯಭಾರತದ ಭೌಗೋಳಿಕತೆಯೂಟ್ಯೂಬ್‌ಅಲೆಕ್ಸಾಂಡರ್ನೈಸರ್ಗಿಕ ಸಂಪನ್ಮೂಲಕರ್ನಾಟಕದಲ್ಲಿ ವನ್ಯಜೀವಿಧಾಮಗಳುಬೇಲೂರುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಇಮ್ಮಡಿ ಪುಲಿಕೇಶಿಮಂಡಲ ಹಾವುಅನುಭವ ಮಂಟಪಗೋಕರ್ಣಪುಟ್ಟರಾಜ ಗವಾಯಿಸಂಸ್ಕಾರಸಂಖ್ಯಾಶಾಸ್ತ್ರಚೆನ್ನಕೇಶವ ದೇವಾಲಯ, ಬೇಲೂರುವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನತೆಲುಗುದರ್ಶನ್ ತೂಗುದೀಪ್ರಾಮಪೂರ್ಣಚಂದ್ರ ತೇಜಸ್ವಿ🡆 More