ಜೂನ್

ಜೂನ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಆರನೇ ತಿಂಗಳು.

ಈ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಜೂನ್ ೨೦೨೪

ಜೂನ್
Flaming June (1895) by Lord Leighton

ಜೂನ್ - ಕ್ರಿಸ್ತವರ್ಷದ ಆರನೆಯ ತಿಂಗಳು. ಇದರಲ್ಲಿ 30 ದಿವಸಗಳಿವೆ. ರೋಮನ್ ಮತ್ತು ಲ್ಯಾಟಿನ್ ಪುರಾಣಸಾಹಿತ್ಯಗಳಲ್ಲಿ ಕಂಡುಬರುವ ಪ್ರಧಾನ ದೇವತೆಯಾದ ಜೂನೋಳ ಗೌರವಾರ್ಥವಾಗಿ ಈ ತಿಂಗಳಿಗೆ ಜೂನ್ ಎಂಬ ಹೆಸರು ಬಂತೆಂದು ರೋಮ್ ದೇಶದ ಸಾಹಿತ್ಯಯುಗದ ಕೊನೆಯ ಕವಿಯಾದ ಓವಿಡ್ (ಕ್ರಿ.ಪೂ. 43-ಕ್ರಿ.ಶ. 18) ತಿಳಿಸಿದ್ದಾನೆ. ಮಯೊರೀಸ್ ಪದದಿಂದ ಮೇ (ನೋಡಿ- ಮೇ) ಪದ ನಿಷ್ಪನ್ನವಾದಂತೆ ಯೂನಿಯೊರೀಸ್ ಪದದಿಂದ ಜೂನ್ ಪದ ನಿಷ್ಪನ್ನವಾಗಿರಬಹುದೆಂದು ಓವಿಡ್‍ನ ಅಭಿಪ್ರಾಯ. ಮಯೊರೀಸ್ ಮತ್ತು ಯೂನಿಯೊರೀಸ್ ಎಂಬುವು ಅನುಕ್ರಮವಾಗಿ ಯೌವನ ಮತ್ತು ಪ್ರೌಢಾವಸ್ಥೆಯನ್ನು ಸೂಚಿಸುತ್ತವೆ. ಜೂನ್ ಎಂಬ ಹೆಸರು ಯೆಹೂದ್ಯೇತರ ವ್ಯಕ್ತಿಯಾದ ಜೂನಿಯಸನನ್ನು ಅಥವಾ ಜೂನಿಯಸ್ ಬ್ರೂಟಸನ ರಾಯಭಾರಿಯನ್ನು ಕುರಿತದ್ದು ಎಂದು ಕೆಲವರ ಅಭಿಮತ. ಲ್ಯಾಟಿನಿನ ಹಳೆಯ ತಾರೀಖು ಪಟ್ಟಿಗಳಲ್ಲಿ ಈ ತಿಂಗಳನ್ನು ನಾಲ್ಕನೆಯ ತಿಂಗಳಾಗಿ ಪರಿಗಣಿಸಿದ್ದುಂಟು. ಆಗ 30 ದಿವಸಗಳನ್ನು ಈ ತಿಂಗಳಲ್ಲಿ ಕಾಣಿಸಿತ್ತೆಂದು ಹೇಳಲಾಗಿದೆ. ತಾರೀಖು ಪಟ್ಟಿಯ ಪರಿಷ್ಕರಣ ಸಮಯದಲ್ಲಿ ಜೂಲಿಯನ್ 29 ದಿವಸಗಳನ್ನು ಈ ತಿಂಗಳಿಗೆ ವಿಧಾಯಕ ಮಾಡಿದ್ದು ಅನಂತರ 30ನೆಯ ದಿವಸವನ್ನು ಜೂಲಿಯಸ್ ಸೀಸರ್ ಸೇರಿಸಿದ. ಜೂನ್ ತಿಂಗಳನ್ನು ಆಂಗ್ಲ್ಯೋಸ್ಯಾಕ್ಸನರು ಶುಷ್ಕ ತಿಂಗಳೆಂದೂ ನಡುಬೇಸಗೆಯ ತಿಂಗಳೆಂದೂ ಕರೆದಿದ್ದರು. ಭಾರತೀಯ ಪಂಚಾಂಗದ ರೀತ್ಯ ವೈಶಾಖ ಜ್ಯೇಷ್ಠಮಾಸಗಳು ಸಾಧಾರಣವಾಗಿ ಈ ತಿಂಗಳಲ್ಲಿ ಸೇರಿಕೊಂಡಿರುತ್ತವೆ. ಕರ್ಕಾಟಕ ಸಂಕ್ರಮಣ (ಸಮ್ಮರ್ ಸಾಲ್ಸ್‍ಟೀಸ್) ಸಂಭವಿಸುವುದು ಈ ತಿಂಗಳಲ್ಲಿಯೇ.

ರಜೆಗಳು / ಆಚರಣೆಗಳು

ಜೂನ್ 
June, from the Très riches heures du duc de Berry
ಜೂನ್ 
June, Leandro Bassano
ಜೂನ್ 
Trooping the Colour is celebrated in June in ಲಂಡನ್
  • ಮೂರನೇ ಭಾನುವಾರ ವಿಶ್ವದಾದ್ಯಂತ ತಂದೆ ದಿನ (Father's day) ವಾಗಿ ಆಚರಿಸಲ್ಪಡುತ್ತದೆ. ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ ಜೂನ್ಜೂ ೫ ರಂದು ಕುರುಡರದಿನವೆಂಡೂ, ಫ್ರಾನ್ಸನಲ್ಲಿ ತಾಯಂದಿರ ದಿನವೆಂದು ಮತ್ತು ಹಂಗೇರಿ ಎಂಬ ದೇಶದಲ್ಲಿ ಶಿಕ್ಷಕದಿನವೆಂದು ಮತ್ತು ಐಸ್ಲ್ಯಾಂಡನಲ್ಲಿ ಸಮುದ್ರ ಕೆಲಸಗಾರದಿನವೆಂದು ಆಚರಿಸಲಾಗುತ್ತದೆ.ಚೀನಾದಲ್ಲಿ ಜೂನ್ ೧೧ ರಂದು ಚೀನಾದ ಸಾಂಸ್ಕೃತಿಕ ಪರಂಪರೆಯ ದಿನವೆಂದು ಆಚರಿಸಲಾಗುತ್ತದೆ.ಜೂನ್ ೧೨ ರಂದು ಆಸ್ಟ್ರಿಯಾ ಮತ್ತು ಬೆಲ್ಜಿಯಂ ದೇಶಗಳಲ್ಲಿ ತಂದೆಯ ದಿನವೆಂದು ಮತ್ತು ಲಕ್ಸೆಂಬರ್ಗ್ನಲ್ಲಿ ತಾಯಂದಿರ ದಿನವೆಂದು ಆಚರಿಸುತ್ತಾರೆ.ಜೂನ್ ೩೦ ರಂದು ಅಮೆರಿಕಾದಲ್ಲಿ ರಾಷ್ಟ್ರೀಯಾ ಬಾಂಬ್ ಸಿಡಿಸಿದ ದಿನವೆಂದು ಆಚರಿಸಲಾಗುತ್ತದೆ.ಜೂನ್ ೨೬ ರಂದು ಹೈಟಿಯಲ್ಲಿ ತಂದೆಯ ದಿನವೆಂದು ,ಕೀನ್ಯಾದಲ್ಲಿ ತಾಯಂದಿರ ದಿನವೆಂದು ಆಚರಿಸಲಾಗುತ್ತದೆ.ಜೂನ್ ೨೫ ರಂದು ಅಮೆರಿಕಾದಲ್ಲಿ ಸಶಸ್ತ್ರ ಪಡೆದ ದಿನವೆಂದು ಮತ್ತು ರಷ್ಯಾದಲ್ಲಿ ಹೂಡಿಕೆದಾರರ ದಿನವೆಂದು ಹಾಗು ನೆದರ್ಲ್ಯಾಂಡನಲ್ಲಿ ಯೋಧ್ರ ದಿನವೆಂದು ಆಚರಿಸಲಾಗುತ್ತದೆ. ಫಿಲಿಪೈನಲ್ಲಿ ಜೂನ್ ೧೨ ರಂದು ಸ್ವಾತಂತ್ರ್ಯದಿನವೆಂದು ಆಚರಿಸುತ್ತಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಇಲ್ಲದ ಆಚರಣೆಗಳು ಇವಾಗಿವೆ ಎಪ್ರಿಲ್ ೨೩ ರಿಂದ ಜೂನ್ ೧೧ ರ ವರೆಗು ಇರುವ ಜುಡಾಯಿಸಂನ ಒಮರ್ ಎಣಿಕೆ ಮತ್ತು ಜೂನ್ ೧೫ ರಂದು ಇರುವ ಹಿಂದೂ ಧರ್ಮದ ಏಕಾದಶಿ ಹಾಗು ಜೂನ್ ೧೦ ರಂದು ಇರುವ ಕೊರಿಯನ್ ಹಬ್ಬ ಇವೆಲ್ಲವು ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಇಲ್ಲದಿರುವ ಆಚರಣೆಗಳು.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್


ಜೂನ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಗ್ರೆಗೋರಿಯನ್ ಕ್ಯಾಲೆಂಡರ್ತಿಂಗಳುದಿನ

🔥 Trending searches on Wiki ಕನ್ನಡ:

ಅನುರಾಗ ಅರಳಿತು (ಚಲನಚಿತ್ರ)ಭಗವದ್ಗೀತೆಅಕ್ಕಮಹಾದೇವಿಮೈಗ್ರೇನ್‌ (ಅರೆತಲೆ ನೋವು)ಮಲ್ಲಿಗೆಭೂಕಂಪಸೀತೆಯೋನಿರೈತ ಚಳುವಳಿವಾಟ್ಸ್ ಆಪ್ ಮೆಸ್ಸೆಂಜರ್ಗುಡಿಸಲು ಕೈಗಾರಿಕೆಗಳುದಿಕ್ಸೂಚಿಮಾತೃಭಾಷೆರಾಯಲ್ ಚಾಲೆಂಜರ್ಸ್ ಬೆಂಗಳೂರುಡ್ರಾಮಾ (ಚಲನಚಿತ್ರ)ಚಿಂತಾಮಣಿಹನುಮ ಜಯಂತಿಎಸ್.ಎಲ್. ಭೈರಪ್ಪಎ.ಪಿ.ಜೆ.ಅಬ್ದುಲ್ ಕಲಾಂರಾವಣಸೂಫಿಪಂಥವಾದಿರಾಜರುವೀರಪ್ಪನ್ಸೈಯ್ಯದ್ ಅಹಮದ್ ಖಾನ್ಲಕ್ಷ್ಮೀಶ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಟೊಮೇಟೊಭಾರತದ ಇತಿಹಾಸವ್ಯವಹಾರಕೇಶಿರಾಜಕನ್ನಡದಲ್ಲಿ ಕಾದಂಬರಿ ಸಾಹಿತ್ಯಜೀವನಅಮೃತಧಾರೆ (ಕನ್ನಡ ಧಾರಾವಾಹಿ)ಶಬರಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಗುರು (ಗ್ರಹ)ಚಿತ್ರದುರ್ಗ ಕೋಟೆಎಳ್ಳೆಣ್ಣೆಹೊನ್ನಾವರಮಹಮದ್ ಬಿನ್ ತುಘಲಕ್ಕನ್ನಡ ಕಾವ್ಯರಾಮನುಡಿ (ತಂತ್ರಾಂಶ)ದೇವರ/ಜೇಡರ ದಾಸಿಮಯ್ಯಹಲ್ಮಿಡಿ ಶಾಸನಮಲೇರಿಯಾವಿಕ್ರಮಾರ್ಜುನ ವಿಜಯಕರ್ನಾಟಕದ ಸಂಸ್ಕೃತಿವಿರಾಟ್ ಕೊಹ್ಲಿಆರತಿಆದಿಚುಂಚನಗಿರಿಕಿತ್ತೂರು ಚೆನ್ನಮ್ಮಕ್ರಿಯಾಪದಕನಕದಾಸರುಲಸಿಕೆಶ್ರವಣಬೆಳಗೊಳಉಪ್ಪಿನ ಸತ್ಯಾಗ್ರಹಗಾಂಧಿ- ಇರ್ವಿನ್ ಒಪ್ಪಂದವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪ್ರಾಥಮಿಕ ಶಿಕ್ಷಣಈಸೂರುಕನ್ನಡ ಸಾಹಿತ್ಯ ಪರಿಷತ್ತುನೀರುಹಂಪೆದಿವ್ಯಾಂಕಾ ತ್ರಿಪಾಠಿಮಾನವ ಸಂಪನ್ಮೂಲ ನಿರ್ವಹಣೆಜಾಗತಿಕ ತಾಪಮಾನ ಏರಿಕೆಹೊಯ್ಸಳಗಿಡಮೂಲಿಕೆಗಳ ಔಷಧಿಭಾರತದ ಸ್ವಾತಂತ್ರ್ಯ ದಿನಾಚರಣೆಅಂತಿಮ ಸಂಸ್ಕಾರಮೈಸೂರು ಸಂಸ್ಥಾನಭಾರತದಲ್ಲಿನ ಚುನಾವಣೆಗಳುಹಾಸನತಾಜ್ ಮಹಲ್ವಿಭಕ್ತಿ ಪ್ರತ್ಯಯಗಳುಮೆಕ್ಕೆ ಜೋಳಪರಮಾಣುನಾಯಕ (ಜಾತಿ) ವಾಲ್ಮೀಕಿ🡆 More