ಖಾಜನ್ ಸಿಂಗ್

ಖಾಜನ್ ಸಿಂಗ್ ರವರು ಭಾರತೀಯ ಈಜುಗಾರ ಮತ್ತು ಮಾಜಿ ರಾಷ್ಟ್ರೀಯ ಚಾಂಪಿಯನ್.

ಜನನ ಮತ್ತು ವಿದ್ಯಾಭ್ಯಾಸ

1964ರ ಮೇ 6ರಂದು ಜನಿಸಿದರು. ದೆಹಲಿಯ ಸರೋಜಿನಿ ನಗರದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು.

ಕ್ರೀಡಾ ಜೀವನ

ಸಿಂಗ್ ರಾಜಧಾನಿ ಕೇಂದ್ರದಲ್ಲಿ ಸ್ವಲ್ಪ ಆಚೆಯಿರುವ ಸ್ಥಳೀಯ ಊರು ಮುನಿರ್ಕಾ ಗಾಂವ್‌ನ ಪಾಚಿ ತುಂಬಿದ ಕೊಳ(ತಲಾಬ್)‌ದಲ್ಲಿ ಈಜುವುದನ್ನು ಕಲಿತರು. 1981-82ರ ರಾಷ್ಟ್ರೀಯ ಶಾಲಾ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸ್ವರ್ಧಾತ್ಮಕ ಈಜುಗಾರಿಕೆಯಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಆರು ಅಡಿ ಎತ್ತರದ ಖಾಜನ್ 1982ರಲ್ಲಿ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ಗೆ ಪ್ರವೇಶಿಸಿದರು ಮತ್ತು ಐದು ಚಿನ್ನದ ಪದಕಗಳು, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆಲ್ಲುದ್ದರು. ನಂತರದ ವರ್ಷ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 7 ಚಿನ್ನದ ಪದಕಗಳು, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಬಾಚಿಕೊಂಡರು.

1987ರಲ್ಲಿ ಪುನಃ ಅಹ್ಮದಾಬಾದ್‌ನ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ, ಅವರು 7 ಪದಕಗಳನ್ನು ಗೆದ್ದರಲ್ಲದೇ 100 ಮೀಟರ್ ದೂರವನ್ನು 55 .21ಸೆಕೆಂಡುಗಳ ಅವಧಿಯಲ್ಲಿ ಫ್ರೀಸ್ಟೈಲ್(ಮುಕ್ತಶೈಲಿಯ)ನಲ್ಲಿ ಈಜಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.ಕಠ್ಮಂಡುವಿನಲ್ಲಿ 1985ರ SAF ಕ್ರೀಡಾಕೂಟದಲ್ಲಿ ತಾವೇ ನಿರ್ಮಿಸಿದ್ದ 55 .34 ಸೆಕೆಂಡುಗಳ ದಾಖಲೆ ಮುರಿದರು. 1988ರಂದು ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಎಂಟು ವೈಯಕ್ತಿಕ ಚಿನ್ನದ ಪದಕಗಳನ್ನು ಅಭೂತಪೂರ್ವವಾಗಿ ಗೆಲ್ಲುವುದರೊಂದಿಗೆ ಅನಭಿಶಕ್ತ ಸಾಮ್ರಾಟರೆನಿಸಿದರು. ಅವುಗಳಲ್ಲಿ ಐದು ಪದಕಗಳು ಹೊಸ ದಾಖಲೆಗಳ ಹೆಚ್ಚುವರಿ ಹೊಳಪಿನೊಂದಿಗೆ ಕಂಗೊಳಿಸಿದವು. ಪಾಲಿಸಿ ರಿಲೆ ತಂಡಕ್ಕೆ ಅವರು ಬೆಳ್ಳಿ ಮತ್ತು ಕಂಚಿನ ಪದಕವನ್ನು ಕೂಡ ಗೆದ್ದುಕೊಟ್ಟರು. ಅತ್ಯುತ್ತಮ ಗುಣಮಟ್ಟದ ಈಜುಗಾರ, ಫ್ರೀಸ್ಟೈಲ್ ಈಜಿನಲ್ಲಿ ಮಾಸ್ಟರ್ ಮತ್ತು 1984ರ ಅರ್ಜುನ ಪ್ರಶಸ್ತಿ ಪುರಸ್ಕೃತ ಖಾಜನ್ ಸಿಯೋಲ್‌ನ 1986ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಯನ್ನು ಗೆದ್ದುಕೊಂಡರು. ಏಷ್ಯಾಡ್‌ನಲ್ಲಿ ಭಾರತ ಪದಕ ಬಾಚಿಕೊಂಡಿದ್ದು 1951ರಿಂದೀಚೆಗೆ ಮೊದಲ ಬಾರಿಯಾಗಿತ್ತು.

1984ರ ಅರ್ಜುನ ಪ್ರಶಸ್ತಿ ವಿಜೇತರು. ಅವರು 1988ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಕ್ಕೋಸ್ಕರ ಅತ್ಯುಚ್ಛ ಸಾಧನೆ ತೋರಿಸಬೇಕಾಯಿತು. ಸಿಯೋಲ್ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅವರು ಅರಿತಿದ್ದರಿಂದ 1992ರ ಬಾರ್ಸೆಲೋನಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವರು ನಿರಾಕರಿಸಿದರು. ಎರಡು ವರ್ಷಗಳ ನಂತರ, CRPFನಲ್ಲಿ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್(SSP) ಆಗಿರುವ ಸಿಂಗ್, ಎಲ್ವಿಸ್ ಆಲಿ ಹಜಾರಿಕಾ ಮುಂತಾದ ರಾಷ್ಟ್ರೀಯ ಚಾಂಪಿಯನ್‌ರನ್ನು ಒಳಗೊಂಡ CRPF ಈಜು ತಂಡಕ್ಕೆ ತರಬೇತಿ ನೀಡುತ್ತಿದ್ದು, ತಮ್ಮ ವೃತ್ತಿಪರ ಈಜುಗಾರಿಕೆಗೆ ವಿದಾಯ ಹೇಳಿದರು. 1982ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ 12ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, 1982ರಲ್ಲಿ ದೆಹಲಿಯ IXth ಏಷ್ಯನ್ ಕ್ರೀಡಾಕೂಟದಲ್ಲಿ, 1984ರಲ್ಲಿ ಸಿಯೋಲ್‌ನ 2ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ, 1984ರಲ್ಲಿ ಮಾಸ್ಕೊದಲ್ಲಿ ನಡೆದ ಸೌಹಾರ್ದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆಸ್ಟ್ರೇಲಿಯದ ಕೋಚ್ ಎರಿಕ್ ಆರ್ನಾಲ್ಡ್ ಅವರಿಂದ ತರಬೇತಾದ ಖಾಜನ್ ಸಿಂಗ್, ಸಿಯೋಲ್‌ನಲ್ಲಿ ನಡೆದ 1988ರ ಒಲಿಂಪಿಕ್‌ನಲ್ಲಿ ಕೂಡ ಭಾಗವಹಿಸಿದ್ದರು. ಪ್ರಸಕ್ತ ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆಯಲ್ಲಿ S.Oಆಗಿರುವ ಖಾಜನ್, 1982ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ 12ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, 1982ರಲ್ಲಿ ದೆಹಲಿಯ IXth ಏಷ್ಯನ್ ಕ್ರೀಡಾಕೂಟದಲ್ಲಿ, 1984ರಲ್ಲಿ ಸಿಯೋಲ್‌ನ 2ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ, 1984ರಲ್ಲಿ ಮಾಸ್ಕೊದಲ್ಲಿ ನಡೆದ ಸೌಹಾರ್ದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆಸ್ಟ್ರೇಲಿಯದ ಕೋಚ್ ಎರಿಕ್ ಆರ್ನಾಲ್ಡ್ ಅವರಿಂದ ತರಬೇತಾದ ಖಾಜನ್ ಸಿಂಗ್, ಸಿಯೋಲ್‌ನಲ್ಲಿ ನಡೆದ 1988ರ ಒಲಿಂಪಿಕ್‌ನಲ್ಲಿ ಕೂಡ ಭಾಗವಹಿಸಿದ್ದರು

ಮನ್ನಣೆಗಳು

  • ಸಿಂಗ್ ಅವರು 14ವರ್ಷಗಳ ಹಿಂದೆ 100 ಮೀ ಮತ್ತು 200ಮೀ ಬಟರ್‌ಫ್ಲೈ ಈಜಿನಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದರು.
  • 1986ರ ಏಷ್ಯನ್ ಕ್ರೀಡಾಕೂಟದಲ್ಲಿ ಈಜಿನಲ್ಲಿ ಬೆಳ್ಳಿಪದಕ ಗೆದ್ದರು.
  • ದಕ್ಷಿಣ ಏಷ್ಯಾ ಒಕ್ಕೂಟ ಕ್ರೀಡಾಕೂಟಗಳಲ್ಲಿ ಅವರು ಗಮನಾರ್ಹವಾದ ಅಂತಾರಾಷ್ಟ್ರೀಯ ಸಾಧನೆ ಮೆರೆದರು.
  • 1983ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
  • ಸಿಯೋಲ್‌ನ 1986ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಬೆಳ್ಳಿಪದಕವನ್ನು ಗೆದ್ದರು.
  • ಅವರು 1985ರಲ್ಲಿ ಕಠ್ಮಂಡುವಿನಲ್ಲಿ ಚಿನ್ನದ ಪದಕಗಳನ್ನು ಮತ್ತು 1989ರಲ್ಲಿ ಇಸ್ಲಾಮಾಬಾದ್‌ನಲ್ಲಿ 7 ಚಿನ್ನದ ಪದಕಗಳನ್ನು ಗೆದ್ದರು.
  • 1988ರ ಬಿಜಿಂಗ್‌ನಲ್ಲಿ ನಡೆದ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದರು.
  • 1988ರಲ್ಲಿ ವಿಶ್ವ ಪೊಲೀಸ್ ಕ್ರೀಡಾಕೂಟದ 100 ಮೀಟರ್ ಬಟರ್‌ಫ್ಲೈ ಈಜುಸ್ಪರ್ಧೆಯಲ್ಲಿ ಬೆಳ್ಳಿಪದಕ ವಿಜೇತರಾದರು.

ಉಲ್ಲೇಖಗಳು

Tags:

ಖಾಜನ್ ಸಿಂಗ್ ಜನನ ಮತ್ತು ವಿದ್ಯಾಭ್ಯಾಸಖಾಜನ್ ಸಿಂಗ್ ಕ್ರೀಡಾ ಜೀವನಖಾಜನ್ ಸಿಂಗ್ ಮನ್ನಣೆಗಳುಖಾಜನ್ ಸಿಂಗ್ ಉಲ್ಲೇಖಗಳುಖಾಜನ್ ಸಿಂಗ್

🔥 Trending searches on Wiki ಕನ್ನಡ:

ಅನುಪಮಾ ನಿರಂಜನಎ.ಪಿ.ಜೆ.ಅಬ್ದುಲ್ ಕಲಾಂವಿಧಾನ ಸಭೆಡಿ.ವಿ.ಗುಂಡಪ್ಪತಾಲ್ಲೂಕುಬರಗೂರು ರಾಮಚಂದ್ರಪ್ಪಕೊಳ್ಳೇಗಾಲಯಶ್(ನಟ)ಗಣಜಿಲೆಗಿರೀಶ್ ಕಾರ್ನಾಡ್ಆಗಮ ಸಂಧಿಚನ್ನವೀರ ಕಣವಿಚಂದ್ರಶೇಖರ ಕಂಬಾರಮಯೂರವರ್ಮಚಿಕ್ಕಮಗಳೂರುಓಂ (ಚಲನಚಿತ್ರ)ಭೋವಿಪ್ರಜಾಪ್ರಭುತ್ವಲಕ್ನೋಪಲ್ಸ್ ಪೋಲಿಯೋನಗರೀಕರಣಹರಿಹರ (ಕವಿ)ಯೋಗವ್ಯಾಯಾಮಕನ್ನಡ ಸಾಹಿತ್ಯಭಾರತದ ತ್ರಿವರ್ಣ ಧ್ವಜಐಹೊಳೆಎಚ್.ಎಸ್.ವೆಂಕಟೇಶಮೂರ್ತಿಕೃಷ್ಣದೇವರಾಯಅಖಿಲ ಭಾರತ ಬಾನುಲಿ ಕೇಂದ್ರರೈತಯಣ್ ಸಂಧಿಕೈಗಾರಿಕೆಗಳುಆತ್ಮಚರಿತ್ರೆಪಿ.ಲಂಕೇಶ್ಸೋನು ಗೌಡಮೂಲಧಾತುಕಮಲದಹೂಮಳೆಗಾಲಏಕಲವ್ಯಬಿ.ಎಲ್.ರೈಸ್ಊಳಿಗಮಾನ ಪದ್ಧತಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಶ್ರೀ ರಾಘವೇಂದ್ರ ಸ್ವಾಮಿಗಳುಭಾಷೆಭಾರತದ ಸಂವಿಧಾನಜನಪದ ಕ್ರೀಡೆಗಳುಭಾರತದಲ್ಲಿ ಪರಮಾಣು ವಿದ್ಯುತ್ಬನವಾಸಿಶಿವಮೊಗ್ಗಕರಾವಳಿ ಚರಿತ್ರೆಬಾಬು ಜಗಜೀವನ ರಾಮ್ಎಸ್.ಜಿ.ಸಿದ್ದರಾಮಯ್ಯಗೌರಿ ಹಬ್ಬಕಾಡ್ಗಿಚ್ಚುಶಾಂತಕವಿಖ್ಯಾತ ಕರ್ನಾಟಕ ವೃತ್ತತ್ಯಾಜ್ಯ ನಿರ್ವಹಣೆದೆಹಲಿ ಸುಲ್ತಾನರುಪ್ರಜಾವಾಣಿವೀರೇಂದ್ರ ಹೆಗ್ಗಡೆದೂರದರ್ಶನವಿದ್ಯುತ್ ವಾಹಕಮಾರ್ಟಿನ್ ಲೂಥರ್ ಕಿಂಗ್ಬೆಟ್ಟದಾವರೆಮೌರ್ಯ ಸಾಮ್ರಾಜ್ಯಸಾರ್ವಜನಿಕ ಆಡಳಿತವೇದಮಳೆಟಾವೊ ತತ್ತ್ವಅಗ್ನಿ(ಹಿಂದೂ ದೇವತೆ)ವಿಮೆದೇವನೂರು ಮಹಾದೇವಕಪ್ಪೆಚಿಪ್ಪುಕರ್ಮಧಾರಯ ಸಮಾಸಮಹಾತ್ಮ ಗಾಂಧಿಮುಹಮ್ಮದ್ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)🡆 More