ಅಷೂಲಿಯನ್ ಉದ್ಯಮ

ಹಳೆಶಿಲಾಯುಗದ ಮೊದಲ ಭಾಗದಲ್ಲಿ ರೂಢಿಯಲ್ಲಿದ್ದ ಶಿಲಾ ಉದ್ಯಮ.

ಉತ್ತರ ಫ್ರಾನ್ಸಿನ ಸೇಂಟ್ ಅಷಲ್ ಎಂಬ ಸ್ಥಳದಲ್ಲಿ ಮೊದಲು ಗುರುತಿಸಲ್ಪಟ್ಟಿದ್ದರಿಂದ ಈ ಹೆಸರು ರೂಢಿಗೆ ಬಂದಿದೆ. ಇದಕ್ಕೂ ಪೂರ್ವದ ಅಬೆವಿಲಿಯನ್ ರೀತಿಯಿಂದಲೇ ಬೆಳೆದುಬಂದಿರುವ ಈ ಉದ್ಯಮದಲ್ಲೂ ಕೈ ಕೊಡಲಿಗಳೇ ಮುಖ್ಯ ಉಪಕರಣಗಳು. ಆದರೂ ಅಗಲವಾದ ಅಂಚುಳ್ಳ ಸೀಳುಗೊಡಲಿ (ಕ್ಲೀವರ್), ಹೆರೆಯುವ ಉಪಕರಣಗಳೂ (ಸ್ಕ್ರೇಪರ್ಸ್) ಉಪಯೋಗದಲ್ಲಿದ್ದವು. ಉಪಕರಣ ತಯಾರಿಕೆಯಲ್ಲಿ ಕಲ್ಲಿನ ಸುತ್ತಿಗೆಗಳ ಬದಲು ಮರ ಅಥವಾ ಎಲುಬಿನ ಸುತ್ತಿಗೆಗಳನ್ನು ಉಪಯೋಗಕ್ಕೆ ತಂದುದರಿಂದ, ಉಪಕರಣಗಳು ಹೆಚ್ಚು ನಾಜೂಕಿನವಾಗಿ ನೇರ ಅಂಚುಗಳೊಡನೆ, ನಿರ್ದಿಷ್ಟ ಆಕಾರವನ್ನು ಹೊಂದಿದವಲ್ಲದೆ ತೆಳ್ಳಗೂ ಆಗುತ್ತ ಬಂದುವು. ಉಪಕರಣಗಳನ್ನು ಮಾಡುವುದು ಮೂಲ ಶಿಲೆಯಿಂದ ಎಬ್ಬಿದ ದೊಡ್ಡ ಕಲ್ಲು ಚಕ್ಕೆಗಳಿಂದ. ಅಂಚಿನಲ್ಲಿ ಮೆಟ್ಟಲು ಮೆಟ್ಟಲಾಗಿ ಸಣ್ಣ ಚಕ್ಕೆಗಳನ್ನು ಎಬ್ಬಿಸಿ, ಅಂಚುಗಳನ್ನು ನೇರವಾಗಿ ಹರಿತವಾಗಿ ಮಾಡುವ ಪದ್ಧತಿ ಸಹ ಈ ಕಾಲದಲ್ಲೇ ರೂಢಿಗೆ ಬಂತು. ಈ ಸಂಸ್ಕೃತಿ ಯುರೋಪ್, ಪಶ್ಚಿಮ ಏಷ್ಯ, ಭಾರತ ಮತ್ತು ಆಫ್ರಿಕ ಮುಂತಾದ ಕಡೆ ಕಂಡುಬರುತ್ತದೆ. ಪ್ಲಿಸ್ಟೋಸೀನ್ನ ಎರಡನೆಯ ಹಿಮಯುಗದ ಕೊನೆ ಅಥವಾ ಅನಂತರದ ಉಷ್ಣಕಾಲದ ಮೊದಲಲ್ಲಿ ಮಧ್ಯ ಆಫ್ರಿಕದಲ್ಲಿ ಹುಟ್ಟಿದ ಈ ಉದ್ಯಮ ಸು. 300000-100000 ವರ್ಷಗಳ ಪೂರ್ವದಲ್ಲಿ ಪ್ರಚಲಿತವಾಗಿತ್ತು.

Tags:

ಆಫ್ರಿಕಭಾರತ

🔥 Trending searches on Wiki ಕನ್ನಡ:

ದ್ರಾವಿಡ ಭಾಷೆಗಳುಪ್ರಜಾಪ್ರಭುತ್ವಶ್ರೀ. ನಾರಾಯಣ ಗುರುನಾಲಿಗೆಲಿಂಗಾಯತ ಪಂಚಮಸಾಲಿಕೆ. ಅಣ್ಣಾಮಲೈಸಂಯುಕ್ತ ಕರ್ನಾಟಕಭಾರತ ಸಂವಿಧಾನದ ಪೀಠಿಕೆನವಣೆಕೃಷ್ಣದೇವರಾಯಕಾಮಧೇನುಸಮುಚ್ಚಯ ಪದಗಳುಆರ್ಯಭಟ (ಗಣಿತಜ್ಞ)ಸರಸ್ವತಿಮೋಕ್ಷಗುಂಡಂ ವಿಶ್ವೇಶ್ವರಯ್ಯಇಂಡಿಯನ್‌ ಎಕ್ಸ್‌ಪ್ರೆಸ್‌ಟೆನಿಸ್ ಕೃಷ್ಣಸರ್ವಜ್ಞಮಾನವ ಹಕ್ಕುಗಳುಜ್ಞಾನಪೀಠ ಪ್ರಶಸ್ತಿಅದ್ವೈತಮಧುಮೇಹಸಂಸ್ಕಾರಭಾರತದ ಮಾನವ ಹಕ್ಕುಗಳುಮಕರ ಸಂಕ್ರಾಂತಿಸಾಮಾಜಿಕ ತಾಣಮಾನವನ ಚರ್ಮಪ್ರಗತಿಶೀಲ ಸಾಹಿತ್ಯಹರಿಹರ (ಕವಿ)ಭೀಮಾ ತೀರದಲ್ಲಿ (ಚಲನಚಿತ್ರ)ಖ್ಯಾತ ಕರ್ನಾಟಕ ವೃತ್ತಭಾರತದ ಸಂವಿಧಾನ ರಚನಾ ಸಭೆಧಾರವಾಡಗುಪ್ತ ಸಾಮ್ರಾಜ್ಯಕುರುಬಎಚ್. ತಿಪ್ಪೇರುದ್ರಸ್ವಾಮಿಮಾಟ - ಮಂತ್ರತೆಂಗಿನಕಾಯಿ ಮರವಿಮರ್ಶೆಸಂಭೋಗಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣರಚಿತಾ ರಾಮ್ನೇಮಿಚಂದ್ರ (ಲೇಖಕಿ)ವಾಟ್ಸ್ ಆಪ್ ಮೆಸ್ಸೆಂಜರ್ಭರತ-ಬಾಹುಬಲಿತೀರ್ಥಹಳ್ಳಿನೈಲ್ಭಾರತದ ಜನಸಂಖ್ಯೆಯ ಬೆಳವಣಿಗೆಗುರು (ಗ್ರಹ)ಶಿವಕುಮಾರ ಸ್ವಾಮಿಬಾದಾಮಿ ಗುಹಾಲಯಗಳುಪೊನ್ನಬಾಲಕಾರ್ಮಿಕರಾಮ್ ಮೋಹನ್ ರಾಯ್ಜೋಳಕೆ. ಎಸ್. ನರಸಿಂಹಸ್ವಾಮಿಹಲ್ಮಿಡಿ ಶಾಸನಚಂದ್ರಶೇಖರ ಕಂಬಾರಜೆಕ್ ಗಣರಾಜ್ಯಬೇವುಜಿ.ಪಿ.ರಾಜರತ್ನಂಭಾವನಾ(ನಟಿ-ಭಾವನಾ ರಾಮಣ್ಣ)ಕರ್ನಾಟಕದ ಜಲಪಾತಗಳುಬಾಳೆ ಹಣ್ಣುಭಾರತದಲ್ಲಿ ತುರ್ತು ಪರಿಸ್ಥಿತಿಬಿದಿರುಯು.ಆರ್.ಅನಂತಮೂರ್ತಿವಿಜಯನಗರಸಮುದ್ರಗುಪ್ತಟೈಗರ್ ಪ್ರಭಾಕರ್ಕದಂಬ ಮನೆತನಭಾರತದ ಇತಿಹಾಸಸಂಯುಕ್ತ ರಾಷ್ಟ್ರ ಸಂಸ್ಥೆಸಿ. ಎನ್. ಆರ್. ರಾವ್ಕೊಪ್ಪಳಸುಭಾಷ್ ಚಂದ್ರ ಬೋಸ್ನಾಥೂರಾಮ್ ಗೋಡ್ಸೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು🡆 More