ಹೊಳೆ

ಹೊಳೆಯು ಹರಿವಿರುವ ಒಂದು ಜಲಸಮೂಹ, ಮತ್ತು ತಳ ಹಾಗೂ ದಡಗಳಿಂದ ಸೀಮಿತವಾಗಿರುತ್ತದೆ. ಅದರ ನೆಲೆ ಅಥವಾ ನಿರ್ದಿಷ್ಟ ಲಕ್ಷಣಗಳನ್ನು ಆಧರಿಸಿ, ಹೊಳೆಯನ್ನು ವಿವಿಧ ಸ್ಥಳೀಯ ಅಥವಾ ಪ್ರಾದೇಶಿಕ ಹೆಸರುಗಳಿಂದ ಕರೆಯಬಹುದು.

ಹೊಳೆ

ಹೊಳೆಗಳು ಜಲಚಕ್ರದಲ್ಲಿ ಕಾಲುವೆಗಳಾಗಿ, ಅಂತರ್ಜಲ ಪುನರ್ಭರ್ತಿಯಲ್ಲಿ ಸಾಧನಗಳಾಗಿ, ಮತ್ತು ಮೀನು ಹಾಗೂ ವನ್ಯಜೀವನ ವಲಸೆಯ ಮಾರ್ಗಗಳಾಗಿ ಮುಖ್ಯವಾಗಿವೆ. ಒಂದು ಹೊಳೆಯ ಅತಿ ಸಮೀಪದ ಪ್ರದೇಶದಲ್ಲಿನ ಜೈವಿಕ ಆವಾಸಸ್ಥಾನವನ್ನು ಹೊಳೆತೀರದ ವಲಯವೆಂದು ಕರೆಯಲಾಗುತ್ತದೆ. ಪ್ರಗತಿಯಲ್ಲಿರುವ ಹಾಲೊಸೀನ್ ಅಳಿವಿನ ಸ್ಥಿತಿಯನ್ನು ಪರಿಗಣಿಸಿದರೆ, ಹೊಳೆಗಳು ವಿಘಟಿತ ಆವಾಸಸ್ಥಾನಗಳ ನಡುವೆ ಸಂಪರ್ಕ ಕಲ್ಪಿಸುವ ಮತ್ತು ಹೀಗೆ ಜೀವವೈವಿಧ್ಯವನ್ನು ಸಂರಕ್ಷಿಸುವ ಪ್ರಮುಖ ಮಾರ್ಗದ ಪಾತ್ರವಹಿಸುತ್ತವೆ. ಹೊಳೆಗಳ ಮತ್ತು ಸಾಮಾನ್ಯವಾಗಿ ಜಲಮಾರ್ಗಗಳ ಅಧ್ಯಯನವನ್ನು ಮೇಲ್ಮೈ ಜಲವಿಜ್ಞಾನವೆಂದು ಕರೆಯಲಾಗುತ್ತದೆ ಮತ್ತು ಪಾರಿಸರಿಕ ಭೂಗೋಳಶಾಸ್ತ್ರದ ಮೂಲ ಅಂಶವಾಗಿದೆ.

    ಹೊಳೆಗಳ ಬಗೆಗಳೆಂದರೆ:

    ತೊರೆ
    ಉಪನದಿಗಿಂತ ಚಿಕ್ಕದಾದ ಹೊಳೆ, ವಿಶೇಷವಾಗಿ ಬುಗ್ಗೆ ಅಥವಾ ಜಿನುಗುಭೂಮಿಯಿಂದ ಊಡಿಸಲ್ಪಟ್ಟದ್ದು. ಇದು ಸಾಮಾನ್ಯವಾಗಿ ಚಿಕ್ಕದಾಗಿರುತ್ತದೆ ಮತ್ತು ಸುಲಭವಾಗಿ ದಾಟಬಲ್ಲದ್ದಾಗಿರುತ್ತದೆ. ಆಳವಿಲ್ಲದಿರುವುದು ಮತ್ತು ಅದರ ತಳವು ಮುಖ್ಯವಾಗಿ ಕಲ್ಲುಗಳಿಂದ ಸಂಯೋಜಿತವಾಗಿರುವುದು ತೊರೆಯ ಲಕ್ಷಣವಾಗಿರುತ್ತದೆ.
    ಉಪನದಿ ಅಥವಾ ಖಾರಿ
    • ಉತ್ತರ ಅಮೇರಿಕದಲ್ಲಿ ಸಣ್ಣ ಹಾಗೂ ಮಧ್ಯಮ ಗಾತ್ರದ ನೈಸರ್ಗಿಕ ಹೊಳೆ. ಕೆಲವೊಮ್ಮೆ ಮೋಟಾರು ದೋಣಿಯಿಂದ ಸಂಚರಿಸಬಹುದಾದದ್ದು.
    • ಭಾರತದಲ್ಲಿ ಇದನ್ನು ಖಾರಿ ಎಂದು ಕರೆಯಲಾಗುತ್ತದೆ. ಇದು ಭರತದ ಪ್ರವೇಶಮಾರ್ಗವಾಗಿರುತ್ತದೆ, ಸಾಮಾನ್ಯವಾಗಿ ಉಪ್ಪು ಜವುಗು ಅಥವಾ ಮ್ಯಾಂಗ್ರೋವ್ ಜೌಗಿನಲ್ಲಿ. ಈ ಸಂದರ್ಭದಲ್ಲಿ, ಹೊಳೆಯು ಭರತದ ಹೊಳೆಯಾಗಿರುತ್ತದೆ.
    ನದಿ
    ದೊಡ್ಡದಾದ ನೈಸರ್ಗಿಕ ಹೊಳೆ. ಇದು ಜಲಮಾರ್ಗವಾಗಿರಬಹುದು.
    ಹಳ್ಳ
    ತೀರರೇಖೆಯ ಬೀಚ್ ಅಥವಾ ನದಿ ಪ್ರವಾಹ ಪ್ರದೇಶದ ಮೇಲಿನ ಸಮಾನಾಂತರ ಬದುಗಳು ಅಥವಾ ಪಟ್ಟಿಗಳ ನಡುವಿನ, ಅಥವಾ ಪಟ್ಟಿ ಹಾಗೂ ಕರಾವಳಿಯ ನಡುವಿನ ರೇಖೀಯ ಜಲಮಾರ್ಗ.
    ಉಪನದಿ
    ಒಂದು ಸಹಾಯಕ ಹೊಳೆ, ಅಥವಾ ಕೆರೆ ಅಥವಾ ಸಾಗರದಂತಹ ಸ್ಥಿರ ಜಲಸಮೂಹವನ್ನು ಮುಟ್ಟದ ಆದರೆ ಮತ್ತೊಂದು ನದಿಯನ್ನು ಸೇರುವ ಹೊಳೆ. ಕೆಲವೊಮ್ಮೆ ಶಾಖೆ ಅಥವಾ ಕವಲು ಎಂದೂ ಕರೆಯಲಾಗುತ್ತದೆ.

ಹೊಳೆಗಳು ಸಾಮಾನ್ಯವಾಗಿ ತಮ್ಮೊಳಗಿರುವ ಬಹುತೇಕ ನೀರನ್ನು ಮಳೆ ಹಾಗೂ ಹಿಮದ ರೂಪದಲ್ಲಿ ಪಡೆಯುತ್ತವೆ. ಈ ನೀರಿನ ಬಹುತೇಕ ಭಾಗ ಮಣ್ಣು ಹಾಗೂ ಜಲಸಮೂಹಗಳಿಂದ ಬಾಷ್ಪೀಕರಣದ ಮೂಲಕ, ಅಥವಾ ಸಸ್ಯಗಳ ಬಾಷ್ಪವಿಸರ್ಜನೆ ಮೂಲಕ ವಾತಾವರಣವನ್ನು ಮರುಪ್ರವೇಶಿಸುತ್ತದೆ. ಸ್ವಲ್ಪ ಭಾಗ ನೀರು ಭೂಮಿಯಲ್ಲಿ ಇಂಗಿಹೋಗುತ್ತದೆ ಮತ್ತು ಅಂತರ್ಜಲವಾಗುತ್ತದೆ, ಇದರಲ್ಲಿ ಬಹುತೇಕ ಭಾಗ ಅಂತಿಮವಾಗಿ ಹೊಳೆಗಳನ್ನು ಪ್ರವೇಶಿಸುತ್ತದೆ. ಬಿದ್ದ ಸ್ವಲ್ಪ ನೀರು ತಾತ್ಕಾಲಿಕವಾಗಿ ಹಿಮ ಕ್ಷೇತ್ರಗಳು ಹಾಗೂ ಹಿಮನದಿಗಳಲ್ಲಿ ಹಿಡಿದಿಡಲ್ಪಡುತ್ತದೆ ಮತ್ತು ನಂತರ ಬಾಷ್ಪೀಕರಣ ಅಥವಾ ಕರಗುವಿಕೆ ಮೂಲಕ ಬಿಡುಗಡೆಗೊಳ್ಳುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಪ್ರಾಚೀನ ಈಜಿಪ್ಟ್‌ಉತ್ಪಾದನೆನಿರ್ವಹಣೆ ಪರಿಚಯಶನಿಕರ್ನಾಟಕದಲ್ಲಿ ಸಹಕಾರ ಚಳವಳಿಶಬರಿಧರ್ಮಸ್ಥಳದರ್ಶನ್ ತೂಗುದೀಪ್ಆದಿ ಶಂಕರಕರ್ನಾಟಕದ ತಾಲೂಕುಗಳುಹುಲಿಉಡುಪಿ ಜಿಲ್ಲೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶ್ಯೆಕ್ಷಣಿಕ ತಂತ್ರಜ್ಞಾನಚಾರ್ಲ್ಸ್‌‌ ಮ್ಯಾನ್ಸನ್‌‌‌ಶಿಶುನಾಳ ಶರೀಫರುಮಹಾತ್ಮ ಗಾಂಧಿಲಾರ್ಡ್ ಡಾಲ್ಹೌಸಿಭತ್ತಭಾರತದ ಚುನಾವಣಾ ಆಯೋಗಬಾಬು ಜಗಜೀವನ ರಾಮ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬಲಕರ್ನಾಟಕ ವಿಧಾನ ಪರಿಷತ್ಅಷ್ಟಾವಕ್ರವರ್ಗೀಯ ವ್ಯಂಜನಬಾದಾಮಿರೇಯಾನ್ಯಮಸಾಮ್ರಾಟ್ ಅಶೋಕವಚನ ಸಾಹಿತ್ಯಚಂದ್ರಗುಪ್ತ ಮೌರ್ಯಕಂಸಾಳೆರುಕ್ಮಾಬಾಯಿಕರ್ಮಧಾರಯ ಸಮಾಸಪಠ್ಯಪುಸ್ತಕತಂತ್ರಜ್ಞಾನದ ಉಪಯೋಗಗಳುಜಶ್ತ್ವ ಸಂಧಿಜ್ಯೋತಿಬಾ ಫುಲೆವಿಷುವತ್ ಸಂಕ್ರಾಂತಿಜವಹರ್ ನವೋದಯ ವಿದ್ಯಾಲಯಮೀನಾ (ನಟಿ)ಭಾರತದ ಇತಿಹಾಸದಕ್ಷಿಣ ಕನ್ನಡಬಂಡಾಯ ಸಾಹಿತ್ಯಆದಿ ಕರ್ನಾಟಕಅನುಭೋಗರಾಜ್ಯಸಭೆಸಂಸ್ಕೃತ ಸಂಧಿಚಂದ್ರಯಾನ-೩ಸೀತೆಕೈಲಾಸನಾಥಮೀನುಜಲಶುದ್ಧೀಕರಣಗದ್ದಕಟ್ಟುಭಾರತದ ನದಿಗಳುತಾಮ್ರದಲಿತಫೇಸ್‌ಬುಕ್‌ಏಕೀಕರಣತೂಕಹರ್ಡೇಕರ ಮಂಜಪ್ಪಮೈಸೂರುಕೇಂದ್ರಾಡಳಿತ ಪ್ರದೇಶಗಳುಮೈಗ್ರೇನ್‌ (ಅರೆತಲೆ ನೋವು)ಸ್ನಾಯುಮೂಲಧಾತುಭಾರತದ ಉಪ ರಾಷ್ಟ್ರಪತಿಕರ್ನಾಟಕದ ಮುಖ್ಯಮಂತ್ರಿಗಳುಪುರಂದರದಾಸಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕಿತ್ತಳೆದೆಹಲಿ ಸುಲ್ತಾನರುಶಿಕ್ಷಕಯುವರತ್ನ (ಚಲನಚಿತ್ರ)ರಷ್ಯಾಶಾಂತರಸ ಹೆಂಬೆರಳುಭಗತ್ ಸಿಂಗ್🡆 More