ಹಿಮೋಗ್ಲಾಬಿನ್

ಹಿಮೋಗ್ಲಾಬಿನ್ ಕಬ್ಬಿಣವನ್ನು ಹೊಂದಿರುವ ಒಂದು ಪ್ರೋಟೀನ್.

ಬಹುತೇಕ ಎಲ್ಲ ಕಶೇರುಕಗಳು ಹಿಮೋಗ್ಲಾಬಿನ್‍ನ್ನು ಹೊಂದಿರುತ್ತವೆ. ಇದು ಕೆಂಪು ರಕ್ತ ಕಣಗಳಲ್ಲಿ ಆಮ್ಲಜನಕದ ಸಾಗಣೆಯನ್ನು ಸುಗಮವಾಗಿಸುತ್ತದೆ. ರಕ್ತದ ಕೆಂಪುಕಣಗಳ ಬಣ್ಣಕ್ಕೂ ಒಟ್ಟು ರಕ್ತ ಕೆಂಪಾಗಿರುವುದಕ್ಕೂ ಕಾರಣ ಹೀಮೋಗ್ಲಾಬಿನ್. ರಕ್ತ ಸಮರ್ಥವಾಗಿ ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್‌ಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಹೊತ್ತು ಮತ್ತು ಬಿಡುಗಡೆ ಮಾಡುವುದು ಹೀಮೋಗ್ಲಾಬಿನ್ನಿನ ಸ್ವಭಾವದಿಂದಲೇ. 100 ಮಿಲೀಗಳಷ್ಟು ರಕ್ತದಲ್ಲಿ ಅಂದರೆ, ಸುಮಾರು 45 ಮಿಲೀಗಳ ಕಣಗಳಲ್ಲಿ ಸುಮಾರು 14 ಗ್ರಾಮ್‌ಗಳಷ್ಟು ಹೀಮೋಗ್ಲಾಬಿನ್ ಇರುತ್ತದೆ. ಇಷ್ಟೂ ಕೆಂಪುರಕ್ತ ಕಣಗಳ ಒಳಗೆ ಇರುತ್ತದೆ. 100 ಮಿಲೀಗಳಷ್ಟು ರಕ್ತದ್ರವದಲ್ಲಿರುವ ಒಟ್ಟು ಪ್ರೋಟೀನುಗಳು ಸುಮಾರು 8 ಗ್ರಾಮ್‌ಗಳು ಮಾತ್ರ. ರಕ್ತದ್ರವದಲ್ಲಿ ಇದಕ್ಕಿಂತ ಹೆಚ್ಚು ಪ್ರೊಟೀನ್ ಇರುವುದು ಸಾಧ್ಯವಿಲ್ಲ. ಹಾಗೆ ಹೆಚ್ಚಾಗಿದ್ದರೆ ರಕ್ತದ ಒತ್ತಡ ಹೆಚ್ಚು ಆಗುತ್ತದೆ. ಅಲ್ಲದೆ ನೀರು ಹಾಗೂ ಅದರಲ್ಲಿ ಲೀನವಾಗಿರುವ ಪದಾರ್ಥಗಳು ಅಂಗಾಂಶದ್ರವದೊಡನೆ (ಟಿಷ್ಯೂ ಫ್ಲೂಯಿಡ್) ವಿನಿಮಯವಾಗುವುದರಲ್ಲಿ ಏರುಪೇರು ಉಂಟಾಗುತ್ತದೆ. ಹೀಗಾಗದಿರಲೆಂದೇ ಕಶೇರುಕಗಳಲ್ಲಿ ಹೀಮೋಗ್ಲಾಬಿನ್ ಕೆಂಪುಕಣಗಳ ಒಳಗೇ ಅರ್ಥಾತ್ ವಿನಿಮಯ ಪ್ರಭಾವಬಾಹಿರವಾಗಿ ಇರುತ್ತದೆ. ಅಕಶೇರುಕಗಳಲ್ಲಿ ಹೀಮೋಗ್ಲಾಬಿನ್ ರಕ್ತದ್ರವದಲ್ಲಿ ಇರುವುದು ನಿಜ. ಆದರೆ ವಿನಿಮಯಕ್ಕೆ ಧಕ್ಕೆ ಆಗದಿರುವಷ್ಟು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.

ಹಿಮೋಗ್ಲಾಬಿನ್
ಮಾನವ ಹಿಮೋಗ್ಲಾಬಿನ್‍ನ ರಚನೆ. α ಮತ್ತು β ಗ್ಲಾಬಿನ್ ಉಪಘಟಕಗಳು ಅನುಕ್ರಮವಾಗಿ ಕೆಂಪು ಮತ್ತು ನೀಲಿ ಬಣ್ಣದಲ್ಲಿವೆ. ಕಬ್ಬಿಣವನ್ನು ಹೊಂದಿರುವ ಹೀಮ್ ಗುಂಪುಗಳು ಹಸಿರು ಬಣ್ಣದಲ್ಲಿವೆ.

ಕೆಲವು ಹುಳುಗಳಲ್ಲಿ ರಕ್ತ ತಿಳಿಹಸುರು ಬಣ್ಣ ಇರುವುದಕ್ಕೆ ಕಾರಣ ಅವುಗಳ ರಕ್ತದ್ರವದಲ್ಲಿ ಹೀಮೋಗ್ಲಾಬಿನ್ನಿನ ಬದಲು ಕ್ಲೋರೋಕ್ರುಯೋರಿನ್ ಎಂಬ ಹಸರು ಬಣ್ಣ ಪ್ರೋಟೀನ್ ಇರುವುದು. ಕ್ಲೋರೋಕ್ರುಯೋರಿನ್ ಅಣುವಿನಲ್ಲೂ ಹೀಮೋಗ್ಲಾಬಿನ್ನಿನಲ್ಲಿಯಂತೆಯೇ ಕಿಂಚಿತ್ತಾಗಿ ಕಬ್ಬಿಣ ಸಂಯೋಜಿತವಾಗಿರುತ್ತದೆ. ಕೆಲವು ಚಿಪ್ಪುಪ್ರಾಣಿಗಳು ಮತ್ತು ನಳ್ಳಿಜಾತಿಯ ಪ್ರಾಣಿಗಳ ರಕ್ತ ತಿಳಿನೀರಿನ ಬಣ್ಣಕ್ಕೆ ಇರುವುದರ ಕಾರಣ ಅವುಗಳ ರಕ್ತದ್ರವದಲ್ಲಿ ಹೀಮೋಸೈಯನಿನ್ ಎಂಬ (ಕಬ್ಬಿಣದ ಬದಲು ಕಿಂಚಿತ್ತಾಗಿ ತಾಮ್ರ ಸಂಯೋಗಿ ಆದ) ಪ್ರೋಟೀನು ಇರುವುದು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಹಿಮೋಗ್ಲಾಬಿನ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಕಶೇರುಕಆಮ್ಲಜನಕಇಂಗಾಲದ ಡೈಆಕ್ಸೈಡ್ಕಬ್ಬಿಣಕಶೇರುಕಕೆಂಪು ರಕ್ತ ಕಣನೀರುಪ್ರೋಟೀನ್ರಕ್ತರಕ್ತದೊತ್ತಡ

🔥 Trending searches on Wiki ಕನ್ನಡ:

ಭಾರತದ ಪ್ರಧಾನ ಮಂತ್ರಿಪ್ರಾಥಮಿಕ ಶಿಕ್ಷಣಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದಲ್ಲಿ ಮೀಸಲಾತಿಇತಿಹಾಸದಿಕ್ಕುಕರ್ಣಕನ್ನಡದಲ್ಲಿ ಮಹಿಳಾ ಸಾಹಿತ್ಯಅಂತರ್ಜಲಗೋಪಾಲಕೃಷ್ಣ ಅಡಿಗಕರ್ನಾಟಕ ಲೋಕಾಯುಕ್ತಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಭಾರತದಲ್ಲಿನ ಶಿಕ್ಷಣತೆಂಗಿನಕಾಯಿ ಮರದಿಯಾ (ಚಲನಚಿತ್ರ)ಎತ್ತಿನಹೊಳೆಯ ತಿರುವು ಯೋಜನೆರತನ್ ನಾವಲ್ ಟಾಟಾಕರ್ನಾಟಕ ಹೈ ಕೋರ್ಟ್ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಎಲೆಕ್ಟ್ರಾನಿಕ್ ಮತದಾನಭಾರತದ ಆರ್ಥಿಕ ವ್ಯವಸ್ಥೆಅಲಂಕಾರಮಹಾತ್ಮ ಗಾಂಧಿಅಷ್ಟ ಮಠಗಳುಜಿಡ್ಡು ಕೃಷ್ಣಮೂರ್ತಿಕನ್ನಡ ಛಂದಸ್ಸುಜಾತಿಋಗ್ವೇದಇಂಡಿಯನ್ ಪ್ರೀಮಿಯರ್ ಲೀಗ್ರಾಜಕುಮಾರ (ಚಲನಚಿತ್ರ)ಸೂರ್ಯ ಗ್ರಹಣದಿಕ್ಸೂಚಿಸಿಂಧನೂರುಕರ್ನಾಟಕ ವಿಧಾನ ಪರಿಷತ್ಶಬರಿಏಕರೂಪ ನಾಗರಿಕ ನೀತಿಸಂಹಿತೆವಿಚ್ಛೇದನನವೋದಯಪಂಚಾಂಗತಲಕಾಡುನಾಯಕ (ಜಾತಿ) ವಾಲ್ಮೀಕಿಧಾರವಾಡಎರಡನೇ ಮಹಾಯುದ್ಧಉದಯವಾಣಿಕರ್ನಾಟಕಅಲ್ಲಮ ಪ್ರಭುಓಂ ನಮಃ ಶಿವಾಯಬಡ್ಡಿ ದರಅರಿಸ್ಟಾಟಲ್‌ಪ್ರಜ್ವಲ್ ರೇವಣ್ಣಭಾಮಿನೀ ಷಟ್ಪದಿಪ್ರೇಮಾಬೌದ್ಧ ಧರ್ಮವಿಷ್ಣುವರ್ಧನ್ (ನಟ)ಮಡಿಕೇರಿಸಂಗ್ಯಾ ಬಾಳ್ಯವೃದ್ಧಿ ಸಂಧಿಸಮಾಜಶಾಸ್ತ್ರಸಾಲ್ಮನ್‌ಸವರ್ಣದೀರ್ಘ ಸಂಧಿಮಿಲಾನ್ಗಂಗ (ರಾಜಮನೆತನ)ಕನ್ನಡದಲ್ಲಿ ಸಣ್ಣ ಕಥೆಗಳುನಾಗಸ್ವರಕಮಲಸಂಜಯ್ ಚೌಹಾಣ್ (ಸೈನಿಕ)ದ.ರಾ.ಬೇಂದ್ರೆಸೀತೆಮದುವೆಹಯಗ್ರೀವರಾಘವಾಂಕಪಟ್ಟದಕಲ್ಲುಹೈದರಾಬಾದ್‌, ತೆಲಂಗಾಣರನ್ನಮಂಡಲ ಹಾವುಟೊಮೇಟೊಕಬ್ಬು🡆 More