ಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯ

ಜಾರ್ಜ್ ರುಡಾಲ್ಫ್ ಹರ್ಸ್ಟ್ ಎಂಬ ಗಣಿತಶಾಸ್ತ್ರಜ್ಞನ ಮಗ, ವಿಲಿಯಂ ರುಡಾಲ್ಫ್ ಕಟ್ಟಿಸಿದ ಈ ಸುಂದರ ಕ್ಯಾಸೆಲ್ ಮತ್ತು ಅದಕ್ಕೆ ತಗುಲಿದಂತೆ ನಿರ್ಮಿಸಲ್ಪಟ್ಟ ಭವನ, ಮಿಲಿಯಗಟ್ಟಲೆ ಪರ್ಯಟಕರನ್ನು ಆಕರ್ಷಿಸಿದೆ.

ಇದರ ಒಳಾಂಗಣದ ವಿನ್ಯಾಸ, ಸುಂದರ ಹಾಗೂ ಅನನ್ಯವಾಗಿದೆ. ಈ ರಾಷ್ಟ್ರೀಯ ಸ್ಮಾರಕ, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಲಾಸ್ ಎಂಜಲೀಸ್ ನಗರಗಳ ನಡುವೆ ಇದೆ. ಒಮ್ಮೆ ಭೆಟ್ಟಿಮಾಡಲು ಯೋಗ್ಯವಾದ ತಾಣ.

ಕ್ಯಾಸಲ್ ಇರುವ ತಾಣ

ಉತ್ತರ ಅಮೆರಿಕದ ಪಶ್ಚಿಮ ಕರಾವಳಿಯ ದೊಡ್ಡ ನಗರಗಳಾದ ಲಾಸ್ ಎಂಜಲೀಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೊ ನಗರಗಳ ಮಧ್ಯೆ ಸಮಾನಾಂತರದಲ್ಲಿ ಸ್ಯಾನ್ ಸಿಮಿಯನ್ ಕೊಲ್ಲಿಯಲ್ಲಿದೆ. ಇದು ಅತ್ಯಂತ ಸುಂದರ ಸಮುದ್ರ ತಟವನ್ನು ಹೊಂದಿದ ಪ್ರದೇಶಗಳಲ್ಲೊಂದು. ಪ್ರವಾಸಿಗರು ಇಲ್ಲಿಗೆ ಹಿಂಡು ಹಿಂಡಾಗಿ ಬರುತ್ತಾರೆ. ಇಲ್ಲಿನ ಕೋಟೆಗೆ ಚಾರಿತ್ರ್ಯಿಕ ಮಹತ್ವವಿದೆ. ಇದರ ಪಕ್ಕದೇ ಒಂದು ಭವನವಿದೆ. ಈ ಕೋಟೆಯ ಪ್ರದೇಶವಿರುವುದು ಸ್ಯಾನ್ ಲೂಯಿಸ್ ಎಂಬ ಪಟ್ಟಣದ ಹೊರವಲಯದಲ್ಲಿ. ಸ್ಯಾನ್ ರೆಮೋನ್ ನಗರದಿಂದ ಸುಮಾರು ೨೩೦ ಮೈಲಿ ದೂರದಲ್ಲಿ, ಕ್ಯಾಲಿಫೋರ್ನಿಯ ಹಣ್ಣುತರಕಾರಿಗಳಿಗೆ ಪ್ರಸಿದ್ಧವಾದ ಕಣಿವೆ ಪ್ರದೇಶದಲ್ಲಿದೆ.

ಹರ್ಸ್ಟ್ ಕ್ಯಾಸಲ್‍ನ, ಸ್ವಾಗತ ಕೇಂದ್ರ

ಯಾವುದೋ ಭಾರಿ ವಾಣಿಜ್ಯ ಘಟಕದಂತಿದೆ. ಇಲ್ಲಿಂದ ಕ್ಯಾಸೆಲ್ ೩೦ ಮೈಲಿದೂರ. ಬಸ್‍ಗಳಲ್ಲಿ ಹೋಗಬೇಕು. ಪ್ರತಿ ೧೦ ನಿಮಿಷಗಳಿಗೆ ಪ್ರಕಟವಾಗುವ ಬಸ್‍ನಲ್ಲಿ ಟಿಕೆಟ್ ಖರೀದಿಸಿದ ಬಳಿಕ ನಮ್ಮ ಕೈಗೆ ಒಂದು ಪಟ್ಟಿ ಅಂಟಿಸುತ್ತಾರೆ. ನಾಲ್ಕು ಬಗೆಯ ಪ್ರವಾಸ ಪದ್ಧತಿಗಳಿವೆ. ಪ್ರಯಾಣದ ವೇಳೆಯನ್ನು ನಮೂದಿಸುತ್ತಾರೆ. ಸಾಂತಾ ಲೂಸಿಯಾ ಗಿರಿಧಾಮವನ್ನು ಏರಿ ಮುಂದೆ ಎಂಚಾಂಟೆಡ್ ಹಿಲ್‍ನ ಮೇಲೆ ಹೋದಂತೆ, ಹಲವಾರು ರ್ಯಂಚ್ ಗಳನ್ನು ಹಾದು, ಡಾಮರ್ ರಸ್ತೆಯಲ್ಲಿ ಹೋಗಬೇಕು. ಅನೇಕ ತಿರುವುಗಳ ಬಳಿಕ, ಅನೇಕ ಪ್ರಾಣಿಗಳು ಹುಲ್ಲುಮೇಯುತ್ತಿರುವ ದೃಶ್ಯ ಕಣ್ಣಿಗೆ ಗೋಚರಿಸುತ್ತದೆ. ೨ ಮೃಗಾಲಯಗಳಿವೆ. ಆದರೆ ಈಗ ಅಲ್ಲಿರುವುದು ಅವುಗಳಿದ್ದ ಕುರುಹುಗಳು ಮಾತ್ರ. ಬೆಟ್ಟದ ತಳಭಾಗದಲ್ಲಿ ಪೆಸಿಫಿಕ್ ಮಹಾಸಾಗರ, ಇನ್ನೊಂದು ಬದಿಯಲ್ಲಿ ಪೆಸಿಫಿಕ್ ಸಾಗರದ ನೀರು, ಸ್ಪರ್ಶಿಸುತ್ತಿರುತ್ತದೆ. ಮತ್ತೊಂದು ಕಡೆ, ಹಸಿರು ಗಿರಿಗಳ ಸಮೂಹ. ಇವೆಲ್ಲವನ್ನು ಪಾರುಮಾಡಿ ಬೆಟ್ಟದ ಮೇಲ್ಭಾಗಕ್ಕೆ ತಲುಪಿದರೆ, ಸಮತಟ್ಟಾದ ಮಟ್ಟಸವಾದ, ವಿಶಾಲವಾದ ಭೂಭಾಗವನ್ನು ಕಾಣುತ್ತೇವೆ.

ಚಾರಿತ್ರಿಕ ಸಂಗತಿಗಳು

ಸನ್, ೧೮೫೦ ರಲ್ಲಿ ಮಧ್ಯ ಅಮೆರಿಕದ ಮಿಸ್ಸೂರಿ ರಾಜ್ಯ ದಿಂದ ಜಾರ್ಜ್ ರಡೋಲ್ಫ್ ಹರ್ಸ್ಟ್ ಎಂಬ ಗಣಿತ ಶಾಸ್ತ್ರಜ್ಞ ಸಾನ್ ಸಿಮಿಯನ್ ಕೊಲ್ಲಿಯ ತೀರಕ್ಕೆ ಆಗಮಿಸಿದ. ಸೌಂದರ್ಯದ ಗಣಿಯಾಗಿದ್ದ ಈ ಪ್ರದೇಶ, ಅವನನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು. ಆತ ೪೦ ಸಾವಿರ ಜಮೀನನ್ನು ಖರೀದಿಸಿ ಹಸು ಕುದುರೆಗಳು ಮೇಯಲು ಅನುಕೂಲವಾಗುವಂತಹ ಹುಲ್ಲುಗಾವಲುಗಳನ್ನು ನಿರ್ಮಿಸಿದ. ಅವನ ೧೦ ವರ್ಷದ ಮಗ, ವಿಲಿಯಂ ರುಡಾಲ್ಫ್, ಬಾಲ್ಯದಲ್ಲೇ ಈ ಪ್ರದೇಶಕ್ಕೆ ಹೊಂದಿಕೊಂಡು ಅದನ್ನು ಪ್ರೀತಿಸಲಾರಂಭಿಸಿದ. ಅಲ್ಲೊಂದು ಅಭೂತ ಪೂರ್ವ ಬಂಗಲೆಯನ್ನು ನಿರ್ಮಿಸುವ ಕನಸುಕಂಡ.

ವಿಲಿಯಂ ರುಡಾಲ್ಫ್‌ನ ಕನಸಿನ ಕ್ಯಾಸೆಲ್ ಭವನ

೧೯೧೯ ರಲ್ಲಿ ವಿಲಿಯಂ ರುಡಾಲ್ಫ್ ತನ್ನ ಕನಸಿನ ಮನೆಯನ್ನು ಕಟ್ಟಲು ಆರಂಭಿಸಿದ. ಜೂಲಿಯಾ ಮಾರ್ಗನ್ ಎಂಬ ಸಿವಿಲ್ ಎಂಜಿನಿಯರಿಂಗ್ ಅಭಿಯಂತರೆ ಈ ಭವನದ ನೀಲ ನಕ್ಷೆಯನ್ನು ತಯಾರಿಸಿಕೊಟ್ಟಳು. ಆಕೆಯೊಬ್ಬ, ಕ್ಯಾಲಿಫೋರ್ನಿಯದ ಪ್ರಖ್ಯಾತ ವಾಸ್ತುಶಿಲ್ಪಿ. ಕೋಟೆ ಕೊತ್ತಲಕ್ಕೆ ಸಮರ್ಪವಾದ ಅಮೃತ ಶಿಲೆಗಳು, ಮರಮುಟ್ಟುಗಳು, ಹಾಗೂ ಪುರಾತನ ಕಾಲದ ಮೇರು ಕಲಾಕೃತಿಗಳನ್ನು ಯೂರೋಪಿನಿಂದ ಅಮದುಮಾಡಿಕೊಂಡರು. ಅವೆಲ್ಲಾ ಸಾನ್ ಸಿಮಿಯನ್ ಬಂದರಿಗೆ ಬಂದು ಬಿದ್ದವು. ಭವನ ಹಾಗೂ ಕ್ಯಾಸಲ್ ನಿರ್ಮಾಣಕ್ಕೆ, ೨೮ ವರ್ಷಗಳ ಸಮಯ ಹಿಡಿಯಿತು. ಕಾಸಾ ಗ್ರಾಂಡ್, ಮುಖ್ಯ ಮಹಲ್, ೩ ಅತಿಥಿ ಗೃಹಗಳು, ಒಟ್ಟು ೧೬೫ ಕೊಠಡಿಗಳು. ಹಲವಾರು ದಿವಾನಖಾನೆಗಳು, ಬಾಲ್ಕನಿಗಳು, ಗ್ರಂಥಾಲಯಗಳು, ಪ್ರತ್ಯೇಕ, ಒಟ್ಟು ವಿಸ್ತಾರ, ೯೦ ಸಾವಿರ ಚ.ಅಡಿಗಳು.

ಕಲಾಕೃತಿಗಳು ಯೂರೋಪ್ ಹಾಗೂ ಮಧ್ಯ ಪ್ರಾಚ್ಯದಿಂದ

ಮಧ್ಯ ಪ್ರಾಚ್ಯ ಯೂರೋಪ್‍ಗಳಿಂದ ತರಿಸಲಾದ ಸುಂದರ ಕಲಾಕೃತಿಗಳು ಈ ಭವನದ ತುಂಬ ವಿರಾಜಮಾನವಾಗಿವೆ. ತೇಗದಮರದಿಂದ ರಚಿಸಿದ ಕಪಾಟುಗಳು ಇವೆಲ್ಲಾ ಗ್ರೀಕ್ ಶೈಲಿಯ ಕೆತ್ತನೆಯಿಂದ ಶೋಭಿಸುತ್ತಿವೆ. ಬಂಗಲೆಯ ಮುಂಭಾಗದಲ್ಲಿ ಅಮೃತಶಿಲೆಯ ೩ ಮನಮೋಹಕ ಭಂಗಿಯ ಬಾಲೆಯರ ಮೂರ್ತಿಗಳಿವೆ. ಅತ್ಯಾಕರ್ಷಣೆಯ ಸೌಂದರ್ಯ, ಮತ್ತು ಸಂತೋಷವನ್ನು ಹೊರಹೊಮ್ಮಿಸುತ್ತವೆ. ಬಾಲ್ಕನಿಯಲ್ಲಿ ಅಥವಾ, ದಿವಾನ್ ಖಾನೆಯ ಸೋಫಾದ ಮೇಲೆ ಕುಳಿತೇ ನಾವು, ದೂರಬೆಟ್ಟದ ಬುಡಕ್ಕೆ ಶಾಂತಸಾಗರದ ಅಲೆಗಳು ಅಪ್ಪಳಿಸುವ ಭವ್ಯ ದೃಶ್ಯವನ್ನು ಕಾಣಬಹುದು. ಸುತ್ತಲೂ ಫಲಪುಷ್ಪಗಳ ಸುಂದರ ತೋಟಗಳಿವೆ. ೧೨೭ ಎಕರೆ, ವಿಸ್ತೀರ್ಣ ನಿರ್ಮಲ ಜಲವಿರುವ, ೨ ಈಜುಕೊಳಗಳಿವೆ. ಹರ್ಸ್ಟ್ ಕ್ಯಾಸಲ್, ಅಮೆರಿಕದ ಒಂದು ಸುಂದರ ಎಸ್ಟೇಟ್ ಎಂದು ಪರಿಗಣಿಸಲ್ಪಟ್ಟಿದೆ. ಬ್ರಿಟನ್‍ನ ಪ್ರಧಾನಿ ವಿನ್‍ಸ್ಟನ್ ಚರ್ಚಿಲ್ ಹಾಗೂ ಅನೇಕ ಪ್ರಸಿದ್ಧ ರಾಜಕಾರಣಿಗಳು, ಹಾಲಿವುಡ್‍ನ ಸುಪ್ರಸಿದ್ಧ ತಾರೆಯರು, ವಿಲಿಯಂ ಹರ್ಸ್ಟ್‌ನ ಆತಿಥ್ಯವನ್ನು ಸ್ವೀಕರಿಸುತ್ತಿದ್ದರು. ಒಂದು ಪುಟ್ಟ ವಿಮಾನನಿಲ್ದಾಣ ಪರಿವಾರದ ಉಪಯೋಗಕ್ಕಾಗಿಯೇ ಮೀಸಲಾಗಿದೆ.

ನಿಧನ

೧೯೫೦ ರಲ್ಲಿ ವಿಲಿಯಮ್ ರುಡಾಲ್ಫ್ ಹರ್ಸ್ಟ್ ವಿಧಿವಶನಾದನು. ೧೯೫೭ ರಲ್ಲಿ ಅವರ ಕುಟುಂಬದವರು, ಈ ಕೋಟೆ ಸ್ಮಾರಕಗಳನ್ನು ಅಮೆರಿಕಾ ಸರಕಾರಕ್ಕೆ ಒಪ್ಪಿಸಿದರು. ಸರ್ಕಾರ, ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿತು. ಹರ್ಸ್ಟ್ ಕ್ಯಾಸಲ್, ಒಂದು ಪ್ರಮುಖ, ಆಕರ್ಷಕ ಪ್ರವಾಸಿತಾಣವಾಗಿದೆ. ಪ್ರತಿವರ್ಷವೂ ಇಲ್ಲಿಗೆ, ಸುಮಾರು, ೭ ಲಕ್ಷ ಪರ್ಯಟಕರು ಬರುತ್ತಾರೆ.

ಬಂಗಲೆಯ ಮುಖ್ಯ ಕೊಠಡಿಗಳು

ಪಾಕಶಾಲೆ,: ಇಲ್ಲಿನ ಪಾಕಶಾಲೆ, ಅಗ್ನಿ ನಿರೋಧಕ ಗೋಡೆಗಳಿಂದ ಕೂಡಿದೆ. ಬೃಹದ್ ಗಾತ್ರದ ಅಡುಗೆ ಕುಕ್ಕರ್‍ಗಳು, ಗ್ರಿಲ್‍ಗಳು, ಓವೆನ್‍ಗಳು, ಮಿಕ್ಸರ್‍ಗಳು, ಇದ್ದು, ಡೈನಿಂಗ್ ಟೇಬಲ್‍ಗಳ ಮಾದರಿ ಎಂಥವರನ್ನೂ ಚಕಿತಗೊಳಿಸುತ್ತದೆ. ಬೆಳ್ಳಿ ಅಥವಾ ನಿಕ್ಕಲ್ ಲೋಹಗಳ ಮಿಶ್ರಣದಿಂದ ತಯಾರಾದ ಮೇಲ್ಭಾಗವನ್ನು ಹೊಂದಿದ ಮೇಜುಗಳಿವೆ. ಅವುಗಳ ಮೇಲೆ ಬಿಸಿ ಅಡುಗೆಯನ್ನು ಹೆಚ್ಚು ಹೊತ್ತು ಬಿಸಿಯಾಗಿ ಇಡಲಾಗುತ್ತದೆ.

ಭೋಜನ ಶಾಲೆ: ಇಲ್ಲಿ, ಬಳಸಿರುವ ಮೇಜು, ಟೇಬಲ್ ಟೆನ್ನಿಸ್ ಆಟದ ಮೇಜಿಗಿಂತ ವಿಶಾಲವಾಗಿದ್ದು ಸ್ಟೇನ್‍ಲೆಸ್ ಸ್ಟೀಲ್ ಹೊದಿಕೆಯಿದೆ.

ನೆಲಮಹಡಿಗಳು: ಇಲ್ಲಿ ೪ ವಾಕ್ ಇನ್ ರೆಫ್ರಿಜರೇಟರ್‍ಗಳಿವೆ. ಶ್ರೇಷ್ಠ ದರ್ಜೆಯ ವೈನ್ ಸಂಗ್ರಹವಿದೆ.

ಜಾಲತಾಣ

Tags:

ಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯ ಕ್ಯಾಸಲ್ ಇರುವ ತಾಣಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯ ಹರ್ಸ್ಟ್ ಕ್ಯಾಸಲ್‍ನ, ಸ್ವಾಗತ ಕೇಂದ್ರಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯ ಚಾರಿತ್ರಿಕ ಸಂಗತಿಗಳುಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯ ವಿಲಿಯಂ ರುಡಾಲ್ಫ್‌ನ ಕನಸಿನ ಕ್ಯಾಸೆಲ್ ಭವನಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯ ಕಲಾಕೃತಿಗಳು ಯೂರೋಪ್ ಹಾಗೂ ಮಧ್ಯ ಪ್ರಾಚ್ಯದಿಂದಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯ ನಿಧನಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯ ಬಂಗಲೆಯ ಮುಖ್ಯ ಕೊಠಡಿಗಳುಹರ್ಸ್ಟ್ ಕ್ಯಾಸಲ್, ಕ್ಯಾಲಿಫೋರ್ನಿಯಲಾಸ್ ಎಂಜಲೀಸ್

🔥 Trending searches on Wiki ಕನ್ನಡ:

ಹರಿದಾಸರೋಸ್‌ಮರಿವರ್ಲ್ಡ್ ವೈಡ್ ವೆಬ್ಹುರುಳಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೃತ್ತಪತ್ರಿಕೆನಾಮಪದಮೀನಾ (ನಟಿ)ಮಾರುಕಟ್ಟೆಏಡ್ಸ್ ರೋಗಸಾವಿತ್ರಿಬಾಯಿ ಫುಲೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೆ. ಎಸ್. ನರಸಿಂಹಸ್ವಾಮಿಅರ್ಥಶಾಸ್ತ್ರಪುತ್ತೂರುಡಿ.ವಿ.ಗುಂಡಪ್ಪಕರಗಶ್ರವಣಬೆಳಗೊಳಕನ್ನಡ ವ್ಯಾಕರಣಕೃಷಿ ಸಸ್ಯಶಾಸ್ತ್ರಹೈಡ್ರೊಕ್ಲೋರಿಕ್ ಆಮ್ಲಶಿಶುನಾಳ ಶರೀಫರುಜಲ ಮಾಲಿನ್ಯರಾಮಗಣಮಡಿವಾಳ ಮಾಚಿದೇವಅಡಿಕೆಲೆಕ್ಕ ಪರಿಶೋಧನೆಧೂಮಕೇತುಗ್ರಂಥ ಸಂಪಾದನೆಸಾರ್ವಜನಿಕ ಹಣಕಾಸುಆಟಶಾಲೆಧೊಂಡಿಯ ವಾಘ್ಕೇಂದ್ರ ಲೋಕ ಸೇವಾ ಆಯೋಗಗುಣ ಸಂಧಿಪಂಚ ವಾರ್ಷಿಕ ಯೋಜನೆಗಳುಬಲಋತುಕೃಷಿಮಯೂರವರ್ಮಕನ್ನಡ ಸಾಹಿತ್ಯ ಪರಿಷತ್ತುಭಾರತೀಯ ನದಿಗಳ ಪಟ್ಟಿಕರ್ನಾಟಕದಲ್ಲಿ ಸಹಕಾರ ಚಳವಳಿಬಿ. ಎಂ. ಶ್ರೀಕಂಠಯ್ಯಕನ್ನಡ ಸಂಧಿವಿಭಕ್ತಿ ಪ್ರತ್ಯಯಗಳುಷಟ್ಪದಿಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಮಿನ್ನಿಯಾಪೋಲಿಸ್ತ್ರಿಪದಿಕ್ರಿಕೆಟ್ಅಷ್ಟಾವಕ್ರಶ್ರೀಶೈಲಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಪಿ.ಲಂಕೇಶ್ವಿಷ್ಣುವರ್ಧನ್ (ನಟ)ಶಾತವಾಹನರುಹವಾಮಾನಭಾರತದ ಆರ್ಥಿಕ ವ್ಯವಸ್ಥೆಆಂಗ್‌ಕರ್ ವಾಟ್ವಾಲಿಬಾಲ್ಮಾನವನ ನರವ್ಯೂಹಪಾಲಕ್ಕನ್ನಡ ಗುಣಿತಾಕ್ಷರಗಳುಬದ್ರ್ ಯುದ್ಧಕನ್ನಡದಲ್ಲಿ ವಚನ ಸಾಹಿತ್ಯನೈಟ್ರೋಜನ್ ಚಕ್ರಪ್ರಾಣಿಚದುರಂಗ (ಆಟ)ಚಿನ್ನಸಸ್ಯಕರ್ನಾಟಕದ ಇತಿಹಾಸಯುಗಾದಿತಂಬಾಕು ಸೇವನೆ(ಧೂಮಪಾನ)ಮಾಧ್ಯಮಬಿಪಾಶಾ ಬಸುಯಕ್ಷಗಾನ🡆 More