ಸೊರಬ

ಸೊರಬವು ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸೆರಗಿನಲ್ಲಿರುವ ಒಂದು ತಾಲೂಕು.

ದಂಡಾವತಿ ನದಿ ತೀರದಲ್ಲಿರುವ ಇದು ಸಮುದ್ರಮಟ್ಟದಿಂದ ಅಂದಾಜು ೫೮೦ ಮೀಟರ್ ಎತ್ತರದಲ್ಲಿದೆ. ಶಿವಮೊಗ್ಗ ಜಿಲ್ಲಾಕೇಂದ್ರದಿಂದ ೮೫ ಕಿಮೀ ದೂರದಲ್ಲಿದೆ.

ಸೊರಬ
ಸೊರಬ is located in Karnataka
ಸೊರಬ
ಸೊರಬ
Location in Karnataka, India
Coordinates: 14°23′N 75°06′E / 14.38°N 75.1°E / 14.38; 75.1
Countryಸೊರಬ ಭಾರತ
Stateಕರ್ನಾಟಕ
Districtಶಿವಮೊಗ್ಗ
SubdivisionSagara
ಸರ್ಕಾರ
 • ಪಾಲಿಕೆTown Panchayat
Elevation
೫೮೦ m (೧,೯೦೦ ft)
Population
 (೨೦೦೧)
 • Total೭,೪೨೪
Languages
 • Officialಕನ್ನಡ
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿKA-15(Sagara)

ಇತಿವೃತ್ತ

ಸೊರಬದ ಮೂಲ ಹೆಸರು ಸುರಭಿಪುರ, ಇಲ್ಲಿ ಒಂದು ಸುರಭಿ (ಆಕಳು) ರಂಗನಾಥದೇವರಿಗೆ ಹಾಲಿನ ಅಭಿಷೇಕ ಮಾಡುತ್ತಿತ್ತೆಂಬ ಪ್ರತೀತಿ ಇದೆ. ಅಲ್ಲಿ ಈಗಿನ ದೇವಸ್ಥಾನವನ್ನು ಹಳೆಸೊರಬದ ಒಬ್ಬ ಗೌಡರು ಕಟ್ಟಿಸಿದರು ಎಂಬುವುದರ ಬಗ್ಗೆ ದಂಡಾವತಿ ನದಿತೀರದಲ್ಲಿ ಶಿಲಾಶಾಸನವಿದೆ. ಸೊರಬವು ಶ್ರೀಗಂಧದ ಕರಕುಶಲ ಕಲೆಗೆ ಪ್ರಸಿದ್ದವಾಗಿದೆ.

ಭೌಗೋಳಿಕ ಲಕ್ಷಣಗಳು

ಸೊರಾಬಾವು 14.38 ° N 75.1 ° E ನಲ್ಲಿ ಇದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 580 ಮೀಟರ್ (1902 ಅಡಿ)ಎತ್ತರದಲ್ಲಿದೆ . ಸೊರಾಬ ಪೂರ್ವಕ್ಕೆ ಶಿಕಾರಿಪುರ ತಾಲೂಕು, ದಕ್ಷಿಣಕ್ಕೆ ಸಾಗರ ತಾಲೂಕು, ಪಶ್ಚಿಮಕ್ಕೆ ಸಿದ್ಧಾಪುರ ತಾಲೂಕು, ಪೂರ್ವಕ್ಕೆ ಹಿರೇಕೆರೂರು ತಾಲೂಕುಗಳಿಂದ ಸುತ್ತುವರೆಯಲ್ಪಟಿದೆ.

ಹವಾಮಾನ

ಇಲ್ಲಿನ ಹವಾಮಾನ ಉಷ್ಣವಲಯವಾಗಿದೆ.ಇಲ್ಲಿ ಹವಾಮಾನವನ್ನು ಕೊಪ್ಪನ್-ಗೈಜರ್ ವ್ಯವಸ್ಥೆಯ ಮೂಲಕ ಎವ್ ಎಂದು ವರ್ಗೀಕರಿಸಲಾಗಿದೆ. ಸೊರಬದಲ್ಲಿ ಸರಾಸರಿ ತಾಪಮಾನವು 24.6 °C ಆಗಿದೆ. ಇಲ್ಲಿ ವಾರ್ಷಿಕ ಸರಾಸರಿ 1583 ಮಿಮೀ ಮಳೆ ಸುರಿಯುತ್ತದೆ .

ಜನಸಂಖ್ಯೆ

೨೦೦೧ರ ಜನಗಣತಿಯಂತೆ ಇಲ್ಲಿ೨,೦೦,೮೦೯ ಜನಸಂಖ್ಯೆ ನಮೂದಾಗಿದ್ದು, ಜನಸಂಖ್ಯೆಯ 11% ರಷ್ಟು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು . ೫೧:೪೯ ಅನುಪಾತದಲ್ಲಿ ಪುರುಷರು ಮತ್ತು ಮಹಿಳೆಯರು ಇರುತ್ತಾರೆ. ಸೊರಬ ಸರಾಸರಿ 78.67% ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿಕ್ಕಿಂತ ಹೆಚ್ಚಾಗಿದೆ (ಪುರುಷ ಸಾಕ್ಷರತೆ 85.63% ಮತ್ತು ಮಹಿಳೆಯರ ಸಾಕ್ಷರತೆ 71.62%). ಇಲ್ಲಿಯ ಜನರ ಮುಖ್ಯ ಜೀವನಾಧಾರ ಕೃಷಿ. ಸಾಮಾನ್ಯವಾಗಿ ಕೃಷಿಕರೇ ಪ್ರಧಾನವಾಗಿರುವ ಹಳ್ಳಿಗಳೇ ಹೆಚ್ಚು. ಭತ್ತ ಪ್ರಮುಖ ಬೆಳೆ ಇದಲ್ಲದೆ ಅಡಿಕೆ, ಶುಂಠಿ, ಜೋಳ, ಬಾಳೆ ಕೂಡ ಬೆಳೆಯಲಾಗುತ್ತದೆ.

ಶಿಕ್ಷಣ ವ್ಯವಸ್ಥೆ

ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಸರ್ಕಾರಿ ಮತ್ತು ಅನೇಕ ಖಾಸಗಿ ಶಾಲೆಗಳಿದ್ದು ಉತ್ತಮ ಶಿಕ್ಷಣ ನೀಡುತ್ತಿವೆ. ಕಾಲೇಜು ಹಂತದಲ್ಲಿ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು, ಒಂದು ತಾಂತ್ರಿಕ ವಿದ್ಯಾಲಯ(ಪಾಲಿಟೆಕ್ನಿಕ್), ಮತ್ತು ಸರ್ಕಾರಿ ಪದವಿ ಕಾಲೇಜು ಕೂಡ ಇದೆ.

ಸೊರಬ ತಾಲೂಕಿನಲ್ಲಿನ ಪ್ರೇಕ್ಷಣೀಯ ಸ್ಥಳಗಳು

  1. ಗುಡವಿ ಪಕ್ಷಿಧಾಮ
  2. ಚಂದ್ರಗುತ್ತಿ
  3. ಕುಬೆತೂರು

ಇತರ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು

  1. ಕೆಳದಿ,
  2. ಇಕ್ಕೇರಿ,
  3. ಜೋಗ ಜಲಪಾತ,
  4. ಬನವಾಸಿ
  5. ಸಿರ್ಸಿ


ಸೊರಬ ತಾಲೂಕಿನ ಹಳ್ಳಿಗಳು

  1. ಗುಡವಿ
  2. ನಡಹಳ್ಳಿ
  3. ಹೊಸಬಾಳೆ
  4. ಚೀಲನೂರು
  5. ಶಿಗ್ಗಾ
  6. ಕಾನ್ ಬೈಲ್
  7. ಜಡೆ
  8. ಹಾಲಗಳಲೆ
  9. ಚಂದ್ರಗುತ್ತಿ
  10. ಹೊಳೆ ಜೋಳದಗುಡ್ಡೆ
  11. ದ್ವಾರಹಳ್ಳಿ

ಉಲ್ಲೇಖಗಳು

Tags:

ಸೊರಬ ಇತಿವೃತ್ತಸೊರಬ ಭೌಗೋಳಿಕ ಲಕ್ಷಣಗಳುಸೊರಬ ಹವಾಮಾನಸೊರಬ ಜನಸಂಖ್ಯೆಸೊರಬ ಶಿಕ್ಷಣ ವ್ಯವಸ್ಥೆಸೊರಬ ತಾಲೂಕಿನಲ್ಲಿನ ಪ್ರೇಕ್ಷಣೀಯ ಸ್ಥಳಗಳುಸೊರಬ ಇತರ ಹತ್ತಿರದ ಪ್ರೇಕ್ಷಣೀಯ ಸ್ಥಳಗಳುಸೊರಬ ತಾಲೂಕಿನ ಹಳ್ಳಿಗಳುಸೊರಬ ಉಲ್ಲೇಖಗಳುಸೊರಬ

🔥 Trending searches on Wiki ಕನ್ನಡ:

ಜವಾಹರ‌ಲಾಲ್ ನೆಹರುಭಕ್ತಿ ಚಳುವಳಿಕ್ರಿಯಾಪದಪಂಪರಾಮಾಚಾರಿ (ಕನ್ನಡ ಧಾರಾವಾಹಿ)ಚಂದ್ರಯಾನ-೩ಕುಟುಂಬಗ್ರಹರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಒಗಟುಭಗತ್ ಸಿಂಗ್ಬೆಂಗಳೂರು ಗ್ರಾಮಾಂತರ ಜಿಲ್ಲೆಶ್ರೀ ರಾಮಾಯಣ ದರ್ಶನಂಎರಡನೇ ಮಹಾಯುದ್ಧಮನಮೋಹನ್ ಸಿಂಗ್ಕನ್ನಡ ಕಾಗುಣಿತಮುಹಮ್ಮದ್ನದಿಶಬ್ದಬ್ಯಾಂಕಿಂಗ್ ವ್ಯವಸ್ಥೆವಿಷ್ಣುಕರ್ಣಕಲೆಆಟಗಾರ (ಚಲನಚಿತ್ರ)ವಾಯು ಮಾಲಿನ್ಯಅರ್ಥಸಂಗೀತಭಾರತದ ಸಂವಿಧಾನದಾಸವಾಳಶಾತವಾಹನರುಪ್ರೇಮಾರಾಜಾ ರವಿ ವರ್ಮಮುಟ್ಟು ನಿಲ್ಲುವಿಕೆಪ್ಲೇಟೊರಂಗಭೂಮಿಹಿಂದೂ ಧರ್ಮಹೊಯ್ಸಳ ವಿಷ್ಣುವರ್ಧನಚಾಮುಂಡರಾಯಜಾತ್ರೆಸಿಂಧೂತಟದ ನಾಗರೀಕತೆಪಂಚಾಂಗದ್ವಂದ್ವ ಸಮಾಸತಾಜ್ ಮಹಲ್ವೃತ್ತಪತ್ರಿಕೆಗಂಗ (ರಾಜಮನೆತನ)ಕರ್ನಾಟಕದ ಮಹಾನಗರಪಾಲಿಕೆಗಳುಜನ್ನಬಾಲ್ಯ ವಿವಾಹಲೋಕಸಭೆಅಂತಿಮ ಸಂಸ್ಕಾರಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಸಿಂಧನೂರುದೇವತಾರ್ಚನ ವಿಧಿಹೆಳವನಕಟ್ಟೆ ಗಿರಿಯಮ್ಮರವೀಂದ್ರನಾಥ ಠಾಗೋರ್ತುಳುಚನ್ನವೀರ ಕಣವಿಶಿವಪ್ಪ ನಾಯಕಉದಯವಾಣಿಸಮಾಸಮಡಿವಾಳ ಮಾಚಿದೇವಹನುಮಾನ್ ಚಾಲೀಸಸ್ವಾಮಿ ವಿವೇಕಾನಂದಗೋಪಾಲಕೃಷ್ಣ ಅಡಿಗಅಮೃತಬಳ್ಳಿನೈಸರ್ಗಿಕ ಸಂಪನ್ಮೂಲಕರ್ನಾಟಕ ರತ್ನಕಿತ್ತೂರುಯಕ್ಷಗಾನಕರ್ನಾಟಕದ ತಾಲೂಕುಗಳುಯಕೃತ್ತುಚಂದ್ರಶೇಖರ ವೆಂಕಟರಾಮನ್ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಸೂರ್ಯವ್ಯೂಹದ ಗ್ರಹಗಳುನುಡಿ (ತಂತ್ರಾಂಶ)ಶಿವರಾಜ್‍ಕುಮಾರ್ (ನಟ)ಜಾಗತೀಕರಣಸೋಮನಾಥಪುರ🡆 More