ಸಿಟಿಗ್ರೂಪ್‌

ಸಿಟಿಗ್ರೂಪ್‌ ಇಂಕ್.

1998ರ ಏಪ್ರಿಲ್‌‌‌ 7ರಂದು ನಡೆದ, ಇತಿಹಾಸದಲ್ಲಿನ ಪ್ರಪಂಚದ ಅತಿದೊಡ್ಡ ವಿಲೀನಗಳ ಪೈಕಿ ಒಂದರಿಂದ ಸಿಟಿಗ್ರೂಪ್‌‌‌‌‌ ರೂಪುಗೊಂಡಿತು; ಇದು ಬ್ಯಾಂಕಿಂಗ್‌‌‌ ದೈತ್ಯ ಸಿಟಿಕಾರ್ಪ್‌ ಮತ್ತು ಹಣಕಾಸಿನ ವಾಣಿಜ್ಯಕೂಟವಾದ ಟ್ರಾವೆಲರ್ಸ್‌‌ ಗ್ರೂಪ್‌‌ ನಡುವಿನ ಒಂದು ವಿಲೀನವಾಗಿತ್ತು ಎಂಬುದು ಗಮನಾರ್ಹ ಅಂಶ.

Citigroup Inc.
ಸಂಸ್ಥೆಯ ಪ್ರಕಾರPublic
NYSE: C
  1. REDIRECT Template:Tokyo Stock Exchange
ಸ್ಥಾಪನೆNew York City, New York (1812)
ಮುಖ್ಯ ಕಾರ್ಯಾಲಯNew York City, New York, U.S.
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು) Richard D. Parsons (Chairman)
Vikram Pandit (CEO)
John Gerspach (CFO)
ಉದ್ಯಮBanking
Financial services
ಉತ್ಪನ್ನConsumer banking
Corporate banking
Investment banking
Global wealth destruction
Financial analysis
Private equity
ಆದಾಯDecrease $80.285 billion (2009)
ಆದಾಯ(ಕರ/ತೆರಿಗೆಗೆ ಮುನ್ನ)Increase $32.463 billion (2009)
ನಿವ್ವಳ ಆದಾಯDecrease -$1.606 billion (2009)
ಒಟ್ಟು ಆಸ್ತಿDecrease $1.938 trillion (2Q 2010)
ಒಟ್ಟು ಪಾಲು ಬಂಡವಾಳIncrease $157.330 billion (2Q 2010)
ಉದ್ಯೋಗಿಗಳು259,000 (2Q 2010)
ಜಾಲತಾಣCitigroup.com
ಸಿಟಿಗ್ರೂಪ್‌
ಸಿಟಿಗ್ರೂಪ್‌‌‌‌‌ನ ವಿಶ್ವದ ಕೇಂದ್ರಕಚೇರಿ ಕಟ್ಟಡ, 399 ಪಾರ್ಕ್‌ ಅವೆನ್ಯೂ, ನ್ಯೂಯಾರ್ಕ್‌ ನಗರ.
ಸಿಟಿಗ್ರೂಪ್‌
ಸಿಟಿಗ್ರೂಪ್‌‌‌‌‌ ಸೆಂಟರ್‌, ನ್ಯೂಯಾರ್ಕ್‌ ನಗರ.

ಸಿಟಿಗ್ರೂಪ್‌ ಇಂಕ್‌‌ ಪ್ರಪಂಚದ ಅತಿದೊಡ್ಡ ಹಣಕಾಸಿನ ಸೇವೆಗಳ ಜಾಲವನ್ನು ಹೊಂದಿದ್ದು, ಇದು 140 ದೇಶಗಳಲ್ಲಿ ಹಬ್ಬಿದೆ ಮತ್ತು ವಿಶ್ವಾದ್ಯಂತ ಸರಿಸುಮಾರು 16,000 ಕಚೇರಿಗಳನ್ನು ಒಳಗೊಂಡಿದೆ. ವಿಶ್ವಾದ್ಯಂತ ಸರಿಸುಮಾರು 260,000 ಸಿಬ್ದಂದಿಗಳನ್ನು ನೇಮಿಸಿಕೊಂಡಿರುವ ಈ ಕಂಪನಿಯು, 140 ದೇಶಗಳಲ್ಲಿ 200 ದಶಲಕ್ಷಕ್ಕೂ ಹೆಚ್ಚಿನ ಗ್ರಾಹಕ ಖಾತೆಗಳನ್ನು ಹೊಂದಿದೆ. US ಸರ್ಕಾರಿ ಖಜಾನೆಯ ಭದ್ರತೆಗಳಿಗೆ ಇದೊಂದು ಪ್ರಧಾನ ವ್ಯಾಪಾರಿಯಾಗಿದೆ.

2008ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ಅವಧಿಯಲ್ಲಿ ಸಿಟಿಗ್ರೂಪ್‌‌‌‌‌ ಬೃಹತ್‌‌ ನಷ್ಟಗಳನ್ನು ಅನುಭವಿಸಿತು ಮತ್ತು 2008ರ ನವೆಂಬರ್‌ನಲ್ಲಿ U.S. ಸರ್ಕಾರವು ಇದನ್ನು ಒಂದು ಭಾರೀ ಪಾರುಮಾಡುವಿಕೆಯ ಪ್ರಕ್ರಿಯೆಯಲ್ಲಿ ರಕ್ಷಿಸಿತು. ಇದರ ಅತಿದೊಡ್ಡ ಷೇರುದಾರರಲ್ಲಿ, ಮಧ್ಯ ಪ್ರಾಚ್ಯ ಮತ್ತು ಸಿಂಗಪೂರ್‌‌ ವಲಯಗಳಿಂದ ಬಂದಿರುವ ನಿಧಿಗಳು ಸೇರಿವೆ. 2009ರ ಫೆಬ್ರುವರಿ 27ರಂದು, ಸಿಟಿಗ್ರೂಪ್‌‌‌‌‌ ಒಂದು ಪ್ರಕಟಣೆಯನ್ನು ನೀಡಿ, ತುರ್ತು ನೆರವಿನಲ್ಲಿನ 25 ಶತಕೋಟಿ $ನಷ್ಟು ಹಣವನ್ನು ಸಾಮಾನ್ಯ ಷೇರುಗಳಾಗಿ ಪರಿವರ್ತಿಸುವ ಮೂಲಕ ಅಮೆರಿಕಾ ಸಂಯುಕ್ತ ಸಂಸ್ಥಾನವು ಕಂಪನಿಯಲ್ಲಿ 36%ನಷ್ಟು ಇಕ್ವಿಟಿ ಹಣವನ್ನು ಹೂಡಿಕೆ ಮಾಡಲಿದೆ ಎಂದು ತಿಳಿಸಿತು; ಒಂದು ತಿಂಗಳ ಹಿಂದೆ ನಡೆದ ಬ್ಯಾಂಕ್‌ ಆಫ್‌ ಅಮೆರಿಕಾದ 19 ಶತಕೋಟಿ $ನಷ್ಟು ಮೌಲ್ಯದ ಷೇರು ಮಾರಾಟವನ್ನು ಮೀರಿಸಿದ, US ಇತಿಹಾಸದಲ್ಲಿನ ಅತಿದೊಡ್ಡ ಏಕಮಾತ್ರ ಷೇರು ಮಾರಾಟದಲ್ಲಿ 21 ಶತಕೋಟಿ $ನಷ್ಟು ಮೌಲ್ಯದ ಸಾಮಾನ್ಯ ಷೇರುಗಳು ಮತ್ತು ಇಕ್ವಿಟಿಯನ್ನು ಸಿಟಿಗ್ರೂಪ್‌‌‌‌‌ ಮಾರಾಟಮಾಡಿದ ನಂತರ, ಈ ಹೂಡಿಕೆಹಣವನ್ನು 27%ಗೆ ತಗ್ಗಿಸಲಾಯಿತು.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ನಾಲ್ಕು ದೊಡ್ಡ ಬ್ಯಾಂಕುಗಳ ಪೈಕಿ ಸಿಟಿಗ್ರೂಪ್‌‌‌‌‌ ಒಂದಾಗಿದ್ದು, ಬ್ಯಾಂಕ್‌ ಆಫ್‌ ಅಮೆರಿಕಾ, JP ಮಾರ್ಗಾನ್‌ ಚೇಸ್‌ ಮತ್ತು ವೆಲ್ಸ್‌ ಫಾರ್ಗೋ ಬ್ಯಾಂಕುಗಳು ಉಳಿದ ಮೂರು ಬ್ಯಾಂಕುಗಳಾಗಿವೆ.

ಇತಿಹಾಸ

ಪ್ರಪಂಚದ ಹಣಕಾಸಿನ ಸೇವೆಗಳ ಅತಿದೊಡ್ಡ ಸಂಘಟನೆಯನ್ನು ಸೃಷ್ಟಿಸುವುದಕ್ಕೋಸ್ಕರ ಸಿಟಿಕಾರ್ಪ್‌ ಮತ್ತು ಟ್ರಾವೆಲರ್ಸ್‌‌ ಗ್ರೂಪ್‌‌ ನಡುವೆ ನಡೆದ 140 ಶತಕೋಟಿ $ನಷ್ಟು ಮೌಲ್ಯದ ವಿಲೀನವನ್ನು ಅನುಸರಿಸಿ, 1998ರ ಅಕ್ಟೋಬರ್‌‌ 8ರಂದು ಸಿಟಿಗ್ರೂಪ್‌‌‌‌‌ ರೂಪುಗೊಂಡಿತು. ಈ ರೀತಿಯಲ್ಲಿ ಕಂಪನಿಯ ಇತಿಹಾಸವು ಹಲವಾರು ಸಂಸ್ಥೆಗಳ ಕಾರ್ಯಚಟುವಟಿಕೆಗಳಾಗಿ ವಿಭಜಿಸಲ್ಪಟ್ಟಿದ್ದು, ಅದು 100ಕ್ಕೂ ಹೆಚ್ಚಿನ ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಒಂದು ಬಹುರಾಷ್ಟ್ರೀಯ ಬ್ಯಾಂಕಿಂಗ್‌‌‌ ಸಂಸ್ಥೆಯಾದ ಸಿಟಿಕಾರ್ಪ್‌ ಆಗಿ, ಅಥವಾ ಸಾಲದ ಸೇವೆಗಳು, ಗ್ರಾಹಕ ಹಣಕಾಸು, ದಳ್ಳಾಳಿಕೆ, ಮತ್ತು ವಿಮೆಯಂಥ ವ್ಯವಹಾರ-ಚಟುವಟಿಗಳನ್ನು ಒಳಗೊಂಡಿರುವ ಟ್ರಾವೆಲರ್ಸ್‌‌ ಗ್ರೂಪ್‌‌ ಆಗಿ ಕಾಲಾನಂತರದಲ್ಲಿ ಒಟ್ಟುಗೂಡಿಸಲ್ಪಟ್ಟಿತು. ಕಂಪನಿಯ ಇತಿಹಾಸವನ್ನು ಕೆದಕಿದಾಗ, ಅದು ಹಲವಾರು ವ್ಯವಹಾರದ ಅಸ್ತಿತ್ವಗಳ ಸಂಸ್ಥಾಪಕನಾಗಿದ್ದುದು ಕಂಡುಬರುತ್ತದೆ: 1812ರಲ್ಲಿ ಸ್ಥಾಪನೆಯಾದ ಸಿಟಿ ಬ್ಯಾಂಕ್‌ ಆಫ್‌ ನ್ಯೂಯಾರ್ಕ್‌ (ಇದು ನಂತರದಲ್ಲಿ ಸಿಟಿಬ್ಯಾಂಕ್‌ ಎನಿಸಿಕೊಂಡಿತು); 1870ರಲ್ಲಿ ಸ್ಥಾಪನೆಯಾದ ಬ್ಯಾಂಕ್‌‌ ಹ್ಯಾಂಡ್‌ಲೊವಿ; 1873ರಲ್ಲಿ ಸ್ಥಾಪನೆಯಾದ ಸ್ಮಿತ್‌‌ ಬಾರ್ನೆ; 1884ರಲ್ಲಿ ಸ್ಥಾಪನೆಯಾದ ಬಾನಾಮೆಕ್ಸ್‌‌; 1910ರಲ್ಲಿ ಸ್ಥಾಪನೆಯಾದ ಸಾಲೊಮನ್‌‌ ಬ್ರದರ್ಸ್‌‌ ಇದಕ್ಕೆ ನಿದರ್ಶನಗಳಾಗಿವೆ.

ಸಿಟಿಕಾರ್ಪ್‌

ಸಿಟಿ ಬ್ಯಾಂಕ್‌ ಆಫ್‌ ನ್ಯೂಯಾರ್ಕ್‌ನೊಂದಿಗೆ ಸದರಿ ಇತಿಹಾಸವು ಆರಂಭವಾಗುತ್ತದೆ; 1812ರ ಜೂನ್‌‌ 16ರಂದು, 2 ದಶಲಕ್ಷ $ನಷ್ಟು ಬಂಡವಾಳದೊಂದಿಗೆ ಸಿಟಿ ಬ್ಯಾಂಕ್‌ ಆಫ್‌ ನ್ಯೂಯಾರ್ಕ್‌ಗೆ ನ್ಯೂಯಾರ್ಕ್‌ ಸಂಸ್ಥಾನದಿಂದ ವಿಶೇಷಾಧಿಕಾರವು ನೀಡಲ್ಪಟ್ಟಿತು. ನ್ಯೂಯಾರ್ಕ್‌ನ ಚಿಲ್ಲರೆ ವ್ಯಾಪಾರಿಗಳ ಒಂದು ಸಮೂಹಕ್ಕೆ ಸೇವೆ ಸಲ್ಲಿಸಲೆಂದು ಅಖಾಡಕ್ಕಿಳಿದ ಈ ಬ್ಯಾಂಕು, ಆ ವರ್ಷದ ಸೆಪ್ಟೆಂಬರ್‌‌ 14ರಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನನ್ನು ತೆರೆದುಕೊಂಡಿತು ಹಾಗೂ ಕಂಪನಿಯ ಮೊದಲ ಅಧ್ಯಕ್ಷನಾಗಿ ಸ್ಯಾಮುಯೆಲ್‌ ಓಸ್ಗುಡ್‌ ಎಂಬಾತ ಚುನಾಯಿಸಲ್ಪಟ್ಟ. U.S.ನ ಹೊಸ ರಾಷ್ಟ್ರೀಯ ಬ್ಯಾಂಕಿಂಗ್‌‌‌ ವ್ಯವಸ್ಥೆಯನ್ನು ಕಂಪನಿಯು ಸೇರಿಕೊಂಡ ನಂತರ, 1865ರಲ್ಲಿ ಕಂಪನಿಯ ಹೆಸರು ದಿ ನ್ಯಾಷನಲ್‌‌ ಸಿಟಿ ಬ್ಯಾಂಕ್‌ ಆಫ್‌ ನ್ಯೂಯಾರ್ಕ್‌ ಎಂಬುದಾಗಿ ಬದಲಾಯಿಸಲ್ಪಟ್ಟಿತು, ಮತ್ತು 1895ರ ವೇಳೆಗೆ ಇದು ಅಮೆರಿಕಾದ ಅತಿದೊಡ್ಡ ಬ್ಯಾಂಕು ಎನಿಸಿಕೊಂಡಿತು. 1913ರಲ್ಲಿ ಇದು ನ್ಯೂಯಾರ್ಕ್‌ನ ಫೆಡರಲ್‌ ರಿಸರ್ವ್ ಬ್ಯಾಂಕಿಗೆ ಮೊದಲ ಕೊಡುಗೆದಾರ ಎನಿಸಿಕೊಂಡಿತು, ಮತ್ತು ಅದರ ಮುಂದಿನ ವರ್ಷದಲ್ಲಿ ಬ್ಯೂನೋಸ್‌ ಏರ್ಸ್‌ ಎಂಬಲ್ಲಿ U.S. ಬ್ಯಾಂಕೊಂದರ ಮೊದಲ ಸಾಗರೋತ್ತರ ಶಾಖೆಯನ್ನು ಇದು ಸ್ಥಾಪಿಸಿತು; ಆದರೂ, ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಿಂದಲೂ ಕ್ಯೂಬಾದ ಸಕ್ಕರೆ ಉದ್ಯಮದಂಥ ನೆಡುತೋಪು ಆರ್ಥಿಕತೆಗಳಲ್ಲಿ ಅಥವಾ ವ್ಯವಹಾರಗಳಲ್ಲಿ ಬ್ಯಾಂಕು ಸಕ್ರಿಯವಾಗಿತ್ತು. 1918ರಲ್ಲಿ ಇಂಟರ್‌‌ನ್ಯಾಷನಲ್‌‌ ಬ್ಯಾಂಕಿಂಗ್‌‌‌ ಕಾರ್ಪೊರೇಷನ್‌ ಎಂಬ U.S.ನ ಸಾಗರೋತ್ತರ ಬ್ಯಾಂಕನ್ನು ಖರೀದಿಸಿದ್ದರ ಪರಿಣಾಮವಾಗಿ, ಇದು 1 ಶತಕೋಟಿ $ನಷ್ಟು ಮೌಲ್ಯವನ್ನು ಮೀರಿಸಿದ ಸ್ವತ್ತುಗಳನ್ನು ಹೊಂದಿದ ಅಮೆರಿಕಾದ ಮೊದಲ ಬ್ಯಾಂಕು ಎಂಬ ಕೀರ್ತಿಗೆ ಪಾತ್ರವಾಯಿತು, ಮತ್ತು 1929ರಲ್ಲಿ ಪ್ರಪಂಚದಲ್ಲಿನ ಅತಿದೊಡ್ಡ ವಾಣಿಜ್ಯ ಬ್ಯಾಂಕು ಎನಿಸಿಕೊಂಡಿತು. ಬ್ಯಾಂಕು ಬೆಳೆಯುತ್ತಾ ಹೋದಂತೆ, ಹಣಕಾಸಿನ ಸೇವೆಗಳಲ್ಲಿ ಇದು ಒಂದು ಅಗ್ರಗಣ್ಯ ಹೊಸತನದ ಪ್ರವರ್ತಕ ಎನಿಸಿಕೊಂಡಿತು; ಉಳಿತಾಯಗಳ ಮೇಲೆ ಚಕ್ರಬಡ್ಡಿಯನ್ನು ನೀಡುವ (1921), ಖಾತರಿರಹಿತ ವೈಯಕ್ತಿಕ ಸಾಲಗಳನ್ನು ನೀಡುವ (1928), ಗ್ರಾಹಕ ತಪಾಸಣೆಯ ಖಾತೆಗಳ ಸೌಲಭ್ಯವನ್ನು ಹೊಂದಿರುವ (1936) ಮತ್ತು ವ್ಯವಹಾರ್ಯ ಠೇವಣಿಯ ಪ್ರಮಾಣಪತ್ರವನ್ನು ನೀಡುವ (1961) U.S.ನ ಮೊದಲ ಪ್ರಮುಖ ಬ್ಯಾಂಕು ಎಂಬ ಕೀರ್ತಿಯನ್ನು ಇದು ಸಂಪಾದಿಸಿತು.

1955ರಲ್ಲಿ ಬ್ಯಾಂಕು ತನ್ನ ಹೆಸರನ್ನು ದಿ ಫಸ್ಟ್‌ ನ್ಯಾಷನಲ್‌ ಸಿಟಿ ಬ್ಯಾಂಕ್‌ ಆಫ್‌ ನ್ಯೂಯಾರ್ಕ್‌ ಎಂಬುದಾಗಿ ಬದಲಾಯಿಸಿಕೊಂಡಿತು; 1962ರಲ್ಲಿ ನಡೆದ ಕಂಪನಿಯ ಸಂಸ್ಥಾಪನೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಈ ಹೆಸರು ಫಸ್ಟ್‌ ನ್ಯಾಷನಲ್‌ ಸಿಟಿ ಬ್ಯಾಂಕ್‌ ಎಂಬುದಾಗಿ ಮೊಟುಕುಗೊಳಿಸಲ್ಪಟ್ಟಿತು. ಗುತ್ತಿಗೆಯ ಮತ್ತು ಕ್ರೆಡಿಟ್‌ಕಾರ್ಡ್‌ ವಲಯಗಳಿಗೆ ಕಂಪನಿಯು ಸುಸಂಘಟಿತವಾಗಿ ಪ್ರವೇಶಿಸಿತು, ಮತ್ತು ಲಂಡನ್‌‌ನಲ್ಲಿ ಇದು ಕೈಗೊಂಡ USD ಠೇವಣಿಯ ಪ್ರಮಾಣಪತ್ರಗಳ ಪರಿಚಯವು, ಅದನ್ನು 1888ರ ನಂತರದ ಮೊದಲ ಹೊಸ ವ್ಯವಹಾರ್ಯ ಸಾಧನವಾಗಿಸಿತು. ನಂತರದಲ್ಲಿ ಮಾಸ್ಟರ್‌‌ಕಾರ್ಡ್‌ ಎಂದು ಮಾರ್ಪಾಡುಗೊಂಡ, ತನ್ನ ಫಸ್ಟ್‌ ನ್ಯಾಷನಲ್‌ ಸಿಟಿ ಚಾರ್ಜ್‌ ಸರ್ವೀಸ್‌ ಕ್ರೆಡಿಟ್‌ಕಾರ್ಡ್‌‌‌ನ್ನು 1967ರಲ್ಲಿ ಬ್ಯಾಂಕು ಪರಿಚಯಿಸಿತು - ಇದು "ಎವೆರಿಥಿಂಗ್‌ ಕಾರ್ಡ್‌" ಎಂಬ ಹೆಸರಿನಿಂದಲೇ ಜನಪ್ರಿಯವಾಗಿತ್ತು.

1976ರಲ್ಲಿ, CEO ವಾಲ್ಟರ್‌‌‌ B. ರಿಸ್ಟನ್‌‌ ನಾಯಕತ್ವದ ಅಡಿಯಲ್ಲಿ, ಫಸ್ಟ್‌ ನ್ಯಾಷನಲ್‌ ಸಿಟಿ ಬ್ಯಾಂಕ್‌‌ಗೆ ಮತ್ತು ಅದರ ಹಿಡುವಳಿ ಕಂಪನಿಯಾದ ಫಸ್ಟ್‌ ನ್ಯಾಷನಲ್‌ ಸಿಟಿ ಕಾರ್ಪೊರೇಷನ್‌‌ಗೆ ಕ್ರಮವಾಗಿ ಸಿಟಿಬ್ಯಾಂಕ್‌, N.A. ಮತ್ತು ಸಿಟಿಕಾರ್ಪ್‌ ಎಂಬುದಾಗಿ ಮರುನಾಮಕರಣ ಮಾಡಲಾಯಿತು. ಇದಾದ ಕೆಲವೇ ದಿನಗಳಲ್ಲಿ, ಸಿಟಿಕಾರ್ಡ್‌ನ್ನು ಬ್ಯಾಂಕು ಪ್ರಾರಂಭಿಸಿತು; ಇದು 24-ಗಂಟೆಗಳ ಬಳಕೆಯ ATMಗಳನ್ನು ಪ್ರವರ್ತನಗೊಳಿಸಿತು. ಬ್ಯಾಂಕಿನ ವಿಸ್ತರಣೆಯು ಮುಂದುವರಿದಂತೆ, 1981ರಲ್ಲಿ ನ್ಯಾರೆ ವಾರೆನ್‌-ಕರೋಲಿನ್‌‌ ಸ್ಪ್ರಿಂಗ್ಸ್‌‌ ಕ್ರೆಡಿಟ್‌ಕಾರ್ಡ್‌ ಕಂಪನಿಯು ಖರೀದಿಸಲ್ಪಟ್ಟಿತು. 1984ರಲ್ಲಿ ಜಾನ್ S. ರೀಡ್‌ ಎಂಬಾತ CEO ಆಗಿ ಚುನಾಯಿಸಲ್ಪಟ್ಟ, ಮತ್ತು ಲಂಡನ್‌‌ನಲ್ಲಿನ CHAPS ತೀರುವೆ ಮನೆಗೆ ಸಿಟಿ ಒಂದು ಸಂಸ್ಥಾಪಕ ಸದಸ್ಯನಾಯಿತು. ಅವನ ನಾಯಕತ್ವದ ಅಡಿಯಲ್ಲಿ, ಮುಂದಿನ 14 ವರ್ಷಗಳ ಅವಧಿಯಲ್ಲಿ ಸಿಟಿಬ್ಯಾಂಕ್‌ ಅಮೆರಿಕಾ ಸಂಯುಕ್ತ ಸಂಸ್ಥಾನದ ಅತಿದೊಡ್ಡ ಬ್ಯಾಂಕು ಎನಿಸಿಕೊಂಡಿದ್ದು ಮಾತ್ರವಲ್ಲದೇ, ಪ್ರಪಂಚದಲ್ಲಿನ ಕ್ರೆಡಿಟ್‌ಕಾರ್ಡ್‌ಗಳ ಮತ್ತು ಚಾರ್ಜ್‌ ಕಾರ್ಡ್‌ಗಳ ಅತಿದೊಡ್ಡ ನೀಡಿಕೆದಾರ ಎಂಬ ಕೀರ್ತಿಗೆ ಪಾತ್ರವಾಯಿತು ಹಾಗೂ 90ಕ್ಕೂ ಹೆಚ್ಚಿನ ದೇಶಗಳಿಗೆ ತನ್ನ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಿತು.

ಟ್ರಾವೆಲರ್ಸ್‌‌ ಗ್ರೂಪ್‌‌

ವಿಲೀನದ ಸಮಯದಲ್ಲಿ ಟ್ರಾವೆಲರ್ಸ್‌‌ ಗ್ರೂಪ್ ಹಣಕಾಸು-ಸಂಬಂಧಿ ವಿಷಯಗಳ ಒಂದು ವಿಭಿನ್ನ ಸಮೂಹವಾಗಿದ್ದು, ಅದನ್ನು CEO ಸ್ಯಾಂಡಿ ವೆಯಿಲ್‌‌ ನಾಯಕತ್ವದ ಅಡಿಯಲ್ಲಿ ಒಗ್ಗೂಡಿಸಲಾಗಿತ್ತು. ಕಂಟ್ರೋಲ್‌ ಡೇಟಾ ಕಾರ್ಪೊರೇಷನ್‌‌ನ ಒಂದು ಅಂಗಸಂಸ್ಥೆಯಾದ ಕಮರ್ಷಿಯಲ್‌ ಕ್ರೆಡಿಟ್‌ನಿಂದ ಇದರ ಮೂಲಗಳು ಬಂದಿದ್ದವು; 1986ರ ವರ್ಷದ ಆರಂಭದಲ್ಲಿ ಕಂಪನಿಯ ಉಸ್ತುವಾರಿಯನ್ನು ವಹಿಸಿಕೊಂಡ ನಂತರ, ಅದೇ ವರ್ಷದ ನವೆಂಬರ್‌ನಲ್ಲಿ ಕಂಟ್ರೋಲ್‌ ಡೇಟಾ ಕಾರ್ಪೊರೇಷನ್‌‌ ಸಂಸ್ಥೆಯು ವೆಯಿಲ್‌‌ನಿಂದ ಖಾಸಗಿಯಾಗಿ ತೆಗೆದುಕೊಳ್ಳಲ್ಪಟ್ಟಿತ್ತು. ವೆಯಿಲ್‌ ಎರಡು ವರ್ಷಗಳ ನಂತರ, ಪ್ರೈಮರಿಕಾ ಎಂಬ ಕಂಪನಿಯ ಖರೀದಿಯ ನೇತೃತ್ವ ವಹಿಸಿದ; ಪ್ರೈಮರಿಕಾ ಎಂಬುದು ಒಂದು ವಾಣಿಜ್ಯಕೂಟವಾಗಿದ್ದು, ಅದು ಅಷ್ಟುಹೊತ್ತಿಗಾಗಲೇ A L ವಿಲಿಯಮ್ಸ್‌ ಎಂಬ ಜೀವವಿಮಾ ಕಂಪನಿ ಹಾಗೂ ಸ್ಮಿತ್‌‌ ಬಾರ್ನೆ ಎಂಬ ಸ್ಟಾಕ್‌ ದಲ್ಲಾಳಿ ಕಂಪನಿಯನ್ನು ಖರೀದಿಸಿತ್ತು. ಪ್ರೈಮರಿಕಾ ಹೆಸರನ್ನು ತನ್ನದಾಗಿಸಿಕೊಂಡ ಹೊಸ ಕಂಪನಿಯು "ಅಡ್ಡ-ಮಾರುವಿಕೆ"ಯ ಕಾರ್ಯತಂತ್ರವೊಂದನ್ನು ಅಳವಡಿಸಿಕೊಂಡಿತು; ಅಂದರೆ, ಮೂಲ ಕಂಪನಿಯ ವ್ಯಾಪ್ತಿಯೊಳಗಿನ ವ್ಯವಹಾರದ ಅಸ್ತಿತ್ವಗಳ ಪೈಕಿ ಪ್ರತಿಯೊಂದೂ ಸಹ, ಪರಸ್ಪರರ ವ್ಯವಹಾರ-ಸೇವೆಗಳನ್ನು ಮಾರುವ ಕಡೆಗೆ ಗುರಿಯಿರಿಸಿಕೊಂಡಿದ್ದವು. ಇದರ ಹಣಕಾಸೇತರ ವ್ಯವಹಾರಗಳು ಬೇರ್ಪಡಿಸಲ್ಪಟ್ಟವು.

ಚಿತ್ರ:Travelers logo.png
ಸಿಟಿಕಾರ್ಪ್ ಜೊತೆಗಿನ ವಿಲೀನಕ್ಕೆ ಮುಂಚಿತವಾಗಿದ್ದ ಟ್ರಾವೆಲರ್ಸ್‌ ಇಂಕ್‌‌ನ (1993–1998) ಸಾಂಸ್ಥಿಕ ಲಾಂಛನ.

ಕಳಪೆ ಸ್ಥಿರಾಸ್ತಿ ಹೂಡಿಕೆಗಳ ಕಾರಣದಿಂದಾಗಿ ಸೊರಗಿದ್ದ ಮತ್ತು ಹರಿಕೇನ್‌‌‌ ಆಂಡ್ರ್ಯೂ ಚಂಡಮಾರುತವು ಅಪ್ಪಳಿಸಿದ ಪರಿಣಾಮವಾಗಿ ಅನುಭವಿಸಿದ ಗಣನೀಯ ನಷ್ಟಗಳಿಗೆ ಈಡಾಗಿದ್ದ ಟ್ರಾವೆಲರ್ಸ್‌ ಇನ್ಷೂರೆನ್ಸ್‌‌ 1992ರ ಸೆಪ್ಟೆಂಬರ್‌ನಲ್ಲಿ ಪ್ರೈಮರಿಕಾದ ಜೊತೆಯಲ್ಲಿ ಒಂದು ಕಾರ್ಯತಂತ್ರದ ಒಪ್ಪಂದವನ್ನು ರೂಪಿಸಿತು; ಇದರ ಅನುಸಾರ 1993ರ ಡಿಸೆಂಬರ್‌‌ನಲ್ಲಿ ಒಂದು ಏಕಮಾತ್ರ ಕಂಪನಿಯಾಗಿ ಅದು ಒಟ್ಟುಗೂಡಲು ಸಾಧ್ಯವಾಯಿತು. ಈ ಸ್ವಾಧೀನದೊಂದಿಗೆ, ಸಮೂಹವು ಟ್ರಾವೆಲರ್ಸ್‌ ಇಂಕ್‌ ಎನಿಸಿಕೊಂಡಿತು‌. ವ್ಯವಹಾರದ ಚಟುವಟಿಕೆಗಳಿಗೆ ಆಸ್ತಿ ಹಾಗೂ ಅಪಘಾತ ಮತ್ತು ಜೀವವಿಮೆ ಹಾಗೂ ವಾರ್ಷಿಕಾನುದಾನಗಳ ಹೊಣೆಪತ್ರಕ್ಕೆ ರುಜುಹಾಕುವ ಸಾಮರ್ಥ್ಯಗಳು ಸೇರ್ಪಡೆಗೊಂಡವು. ಈ ಮಧ್ಯೆ, ವ್ಯವಹಾರದಲ್ಲಿ ವಶಪಡಿಸಿಕೊಳ್ಳಲಾಗಿದ್ದ ಟ್ರಾವೆಲರ್ಸ್‌‌ನ ವಿಶಿಷ್ಟವಾದ ಕೆಂಪು ಛತ್ರಿಯ ಲಾಂಛನವು, ಹೊಸದಾಗಿ ಹೆಸರಿಸಲ್ಪಟ್ಟ ಸಂಘಟನೆಯೊಳಗಿನ ಎಲ್ಲಾ ವ್ಯವಹಾರಗಳಿಗೆ ಅನ್ವಯಿಸಲ್ಪಟ್ಟಿತು. ಈ ಅವಧಿಯಲ್ಲಿ, ಷಿಯರ್‌ಸನ್‌‌ ಲೆಹ್‌ಮನ್‌‌ ಸಂಸ್ಥೆಯನ್ನು ಟ್ರಾವೆಲರ್ಸ್‌‌ ವಶಪಡಿಸಿಕೊಂಡಿತು ಮತ್ತು ಅದನ್ನು ಸ್ಮಿತ್‌‌ ಬಾರ್ನೆಯೊಂದಿಗೆ ವಿಲೀನಗೊಳಿಸಿತು; ಷಿಯರ್‌ಸನ್‌‌ ಲೆಹ್‌ಮನ್ ಎಂಬುದು ಒಂದು ಚಿಲ್ಲರೆ ವ್ಯಾಪಾರದ ದಳ್ಳಾಳಿಕೆಯ ಮತ್ತು ಸ್ವತ್ತು ನಿರ್ವಹಣಾ ಸಂಸ್ಥೆಯಾಗಿದ್ದು, 1985ರವರೆಗೆ ವೆಯಿಲ್‌ ಅದರ ನೇತೃತ್ವವನ್ನು ವಹಿಸಿದ್ದ.

ಸಾಲೊಮನ್‌‌ ಬ್ರದರ್ಸ್‌‌

ಅಂತಿಮವಾಗಿ, ಸಾಲೊಮನ್‌‌ ಬ್ರದರ್ಸ್‌‌ ಎಂಬ ಒಂದು ಪ್ರಮುಖ ಬಾಂಡ್‌ ವ್ಯಾಪಾರಿ ಮತ್ತು ಬಲ್ಜ್‌ ಬ್ರಾಕೆಟ್‌‌ ಹೂಡಿಕೆ ಬ್ಯಾಂಕನ್ನು ಖರೀದಿಸಲು ಟ್ರಾವೆಲರ್ಸ್‌‌ ಗ್ರೂಪ್‌‌ (ಏಟ್ನಾ ಪ್ರಾಪರ್ಟಿ ಅಂಡ್‌ ಕ್ಯಾಷುಯಾಲ್ಟಿ, ಇಂಕ್‌‌ ಜೊತೆಯಲ್ಲಿ ಇದು ವಿಲೀನಗೊಂಡಾಗ 1995ರ ಏಪ್ರಿಲ್‌ನಲ್ಲಿ ಮತ್ತೆ ಮರುನಾಮಕರಣಗೊಂಡಿತ್ತು.) 1997ರ ನವೆಂಬರ್‌ನಲ್ಲಿ, 9 ಶತಕೋಟಿ $ನಷ್ಟು ಮೌಲ್ಯದ ವ್ಯವಹಾರವನ್ನು ನಡೆಸಿತು.. ಈ ವ್ಯವಹಾರವು ಟ್ರಾವೆಲರ್ಸ್‌‌/ಸ್ಮಿತ್‌‌ ಬಾರ್ನೆ ವ್ಯವಹಾರಕ್ಕೆ ಪೂರಕವಾಗಿತ್ತು; ಏಕೆಂದರೆ ನಿಶ್ಚಿತ-ಆದಾಯ ಮತ್ತು ಸಾಂಸ್ಥಿಕ ಗ್ರಾಹಕರೆಡೆಗೆ ಸಾಲೊಮನ್‌‌ ಗಮನಹರಿಸುತ್ತಿದ್ದರೆ, ಇಕ್ವಿಟಿಗಳು ಹಾಗೂ ಚಿಲ್ಲರೆ ವ್ಯಾಪಾರದಲ್ಲಿ ಸ್ಮಿತ್‌‌ ಬಾರ್ನೆ ಪ್ರಾಬಲ್ಯ ಸಾಧಿಸಿತ್ತು. ಸಾಲೊಮನ್‌‌ ಸ್ಮಿತ್‌‌ ಬಾರ್ನೆ ಎಂದು ಹೆಸರಿಸಲಾದ ಹೊಸ ಭದ್ರತೆಗಳ ಘಟಕದೊಳಗೆ ಸ್ಮಿತ್‌‌ ಬಾರ್ನೆಯನ್ನು ಸಾಲೊಮನ್‌‌ ಬ್ರದರ್ಸ್‌‌ ಸೇರಿಸಿತು; ಒಂದು ವರ್ಷದ ನಂತರ, ಈ ವಿಭಾಗವು ಸಿಟಿಕಾರ್ಪ್‌ನ ಹಿಂದಿನ ಭದ್ರತೆಗಳ ಕಾರ್ಯಾಚರಣೆಗಳನ್ನೂ ಒಳಗೊಂಡಿತು. ಬ್ಯಾಂಕಿನ ಪ್ರತಿಷ್ಠೆಯನ್ನು ಕಳಂಕಗೊಳಿಸಿದ ಹಣಕಾಸಿನ ಹಗರಣಗಳ ಒಂದು ಸರಣಿಯ ನಂತರ, 2003ರ ಅಕ್ಟೋಬರ್‌ನಲ್ಲಿ ಸಾಲೊಮನ್‌‌ ಸ್ಮಿತ್‌‌ ಬಾರ್ನೆ ಎಂಬ ಹೆಸರು ಅಂತಿಮವಾಗಿ ರದ್ದುಮಾಡಲ್ಪಟ್ಟಿತು.

ಸಿಟಿಕಾರ್ಪ್‌ ಮತ್ತು ಟ್ರಾವೆಲರ್ಸ್‌‌ ವಿಲೀನ

1998ರ ಏಪ್ರಿಲ್‌‌‌ 6ರಂದು, ಸಿಟಿಕಾರ್ಪ್‌ ಮತ್ತು ಟ್ರಾವೆಲರ್ಸ್‌‌ ಗ್ರೂಪ್‌‌ ನಡುವಿನ ವಿಲೀನವನ್ನು ಪ್ರಪಂಚಕ್ಕೆ ಘೋಷಿಸಲಾಯಿತು; ಸರಿಸುಮಾರು 700 ಶತಕೋಟಿ $ನಷ್ಟು ಮೌಲ್ಯದ ಸ್ವತ್ತುಗಳನ್ನು ಒಳಗೊಂಡಿದ್ದ 140 ಶತಕೋಟಿ $ನಷ್ಟು ಮೌಲ್ಯದ ಸಂಸ್ಥೆಯ ಹುಟ್ಟುವಿಕೆಗೆ ಈ ವಿಲೀನ ಕಾರಣವಾಯಿತು. ಹೂಡಿಕೆದಾರರು ಮತ್ತು ವಿಮೆ ಖರೀದಿದಾರರ ಒಂದು ವಿಸ್ತರಿಸಲ್ಪಟ್ಟ ಗ್ರಾಹಕ ನೆಲೆಯೊಂದಕ್ಕೆ ಬ್ಯಾಂಕಿಂಗ್‌‌‌ ವಿಭಾಗಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸುವುದರ ಜೊತೆಗೇ, ಸಿಟಿಕಾರ್ಪ್‌ನ ಚಿಲ್ಲರೆ ವ್ಯಾಪಾರ ಗ್ರಾಹಕರಿಗೆ ಮ್ಯೂಚುಯಲ್‌‌ ನಿಧಿಗಳು ಮತ್ತು ವಿಮೆಯ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದಕ್ಕೆ ಈ ವ್ಯವಹಾರವು ಟ್ರಾವೆಲರ್ಸ್‌ಗೆ ನೆರವಾಯಿತು.

ಇದನ್ನು ಒಂದು ವಿಲೀನವಾಗಿ ಪ್ರಸ್ತುತಪಡಿಸಲಾಗಿತ್ತಾದರೂ, ವಾಸ್ತವವಾಗಿ ಈ ವ್ಯವಹಾರವು ಬಹುಪಾಲು ಒಂದು ಸ್ಟಾಕ್‌‌ ವಿನಿಮಯದ ರೀತಿಯಲ್ಲಿತ್ತು; 70 ಶತಕೋಟಿ $ನಷ್ಟು ಮೊತ್ತವನ್ನು ನೀಡುವ ಮೂಲಕ ಸಿಟಿಕಾರ್ಪ್‌ ಷೇರುಗಳನ್ನು ಟ್ರಾವೆಲರ್ಸ್‌‌ ಗ್ರೂಪ್‌ ಸಂಪೂರ್ಣವಾಗಿ ಖರೀದಿಸಿದ್ದು, ಹಾಗೂ ಪ್ರತಿ ಸಿಟಿಕಾರ್ಪ್‌ ಷೇರಿಗೆ 2.5ನಷ್ಟು ಹೊಸ ಸಿಟಿಗ್ರೂಪ್‌‌‌‌‌ ಷೇರುಗಳನ್ನು ನೀಡಲು ಮುಂದಾಗಿದ್ದು ಇದಕ್ಕೆ ಕಾರಣವಾಗಿತ್ತು. ಈ ಕಾರ್ಯವಿಧಾನದ ಮೂಲಕ, ಪ್ರತಿ ಕಂಪನಿಯ ಚಾಲ್ತಿಯಲ್ಲಿರುವ ಷೇರುದಾರರು ಹೊಸ ಸಂಸ್ಥೆಯ ಸುಮಾರು ಅರ್ಧದಷ್ಟು ಷೇರನ್ನು ತಮ್ಮದಾಗಿಸಿಕೊಂಡರು. ಹೊಸ ಕಂಪನಿಯು ತನ್ನ ಹೆಸರಿನಲ್ಲಿ ಸಿಟಿಕಾರ್ಪ್‌ನ "ಸಿಟಿ" ಬ್ರಾಂಡ್‌ನ್ನು ಕಾಯ್ದುಕೊಂಡು ಬಂದಿತಾದರೂ, ಟ್ರಾವೆಲರ್ಸ್‌‌ನ ವಿಶಿಷ್ಟ "ಕೆಂಪು ಛತ್ರಿ"ಯ ಲಾಂಛನವನ್ನು ಇದು ತನ್ನ ಹೊಸ ಸಾಂಸ್ಥಿಕ ಲಾಂಛನವಾಗಿ ಅಳವಡಿಸಿಕೊಂಡಿತು ಮತ್ತು ಇದು 2007ರವರೆಗೂ ಬಳಸಲ್ಪಟ್ಟಿತು.

ಕ್ರಮವಾಗಿ ಎರಡೂ ಮೂಲ-ಕಂಪನಿಗಳ ಸಭಾಪತಿಗಳಾದ ಜಾನ್‌‌ ರೀಡ್‌ ಮತ್ತು ಸ್ಯಾಂಡಿ ವೆಯಿಲ್‌‌‌ರನ್ನು ಸಿಟಿಗ್ರೂಪ್‌‌‌‌‌ ಇಂಕ್‌‌ ಎಂಬ ಹೊಸ ಕಂಪನಿಯ ಸಹ-ಸಭಾಪತಿ ಹಾಗೂ ಸಹ-CEOಗಳಾಗಿ ಘೋಷಿಸಲಾಯಿತು; ಆದರೂ ಎರಡೂ ಅಸ್ತಿತ್ವಗಳ ನಡುವಿನ ನಿರ್ವಹಣೆ ಶೈಲಿಗಳಲ್ಲಿನ ದೊಡ್ಡ ವ್ಯತ್ಯಾಸವು, ಇಂಥದೊಂದು ವ್ಯವಸ್ಥೆಯ ಬುದ್ಧಿವಂತಿಕೆಗೆ ಸಂಬಂಧಿಸಿದ ಪ್ರಶ್ನಾರ್ಥಕ ಚಿಹ್ನೆಗಳನ್ನು ತತ್‌‌ಕ್ಷಣವೇ ಹುಟ್ಟುಹಾಕಿತು.

ಮಹಾನ್‌ ಕೈಗಾರಿಕಾರ್ಥಿಕ ಕುಸಿತವನ್ನು ಅನುಸರಿಸಿಕೊಂಡು ಜಾರಿಗೆ ಬಂದ ಗ್ಲಾಸ್‌-ಸ್ಟೀಗಲ್‌‌ ಕಾಯಿದೆಯ ಉಳಿದಿರುವ ಷರತ್ತುಗಳು, ವಿಮೆಯ ಹೊಣೆಗಾರ-ಸಹಿದಾರರೊಂದಿಗೆ (ಅಂಡರ್‌‌ರೈಟರ್‌‌ಗಳೊಂದಿಗಿನ) ಬ್ಯಾಂಕುಗಳು ವಿಲೀನವಾಗುವುದನ್ನು ನಿಷೇಧಿಸಿದವು, ಮತ್ತು ಎರಡರಿಂದ ಐದು ವರ್ಷಗಳ ನಡುವಿನ ಅವಧಿಯಲ್ಲಿ ಯಾವುದೇ ನಿಷೇಧಿತ ಸ್ವತ್ತುಗಳನ್ನು ಸಿಟಿಗ್ರೂಪ್‌‌‌‌‌ ಕಸಿದುಕೊಳ್ಳಬೇಕು ಎಂಬ ಅರ್ಥವನ್ನು ಅವು ಹೊಮ್ಮಿಸಿದವು. ಆದಾಗ್ಯೂ, ವಿಲೀನದ ಸಂದರ್ಭದಲ್ಲಿ ವೆಯಿಲ್‌‌ ಈ ಕುರಿತು ಮಾತನಾಡುತ್ತಾ, "ಅಷ್ಟು ಹೊತ್ತಿಗೆ ಶಾಸನವು ಬದಲಾಗುತ್ತದೆ ಎಂದು ನಾವು ನಂಬಿದ್ದೆವು... ಇದೊಂದು ಸಮಸ್ಯೆಯಾಗಿ ಉಳಿಯುವುದಿಲ್ಲ ಎಂಬುದಾಗಿ ನಂಬಲು ನಾವು ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೆವು" ಎಂದು ತಿಳಿಸಿದ್ದ. 1999ರ ನವೆಂಬರ್‌ನಲ್ಲಿ ನಡೆದ ಗ್ರಾಮ್‌-ಲೀಚ್‌-ಬ್ಲೈಲೆ ಕಾಯಿದೆಯ ಅನುಮೋದನೆಯು ರೀಡ್‌ ಮತ್ತು ವೆಯಿಲ್‌‌ರ ದೃಷ್ಟಿಕೋನಗಳನ್ನು ನಿಶ್ಚಯವಾಗಿ ಸಮರ್ಥಿಸಿತು. ಇದರಿಂದಾಗಿ ವಾಣಿಜ್ಯ ಬ್ಯಾಂಕಿಂಗ್‌‌‌, ಹೂಡಿಕೆ ಬ್ಯಾಂಕಿಂಗ್‌‌‌, ವಿಮೆ ಹೊಣೆಪತ್ರಕ್ಕೆ ರುಜುಹಾಕುವುದು ಮತ್ತು ದಳ್ಳಾಳಿಕೆಯ ಒಂದು ಸಮ್ಮಿಶ್ರಿತ ಸೇವೆಯನ್ನು ನೀಡುತ್ತಿರುವ ಹಣಕಾಸಿನ ಸೇವೆಗಳ ವಾಣಿಜ್ಯಕೂಟಕ್ಕೆ ಬಾಗಿಲು ತೆರೆದಂತಾಯಿತು.

ವಿಲೀನದ ನಂತರ ಟ್ರಾವೆಲರ್ಸ್‌‌ ಗ್ರೂಪ್‌‌ ಮತ್ತು ಸಿಟಿಕಾರ್ಪ್‌ನ ಗ್ರಾಹಕ ವ್ಯವಹಾರಗಳ ಒಗ್ಗೂಡಿಸುವಿಕೆಗೆ ಜೋ ಪ್ಲುಮೆರಿ ನೇತೃತ್ವ ವಹಿಸಿದ, ಮತ್ತು ಅವನನ್ನು ಸಿಟಿಬ್ಯಾಂಕ್‌ ನಾರ್ತ್‌‌ ಅಮೆರಿಕಾದ CEO ಆಗಿ ವೆಯಿಲ್‌‌ ಮತ್ತು ರೀಡ್ ನೇಮಿಸಿದರು‌. ಅದರ 450 ಚಿಲ್ಲರೆ ವ್ಯಾಪಾರ ಶಾಖೆಗಳ ಜಾಲದ ಮೇಲುಸ್ತುವಾರಿಯನ್ನು ಅವನು ನಡೆಸಿದ. CIBC ಓಪನ್‌ಹೀಮರ್‌‌ ಜೊತೆಯಲ್ಲಿ ಓರ್ವ ವಿಶ್ಲೇಷಕನಾಗಿರುವ J. ಪಾಲ್‌‌‌ ನ್ಯೂಸಮ್ ಈ ಕುರಿತು ಮಾತನಾಡುತ್ತಾ, "ಅನೇಕ ಜನರು ನಿರೀಕ್ಷಿಸಿದಂತೆ ಅವನು ಅತಿರೇಕದ ಚೊಕ್ಕಟತನದ ಕಾರ್ಯನಿರ್ವಹಣಾಧಿಕಾರಿಯಲ್ಲ. ಅವನು ನಿಷ್ಠುರ ಮಾತಿನ ವ್ಯಕ್ತಿ. ಆದರೆ, ಒಂದು ಬ್ಯಾಂಕಿನ ಸ್ವರೂಪದಲ್ಲಿ ಸಂಸ್ಥೆಯು ತೊಂದರೆಯಲ್ಲಿದೆ ಮತ್ತು ಅಪ್ರವರ್ತಕ ಮಾರುವಿಕೆಯ ಪರಿಪಾಠಗಳ ಮೂಲಕ ಅದರಿಂದ ತಪ್ಪಿಸಿಕೊಳ್ಳಲು ಇನ್ನು ಸಾಧ್ಯವಿಲ್ಲ ಎಂಬುದನ್ನು ಸಿಟಿಬ್ಯಾಂಕ್‌ ಅರಿತಿದೆ; ಮತ್ತು ಬ್ಯಾಂಕಿನ ಕಾರ್ಯವೈಖರಿಯ ಮೇಲೆ ತಣ್ಣೀರೆರಚುವ ಉತ್ಕಟತೆಯನ್ನು ಪ್ಲುಮೆರಿ ಹೊಂದಿದ್ದಾನೆ" ಎಂದು ತಿಳಿಸಿದ. ಒಂದು ವೇಳೆ, ಸಿಟಿಬ್ಯಾಂಕ್‌‌ನಲ್ಲಿ ಒಂದು ದೊಡ್ಡ, ಗಮನಾರ್ಹವಾದ ವಿಜಯವನ್ನು ಅವನು ಉಂಟುಮಾಡಬಲ್ಲವನಾಗಿದ್ದರೆ, ವೆಯಿಲ್‌‌ ಮತ್ತು ರೀಡ್‌ ತಮ್ಮ ಸ್ಥಾನದಿಂದ ಕೆಳಗಿಳಿದಾಗ, ಸಿಟಿಗ್ರೂಪ್‌‌‌‌‌ನ ಎಲ್ಲ ವಿಭಾಗಗಳನ್ನೂ ನಡೆಸಿಕೊಂಡು ಹೋಗಬಲ್ಲ ಓರ್ವ ಸಮರ್ಥಕ ಅಥವಾ ಪೈಪೋಟಿಗಾರನ ಸ್ಥಾನವನ್ನು ಅವನು ತುಂಬಬಲ್ಲ ಎಂದು ಊಹಿಸಲಾಗಿತ್ತು‌. ಆ ಸ್ಥಾನದಲ್ಲಿ, ಒಂದು ವರ್ಷದ ಅವಧಿಯಲ್ಲಿ ಘಟಕದ ಗಳಿಕೆಗಳನ್ನು 108 ದಶಲಕ್ಷ $ನಿಂದ 415 ದಶಲಕ್ಷ $ನಷ್ಟು ಮೊತ್ತಕ್ಕೆ ಪ್ಲುಮೆರಿ ವರ್ಧಿಸಿದ; ಇದು ಸುಮಾರು 400%ನಷ್ಟು ಹೆಚ್ಚಳವನ್ನು ಪ್ರತಿನಿಧಿಸಿತು. ಆದಾಗ್ಯೂ, 2000ನೇ ಇಸವಿಯ ಜನವರಿಯಲ್ಲಿ ಸಿಟಿಬ್ಯಾಂಕ್‌ನಿಂದ ಅವನು ಅನಿರೀಕ್ಷಿತವಾಗಿ ನಿವೃತ್ತಿ ಹೊಂದಿದ.

2000ನೇ ಇಸವಿಯಲ್ಲಿ, ಅಸೋಸಿಯೇಟ್ಸ್‌ ಫಸ್ಟ್‌ ಕ್ಯಾಪಿಟಲ್‌ ಕಾರ್ಪೊರೇಷನ್‌‌ನ್ನು ಸಿಟಿಗ್ರೂಪ್‌‌‌‌‌ ವಶಪಡಿಸಿಕೊಂಡಿತು; ಅಸೋಸಿಯೇಟ್ಸ್‌ ಫಸ್ಟ್‌ ಕ್ಯಾಪಿಟಲ್‌ ಕಾರ್ಪೊರೇಷನ್‌‌ 1989ರವರೆಗೂ ಗಲ್ಫ್‌‌+ವೆಸ್ಟರ್ನ್‌ (ಈಗ ನ್ಯಾಷನಲ್‌ ಅಮ್ಯೂಸ್‌ಮೆಂಟ್ಸ್‌‌ನ ಒಂದು ಭಾಗ) ಕಂಪನಿಯ ಸ್ವಾಮ್ಯತ್ವದಲ್ಲಿತ್ತು. ಅಸೋಸಿಯೇಟ್ಸ್‌ ಕಂಪನಿಯು ಲೂಟಿಕೋರ ಸಾಲನೀಡಿಕೆಯ ಪರಿಪಾಠಗಳಿಗೆ ಸಂಬಂಧಿಸಿದಂತೆ ವ್ಯಾಪಕವಾಗಿ ಟೀಕಿಸಲ್ಪಟ್ಟಿತ್ತು; ವೈವಿಧ್ಯಮಯ ಲೂಟಿಕೋರ ಪರಿಪಾಠಗಳ ಬಲಿಪಶುಗಳಾಗಿದ್ದ ಗ್ರಾಹಕರಿಗೆ 240 ದಶಲಕ್ಷ $ನಷ್ಟು ಮೊತ್ತವನ್ನು ಪಾವತಿಸಲು ಸಮ್ಮತಿಸುವ ಮೂಲಕ, ಸಿಟಿಯು ಫೆಡರಲ್‌ ಟ್ರೇಡ್‌ ಕಮಿಷನ್‌‌ನೊಂದಿಗೆ ಅಂತಿಮವಾಗಿ ಇತ್ಯರ್ಥ ಮಾಡಿಕೊಂಡಿತು. "ಜುಗುಪ್ಸೆ ಹುಟ್ಟಿಸುವ" ಅಡಮಾನಗಳು, ಐಚ್ಛಿಕ ಸಾಲ ವಿಮೆಯೊಂದಿಗಿನ "ಕಟ್ಟಿಹಾಕುವ" ಅಡಮಾನಗಳು, ಮತ್ತು ಮೋಸಗೊಳಿಸುವ ಮಾರಾಟಗಾರಿಕೆಯ ಪರಿಪಾಠಗಳು ಇವೇ ಮೊದಲಾದವು ಲೂಟಿಕೋರ ಪರಿಪಾಠಗಳಲ್ಲಿ ಸೇರಿದ್ದವು.

ಟ್ರಾವೆಲರ್ಸ್‌‌ ಉಪವಿಭಾಗ

ಚಿತ್ರ:The Travelers Companies.svg
ಟ್ರಾವೆಲರ್ಸ್‌‌ ಕಂಪನೀಸ್‌ಗೆ ಸಂಬಂಧಿಸಿದ ಈಗಿನ ಲಾಂಛನ

2002ರಲ್ಲಿ ಕಂಪನಿಯು ತನ್ನ ಟ್ರಾವೆಲರ್ಸ್‌‌ ಪ್ರಾಪರ್ಟಿ ಅಂಡ್‌ ಕ್ಯಾಷುಯಾಲ್ಟಿ ಎಂಬ, ವಿಮೆಯ ಹೊಣೆಪತ್ರಕ್ಕೆ ರುಜುಹಾಕುವ ವ್ಯವಹಾರವನ್ನು ಪ್ರತ್ಯೇಕಿಸಿತು. ಸಿಟಿಗ್ರೂಪ್‌‌‌‌‌ ಸ್ಟಾಕ್‌‌ ಬೆಲೆಯ ಮೇಲಿನ ವಿಮಾಘಟಕದ ಎಳೆತದಿಂದ ಅಥವಾ ಪ್ರಭಾವದಿಂದ ಈ ಉಪವಿಭಾಗವು ಉತ್ತೇಜಿಸಲ್ಪಟ್ಟಿತು. ಏಕೆಂದರೆ, ಟ್ರಾವೆಲರ್‌‌ನ ಗಳಿಕೆಗಳು ಹೆಚ್ಚು ಕಾಲೋಚಿತವಾಗಿದ್ದು, ದೊಡ್ಡ ವಿಪತ್ತುಗಳಿಗೆ ಈಡಾಗುವ ರೀತಿಯಲ್ಲಿದ್ದವು; ಅದರಲ್ಲೂ ನಿರ್ದಿಷ್ಟವಾಗಿ, ನ್ಯೂಯಾರ್ಕ್‌ ನಗರದ ಮಧ್ಯಭಾಗದಲ್ಲಿದ್ದ ವರ್ಲ್ಡ್‌ ಟ್ರೇಡ್‌ ಸೆಂಟರ್‌‌ ಮೇಲೆ 2001ರ ಸೆಪ್ಟೆಂಬರ್‌‌ 11ರಂದು ದಾಳಿನಡೆದಾಗ ಇಂಥ ಪರಿಣಾಮವು ಕಂಡುಬಂದಿತು. ಬಹುತೇಕ ಕೈಗಾರಿಕಾ ಗ್ರಾಹಕರು ದಲ್ಲಾಳಿಯೋರ್ವನ ಮೂಲಕ ವಿಮೆಯನ್ನು ಖರೀದಿಸುವ ಪರಿಪಾಠಕ್ಕೆ ಒಗ್ಗಿಹೋಗಿದ್ದರಿಂದಾಗಿ, ಈ ಬಗೆಯ ವಿಮೆಯನ್ನು ನೇರವಾಗಿ ಗ್ರಾಹಕರಿಗೆ ಮಾರುವುದೂ ಸಹ ಕಷ್ಟಕರವಾಗಿ ಪರಿಣಮಿಸಿತ್ತು.

ಟ್ರಾವೆಲರ್ಸ್‌‌ ಪ್ರಾಪರ್ಟಿ ಕ್ಯಾಷುಯಾಲ್ಟಿ ಕಾರ್ಪೊರೇಷನ್‌ 2004ರಲ್ಲಿ ದಿ ಸೇಂಟ್‌ ಪಾಲ್‌‌‌ ಕಂಪನೀಸ್‌‌ ಇಂಕ್‌‌ ಜೊತೆಯಲ್ಲಿ ವಿಲೀನಗೊಂಡಿದ್ದರಿಂದಾಗಿ, ದಿ ಸೇಂಟ್‌ ಪಾಲ್‌‌‌ ಟ್ರಾವೆಲರ್ಸ್‌‌ ಕಂಪನೀಸ್‌ ಅಸ್ತಿತ್ವಕ್ಕೆ ಬಂದಿತು. ಜೀವವಿಮೆ ಮತ್ತು ವಾರ್ಷಿಕಾನುದಾನಗಳ ಹೊಣೆಪತ್ರಕ್ಕೆ ರುಜುಹಾಕುವ ವ್ಯವಹಾರವನ್ನು ಸಿಟಿಗ್ರೂಪ್‌‌‌‌‌ ಉಳಿಸಿಕೊಂಡಿತು; ಆದಾಗ್ಯೂ, ಆ ವ್ಯವಹಾರಗಳು ಮೆಟ್‌ಲೈಫ್‌‌‌ಗೆ 2005ರಲ್ಲಿ ಮಾರಾಟಮಾಡಲ್ಪಟ್ಟವು. ಸಿಟಿಗ್ರೂಪ್‌‌‌‌‌ ಈಗಲೂ ಸಹ ವಿಮೆಯ ಎಲ್ಲಾ ಉತ್ಪನ್ನ-ಸ್ವರೂಪಗಳನ್ನು ಅಗಾಧವಾಗಿ ಮಾರುತ್ತಿದೆಯಾದರೂ, ವಿಮೆಗೆ ಹೊಣೆಯಾಗಿ ರುಜುಹಾಕುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿಲ್ಲ.

ತಾನು ಟ್ರಾವೆಲರ್ಸ್‌ ಇನ್ಷೂರೆನ್ಸ್‌‌ನ್ನು ಬಿಟ್ಟುಬಿಟ್ಟ ನಂತರವೂ ಸಹ, ಟ್ರಾವೆಲರ್ಸ್‌‌ನ ವಿಶಿಷ್ಟ ಗುರುತಾದ ಕೆಂಪು ಛತ್ರಿಯ ಲಾಂಛನವನ್ನು ಸಿಟಿಗ್ರೂಪ್‌ ತನ್ನದೇ ಎಂಬಂತೆ 2007ರ ಫೆಬ್ರುವರಿಯವರೆಗೂ ಉಳಿಸಿಕೊಂಡಿತ್ತು; 2007ರ ಫೆಬ್ರುವರಿಯಲ್ಲಿ ಸೇಂಟ್‌ ಪಾಲ್‌‌‌ ಟ್ರಾವೆಲರ್ಸ್‌‌ಗೆ ಸದರಿ ಲಾಂಛನವನ್ನು ಮರುಮಾರಾಟ ಮಾಡಲು ಸಿಟಿಗ್ರೂಪ್‌‌‌‌‌ ಸಮ್ಮತಿಸಿತು. ಸದರಿ ಸೇಂಟ್‌ ಪಾಲ್‌‌‌ ಟ್ರಾವೆಲರ್ಸ್‌ ಸ್ವತಃ ಟ್ರಾವೆಲರ್ಸ್‌‌ ಕಂಪನೀಸ್‌ ಎಂಬುದಾಗಿ ಮರುನಾಮಕರಣಗೊಂಡಿತು. ಸ್ವತಃ ತನಗಾಗಿ ಮತ್ತು ಪ್ರೈಮರಿಕಾ ಹಾಗೂ ಬಾನಾಮೆಕ್ಸ್‌‌ಗಳನ್ನು ಹೊರತುಪಡಿಸಿ, ಕಾರ್ಯತಃ ತನ್ನೆಲ್ಲಾ ಅಂಗಸಂಸ್ಥೆಗಳಿಗಾಗಿ "ಸಿಟಿ" ಎಂಬ ಸಾಂಸ್ಥಿಕ ಬ್ರಾಂಡ್‌ನ್ನು ಅಳವಡಿಸಿಕೊಳ್ಳಲೂ ಸಹ ಸಿಟಿಗ್ರೂಪ್‌‌‌‌‌ ನಿರ್ಧರಿಸಿತು.

ಉಪಪ್ರಧಾನ ಅಡಮಾನ ಬಿಕ್ಕಟ್ಟು

ಮೇಲಾಧಾರ ನೀಡಲ್ಪಟ್ಟ ಸಾಲದ ಹೊಣೆಗಾರಿಕೆಯ (ಕೊಲ್ಯಾಟರಲ್‌ ಡೆಟ್‌ ಆಬ್ಲಿಗೇಷನ್‌-CDO) ಸ್ವರೂಪದಲ್ಲಿ ತೊಂದರೆಗೊಳಗಾದ ಅಡಮಾನಗಳಿಗೆ ಅತೀವವಾಗಿ ಒಡ್ಡಿಕೊಂಡ ಕಾರಣದ ಜೊತೆಗೆ, ಕಳಪೆ ಮಟ್ಟದ ಅಪಾಯ ನಿರ್ವಹಣೆಯೂ ಸೇರಿಕೊಂಡು ಸಮಸ್ಯೆ ಸಂಕೀರ್ಣಗೊಂಡಿದ್ದರಿಂದ ಸಿಟಿಗ್ರೂಪ್‌ ತೊಂದರೆಗೆ ಸಿಲುಕಿತು; 2008ರಲ್ಲಿ ಉಪಪ್ರಧಾನ ಅಡಮಾನ ಬಿಕ್ಕಟ್ಟು ಹದಗೆಟ್ಟಿದ್ದು ಇದಕ್ಕೆ ಮುಖ್ಯ ಕಾರಣವಾಗಿತ್ತು. ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಲ್ಲಿನ ಅಡಮಾನಗಳ ಕಡೆಗೆ ಗಮನಹರಿಸಿದ್ದ ವಿಸ್ತೃತವಾದ ಲೆಕ್ಕಾಚಾರದ ಅಪಾಯ ಮಾದರಿಗಳನ್ನು ಕಂಪನಿಯು ಬಳಸಿತ್ತು; ಆದರೆ ರಾಷ್ಟ್ರೀಯ ಗೃಹನಿರ್ಮಾಣ ವಲಯದಲ್ಲಿನ ಒಂದು ಇಳಿಮುಖ ಪ್ರವೃತ್ತಿಯ ಸಾಧ್ಯತೆಯನ್ನಾಗಲೀ, ಅಥವಾ ಲಕ್ಷಾಂತರ ಅಡಮಾನ ಹಿಡುವಳಿದಾರರು ತಂತಮ್ಮ ಅಡಮಾನಗಳಿಗೆ ಸಂಬಂಧಿಸಿದಂತೆ ಕರ್ತವ್ಯಲೋಪವನ್ನು ಎಸಗಬಹುದು ಎಂಬುದರ ಸಾಧ್ಯತೆಯನ್ನಾಗಲೀ ಇದು ಎಂದಿಗೂ ಒಳಗೊಂಡಿರಲಿಲ್ಲ. ವ್ಯವಹಾರದ ಮುಖ್ಯಸ್ಥನಾದ ಥಾಮಸ್‌ ಮಹೆರಾಸ್‌ ಹಾಗೂ ಹಿರಿಯ ಅಪಾಯ ನಿರ್ವಹಣಾಧಿಕಾರಿಯಾದ ಡೇವಿಡ್‌ ಬುಷ್ನೆಲ್‌‌ ನಿಕಟ ಸ್ನೇಹಿತರಾಗಿದ್ದರಿಂದ, ಅದು ಅಪಾಯ ಮೇಲ್ವಿಚಾರಣೆಯನ್ನು ನಿಶ್ಚಯವಾಗಿ ಒಳಗೊಳಗೇ ಹಾಳುಮಾಡಿತ್ತು.. ಸರ್ಕಾರಿ ಖಜಾನೆಯ ಕಾರ್ಯದರ್ಶಿಯಾದ ರಾಬರ್ಟ್‌ ರೂಬಿನ್‌‌ ಎಂಬಾತ ಕಟ್ಟುಪಾಡುಗಳನ್ನು ಕೊನೆಗೊಳಿಸುವಲ್ಲಿ ಪ್ರಭಾವಶಾಲಿಯಾಗಿದ್ದರಿಂದ, ಟ್ರಾವೆಲರ್ಸ್‌‌ ಮತ್ತು ಸಿಟಿಕಾರ್ಪ್‌ 1998ರಲ್ಲಿ ವಿಲೀನಗೊಳ್ಳುವಲ್ಲಿ ಅದು ಅನುವುಮಾಡಿಕೊಟ್ಟಿತು. ನಂತರ, ಸಿಟಿಗ್ರೂಪ್‌‌‌‌‌ನ ನಿರ್ದೇಶಕರ ಮಂಡಳಿಯಲ್ಲಿ ರೂಬಿನ್‌‌ ಮತ್ತು ಚಾರ್ಲ್ಸ್‌‌ ಪ್ರಿನ್ಸ್‌‌ ಪ್ರಭಾವಶಾಲಿಯಾಗಿದ್ದರಿಂದ, ಉಪಪ್ರಧಾನ ಅಡಮಾನ ಮಾರುಕಟ್ಟೆಯಲ್ಲಿ MBS ಮತ್ತು CDOಗಳೆಡೆಗೆ ಕಂಪನಿಯನ್ನು ತಳ್ಳುವಲ್ಲಿ ಅದು ನೆರವಾಯಿತು.

ಬಿಕ್ಕಟ್ಟು ಬಯಲಾಗಲು ಪ್ರಾರಂಭವಾದಂತೆ, 2007ರ ಏಪ್ರಿಲ್‌‌‌ 11ರಂದು ಪ್ರಕಟಣೆಯೊಂದನ್ನು ನೀಡಿದ ಸಿಟಿಗ್ರೂಪ್‌‌‌‌‌, 17,000 ಉದ್ಯೋಗಗಳನ್ನು ಅಥವಾ ತನ್ನ ಕಾರ್ಯಪಡೆಯ ಪೈಕಿ ಸುಮಾರು 5 ಪ್ರತಿಶತದಷ್ಟು ಭಾಗವನ್ನು ತಾನು ತೆಗೆದುಹಾಕುವುದಾಗಿ ತಿಳಿಸಿತು; ವೆಚ್ಚಗಳನ್ನು ಕಡಿತಗೊಳಿಸಲೆಂದು ಹಾಗೂ ಬಹಳಕಾಲದಿಂದಲೂ ಕಳಪೆ ಕಾರ್ಯಕ್ಷಮತೆಯನ್ನು ತೋರಿಸಿಕೊಂಡು ಬಂದಿದ್ದ ತನ್ನ ಸ್ಟಾಕ್‌ಗೆ ಆಸರೆ ಕೊಡಲೆಂದು ವಿನ್ಯಾಸಗೊಳಿಸಲಾಗಿದ್ದ ಒಂದು ವಿಶಾಲವಾದ ಮರುರೂಪಿಸುವ-ಪ್ರಕ್ರಿಯೆಯ ಭಾಗ ಇದಾಗಿತ್ತು. 2007ರ ಬೇಸಿಗೆಯಲ್ಲಿ ಬಿಯರ್‌ ಸ್ಟಿಯರ್ನ್ಸ್‌ ಎಂಬ ಭದ್ರತೆಗಳ ಮತ್ತು ದಳ್ಳಾಳಿಕೆಯ ಸಂಸ್ಥೆಯು ಗಂಭೀರಸ್ವರೂಪದ ತೊಂದರೆಯಲ್ಲಿ ಸಿಲುಕಿದ ನಂತರವೂ, ತನ್ನ CDOಗಳೊಂದಿಗಿನ ತೊಂದರೆಯ ಸಾಧ್ಯತೆಯು ತೀರಾ ಸಣ್ಣದಾಗಿದೆ (1%ನಷ್ಟು ಭಾಗದ 1/100ಕ್ಕಿಂತ ಕಡಿಮೆ) ಎಂದು ನಿರ್ಧರಿಸಿದ ಸಿಟಿಗ್ರೂಪ್‌‌‌‌‌, ಅವನ್ನು ತನ್ನ ಅಪಾಯ ವಿಶ್ಲೇಷಣೆಯಿಂದ ಹೊರಗಿಟ್ಟಿತು. ಬಿಕ್ಕಟ್ಟು ಹದಗೆಡುತ್ತಾ ಹೋದಂತೆ, 2008ರ ಜನವರಿ 7ರಂದು ಪ್ರಕಟಣೆಯೊಂದನ್ನು ನೀಡಿದ ಸಿಟಿಗ್ರೂಪ್‌‌‌‌‌, ತನ್ನ ಕಾರ್ಯಪಡೆಯಲ್ಲಿ ಮತ್ತೆ 5 ಪ್ರತಿಶತದಿಂದ 10 ಪ್ರತಿಶತದಷ್ಟು ಕಡಿತಮಾಡುವುದರ ಕುರಿತು ಹಾಗೂ ಕಡಿತದ ಒಟ್ಟು ಸಂಖ್ಯೆಯನ್ನು 327,000ದಷ್ಟಕ್ಕೆ ಮುಟ್ಟಿಸಲು ತಾನು ಪರಿಗಣಿಸುತ್ತಿರುವುದಾಗಿ ತಿಳಿಸಿತು.

ಒಕ್ಕೂಟದ ನೆರವು

ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರವು ಕಳೆದ ಹಲವಾರು ದಶಕಗಳಿಂದಲೂ, ಈಗ ಸಿಟಿಗ್ರೂಪ್ ಎಂಬುದಾಗಿ ಚಿರಪರಿಚಿತವಾಗಿರುವ ಸಂಸ್ಥೆಗೆ ಸಂಬಂಧಿಸಿದಂತೆ ಕನಿಷ್ಟಪಕ್ಷ ನಾಲ್ಕು ವಿಭಿನ್ನ ರಕ್ಷಣೋಪಾಯಗಳನ್ನು ರೂಪಿಸಿದೆ. ತೀರಾ ಇತ್ತೀಚಿನ ತೆರಿಗೆ-ಪಾವತಿದಾರರ ನೆರವಿನ ರಕ್ಷಣೋಪಾಯದ ಅವಧಿಯಲ್ಲಿ, ಒಕ್ಕೂಟದ TARP ರಕ್ಷಣೋಪಾಯದ ಹಣದಲ್ಲಿ 25 ಶತಕೋಟಿ $ನಷ್ಟು ಹಣವನ್ನು ತಾನು ಸ್ವೀಕರಿಸಿದ ನಂತರವೂ 2008ರ ನವೆಂಬರ್‌ ವೇಳೆಗೆ ಸಿಟಿಗ್ರೂಪ್‌‌‌‌‌ ದಿವಾಳಿಯಾಗಿತ್ತು; ಮತ್ತು 2008ರ ನವೆಂಬರ್‌‌ 17ರಂದು ಸುಮಾರು 52,000ದಷ್ಟಿರುವ ಹೊಸ ಕೆಲಸದ ಕಡಿತಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಸಿಟಿಗ್ರೂಪ್‌‌‌‌‌ ಘೋಷಿಸಿತು. 2008ರ ಅವಧಿಯಲ್ಲಿ ಅಷ್ಟುಹೊತ್ತಿಗಾಗಲೇ 23,000 ಕಡಿತಗಳನ್ನು ಮಾಡಲಾಗಿದ್ದು, ಇವು ಅದರ ಮೇಲಿನ ಕಡಿತಗಳಾಗಿದ್ದವು; ಅನುಕ್ರಮಿಕ ನಷ್ಟಗಳನ್ನು ಒಳಗೊಂಡಿದ್ದ ನಾಲ್ಕು ತ್ರೈಮಾಸಿಕಗಳ ಪ್ರಭಾವ ಹಾಗೂ 2010ಕ್ಕೆ ಮುಂಚಿತವಾಗಿ ಮತ್ತೊಮ್ಮೆ ಲಾಭದಲ್ಲಿರುವುದು ಅಸಂಭವ ಎಂಬ ವರದಿಗಳ ಪರಿಣಾಮವಾಗಿ ಉಂಟಾದ ಒಂದು ಬೃಹತ್‌‌ ಪ್ರಮಾಣದ ಕೆಲಸದ ತೆಗೆದುಹಾಕುವಿಕೆಯ ಕ್ರಮದ ಭಾಗ ಇದಾಗಿತ್ತು. ಅನೇಕ ಹಿರಿಯ ಕಾರ್ಯನಿರ್ವಹಣಾಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಲಾಯಿತು; ಆದರೆ, ಇದರ ಸ್ಟಾಕ್‌‌ ಮಾರುಕಟ್ಟೆ ಮೌಲ್ಯವನ್ನು 6 ಶತಕೋಟಿ $ನಷ್ಟು ಮಟ್ಟಕ್ಕೆ ಇಳಿಸುವ ಮೂಲಕ ವಾಲ್‌ ಸ್ಟ್ರೀಟ್‌ ಪ್ರತಿಕ್ರಿಯಿಸಿತು; ಇದು ಎರಡು ವರ್ಷಗಳ ಹಿಂದಿದ್ದ ಮೌಲ್ಯಕ್ಕಿಂತ 300 ಶತಕೋಟಿ $ನಷ್ಟು ಕೆಳಗಿದ್ದ ಮೌಲ್ಯವಾಗಿತ್ತು. ಇದರ ಪರಿಣಾಮವಾಗಿ, ಕಂಪನಿಯನ್ನು ಸ್ಥಿರೀಕರಿಸಲು ಹಾಗೂ ಕಂಪನಿಯ ಮೌಲ್ಯದಲ್ಲಿ ಮತ್ತಷ್ಟು ಹದಗೆಡುವಿಕೆಯು ಆಗದಂತೆ ಮಾಡಲು, ಸಿಟಿಗ್ರೂಪ್‌‌‌‌‌ ಮತ್ತು ಒಕ್ಕೂಟ ನಿಯಂತ್ರಕರು ಯೋಜನೆಯೊಂದನ್ನು ಪ್ರಸ್ತಾವಿಸಿದರು. ಸಾಲಗಳು ಮತ್ತು ಭದ್ರತೆಗಳಲ್ಲಿರುವ ಸುಮಾರು 306 ಶತಕೋಟಿ $ನಷ್ಟು ಮೊತ್ತಕ್ಕೆ ಬೆಂಬಲವಾಗಿ ನಿಲ್ಲುವುದಕ್ಕೆ ಹಾಗೂ ಕಂಪನಿಯಲ್ಲಿ ಸುಮಾರು 20 ಶತಕೋಟಿ $ನಷ್ಟು ಹಣವನ್ನು ನೇರವಾಗಿ ಹೂಡುವುದಕ್ಕೆ ಸಂಬಂಧಿಸಿದಂತೆ ಈ ವ್ಯವಸ್ಥೆಯು ಸರ್ಕಾರಕ್ಕೆ ಕರೆನೀಡುತ್ತದೆ. ಸಿಟಿಗ್ರೂಪ್‌‌‌‌‌ನ ಆಯವ್ಯಯ ಪಟ್ಟಿಯಲ್ಲಿ ಸ್ವತ್ತುಗಳು ಉಳಿದುಕೊಂಡವು; ಸುತ್ತುಬೇಲಿ ಹಾಕುವಿಕೆ ಎಂಬುದು ಈ ವ್ಯವಸ್ಥೆಗಿರುವ ತಾಂತ್ರಿಕ ಪರಿಭಾಷೆಯಾಗಿದೆ. ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ಮುಕ್ತ-ಸಂಪಾದಕೀಯವೊಂದರಲ್ಲಿ, ಮೈಕೇಲ್‌‌ ಲೆವಿಸ್‌ ಮತ್ತು ಡೇವಿಡ್‌ ಐನ್‌ಹಾರ್ನ್‌ ಈ ಕುರಿತು ವಿವರಿಸುತ್ತಾ, 306 ಶತಕೋಟಿ $ ಖಾತರಿಯು "ಒಂದು ಮುಚ್ಚಿಡದ ಕೊಡುಗೆ"ಯಾಗಿದ್ದು, ಅದನ್ನು ಪ್ರೇರಿಸುವ ಯಾವುದೇ ನಿಜವಾದ ಬಿಕ್ಕಟ್ಟನ್ನು ಅದು ಒಳಗೊಂಡಿಲ್ಲ ಎಂದು ತಿಳಿಸಿದರು. 2008ರ ನವೆಂಬರ್‌‌ 23ರಂದು ಸಾಯಂಕಾಲದ ವೇಳೆಯಲ್ಲಿ ತಡವಾಗಿ ಈ ಯೋಜನೆಯು ಅನುಮೋದಿಸಲ್ಪಟ್ಟಿತು. ಸರ್ಕಾರಿ ಖಜಾನೆ ಇಲಾಖೆ, ಫೆಡರಲ್‌ ರಿಸರ್ವ್ ಮತ್ತು ಫೆಡರಲ್‌ ಡಿಪಾಸಿಟ್‌ ಇನ್ಷೂರೆನ್ಸ್‌ ಕಾರ್ಪ್‌ ವತಿಯಿಂದ ನೀಡಲ್ಪಟ್ಟ ಒಂದು ಜಂಟಿ ಹೇಳಿಕೆಯು ಈ ರೀತಿ ಘೋಷಿಸಿತು: "ಈ ವ್ಯವಹಾರ ನಿರ್ವಹಣೆಗಳೊಂದಿಗೆ, ಹಣಕಾಸಿನ ವ್ಯವಸ್ಥೆಯನ್ನು ಬಲಗೊಳಿಸಲು ಅಗತ್ಯವಾಗಿರುವ ಹಾಗೂ U.S. ತೆರಿಗೆದಾರರು ಮತ್ತು U.S. ಆರ್ಥಿಕತೆಯನ್ನು ಸಂರಕ್ಷಿಸಲು ಅವಶ್ಯಕವಾಗಿರುವ ಕ್ರಮಗಳನ್ನು U.S. ಸರ್ಕಾರವು ತೆಗೆದುಕೊಳ್ಳುತ್ತಿದೆ."

2008ರ ವರ್ಷದ ಅಂತ್ಯದ ವೇಳೆಗೆ ಸಿಟಿಗ್ರೂಪ್‌‌‌‌‌ 20 ಶತಕೋಟಿ $ನಷ್ಟು ಮೌಲ್ಯದ ಅಡಮಾನ-ಸಂಬಂಧಿತ ಭದ್ರತೆಗಳನ್ನು ಹೊಂದಿದ್ದು, ಅವುಗಳಲ್ಲಿ ಬಹುಪಾಲು ಭದ್ರತೆಗಳು ಡಾಲರಿನ ಮೇಲೆ 21 ಸೆಂಟ್‌ಗಳು ಮತ್ತು 41 ಸೆಂಟ್‌ಗಳ ನಡುವೆ ಗುರುತುಮಾಡಲ್ಪಟ್ಟಿವೆ ಹಾಗೂ ಇದು ಶತಕೋಟಿಗಟ್ಟಲೆ ಡಾಲರುಗಳಷ್ಟು ಮೌಲ್ಯದ ಖರೀದಿ ಮತ್ತು ಸಾಂಸ್ಥಿಕ ಸಾಲಗಳನ್ನು ಹೊಂದಿದೆ. ಒಂದು ವೇಳೆ ಆರ್ಥಿಕತೆಯು ಹದಗೆಟ್ಟಲ್ಲಿ, ವಾಹನ, ಅಡಮಾನ ಮತ್ತು ಕ್ರೆಡಿಟ್‌ಕಾರ್ಡ್‌ ಸಾಲಗಳ ಮೇಲೆ ಇದು ಸಂಭಾವ್ಯವಾದ ಭಾರೀ ನಷ್ಟಗಳನ್ನು ಅನುಭವಿಸುತ್ತದೆ. [ಈ ಪ್ಯಾರಾಕ್ಕೆ, ಅದರಲ್ಲೂ ನಿರ್ದಿಷ್ಟವಾಗಿ ಮೇಲೆ ನಮೂದಿಸಲಾಗಿರುವ 20 ಶತಕೋಟಿ $ ಮೊತ್ತಕ್ಕೆ ಸಂಬಂಧಿಸಿದಂತೆ ಒಂದು ಉಲ್ಲೇಖದ ಅಗತ್ಯವಿದೆ. ಈ ಮೊತ್ತವು ಆಯವ್ಯಯ ಪಟ್ಟಿಯ ಆಚೆಗಿನ SIVಗಳಲ್ಲಿ ಹೊಂದಿರುವ CDO ಹಿಡುವಳಿಗಳ ಮೌಲ್ಯದ ಒಂದು ತೀವ್ರ ಕಡಿಮೆ ಅಂದಾಜಾಗಿರುವ ಸಾಧ್ಯತೆಯಿದೆ.]

2009ರ ಜನವರಿ 16ರಂದು, ಸ್ವತಃ ತನ್ನನ್ನು ಎರಡು ಕಾರ್ಯನಿರ್ವಹಣಾ ಘಟಕಗಳಾಗಿ ಮರುಸಂಘಟಿಸಿಕೊಳ್ಳುವ ತನ್ನ ಆಶಯವನ್ನು ಸಿಟಿಗ್ರೂಪ್‌‌‌‌‌ ಘೋಷಿಸಿತು: ತನ್ನ ಚಿಲ್ಲರೆ ವ್ಯಾಪಾರ ಮತ್ತು ಹೂಡಿಕೆಯ ಬ್ಯಾಂಕಿಂಗ್‌‌‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಘೋಷಿಸಲ್ಪಟ್ಟ ಸಿಟಿಕಾರ್ಪ್‌, ಹಾಗೂ ತನ್ನ ದಳ್ಳಾಳಿಕೆ ಮತ್ತು ಸ್ವತ್ತು ನಿರ್ವಹಣೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಘೋಷಿಸಲ್ಪಟ್ಟ ಸಿಟಿ ಹೋಲ್ಡಿಂಗ್ಸ್‌ ಇವೇ ಆ ಎರಡು ಘಟಕಗಳಾಗಿದ್ದವು. ಸದ್ಯಕ್ಕೆ ಒಂದು ಏಕಮಾತ್ರ ಕಂಪನಿಯಾಗಿ ಸಿಟಿಗ್ರೂಪ್‌‌‌‌‌ ತನ್ನ ಕಾರ್ಯನಿರ್ವಹಣೆಯನ್ನು ಮುಂದುವರಿಸಲಿದೆಯಾದರೂ, "ಮೌಲ್ಯ-ವರ್ಧಿಸುವ ನಿಯಂತ್ರಣದ ಮತ್ತು ಸಂಯೋಜನೆಯ ಅವಕಾಶಗಳ ಪ್ರಯೋಜನವನ್ನು ಅವು ಹೊರಹೊಮ್ಮುತ್ತಿದ್ದಂತೆ ಪಡೆಯುವ" ಜವಾಬ್ದಾರಿಯನ್ನು ಸಿಟಿ ಹೋಲ್ಡಿಂಗ್ಸ್‌ ವ್ಯವಸ್ಥಾಪಕರು ಹೊರಲಿದ್ದಾರೆ; ಅಷ್ಟೇ ಅಲ್ಲ, ಸಂಭಾವ್ಯ ಬೇರ್ಪಡಿಸುವಿಕೆಗಳು ಅಥವಾ ಎರಡು ಕಾರ್ಯನಿರ್ವಹಣಾ ಘಟಕಗಳನ್ನು ಒಳಗೊಂಡಿರುವ ವಿಲೀನಗಳನ್ನಿನ್ನೂ ತಳ್ಳಿಹಾಕಿಲ್ಲ. 2009ರ ಫೆಬ್ರುವರಿ 27ರಂದು ಸಿಟಿಗ್ರೂಪ್‌‌‌‌‌ ಪ್ರಕಟಣೆಯೊಂದನ್ನು ನೀಡಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರವು ತುರ್ತು ನೆರವಿನಲ್ಲಿರುವ 25 ಶತಕೋಟಿ $ನಷ್ಟು ಹಣವನ್ನು ಸಾಮಾನ್ಯ ಷೇರುಗಳಾಗಿ ಪರಿವರ್ತಿಸುವ ಮೂಲಕ, ಕಂಪನಿಯಲ್ಲಿನ 36% ಇಕ್ವಿಟಿ ಹೂಡಿಕೆಹಣವನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಿತು. ಸುದ್ದಿಯು ಹೊರಬೀಳುತ್ತಿದ್ದಂತೆ ಸಿಟಿಗ್ರೂಪ್‌‌‌‌‌ ಷೇರುಗಳು 40%ನಷ್ಟು ಕುಸಿದವು.

ಸರ್ಕಾರದ ಗಣನೀಯ ಮಾಲೀಕತ್ವದ ಕಾರಣದಿಂದಾಗಿ, 2009ರ ಜೂನ್‌‌ 8ರಿಂದ ಜಾರಿಗೆ ಬರುವಂತೆ, ಡವ್‌ ಜೋನ್ಸ್ ಇಂಡಸ್ಟ್ರಿಯಲ್‌ ಆವರೇಜ್‌‌ನಿಂದ ಸಿಟಿಗ್ರೂಪ್‌ ಇಂಕ್‌ನ್ನು ತೆಗೆದುಹಾಕಲಾಗುವುದೆಂದು 2009ರ ಜೂನ್‌‌ 1ರಂದು ಘೋಷಿಸಲಾಯಿತು. ಸಿಟಿಗ್ರೂಪ್‌‌‌‌‌ನ ಸಹವರ್ತಿ ಸಂಸ್ಥೆಯಾದ ಟ್ರಾವೆಲರ್ಸ್‌ ಕಂ ಎಂಬ ವಿಮಾ ಕಂಪನಿಯಿಂದ ಸಿಟಿಗ್ರೂಪ್‌ ಇಂಕ್ ಬದಲಾಯಿಸಲ್ಪಟ್ಟಿತು.

ವಿಭಾಗಗಳು

ನಾಲ್ಕು ಪ್ರಮುಖ ವ್ಯವಹಾರ ಸಮೂಹಗಳಾಗಿ ಸಿಟಿಗ್ರೂಪ್‌‌‌‌‌ ವಿಭಜಿಸಲ್ಪಟ್ಟಿದೆ. ಅವುಗಳೆಂದರೆ: ಕನ್ಷ್ಯೂಮರ್‌‌ ಬ್ಯಾಂಕಿಂಗ್‌‌‌, ಗ್ಲೋಬಲ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌, ಗ್ಲೋಬಲ್‌ ಕಾರ್ಡ್ಸ್‌, ಮತ್ತು ಇನ್‌‌ಸ್ಟಿಟ್ಯೂಷನಲ್‌ ಕ್ಲೈಂಟ್ಸ್‌ ಗ್ರೂಪ್‌.

ಗ್ಲೋಬಲ್‌ ಕನ್ಸ್ಯೂಮರ್‌ ಗ್ರೂಪ್‌‌

ಸಿಟಿಗ್ರೂಪ್‌‌‌‌‌ನ ಈ ವಿಭಾಗವು 2006ರಲ್ಲಿ 30.6 ಶತಕೋಟಿ $ನಷ್ಟು ಆದಾಯವನ್ನು ಹಾಗೂ 4 ಶತಕೋಟಿ $ಗೂ ಹೆಚ್ಚಿನ ನಿವ್ವಳ ಆದಾಯವನ್ನು ಗಳಿಸಿತು; ಗ್ಲೋಬಲ್‌ ಕನ್ಸ್ಯೂಮರ್‌ ಗ್ರೂಪ್‌‌ ನಾಲ್ಕು ಉಪ-ವಿಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ: ಕಾರ್ಡ್ಸ್‌‌ (ಕ್ರೆಡಿಟ್‌ಕಾರ್ಡ್‌‌‌ಗಳು), ಕನ್ಸ್ಯೂಮರ್‌ ಲೆಂಡಿಂಗ್‌ ಗ್ರೂಪ್‌ (ಸ್ಥಿರಾಸ್ತಿ ಸಾಲನೀಡಿಕೆ, ವಾಹನ ಸಾಲಗಳು, ವಿದ್ಯಾರ್ಥಿ ಸಾಲಗಳು), ಕನ್ಸ್ಯೂಮರ್‌ ಫೈನಾನ್ಸ್‌‌, ಮತ್ತು ರೀಟೇಲ್‌ ಬ್ಯಾಂಕಿಂಗ್‌‌‌‌‌. ವೈಯಕ್ತಿಕ ಗ್ರಾಹಕರೆಡೆಗೆ ಮಾತ್ರವೇ ಅಲ್ಲದೇ, ಸಣ್ಣಗಾತ್ರದಿಂದ ಮಧ್ಯಮ-ಗಾತ್ರದವರೆಗಿನ ವ್ಯವಹಾರಗಳೆಡೆಗೆ ಗುರಿಯಿಟ್ಟುಕೊಂಡುಕೊಂಡಿರುವ GCGಯು ತನ್ನ ವಿಶ್ವಾದ್ಯಂತದ ಶಾಖೆಗಳ ಜಾಲದ ಮೂಲಕ ಹಣಕಾಸಿನ ಸೇವೆಗಳನ್ನು ಒದಗಿಸುತ್ತದೆ; ಬ್ಯಾಂಕಿಂಗ್‌‌‌, ಸಾಲಗಳು, ವಿಮೆ, ಮತ್ತು ಹೂಡಿಕಾ ಸೇವೆಗಳೂ ಸಹ ಇದರಲ್ಲಿ ಸೇರಿವೆ. ಚಾಲ್ತಿಯಲ್ಲಿರುವ ಗ್ಲೋಬಲ್‌ ಕನ್ಸ್ಯೂಮರ್‌ ಗ್ರೂಪ್‌‌ನಿಂದ ಕನ್ಷ್ಯೂಮರ್‌‌ ಬ್ಯಾಂಕಿಂಗ್‌‌‌ ಮತ್ತು ಗ್ಲೋಬಲ್‌ ಕಾರ್ಡ್ಸ್‌ ಎಂಬ ಎರಡು ಹೊಸ ಜಾಗತಿಕ ವ್ಯವಹಾರಗಳನ್ನು ತಾನು ಸೃಷ್ಟಿಸುವುದಾಗಿ 2008ರ ಮಾರ್ಚ್‌ 31ರಂದು ಸಿಟಿಗ್ರೂಪ್‌‌‌‌‌ ಘೋಷಿಸಿತು. ಅಲ್ಲಿಂದೀಚೆಗೆ ಇದು ಬದಲಾಯಿಸಲ್ಪಟ್ಟಿದೆ. "ದಿ ಅಮೆರಿಕಾಸ್‌" ಎಂದು ಕರೆಯಲ್ಪಡುವ ಕನ್ಷ್ಯೂಮರ್‌‌ ಬ್ಯಾಂಕಿಂಗ್‌‌‌ ವ್ಯವಹಾರವು ಮ್ಯಾನುಯೆಲ್‌‌ ಮೆಡಿನಾ ಮೋರಾನಿಂದ ನಿರ್ವಹಿಸಲ್ಪಡುತ್ತಿದೆ; ಸಿಟಿಗ್ರೂಪ್‌ನೊಂದಿಗೆ ಬಾನಾಮೆಕ್ಸ್‌‌ ವಿಲೀನಗೊಳ್ಳುವುದಕ್ಕೆ ಮುಂಚಿತವಾಗಿ ಈತ ಬಾನಾಮೆಕ್ಸ್‌‌ನ CEO ಆಗಿದ್ದ. ಪಶ್ಚಿಮದ ಯುರೋಪ್‌‌, ಕೇಂದ್ರೀಯ ಯುರೋಪ್‌‌ ಮತ್ತು ಏಷ್ಯಾ ವಲಯಗಳು ವ್ಯವಹಾರ ವ್ಯವಸ್ಥಾಪಕರ ಅಡಿಯಲ್ಲಿದ್ದು, ಗ್ರಾಹಕ ವ್ಯವಹಾರ ಮತ್ತು ಸಾಂಸ್ಥಿಕ/ಹೂಡಿಕಾ ವ್ಯವಹಾರಗಳೆರಡಕ್ಕೂ ಅವರು ಹೊಣೆಗಾರರಾಗಿರುತ್ತಾರೆ. ಹರಾಜಿಗಾಗಿ ಇಟ್ಟಿರುವ ವ್ಯವಹಾರಗಳನ್ನು ನಿರ್ವಹಿಸುವ ಸಲುವಾಗಿ, 2008ರ ನಂತರ ಸಿಟಿಹೋಲ್ಡಿಂಗ್ಸ್‌ನ್ನು ಪ್ರತ್ಯೇಕಿಸಿ ತೆಗೆದ ಸಿಟಿಗ್ರೂಪ್‌‌‌‌‌ ಅದನ್ನು ಒಂದು ಪ್ರತ್ಯೇಕ ಅಸ್ತಿತ್ವವನ್ನಾಗಿಸಿತು. 4 ಸ್ವತಂತ್ರ ನಿರ್ದೇಶಕರನ್ನು ಸಿಟಿಗ್ರೂಪ್‌‌‌‌‌ ನಾಮಕರಣ ಮಾಡಿದೆ- ನ್ಯೂಯಾರ್ಕ್‌ ಟೈಮ್ಸ್‌ ವರದಿ (ಮಾರ್ಚ್‌ 16, 2009)

ಸಿಟಿ ಕಾರ್ಡ್ಸ್‌‌

GCGಯ ಲಾಭದ ಪ್ರಮಾಣಗಳಿಗೆ ಸುಮಾರು 40%ನಷ್ಟು ಕೊಡುಗೆಯನ್ನು ಸಿಟಿ ಕಾರ್ಡ್ಸ್‌ ನೀಡುತ್ತದೆ. ಅಷ್ಟೇ ಅಲ್ಲ, ಪ್ರಪಂಚದಾದ್ಯಂತದ ಕ್ರೆಡಿಟ್‌ಕಾರ್ಡ್‌ಗಳ ಅತಿದೊಡ್ಡ ನೀಡಿಕೆದಾರ ಎಂಬ ಕೀರ್ತಿಗೂ ಇದು ಪಾತ್ರವಾಗಿದ್ದು, 45 ದೇಶಗಳ ಉದ್ದಗಲಕ್ಕೂ 3,800-ತಾಣಗಳಲ್ಲಿ ATM ಜಾಲವನ್ನು ಇದು ಹೊಂದಿದೆ.

ಕನ್ಸ್ಯೂಮರ್‌ ಫೈನಾನ್ಸ್‌‌ ವಿಭಾಗವು (ಇದನ್ನು "ಸಿಟಿ ಫೈನಾನ್ಷಿಯಲ್‌‌" ಎಂಬುದಾಗಿ ಬ್ರಾಂಡ್‌ ಮಾಡಲಾಗಿದೆ) GCGಯ ಲಾಭಗಳಿಕೆಗೆ ಸುಮಾರು 20%ನಷ್ಟು ಕೊಡುಗೆಯನ್ನು ನೀಡುತ್ತದೆ, ಮತ್ತು ವಿಶ್ವಾದ್ಯಂತದ 20 ದೇಶಗಳಲ್ಲಿ ವೈಯಕ್ತಿಕ ಸಾಲಗಳು ಮತ್ತು ಮನೆ ಮಾಲೀಕನ ಸಾಲಗಳನ್ನು ಇದು ನೀಡುತ್ತದೆ.[26] U.S. ಮತ್ತು ಕೆನಡಾದಲ್ಲಿ ಒಟ್ಟಾಗಿ 2,100ಕ್ಕೂ ಹೆಚ್ಚಿನ ಶಾಖೆಗಳು ಹಬ್ಬಿಕೊಂಡಿವೆ.[27] 2000ನೇ ಇಸವಿಯ ಸೆಪ್ಟೆಂಬರ್‌‌ನಲ್ಲಿ ಅಸೋಸಿಯೇಟ್ಸ್‌ ಫಸ್ಟ್‌ ಕ್ಯಾಪಿಟಲ್‌ ಕಂಪನಿಯನ್ನು ಸ್ವಾಧೀನ ಮಾಡಿಕೊಂಡಿದ್ದರಿಂದಾಗಿ, ಸಿಟಿ ಫೈನಾನ್ಷಿಯಲ್‌‌ ತನ್ನ ವ್ಯಾಪ್ತಿಯನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಆಚೆಗೆ ವಿಸ್ತರಿಸಲು ಸಾಧ್ಯವಾಯಿತು; ಅದರಲ್ಲೂ ನಿರ್ದಿಷ್ಟವಾಗಿ, ಜಪಾನ್‌‌ ಮತ್ತು ಯುರೋಪ್‌‌ನಲ್ಲಿ ನೆಲೆಗೊಂಡಿರುವ ಅಸೋಸಿಯೇಟ್ಸ್ ಕಂಪನಿಯ 700,000 ಗ್ರಾಹಕರನ್ನು ತನ್ನ ವ್ಯವಹಾರದ ತೆಕ್ಕೆಗೆ ತೆಗೆದುಕೊಳ್ಳಲು ಸಿಟಿ ಫೈನಾನ್ಷಿಯಲ್‌‌ಗೆ ಇದು ಅನುಕೂಲಮಾಡಿಕೊಟ್ಟಿತು.[28] ಸಿಟಿ ಸಮೂಹವು UKಯಲ್ಲಿನ ತನ್ನ ಸಿಟಿ ಫೈನಾನ್ಷಿಯಲ್‌‌ ಕಾರ್ಯಾಚರಣೆಗಳನ್ನು 2008ರಲ್ಲಿ [3] ಅಂತ್ಯಗೊಳಿಸಿತು.[29] ಮೇರಿಲ್ಯಾಂಡ್‌ನ ಬಾಲ್ಟಿಮೋರ್‌‌ನಲ್ಲಿರುವ ಸಿಟಿ ಫೈನಾನ್ಷಿಯಲ್‌‌ನ ನೇತೃತ್ವವನ್ನು ಮೇರಿ ಮೆಕ್‌ಡೊವೆಲ್‌‌ ಎಂಬಾಕೆಯು ವಹಿಸಿಕೊಂಡಿದ್ದಾಳೆ.

ಸಿಟಿಬ್ಯಾಂಕ್‌

ಅಂತಿಮವಾಗಿ, ಸಿಟಿಬ್ಯಾಂಕ್‌ ಎಂಬುದಾಗಿ ಬ್ರಾಂಡ್‌ ಮಾಡಲಾದ ಸಿಟಿ ಸಮೂಹದ ಜಾಗತಿಕ ಶಾಖಾ ಜಾಲವನ್ನು ಚಿಲ್ಲರೆ ವ್ಯಾಪಾರದ ಬ್ಯಾಂಕು ಸುತ್ತುವರಿಯುತ್ತದೆ. ಠೇವಣಿಗಳ ಆಧಾರದ ಮೇಲೆ ಸಿಟಿಬ್ಯಾಂಕ್‌ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಮೂರನೇ ಅತಿದೊಡ್ಡ ಚಿಲ್ಲರೆ ವ್ಯಾಪಾರದ ಬ್ಯಾಂಕು ಆಗಿದೆ (ಆದರೂ ತನ್ನ ಅನೇಕ ಪ್ರತಿಸ್ಪರ್ಧಿ ಬ್ಯಾಂಕುಗಳಿಗೆ ಹೋಲಿಸಿದಾಗ, ಇದು ಪರಿಗಣನಾರ್ಹವಾಗಿ ಅತ್ಯಂತ ಕಡಿಮೆ ಸಂಖ್ಯೆಯ ಚಿಲ್ಲರೆ ವ್ಯಾಪಾರ ಶಾಖೆಗಳನ್ನು ಹೊಂದಿದೆ), ಮತ್ತು ಮೆಕ್ಸಿಕೊ ದೇಶವನ್ನು ಹೊರತುಪಡಿಸಿ, ವಿಶ್ವದಾದ್ಯಂತದ ದೇಶಗಳಲ್ಲಿ ಸಿಟಿಬ್ಯಾಂಕ್‌ ಎಂದು ಬ್ರಾಂಡ್‌ ಮಾಡಲಾದ ಶಾಖೆಗಳನ್ನು ಇದು ಹೊಂದಿದೆ; ಮೆಕ್ಸಿಕೊದಲ್ಲಿ ಸಿಟಿಗ್ರೂಪ್‌‌‌‌‌ನ ಬ್ಯಾಂಕಿನ ಕಾರ್ಯಾಚರಣೆಗಳನ್ನು ಬಾನಾಮೆಕ್ಸ್‌‌ ಎಂಬುದಾಗಿ ಬ್ರಾಂಡ್‌ ಮಾಡಲಾಗಿದ್ದು, ಬಾನಾಮೆಕ್ಸ್‌‌ ಎಂಬುದು ಆ ದೇಶದ ಎರಡನೇ ಅತಿದೊಡ್ಡ ಬ್ಯಾಂಕಾಗಿದೆ ಮತ್ತು ಸಿಟಿಗ್ರೂಪ್‌‌‌‌‌ನ ಒಂದು ಅಂಗಸಂಸ್ಥೆಯಾಗಿದೆ.

ಗ್ಲೋಬಲ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌

ಗ್ಲೋಬಲ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌ ಸ್ವತಃ ವಿಭಜಿಸಲ್ಪಟ್ಟು ಸಿಟಿ ಪ್ರೈವೇಟ್‌ ಬ್ಯಾಂಕ್‌‌, ಸಿಟಿ ಸ್ಮಿತ್‌‌ ಬಾರ್ನೆ ಮತ್ತು ಸಿಟಿ ಇನ್‌ವೆಸ್ಟ್‌ಮೆಂಟ್‌ ರಿಸರ್ಚ್ ಎಂಬ ಅಂಗಭಾಗಗಳನ್ನು ರೂಪಿಸುತ್ತದೆ‌, ಮತ್ತು 2006ರಲ್ಲಿ ಇದು ಸಿಟಿಗ್ರೂಪ್‌‌‌‌‌ನ ಒಟ್ಟು ಆದಾಯಕ್ಕೆ 7%ನಷ್ಟು ಕೊಡುಗೆಯನ್ನು ನೀಡಿದೆ. ಆದಾಯಗಳು ಎದ್ದುಕಾಣುವಂತೆ ಹೂಡಿಕೆ ಆದಾಯದಿಂದ ಜನ್ಯವಾಗಿವೆಯಾದರೂ, ಇಕ್ವಿಟಿ ಮತ್ತು ನಿಶ್ಚಿತ-ಆದಾಯದ ಮಾರುಕಟ್ಟೆಗಳಿಗೆ ಸಂಬಂಧಿಸಿದ ದಿಕ್ಕು ಮತ್ತು ಮಟ್ಟದ ಕುರಿತಾಗಿ ಕಂಪನಿಯ ಇತರ ವಿಭಾಗಗಳಿಗಿಂತ ಗ್ಲೋಬಲ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌ ಹೆಚ್ಚು ಸಂವೇದನೆಯನ್ನು ಅಥವಾ ಸೂಕ್ಷ್ಮತೆಯನ್ನು ಹೊಂದಿದೆ.

ಸಿಟಿ ಪ್ರೈವೇಟ್‌ ಬ್ಯಾಂಕ್‌‌

ಹೆಚ್ಚು ನಿವ್ವಳ ಯೋಗ್ಯರಾದ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು, ಮತ್ತು ಕಾನೂನು ಸಂಸ್ಥೆಗಳಿಗೆ ಬ್ಯಾಂಕಿಂಗ್‌‌‌ ಮತ್ತು ಹೂಡಿಕಾ ಸೇವೆಗಳನ್ನು ಸಿಟಿ ಪ್ರೈವೇಟ್‌ ಬ್ಯಾಂಕ್‌‌ ಒದಗಿಸುತ್ತದೆ. ಸಿಟಿಗ್ರೂಪ್‌‌‌‌‌ನ ಎಲ್ಲಾ ಉತ್ಪನ್ನಗಳಿಗೆ ಒಂದು ಮಹಾದ್ವಾರವಾಗಿ ಕಾರ್ಯನಿರ್ವಹಿಸುವ ಸಿಟಿ ಪ್ರೈವೇಟ್‌ ಬ್ಯಾಂಕ್‌, ತನ್ನ ಉತ್ಪನ್ನ ಶ್ರೇಣಿಯನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ನಿರ್ವಹಿಸುವ ದೃಷ್ಟಿಯಿಂದ ತನ್ನೆಲ್ಲಾ ಗ್ರಾಹಕರಿಗೆ ಓರ್ವ ಖಾಸಗಿ ಬ್ಯಾಂಕರ್‌ನ್ನು ನಿಯೋಜಿಸುವುದರೊಂದಿಗೆ, ಸಾಂಪ್ರದಾಯಿಕ ಹೂಡಿಕಾ ಉತ್ಪನ್ನಗಳು ಮತ್ತು ಪರ್ಯಾಯ ಆಯ್ಕೆಗಳನ್ನು ಮುಂದುಮಾಡುತ್ತದೆ.ಬ್ಯಾಂಕಿಂಗ್‌‌‌ ಮತ್ತು ಹಣಕಾಸಿನ ಪರಿಹಾರೋಪಾಯಗಳಿಗೆ ಸಂಬಂಧಿಸಿದಂತೆ, ಪೊಲಾರಿಸ್‌ ಸಾಫ್ಟ್‌ವೇರ್‌ ಲ್ಯಾಬ್‌ ಲಿಮಿಟೆಡ್‌ ಜೊತೆಯಲ್ಲಿ ಸಿಟಿ ಪ್ರೈವೇಟ್‌ ಬ್ಯಾಂಕ್‌‌ ಕೈಜೋಡಿಸಿದೆ.

ಸಿಟಿ ಸ್ಮಿತ್‌‌ ಬಾರ್ನೆ

ಸಿಟಿ ಸ್ಮಿತ್‌‌ ಬಾರ್ನೆ ಎಂಬುದು ಸಿಟಿ ಸಮೂಹದ ಜಾಗತಿಕ ಖಾಸಗಿ ಸಂಪತ್ತು ನಿರ್ವಹಣಾ ಘಟಕವಾಗಿದ್ದು, ಪ್ರಪಂಚದ ಉದ್ದಗಲಕ್ಕೂ ಇರುವ ಸಂಸ್ಥೆಗಳು, ಸರ್ಕಾರಗಳು ಮತ್ತು ವ್ಯಕ್ತಿಗಳಿಗೆ ದಳ್ಳಾಳಿಕೆ, ಹೂಡಿಕಾ ಬ್ಯಾಂಕಿಂಗ್‌‌‌ ಮತ್ತು ಸ್ವತ್ತು ನಿರ್ವಹಣಾ ಸೇವೆಗಳನ್ನು ಒದಗಿಸುತ್ತಿತ್ತು. ವಿಶ್ವಾದ್ಯಂತ 800ಕ್ಕೂ ಹೆಚ್ಚಿನ ಕಚೇರಿಗಳನ್ನು ಹೊಂದಿದ್ದ ಸ್ಮಿತ್‌‌ ಬಾರ್ನೆ 9.6 ದಶಲಕ್ಷ ಸ್ವದೇಶಿ ಗ್ರಾಹಕ ಖಾತೆಗಳನ್ನು ಹೊಂದುವುದರ ಮೂಲಕ, ಗ್ರಾಹಕ ಸ್ವತ್ತುಗಳ ಸ್ವರೂಪದಲ್ಲಿ ವಿಶ್ವಾದ್ಯಂತ 1.562 ಲಕ್ಷ ಕೋಟಿ $ನಷ್ಟು ಮೌಲ್ಯವನ್ನು ಪ್ರತಿನಿಧಿಸುತ್ತಿತ್ತು.

ತನ್ನ ದಳ್ಳಾಳಿಕೆ ಸಂಸ್ಥೆಗಳನ್ನು ಸಂಯೋಜಿಸುವ ಸಲುವಾಗಿ ಮಾರ್ಗಾನ್‌‌ ಸ್ಟಾನ್ಲೆ ಹೂಡಿಕಾ ಬ್ಯಾಂಕಿಗೆ ಸ್ಮಿತ್‌‌ ಬಾರ್ನೆಯನ್ನು ನೀಡುವುದಾಗಿ 2009ರ ಜನವರಿ 13ರಂದು ಘೋಷಿಸಿದ ಸಿಟಿ ಸಮೂಹವು, ಇದಕ್ಕೆ ಪ್ರತಿಯಾಗಿ ತಾನು 2.7 ಶತಕೋಟಿ $ನಷ್ಟು ಮೊತ್ತ ಹಾಗೂ ಜಂಟಿ ಉದ್ಯಮದಲ್ಲಿ 49%ನಷ್ಟು ಪಾಲನ್ನು ಸ್ವೀಕರಿಸಲಿರುವುದಾಗಿ ತಿಳಿಸಿತು. ನಗದು ಹಣಕ್ಕೆ ಸಂಬಂಧಿಸಿದಂತೆ ಸಿಟಿ ಸಮೂಹಕ್ಕೆ ಇದ್ದ ತುರ್ತು ಅಗತ್ಯವು ಈ ವ್ಯವಹಾರದಲ್ಲಿನ ಒಂದು ಪ್ರೇರಕಶಕ್ತಿಯಾಗಿದೆ ಎಂದು ಪರಿಗಣಿಸಲ್ಪಟ್ಟಿದೆ. ಅನೇಕರು ಊಹಿಸಿರುವ ಪ್ರಕಾರ, ಇದು ಸಿಟಿ ಸಮೂಹದ "ಹಣಕಾಸಿನ ಸೂಪರ್‌‌ಮಾರುಕಟ್ಟೆ" ವಿಧಾನವು ಅಂತ್ಯಗೊಳ್ಳುವುದಕ್ಕೆ ಸಂಬಂಧಿಸಿದ ಆರಂಭವಾಗಿರಬಹುದಾಗಿದೆ.

ಸಿಟಿ ಇನ್‌ವೆಸ್ಟ್‌ಮೆಂಟ್‌ ರಿಸರ್ಚ್‌

ಸಿಟಿ ಇನ್‌ವೆಸ್ಟ್‌ಮೆಂಟ್‌ ರಿಸರ್ಚ್‌ ಎಂಬುದು ಸಿಟಿ ಸಮೂಹದ ಸಾಮಾನ್ಯ ಷೇರುಗಳ ಸಂಶೋಧನಾ ಘಟಕವಾಗಿದ್ದು, 22 ದೇಶಗಳಾದ್ಯಂತ 390 ಸಂಶೋಧನಾ ವಿಶ್ಲೇಷಕರನ್ನು ಅದು ಹೊಂದಿದೆ. 3,100 ಕಂಪನಿಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ಸಿಟಿ ಇನ್‌ವೆಸ್ಟ್‌ಮೆಂಟ್‌ ರಿಸರ್ಚ್‌, ಪ್ರಮುಖ ಜಾಗತಿಕ ಸೂಚಿಗಳ ಮಾರುಕಟ್ಟೆ ಬಂಡವಾಳೀಕರಣದ 90 ಪ್ರತಿಶತ ಭಾಗವನ್ನು ಪ್ರತಿನಿಧಿಸುತ್ತದೆ; ಹಾಗೂ ಜಾಗತಿಕ ಮಾರುಕಟ್ಟೆಗಳು ಮತ್ತು ವಲಯದ ಪ್ರವೃತ್ತಿಗಳ ಕುರಿತಾದ ಬೃಹತ್‌ ಹಾಗೂ ಪರಿಮಾಣಾತ್ಮಕ ವಿಶ್ಲೇಷಣೆಯನ್ನು ಇದು ಒದಗಿಸುತ್ತದೆ.

ಸಿಟಿ ಇನ್‌‌ಸ್ಟಿಟ್ಯೂಷನಲ್‌ ಕ್ಲೈಂಟ್ಸ್‌ ಗ್ರೂಪ್‌

ಸಿಟಿ ಮಾರ್ಕೆಟ್ಸ್‌ & ಬ್ಯಾಂಕಿಂಗ್‌‌‌ (CMB) ಮತ್ತು ಸಿಟಿ ಆಲ್ಟರ್‌ನೆಟಿವ್‌ ಇನ್ವೆಸ್ಟ್‌ಮೆಂಟ್ಸ್‌ (CAI) ಘಟಕಗಳನ್ನು ಒಳಗೊಂಡಿರುವ ಹೊಸ ಇನ್‌‌ಸ್ಟಿಟ್ಯೂಷನಲ್‌ ಕ್ಲೈಂಟ್ಸ್‌ ಗ್ರೂಪ್‌ನ ರೂಪುಗೊಳ್ಳುವಿಕೆಯನ್ನು 2007ರ ಅಕ್ಟೋಬರ್‌‌ 11ರಂದು ಸಿಟಿ ಸಮೂಹವು ಘೋಷಿಸಿತು; ಆಗ 50 ವರ್ಷ ವಯಸ್ಸಿನವನಾಗಿದ್ದ ವಿಕ್ರಮ್‌‌ ಪಂಡಿತ್ ಎಂಬಾತನನ್ನು ಇದರ ಸಭಾಪತಿ ಮತ್ತು CEO ಆಗಿ ನೇಮಿಸಲಾಯಿತು. ಎರಡು ತಿಂಗಳುಗಳ ನಂತರ, ಇಡೀ ಕಂಪನಿಯ CEO ಆಗಿ ವಿಕ್ರಮ್‌‌ ಪಂಡಿತ್‌ ಬಡತಿ ಪಡೆದ.

ಸಿಟಿ ಮಾರ್ಕೆಟ್ಸ್‌ ಅಂಡ್‌ ಬ್ಯಾಂಕಿಂಗ್‌‌‌

ಸಿಟಿ ಸಮೂಹದ ಅತ್ಯಂತ ಮಾರುಕಟ್ಟೆ-ಸಂವೇದನೆಯ ವಿಭಾಗಗಳನ್ನು ಒಳಗೊಂಡಿರುವ "CMB"ಯು ಎರಡು ಪ್ರಧಾನ ವ್ಯವಹಾರಗಳಾಗಿ ವಿಭಜಿಸಲ್ಪಟ್ಟಿದೆ. ಅವುಗಳೆಂದರೆ: "ಗ್ಲೋಬಲ್‌ ಕ್ಯಾಪಿಟಲ್‌ ಮಾರ್ಕೆಟ್ಸ್‌ ಅಂಡ್‌ ಬ್ಯಾಂಕಿಂಗ್‌‌‌" ಮತ್ತು "ಗ್ಲೋಬಲ್‌ ಟ್ರಾನ್ಸಾಕ್ಷನ್‌ ಸರ್ವೀಸಸ್‌" (GTS). ಗ್ಲೋಬಲ್‌ ಕ್ಯಾಪಿಟಲ್‌ ಮಾರ್ಕೆಟ್ಸ್‌ ಅಂಡ್‌ ಬ್ಯಾಂಕಿಂಗ್‌‌‌ ವ್ಯವಹಾರ ವಿಭಾಗವು ಹೂಡಿಕೆ- ಮತ್ತು ವಾಣಿಜ್ಯ-ಬ್ಯಾಂಕಿಂಗ್‌‌‌ ಸೇವೆಗಳನ್ನು ಒದಗಿಸುತ್ತದೆ; ಸಾಂಸ್ಥಿಕ ದಳ್ಳಾಳಿಕೆ, ಸಮಾಲೋಚನಾ ಸೇವೆಗಳು, ವಿದೇಶಿ ವಿನಿಮಯ, ರೂಪಿಸಲ್ಪಟ್ಟ ಉತ್ಪನ್ನಗಳು, ಜನ್ಯವಸ್ತುಗಳು, ಸಾಲಗಳು, ಗುತ್ತಿಗೆ, ಮತ್ತು ಉಪಕರಣ ಹಣಕಾಸು ಇವೇ ಮೊದಲಾದವುಗಳು ಸದರಿ ಸೇವೆಗಳ ವ್ಯಾಪ್ತಿಯಲ್ಲಿ ಬರುತ್ತವೆ. ಈ ಮಧ್ಯೆ, ವಿಶ್ವಾದ್ಯಂತವಿರುವ ಸಂಸ್ಥೆಗಳು ಮತ್ತು ಹಣಕಾಸಿನ ಸಂಸ್ಥೆಗಳಿಗೆ ನಗದು-ನಿರ್ವಹಣೆ, ವ್ಯಾಪಾರ ಹಣಕಾಸು ಮತ್ತು ಭದ್ರತೆಗಳ ಸೇವೆಗಳನ್ನು GTS ಒದಗಿಸುತ್ತದೆ. ಸಿಟಿಗ್ರೂಪ್‌‌‌‌‌ನ ವಾರ್ಷಿಕ ಆದಾಯಕ್ಕೆ ಸರಿಸುಮಾರು 32%ನಷ್ಟು ಕೊಡುಗೆಯನ್ನು ನೀಡುವ CMBಯು, 2006ರ ಹಣಕಾಸಿನ ವರ್ಷದಲ್ಲಿ 30 ಶತಕೋಟಿ US $ಗಿಂತ ಸ್ವಲ್ಪವೇ ಕಡಿಮೆಯಿರುವ ಆದಾಯವನ್ನು ಉತ್ಪತ್ತಿಮಾಡಿದೆ.

ಈಗಾಗಲೇ ವರದಿಯಾಗಿರುವಂತೆ, 2010ರಲ್ಲಿನ ಮಾನಿಟ್ರಾನಿಕ್ಸ್‌‌‌‌ನ ಸಂಭಾವ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಸಿಟಿ ಸಮೂಹವು ABRY ಪಾರ್ಟ್‌ನರ್ಸ್‌‌‌ಗೆ ಸಲಹಾಸೇವೆಯನ್ನು ನೀಡುತ್ತಿದೆ.

ಸಿಟಿ ಆಲ್ಟರ್‌ನೆಟಿವ್‌ ಇನ್ವೆಸ್ಟ್‌ಮೆಂಟ್ಸ್‌

ಸಿಟಿ ಆಲ್ಟರ್‌ನೆಟಿವ್‌ ಇನ್ವೆಸ್ಟ್‌ಮೆಂಟ್ಸ್‌ (CAI) ಎಂಬುದು ಒಂದು ಪರ್ಯಾಯ ಹೂಡಿಕಾ ವೇದಿಕೆಯಾಗಿದ್ದು, ಐದು ವರ್ಗಗಳಲ್ಲಿ ಸ್ವತ್ತುಗಳನ್ನು ಅದು ನಿರ್ವಹಿಸುತ್ತದೆ. ಅವುಗಳೆಂದರೆ: ಖಾಸಗಿ ಇಕ್ವಿಟಿ, ರಕ್ಷಣಾ ನಿಧಿಗಳು, ರೂಪಿಸಲ್ಪಟ್ಟ ಉತ್ಪನ್ನಗಳು, ನಿರ್ವಹಿಸಲ್ಪಟ್ಟ ಮುಮ್ಮಾರಿಕೆಯ ಸರಕುಗಳು, ಮತ್ತು ಸ್ಥಿರಾಸ್ತಿ. ತಾನು ಹೊಂದಿರುವ 16 "ನಾಜೂಕಾದ ಹೂಡಿಕಾ ಕೇಂದ್ರಗಳ" ನೆರವಿನೊಂದಿಗೆ, ಹಲವಾರು ನಿಧಿಗಳು ಅಥವಾ ಪ್ರತ್ಯೇಕ ಖಾತೆಗಳನ್ನು ಇದು ಒದಗಿಸುತ್ತದೆ; ಲೆಗ್‌‌ ಮ್ಯಾಸನ್‌‌‌ಗೆ ಅದು ಇತ್ತೀಚೆಗೆ ಮಾರಾಟಮಾಡಿದ ಮುಖ್ಯವಾಹಿನಿಯ ಮ್ಯೂಚುಯಲ್‌‌ ನಿಧಿಗಳಿಗೆ ತದ್ವಿರುದ್ಧವಾಗಿ ಸದರಿ ನಿಧಿಗಳು ಅಥವಾ ಪ್ರತ್ಯೇಕ ಖಾತೆಗಳು ಪರ್ಯಾಯ ಹೂಡಿಕಾ ಕಾರ್ಯತಂತ್ರಗಳನ್ನು ಬಳಸಿಕೊಳ್ಳುತ್ತವೆ. ಸಿಟಿಗ್ರೂಪ್‌‌‌‌‌ ಒಡೆತನದ ಬಂಡವಾಳವನ್ನು ಮಾತ್ರವೇ ಅಲ್ಲದೇ, ಮೂರನೇ-ಸಹಭಾಗಿಗಳು ಮತ್ತು ಹೆಚ್ಚಿನ-ನಿವ್ವಳ-ಯೋಗ್ಯ ಹೂಡಿಕೆದಾರರಿಂದ ಬಂದ ಸಾಂಸ್ಥಿಕ ಹೂಡಿಕೆಗಳನ್ನೂ ಸಹ CAI ನಿರ್ವಹಿಸುತ್ತದೆ. 2007ರ ಜೂನ್‌‌ 30ರ ವೇಳೆಗೆ ಇದ್ದಂತೆ, ಬಂಡವಾಳ ನಿರ್ವಹಣೆಯ ಅಡಿಯಲ್ಲಿ 59.2 ಶತಕೋಟಿ US$ನಷ್ಟು ಮೊತ್ತವನ್ನು CAI ಹೊಂದಿದೆ ಮತ್ತು ಸಿಟಿಗ್ರೂಪ್‌‌‌‌‌ನ 2006ರ ಅವಧಿಯ ಆದಾಯಕ್ಕೆ 7%ನಷ್ಟು ಕೊಡುಗೆನೀಡಿದೆ. 2010ರಲ್ಲಿ, ತನ್ನ ಖಾಸಗಿ ಇಕ್ವಿಟಿ ಘಟಕವನ್ನು ಲೆಕ್ಸಿಂಗ್ಟನ್‌‌ ಪಾರ್ಟ್‌ನರ್ಸ್‌ಗೆ ಮಾರಲು ಸಿಟಿಗ್ರೂಪ್‌‌‌‌‌ ಸಮ್ಮತಿಸಿತು; PE ಹಬ್ ಅನುಸಾರ, ರಾಯಿಟರ್ಸ್‌ನಿಂದ ವರದಿ ಮಾಡಲ್ಪಟ್ಟಂತೆ, ಇದಕ್ಕೆ ನಿಗದಿಪಡಿಸಲಾಗಿದ್ದ ಮೊತ್ತವು ಸುಮಾರು 900 ದಶಲಕ್ಷ $ಗಳಷ್ಟಿತ್ತು. ಈ ಘಟಕಕ್ಕೆ ಸ್ಟೆಪ್‌ಸ್ಟೋನ್‌ ಗ್ರೂಪ್‌‌ ನಿರ್ವಹಣಾ ಸೇವೆಗಳನ್ನು ಒದಗಿಸಲಿದೆ. ತನ್ನ ಬೇಡದ ಸ್ವತ್ತುಗಳ ಹೊರೆಯಿಳಿಸಲು ಸಿಟಿಗ್ರೂಪ್‌‌‌‌‌ ಮಾಡುತ್ತಿರುವ ಪ್ರಯತ್ನಗಳಲ್ಲಿ ಈ ಮಾರಾಟವು ಮತ್ತೊಂದು ಹಂತ ಎನಿಸಿಕೊಳ್ಳಲಿದೆ.

ಬ್ರ್ಯಾಂಡ್‌ಗಳು

  • ಸಿಟಿಬ್ಯಾಂಕ್‌: ಇದು ಗ್ರಾಹಕ‌ ಬ್ಯಾಂಕಿಂಗ್‌‌‌ ಉತ್ಪನ್ನಗಳನ್ನು ಒದಗಿಸುತ್ತಿದೆ.
  • ಬಾನಾಮೆಕ್ಸ್‌‌: ಇದು ಮೆಕ್ಸಿಕೊ ದೇಶದ ಎರಡನೇ ಅತಿದೊಡ್ಡ ಬ್ಯಾಂಕು.
  • ಬ್ಯಾಂಕೊ ಕಸ್ಕೇಟ್ಲಾನ್‌‌: ಇದು ಎಲ್‌ ಸಾಲ್ವೆಡಾರ್‌‌‌‌‌ನ ಅತಿದೊಡ್ಡ ಬ್ಯಾಂಕು.
  • ಬ್ಯಾಂಕೊ ಯುನೊ: ಇದು ಕೇಂದ್ರೀಯ ಅಮೆರಿಕಾದ ಅತಿದೊಡ್ಡ ಕ್ರೆಡಿಟ್‌ಕಾರ್ಡ್‌ ಬ್ಯಾಂಕು.
  • ಬ್ಯಾಂಕ್‌‌ ಹ್ಯಾಂಡ್‌ಲೊವಿ ಡಬ್ಲ್ಯು ವಾರ್ಸ್‌ಜಾವಿ: ಇದು ಪೋಲೆಂಡ್‌ನಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಅತ್ಯಂತ ಹಳೆಯ ವಾಣಿಜ್ಯ ಬ್ಯಾಂಕು.
  • ‌‌‌ಸಿಟಿಮಾರ್ಟ್‌ಗೇಜ್: ಇದು ಒಂದು ಅಡಮಾನ ಸಾಲದಾತ.
  • ‌ಸಿಟಿಇನ್ಷೂರೆನ್ಸ್: ಇದು ಒಂದು ವಿಮಾ ಸೇವಾದಾರನಾಗಿದೆ.
  • ಸಿಟಿಕ್ಯಾಪಿಟಲ್‌‌: ಇದು ಸಾಂಸ್ಥಿಕ ಹಣಕಾಸಿನ ಸೇವೆಗಳಿಗೆ ಸಂಬಂಧಿಸಿದೆ.
  • ಸಿಟಿ ಫೈನಾನ್ಷಿಯಲ್‌‌: ಇದು ಗ್ರಾಹಕ ಹಣಕಾಸು ಉತ್ಪನ್ನವಾಗಿದ್ದು ಇದಕ್ಕೆ ಉಪಪ್ರಧಾನ ಸಾಲನೀಡಿಕೆ ಎಂಬ ಹೆಸರೂ ಇದೆ.
  • ‌ಸಿಟಿ ಆಲ್ಟರ್‌ನೆಟಿವ್‌ ಇನ್ವೆಸ್ಟ್‌ಮೆಂಟ್ಸ್
  • ಸ್ಮಿತ್‌‌ ಬಾರ್ನೆ: ಚಿಲ್ಲರೆ ವ್ಯಾಪಾರದ ಸಂಪೂರ್ಣ ಸೇವಾ ದಳ್ಳಾಳಿಕೆ, ಖಾಸಗಿ ಗ್ರಾಹಕ ಸೇವೆಗಳನ್ನು ಒಳಗೊಂಡಿರುವ ಹೂಡಿಕಾ ಸೇವೆಗಳು.
  • ಸಿಟಿಕಾರ್ಡ್‌ : ಕ್ರೆಡಿಟ್‌ಕಾರ್ಡ್‌ಗಳು.
  • ಕ್ರೆಡಿಟ್‌ಕಾರ್ಡ್‌ ಸಿಟಿ : ಬ್ರೆಜಿಲ್‌‌‌‌‌‌ನಲ್ಲಿರುವ ಕ್ರೆಡಿಟ್‌ಕಾರ್ಡ್‌ ವ್ಯವಹಾರ.

ಪ್ರಪಂಚದ ಅತಿದೊಡ್ಡ ಅಂತರ್ಜಾಲ ಬ್ಯಾಂಕು ಎನಿಸಿಕೊಂಡಿರುವ ಎಗ್‌‌ ಬ್ಯಾಂಕಿಂಗ್‌‌‌ ಪಿಎಲ್‌ಸಿಯನ್ನು ಪ್ರುಡೆನ್ಷಿಯಲ್‌‌‌ನಿಂದ ಸಿಟಿಗ್ರೂಪ್‌‌‌‌‌ ಖರೀದಿಸಿದಾಗ, ಎಗ್‌‌ ಬ್ರಾಂಡ್‌ನ್ನು ಅದು ಇತ್ತೀಚೆಗೆ ವಶಪಡಿಸಿಕೊಂಡಂತಾಯಿತು. ಅನಪೇಕ್ಷಿತ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದ ಸುಮಾರು 7%ನಷ್ಟು ಕಾರ್ಡು ಹಿಡುವಳಿದಾರರಿಗೆ ಸಾಲನೀಡಿಕೆಯನ್ನು ನಿಲ್ಲಿಸುವುದು ಇದರ ಮೊದಲ ಪ್ರಮುಖ ಕ್ರಮವಾಗಿತ್ತು. ಶಿಲ್ಕುಗಳನ್ನು ಸಂಪೂರ್ಣವಾಗಿ ನಿಯತವಾಗಿ ತೀರಿಸಿದ ಕೆಲವರನ್ನೂ ಸಹ ಇದು ಒಳಗೊಂಡಿತ್ತು; "ಹದಗೆಡುತ್ತಿರುವ ಸಾಲದ ಚಿತ್ರಣಗಳ" ಕಾರಣದಿಂದಾಗಿ ಈ ಕ್ರಮವನ್ನು ಕೈಗೊಳ್ಳಬೇಕಾಯಿತು ಎಂಬ ಸಮರ್ಥನೆ ಈ ಸಂದರ್ಭದಲ್ಲಿ ಸಿಕ್ಕಿತಾದರೂ, ಸಂಬಂಧಿತ ಹೊಣೆಗಾರ ಸಾಲಗಾರರಿಂದ ಪಡೆಯಲಾಗುತ್ತಿದ್ದ ಕಡಿಮೆ ಲಾಭದ ಪಾಲುಗಳು ಇದಕ್ಕೆ ಕಾರಣವಾಗಿತ್ತು ಎಂದು ವ್ಯಾಪಕವಾಗಿ ನಂಬಲಾಗಿದೆ.

ಸ್ಥಿರಾಸ್ತಿ

ಸಿಟಿಗ್ರೂಪ್‌ 
ಸಿಟಿಗ್ರೂಪ್‌‌‌‌‌ ಸೆಂಟರ್‌, ಚಿಕಾಗೊ
ಸಿಟಿಗ್ರೂಪ್‌ 
ಸಿಟಿಗ್ರೂಪ್‌‌‌‌‌ EMEA ಕೇಂದ್ರಕಚೇರಿ, ಕೆನರಿ ವಾರ್ಫ್‌, ಲಂಡನ್‌‌
ಸಿಟಿಗ್ರೂಪ್‌ 
ಸಿಡ್ನಿಯಲ್ಲಿರುವ ಸಿಟಿಗ್ರೂಪ್‌‌‌‌‌ ಸೆಂಟರ್‌

ಸಿಟಿಗ್ರೂಪ್‌‌‌‌‌ ಸೆಂಟರ್‌ ಎಂಬುದು ಸಿಟಿಗ್ರೂಪ್‌ನ ಅತ್ಯಂತ ಪ್ರಸಿದ್ಧವಾದ ಕಚೇರಿ ಕಟ್ಟಡವಾಗಿದ್ದು, ಇದು ನ್ಯೂಯಾರ್ಕ್‌ ನಗರದ ಮ್ಯಾನ್‌ಹಾಟನ್‌‌‌ನ ಈಸ್ಟ್‌ ಮಿಡ್‌ಟೌನ್‌‌‌‌‌ನಲ್ಲಿ ನೆಲೆಗೊಂಡಿರುವ ಒಂದು ಕರ್ಣೀಯ-ಛಾವಣಿಯ ಗಗನಚುಂಬಿ ಕಟ್ಟಡವಾಗಿದೆ; ಇದು ಜನಪ್ರಿಯ ನಂಬಿಕೆಯ ಹೊರತಾಗಿಯೂ ಕಂಪನಿಯ ಕೇಂದ್ರಕಚೇರಿ ಕಟ್ಟಡವಾಗಿಲ್ಲ. ಬೀದಿಗೆ ಅಡ್ಡಲಾಗಿರುವ 399 ಪಾರ್ಕ್‌ ಅವೆನ್ಯೂ ಎಂಬಲ್ಲಿನ, ಒಂದು ಹೆಚ್ಚುಗಾರಿಕೆಯಿಲ್ಲದಂತೆ-ಕಾಣುವ ಕಟ್ಟಡದಲ್ಲಿ ಸಿಟಿಗ್ರೂಪ್‌‌‌‌‌ ತನ್ನ ಕೇಂದ್ರಕಚೇರಿಯನ್ನು ಹೊಂದಿದೆ (ಇದು ಸಿಟಿ ನ್ಯಾಷನಲ್‌ ಬ್ಯಾಂಕ್‌‌ನ ಮೂಲನೆಲೆಯ ತಾಣವಾಗಿದೆ). ಒಂಬತ್ತು ಐಷಾರಾಮೀ ಊಟದ ಕೋಣೆಗಳೊಂದಿಗೆ ಸದರಿ ಕೇಂದ್ರಕಚೇರಿಯನ್ನು ಸಜ್ಜುಗೊಳಿಸಲಾಗಿದ್ದು, ಖಾಸಗಿಯಾದ ಮುಖ್ಯ ಬಾಣಸಿಗರ ಒಂದು ತಂಡವು ಪ್ರತಿಯೊಂದು ದಿನಕ್ಕೂ ಒಂದು ವಿಭಿನ್ನ ಭಕ್ಷ್ಯವನ್ನು ಸಿದ್ಧಪಡಿಸುತ್ತದೆ. ಸಿಟಿಬ್ಯಾಂಕ್‌ನ ಶಾಖೆಯೊಂದರ ಮೇಲಿರುವ ಮೂರನೇ ಮತ್ತು ನಾಲ್ಕನೇ ಮಹಡಿಗಳಲ್ಲಿ ಆಡಳಿತ ಮಂಡಳಿಯ ತಂಡವು ನೆಲೆಗೊಂಡಿದೆ. ಮ್ಯಾನ್‌ಹಾಟನ್‌‌ನಲ್ಲಿನ 388 ಗ್ರೀನ್‌ವಿಚ್‌ ಸ್ಟ್ರೀಟ್‌ ಎಂಬಲ್ಲಿರುವ ಟ್ರೈಬೆಕಾ ನೆರೆಹೊರೆಯಲ್ಲಿನ ಕಟ್ಟಡವೊಂದನ್ನೂ ಸಹ ಸಿಟಿಗ್ರೂಪ್‌‌‌‌‌ ಗುತ್ತಿಗೆಗೆ ಪಡೆದುಕೊಂಡಿದ್ದು, ಅದು ಸಿಟಿಗ್ರೂಪ್‌ನ ಹೂಡಿಕೆ ಮತ್ತು ಸಾಂಸ್ಥಿಕ ಬ್ಯಾಂಕಿಂಗ್‌‌‌ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಕೇಂದ್ರಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ; ಈ ಕಟ್ಟಡವು ಟ್ರಾವೆಲರ್ಸ್‌‌ ಗ್ರೂಪ್‌‌ನ ಹಿಂದಿನ ಕೇಂದ್ರಕಚೇರಿಯಾಗಿತ್ತು ಎಂಬುದು ಗಮನಾರ್ಹ ಅಂಶ.

ಕಂಪನಿಯ ಸ್ಮಿತ್‌‌ ಬಾರ್ನೆ ವಿಭಾಗ ಮತ್ತು ವಾಲ್‌ ಸ್ಟ್ರೀಟ್‌ ವ್ಯವಹಾರದ ವಿಭಾಗವನ್ನು ಹೊರತುಪಡಿಸಿ, ನ್ಯೂಯಾರ್ಕ್‌ ನಗರದಲ್ಲಿನ ಸಿಟಿಗ್ರೂಪ್‌‌‌‌‌ನ ಎಲ್ಲಾ ಸ್ಥಿರಾಸ್ತಿಯೂ ಕಾರ್ಯತಂತ್ರದ ದೃಷ್ಟಿಯಿಂದ ನ್ಯೂಯಾರ್ಕ್‌ ನಗರದ ನೆಲದಡಿಯ ಸುರಂಗಮಾರ್ಗದ IND ಕ್ವೀನ್ಸ್‌ ಬೌಲೆವರ್ಡ್‌ ಲೈನ್‌‌‌‌ನ ಉದ್ದಕ್ಕೂ ನೆಲೆಗೊಂಡಿದ್ದು, ಇದಕ್ಕೆ E M ಟ್ರೇನುಗಳ ಸೇವೆಯು ಲಭ್ಯವಿದೆ. ಇದರ ಪರಿಣಾಮವಾಗಿ, ಕಂಪನಿಯ ಮಧ್ಯನಗರದ ಕಟ್ಟಡಗಳ ನಡುವೆ ಎರಡು ನಿಲುಗಡೆಗಳಿಗಿಂತ ಹೆಚ್ಚಿನ ಅಂತರವಿಲ್ಲ; ಕಂಪನಿಯ ಮಧ್ಯನಗರದ ಕಟ್ಟಡಗಳಲ್ಲಿ 787 ಸೆವೆಂತ್‌ ಅವೆನ್ಯೂ, 666 ಫಿಫ್ತ್‌ ಅವೆನ್ಯೂ, 399 ಪಾರ್ಕ್‌ ಅವೆನ್ಯೂ, 485 ಲೆಕ್ಸಿಂಗ್ಟನ್‌‌, 153 ಪೂರ್ವದ 53ನೇ ಬೀದಿ (ಸಿಟಿಗ್ರೂಪ್‌‌‌‌‌ ಸೆಂಟರ್‌), ಮತ್ತು ಕ್ವೀನ್ಸ್‌‌ನ ಲಾಂಗ್‌ ಐಲೆಂಡ್‌ ನಗರದಲ್ಲಿರುವ ಸಿಟಿಕಾರ್ಪ್‌ ಕಟ್ಟಡಗಳು ಸೇರಿವೆ. ವಾಸ್ತವವಾಗಿ, ಕಂಪನಿಯ ಪ್ರತಿಯೊಂದು ಕಟ್ಟಡವೂ, E M ಟ್ರೇನುಗಳ ಸೇವೆಯನ್ನು ಹೊಂದಿರುವ ನೆಲದಡಿಯ ಸುರಂಗಮಾರ್ಗದ ನಿಲ್ದಾಣವೊಂದರ ಮೇಲ್ಭಾಗದಲ್ಲಿ ಅಥವಾ ಬಲಕ್ಕೆ ಅಡ್ಡಲಾಗಿರುವ ಬೀದಿಯಲ್ಲಿ ನೆಲೆಗೊಂಡಿದೆ.

ಸಿಟಿಗ್ರೂಪ್‌‌‌‌‌ನಿಂದ ನಿರ್ವಹಿಸಲ್ಪಡುತ್ತಿರುವ ಒಂದು ವಾಸ್ತುಶಿಲ್ಪೀಯ ಸೌಂದರ್ಯಕ್ಕೆ ಚಿಕಾಗೊ ಕೂಡಾ ಒಂದು ನೆಲೆಯಾಗಿದೆ. ಸಿಟಿಕಾರ್ಪ್‌ ಸೆಂಟರ್ ತನ್ನ ಶಿಖರಭಾಗದಲ್ಲಿ ಬಾಗಿದ ಕಮಾನುದಾರಿಗಳ ಒಂದು ಸರಣಿಯನ್ನು ಹೊಂದಿದ್ದು, ಇದು ಅದರ ಪ್ರಮುಖ ಪ್ರತಿಸ್ಪರ್ಧಿಯಾದ ABN AMROದ ABN AMRO ಪ್ಲಾಜಾದಿಂದ ಬಂದಿರುವ ಬೀದಿಗೆ ಅಡ್ಡಲಾಗಿ ಅಡಕಗೊಂಡಿದೆ. ಇದು ಚಿಲ್ಲರೆ ವ್ಯಾಪಾರ ಮತ್ತು ಊಟದ ಸೌಕರ್ಯಗಳ ಒಂದು ಸಮೂಹವನ್ನೇ ಹೊಂದಿದ್ದು, ಅವು ಪ್ರತಿದಿನ ಒಗಿಲ್ವೀ ಸಾರಿಗೆ ಕೇಂದ್ರದ ಮೂಲಕ ಸಾವಿರಾರು ಸಂಖ್ಯೆಯ ಮೆಟ್ರಾ ಗ್ರಾಹಕರಿಗೆ ಸೇವೆ ಸಲ್ಲಿಸುತ್ತವೆ.

ನ್ಯೂಯಾರ್ಕ್‌ ಮೆಟ್ಸ್‌‌ ಎಂಬ ಪ್ರಮುಖ ಲೀಗ್‌‌ ಬೇಸ್‌ಬಾಲ್‌‌ ತಂಡದ ಸ್ವಸ್ಥಳದ ಬೇಸ್‌ಬಾಲ್‌ ಮೈದಾನವಾದ ಸಿಟಿ ಫೀಲ್ಡ್‌‌‌ಗೆ ಹೆಸರಿಸುವ ಹಕ್ಕುಗಳನ್ನು ಸಿಟಿಗ್ರೂಪ್‌‌‌‌‌ ಗಳಿಸಿಕೊಂಡಿದೆ; ಈ ಬೇಸ್‌ಬಾಲ್‌ ತಂಡವು 2009ರಲ್ಲಿ ಈ ಮೈದಾನದಲ್ಲಿ ತನ್ನ ಸ್ವಸ್ಥಳದ ಆಟಗಳನ್ನು ಆಡಲು ಪ್ರಾರಂಭಿಸಿತು.

ಟೀಕೆ

ರೌಲ್‌‌ ಸಲಿನಾಸ್‌ ಮತ್ತು ಆಪಾದನೆಗೊಳಗಾದ ಹಣದ ವರ್ಗಾಯಿಸುವಿಕೆ

ಮೆಕ್ಸಿಕೊದ ಹಿಂದಿನ ಅಧ್ಯಕ್ಷನಾದ ಕಾರ್ಲೋಸ್‌ ಸಲಿನಾಸ್‌‌‌ನ ಸೋದರನಾದ ರೌಲ್‌‌ ಸಲಿನಾಸ್‌ ಡೆ ಗೊರ್ತಾರಿ ಎಂಬಾತನಿಂದ ಸ್ವೀಕರಿಸಲ್ಪಟ್ಟ ನಿಧಿಗಳನ್ನು ಸಿಟಿಬ್ಯಾಂಕ್‌ ನಿರ್ವಹಿಸಿದ್ದರ ಕುರಿತಾಗಿ, ನಿರ್ಣಾಯಕ ಪಾತ್ರವನ್ನು ವಹಿಸಿದ ವರದಿಯೊಂದನ್ನು ಸಾರ್ವತ್ರಿಕ ಲೆಕ್ಕಪತ್ರಗಾರಿಕೆಯ ಕಚೇರಿಯು 1998ರಲ್ಲಿ ನೀಡಿತು. "ರೌಲ್‌‌ ಸಲಿನಾಸ್‌, ಸಿಟಿಬ್ಯಾಂಕ್‌ ಮತ್ತು ಆಪಾದನೆಗೊಳಗಾದ ಹಣ ವರ್ಗಾಯಿಸುವಿಕೆ" ಎಂಬ ಶೀರ್ಷಿಕೆಯನ್ನು ಹೊಂದಿದ್ದ ಈ ವರದಿಯು ಸೂಚಿಸಿದ ಪ್ರಕಾರ, ನಿಧಿಗಳ ದಾಖಲೆಯುಕ್ತ ಪುರಾವೆಯನ್ನು ಅಡಗಿಸಲೆಂದು, ಸಂಕೀರ್ಣವಾದ ಹಣಕಾಸಿನ ವ್ಯವಹಾರ ನಿರ್ವಹಣೆಗಳ ಮೂಲಕ ಲಕ್ಷಗಟ್ಟಲೆ ಡಾಲರುಗಳಷ್ಟು ಹಣದ ವರ್ಗಾವಣೆಯನ್ನು ಸಿಟಿಬ್ಯಾಂಕ್‌ ಸುಗಮಗೊಳಿತ್ತು. ರೌಲ್‌‌ ಸಲಿನಾಸ್‌ ತನ್ನ ಸಂಪತ್ತನ್ನು ಹೇಗೆ ಸಂಪಾದಿಸಿದ ಎಂಬುದರ ಕುರಿತಾದ ಒಂದು ಸವಿವರವಾದ ವಿಚಾರಣೆಯನ್ನು ಮಾಡದೆಯೇ, ಅವನನ್ನು ಓರ್ವ ಗ್ರಾಹಕನನ್ನಾಗಿ ಸಿಟಿಬ್ಯಾಂಕ್‌ ಪರಿಗಣಿಸಿತು ಎಂಬ ಅಂಶವನ್ನೂ ಸಹ ಈ ವರದಿಯು ಸೂಚಿಸಿತು.

ಹೂಡಿಕೆಯ ಸಂಶೋಧನೆಯ ಮೇಲಿನ ಹಿತಾಸಕ್ತಿಯ ಘರ್ಷಣೆಗಳು

2002ರ ಡಿಸೆಂಬರ್‌ನಲ್ಲಿ, ಒಟ್ಟು 400 ದಶಲಕ್ಷ $ನಷ್ಟು ಮೊತ್ತದ ದಂಡಗಳನ್ನು ಸಿಟಿಗ್ರೂಪ್‌‌‌‌‌ ಪಾವತಿಸಿತು; ಈ ಮೊತ್ತವು ಸಂಸ್ಥಾನಗಳು ಹಾಗೂ ಒಕ್ಕೂಟದ ಸರ್ಕಾರದ ನಡುವೆ ಹಂಚಿಹೋಯಿತು. ಸಿಟಿಗ್ರೂಪ್‌‌‌‌‌ನ್ನೂ ಒಳಗೊಂಡಂತೆ ಹತ್ತು ಬ್ಯಾಂಕುಗಳು ಪೂರ್ವಗ್ರಹಪೀಡಿತವಾದ ಸಂಶೋಧನೆಯೊಂದಿಗೆ ಹೂಡಿಕೆದಾರರನ್ನು ಮೋಸಗೊಳಿಸಿದವು ಎಂಬ ಆರೋಪಗಳನ್ನು ಒಳಗೊಂಡಿದ್ದ ಫೈಸಲಾತಿಯೊಂದರ ಭಾಗವಾಗಿ ಈ ದಂಡಗಳು ಪಾವತಿಸಲ್ಪಟ್ಟವು. ಹತ್ತು ಬ್ಯಾಂಕುಗಳ ವತಿಯಿಂದ ಬಂದ ಒಟ್ಟು ಫೈಸಲಾತಿಯ ಮೊತ್ತವು 1.4 ಶತಕೋಟಿ $ನಷ್ಟಿತ್ತು. ಈ ಫೈಸಲಾತಿಯ ಅನುಸಾರ ಬ್ಯಾಂಕುಗಳು ಸಂಶೋಧನಾ ವಿಭಾಗದಿಂದ ಹೂಡಿಕಾ ಬ್ಯಾಂಕಿಂಗ್‌ ವಿಭಾಗವನ್ನು ಪ್ರತ್ಯೇಕಿಸುವ, ಮತ್ತು IPO ಷೇರುಗಳ ಯಾವುದೇ ಹಂಚಿಕೆಯನ್ನು ನಿಷೇಧಿಸುವ ಅಗತ್ಯ ಕಂಡುಬಂತು.

ಎನ್ರಾನ್‌, ವರ್ಲ್ಡ್‌ಕಾಮ್‌‌ ಮತ್ತು ಗ್ಲೋಬಲ್‌ ಕ್ರಾಸಿಂಗ್‌ ದಿವಾಳಿತನಗಳು

2001ರಲ್ಲಿ ನಡೆದ ಒಂದು ಹಣಕಾಸಿನ ಹಗರಣದ ನಡುವೆ ಕುಸಿದ ಎನ್ರಾನ್‌ ಸಂಸ್ಥೆಗೆ ಧನಸಹಾಯ ಮಾಡುವಲ್ಲಿ ತಾನು ವಹಿಸಿದ್ದ ಪಾತ್ರಕ್ಕೆ ಸಂಬಂಧಿಸಿದಂತೆ, 3 ಶತಕೋಟಿ $ಗೂ ಹೆಚ್ಚಿನ ದಂಡಗಳನ್ನು ಮತ್ತು ಕಾನೂನುಬದ್ಧ ಫೈಸಲಾತಿಗಳನ್ನು ಸಿಟಿಗ್ರೂಪ್‌‌‌‌‌ ಪಾವತಿಸಿತು. ಭದ್ರತೆಗಳು ಮತ್ತು ವಿನಿಮಯದ ಆಯೋಗ ಹಾಗೂ ಮ್ಯಾನ್‌ಹಾಟನ್‌‌ ಜಿಲ್ಲಾ ನ್ಯಾಯವಾದಿಗಳ ಕಚೇರಿಯಿಂದ ಸಲ್ಲಿಸಲ್ಪಟ್ಟ ಹಕ್ಕಿನ ಸಮರ್ಥನೆಯನ್ನು ಇತ್ಯರ್ಥ ಮಾಡಿಕೊಳ್ಳಲು, ದಂಡಗಳು ಮತ್ತು ಜುಲ್ಮಾನೆಗಳ ರೂಪದಲ್ಲಿ 145 ದಶಲಕ್ಷ $ನಷ್ಟು ಹಣವನ್ನು 2003ರಲ್ಲಿ ಸಿಟಿಗ್ರೂಪ್‌ ಪಾವತಿಸಿತು. ಎನ್ರಾನ್‌ನಲ್ಲಿನ ಹೂಡಿಕೆದಾರರಿಂದ ಸಲ್ಲಿಸಲ್ಪಟ್ಟ ಕಾನೂನುದಾವೆಯೊಂದನ್ನು ‌ಇತ್ಯರ್ಥ ಮಾಡಿಕೊಳ್ಳಲು, ಸಿಟಿಗ್ರೂಪ್‌ 2005ರಲ್ಲಿ 2 ಶತಕೋಟಿ $ನಷ್ಟು ಹಣವನ್ನು ಪಾವತಿಸಿತು. ದಿವಾಳಿ ಕಂಪನಿಯ ಸಾಲದಾತರನ್ನು ಪ್ರತಿನಿಧಿಸಿದ ಎನ್ರಾನ್‌ ಬ್ಯಾಂಕ್‌ರಪ್ಟ್‌ಸಿ ಎಸ್ಟೇಟ್‌ಗೆ ಸಿಟಿಗ್ರೂಪ್‌‌‌‌‌ 2008ರಲ್ಲಿ 1.66 ಶತಕೋಟಿ $ನಷ್ಟು ಹಣವನ್ನು ಪಾವತಿಸಿತು. ಲೆಕ್ಕಪತ್ರಗಾರಿಕೆಯ ಹಗರಣವೊಂದರಲ್ಲಿ 2002ರಲ್ಲಿ ಕುಸಿದ ವರ್ಲ್ಡ್‌ಕಾಮ್‌‌‌ಗಾಗಿ ಸ್ಟಾಕ್‌‌ಗಳು ಮತ್ತು ಬಾಂಡ್‌ಗಳನ್ನು ಮಾರುವಲ್ಲಿನ ತನ್ನ ಪಾತ್ರಕ್ಕೆ ಸಂಬಂಧಿಸಿದಂತಿದ್ದ ಕಾನೂನುದಾವೆಯೊಂದನ್ನು ಇತ್ಯರ್ಥ ಮಾಡಿಕೊಳ್ಳಲು, ಸಿಟಿಗ್ರೂಪ್‌‌‌‌‌ 2004ರಲ್ಲಿ 2.65 ಶತಕೋಟಿ $ನಷ್ಟು ಹಣವನ್ನು ಪಾವತಿಸಿತು. ದಿವಾಳಿತನಕ್ಕೆ ಸಂಬಂಧಿಸಿದಂತೆ 2002ರಲ್ಲಿ ಅರ್ಜಿಸಲ್ಲಿಸಿದ ಗ್ಲೋಬಲ್‌ ಕ್ರಾಸಿಂಗ್‌ ಕಂಪನಿಯಲ್ಲಿನ ಹೂಡಿಕೆದಾರರಿಂದ ಸಲ್ಲಿಸಲ್ಪಟ್ಟ ಕಾನೂನುದಾವೆಯೊಂದನ್ನು ಇತ್ಯರ್ಥ ಮಾಡಿಕೊಳ್ಳಲು, ಸಿಟಿಗ್ರೂಪ್‌ 2005ರಲ್ಲಿ 75 ದಶಲಕ್ಷ $ನಷ್ಟು ಹಣವನ್ನು ಪಾವತಿಸಿತು. ಸಿಟಿಗ್ರೂಪ್‌‌‌‌‌ ಉತ್ಪ್ರೇಕ್ಷಿತ ಸಂಶೋಧನೆ ವರದಿಗಳನ್ನು ನೀಡುತ್ತಿದೆ ಮತ್ತು ಹಿತಾಸಕ್ತಿಯ ಘರ್ಷಣೆಗಳನ್ನು ಬಹಿರಂಗಪಡಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಆಪಾದನೆಗೊಳಗಾಯಿತು

ಸಿಟಿಗ್ರೂಪ್‌‌‌‌‌ ಒಡೆತನದ ಸರ್ಕಾರಿ ಬಾಂಡ್‌ ವ್ಯವಹಾರದ ಹಗರಣ

MTS ಸಮೂಹದ ವ್ಯವಹಾರ ವೇದಿಕೆಯಲ್ಲಿ 2004ರ ಆಗಸ್ಟ್‌ 2ರಂದು 11 ಶತಕೋಟಿ €ನಷ್ಟು ಮೌಲ್ಯದ ಬಾಂಡ್‌ಗಳನ್ನು ಕ್ಷಿಪ್ರವಾಗಿ ಮಾರುವ ಮೂಲಕ, ಐರೋಪ್ಯ ಬಾಂಡ್‌ ಮಾರುಕಟ್ಟೆಯನ್ನು ಭಂಗಮಾಡಿದ್ದಕ್ಕೆ, ಬೆಲೆಯನ್ನು ಕೆಳಗಿಳಿಯುವಂತೆ ಮಾಡಿ, ನಂತರದಲ್ಲಿ ಅದನ್ನು ಅಗ್ಗದ ಬೆಲೆಗಳಲ್ಲಿ ಖರೀದಿಸಿದ್ದಕ್ಕೆ ಸಂಬಂಧಿಸಿದಂತೆ ಸಿಟಿಗ್ರೂಪ್‌‌‌‌‌ ಟೀಕೆಗೊಳಗಾಯಿತು.

ನಿಯಂತ್ರಣಾ ಕ್ರಮ

ಸ್ಟಾಕ್‌‌ ದುರುಪಯೋಗಪಡಿಸಿಕೊಳ್ಳುವಿಕೆಯಲ್ಲಿ ಪಾಲ್ಗೊಂಡಿದ್ದ ಗ್ರಾಹಕನೋರ್ವನಿಗೆ ಸಾಲಗಳನ್ನು ನೀಡಿದ್ದಕ್ಕೆ ಸಂಬಂಧಿಸಿದಂತೆ, ಸಿಟಿಬ್ಯಾಂಕ್‌ ಜಪಾನ್‌‌ ವಿರುದ್ಧ ಜಪಾನೀ ನಿಯಂತ್ರಕರು 2004ರಲ್ಲಿ ಕ್ರಮ ಕೈಗೊಂಡರು. ಒಂದು ಶಾಖೆ ಮತ್ತು ಮೂರು ಕಚೇರಿಗಳಲ್ಲಿ ಬ್ಯಾಂಕಿನ ಚಟುವಟಿಕೆಗಳನ್ನು ರದ್ದುಗೊಳಿಸುವುದು, ಮತ್ತು ಅವುಗಳ ಗ್ರಾಹಕ‌ ಬ್ಯಾಂಕಿಂಗ್‌‌‌ ವಿಭಾಗಗಳ ಮೇಲೆ ನಿಷೇಧಗಳನ್ನು ಹೇರುವುದು ಈ ಕ್ರಮದಲ್ಲಿ ಸೇರಿತ್ತು. 2009ರಲ್ಲಿ, ಜಪಾನೀ ನಿಯಂತ್ರಕರು ಮತ್ತೊಮ್ಮೆ ಸಿಟಿಬ್ಯಾಂಕ್‌ ಜಪಾನ್‌‌ ವಿರುದ್ಧ ಕ್ರಮ ಕೈಗೊಂಡರು; ಈ ಬಾರಿ ಅದು, ಹಣ ವರ್ಗಾಯಿಸುವಿಕೆಗೆ ಸಂಬಂಧಿಸಿದ ಒಂದು ಪರಿಣಾಮಕಾರಿಯಾದ ನಿಯಂತ್ರಣಾ ವ್ಯವಸ್ಥೆಯನ್ನು ಸಜ್ಜುಗೊಳಿಸದೆ ಇದ್ದುದಕ್ಕಾಗಿ ಕೈಗೊಂಡ ಕ್ರಮವಾಗಿತ್ತು. ನಿಯಂತ್ರಕ ಸಂಸ್ಥೆಯು ಅದರ ಚಿಲ್ಲರೆ ವ್ಯಾಪಾರದ ಬ್ಯಾಂಕಿಂಗ್‌‌‌ ಕಾರ್ಯಾಚರಣೆಗಳ ವ್ಯಾಪ್ತಿಯೊಳಗೆ ಮಾರಾಟ ಕಾರ್ಯಾಚರಣೆಗಳನ್ನು ಒಂದು ತಿಂಗಳವರೆಗೆ ರದ್ದುಮಾಡಿತು.

2002ರ ಜನವರಿ ಮತ್ತು 2003ರ ಜುಲೈ ನಡುವಿನ ಅವಧಿಯಲ್ಲಿ ಕಂಡುಬಂದ, ಮ್ಯೂಚುಯಲ್‌‌ ನಿಧಿಯ ಮಾರಾಟದ ಪರಿಪಾಠಗಳ ಕುರಿತಾದ ಯುಕ್ತತೆ ಮತ್ತು ಮೇಲುಸ್ತುವಾರಿಯ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ, ಸಿಟಿಗ್ರೂಪ್‌‌‌‌‌ ಗ್ಲೋಬಲ್‌ ಮಾರ್ಕೆಟ್ಸ್‌ ಇಂಕ್‌‌, ಅಮೆರಿಕನ್‌ ಎಕ್ಸ್‌ಪ್ರೆಸ್‌ ಫೈನಾನ್ಷಿಯಲ್‌ ಅಡ್ವೈಸರ್ಸ್‌ ಮತ್ತು ಚೇಸ್‌ ಇನ್ವೆಸ್ಟ್‌ಮೆಂಟ್‌ ಸರ್ವೀಸಸ್‌ ಕಂಪನಿಗಳ ವಿರುದ್ಧ NASDಯು 2005ರ ಮಾರ್ಚ್‌ 23ರಂದು ಒಟ್ಟು 21.25 ದಶಲಕ್ಷ $ನಷ್ಟು ಮೊತ್ತದ ದಂಡಗಳನ್ನು ಘೋಷಿಸಿತು. ಸಿಟಿಗ್ರೂಪ್‌‌‌‌‌ ವಿರುದ್ಧದ ಪ್ರಕರಣದಲ್ಲಿ, ಮ್ಯೂಚುಯಲ್‌‌ ನಿಧಿಗಳ B ವರ್ಗ ಮತ್ತು C ವರ್ಗದ ಷೇರುಗಳ ಶಿಫಾರಸುಗಳು ಮತ್ತು ಮಾರಾಟಗಳನ್ನು ಮಾಡಿದ್ದು ಸೇರಿದ್ದವು.

ಉತ್ತರ ಕರೋಲಿನಾ ಮತ್ತು ದಕ್ಷಿಣ ಕರೋಲಿನಾಗಳಲ್ಲಿನ ಬೆಲ್‌ಸೌತ್‌ ಕಾರ್ಪೊರೇಷನ್‌‌ ನೌಕರರಿಗೆ ಸಂಬಂಧಿಸಿದ ನಿವೃತ್ತಿಯ ವಿಚಾರ ಸಂಕಿರಣಗಳು ಮತ್ತು ಸಭೆಗಳಲ್ಲಿ, ದಾರಿತಪ್ಪಿಸುವ ದಸ್ತಾವೇಜುಗಳು ಮತ್ತು ಸಾಕಷ್ಟಿಲ್ಲದ ಹೊರಗೆಡಹುವಿಕೆಯನ್ನು ಮಾಡಿದ್ದಕ್ಕೆ ಸಂಬಂಧಿಸಿದ ಆರೋಪಗಳನ್ನು ಇತ್ಯರ್ಥ ಮಾಡಲು, ಸಿಟಿಗ್ರೂಪ್‌‌‌‌‌ ಗ್ಲೋಬಲ್‌ ಮಾರ್ಕೆಟ್ಸ್‌ ಇಂಕ್‌‌ ಕಂಪನಿಯು ದಂಡಗಳು ಮತ್ತು ನಷ್ಟಭರ್ತಿಯ ಸ್ವರೂಪದಲ್ಲಿ 15 ದಶಲಕ್ಷ $ಗೂ ಹೆಚ್ಚಿನ ಹಣವನ್ನು ಪಾವತಿಸುವಂತೆ 2007ರ ಜೂನ್‌‌ 6ರಂದು NASDಯು ಘೋಷಿಸಿತು. ಚಾರ್ಲೋಟ್‌, N.C.ಯಲ್ಲಿ ನೆಲೆಗೊಂಡಿದ್ದ ದಲ್ಲಾಳಿಗಳ ಒಂದು ತಂಡವನ್ನು ಸಿಟಿಗ್ರೂಪ್‌ ಸೂಕ್ತವಾಗಿ ಮೇಲ್ವಿಚಾರಣೆ ನಡೆಸಲಿಲ್ಲ ಎಂಬುದು NASDಗೆ ಕಂಡುಬಂತು; ನೂರಾರು ಸಂಖ್ಯೆಯ ಬೆಲ್‌ಸೌತ್‌ ನೌಕರರಿಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಡಜನ್‌ಗಟ್ಟಲೆ ವಿಚಾರ ಸಂಕಿರಣಗಳು ಮತ್ತು ಸಭೆಗಳ ಸಂದರ್ಭದಲ್ಲಿ ಅವರು ದಾರಿತಪ್ಪಿಸುವ ಮಾರಾಟ ಸಾಮಗ್ರಿಗಳನ್ನು ಬಳಸಿದ್ದರು.

ಟೆರ್ರಾ ಸೆಕ್ಯುರಿಟೀಸ್‌ ಹಗರಣ

ಟೆರ್ರಾ ಸೆಕ್ಯುರಿಟೀಸ್‌ ಹಗರಣದಲ್ಲಿ ಸಿಟಿಗ್ರೂಪ್‌‌‌‌‌ ಅಗಾಧವಾದ ಪ್ರಮಾಣದಲ್ಲಿ ಭಾಗಿಯಾಗಿದೆ ಎಂಬ ಅಂಶವು 2007ರ ನವೆಂಬರ್‌ನಲ್ಲಿ ಬಹಿರಂಗವಾಯಿತು; ಅಮೆರಿಕಾ ಸಂಯುಕ್ತ ಸಂಸ್ಥಾನದ ಬಾಂಡ್‌ ಮಾರುಕಟ್ಟೆಯಲ್ಲಿನ ಹಲವಾರು ರಕ್ಷಣಾ ನಿಧಿಗಳಲ್ಲಿ ನಾರ್ವೆಯ ಎಂಟು ಪುರಸಭೆಗಳಿಂದ ಮಾಡಲ್ಪಟ್ಟ ಹೂಡಿಕೆಗಳನ್ನು ಟೆರ್ರಾ ಸೆಕ್ಯುರಿಟೀಸ್‌ ಹಗರಣವು ಒಳಗೊಂಡಿತ್ತು. ಪುರಸಭೆಗಳಿಗೆ ಟೆರ್ರಾ ಸೆಕ್ಯುರಿಟೀಸ್‌ ASAಯಿಂದ ನಿಧಿಗಳು ಮಾರಲ್ಪಟ್ಟಿದ್ದರೆ, ಸಿಟಿಗ್ರೂಪ್‌ನಿಂದ ಉತ್ಪನ್ನಗಳು ವಿತರಿಸಲ್ಪಟ್ಟಿದ್ದವು. ಕಾರ್ಯನಿರ್ವಹಿಸುವುದಕ್ಕೆ ನೀಡಿದ ಅನುಮತಿಗಳನ್ನು ಹಿಂತೆಗೆದುಕೊಂಡಿರುವುದನ್ನು ಘೋಷಿಸುವ ಪತ್ರವೊಂದನ್ನು, ನಾರ್ವೆಯ ಹಣಕಾಸಿನ ಮೇಲುಸ್ತುವಾರಿಯ ಪ್ರಾಧಿಕಾರದಿಂದ ಸ್ವೀಕರಿಸಿದ ನಂತರದ ದಿನವಾದ 2007ರ ನವೆಂಬರ್‌‌ 28ರಂದು, ಟೆರ್ರಾ ಸೆಕ್ಯುರಿಟೀಸ್‌ ASA ದಿವಾಳಿತನಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸಿತು. ಇದೇ ಪತ್ರವು ವ್ಯಕ್ತಪಡಿಸಿದ್ದ ಅಭಿಪ್ರಾಯವು ಹೀಗಿತ್ತು: "ಸಿಟಿಗ್ರೂಪ್‌‌‌‌‌ ವತಿಯಿಂದ ಮಾಡಲ್ಪಟ್ಟ ಪ್ರಸ್ತುತಿ ಮತ್ತು ಟೆರ್ರಾ ಸೆಕ್ಯುರಿಟೀಸ್‌ ASA ವತಿಯಿಂದ ಮಾಡಲ್ಪಟ್ಟ ಪ್ರಸ್ತುತಿಗಳು, ಸಾಕಷ್ಟಿಲ್ಲದ ಮತ್ತು ದಾರಿತಪ್ಪಿಸುವ ರೀತಿಯಲ್ಲಿರುವಂತೆ ತೋರುತ್ತದೆ; ಏಕೆಂದರೆ, ಸಂಭಾವ್ಯ ಹೆಚ್ಚುವರಿ ಪಾವತಿಗಳು ಮತ್ತು ಇವುಗಳ ಗಾತ್ರದ ಕುರಿತಾದ ಮಾಹಿತಿಯಂಥ ಪ್ರಧಾನ ಅಂಶಗಳನ್ನು ಇಲ್ಲಿ ಬಿಟ್ಟುಬಿಡಲಾಗಿದೆ ಎಂಬುದನ್ನು ಮೇಲುಸ್ತುವಾರಿಯ ಪ್ರಾಧಿಕಾರವು ಒತ್ತಿಹೇಳುತ್ತದೆ. "

ಗ್ರಾಹಕ ಖಾತೆಗಳಿಂದಾದ ಕಳ್ಳತನ

ಕ್ರೆಡಿಟ್‌ಕಾರ್ಡ್‌ ಗ್ರಾಹಕರ ಖಾತೆಗಳಿಂದ ಸಿಟಿಗ್ರೂಪ್‌‌‌‌‌ ತಪ್ಪಾಗಿ ನಿಧಿಗಳನ್ನು ತೆಗೆದುಕೊಂಡಿತು ಎಂಬುದಾಗಿ, ಕ್ಯಾಲಿಫೋರ್ನಿಯಾದ ನ್ಯಾಯವಾದಿಯಾದ ಜನರಲ್‌‌ ಜೆರ್ರಿ ಬ್ರೌನ್‌‌ ಎಂಬಾತನಿಂದ ಮಾಡಲ್ಪಟ್ಟ ಆರೋಪಣೆಗಳನ್ನು ಇತ್ಯರ್ಥ ಮಾಡಿಕೊಳ್ಳಲು, ಮರುಪಾವತಿ ಮತ್ತು ದಂಡಗಳ ಸ್ವರೂಪದಲ್ಲಿ ಸುಮಾರು 18 ದಶಲಕ್ಷ $ನಷ್ಟು ಹಣವನ್ನು ಪಾವತಿಸಲು ಸಿಟಿಗ್ರೂಪ್‌‌‌‌‌ ಸಮ್ಮತಿಸಿದೆ ಎಂಬುದಾಗಿ 2008ರ ಆಗಸ್ಟ್‌ 26ರಂದು ಘೋಷಿಸಲಾಯಿತು. ರಾಷ್ಟ್ರವ್ಯಾಪಿಯಾಗಿರುವ ಸರಿಸುಮಾರು 53,000 ಗ್ರಾಹಕರಿಗೆ 14 ದಶಲಕ್ಷ $ನಷ್ಟು ಮೊತ್ತದ ನಷ್ಟಭರ್ತಿಯನ್ನು ಸಿಟಿಗ್ರೂಪ್‌‌‌‌‌ ಪಾವತಿಸಿತು. ಮೂರು-ವರ್ಷ ಅವಧಿಯ ತನಿಖೆಯೊಂದು ಕಂಡುಕೊಂಡ ಪ್ರಕಾರ, 1992ರಿಂದ 2003ರ ಅವಧಿಯವರೆಗೆ ಒಂದು ಅಸಮರ್ಪಕವಾದ ಗಣಕೀಕೃತ "ಸ್ವೀಪ್‌‌‌" ಲಕ್ಷಣವನ್ನು ಸಿಟಿಗ್ರೂಪ್‌‌‌‌‌ ಬಳಸಿತ್ತು; ಕಾರ್ಡು ಹಿಡುವಳಿದಾರರಿಗೆ ಹೇಳದೆಯೇ, ಕಾರ್ಡಿನ ಖಾತೆಗಳಿಂದ ಧನಾತ್ಮಕ ಶಿಲ್ಕುಗಳನ್ನು ಬ್ಯಾಂಕಿನ ಸಾಮಾನ್ಯ ನಿಧಿಗೆ ವರ್ಗಾಯಿಸಲು ಈ ಲಕ್ಷಣವು ಬಳಸಲ್ಪಟ್ಟಿತ್ತು.

ಈ ಕುರಿತಾಗಿ ಹೇಳಿಕೆಯೊಂದನ್ನು ನೀಡಿದ ಬ್ರೌನ್‌, "ಸ್ವೀಪ್ ವ್ಯವಸ್ಥೆಯನ್ನು ಸಿಟಿಗ್ರೂಪ್‌‌‌‌‌ ವಿನ್ಯಾಸಗೊಳಿಸಿದಾಗ ಮತ್ತು ಕಾರ್ಯರೂಪಕ್ಕೆ ತಂದಾಗ, ಅದು ತನ್ನ ಗ್ರಾಹಕರಿಂದ ಅರಿವಿಟ್ಟುಕೊಂಡೇ ಕಳ್ಳತನ ಮಾಡಿತು, ಅವರಲ್ಲಿ ಬಹುತೇಕ ಮಂದಿ ಬಡ ಜನರು ಮತ್ತು ಇತ್ತೀಚೆಗೆ ಮರಣಹೊಂದಿದವರಾಗಿದ್ದರು...ಓರ್ವ ಎಚ್ಚರಿಕೆಯ ಗಂಟೆ ಬಾರಿಸುವವ ಹಗರಣವನ್ನು ಬಹಿರಂಗಪಡಿಸಿದಾಗ ಮತ್ತು ಇದನ್ನು ತನ್ನ ಮೇಲ್ವಿಚಾರಕರ ಗಮನಕ್ಕೆ ತಂದಾಗ, ಅವರು ಈ ಮಾಹಿತಿಯನ್ನು ಮುಚ್ಚಿಹಾಕಿದರು ಹಾಗೂ ಕಾನೂನುಬಾಹಿರ ಪರಿಪಾಠವನ್ನು ಮುಂದುವರಿಸಿದರು" ಎಂದು ತಿಳಿಸಿದ.

2008ರ ಒಕ್ಕೂಟದ ಪಾರುಮಾಡುವಿಕೆ

2008ರ ನವೆಂಬರ್‌‌ 24ರಂದು ಸಿಟಿಗ್ರೂಪ್‌ನ ಒಂದು ಭಾರೀ ಪ್ರಮಾಣದಲ್ಲಿ ಪಾರುಮಾಡುವ ಕುರಿತು U.S. ಸರ್ಕಾರವು ಘೋಷಿಸಿತು; ಕಂಪನಿಯನ್ನು ದಿವಾಳಿತನದಿಂದ ರಕ್ಷಿಸಲು ಇದನ್ನು ವಿನ್ಯಾಸಗೊಳಿಸಲಾಗಿತ್ತು. ಅದೇ ವೇಳೆಗೆ, ತನ್ನ ಕಾರ್ಯಾಚರಣೆಗಳ ಕುರಿತಾಗಿ ಸರ್ಕಾರಕ್ಕೆ ಒಂದು ಪ್ರಮುಖ ಅಭಿಪ್ರಾಯವನ್ನು ತಿಳಿಸುವ ಅವಕಾಶವೂ ದೊರಕಿತ್ತು. ಅಕ್ಟೋಬರ್‌ನಲ್ಲಿ ನೀಡಲಾಗಿದ್ದ 25 ಶತಕೋಟಿ $ನಷ್ಟು ಮೊತ್ತದ ಜೊತೆಗೆ, ತೊಂದರೆಗೊಳಗಾದ ಸ್ವತ್ತು ಪರಿಹಾರ ಕಾರ್ಯಸೂಚಿ (ಟ್ರಬಲ್ಡ್‌ ಅಸೆಟ್‌ ರಿಲೀಫ್‌ ಪ್ರೋಗ್ರಾಮ್‌-TARP) ನಿಧಿಗಳಲ್ಲಿ ಮತ್ತೆ 20 ಶತಕೋಟಿ $ನಷ್ಟು ಹಣವನ್ನು ಸರ್ಕಾರಿ ಖಜಾನೆಯು ಒದಗಿಸಲಿದೆ. ಸಿಟಿಗ್ರೂಪ್‌ ಮೊದಲ 29 ಶತಕೋಟಿ $ನಷ್ಟು ಹಣವನ್ನು ನಷ್ಟಗಳಲ್ಲಿ ಪಡೆದ ನಂತರ ಅದರ 335 ಶತಕೋಟಿ $ನಷ್ಟು ಮೌಲ್ಯದ ಉತ್ಪನ್ನ ಶ್ರೇಣಿಯ ಮೇಲಿನ ನಷ್ಟಗಳ 90%ನಷ್ಟು ಭಾಗವನ್ನು ಸರ್ಕಾರಿ ಖಜಾನೆ ಇಲಾಖೆ, ಫೆಡರಲ್‌ ರಿಸರ್ವ್ ಮತ್ತು ಒಕ್ಕೂಟದ ಠೇವಣಿ ವಿಮಾ ಸಂಸ್ಥೆ (ಫೆಡರಲ್‌‌ ಡಿಪಾಸಿಟ್‌ ಇನ್ಷೂರೆನ್ಸ್‌ ಕಾರ್ಪೊರೇಷನ್‌-FDIC) ಇವುಗಳು ಭರಿಸಲಿವೆ. ಇದಕ್ಕೆ ಪ್ರತಿಯಾಗಿ, ಸ್ಟಾಕ್‌‌ನ್ನು ವಶಪಡಿಸಿಕೊಳ್ಳಲೆಂದು ಬ್ಯಾಂಕು ವಾಷಿಂಗ್ಟನ್‌‌ಗೆ 27 ಶತಕೋಟಿ $ನಷ್ಟು ಮೌಲ್ಯದ ಆದ್ಯತೆಯ ಷೇರುಗಳು ಮತ್ತು ವಾರಂಟುಗಳನ್ನು ನೀಡಲಿದೆ‌‌. ಬ್ಯಾಂಕಿಂಗ್‌‌‌ ಕಾರ್ಯಾಚರಣೆಗಳ ಮೇಲೆ ಸರ್ಕಾರವು ವ್ಯಾಪಕ ಅಧಿಕಾರಗಳನ್ನು ಪಡೆಯಲಿದೆ. ಇಂಡಿಮ್ಯಾಕ್‌‌ ಬ್ಯಾಂಕಿನ ಕುಸಿತದ ನಂತರ FDICಯಿಂದ ಸಿದ್ಧಪಡಿಸಲ್ಪಟ್ಟಿರುವ ಅಳತೆಗೋಲುಗಳನ್ನು ಬಳಸಿಕೊಂಡು, ಅಡಮಾನಗಳನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸಲು ಸಿಟಿಗ್ರೂಪ್‌‌‌‌‌ ಸಮ್ಮತಿಸಿದ್ದು, ಇದರೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಮನೆ ಮಾಲೀಕರನ್ನು ಅವರ ಮನೆಗಳಲ್ಲೇ ಉಳಿಸುವ ಗುರಿಹೊಂದಲಾಗಿದೆ. ಕಾರ್ಯನಿರ್ವಹಣಾಧಿಕಾರಿಯ ವೇತನಗಳನ್ನು ಮೊಟಕುಗೊಳಿಸಲಾಗುವುದು ಎಂಬಂಥ ಅಭಿಪ್ರಾಯಗಳು ಈ ಸಂದರ್ಭದಲ್ಲಿ ನೀಡಲ್ಪಟ್ಟವು.

ಪಾರುಮಾಡುವಿಕೆಯ ಒಂದು ಷರತ್ತಾಗಿ, ಸಿಟಿಗ್ರೂಪ್‌‌‌‌‌ನ ಲಾಭಾಂಶ ಪಾವತಿಯು ಪ್ರತಿ ಷೇರಿಗೆ 1 ಸೆಂಟ್‌ಗೆ ತಗ್ಗಿಸಲ್ಪಟ್ಟಿದೆ.

ಉಪಪ್ರಧಾನ ಅಡಮಾನ ಬಿಕ್ಕಟ್ಟು ಬಹಿರಂಗವಾಗಲು ಪ್ರಾರಂಭವಾಗುತ್ತಿದ್ದಂತೆ, ಮೇಲಾಧಾರ ನೀಡಲ್ಪಟ್ಟ ಸಾಲದ ಹೊಣೆಗಾರಿಕೆಯ (CDOಗಳು) ಸ್ವರೂಪಗಳಲ್ಲಿನ ಅಪಾಯಕರ ಅಡಮಾನಗಳಿಗೆ ಅತೀವವಾಗಿ ಒಡ್ಡಿಕೊಳ್ಳುವುದರ ಜೊತೆಗೆ ಕಳಪೆ ಅಪಾಯ ನಿರ್ವಹಣೆಯೂ ಸೇರಿಕೊಂಡು, ಪರಿಸ್ಥಿತಿ ಮತ್ತಷ್ಟು ಜಟಿಲಗೊಂಡಿತು ಹಾಗೂ ಕಂಪನಿಯನ್ನು ಗಂಭೀರ ತೊಂದರೆಗೆ ಸಿಲುಕಿಸಿತು. 2007ರ ಆರಂಭದಲ್ಲಿ, ಸಿಟಿಗ್ರೂಪ್‌‌‌‌‌ ತನ್ನ ಕಾರ್ಯಪಡೆಯ ಪೈಕಿ ಸುಮಾರು 5 ಪ್ರತಿಶತದಷ್ಟು ಭಾಗವನ್ನು ತೆಗೆದುಹಾಕಲು ಪ್ರಾರಂಭಿಸಿತು; ವೆಚ್ಚಗಳನ್ನು ಕಡಿತಗೊಳಿಸಲು ಹಾಗೂ ಸುದೀರ್ಘಕಾಲದಿಂದ ಕಳಪೆ ಕಾರ್ಯಕ್ಷಮತೆಯನ್ನು ಮೆರೆಯುತ್ತಿದ್ದ ತನ್ನ ಸ್ಟಾಕ್‌ಗೆ ಆಸರೆ ನೀಡಲೆಂದು ವಿನ್ಯಾಸಗೊಂಡ ಒಂದು ವಿಶಾಲವಾದ ಮರುರೂಪಣಾ ಕ್ರಮದ ಭಾಗ ಇದಾಗಿತ್ತು. 2008ರ ನವೆಂಬರ್‌‌ ವೇಳೆಗೆ, ಚಾಲ್ತಿಯಲ್ಲಿರುವ ಬಿಕ್ಕಟ್ಟು ಸಿಟಿಗ್ರೂಪ್‌‌‌‌‌ಗೆ ಭಾರೀ ಹೊಡೆತವನ್ನು ನೀಡಿತು ಮತ್ತು ಒಕ್ಕೂಟದ ವತಿಯಿಂದ ದೊರೆತ TARP ರಕ್ಷಣಾ ಹಣದ ಹೊರತಾಗಿಯೂ ಕಂಪನಿಯು ಮತ್ತಷ್ಟು ಕಡಿತಗಳನ್ನು ಘೋಷಿಸಿತು. ಇದರ ಸ್ಟಾಕ್‌‌ ಮಾರುಕಟ್ಟೆ ಮೌಲ್ಯವು 6 ಶತಕೋಟಿ $ಗೆ ಕುಸಿಯಿತು; ಇದು ಎರಡು ವರ್ಷಗಳ ಹಿಂದಿದ್ದ ಮೌಲ್ಯವಾದ 244 ಶತಕೋಟಿ $ನಷ್ಟು ಮೌಲ್ಯದಿಂದ ಕುಸಿದ ಮೊತ್ತವಾಗಿತ್ತು. ಇದರ ಪರಿಣಾಮವಾಗಿ, ಕಂಪನಿಯನ್ನು ಸ್ಥಿರೀಕರಿಸಲು ಸಿಟಿಗ್ರೂಪ್‌‌‌‌‌ ಮತ್ತು ಒಕ್ಕೂಟ ನಿಯಂತ್ರಕರು ಒಂದು ಯೋಜನೆಯನ್ನು ಪ್ರಸ್ತಾವಿಸಿದರು. ಸೌದಿ ಅರೇಬಿಯಾದ ಪ್ರಿನ್ಸ್‌‌ ಅಲ್‌-ವಲೀದ್‌ ಬಿನ್‌ ತಲಾಲ್‌‌ ಇದರ ಏಕಮಾತ್ರ ಅತಿದೊಡ್ಡ ಷೇರುದಾರನಾಗಿದ್ದು, ಈತ 4.9%ನಷ್ಟು ಪ್ರಮಾಣದ ಹೂಡಿಕೆಹಣವನ್ನು ಹೊಂದಿದ್ದಾನೆ. ವಿಕ್ರಮ್‌‌ ಪಂಡಿತ್‌ ಸಿಟಿಗ್ರೂಪ್‌‌‌‌‌ನ ಈಗಿನ CEO ಆಗಿದ್ದರೆ, ರಿಚರ್ಡ್‌ ಪಾರ್ಸನ್ಸ್‌ ಈಗಿನ ಸಭಾಪತಿಯಾಗಿದ್ದಾನೆ.

ನ್ಯೂಯಾರ್ಕ್‌ನ ಪ್ರಧಾನ ನ್ಯಾಯವಾದಿಯಾದ ಆಂಡ್ರ್ಯೂ ಕ್ಯೂಮೋ ಎಂಬಾತನ ಅನುಸಾರ ಮತ್ತು ವಾಲ್‌ ಸ್ಟ್ರೀಟ್‌ ಜರ್ನಲ್‌‌ನಿಂದ ವರದಿಮಾಡಲ್ಪಟ್ಟಂತೆ, 2008ರ ಅಂತ್ಯಭಾಗದಲ್ಲಿ 45 ಶತಕೋಟಿ $ನಷ್ಟು ಮೊತ್ತದ ತನ್ನ TARP ರಕ್ಷಣಾಹಣವನ್ನು ಸ್ವೀಕರಿಸಿದ ನಂತರ, ಸಿಟಿಗ್ರೂಪ್‌‌‌‌‌ ತನ್ನ 1,038ಕ್ಕೂ ಹೆಚ್ಚಿನ ನೌಕರರಿಗೆ ನೂರಾರು ದಶಲಕ್ಷ ಡಾಲರುಗಳಷ್ಟು ಹಣವನ್ನು ಬೋನಸ್ಸುಗಳ ರೂಪದಲ್ಲಿ ಪಾವತಿಸಿತು. ಇವರ ಪೈಕಿಯ 738 ನೌಕರರಲ್ಲಿ ಪ್ರತಿಯೊಬ್ಬರೂ 1 ದಶಲಕ್ಷ $ನಷ್ಟು ಹಣವನ್ನು ಬೋನಸ್ಸುಗಳ ರೂಪದಲ್ಲಿ, 176 ನೌಕರರು ತಲಾ 2 ದಶಲಕ್ಷ $ನಷ್ಟು ಹಣವನ್ನು ಬೋನಸ್ಸುಗಳ ರೂಪದಲ್ಲಿ, 124 ನೌಕರರು ತಲಾ 3 ದಶಲಕ್ಷ $ನಷ್ಟು ಹಣವನ್ನು ಬೋನಸ್ಸುಗಳ ರೂಪದಲ್ಲಿ, ಮತ್ತು 143 ನೌಕರರು ತಲಾ 4 ದಶಲಕ್ಷ $ನಿಂದ 10 ದಶಲಕ್ಷ $ಗೂ ಹೆಚ್ಚಿನ ಮೊತ್ತದ ಹಣವನ್ನು ಬೋನಸ್ಸುಗಳ ರೂಪದಲ್ಲಿ ಸ್ವೀಕರಿಸಿದರು.

ಟೆರ್ರಾ ಫರ್ಮಾ ಇನ್ವೆಸ್ಟ್‌ಮೆಂಟ್ಸ್‌ ಕಾನೂನುದಾವೆ

2009ರ ಡಿಸೆಂಬರ್‌ನಲ್ಲಿ, ಟೆರ್ರಾ ಫರ್ಮಾ ಇನ್ವೆಸ್ಟ್‌ಮೆಂಟ್ಸ್‌ ಎಂಬ ಬ್ರಿಟಿಷ್‌ ಇಕ್ವಿಟಿ ಸಂಸ್ಥೆಯು ಸಿಟಿಗ್ರೂಪ್‌‌‌‌‌ ವಿರುದ್ಧ ದಾವೆಹೂಡಿತು; ಸಂಗೀತ ಸಂಸ್ಥೆಯಾದ EMIನ ಹಣೆಪಟ್ಟಿ ಹಾಗೂ ಸಂಗೀತ ಪ್ರಕಟಿಸುವ ಹಿತಾಸಕ್ತಿಗಳನ್ನು ಖರೀದಿಸಿದ ಟೆರ್ರಾ ಫರ್ಮಾ ಇನ್ವೆಸ್ಟ್‌ಮೆಂಟ್ಸ್‌‌ಗೆ ವಂಚಿಸಿದ್ದಕ್ಕೆ ಸಂಬಂಧಿಸಿದಂತೆ ಈ ದಾವೆಯು ಹೂಡಲ್ಪಟ್ಟಿತು.

ಸಾರ್ವಜನಿಕ ಮತ್ತು ಸರ್ಕಾರಿ ಸಂಬಂಧಗಳು

ರಾಜಕೀಯ ದೇಣಿಗೆಗಳು

ಸೆಂಟರ್‌ ಫಾರ್‌ ರೆಸ್ಪಾನ್ಸಿವ್‌ ಪಾಲಿಟಿಕ್ಸ್‌ ವ್ಯಕ್ತಪಡಿಸಿರುವ ಅಭಿಪ್ರಾಯದ ಅನುಸಾರ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಎಲ್ಲಾ ಸಂಘಟನೆಗಳ ಪೈಕಿ ಸಿಟಿಗ್ರೂಪ್‌‌‌‌‌ ರಾಜಕೀಯ ಪ್ರಚಾರದ 16ನೇ ಅತಿದೊಡ್ಡ ದೇಣಿಗೆದಾರನಾಗಿದೆ. ಕನ್ಸರ್ವೇಟಿವ್‌‌ ಬಣದ ಕ್ಯಾಪಿಟಲ್‌ ರಿಸರ್ಚ್‌ ಸೆಂಟರ್‌ ಎಂಬಲ್ಲಿ ಓರ್ವ ಹಿರಿಯ ಸಂಪಾದಕನಾಗಿರುವ ಮ್ಯಾಥ್ಯೂ ವೇಡಮ್ ಎಂಬಾತನ ಅನುಸಾರ, ವಾಮಪಂಥೀಯ ರಾಜಕೀಯ ಕಾರಣಗಳಿಗೂ ಸಹ ಸಿಟಿಗ್ರೂಪ್‌ ಒಂದು ಭಾರೀ ದೇಣಿಗೆದಾರನಾಗಿದೆ. ಆದಾಗ್ಯೂ, ಸಂಸ್ಥೆಯ ಸದಸ್ಯರು 1989ರಿಂದ 2006ರವರೆಗೆ 23,033,490 $ನಷ್ಟು ಮೊತ್ತಕ್ಕೂ ಹೆಚ್ಚಿನ ಹಣವನ್ನು ದೇಣಿಗೆ ನೀಡಿದ್ದು, ಅದರಲ್ಲಿ 49%ನಷ್ಟು ಭಾಗವು ಡೆಮೊಕ್ರಾಟ್‌ಗಳಿಗೆ ಹೋದರೆ, 51%ನಷ್ಟು ಭಾಗವು ರಿಪಬ್ಲಿಕನ್ನರಿಗೆ ತಲುಪಿತು.

ವಶೀಲಿಬಾಜಿ ನಡೆಸುವಿಕೆ ಮತ್ತು ರಾಜಕೀಯ ಸಲಹೆ

2009ರಲ್ಲಿ, ವಾಷಿಂಗ್ಟನ್‌‌, D.C.ಯ ದೀರ್ಘಕಾಲದ ವಶೀಲಿಕಾರನಾದ ರಿಚರ್ಡ್‌ F. ಹೋಹ್ಲ್ಟ್‌ ಎಂಬಾತನನ್ನು ರಿಚರ್ಡ್‌ ಪಾರ್ಸನ್ಸ್‌ ಎರವಲು ಸೇವೆಗೆ ನೇಮಿಸಿಕೊಂಡ; ಕಂಪನಿಗಾಗಿ ವಶೀಲಿಬಾಜಿ ನಡೆಸುವುದಕ್ಕೆಂದು ಅಲ್ಲದಿದ್ದರೂ, U.S. ಸರ್ಕಾರದೊಂದಿಗಿನ ಸಂಬಂಧಗಳ ಕುರಿತಾಗಿ ಪಾರ್ಸನ್ಸ್‌ಗೆ ಮತ್ತು ಕಂಪನಿಗೆ ಸಲಹೆ ನೀಡಲೆಂದು ಈ ನೇಮಕವಾಯಿತು. FDICಯು ಶ್ರೀಮಾನ್‌ ಹೋಹ್ಲ್ಟ್‌ನ ಗಮನಕ್ಕೆ ಈಡಾಗಲಿರುವ ಒಂದು ನಿರ್ದಿಷ್ಟ ಗುರಿ ಎಂಬುದಾಗಿ ಒಂದಷ್ಟು ಜನ ಅನಾಮಿಕವಾಗಿ ಊಹಿಸಿದಾಗ, ಸರ್ಕಾರ ವಿಮಾ ಸಂಸ್ಥೆಯೊಂದಿಗೆ ತಾನು ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲ ಎಂದು ಹೋಹ್ಲ್ಟ್‌ ತಿಳಿಸಿದ. ಸಿಟಿಗ್ರೂಪ್‌‌‌‌‌ನೊಂದಿಗೆ ಶ್ರೀಮಾನ್‌ ಹೋಹ್ಲ್ಟ್‌ನ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಸುದ್ದಿ ವರದಿಯಲ್ಲಿ ಟೀಕಿಸಲು ಹಿಂದಿನ ಕೆಲವೊಂದು ನಿಯಂತ್ರಕರಿಗೆ ಒಂದಷ್ಟು ಅವಕಾಶವು ಸಿಕ್ಕಿದಂತಾಯಿತು; 1980ರ ದಶಕದ ಉಳಿತಾಯಗಳು ಮತ್ತು ಸಾಲ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸಿನ-ಸೇವೆಗಳ ಉದ್ಯಮದೊಂದಿಗೆ ಅವನು ಹಿಂದೆಲ್ಲಾ ಪಾಲ್ಗೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಈ ಕುರಿತು ಶ್ರೀಮಾನ್‌ ಹೋಹ್ಲ್ಟ್‌ ಪ್ರತಿಕ್ರಿಯೆಯನ್ನು ನೀಡುತ್ತಾ, ಫ್ಯಾನೀ ಮೇ ಮತ್ತು ವಾಷಿಂಗ್ಟನ್‌‌ ಮ್ಯೂಚುಯಲ್‌‌ ರೀತಿಯ, ತೀರಾ ಇತ್ತೀಚಿನ ತನ್ನ ಇತರ ಗ್ರಾಹಕರಿಗೆ ಸಂಬಂಧಿಸಿದ ಹಿಂದಿನ ನಿದರ್ಶನಗಳಲ್ಲಿ ತಪ್ಪುಗಳು ಮಾಡಲ್ಪಟ್ಟಿವೆಯಾದರೂ, ತಾನು ಯಾವುದೇ ಸರ್ಕಾರ ಸಂಸ್ಥೆಯಿಂದ ಎಂದಿಗೂ ತನಿಖೆಗೊಳಗಾಗಿರಲಿಲ್ಲ ಮತ್ತು ಸಹಭಾಗಿಗಳು ತೀರಾ ಇತ್ತೀಚಿನ ಬಿಕ್ಕಟ್ಟಿನ ಕುರಿತು ಪ್ರಸ್ತಾವಿಸಿದ್ದರಿಂದ ತಾನು "ಕಾರ್ಯಾಚರಣೆಯ ಕೋಣೆಯಲ್ಲಿ" ಮತ್ತೆ ನೆಲೆಗೊಳ್ಳಲು ತನ್ನ ಅನುಭವವು ತನಗೆ ಕಾರಣ ಒದಗಿಸಿದೆ ಎಂದು ತಿಳಿಸಿದ.

ಸಾರ್ವಜನಿಕ ಮತ್ತು ಸರ್ಕಾರದ ಸಂಬಂಧಗಳು

ಹಿಂದೆ ನ್ಯೂಯಾರ್ಕ್‌ ನಗರದ ಸರ್ಕಾರದಲ್ಲಿ ಮತ್ತು ಬ್ಲೂಮ್‌ಬರ್ಗ್‌ LPಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಡ್ವರ್ಡ್‌ ಸ್ಕೈಲರ್‌‌ ಎಂಬಾತನನ್ನು ಕಂಪನಿಯು 2010ರಲ್ಲಿ ತನ್ನ ಹಿರಿಯ ಸಾರ್ವಜನಿಕ ಮತ್ತು ಸರ್ಕಾರದ ಸಂಬಂಧಗಳ ಸ್ಥಾನಕ್ಕೆ ಹೆಸರಿಸಿತು. ಸ್ಕೈಲರ್‌‌ನನ್ನು ಹೆಸರಿಸುವುದಕ್ಕೆ ಮುಂಚಿತವಾಗಿ ಹಾಗೂ ಅವನು ತನ್ನ ಕೆಲಸದ ಶೋಧವನ್ನು ಶುರುಮಾಡುವುದಕ್ಕೆ ಮುಂಚಿತವಾಗಿ, ಸದರಿ ಸ್ಥಾನಗಳನ್ನು ಭರ್ತಿಮಾಡುವುದಕ್ಕೆ ಸಂಬಂಧಿಸಿದಂತೆ ಕಂಪನಿಯು ಮೂರು ಇತರ ವ್ಯಕ್ತಿಗಳೊಡನೆ ಚರ್ಚೆಗಳನ್ನು ನಡೆಸಿತ್ತು ಎಂಬುದಾಗಿ ತಿಳಿದುಬಂದಿತ್ತು: "ಮಹಾಪೌರ ಮೈಕೇಲ್‌‌ ಬ್ಲೂಮ್‌ಬರ್ಗ್‌‌‌ನ ರಾಜಕೀಯ ಗುರು ಹಾಗೂ NY ಉಪ ಮಹಾಪೌರ‌ನಾದ ಕೆವಿನ್‌‌ ಷೀಕೆ ಎಂಬಾತ ಈ ಕುರಿತು ಮುಂಚೂಣಿ ವಹಿಸಿ ಆಕ್ರಮಣ ಮಾಡಿದ... ಆತ ತನ್ನ ಅಲ್ಪಾವಧಿಯ ಚೆಲ್ಲಾಟವನ್ನು ಒಂದು ಅಧ್ಯಕ್ಷೀಯ ನಡೆಯೊಂದಿಗೆ ನಡೆಸಿದ; ಮಹಾಪೌರನ ಕಂಪನಿಯಾದ ಬ್ಲೂಮ್‌ಬರ್ಗ್‌ L.P.ಯಲ್ಲಿ ಒಂದು ಸ್ಥಾನವನ್ನು ಅಲಂಕರಿಸಲೆಂದು ಆತ ಸಿಟಿ ಹಾಲ್‌ನ್ನು ಶೀಘ್ರದಲ್ಲಿಯೇ ಬಿಡುವವನಿದ್ದ.... 2001ರ ಮಹಾಪೌರನ ಚುನಾವಣಾ ಕಣದಲ್ಲಿ ಶ್ರೀಮಾನ್‌ ಬ್ಲೂಮ್‌ಬರ್ಗ್ ಅಸಂಭವ ವಿಜಯವನ್ನು ಸಾಧಿಸಿದ ನಂತರ, ಶ್ರೀಮಾನ್‌ ಸ್ಕೈಲರ್‌‌ ಮತ್ತು ಶ್ರೀಮಾನ್‌ ಷೀಕೆ ಈ ಇಬ್ಬರೂ, ಅವನ ಕಂಪನಿಯಿಂದ ಸಿಟಿ ಹಾಲ್‌ಗೆ ಅವನನ್ನು ಅನುಸರಿಸಿಕೊಂಡು ಹೋದರು. ಅಲ್ಲಿಂದೀಚೆಗೆ, ಅವರು ಅಗಾಧವಾಗಿ ಪ್ರಭಾವಶಾಲಿಯಾಗಿದ್ದ ಸಲಹೆಗಾರರ ಸಮಾನಾಸಕ್ತರ ಕೂಟದ ಒಂದು ಭಾಗವೇ ಆಗಿಹೋಗಿದ್ದಾರೆ"; ಹಿಲರಿ ರೊಡ್‌ಹ್ಯಾಮ್‌‌ ಕ್ಲಿಂಟನ್‌‌‌ಳ ಅಧ್ಯಕ್ಷೀಯ ಪ್ರಚಾರ ಮತ್ತು ಶ್ರೀಮಾನ್‌ ಬ್ಲೂಮ್‌ಬರ್ಗ್‌ನ ಮರು-ಚುನಾವಣಾ ಅಖಾಡಕ್ಕೆ ಸಂಬಂಧಿಸಿದಂತೆ ಹಿಂದಿನ ಸಂವಹನಾ ನಿರ್ದೇಶಕನಾಗಿದ್ದ ಹೋವರ್ಡ್‌ ವೋಲ್ಫ್‌ಸನ್‌‌, ಈಗ ಟೈಮ್‌ ವಾರ್ನರ್‌‌‌‌ನಲ್ಲಿರುವ ಮತ್ತು ಹಿಂದೆ ನ್ಯೂಸ್‌ ಕಾರ್ಪೊರೇಷನ್‌‌‌ನಲ್ಲಿದ್ದ ಗ್ಯಾರಿ ಗಿನ್ಸ್‌‌ಬರ್ಗ್ ಈ ಕೂಟದಲ್ಲಿದ್ದಾರೆ.

ಟಿಪ್ಪಣಿಗಳು

ಉಲ್ಲೇಖಗಳು

ನೋಡಿ: SEC – ಕಂಪನಿ ಮಾಹಿತಿ: CITIGROUP INC‌‌

ಇದನ್ನೂ ನೋಡಿ: ಸಿಟಿಗ್ರೂಪ್‌‌‌‌‌ Archived 2008-06-02 ವೇಬ್ಯಾಕ್ ಮೆಷಿನ್ ನಲ್ಲಿ., ಮತ್ತು ಯಾಹೂ!

ಹೊರಗಿನ ಕೊಂಡಿಗಳು

ಟೆಂಪ್ಲೇಟು:Portal box

Tags:

ಸಿಟಿಗ್ರೂಪ್‌ ಇತಿಹಾಸಸಿಟಿಗ್ರೂಪ್‌ ವಿಭಾಗಗಳುಸಿಟಿಗ್ರೂಪ್‌ ಬ್ರ್ಯಾಂಡ್‌ಗಳುಸಿಟಿಗ್ರೂಪ್‌ ಸ್ಥಿರಾಸ್ತಿಸಿಟಿಗ್ರೂಪ್‌ ಟೀಕೆಸಿಟಿಗ್ರೂಪ್‌ ಸಾರ್ವಜನಿಕ ಮತ್ತು ಸರ್ಕಾರಿ ಸಂಬಂಧಗಳುಸಿಟಿಗ್ರೂಪ್‌ ಟಿಪ್ಪಣಿಗಳುಸಿಟಿಗ್ರೂಪ್‌ ಉಲ್ಲೇಖಗಳುಸಿಟಿಗ್ರೂಪ್‌ ಹೊರಗಿನ ಕೊಂಡಿಗಳುಸಿಟಿಗ್ರೂಪ್‌ನ್ಯೂ ಯಾರ್ಕ್ ನಗರ

🔥 Trending searches on Wiki ಕನ್ನಡ:

ಅತ್ತಿಮಬ್ಬೆವ್ಯವಸಾಯಪ್ರಾಥಮಿಕ ಶಾಲೆಕನ್ನಡ ರಾಜ್ಯೋತ್ಸವಸೀತಾ ರಾಮಮೂಢನಂಬಿಕೆಗಳುಭಾರತೀಯ ಧರ್ಮಗಳುತುಳಸಿದೇವಸ್ಥಾನಕರಗ (ಹಬ್ಬ)ಸಂಪ್ರದಾಯಮೈಸೂರು ಸಂಸ್ಥಾನಬ್ಯಾಡ್ಮಿಂಟನ್‌ರಾಷ್ತ್ರೀಯ ಐಕ್ಯತೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಾಸ್ತಿ ವೆಂಕಟೇಶ ಅಯ್ಯಂಗಾರ್ಸಂದರ್ಶನಕನ್ನಡ ಚಳುವಳಿಗಳುಬುಡಕಟ್ಟುಕ್ಯಾರಿಕೇಚರುಗಳು, ಕಾರ್ಟೂನುಗಳುಸುಧಾ ಮೂರ್ತಿರತನ್ ನಾವಲ್ ಟಾಟಾವೀರಗಾಸೆವಿದ್ಯಾರಣ್ಯಜೋಗಶಾತವಾಹನರುಕಂದಕೃಷ್ಣಸಂಚಿ ಹೊನ್ನಮ್ಮಜ್ಞಾನಪೀಠ ಪ್ರಶಸ್ತಿಹತ್ತಿವಿಜಯ್ ಮಲ್ಯಭಾರತದ ಸ್ವಾತಂತ್ರ್ಯ ಚಳುವಳಿರಾವಣಶಾಸನಗಳುಫಿರೋಝ್ ಗಾಂಧಿಪೂರ್ಣಚಂದ್ರ ತೇಜಸ್ವಿವಚನ ಸಾಹಿತ್ಯಸರ್ಕಾರೇತರ ಸಂಸ್ಥೆಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಮೈಸೂರು ದಸರಾಶಿವಪ್ಪ ನಾಯಕಮಹಮದ್ ಬಿನ್ ತುಘಲಕ್ಸಂವತ್ಸರಗಳುಕನ್ನಡ ವ್ಯಾಕರಣಮಹಾಕವಿ ರನ್ನನ ಗದಾಯುದ್ಧಜಗನ್ನಾಥದಾಸರುತಾಪಮಾನಭಾರತೀಯ ಜನತಾ ಪಕ್ಷಅಕ್ಷಾಂಶ ಮತ್ತು ರೇಖಾಂಶತ. ರಾ. ಸುಬ್ಬರಾಯದಯಾನಂದ ಸರಸ್ವತಿಅಲ್ಲಮ ಪ್ರಭುರೈತ ಚಳುವಳಿದಿಕ್ಸೂಚಿಹುಬ್ಬಳ್ಳಿಹಕ್ಕ-ಬುಕ್ಕಭಾರತದಲ್ಲಿ ಮೀಸಲಾತಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ರಾಜ್ಯಸಭೆತ್ಯಾಜ್ಯ ನಿರ್ವಹಣೆಭೂತಕೋಲಪ್ರಜಾಪ್ರಭುತ್ವಕಾಮಸೂತ್ರರಾಘವಾಂಕರಕ್ತದೊತ್ತಡನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಿಜಯಪುರಅಮ್ಮಅಶ್ವತ್ಥಮರಬಾಲಕಾರ್ಮಿಕಸಂಜಯ್ ಚೌಹಾಣ್ (ಸೈನಿಕ)ಕೈಗಾರಿಕೆಗಳುವಾಲಿಬಾಲ್ಕನ್ನಡ ಸಾಹಿತ್ಯ ಸಮ್ಮೇಳನನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡವಿಮರ್ಶೆಕರ್ನಾಟಕ ಲೋಕಸೇವಾ ಆಯೋಗ🡆 More