ಸಂಪ್ರದಾಯ

ಹಿಂದೂ ಧರ್ಮದಲ್ಲಿ, ಸಂಪ್ರದಾಯ ಶಬ್ದವನ್ನು ಆಧ್ಯಾತ್ಮಿಕ ವಂಶಾವಳಿ, ಧಾರ್ಮಿಕ ವ್ಯವಸ್ಥೆ ಎಂದು ಹೇಳಬಹುದು.

ಇದು ಸರಿಸುಮಾರು ಆಂಗ್ಲದ ಟ್ರೆಡಿಷನ್ ಶಬ್ದಕ್ಕೆ ಸಮಾನಾರ್ಥಕವಾಗಿದೆ. ಇದು ಗುರುಗಳು ಮತ್ತು ಶಿಷ್ಯರ ಉತ್ತರಾಧಿಕಾರಕ್ಕೆ ಸಂಬಂಧಿಸಿದೆ, ಮತ್ತು ಆಧ್ಯಾತ್ಮಿಕ ಸಂಪರ್ಕದಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ಒಂದು ಧಾರ್ಮಿಕ ಗುರುತಿಗೆ ಸ್ಥಿರತೆಯನ್ನು ನೀಡುವ ಸಂಬಂಧಗಳ ಸೂಕ್ಷ್ಮ ಜಾಲವನ್ನು ಒದಗಿಸುತ್ತದೆ.

ಸಂಪ್ರದಾಯ ಎಂದರೆ ಆಚರಣೆ, ದೃಷ್ಟಿಕೋನಗಳು ಮತ್ತು ಧೋರಣೆಗಳ ಒಂದು ಮಂಡಲ. ಇವು ಅನುಯಾಯಿಗಳ ಪ್ರತಿ ಕ್ರಮಾಗತ ಪೀಳಿಗೆಯಿಂದ ಪ್ರಸಾರಗೊಳ್ಳುತ್ತವೆ, ಪುನಃವ್ಯಾಖ್ಯಾನಿಸಲ್ಪಡುತ್ತವೆ ಮತ್ತು ಪರಿಶೀಲಿಸಲ್ಪಡುತ್ತವೆ. ಸಂಪ್ರದಾಯದಲ್ಲಿ ಭಾಗವಹಿಸುವಿಕೆಯು ಹಿಂದಿನದೊಂದಿಗೆ ನಿರಂತರತೆಯನ್ನು ಕಡ್ಡಾಯಮಾಡುತ್ತದೆ, ಆದರೆ ಅದೇ ವೇಳೆ ಈ ನಿರ್ದಿಷ್ಟ ಸಾಂಪ್ರದಾಯಿಕ ಗುಂಪಿನ ಅಭ್ಯಾಸಿಗಳ ಸಮುದಾಯದ ಒಳಗಿನಿಂದ ಬದಲಾವಣೆಗೆ ವೇದಿಕೆಯನ್ನು ಒದಗಿಸುತ್ತದೆ.

ಒಬ್ಬ ನಿರ್ದಿಷ್ಟ ಗುರುವಿನ ವಂಶಾವಳಿಯನ್ನು ಪರಂಪರೆ ಎಂದು ಕರೆಯಲಾಗುತ್ತದೆ. ಒಬ್ಬ ಜೀವಂತ ಗುರುವಿನ ಪರಂಪರೆಯೊಳಗೆ ದೀಕ್ಷೆ ಪಡೆಯುವ ಮೂಲಕ, ಆ ವ್ಯಕ್ತಿಯು ಅದರ ಸರಿಯಾದ ಸಂಪ್ರದಾಯಕ್ಕೆ ಸೇರುತ್ತಾನೆ. ಗೋತ್ರ, ಮೂಲ ಅಥವಾ ವಂಶ ಹೇಗೊ ಹಾಗೆಯೇ ಜನ್ಮದಿಂದ ಒಬ್ಬನು ಸದಸ್ಯನಾಗುವುದು ಸಾಧ್ಯವಿಲ್ಲ. ಒಂದು ಸಂಪ್ರದಾಯದಲ್ಲಿನ ಸದಸ್ಯತ್ವವು ಹಿಂದೂ ಸಾಂಪ್ರದಾಯಿಕ ವಿಷಯದಲ್ಲಿ ಸತ್ಯದ ಮೇಲಿನ ಒಬ್ಬರ ಹಕ್ಕುಸಾಧನೆಗಳಿಗೆ ಅಧಿಕಾರದ ಮಟ್ಟವನ್ನು ನೀಡುವುದರ ಜೊತೆಗೆ, ಒಬ್ಬರಿಗೆ ಹಕ್ಕುಸಾಧನೆಗಳನ್ನು ಮಾಡಲು ಅನುಮತಿ ನೀಡುತ್ತದೆ.

ಆದಾಗ್ಯೂ, ಒಂದು ಸಂಪ್ರದಾಯದೊಳಗೆ ದೀಕ್ಷೆ ಪಡೆಯದ ಗುರುಗಳ ಉದಾಹರಣೆಗಳೂ ಇವೆ, ರಮಣ ಮಹರ್ಷಿಗಳು ಒಬ್ಬ ಸುಪರಿಚಿತ ಉದಾಹರಣೆಯಾಗಿದ್ದಾರೆ. ಶೃಂಗೇರಿ ಶಾರದಾ ಪೀಠಕ್ಕೆ ಸೇರಿದ ಒಬ್ಬ ಸಂನ್ಯಾಸಿನಿಯು ಒಮ್ಮೆ ರಮಣರನ್ನು ಸಂನ್ಯಾಸ ಸ್ವೀಕರಿಸುವಂತೆ ಮನವೊಲಿಸಲು ಪ್ರಯತ್ನಿಸಿದರು, ಆದರೆ ರಮಣರು ಒಪ್ಪಲಿಲ್ಲ.

ಹದಿನೆಂಟು ಮುಖ್ಯ ಪುರಾಣಗಳಲ್ಲಿ ಒಂದಾದ ಪದ್ಮ ಪುರಾಣದ ಪ್ರಕಾರ, ನಾಲ್ಕು ವೈಷ್ಣವ ಸಂಪ್ರದಾಯಗಳಿವೆ. ಅವೆಂದರೆ ಶ್ರೀ ಸಂಪ್ರದಾಯ, ಮಾಧ್ವ ಸಂಪ್ರದಾಯ, ರುದ್ರ ಸಂಪ್ರದಾಯ ಮತ್ತು ಕುಮಾರ ಸಂಪ್ರದಾಯ. ಶ್ರೀ ಸಂಪ್ರದಾಯದ ಮುಖ್ಯ ಗುರು ಶ್ರೀ ದೇವಿ ಅಥವಾ ಲಕ್ಷ್ಮಿ, ರಾಮಾನುಜಾಚಾರ್ಯರು ಮುಖ್ಯ ಆಚಾರ್ಯರು, ಮತ್ತು ಇದರ ಮುಖ್ಯ ಮಠಗಳು ಮೇಲುಕೋಟೆ, ಶ್ರೀರಂಗಂ, ವನಮಾಮಲೈ, ತಿರುಕ್ಕುರುಂಗುಡಿ, ಕಾಂಚಿಪುರಂ, ಅಹೋಬಿಲ ಮತ್ತು ಪರಕಾಲ. ಮಾಧ್ವ ಸಂಪ್ರದಾಯದ ಮುಖ್ಯ ಗುರು ಬ್ರಹ್ಮ, ಮಧ್ವಾಚಾರ್ಯರು ಮುಖ್ಯ ಆಚಾರ್ಯರು, ಮತ್ತು ಇದರ ಮುಖ್ಯ ಮಠಗಳು ಶ್ರೀ ಕೃಷ್ಣ ಮಠ, ಮಾಧ್ವ ಮಠಗಳು, ಮತ್ತು ಗೌಡೀಯ ಮಠ. ರುದ್ರ ಸಂಪ್ರದಾಯದ ಮುಖ್ಯ ಗುರು ರುದ್ರ, ವಿಷ್ಣುಸ್ವಾಮಿ/ವಲ್ಲಭಾಚಾರ್ಯರು ಮುಖ್ಯ ಆಚಾರ್ಯರಾಗಿದ್ದಾರೆ.

ಉಲ್ಲೇಖಗಳು

Tags:

ಹಿಂದೂ ಧರ್ಮ

🔥 Trending searches on Wiki ಕನ್ನಡ:

ಭೀಷ್ಮರೇಡಿಯೋಭಾರತದಲ್ಲಿನ ಜಾತಿ ಪದ್ದತಿವಿಜ್ಞಾನಅಡಿಕೆಬೆಂಗಳೂರು ಗ್ರಾಮಾಂತರ ಜಿಲ್ಲೆಸಮುಚ್ಚಯ ಪದಗಳುಮಹಾಲಕ್ಷ್ಮಿ (ನಟಿ)ಆಲದ ಮರಮುಟ್ಟಿದರೆ ಮುನಿಶ್ರೀರಂಗಪಟ್ಟಣಮಂಗಳ (ಗ್ರಹ)ಪೌರತ್ವಭ್ರಷ್ಟಾಚಾರಭಾರತದ ರಾಜ್ಯಗಳ ಜನಸಂಖ್ಯೆಕಾಟೇರವಸ್ತುಸಂಗ್ರಹಾಲಯಮಳೆರಾಜಕೀಯ ವಿಜ್ಞಾನಅಶೋಕನ ಶಾಸನಗಳುಮಧುಮೇಹಭೋವಿಭಾರತದ ನದಿಗಳುಭಾರತದ ಮುಖ್ಯಮಂತ್ರಿಗಳು1935ರ ಭಾರತ ಸರ್ಕಾರ ಕಾಯಿದೆಫೇಸ್‌ಬುಕ್‌ರಾಹುಲ್ ಗಾಂಧಿವಚನಕಾರರ ಅಂಕಿತ ನಾಮಗಳುಗುರು (ಗ್ರಹ)ಬಿ.ಎಚ್.ಶ್ರೀಧರಹಣಕಾಸುಕರ್ನಾಟಕದ ಇತಿಹಾಸಜ್ಯೋತಿಷ ಶಾಸ್ತ್ರಹೈದರಾಬಾದ್‌, ತೆಲಂಗಾಣಚಿಕ್ಕಬಳ್ಳಾಪುರಮತದಾನಭೂಮಿ ದಿನವಿಜಯಪುರಪತ್ರಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಬಬ್ರುವಾಹನಮುಖ್ಯ ಪುಟಭಕ್ತಿ ಚಳುವಳಿಸಂಯುಕ್ತ ರಾಷ್ಟ್ರ ಸಂಸ್ಥೆಭಾರತದಲ್ಲಿ ಬಡತನಆಮ್ಲವಾಣಿಜ್ಯ(ವ್ಯಾಪಾರ)ಯು.ಆರ್.ಅನಂತಮೂರ್ತಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತೀಯ ಶಾಸ್ತ್ರೀಯ ಸಂಗೀತನಾಮಪದಪುನೀತ್ ರಾಜ್‍ಕುಮಾರ್ರಾಮನಗರಅವರ್ಗೀಯ ವ್ಯಂಜನಅಂತರಜಾಲನೇಮಿಚಂದ್ರ (ಲೇಖಕಿ)ಗ್ರಹಕುಂಡಲಿವಚನ ಸಾಹಿತ್ಯಭಾರತದಲ್ಲಿನ ಶಿಕ್ಷಣಕ್ರಿಶನ್ ಕಾಂತ್ ಸೈನಿಜಿ.ಪಿ.ರಾಜರತ್ನಂಮಾನವ ಹಕ್ಕುಗಳುಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸಪ್ರಬಂಧ ರಚನೆಸುಂದರ್ ಪಿಚೈಸುದೀಪ್ಭೌಗೋಳಿಕ ಲಕ್ಷಣಗಳುಇನ್ಸ್ಟಾಗ್ರಾಮ್ಭಾರತದಲ್ಲಿ ಪಂಚಾಯತ್ ರಾಜ್ಸವರ್ಣದೀರ್ಘ ಸಂಧಿತುಳಸಿ🡆 More