ಷೆವ್ರಟಿನ್

ಷೆವ್ರಟಿನ್ ಜಿಂಕೆಯಂತಿದ್ದು ಮೊಲದ ಗಾತ್ರವಿರುವ ಪುಟ್ಟ ಜೀವಿ.

ಎರಳೆ ಎಂದೂ ಹೆಸರಿದೆ. ಆಡುಭಾಷೆಯಲ್ಲಿ ಕುರೆ, ಕುರಾಂಡಿ ಎಂಬ ಹೆಸರುಗಳೂ ಇವೆ. ಎರಳೆ ಸ್ತನಿ ವರ್ಗದ ಆರ್ಟಿಯೋಡ್ಯಾಕ್ಟೈಲಾ ಸರಣಿಯ ಟ್ರಾಗ್ಯುಲಿಡೇ ಕುಟುಂಬಕ್ಕೆ ಸೇರಿದೆ. ಎರಳೆಗಳಲ್ಲಿ ಒಟ್ಟು 4 ಪ್ರಭೇದಗಳಿವೆ. ಆಫ್ರಿಕದ ಎರಳೆ (ಹೈಮಾಸ್ಕಸ್ ಅಕ್ವಾಟಿಕಸ್) ಘಾನ, ಕಾಂಗೋ ಹಾಗೂ ಗಿನಿಯ ಕಾಡುಗಳಲ್ಲೂ, ಚುಕ್ಕೆ ಎರಳೆ (ಟ್ರಾಗ್ಯುಲಸ್ ಮೆಮಿನ) ದಕ್ಷಿಣ ಭಾರತ, ಶ್ರೀಲಂಕಾ ಹಾಗೂ ನೇಪಾಲದಲ್ಲಿಯೂ, ಮಲಯದ ಎರಡು ಪ್ರಭೇದಗಳು (ಟ್ರಾಗ್ಯುಲಸ್ ನಾಪು ಹಾಗೂ ಟ್ರಾಗ್ಯುಲಸ್ ಜಾವಾನಿಕಸ್) ದಕ್ಷಿಣ ಬರ್ಮ, ಜಾವ, ಸುಮಾತ್ರ, ಇಂಡೊಚೀನದ ಕಾಡುಗಳಲ್ಲಿಯೂ ಕಂಡುಬರುತ್ತವೆ.

ಷೆವ್ರಟಿನ್
Temporal range: late Eocene–Recent
PreꞒ
O
S
D
C
P
T
J
K
Pg
N
ಷೆವ್ರಟಿನ್
ಟ್ರ್ಯಾಗುಲಸ್ ಕಂಚಿಲ್
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಆರ್ಟಿಯೊಡ್ಯಾಕ್ಟೈಲ
ಉಪಗಣ: Ruminantia
ಕೆಳಗಣ: ಟ್ರ್ಯಾಗ್ಯುಲಿನಾ
ಕುಟುಂಬ: ಟ್ರ್ಯಾಗ್ಯುಲಿಡೇ
H. Milne-Edwards, 1864
Type genus
ಟ್ರ್ಯಾಗ್ಯುಲಸ್
Brisson, 1762
ಜಾತಿಗಳು
  • ಹಾಯಮಾಸ್ಕಸ್
  • ಮಾಸ್ಕಿಯೋಲಾ
  • ಟ್ರ್ಯಾಗ್ಯುಲಸ್

ದೇಹರಚನೆ

ಭಾರತದಲ್ಲಿ ಕಾಣುವ ಎರಳೆಯ ಉದ್ದ 40-45 ಸೆಂಮೀ, ಬಾಲ 2.5-5 ಸೆಂಮೀ, ಎತ್ತರ 25-30 ಸೆಂಮೀ, ತೂಕ 2.25-2.7 ಕೆಜಿ. ತುಪ್ಪಳದ ಬಣ್ಣ ಕಂದು, ಪಾರ್ಶ್ವಗಳಲ್ಲಿ ನವುರು ಬಿಳಿ ಬಣ್ಣದ ಅನುನೀಳ ಪಟ್ಟೆಗಳು ಮತ್ತು ಎತ್ತರ ಬೆನ್ನಿನ ಹಿಂಭಾಗದಲ್ಲಿಯೂ ಗಂಟಲಿನ ಕೆಳಗಡೆಯೂ ತಲಾ 3 ಅಡ್ಡ ಪಟ್ಟೆಗಳಿವೆ. ಕಾಲುಗಳು ತೆಳು. ದೇಹದ ಕೆಳಗೆ ಬಿಳಿಯ ತುಪ್ಪಳ. ಎಲ್ಲ ಕಾಲುಗಳಲ್ಲಿಯೂ 4 ಬೆರಳುಗಳು ಇದ್ದು ಪಾರ್ಶ್ವದ ಚಿಕ್ಕ ಕಾಲ್ಬೆರಳುಗಳಲ್ಲಿ ಎಲುಬುಗಳು ಪೂರ್ತಿಯಾಗಿರುತ್ತವೆ.

ನಡವಳಿಕೆ

ಭಾರತದ ಕಾಡುಗಳಲ್ಲಿ ಅಥವಾ ಬಂಡೆ ಹುಲ್ಲುಗಾವಲುಗಳಿರುವ ಕಾಡುಗಳಲ್ಲಿ ಎರಳೆ ವಾಸಿಸುತ್ತದೆ. ಬಂಡೆ ಬಿರುಕುಗಳಲ್ಲಿ ಅಥವಾ ದೊಡ್ಡ ಬಂಡೆಯ ಕೆಳಗೆ ಅಡಗಿಕೊಂಡಿರುತ್ತದೆ. ನಾಯಿ ಬೆನ್ನಟ್ಟಿದಾಗ ತಾನು ನಿಂತಿರುವ ಟೊಳ್ಳಿನಿಂದ ಒಳಗೆ ತೆವಳಿ ಮರೆಯಾಗುತ್ತದೆ. ಮುಂಜಾವಿನಲ್ಲಿ ಅಥವಾ ಇರುಳಿನಲ್ಲಿ ಆಹಾರಕ್ಕಾಗಿ ಹೊರಬರುತ್ತದೆ. ಬೆದರಿದಾಗ ಥಟ್ಟನೆ ಪರಾರಿಯಾಗುತ್ತದೆ.

ಸಂತಾನೋತ್ಪತ್ತಿ

ಗಂಡು ಸಾಮಾನ್ಯವಾಗಿ ಒಂಟಿ. ಸಂತಾನೋತ್ಪತ್ತಿ ಪ್ರಾಯದಲ್ಲಿ ಮಾತ್ರ ಹೆಣ್ಣಿನೊಂದಿಗೆ ಜೊತೆಗೂಡುತ್ತದೆ. ಗರ್ಭಾವಧಿ ಸು. 6 ತಿಂಗಳು. ಹೆಣ್ಣು ಮಳೆಗಾಲದ ಅನಂತರ ಅಥವಾ ಚಳಿಗಾಲದಲ್ಲಿ 2 ಮರಿಗಳಿಗೆ ಜನ್ಮ ನೀಡುತ್ತದೆ.

ಇತರ ವಿವರಗಳು

ಸ್ವಭಾವತಃ ಅಂಜುಬುರುಕವಾದ ಈ ಪ್ರಾಣಿಯನ್ನು ಪಳಗಿಸುವುದು ಸುಲಭ.

ಭೂವಿಜ್ಞಾನದ ದೃಷ್ಟಿಯಿಂದ ಷೆವ್ರಟಿನ್ ಅತಿ ಪ್ರಾಚೀನ ಪ್ರಾಣಿ. ಸು. 50 ದಶಲಕ್ಷ ವರ್ಷಗಳ ಹಿಂದಿನ ಈಯೊಸೀನ್ ಯುಗದ ಉತ್ತರ ಭಾಗದಲ್ಲಿ ಎರಳೆಗಳು ಜೀವಿಸಿದ್ದುವು. ಆಗ ಯಾವುದೇ ಜಿಂಕೆ ಅಥವಾ ಕೊಂಬುಗಳಿರುವ, ಬೆರಳ ತುದಿಗಳ ಮೇಲೆ ನಡೆಯುವ, ಸ್ತನಿಗಳ ವಿಕಾಸವಾಗಿರಲಿಲ್ಲ. ಆದ್ದರಿಂದ ಎಲ್ಲ ಮೆಲುಕು ಹಾಕುವ ಸ್ತನಿಗಳ ಪೂರ್ವಜರು ಷೆವ್ರಟಿನ್‌ಗಳೆಂದು ಊಹಿಸಬಹುದು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

  • ಷೆವ್ರಟಿನ್  Lydekker, Richard (1911). "Chevrotain" . Encyclopædia Britannica (11th ed.).
ಷೆವ್ರಟಿನ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಷೆವ್ರಟಿನ್ ದೇಹರಚನೆಷೆವ್ರಟಿನ್ ನಡವಳಿಕೆಷೆವ್ರಟಿನ್ ಸಂತಾನೋತ್ಪತ್ತಿಷೆವ್ರಟಿನ್ ಇತರ ವಿವರಗಳುಷೆವ್ರಟಿನ್ ಉಲ್ಲೇಖಗಳುಷೆವ್ರಟಿನ್ ಹೊರಗಿನ ಕೊಂಡಿಗಳುಷೆವ್ರಟಿನ್

🔥 Trending searches on Wiki ಕನ್ನಡ:

ವೀರಪ್ಪ ಮೊಯ್ಲಿಮೈಗ್ರೇನ್‌ (ಅರೆತಲೆ ನೋವು)ಚನ್ನಬಸವೇಶ್ವರರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)1935ರ ಭಾರತ ಸರ್ಕಾರ ಕಾಯಿದೆಸಂಭೋಗಜಾಗತಿಕ ತಾಪಮಾನ ಏರಿಕೆಪಕ್ಷಿಕನ್ನಡ ಛಂದಸ್ಸುನೆಲ್ಸನ್ ಮಂಡೇಲಾತೆರಿಗೆಕೃಷ್ಣದೇವರಾಯಮೌರ್ಯ ಸಾಮ್ರಾಜ್ಯಸತೀಶ ಕುಲಕರ್ಣಿಶಾತವಾಹನರುಮುಹಮ್ಮದ್೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಭಾರತದಲ್ಲಿ ಬ್ರಿಟಿಷ್ ಆಳ್ವಿಕೆಸೇತುವೆಡಿ.ಆರ್. ನಾಗರಾಜ್ಸುಭಾಷ್ ಚಂದ್ರ ಬೋಸ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭೀಮಸೇನಹೆಣ್ಣು ಬ್ರೂಣ ಹತ್ಯೆಕಣ್ಣುಗಾಂಧಿ ಜಯಂತಿಚೋಮನ ದುಡಿಅಖಿಲ ಭಾರತ ಬಾನುಲಿ ಕೇಂದ್ರಚಂದ್ರಗುಪ್ತ ಮೌರ್ಯಮೂಲಧಾತುಕೆರೆಗೆ ಹಾರ ಕಥನಗೀತೆಭಾರತದಲ್ಲಿ ಕಪ್ಪುಹಣನೀರುಉಡ್ಡಯನ (ಪ್ರಾಣಿಗಳಲ್ಲಿ)ಟಿಪ್ಪು ಸುಲ್ತಾನ್ಹಿಮಾಲಯಪ್ರೇಮಾಹೊಯ್ಸಳ ವಾಸ್ತುಶಿಲ್ಪಯಣ್ ಸಂಧಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆಭಾರತದ ರಾಷ್ಟ್ರಪತಿಹನುಮಾನ್ ಚಾಲೀಸಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡದಲ್ಲಿ ಪ್ರವಾಸ ಸಾಹಿತ್ಯಕನ್ನಡ ಸಂಧಿಸವದತ್ತಿಗಾದೆದರ್ಶನ್ ತೂಗುದೀಪ್ಉಡಮೈಸೂರು ರಾಜ್ಯಭಾರತೀಯ ಕಾವ್ಯ ಮೀಮಾಂಸೆಸಮೂಹ ಮಾಧ್ಯಮಗಳುಭಾರತದ ತ್ರಿವರ್ಣ ಧ್ವಜಮೈಸೂರು ಸಂಸ್ಥಾನಲಾವಣಿಖೊ ಖೋ ಆಟಗೌತಮ ಬುದ್ಧನಂಜನಗೂಡುಖ್ಯಾತ ಕರ್ನಾಟಕ ವೃತ್ತವೆಂಕಟೇಶ್ವರ ದೇವಸ್ಥಾನಕೊರೋನಾವೈರಸ್ ಕಾಯಿಲೆ ೨೦೧೯ಧ್ವನಿಶಾಸ್ತ್ರತೆಂಗಿನಕಾಯಿ ಮರವಿರಾಮ ಚಿಹ್ನೆಭಾಮಿನೀ ಷಟ್ಪದಿಅಗ್ನಿ(ಹಿಂದೂ ದೇವತೆ)ವಿಮರ್ಶೆಹಣಕಾಸುಕರ್ನಾಟಕ ಸಂಗೀತದ.ರಾ.ಬೇಂದ್ರೆರೇಣುಕವ್ಯಾಯಾಮವಿಷ್ಣುಬಹುವ್ರೀಹಿ ಸಮಾಸನವಿಲುಕೋಸುವಿಜಯದಾಸರು🡆 More