ಶ್ರೀಪ್ರಿಯ: ಭಾರತೀಯ ನಟಿ

ಶ್ರೀಪ್ರಿಯ (5 ಮಾರ್ಚ್ 1956), ದಕ್ಷಿಣ ಭಾರತದ ಪ್ರಸಿದ್ಧ ನಟಿ.

ತಮ್ಮ ನಟನಾವೃತ್ತಿಯನ್ನು ತೆಲುಗು ಚಿತ್ರವೊಂದರಿಂದ ಆರಂಭಿಸಿದ ಶ್ರೀಪ್ರಿಯ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಸುಮಾರು 300ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೆ, ನಿರ್ದೇಶನದಲ್ಲೂ ಯಶ ಕಂಡಿದ್ದಾರೆ.

ಶ್ರೀಪ್ರಿಯ
Born
ಅಲಮೇಲು

5 ಮಾರ್ಚ್, 1956
ಚೆನ್ನೈ, ತಮಿಳುನಾಡು
Occupation(s)ನಟಿ, ನಿರ್ದೇಶಕಿ
Years active1973 - ಈವರೆಗೆ
Spouseರಾಜಕುಮಾರ್ ಸೇತುಪತಿ

ವೈಯಕ್ತಿಕ ಜೀವನ

ಚೆನ್ನೈನಲ್ಲಿ ಸಂಗೀತ ಪರಂಪರೆಯ ಕುಟುಂಬದಲ್ಲಿ ಹುಟ್ಟಿದ ಶ್ರೀಪ್ರಿಯಾರ ಹುಟ್ಟುಹೆಸರು ಅಲಮೇಲು. ಚಿಕ್ಕ ವಯಸ್ಸಿನಲ್ಲೇ ಶಾಸ್ತ್ರೀಯ ನೃತ್ಯವನ್ನು ಕಲಿತ ಶ್ರೀಪ್ರಿಯ ಕರ್ನಾಟಕ ಸಂಗೀತವನ್ನೂ ಅಭ್ಯಾಸ ಮಾಡಿದರು. ಪ್ರಸಿದ್ಧ ನೃತ್ಯಪಟು, ಪದ್ಮಶ್ರೀ ಪುರಸ್ಕೃತರಾದ 'ದಂಡಾಯುಧಪಾಣಿ ಪಿಳ್ಳೈ' ಇವರ ಕುಟುಂಬದವರೇ ಆಗಿದ್ದರು.

1988ರಲ್ಲಿ ರಾಜಕುಮಾರ್ ಸೇತುಪತಿಯವರನ್ನು ಆಂಧ್ರಪ್ರದೇಶದ ದೇವಸ್ಥಾನವೊಂದರಲ್ಲಿ ಮದುವೆಯಾದ ಶ್ರೀಪ್ರಿಯ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ವೃತ್ತಿ

    ನಟಿಯಾಗಿ

ನಟಿಯಾಗಿ ಮೊದಲು ಕಾಣಿಸಿಕೊಂಡದ್ದು 1973ರ 'ವೈಶಾಲಿ' ಎಂಬ ತೆಲುಗು ಚಿತ್ರದಲ್ಲಿ. ಆ ಬಳಿಕ 1974ರ ತಮಿಳು ಚಿತ್ರ 'ಮುರುಗನ್ ಕಾಟ್ಟಿಯ ವಳಿ'. ಮುಂದೆ ಶ್ರೀಪ್ರಿಯ ತಮಿಳು ಚಿತ್ರಗಳ ಯಶಸ್ವೀ ನಾಯಕಿಯಾದರು. 1977ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಜೊತೆಗೆ ನಟಿಸಿದ 'ಅವಳ್ ಅಪ್ಪಡಿದಾನ್' ಚಿತ್ರ ಶ್ರೀಪ್ರಿಯ ಅವರಿಗೆ ಜನಪ್ರಿಯತೆ ತಂದಿತು. ಆ ಬಳಿಕ ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಾ ಬಂದ ಶ್ರೀಪ್ರಿಯ ಅವರ ಮೊದಲ ಕನ್ನಡ ಚಿತ್ರ 'ಮರಿಯಾ ಮೈ ಡಾರ್ಲಿಂಗ್'(1980).

    ನಿರ್ದೇಶಕಿಯಾಗಿ

ಶ್ರೀಪ್ರಿಯ ನಿರ್ದೇಶಿಸಿದ ಮೊದಲ ಚಿತ್ರ 1984ರ ತಮಿಳು ಚಿತ್ರ 'ಶಾಂತಿ ಮುಹೂರ್ತಮ್'. ಈವರೆಗೆ ಅವರು ನಿರ್ದೇಶಿಸಿರುವ ಒಟ್ಟು ಚಿತ್ರಗಳ ಸಂಖ್ಯೆ 6. ಅವುಗಳಲ್ಲಿ ಕನ್ನಡದ 'ನಾಗಿಣಿ'(1991) ಮತ್ತು ತೆಲುಗಿನ 'ದೃಶ್ಯಮ್'(2014) ಕೂಡ ಸೇರಿವೆ.

ಕನ್ನಡದಲ್ಲಿ

ಶ್ರೀಪ್ರಿಯ ನಟಿಸಿದ ಮೊದಲ ಕನ್ನಡ ಚಿತ್ರ 1980ರಲ್ಲಿ ಬಿಡುಗಡೆಯಾದ "ಮರಿಯಾ ಮೈ ಡಾರ್ಲಿಂಗ್". ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತಯಾರಾದ ಈ ಚಿತ್ರದಲ್ಲಿ ಕಮಲ್ ಹಾಸನ್ ನಾಯಕನಟರಾಗಿದ್ದರು. ತನ್ನ ತಾಯಿಯ ಕೊಲೆಗಾರರ ಮೇಲೆ ಸೇಡು ತೀರಿಸಿಕೊಳ್ಳುವ ಮಗಳ ಪಾತ್ರದಲ್ಲಿ ಶ್ರೀಪ್ರಿಯ ನಟಿಸಿದರು.

"ಜಿಮ್ಮಿಗಲ್ಲು"(1982) ಶ್ರೀಪ್ರಿಯ ನಟಿಸಿದ ಎರಡನೇ ಕನ್ನಡ ಚಿತ್ರ. ಈ ಚಿತ್ರದಲ್ಲಿ ನ್ಯಾಯಕ್ಕಾಗಿ ಹೋರಾಡುವ ವಕೀಲೆಯ ಪಾತ್ರ ನಿರ್ವಹಿಸುವ ನಾಯಕಿಯಾಗಿ ವಿಷ್ಣುವರ್ಧನ್ ಜೊತೆ ಶ್ರೀಪ್ರಿಯ ನಟಿಸಿದರು.

ವಿಷ್ಣುವರ್ಧನ್, ಅಂಬರೀಷ್, ಲೋಕೇಶ್, ಸುರೇಶ್ ಹೆಬ್ಳಿಕರ್, ಅನಂತನಾಗ್ ಮುಂತಾವರೊಂದಿಗೆ ಶ್ರೀಪ್ರಿಯ ಅವರು ನಟಿಸಿದ್ದಾರೆ. ಕನ್ನದಲ್ಲಿ ಅವರು ನಟಿಸಿರುವ ಬಹುಪಾಲು ಹಾಡುಗಳನ್ನು ಖ್ಯಾತ ಗಾಯಕಿ ವಾಣಿ ಜಯರಾಂ ಹಾಡಿದ್ದಾರೆ.

ಪ್ರಶಸ್ತಿಗಳು

  • ಅವಳ್ ಅಪ್ಪಡಿದಾನ್ ಚಿತ್ರದ ನಟನೆಗೆ ತಮಿಳುನಾಡು ರಾಜ್ಯದ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ
  • 1985 - ತಮಿಳುನಾಡು ಸರ್ಕಾರದಿಂದ 'ಕಲೈಮಾಮಣಿ ಪುರಸ್ಕಾರ'

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಶ್ರೀಪ್ರಿಯ @ ಐ ಎಮ್ ಡಿ ಬಿ

Tags:

ಶ್ರೀಪ್ರಿಯ ವೈಯಕ್ತಿಕ ಜೀವನಶ್ರೀಪ್ರಿಯ ವೃತ್ತಿಶ್ರೀಪ್ರಿಯ ಕನ್ನಡದಲ್ಲಿಶ್ರೀಪ್ರಿಯ ಪ್ರಶಸ್ತಿಗಳುಶ್ರೀಪ್ರಿಯ ಉಲ್ಲೇಖಗಳುಶ್ರೀಪ್ರಿಯ ಹೊರಗಿನ ಕೊಂಡಿಗಳುಶ್ರೀಪ್ರಿಯಕನ್ನಡತಮಿಳುತೆಲುಗುಮಲಯಾಳಂಹಿಂದಿ

🔥 Trending searches on Wiki ಕನ್ನಡ:

ಪ್ರತಿಧ್ವನಿಬೌದ್ಧ ಧರ್ಮಕವಿಗಳ ಕಾವ್ಯನಾಮಕರ್ಬೂಜಶಕ್ತಿಕ್ಯಾರಿಕೇಚರುಗಳು, ಕಾರ್ಟೂನುಗಳುಚಿತ್ರದುರ್ಗ ಕೋಟೆಪ್ರಜಾವಾಣಿವಿಧಾನ ಪರಿಷತ್ತುಇಂಡಿಯನ್ ಪ್ರೀಮಿಯರ್ ಲೀಗ್ಅಲೋಹಗಳುಶಿಶುನಾಳ ಶರೀಫರುಅಸ್ಪೃಶ್ಯತೆಮಯೂರವರ್ಮಸಂವಹನಸರ್ವಜ್ಞಇತಿಹಾಸಮಾರಿಕಾಂಬಾ ದೇವಸ್ಥಾನ (ಸಾಗರ)ಮೈಸೂರು ಅರಮನೆಬ್ರಿಟಿಷ್ ಆಡಳಿತದ ಇತಿಹಾಸಜಿ.ಪಿ.ರಾಜರತ್ನಂವಿಷುವತ್ ಸಂಕ್ರಾಂತಿಕನ್ನಡ ಸಾಹಿತ್ಯ ಸಮ್ಮೇಳನಅಕ್ಷಾಂಶ ಮತ್ತು ರೇಖಾಂಶಕರ್ನಾಟಕದಲ್ಲಿ ಬ್ಯಾಂಕಿಂಗ್ಕಪ್ಪೆಸೂರ್ಯಕೃಷ್ಣಭಗವದ್ಗೀತೆನರೇಂದ್ರ ಮೋದಿನೈಟ್ರೋಜನ್ ಚಕ್ರತೆಂಗಿನಕಾಯಿ ಮರಶ್ರೀವಿಜಯಮೂಲಧಾತುಗಳ ಪಟ್ಟಿಮೆಣಸಿನಕಾಯಿಲಾರ್ಡ್ ಡಾಲ್ಹೌಸಿದೇವನೂರು ಮಹಾದೇವಮುಹಮ್ಮದ್ಸಸ್ಯ ಅಂಗಾಂಶಭಾರತೀಯ ಸ್ಟೇಟ್ ಬ್ಯಾಂಕ್ಲೋಹಇಮ್ಮಡಿ ಪುಲಕೇಶಿವೀರಗಾಸೆಜಲ ಮಾಲಿನ್ಯಚಂದನಾ ಅನಂತಕೃಷ್ಣಮಾತೃಕೆಗಳುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಕಾಂತಾರ (ಚಲನಚಿತ್ರ)ಕರ್ನಾಟಕದ ಹಬ್ಬಗಳುದೆಹಲಿಧೊಂಡಿಯ ವಾಘ್ರಾಜ್‌ಕುಮಾರ್ಮಡಿಲಗಣಕ ಅಥವಾ ಲ್ಯಾಪ್‌ಟಾಪ್ಕೊಪ್ಪಳಭಾರತದ ಗವರ್ನರ್ ಜನರಲ್ಭಾರತದ ಉಪ ರಾಷ್ಟ್ರಪತಿಚಿಕ್ಕಮಗಳೂರುದಾಸ ಸಾಹಿತ್ಯಸ್ವಾತಂತ್ರ್ಯಭಾರತದಲ್ಲಿ ಮೀಸಲಾತಿದಕ್ಷಿಣ ಭಾರತವಸಾಹತುದಾಸವಾಳಮಂತ್ರಾಲಯಕೃಷಿಉತ್ತರ ಕನ್ನಡಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಅಸಹಕಾರ ಚಳುವಳಿಭಾರತೀಯ ಧರ್ಮಗಳುಅಂಬಿಗರ ಚೌಡಯ್ಯಮಾಹಿತಿ ತಂತ್ರಜ್ಞಾನತಾಳೀಕೋಟೆಯ ಯುದ್ಧಕರ್ನಾಟಕ ಐತಿಹಾಸಿಕ ಸ್ಥಳಗಳುಮಾನವ ಹಕ್ಕುಗಳುವಡ್ಡಾರಾಧನೆಅಷ್ಟಾವಕ್ರನವೆಂಬರ್ ೧೪ರಾಸಾಯನಿಕ ಗೊಬ್ಬರ🡆 More