ಶಂಖ ಘೋಷ್: ಭಾರತೀಯ ಕವಿ

ಶಂಖ ಘೋಷ್ (ಜನನ: ಚಿತ್ತಪ್ರಿಯೋ ಘೋಷ್; 5 ಫೆಬ್ರವರಿ 1932 - ಮರಣ 21 ಏಪ್ರಿಲ್ 2021) ಭಾರತೀಯ ಕವಿ ಮತ್ತು ವಿಮರ್ಶಕರು.

ಶಂಖ ಘೋಷ್: ವೃತ್ತಿ, ಸಾಹಿತ್ಯಿಕ ಕೊಡುಗೆಗಳು, ಕೃತಿಗಳು

ಘೋಷ್ ಅವರು ಕೋಲ್ಕತಾ ದ ಪ್ರೆಸಿಡೆನ್ಸಿ ಕಾಲೇಜಿನಿಂದ ಆರ್ಟ್ಸ್ ನಲ್ಲಿ 1951 ರಲ್ಲಿ ತಮ್ಮ ಪದವಿಪೂರ್ವ ಶಿಕ್ಷಣ ಮುಗಿಸಿ ತರುವಾಯ ತಮ್ಮ ಸ್ನಾತಕೋತ್ತರ ಪದವಿಯನ್ನು ಕಲ್ಕತ್ತಾ ವಿಶ್ವವಿದ್ಯಾಲಯದಿಂದ 1954 ರಲ್ಲಿ ಪಡೆದರು.

ವೃತ್ತಿ

ಘೋಷ್ ಅವರು ಪಶ್ಚಿಮ ಬಂಗಾಳಕೋಲ್ಕತ್ತಾ ನಗರದ ಬಂಗಾಬಾಸಿ ಕಾಲೇಜು, ಸಿಟಿ ಕಾಲೇಜು ಜಾದವ್‌ಪುರ ವಿಶ್ವವಿದ್ಯಾಲಯ, ಜಂಗಿಪುರ್ ಕಾಲೇಜು, ಬರ್ಹಾಂಪೋರ್ ಬಾಲಕಿಯರ ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಿದರು. ಅವರು 1992 ರಲ್ಲಿ ಜಾದವ್‌ಪುರ ವಿಶ್ವವಿದ್ಯಾಲಯದಿಂದ ನಿವೃತ್ತರಾದರು. 1967 ರಲ್ಲಿ, ಅವರು ಅಯೋವಾ ಸಿಟಿ, IA ಯಲ್ಲಿನ ಅಯೋವಾ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಬರವಣಿಗೆ ಕಾರ್ಯಕ್ರಮದ ಫಾಲ್ ರೆಸಿಡೆನ್ಸಿಯಲ್ಲಿ ಭಾಗವಹಿಸಿದರು. ಅವರು ದೆಹಲಿ ವಿಶ್ವವಿದ್ಯಾನಿಲಯ, ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಮತ್ತು ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಸಹ ಕಲಿಸಿದರು. ಅವರು 2016 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಕಾವ್ಯನಾಮ ಕುಂಟಕ್ . ಸಮಕಾಲೀನ ಬಂಗಾಳಿ ಸಾಹಿತ್ಯದಲ್ಲಿ ಅತ್ಯಂತ ಗೌರವಾನ್ವಿತ ಹೆಸರುಗಳಲ್ಲಿ, ಘೋಷ್ ಅವರು ' ಪಂಚ ಪಾಂಡವರಲ್ಲಿ ' ಒಬ್ಬರು - ಶಕ್ತಿ ಚಟ್ಟೋಪಾಧ್ಯಾಯ, ಸುನೀಲ್ ಗಂಗೋಪಾಧ್ಯಾಯ, ಬಿನೋಯ್ ಮಜುಂದಾರ್ ಮತ್ತು ಉತ್ಪಲ್ ಕುಮಾರ್ ಬಸು ಅವರೊಂದಿಗೆ - ಇವರು ಬಂಗಾಳಿ ಸಾಹಿತ್ಯ ಪ್ರಪಂಚಕ್ಕೆ ಹೊಸ ಗುರುತನ್ನು ನೀಡಿದರು.

ಘೋಷ್ ಅವರು 14 ಏಪ್ರಿಲ್ 2021 ರಂದು COVID-19 ಪರೀಕ್ಷೆಗೆ ಒಳಗಾಗಿ ಪಾಸಿಟಿವ್ ಎಂದು ಗುರುತಿಸಲ್ಪಟ್ಟರು. ನಂತರ ಅವರು ಹಲವಾರು ಸಹವರ್ತಿ ಕಾಯಿಲೆಗಳಿಂದ ಬಳಲುತ್ತಿದ್ದರು. 21 ಏಪ್ರಿಲ್ 2021 ರಂದು ಬೆಳಿಗ್ಗೆ 11:30 ಕ್ಕೆ ಕೋಲ್ಕತ್ತಾದ ಅವರ ಮನೆಯಲ್ಲಿ ನಿಧನರಾದರು.

ಸಾಹಿತ್ಯಿಕ ಕೊಡುಗೆಗಳು

ಶಂಖ ಘೋಷ್ ಅವರು ಬಂಗಾಳಿ ಕಾವ್ಯ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 'ಹಗಲು ರಾತ್ರಿಗಳು', 'ಬಾಬರನ ಪ್ರಾರ್ಥನೆ', 'ಜಾಹೀರಾತಿನಲ್ಲಿ ಮುಚ್ಚಿದ ಮುಖ', 'ಗಂಧರ್ವ ಪದ್ಯಗಳು' ಇವರ ಗಮನಾರ್ಹ ಕಾವ್ಯ ಪುಸ್ತಕಗಳು. ಶಂಖ ಘೋಷರನ್ನು ಆರಂಭದಲ್ಲಿ ‘ಕವಿ’ ಎಂದು ಕರೆಯಲಾಗಿದ್ದರೂ, ಅವರ ಗದ್ಯ ಕೃತಿಗಳು ಹಲವಾರು. ಅವರು ಕವಿತೆ ಮತ್ತು ಗದ್ಯವನ್ನು ಸಂಯೋಜಿಸಿದ್ದಾರೆ. ಅವರು ರವೀಂದ್ರನಾಥ ಟ್ಯಾಗೋರ್ ಅವರ 'ಒಕಾಂಪೋರ್ ರವೀಂದ್ರನಾಥ್', 'ಎ ಅಮೀರ್ ಅವರನ್', 'ಕಲೇರ್ ಮಾತ್ರಾ ಓ ರವೀಂದ್ರ ನಾಟಕ', 'ಚಂದರ್ ಬರಂಡಾ' ಮತ್ತು 'ದಾಮಿನಿಯ ಹಾಡು'ಗಳನ್ನು ಗಮನಿಸಿದ ಪ್ರಖ್ಯಾತ ರವೀಂದ್ರ ತಜ್ಞರಾಗಿದ್ದರು. 'ಪದಗಳು ಮತ್ತು ಸತ್ಯ', 'ಉರ್ವಶೀರ್ ಹಸಿ', 'ಅಹಾನ್ ಸಾಬ್ ಅಲಿಕ್' ಅವರ ಇತರ ಗಮನಾರ್ಹ ಗದ್ಯ ಕೃತಿಗಳು. ಅವರ ಬರಹಗಳು ಬೆಂಗಾಲಿಯಲ್ಲಿ ಅನೇಕ ವರ್ಷಗಳ ಕಾಲ ಅಧ್ಯಯನ ಮಾಡಲ್ಪಟ್ಟು ಜನಪ್ರಿಯವಾಗಿವೆ. ಶಂಖ ಘೋಷರ ಕವಿಮನಸ್ಸಿನ ವೇಗ ದ್ವಿಮುಖವಾಗಿದೆ. ಒಂದೆಡೆ, ಆ ಮನಸ್ಸು ದಿನದ ಎಲ್ಲಾ ಸಾಮಾಜಿಕ-ರಾಜಕೀಯ ಘಟನೆಗಳ ಪರಿಣಾಮಗಳ ಬಗ್ಗೆ ಯಾವಾಗಲೂ ತಿಳಿದಿರುತ್ತದೆ. ಘೋಷ್ ಅವರ ಸಂವೇದನಾಶೀಲ ಕಾವ್ಯವು ಸಮಾಜದಲ್ಲಿ ಯಾವುದೇ ಅನ್ಯಾಯದ ವಿರುದ್ಧ ಘರ್ಜಿಸಿತು. ತೀಕ್ಷ್ಣವಾದ ವಿಡಂಬನೆ ಅವರದು, ವಿಡಂಬನಾತ್ಮಕ ಭಾಷೆಯಲ್ಲಿ ಬರೆದ ಕವಿತೆಗಳಲ್ಲಿ ಕೆಲವೊಮ್ಮೆ ಅದರ ಅಭಿವ್ಯಕ್ತಿಯನ್ನು ನಾವು ನೋಡುತ್ತೇವೆ. ಕೆಳವರ್ಗದ ಜನರು, ಬಡವರು ತಮ್ಮ ನಿತ್ಯದ ಸಂಕಟಕ್ಕೆ ಶಂಖ ಘೋಷರ ಕಾವ್ಯವನ್ನು ಒಡನಾಡಿಯಾಗಿ ಪಡೆಯಬಹುದು. ಶಂಖ ಘೋಷ್ ಅವರು ಸಮಾಜದ ಪ್ರತಿಯೊಂದು ಅಸಮಾನತೆಯನ್ನು, ಪ್ರತಿ ನ್ಯಾಯದ ಕೊರತೆಯನ್ನು ತಮ್ಮ ತಪ್ಪಾಗಲಾರದ ಕವಿತೆಗಳಿಂದ ಗುರುತಿಸುತ್ತಾರೆ.

ಕೃತಿಗಳು

ಕಾವ್ಯಶಾಸ್ತ್ರ

1. ದಿನಗುಲಿ ರಾತಗುಲಿ (1956)

2. ಎಖನ್ ಸಮಯ್ ನ (1967)

3. ನಿಹಿತ್ ಪಾತಾಲಚಾಯಾ (1967)

4. ಸ೦ಖ ಘೋಷರ್ ಶ್ರೇಷ್ಟ ಕಬಿತಾ (೧೯೭೦)

5. ಆದಿಮ ಲತಾಗುಲ್ಮಾಮ[ ಆದಿಮ ಲತಾಗುಲ್ಮಾಮ ] (1972)

6. ಮೂರ್ಖಾ ಬಾ ಸಮಾಜಿಕಾ ನಾ (೧೯೭೪)

7. ಬಾಬರೆ ಪ್ರಾರ್ಥನಾ (1976)

8. ಮಿನಿಬುಕ್ (1978)

9. ತಮಿ ತೆಮನ್ ಗೌರಿ ನೊ (1978)

10. ಪಾಂಜರೆ ದಾಂಡೇರ್ ಶಬ್ದ (1980)

11. ಕಬಿತಾಸಂಗ್ರಹ -1 (1980)

12. ಪ್ರಹರಜೋಡ ತ್ರಿತಾಳ(1982)

13. ಮುಖ್ ಥೇಕೆ ಯಾವ್ ಬಿಜ್ಯಾಪನೆ (1984)

14. ಬನ್ಧುರಾ ಮಾತಿ ತರಜಾಯ (1984)

15. ಧೂಮ ಲೆಗೆ ಹೃದಕಮಲೆ (1984)

16. ಕಬಿತಾಸಂಗ್ರಹ - 2(1991)

17. ಲೈನೆ ಛಿಲಾಮ್ ಬಾಬಾ (1993)

18. ಗಾಂಧರ್ಬ ಕಬಿತಾಗುಚ್ಚ (1994)

19. ಸ೦ಖ ಘೋಷರ್ ನಿರ್ಬಾಸಿತಾ ಪ್ರೆಮೇರ್ ಕಬಿತಾ (1994)

20. ಮಿನಿ ಕಬಿತಾರ್ ಬೈ ] (1994)

21. ಶಬೆರ್ ಉಪರೆ ಶಾಮಿಯಾನಾ (1996)

22. ಛಂದೇರ್ ಭಿತರೇ ಎತ್ ಅಂಧಕಾರ (1999)

23. ಜಲೈ ಪಾಷಾಣ ಹವೆ ಆಚೆ (2004)

24. ಸಮಸ್ತ ಕ್ಷತೆರ್ ಮುಖೆ ಪಲಿ (2007)

25. ಮಾಟಿಖೋಡಾ ಪುರೋನೋ ಕರೋನೋ (೨೦೦೯)

26. ಗೋಟಾದೇಶಜೋಡಾ ಜೌಘರ (2010)

27. ಹಾಸಿಖುಶಿ ಮುಖೇ ಸರ್ಬನಾಶ್ (2011)

28. ಪ್ರತಿ ಪ್ರಶ್ನೆ ಜೆಗೆ ಓಠೆ (೨೦೧೨)

29. ಬಹುಸಂಬರ ಸತಬ್ಧ ಪಡಿ (2014)

30.ಪ್ರೇಮೆರ್ ಕಬಿತಾ (2014)

31. ಶಂಖ ಘೋಷೆರ್ ಕಬಿತಾಸಂಗ್ರಹ (2015)

32. ಶುನಿ ನೀರಬ ಚಿಕಾರ(2015)

33. ಎಒ ಒಂದು ಬಯಥಾ ಉಪಶಮ್ (2017)

ಗದ್ಯ

1. ಕಾಲೇರ ಮಾತ್ರಾ ಓ ರಬೀಂದರ್ನ(೧೯೬೯)

2. ನಿಃಶಬ್ದೆರ ತರಜನಿ (1971)

ಪ್ರಶಸ್ತಿಗಳು

  • ನರಸಿಂಗ್ ದಾಸ್ ಪುರಸ್ಕರ್ (1977, ಮುರ್ಖಾ ಬಾರೋ, ಸಮಾಜಿಕ ನ್ಯಾ ಗಾಗಿ)
  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1977, ಬಾಬರರ್ ಪ್ರಾರ್ಥನೆಗಾಗಿ)
  • ರವೀಂದ್ರ ಪುರಸ್ಕಾರ್ (1989, ಧುಮ್ ಲೆಗೆಚೆ ಹೃತ್ ಕಮಲೆಗಾಗಿ)
  • ಅವರ ಗಂಧರ್ಬ ಕಬಿತಗುಚ್ಚ ಸಂಕಲನಕ್ಕಾಗಿ ಸರಸ್ವತಿ ಸಮ್ಮಾನ್
  • ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ - ತಲೆದಂಡ (ಕನ್ನಡ)ದ ಬಂಗಾಳಿ ಅನುವಾದ ರಕ್ತಕಲ್ಯಾಣ(1999) ನಾಟಕಕ್ಕೆ
  • ವಿಶ್ವಭಾರತಿ (1999) ಅವರಿಂದ ದೇಸಿಕೊಟ್ಟಂ
  • ವಿದ್ಯಾಸಾಗರ್ ವಿಶ್ವವಿದ್ಯಾಲಯದಿಂದ ಡಿ.ಲಿಟ್ (2010)
  • ಭಾರತ ಸರ್ಕಾರದಿಂದ ಪದ್ಮಭೂಷಣ(2011)
  • ವಿಶ್ವ ಫೋರಂ ಫಾರ್ ಜರ್ನಲಿಸ್ಟ್ಸ್ ಮತ್ತು ರೈಟರ್ಸ್ (WFJW) (2015) ನಿಂದ ಹಾಲ್ ಆಫ್ ಫೇಮ್ ಜೀವಮಾನ ಸಾಧನೆ "ಸಾಹಿತ್ಯಬ್ರಹ್ಮ" ಪ್ರಶಸ್ತಿ
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿ, ಶಿಬ್ಪುರ್ ಇವರಿಂದ ಡಿ.ಲಿಟ್ (2015)
  • ಭಾರತ ಸರ್ಕಾರದಿಂದ ಜ್ಞಾನಪೀಠ ಪ್ರಶಸ್ತಿ (2016)

ಉಲ್ಲೇಖಗಳು

Tags:

ಶಂಖ ಘೋಷ್ ವೃತ್ತಿಶಂಖ ಘೋಷ್ ಸಾಹಿತ್ಯಿಕ ಕೊಡುಗೆಗಳುಶಂಖ ಘೋಷ್ ಕೃತಿಗಳುಶಂಖ ಘೋಷ್ ಪ್ರಶಸ್ತಿಗಳುಶಂಖ ಘೋಷ್ ಉಲ್ಲೇಖಗಳುಶಂಖ ಘೋಷ್

🔥 Trending searches on Wiki ಕನ್ನಡ:

ಸೌರ ಶಕ್ತಿಮರಾಠಾ ಸಾಮ್ರಾಜ್ಯರವೀಂದ್ರನಾಥ ಠಾಗೋರ್ಅಶೋಕನ ಶಾಸನಗಳುಕೈಮಗ್ಗಹೆಚ್.ಡಿ.ದೇವೇಗೌಡಶಾಸನಗಳುಕೈಗಾರಿಕೆಗಳುಋತುಪಶ್ಚಿಮ ಘಟ್ಟಗಳುಮಹಾವೀರಕರ್ನಾಟಕ ಸಶಸ್ತ್ರ ಬಂಡಾಯಆಲದ ಮರಯಜಮಾನ (ಚಲನಚಿತ್ರ)ಹಲ್ಮಿಡಿಚಾಲುಕ್ಯಬನವಾಸಿಚಿತ್ರದುರ್ಗನವಿಲಗೋಣುಫ.ಗು.ಹಳಕಟ್ಟಿರಾವಣವಡ್ಡಾರಾಧನೆಪ್ಲಾಸಿ ಕದನಉತ್ತರ ಪ್ರದೇಶಪೌರತ್ವರಾಮಾಚಾರಿ (ಕನ್ನಡ ಧಾರಾವಾಹಿ)ಸತ್ಯ (ಕನ್ನಡ ಧಾರಾವಾಹಿ)ಸಂಪ್ರದಾಯಚರಕವಿಷ್ಣುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ರಾಜ್ಯಗಳ ಜನಸಂಖ್ಯೆಉತ್ತರ ಕರ್ನಾಟಕತತ್ಪುರುಷ ಸಮಾಸಪು. ತಿ. ನರಸಿಂಹಾಚಾರ್ಅಲಾವುದ್ದೀನ್ ಖಿಲ್ಜಿವಿನೋಬಾ ಭಾವೆಮಾರಾಟ ಪ್ರಕ್ರಿಯೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶ್ಯೆಕ್ಷಣಿಕ ತಂತ್ರಜ್ಞಾನಕನ್ನಡ ರಂಗಭೂಮಿಧರ್ಮಗೊರೂರು ರಾಮಸ್ವಾಮಿ ಅಯ್ಯಂಗಾರ್ಪಿ.ಲಂಕೇಶ್ಕದಂಬ ರಾಜವಂಶಶಕ್ತಿಹಲಸಿನ ಹಣ್ಣುನಗರೀಕರಣಭಾರತದ ಸಂವಿಧಾನಮಾನವ ಸಂಪನ್ಮೂಲಗಳುಜಾಹೀರಾತುಮಹಜರುಪ್ರಶಾಂತ್ ನೀಲ್ಮೈಸೂರು ಸಂಸ್ಥಾನರನ್ನರೋಸ್‌ಮರಿಕರ್ನಾಟಕದ ಜಾನಪದ ಕಲೆಗಳುಬೀಚಿಬ್ಯಾಡ್ಮಿಂಟನ್‌ಚಂದ್ರಶೇಖರ ವೆಂಕಟರಾಮನ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾರತೀಯ ಶಾಸ್ತ್ರೀಯ ಸಂಗೀತಭಕ್ತಿ ಚಳುವಳಿವಿಲಿಯಂ ಷೇಕ್ಸ್‌ಪಿಯರ್ದೂರದರ್ಶನಚಿಕ್ಕಬಳ್ಳಾಪುರಗ್ರಹಬಾಗಲಕೋಟೆ ಲೋಕಸಭಾ ಕ್ಷೇತ್ರಭಾರತದ ತ್ರಿವರ್ಣ ಧ್ವಜಕೇಶಿರಾಜಖಾಸಗೀಕರಣಮೋಕ್ಷಗುಂಡಂ ವಿಶ್ವೇಶ್ವರಯ್ಯವ್ಯಂಜನಪುನೀತ್ ರಾಜ್‍ಕುಮಾರ್ಶಾತವಾಹನರುಕನ್ನಡ ಚಂಪು ಸಾಹಿತ್ಯಕಂಪ್ಯೂಟರ್ಮೈಸೂರು🡆 More