ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ.[೧] ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು ೧೯೫೪ರಲ್ಲಿ ಸ್ಥಾಪಿಸಲಾಯಿತು. ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.

Sahitya Akademi
Rabindra Bhawan, Delhi.jpg
ರವೀಂದ್ರ ಭವನ,ದೆಹಲಿ ಸಂಗೀತ ನಾಟಕ ಅಕಾಡೆಮಿ, ಲಲಿತ್ ಕಲಾ ಅಕಾಡೆಮಿ ಮತ್ತು ಸಾಹಿತ್ಯ ಅಕಾಡಮಿ ಕಛೇರಿ.
ಸಂಕ್ಷಿಪ್ತ ಹೆಸರುSA
ಸ್ಥಾಪನೆಮಾರ್ಚ್ 12, 1954; 68 years ago (1954-೦೩-12)
ಪ್ರಧಾನ ಕಚೇರಿರವೀಂದ್ರ ಭವನ,ದೆಹಲಿ
ಸ್ಥಳ
ಪ್ರದೇಶ served
ಭಾರತ
ಅಧ್ಯಕ್ಷರು
ಡಾ. ಚಂದ್ರಶೇಖರ ಕಂಬಾರ
ಪತ್ರಿಕೆಗಳು
ಪೋಷಕ ಸಂಸ್ಥೆಗಳು
ಸಂಸ್ಕೃತಿ ಸಚಿವಾಲಯ, ಭಾರತ ಸರಕಾರ
ಅಧಿಕೃತ ಜಾಲತಾಣಅಧಿಕೃತ ಜಾಲತಾಣ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಭಾರತದ ಈ ಕೆಳಕಂಡ ೨೪ ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಅಸ್ಸಾಮಿ, ಬಂಗಾಳಿ, ಬೋಡೋ, ಇಂಗ್ಲಿಷ್, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು

ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು ೧೨ ತಿಂಗಳು ನಡೆಯುತ್ತದೆ. ವಿಜೇತರಿಗೆ ೧ ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಕೃತಿಗಳು [೨]

ವರ್ಷಪುರಸ್ಕೃತರುಕೃತಿ
೧೯೫೫ಕುವೆಂಪುಶ್ರೀ ರಾಮಾಯಣ ದರ್ಶನಂ (ಮಹಾಕಾವ್ಯ)
೧೯೫೬ರಂ.ಶ್ರೀ.ಮುಗಳಿಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)
೧೯೫೮ದ.ರಾ.ಬೇಂದ್ರೆಅರಳು-ಮರಳು (ಕವನ ಸಂಕಲನ)
೧೯೫೯ಕೆ. ಶಿವರಾಮ ಕಾರಂತಯಕ್ಷಗಾನ ಬಯಲಾಟ (ಪರಿಚಯ ಗ್ರಂಥ)
೧೯೬೦ವಿ. ಕೃ. ಗೋಕಾಕದ್ಯಾವಾ-ಪೃಥಿವಿ (ಕವನ)
೧೯೬೧ಎ. ಆರ್. ಕೃಷ್ಣಶಾಸ್ತ್ರಿಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ)
೧೯೬೨ದೇವುಡು ನರಸಿಂಹ ಶಾಸ್ತ್ರಿಮಹಾಕ್ಷತ್ರಿಯ (ಕಾದಂಬರಿ)
೧೯೬೪ಬಿ. ಪುಟ್ಟಸ್ವಾಮಯ್ಯಕ್ರಾಂತಿ ಕಲ್ಯಾಣ (ಕಾದಂಬರಿ)
೧೯೬೫ಎಸ್. ವಿ. ರಂಗಣ್ಣರಂಗ ಬಿನ್ನಪ (ತತ್ವಶಾಸ್ತ್ರೀಯ ಹೊಳಹುಗಳು)
೧೯೬೬ಪು. ತಿ. ನರಸಿಂಹಾಚಾರ್ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)
೧೯೬೭ಡಿ. ವಿ. ಗುಂಡಪ್ಪಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (ತತ್ವಶಾಸ್ತ್ರೀಯ ಹೊಳಹುಗಳು)
೧೯೬೮ಮಾಸ್ತಿ ವೆಂಕಟೇಶ ಅಯ್ಯಂಗಾರ್ಸಣ್ಣ ಕಥೆಗಳು (ಸಂಪುಟ ೧೨-೧೩) (ಸಣ್ಣ ಕಥೆಗಳು)
೧೯೬೯ಎಚ್. ತಿಪ್ಪೇರುದ್ರಸ್ವಾಮಿಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ)
೧೯೭೦ಶಂ. ಬಾ. ಜೋಶಿಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ ಅಧ್ಯಯನ)
೧೯೭೧ಆದ್ಯ ರಂಗಾಚಾರ್ಯಕಾಳಿದಾಸ (ಸಾಹಿತ್ಯ ವಿಮರ್ಶೆ)
೧೯೭೨ಸಂ. ಶಿ. ಭೂಸನೂರ ಮಠಶೂನ್ಯ ಸಂಪಾದನೆಯ ಪರಾಮರ್ಶೆ (ವಿವರಣೆ)
೧೯೭೩ವಿ. ಸೀತಾರಾಮಯ್ಯಅರಲು ಬರಲು (ಕವನ)
೧೯೭೪ಎಂ. ಗೋಪಾಲಕೃಷ್ಣ ಆಡಿಗವರ್ಧಮಾನ (ಕವನ)
೧೯೭೫ಎಸ್. ಎಲ್. ಭೈರಪ್ಪದಾಟು (ಕಾದಂಬರಿ)
೧೯೭೬ಎಂ. ಶಿವರಾಂಮನ ಮಂಥನ (ಮನೋವೈಜ್ಞಾನಿಕ ಅಧ್ಯಯನ)
೧೯೭೭ಕೆ. ಎಸ್. ನರಸಿಂಹಸ್ವಾಮಿತೆರೆದ ಬಾಗಿಲು (ಕವನ)
೧೯೭೮ಬಿ. ಜಿ. ಎಲ್. ಸ್ವಾಮಿಹಸುರು ಹೊನ್ನು (ಸಸ್ಯಶಾಸ್ತ್ರ)
೧೯೭೯ಎ. ಎನ್. ಮೂರ್ತಿರಾವ್ಚಿತ್ರಗಳು ಪತ್ರಗಳು (ನೆನಪುಗಳು)
೧೯೮೦ಗೊರೂರು ರಾಮಸ್ವಾಮಿ ಅಯ್ಯಂಗಾರ್ಅಮೆರಿಕದಲ್ಲಿ ಗೊರೂರು (ಪ್ರವಾಸ ಕಥನ)
೧೯೮೧ಚನ್ನವೀರ ಕಣವಿಜೀವಧ್ವನಿ (ಕವನ)
೧೯೮೨ಚದುರಂಗವೈಶಾಖ (ಕಾದಂಬರಿ)
೧೯೮೩ಯಶವಂತ ಚಿತ್ತಾಲಕಥೆಯಾದಳು ಹುಡುಗಿ (ಸಣ್ಣ ಕಥೆಗಳು)
೧೯೮೪ಜಿ. ಎಸ್. ಶಿವರುದ್ರಪ್ಪಕಾವ್ಯಾರ್ಥ ಚಿಂತನ (ಸಾಹಿತ್ಯ ವಿಮರ್ಶೆ)
೧೯೮೫ತ. ರಾ. ಸುಬ್ಬರಾವ್ದುರ್ಗಾಸ್ತಮಾನ (ಕಾದಂಬರಿ)
೧೯೮೬ವ್ಯಾಸರಾಯ ಬಲ್ಲಾಳಬಂಡಾಯ (ಕಾದಂಬರಿ)
೧೯೮೭ಕೆ. ಪಿ. ಪೂರ್ಣಚಂದ್ರ ತೇಜಸ್ವಿಚಿದಂಬರ ರಹಸ್ಯ (ಕಾದಂಬರಿ)
೧೯೮೮ಶಂಕರ ಮೊಕಾಶಿ ಪುಣೇಕರಅವಧೇಶ್ವರಿ (ಕಾದಂಬರಿ)
೧೯೮೯ಹಾ. ಮಾ. ನಾಯಕಸಂಪ್ರತಿ (ಅಂಕಣ ಬರಹಗಳ ಸಂಕಲನ)
೧೯೯೦ದೇವನೂರು ಮಹಾದೇವಕುಸುಮಬಾಲೆ (ಕಾದಂಬರಿ)
೧೯೯೧ಚಂದ್ರಶೇಖರ ಕಂಬಾರಸಿರಿಸಂಪಿಗೆ (ನಾಟಕ)
೧೯೯೨ಸು. ರಂ. ಎಕ್ಕುಂಡಿಬಕುಳದ ಹೂವುಗಳು (ಕವನ)
೧೯೯೩ಪಿ. ಲಂಕೇಶ್ಕಲ್ಲು ಕರಗುವ ಸಮಯ (ಸಣ್ಣ ಕಥೆಗಳು)
೧೯೯೪ಗಿರೀಶ್ ಕಾರ್ನಾಡ್ತಲೆದಂಡ (ನಾಟಕ)
೧೯೯೫ಕೀರ್ತಿನಾಥ ಕುರ್ತಕೋಟಿಉರಿಯ ನಾಲಗೆ (ವಿಮರ್ಶೆ)
೧೯೯೬ಜಿ. ಎಸ್. ಆಮೂರಭುವನದ ಭಾಗ್ಯ (ಸಾಹಿತ್ಯ ವಿಮರ್ಶೆ)
೧೯೯೭ಎಂ. ಚಿದಾನಂದಮೂರ್ತಿಹೊಸತು ಹೊಸತು (ವಿಮರ್ಶೆ)
೧೯೯೮ಬಿ. ಸಿ. ರಾಮಚಂದ್ರ ಶರ್ಮಸಪ್ತಪದಿ (ಕವನ)
೧೯೯೯ಡಿ. ಆರ್. ನಾಗರಾಜ್ಸಾಹಿತ್ಯ ಕಥನ (ಪ್ರಬಂಧಗಳು)
೨೦೦೦ಶಾಂತಿನಾಥ ದೇಸಾಯಿಓಂ ಣಮೋ (ಕಾದಂಬರಿ)
೨೦೦೧ಎಲ್. ಎಸ್. ಶೇಷಗಿರಿ ರಾವ್ಇಂಗ್ಲೀಷ್ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)
೨೦೦೨ಎಸ್.ನಾರಾಯಣ ಶೆಟ್ಟಿಯುಗಸಂಧ್ಯಾ (ಮಹಾಕಾವ್ಯ)
೨೦೦೩ಕೆ. ವಿ. ಸುಬ್ಬಣ್ಣಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (ಪ್ರಬಂಧಗಳು)
೨೦೦೪ಗೀತಾ ನಾಗಭೂಷಣಬದುಕು (ಕಾದಂಬರಿ)
೨೦೦೫ರಾಘವೇಂದ್ರ ಪಾಟೀಲ್ತೇರು (ಕಾದಂಬರಿ)
೨೦೦೬ಎಂ. ಎಂ. ಕಲಬುರ್ಗಿಮಾರ್ಗ - ೪ (ಸಂಶೋಧನಾ ಪ್ರಬಂಧಗಳು)
೨೦೦೭ಕುಂ. ವೀರಭದ್ರಪ್ಪಅರಮನೆ (ಕಾದಂಬರಿ)
೨೦೦೮ಶ್ರೀನಿವಾಸ ಬಿ. ವೈದ್ಯಹಳ್ಳ ಬಂತು ಹಳ್ಳ (ಕಾದಂಬರಿ)
೨೦೦೯ವೈದೇಹಿಕ್ರೌಂಚ ಪಕ್ಷಿಗಳು (ಸಣ್ಣ ಕಥೆಗಳು)
೨೦೧೦ರಹಮತ್ ತರೀಕೆರೆಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ)
೨೦೧೧ಗೋಪಾಲಕೃಷ್ಣ ಪೈಸ್ವಪ್ನ ಸಾರಸ್ವತ (ಕಾದಂಬರಿ)
೨೦೧೨ಎಚ್. ಎಸ್. ಶಿವಪ್ರಕಾಶ್ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)
೨೦೧೩ಸಿ. ಎನ್. ರಾಮಚಂದ್ರನ್ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)
೨೦೧೪ಜಿ. ಎಚ್. ನಾಯಕಉತ್ತರಾರ್ಧ (ಪ್ರಬಂಧಗಳು)
೨೦೧೫ಕೆ. ವಿ. ತಿರುಮಲೇಶ್ಅಕ್ಷಯ ಕಾವ್ಯ (ಕವನ ಸಂಕಲನ)
೨೦೧೬ಬೊಳುವಾರು ಮಹಮದ್ ಕುಂಞ್ಸ್ವಾತಂತ್ರ್ಯದ ಓಟ (ಕಾದಂಬರಿ)
೨೦೧೭ಟಿ.ಪಿ.ಅಶೋಕಕಥನ ಭಾರತಿ (ವಿಮರ್ಶೆ)
೨೦೧೮ಕೆ. ಜಿ. ನಾಗರಾಜಪ್ಪಅನುಶ್ರೇಣಿ ಯಜಮಾನಿಕೆ (ವಿಮರ್ಶೆ)
೨೦೧೯ವಿಜಯಮ್ಮಕುದಿ ಎಸರು (ಆತ್ಮಕಥೆ)
೨೦೨೦ವೀರಪ್ಪ ಮೊಯ್ಲಿಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ (ಮಹಾಕಾವ್ಯ)
೨೦೨೧ಡಿ.ಎಸ್. ನಾಗಭೂಷಣಗಾಂಧಿ ಕಥನ

೧೯೫೭ ಮತ್ತು ೧೯೬೩ರಲ್ಲಿ ಯಾವುದೇ ಪ್ರಶಸ್ತಿಗಳನ್ನು ನೀಡಲಾಗಿಲ್ಲ.

ಇವನ್ನೂ ನೋಡಿ

ಉಲ್ಲೇಖಗಳು

ಹೊರಕೊಂಡಿಗಳು

🔥 Top trends keywords ಕನ್ನಡ Wiki:

ಸೃಜನ್ ಲೋಕೇಶ್ಕುವೆಂಪುಮುಖ್ಯ ಪುಟವಿಶೇಷ:Searchದಶಾವತಾರಮೊದಲನೆಯ ಕೆಂಪೇಗೌಡದ.ರಾ.ಬೇಂದ್ರೆಜೈಜಗದೀಶ್ಅವತಾರಭಾರತದ ರಾಷ್ಟ್ರಪತಿಗಳ ಪಟ್ಟಿಬಸವೇಶ್ವರಶಿವರಾಮ ಕಾರಂತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಚಂದ್ರಶೇಖರ ಕಂಬಾರಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ವಿನಾಯಕ ಕೃಷ್ಣ ಗೋಕಾಕಮಹಾತ್ಮ ಗಾಂಧಿಎ.ಪಿ.ಜೆ.ಅಬ್ದುಲ್ ಕಲಾಂಜಿ.ಎಸ್.ಶಿವರುದ್ರಪ್ಪಗಿರೀಶ್ ಕಾರ್ನಾಡ್ಯು.ಆರ್.ಅನಂತಮೂರ್ತಿಕರ್ನಾಟಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬುದ್ಧಗೌತಮ ಬುದ್ಧಭಾರತದ ಸಂವಿಧಾನರಾಮಾಯಣಬಾಬು ರಾಜೇಂದ್ರ ಪ್ರಸಾದ್ಹೊಯ್ಸಳಗೋವಿಂದ ಪೈಚನ್ನವೀರ ಕಣವಿಗುಡಿಸಲು ಕೈಗಾರಿಕೆಗಳುಜ್ಞಾನಪೀಠ ಪ್ರಶಸ್ತಿಕಡಲೆಸರ್ವೆಪಲ್ಲಿ ರಾಧಾಕೃಷ್ಣನ್ಭಾರತಕನ್ನಡ ಸಾಹಿತ್ಯಪುರಂದರದಾಸಜಾಕಿರ್ ಹುಸೇನ್ಪೂರ್ಣಚಂದ್ರ ತೇಜಸ್ವಿಕನ್ನಡ ಅಕ್ಷರಮಾಲೆಪಂಪಕೇಂದ್ರಾಡಳಿತ ಪ್ರದೇಶಗಳುಕನ್ನಡ ಸಂಧಿಅಕ್ಕಮಹಾದೇವಿರಾಮಸ್ವಾಮಿ ವಿವೇಕಾನಂದಕರ್ನಾಟಕದ ಇತಿಹಾಸಕನಕದಾಸರುಕನ್ನಡ ಗುಣಿತಾಕ್ಷರಗಳುಕೃಷ್ಣದೇವರಾಯಹಂಪೆಮೈಸೂರು ಅರಮನೆರಾಷ್ಟ್ರಕವಿವಚನಕಾರರ ಅಂಕಿತ ನಾಮಗಳುಕನ್ನಡರನ್ನಭಾರತದ ಸ್ವಾತಂತ್ರ್ಯ ಚಳುವಳಿಪು. ತಿ. ನರಸಿಂಹಾಚಾರ್ಮೌರ್ಯ ಸಾಮ್ರಾಜ್ಯಭಾರತೀಯ ಮೂಲಭೂತ ಹಕ್ಕುಗಳುಕೃಷಿಕದಂಬ ರಾಜವಂಶಗಾದೆಭಾರತದ ರಾಷ್ಟ್ರಪತಿಜಾನಪದಕನ್ನಡ ಕವಿಗಳುಮಹಾಭಾರತಸಾಮ್ರಾಟ್ ಅಶೋಕಕಂಪ್ಯೂಟರ್ಭೂಮಿಕರ್ನಾಟಕದ ಮುಖ್ಯಮಂತ್ರಿಗಳುಭೂಕಂಪಮೈಸೂರುಯೋಗಅರಿಸ್ಟಾಟಲ್‌ವರ್ಗ:ಸ್ವಾತಂತ್ರ್ಯ ಹೋರಾಟಗಾರರುಭಗತ್ ಸಿಂಗ್🡆 More