ರೇಖಾಕನ್ನಡ: ಚಲನಚಿತ್ರ ತಾರೆ

ರೇಖಾ ವೇದವ್ಯಾಸ್ , ಅಕ್ಷರ ಎಂದೂ ಕರೆಯಲ್ಪಡುವ ರೇಖಾ ಅವರು ಭಾರತೀಯ ಚಲನಚಿತ್ರ ನಟಿ.

ಅವರು ಮುಖ್ಯವಾಗಿ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಆಗಿದ್ದ ಇವರು ೨೦೦೧ರಲ್ಲಿ ಚಿತ್ರಾ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪ್ರವೇಶಿಸಿದರು. ಇಲ್ಲಿಯವರೆಗೆ ಇವರು ವಿವಿಧ ದಕ್ಷಿಣ ಭಾರತೀಯ ಭಾಷೆಗಳಲ್ಲಿ ೩೦ ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.

ರೇಖಾ
Born
ರೇಖಾ ವೇದವ್ಯಾಸ್

(1985-04-20) ೨೦ ಏಪ್ರಿಲ್ ೧೯೮೫ (ವಯಸ್ಸು ೩೮)
Other namesಅಕ್ಷರ , ಜಿಂಕೆ ಮರಿ ರೇಖಾ
Occupation(s)ನಟಿ, ರೂಪದರ್ಶಿ

ಆರಂಭಿಕ ಜೀವನ

ರೇಖಾ ಹುಟ್ಟಿ ಬೆಳೆದಿದ್ದು ಕರ್ನಾಟಕದ ಬೆಂಗಳೂರಿನಲ್ಲಿ. ಇವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಕೆಂಗೇರಿಯ ಬಸವ ವಸತಿ ಬಾಲಕಿಯರ ಶಾಲೆಯಲ್ಲಿ ಮಾಡಿದರು. ನಂತರ ಇವರು ಮದ್ರಾಸ್ ವಿಶ್ವವಿದ್ಯಾಲಯದಿಂದ ತನ್ನ ಬಿಬಿಎ ಅಂಚೆಶಿಕ್ಷಣ ಕೋರ್ಸನ್ನು, ಹವ್ಯಾಸಿ ಮಾಡೆಲಿಂಗ್ ಅನ್ನು ಮಾಡುತ್ತಾ ನಟನೆಯಲ್ಲಿ ಮುಂದುವರಿಯಲು ಪ್ರಯತ್ನಿಸಿದರು .

ವೃತ್ತಿ ಬದುಕು

ರಾಮೋಜಿ ರಾವ್ ನಿರ್ಮಿಸಿದ ಕಾಲೇಜು ನಾಟಕ ಚಿತ್ರಕ್ಕಾಗಿ ಇವರನ್ನು ಜಯಶ್ರೀ ದೇವಿ ಅವರು ಚಿತ್ರರಂಗಕ್ಕೆ ಕರೆತಂದರು. ಇದರಲ್ಲಿ ಅವರು ಅನಿವಾಸಿ ಭಾರತೀಯ ವಿದ್ಯಾರ್ಥಿಯಾಗಿ ನಟಿಸಿದರು. ಅದೇ ವರ್ಷ, ಅವರು ಸುದೀಪ್ ಜೊತೆಗೆ ಹುಚ್ಚ ಚಿತ್ರದಲ್ಲಿ ನಟಿಸಿದರು. ಅದೇ ವರ್ಷ ಶ್ರೀನು ವೈಟ್ಲರ ಆನಂದಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಮೂರೂ ಚಿತ್ರಗಳೂ ವಾಣಿಜ್ಯಿಕವಾಗಿ ಯಶಸ್ವಿಯಾದವು. ಇವರು ಅಭಿನಯದ ತೆಲುಗು ಚಿತ್ರ ಡೋಂಗೋಡು ನಲ್ಲಿ ರವಿತೇಜ ನಾಯಕನಾಗಿ ಕಾಣಿಸಿಕೊಂಡಿದ್ದರು. ಸಬಪತಿಯ ಪ್ರೇಮ ತ್ರಿಕೋನ ಆಧಾರಿತ ಚಿತ್ರ ಪುನ್ನಗೈ ಪೂವೆ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ೨೦೦೩ರಲ್ಲಿ ಇವರು ತಮ್ಮ ಮೊದಲ ಮತ್ತು ಇಲ್ಲಿಯವರೆಗಿನ ಬಿಡುಗಡೆಯಾದ ಏಕೈಕ ಹಿಂದಿ ಚಿತ್ರ ಮುದ್ದಾದಲ್ಲಿ ಆರ್ಯ ಬಬ್ಬರ್ ಜೊತೆ ನಟಿಸಿದರು. ಇವರು ರಂಭಾ, ಜ್ಯೋತಿಕಾ ಮತ್ತು ಲೈಲಾ ಮೆಹ್ದಿನ್ ರನ್ನು ಒಳಗೊಂಡ ಸ್ತ್ರೀ-ಆಧಾರಿತ ಥ್ರೀ ರೋಸಸ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಮುಂದಿನ ವರ್ಷ ಚೆಲ್ಲಾಟ ಹಾಗೂ ಗಣೇಶ್ ಅವರ ಮೊದಲ ಚಲನಚಿತ್ರ ಹುಡುಗಾಟದಲ್ಲಿ ಕಾಣಿಸಿಕೊಂಡರು ಆ ನಂತರ ದ್ವಿಭಾಷಾ ಚಿತ್ರ ನಿನ್ನಾ ನೇಪು ರೇಪು / ನೇಟ್ರು ಇಂದ್ರು ನಾಲೈ ಮತ್ತು ರಮೇಶ್ ಅರವಿಂದ್ ನಿರ್ದೇಶನದ ಅಪಘಾತದಲ್ಲಿ ನಟಿಸಿದರು.ಇವರು ಮಸ್ತ್ ಮಜಾ ಮಾಡಿ, ರಾಜ್ ದಿ ಶೋಮ್ಯಾನ್ ಮತ್ತು ಯೋಗಿ ಚಲನಚಿತ್ರಗಳಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ೨೦೧೦ ರಲ್ಲಿ, ಅವರ ಅಪ್ಪು ಪಪ್ಪು ಎಂಬ ಚಿತ್ರ ಬಿಡುಗಡೆಯಾಯ್ತು. ಇವರ ಇತ್ತೀಚೆಗೆ ಬಿಡುಗಡೆಯಾದ ಬಾಸ್ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದರು. ಅವರು ಪ್ರಸ್ತುತ ಸಬಪತಿ ನಿರ್ದೇಶನದ ಪ್ರೇಮಾ ಚಂದ್ರಮಾಮ, ದಿಗಂತ್ ಜೊತೆಗೆ ತುಳಸಿ ನಿರ್ದೇಶನದ ಜಾಲಿ ಬಾಯ್ ನಲ್ಲಿ ನಟಿಸಿದ್ದಾರೆ

ರೇಖಾ ಅಭಿನಯದ ಚಿತ್ರಗಳ ಪಟ್ಟಿ

ಸಂಖ್ಯೆ ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
೦೧ ೨೦೦೧ ಚಿತ್ರ ಚಿತ್ರ ಕನ್ನಡ
೦೨ ಆನಂದಂ ಐಶ್ವರ್ಯ ತೆಲುಗು
೦೩ ಜುಬಿಲಿ ಲಾವಣ್ಯ ತೆಲುಗು
೦೪ ಹುಚ್ಚ ಅಭಿಷ್ಟ ಕನ್ನಡ
೦೫ ೨೦೦೨ ಒಕಟೋ ನಂಬರ್ ಕುರ್ರಾಡು ಸ್ವಪ್ನ ತೆಲುಗು
೦೬ ತುಂಟ ಐಶ್ವರ್ಯ ಕನ್ನಡ
೦೭ ಮನ್ಮದುಡು ತೆಲುಗು ವಿಶೇಷ ಪಾತ್ರ
೦೮ ೨೦೦೩ ದೊಂಗುಡು ತೆಲುಗು
೦೯ ಅನಗನಗ ಓ ಕುರ್ರಾಡು ರೇಖಾ ನಾಯ್ಡು ತೆಲುಗು
೧೦ ಪುನ್ನಾಗಿ ಪೂವೇ ಮೀರಾ ತಮಿಳು
೧೧ ಜಾನಕಿ ವೆಡ್ಸ್ ಶ್ರೀರಾಂ ಅಂಜಲಿ ತೆಲುಗು
೧೨ ಥ್ರೀ ರೋಸಸ್ ಆಶಾ ತಮಿಳು
೧೩ Mudda - The Issue ಸುಂದರಿ ಹಿಂದಿ
೧೪ 2004 ಮೋನಾಲಿಸಾ "ಕಾರ್ ಕಾರ್" ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಕನ್ನಡ
೧೫ ಪ್ರೇಮಿಂಚುಕುನ್ನಂ ಪೆಲ್ಲಿಕಿ ರಂಡಿ ಸ್ವಪ್ನ ತೆಲುಗು
೧೬ ೨೦೦೫ ಸೈ ಕನ್ನಡ
೧೭ ೨೦೦೬ ಚೆಲ್ಲಾಟ ಅಂಕಿತ ಕನ್ನಡ
೧೮ ನಾಯುಡಮ್ಮ ತೆಲುಗು
೧೯ ನೆಂಜಿರುಕ್ಕುಂ ವರೈ ತಮಿಳು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
೨೦ ೨೦೦೭ ಹುಡುಗಾಟ ಪ್ರಿಯಾ ಕನ್ನಡ
೨೧ ತಮಾಷೆಗಾಗಿ ರೇಖಾ ಕನ್ನಡ
೨೨ ಹೆತ್ತರೆ ಹೆಣ್ಣನ್ನೇ ಹೆರಬೇಕು ಜ್ಯೋತಿ ಕನ್ನಡ
೨೩ ಗುಣವಂತ ಉಮಾ ಕನ್ನಡ
೨೪ ೨೦೦೮ ನಿನ್ನ ನೇದು ರೇಪು ಸ್ವಪ್ನ ತೆಲುಗು
೨೫ ನೇತ್ರು ಇಂದ್ರು ನಾಲಾಯಿ ತಮಿಳು
೨೬ Accident ವಸುಂಧರ ಕನ್ನಡ
೨೭ ಮಸ್ತ್ ಮಜಾ ಮಾಡಿ ಕನ್ನಡ ಅತಿಥಿ ಪಾತ್ರದಲ್ಲಿ
೨೮ ೨೦೦೯ ಪರಿಚಯ ನಿಮ್ಮಿ ಕನ್ನಡ
೨೯ ರಾಜ್ ದ ಶೋಮ್ಯಾನ್ ಕನ್ನಡ ಅತಿಥಿ ಪಾತ್ರದಲ್ಲಿ
೩೦ ಯೋಗಿ ಕನ್ನಡ ಅತಿಥಿ ಪಾತ್ರದಲ್ಲಿ
೩೧ ೨೦೧೦ ಅಪ್ಪು ಪಪ್ಪು ದೀಪಾ ರಮೇಶ್ ಕನ್ನಡ
೩೨ ೨೦೧೧ ಬಾಸ್ ಕನ್ನಡ
೩೩ ಪ್ರೇಮ ಚಂದ್ರಮ ಚೇತನ ಕನ್ನಡ
೩೪ ಜೋಲಿ ಬಾಯ್ ಇಂದುಶ್ರೀ ಕನ್ನಡ
೩೫ ೨೦೧೨ ಗೋವಿಂದಾಯ ನಮಃ ಶೀಲ ಕನ್ನಡ
೩೬ ಜೀನಿಯಸ್ ತೆಲುಗು ಅತಿಥಿ ಪಾತ್ರದಲ್ಲಿ
೩೭ ೨೦೧೩ ಬೆಂಕಿ ಬಿರುಗಾಳಿ ರೇಖಾ ಕನ್ನಡ
೩೮ ಲೂಸ್ಗಳು ಮ್ಯಾಗಿ ಕನ್ನಡ
೩೯ ೨೦೧೪ ಪರಮಶಿವ ಕನ್ನಡ
೪೦ ಪುಲಕೇಶಿ ಕನ್ನಡ
೪೧ ತುಲಸಿ ಕನ್ನಡ
೪೨ ಪದಂ ಪೇಸುಂ ತಮಿಳು

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ರೇಖಾಕನ್ನಡ ಆರಂಭಿಕ ಜೀವನರೇಖಾಕನ್ನಡ ವೃತ್ತಿ ಬದುಕುರೇಖಾಕನ್ನಡ ರೇಖಾ ಅಭಿನಯದ ಚಿತ್ರಗಳ ಪಟ್ಟಿರೇಖಾಕನ್ನಡ ಉಲ್ಲೇಖಗಳುರೇಖಾಕನ್ನಡ ಬಾಹ್ಯ ಕೊಂಡಿಗಳುರೇಖಾಕನ್ನಡಕನ್ನಡ ಚಿತ್ರರಂಗತಮಿಳು ಸಿನೆಮಾ

🔥 Trending searches on Wiki ಕನ್ನಡ:

ಇ-ಕಾಮರ್ಸ್ಸಂಗೊಳ್ಳಿ ರಾಯಣ್ಣಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು21ನೇ ಶತಮಾನದ ಕೌಶಲ್ಯಗಳುಸಮಸ್ಥಾನಿಶ್ರೀನಿವಾಸ ರಾಮಾನುಜನ್ರಾಷ್ಟ್ರಕವಿಕನ್ನಡ ಸಾಹಿತ್ಯ ಸಮ್ಮೇಳನಸರ್ವಜ್ಞಜನಪದ ಕಲೆಗಳುಗೋವಿಂದ III (ರಾಷ್ಟ್ರಕೂಟ)ವಿಕಿಪೀಡಿಯಪು. ತಿ. ನರಸಿಂಹಾಚಾರ್ಅಲಾವುದ್ದೀನ್ ಖಿಲ್ಜಿಪ್ರಾಣಿಕನಕದಾಸರುನೈಸರ್ಗಿಕ ಸಂಪನ್ಮೂಲಪ್ರತಿಧ್ವನಿಚಂಪೂಆದಿ ಕರ್ನಾಟಕಪೂರ್ಣಚಂದ್ರ ತೇಜಸ್ವಿಹೆಚ್.ಡಿ.ಕುಮಾರಸ್ವಾಮಿಕರ್ನಾಟಕದ ಶಾಸನಗಳುಕೈವಾರ ತಾತಯ್ಯ ಯೋಗಿನಾರೇಯಣರುರಚಿತಾ ರಾಮ್ಲೋಹಅರಬ್ಬೀ ಸಮುದ್ರಕೊಪ್ಪಳಚಂದ್ರಯಾನ-೩ಭಾರತದ ಮಾನವ ಹಕ್ಕುಗಳುಕದಂಬ ಮನೆತನಎಲೆಗಳ ತಟ್ಟೆ.ಕರ್ನಾಟಕದಲ್ಲಿ ಬ್ಯಾಂಕಿಂಗ್ಕನ್ನಡ ಪತ್ರಿಕೆಗಳುನಾಮಪದಚಂದ್ರಗುಪ್ತ ಮೌರ್ಯವಿದ್ಯುಲ್ಲೇಪಿಸುವಿಕೆಚಿಪ್ಕೊ ಚಳುವಳಿಬಿಪಾಶಾ ಬಸುಚಂಡಮಾರುತಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಕಾಂತಾರ (ಚಲನಚಿತ್ರ)ಕಳಿಂಗ ಯುದ್ದ ಕ್ರಿ.ಪೂ.261ಭಾರತದ ತ್ರಿವರ್ಣ ಧ್ವಜಕೇಂದ್ರ ಲೋಕ ಸೇವಾ ಆಯೋಗಮಾತೃಕೆಗಳುಒಡಲಾಳಸಚಿನ್ ತೆಂಡೂಲ್ಕರ್ಭಾರತ ಬಿಟ್ಟು ತೊಲಗಿ ಚಳುವಳಿರಾಷ್ಟ್ರಕೂಟರಾಧಿಕಾ ಪಂಡಿತ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಚಾಲುಕ್ಯಸಾರ್ವಜನಿಕ ಹಣಕಾಸುಸಂಸ್ಕೃತಿಶಾಲಿವಾಹನ ಶಕೆಡಿ.ವಿ.ಗುಂಡಪ್ಪಜಾಹೀರಾತುಹೆರೊಡೋಟಸ್ಶನಿಅಮೃತಬಳ್ಳಿಬ್ಯಾಂಕ್ಮಂಕುತಿಮ್ಮನ ಕಗ್ಗಸರ್ಪ ಸುತ್ತುಭಾರತೀಯ ಕಾವ್ಯ ಮೀಮಾಂಸೆಉತ್ಕರ್ಷಣ - ಅಪಕರ್ಷಣಭಾರತದ ಬಂದರುಗಳುಜಾತಿಭಾರತಸಂಭೋಗಶ್ರೀಶೈಲಕರ್ನಾಟಕದಲ್ಲಿ ಸಹಕಾರ ಚಳವಳಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ🡆 More