ಪ್ರೋಟಾನ್

ಭೌತಶಾಸ್ತ್ರದಲ್ಲಿ ಪ್ರೋಟಾನ್ ಅಥವಾ ಧನವಿದ್ಯುತ್ಕಣವು (ಗ್ರೀಕ್ ಭಾಷೆಯಲ್ಲಿ πρώτον / ಪ್ರೋಟಾನ್ = ಮೊದಲನೆಯ) ಒಂದು ಮೂಲ ಆವೇಶದಷ್ಟು (೧.೬೦೨ × ೧೦−೧೯ coulomb) ಧನ ವಿದ್ಯುದಾವೇಶವನ್ನು ಹೊಂದಿರುವ ಒಂದು ಉಪಪರಮಾಣು ಕಣ.

ಇದರ ವ್ಯಾಸವು ೧.೬ ರಿಂದ ೧.೭×೧೦−೧೫ ಮೀ.ನಷ್ಟು ಇದ್ದು, ದ್ರವ್ಯರಾಶಿಯು ೯೩೮.೨೭೨೩೧(೨೮) MeV/c2 (೧.೬೭೨೬ × ೧೦−೨೭ ಕಿ.ಗ್ರಾಂ.), ೧.೦೦೭ ೨೭೬ ೪೬೬ ೮೮(೧೩) u ಅಥವಾಾ ಎಲೆಕ್ಟ್ರಾನ್ನ ೧೮೩೬ ಪಟ್ಟು ಇರುತ್ತದೆ.

ಪ್ರೋಟಾನ್
ಪ್ರೋಟಾನ್
ಪ್ರೋಟಾನ ಕ್ವಾರ್ಕ್ ರಚನೆ.
ರಚನೆ: ೨ up, 1 down
ವರ್ಗ: ಫರ್ಮಿಯಾನ್
ಗುಂಪು: ಕ್ವಾರ್ಕ್
ಒಡನಾಟ: ಗುರುತ್ವ, ವಿದ್ಯುತ್‌ಕಾಂತೀಯ, ದುರ್ಬಲ, ಸಬಲ
ಪ್ರತಿಕಣ: ಆಂಟಿಪ್ರೋಟಾನ್
ಆವಿಷ್ಕಾರ: ಅರ್ನೆಸ್ಟ್ ರುದರ್‌ಫೊರ್ಡ್ (೧೯೧೯)
ಚಿಹ್ನೆ: p+
ದ್ರವ್ಯರಾಶಿ: ೧.೬೭೨ ೬೨೧ ೭೧(೨೯) × ೧೦−೨೭ ಕಿ.ಗ್ರಾಂ.

೯೩೮.೨೭೨ ೦೨೯(೮೦) MeV/c

೧.೦೦೭ ೨೭೬ ೪೬೬ ೮೮(೧೩) u
ವಿದ್ಯುದಾವೇಶ: ೧.೬೦೨ ೧೭೬ ೫೩(೧೪) × ೧೦−೧೯ C
ಗಿರಕಿ: ½

ಪ್ರೋಟಾನ್‌ಗಳು ಗಿರಕಿ-1/2 ಫರ್ಮಿಯಾನ್ಗಳಾಗಿದ್ದು, ಮೂರು ಕ್ವಾರ್ಕ್ಗಳನ್ನು ಹೊಂದಿರುವ ಕಾರಣ, ಬೇರಿಯಾನ್ಗಳೆಂದು ಪರಿಗಣಿಸಲ್ಪಡುತ್ತವೆ. ಪ್ರೋಟಾನ್‌ನ ಒಂದು ಕೆಳ ಕ್ವಾರ್ಕ್ ಮತ್ತು ಎರಡು ಮೇಲು ಕ್ವಾರ್ಕ್ಗಳು ಸಬಲ ಅಂತರಕ್ರಿಯೆಯ ಸಹಾಯದಿಂದ ಮತ್ತು ಗ್ಲುಆನ್‌ಗಳ ಮಧ್ಯವರ್ತಿಕೆಯಿಂದ ಒಟ್ಟಿಗೆ ಹಿಡಿಯಲ್ಪಟ್ಟಿರುತ್ತವೆ.

ಸ್ಥಿರತೆ

೧×೧೦೩೬ ವರ್ಷಗಳ ಸೈದ್ಧಾಂತಿಕ ಅರ್ಧಾಯುವನ್ನು ಹೊಂದಿರುವ ಪ್ರೋಟಾನ್‌ಗಳನ್ನು ಸಮಾನ್ಯವಾಗಿ ಸ್ಥಿರ ಕಣಗಳೆಂದು ಪರಿಗಣಿಸಲಾಗುತ್ತದೆ. ಮಹತ್ ಏಕೀಕೃತ ಸಿದ್ಧಾಂತಗಳ ಸಾಮಾನ್ಯ ನುಡಿಯ ಪ್ರಕಾರ ಪ್ರೋಟಾನ್ ಕ್ಷಯವು ಉಂಟಾಗಬೇಕಾದರೂ, ಪ್ರಯೋಗಗಳಿಂದ ಬಂದಿರುವ ಫಲಿತಾಂಶಗಳು ಪ್ರೋಟಾನ್‌ನ ಜೀವಮಾನವು ಕಡೇಪಕ್ಷ ೧೦೩೫ ವರ್ಷಗಳಿರಬಹುದೆಂದು ಸೂಚಿಸುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪ್ರೊಟಾನ್ ಕ್ಷಯವನ್ನು ಇದುವರೆಗೆ ಯಾರೂ ಗಮನಿಸಿಲ್ಲ.

ಆದರೆ, ಎಲೆಕ್ಟ್ರಾನ್ ಸ್ವಾಧೀನ ಪ್ರಕ್ರಿಯೆಯಿಂದ ಪ್ರೋಟಾನ್‌ಗಳು ನ್ಯೂಟ್ರಾನ್‌ಗಳಾಗಿ ಮಾರ್ಪಡುತ್ತವೆ ಎಂದು ಈಗಾಲಲೇ ತಿಳಿದಿದೆ. ಈ ಪ್ರಕ್ರಿಯೆಯು ಸ್ವಯಂಪ್ರೇರಿತವಲ್ಲದೆ, ಶಕ್ತಿಯ ಅಸ್ತಿತ್ವದಲ್ಲಿ ಮಾತ್ರ ಆಗುತ್ತದೆ. ಇದರ ಸಮೀಕರಣವು ಈ ಕೆಳಗಿನಂತಿದೆ:

    ಪ್ರೋಟಾನ್ 

ಇಲ್ಲಿ

ಇದು ಒಂದು ವಿಪರ್ಯಯಶೀಲ ಪ್ರಕ್ರಿಯೆ: ವಿಕಿರಣ ಕ್ಷಯದ ಒಂದು ಸಾಮಾನ್ಯ ರೂಪವಾದ ಬೀಟಾ ಕ್ಷಯದ ಮೂಲಕ ನ್ಯೂಟ್ರಾನ್‌ಗಳು ಮರಳಿ ಪ್ರೋಟಾನ್‌ಗಳಾಗಿ ಮಾರ್ಪಡಬಹುದು. ವಾಸ್ತವದಲ್ಲಿ ಈ ರೀತಿಯ ಸ್ವತಂತ್ರ ನ್ಯೂಟ್ರಾನ್ಗಳು ಸುಮಾರು ೧೫ ನಿಮಿಷಗಳ ಸರಾಸರಿ ಜೀವಾವಧಿಯ ನಂತರ ಕ್ಷಯಿಸುತ್ತವೆ.

ಉಲ್ಲೇಖಗಳು

Tags:

en:1 E-27 kgen:Metreen:coulomben:electric chargeen:elementary chargeen:unified atomic mass unitಉಪಪರಮಾಣು ಕಣಎಲೆಕ್ಟ್ರಾನ್ದ್ರವ್ಯರಾಶಿಭೌತಶಾಸ್ತ್ರ

🔥 Trending searches on Wiki ಕನ್ನಡ:

ಕರ್ನಾಟಕ ಸ್ವಾತಂತ್ರ್ಯ ಚಳವಳಿಗ್ರಾಮ ಪಂಚಾಯತಿಪ್ರಬಂಧ ರಚನೆಬೆಂಕಿವಿಧಾನ ಸಭೆವೇಶ್ಯಾವೃತ್ತಿವಂದೇ ಮಾತರಮ್ಆದಿ ಶಂಕರಹಿಂದೂ ಮಾಸಗಳುಗಂಗ (ರಾಜಮನೆತನ)ಅವತಾರಪು. ತಿ. ನರಸಿಂಹಾಚಾರ್ತಂತ್ರಜ್ಞಾನದಿವ್ಯಾಂಕಾ ತ್ರಿಪಾಠಿಕನ್ನಡ ರಾಜ್ಯೋತ್ಸವಕುಟುಂಬಎರಡನೇ ಮಹಾಯುದ್ಧಜಾಗತಿಕ ತಾಪಮಾನ ಏರಿಕೆಕನ್ನಡ ಸಾಹಿತ್ಯಕುದುರೆರಾಜಕೀಯ ಪಕ್ಷಪಠ್ಯಪುಸ್ತಕಕಂಪ್ಯೂಟರ್ಭಾರತದ ರಾಷ್ಟ್ರಪತಿಗಳ ಪಟ್ಟಿಮಲೇರಿಯಾಅರಿಸ್ಟಾಟಲ್‌ಮಳೆಕರ್ನಾಟಕದಲ್ಲಿ ಪಂಚಾಯತ್ ರಾಜ್ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುತೀ. ನಂ. ಶ್ರೀಕಂಠಯ್ಯನೀರುಮೊಘಲ್ ಸಾಮ್ರಾಜ್ಯ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಆಧುನಿಕ ವಿಜ್ಞಾನಇಸ್ಲಾಂ ಧರ್ಮಭಾರತದ ರಾಷ್ಟ್ರಪತಿಹೊಂಗೆ ಮರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಉದಯವಾಣಿಸಾರ್ವಜನಿಕ ಆಡಳಿತಚೋಮನ ದುಡಿಮೂಲಭೂತ ಕರ್ತವ್ಯಗಳುವಿಜಯನಗರಕವಿಹನುಮ ಜಯಂತಿಅಮೇರಿಕ ಸಂಯುಕ್ತ ಸಂಸ್ಥಾನಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಬಾಲ್ಯ ವಿವಾಹಅಸಹಕಾರ ಚಳುವಳಿಒಡೆಯರ್ಮೆಕ್ಕೆ ಜೋಳಮೈಸೂರು ಮಲ್ಲಿಗೆಕನ್ನಡ ಕಾಗುಣಿತಜಪಾನ್ರವಿಚಂದ್ರನ್ಚಿಕ್ಕಮಗಳೂರುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಹಕ್ಕ-ಬುಕ್ಕಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅವರ್ಗೀಯ ವ್ಯಂಜನಪ್ಯಾರಾಸಿಟಮಾಲ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕಪ್ಪೆ ಅರಭಟ್ಟಜೀವವೈವಿಧ್ಯಚಾಮರಾಜನಗರದ್ವಿಗು ಸಮಾಸಪಶ್ಚಿಮ ಘಟ್ಟಗಳುಗೋಪಾಲಕೃಷ್ಣ ಅಡಿಗರಾಮಸಿದ್ದಪ್ಪ ಕಂಬಳಿಕ್ರಿಕೆಟ್ಗೋವಿಂದ ಪೈಆವಕಾಡೊತುಂಗಭದ್ರ ನದಿಕಲ್ಲಂಗಡಿಶಿವಕನ್ನಡದಲ್ಲಿ ವಚನ ಸಾಹಿತ್ಯ🡆 More