ಚಲನಚಿತ್ರ ಪ್ಯಾರಿಸ್ ಪ್ರಣಯ

ಪ್ಯಾರಿಸ್ ಪ್ರಣಯ ೨೦೦೩ರ ಕನ್ನಡ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ.

ಇದನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹೊಸಬರಾದ ರಘು ಮುಖರ್ಜಿ ಮತ್ತು ಮಿನಲ್ ಪಾಟಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಜೇಶ್, ತಾರ ಮತ್ತು ಶರತ್ ಲೋಹಿತಾಶ್ವ ಇತರ ಗಮನಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟ್ವೆಂಟಿ ಫ಼ಸ್ಟ್ ಸೆಂಚುರಿ ಲಯನ್ಸ್ ಸಿನಮಾ ಚಿತ್ರವನ್ನು ನಿರ್ಮಿಸಿತು.

ಪ್ಯಾರಿಸ್ ಪ್ರಣಯ
ನಿರ್ದೇಶನನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಪಕಅಮರನಾಥ್ ಗೌಡ
ಹರಿನಾಥ್ ಪೊಲಿಚರ್ಲ
ತುಮಕೂರು ದಯಾನಂದ್
ವಿದ್ಯಾಶಂಕರ್
ಲೇಖಕನಾಗತಿಹಳ್ಳಿ ಚಂದ್ರಶೇಖರ್
ಪಾತ್ರವರ್ಗರಘು ಮುಖರ್ಜಿ
ಮಿನಲ್ ಪಾಟಿಲ್
ತಾರಾ
ಸಂಗೀತಸ್ಟೀಫನ್ ಪ್ರಯೋಗ್
ಛಾಯಾಗ್ರಹಣಕೃಷ್ಣ ಕುಮಾರ್
ಸಂಕಲನಬಸವರಾಜ್ ಅರಸ್
ಸ್ಟುಡಿಯೋಟ್ವೆಂಟಿ ಫ಼ರ್ಸ್ಟ್ ಸೆಂಚುರಿ ಲಯನ್ಸ್ ಸಿನಮಾ
ಬಿಡುಗಡೆಯಾಗಿದ್ದು
  • 18 ಏಪ್ರಿಲ್ 2003 (2003-04-18)
ಅವಧಿ151 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಚಿತ್ರವು ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ೧೮ ಎಪ್ರಿಲ್ ೨೦೦೩ರಂದು ಬಿಡುಗಡೆಯಾಯಿತು. ಪ್ಯಾರಿಸ್, ರೋಮ್, ದಕ್ಷಿಣ ಫ಼್ರಾನ್ಸ್ ಮತ್ತು ಸ್ಪೇನ್ನಂತಹ ಅನೇಕ ಐರೋಪ್ಯ ದೇಶಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣವಾದ ಈ ಚಿತ್ರವು ಡೆಟ್ರಾಯಿಟ್‍ನಲ್ಲಿ ನಡೆದ ವಾರ್ಷಿಕ "ವಿಶ್ವ ಕನ್ನಡ ಸಮ್ಮೇಳನ - ೨೦೦೨"ರ ದೃಶ್ಯವನ್ನು ಒಳಗೊಂಡಿದೆ.. ಇದು ೨೦೦೩ರ ವರ್ಷಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದಿತು.

ಪಾತ್ರವರ್ಗ

  • ಕ್ರಿಶ್ ಉರುಫ್ ಕೃಷ್ಣ ಆಗಿ ರಘು ಮುಖರ್ಜಿ
  • ಪೂರ್ವಿ ಆಗಿ ಮಿನಲ್ ಪಾಟಿಲ್
  • ಎಚ್. ಕೆ. ಮಾಸ್ತರ್ ಆಗಿ ರಾಜೇಶ್
  • ಆದಿತ್ಯ ಆಗಿ ಶರತ್ ಲೋಹಿತಾಶ್ವ
  • 'ಸೆಲ್' ಸೀತಾ ಆಗಿ ತಾರಾ
  • ಹರಿನಾಥ್ ಪೋಲಿಚರ್ಲ
  • ಸುಮಲತಾ
  • ಸುಧಾ ಬೆಳವಾಡಿ
  • ನಾಗತಿಹಳ್ಳಿ ಚಂದ್ರಶೇಖರ್ ಅತಿಥಿ ಪಾತ್ರ

ಅಶರೀರವಾಣಿ

ಸಂಗೀತ

ಚಿತ್ರದ ಸಂಗೀತವನ್ನು ಸ್ಟೀಫನ್ ಪ್ರಯೋಗ್ ಸಂಯೋಜಿಸಿದ್ದಾರೆ. ಧ್ವನಿವಾಹಿನಿಯು ಮುಖ್ಯವಾಗಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಗಳ ಮಿಶ್ರಣ ಸಂಗೀತದ ಮೇಲೆ ಕೇಂದ್ರೀಕರಿಸಿತು. ಹಾಡುಗಳಿಗೆ ಜನಪ್ರಿಯ ಬಾಲಿವುಡ್ ಹಿನ್ನೆಲೆ ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಧ್ವನಿ ನೀಡಿದರು. ಇದು ಕನ್ನಡ ಚಿತ್ರರಂಗದಲ್ಲಿ ಘೋಶಾಲ್‍ರ ಪ್ರಥಮ ಪ್ರವೇಶವಾಗಿತ್ತು. ಧ್ವನಿವಾಹಿನಿಯು ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಮತ್ತು ಮೆಚ್ಚುಗೆ ಪಡೆದ ಕವಿ ಜಿ.ಎಸ್.ಶಿವರುದ್ರಪ್ಪ ಬರೆದ ಶುದ್ಧ ಕನ್ನಡ ಸುಗಮ ಸಂಗೀತ ಹಾಡು "ಎದೆ ತುಂಬಿ ಹಾಡಿದೆನು"ವನ್ನು ಒಳಗೊಂಡಿತ್ತು. ಇನ್ನೊಂದೆಡೆ, ಇದು ಲುಡ್ವಿಗ್ ವಾನ್ ಬೆಟ್ಹೋವನ್ ಮತ್ತು ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್‌ರಂತಹ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ದಿಗ್ಗಜರು ನುಡಿಸಿದ ಸಂಗೀತ ತುಣುಕುಗಳನ್ನು ಹೊಂದಿತ್ತು. "ಕೃಷ್ಣ ನೀ ಬೇಗನೇ ಬಾರೊ" ಹಾಡು ಮೂಲತಃ ಸಂತ ವ್ಯಾಸತೀರ್ಥರು ಬರೆದು ಯಮುನಾ ಕಲ್ಯಾಣಿ ರಾಗದಲ್ಲಿ ಬರೆದು ಸಂಯೋಜಿಸಿದ ಇದೇ ಹೆಸರಿನ ಪ್ರಸಿದ್ಧ ಶಾಸ್ತ್ರೀಯ ಹಾಡಿನ ರೂಪಾಂತರವಾಗಿದೆ.

ಪ್ರಶಸ್ತಿಗಳು

  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
  1. ಅತ್ಯುತ್ತಮ ಸಂಗೀತ ನಿರ್ದೇಶಕ - ಸ್ಟೀಫನ್ ಪ್ರಯೋಗ್
  2. ಅತ್ಯುತ್ತಮ ಗೀತಸಾಹಿತಿ - ನಾಗತಿಹಳ್ಳಿ ಚಂದ್ರಶೇಖರ್
  3. ಅತ್ಯುತ್ತಮ ಹಿನ್ನೆಲೆ ಗಾಯಕಿ - ನಂದಿತಾ
  • ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ
  1. ಅತ್ಯುತ್ತಮ ಚಲನಚಿತ್ರ - ತುಮಕೂರು ದಯಾನಂದ್

ಉಲ್ಲೇಖಗಳು

ಹೊರಗಿನ ಮೂಲಗಳು

Tags:

ಚಲನಚಿತ್ರ ಪ್ಯಾರಿಸ್ ಪ್ರಣಯ ಪಾತ್ರವರ್ಗಚಲನಚಿತ್ರ ಪ್ಯಾರಿಸ್ ಪ್ರಣಯ ಸಂಗೀತಚಲನಚಿತ್ರ ಪ್ಯಾರಿಸ್ ಪ್ರಣಯ ಪ್ರಶಸ್ತಿಗಳುಚಲನಚಿತ್ರ ಪ್ಯಾರಿಸ್ ಪ್ರಣಯ ಉಲ್ಲೇಖಗಳುಚಲನಚಿತ್ರ ಪ್ಯಾರಿಸ್ ಪ್ರಣಯ ಹೊರಗಿನ ಮೂಲಗಳುಚಲನಚಿತ್ರ ಪ್ಯಾರಿಸ್ ಪ್ರಣಯತಾರನಾಗತಿಹಳ್ಳಿ ಚಂದ್ರಶೇಖರ್ರಾಜೇಶ್

🔥 Trending searches on Wiki ಕನ್ನಡ:

ಕೃಷ್ಣದೇವರಾಯನಾಟಕಶ್ರೀ. ನಾರಾಯಣ ಗುರುಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಗರ್ಭಪಾತಕರ್ನಾಟಕ ಹೈ ಕೋರ್ಟ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಮಣ್ಣುಎರಡನೇ ಎಲಿಜಬೆಥ್ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಭಾರತೀಯ ರಿಸರ್ವ್ ಬ್ಯಾಂಕ್ಗುಪ್ತಗಾಮಿನಿ (ಧಾರಾವಾಹಿ)ಆರ್ಯ ಸಮಾಜಕನಕದಾಸರುಅಂಬರೀಶ್ವ್ಯವಹಾರ ಪ್ರಕ್ರಿಯೆ ನಿರ್ವಹಣೆಕರ್ನಾಟಕದ ಜಿಲ್ಲೆಗಳುಕವನಗ್ರಾಹಕರ ಸಂರಕ್ಷಣೆಸಂಸ್ಕೃತ ಸಂಧಿಸೇಂಟ್ ಲೂಷಿಯರತನ್ಜಿ ಟಾಟಾಹಟ್ಟಿ ಚಿನ್ನದ ಗಣಿಚಿನ್ನಭಾರತೀಯ ನದಿಗಳ ಪಟ್ಟಿಎನ್ ಆರ್ ನಾರಾಯಣಮೂರ್ತಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಎನ್ ಸಿ ಸಿವಿನಾಯಕ ಕೃಷ್ಣ ಗೋಕಾಕತತ್ತ್ವಶಾಸ್ತ್ರಮಹಾತ್ಮ ಗಾಂಧಿದರ್ಶನ್ ತೂಗುದೀಪ್ಕರ್ನಾಟಕ ರತ್ನಕರ್ತವ್ಯಸಿಂಹಕರ್ಣಾಟಕ ಬ್ಯಾಂಕ್ಮದರ್‌ ತೆರೇಸಾಮಾನವನಲ್ಲಿ ರಕ್ತ ಪರಿಚಲನೆಗಣೇಶಭಾರತೀಯ ಅಂಚೆ ಸೇವೆಕರ್ನಾಟಕದ ಮಹಾನಗರಪಾಲಿಕೆಗಳುಭಾರತದ ಸಂಯುಕ್ತ ಪದ್ಧತಿಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತದ ರಾಷ್ಟ್ರೀಯ ಚಿಹ್ನೆಫೆಬ್ರವರಿಭಾರತದ ಜನಸಂಖ್ಯೆಯ ಬೆಳವಣಿಗೆಸತಿ ಪದ್ಧತಿಹೊಯ್ಸಳ ವಾಸ್ತುಶಿಲ್ಪಬೀಚಿಯುವರತ್ನ (ಚಲನಚಿತ್ರ)ಸಹಕಾರಿ ಸಂಘಗಳುದ್ವಿರುಕ್ತಿಝೆನಾನ್ಸಿದ್ದಲಿಂಗಯ್ಯ (ಕವಿ)ಬುದ್ಧಕುದುರೆಚಪಾತಿಆಂಗ್ಲಭೂಕುಸಿತಅರ್ಜುನರಮ್ಯಾರಾಷ್ತ್ರೀಯ ಐಕ್ಯತೆಸಾಮಾಜಿಕ ಸಮಸ್ಯೆಗಳುಸೌರಮಂಡಲಅಂತರ್ಜಲಹಬಲ್ ದೂರದರ್ಶಕಶ್ರವಣಬೆಳಗೊಳವಿಜ್ಞಾನಅಕ್ಷಾಂಶ ಮತ್ತು ರೇಖಾಂಶಕೊಡವರುಗ್ರಾಮ ಪಂಚಾಯತಿರೋಗಭಾರತದ ರೂಪಾಯಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಜ್ವರವಾಯು ಮಾಲಿನ್ಯ🡆 More