ಶಿಶುಕಾಮ ಪೀಡೊಫಿಲಿಯಾ

ಪೀಡೊಫಿಲಿಆ ಎನ್ನುವುದು ವಯಸ್ಕರು ಮಗುವಿನ ಅಥವಾ ಮಕ್ಕಳ ಮೇಲೆ ಹೊಂದಿದಂತ ಲೈಂಗಿಕ ದೃಷ್ಟಿಕೋನ ಅಥವಾ ವಯಸ್ಕರು ಹಾಗು ಮಕ್ಕಳ ನಡುವಿನ ಲೈಂಗಿಕ ಚಟುವಟಿಕೆಯಾಗಿದೆ.

ಪೀಡೊಫಿಲಿಆವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಪ್ಯಾರಾಫಿಲಿಆ (paraphilia) (ಅಂದರೆ ಅಸಾಧಾರಣ ಲೈಂಗಿಕ ವ್ಯಾಮೋಹ ಮತ್ತು/ಅಥವಾ ಲೈಂಗಿಕ ಚಟುವಟಿಕೆ) ಎಂತಲೂ ಹಾಗೂ ಅದರ ಪುನಾರವರ್ತಿತ ಹಾಗು ತೀವ್ರ ಸ್ವರೂಪದ ಸ್ಥಿತಿಯನ್ನು ಒಂದು ಅಸ್ತವ್ಯಸ್ತತೆ (disorder) ಎಂತಲೂ ಪರಿಗಣೆಸಲಾಗುತ್ತದೆ. ವಿಶ್ವ ಆರೋಗ್ಯ ಸಂಘಟನೆಯ (WHO) ಐಸಿಡಿ-೧೦ರ (ICD-10) ೨೦೧೫ನೇ ಆವೃತ್ತಿಯಲ್ಲಿ ಇದನ್ನು "ಸಾಮಾನ್ಯವಾಗಿ ಪ್ರಾಯಕ್ಕೆ ಮುಂಚಿನ ಅಥವಾ ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ, ಹುಡುಗರ ಅಥವಾ ಹುಡುಗಿಯರ ಅಥವಾ ಇಬ್ಬರ ಮೇಲಿನ ಒಂದು ಲೈಂಗಿಕ ವ್ಯಾಮೋಹ" ["A sexual preference for children, boys or girls or both, usually of prepubertal or early pubertal age".] ಎಂಬುದಾಗಿ ವ್ಯಾಖ್ಯಾನಿಸಲಾಗಿದೆ.

ವ್ಯುತ್ಪತ್ತಿ

  • 'ಪೀಡೊಫಿಲಿಆ' ಎಂಬ ಪದದ ಮೂಲ ಗ್ರೀಕ್‌ನ 'ಪೈಡೊಫಿಲಿಆ' (παιδοφιλια paidophilia) - 'ಪೈಸ್' (παις pais : ಮಗು) ಮತ್ತು 'ಫಿಲಿಆ' (φιλια philea : ಒಲವು, ಇಚ್ಚೆ) ಎಂಬುದಾಗಿದೆ.
  • ಪೈಡೊಫಿಲಿಆ ಎಂಬ ಪದವು ಗ್ರೀಕ್ ಕವಿಗಳಿಂದ ಪೈಡೆರಾಸ್ಟಿಆ (paiderastia) ಎಂಬ ಪದದ ಪರ್ಯಾಯವಾಗಿ ರಚನೆಯಾಯಿತು.
  • ೧೮೮೬ ರಲ್ಲಿ 'ಪೀಡೊಫಿಲಿಆ ಏರೋಟಿಕಾ' (paedophilia erotica) ಎಂಬ ಪದವನ್ನು ಆಸ್ಟ್ರೋ-ಜರ್ಮನಿಯ ಮನೋವೈದ್ಯ ರಿಚರ್ಡ್ ವೊನ್ ಕ್ರಾಫ಼್ಟ್-ಎಬಿಂಗ್ (Richard Von Krafft-Ebing) ಎಂಬುವವರು ಅವರ ಸೈಕೊಪಾತಿಆ ಸೆಕ್ಸ್ಯ್^ಆಲಿಸ್ (Psychopathia Sexualis) ಎಂಬ ಬರಹದಲ್ಲಿ ಬಳಸಿದರು.
  • ೨೦ನೇ ಶತಮಾನದಿಂದ 'ಫಿಡೊಫಿಲಿಆ' ಎಂಬ ಪದವನ್ನು ಈಗಿನ ಅರ್ಥದಂತೆ ಬಳಸಲಾಗುತ್ತಿದೆ.

ವಿಧಗಳು

  • ಹೆಬೀಫಿಲಿಆ (hebephilia) : ಇದು ವಯಸ್ಕರು ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ (ಸಾಮಾನ್ಯವಾಗಿ ೧೧-೧೪ ವಯಸ್ಸಿನ) ಮೇಲೆ ಹೊಂದಿದಂತ ಲೈಂಗಿಕ ವ್ಯಾಮೋಹವಾಗಿದೆ.
  • ನೆಪಿಒಫಿಲಿಆ ಅಥವಾ ಇನ್^ಫ್ಯಾ಼ನ್ಟೊಫಿಲಿಆ (nepiophilia or infantophilia) : ಇದು ವಯಸ್ಕರು ಎಳೆಯ ಮಕ್ಕಳ (ಸಾಮಾನ್ಯವಾಗಿ ೦-೩ ವಯಸ್ಸಿನ) ಮೇಲೆ ಹೊಂದಿದಂತ ಲೈಂಗಿಕ ವ್ಯಾಮೋಹವಾಗಿದೆ. ಇದು ಸಾಮಾನ್ಯವಾಗಿ ಅತ್ಯಂತ ವಿರಳವಾಗಿ ಕಂಡುಬರುತ್ತದೆ.

ಪೀಡೊಫೈಲ್

ಮಗು ಅಥವಾ ಮಕ್ಕಳ ಮೇಲೆ ಲೈಂಗಿಕ ದೃಷ್ಟಿಕೋನವನ್ನು ಹೊಂದಿರುವ ವಯಸ್ಕನನ್ನು ಪೀಡೊಫೈಲ್ (pedophile or paedophile) ಎನ್ನಲಾಗುತ್ತದೆ. ಪೀಡೊಫೈಲ್ ಪುರುಷ ಅಥವಾ ಸ್ತ್ರೀ ಆಗಿರಬಹುದು ಆದರೆ ಸಾಮಾನ್ಯವಾಗಿ ಪೀಡೊಫೈಲ್^ಗಳಲ್ಲಿ ಹೆಚ್ಚಿನವರು ಪುರುಷರಾಗಿರುತ್ತಾರೆ.

ಜನಸಂಖ್ಯೆ

ಸಾಮಾಜಿಕ ನೋಟ

ಪೀಡೊಫಿಲಿಆವು ಸಮಾಜ ಹಾಗು ಕಾನೂನು ಬಾಹಿರವಾದಂತ ಒಂದು ಪ್ರಕಾರದ ಲೈಂಗಿಕತೆಯಾಗಿದ್ದು, ಸಮಾಜಗಳಲ್ಲಿ ಇದನ್ನು ಒಂದು ಅತ್ಯಂತ ಹೀನ ಕೃತ್ಯ ಹಾಗು ಅಪರಾಧ ಎಂಬಂತೆ ಪರಿಗಣೆಸಲಾಗುತ್ತದೆ. ಈ ರೀತಿಯ ಲೈಂಗಿಕತೆಯಲ್ಲಿ ತೂಡಗುವ ವ್ಯಕ್ತಿಗಳ ವಿರುದ್ಧ ಹೆಚ್ಚಿನ ಆಕ್ರೋಶ ವ್ಯಕ್ತವಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗೆಯೇ ಪೀಡೊಫಿಲಿಆ ಹಾಗೂ ಮಕ್ಕಳ ಲೈಂಗಿಕ ಅತ್ಯಚಾರಕ್ಕು ಸಾಕಷ್ಟು ವ್ಯತ್ಯಾಸಗಳಿದ್ದಾಗ್ಯೂ ಸಮಾಜಗಳಲ್ಲಿ ಅವೆರಡನ್ನೂ ಸಾಮಾನ್ಯವಾಗಿ ಒಂದೇ ರೀತಿಯಾಗಿ ಪರಿಗಣಿಸಲಾಗುತ್ತದೆ.

ಉಲ್ಲೇಖಗಳು

Tags:

ಶಿಶುಕಾಮ ಪೀಡೊಫಿಲಿಯಾ ವ್ಯುತ್ಪತ್ತಿಶಿಶುಕಾಮ ಪೀಡೊಫಿಲಿಯಾ ವಿಧಗಳುಶಿಶುಕಾಮ ಪೀಡೊಫಿಲಿಯಾ ಪೀಡೊಫೈಲ್ಶಿಶುಕಾಮ ಪೀಡೊಫಿಲಿಯಾ ಜನಸಂಖ್ಯೆಶಿಶುಕಾಮ ಪೀಡೊಫಿಲಿಯಾ ಸಾಮಾಜಿಕ ನೋಟಶಿಶುಕಾಮ ಪೀಡೊಫಿಲಿಯಾ ಉಲ್ಲೇಖಗಳುಶಿಶುಕಾಮ ಪೀಡೊಫಿಲಿಯಾen:sexual activityen:sexual orientation

🔥 Trending searches on Wiki ಕನ್ನಡ:

ಮಾದರ ಚೆನ್ನಯ್ಯಯುಗಾದಿಕಲ್ಯಾಣಿವೇದಬುಧಜಶ್ತ್ವ ಸಂಧಿಪಿ.ಲಂಕೇಶ್ಡಾ ಬ್ರೋಕನ್ನಡದಲ್ಲಿ ಗಾದೆಗಳುಗರ್ಭಧಾರಣೆಕೃಷ್ಣದೇವರಾಯಚಂದ್ರಶೇಖರ ಕಂಬಾರವಿದ್ಯಾರಣ್ಯನಗರಒಗಟುಕ್ರಿಕೆಟ್ಜೀನುಅಂಬಿಗರ ಚೌಡಯ್ಯಶಿರ್ಡಿ ಸಾಯಿ ಬಾಬಾಮುದ್ದಣಕೊಡಗಿನ ಗೌರಮ್ಮಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಹುಬ್ಬಳ್ಳಿಸಮುಚ್ಚಯ ಪದಗಳುಕೈಗಾರಿಕೆಗಳುಮಾನವ ಅಭಿವೃದ್ಧಿ ಸೂಚ್ಯಂಕಭಾರತದ ಸ್ವಾತಂತ್ರ್ಯ ದಿನಾಚರಣೆಪ್ರಿನ್ಸ್ (ಚಲನಚಿತ್ರ)ರೈತಯೋಗಜ್ಞಾನಪೀಠ ಪ್ರಶಸ್ತಿಹಸ್ತ ಮೈಥುನಸಂದರ್ಶನನಗರೀಕರಣಸಲಿಂಗ ಕಾಮರೇಡಿಯೋರೋಮನ್ ಸಾಮ್ರಾಜ್ಯವಿಕಿರಣಮೂಲಧಾತುಶಿವಪ್ಪ ನಾಯಕಭಾರತದ ಚುನಾವಣಾ ಆಯೋಗಜ್ಯೋತಿಬಾ ಫುಲೆರೋಸ್‌ಮರಿಸ್ವಚ್ಛ ಭಾರತ ಅಭಿಯಾನಗುಣ ಸಂಧಿಭಾರತೀಯ ರಿಸರ್ವ್ ಬ್ಯಾಂಕ್ಭಾರತದ ಸ್ವಾತಂತ್ರ್ಯ ಚಳುವಳಿಮಾನವನ ವಿಕಾಸಕಲ್ಯಾಣ ಕರ್ನಾಟಕಮಿಥುನರಾಶಿ (ಕನ್ನಡ ಧಾರಾವಾಹಿ)ಬ್ಲಾಗ್ಜೀವನನೀರಿನ ಸಂರಕ್ಷಣೆರತ್ನತ್ರಯರುಧರ್ಮಭಾರತೀಯ ಕಾವ್ಯ ಮೀಮಾಂಸೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಂಗ್ಯಾ ಬಾಳ್ಯಾ(ನಾಟಕ)ಸಾರ್ವಜನಿಕ ಆಡಳಿತಆನೆಅವರ್ಗೀಯ ವ್ಯಂಜನಚಾಲುಕ್ಯಕಿತ್ತೂರು ಚೆನ್ನಮ್ಮಉಪನಯನಉಚ್ಛಾರಣೆತಂತ್ರಜ್ಞಾನಕಾವೇರಿ ನದಿಪರಮಾಣುಕೈವಾರ ತಾತಯ್ಯ ಯೋಗಿನಾರೇಯಣರುಕರ್ನಾಟಕ ಐತಿಹಾಸಿಕ ಸ್ಥಳಗಳುರಗಳೆಗೊರೂರು ರಾಮಸ್ವಾಮಿ ಅಯ್ಯಂಗಾರ್ಹರಿಹರ (ಕವಿ)ಶುಕ್ರಪ್ಯಾರಾಸಿಟಮಾಲ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡ🡆 More