ದ್ಯುತಿವಿದ್ಯುತ್ ಪರಿಣಾಮ

ಸೂಕ್ತ ಆವೃತ್ತಿಯ ವಿಕಿರಣವು (ಅತಿನೇರಿಳೆ ಕಿರಣಗಳು) ಕೆಲವು ಲೋಹಗಳ (ಸೋಡಿಯಮ್, ಪೊಟಾಸಿಯಮ್, ಮೆಗ್ನೀಸಿಯಮ್ ಇತ್ಯಾದಿ) ಮೇಲೆ ಬಿದ್ದಾಗ ಎಲೆಕ್ಟ್ರಾನುಗಳು ಹೊರಸೂಸುವ ವಿದ್ಯಮಾನಕ್ಕೆ ದ್ಯುತಿವಿದ್ಯುತ್ ಪರಿಣಾಮ ಎಂದು ಹೆಸರು.

ಕೆಲವು ಲೋಹಗಳ ಮೇಲೆ ಸೂಕ್ತ ಆವೃತಿಯ ಬೆಳಕು ಅಥವ ವಿಕಿರಣಗಳು ಬಿದ್ದಾಗ ಆ ವಸ್ತುಗಳ ಮೇಲ್ಮೈನಿಂದ ಎಲೆಕ್ಟ್ರಾನುಗಳು ಹೊರಬೀಳುತ್ತವೆ. ಇಂತಹ ವಸ್ತುಗಳನ್ನು ದ್ಯುತಿ ಉತ್ಸರ್ಜಕ ಅಥವ ದ್ಯುತಿ ಸಂವೇದಿವಸ್ತುಗಳೆನ್ನುವರು. ಸೂಕ್ತ ಆವೃತಿಯು ಪ್ರತಿ ದ್ಯುತಿ ಸಂವೇದಿ ವಸ್ತುವಿಗೂ ಬೇರೆಯದ್ದಾಗಿರುತ್ತದೆ.

ಈ ಪ್ರಕ್ರಿಯೆಯಲ್ಲಿ ಹೊರಹಬೀಳುವ ಎಲೆಕ್ಟ್ರಾನುಗಳನ್ನು ದ್ಯುತಿ ಎಲೆಕ್ಟ್ರಾನುಗಳೆನ್ನುವರು ಮತ್ತು ಇವುಗಳ ಚಲನೆಯಿಂದ ವಿದ್ಯುತ್ ಮಂಡಲದಲ್ಲಿ ದ್ಯುತಿ ವಿದ್ಯುತ್ ಉತ್ಪನ್ನವಾಗುವುದು.

ಬೆಳಕಿನ ತರಂಗವಾದದಿಂದ ದ್ಯುತಿವಿದ್ಯುತ್ ಪರಿಣಾಮವನ್ನು ವಿವರಿಸಲಾಗಲಿಲ್ಲ. ಇದನ್ನು ಆಲ್ಬರ್ಟ್ ಐನ್‍ಸ್ಟೀನ್‍ರು ತಮ್ಮ ಕಣ ವಾದದಿಂದ ಸಮರ್ಥವಾಗಿ ವಿವರಿಸಿದರು. ಇದರ ಬಗ್ಗೆ 1905ರ ಮೊದಲು ತಿಳಿದಿದ್ದ ಅನೇಕ ಸಂಗತಿಗಳಿಗೆ ಸಮರ್ಪಕ ಸೈದ್ಧಾಂತಿಕ ಬುನಾದಿಯನ್ನು ಕಟ್ಟಿದವರು ಐನ್‌ಸ್ಟೈನ್, ಪ್ಲಾಂಕ್. ಕ್ವಾಂಟಮ್ ಸಿದ್ಧಾಂತದ ಆಧಾರದ ಮೇಲೆ ವಿವರಿಸಲಾಗಿದ್ದ ಈ ವಾದವು ಅವರಿಗೆ ೧೯೨೧ರಲ್ಲಿ ನೊಬೆಲ್ ಪಾರಿತೋಷಕ ತಂದುಕೊಟ್ಟಿತು.

ಇದರ ಪ್ರಕಾರ ವಿಕಿರಣ ಬಿಡಿಬಿಡಿಯಾಗಿ ಶಕಲ (ಕ್ವಾಂಟಮ್) ರೂಪದಲ್ಲಿರುತ್ತದೆ. ಈ ಬಿಡಿ ಭಾಗವನ್ನು ಐನ್‌ಸ್ಟೈನ್ ಫೋಟಾನ್ (ದ್ಯುತಿ ಕಣ) ಎಂದು ಹೆಸರಿಸಿದರು. ಪ್ರತಿಯೊಂದು ದ್ಯುತಿ ಕಣದಲ್ಲಿಯೂ hv ಮೊತ್ತದ ಶಕ್ತಿ ನಿಹಿತವಾಗಿರುತ್ತದೆ (h ಪ್ಲಾಂಕ್ ಸ್ಥಿರಾಂಕ, v ವಿಕಿರಣದ ಆವೃತ್ತಿ). ದ್ಯುತಿಕಣಗಳ ರೂಪದಲ್ಲಿ ವಿಕಿರಣವು ಲೋಹವನ್ನು ತಟ್ಟಿದಾಗ ದ್ಯುತಿಕಣದ ಶಕ್ತಿಯನ್ನು ಲೋಹದಲ್ಲಿಯ ಯಾವುದಾದರೊಂದು ಪರಮಾಣು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಪರಮಾಣು ಉದ್ರಿಕ್ತವಾಗಿ ತನ್ನಲ್ಲಿರುವ ಎಲೆಕ್ಟ್ರಾನೊಂದನ್ನು ವಿಸರ್ಜಿಸುತ್ತದೆ. ಆದರೆ ಪರಮಾಣುವಿಗೆ ಬಂಧಿತವಾಗಿರುವ ಎಲೆಕ್ಟ್ರಾನನ್ನು ಮುಕ್ತಗೊಳಿಸಲು ಸ್ವಲ್ಪಮಟ್ಟಿಗೆ ಶಕ್ತಿವ್ಯಯವಾಗುವ ಕಾರಣ, ವಿಸರ್ಜಿತ ಎಲೆಕ್ಟ್ರಾನಿನ ಚಲನಶಕ್ತಿ hvಗೆ ಸಮವಾಗಿರದೆ ತುಸುಮಟ್ಟಿಗೆ ಕಡಿಮೆ ಇರುತ್ತದೆ. ಎಲೆಕ್ಟ್ರಾನನ್ನು ಮುಕ್ತ ಸ್ಥಿತಿಗೆ ತರಲು ವ್ಯಯವಾಗುವ ಶಕ್ತಿಯನ್ನು w0 ಎಂದು ಸೂಚಿಸಿದರೆ ಎಲೆಕ್ಟ್ರಾನಿನ ಚಲನಶಕ್ತಿ K = hv - w0. ಇದೇ ಐನ್‌ಸ್ಟೈನ್ ಸಾಧಿಸಿದ ದ್ಯುತಿವಿದ್ಯುತ್ಪರಿಣಾಮ. ಅನಂತರದ ದಿನಗಳಂದು ಇದನ್ನು ಅನೇಕ ಸಂಶೋಧಕರು ಪ್ರಾಯೋಗಿಕವಾಗಿ ಪರೀಕ್ಷಿಸಿ ಸಮರ್ಥಿಸಿದ್ದಾರೆ.

ದ್ಯುತಿವಿದ್ಯುತ್ ಪರಿಣಾಮದ ಪ್ರಾಯೋಗಿಕ ಅಧ್ಯಯನ

ದ್ಯುತಿವಿದ್ಯುತ್ ಪರಿಣಾಮ 
೧.ವಿಕಿರಣ ೨.ನಿರ್ವಾತ ಗಾಜಿನ ಕೊಳವೆ ೩.ಕ್ಯಾಥೋಡ್ ೪.ಅನೋಡ್ ೫.ಎಲೆಕ್ಟ್ರಾನ್ ೬.ಮೈಕ್ರೋ ಅಮ್ಮೀಟರ್ ೭. H.T.D.C

ನಿರ್ವಾತ ಗಾಜಿನ ಕೊಳವೆಯ ಒಳಗೆ ವಿದ್ಯುತ್ ಬ್ಯಾಟರಿಯೊಂದಿಗೆ ಸಂಪರ್ಕ ಹೊಂದಿದ ಆನೋಡ್ ಮತ್ತು ದ್ಯುತಿಸಂವೇದಿ ಆನೋಡ್ ಹಾಗೂ ದ್ಯುತಿಸಂವೇದಿ ಕ್ಯಾಥೋಡನ್ನು ಅಳವಡಿಸಲಾಗಿದೆ. ಮೈಕ್ರೋ ಅಮ್ಮೀಟರ್ ಅನ್ನು ಮಂಡಲದಲ್ಲಿ ಉಂಟಾಗುವ ದ್ಯುತಿವಿದ್ಯುತ್ತನ್ನು ಅಳೆಯಲು ಉಪಯೋಗಿಸಲಾಗಿದೆ.

ಸೂಕ್ತ ಆವೃತಿಯ ವಿಕಿರಣವು ದ್ಯುತಿಸಂವೇದಿ ಕ್ಯಾಥೋಡಿನ ಮೇಲೆ ಬಿದ್ದಾಗ ಎಲೆಕ್ಟ್ರಾನುಗಳು ಹೊರಸೂಸುತ್ತವೆ. ಈ ಎಲೆಕ್ಟ್ರಾನುಗಳು ಆನೋಡಿನ ಕಡೆ ಧಾವಿಸುತ್ತವೆ. ಇದರಿಂದ ಮಂಡಲದಲ್ಲಿ ವಿದ್ಯುತ್ ಹರಿಯುತ್ತದೆ.

ಪ್ರಯೋಗದ ಅವಲೋಕನಗಳು

ಈ ಪ್ರಯೋಗದಿಂದ ಕೆಳಗಿನ ಅವಲೋಕನಗಳು ಲಭ್ಯವಾಗುತ್ತವೆ.

  1. ದ್ಯುತಿವಿದ್ಯುತ್ ಪರಿಣಾಮವು ತಕ್ಷಣ ಆಗುವ ಪರಿಣಾಮವಾಗಿದೆ. ವಿಕಿರಣವು ಕ್ಯಾಥೋಡಿನ ಮೇಲೆ ಬಿದ್ದ ತಕ್ಷಣ ಎಲೆಕ್ಟ್ರಾನುಗಳು ಹೊರಸೂಸುತ್ತವೆ. ವಿಕಿರಣವು ಬಿದ್ದ ನಂತರ ದ್ಯುತಿವಿದ್ಯುತ್ ಪರಿಣಾಮ  ಸೆಕೆಂಡುಗಳ ನಂತರ ದ್ಯುತಿಎಲೆಕ್ಟ್ರಾನುಗಳು ಹೊರಸೂಸುತ್ತವೆ.
  2. ಕ್ಯಾಥೋಡಿನ ಮೇಲೆ ಬಿದ್ದಂತಹ ವಿಕಿರಣದ ಆವೃತ್ತಿಯು ಒಂದಿ ನಿರ್ದಿಷ್ಟ ಬೆಲೆಗಿಂತ ಕಡಿಮೆ ಇದ್ದಾಗ ದ್ಯುತಿಉತ್ಸರ್ಜನೆಯಾಗುವುದಿಲ್ಲ. ಈ ಕನಿಷ್ಠ ಆವೃತ್ತಿಯನ್ನು ಹೊಸ್ತಿಲು ಆವೃತ್ತಿ ಎಂದು ಕರೆಯುತ್ತೇವೆ. ಹೊಸ್ತಿಲು ಆವೃತ್ತಿಯು ಪ್ರತಿಯೊಂದು ದ್ಯುತಿಸಂವೇದಿಗೂ ಬೇರೆಯದ್ದಾಗಿರುತ್ತದೆ.
  3. ದ್ಯುತಿಎಲೆಕ್ಟ್ರಾನುಗಳ ಸಂಖ್ಯೆ ಮತ್ತು ದ್ಯುತಿವಿದ್ಯುತ್ತಿನ ತೀವ್ರತೆ ಆಪಾತ ವಿಕಿರಣದ ತೀವ್ರತೆಗೆ ಅನುಪಾತೀಯವಾಗಿರುತ್ತದೆ.
  4. ದ್ಯುತಿಎಲೆಕ್ಟ್ರಾನುಗಳ ಗರಿಷ್ಠ ಚಲನ ಶಕ್ತಿ ಆಪಾತ ವಿಕಿರಣದ ಆವೃತ್ತಿಯೊಂದಿಗೆ ರೇಖೀಯವಾಗಿ ಹೆಚ್ಚುತ್ತದೆ ಮತ್ತು ಆಪಾತ ತೀವ್ರತೆಯಿಂದ ಸ್ವತಂತ್ರವಾಗಿರುತ್ತದೆ.

ಆಲ್ಬರ್ಟ್ ಐನ್‍ಸ್ಟೈನ್ ರ ವಿವರಣೆ

ವಿಕಿರಣವನ್ನು ಆಲ್ಬರ್ಟ್ ಐನ್‍ಸ್ಟೈನ್‍ರು ಕಣದ ರೂಪವಾಗಿ ಪರಿಗಣಿಸಿ ದ್ಯುತಿವಿದ್ಯುತ್ ಪರಿಣಾಮವನ್ನು ಸಮರ್ಥವಾಗಿ ವಿವರಿಸಿದರು. ಇವರ ವಿವರಣೆಯಂತೆ ದ್ಯುತಿಉತ್ಸರ್ಜನೆಯು ಆಪಾತ ವಿಕಿರಣ ಮತ್ತು ಲಕ್ಷ್ಯವಸ್ತುವಿನ ಮುಕ್ತ ಎಲೆಕ್ಟ್ರಾನುಗಳ ನಡುವೆ ನಡೆಯುವ ಸರಳ ಸಂಘರ್ಷಣೆ. ಬೆಳಕಿನ ಕಣ ದ್ಯುತಿವಿದ್ಯುತ್ ಪರಿಣಾಮ  ಅಥವಾ ದ್ಯುತಿವಿದ್ಯುತ್ ಪರಿಣಾಮ ನ ಅವಿಭಾಜ್ಯ ದ್ವಿಗುಣ ಶಕ್ತಿಯನ್ನು ಹೊಂದಿರುತ್ತದೆ. ಈ ಬೆಳಕಿನ ಕಣ ಮುಕ್ತ ಎಲೆಕ್ಟ್ರಾನಿಗೆ ಡಿಕ್ಕಿಹೊಡೆದಾಗ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ವರ್ಗಾಯಿಸುತ್ತದೆ. ಈ ರೀತಿ ವರ್ಗಾವಣೆಗೊಂಡ ಶಕ್ತಿಯನ್ನು ಎರಡು ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತದೆ.

  1. ಶಕ್ತಿಯ ಕೆಲವು ಭಾಗ ಎಲೆಕ್ಟ್ರಾನ್ ಅನ್ನು ದ್ಯುತಿಸಂವೇದಿಯ ಮೇಲ್ಮೈನಿಂದ ಬಿಡುಗಡೆ ಹೊಂದುವಲ್ಲಿ ಬಳಸಿಹೋಗುತ್ತದೆ (W).
  2. ಉಳಿದ ಶಕ್ತಿಯು ದ್ಯುತಿ ಎಲೆಕ್ಟ್ರಾನಿನ ಚಲನ ಶಕ್ತಿಯಾಗಿ ಮಾರ್ಪಡುತ್ತದೆ. ದ್ಯುತಿ ಎಲೆಕ್ಟ್ರಾನಿನ ವೇಗವು v ಮತ್ತು ತೂಕವು m ಆಗಿದ್ದಲ್ಲಿ, ಗರಿಷ್ಠ ಚಲನ ಶಕ್ತಿಯು ದ್ಯುತಿವಿದ್ಯುತ್ ಪರಿಣಾಮ  ಆಗಿರುತ್ತದೆ.

ಶಕ್ತಿ ಸಂರಕ್ಷಣ ನಿಯಮಾನುಸಾರ, hv = W + ½ mv²

ಉಲ್ಲೇಖಗಳು

ಆಕರ ಗ್ರಂಥ

  • 'ಭೌತವಿಜ್ಞಾನ '- ಸಂಪಾದಕ: ಪ್ರೊ.ಹೆಚ್. ಆರ್ ರಾಮಕೃಷ್ಣರಾವ್
  • 'A text book of PHYSICS' - Dr. J. Vishwanath

Tags:

ದ್ಯುತಿವಿದ್ಯುತ್ ಪರಿಣಾಮ ದ ಪ್ರಾಯೋಗಿಕ ಅಧ್ಯಯನದ್ಯುತಿವಿದ್ಯುತ್ ಪರಿಣಾಮ ಪ್ರಯೋಗದ ಅವಲೋಕನಗಳುದ್ಯುತಿವಿದ್ಯುತ್ ಪರಿಣಾಮ ಆಲ್ಬರ್ಟ್ ಐನ್‍ಸ್ಟೈನ್ ರ ವಿವರಣೆದ್ಯುತಿವಿದ್ಯುತ್ ಪರಿಣಾಮ ಉಲ್ಲೇಖಗಳುದ್ಯುತಿವಿದ್ಯುತ್ ಪರಿಣಾಮ ಆಕರ ಗ್ರಂಥದ್ಯುತಿವಿದ್ಯುತ್ ಪರಿಣಾಮಎಲೆಕ್ಟ್ರಾನ್ಪೊಟ್ಯಾಶಿಯಮ್ಮೆಗ್ನೀಸಿಯಮ್ಲೋಹವಿಕಿರಣಸೋಡಿಯಮ್

🔥 Trending searches on Wiki ಕನ್ನಡ:

ಕೇಂದ್ರ ಲೋಕ ಸೇವಾ ಆಯೋಗಭಾರತೀಯ ಧರ್ಮಗಳುಪುತ್ತೂರುರೈತಸಂಸ್ಕೃತ ಸಂಧಿಕಪ್ಪೆ ಅರಭಟ್ಟನೈಸರ್ಗಿಕ ಸಂಪನ್ಮೂಲವಿದ್ಯುತ್ ಮಂಡಲಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಶ್ರವಣಾತೀತ ತರಂಗಚಂಪೂತೆರಿಗೆಭೂತಾರಾಧನೆಚಿತ್ರದುರ್ಗಮತದಾನಬಾಲಕಾರ್ಮಿಕಗ್ರಾಮಗಳುಕವಿರಾಜಮಾರ್ಗಮೂಲಧಾತುಗಳ ಪಟ್ಟಿಮೈಸೂರು ಸಂಸ್ಥಾನಹೆರೊಡೋಟಸ್ದುರ್ವಿನೀತಭೌಗೋಳಿಕ ಲಕ್ಷಣಗಳುರೋಸ್‌ಮರಿಪ್ರಸ್ಥಭೂಮಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಬಾದಾಮಿಸಾರ್ವಜನಿಕ ಹಣಕಾಸುಭಾರತದ ಸಂಸತ್ತುಕ್ರೀಡೆಗಳುಸಂಯುಕ್ತ ಕರ್ನಾಟಕಬ್ರಿಟಿಷ್ ಆಡಳಿತದ ಇತಿಹಾಸಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಛತ್ರಪತಿ ಶಿವಾಜಿಯುನೈಟೆಡ್ ಕಿಂಗ್‌ಡಂಕೈಗಾರಿಕೆಗಳುರಕ್ತಚಂದನಕ್ಯಾನ್ಸರ್ಪ್ರಾಣಿಗೋವಿಂದ ಪೈನುಡಿಗಟ್ಟುಸ್ವಾಮಿ ವಿವೇಕಾನಂದಬೇಸಿಗೆವಾಯು ಮಾಲಿನ್ಯಶನಿಹಲ್ಮಿಡಿ ಶಾಸನಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಆವರ್ತ ಕೋಷ್ಟಕಶಕ್ತಿಕೆ. ಅಣ್ಣಾಮಲೈದೇವನೂರು ಮಹಾದೇವಚೋಮನ ದುಡಿಕರ್ನಾಟಕದ ಹಬ್ಬಗಳುಹಸಿರು ಕ್ರಾಂತಿಕನ್ನಡದಲ್ಲಿ ವಚನ ಸಾಹಿತ್ಯಭಾರತದಲ್ಲಿ ತುರ್ತು ಪರಿಸ್ಥಿತಿಗೂಗಲ್ಕರ್ಬೂಜಕುಕ್ಕೆ ಸುಬ್ರಹ್ಮಣ್ಯ ದೇವಾಲಯಕುಮಾರವ್ಯಾಸಡಿಎನ್ಎ -(DNA)ಶಾಲಿವಾಹನ ಶಕೆಮಂತ್ರಾಲಯಚದುರಂಗ (ಆಟ)ಬುದ್ಧಗ್ರಂಥಾಲಯಗಳುವ್ಯವಸಾಯಬಲಜಶ್ತ್ವ ಸಂಧಿಮಾನವ ಹಕ್ಕುಗಳುಬಾಲ್ಯ ವಿವಾಹಆಯ್ಕಕ್ಕಿ ಮಾರಯ್ಯಕುಡಿಯುವ ನೀರುಶಿವರಾಮ ಕಾರಂತಗ್ರಾಮ ಪಂಚಾಯತಿನೀರು🡆 More